ಎಲ್ಲರಿಗೂ ಕೂಡ ಜೀವನದಲ್ಲಿ ಶ್ರೀಮಂತರಾಗಬೇಕು ಎನ್ನುವ ಆಸೆ ಇರುತ್ತದೆ. ಕೆಲವರು ಬೇಗ ಶ್ರೀಮಂತರಾಗಿ ದೇಶ ವಿದೇಶ ಸುತ್ತಬೇಕು, ನಮ್ಮ ಸ್ನೇಹಿತರು ಹಾಗೂ ಕುಟುಂಬದವರಲ್ಲಿ ನಾವೇ ಹೆಚ್ಚು ಹಣ ಹೊಂದಿರಬೇಕು, ಲಕ್ಸುರಿ ಲೈಫ್ ಲೀಡ್ ಮಾಡಬೇಕು ಎನ್ನುವ ಆಸೆ ಇಟ್ಟುಕೊಟ್ಟಿರುತ್ತಾರೆ. ಇನ್ನು ಕೆಲವರಿಗೆ ಆದಷ್ಟು ಬೇಗ ಹೆಚ್ಚು ಹಣ ಗಳಸಿ ಸೆಟಲ್ ಆಗಬೇಕು. ನೆಮ್ಮದಿಯಾಗಿ ಜೀವನದ ಸಣ್ಣ ಪುಟ್ಟ ಖುಷಿಗಳನ್ನು ಕೂಡ ಆನಂದಿಸ ಬೇಕು ಎನ್ನುವ ಮನಸ್ಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಗೊತ್ತಾ?…
ಮೇಷ ರಾಶಿ:-
ಮೇಷ ರಾಶಿಯವರು 19, 28, 37, 46, 55, 64 ಈ ವಯಸ್ಸಿನಲ್ಲಿ ಹೆಚ್ಚು ಹಣ ಗಳಿಸುತ್ತಾರೆ ಅಥವಾ ಹೆಚ್ಚು ಹಣ ಬರುವಂತಹ ಯಾವುದಾದರೂ ವ್ಯವಹಾರವನ್ನು ಆರಂಭಿಸುತ್ತಾರೆ. ಅವರಿಗೆ ಹಣಕಾಸಿನ ವಿಚಾರದಲ್ಲಿ ಈ ವಯಸ್ಸು ಶುಭವಾಗಿರುತ್ತದೆ
ವೃಷಭ ರಾಶಿ:- ಈ ರಾಶಿಯವರು ತಮ್ಮ ಕಠಿಣ ಪರಿಶ್ರಮದಿಂದಾಗಿ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಹೋಗಿ ಹಣ ಪಡೆಯುತ್ತಾರೆ. ಹಾಗಾಗಿ ನಿಧಾನವಾಗಿ 29, 36, 45 ಮತ್ತೆ 56 ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ. ಈ ವಯಸ್ಸು ಇವರಿಗೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿದೆ.
ಮಿಥುನ ರಾಶಿ:- ಮಿಥುನ ರಾಶಿಯವರಿಗೆ ಆಕಸ್ಮಿಕವಾಗಿ ಧನಲಾಭವಾಗುವ ಅವಕಾಶಗಳು ಇರುತ್ತವೆ. ತಂದೆಯ ಕಡೆಯಿಂದ ಬರುವ ಆಸ್ತಿಯಿಂದ ಇವರು ಹಣ ಮಾಡುತ್ತಾರೆ. 27, 36, 45, 57 ಈ ವರ್ಷಗಳಲ್ಲಿ ಅವರಿಗೆ ಹೆಚ್ಚು ಹಣ ಸಿಗುತ್ತದೆ ಮಿಥುನ ರಾಶಿಯವರಿಗೆ ಯಾವಾಗಲೂ ಮಂಗಳವಾರ ಹಾಗೂ ಶನಿವಾರ ಆಂಜನೇಯನಿಗೆ ಸಿಂಧೂರ ಅರ್ಪಿಸಿದರೆ ಬಹಳ ಬೇಗ ಶ್ರೀಮಂತರಾಗುತ್ತಾರೆ.
ಕರ್ಕಾಟಕ ರಾಶಿ:- 27, 23, 32, 48 ಮತ್ತು 58ನೇ ವಯಸ್ಸಿನಲ್ಲಿ ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ. ಇವರಿಗೆ ಹೆಂಡತಿ ಮನೆ ಕಡೆಯಿಂದ ಹಣದಿಂದಾಗಿ ಅದೃಷ್ಟ ಬರುತ್ತದೆ. ಈ ರಾಶಿಯವರಿಗೆ ಎಂದೂ ಹಣಕಾಸಿನ ಸಮಸ್ಯೆ ಕಾಡಬಾರದು ಎಂದರೆ ಕರ್ಕಾಟಕ ರಾಶಿಯವರು ಲಕ್ಷ್ಮಿ ದೇವಿಗೆ ನಿಯಮಿತವಾಗಿ ಸುಗಂಧವನ್ನು ಅರ್ಪಿಸಬೇಕು.
ಸಿಂಹ ರಾಶಿ:- ಸಿಂಹ ರಾಶಿಯವರಿಗೆ 28, 32, 50 ಹಾಗೂ 60ನೇ ವಯೋಮಾನವು ಹಣ ಸಂಪಾದನೆಗೆ ದಾರಿ ತೋರಿಸುವ ವರ್ಷಗಳಾಗಿವೆ. ಈ ವರ್ಷದಲ್ಲಿ ಅವರು ಜೀವಮಾನದಲ್ಲಿ ಅತಿ ಹೆಚ್ಚು ಹಣವನ್ನು ಆ ವರ್ಷಗಳಲ್ಲಿ ಸಂಪಾದನೆ ಮಾಡುತ್ತಾರೆ ಮತ್ತು ಇವರು ಸಂಪಾದನೆ ಮಾಡಿಟ್ಟ ಹಣದಿಂದಲೇ ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ.
ಕನ್ಯಾ ರಾಶಿ:- ಕನ್ಯಾ ರಾಶಿಯವರ ಬಹಳ ಚಿಕ್ಕ ವಯಸ್ಸಿಗೆ ಹಣ ನೋಡುತ್ತಾರೆ ಮತ್ತು ಕೊನೆಯವರೆಗೂ ಇವರಿಗೆ ಹಣದ ಹೊಲಿಗೆ ಹರಿಯುತ್ತಿರುತ್ತದೆ ಮೊದಲಿಗೆ ಪೋಷಕರಿಂದ ನಂತರ ವೃತ್ತಿಯಿಂದ ವ್ಯಾಪಾರ ತಿಂದ ಹಾಗೂ ಸಂಗಾತಿಯಿಂದ ಕೂಡ ಕೊನೆಗಾಲದಲ್ಲಿ ಮಕ್ಕಳಿಂದಲೂ ಕೂಡ ಇವರಿಗೆ ಹಣ ಬರುತ್ತದೆ.
15, 24, 33, 42ನೇ ವಯಸ್ಸಿನಲ್ಲಿ ಹೆಚ್ಚು ಹಣ ಮಾಡುತ್ತಾರೆ.
ತುಲಾ ರಾಶಿ:- ತುಲಾ ರಾಶಿಯವರಿಗೆ ಸ್ತ್ರೀಯರಿಂದ ಹಣ ಹೆಚ್ಚಾಗುವ ಯೋಗ ಇದೆ. 16, 34, 42 ಮತ್ತು 51 ನೇ ವರ್ಷಗಳು ಅದೃಷ್ಟದ ವರ್ಷಗಳಾಗಿವೆ. ಆದಾಯ ಹಾಗೂ ಖರ್ಚು ಎರಡನ್ನು ಸಮತೋಲನದಿಂದ ನೋಡುತ್ತಾರೆ. ಪ್ರತಿದಿನ ಸೋತುಹೋದಯದಲ್ಲಿ ಸೂರ್ಯನನ್ನು ನೋಡಿ ಅರ್ಘ್ಯ ಅರ್ಪಿಸುವುದರಿಂದ ಹಣಕಾಸಿನ ತೊಡಕುಗಳು ನಿವಾರಣೆ ಆಗುತ್ತದೆ, ಇನ್ನು ಹೆಚ್ಚಿನ ಹಣ ನೋಡುತ್ತಾರೆ.
ವೃಶ್ಚಿಕ ರಾಶಿ:- 35, 44, 53 ಮತ್ತು 63 ಈ ವಯೋಮಾನವು ಇವರಿಗೆ ಹಣಕಾಸಿನ ವಿಚಾರದಲ್ಲಿ ಉತ್ತಮವಾಗಿರುತ್ತದೆ. ಇವರು ಸಹ ಆಸ್ತಿಯ ಕಾರಣದಿಂದ ಅತಿ ಹೆಚ್ಚು ಹಣ ನೋಡುತ್ತಾರೆ. ಇವರಿಗೆ ಉಳಿದ ವರ್ಷಗಳಲ್ಲಿ ಹಣಕಾಸಿನ ಸಮಸ್ಯೆಗಳು ಕೂಡ ಇರುತ್ತದೆ. ಇವರ ಗಿಡಗಳಿಗೆ ನೀರು ಹಾಕಿದರೆ, ಮೂಕ ಪ್ರಾಣಿಗಳಿಗೆ ನೀರು, ಆಹಾರ ನೀಡಿದರೆ ಹಣಕಾಸಿನ ಸಮಸ್ಯೆಯಿಂದ ಹೊರ ಬರಬಹುದು.
ಧನಸ್ಸು ರಾಶಿ:- 36, 45, 54 ಮತ್ತು 63 ಹೆಚ್ಚು ಹಣಕಾಸಿನ ಲಾಭವನ್ನು ಉಂಟು ಮಾಡುವ ವಯಸ್ಸಾಗಿದೆ. ಚಿಕ್ಕ ವಯಸ್ಸಿನಿಂದ ಹಣಕಾಸಿನ ವಿಚಾರವಾಗಿ ಬಹಳ ಕ’ಷ್ಟ ಪಡುತ್ತಾರೆ ಆದರೆ ಅರ್ಧ ವಯಸ್ಸಿನ ನಂತರ ಬಹಳ ಒಳ್ಳೆಯದಾಗುತ್ತದೆ. ನಿಮ್ಮ ತಾಳ್ಮೆಯೇ ನಿಮ್ಮ ಅಸ್ತ್ರ.
ಮಕರ ರಾಶಿ:- 28, 37, 46, 55 ಈ ವರ್ಷಗಳಲ್ಲಿ ಶ್ರೀಮಂತರಾಗುತ್ತಾರೆ. ಸ್ವಂತ ವ್ಯಾಪಾರ ಮಾಡುವುದರಿಂದ ಇವರಿಗೆ ಹೆಚ್ಚು ಹಣ ಸಿಗುತ್ತದೆ. ಮಂಗಳವಾರ ಒಂದು ಹೊತ್ತು ಉಪವಾಸ ಮಾಡುವುದರಿಂದ ಬಹಳ ಉತ್ತಮ ಫಲಗಳನ್ನು ಕಾಣುತ್ತೀರಿ.
ಕುಂಭ ರಾಶಿ:- 29, 37, 48, 58 ಈ ವರ್ಷಗಳಲ್ಲಿ ನಿಮ್ಮ ಅದೃಷ್ಟದಿಂದ ಹಾಗೂ ದೇವರ ಕೃಪೆ ಕಷ್ಟಾಕ್ಷದಿಂದ ಹೆಚ್ಚು ಹಣ ಹೊಂದುತ್ತೀರಿ. ನಿಯಮಿತವಾಗಿ ದೇವಾಲಯಗಳಿಗೆ ಭೇಟಿ ಕೊಡಿ ಮತ್ತು ಬಾಳೆಹಣ್ಣನ್ನು ಅರ್ಪಿಸಿ.
ಮೀನಾ ರಾಶಿ:- 39, 48, 57 ಈ ವಯಸಲ್ಲಿ ಶ್ರೀಮಂತರಾಗುತ್ತಾರೆ. ಇವರು ಮಕ್ಕಳ ಕಾರಣದಿಂದ ಜೀವನದಲ್ಲಿ ಆದೃಷ್ಟ ಪಡೆಯುತ್ತಾರೆ.