Home Useful Information ಮಹಿಳೆಯರು ಯಾವ ದಿನ ತಲೆ ಸ್ನಾನ ಮಾಡಬೇಕು? ಯಾವ ದಿನ ಸ್ನಾನ ಮಾಡಿದರೆ ಏನು ಫಲ ನೋಡಿ.!

ಮಹಿಳೆಯರು ಯಾವ ದಿನ ತಲೆ ಸ್ನಾನ ಮಾಡಬೇಕು? ಯಾವ ದಿನ ಸ್ನಾನ ಮಾಡಿದರೆ ಏನು ಫಲ ನೋಡಿ.!

0
ಮಹಿಳೆಯರು ಯಾವ ದಿನ ತಲೆ ಸ್ನಾನ ಮಾಡಬೇಕು? ಯಾವ ದಿನ ಸ್ನಾನ ಮಾಡಿದರೆ ಏನು ಫಲ ನೋಡಿ.!

 

ನಮ್ಮ ಸಂಸ್ಕೃತಿಯಲ್ಲಿ ಹಿರಿಯರು ಕೆಲವು ಪದ್ಧತಿಗಳನ್ನು ಮಾಡಿದ್ದಾರೆ. ಇದು ಆರೋಗ್ಯದ ದೃಷ್ಟಿಯಿಂದ ಹಾಗೂ ಮನೆಯ ಸಕಾರಾತ್ಮಕ ವಾತಾವರಣವನ್ನು ಉತ್ತಮವಾಗಿಸುವ ಉದ್ದೇಶದಿಂದ ಸಕಾರಣವನ್ನು ಹೊಂದಿರುತ್ತದೆ. ಆದರೆ ಈಗಿನ ಕಾಲದಲ್ಲಿ ಅದನ್ನು ನಿರ್ಲಕ್ಷಿಸಿ ನಾವು ಕೆಲ ತಪ್ಪುಗಳನ್ನು ಮಾಡುವುದರಿಂದ ಅನೇಕ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಿದ್ದೇವೆ.

ಅಂತಹ ಕೆಲವು ನಿಯಮಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಸಾಧ್ಯವಾದಷ್ಟು ಇವುಗಳನ್ನು ತಪ್ಪದೇ ಪಾಲಿಸಿ.
* ಸೋಮವಾರ ತಲೆ ಸ್ನಾನ ಮಾಡುವುದರಿಂದ ಮನೆಯಲ್ಲಿ ಇಲ್ಲಸಲ್ಲದ ಜ’ಗ’ಳ’ಗಳು, ಮ’ನ’ಸ್ತಾ’ಪಗಳು, ಕ’ಲ’ಹಗಳು ಉಂಟಾಗುತ್ತವೆ. ಮನೆ ಹಾಗೂ ಮನಸ್ಸಿನ ಶಾಂತಿ ಹಾಳಾಗುತ್ತದೆ

* ಮಂಗಳವಾರ ತಲೆ ಸ್ನಾನ ಮಾಡಿದರೆ ಪತಿ ಜೊತೆ ಮ’ನ’ಸ್ತಾ’ಪವಾಗುತ್ತದೆ. ಪತಿ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ, ವಿನಾಕಾರಣ ದುಃ’ಖಕ್ಕೆ ಎಡೆ ಮಾಡಿಕೊಡುತ್ತದೆ
* ಬುಧವಾರ ತಲೆ ಸ್ನಾನ ಮಾಡುವುದು ಬಹಳ ಒಳ್ಳೆಯದು. ಈ ದಿನ ತಲೆ ಸ್ನಾನ ಮಾಡುವುದರಿಂದ ಮನೆಯ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಐಶ್ವರ್ಯ ವೃದ್ಧಿಯಾಗುತ್ತದೆ, ಕೀರ್ತಿ ಲಭಿಸುತ್ತದೆ

* ಗುರುವಾರ ತಲೆ ಸ್ನಾನ ಮಾಡಿದರೆ ಧನಹಾನಿ, ಸಂಪತ್ತು ಕ್ಷೀಣ, ವಿದ್ಯಾ ಹಾನಿ ಮುಂತಾದ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ
* ಮಹಿಳೆಯರು ಶುಕ್ರವಾರ ತಲೆ ಸ್ನಾನ ಮಾಡುವುದು ತುಂಬಾ ಶುಭಕರ ಎಂದು ಹೇಳಲಾಗುತ್ತದೆ. ಯಾಕೆಂದರೆ ಶುಕ್ರವಾರ ತಾಯಿ ಮಹಾಲಕ್ಷ್ಮಿಯ ವಾರವಾಗಿದೆ. ಈ ದಿನ ತಲೆ ಕೂದಲು ತೊಳೆದುಕೊಂಡು ಶುಕ್ರವಾರದ ಪೂಜೆ ಮಾಡಬೇಕು.

* ಶನಿವಾರದ ದಿನ ತಲೆ ಸ್ನಾನ ಮಾಡುವುದು ಬಹಳ ಒಳ್ಳೆಯದು. ಈ ರೀತಿ ಶನಿವಾರದ ದಿನ ತಲೆ ಸ್ನಾನ ಮಾಡುವವರ ಆರೋಗ್ಯ ವೃದ್ಧಿಯಾಗುತ್ತದೆ, ಅವರಿಗೆ ಎಲ್ಲ ರೀತಿಯ ಸೌಖ್ಯ ಗಳು ದೊರೆಯುತ್ತದೆ ಮತ್ತು ಅವರ ಆಯುಷ್ಯ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ
* ಭಾನುವಾರ ತಲೆ ಸ್ನಾನ ಮಾಡುವುದರಿಂದ ಯಾವುದೇ ರೀತಿಯ ದೋಷ ಇರುವುದಿಲ್ಲ.

* ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಿದ ದಿನವೇ ತಲೆಗೆ ಎಣ್ಣೆ ಹಚ್ಚುವುದರಿಂದ ಅವರ ಸೋದರ ಮಾವನಿಗೆ ತೊಂದರೆ ಎಂದು ಹೇಳಲಾಗುತ್ತದೆ

* ಯಾವುದೇ ಕಾರಣಕ್ಕೂ ರಾತ್ರಿ ಹೊತ್ತು ಮಹಿಳೆಯರು ತಲೆ ಕೂದಲು ತೊಳೆದುಕೊಳ್ಳಬಾರದು, ಬೆಳಗ್ಗೆ ಎದ್ದ ಕೂಡಲೇ ತಲೆ ಸ್ನಾನ ಮಾಡಬಹುದಾದ ದಿನಗಳಲ್ಲಿ ಮೊದಲು ಆ ಕಾರ್ಯ ಪೂರ್ತಿ ಮಾಡಿ ನಂತರ ಮನೆಯ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳಬೇಕು. ಆಲಸ್ಯದಿಂದ ನಿಧಾನವಾಗಿ ಸ್ನಾನ ಮಾಡುವುದು ಕೂಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಹಾಗೂ ಇದು ಪದ್ಧತಿ ಕೂಡ ಅಲ್ಲ. ಈ ರೀತಿ ಮಾಡುವುದರಿಂದ ಅ’ನಾ’ರೋ’ಗ್ಯ ಹಾಗೂ ಹಣಕಾಸಿನ ಹಾನಿ ಹೆಚ್ಚಾಗುತ್ತದೆ.

* ಯಾವುದೇ ಹಬ್ಬ ಹವನ ಹೋಮ ಅಥವಾ ಶುಭ ಕಾರ್ಯಗಳಲ್ಲಿ ಭಾಗಿಯಾಗಬೇಕಾದ ದಿನ ಮಹಿಳೆಯರು ಕಡ್ಡಾಯವಾಗಿ ತಲೆ ಸ್ನಾನ ಮಾಡಿಕೊಂಡೆ ಪಾಲ್ಗೊಳ್ಳಬೇಕು
* ಮುತ್ತೈದೆಯರು ಮನೆಗೆ ಬಂದಾಗ ತಲೆ ಸ್ನಾನ ಮಾಡಿದ ದಿನಗಳಂದು ಅವರಿಗೆ ಕುಂಕುಮ ಕೊಡಬೇಕು

* ತಲೆ ಸ್ನಾನ ಮಾಡಲು ನಿಷಿದ್ಧ ಇರುವ ದಿನಗಳಲ್ಲಿ ಕೂದಲು ಬಿಟ್ಟು ಮೈಗೆ ಸ್ನಾನ ಮಾಡಿ ಮನೆಯಲ್ಲಿ ಪೂಜೆ ಮಾಡಬಹುದು. ಆದರೆ ದಿನಪೂರ್ತಿ ಸ್ನಾನ ಮಾಡದೆ ಇರುವುದು ಹಾಗೂ ಸ್ನಾನ ಮಾಡದೆ ದೇವರ ಮನೆಯ ವಸ್ತುಗಳನ್ನು ದೇವರ ಫೋಟೋಗಳನ್ನು ಹಾಗೂ ದೇವರ ಪ್ರಸಾದಗಳನ್ನು ಸ್ವೀಕರಿಸುವುದು ಮಹಾ ಪಾಪ

* ಮನೆಯಲ್ಲಿ ಒಳ್ಳೆಯ ಕಾರ್ಯಕ್ಕೆ ಅಥವಾ ತೀರ್ಥಯಾತ್ರೆಗೆ ಅಥವಾ ಪ್ರಯಾಣ ಹೊರಟ ಸಮಯದಲ್ಲಿ ಮನೆಯಲ್ಲಿರುವ ಮಹಿಳೆಯರು ಅವರು ಹೋದ ನಂತರ ತಲೆಕೂದಲು ತೊಳೆದುಕೊಳ್ಳಬಾರದು
* ಮಹಿಳೆಯರು ತಲೆ ಸ್ನಾನ ಮಾಡುವ ಮುನ್ನ ತಲೆಗೆ ಒಂದೆರಡು ಹನಿ ಹರಳೆಣ್ಣೆ ಹಾಗೂ ಮುಖ ಕೈ ಕಾಲುಗಳಿಗೆ ಎರಡು ಚಿಟಿಕೆ ಅರಿಶಿಣ ಪುಡಿಯನ್ನು ಹಚ್ಚಿಕೊಂಡು ಸ್ನಾನ ಮಾಡಬೇಕು ಈ ರೀತಿ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ.

LEAVE A REPLY

Please enter your comment!
Please enter your name here