ಇದೇ ಏಪ್ರಿಲ್ 09, 2024ರಂದು ಯುಗಾದಿ ಹಬ್ಬ ಇದೆ. ಅಂದಿನಿಂದ ಕ್ರೋಧಿ ನಾಮ ಸಂವತ್ಸರ ಆರಂಭವಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರವಾಗಿ ಅಂದಿನಿಂದ ಹೊಸ ವರ್ಷ ಆರಂಭ ಆಗುತ್ತದೆ. ನಾವು ಆಚರಿಸುವ ಈ ಹೊಸ ವರ್ಷಕ್ಕೆ ಇಡೀ ಪ್ರಕೃತಿಯು ಕೂಡ ಸಾತ್ ಕೊಡುತ್ತಿದೆ ಹಾಗಾಗಿ ಗಿಡ ಮರ ಬಳ್ಳಿ ಎಲ್ಲವೂ ಕೂಡ ಸೊಗಸಾಗಿ ಚಿಗುರಿ ಹೊಸತನಕ್ಕೆ ಕಾದು ನಿಂತಿರುತ್ತದೆ.
ಸಾಮಾನ್ಯವಾಗಿ ಹೊಸ ವರ್ಷ ಆರಂಭಿಸುವ ದಿನ ಹೇಗೆ ಕಳೆಯುತ್ತಿವೆಯೋ ಹಾಗೆಯೇ ವರ್ಷಪೂರ್ತಿ ಇರುತ್ತದೆ ಎನ್ನುವ ರೂಢಿ ಮಾತು ಎಲ್ಲ ಕಡೆ ಚಿರಪರಿಚಿತ. ಹಾಗಾಗಿ ಯುಗಾದಿ ಹಬ್ಬದ ದಿನದಂದು ಯಾವ ರೀತಿ ಆಚರಣೆ ಮಾಡಬೇಕು ಮತ್ತು ವರ್ಷ ಪೂರ್ತಿ ಇದೇ ರೀತಿ ಶುಭ ಫಲಗಳು ಸಿಗಬೇಕು ಎಂದರೆ ವರ್ಷ ಪೂರ್ತಿ ಯುಗಾದಿಯಂತೆ ಸಮೃದ್ಧಿ ಇರಬೇಕು ಎಂದರೆ ಏನು ಮಾಡಬೇಕು ಎನ್ನುವ ವಿಚಾರವನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ
ಯುಗಾದಿ ಹಬ್ಬವನ್ನು ಹಲವು ವರ್ಷಗಳಿಂದ ಆಚರಿಸುತ್ತಿದ್ದೇವೆ ಯುಗ ಯುಗ ಕಳೆದರೂ ಯುಗಾದಿ ಮತ್ತೆ ಬರುತ್ತಿದೆ ಆದರೂ ಯುಗಾದಿ ದಿನ ಯಾವ ದೇವರನ್ನು ಪೂಜೆ ಮಾಡಬೇಕು ಎನ್ನುವುದೇ ಹಲವರ ಗೊಂದಲ. ಯಾವುದೇ ಪೂಜೆ ಮಾಡುವ ಮುನ್ನ ಮೊದಲು ಪ್ರಥಮ ಪೂಜೆ ವಂದಿತನಾದ ವಿಘ್ನೇಶ್ವರನಿಗೆ ಪೂಜೆ ಮಾಡಬೇಕು ಇದಾದ ಬಳಿಕ ನಿಮ್ಮ ಮನೆ ದೇವರಿಗೆ ಪೂಜೆ ಮಾಡಿ ಕಾಲಪುರುಷನನ್ನು ಕೂಡ ಸ್ಮರಿಸಬೇಕು.
ಕಾಲ ಪುರುಷನ ಸಂಚಾರವು ದ್ವಾದಶ ರಾಶಿಗಳೆಲ್ಲದರ ಮೇಲೆ ಬದಲಾವಣೆ ತರುತ್ತದೆ ಮತ್ತು ಆತನ ಪ್ರಯಾಣದ ಅನುಸಾರವಾಗಿ ಮಳೆ ಬೆಳೆ ಎಲ್ಲವೂ ನಿರ್ಧಾರ ಆಗುತ್ತದೆ. ಅದಕ್ಕಾಗಿ ಇಂದು ಹಿಂದುಗಳು, ಹೊಸ ಪಂಚಾಂಗ ತೆರೆದು ತಮ್ಮ ತಮ್ಮ ರಾಶಿ ಬಲ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ.
ಕಾಲಪುರುಷನ ಕೃಪಾಕಟಾಕ್ಷ ಇದ್ದರೆ ಬದುಕು ಖಂಡಿತವಾಗಿಯೂ ಬಂಗಾರವಾಗುತ್ತದೆ. ಆತನ ಆಶೀರ್ವಾದಕ್ಕಾಗಿ ಪುರುಷ ಸೂಕ್ತ, ವಿಷ್ಣು ಸಹಸ್ರನಾಮ ಇತ್ಯಾದಿಗಳನ್ನು ಪ್ರತಿನಿತ್ಯವೂ ಕೂಡ ಪಠಿಸಬೇಕು ಸಾಧ್ಯವಾಗದಿದ್ದರೆ ಅವುಗಳನ್ನು ಕೇಳಿಸಿಕೊಳ್ಳುವ ಪ್ರಯತ್ನವಾದರೂ ಮಾಡಬೇಕು.
ಈ ಸುದ್ದಿ ಓದಿ:- ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!
ವಿಷ್ಣು ರಾಮ ಕೃಷ್ಣ ಈ ರೀತಿ ವಿಷ್ಣುವಿನ ಅವತಾರದ ಯಾವುದೇ ದೇವರನ್ನು ಪೂಜೆ ಮಾಡಿದರು ಕೂಡ ಅದು ಸಹ ಸಲ್ಲುತ್ತದೆ. ಯಾಕೆಂದರೆ ಸೃಷ್ಟಿಕರ್ತ ಬ್ರಹ್ಮನಾದರೆ ಈಗ ಬದುಕು ನಡೆಸುತ್ತಿರುವವರು ವಿಷ್ಣು ಆಗಿದ್ದಾರೆ ಹಾಗೂ ನಮ್ಮನ್ನು ಅಂತ್ಯ ಮಾಡುವುದು ಶಿವ. ಹಾಗಾಗಿ ಲಯಕರ್ತನಾದ ನಾರಾಯಣನನ್ನು ಸ್ಮರಿಸಿದರೆ ಜೀವನ ಸರಳವಾಗುತ್ತದೆ.
ಈ ದಿನ ತಪ್ಪದೇ ನಾವು ಹೇಳಿದ ರೀತಿಯಲ್ಲಿ ಕಾಲಪುರುಷನನ್ನು ತ್ರಿಮೂರ್ತಿಗಳನ್ನು ಮತ್ತು ಎಲ್ಲಕ್ಕಿಂತ ಮೊದಲು ಗಣಪತಿಗೆ ಯನ್ನು ನೆನೆಯಿರಿ, ಹೊಸ ಬಟ್ಟೆಗಳನ್ನು ಧರಿಸಿ, ಮನೆಯಲ್ಲಿ ಸಿಹಿ ಪದಾರ್ಥ ಮಾಡಿ ನೆರೆಹೊರೆಯವರ ಜೊತೆಗೂ ಸ್ನೇಹಿತರ ಜೊತೆಗೂ ಸಂಭ್ರಮ ಹಂಚಿಕೊಳ್ಳಿ, ಯಾರಿಗೂ ಕೂಡ ಕೆಟ್ಟ ಮಾತನ್ನು ಆಡಬೇಡಿ, ಯಾರ ಬಗ್ಗೆ ಕೆಟ್ಟದ್ದನ್ನು ಯೋಚನೆ ಮಾಡಬೇಡಿ.
ಯಾರಿಗೂ ಕೆಟ್ಟದ್ದನ್ನು ಬಯಸಬೇಡಿ ಮತ್ತು ನಿಮ್ಮ ಜೀವನದಲ್ಲಿ ಹಿಂದಿನ ವರ್ಷ ಯಾವುದೇ ರೀತಿಯ ಕ’ಷ್ಟ, ನೋ’ವು, ದುಃ’ಖ, ಅ’ವ’ಮಾ’ನ, ಅ’ಹಂ’ಕಾ’ರ, ಕೋ’ಪ, ದ್ವೇ’ಷ ಏನೇ ಇದ್ದರೂ ಕೂಡ ಹಳೆ ಮರದ ಹಣ್ಣೆಲೆಗಳು ಉದುರಿ ಹೊಸ ಹಸಿರು ಚಿಗುರುವಂತೆ ಈ ಹೊಸ ವರ್ಷ ನಿಮ್ಮ ಬದುಕಿನಲ್ಲಿಯೂ ಒಳ್ಳೆಯದನ್ನು ಮಾಡಲಿ ಸಕಾರಾತ್ಮಕವಾಗಿರಲಿ ಮತ್ತು ಹಿಂದಿನ ವರ್ಷಕ್ಕಿಂತ ಅದ್ಭುತವಾಗಿ ನಡೆದುಕೊಂಡು ಹೋಗಲಿ ಎಂದು ಆ ದೇವರಲ್ಲಿ ಸ್ಮರಿಸುತ್ತಾ ಯುಗಾದಿ ದಿನ ಆರಂಭಿಸಿ ಎಲ್ಲವೂ ಶುಭವಾಗುತ್ತದೆ.