Home Blog Page 102

ಸದಾ ಆರೋಗ್ಯವಾಗಿರಲು ಹಿರಿಯರ ಈ ಸಲಹೆಗಳನ್ನು ಪಾಲಿಸಿ…

 

ಈಗಿನ ಕಾಲದಲ್ಲಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಆಹಾರ ಪದ್ಧತಿಯನ್ನು ತಪ್ಪಾಗಿಸಿಕೊಂಡಿದ್ದೇವೆ. ಅದರಿಂದ ಅನೇಕ ಕಾಯಿಲೆಗೆ ತುತ್ತಾಗುತ್ತಿದ್ದೇವೆ. ಇವುಗಳಲ್ಲಿ ಕೆಲವನ್ನಾದರೂ ಸರಿಪಡಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

* ಪ್ರತಿನಿತ್ಯವೂ 2-3 ಎಸಳು ಹಸಿ ಬೆಳ್ಳುಳ್ಳಿಯನ್ನು ಜಗಿದು ತಿನ್ನುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಕಣ್ಣಿನಲ್ಲಿರುವ ಮಸೂರದ ಆರೋಗ್ಯವನ್ನು ಹೆಚ್ಚಿಸುತ್ತದೆ.
* ನಿಯಮಿತವಾಗಿ ಮೊಸರನ್ನು ಸೇವನೆ ಮಾಡುವವರಿಗೆ ಮೂತ್ರಕೋಶದ ಸಂಬಂಧಿತ ಸೋಂಕುಗಳಾಗಲಿ, ಕಾಯಿಲೆಗಳಾಗಲಿ ಬರುವುದಿಲ್ಲ.

* ಹಿಂದಿನ ದಿನವೇ ಕತ್ತರಿಸಿಟ್ಟ ಈರುಳ್ಳಿಯನ್ನು ಬಳಸಬೇಡಿ ಇದು ಹೊಟ್ಟೆ ನೋವು, ಅತಿಸಾರ ಉಂಟಾಗಲು ಕಾರಣವಾಗುತ್ತದೆ.
ಅಡುಗೆ ಮಾಡುವಾಗ ಮಾತ್ರ ಈರುಳ್ಳಿಯನ್ನು ಕತ್ತರಿಸಬೇಕು ಈರುಳ್ಳಿಯನ್ನು ಕತ್ತರಿಸಿ ಇಟ್ಟು ಬಹಳ ಸಮಯದ ಬಳಿಕ ಅಡುಗೆ ಮಾಡುವುದು ಕೂಡ ಇದೇ ಪರಿಣಾಮ ಉಂಟುಮಾಡುತ್ತದೆ.
* ತುಟಿಗಳು ಬಹಳ ಒರಟಾಗಿದ್ದು, ಕಪ್ಪಾಗಿದ್ದರೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿನ ಕೆನೆ ಅಥವಾ ಮೊಸರಿನ ಕೆನೆಯನ್ನು ಹಚ್ಚಿ ಇದರಿಂದ ತುಟಿ ಬಣ್ಣ ಬದಲಾಗುತ್ತದೆ ಮತ್ತು ಮೃದುವಾಗುತ್ತದೆ.

* ಸೀಬೆಹಣ್ಣು, ಸೇಬಿನ ಹಣ್ಣಿನಲ್ಲಿ ಹೊಂದಿರುವಷ್ಟೇ ಪೋಷಕಾಂಶವನ್ನು ಹೊಂದಿರುತ್ತದ. ಪ್ರತಿದಿನವೂ ಕೂಡ ಸೀಬೆ ಹಣ್ಣಿನ ಸೇವನೆ ಮಾಡುವುದರಿಂದ ರಕ್ತಹೀನತೆ ಕಡಿಮೆ ಆಗುವುದರ ಜೊತೆಗೆ ಆ’ತಂ’ಕ ಮತ್ತು ಖಿ’ನ್ನ’ತೆಗಳು ದೂರವಾಗುತ್ತದೆ.
* ಪ್ರತಿದಿನವೂ ಆಹಾರದಲ್ಲಿ ಈರುಳ್ಳಿಯನ್ನು ಬಳಸುವುದರಿಂದ ರಕ್ತ ಶುದ್ಧಿ ಆಗುತ್ತದೆ ಮತ್ತು ಹೊಸ ರಕ್ತದ ಉತ್ಪಾದನೆಗೆ ಇದು ಸಹಕಾರಿಯಾಗುತ್ತದೆ.

* ದೇಹಕ್ಕೆ ಬಹಳ ಆಯಾಸವಾಗಿದ್ದಾಗ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಕುಡಿಯಿರಿ, ರಿಲ್ಯಾಕ್ಸ್ ಆಗುತ್ತದೆ
* ವಾರಕ್ಕೆ ಎರಡು ಬಾರಿಯಾದರೂ ಎಳನೀರು ಕುಡಿಯುವುದರಿಂದ ನಿಶಕ್ತಿ ಕಡಿಮೆಯಾಗುತ್ತದೆ, ದೇಹಕ್ಕೆ ತಂಪಾಗುತ್ತದೆ.
* ಊಟದ ಸಮಯದಲ್ಲಿ ಮಾಮೂಲಿ ನೀರು ಕುಡಿಯುವುದಕ್ಕಿಂತ ಅಜ್ವೈನ್ ಹಾಕಿ ಕುದಿಸಿದ ನೀರನ್ನು ಆರಿದ ಮೇಲೆ ಕುಡಿಯಿರಿ. ಇದು ಗ್ಯಾಸ್ ಆಗದಂತೆ ತಡೆಯುತ್ತದೆ ಮತ್ತು ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.

* ನೀವು ಹೆಚ್ಚು ಸುಂದರವಾಗಿವಾಗಿ ಸ್ಮಾರ್ಟ್ ಆಗಿ ಕಾಣಬೇಕು ಎಂದರೆ ಆಹಾರದಲ್ಲಿ ಅನ್ನದ ಪ್ರಮಾಣವನ್ನು ಕಡಿಮೆ ಮಾಡಿ ಹಸಿ ಸೊಪ್ಪು ತರಕಾರಿ ಇವುಗಳ ಸೇವನೆ ಜಾಸ್ತಿ ಮಾಡಿ.
* ಪೈಲ್ಸ್ ನಿಂದ ಬಳಸುತ್ತಿರುವ ಹಸಿಮೆಣಸಿನಕಾಯಿಯನ್ನು ಸೇವಿಸಲೇಬಾರದು ಹಸಿಮೆಣಸಿನಕಾಯಿಯನ್ನು ಯಾವುದೇ ವ್ಯಕ್ತಿ ಸೇವಿಸಿದರು ಕೂಡ ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಹಾಗಾಗಿ ಹಿರಿಯರು ಹಸಿಮೆಣಸಿನಕಾಯಿ ಆಯುಷ್ಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತಿದ್ದರು.

* ಒಂದು ದಿನದಲ್ಲಿ ನಾಲ್ಕರಿಂದ ಐದು ಗೋಡಂಬಿಗಳನ್ನು ಸೇವಿಸುವುದು ಒಳ್ಳೆಯದು. ಅದಕ್ಕಿಂತ ಹೆಚ್ಚಿದ ಪ್ರಮಾಣದಲ್ಲಿ ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಪ್ರಯೋಜನ ಆಗುವ ಬದಲು ಹಾನಿ ಉಂಟಾಗುತ್ತದೆ
* ನೀರು ಕುಡಿಯುವುದು ಕಡಿಮೆ ಆದರೆ ತುಟಿಗಳು ಒಣಗುತ್ತವೆ.
* ಜೀರ್ಣಶಕ್ತಿ ಹೆಚ್ಚಾಗಬೇಕು ಎಂದರೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ಪ್ರತಿದಿನವೂ ಕಬ್ಬಿನ ಹಾಲನ್ನು ಸೇವಿಸುವುದರಿಂದ ಇದು ಪರಿಹಾರ ಆಗುತ್ತದೆ.

* ಕೆಂಪು ಮೆಣಸಿನಕಾಯಿಯ ಅತಿಯಾದ ಸೇವನೆ ಕಣ್ಣು ಹಾಗೂ ಮೆದುಳಿನ ಆರೋಗ್ಯಕ್ಕೆ ಹಾನಿಕರ.
* ಜ್ವರ ಬಂದಾಗ ಹಸಿರು ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
* ನಿಂಬೆ ಹಣ್ಣಿನ ಬಳಕೆ ಹೆಚ್ಚು ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ, ಯಕೃತ್ತಿನ ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು.

* ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವಿಸುವುದರಿಂದ ಆಂತರಿಕ ದೌರ್ಬಲ್ಯಗಳು ಕಡಿಮೆಯಾಗುತ್ತವೆ.
* ಅತಿ ಹೆಚ್ಚು ಬಿಸಿಲಿದ್ದಾಗ ಚರ್ಮವನ್ನು ರಕ್ಷಿಸಿಕೊಳ್ಳಲು ಬಾದಾಮಿ ಎಣ್ಣೆಯನ್ನು ಮುಖಕ್ಕೆ ಹಚ್ಚಬಹುದು.
* ಅಲೋವೆರಾವನ್ನು ಅರಿಶಿಣದ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಗುಳ್ಳೆಗಳು ಹಾಗೂ ಕಲೆಗಳು ಹೋಗುತ್ತವೆ.
* ಬಹಳ ತಣ್ಣಗಿರುವ ಪದಾರ್ಥಗಳನ್ನು ಸೇವಿಸುವುದರಿಂದ ಕೂದಲು ಉದುರುತ್ತದೆ.

ನಿದ್ರೆಯಿಂದ ಎದ್ದ ಮೇಲೆ ಇದನ್ನು ಮಾಡಿದರೆ ಕಾಲು ನೋವು ಬರುವುದಿಲ್ಲ, ಪಾದ ಮತ್ತು ಹಿಮ್ಮಡಿ ನೋವಿಗೆ ಬೆಸ್ಟ್ ಪರಿಹಾರ.!

ಈಗಿನ ಕಾಲದಲ್ಲಿ ಪಾದ ಮತ್ತು ಹಿಮ್ಮಡಿ ನೋವು ಎನ್ನುವುದನ್ನು ಹೆಚ್ಚಾಗಿ ಕೇಳುತ್ತಿದ್ದೇವೆ. ಚಿಕ್ಕ ವಯಸ್ಸಲ್ಲಿಯೇ ಜನರು ಈ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಾನಾ ಕಾರಣಗಳಿಂದ ಪಾದ ಮತ್ತು ಹಿಮ್ಮಡಿಯ ನೋವು ಕಾಣಿಸಿಕೊಳ್ಳುತ್ತದೆ. ಇದು ಎಷ್ಟು ನೋವು ತರುತ್ತದೆ ಎಂದರೆ ಬೆಳಿಗ್ಗೆ ಎದ್ದ ತಕ್ಷಣ ನೆಲದ ಮೇಲೆ ಕಾಲು ಇಡಲು ಬಿಡುವುದಿಲ್ಲ, ಪಾದಗಳಲ್ಲಿ ಊತ, ಜೋಮು ಹಿಡಿಯುವುದು, ವಿಪರೀತವಾದ ಉರಿ ಅಥವಾ ತಡೆಯಲಾಗದಷ್ಟು ನೋ’ವಿರುತ್ತದೆ.

ಈಗಾಗಲೇ ಯಾರಾದರೂ ಇಂತಹ ಸಮಸ್ಯೆಯಿಂದ ಬಳಸುತ್ತಿದ್ದರೆ ತಪ್ಪದೆ ಇಂದು ನಾವು ಈ ಅಂಕಣದಲ್ಲಿ ಹೇಳುತ್ತಿರುವ ಮಾಹಿತಿಯನ್ನು ಫಾಲೋ ಮಾಡಿ ಅಥವಾ ಮುಂದೆ ನಿಮಗೆ ಈ ರೀತಿ ಪಾದ ಹಾಗೂ ಇಮ್ಮಡಿಯ ಸಮಸ್ಯೆಗಳು ಕಾಣಿಸಿಕೊಳ್ಳಬಾರದು ಎಂದರು ಈಗ ನಾವು ಹೇಳುತ್ತಿರುವ ಈ ಟಿಪ್ ಗಳನ್ನು ಫಾಲೋ ಮಾಡಿ.

ಮೊದಲಿಗೆ ಯಾವ ಕಾರಣಗಳಿಂದ ಪಾದ ಮತ್ತು ಹಿಮ್ಮಡಿಯ ನೋವು ಬರುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯ. ಕೆಲವರಿಗೆ ಪಾದ ಅಥವಾ ಹಿಮ್ಮಡಿಯ ಭಾಗಕ್ಕೆ ಹೊರಗಿನಿಂದ ಡ್ಯಾಮೇಜ್ ಆಗಿರುತ್ತದೆ, ಅಪಘಾತ ಆದಾಗ ಅಥವಾ ದೇಹದ ತೂಕ ಒಮ್ಮೆಲೇ ಹೆಚ್ಚಾದಾಗಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ವಯಸ್ಸಾಗುತ್ತಿದ್ದಂತೆ ಮೂಳೆಗಳ ಸವೆತ ಉಂಟಾಗುವುದರಿಂದ ಕೂಡ ಪಾದ ಮತ್ತು ಹಿಮ್ಮಡಿಯನ್ನು ನೋ’ವು ಬರುತ್ತದೆ. ಇದನ್ನು ಹೊರತುಪಡಿಸಿ ಸ್ಪೋರ್ಟ್ಸ್ ಪರ್ಸನ್ ಗಳಿಗೆ ಖಡಾಕಂಡಿತವಾಗಿ ಪಾದ ಮತ್ತು ಹಿಮ್ಮಡಿಯ ನೋವು ಇದ್ದೇ ಇರುತ್ತದೆ. ಮೊದಲಿಂದಲೂ ಕೂಡ ಪಾದ ಮತ್ತು ಹಿಮ್ಮಡಿಯ ಭಾಗಕ್ಕೆ ವ್ಯಾಯಾಮ ಕೊಡದೆ ಇರುವುದು ಕೂಡ ಇದರಲ್ಲೊಂದು ಕಾರಣ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈಗ ನಿಮ್ಮ ನೋವು ಯಾವ ಹಂತದಲ್ಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ನೀವಿನ್ನು ಅದರ ನೋವನ್ನು ಪಡುತ್ತಿದ್ದೀರ ಎಂದರೆ ಮೊದಲು Paracentomol ಅಥವಾ ವೈದ್ಯರು ಸೂಚಿಸು ಪೇನ್ ಕಿಲ್ಲರ್ ಎರಡು ಬಾರಿ ತೆಗೆದುಕೊಳ್ಳಿ ಅದರಿಂದ ನೋವು ಕಡಿಮೆ ಆಗುತ್ತಿದ್ದರೆ ಅದನ್ನು ಅನುಸರಿಸಬಹುದು

ಇದರ ಜೊತೆಗೆ ತಪ್ಪದೆ ಬೆಳಗ್ಗೆ ಎದ್ದ ಕೂಡಲೇ ಪಾದ ಮತ್ತು ಹಿಮ್ಮಡಿ ಭಾಗಕ್ಕೂ ಕೂಡ ವ್ಯಾಯಾಮ ಮಾಡುವುದು ಮುಖ್ಯ ಇದನ್ನು ಹೇಗೆ ಮಾಡಬಹುದು ಎಂದರೆ ಒಂದು ಚೆಂಡನ್ನು ಪಾದದ ಕೆಳಗೆ ಇಟ್ಟುಕೊಂಡು ಅದನ್ನು ಆ ಕಡೆ ಈ ಕಡೆ ಹೊರಡಿಸುವುದು. ಈ ರೀತಿ ಮಾಡುವುದರಿಂದ ಪಾದದ ಭಾಗಕ್ಕೆ ಮತ್ತು ಹಿಮ್ಮಡಿ ಭಾಗಕ್ಕೆ ಪೂರ್ತಿ ಎಕ್ಸರ್ಸೈಜ್ ಆಗುತ್ತದೆ. ಆ ಭಾಗದ ನರಗಳು ಕ್ರಿಯಾಶೀಲಗೊಳ್ಳುತ್ತದೆ ಈ ಮೂಲಕ ಸಣ್ಣಪುಟ್ಟ ಡಿಸ್ ಲೊಕೇಟ್ ಆಗಿದ್ದರು ಸರಿ ಹೋಗಲು ಅವಕಾಶ ಸಿಗುತ್ತದೆ.

ಜೊತೆಗೆ ಪಾದವನ್ನು ಹೊಂದುವಂತಹ ಚಪ್ಪಲಿ ಧರಿಸುವುದು ಉತ್ತಮ ಪರಿಹಾರ. ಕೆಲವರಿಗೆ ಹಿಮ್ಮಡಿಯ ಭಾಗ ತಗ್ಗಿರುತ್ತದೆ ಅಥವಾ ಉಬ್ಬಿರುತ್ತದೆ ಅವರ ಪಾದಕ್ಕೆ ಅನುಗುಣವಾದ ಚಪ್ಪಲಿ ಧರಿಸಿದಾಗ ಅನೇಕರಿಗೆ ಈ ಸಮಸ್ಯೆ ಗುಣವಾಗಿದೆ ಒಂದು ವೇಳೆ ಈ ಹಂತ ದಾಟಿ ವಿಪರೀತವಾದ ನೋವಾಗಿದೆ ಎಂದಾಗ ಅದನ್ನು ಆರಾಥರೈಟಿಸ್ ಎಂದು ಪರಿಗಣಿಸಲಾಗುತ್ತದೆ ಇದಕ್ಕೆ ಸ್ಟೆಮ್ ಸೆಲ್ ಥೆರಪಿ ಎಂದು ಮಾಡುತ್ತಾರೆ,

ಇದರಲ್ಲಿ ರೋಗಿಯ ರಕ್ತದ ಕಣಗಳಿಂದಲೇ ಇದನ್ನು ಗುಣಪಡಿಸುವ ಅಂಶಗಳನ್ನು ತೆಗೆದುಕೊಂಡು ಕಾಯಿಲೆ ಸರಿಪಡಿಸಲಾಗುತ್ತದೆ. ಕೇವಲ ಸೂಜಿಯ ಮುಖಾಂತರವಾಗಿ ಈ ಚಿಕಿತ್ಸೆ ನಡೆಯುತ್ತದೆ. ಇದಕ್ಕೂ ಕೂಡ ಸರಿಹೋಗದೆ ಇದ್ದಾಗ ಶಸ್ತ ಚಿಕಿತ್ಸೆ ಮಾಡದೆ ಬೇರೆ ಪರಿಹಾರ ಇರುವುದಿಲ್ಲ ಇದನ್ನು ತಪ್ಪಿಸಬೇಕು ಎಂದರೆ ನಾವು ಈ ಮೊದಲೇ ಹೇಳಿದಂತೆ ನಿಮ್ಮ ಪಾದಕ್ಕೆ ಸರಿಹೊಂದುವ ಚಪ್ಪಲಿ ಧರಿಸುವುದು.

ಹಿಮ್ಮಡಿ ಹಾಗೂ ಪಾದದ ಭಾಗಕ್ಕೆ ವ್ಯಾಯಾಮ ಮಾಡುವುದು ಹಾಗೂ ಒಂದೇ ಬಾರಿ ದೇಹದ ತೂಕ ವಿಪರೀತ ಹೆಚ್ಚಾಗದಂತೆ ಬ್ಯಾಲೆನ್ಸ್ ಮಾಡುವುದು ಇವುಗಳನ್ನು ಪಾಲಿಸಿ ಯಾವುದಾದರೂ ಸಣ್ಣ ಪುಟ್ಟ ಇಂಜುರಿ ಆಗಿದ್ದರೆ ಹಳೆ ನೋವಾಗುವವರೆಗೂ ಬಿಡದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.

ಸಂಪಾದಿಸಿದ ಹಣವು ನಿಲ್ಲುತ್ತಿಲ್ಲವೇ, ಹಾಗಾದರೆ ಹಣವನ್ನು ಆಕರ್ಷಣೆ ಮಾಡಲು ಈ ರೀತಿ ಮಾಡಿ…

ಹಣ ಎನ್ನುವುದು ಯಾರಿಗೆ ಇಷ್ಟ ಇಲ್ಲ. ಪ್ರತಿಯೊಬ್ಬರಿಗೂ ಕೂಡ ಹಣದ ಅವಶ್ಯಕತೆ ಇದೆ ಮತ್ತು ಹಣ ಎಂದಿಗೂ ಕೂಡ ಸಾಕು ಎನಿಸುವುದಿಲ್ಲ. ಯಾಕೆಂದರೆ ಹಣ ಇದ್ದರೆ ಮಾತ್ರ ನಾವು ಒಂದು ಹಂತದಿಂದ ಮುಂದಿನ ಹಂತಕ್ಕೆ ಬೆಳೆಯಲು ಸಾಧ್ಯ ಹೀಗೆ ಆ ಹಂತಕ್ಕೆ ಕೊನೆ ಎನ್ನುವುದು ಇಲ್ಲದೆ ಇರುವುದರಿಂದ ಈ ಪ್ರಪಂಚದ ಎಲ್ಲಾ ರೀತಿಯ ಸೌಕರ್ಯಗಳನ್ನು ಕೂಡ ಅನುಭವಿಸಿ ನೋಡುವ ಕಾರಣಕ್ಕಾಗಿ ಪ್ರತಿಯೊಬ್ಬರೂ ತಾವು ಇರುವ ಮಟ್ಟಕ್ಕಿಂತ ಹೆಚ್ಚಿನ ಗುಣಮಟ್ಟದ ಜೀವನ ನಡೆಸಲು ಹಣ ಮಾಡಬೇಕು ಎನ್ನುವ ಗುರಿಯನ್ನು ಹೊಂದಿದ್ದಾರೆ.

ಈ ರೀತಿ ಅಂದುಕೊಳ್ಳುವುದು ಕೂಡ ತಪ್ಪಲ್ಲ ಅಂದುಕೊಂಡ ಮೇಲೆ ಅದಕ್ಕೆ ತಕ್ಕ ಹಾಗೆ ಕ’ಷ್ಟಪಟ್ಟು ಅಥವಾ ಬುದ್ಧಿವಂತಿಕೆಯಿಂದ ದುಡಿಯಬೇಕು. ಈ ರೀತಿ ಹಗಲು ರಾತ್ರಿ ಕ’ಷ್ಟಪಡುತ್ತಿದ್ದರು ಒಮ್ಮೊಮ್ಮೆ ಹಣ ಉಳಿಯುವುದೇ ಇಲ್ಲ. ಅದಕ್ಕೆ ನಮ್ಮದೇ ಆದ ಕೆಲವು ತಪ್ಪುಗಳು ಇವೆ. ಈ ರೀತಿ ನೀವು ಮಾಡುತ್ತಿದ್ದರೆ ಅದನ್ನು ಬಿಟ್ಟುಬಿಡಿ ನಂತರ ಆಗುವ ಬದಲಾವಣೆಯನ್ನು ನೀವೇ ನೋಡಿ.

ಹಣ ಎನ್ನುವುದು ತಾಯಿ ಮಹಾಲಕ್ಷ್ಮಿಯ ಸ್ವರೂಪ ಹಣ ಬರುವಾಗ ಎಲ್ಲರೂ ಕೂಡ ಬಹಳ ಸಂತೋಷದಿಂದ ಸ್ವೀಕರಿಸುತ್ತೇವೆ. ಆ ಖುಷಿಗೆ ಪಾರವೇ ಇರುವುದಿಲ್ಲ ನಮಗೆ ಏನಾದರೂ ಅನಿರೀಕ್ಷಿತವಾಗಿ ಹಣ ಸಿಕ್ಕಿಬಿಟ್ಟರಂತೂ ಆ ಖುಷಿಗೆ ಹಸಿವು ಆಗುವುದಿಲ್ಲ ನಿದ್ದೆಯೂ ಬರುವುದಿಲ್ಲ. ಒಂದೆರಡು ದಿನ ಹಗಲು ರಾತ್ರಿ ಆ ಖುಷಿಯಲ್ಲಿ ತೇಲುತ್ತಿರುತ್ತೇವೆ.

ಆದರೆ ಹಣ ಖರ್ಚು ಮಾಡಬೇಕಾದ ಸಂದರ್ಭ ಬಂದಾಗ ನಮ್ಮಲ್ಲಿ ಆ ಮನಸ್ಸು ಇರುವುದಿಲ್ಲ. ಬಾಡಿಗೆ ಕಟ್ಟುವಾಗ ತೆಗೆದುಕೊಂಡ ಸಾಲಕ್ಕೆ EMI ಕಟ್ಟುವಾಗ ತರಕಾರಿ ಹಣ್ಣುಗಳನ್ನು ಕೊಂಡುಕೊಳ್ಳುವಾಗ ಅಥವಾ ನಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವಾಗಲು ಕೂಡ ಬಹಳ ನೋ’ವಿನಿಂದ, ಕೋ’ಪದಿಂದ, ಬೇ’ಸ’ರದಿಂದ ಹಣವನ್ನು ಖರ್ಚು ಮಾಡುತ್ತೇವೆ.

ಇದು ನ್ಯಾಯ ಅಲ್ಲ ಹಣವನ್ನು ನಾವು ಯಾವ ರೀತಿ ಸ್ವೀಕರಿಸುವಾಗ ಗೌರವಿಸಿ ಪ್ರೀತಿಸುತ್ತೇವೆ ಈಗ ಖರ್ಚು ಮಾಡುವಾಗ ಸಹಾ ಮನಸ್ಪೂರ್ತಿಯಾಗಿ ಅಷ್ಟೇ ಸಂತೋಷದಿಂದ ಅದನ್ನು ಖರ್ಚು ಮಾಡಬೇಕು ಈ ರೀತಿ ತಪ್ಪು ಮಾಡುವುದರಿಂದ ಹಣ ನಿಮ್ಮ ಬಳಿ ಮತ್ತೆ ಬರುವುದಿಲ್ಲ.

ಇನ್ನು ಕೆಲವರಿಗೆ ತಮ್ಮ ಮೇಲೆ ಹಾಗೂ ತಮ್ಮ ಕೆಲಸ ಕಾರ್ಯಗಳ ಮೇಲೆ, ಸಾಮರ್ಥ್ಯದ ಹಾಗೂ ಅದೃಷ್ಟದ ಬಗ್ಗೆ ಬಹಳ ಅನುಮಾನ ಇರುತ್ತದೆ. ನಾನು ಇಷ್ಟು ದೊಡ್ಡ ಪಡೆದೆನಾ? ನಾನು ಇಷ್ಟು ದುಡಿಯಲು ಆಯಿತಾ? ಇಷ್ಟು ಹಣ ನನಗೆ ಬರಲು ಸಾಧ್ಯವಿದೆಯೇ ಎನ್ನುವ ಅನುಮಾನದಿಂದ ನೋಡುತ್ತಾರೆ.

ಇದು ಕೂಡ ತಪ್ಪು ನಿಮಗೆ ಹಣ ಬಂದಾಗ ನನಗೆ ಹೇಗೆ ಇಷ್ಟು ಬಂತು ನಾನು ಅಂದುಕೊಂಡೆ ಇರಲಿಲ್ಲ ಎನ್ನುವ ರೀತಿ ನೆಗೆಟಿವ್ ಆಗಿ ಭಾವಿಸಿದಾಗ ಬಂದ ಹಣ ನಿಮ್ಮ ಬಳಿ ಇರುವುದಿಲ್ಲ, ಯಾವುದಾದರೂ ಕಾರಣದಿಂದ ಖರ್ಚಾಗಿ ಹೋಗುತ್ತದೆ ಇಂತಹ ತಪ್ಪುಗಳನ್ನು ಕೂಡ ಮಾಡಬೇಡಿ.

ಅದರ ಬದಲು ಹಣ ಬಂದಾಗ ಅದನ್ನು ಗೌರವಿಸಿ ಬಹಳ ಸಂತೋಷಪಡಿ ಯಾವುದೇ ಮೂಲದಿಂದ ಹಣ ಬಂದರೂ ಕೂಡ ಅದಕ್ಕೆ ಗೌರವ ತೋರಿ ಎಲ್ಲೆಂದರಲ್ಲಿ ಅದನ್ನು ಇಡಬೇಡಿ. ಬಹಳ ಶ್ರದ್ದೆ ಭಕ್ತಿಯಿಂದ ಅದನ್ನ ಜೋಪಾನವಾಗಿ ಇಡಿ, ಅದನ್ನು ಮುಟ್ಟಿ, ಬೇರೆ ಯಾವುದೇ ಪೇಪರ್ ಗಿಂತ ಹಣದ ಪೇಪರ್ ಗೆ ಹೆಚ್ಚು ಬೆಲೆ ಇದೆ ಹಾಗಾಗಿ ಅದನ್ನು ಸ್ಪರ್ಶ ಮಾಡಿ.

ಅದರ ವಾಸನೆ ಫೀಲ್ ಮಾಡಿ ಅದರ ಬಗ್ಗೆ ಯೋಚನೆ ಮಾಡಿ ಯಾವಾಗಲೂ ಹಣದ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿ ಮತ್ತು ಹಣದ ಆಕರ್ಷಣೆ ಆಗಬೇಕು ಎಂದರೆ ಯಾವಾಗಲೂ ಹಣ ಹೇಗೆ ಹೆಚ್ಚಿಗೆ ಮಾಡುವುದು ಅಥವಾ ಹಣವನ್ನು ಆಕರ್ಷಣೆ ಮಾಡುವ ಕುರಿತು ಯಾರಾದರೂ ಮಾತನಾಡುತ್ತಿದ್ದಾರೆ ಆಸಕ್ತಿಯಿಂದ ಕೇಳಿ. ಈ ರೀತಿಯಾಗಿ ನಡೆದುಕೊಳ್ಳುವುದರಿಂದ ನಿಮ್ಮ ಕಡೆ ಹಣ ಹರಿಯುತ್ತಲೇ ಇರುತ್ತದೆ.

2024ರಲ್ಲಿ ಈ 4 ರಾಶಿಯವರು ಅತ್ಯಂತ ಶ್ರೀಮಂತರಾಗುತ್ತಾರೆ, ಬೇಡ ಎಂದರೂ ಇವರ ಪಾಲಿಗೆ ಅದೃಷ್ಟ ಒಲಿದು ಬರುತ್ತದೆ ಯಾವ ರಾಶಿಗಳು ಗೊತ್ತಾ.?.

 

ಪ್ರತಿ ಬಾರಿಗೆ ಹೊಸ ವರ್ಷ ಆರಂಭವಾಗುವ ಸಮಯದಲ್ಲಿ ನಾವು ಸಾಕಷ್ಟು ಕನಸುಗಳನ್ನು ಕಟ್ಟಿಕೊಳ್ಳುತ್ತೇವೆ, ರೆಸಲ್ಯೂಷನ್ ಗಳನ್ನು ಕೂಡ ಹಾಕಿಕೊಳ್ಳುತ್ತೇವೆ. ಆದರೆ ಎಷ್ಟು ಜನ ಅದನ್ನು ಪೂರೈಸುತ್ತೇವೆ ಎನ್ನುವುದೇ ಯಕ್ಷಪ್ರಶ್ನೆ. ಆದರೂ ಈ ಪ್ಲಾನಿಂಗ್ ತಪ್ಪುವುದಿಲ್ಲ ಕಳೆದ ಒಂದು ವರ್ಷದಲ್ಲಿ ಇದೇ ರೀತಿ ನಾವು ಹಾಕಿಕೊಂಡ ಯೋಜನೆಗಳಲ್ಲಿ ಎಷ್ಟು ಪೂರೈಸಿದ್ದೇವೆ ಎನ್ನುವ ಲೆಕ್ಕಾಚಾರ ಹಾಕುತ್ತೇವೆ.

ಮತ್ತು ಮುಂದಿನ ವರ್ಷದಲ್ಲಿ ಯಾವುದನ್ನು ಮುಂದುವರಿಸಬೇಕು ಹಾಗೂ ಹೊಸದಾಗಿ ಏನೇನು ಆರಂಭಿಸಬೇಕು ಎನ್ನುವ ಪಟ್ಟಿಯನ್ನು ತಯಾರಿಸುತ್ತೇವೆ. ಹಾಗೆಯೇ ಮುಂದಿನ ವರ್ಷವಾದರೂ ನಮ್ಮ ಅದೃಷ್ಟ ಚೆನ್ನಾಗಿರಲಿ ಕಳೆದ ವರ್ಷದಲ್ಲಿ ನಮಗೆ ಯಾವುದು ಕೈ ಕೂಡಲೇ ಇಲ್ಲ ಎಂದು ಹೇಳುವುದನ್ನು ಕೂಡ ನಾವು ಕೇಳಿರಬಹುದು.

ಅದೇ ರೀತಿಯಾಗಿ ಹೊಸ ವರ್ಷದಲ್ಲಿ ರಾಶಿ ಚಕ್ರ ನಕ್ಷತ್ರಗಳ ಅನುಸಾರವಾಗಿ ಕೂಡ ಕೆಲವರ ಅದೃಷ್ಟ ಬದಲಾಗುತ್ತದೆ. ಇದರ ಕುರಿತ ಮಾಹಿತಿಯನ್ನು ನಾವು ಇಂದು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ 2024ರ ಹೊಸ ವರ್ಷ ಕೂಡ ಎಲ್ಲಾ ರಾಶಿಯವರಿಗೆ ಶುಭ ಫಲವನ್ನೇ ನೀಡುತ್ತದೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತಿದೆ. ಆದರೆ ಕೆಲವರಿಗೆ ನಿರೀಕ್ಷೆ ಮಾಡಿರದಂತಹ ವಿಪರೀತವಾದ ರಾಜಯೋಗ ಬರಲಿದೆ. ಯಾವ ರಾಶಿಯವರು ಈ ರೀತಿಯ ಅದೃಷ್ಟವನ್ನು 2024ರಲ್ಲಿ ಪಡೆಯಲಿದ್ದಾರೆ ಎನ್ನುವುದರ ವಿವರ ಹೀಗಿದೆ ನೋಡಿ.

ಮೇಷ ರಾಶಿ:- ಮೇಷ ರಾಶಿಯವರು ಇದುವರೆಗೆ ಸಾಕಷ್ಟು ಕ’ಷ್ಟ ಪಟ್ಟಿದ್ದಾರೆ ಮತ್ತು ಅವರೀಗ ಸಾಧನೆಗೆ ಹತ್ತಿರವಾಗಿದ್ದಾರೆ, ಈಗ ಅದನ್ನು ಪಡೆದುಕೊಳ್ಳುವ ಸಮಯ ಎಂದು ಹೇಳಬಹುದು. ಅವರ ಹಿಂದಿನ ವರ್ಷಗಳ ಪರಿಶ್ರಮಕ್ಕೆ 2024ರಲ್ಲಿ ಉತ್ತಮ ಪ್ರತಿಫಲ ದೊರೆಯಲಿದೆ. ಅದರಲ್ಲೂ ನಾಯಕತ್ವದ ಗುಣ ಹುಟ್ಟಿನಿಂದಲೇ ಹೊಂದಿರುವ ಇವರು ಇದಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಕ್ಷೇತ್ರದಲ್ಲಿ ತಮ್ಮ ನಿರೀಕ್ಷೆಯ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಮೇಷ ರಾಶಿಯವರಿಗೆ 2024 ಬಹಳ ಅದೃಷ್ಟ ತರುವ ರಾಶಿಯಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೃಷಭ ರಾಶಿ:- ವೃಷಭ ರಾಶಿಯವರಿಗೆ ಕೂಡ 2024 ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಕಾಲ. ಅದರಲ್ಲೂ ರಿಯಲ್ ಎಸ್ಟೇಟ್ ಹಾಗೂ ಬಿಸಿನೆಸ್ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ದುಪ್ಪಟ್ಟು ಲಾಭವನ್ನು ಗಳಿಸುವಂತಹ ಸಮಯ ಆಗಿದೆ. ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುವಂತಹ ಮತ್ತು ಆ ಪ್ರಯೋಗಗಳಲ್ಲಿ ಯಶಸ್ಸನ್ನು ಕಾಣುವಂತಹ ಸುಸಮಯ 2024 ರ ವರ್ಷ ಆಗಿದೆ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಬಹಳ ಹೆಮ್ಮೆಪಡುವಂತಹ ಕೆಲಸ ಕಾರ್ಯಗಳನ್ನು 2024ರಲ್ಲಿ ಕೈಗೊಳ್ಳಲಿದ್ದಾರೆ.

ಕನ್ಯಾ ರಾಶಿ:- ಕನ್ಯಾ ರಾಶಿಯವರ ವೈಯುಕ್ತಿಕ ಜೀವನ 2024ರಲ್ಲಿ ಉತ್ತಮಗೊಳ್ಳುತ್ತದೆ. ಹೂಡಿಕೆ ಹಾಗೂ ಉಳಿತಾಯ ಕ್ಷೇತ್ರದಲ್ಲಿ ಅಧಿಕ ಲಾಭ ಗಳಿಸುತ್ತಾರೆ ಮ. ಉದ್ಯೋಗ ಕ್ಷೇತ್ರದಲ್ಲೂ ಕೂಡ ತಾವಂದು ಕೊಂಡಂತಹ ಸ್ಥಾನ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. 2024 ರ ಅದೃಷ್ಟ ಚೆನ್ನಾಗಿರುವುದರಿಂದ ಬಡ್ತಿ ಕೂಡ ಸಿಗಬಹುದು, ಬಹಳ ಅದೃಷ್ಟಶಾಲಿಯಾದ ವರ್ಷ ಆಗಿರಲಿದೆ.

ಮಕರ ರಾಶಿ:-
ಮಕರ ರಾಶಿಯವರು ಬಹಳ ಮಹತ್ವಕಾಂಕ್ಷೆ ಹೊಂದಿರುವ ರಾಶಿಯವರಾಗಿದ್ದಾರೆ. ಇವರ ಶಿಸ್ತು ಬದ್ಧ ಜೀವನವೇ ಇವರಿಗೆ ಯಶಸ್ಸು ತಂದು ಕೊಡಲಿದೆ. 2024ರಲ್ಲಿ ಇವರು ಇದುವರೆಗೂ ಕೂಡ ಪಟ್ಟ ಕ’ಷ್ಟದಿಂದ ಪರಿಹಾರ ಹೊಂದಲಿದ್ದಾರೆ ಮತ್ತು ತಾವಂದು ಕೊಂಡಂತಹ ರೀತಿಯಲ್ಲಿ ಎಲ್ಲಾ ಕಾರ್ಯದಲ್ಲೂ ಯಶಸ್ಸನ್ನು ಕಾಣಲಿದ್ದಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಬೆನ್ನು ನೋವು, ಸೊಂಟ ನೋವು ಇರುವವರು ಈ ಮನೆ ಮದ್ದನ್ನು ಒಂದು ಸರಿ ಟ್ರೈ ಮಾಡಿ ನೋಡಿ.!

 

ಈಗಿನ ಕಾಲದಲ್ಲಿ ಯುವ ಜನತೆಯೂ ಕೂಡ ವಿಪರೀತವಾದ ಬೆನ್ನು ನೋವು ಹಾಗೂ ಸೊಂಟ ನೋವಿನಿಂದ ಬಳಲುತ್ತಾರೆ. ಬೆನ್ನು ನೋವು ಬರಲು ಸಾಕಷ್ಟು ಕಾರಣಗಳಿವೆ. ಯಾವಾಗಲೂ ನಿಂತುಕೊಂಡು ಕೆಲಸ ಮಾಡುವವರು ಅಥವಾ ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗೆ ಬೆನ್ನು ನೋವು ಸಹಜವಾಗಿ ಬರುತ್ತದೆ.

ಇದನ್ನು ಬಿಟ್ಟು ಯಾವಾಗಲಾದರೂ ಬಿದ್ದು ಬೆನ್ನಿನ ಭಾಗಕ್ಕೆ ಹಾನಿ ಆಗಿದ್ದರೆ ಆಗಲೂ ಕೂಡ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ನಮಗಾಗಿರುವ ಸಮಸ್ಯೆ ಮೇಲ್ಬಾಗಕ್ಕೆ ಮಾತ್ರ ಆಗಿದ್ದರೆ ಬಹಳ ಬೇಗ ಗುಣ ಆಗುತ್ತದೆ. ಆದರೆ ಡಿಸ್ಕ್ ಗಳಿಗೆ ಡ್ಯಾಮೇಜ್ ಆಗಿದ್ದರೆ ಆ ಭಾಗದಲ್ಲಿರುವ ನರಸಮೂಹಕ್ಕೂ ಕೂಡ ತೊಂದರೆ ಆಗಿರುತ್ತದೆ ಆ ಮೂಲಕ ಹರಿದು ಹೋಗುವ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ನಿಧಾನಕ್ಕೆ ಕೆಲವು ಅಂಗಗಳು ಸ್ವಾಧೀನ ಕಳೆದುಕೊಳ್ಳಬಹುದು.

ಹಾಗಾಗಿ ವಿಪರೀತವಾದ ಬೆನ್ನು ನೋವು ಇದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಬೆನ್ನು ನೋವು ಸ್ವಲ್ಪ ಇದ್ದಾಗ ಅದು ಮೊದಲ ಹಂತದಲ್ಲಿ ಅಥವಾ ಎರಡನೇ ಹಂತದಲ್ಲಿ ಇದ್ದಾಗ ಕೆಲ ಮನೆ ಮದ್ದುಗಳನ್ನು ಮಾಡುವುದರಿಂದ ಗುಣವಾಗುತ್ತದೆ. ಆ ಮನೆಮದ್ದುಗಳಿಗೆ ಗುಣವಾಗದೆ ಇದ್ದರೆ ತಕ್ಷಣ ನೀವು ಸೂಕ್ತ ವೈದ್ಯರನ್ನು ಭೇಟಿ ಆಗಬೇಕು ಇಲ್ಲವಾದಲ್ಲಿ ನಂತರದ ದಿನಗಳಲ್ಲಿ ಆತ ಹಾಸಿಗೆ ಹಿಡಿಯುವ ಪರಿಸ್ಥಿತಿ ಬಂದರೂ ಬರಬಹುದು.

ಮಲಬದ್ಧತೆ, ಅಜೀರ್ಣ, ಮಾನಸಿಕ ಒತ್ತಡದಿಂದ ಕೂಡ ಬೆನ್ನು ನೋವು ಹಾಗೂ ಸೊಂಟ ನೋವು ಬರುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಆಯುರ್ವೇದದ ಪಂಚಕರ್ಮ ಚಿಕಿತ್ಸೆಯೂ ಇದಕ್ಕೆ ಸೂಕ್ತ ಪರಿಹಾರ ಇದಲ್ಲದೆ ಆಯುರ್ವೇದದಲ್ಲಿ ಬೆನ್ನು ನೋವಿಗೆಂದೇ ವಿಶೇಷ ಚಿಕಿತ್ಸೆಗಳು ಇವೆ ಆ ಚಿಕಿತ್ಸೆಗಳನ್ನು ನೀಡುವ ಮೂಲಕ ಡಿಸ್ ಲೋಕೇಟ್ ಆಗಿರುವ ಡಿಸ್ಕ್ ಗಳನ್ನು ಮತ್ತೆ ಕ್ರಿಯಾಶೀಲಗೊಳಿಸಿ ದೇಹಕ್ಕೆ ಹೊಸ ಚೈತನ್ಯ ನೀಡಲಾಗುತ್ತದೆ.

ಕಾಟಿಭಸ್ತಿ, ಪತ್ರಪಿಂಡಸ್ವೇದ, ಯೋಗ ಬಸ್ತಿ, ಕಾಲ ಬಸ್ತಿ, ಕರ್ಮ ಬಸ್ತಿ ಚಿಕಿತ್ಸೆಗಳ ಮೂಲಕ, ತೂಕ ಹೆಚ್ಚಾಗಿ ಈ ಸಮಸ್ಯೆಗಳಾಗಿದ್ದರೆ ವಮನ ರೇಚನ ಚಿಕಿತ್ಸೆ ನೀಡಿ ಮತ್ತು ಈ ಮೇಲೆ ತಿಳಿಸಿದಂತೆ ಪಂಚಕರ್ಮ ಚಿಕಿತ್ಸೆಯಿಂದ ಗುಣಪಡಿಸಲಾಗುತ್ತದೆ. ಇದಕ್ಕೂ ಮುನ್ನ ಕೆಲ ಮನೆ ಮದ್ದುಗಳನ್ನು ಪ್ರಯೋಗಿಸಿ ನೋಡಿ.

* ಸಾಧಾರಣವಾದ ಬೆನ್ನು ನೋವು ಬಂದಿದ್ದರೆ ನೀಲಗಿರಿ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಅದಕ್ಕೆ ಸ್ವಲ್ಪ ಪಚ್ಚಕರ್ಪೂರ ಸೇರಿಸಿ ಅದನ್ನು ಸ್ವಲ್ಪ ಬಿಸಿ ಮಾಡಿ ಬೆನ್ನು ಹಾಗೂ ಸೊಂಟದ ಭಾಗಕ್ಕೆ ಚೆನ್ನಾಗಿ ಮಸಾಜ್ ಮಾಡಬೇಕು ಮರುದಿನ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು ಮೊದಲನೇ ಹಂತದ ಬೆನ್ನು ನೋವಾಗಿದ್ದರೆ ಈ ಮನೆಮದ್ದಿಗೆ ಗುಣವಾಗುತ್ತದೆ.

* ನುಗ್ಗೆ ಸೊಪ್ಪು, ಬೇವಿನ ಸೊಪ್ಪು, ಹುಣಸೆ ಎಲೆ, ಹರಳೆಲೆ ಹಾಗೂ ಎಕ್ಕದ ಹೂವು ಇವುಗಳನ್ನು ಪೇಸ್ಟ್ ಮಾಡಿ 750 ಗ್ರಾಂ ನಷ್ಟು ಈ ಪೇಸ್ಟ್ ರೆಡಿಯಾದರೆ ಇದಕ್ಕೆ 250 ಗ್ರಾಂ ನಷ್ಟು ಬೆಳ್ಳುಳ್ಳಿ ಪೇಸ್ಟ್ ಬೇಕಾಗುತ್ತದೆ. ಮೊದಲಿಗೆ ಹರಳೆಣ್ಣೆಗೆ ಬೆಳ್ಳುಳ್ಳಿ ಪೇಸ್ಟ್ ಹಾಕಿ ನೀರಿನಾಂಶ ಆವಿಯಾಗಲು ಬಿಡಿ ನಂತರ ಸೊಪ್ಪಿನ ಪೇಸ್ಟ್ ಕೂಡ ಹಾಕಿ ಸ್ವಲ್ಪ ನೀರಿನಾಂಶ ಆವಿಯಾದ ಮೇಲೆ ಅದನ್ನು ಬೆನ್ನಿನ ಮೇಲೆ ಪಟ್ಟು ಹಾಕಬೇಕು.

ತೆಳು ಬಟ್ಟೆಯಲ್ಲಿ ಕವರ್ ಮಾಡಿ ರಾತ್ರಿ ಪೂರ್ತಿ ಹಾಗೆ ಇರಬೇಕು ಮರುದಿನ ಬೆಳಿಗ್ಗೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಎಷ್ಟೇ ಹಳೆಯ ನೋವಾಗಿದ್ದರು ಗುಣವಾಗುತ್ತದೆ. ಬೆನ್ನು ನೋವು ನಿವಾರಣೆಗೆ ಯೋಗಭ್ಯಾಸ ಮಾಡುವುದರಿಂದ ಕೂಡ ಕೆಲವರಿಗೆ ಗುಣವಾಗುತ್ತದೆ ಇದರೊಂದಿಗೆ ಕೆಲವು ಎಚ್ಚರಿಕೆಗಳನ್ನು ವಹಿಸಬೇಕು.

ಬೆನ್ನು ನೋವಿನ ಸಮಸ್ಯೆ ಇದ್ದರೆ ಹಾಸಿಗೆ ಮೇಲೆ ಮಲಗಬಾರದು ಚಾಪೆ ಮೇಲೆ ಮಲಗಬೇಕು ಮತ್ತು ಸಡನ್ ಆಗಿ ಏಳಬಾರದು, ನಿಧಾನಕ್ಕೆ ಎಡಗಡೆ ಅಥವಾ ಬಲಗಡೆ ಜರಗಿ ಏಳಬೇಕು ಈ ರೀತಿಯ ಬೆನ್ನು ನೋವು ಕಡಿಮೆ ಮಾಡಿಕೊಳ್ಳಬಹುದು. ಇವುಗಳಿಗೆ ಗುಣವಾಗದೆ ಇದ್ದರೆ ತಪ್ಪದೇ ಸೂಕ್ತ ವೈದ್ಯರನ್ನು ಭೇಟಿ ಮಾಡಿ.

https://youtu.be/DyyAr3BA2IQ?si=AVo-gCcpHO7_5MCo

ಈ ದೇವಸ್ಥಾನಕ್ಕೆ ಬಂದು ಹೋದವರು ಭಿಕ್ಷುಕರಾಗಿದ್ದರು ಲಕ್ಷಾಧಿಪತಿಗಳಾಗುವುದು ಗ್ಯಾರಂಟಿ, ಪವಾಡ ಸೃಷ್ಟಿಸುವ ಕರ್ನಾಟಕದ ದೇವಸ್ಥಾನ ಇದು.!

 

ನಂಬಿಕೆ ಎನ್ನುವುದು ಬೆಲೆ ಕಟ್ಟಲಾಗದ್ದು, ಒಬ್ಬ ರೈತ ತಾನು ಬೀಜ ಬಿತ್ತುವುದು ಕೂಡ ಭೂಮಿ ತಾಯಿ ಬೆಳೆ ಬೆಳೆಸುತ್ತಾಳೆ ಎನ್ನುವ ನಂಬಿಕೆಯಿಂದ ಹಾಗೆ ಒಬ್ಬ ಭಕ್ತ ಭಗವಂತನಿಗೆ ಕೈಮುಗಿಯುವುದು ಮತ್ತು ಹರಕೆ ಕಟ್ಟಿಕೊಳ್ಳುವುದು ಕೂಡ ದೇವರು ತನ್ನ ಮನವಿಯನ್ನು ಕೇಳಿಸಿಕೊಂಡು ಕ’ಷ್ಟ ಪರಿಹರಿಸಿ ದಾರಿ ತೋರಿಸ್ತಾನೆ ಎನ್ನುವ ನಂಬಿಕೆಯಿಂದ..

ಈ ರೀತಿ ನಂಬಿಕೆಗಳನ್ನು ಇಟ್ಟುಕೊಂಡವರು ಶುದ್ಧ ಮನಸ್ಸಿನಿಂದ ಸಂಪೂರ್ಣವಾಗಿ ಭಗವಂತನ ಮೇಲೆ ಭಾರ ಹಾಕಿದವರು ಖಂಡಿತವಾಗಿಯೂ ಪರಿಹಾರ ಪಡೆದೇ ತೀರುತ್ತಾರೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆಯಂತೆ ಕರ್ನಾಟಕದಲ್ಲಿ ಅನೇಕ ದೇವಸ್ಥಾನಗಳಲ್ಲಿ ಪವಾಡ ಆಗುತ್ತಿರುವುದನ್ನು ನೋಡಬಹುದು ಅದೇ ರೀತಿಯ ಸಾಲಿಗೆ ಮತ್ತೊಂದು ದೇವಸ್ಥಾನ ಕೂಡ ಸೇರುತ್ತಿದೆ.

ಇದು ತುಮಕೂರು ಜಿಲ್ಲೆ ಬಿದನಗೆರೆಯ ಪಂಚಮುಖಿ ಆಂಜನೇಯ ದೇವಸ್ಥಾನ ಹಾಗೂ ಸತ್ಯ ಶನೇಶ್ವರ ಸ್ವಾಮಿಯ ದೇವಸ್ಥಾನ. ಇಲ್ಲಿ ಸಾಕ್ಷಾತ್ ಭಗವಂತನ ಸಾಕ್ಷಾತ್ಕಾರವಾಗಿದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳು ನಂಬಿಕೆ, 161 ಅಡಿ ಎತ್ತರದಲ್ಲಿ ಇಲ್ಲಿ ಆಂಜನೇಯನ ವಿಗ್ರಹವನ್ನು ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಅತ್ಯಂತ ಎತ್ತರದ ಪಂಚಮುಖಿ ಆಂಜನೇಯನ ಸನ್ನಿಧಿಯಾಗಿರುವ ಇಲ್ಲಿ ರಾತ್ರಿ ಹೊತ್ತು ಭಕ್ತಾದಿಗಳು ನೆಲೆಸಲು ಅನುಕೂಲ ಮಾಡಿಕೊಡಲಾಗಿದೆ.

ಅವರಿಗೆ ಮಲಗೋ ವ್ಯವಸ್ಥೆಯಿಂದ ಬಿಸಿನೀರಿನ ವ್ಯವಸ್ಥೆ ಅನ್ನದಾನದ ವ್ಯವಸ್ಥೆ ಎಲ್ಲವೂ ಕೂಡ ಸಿಗುತ್ತದೆ. ಶುಕ್ರವಾರದ ದಿನ ಈ ದೇವಸ್ಥಾನದಲ್ಲಿ ತಂಗಿದ್ದರೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ಹೋಗಿದ್ದವರು ಕೂಡ ಕೋಟ್ಯಾಧಿಪತಿಗಳಾಗಿ ಹಣಕಾಸಿನ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ. ಭಗವಂತನ ನೆರಳು ನಮ್ಮ ಮೇಲೆ ಬೀಳುವುದರಿಂದ ಪಾಪ ಪರಿಹಾರ ಆಗುತ್ತದೆ ಎನ್ನುವ ಅಚಲವಾದ ನಂಬಿಕೆ ಕೂಡ ಇದೆ.

ಇದೇ ಕಾರಣಕ್ಕೆ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಬರುತ್ತಿರುವ ಭಕ್ತಾಧಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಸಾಮೂಹಿಕ ವಿವಾಹಗಳು ಸಾಮೂಹಿಕ ಯಜ್ಞ ಕಾರ್ಯಕ್ರಮ ಮತ್ತು ಪ್ರತಿವಾರವೂ ಕೂಡ ನಾಮಕರಣ ಇತ್ಯಾದಿಗಳು ಈ ದೇವಸ್ಥಾನದಲ್ಲಿ ಜರುಗುತ್ತವೆ. ಈ ದೇವಸ್ಥಾನದಲ್ಲಿ ಇರುವ ಜ್ಯೋತಿಷ್ಯರೊಬ್ಬರು ಅಂಜನ ಹಾಕಿ ವೀಳ್ಯದೆಲೆ ನೋಡಿ ಶಾಸ್ತ್ರ ಹೇಳುತ್ತಾರೆ.

ವ್ಯಕ್ತಿಯ ಮುಖ ನೋಡುತ್ತಿದ್ದಂತೆ ಅಂಜನದಲ್ಲಿ ತಿಳಿದುಕೊಂಡು ಯಾವ ಸಮಸ್ಯೆ ಆಗಿದೆ ಎನ್ನುವುದನ್ನು ನಿಖರವಾಗಿ ಹೇಳುತ್ತಾರೆ. ಹಾಗಾಗಿ ಇವರನ್ನು ಕಂಡು ಕ’ಷ್ಟ’ಕ್ಕೆ ಪರಿಹಾರ ಕೇಳಲು ಕೂಡ ಭಕ್ತಾದಿಗಳು ಬರುತ್ತಾರೆ ಇದನ್ನು ಹೊರತುಪಡಿಸಿ ಇಲ್ಲಿ ಹರಕೆ ಕಟ್ಟಿಕೊಂಡವರು ದರ್ಶನ ಮಾಡಿ ಹೋದವರು ಹೋಮ ಮಾಡಿಸಿದವರು ಕೂಡ ಜೀವನದಲ್ಲಿ ಆಗಿದ್ದ ಸಮಸ್ಯೆಗೆ ಪರಿಹಾರ ಕಂಡಿದ್ದಾರೆ.

ಉದ್ಯೋಗ ಸಿಗದವರಿಗೆ ಉದ್ಯೋಗ, ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳ ಭಾಗ್ಯ, ಮದುವೆ ಆಗಿಲ್ಲದವರೆಗೆ ಮದುವೆ, ಕೋರ್ಟು ಕೇಸ್ ವಿವಾದ ಇದ್ದವರಿಗೆ ಜಯ, ವ್ಯವಹಾರದಲ್ಲಿ ಹಣ ಕಳೆದುಕೊಂಡವರಿಗೆ ಹಣ ವಾಪಸ್ ಬರುವ ಮಾರ್ಗ ಇತ್ಯಾದಿ ಇತ್ಯಾದಿ ಎಲ್ಲಾ ರೀತಿಯ ಅನುಕೂಲತೆಗಳು ಕೂಡ ಈ ದೇವಸ್ಥಾನದಕ್ಕೆ ಬರುವುದರಿಂದ ನಡೆಯುತ್ತಿದೆ.

ತಮ್ಮ ಕೋರಿಕೆ ನೆನವೇರಿದ ಮೇಲೆ ಮತ್ತೊಮ್ಮೆ ಬಂದು ಹರಕೆ ತೀರಿಸಿ ಹೋಗುತ್ತಾರೆ. ಬಹಳ ಪ್ರಸಿದ್ಧಿಯಾದ ಕ್ಷೇತ್ರವಾಗಿ ಬದಲಾಗುತ್ತಿರುವ ಈ ಪಂಚಮುಖ ಆಂಜನೇಯನ ದರ್ಶನವನ್ನು ಪಡೆಯಲು ಮತ್ತು ಜೀವನದಲ್ಲಿರುವ ಮನುಷ್ಯ ಸಹಜವಾದ ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದಲು ನೀವು ಕೂಡ ತಪ್ಪದೇ ಒಮ್ಮೆ ನಿಮ್ಮ ಕುಟುಂಬದವರ ಜೊತೆ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಇಲ್ಲಿ ನಡೆಯುವ ಚಮತ್ಕಾರವನ್ನು ಕಣ್ಣಾರೆ ನೋಡಿ ಕಣ್ತುಂಬಿಕೊಳ್ಳಿ.

ದೇವಸ್ಥಾನದ ಸಹಾಯವಾಣಿ ಸಂಖ್ಯೆ:- 9739466466

ಮೂಲವ್ಯಾಧಿ ಸಮಸ್ಯೆ ಇರುವವರು ತಪ್ಪದೆ ಇದನ್ನ ನೋಡಿ.!

 

ಇತ್ತೀಚಿನ ದಿನಗಳಲ್ಲಿ ಪೈಲ್ಸ್ ಎಲ್ಲಡೆಯೂ ಕೇಳಿ ಬರುವ ಆರೋಗ್ಯ ಸಮಸ್ಯೆಯಾಗಿದೆ. ಇದು ರೆಕ್ಟಮ್ ಭಾಗಕ್ಕೆ ಸಂಬಂಧಿಸಿದ ಸಮಸ್ಯೆ ಆಗಿದ್ದು ಪೈಲ್ಸ್ ಆದಾಗ ಅವರು ನೆಮ್ಮದಿ ಯಾಕೆ ಕುಳಿತುಕೊಳ್ಳಲು ಆಗುವುದಿಲ್ಲ, ಸರಾಗವಾಗಿ ಮಲ ವಿಸರ್ಜನೆ ಮಾಡಲು ಆಗುವುದಿಲ್ಲ, ವಿಪರೀತವಾದ ನೋವು ಉರಿ ರಕ್ತಸ್ರಾವ ಆಗುತ್ತದೆ.

ಪೈಲ್ಸ್ ಯಾವ ರೀತಿ ಆಗುತ್ತದೆ ಎಂದು ನೋಡುವುದಾದರೆ ಕಾಲಿನ ನರಗಳು ಊದಿಕೊಂಡಾಗ ವೆರಿಕೋಸ್ ಎನ್ನುತ್ತೇವೆ ಅದೇ ರೀತಿ ರೆಕ್ಟಮ್ ಭಾಗದ ನರಗಳು ಊದಿಕೊಳ್ಳುವಿಕೆಯನ್ನು ಪೈಲ್ಸ್ ಎನ್ನಲಾಗುತ್ತದೆ. ಪೈಲ್ಸ್ ಜೊತೆಗೆ ಕೆಲವರಿಗೆ ಪಿಸ್ತೂಲ ಹಾಗೂ ಫಿಶರ್ ಎನ್ನುವ ಸಮಸ್ಯೆಗಳು ಕೂಡ ಬರುತ್ತವೆ.

ಕೆಲವರು ಇದಕ್ಕೆ ಆಪರೇಷನ್ ಮಾಡಿಸಿಕೊಳ್ಳುತ್ತಾರೆ ಆದರೆ ಆಪರೇಷನ್ ಆದರೂ ಬೆಳೆಯುತ್ತಾ ಇರುತ್ತದೆ. ಹಾಗಾಗಿ ಹೆಚ್ಚಿನವರು ಹೋಮಿಯೋಪತಿ ಮೊರೆ ಹೋಗುತ್ತಾರೆ. ಹೋಮಿಯೋಪತಿಯಲ್ಲೇ ಇದಕ್ಕಿರುವ ಚಿಕಿತ್ಸೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಮೊದಲಿಗೆ ಪೈಲ್ಸ್ ಬರಲು ಕಾರಣಗಳು ಏನು ಎಂದು ನೋಡುವುದಾದರೆ ಮಲಬದ್ಧತೆಯೇ ಇದಕ್ಕೆ ಮುಖ್ಯ ಕಾರಣ, ನಾವು ಸರಾಗವಾಗಿ ಪ್ರತಿನಿತ್ಯ ನಿತ್ಯ ಕರ್ಮಗಳನ್ನು ಮುಗಿಸಿದರೆ ಈ ಸಮಸ್ಯೆ ಇರುವುದಿಲ್ಲ. ಅತಿ ಹೆಚ್ಚು ಸಮಯ ಅಲ್ಲೇ ಕುಳಿತು ಒದ್ದಾಡಿದರೆ ಪೈಲ್ಸ್ ಬಂದಿದೆ ಎಂದುಕೊಳ್ಳಬಹುದು.

ಇದರ ಜೊತೆ ಒಬೆಸಿಟಿ ಬಂದಾಗ ದೇಹ ತೂಕ ಹೆಚ್ಚಾಗಿ ಪೈಲ್ಸ್ ಆಗುತ್ತದೆ, ಗರ್ಭಿಣಿ ಸ್ತ್ರೀಯರಿಗೆ ಸಹ ಹೊಟ್ಟೆ ಭಾಗದ ತೂಕದಿಂದ ಪೈಲ್ಸ್ ಬರುವ ಸಾಧ್ಯತೆ ಇದೆ, ಯಾವಾಗಲೂ ನಿಂತುಕೊಂಡೇ ಕೆಲಸ ಮಾಡುವವರು ಅಥವಾ ಒಂದೇ ಕಡೆ ಕುಳಿತು ಕೆಲಸ ಮಾಡುವವರು ಒತ್ತಡಗಳಾಗಿ ಮೂಲವ್ರಾಧಿಗೆ ಗುರಿ ಆಗುತ್ತಾರೆ ಮತ್ತು ಅತಿ ಹೆಚ್ಚು ವಾಹನಗಳನ್ನು ಓಡಿಸುವವರು ಆ ಭಾಗದಲ್ಲಾಗುವ ಒತ್ತಡದಿಂದ ಪೈಲ್ಸ್ ಗೆ ಗುರಿಯಾಗುತ್ತಾರೆ.

ಪೈಲ್ಸ್ ನಲ್ಲಿ ಎರಡು ವಿಧ ಇಂಟರ್ನಲ್ ಪೈಲ್ಸ್ ಹಾಗೂ ಎಕ್ಸ್ಟರ್ನಲ್ ಪೈಲ್ಸ್. ಇಂಟರ್ನಲ್ ಪೈಲ್ಸ್ ನಲ್ಲಿ ಕೂಡ ನಾಲ್ಕು ಗ್ರೇಡ್ ಗಳಿದೆ, ಮೊದಲನೇ ಗ್ರೇಟ್ ನಲ್ಲಿ ಅದು ಒಳಮುಖವಾಗಿ ಮಾತ್ರ ಇರುತ್ತದೆ ಆಗಾಗ ನೋವು ಕಾಣಿಸಿಕೊಳ್ಳುತ್ತದೆ, ಎರಡನೇ ಗ್ರೇಡ್ಶನಲ್ಲಿ ಇದು ಒಳಮುಖವಾಗಿದ್ದರು ಆಗಾಗ ಹೊರಗೆ ಬರುತ್ತದೆ ತನ್ನಿಂದ ತಾನೆ ಸರಿ ಹೋಗಿ ಒಳಗೆ ಹೋಗುತ್ತದೆ, 3 ನೇ ಗ್ರೇಡ್ ನಲ್ಲಿ ನಾವೇ ಹೊರಗಿನಿಂದ ಪ್ರೆಸರ್ ಹಾಕಿ ತಳ್ಳಬೇಕಾಗುತ್ತದೆ.

ನಾಲ್ಕನೇ ಭಾಗದಲ್ಲಿ ಅದು ಹೊರಬಂದ ಮೇಲೆ ಮತ್ತೆ ಒಳ ಹೋಗುವುದಿಲ್ಲ. ಆಗ ಚಿಕಿತ್ಸೆ ಮೊರೆ ಹೋಗಲೇಬೇಕು. ಈ ನಾಲ್ಕನೇ ಸ್ಟೇಜ್ ಆಗಿಬಿಟ್ಟರೆ ಬಹಳ ಕ’ಷ್ಟ ಪಡಬೇಕು. ಒಂದು ವಾರಕ್ಕಿಂತ ಹೆಚ್ಚು ಈ ಮೇಲೆ ತಿಳಿಸಿದ ಲಕ್ಷಣಗಳು ಕಾಣಿಸಿಕೊಂಡಾಗ ಸೂಕ್ತ ವೈದ್ಯರನ್ನು ಭೇಟಿಯಾಗಬೇಕು. ಅವರು ಆ ಭಾಗವನ್ನು ಪರೀಕ್ಷಿಸಿ ನಿಮಗೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ.

ಹೋಮಿಯೋಪತಿಯಲ್ಲಿ ರೋಗಿಯ ಪರಿಸ್ಥಿತಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಿರಂಜ್ ರೀತಿ ರಕ್ತ ಹೋಗುತ್ತಿದ್ದರೆ ಇಲೋಫೋಲಿಯಂ, ಕಪ್ಪು ಬಣ್ಣದಲ್ಲಿ ರಕ್ತ ಹೋಗುತ್ತಿದೆ ತೊಟ್ಟಿಕ್ಕುತ್ತಿದೆ ಎನ್ನುವುದಾದರೆ ಹೇಮಮಿಲಿಸ್ ಎನ್ನುವ ಮೆಡಿಸನ್ ಕೊಡಲಾಗುತ್ತದೆ, ಶೌಚಕ್ಕೆ ಹೋಗಿ ಬಂದ ಮೇಲೆ ಗಂಟೆಗಟ್ಟಲೆ ಉರಿಯುತಿದೆ ‌‌‌‌ಎಂದರೆ ಮ್ಯೂನಿಯಾ ಮೆಡಿಸನ್ ನೀಡಲಾಗುತ್ತದೆ.

ಆದರೆ ರೆಕ್ಟಮ್ ನಲ್ಲಿ ಇನ್ಫೆಕ್ಷನ್ ಆಗಿ ಗ್ಯಾಂಗ್ರಿನ್ ರೀತಿ ಆಗಿದೆ ಎಂದರೆ ಕ್ಯಾನ್ಸರ್ ಆಗಿರಬಹುದು, ಆಗ ಬಯಾಪ್ಸಿ ಚಿಕಿತ್ಸೆಗೆ ಒಳಗಾಗಲೇ ಬೇಕಾಗುತ್ತದೆ. ಪೈಲ್ಸ್ ಇರುವವರಿಗೆ ಮಲಬದ್ಧತೆ ಆಗಬಾರದು, ಮೈದಾ ಹಿಟ್ಟು ಹಾಗೂ ಅತಿಯಾದ ಮಸಾಲೆ ಪದಾರ್ಥ ಎಣ್ಣೆಯಿಂದ ಕರಿದ ಪದಾರ್ಥಗಳು ಇವುಗಳಿಂದ ದೂರ ಇದ್ದರೆ ಮಲಬದ್ಧತೆ ಆಗುವುದಿಲ್ಲ, ಪೈಲ್ಸ್ ಕೂಡ ಬರುವುದಿಲ್ಲ. ಅತಿ ಹೆಚ್ಚು ನೀರು ಕುಡಿಯುವುದು ಹಸಿ ಸೊಪ್ಪು, ನಾರಿನಾಂಶ ಇರುವ ಹಣ್ಣು ತರಕಾರಿಗಳನ್ನು ತಿನ್ನುವುದು ಪೈಲ್ಸ್ ನಿಂದ ಬಳಲುತ್ತಿರುವವರಿಗೆ ಔಷಧಿ.

BPL ಕಾರ್ಡ್ ಹೊಂದಿರುವವರಿಗೆ ಬಂಪರ್ ಸುದ್ದಿ.!

 

ಮಾನ್ಯ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳ ಮೂಲಕ ದೇಶದ ಇತರ ರಾಜ್ಯಗಳ ಗಮನವನ್ನು ಸೆಳೆದಿದ್ದಾರೆ. ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ಗ್ಯಾರಂಟಿಯೇತರವಾಗಿ ಹೊಸದೊಂದು ಯೋಜನೆ ನೀಡುವ ಮೂಲಕ ಮತ್ತೊಮ್ಮೆ ಕರ್ನಾಟಕ ದೇಶದಲ್ಲೇ ಪ್ರಥಮ ಎನ್ನುವ ದಾಖಲೆ ಸೃಷ್ಟಿಸಿದ್ದಾರೆ.

ಡಿಸೆಂಬರ್ 6ರ ಬುಧವಾರದಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು (CM Siddaramaih) ಮತ್ತು ಆರೋಗ್ಯ ಸಚಿವರು ಸೇರಿದಂತೆ ಇನ್ನಿತರ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಗೆ ಹೊಸ ರೂಪ ನೀಡಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಆರೋಗ್ಯ ಕರ್ನಾಟಕ ಎನ್ನುವ ಹೆಸರಿನಲ್ಲಿ ನೂತನ ಮಾದರಿಯ ಹೆಲ್ತ್ ಕಾರ್ಡ್ (Ayusman Bharath Arogya Karnatak healthcard) ಲೋಕಾರ್ಪಣೆಗೊಳಿಸಿದ್ದಾರೆ. ಇದರ ಸಂಬಂಧಿತ ಪ್ರಮುಖ ವರದಿ ನೋಡಿ…

ಸ್ವತಃ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ (Dinesh Gundurao) ಕೂಡ ಈ ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳಿಗೆ ಹೊಸ ರೂಪ ನೀಡಲಾಗಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಹೆಸರಲ್ಲಿ ಇನ್ಮುಂದೆ ಹೆಲ್ತ್ ಕಾರ್ಡ್‌ಗಳು ರಾಜ್ಯದ ಜನಸಾಮಾನ್ಯರಿಗೆ ತಲುಪಲಿವೆ.‌

ರಾಜ್ಯದ 5.09 ಕೋಟಿ ಜನರಿಗೆ ಆರು ತಿಂಗಳ ಒಳಗೆ ಹೆಲ್ತ್ ಕಾರ್ಡ್ ವಿತರಿಸುವ ಗುರಿಯನ್ನ ನಾವು ಹೊಂದಿದ್ದೇವೆ. ಮಾನ್ಯ ಮುಖ್ಯಮಂತ್ರಿಗಳು ನೂತನ ಕಾರ್ಡ್‌ಗಳನ್ನ ಇಂದು ಬಿಡುಗಡೆಗೊಳಿಸಿದ್ದಾರೆ. ರಾಜ್ಯದ BPL ಕಾರ್ಡುದಾರರು ರೂ.5 ಲಕ್ಷ ಹಾಗೂ APL ಕಾರ್ಡುದಾರರಿಗೆ ಗರಿಷ್ಠ ರೂ.1.50 ಲಕ್ಷ ಮೌಲ್ಯದ ಚಿಕಿತ್ಸಾ ವೆಚ್ಚವನ್ನ ಸರ್ಕಾರ ಭರಿಸಲಿದೆ.

ಯೋಜನೆಗೆ ಕೇಂದ್ರದಿಂದ 34%ರಷ್ಟು ಅನುದಾನ ದೊರೆಯಲಿದ್ದು, ರಾಜ್ಯ ಸರ್ಕಾರ 66%ರಷ್ಟು ಅನುದಾನವನ್ನ ಒದಗಿಸಲಿದೆ. ರಾಜ್ಯದ ಆಸ್ಪತ್ರೆಗಳ ಜೊತೆಗೆ ದೇಶದ ಇತರ ರಾಜ್ಯಗಳ ಆಸ್ಪತ್ರೆಗಳಲ್ಲೂ ಹೆಚ್ಚಿನ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದ್ದೇವೆ ಎಂದು ಬರೆದು ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನೆನ್ನೆ ನಡೆದ ಕಾರ್ಯಕ್ರಮದಲ್ಲೂ ಕೂಡ ಈ ಯೋಜನೆ ಬಗ್ಗೆ ಮಾತನಾಡಿದ ಆರೋಗ್ಯ ಸಚಿವರು (Health Minister) ಹಿಂದೆ ಕೂಡ ಸಿದ್ದರಾಮಯ್ಯ ಸರ್ಕಾರ ಜಾರಿಯಲ್ಲಿದ್ದಾಗ ಆಯುಷ್ಮಾನ್ ಕಾರ್ಡು ಜಾರಿಗೆ ಬಂದು ಅನೇಕರು ಇದರ ಪ್ರಯೋಜನವನ್ನು ಕೂಡ ಪಡೆದಿದ್ದರು.

ಬಹಳ ಜನರಿಗೆ ಇದರಿಂದ ಆಗುತ್ತಿರುವ ಉಪಯೋಗವನ್ನು ಅರಿತು ಮತ್ತೊಮ್ಮೆ ಹೊಸ ರೂಪದಲ್ಲಿ ಇನ್ನಷ್ಟು ಯೋಚನೆಗಳ ಅನುಕೂಲತೆಯನ್ನು ಕೂಡ ಸೇರಿಸಿ ನೂತನ ಕಾರ್ಡ್ ವಿತರಣೆ ಮಾಡುತ್ತಿದ್ದೇವೆ ರಾಜ್ಯದ ಪ್ರತಿಯೊಬ್ಬ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಹಾಗೂ ಚಿಕಿತ್ಸೆಗಳನ್ನು ಒದಗಿಸಬೇಕು ಎಂಬುದು ನಮ್ಮ ಸರ್ಕಾರದ ಆದ್ಯತೆಗಳಲ್ಲಿ ಒಂದು ಎಂದು ನುಡಿದರು.

ಯೋಜನೆಯ ಒಟ್ಟು ಅನುದಾನದ ಪಾಲಿನಲ್ಲಿ ರಾಜ್ಯ ಸರ್ಕಾರವು 66% ರಷ್ಟು ನೀಡುತ್ತಿದ್ದರೆ ಕೇಂದ್ರ ಸರ್ಕಾರವು ಅನುದಾನ 34% ರಷ್ಟಿದೆ. ಈ ಯೋಜನೆಯಡಿಯಲ್ಲಿ BPL ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳು ವಾರ್ಷಿಕ ರೂ. 5 ಲಕ್ಷ ಮೌಲ್ಯದ ಚಿಕಿತ್ಸೆಯನ್ನು ಕುಟುಂಬದ ಒಬ್ಬರು ಅಥವಾ ಹಲವರು Family Floater ಆಧಾರದ ಮೇಲೆ ಬಳಸಿಕೊಳ್ಳಬಹುದಾಗಿದೆ.

ಈ ಗುರುತಿನ ಚೀಟಿಗಳನ್ನು ರಾಷ್ಟ್ರೀಯ ಆರೋಗ್ಯ ID (ABHA ID) ಯೊಂದಿಗೆ ಜೋಡಿಸಲಾಗಿರುತ್ತದೆ. ಇದರಿಂದ ಫಲಾನುಭವಿಗಳ ವ್ಯೆದ್ಯಕೀಯ ದಾಖಲೆಗಳನ್ನು ಸಂರಕ್ಷಿಸಿ ಸುಲಭ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ಸಹಾ ನೆರವಾಗುತ್ತದೆ.

ಪಡಿತರ ಚೀಟಿಯೊಂದಿಗೆ ಜೋಡಿಸಲಾದ ಮೂಲ ಆಧಾರ್‌ ಗುರುತಿನ ಚೀಟಿಯ ಸಹಾಯದಿಂದ ಹತ್ತಿರದ ಗ್ರಾಮ ಒನ್ ಕೇಂದ್ರಗಳು ಅಥವಾ ನಾಗರೀಕ ಸೇವಾ ಕೇಂದ್ರಗಳಲ್ಲಿ ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಗುರುತಿನ ಚೀಟಿಗಳನ್ನು ಸುಲಭವಾಗಿ ನೊಂದಾಯಿಸಿ ಪಡೆಯಬಹುದು.

 

ಯಾವುದೇ ಅಡ್ಡ ಪರಿಣಾಮ ಇಲ್ಲದೇ, ಒಂದು ಪೈಸೆ ಖರ್ಚು ಕೂಡ ಇಲ್ಲದೆ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುವ ಸುಲಭ ಔಷಧಿಗಳು ಇವು.!

 

ಈಗಿನ ಕಾಲದಲ್ಲಿ ಮನುಷ್ಯನ ಮರಣ ದರವನ್ನು ಗಣತಿ ಮಾಡಿದಾಗ ದೈಹಿಕ ಅನಾರೋಗ್ಯದ ಸಮಸ್ಯೆಯಿಂದಲೇ 65% ಮಂದಿ ಸಾ’ವನ್ನಪ್ಪುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಇದರಲ್ಲಿ ಹೃದಯಘಾತ ಹಾಗೂ ಸಂಬಂಧಿತ ಸಮಸ್ಯೆಯಿಂದ ಸಾ’ವ’ನಪುತ್ತಿರುವವರ ಸಂಖ್ಯೆ ನಂಬರ್ ಒನ್ ಸ್ಥಾನದಲ್ಲಿದೆ.

ನಂತರದ ಸ್ಥಾನದಲ್ಲಿ ರಕ್ತದೊತ್ತಡ, ಕ್ಯಾನ್ಸರ್, ಪಾಶ್ವ ವಾಯು ಇನ್ನಿತರ ಖಾಯಿಲೆಗಳು ಬರುತ್ತಿವೆ. ಹೃದಯ ಸಂಬಂಧಿತ ಸಮಸ್ಯೆಯಿಂದ ಮ’ರ’ಣ ಹೊಂದುತ್ತಿರುವವರ ಸಂಖ್ಯೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ 35% ಇದೆ ಎನ್ನುವುದು ಕಳವಳಕಾರಿ ವಿಷಯ.

ಹಿಂದೆಲ್ಲಾ ಮಹಿಳೆಯರಿಗೆ ಹೃದಯಾಘಾತವಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿತ್ತು, ಅದರಲ್ಲೂ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಘಾತ ಆಗುವುದಿಲ್ಲ ಎಂದು ನಂಬಲಾಗುತ್ತಿತ್ತು. ಆದರೆ ಈಗ ಅದು ಕೂಡ ಹುಸಿಯಾಗಿ ನಿಧಾನವಾಗಿ ಮಹಿಳೆಯರು ಕೂಡ ಈ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಹಲವಾರು ಕಾರಣಗಳಿಂದಾಗಿ ನಮಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತಿವೆ ಹಾಗೂ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಿದ್ದೇವೆ. ಇವುಗಳಿಗೆ ಏನು ಕಾರಣ ಎನ್ನುವುದನ್ನು ತಿಳಿದುಕೊಂಡು ಬಿಟ್ಟರೆ ನಾವು ಅರ್ಧ ಕಾಯಿಲೆಯಿಂದ ಗುಣವಾದಂತೆ.

ಅದರ ಬಗ್ಗೆ ಕೆಲ ವಿಷಯವನ್ನು ಅದರಲ್ಲೂ ಒಂದು ರೂಪಾಯಿ ಕೂಡ ಖರ್ಚು ಮಾಡಿದ ನ್ಯಾಚುರಲ್ ಆಗಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದಂತೆ ಹೇಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಹಾಗೂ ಹೃದಯಘಾತ ಆಗದಂತೆ ನಾವು ಬದುಕಬಹುದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

* ವಾಯು ಮಾಲಿನ್ಯ ಎನ್ನುವುದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಮಾತ್ರ ಉಂಟು ಮಾಡುವುದಿಲ್ಲ, ವಾತಾವರಣದಲ್ಲಿ 5ಮೈಗ್ರಾನ್ ಗಿಂತ ಕಡಿಮೆ ಇರುವ ವಿಷ ಕಣಗಳು ನಾವು ಉಸಿರಾಡಿದಾಗ ಆಕ್ಸಿಜನ್ ಜೊತೆ ದೇಹ ಸೇರುವುದರಿಂದ ಆ ಮೂಲಕ ರಕ್ತನಾಳಗಳಲ್ಲಿ ಸಂಚರಿಸಿ ರಕ್ತನಾಳಗಳಲ್ಲಿ ಬ್ಲಾಕ್ ಉಂಟು ಮಾಡುತ್ತದೆ. ಇದರಿಂದ ಹೃದಯ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತಿದೆ ಹಾಗಾಗಿ ವಾತಾವರಣ ಶುದ್ಧವಾಗಿಟ್ಟುಕೊಳ್ಳಬೇಕು, ಶುದ್ಧವಾಗಿರುವ ಕಡೆ ಜೀವಿಸಬೇಕು.

* BP, ಶುಗರ್, ಕೊಲೆಸ್ಟ್ರಾಲ್, ಒಬೆಸಿಟಿ ಇವೆಲ್ಲವೂ ಕೂಡ ಹೃದಯಘಾತ ಆಗುವುದಕ್ಕೆ ಕಾರಣ ಎಂದು ನಮಗೆ ಗೊತ್ತಿದೆ. ಇವುಗಳು ಬರದಂತೆ ಮೊದಲೇ ಎಚ್ಚರವಹಿಸಿ ಆರೋಗ್ಯವನ್ನು ಕಾಯ್ದುಕೊಳ್ಳಬೇಕ. ಇವುಗಳು ಕಾಯಿಲೆಗಳಲ್ಲ ಬದಲಾಗಿ ನಾವು ರೂಡಿಸಿಕೊಂಡಿರುವ ತಪ್ಪಾದ ಆಹಾರ ಪದ್ಧತಿಯಿಂದ ಹಾಗೂ ತಪ್ಪಾದ ಜೀವನ ಶೈಲಿಯಿಂದ ನಮ್ಮ ದೇಹಕ್ಕೆ ಆಗಿರುವ ಡಿಸ್ಆರ್ಡರ್ ಗಳು ಹಾಗಾಗಿ ಇವುಗಳನ್ನು ಸರಿಪಡಿಸಿಕೊಳ್ಳಬೇಕು.

* ಈಗಿನ ಕಾಲದಲ್ಲಿ ಆಹಾರ ಪದಾರ್ಥಗಳು ಹಾಗೂ ಆಹಾರ ಪದ್ಧತಿ ಎರಡೂ ಕೂಡ ಸರಿ ಇಲ್ಲ ಆಹಾರ ಪದಾರ್ಥಗಳನ್ನು ಬೆಳೆಯುವಾಗ ಅದನ್ನು ಸಂಸ್ಕರಿಸಿ ಶೇಖರಿಸಿ ಇಡುವಾಗ ಅತಿಯಾದ ರಾಸಾಯನಿಕಗಳ ಬಳಕೆ ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು ಈ ಕಾರಣ ಮತ್ತು ನಾವು ನಮ್ಮ ನೆಲದ ಆಹಾರ ಪದ್ಧತಿಯನ್ನು ಬಿಟ್ಟು ಅವೈಜ್ಞಾನಿಕವಾದ ಆಹಾರಗಳನ್ನು ಸೇವಿಸುತ್ತಿರುವುದರಿಂದ ಕೂಡ ದೇಹದಲ್ಲಿ ಅಸಮತೋಲನಗಳು ಉಂಟಾಗಿ ಆ ಮೂಲಕ ಹೃದಯ ಸಂಬಂಧಿತ ಸಮಸ್ಯೆಗಳು ಬರುತ್ತಿವೆ ಇವುಗಳದು ಸರಿಪಡಿಸಿಕೊಳ್ಳಬೇಕು.

* ದೇಹ ಇನ್ ಆಕ್ಟಿವ್ ಆಗಿರುವುದು ಎಲ್ಲಾ ಕಾಯಿಲೆಗಳ ಮೂಲ. ದಿನಕ್ಕೆ 30 ನಿಮಿಷಗಳ ಕಾಲ ನಡೆದಾಡಿದರೆ ಹೃದಯ ಆರೋಗ್ಯವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ ಆದರೆ ಇಂದು ಯಾರಿಗೂ ಅಷ್ಟು ಸಂಯಮವಿಲ್ಲ. ಯೋಗ, ಧ್ಯಾನ, ಲಘು ವ್ಯಾಯಾಮ ಇವುಗಳನ್ನು ರೂಡಿಸಿಕೊಂಡಾಗ ಹೃದಯ ಸಂಬಂಧಿತ ಕಾಯಿಲೆಗಳನ್ನು ದೂರ ಇಡಬಹುದು.

* ‌ಇಂದು ಎಲ್ಲರಿಗೂ ವಿಪರೀತವಾದ ಒತ್ತಡ ಇದೆ ಯಾವುದೇ ಸಮಸ್ಯೆ ಇದ್ದರೂ ಅದು ಎಷ್ಟಿದೆ ಎನ್ನುವುದನ್ನ ಪರೀಕ್ಷೆ ಮಾಡಬಹುದು ಆದರೆ ಒತ್ತಡದ ಮಟ್ಟವನ್ನು ಅಳೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಮನೆಗೆ ಸಂಬಂಧಿಸಿದ ಒತ್ತಡ ಅಥವಾ ವಿದ್ಯಾಭ್ಯಾಸದ ಒತ್ತಡ, ಉದ್ಯೋಗದ ಒತ್ತಡ ಈ ರೀತಿ ಒತ್ತಡಗಳು ಇದ್ದು ಇವು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.

* ನಿದ್ರೆ ಇಲ್ಲದೆ ರಾತ್ರಿ ಎಲ್ಲ ಕೆಲಸ ಮಾಡುವುದು ಹತ್ತು ವರ್ಷಗಳಲ್ಲಿ ಆಗುವುದನ್ನು ಒಂದೇ ವರ್ಷದಲ್ಲಿ ಮಾಡಬೇಕು ಎನ್ನುವ ಅತಿಯಾದ ಮಹತ್ವಾಕಾಂಕ್ಷೆಗಳು ವಾಸ್ತವಕ್ಕೆ ದೂರವಾದ ಆಸೆಗಳು ಇವುಗಳು ನಮ್ಮಿಂದ ನಾವೇ ತಂದುಕೊಳ್ಳುತ್ತಿರುವ ಒತ್ತಡಗಳು ಇವುಗಳನ್ನು ಅರ್ಥಮಾಡಿಕೊಳ್ಳಬೇಕು.

* ಧೂಮಪಾನ, ಮದ್ಯಪಾನ, ತಂಬಾಕು, ಗುಟ್ಕಾ ಡ್ರಗ್ ಸೇವನೆ ಇವುಗಳು ನಿಧಾನವಾಗಿ ದೇಹವನ್ನು ಕೊಲ್ಲುವ ವಿಷಯಗಳು ಹಾಗಾಗಿ ಇವುಗಳ ವ್ಯಸನದಿಂದ ದೂರ ಬರಬೇಕು.

* ಸೂರ್ಯನ ಎಳೆ ಬಿಸಲಿನಲ್ಲಿ ವಾಕ್ ಮಾಡುವುದು, ನಮ್ಮ ಸುತ್ತಲೂ ಹತ್ತು ಜನ ಆತ್ಮೀಯ ಸ್ನೇಹಿತರನ್ನು ಇಟ್ಟುಕೊಂಡು ಕಷ್ಟ ಸುಖ ಶೇರ್ ಮಾಡಿಕೊಳ್ಳುವುದು, ಮನಸಾರೆ ನಗುವುದು ಉತ್ತಮ ಪೋಷಕಾಂಶಗಳುಳ್ಳ ಆಹಾರಗಳು, ಸೊಪ್ಪು ತರಕಾರಿಗಳು ಧಾನ್ಯಗಳು ಇವಗಳನ್ನು ಸೇವಿಸುವುದು.

ಯಾವಾಗಲೂ ನಗುನಗುತ್ತಾ ಇರುವುದು ಚೆನ್ನಾಗಿ ನಿದ್ದೆ ಮಾಡುವುದು, ಆಗಾಗ ರೆಸ್ಟ್ ತೆಗೆದುಕೊಳ್ಳುವುದು ಇದೆಲ್ಲವೂ ಕೂಡ ದೇಹಕ್ಕೆ ಹಣ ಖರ್ಚು ಮಾಡದೆ ಸಿಗುವ ಸುಲಭ ಔಷಧಿಗಳು ಇವುಗಳನ್ನು ಪ್ರತಿಯೊಬ್ಬರು ಉಚಿತವಾಗಿ ಪಡೆಯಬಹುದು ಈ ಅಭ್ಯಾಸ ಮಾಡಿಕೊಂಡಾಗ ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರ ಇರಬಹುದು.

ರೈತರಿಗೆ ಸಿಹಿಸುದ್ಧಿ, ಜಾನುವಾರಗಳ ಆರೈಕೆಗೆ ನಿಮ್ಮ ಮನೆಬಾಗಿಲಿಗೆ ಬರಲಿದ್ದಾರೆ ಪಶು ಸಖಿಯರು.!

ಕರ್ನಾಟಕ ರಾಜ್ಯದ ಎಲ್ಲ ರೈತರಿಗೂ ಕೂಡ ಪಶುಸಂಗೋಪನೆ ಇಲಾಖೆಯಿಂದ ಒಂದು ಸಿಹಿ ಸುದ್ದಿ ಇದೆ. ಪ್ರತಿಯೊಬ್ಬ ರೈತನು ಕೂಡ ಈ ಅಗತ್ಯ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು. ರೈತನು ಕೃಷಿ ಚಟುವಟಿಕೆ ಜೊತೆಗೆ ಅದಕ್ಕೆ ಪೂರಕವಾಗಿರುವ ಪಶುಸಂಗೋಪನೆಯಲ್ಲಿ ಕೂಡ ತೊಡಗಿಕೊಂಡಿರುತ್ತಾನೆ. ಪ್ರತಿಯೊಬ್ಬ ರೈತನು ತನ್ನ ಮನೆಯಲ್ಲಿ ಹಸು, ಕರು, ಎಮ್ಮೆ, ಮೇಕೆ ಕುರಿ ಸಾಕಾಣಿಕೆ ಮಾಡುತ್ತಿರುತ್ತಾನೆ.

ಆತನ ಕೃಷಿ ಜೊತೆಗೆ ಪಶು ಸಂಗೋಪನೆ ಕೂಡ ವ್ಯವಸಾಯದ ಒಂದು ಭಾಗವೇ ಆಗಿರುತ್ತದೆ. ಈ ರೀತಿಯ ರೈತರಿಗೆಲ್ಲ ಸರ್ಕಾರದಿಂದ ಬಿಗ್ ಅಪ್ಡೇಟ್ ಇದೆ, ಅದೇನೆಂದರೆ ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತೆಯರು ಇರುವ ರೀತಿಯಲ್ಲಿಯೇ ಪಶುಸಂಗೋಪನಾ ಇಲಾಖೆ ವತಿಯಿಂದ ಪಶುಸಖಿಯರನ್ನು ತರಬೇತಿ ಕೊಟ್ಟು ಇಲಾಖೆಯ ಯೋಜನೆಯ ವಿವರಗಳು ರೈತನಿಗೆ ತಲುಪಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ಒಬ್ಬರಂತೆ ರಾಜ್ಯದಲ್ಲಿ ಒಟ್ಟು 5,962 ಪಶು ಸಖಿಯರನ್ನು ಆಯ್ಕೆ ಮಾಡಿ ತರಬೇತಿ ಕೊಟ್ಟು ನೇಮಿಸಲಾಗಿದೆ.

ಕನಿಷ್ಠ ವಿದ್ಯಾರ್ಹತೆ 8ನೇ ತರಗತಿಯನ್ನು ಹೊಂದಿರುವ ಪಶು ಸಂಗೋಪನೆಯಲ್ಲಿ ಆಸಕ್ತಿ, ಜಾನುವಾರುಗಳ ಬಗ್ಗೆ ಸಾಮಾನ್ಯ ಜ್ಞಾನ ಇರುವ ಗ್ರಾಮೀಣ ಭಾಗದ ಮಹಿಳೆಯರಿಗೆ ಕನಿಷ್ಠ 18 ದಿನಗಳ ಸಾಮಾನ್ಯ ತರಬೇತಿ ನೀಡಿ ನೇಮಿಸಿಕೊಳ್ಳಲಾಗಿದೆ. ಈ ಕಾರ್ಯಗಾರದ ಸಮಯದಲ್ಲಿ ಜಾನುವಾರುಗಳ ವೈಜ್ಞಾನಿಕ ಸಾಕಣೆ ಮತ್ತು ಪೋಷಣೆ, ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ತಿಳಿಸಿಕೊಟ್ಟು ಪಶುಸಖಿಯರನ್ನು ತರಬೇತಿಗಳಿಸಿ ಬಳಿಕ ಕೆಲಸಕ್ಕೆ ನಿಯೋಜಿಸಲಾಗುತ್ತದೆ.

ಪಶು ವೈದ್ಯರ ಮಾರ್ಗದರ್ಶನದಲ್ಲಿ ನೇಮಕಗೊಂಡ ಪಶು ಸಖಿಯರು ಕೆಲಸ ಮಾಡಲಿದ್ದಾರೆ. ಇಲಾಖೆ ವತಿಯಿಂದ ಪ್ರತಿ ಮನೆ ಬಾಗಿಲು ಕೂಡ ಈ ಪಶುಸಖಿಯರೇ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ, ಪ್ರಥಮ ಚಿಕಿತ್ಸೆ ನೀಡಲು ಬರಲಿದ್ದಾರೆ. ಪಶು ಸಂಗೋಪನಾ ಇಲಾಖೆಯ ಈ ಹೊಸ ಯೋಜನೆ ರೈತರ ಪಾಲಿಗೆ ವರದಾನವಾಗಿದೆ ಎಂದೇ ಹೇಳಬಹುದು.

ಯಾಕೆಂದರೆ, ಗ್ರಾಮೀಣ ಪ್ರದೇಶದಲ್ಲಿ ಪಶು ವೈದ್ಯರ ಕೊರತೆಯನ್ನು ಇದು ಅಲ್ಪಮಟ್ಟಿಗೆ ತುಂಬಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ರೈತರಿಗೆ ಅವರ ಅಗತ್ಯದ ಸಮಯದಲ್ಲಿಯೇ ಜಾನುವಾರುಗಳ ಆರೋಗ್ಯ ವ್ಯತ್ಯಾಸವಾದಾಗ ಸರಿಯಾದ ಚಿಕಿತ್ಸೆ ಸಿಗಲಿದೆ. ಆದ್ದರಿಂದ ರಾಜ್ಯದ ಪಶು ಸಂಗೋಪನ ಮತ್ತು ಪಶು ವೈದ್ಯಕೀಯ ಇಲಾಖೆಯ ಸೌಲಭ್ಯಗಳನ್ನ ಜಾನುವಾರುಗಳನ್ನು ಸಾಕುವ ರೈತರಿಗೆ ತಲುಪಿಸುವ ಉದ್ದೇಶದಿಂದೊಂದಿಗೆ.

ರಾಜ್ಯದಾದ್ಯಂತ ಗ್ರಾಮ ಪಂಚಾಯತಿಗಳಿಗೆ ಒಬ್ಬರಂತೆ ಈಗ ಮೊದಲನೆಯ ಹಂತದಲ್ಲಿ ಒಟ್ಟು 5,692 ಮಂದಿ ಪಶು ಸಖಿಯರನ್ನು ನೇಮಿಸಲಾಗಿದೆ. ಜಾನುವಾರಗಳಿಗೆ ಆರೋಗ್ಯ ಹದಗೆಟ್ಟು ಯಾವುದೇ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಅದನ್ನ ಪಶು ಸಂಗೋಪನಾ ಇಲಾಖೆಗೆ ತಿಳಿಸಿದರೆ ಶೀಘ್ರವಾಗಿ ನಿಮ್ಮ ಗ್ರಾಮ ಪಂಚಾಯಿತಿಯ ಪಶು ಸಖಿಯರು ಚಿಕಿತ್ಸೆಗೆ ಸ್ಪಂದಿಸುತ್ತಾರೆ.

ಇಲಾಖೆ ಮತ್ತು ರೈತರ ನಡುವೆ ಇರುವ ಅಂತರವನ್ನು ತಗ್ಗಿಸಿ ಸೇತುವೆಯಾಗಿ ಕಾರ್ಯನಿರ್ವಹಿಸಲು ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಸಮರ್ಪಕವಾಗಿ ತಲುಪಿಸಲು ಮತ್ತು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಉದ್ಯೋಗಾವಕಾಶವನ್ನು ನೀಡಲು ಈ ಯೋಜನೆಯನ್ನು ಜಾರಿ ಮಾಡಿ ದೇಶದಲ್ಲಿ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿ ಇದೆ ಎನ್ನುವ ಖ್ಯಾತಿಗೂ ಕರ್ನಾಟಕ ಒಳಗಾಗಿದೆ. ಈ ರೀತಿ ನೇಮಕಗೊಳ್ಳುವ ಪಶುಸಖಿಯರಿಗೆ ಕೇಂದ್ರ ಸರ್ಕಾರದಿಂದ ತಿಂಗಳಿಗೆ ರೂ.3,800 ಸಂಭಾವನೆ ನೀಡಲಾಗುತ್ತದೆ. ಈ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ಶೇರ್ ಮಾಡಿ ಅನುಕೂಲ ಮಾಡಿ ಕೊಡಿ.