Home Blog Page 112

ತುಂಬಿದ ನಿಧಿಯು ಮನೆಯ ಅಕ್ಕ-ಪಕ್ಕ ಇದ್ದರೆ ಒಂದು ನಿಮಿಷದಲ್ಲಿ ಪತ್ತೆ ಮಾಡಬಹುದು ಹೇಗೆ ಅಂತ‌ ನೋಡಿ.!

 

ಈಗಿನ ಕಾಲದಲ್ಲಿ ಕೂಡ ಹಲವು ಕಡೆ ನಿಧಿಗಳು ಪತ್ತೆಯಾಗುತ್ತಿವೆ. ಭೂಮಿಯನ್ನು ಉಳುವಾಗ ಅಥವಾ ಹಳೆಯ ದೇವಾಲಯಗಳು, ಹಳೆಯ ಕಟ್ಟಡಗಳನ್ನು, ಮನೆಗಳನ್ನು ಕೆಡವಿದಾಗ ಅವುಗಳಲ್ಲಿ ಹಿರಿಯರು ಬಚ್ಚಿಟ್ಟಿದ್ದ ನಿಧಿಗಳು ತುಂಬಿದ ಬಿಂದಿಗೆಗಳಲ್ಲಿ ಪತ್ತೆ ಆಗುತ್ತಿದೆ.

ಈ ರೀತಿ ನಿಧಿ ಬಚ್ಚಿಡಲು ಸಾಕಷ್ಟು ಕಾರಣಗಳಿದ್ದವು. ನಮ್ಮ ದೇಶದಲ್ಲಿ ಅನೇಕ ವಿದೇಶಿಕರು ಬಂದು ತಮ್ಮ ಪ್ರಭಾವ ಬೀರಿ ದೇಶದ ಸಂಪತ್ತನ್ನು ಕೊ’ಳ್ಳೆ ಹೊಡೆದುಕೊಂಡು ಹೋಗಿದ್ದಾರೆ. ಈ ರೀತಿ ಬಂದವರಲ್ಲಿ ಅನೇಕರು ಕ್ರೂ’ರವಾಗಿ ವರ್ತಿಸಿ ಇಲ್ಲಿನ ಜನರನ್ನು ದೋ’ಚಿದ್ದಾರೆ ಆಗ ಅವರಿಂದ ಸಂಪತ್ತನ್ನು ರಕ್ಷಿಸುವ ಸಲುವಾಗಿ ನಮ್ಮ ಹಿಂದಿನ ತಲೆಮಾರಿನವರು ಮಣ್ಣಿನಲ್ಲಿ ಇದನ್ನು ಬಚ್ಚಿಟ್ಟಿದ್ದರು ಎಂದು ಕೆಲವರು ಹೇಳುತ್ತಾರೆ.

ನಾವು ಇತಿಹಾಸದ ಸಂಬಂಧಿತ ಕಥೆಗಳನ್ನು ಓದುವಾಗ ಯಾವಾಗಲೂ ಒಂದು ರಾಜ್ಯಕ್ಕೂ ಮತ್ತೊಂದು ರಾಜ್ಯಕ್ಕೆ ಯು’ದ್ಧಗಳಾಗುತ್ತಿರುವುದನ್ನು ಕೇಳಿಯೇ ಇದ್ದೇವೆ. ಪ್ರತಿ ರಾಜ್ಯಕ್ಕೂ ಒಬ್ಬ ರಾಜಮಂತ್ರಿಯ ಇರುತ್ತಾರೆ ಹಾಗೂ ಪ್ರತಿ ರಾಜನ ಆಸ್ಥಾನದಲ್ಲೂ ಧರ್ಮ ಗುರುಗಳು ಇರುತ್ತಾರೆ, ಅವರ ಆಜ್ಞೆಯಂತೆ ಎಲ್ಲ ನಡೆಯುತ್ತಿರುತ್ತದೆ.

ಆಗ ಮಂತ್ರಿಗಳು ಹಾಗೂ ಗುರುಗಳು ಈ ರೀತಿ ರಾಜ ಗೆದ್ದ ಅಲ್ಪ ಸಂಪತ್ತನ್ನು ಬೇರೆ ಕಡೆ ಸಂಗ್ರಹಿಸಿ ಇಡುತ್ತಿದ್ದರು. ಒಂದು ವೇಳೆ ಆ ರಾಜ್ಯದ ಮೇಲೆ ಬೇರೆ ಸಾಮ್ರಾಜ್ಯದ ದೊರೆಗಳು ದಂಡೆತ್ತಿ ಬಂದು ಕೊಳ್ಳೆ ಹೊಡೆದಾಗ ರಾಜನ ಪರಿವಾರಕ್ಕೆ ಅನುಕೂಲವಾಗಲಿ ಎಂದು ನಂತರ ಅವರಿಗೆ ತಲುಪಿಸಲು ಈ ರೀತಿ ಸ್ವಲ್ಪ ಪ್ರಮಾಣದ ಆಸ್ತಿಯನ್ನು ಬಚ್ಚಿಡುತ್ತಿದ್ದರು.

ಆದರೆ ಇದನ್ನು ಘೋಷಿಸಿದಾಗ ಅದನ್ನು ಕೂಡ ದೋಚಬಹುದು ಎಂದು ಯಾವುದಾದರೂ ಸುಳಿವುಗಳನ್ನು ಇಟ್ಟು ಆ ಸಂಪತ್ತನ್ನು ಪಡೆಯುವ ಮಾರ್ಗ ತೋರಿಸುತ್ತಿದ್ದರು. ಆದರೆ ಇವುಗಳನ್ನು ಬಿಡಿಸಲಾಗದೆ ಅನೇಕರು ಸಂಪತ್ತನ್ನು ಪಡೆಯಲಾರದೆ ಹಾಗೆ ಉಳಿಸಿ ಹೋದರು ಎನ್ನುವ ಕಥೆಗಳನ್ನು ನಾವು ಕೇಳಿದ್ದೇವೆ.

ಹೀಗೆ ರತ್ನಗರ್ಭೆ ವಸುಂದರೆಯ ಒಡಲಲ್ಲಿ ಇರುವ ನಿಧಿಗಳ ಋಣವೂ ಯಾರಿಗಿದೆಯೋ ಅವರಿಗೆ ನಂತರ ಅದು ಸಿಗುತ್ತದೆ ಎಂದು ಹೇಳಲಾಗುತ್ತದೆ. ಕೆಲವರಿಗೆ ಈ ಬಗ್ಗೆ ಸಂದೇಹಗಳು ಇರುತ್ತದೆ ಅವರು ನಮ್ಮ ಜಮೀನಿನಲ್ಲಿ ಅಥವಾ ಜಮೀನಿನ ಅಕ್ಕ ಪಕ್ಕದಲ್ಲಿ ಈ ರೀತಿ ನಿಧಿ ಇದೆ ಎಂದು ಎನಿಸುತ್ತದೆ.

ತುಂಬಿದ ಕೊಡ ಚಿನ್ನದ ನಾಣ್ಯಗಳ ಶಬ್ದ ಮಾಡಿದ ಹಾಗೆ ಎನಿಸುತ್ತದೆ ಎಂದು ಮಾತನಾಡುತ್ತಿರುತ್ತಾರೆ. ಈ ರೀತಿ ಅನುಮಾನಗಳಿದ್ದಾಗ ಒಂದೇ ನಿಮಿಷದಲ್ಲಿ ಒಂದು ಪ್ರಯೋಗ ಮಾಡಿ ಅಲ್ಲಿ ನಿಧಿ ಇದೆಯೋ ಇಲ್ಲವೋ ಎನ್ನುವುದನ್ನು ಪತ್ತೆ ಹಚ್ಚಬಹುದು. ಹೇಗೆಂದರೆ ಮೊದಲಿಗೆ ನಿಮಗೆ ಯಾವ ಸ್ಥಳದ ಮೇಲೆ ಈ ರೀತಿಯಾಗಿ ನಿಧಿ ಇರಬಹುದು ಎಂದು ನಂಬಿಕೆ ಇದೆ ಆ ಸ್ಥಳವನ್ನು ಸಮತಟ್ಟಾಗಿ ಸ್ವಚ್ಛ ಮಾಡಿಸಬೇಕು.

ನಂತರ ಅದಕ್ಕೆ ಗಂಗಾಜಲವನ್ನು ಅರ್ಪಿಸಿ ಬಿಳಿ ಬಟ್ಟೆಯಿಂದ ಅಷ್ಟು ಜಾಗವನ್ನು ಕವರ್ ಮಾಡಬೇಕು. ಅದರ ಮೇಲೆ ಸಾಸಿವೆಯನ್ನು ಹಾಕಬೇಕು. ಯಾವ ಸ್ಥಳದಲ್ಲಿ ನಿಧಿ ಇದೆಯೋ ಆ ಸ್ಥಳದಲ್ಲಿ ಸಾಸಿವೆಗಳು ಸಿಡಿಯಲು ಆರಂಭಿಸುತ್ತವೆ.

ಯಾಕೆಂದರೆ ಒಳಗಡೆ ಇರುವ ಬಂಗಾರದ ಮೇಲೆ ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಅದರ ಶಾಖಕ್ಕೆ ಮೇಲಿರುವ ಸಾಸಿವೆಯೂ ಸಿಡಿಯಲು ಆರಂಭಿಸುತ್ತದೆ ಹೀಗೆ ಅದನ್ನು ಗುರುತಿಸಬಹುದು. ಆದರೆ ನೆನಪಿರಲಿ ಈಗಿರುವ ಕಾನೂನಿನ ಪ್ರಕಾರ ಯಾವುದೇ ನಿಧಿಯ ಬಗ್ಗೆ ಮಾಹಿತಿ ದೊರಕಿದರು ಅಥವಾ ನಿಧಿ ಸಿಕ್ಕಿದರು ಸರ್ಕಾರಕ್ಕೆ ಅದನ್ನು ತಲುಪಿಸಬೇಕು.

ತಲೆ ಕೂದಲಿಗೆ ಈ ಎಣ್ಣೆ ಹಚ್ಚಿ ನೋಡಿ ಎಲ್ಲರೂ ಆಶ್ಚರ್ಯ ಪಡುವಂತೆ ನಿಮ್ಮ ತಲೆ ಕೂದಲು ಉದ್ದವಾಗುತ್ತದೆ.!

 

ತಲೆ ಕೂದಲು ಹೆಣ್ಣಿಗೆ ಹೆಮ್ಮೆ. ಕಪ್ಪಾದ, ದಟ್ಟವಾದ, ಸೊಂಪಾದ ಉದ್ದವಾದ ತಲೆ ಕೂದಲು ಇರಬೇಕು ಎನ್ನುವುದು ಬಹುತೇಕ ಎಲ್ಲಾ ಹೆಣ್ಣು ಮಕ್ಕಳ ಆಸೆ. ಆದರೆ ಎಲ್ಲರಿಗೂ ಕೂಡ ಈ ರೀತಿ ಆಕರ್ಷಣೆಯವಾಗಿರುವ ಕೂದಲು ಇರುವುದಿಲ್ಲ ಯಾಕೆಂದರೆ ಅವರು ಇದುವರೆಗೆ ಕೂದಲಿನ ಆರೋಗ್ಯಕ್ಕೆ ಗಮನ ಕೊಟ್ಟಿರುವುದಿಲ್ಲ.

ಹೆಣ್ಣು ಮಕ್ಕಳಂತೆ ಗಂಡು ಮಕ್ಕಳಿಗೂ ಕೂಡ ಅವರ ಕೂದಲು ನೈಸರ್ಗಿಕವಾಗಿ ಚೆನ್ನಾಗಿರಬೇಕು ಎನ್ನುವ ಆಸೆ ಇರುತ್ತದೆ. ಹಾಗಾಗಿ ಈ ರೀತಿ ಕೂದಲಿನ ಆರೋಗ್ಯದ ಬಗ್ಗೆ ಕಾಳಜಿ ಮಾಡುವವರಿಗಾಗಿ ಒಂದು ವಿಶೇಷವಾದ ಮನೆಮದ್ದಿನ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಇದನ್ನು ಆಯುರ್ವೇದದಲ್ಲೂ ತಿಳಿಸಲಾಗಿದ್ದು ಬಹಳ ಪರಿಣಾಮಕಾರಿಯಾಗಿ ಫಲ ದೊರೆಯುತ್ತದೆ.

ಕೂದಲಿನ ಆರೋಗ್ಯದ ಬಗ್ಗೆ ನಿರ್ಲಕ್ಯ್ಷ ಮಾಡಿದಾಗ ನಾನಾ ರೀತಿಯ ತಲೆಕೂದಲಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೂದಲು ಉದುರುವುದು, ಕೂದಲಲ್ಲಿ ಕವಲು ಉಂಟಾಗುವುದು ಕೂದಲು ಒರಟಾಗುವುದು, ಕೂದಲು ಉದುರುವುದು ಬಹಳ ಬೇಗ ಕೂದಲು ಬೆಳ್ಳಗಾಗುವುದು, ಗ್ರೇ ಆಗುವುದು ಇದು ಮಾತ್ರವಲ್ಲದೆ ಕೆಲವೊಮ್ಮೆ ತಲೆಯಲ್ಲಿ ತುರಿಕೆ ಆಗುವುದು ಇನ್ನು ಮುಂತಾದ ಅನೇಕ ಸಮಸ್ಯೆಗಳು ಬರುತ್ತವೆ.

ಇವುಗಳಿಗೆಲ್ಲ ಬೆಟ್ಟದ ನೆಲ್ಲಿಕಾಯಿ ಅದ್ಭುತ ಔಷಧಿಯಾಗಿದೆ. ವಾಗ್ಭಟರ ಸಂಹಿತೆ, ಚರಕ ಸಂಹಿತೆ ಇತ್ಯಾದಿಗಳಲ್ಲಿ ನೆಲ್ಲಿಕಾಯಿಯ ಮಹತ್ವದ ಬಗ್ಗೆ ತಿಳಿಸಲಾಗಿದೆ. ನೆಲ್ಲಿಕಾಯಿ ಹೇರಳವಾಗಿ ವಿಟಮಿನ್ ಎ ಹಾಗೂ ವಿಟಮಿನ್ ಸಿ ಹೊಂದಿದೆ. ಇದರಲ್ಲಿ ಆಂಟಿ ಆಕ್ಸಿಟೆಂಟ್ ಗಳು, ನೈಟ್ರಿಕ್ ಆಸಿಡ್ ಇನ್ನು ಮುಂತಾದ ಅನೇಕ ಪೋಷಕಾಂಶಗಳಿದ್ದು ಕೂದಲಿನ ಆರೋಗ್ಯಕ್ಕೆ ದಿವ್ಯ ಔಷಧಿಯಾಗಿದೆ.

ನೆಲ್ಲಿಕಾಯಿಯನ್ನು ಹಾಗೆಯೇ ಸೇವನೆ ಮಾಡುವುದರಿಂದ ಕೂಡ ದೃಷ್ಟಿ ದೋಷ ಹಾಗೂ ತಲೆಕೂದಲಿನ ಸಮಸ್ಯೆಗಳು ನಿವಾರಣೆ ಆಗುತ್ತವೆ. ಹೀಗೆ ನಿತ್ಯ ನೆಲ್ಲಿಕಾಯಿ ಸೇವನೆ ಜೊತೆಗೆ ನೆಲ್ಲಿಕಾಯಿಯಿಂದ ತಯಾರಿಸಬಹುದಾದ ಒಂದು ಎಣ್ಣೆಯ ಬಗ್ಗೆ ತಿಳಿಸುತ್ತಿದ್ದೇವೆ. ಇದನ್ನು ಕೂಡ ಮಾಡಿಕೊಂಡು ಪ್ರತಿದಿನವೂ ತಲೆ ಕೂದಲಿಗೆ ಹಚ್ಚಿ ಬಹಳ ಉತ್ತಮ ರೀತಿಯ ಫಲಿತಾಂಶಗಳನ್ನು ಕಾಣುತ್ತೀರಿ.

ಮೊದಲಿಗೆ 1/2Kg ತೆಂಗಿನ ಎಣ್ಣೆ ತೆಗೆದುಕೊಳ್ಳಿ ಅಥವಾ ಹರಳೆಣ್ಣೆ ಬಳಸುವ ಅಭ್ಯಾಸ ಇದ್ದರೆ ಅದನ್ನು ಕೂಡ ತೆಗೆದುಕೊಳ್ಳಬಹುದು. 1/2Kg ಬೆಟ್ಟದ ನೆಲ್ಲಿಕಾಯಿ ತೆಗೆದು ಅದನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ ನೀವು ತೆಗೆದುಕೊಂಡ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಅರ್ಧ ಲೀಟರ್ ಎಣ್ಣೆಗೆ ಅರ್ಧ ಲೀಟರ್ ನಷ್ಟು ನೀರು ಕೂಡ ಹಾಕಿ ಇದೆಲ್ಲವನ್ನು ಒಂದು ಮಣ್ಣಿನ ಮಡಿಕೆಗೆ ಹಾಕಿ ಮಿಕ್ಸ್ ಮಾಡಿ. ಒಂದು ವೇಳೆ ಮಣ್ಣಿನ ಮಡಿಕೆ ಇಲ್ಲದೆ ಇದ್ದ ಪಕ್ಷದಲ್ಲಿ ಸ್ಟೀಲ್ ಪಾತ್ರೆಗೆ ಹಾಕಿ.

ಆದರೆ ಯಾವುದೇ ಕಾರಣಕ್ಕೂ ಸಿಲ್ವರ್ ಪಾತ್ರೆಗೆ ಹಾಕಬೇಡಿ. ಈ ರೀತಿ ಪಾತ್ರೆಗೆ ನೆಲ್ಲಿಕಾಯಿ ಪೇಸ್ಟ್ ಹಾಗೂ ಎಣ್ಣೆ ಮತ್ತು ನೀರನ್ನು ಹಾಕಿದ ಮೇಲೆ ಕಡಿಮೆ ಉರಿಯಲ್ಲಿ ಚೆನ್ನಾಗಿ ಕುದಿಸಿ ನೀರಿನ ಅಂಶವೆಲ್ಲ ಆವಿಯಾಗಿ ತೆಂಗಿನ ಎಣ್ಣೆ ಅಥವಾ ಹರಳೆಣ್ಣೆ ಜೊತೆ ನೀವು ಹಾಕಿದ ನೆಲ್ಲಿಕಾಯಿ ಪೇಸ್ಟ್ ಚೆನ್ನಾಗಿ ಮಿಕ್ಸ್ ಆಡಬೇಕು ಆಗ ಸ್ಟವ್ ಆಫ್ ಮಾಡಿ ಎಣ್ಣೆಯನ್ನು ಆರಲು ಬಿಡಿ.

ಒಂದು ಶುದ್ಧವಾದ ಕಾಟನ್ ಬಟ್ಟೆ ತೆಗೆದುಕೊಂಡು ಈ ಎಣ್ಣೆಯನ್ನು ಶೋಧಿಸಿ ಒಂದು ಡಬ್ಬದಲ್ಲಿ ಹಾಕಿ ಇಟ್ಟುಕೊಳ್ಳಿ. ಇದನ್ನು ಪ್ರತಿದಿನ ರಾತ್ರಿ ಮಲಗುವಾಗ ಕೂದಲಿನ ಬುಡಕ್ಕೆ ಹಾಕಿ, ಚೆನ್ನಾಗಿ ತಲೆ ಬಾಚಿ ಮಲಗಿ. ಕೂದಲಿನ ಆರೋಗ್ಯ ಸುಧಾರಿಸುವುದರ ಜೊತೆಗೆ ನಿದ್ರಾಹೀನತೆ, ತಲೆನೋವು, ಅತಿಯಾದ ಒತ್ತಡ ಈ ಸಮಸ್ಯೆಗಳಿಗೂ ಕೂಡ ಇದು ಔಷಧಿಯಂತೆ ಕೆಲಸ ಮಾಡುತ್ತದೆ. ಈ ಮನೆ ಮದ್ದು ಉತ್ತಮವಾದ ರಿಸಲ್ಟ್ ಕೊಡದಿದ್ದರೆ ಶಿರೋಧಾರ ಚಿಕಿತ್ಸೆಯನ್ನು ಪಡೆಯಬಹುದು.

https://youtu.be/0UybKlKId8U?si=gUQDs4Q5SVLzjvTX

ಮನೆಗೆ ಎಷ್ಟು ಬಾಗಿಲು, ಎಷ್ಟು ಕಿಟಕಿ ಇರಬೇಕು ಹಾಗೂ ಯಾವ ದಿಕ್ಕಿನಲ್ಲಿರಬೇಕು ಗೊತ್ತಾ.? ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ ನೋಡಿ.!

 

ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದ ಒಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಮನೆ ಇಲ್ಲದಿದ್ದರೆ ನಮ್ಮ ಆದಾಯದಲ್ಲಿ ಅತಿ ದೊಡ್ಡ ಭಾಗವನ್ನು ಬಾಡಿಗೆಗೆ ಕಟ್ಟಬೇಕು ಹಾಗಾಗಿ ಮನೆ ಒಂದು ಅತ್ಯಮೂಲ್ಯ ಆಸ್ತಿ ಅಂತಲೂ ಹೇಳಬಹುದು.

ಆದರೆ ಈ ಮನೆ ಮೂಲಭೂತ ಸೌಕರ್ಯವನ್ನು ಹೊಂದಿರಬೇಕು ಎನ್ನುವುದು ಮಾತ್ರವಲ್ಲದೆ ನಮ್ಮ ಅನುಕೂಲತೆಗೆ ಬೇಕಾದ ಎಲ್ಲಾ ಸವಲತ್ತುಗಳು ಹೊಂದಿರಬೇಕು, ಜೀವನಪೂರ್ತಿ ಆ ಮನೆಯಲ್ಲೇ ಕುಟುಂಬದ ಜೊತೆ ಸಂತೋಷವಾಗಿ ಜೀವನ ನಡೆಸಬೇಕು ಎನ್ನುವುದೇ ಮನೆ ಕಟ್ಟುವವರ ಆಸೆ.

ಆದರೆ ಇದೆಲ್ಲಾ ಆಗಬೇಕು ಎಂದರೆ ಮನೆ ಕಟ್ಟುವಾಗಲೇ ವ್ಯವಸ್ಥಿತವಾಗಿ ಕಟ್ಟಬೇಕು ಹಾಗೂ ವಾಸ್ತು ಎನ್ನುವ ವಿಷಯವನ್ನು ಮರೆಯಬಾರದು. ಕೆಲವು ಸಲ ವಾಸ್ತು ಸರಿ ಇಲ್ಲ ಎಂದರೆ ಖಂಡಿತವಾಗಿ ನೆಮ್ಮದಿ ಇರುವುದಿಲ್ಲ. ಮೊದಲು ವಾಸ್ತುವನ್ನು ಬಹಳ ನಿರ್ಲಕ್ಷಿಸಲಾಗುತ್ತಿತ್ತು. ಬಳಿಕ ಅದರ ಬಗೆಗೆ ಆಗಿರುವ ಸಂಶೋಧನೆಗಳನ್ನು ನಂಬಿ ಪುರಸ್ಕರಿಸಲಾಗುತ್ತಿದೆ.

ವಾಸ್ತು ಪ್ರಕಾರವಾಗಿ ಮನೆ ಕಟ್ಟಿಕೊಳ್ಳುವರು ಬಹಳ ನೆಮ್ಮದಿಯಾಗಿ ಆ ಮನೆಗಳಲ್ಲಿ ವಾಸಿಸುತ್ತಿರುವುದು ಹಾಗೂ ವಾಸ್ತು ದೋಷ ಗೃಹಗಳಲ್ಲಿ ವಾಸಿಸುವವರು ನಾನಾ ಬಗೆಯ ಕ’ಷ್ಟಗಳಿಗೆ ಈಡಾಗುತ್ತಿರುವುದು ಅನೇಕ ಉದಾಹರಣೆಗಳಿಂದ ಮನವರಿಕೆಯಾಗಿದೆ. ಹಾಗಾದರೆ ವಾಸ್ತು ಪ್ರಕಾರವಾಗಿ ಮನೆ ಹೇಗಿರಬೇಕು ಎಂದರೆ ಇದು ಬಹಳ ವಿಸ್ತಾರವಾದ ವಿಷಯ ಆದರೆ ಈ ಅಂಕಣದಲ್ಲಿ ಅದರ ಕೆಲ ಪ್ರಮುಖ ವಿಷಯದ ಬಗ್ಗೆ ಹೇಳುತ್ತಿದ್ದೇವೆ.

ಮನೆಗೆ ಗೋಡೆಗಳು ಮಾತ್ರವಲ್ಲದೆ ಕಿಟಕಿ ಬಾಗಿಲುಗಳು ಕೂಡ ಬಹಳ ಮುಖ್ಯ ಹೊರಗಿನಿಂದ ಗಾಳಿ, ಬೆಳಕು ಅದೃಷ್ಟವನ್ನು ಮನೆಗೆ ತರುವ ಹಾಗೂ ಮನೆಯಲ್ಲಿರುವ ನಕರಾತ್ಮಕತೆಯನ್ನು ಹೊರಗೆ ಕಳುಹಿಸುವ ವಾಹಿನಿಯಾದ ಈ ಕಿಟಕಿ ಬಾಗಿಲುಗಳು ಹೇಗಿರಬೇಕು ಎನ್ನುವುದರ ಬಗ್ಗೆ ವಾಸ್ತು ಹೀಗೆ ಹೇಳುತ್ತದೆ.

* ಮನೆಯಲ್ಲಿ ಯಾವಾಗಲೂ ಕಿಟಕಿ ಹಾಗೂ ಬಾಗಿಲುಗಳ ಸಂಖ್ಯೆಯನ್ನು ಪ್ರತ್ಯೇಕವಾಗಿ ಲೆಕ್ಕಕ್ಕೆ ತೆಗೆದುಕೊಂಡು ಅವುಗಳನ್ನು ಸಮ ಸಂಖ್ಯೆಯಲ್ಲಿ ಇಡಬೇಕು. ಬೆಸ ಸಂಖ್ಯೆಯಲ್ಲಿ ಇದ್ದರೆ ಕಷ್ಟಗಳು ಹೆಚ್ಚು ಎಂದು ಹೇಳಲಾಗುತ್ತದೆ. ಮತ್ತು ಆ ಮನೆ ಯಾವುದಾದರೂ ಒಂದು ವಿಷಯದಿಂದಾಗಿ ಕುಖ್ಯಾತಿಗೆ ಒಳಗಾಗುತ್ತದೆ. ಎಲ್ಲರೂ ಆ ಘಟನೆಯನ್ನು ಉದ್ದೇಶಿಸಿ ಮನೆಯನ್ನು ತೋರಿಸಿ ಮಾತನಾಡಲು ಆರಂಭಿಸುತ್ತಾರೆ, ಅಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಲಾಗುತ್ತದೆ.

* ನಾವು ಒಂದೇ ಕಟ್ಟಡದಲ್ಲಿ ವಾಸವಿದ್ದು ಅನೇಕ ಮನೆಗಳನ್ನು ಬಾಡಿಗೆ ಕೊಟ್ಟಿದ್ದೇವೆ ಎಂದರೆ ನಾವು ವಾಸಿಸುವಂತಹ ಮನೆಯಲ್ಲಿ ಎಷ್ಟು ಕಿಟಕಿ ಬಾಗಿಲು ಇರುತ್ತವೆ ಅವುಗಳನ್ನು ಮಾತ್ ಪರಿಗಣನೆಗೆ ತೆಗೆದುಕೊಳ್ಳಬೇಕು.
* ಡ್ಯುಪ್ಲೆಕ್ಸ್, ತ್ರಿಪ್ಲೆಕ್‌ಸ್ ಮನೆಗಳಲ್ಲಿ ವಾಸಿಸುವವರು ಪೂರ್ತಿ ಮನೆನಲ್ಲಿರುವ ಕಿಟಕಿ ಹಾಗೂ ಬಾಗಿಲುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.

* ಇನ್ನು ಮುಖ್ಯ ಬಾಗಿಲು ಎಲ್ಲಿರಬೇಕು ಎಂದು ನೋಡುವುದಾದರೆ ಮನೆ ಬೌಂಡರಿಗೆ 32 ಪಾದಗಳಿರುತ್ತವೆ, ಅದರಲ್ಲಿ ಬಲಗಡೆಯಿಂದ ಒಳಗಿನಿಂದ ನಿಂತು ಹೊರಗಿನ ಕಡೆಗೆ ಲೆಕ್ಕ ಹಾಕಿದಾಗ ಪೂರ್ವದಿಂದ ಲೆಕ್ಕ 3&4 ಪಾದವು, ದಕ್ಷಿಣದಲ್ಲಿ 3&4 ನೇ ಪಾದವು ಪಶ್ಚಿಮದಲ್ಲಿ 4&5 ಪಾದವು, ಉತ್ತರದಿಂದ ಮ 3,4 & 5 ‌ನೇ ಪಾದವು ಹೆಚ್ಚು ಸೂಕ್ತ ಎಂದು ಹೇಳಲಾಗುತ್ತದೆ.

* ಯಾವುದೇ ಭಾಗವನ್ನು ಒಂಬತ್ತು ವಿಭಾಗ ಮಾಡಿ ಬಲಗಡೆಯಿಂದ ಲೆಕ್ಕ ಹಾಕುತ್ತು ಬಂದಾಗ ಸೂರ್ಯನಿಂದ ರಾಹು ಕೇತುವರಿಗೂ ಇರುವ ಸಾಲಿನಲ್ಲಿ ನಾಲ್ಕನೇ ಸ್ಥಾನಕ್ಕೆ ಬರುವ ಬುಧನ ಪಾದದ ಭಾಗ‌ವು ಯಾವುದೇ ಬಾಗಿಲು ಇಡುವುದಕ್ಕೆ ಸೂಕ್ತ ಸ್ಥಳ ಎಂದು ಹೇಳಲಾಗುತ್ತದೆ.
*10,20,30 ಈ ರೀತಿ ಸೊನ್ನೆ ಬರುವ ಸಂಖ್ಯೆಗಳು ಶುಭವಲ್ಲ ಎಂದು ಕೆಲವರು ಭಾವಿಸುತ್ತಾರೆ. ಆದರೆ ಇದು ತಪ್ಪು. ಇವುಗಳು ಸಮಸಂಖ್ಯೆಯಾಗಿರುವುದರಿಂದ ಯಾವುದೇ ದೋಷಗಳಿರುವುದಿಲ್ಲ

* ಉಚ್ಚ ಸ್ಥಾನಗಳು ಎಂದು ಹೇಳಲಾಗುವ ಪೂರ್ವ ಈಶಾನ್ಯ, ಉತ್ತರ ಈಶಾನ್ಯ, ಪಶ್ಚಿಮ ವಾಯುವ್ಯ, ದಕ್ಷಿಣ ಆಜೇಞ ಈ ನಾಲ್ಕು ಭಾಗಗಳು ಕೂಡ ಬಾಗಿಲು ಹಾಗೂ ಕಿಟಕಿ ಇಡುವುದಕ್ಕೆ ಸೂಕ್ತ ಎಂದು ಹೇಳಲಾಗುತ್ತದೆ.
* ದಕ್ಷಿಣ ನೈರುತ್ಯ ಅಥವಾ ಪಶ್ಚಿಮ ನೈರುತ್ಯದಲ್ಲಿ ಯಾವುದೇ ಕಾರಣಕ್ಕೂ ಕಿಟಕಿ ಅಥವಾ ಬಾಗಿಲು ಓಪನಿಂಗ್ ಇರಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

 

ಪತಿ-ಪತ್ನಿಯರಿಗೆ ವಿಶೇಷ ಸೂಚನೆಗಳು, ಪ್ರತಿ ದಂಪತಿಗಳು ತಿಳಿದುಕೊಳ್ಳಬೇಕಾದ ವಿಷಯ ಇದು, ಇದನ್ನು ಅರಿತವರ ಮನೆ ನಂದನವನವಾಗುತ್ತದೆ.!

 

ಮನೆಯಲ್ಲಿ ಕ’ಲ’ಹ ಬರಲು, ಜ’ಗ’ಳ’ವಾಗಲು ಸಣ್ಣ ಪುಟ್ಟ ಮನಸ್ತಾಪಗಳಿಂದ ಇಬ್ಬರು ಬೇರೆಯಾಗುವ ಮಟ್ಟಕ್ಕೆ ಹೋಗಲು ಚಿಕ್ಕ ಚಿಕ್ಕ ವಿಷಯಗಳು ಕಾರಣವಾಗಿರುತ್ತವೆ. ಕೆಲವೊಮ್ಮೆ ಪರಿಸ್ಥಿತಿ ಕೈಮೀರಿ ಹೋದಮೇಲೆ ಪಶ್ಚಾತಾಪ ಪಡುವುದಕ್ಕಿಂತ ಬೇರೆಯವರ ಉದಾಹರಣೆಗಳನ್ನು ನೋಡಿ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

ಯಾಕೆಂದರೆ ಎಲ್ಲ ತಪ್ಪುಗಳನ್ನು ನಾವೇ ಮಾಡಿ ಕಲಿಯುವಷ್ಟು ಬದುಕು ಸುದೀರ್ಘವಾಗಿಲ್ಲ ಹಾಗಾಗಿ ಪತಿ-ಪತ್ನಿ ಮಧ್ಯೆ ಅನ್ಯೋನ್ಯತೆ ಹೆಚ್ಚಾಗಲು ಹಾಗೂ ಬಿರುಕಾಗದಂತೆ ಬಾಂಧವ್ಯ ಕಾಪಾಡಿಕೊಳ್ಳಲು ಇಬ್ಬರು ಈ ವಿಚಾರಗಳನ್ನು ಅರಿತುಕೊಳ್ಳಬೇಕು.

* ಹೊರಗಡೆ ದುಡಿಯಲು ಹೋಗುವ ಗಂಡಸರಿಗೆ ಸಾವಿರಾರು ಸಮಸ್ಯೆಗಳು ಇದ್ದೇ ಇರುತ್ತವೆ, ಹಾಗಾಗಿ ಪತ್ನಿ ಯಾವಾಗಲೂ ಗಂಡನೊಂದಿಗೆ ಸಮಯಮದಿಂದ ಮಾತನಾಡಬೇಕು. ಇದು ಪತ್ನಿಗೆ ಮಾತ್ರವಲ್ಲದೆ ಪತಿಗೂ ಅನ್ವಯಿಸುತ್ತದೆ. ಪತ್ನಿಗೂ ಕೂಡ ಅವರದ್ದೇ ಆದ ಸಮಸ್ಯೆಗಳು ಇರುತ್ತವೆ, ಹಾಗಾಗಿ ಯಾವುದೋ ಟೆನ್ಶನ್ ನ್ನು ತಂದು ಹೆಂಡತಿ ಮೇಲೆ ಹಾಕುವುದನ್ನು ಮಾಡಬಾರದು.

* ಪತಿ ಮನೆಗೆ ಬರುತ್ತಿದ್ದಂತೆ ಸಮಸ್ಯೆಗಳ ಪಟ್ಟಿ ಹಿಡಿದುಕೊಂಡು ನಿಲ್ಲಬೇಡಿ. ಮನೆಗೆ ಬಂದವರನ್ನು ಸ್ವಾಗತಿಸಿ, ಅವರಿಗೆ ವಿಶ್ರಾಂತಿ ಮಾಡಲು ಸಮಯ ಕೊಡಿ ನಂತರ ಸಮಯ ಸಂದರ್ಭ ನೋಡಿಕೊಂಡು ನಿಮ್ಮ ಸಮಸ್ಯೆಗಳು ಏನು ಎನ್ನುವುದೇ ಬಗ್ಗೆ ಚರ್ಚೆ ಮಾಡಿ.

* ಮನುಷ್ಯ ಎಂದ ಮೇಲೆ ತ’ಪ್ಪು ಮಾಡುವುದು ಸಹಜ, ತ’ಪ್ಪು ದಾರಿ ಹಿಡಿದಾಗ ತಿದ್ದುವ ಹಾಗೂ ಕಣ್ಣಿಟ್ಟು ಕಾಪಾಡಿಕೊಳ್ಳುವ ಜವಾಬ್ದಾರಿ ಪತ್ನಿಯದ್ದಾಗಿರುತ್ತದೆ ಮತ್ತು ಅವರಿಗೆ ಅರ್ಥವಾಗುವಂತೆ ಮತ್ತೊಮ್ಮೆ ಅವರು ಆ ತಪ್ಪನ್ನು ಮಾಡದಂತೆ ಬುದ್ದಿವಂತಿಕೆಯಿಂದ ಸರಿದಾರಿಗೆ ತರಲು ನೋಡಬೇಕು.

* ದುಡ್ಡಿದ್ದಾಗ ಗಂಡನ ಜೊತೆ ಚೆನ್ನಾಗಿರುವುದು ಆತನಿಗೆ ಆದಾಯ ಕಡಿಮೆ ಆದಾಗ ಸದಾ ಜ’ಗ’ಳ ಆಡುವುದು ಒಳ್ಳೆ ಹೆಂಡತಿ ಲಕ್ಷಣವಲ್ಲ. ಕಷ್ಟ ಸುಖ ಏನೇ ಬಂದರೂ ಪತಿಯ ಜೊತೆಗಿದ್ದು ಧೈರ್ಯ ತುಂಬಾ ಬೇಕು ಅನಾರೋಗ್ಯದ ಸಮಯದಲ್ಲಿ ಕಾಳಜಿ ಮಾಡಬೇಕು. ಇದು ಆದರ್ಶ ಪತ್ನಿ ಲಕ್ಷಣ.

* ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟ ಮೇಲೆ ಹೆಂಡತಿಗೆ ಆ ಮನೆಯೂ ಕೂಡ ಸ್ವಂತ. ಗಂಡನನ್ನು ಮಾತ್ರವಲ್ಲದೆ ಗಂಡನ ತಂದೆ ತಾಯಿಯನ್ನು ಕೂಡ ಪ್ರೀತಿಸಿ ಕಾಳಜಿ ಮಾಡಬೇಕು, ಇದು ಗಂಡನಿಗೂ ಅನ್ವಯಿಸುತ್ತದೆ ಪತ್ನಿಯ ತಂದೆ ತಾಯಿಯನ್ನು ಗೌರವಿಸುವುದು ಆತನ ಕರ್ತವ್ಯ.

* ಪತಿಗೆ ಗೌರವವನ್ನು ಕೊಡಿ ಅವರ ಭಾವನೆಗಳಿಗೆ ಸ್ಪಂದಿಸಿ ಅವರ ನಿರ್ಧಾರಗಳಿಗೆ ಜೊತೆಯಾಗಿ. ಈ ರೀತಿ ಪತ್ನಿಯಾದವಳು ನಡೆದುಕೊಂಡರೆ ಪತಿಗೆ ಏನನ್ನಾದರೂ ಜಯಿಸಲು ಧೈರ್ಯ ಬರುತ್ತದೆ.

* ಸಣ್ಣಪುಟ್ಟ ವಿಷಯಗಳಿಗೂ ಅನುಮಾನ ಪಡುವುದು, ಎಲ್ಲದರ ಮೇಲೂ ಕುತೂಹಲ ತೋರಿಸುವುದು ಈ ರೀತಿ ಮಾಡುವುದು ಗಂಡಂದಿರಿಗೆ ಇಷ್ಟ ಆಗುವುದಿಲ್ಲ. ಇದೇ ರೀತಿ ಹೆಂಡತಿಗೂ ಸ್ವಾತಂತ್ರ್ಯ ಬೇಕು. ಆದರೆ ಇಬ್ಬರೂ ಕೂಡ ಒಬ್ಬರ ನಂಬಿಕೆಯನ್ನು ಇನ್ನೊಬ್ಬರು ಮುರಿಯಬಾರದು. ಪರಸ್ಪರ ನಂಬಿಕೆ ಸಂಸಾರದ ರಥ ನಡೆಯುವುದಕ್ಕೆ ಗಾಲಿ ಎಂದೇ ಹೇಳಬಹುದು.

* ಪತ್ನಿಯೂ ಧರ್ಮ ಮಾರ್ಗದಲ್ಲಿ ನಡೆಯಬೇಕು ಇದರಿಂದ ಮನೆಯಲ್ಲಿರುವ ಮಕ್ಕಳು ತಾಯಿಯನ್ನು ಮೊದಲ ಗುರುವಾಗಿ ನೋಡಿ ಕಲಿಯುತ್ತಾರೆ ಮತ್ತು ಪತಿಗೂ ಕೂಡ ಪತ್ನಿಯನ್ನು ನೋಡಿ ಗೌರವ ಬರುತ್ತದೆ.

* ಹೆಣ್ಣು ಮಕ್ಕಳಿಗೆ ತಾವು ಸುಖವಾಗಿ ರಾಣಿಯಂತೆ ಇರಬೇಕು ಎನ್ನುವ ಆಸೆ ಇರುತ್ತದೆ. ನೀವು ಈ ರೀತಿ ಇರಬೇಕು ನಿಮ್ಮ ಮನೆ ಅರಮನೆ ಆಗಬೇಕು ಎಂದರೆ ಮೊದಲು ನಿಮ್ಮ ಪತಿ ರಾಜನಾಗುವಂತೆ ಅವರಿಗೆ ಜೀವನದಲ್ಲಿ ಯಶಸ್ವಿಯಾಗಲು ಸಹಕರಿಸಬೇಕು. ಅವರ ಕನಸುಗಳಿಗೆ ಆಸೆಗಳಿಗೆ ನೀವು ಆಸರೆಯಾಗಿದ್ದರೆ ನಿಮ್ಮ ಇಡೀ ಕುಟುಂಬ ಸಂತೋಷವಾಗಿರಬಹುದು.

* ಪತಿ ತನ್ನ ವ್ಯಾಪಾರದ ಅಥವಾ ಉದ್ಯೋಗದ ವಿಚಾರವನ್ನು ಕೂಡ ಮನೆಯಲ್ಲಿ ಮಾತನಾಡುವುದು ಸೂಕ್ತವಲ್ಲ ಮನೆಗೆ ಬಂದ ಮೇಲೆ ಹೆಂಡತಿ ಮಕ್ಕಳಿಗೆ ಸಮಯ ಕೊಡಬೇಕು.
* ಬಿಡುವಿದ್ದಾಗ ಪತ್ನಿಯರಿಗೆ ಮನೆ ಕೆಲಸಗಳಿಗೆ ಸಹಾಯ ಮಾಡಿ ಆಗ ಆತ್ಮೀಯತೆ ಹೆಚ್ಚಾಗುತ್ತದೆ. ಹೆಣ್ಣು ಮಕ್ಕಳಿಗೆ ದುಡಿಯುವ ಅವಕಾಶವಿದ್ದರೆ ಆಸಕ್ತಿ ಇದ್ದರೆ ಅನಿವಾರ್ಯತೆ ಇದ್ದರೆ ನೀವು ಕೂಡ ಕೆಲಸಕ್ಕೆ ಹೋಗಿ ಪತಿಯ ಕಷ್ಟಗಳಿಗೆ ನೆರವಾಗಿ.

* ಪ್ರಾಪಂಚಿಕ ಸುಖ, ಹಣ, ಬಟ, ಟೆ ಐಶಾರಾಮಿ ವಸ್ತುಗಳು ಮತ್ತು ಸೌಂದರ್ಯ ಇವುಗಳೇ ಮುಖ್ಯವಲ್ಲ ಇವುಗಳಿಗೆ ಹೆಚ್ಚು ಬೆಲೆ ಕೊಡಬೇಡಿ.
* ಗಂಡ ಕೋ’ಪಗೊಂಡಾಗ ಹೆಂಡತಿ, ಹೆಂಡತಿಗೆ ಕೋ’ಪ ಬಂದಾಗ ಗಂಡ ಸಮಾಧಾನ ಮಾಡಬೇಕು. ಇಬ್ಬರ ನಡುವೆ ಇಗೋ ಬರಬಾರದು.
* ಹೆಣ್ಣು ಮಕ್ಕಳಿಗೆ ತವರಿನ ಬಗ್ಗೆ ಅತಿಯಾದ ವ್ಯಾಮೋಹ ಇರಬಾರದು.

ಈ ಎಣ್ಣೆ ಹಚ್ಚಿದ್ರೆ ಉದುರಿದ ಕೂದಲು ಮತ್ತೆ ಹುಟ್ಟುತ್ತೆ.! ಬಿಳಿ ಕೂದಲ ಸಮಸ್ಯೆಗೆ ರಾಮಬಾಣ.! ಮನೆಯಲ್ಲೇ ತಯಾರಿಸಿ ಈ ನೈಸರ್ಗಿಕ ಎಣ್ಣೆ

 

ತಲೆ ಕೂದಲು ಕಪ್ಪಾಗಿ ದಟ್ಟವಾಗಿ ಉದ್ದವಾಗಿ ಸೊಪಾಪಾಗಿದ್ದರೆ ನೋಡಲು ಅಂದ. ಹೆಣ್ಣು ಮಕ್ಕಳಿಗೆ ಉದ್ದ ಕೂದಲೇ ಲಕ್ಷಣ ಎಂದು ಹೇಳುತ್ತಾರೆ. ಈ ಕೂದಲನ್ನ ಆರೋಗ್ಯ ಕಾಪಾಡಿಕೊಳ್ಳಲು ಸುಧಾರಿಸಲು ಅದನ್ನು ಮೈನ್ಟೈನ್ ಮಾಡಲು ಈಗಿನ ಕಾಲದ ಜನರು ಸಾಕಷ್ಟು ಹಣ ಸುರಿದು ಎಣ್ಣೆ, ಶಾಂಪೂ, ಕಂಡೀಶನ್ ಇದೆಲ್ಲವನ್ನು ಖರೀದಿಸುತ್ತಾರೆ.

ಹಾಗೆ ಗಂಡು ಮಕ್ಕಳಿಗೂ ಕೂಡ ಕಡಿಮೆ ಏನಿಲ್ಲ, ಬೋಳು ತಲೆ ಇದ್ದರೆ ಹೆಚ್ಚು ವಯಸ್ಸಾದವರ ರೀತಿ ಕಾಣುತ್ತೆವೆ ಎಂದು ತಲೆ ಕೆಡಿಸಿಕೊಳ್ಳುತ್ತಾರೆ .ಹೀಗಾಗಿ ಉದುರಿದ ಕೂದಲು ಮತ್ತೆ ಹುಟ್ಟುವುದಕ್ಕೆ, ಮಾತ್ರವಲ್ಲದೆ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುವಂತಹ ಒಂದು ಉತ್ತಮವಾದ ಆಯುರ್ವೇದಿಕ್ ಔಷಧಿಯ ಬಗ್ಗೆ ವಿಷಯವನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.

ಕೇಶಾಮೃತ ತೈಲ ಎಂದು ಕರೆಯಲಾಗುವ ಈ ಒಂದು ಔಷಧಿಯನ್ನು ‌ನಿಮ್ಮ ಮನೆಯಲ್ಲಿಯೇ ಇರುವ ಹಾಗೂ ಮನೆಯ ಅಕ್ಕ-ಪಕ್ಕದಲ್ಲಿಯೇ ದ ಸಿಗುವ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳನ್ನು ಬಳಸಿಕೊಂಡು ನ್ಯಾಚುರಲ್ ಆಗಿ ತಯಾರಿಸಬಹುದು ಮತ್ತು ಇದರ ಬಳಕೆಯಿಂದ ನಿಮ್ಮ ತಲೆ ಕೂದಲು ಚೆನ್ನಾಗಿ ಆಗುವಂತೆ ಮಾಡಳಬಹುದು.

ಎಲ್ಲರಿಗೂ ಕೂಡ ಕೂದಲ ಆರೋಗ್ಯ ಚೆನ್ನಾಗಿರಬೇಕು ಎನ್ನುವ ಆಸೆ ಇರುತ್ತದೆ ಆದರೆ ಎಲ್ಲರೂ ಅಷ್ಟು ಕಾಳಜಿ ಮಾಡಲು ಸಮಯಾವಕಾಶ ಕೂಡ ಇರುವುದಿಲ್ಲ. ಈ ರೀತಿ ಮಾಡುವ ನಿರ್ಲಕ್ಷದಿಂದ ಮುಂದೆ ಪಶ್ಚಾತಾಪ ಪಡುವ ರೀತಿ ಆಗುತ್ತದೆ ಹಾಗಾಗಿ ಕೂದಲು ಬೆಳೆಯುವುದಕ್ಕೆ ಮತ್ತು ಕೂದಲಿನ ಹಾರೈಕೆಗೆ ಮಾತ್ರವಲ್ಲದೆ ಕೂದಲು ಚೆನ್ನಾಗಿರಬೇಕು ಎನ್ನುವ ಮುಂಜಾಗ್ರತೆಯಿಂದ ಸಹ ನೀವು ಈ ಇದನ್ನು ಬಳಸಬಹುದು. ಯಾವುದೇ ಖರ್ಚಿಲ್ಲದೆ ಈ ಕೇಶ ಅಮೃತ ತೈಲವನ್ನು ತಯಾರಿಸಲು ಬೇಕಾಗಿರುವ ವಸ್ತುಗಳ ಪಟ್ಟಿ ಹೀಗಿದೆ ನೋಡಿ.

ದಾಸವಾಳ, ಮೆಹಂದಿ, ಬೃಂಗರಾಜ, ಅಲೋವೆರಾ, ಕಪ್ಪು ತುಳಸಿ ಕರಿಬೇವು, ಬೇವು, ಬೆಟ್ಟದ ನೆಲ್ಲಿಕಾಯಿ, ದಾಸವಾಳ ‌, ತಂಗಡಿ ಹೂವು, ಕಣಗಲೆ ಹೂವು, ವನಗನ್ನೆ, ಅಡಿಕೆ ಸೊಪ್ಪು, ಕರಿಲೆಕ್ಕೆ, ಸಹದೇವಿ, ಕಾಡು ತುಳಸಿ, ಔಡಲ ಗೊಂಚಲು ಮತ್ತು ಮಾತಂಗಿ ಸಸ್ಯ, ಆಲದ ಬೀಳಲಲಿನ ಕುಡಿ ಇಂಗಳಾರದ ಕಾಯಿ ತಾರೆಕಾಯಿ, ಶುದ್ಧವಾದ ಅಳಲೇಕಾಯಿ, ಅಂಟವಾಳದ ಕಾಯಿ ಮುಂತಾದ 32 ಬಗೆಯ ಗಿಡಮೂಲಿಕೆಗಳನ್ನು ಹಾಕಿ ಕಲ್ಕವನ್ನು ತಯಾರಿಸಿ ಕೊಳ್ಳಬೇಕು.

ನಂತರ ಅದಕ್ಕೆ ಶುದ್ಧವಾದ ಕೊಬ್ಬರಿ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಈ ಕಲ್ಕಕ್ಕೆ ಹಾಕಿ ಮಿಕ್ಸ್ ಮಾಡಿ ಬಿಸಿಲಿನಲ್ಲಿ ಇಡಿ‌. ಏಳು ದಿನಗಳವರೆಗೆ ಸೂರ್ಯನ ಬಿಸಿನಲ್ಲಿ ಇಟ್ಟು ನಂತರ ಸ್ವಲ್ಪ ಬಿಸಿ ಮಾಡಬೇಕು. ನೀರಿನಾಂಶವೆಲ್ಲಾ ಹೋಗುವವರೆಗೂ ಪ್ರತಿನಿತ್ಯ ಹೀಗೆ ಮಾಡಬೇಕು ಎಣ್ಣೆ ಕಲ್ಕ ಎಲ್ಲಾ ಚೆನ್ನಾಗಿ ಬೆರೆತ ನಂತರ ಈಗ ಗಿಡಮೂಲಿ ಕೆಳಗಡೆ ಔಷಧಿ ಅಂಶ ಎಣ್ಣೆಗೂ ಬಂದಿರುತ್ತದೆ ಅದನ್ನು ಶೋಧಿಸಿ ನೆತ್ತಿಗೆ ಹಾಗೂ ಕೂದಲಿಗೆ ಹಚ್ಚಲು ಬಳಸಬಹುದು ಬಳಸಬಹುದು.

ತಲೆ ಕೂದಲಿನ ನಾನಾ ರೀತಿಯ ಸಮಸ್ಯೆಗಳಾದ ತಲೆ ಹೊಟ್ಟು, ಕೂದಲು ಉದುರುವುದು, ಬೇಗ ಬಿಳಿ ಆಗುವುದು, ಕೂದಲು ಸಣ್ಣ ಇರುವುದು ಇತ್ಯಾದಿ ಎಲ್ಲಾ ಸಮಸ್ಯೆಗೂ ಪರಿಹಾರ ವಾಗಿರುತ್ತದೆ. ಇದನ್ನು ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ ನಿದ್ದೆ ಮಾಡಿದರೆ ಬಹಳ ಚೆನ್ನಾಗಿ ರಿಲಾಕ್ಸ್ ಆಗುತ್ತದೆ. ಮಾನಸಿಕ ಒತ್ತಡ ಟೆನ್ಶನ್ ನಿದ್ರಾ ಹೀನತೆ ಈ ಸಮಸ್ಯೆಗಳು ಕೂಡ ಪರಿಹಾರ ಆಗುತ್ತವೆ.

ವ್ಯವಹಾರದಲ್ಲಿ ವಿಘ್ನ ಕೆಲಸಕಾರ್ಯದಲ್ಲಿ ತೊಂದರೆ, ಹಣಕಾಸು ಸಮಸ್ಯೆ, ಆರೋಗ್ಯದಲ್ಲಿ ಏರುಪೇರು ಏನೇ ಸಮಸ್ಯೆ ಇರಲಿ, ಬಿಳಿ ಸಾಸಿವೆಯಿಂದ ಈ ಉಪಾಯವನ್ನು ಮಾಡಿ ಸಾಕು.!

 

ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಬೆಳೆಯುತ್ತಾ ಹೋದಂತೆ ಜೀವನದಲ್ಲಿ ನಮ್ಮದೇ ಆದ ಒಂದು ಸ್ಥಾನ ಮಾನ ಸಿಗಬೇಕು ಎಂದು ಹಂಬಲಿಸುತ್ತೇವೆ. ಅದಕ್ಕಾಗಿ ಹಂತ ಹಂತವಾಗಿ ಜೀವನದ ಮೇಲೇರಲು ನಾನಾ ಪ್ರಯತ್ನಗಳನ್ನು ಮಾಡುತ್ತೇವೆ. ನಾವು ಎಷ್ಟೇ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದರು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಕೆಲವೊಮ್ಮೆ ನಾವು ಅಂದುಕೊಂಡ ಕೆಲಸ ಆಗುವುದಿಲ್ಲ.

ಕಷ್ಟಪಟ್ಟು ಮಾಡಿದ ಶ್ರಮವೆಲ್ಲವೂ ಕಣ್ಣ ಮುಂದೆ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಆಗ ನಮ್ಮ ಅದೃಷ್ಟ ಕೆಟ್ಟಿದೆ ಎನ್ನುವುದಕ್ಕೆ ಪ್ರಮುಖ ನಿರ್ದರ್ಶನ ಎಂದೇ ಭಾವಿಸಬಹುದು. ಆ ಘಳಿಗೆಯಲ್ಲಿ ಮನಸ್ಸಿಗೆ ಆಗುವ ನೋ’ವು ಅಷ್ಟಿಷ್ಟಲ್ಲ. ಯಾವುದೋ ಒಂದು ಬಾರಿ ಈ ರೀತಿ ಆಗಿದ್ದರೆ ಸಹಿಸಬಹುದು ಆದರೆ ಕೆಲವರಿಗೆ ಪ್ರತಿ ಬಾರಿಯೂ ಕೂಡ ಹೇಗಾಗುತ್ತದೆ.

ಜೀವನದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದ್ದ ವ್ಯಕ್ತಿಯ ಎಲ್ಲಾ ಕೆಲಸಗಳ ಕೆಡಲು ಶುರು ಆಗುತ್ತದೆ. ಯಾವ ಕಾರ್ಯ ಕೈಗೆತ್ತಿಕೊಂಡರು ನೆರವೇರುವುದಿಲ್ಲ. ಪ್ರಮುಖ ಕೆಲಸ ಕಾರ್ಯಗಳಿಗಾಗಿ ಮನೆಯಿಂದ ಹೊರಟಾಗ ಅಡ್ಡಿಗಳು ಎದುರಾಗುತ್ತವೆ ಅಥವಾ ಎಲ್ಲಾ ಕಡೆಯಿಂದಲೂ ಅವಮಾನಗಳು ಆಗುತ್ತವೆ ಹಣ ಕಳೆದುಕೊಳ್ಳುತ್ತಾನೆ.

ದಿನದಿಂದ ದಿನಕ್ಕೆ ಬೆಳೆಯಬೇಕಾಗಿದ್ದವನು, ವ್ಯಾಪಾರ ವ್ಯವಹಾರದಲ್ಲೂ ಹಿನ್ನಡೆ ಹೊಂದಿಕೊಳ್ಳುತ್ತಾನೆ, ಉದ್ಯೋಗ ಸ್ಥಳದಲ್ಲಿಯೂ ಕೂಡ ಕಿರಿಕಿರಿ ಆರಂಭ ಆಗುತ್ತದೆ ಒಂದೇ ಸಮನೆ ಈ ರೀತಿ ನಾನಾ ಸಂಕಷ್ಟಗಳು ಎದುರಾಗಿ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದರೆ ಯಾವುದೋ ಕೆ’ಟ್ಟ ಶಕ್ತಿಯ ಪ್ರಭಾವ ಎಂದು ಅನುಮಾನ ಬರದೇ ಇರದು.

ಆಗ ಇವುಗಳ ಪರಿಹಾರ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಇದು ಮುಂದುವರೆದು ಅಷ್ಟ ಧರಿದ್ರಗಳು ಕಾಡಲು ಶುರುವಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ಮೊದಲಿನಂತೆ ಜೀವನವನ್ನು ಸಂತೋಷದಿಂದ ಕಳೆಯಬೇಕು ಎಂದರೆ ಈಗ ನಾವು ಹೇಳುವ ಈ ಒಂದು ಸಣ್ಣ ಉಪಾಯ ಮಾಡಿ ಸಾಕು.

ಕೆಲವೊಮ್ಮೆ ಜೀವನದಲ್ಲಿ ನಂಬಿಕೆ ಇಟ್ಟು ಮಾಡುವ ಸಣ್ಣ ಸಣ್ಣ ಉಪಾಯಗಳಿಂದ ಬಹಳ ಉತ್ತಮ ಪರಿಣಾಮಗಳು ಸಿಗುತ್ತವೆ. ಅದನ್ನು ನಮ್ಮ ಹಿರಿಯರು ತಿಳಿಸಿ ಹೋಗಿದ್ದಾರೆ ಅಂತಹದೇ ಒಂದು ಉತ್ತಮವಾದ ಪರಿಹಾರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಸಾಮಾನ್ಯವಾಗಿ ಈ ರೀತಿಯ ಸಮಸ್ಯೆಗಳು ಆದಾಗ ಅದನ್ನು ನರ ದೃಷ್ಟಿ ದೋ’ಷದಿಂದ ಅಥವಾ ಏಳಿಗೆ ಸಹಿಸಲಾಗದೆ ಹಿತ ಶ’ತ್ರುಗಳು ಮಾಡುವ ಪ್ರಯೋಗಗಳ ಪರಿಣಾಮ ಎಂದು ಭಾವಿಸಲಾಗುತ್ತದೆ. ಈ ರೀತಿ ಅನುಮಾನಗಳಿದ್ದಾಗ ಅವುಗಳು ಕಳೆಯಬೇಕು ಎಂದರೆ ಬಿಳಿ ಸಾಸಿವೆ ಹಾಗೂ ಉಪ್ಪಿನಿಂದ ದೃಷ್ಟಿ ತೆಗೆದುಕೊಳ್ಳಬೇಕು ಇದನ್ನು ಮನೆಯಲ್ಲಿ ಯಾರಾದರೂ ಹಿರಿಯರು ಇದ್ದರೆ ಅವರಿಂದ ಮಾಡಿಸಿಕೊಳ್ಳಬಹುದು ಅಥವಾ ನಮಗೆ ನಾವೇ ಕೂಡ ಮಾಡಿಕೊಳ್ಳಬಹುದು.

ಈ ರೀತಿ ಬಿಳಿ ಸಾಸಿವೆ ಹಾಗೂ ಉಪ್ಪಿನಿಂದ ದೃಷ್ಟಿ ತೆಗೆದು ನಿವಾಳಿಸಿದ ಬಿಳಿ ಸಾಸಿವೆ ಹಾಗೂ ಉಪ್ಪನ್ನು ಜೇಬಿನಲ್ಲಿ ಇಟ್ಟುಕೊಳ್ಳಬೇಕು. ಹೀಗೆ ಮಾಡಿದ ಮೇಲೆ ಅದ್ಭುತ ರೀತಿಯಲ್ಲಿ ಪರಿಣಾಮಗಳನ್ನು ಕಾಣುತ್ತೀರಿ. ಒಂದು ವೇಳೆ ಈ ರೀತಿ ಆದಮೇಲೂ ಕೂಡ ಹಣಕಾಸಿನ ಸಮಸ್ಯೆ ಮುಂದುವರೆದಿದೆ, ಆರ್ಥಿಕವಾಗಿ ಮುಗ್ಗಟ್ಟು ಎದುರಿಸುತ್ತಿದ್ದೀರಿ ಎಂದರೆ.

ಮಹಾತ್ರಿಪುರೇಶ್ವರಿ ಯಂತ್ರ ಅಥವಾ ತುಳಸಿ ಯಂತ್ರ ಅಥವಾ ಕಾಲಭೈರವ ಯಂತ್ರ ಇವುಗಳಲ್ಲಿ ಯಾವುದಾದರೂ ಒಂದನ್ನು ಧಾರಣೆ ಮಾಡಿ. ಈ ರೀತಿ ಮಾಡುವುದರಿಂದ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ಒಳ್ಳೆ ಬದಲಾವಣೆಗಳು ನಿಮ್ಮ ಬದುಕಿನಲ್ಲಿ ಉಂಟಾಗುತ್ತದೆ. ಬಹಳ ಉಪಯುಕ್ತವಾದ ಮಾಹಿತಿ ಇದಾಗಿತ್ತು ತಪ್ಪದೇ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಎರಡು ಹನಿ ಕಣ್ಣಿಗೆ ಈ ಎಣ್ಣೆ ಹಾಕಿ ನಂತರ ಆಗುವ ಚಮತ್ಕಾರ ನೋಡಿ.! ಎಲ್ಲಾ ರೀತಿಯ ಕಣ್ಣಿನ ಸಮಸ್ಯೆಗೆ ರಾಮ ಬಾಣ ಈ ಎಣ್ಣೆ.!

0

 

ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅದನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಕಣ್ಣಿಗೆ ಯಾವ ಎಣ್ಣೆ ಹಾಕಬೇಕು ಅಥವಾ ತುಪ್ಪವನ್ನು ಹಾಕಬೇಕು ಹಾಗೂ ಈ ರೀತಿ ಈ ವಿಧಾನ ಅನುಸರಿಸುವುದರಿಂದ ಕಣ್ಣಿನ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಕಣ್ಣಿಗೆ ನಾವು ಶುದ್ಧವಾದ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಬಳಸಬಹುದು ಹಾಗೂ ನಾಟಿ ಹಸುವಿನ ತುಪ್ಪ ಅಥವಾ ಎಮ್ಮೆಯ ತುಪ್ಪವನ್ನು ಬಳಸಬಹುದು. ಆದರೆ ಯಾವುದೇ ಕಾರಣಕ್ಕೂ ಜರ್ಸಿ ಹಸುವಿನ ತುಪ್ಪವನ್ನು ಬಳಸಕೂಡದು ಹೌದು ಇದನ್ನು ಹಾಕುವುದರಿಂದ ಅದರಲ್ಲಿ ಇರುವಂತಹ ಕೆಲವೊಂದಷ್ಟು ವಿಷಕಾರಿ ಅಂಶ ನಮ್ಮ ಕಣ್ಣಿಗೆ ಸೇರುತ್ತದೆ.

ಆದ್ದರಿಂದ ಇದು ಸೇವನಿಗೂ ಅಷ್ಟು ಒಳ್ಳೆಯದಲ್ಲ ಹಾಗೂ ಕಣ್ಣಿಗೆ ಹಾಕುವುದಕ್ಕೂ ಕೂಡ ಅಷ್ಟು ಒಳ್ಳೆಯದಲ್ಲ ಅದೇ ರೀತಿಯಾಗಿ ನಾಟಿ ಹಸುವಿನ ತುಪ್ಪವನ್ನು ಬಳಸುವುದರಿಂದ ಏನೆಲ್ಲಾ ಪ್ರಯೋಜನ ಎಂದು ನೋಡುವುದಾದರೆ ಅದರಲ್ಲಿ ಹಲವಾರು ರೀತಿಯ ಒಳ್ಳೆಯ ಪೋಷಕಾಂಶಗಳು ಇರುತ್ತದೆ ಇದು ನಮ್ಮ ಕಣ್ಣಿನಲ್ಲಿ ಇರುವಂತಹ ವಾತ ಪಿತ್ತ ಕಫದ ಸಮಸ್ಯೆಗಳನ್ನು ದೂರಮಾಡುತ್ತದೆ.

ಹಾಗಾದರೆ ಈ ದಿನ ಕಣ್ಣಿನ ವಿಚಾರವಾಗಿ ಸಂಬಂಧಿಸಿದಂತೆ ಪ್ರತಿಯೊಬ್ಬ ರಿಗೂ ಕಣ್ಣು ಎಷ್ಟು ಬಹಳ ಮುಖ್ಯವಾದದ್ದು ಹಾಗೂ ಅದರಿಂದ ನಾವು ಏನೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇವೆ ಈ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ನೋಡುವುದಾದರೆ ಪ್ರತಿಯೊಬ್ಬರಿಗೂ ಕೂಡ ಕಣ್ಣು ಬಹಳ ಪ್ರಮುಖವಾದಂತಹ ಅಂಗವಾಗಿದ್ದು ಇದರಿಂದ ಆ ವ್ಯಕ್ತಿಯ ಸೌಂದರ್ಯವೂ ಸಹ ಹೆಚ್ಚಾಗುತ್ತದೆ.

ಅಗ್ನಿ ತತ್ವದ ಸಂಕೇತ ಎಂದು ನಾವು ಕಣ್ಣನ್ನು ಹೇಳಬಹುದು. ಬಹಳ ಪ್ರಮುಖವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಕಣ್ಣಿನಲ್ಲಿ ಆಲೋಚಕ ಪಿತ್ತ ಇರುತ್ತದೆ. ಮತ್ತು ತರ್ಪಕ ಕಫ ಇರುತ್ತದೆ ಇವೆರಡರಿಂದ ಕಣ್ಣಿನಲ್ಲಿ ಹಲವಾರು ರೀತಿಯ ಕಾರ್ಯಗಳು ನಡೆಯುತ್ತಿರುತ್ತದೆ.

ಇವುಗಳಲ್ಲಿ ಅಸಮತೋಲನೆ ಉಂಟಾದರೆ ಕಣ್ಣಿನ ನರಗಳಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆದ್ದರಿಂದ ನಾವು ಕಣ್ಣಿನ ಆರೋಗ್ಯವನ್ನು ಬಹಳ ಜಾಗರೂಕತೆಯಿಂದ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಮೇಲೆ ಹೇಳಿದಂತೆ ಆಲೋಚಕ ಪಿತ್ತ ಹಾಗೂ ತರ್ಪಕ ಕಫ, ಉದಾನ ವಾಯುವಿನ ವ್ಯತ್ಯಾಸದಿಂದ ಕಣ್ಣಿಗೆ ಸಂಬಂಧಿಸಿದೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಇದನ್ನು ನಾವು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಎಂದರೆ ಮೇಲೆ ಹೇಳಿದಂತೆ ಕಣ್ಣಿಗೆ ಎಣ್ಣೆಯನ್ನು ಹಾಕುವ ವಿಧಾನ ಹಾಗೂ ಕಣ್ಣಿಗೆ ತುಪ್ಪವನ್ನು ಹಾಕುವ ವಿಧಾನ ಈ ಎಲ್ಲಾ ಸಮಸ್ಯೆಗಳನ್ನು ಸರಿ ಪಡಿಸುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ.

ಹಾಗೇನಾದರೂ ಈ ಸಮಸ್ಯೆಗಳು ಪ್ರಾರಂಭದ ಹಂತದಲ್ಲಿದ್ದರೆ ಅದನ್ನು ಈ ವಿಧಾನ ಅನುಸರಿಸುವುದರ ಮೂಲಕ ಸರಿಪಡಿಸಬಹುದು ಹಾಗೇನಾದರೂ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಉಲ್ಬಣವಾಗಿದ್ದರೆ ಆಯುರ್ವೇದದಲ್ಲಿ ಹಲವಾರು ರೀತಿಯ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಅದನ್ನು ತೆಗೆದುಕೊಳ್ಳುವುದರ ಮೂಲಕ ನೀವು ಇದನ್ನು ದೂರ ಮಾಡಬಹುದಾಗಿದೆ.

ಹಾಗಾದರೆ ಕಣ್ಣಿಗೆ ಎಣ್ಣೆ ಅಥವಾ ತುಪ್ಪವನ್ನು ಯಾವ ವಿಧಾನ ಅನುಸರಿಸುವುದರ ಮೂಲಕ ಅದನ್ನು ನಾವು ಹೇಗೆ ಬಳಸಬೇಕು ಎಂದು ನೋಡುವುದಾದರೆ. ರಾತ್ರಿ ಮಲಗುವ ಮುನ್ನ ಕಣ್ಣಿಗೆ ನಾಲ್ಕು ಹನಿ ಶುದ್ಧವಾದ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಅಥವಾ ಶುದ್ಧವಾದ ತುಪ್ಪವನ್ನು ಬಳಸಬಹುದು.

ಇದನ್ನು ಹಾಕಿ ಕಣ್ಣನ್ನು 20 ಬಾರಿ ಮುಚ್ಚಿ ತೆಗೆಯಬೇಕು. ಹೀಗೆ ಮಾಡು ವುದರಿಂದ ಕಣ್ಣಿನಲ್ಲಿರುವಂತಹ ಎಲ್ಲ ನರಮಂಡಲ ಕ್ರಿಯಾಶೀಲವಾಗುತ್ತದೆ. ನೀವು ಕಣ್ಣಿಗೆ ಎಣ್ಣೆ ಅಥವಾ ತುಪ್ಪವನ್ನು ಹಾಕುವುದರಿಂದ ಕೇವಲ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಮೆದುಳಿನ ಆರೋಗ್ಯ ವನ್ನು ಸಹ ಹೆಚ್ಚಿಸುತ್ತದೆ. ಆದ್ದರಿಂದ ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಇಲ್ಲದಿದ್ದರೂ ಈ ವಿಧಾನ ಅನುಸರಿಸುವುದು ಒಳ್ಳೆಯದು.

https://youtu.be/S2J1tFjS404?si=k9BnhsCJVbQfm3MR

ಹಣಕ್ಕಾಗಿ ಯಾರ ಮುಂದೆಯೂ ಕೈ ಚಾಚಬೇಕಿಲ್ಲ, ಈ ಒಂದು ಸಣ್ಣ ತಂತ್ರ ಮಾಡಿ ಸಾಕು ಕೈ ತುಂಬಾ ದುಡ್ಡು ಸಿಗುತ್ತೆ.!

 

ಹಣಕಾಸಿನ ಸಮಸ್ಯೆ ಎನ್ನುವುದು ಯಾರನ್ನು ಬಿಡುವುದಿಲ್ಲ ಆದರೆ ಬಡವರು ಹಾಗೂ ಮಧ್ಯಮ ವರ್ಗದವರು ಆರ್ಥಿಕ ಸಮಸ್ಯೆಯಿಂದ ಹೆಚ್ಚಾಗಿ ನರಳುತ್ತಾರೆ. ಮನುಷ್ಯನಿಗೆ ತನ್ನ ಜೀವನದ ಎಲ್ಲ ಸಮಸ್ಯೆಗಿಂತ ದುಡ್ಡಿನ ಸಮಸ್ಯೆ ದೊಡ್ಡದು ಎನಿಸುತ್ತದೆ ಆದರೆ ದುಡ್ಡು ಬಂದ ನಂತರವೂ ಕೂಡ ಸಮಸ್ಯೆಗಳು ನಿಲ್ಲುವುದಿಲ್ಲ.

ಆರೋಗ್ಯ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಈ ರೀತಿ ನಿಮಗೆ ಜೀವನದಲ್ಲಿ ಬಹಳಷ್ಟು ಸಮಸ್ಯೆ ಇದ್ದರೆ ಮನೆಯಲ್ಲಿ ಕ’ಲ’ಹ, ಶಾಂತಿ ಇಲ್ಲದಿರುವುದು, ಮನೆ ಮೇಲೆ ಕೆ’ಟ್ಟ ದೃಷ್ಟಿ ಬಿದ್ದಿರುವುದು, ನರ ದೃಷ್ಟಿ ದೋ’ಷ, ಮಾಟ ಮಂತ್ರ ಪ್ರಯೋಗ ಆಗಿರುವುದು ಈ ರೀತಿಯ ಅನುಮಾನಗಳಿದ್ದರೆ ಅಥವಾ ಎಷ್ಟೇ ದುಡಿದರು ಹಣ ನಿಲ್ಲುತ್ತಿಲ್ಲ ಎನ್ನುವ ಸಮಸ್ಯೆ ಇದ್ದರೆ ಇದೆಲ್ಲದರ ಪರಿಹಾರಕ್ಕಾಗಿ ಒಂದು ಸುಲಭ ತಂತ್ರ ಮಾಡಿ ಸಾಕು.

ಹಿಂದಿನ ಕಾಲದಲ್ಲಿ ಮಳೆ ಬೇಕಿದ್ದರೂ, ಗಾಳಿ ಬೇಕಿದ್ದರೂ ಮಂತ್ರಗಳ ಉಚ್ಚಾರ ಮಾಡಿ ಪಡೆಯುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಮಂತ್ರಗಳ ಶಕ್ತಿಗಿಂತ ತಂತ್ರಗಳ ಶಕ್ತಿಯು ಹೆಚ್ಚು ಕೆಲಸ ಮಾಡುತ್ತದೆ ಎಂದೇ ಹೇಳಬಹುದು. ಸತ್ಯಯುಗವು ಕಡಿಮೆ ಆದಂತೆ ಮಂತ್ರಗಳ ಪ್ರಭಾವ ಕಡಿಮೆಯಾಗಿ ತಂತ್ರಗಳ ಅಳವಡಿಕೆ ಹೆಚ್ಚಾಗಿದೆ.

ಈಗ ತಂತ್ರಗಳು ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡಿ ಫಲ ಕೊಡುತ್ತವೆ. ಇಂತಹ ಒಂದು ಬಲಿಷ್ಠವಾದ ತಂತ್ರದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಇದನ್ನು ಯಾವುದೇ ದಿನ ಬೇಕಾದರೂ ಮಾಡಬಹುದು, ಮಾಡುವ ಸಮಯದಲ್ಲಿ ನಿಮ್ಮನ್ನು ಯಾರು ಡಿಸ್ಟರ್ಬ್ ಮಾಡಬಾರದು ಅಷ್ಟೇ.

ಹಾಗಾಗಿ ಇದನ್ನು ಮಾಡುವಾಗ ಮೊದಲೇ ನಿಮ್ಮ ಮನೆಯ ಜನರಿಗೆ ಅಡ್ಡಿಪಡಿಸಿದಂತೆ ಹೇಳಿಬಿಡಿ ಅಥವಾ ಯಾರು ಇಲ್ಲದ ಸಮಯದಲ್ಲಿ ಮಾಡಿದರೆ ಇನ್ನು ಒಳ್ಳೆಯದು. ಇದಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುವ ಅವಶ್ಯಕತೆಯೂ ಇಲ್ಲ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಇದನ್ನು ಮಾಡಬಹುದು.

ಮಾಡುವ ಮುನ್ನ ಬಹಳ ನಂಬಿಕೆ ಇರಬೇಕು ಹಾಗೂ ಈಗ ನಾನು ಮಾಡುತ್ತಿರುವ ತಂತ್ರದಿಂದ ನನಗೆ ಫಲ ಸಿಗುತ್ತದೆ ಎನ್ನುವ ಪಾಸಿಟಿವ್ ಮೈಂಡ್ ಇರಬೇಕು. ಪ್ರಯೋಗ ಮಾಡುವ ಮುನ್ನ ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ, ಮಡಿಯುಟ್ಟು ಭಕ್ತಿಯಿಂದ ನಿಮ್ಮ ಕುಲದೈವ ಹಾಗೂ ಇಷ್ಟ ದೇವರಲ್ಲಿ ಬೇಡಿಕೊಳ್ಳಿ.

ಮತ್ತು ನಿಮಗೆ ಯಾವುದೇ ರೀತಿಯ ದೋ’ಷಗಳಿದ್ದರೂ ಪರಿಹಾರವಾಗಲಿ ಅಥವಾ ಕೆ’ಟ್ಟ ದೃಷ್ಟಿಗಳ ಮತ್ತು ಪ್ರಯೋಗಗಳ ಪ್ರಭಾವ ಬಿದ್ದಿದ್ದರೆ ಪರಿಹಾರವಾಗಲಿ, ಹಣಕಾಸಿನ ಸಮಸ್ಯೆಗಳು ಹೋಗಿ ಹೆಚ್ಚಿನ ಧನಾಕರ್ಷಣೆ ಉಂಟಾಗುವಂತೆ ಆಗಲಿ ಎಂದು ಹೇಳಿಕೊಂಡು ಇದನ್ನು ಆರಂಭಿಸಿ.

ಒಂದು ಬಿಳಿ ಬಟ್ಟೆಯಲ್ಲಿ ಒಂದು ಹಿಡಿ ಉಪ್ಪು ತೆಗೆದುಕೊಳ್ಳಿ. ಆ ಉಪ್ಪಿನ ಮೇಲೆ 5 ಅಥವಾ 9 ಬೇವಿನ ಎಲೆಯನ್ನು ಹಾಕಿ ಅದರ ಮೇಲೆ 51 ರೂ. ಕಾಣಿಕೆ ಇಡಿ. ಅರಿಶಿಣ ಕುಂಕುಮ ಅಕ್ಷತೆ ಹೂವು ಇಟ್ಟು ಪೂಜೆ ಮಾಡಿ ಗಂಟು ಕಟ್ಟಿ ಆ ಗಂಟನ್ನು ಮನೆ ಮುಂದೆ ಕಟ್ಟಿ. 11 ದಿನಗಳ ಕಾಲ ಪ್ರತಿ ದಿನವೂ ಇದಕ್ಕೆ ಹೂವು ನೀರು ಇಟ್ಟು ಭಕ್ತಿಯಿಂದ ಪೂಜೆ ಮಾಡಿ ಅಂದುಕೊಂಡ ಸಂಕಲ್ಪ ನೆರವೇರಬೇಕು ಎಂದು ವಿನರ್ಮವಾಗಿ ಕೇಳಿಕೊಳ್ಳಿ.

11 ದಿನಗಳಾದ ಬಳಿಕ ಅದನ್ನು ಬಿಚ್ಚಿ 51 ರೂಪಾಯಿಯನ್ನು ತೆಗೆದುಕೊಂಡು ನೀವು ಮನೆಯಲ್ಲಿ ಹಣ ಇಡುವ ಡಬ್ಬದಲ್ಲಿ ಹಾಕಿಡಿ. ಉಳಿದ ವಸ್ತುಗಳನ್ನು ಹರಿಯುವ ನೀರಿನಲ್ಲಿ ಬಿಟ್ಟುಬಿಡಿ ನಂತರ ನಿಮ್ಮ ಜೀವನದಲ್ಲಾಗುವ ಬದಲಾವಣೆಗಳನ್ನು ಕಂಡು ನೀವೇ ಆಶ್ಚರ್ಯ ಚಕಿತರಾಗುತ್ತೀರಿ.

ಸರ್ಕಾರಿ ಆಸ್ಪತ್ರೆಯಲ್ಲಿ ಹುದ್ದೆ, 7ನೇ ತರಗತಿ ಆಗಿದ್ದರು ಸಾಕು ಅರ್ಜಿ ಸಲ್ಲಿಸಬಹುದು, ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!

 

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಗೌರವಧನದ ಆಧಾರದ ಮೇಲೆ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು ಸುಮಾರು 800ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

7ನೇ ತರಗತಿ ಉತ್ತೀರ್ಣರಾದವರಿಂದ ಹಿಡಿದು ವೈದ್ಯಕೀಯ ವಿದ್ಯಾಭ್ಯಾಸ ಮಾಡಿರುವ ಅಭ್ಯರ್ಥಿಗಳವರಿಗೆ ಹುದ್ದೆಗಳು ಖಾಲಿ ಇದ್ದು ಅರ್ಹರಾದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಹುದ್ದೆಗಳ ಕುರಿತ ವಿವರ ಹಾಗೂ ಅರ್ಜಿ ಸಲ್ಲಿಸಲು ಇರುವ ವಿಧಾನ ಹಾಗೂ ಪ್ರಮುಖ ದಿನಾಂಕಗಳ ಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ನೇಮಕಾತಿ ಸಂಸ್ಥೆ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಉದ್ಯೋಗ ಸ್ಥಳ:- ಚಿಟಗುಪ್ಪಿ ಆಸ್ಪತ್ರೆ, ಹುಬ್ಬಳ್ಳಿ.
ಒಟ್ಟು ಹುದ್ದೆಗಳ ಸಂಖ್ಯೆ:- 800
ಹುದ್ದೆಗಳ ವಿವರ:-
1. ವೈದ್ಯರು
* ಸ್ತ್ರೀರೋಗ ತಜ್ಞರು
* ಅರವಳಿಕೆ ತಜ್ಞರು
* ಸಾಮಾನ್ಯ ಕರ್ತವ್ಯ ವೈದ್ಯರು

2. ಅರೆ ವೈದ್ಯಕೀಯ ಸಿಬ್ಬಂದಿಗಳು
* ಶುಶ್ರುಷಕ ಅಥವಾ ಶುಶ್ರೂಷಕಿ
* ಆರೋಗ್ಯ ಮಹಿಳಾ ಸಹಾಯಕಿಯರು
* ಭೌತಿಕ ಚಿಕಿತ್ಸಕ
* ಓಟಿ ತಂತ್ರಜ್ಞರು
* CSSD ಸೆಂಟ್ರಲ್ ಸ್ಪೈರರ್ ಸಪ್ಲೈ
* ಹೌಸ್ ಕೀಪರ್ ಮ್ಯಾನೇಜರ್
* ವೈದ್ಯಕೀಯ ದಾಖಲೆ ಅಧಿಕಾರಿ

3. LDC
4. ಡ್ರೆಸ್ಸರ್, ವಾರ್ಡ್ ಬಾಯ್, ಆಯಾ
5. ಅಂಬುಲೆನ್ಸ್ ವಾಹನ ಚಾಲಕರು.

ಶೈಕ್ಷಣಿಕ ವಿದ್ಯಾರ್ಹತೆ:-

* ಸ್ತ್ರೀರೋಗ ತಜ್ಞರು – MD(OBG) DNB ಲಭ್ಯವಿರದಿದ್ದರೆ DGO
* ಅರವಳಿಕೆ ತಜ್ಞರು – MD(ಅನಸ್ತೇಶಿಯಾ) /DNB ಅಥವಾ ಅನಸ್ತೇಶಿಯಾದಲ್ಲಿ ಡಿಪ್ಲೋಮೋ
* ಸಾಮಾನ್ಯ ಕರ್ತವ್ಯ ವೈದ್ಯರು – MBBS / BAMS ನ್ನು ರಾಜ್ಯ ಮಂಡಳಿಯಲ್ಲಿ ನೋಂದಣಿಯಾಗಿರಬೇಕು.

* ಶುಶ್ರುಷಕ ಅಥವಾ ಶುಶ್ರೂಷಕಿ – ಡಿಪ್ಲೋಮೋ GNM/ BSc. ನರ್ಸಿಂಗ್ ರಾಜ್ಯ ಮಂಡಳಿಯಲ್ಲಿ ನೋಂದಣಿ ಆಗಿರಬೇಕು
* ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು – ANM ಕೋರ್ಸನ್ನು ರಾಜ್ಯಮಂಡಳಿಯಲ್ಲಿ ಸರಿಯಾಗಿ ನೋಂದಣಿಯಾಗಿರಬೇಕು
* ಭೌತಿಕ ಚಿಕಿತ್ಸಕ – BPT/DPT ರಾಜ್ಯ ಮಂಡಳಿಯಲ್ಲಿ ನೋಂದಣಿಯಾಗಿರಬೇಕು.
* ಓಟಿ ತಂತ್ರಜ್ಞರು – OT ತಂತ್ರಜ್ಞಾನದಲ್ಲಿ ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ.

* CSSD ಸೆಂಟ್ರಲ್ ಸ್ಪೈರರ್ ಸಪ್ಲೈ – CSSD ಯಲ್ಲಿ ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ
* ಹೌಸ್ ಕೀಪರ್ ಮ್ಯಾನೇಜರ್ – ಡಿಪ್ಲೋಮಾ ಇನ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ವಿದ್ಯಾರ್ಹತೆ.
* ವೈದ್ಯಕೀಯ ದಾಖಲೆ ಅಧಿಕಾರಿ – ವೈದ್ಯಕೀಯ ದಾಖಲೆ ತಂತ್ರಜ್ಞಾನ ಅಥವಾ ತತ್ಸಮಾನ ಡಿಪ್ಲೋಮೋದಲ್ಲಿ ಯಾವುದೇ ಪದವಿಯೊಂದಿಗೆ 5 ವರ್ಷಗಳ ಅರ್ಹತೆ ಅಥವಾ ಅಪೇಕ್ಷಿತ ಅನುಭವ.
* LDC – MS Office ನಲ್ಲಿ ಪ್ರಾವೀಣ್ಯತೆ ಹೊಂದಿರುವ ಯಾವುದೇ ಪದವಿ ಅಥವಾ ಡಿಪ್ಲೋಮಾ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ನೊಂದಿಗೆ ಟ್ಯಾಲಿ ಅನುಭವ.

* ಡ್ರೆಸ್ಸರ್, ವಾರ್ಡ್ ಬಾಯ್, ಆಯಾ – 8ನೇ ತರಗತಿ ಪಾಸ್ ಮತ್ತು ಮೇಲ್ಪಟ್ಟವರು.
* ಅಂಬುಲೆನ್ಸ್ ವಾಹನ ಚಾಲಕರು – ಹೆವಿ ಡ್ರೈವಿಂಗ್ ಲೈಸನ್ಸ್ ನೊಂದಿಗೆ 10ನೇ ತರಗತಿ ಮತ್ತು ಪ್ರಥಮ ಚಿಕಿತ್ಸಾ ಕೋರ್ಸ್ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಪ್ರಮುಖ ಸೂಚನೆಗಳು:-

* ಒಬ್ಬರು ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕು, ಹೆಚ್ಚಿಗೆ ಅರ್ಜಿ ಸಲ್ಲಿಸಿದರೆ ತಿರಸ್ಕೃತವಾಗುತ್ತದೆ.
* 1/3 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು.
* ಅರ್ಜಿಯನ್ನು ಸಲ್ಲಿಸುವಾಗ Resume / Bio data ದ ಜೊತೆಗೆ ಗೆಜೆಟೆಡ್ ಅಧಿಕಾರಿ ಧೃಡೀಕರಣದೊಂದಿಗೆ ನಡತೆ ಪ್ರಮಾಣ ಪತ್ರವನ್ನು ಮತ್ತು ಸದರಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆ ಪ್ರತಿಗಳನ್ನು ಸಲ್ಲಿಸಬೇಕು.
* ಆಯ್ಕೆ ಪ್ರಕ್ರಿಯೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತೀರ್ಮಾನವೆ ಅಂತಿಮವಾಗಿರುತ್ತದೆ.

* ಸೂಚಿಸಿರುವ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಲಭ್ಯವಿರದೆ ಇದ್ದರೆ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರನ್ನು ಅಥವಾ ಆಯಾ ಕ್ಷೇತ್ರದಲ್ಲಿ ಜ್ಞಾನ ಹೊಂದಿರುವವರನ್ನು ಪರಿಗಣಿಸಲಾಗುವುದು.
* ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 10:00 ರಿಂದ 1:00 ರ ಒಳಗೆ ಆನ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ:-
www.hdmc.mrc.gov.in

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಕಡೆಯ ದಿನಾಂಕ – 18 ನವೆಂಬರ್, 2023
* ಸಂದರ್ಶನ ನಡೆಯುವ ದಿನಾಂಕಗಳು – 22 ಮತ್ತು 23 ನವೆಂಬರ್, 2023.

ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.!

 

ತಿರುಪತಿ ತಿಮ್ಮಪ್ಪನ ಸನ್ನಿಧಿಯೂ ಹಿಂದೂಗಳ ಪಾಲಿಗೆ ಬಹಳ ಪವಿತ್ರವಾದ ಸ್ಥಳ ಭಾರತದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುವ ಕ್ಷೇತ್ರವಾಗಿರುವ ತಿರುಪತಿಯು ಆಂಧ್ರಪ್ರದೇಶದ ಚಿತ್ತೂರಿನಲ್ಲಿದೆ. ತಿರುಪತಿಯಲ್ಲಿ ಬಾಲಾಜಿ ದರ್ಶನವನ್ನು ಪಡೆಯಲು ಪ್ರತಿದಿನ ‌‌ಲಕ್ಷಾಂತರ ಜನರು ಹೋಗುತ್ತಾರೆ.

ನಿತ್ಯ ದರ್ಶನದ ಭಾಗ್ಯ ಸಿಕ್ಕರೂ ಆ ಅವಕಾಶವನ್ನು ಕೂಡ ಯಾರು ಬಿಟ್ಟು ಕೊಡುವುದಿಲ್ಲ. ಹೀಗೆ ನಾನಾ ವಿಷಯಗಳಿಂದ ದೇಶ ಮಾತ್ರವಲ್ಲದೆ ಪ್ರಪಂಚದ ಗಮನವನ್ನು ಸೆಳೆದಿರುವ ಈ ಜಾಗಕ್ಕೆ ದೇಶದ ಮೂಲೆ ಮೂಲೆಗಳಿಂದ ಬರುವ ಜನರಿಗೆ ಸುವ್ಯವಸ್ಥೆಯನ್ನು ಅಲ್ಲಿನ ದೇವಸ್ಥಾನದ ಆಡಳಿತ ಮಂಡಳಿ ಕಲ್ಪಿಸಿಕೊಟ್ಟಿದೆ.

TTD ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗಾವಕಾಶವನ್ನು ಕೂಡ ನೀಡಿದೆ ನಮಗೂ ಹೀಗೆ ವೆಂಕಟೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಉದ್ಯೋಗ ಮಾಡುತ್ತ ಸೇವೆ ಸಲ್ಲಿಸಿ ಪುಣ್ಯ ಕಟ್ಟಿಕೊಳ್ಳುವ ಭಾಗ್ಯ ದೊರಕಿದರೆ ಹೇಗಿರುತ್ತೆ ಎಂದುಕೊಂಡವರಿಗೆ ಇದು ಸಕಾಲ. ಯಾಕೆಂದರೆ ತಿರುಪತಿಯಲ್ಲಿ ಉಸ್ತುವಾರಿಯನ್ನು ನೋಡಿಕೊಳ್ಳುವ TTD ಈಗ ಅಧಿಕೃತ ಅಧಿಸೂಚನೆ ಹೊರಡಿಸಿ ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಪ್ರಕಟಿಸಿದೆ.

ಪ್ರತಿಯೊಂದು ಹುದ್ದೆಗೂ ಕೂಡ ಶೈಕ್ಷಣಿಕ ವಿದ್ಯಾರ್ಹತೆ ಜೊತೆಗೆ ಇನ್ನಿತರ ಮಾನದಂಡಗನ್ನೂ ವಿಧಿಸಲಾಗಿದೆ. ಇವುಗಳನ್ನು ಪೂರೈಸುವ ಅಭ್ಯರ್ಥಿಗಳು ಗೋವಿಂದನ ಸನ್ನಿಧಾನದಲ್ಲಿ ಕೆಲಸ ಮಾಡಬಹುದು ಮತ್ತು ಆಕರ್ಷಣೀಯ ವೇತನದ ಸೌಕರ್ಯವೂ ಇದೆ. ಈ ಅವಕಾಶ ಸಾವಿರಾರು ಜನರ ಕನಸು. ನಿಮಗೂ ಕೂಡ ಇದೆ ಇಂತಹದೊಂದು ಆಸಕ್ತಿ ಇದ್ದರೆ ನಿಮಗಾಗಿ ಈ ಹುದ್ದೆಯ ಕುರಿತು ಹೆಚ್ಚಿನ ಮಾಹಿತಿ ಹೀಗಿದೆ ನೋಡಿ…

ಉದ್ಯೋಗ ಸಂಸ್ಥೆ:- TTD

ಹುದ್ದೆಗಳು:- ವಿವಿಧ ಇಂಜಿನಿಯರ್ ಹುದ್ದೆಗಳು

ಹುದ್ದೆಗಳ ವಿಂಗಡಣೆ:-
* EAA Civil – 27 ಹುದ್ದೆಗಳು
* OBC 12 ಹುದ್ದೆಗಳು
* BCA 2 ಹುದ್ದೆಗಳು
* BCB 2 ಹುದ್ದೆಗಳು
* BCD 2 ಹುದ್ದೆಗಳು
* SC 5 ಹುದ್ದೆಗಳು
* ST 2 ಹುದ್ದೆಗಳು
* EWSC 2 ಹುದ್ದೆಗಳು.

ಒಟ್ಟು ಹುದ್ದೆಗಳ ಸಂಖ್ಯೆ:- 56

ಉದ್ಯೋಗ ಸ್ಥಳ:- ತಿರುಪತಿ ತಿರುಮಲ ದೇವಸ್ಥಾನ, ಚಿತ್ತೂರು, ಆಂಧ್ರಪ್ರದೇಶ.
ವೇತನ ಶ್ರೇಣಿ:- 48,440 ರಿಂದ 1,37,220 ಮಾಸಿಕವಾಗಿ…

ಶೈಕ್ಷಣಿಕ ಅರ್ಹತೆಗಳು:-
ಅಭ್ಯರ್ಥಿಗಳು ಸಿವಿಲ್, ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಮುಗಿಸಿರಬೇಕು.

ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 28 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 42ವರ್ಷಗಳು.

ಅರ್ಜಿ ಶುಲ್ಕ:- ಅರ್ಜಿ ಸಲ್ಲಿಸಲು ಯಾವುದೇ ರೀತಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ:-
* TTD ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಮತ್ತೊಮ್ಮೆ ಅಧಿಸೂಚನೆಯಲ್ಲಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಓದಿ.
* ಅರ್ಜಿ ಸಲ್ಲಿಸಲು ಇರುವ ಲಿಂಕ್ ಕ್ಲಿಕ್ ಮಾಡಿ, ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಅಭ್ಯರ್ಥಿ ವಯಸ್ಸು ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಅರ್ಜಿ ಸಲ್ಲಿಕೆ ಪೂರ್ತಿ ಆದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪತ್ರ ತೆಗೆದುಕೊಳ್ಳಿ, ಮುಂದಿನ ಹಂತಗಳಲ್ಲಿ ಇದು ಬೇಕಾಗುತ್ತದೆ.

ಆಯ್ಕೆ ವಿಧಾನ:-
* ದಾಖಲೆಗಳ ಪರಿಶೀಲನೆ
* ಸಂದರ್ಶನ

ವೆಬ್ಸೈಟ್ ವಿಳಾಸ: https://ttdrecruitment.aptonline.in

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 23 ನವೆಂಬರ್, 2023.