ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟದ ಪರಿಸ್ಥಿತಿಗಳು ಬಂದೇ ಬರುತ್ತದೆ. ಹಾಗೆಂದ ಮಾತ್ರಕ್ಕೆ ಕಷ್ಟದ ಪರಿಸ್ಥಿತಿ ದೇವರು ನನಗೆ ಮಾತ್ರ ಕೊಟ್ಟಿದ್ದಾನೆ ಎಂದು ಹೇಳಿಕೊಳ್ಳುವುದು ನಮ್ಮ ತಪ್ಪು. ಕೆಲವೊಮ್ಮೆ ದೇವರು ನಮಗೆ ಪರೀಕ್ಷಿಸುವುದಕ್ಕೂ ಕೂಡ ಕೆಲವೊಂದು ಸಂದರ್ಭದಲ್ಲಿ ನಮಗೆ ಕಷ್ಟದ ಪರಿಸ್ಥಿತಿಗಳನ್ನು ತಂದು ನಮ್ಮ ಒಂದು ಪ್ರತ್ಯುತ್ತರವನ್ನು ನೋಡುತ್ತಿರುತ್ತಾನೆ.
ಕಷ್ಟದ ಸಮಯದಲ್ಲಿ ಇವನು ನನಗೆ ಯಾವ ರೀತಿಯಾಗಿ ಗೌರವ ಕೊಡುತ್ತಾನೆ ಎನ್ನುವುದನ್ನು ಗಮನಿಸುವುದಕ್ಕೋಸ್ಕರ ದೇವರು ಪ್ರತಿಯೊಬ್ಬರಿಗೂ ಕೂಡ ಕೆಲವೊಂದು ಸಂದರ್ಭದಲ್ಲಿ ಕಷ್ಟದ ಪರಿಸ್ಥಿತಿಗಳನ್ನು ತಂದಿರುತ್ತಾನೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಬಂದಂತಹ ಕಷ್ಟವನ್ನು ನನಗೆ ಕಷ್ಟ ನನಗೆ ಕಷ್ಟವನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೊಳ್ಳಬಾರದು.
ಬದಲಿಗೆ ಏನೇ ಕಷ್ಟ ಬಂದರೂ ನಾನು ಅದನ್ನು ಸರಿಪಡಿಸುವಂತಹ ಧೈರ್ಯ ಶಕ್ತಿ ನನಗೆ ಕೊಡು ಭಗವಂತ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ಆಗ ಮಾತ್ರ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಶಸ್ಸಿನ ಹಾದಿಯನ್ನು ನೋಡಬಹುದು. ಬದಲಿಗೆ ಕಷ್ಟ ಬಂದಾಗ ದೇವರನ್ನು ದೂಷಿಸುವುದು ಸುಖ ಬಂದಾಗ ದೇವರನ್ನು ಪ್ರಾರ್ಥಿಸುವುದು ಒಳ್ಳೆಯದಲ್ಲ.
ಈ ಸುದ್ದಿ ಓದಿ:- ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!
ಎಂತದ್ದೇ ಸಂದರ್ಭದಲ್ಲಿಯೂ ಕೂಡ ದೇವರನ್ನು ನಾವು ಬಹಳ ಗೌರವದಿಂದ ಭಕ್ತಿಯಿಂದ ಪೂಜಿಸುವುದು ಆರಾಧಿಸುವುದು ಬಹಳ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ದೇವರು ಕೆಲವೊಂದಷ್ಟು ಜನರಿಗೆ ಕಷ್ಟದ ಪರಿಸ್ಥಿತಿಗಳನ್ನು ಕೊಡುವುದರ ಮೂಲಕ ಅದಕ್ಕೆ ಪರಿಹಾರ ಮಾರ್ಗವನ್ನು ಮತ್ತೊಬ್ಬರಿಂದ ಇಟ್ಟಿರುತ್ತಾನೆ. ಆದ್ದರಿಂದ ಎಂತದ್ದೇ ಪರಿಸ್ಥಿತಿಯಲ್ಲಿಯೂ ಕೂಡ ದೇವರು ನಿಮಗೆ ಪರಿಹಾರ ಮಾರ್ಗದ ರೂಪದಲ್ಲಿ ಬೇರೆಯ ವ್ಯಕ್ತಿಯ ಮೂಲಕ ನಿಮಗೆ ಪರಿಹಾರವನ್ನು ಕೊಡುತ್ತಿರುತ್ತಾನೆ.
ಅಂತಹ ಸಂದರ್ಭದಲ್ಲಿ ನೀವು ಅದನ್ನು ಸರಿಯಾದ ರೀತಿಯಲ್ಲಿ ಉಪ ಯೋಗಿಸಿಕೊಳ್ಳಬೇಕು ಇಲ್ಲವಾದರೆ ನಿಮಗೆ ಬಹಳ ತೊಂದರೆ ಆಗುತ್ತದೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ಜನ ಕಷ್ಟದ ಪರಿಸ್ಥಿತಿಯಲ್ಲಿ ಇದ್ದಂತಹ ಸಂದರ್ಭದಲ್ಲಿ ದೇವರು ಬೇರೆಯವರ ಮುಖಾಂತರ ಕೆಲವೊಂದು ವಸ್ತುಗಳನ್ನು ನಿಮಗೆ ಪರಿಹಾರವಾಗಿ ಕೊಡಿಸುವಂತಹ ಮಾರ್ಗವನ್ನು ತೋರಿಸುತ್ತಿರುತ್ತಾನೆ.
ಆದ್ದರಿಂದ ಇಂತಹ ವಸ್ತುಗಳನ್ನು ಬೇರೆಯವರು ನಿಮಗೆ ಕೊಡುವುದಕ್ಕೆ ಬಂದರೆ ಅದನ್ನು ಎಂದಿಗೂ ಕೂಡ ನಿರಾಕರಿಸಬೇಡಿ. ತಪ್ಪದೇ ಆ ವಸ್ತುಗಳನ್ನು ಪಡೆದು ಇಟ್ಟುಕೊಳ್ಳಿ. ಇದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟದ ಪರಿಸ್ಥಿತಿಗಳು ಸಹ ದೂರ ವಾಗುತ್ತದೆ. ಜೀವನದಲ್ಲಿ ಅಭಿವೃದ್ಧಿ ಏಳಿಗೆ ಎನ್ನುವುದು ಹೆಚ್ಚಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..
* ಕೆಲವೊಮ್ಮೆ ನಾವು ಬೇರೆಯವರ ಮನೆಗೆ ಹೋದಂತಹ ಸಂದರ್ಭ ದಲ್ಲಿ ಅವರು ಪ್ರಸಾದದ ರೂಪದಲ್ಲಿ ಏನನ್ನಾದರೂ ಕೊಡಲು ಬಂದರೆ ನಾವು ಅದನ್ನು ನಿರಾಕರಿಸಬಾರದು. ಕೆಲವೊಮ್ಮೆ ನಾವು ಬೇರೆಯವರ ಮನೆಗೆ ಹೋದಂತಹ ಸಂದರ್ಭ ದಲ್ಲಿ ನಮ್ಮ ಅಜ್ಜಿ ಅಥವಾ ತಾತ ಅವರ ಕೈಲಾದಷ್ಟು ಹಣವನ್ನು ಕೊಡಲು ನಮಗೆ ಬರುತ್ತಾರೆ.
ಆ ಸಮಯದಲ್ಲಿ ನಾವು ಅದನ್ನು ಬೇಡ ಎಂದು ಹೇಳದೆ ಅದನ್ನು ಪಡೆದುಕೊಳ್ಳಬೇಕು ತಾಯಿ ಲಕ್ಷ್ಮಿ ದೇವಿ ಯಾವ ರೂಪದಲ್ಲಿ ನಮಗೆ ಬಂದು ಸೇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಆದ್ದರಿಂದ ಇಂತಹ ಒಂದು ಸಂದರ್ಭದಲ್ಲಿ ಅದನ್ನು ಬೇಡ ಎನ್ನಬಾರದು ಅದನ್ನು ತೆಗೆದುಕೊಂಡು ಬಂದರೆ ನಿಮಗೆ ಒಳ್ಳೆಯದಾಗುತ್ತದೆ.
* ನಿಮ್ಮ ಮನೆಯ ಹತ್ತಿರ ಯಾವುದೇ ಹಸು ಬಂದರೂ ಅದಕ್ಕೆ ಅಕ್ಕಿ ಅಥವಾ ಬೆಲ್ಲವನ್ನು ಕೊಡಬೇಕು. ಯಾವುದೇ ಕಾರಣಕ್ಕೂ ಅದನ್ನು ಆಚೆ ದೂಡಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.