Home Blog Page 122

ಮನೆಯ ಮುಖ್ಯ ದ್ವಾರದಲ್ಲಿ ವಸ್ತುಗಳು, ಚಿನ್ಹೆಗಳು, ಗಿಡಗಳು ಇದ್ದರೆ ನಿಮಗೆ ಅದೃಷ್ಟವೇ ಅದೃಷ್ಟ.!

 

ಮನೆಯ ಮುಖ್ಯದ್ವಾರದ ಹತ್ತಿರ ಇರಬೇಕಾದ ಮಂಗಳಕರ ವಸ್ತುಗಳು ಮನೆಗೆ ಮಂಗಳವನ್ನುಂಟು ಮಾಡುವ ಹಾಗೂ ಕೆಟ್ಟ ದೃಷ್ಟಿ ಮತ್ತು ದುಷ್ಟ ಶಕ್ತಿಗಳ ಪ್ರಭಾವ ತಡೆಯಲು ಇರಬೇಕಾದ ಮುಖ್ಯ ವಸ್ತುಗಳ ಬಗ್ಗೆ ತಿಳಿಯೋಣ ಬನ್ನಿ. ಮೊದಲಿಗೆ ಮುಖ್ಯ ದ್ವಾರದ ಹೊಸ್ತಿಲಿಗೆ ಅರಿಶಿಣವನ್ನು ಹಚ್ಚಿ ಕುಂಕು ಮ ಇಟ್ಟು ರಂಗೋಲಿ ಬಿಡುವುದು ತುಂಬಾ ವಿಶೇಷ ಮತ್ತು ವೈಜ್ಞಾನಿಕ ವಾಗಿಯೂ ಒಳ್ಳೆಯದು ಇದರಿಂದ ಆ ಮನೆಯಲ್ಲಿ ಯಾವುದೇ Negative Energy ಪ್ರವೇಶಿಸುವುದಿಲ್ಲ.

ಇದರ ಜೊತೆ ಮನೆಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಕೂಡ ಇದೆ ಆದ್ದರಿಂದ ಪ್ರತಿನಿತ್ಯ ಹೊಸ್ತಿಲನ್ನು ತೊಳೆದು ಅರಿಶಿನ ಕುಂಕುಮ ಇಟ್ಟು ಪೂಜಿಸುವುದು ತುಂಬಾ ಉತ್ತಮ. ಮನೆಯ ಬಾಗಿಲಿಗೆ ಮಾವಿನ ತಳಿರು, ತೋರಣ ಕಟ್ಟುವುದು, ಮನೆಗೆ ತುಂಬಾ ಮಂಗಳಕರ. ಪ್ರತಿನಿತ್ಯ ಕಟ್ಟುವುದಕ್ಕೆ ಸಾಧ್ಯವಾಗಲಿಲ್ಲ ಎಂದರು ಯಾವುದಾದರು ಹಬ್ಬ ಹರಿದಿನದ ಸಂದರ್ಭದಲ್ಲಿ ಮಾವಿನ ತಳಿರು ತೋರಣಗಳನ್ನು ಕಟ್ಟುವುದು ತುಂಬಾ ಶುಭಕರ ಎಂದು ಪರಿಗಣಿಸಲಾಗುತ್ತದೆ.

ಮನೆಯ ಮುಖ್ಯದ್ವಾರದ ಹತ್ತಿರ ಓಂ ಅಥವಾ ಸ್ವಸ್ತಿಕ ಚಿನ್ಹೆ ಇರುವುದು ಕೂಡ ಒಳ್ಳೆಯದು ಇಲ್ಲವೆಂದರೆ ಅರಿಶಿಣದಿಂದ ಬರೆಯುವುದು ಕೂಡ ಮಂಗಳಕರ. ಹೂವಿನ ಪಕಳೆಗಳನ್ನು ಹಾಕಿದ ಪಾಟ್ ಅನ್ನು ಮುಖ್ಯ ದ್ವಾರದ ಬಳಿ ಅಥವಾ ಮನೆ ದ್ವಾರದ ಬಳಿ ಇಡಿ, ನಿಮ್ಮ ಮನೆ ಮತ್ತು ಕುಟುಂಬದ ಸದಸ್ಯರನ್ನು ಆರೋಗ್ಯಕರವಾಗಿ ಇಡಲು ಸಹಾಯ ಮಾಡುತ್ತದೆ.

ಕುದುರೆಗಳಿಗೆ ಬಳಸಿ ತೆಗೆದಿರುವಂತಹ ಲಾಳವನ್ನು ಮುಖ್ಯದ್ವಾರದ ಹತ್ತಿರ ಹಾಕುವುದು ತುಂಬಾ ಒಳ್ಳೆಯದು ಈ ರೀತಿ ಲಾಳವನ್ನು ಹಾಕುವುದರಿಂದ ಆ ಮನೆಯ ಮೇಲೆ ಯಾವುದೇ ರೀತಿಯ ದುಷ್ಟ ಶಕ್ತಿಗಳು ಕೂಡ ಪ್ರವೇಶಿಸುವುದಿಲ್ಲ ಹಾಗೂ ಮನೆಯಲ್ಲಿ ಯಾವುದೇ ನೆಗೆಟಿವ್ ಎನರ್ಜಿ ಇದ್ದರೂ ಕೂಡ ಅದು ದೂರವಾಗುತ್ತದೆ ಎನ್ನುವ ನಂಬಿಕೆ.

* ಮುಖ್ಯದ್ವಾರದ ಹತ್ತಿರ ಮರದಿಂದ ಅಥವಾ ಮಣ್ಣಿನಿಂದ ಮಾಡಿದ ಆನೆಯ ಮೂರ್ತಿಗಳನ್ನು ಇಡುವುದು ಅಥವಾ ಆನೆಯ ಕಣ್ಣಿನ ಚಿತ್ರ ವನ್ನು ಹಾಕುವುದು ಒಳ್ಳೆಯದು. ಆನೆಯನ್ನು ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ ಆದ್ದರಿಂದ ಆನೆಯ ಮೂರ್ತಿಗಳನ್ನು ಇಡುವುದು ಮನೆಗೆ ತುಂಬಾ ಶುಭಕರ.

ಮುಖ್ಯ ದ್ವಾರದ ಸಮೀಪದಲ್ಲಿ ಶೌಚಾಲಯಗಳು ಇರಬಾರದು. ಶೂ ಬ್ಯಾಕ್‌ಗಳು ಇರಬಾರದು ಇದು ಅನುಕೂಲಕರವಾದರೂ, ಇಂಥ ಹವ್ಯಾಸವನ್ನು ದೂರವಿಡಬೇಕು ಮನೆಯ ಮುಂದೆ ಬಿಳಿ ಎಕ್ಕದ ಗಿಡ, ದಾಳಿಂಬೆ ಗಿಡ ಇದ್ದರೆ ಮಂಗಳ ಕರ. ಎಕ್ಕದ ಗಿಡವನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ ಆದ್ದರಿಂದ ಬಿಳಿ ಎಕ್ಕಡದ ಗಿಡವನ್ನು ಎಲ್ಲರೂ ಕೂಡ ಪೂಜಿಸುತ್ತಾರೆ ಹಾಗೂ ಇದು ಗಣಪತಿಗೂ ತುಂಬಾ ಶ್ರೇಷ್ಠ.

* ಮನೆಯ ಮುಂದೆ ತುಳಸಿ ಕಟ್ಟೆ ಇರಬೇಕು ಪ್ರತಿದಿನ ಮುಂಜಾನೆ ಸ್ವಚ್ಚ ಮಾಡಿ ನಂತರ ತುಳಸಿಗೆ ನೀರು ಅರ್ಪಿಸಿ ಸ್ನಾನದ ನಂತರ ಪೂಜೆಯನ್ನು ಮಾಡಿದರೆ ಆ ಮನೆಯಲ್ಲಿ ನಕಾರಾತ್ಮಕತೆ ದೂರವಾಗಿ ಒಳ್ಳೆಯದಾಗುವುದು. ಹಾಗೆಯೇ ಮನೆಯಲ್ಲಿ ಪ್ರವೇಶಿಸುವ ಮುಂಚೆ ಕಾಲುಗಳನ್ನು ಸ್ವಚ್ಚ ವಾಗಿ ತೊಳೆದುಕೊಳ್ಳುವುದು ನಮ್ಮ ಹಿರಿಯರು ಹೇಳಿಕೊಟ್ಟಿರುವ ಒಳ್ಳೆಯ ಅಭ್ಯಾಸ‌

ಡೋರ್‌ ಮ್ಯಾಟ್‌ಗಳನ್ನು ಹಾಕಿಡಿ ಇದರಿಂದ ದುಷ್ಟ ಶಕ್ತಿಗಳು ಮತ್ತು ಕೊಳೆ ಮನೆ ಪ್ರವೇಶಿಸುವುದಿಲ್ಲ ಜನರು ಕಾಲು ತೊಳೆದು ಒಳಗೆ ಬರುವಾಗ ತಮ್ಮ ಕಾಲುಗಳನ್ನು ಈ ಡೋರ್‌ಮ್ಯಾಟ್‌ ನಲ್ಲಿ ಸ್ವಚ್ಛಗೊಳಿಸಿ ಬರಲು ಹೇಳಿ ಮುಖ್ಯದ್ವಾರದ ಹತ್ತಿರ ಸಂಜೆ ವೇಳೆ ಒಂದು ದೀಪವನ್ನು ಹಚ್ಚಿಟ್ಟರೆ ಒಳ್ಳೆಯದು.

ಮದುವೆಯಾದ ಮಹಿಳೆ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ತಪ್ಪಾ.! ಇತ್ತೀಚಿನ ದಿನದಲ್ಲಿ ಈ ರೀತಿ ಮಹಿಳೆಯರು ಪರಪುರುಷರ ಕಡೆಗೆ ವಾಲುತ್ತಿರುವುದುಕ್ಕೆ ಕಾರಣವೇನು ನೋಡಿ.!

 

ಇತ್ತೀಚಿನ ದಿನಗಳಲ್ಲಿ ವಿವಾಹಕ್ಕೂ ಮೊದಲು ಸ್ತ್ರೀ/ ಪುರುಷರು ಏನೇ ಮಾಡಿರಲಿ ಅದು ಬೇಡದ ವಿಷಯ ಕನಿಷ್ಟ ವಿವಾಹದ ನಂತರವಾದರೂ ನಮ್ಮಂತೆ ನಡೆದು ಕೊಳ್ಳಲೆಂದು ಬಯಸುತ್ತೇವೆ. ಪ್ರೇಮ ನಿಸ್ವಾರ್ಥ ಪ್ರೀತಿ ಸುವ ವ್ಯಕ್ತಿತ್ವಗಳು ಸ್ವಾರ್ಥವಾಗುತ್ತವೆ ಯಾಕೆ ಹೀಗೆ ? ಇದು ನನ್ನದು ಈಕೆ ನನ್ನವಳು ನನಗೆ ಸೇರಿದವಳು ನನಗೆ ಮಾತ್ರ ಸ್ವಂತ ಇಂತ ಭಾವನೆ ನಮ್ಮಲ್ಲಿ ಹುಟ್ಟುತ್ತದೆ.

ಅದೆ ರೀತಿ ನಮ್ಮ ಪ್ರೇಯಸಿಯ ಮನಸ್ಸಿನಲ್ಲೂ ಇದೇ ಭಾವನೆಗಳು ಹುಟ್ಟುತ್ತವೆ. ನೀವು ಪ್ರೀತಿಸಿದ ಯಾವುದೇ ವ್ಯಕ್ತಿಯಾಗಿರಲಿ ಕಾಲ ಕ್ರಮೇಣ ಅವರು ಮತ್ತೊಬ್ಬರನ್ನು ನೋಡುತ್ತಾರೆ ಇಷ್ಟ ಪಡುತ್ತಾರೆ, ಮಾತನಾಡಿಸುತ್ತಾರೆ. ಸ್ನೇಹ ಸಂಬಂಧಗಳನ್ನು ಮಾಡಿಕೊಳ್ಳುತ್ತಾರೆ. ಇದು ನಮಗೆ ಅಸೂಯೆ ಕಾಡುತ್ತದೆ ಮನಸ್ಸಿನಲ್ಲಿ ಗೊಂದಲ ಗದ್ದಲ ಗಲಾಟೆಗಳು ಅನುಮಾನಗಳು ಉದ್ಭವಿಸುತ್ತದೆ.

ಯಾಕೆ ಹೀಗೆ ? ಪ್ರೇಮದ ಆಳವನ್ನು ಅರಿಯಲು ಪ್ರಯತ್ನಿಸಿ, ಪ್ರೇಮ ಕರ್ತವ್ಯವಲ್ಲ, ಕರ್ತವ್ಯ ಒಂದು ಹೊರೆ! ಪ್ರೀತಿ ಅನ್ನೋದು ಬಹಳ ಪವಿತ್ರವಾದದ್ದು ಅದನ್ನು ತಪ್ಪು/ ಸರಿ ಅನ್ನೋ ಅಧಿಕಾರ ಯಾರಿಗೂ ಇಲ್ಲ ಹಾಗೆ ನೋಡಿದರೆ ಈ ಪ್ರಪಂಚದಲ್ಲಿ 100 % ಪರಿಪೂರ್ಣ ವ್ಯಕ್ತಿ ಯಾರೂ ಇರುವುದಿಲ್ಲ.

ಹಾಗಾಗಿ ಮದುವೆಯಾದ ನಂತರ ಒಬ್ಬರಿಗೊ ಬ್ಬರು ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಲು ಸಹಜವಾಗಿ ಮಾನಸಿಕವಾಗಿ ಸಿದ್ಧರಾಗಿರಬೇಕು. ಅದನ್ನು ಬಿಟ್ಟು ಹೊರಗಿನ ಸಂಬಂಧ ಗಳಿಗೆ ಕೈಚಾಚಬಾರದು ಇದು ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಗಂಡಸ ರಿಗೂ ಕೂಡ ಅನ್ವಹಿಸುತ್ತದೆ. ದಾಂಪತ್ಯ ಅನ್ನೋ ವಾಹನಕ್ಕೆ ಎರಡು ಚಕ್ರದಂತಿರುವ ಪತಿ ಪತ್ನಿ ಎಂಬು ವವರಲ್ಲಿ ಒಬ್ಬರು ಅಲುಗಾಡಿದರೂ ಸಂಸಾರ ಅನ್ನೋ ಗಾಯನದಲ್ಲಿ ಲಯತಪ್ಪಿ ಅಪಸ್ವರ ಕಾಣಿಸಿಕೊಳ್ಳುತ್ತದೆ.

ಆದ್ದರಿಂದ ಇಬ್ಬರೂ ಕೂಡ ಎಂತದ್ದೇ ಪರಿಸ್ಥಿತಿ ಬರಲಿ ಎಷ್ಟೇ ಕಷ್ಟ ಇರಲಿ, ಅದನ್ನು ಇಬ್ಬರು ಗಮನದಲ್ಲಿಟ್ಟುಕೊಂಡು ಪರಸ್ಪರ ಪ್ರೀತಿ-ವಿಶ್ವಾಸದಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ. ಯಾವುದೇ ವಿಚಾರವನ್ನು ಕೂಡ ಹೆಚ್ಚು ಅನುಮಾನಿಸಬಾರದು ಬದಲಿಗೆ ಯಾವುದೇ ರೀತಿಯ ಗೊಂದಲ ಇದ್ದರೂ ಕೂಡ ಅದನ್ನು ಮಾತನಾಡುವುದರ ಮೂಲಕ ನಿಮ್ಮ ಗೊಂದಲಗಳಿಗೆ ಉತ್ತರವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಬದಲಿಗೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಬ್ಬರ ನಡುವೆ ಮನಸ್ತಾಪ ತಂದುಕೊಳ್ಳುವುದು ತಪ್ಪು. ಇದರಿಂದ ನಿಮ್ಮ ಪ್ರೀತಿ ವಿಶ್ವಾಸ ದೂರವಾಗುವುದಷ್ಟೇ ಅಲ್ಲದೆ ನಿಮ್ಮ ಮನಸ್ಸಿನ ನೆಮ್ಮದಿಯು ಕೂಡ ಹಾಳಾಗುತ್ತದೆ. ಆದ್ದರಿಂದ ಇಂತಹ ಯಾವುದೇ ಕೆಟ್ಟ ಆಲೋಚನೆಗಳನ್ನು ನೀವು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ.

ಅದೇ ರೀತಿಯಾಗಿ ಇಬ್ಬರ ನಡುವೆ ಒಂದು ಒಳ್ಳೆಯ ಸಂಬಂಧ ಇರಬೇಕು ಹಾಗೂ ಇಬ್ಬರ ನಡುವೆ ಯಾವುದೇ ರೀತಿಯ ಅನುಮಾನ ಎನ್ನುವ ವಿಷಯ ಬರಬಾರದು. ಆಗ ಆ ಮನೆಯಲ್ಲಿ ಸಮಸ್ಯೆ ಉಂಟಾಗುವುದಕ್ಕೆ ಮೂಲ ಕಾರಣವಾಗುತ್ತದೆ. ಆದ್ದರಿಂದ ಯಾವುದೇ ವಿಚಾರಗಳ ಬಗ್ಗೆಯೂ ಕೂಡ ಗಂಡ ಆಗಲಿ ಹೆಂಡತಿಯಾಗಲಿ ಅನುಮಾನ ಪಡದೆ ಪ್ರತಿಯೊಂದು ವಿಚಾರಗಳನ್ನು ಕೂಡ ಕೂಲಂಕುಶವಾಗಿ ವಿಚಾರಣೆ ಮಾಡುತ್ತಾ ಇಬ್ಬರಲ್ಲಿಯೂ ಪರಸ್ಪರ ಪ್ರೀತಿ ವಿಶ್ವಾಸ ಬಾಂಧವ್ಯ ಇರು ವುದು ಬಹಳ ಮುಖ್ಯವಾಗಿರುತ್ತದೆ.

ಹಾಗೇನಾದರೂ ಇಬ್ಬರಲ್ಲಿಯೂ ಕೂಡ ಭಿನ್ನಾಭಿಪ್ರಾಯ ಇದ್ದರೆ ಸಂಸಾರ ಎನ್ನುವ ನೌಕೆ ಬೀಳುತ್ತದೆ. ಬಹಳ ಹಿಂದಿನ ದಿನಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಒಂದೇ ಸಮನೆ ಒಂದೇ ರೀತಿಯ ಮನೋಭಾವನೆಯನ್ನು ಹೊಂದಿರುತ್ತಿದ್ದರು. ಅವರಿಬ್ಬರ ನಡುವೆ ಯಾವುದೇ ರೀತಿಯ ಕಷ್ಟ ಸುಖ ಖುಷಿ ಬಂದರು ಕೂಡ ಎಲ್ಲವನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಆದ್ದರಿಂದ ಅಂದು ಯಾರಲ್ಲಿಯೂ ಕೂಡ ಇಂತಹ ಮನೋಭಾವನೆ ಇರಲಿಲ್ಲ. ಆದರೆ ಇತ್ತೀಚಿನ ದಿನದಲ್ಲಿ ಹಲವಾರು ರೀತಿಯ ವಿಚಾರದ ಬಗ್ಗೆ ಮಾತುಕತೆ ಬರುತ್ತಿದ್ದು ಇದರಿಂದ ಈ ರೀತಿಯ ಪರಿಸ್ಥಿತಿಗಳು ಉಂಟಾಗುತ್ತಿದೆ ಎಂದೇ ಹೇಳಬಹುದು.

 

ಪುರುಷರಿಗೆ ಕಿವಿಮಾತುಗಳು.!

 

ಪುರುಷರು ಪ್ರತಿಯೊಂದು ಮನೆಯ ರಕ್ಷಾ ಕವಚಾ ಅವರಿಲ್ಲದ ಮನೆ, ಬುನಾದಿ ಇಲ್ಲದ ಮನೆ ಆಗಿರುತ್ತೆ. ಹೇಗೆ ಗೃಹಿಣಿಯರು ಮನೆಯ ಜವಾಬ್ದಾರಿ ನಿರ್ವಹಿಸುವರೋ ಅದೇ ರೀತಿ ಪುರುಷರು ಹೊರಗೆ ಕಷ್ಟ ಪಟ್ಟು ದುಡಿದು ಎಲ್ಲರ ಆಸೆಗಳನ್ನು ಇಡೆರಿಸುತ್ತಾರೆ. ಪ್ರತಿ ಮಹಿಳೆ ಕೆಟ್ಟವಳಲ್ಲ ಅದೇ ರೀತಿ ಎಲ್ಲ ಪುರುಷರು ಕೆಟ್ಟವರಲ್ಲ ಪ್ರತಿ ಒಬ್ಬ ಪುರುಷ ಈ ಮಾತುಗಳನ್ನು ಯಾವಾಗಲೂ ನೆನಪಿನಲ್ಲಿಡಬೇಕು.

* ಕೆಲಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕುಟುಂಬ ಕೂಡ ನಿಮ್ಮ ಸ್ವಲ್ಪ ಸಮಯವನ್ನು ಕುಟುಂಬಕ್ಕೆ ಮೀಸಲಿಡಿ.
* ಪುರುಷರಿಗೆ ಒಳ್ಳೆಯ ಮೈಕಟ್ಟು ಇರುವುದು ತುಂಬ ಮುಖ್ಯ ಮತ್ತು ಮಹಿಳೆಯರು ಕೂಡ ಇಂತಹ ಪುರುಷರನ್ನೆ ಇಷ್ಟ ಪಡುತ್ತಾರೆ ಆದರಿಂದ fit ಆಗಿರಲು ಆದಷ್ಟು ಪ್ರಯತ್ನಿಸಿ.

* ಕೆಲವರಿಗೆ ಹಸ್ತ ಮೈಥುನದ ಚಟ ಇರುತ್ತದೆ ಅದು ಖಂಡಿತವಾಗಿಯೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಚಟದಿಂದ ನೀವು ತುಂಬಾ ತೆಳ್ಳಗಾಗುತ್ತಿರಾ, ಕೂದಲು ಉದುರುವಿಕೆಯ ಸಮಸ್ಯೆ, ಮುಖದ ಕಾಂತಿ, ಶರೀರದಲ್ಲಿ ಶಕ್ತಿ ಯಾವುದು ಇರುವುದಿಲ್ಲ. ಇಂತಹ ಚಟದಿಂದ ಆದಷ್ಟು ದೂರವಿರಿ.
* ಯಾವುದಾದರೂ ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಿ ನಿಮಗೆ ಇಷ್ಟವಾಗುವ ಯಾವುದಾದರೂ ಒಳ್ಳೆಯ ಹವ್ಯಾಸವನ್ನು ರೂಢಿಸಿ ಕೊಳ್ಳಿ, ಇದರಿಂದ ನಿಮ್ಮ ಮನಸಿಗೆ ನೆಮ್ಮದಿ ಮತ್ತು ಉಲ್ಲಾಸ ಸಿಗುತ್ತದೆ, ಉದಾಹರಣೆಗೆ Gardening, cycling, Swimming ಪುಸ್ತಕ ಓದುವ ಅಭ್ಯಾಸ ಇತ್ಯಾದಿ.

* ಪ್ರತಿ ಅಮಾವಾಸ್ಯೆ ನಿಮ್ಮ 2 wheeler ಅಥವ 4 wheeler ಚೆನ್ನಾಗಿ ತೊಳೆದು ಅರಿಶಿಣ ಕುಂಕುಮ ಹಚ್ಚಿ ಹೂ ಮಾಲೆ ಮತ್ತು ನಿಂಬೆ ಮೆಣಸಿನ ದೃಷ್ಟಿ ಕವಚ ಕಟ್ಟುವುದನ್ನು ಮರಿಯಬೇಡಿ. ಯಾವುದೇ ಆಗಿರಲಿ ಅದು ಸ್ವಚ್ಛವಾಗಿದ್ದರೆ ಅದರಲ್ಲಿ ಪಾಸಿಟಿವ್ ಎನರ್ಜಿ ಕೂಡಿರುತ್ತದೆ.

* ಯಾವುದಾದರು ವಿಶೇಷ ಕೆಲಸಗಳಿಗೆ ಅಂತ ನೀವು ಹೊರಟಿದ್ದರೆ ಹೊರಡುವ ಮುಂಚೆ ಜೀರಿಗೆಯನ್ನು ತಿನ್ನಿ ಅಥವ ಕನ್ನಡಿಯಲ್ಲಿ ನಿಮ್ಮ ಮುಖವನ್ನು ಒಮ್ಮೆ ನೋಡಿಕೊಳ್ಳಿ ಹೀಗೆ ಮಾಡುವುದರಿಂದ ಯಾವ ಅಡೆತಡೆಗಳು ಬರುವುದಿಲ್ಲ.
* ರಾತ್ರಿ ವೇಳೆ ಹೆಚ್ಚು ಆಹಾರವನ್ನು ಸೇವಿಸಬೇಡಿ ಆದಷ್ಟು ಕಡಿಮೆ ಊಟ ಮಾಡುವುದು ಒಳ್ಳೆಯದು.

* ನೀವು ಒಂದೇ ಒಂದು ಕೆಲಸದ ಕಡೆ ಮಾತ್ರ ಗಮನ ಕೊಡಿ ಯಾವುದೋ ಲೆಕ್ಕ ಹಾಕಲು ಹೋಗಬೇಡಿ ತಿಂಡಿ ತಿನ್ನುತ್ತ, ಅಥವ ಊಟ ಮಾಡುತ್ತಾ ಅದೂ ಇದೂ ಮಾಡಲೇ ಬೇಡಿ.
* ಜೀವನವೆಂದರೆ Commitment ಹಾಗಂತ ಎಲ್ಲ Commitment ಗಳಿಗೆ ತಲೆ ಕೊಟ್ಟು ಅದನ್ನು ಜೇನುಗೂಡು ಮಾಡಿಕೊಳ್ಳಬೇಡಿ. ಶಕ್ತಿ ಸಾಮರ್ಥ್ಯಕ್ಕೂ ಒಂದು ಮಿತಿ ಇರುತ್ತೆ.

ನಿಮ್ಮ ಕೈಲಿ ಅದು ಆಗುವುದಿಲ್ಲ ಎನ್ನುವುದಾದರೆ ಅದನ್ನು ಬಿಟ್ಟು ಬಿಡಿ ಮತ್ತು ನಿಮಗೆ ಇಷ್ಟವಾಗುವ ಕೆಲಸವನ್ನೇ ಮಾಡಿ ಯಾವ ಕೆಲಸದಲ್ಲಿ ಅಭಿರುಚಿ ಇರುವುದಿಲ್ಲವೋ ಅದು ಎಂದಿಗೂ ವ್ಯರ್ಥ.
* ಬದುಕುವ ಛಲವಿದ್ದರೆ ನಿಮ್ಮ ಶತ್ರುಗಳ ಎದುರಲ್ಲೇ ಬದುಕಿ ಅವರು ನಿಮ್ಮ ಎದುರು ಸುಳಿದಾಗಲೆಲ್ಲಾ ನಿಮ್ಮಲ್ಲಿ ಬದುಕುವ ಛಲ ಎಚ್ಚೆತ್ತು ಕೊಳ್ಳುತ್ತದೆ. ನೀವು ಸರಿಯಾದ ಮಾರ್ಗದಲ್ಲಿ ಇದ್ದರೆ ನಿಮಗೆ ಯಾರಿಂದ ಲೂ ಹೆದರುವ ಅಗತ್ಯವಿಲ್ಲ ನೆನಪಿರಲಿ.

ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ಕೂಡ ಪುರುಷರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇದರಿಂದ ಅವರು ತಮ್ಮ ಜೀವನ ಪರ್ಯಂತ ಸುಖವಾದ ನೆಮ್ಮದಿ ಯಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಹೆಚ್ಚು ಆಲೋಚನೆಯನ್ನು ಮಾಡುತ್ತ ಅದರಲ್ಲಿಯೇ ಜೀವನ ಕಳೆಯಬೇಕಾಗುತ್ತದೆ. ಆದ್ದರಿಂದ ಮೇಲೆ ಹೇಳಿದ ಅಷ್ಟು ಮಾಹಿತಿಗಳನ್ನು ಕೂಡ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು.

ಮೂರ್ಖ ಮಹಿಳೆಯರ ಲಕ್ಷಣಗಳು.!

 

ಪ್ರತಿಯೊಬ್ಬ ಮಹಿಳೆಯು ಕೂಡ ಸಂಸಾರದ ವಿಚಾರವಾಗಿ ಆಗಿರ ಬಹುದು ಅಥವಾ ಮನೆಯ ಸಮಸ್ಯೆಗಳ ಬಗ್ಗೆ ಆಗಿರಬಹುದು, ಪ್ರತಿಯೊಂದರಲ್ಲಿಯೂ ಕೂಡ ಹೆಚ್ಚು ತಾಳ್ಮೆಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಬದಲಿಗೆ ಯಾವುದೇ ಸನ್ನಿವೇಶದಲ್ಲಿಯೂ ಕೂಡ ನನ್ನದೇ ಮಾತು ನಡೆಯಬೇಕು, ನಾನು ಹೇಳಿದ್ದೆ ಸರಿ ಈ ರೀತಿಯ ವಾದ ಮಾಡುವಂತಹ ಮನಸ್ಥಿತಿಯನ್ನು ಹೆಣ್ಣು ಹೊಂದಿರಬಾರದು.

ಆಗ ಆ ಮನೆಯಲ್ಲಿ ಯಾವುದೇ ರೀತಿಯ ಒಳ್ಳೆಯ ಪರಿಸ್ಥಿತಿ ಇರುವುದಿಲ್ಲ. ಬದಲಿಗೆ ಮನೆಯಲ್ಲಿ ಸದಾ ಕಾಲ ಜಗಳ, ಕಿರಿಕಿರಿ, ಅಸಮಾಧಾನ, ಮನೆಯಲ್ಲಿ ಇರುವಂತಹ ಜನರ ನಡುವೆ ಭಿನ್ನಾಭಿಪ್ರಾಯ ಹೀಗೆ ಒಂದಲ್ಲ ಒಂದು ರೀತಿಯಾಗಿ ಕೆಟ್ಟ ಸನ್ನಿವೇಶಗಳು ನಡೆಯುತ್ತಿರುತ್ತದೆ.

ಆದ್ದರಿಂದ ಪ್ರತಿಯೊಬ್ಬ ಹೆಣ್ಣು ಕೂಡ ಜೀವನದಲ್ಲಿ ಕೆಲವೊಂದು ವಿಚಾರಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಯಾವ ಕೆಲವು ಮಹಿಳೆಯರು ಯಾವ ರೀತಿಯ ಕೆಲವು ಕೆಟ್ಟ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅವರು ಯಾವ ಮನಸ್ಥಿತಿಗಳು ಅವರ ಕೆಟ್ಟ ಸ್ವಭಾವಗಳಾಗಿರುತ್ತದೆ ಎನ್ನುವುದರ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ.

* ಮೂರ್ಖ ಮಹಿಳೆ ತನ್ನ ಗಂಡನನ್ನು ಗುಲಾಮನಾಗಿ ಮಾಡಿಕೊಂಡು ತಾನು ಗುಲಾಮನ ಹೆ೦ಡತಿಯಾಗಿ ಇರುತ್ತಾಳೆ. ಆದರೆ ಬುದ್ದಿವಂತ ಮಹಿಳೆ ಗಂಡನನ್ನು ರಾಜನಾಗಿ ನೋಡಿಕೊಂಡು ತಾನು ರಾಣಿಯಾಗಿ ಬಾಳುತ್ತಾಳೆ.
* ಮೂರ್ಖ ಮಹಿಳೆ ತನ್ನ ಗಂಡನನ್ನು ಬುಗುರಿಯಂತೆ ಆಡಿಸುತ್ತಾಳೆ. ಬೇರೆ ಕಡೆ ಮನೆ ಮಾಡಿ ಇರೋಣ ಅಂತ ಹಟ ಹಿಡಿಯುತ್ತಾಳೆ ಅವಳಿಗೆ ಕೂಡಿ ಬಾಳಲು ಅಷ್ಟು ಇಷ್ಟವಿರುವುದಿಲ್ಲ.

* ಆದರೆ ಬುದ್ಧಿವಂತ ಮಹಿಳೆ ಸಂಸಾರದಲ್ಲಿ ಎಷ್ಟೇ ಕಷ್ಟವಿರಲಿ ಎಲ್ಲ ರನ್ನೂ ಎಲ್ಲವನ್ನು ಹೊಂದಿಕೊಂಡು ಪರಿಸ್ಥಿತಿಯನ್ನು ಅರ್ಥ ಮಾಡಿ ಕೊಂಡು ಎಲ್ಲರೊಂದಿಗೆ ಒಟ್ಟಿಗೆ ಬಾಳುವ ಆಸಕ್ತಿ ಹೊಂದಿರುತ್ತಾಳೆ.
* ಮೂರ್ಖ ಮಹಿಳೆರು ತನ್ನ ಮಕ್ಕಳು ಏನಾದರೂ ತಪ್ಪು ಮಾಡಿದರೆ ಎಲ್ಲರ ಮುಂದೆ ಬಾಯಿಗೆ ಬಂದಂತೆ ಬೈದು ಹೊಡೆದು ಮಕ್ಕಳಿಗೆ ಪಾಠ ಕಲಿಸುತ್ತಾರೆ.

* ಬುದ್ಧಿವಂತ ಮಹಿಳೆ ಮಕ್ಕಳು ಏನೇ ತಪ್ಪು ಮಾಡಿದರು ಅದನ್ನು ಸಮಾಧಾನವಾಗಿ ತಾಳ್ಮೆಯಿಂದ ತಿಳಿಸಿ ಬುದ್ದಿ ಮಾತು ಹೇಳುತ್ತಾಳೆ.
* ಭಾವನೆಗಳಿಲ್ಲದ ಹೆಣ್ಣಿನ ಮನಸ್ಸು ಬರಿದಾಗಿ ಹೋದ ಬಹುದೊಡ್ಡ ತೋಟದಂತೆ ಬರಿ ಹೆಸರಿಗೆ ಮಾತ್ರ ದೊಡ್ಡದಾದ ತೋಟ ಆದರೆ ಯಾವುದಕ್ಕೂ ಉಪಯೋಗವಿಲ್ಲ.
* ಮೂರ್ಖ ಮಹಿಳೆ ಕುಟುಂಬ ಮತ್ತು ಗಂಡನ ಸ್ನೇಹಿತರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾಳೆ.

* ಪತಿ ಮನೆಗೆ ಬಂದಾಗ ನಗುಮುಖದ ಬದಲು ಹುಳಿ ಮುಖದಿಂದ ಸ್ವಾಗತಿಸುತ್ತಾಳೆ.
* ಸಭ್ಯತೆ ಹೊಂದಿರುವ ಮಹಿಳೆ ಯಾವಾಗಲೂ ಪ್ರೀತಿಯಿಂದ ಮಾತನಾಡುತ್ತಾಳೆ ಕಠೋರವಾಗಿ ಮಾತನಾಡುವುದಿಲ್ಲ ಮತ್ತು ಇತರರ ಮುಂದೆ ಅಥವ ಮನೆಯಲ್ಲಿ ಗಂಡನಿಗೆ ಗೌರವ ನೀಡುತ್ತಾಳೆ.
* ಬುದ್ಧಿವಂತ ಹೆಣ್ಣಿಗೆ ತಾಳ್ಮೆ ಇರುತ್ತದೆ. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣವಿರುತ್ತದೆ.
* ಆದರೆ ಸ್ವಾರ್ಥ ಮನೋಭಾವನೆ, ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲಿ ನನ್ನದು ಎಂಬ ಸ್ವಾರ್ಥ ಇರುವಂತಹ ಮಹಿಳೆಯರು ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ.

* ಹೆಂಡತಿ ತನ್ನ ಪತಿಯನ್ನು ರಾಜನಂತೆ ನಡೆಸಿಕೊಳ್ಳಬೇಕೆಂದು ಬಯಸಿ ದರೆ, ಗಂಡ ಕೂಡ ಅವಳನ್ನು, ರಾಣಿಯಂತೆ ನೋಡಿಕೊಳ್ಳಬೇಕು.
* ತಾಳಿಯನ್ನು ತೂಕವೆಂದು ಭಾವಿಸುವ ಯಾವುದೇ ಹೆಣ್ಣು ಸಂಸಾರ ನಡೆಸಲು ಅರ್ಹಳಲ್ಲ. ಹೆಣ್ಣ ತನ್ನ ಮನೆಯ ಆಳು ಎಂದು ಭಾವಿಸುವ ಯಾವುದೇ ಗಂಡನಿಗೆ ಸಂಸಾರಿಯಾಗಿ ಬಾಳಲು ಅರ್ಹನಲ್ಲ.
ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಮೂರ್ಖ ಮಹಿಳೆಯ ಗುಣಲಕ್ಷಣಗಳಾಗಿದ್ದು ಇಂತಹ ಲಕ್ಷಣಗಳು ಏನಾದರೂ ನಿಮ್ಮಲ್ಲಿ ಇದ್ದರೆ ಅದನ್ನು ಈಗಲೇ ಸರಿಪಡಿಸಿಕೊಳ್ಳುವುದು ಉತ್ತಮ.

ನಿಮ್ಮ ಹೃದಯ ನಿರಂತರ ಸರಿಯಾಗಿ ಕೆಲಸ ಮಾಡಲು ಬೇಕಾದ ಹತ್ತು ಟಿಪ್ಸ್.!

 

ನಮ್ಮ ಹೃದಯ ಸರಿಯಾಗಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು ಎಂದರೆ ಪ್ರತಿಯೊಬ್ಬರೂ ಕೂಡ ಈ 10 ಟಿಪ್ಸ್ ಗಳನ್ನು ಅನುಸರಿಸು ವುದು ಬಹಳ ಮುಖ್ಯವಾಗಿರುತ್ತದೆ ಹೌದು ಇತ್ತೀಚಿನ ದಿನದಲ್ಲಿ ಹೃದ ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಈ ಸಮಸ್ಯೆಯಿಂದ ಚಿಕ್ಕವಯಸ್ಸಿಗೆ ತಮ್ಮ ಪ್ರಾಣವನ್ನು ಕಳೆದುಕೊಂಡಂತಹ ಎಷ್ಟೋ ಉದಾಹರಣೆಗಳನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಹೃದಯದ ಆರೋಗ್ಯವನ್ನು ಬಹಳ ಜೋಪಾನವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಇದರಿಂದ ನೀವು ದೊಡ್ಡ ಸಮಸ್ಯೆಯನ್ನು ಎದುರಿಸುವುದರ ಜೊತೆಗೆ ನಿಮ್ಮ ಮನೆಯವರು ಕೂಡ ನಿಮ್ಮ ಬಗ್ಗೆಯಾಗಿ ಚಿಂತೆ ಮಾಡುವ ಸನ್ನಿವೇಶಗಳು ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಸಮಸ್ಯೆ ಬಂದ ನಂತರ ಅದಕ್ಕೆ ಪರಿಹಾರ ಮಾರ್ಗ ಕಂಡುಕೊಳ್ಳುವುದರ ಬದಲು.

ಸಮಸ್ಯೆ ಬರುವುದಕ್ಕೂ ಮುನ್ನ ಕೆಲವೊಂದಷ್ಟು ಉತ್ತಮವಾದ ಒಳ್ಳೆಯ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಹೃದಯ ಸರಿಯಾಗಿ ಕೆಲಸ ಮಾಡಬೇಕು, ಸರಿಯಾದ ಆರೋಗ್ಯವನ್ನು ಸದಾ ಕಾಲ ಹೊಂದಿರಬೇಕು ಎಂದರೆ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿಯೋಣ.

* ಪ್ರಾಣಧಾರಕ ಅವಯವ ಹೃದಯದ ರಕ್ಷಣೆ ಕೇವಲ Cholestrol ಬಿಡುವುದರಿಂದ ಆಗುವುದಿಲ್ಲ.
* ರಕ್ತ ಪರಿಚಲನೆಯಾಗಲು ರಕ್ತನಾಳಗಳು ಮೃದುವಾಗಿಯೂ ಮತ್ತು ಸಶಕ್ತವಾಗಿಯೂ ಇರಬೇಕು.
* ರಕ್ತನಾಳಗಳು ಮೃದುವಾಗಿರಲು ಶುದ್ಧ ಗಾಣದ ಎಣ್ಣೆ ಬೆಣ್ಣೆಯಿಂದ ತೆಗೆದ ಶುದ್ಧ ತುಪ್ಪ ಸೇವಿಸಿ.

* ರಕ್ತನಾಳಗಳು ಸಶಕ್ತವಾಗಿರಲು ನಿತ್ಯವೂ ನಿಯಮಿತ ವ್ಯಾಯಾಮ ಬೇಕು. ಈಜುವಿಕೆ ಅತ್ಯುತ್ತಮವಾದ ವ್ಯಾಯಾಮ.
* ಕನಸಿನಲ್ಲಿ ಭಯಗೊಂಡರೂ, ಹೃದಯ ಜೋರಾಗಿ ಬಡಿದುಕೊಳ್ಳು ತ್ತದೆ, ನಿಜದಲ್ಲಿ ಭಯಗೊಂಡರೆ ಅದೇ ಇನ್ನೂ ಒತ್ತಡದಿಂದ ಮತ್ತು ದೀರ್ಘ ಕಾಲ ಹೃದಯ ಬಡಿದುಕೊಳ್ಳುತ್ತದೆ.
* ಸಂತೋಷಕರ ಜೀವನವು ಹೃದಯದ ಮಿತ್ರ.

* ಗುದದ್ವಾರ ಹೃದಯಕ್ಕೆ ಬಲ ಕೊಡುವ ಟ್ರಿಗರ್ ಅದರ ಸಾಮರ್ಥ್ಯ ವನ್ನು ಕ್ಷೀಣ ಗೊಳಿಸುವ ಖಾರ, ಹುಳಿ,ಉಪ್ಪುಗಳನ್ನು ಅತ್ಯಂತ ಕಡಿಮೆ ಮತ್ತು ನಿಯಮಿತವಾಗಿ ಬಳಸಿ.
* ಆಹಾರದ ಪ್ರಮಾಣ ಅಗತ್ಯಕ್ಕಿಂತ ಒಂದು ತುತ್ತು ಹೆಚ್ಚಾದರೂ ಗಮನಿಸಿ ಅಷ್ಟು ಒತ್ತಡ ಹೃದಯಕ್ಕೆ ಬೀಳುತ್ತದೆ.
* ನಿದ್ರೆ ಮಾಡುವಾಗ, ಹೃದಯ ಕಡಿಮೆ ಕೆಲಸ ಮಾಡುತ್ತದೆ. ನಿದ್ದೆಯು ಹೃದಯಕ್ಕೆ ವಿಶ್ರಾಂತಿ ಕೊಡುವ ಮಹಾನ್ ಸಂಗತಿ ನಿಮ್ಮ ಮನಸ್ಸು, ಶರೀರ ಉತ್ಸಾಹದಿಂದ ಇರುವಷ್ಟು ಪ್ರಮಾಣದ ನಿದ್ದೆ,

ಅತ್ಯಂತ ದಿವ್ಯ ಔಷಧಿ. ನಿದ್ದೆಗೆ 7-8 ತಾಸು ಎಂಬ ಲೆಕ್ಕಬೇಡ. ಎದ್ದಾಗ ಮನಸ್ಸು ಉಲ್ಲಾಸದಿಂದ ಇದ್ದರೆ ನಿದ್ದೆ ಸಂಪೂರ್ಣ ಆಗಿದೆ ಎಂದರ್ಥ.
* ಇಂಜಿನ್ ಒಂದು ನಿರಂತರ ಕಾರ್ಯದಲ್ಲಿರಲು ಅನೇಕ ಸಂಗತಿಗಳು ಬೇಕಾಗುವಂತೆ ಹೃದಯದ ಇಂಜಿನ್ ನಿರಂತರ ಕೆಲಸ ಮಾಡಲು ಮೇಲಿನ ಸಂಗತಿಗಳು ಅತ್ಯವಶ್ಯಕ.

ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ಕೂಡ ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಆಗ ಮಾತ್ರ ನೀವು ಯಾವುದೇ ರೀತಿಯ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಗಳನ್ನು ಅನುಭವಿಸುವ ಸನ್ನಿವೇಶಗಳು ಬರುವುದಿಲ್ಲ. ಇದರ ಜೊತೆ ಉತ್ತಮವಾದಂತಹ ಆಹಾರ ಪದ್ಧತಿಯನ್ನು ಉತ್ತಮವಾದ ಜೀವನ ಶೈಲಿಯನ್ನು ಅನುಸರಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ.

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಕಷ್ಟ ಎನ್ನುವುದು ಇರುತ್ತದೆ ಆದರೆ ಆ ಕಷ್ಟದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾ ಅದರಲ್ಲಿಯೇ ಮುಳುಗಿರ ಬಾರದು ಬದಲಿಗೆ ಯಾವುದೇ ಕಷ್ಟಕ್ಕೂ ಕೂಡ ಕೊನೆ ಎನ್ನುವುದು ಇರುತ್ತದೆ ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಜೀವನ ನಡೆಸುವುದು ಬಹಳ ಮುಖ್ಯವಾಗಿರುತ್ತದೆ.

ಅಜ್ಜಿ ಹೇಳಿದ ರಹಸ್ಯ, ಮನೆಯಲ್ಲೇ ತಯಾರಿಸಿದ ಶುದ್ಧ ತೆಂಗಿನ ಎಣ್ಣೆ…!!

 

ಸಾಮಾನ್ಯವಾಗಿ ನಾವು ಶುದ್ಧವಾದ ತೆಂಗಿನ ಎಣ್ಣೆ ಬೇಕು ಎಂದರೆ ಒಳ್ಳೆಯ ಕಂಪನಿಯ ಹೆಸರನ್ನು ತಿಳಿದುಕೊಂಡು ಆ ಕಂಪನಿಯ ಕೊಬ್ಬರಿ ಎಣ್ಣೆಯನ್ನು ತಂದು ಅದನ್ನು ತಲೆಗೆ ಹಚ್ಚುವುದು ಅಥವಾ ಅಡುಗೆಗೆ ಉಪಯೋಗಿಸುವುದು ಹೀಗೆ ಹಲವಾರು ಕೆಲಸಗಳಿಗೆ ಕೊಬ್ಬರಿ ಎಣ್ಣೆ ಯನ್ನು ಉಪಯೋಗಿಸುತ್ತಿರುತ್ತೇವೆ. ಆದರೆ ಈ ದಿನ ನಾವು ಹೇಳುವ ವಿಧಾನ ನೀವು ತಿಳಿದರೆ ಇನ್ನು ಮುಂದೆ ನೀವೇ ಶುದ್ಧವಾದoತಹ ತೆಂಗಿನ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳುತ್ತೀರಿ.

ಹೌದು ಅಷ್ಟು ಸುಲಭವಾದ ವಿಧಾನ ಇದಾಗಿದ್ದು ಈ ಒಂದು ವಿಧಾನ ನಿಮಗೆ ಹೆಚ್ಚಿನ ಶ್ರಮ ಕೊಡುವುದಿಲ್ಲ ಬದಲಿಗೆ ಸುಲಭವಾಗಿ ಯಾವುದೇ ರೀತಿಯ ಶ್ರಮ ಇಲ್ಲದೆ ತಯಾರಿಸಬಹುದಾಗಿದೆ. ಹಾಗಾದರೆ ಶುದ್ಧವಾದ ತೆಂಗಿನ ಎಣ್ಣೆಯನ್ನು ಹೇಗೆ ಮನೆಯಲ್ಲಿ ಸುಲಭವಾಗಿ ತಯಾರಿಸುವುದು ಹಾಗೂ ಯಾವ ವಿಧಾನಗಳನ್ನು ಅನು ಸರಿಸುವುದರ ಮೂಲಕ ಶುದ್ಧವಾದ ತೆಂಗಿನ ಎಣ್ಣೆ ಪಡೆಯಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ನಾವು ಎಷ್ಟೇ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಮಾರುಕಟ್ಟೆಗಳಿಂದ ತಂದರು ಕೂಡ ಅದರಲ್ಲಿ ಇಂತದ್ದೇ ಪದಾರ್ಥ ಇದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಹೌದು. ಅದರಲ್ಲಿ ಕೆಲವೊಂದು ಕೆಮಿಕಲ್ ಪದಾರ್ಥಗಳನ್ನು ಮಿಶ್ರಣ ಮಾಡಿರುತ್ತಾರೆ. ಆದರೆ ಅದು ನಮಗೆ ತಿಳಿಯುವುದಿಲ್ಲ ಬದಲಿಗೆ ಇದು ಶುದ್ಧವಾದ ತೆಂಗಿನ ಎಣ್ಣೆ ಎನ್ನುವುದರ ಮೂಲಕ ಅದನ್ನು ಅಡುಗೆಗಳಿಗೆ ತಲೆಗೆ ಹಚ್ಚುವುದಕ್ಕೆ ಮಸಾಜ್ ಮಾಡುವುದಕ್ಕೆ ಉಪಯೋಗಿಸುತ್ತಲೇ ಇರುತ್ತೇವೆ.

ಆದರೆ ಇನ್ನು ಮುಂದೆ ನೀವು ಅಂಗಡಿಯಿಂದ ತರುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಒಣಕೊಬ್ಬರಿ ಇದ್ದರೆ ತೆಂಗಿನ ಎಣ್ಣೆಯನ್ನು ನೀವೇ ತಯಾರಿಸಿಕೊಳ್ಳಬಹುದು. ಹಾಗಾದರೆ ಆ ಒಂದು ವಿಧಾನ ಯಾವುದು ಹಂತ ಹಂತವಾಗಿ ನಾವು ಯಾವ ವಿಧಾನಗಳನ್ನು ಅನುಸರಿಸಬೇಕಾಗು ತ್ತದೆ ಎಂದು ಈ ಕೆಳಗೆ ತಿಳಿಯೋಣ.

* ಮೊದಲು ಅರ್ಧ ಕೆಜಿ ಕೊಬ್ಬರಿಯನ್ನು ಸಂಪೂರ್ಣವಾಗಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು ನಂತರ ಅದರ ಮೇಲೆ ನೀರು ತೇಲುವಷ್ಟು ಹಾಕಿ ಇಡೀ ರಾತ್ರಿ ಹಾಗೆ ಬಿಡಬೇಕು. ನಂತರ ಬೆಳಗ್ಗೆ ಆ ಕೊಬ್ಬರಿಯನ್ನು ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು.
ಸಣ್ಣದಾಗಿ ಕತ್ತರಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ಎನ್ನುವವರು ಚಿಪ್ಸ್ ಕಟ್ಟರ್ ನಲ್ಲಿ ಕೊಬ್ಬರಿಯನ್ನು ತುರಿದುಕೊಳ್ಳಬೇಕು. ನಂತರ ಆ ಕೊಬ್ಬರಿಯನ್ನು ಅದೇ ನೀರಿಗೆ ಹಾಕಿ ಬಿಡಬೇಕು.

* ನಂತರ ಆ ಪಾತ್ರೆಯನ್ನು ಸ್ಟವ್ ಮೇಲೆ ಇಟ್ಟು ನಿಮಗೆ ಬಿಸಿ ತಾಕೋ ಅಷ್ಟು ಬಿಸಿ ಮಾಡಿದರೆ ಸಾಕು ಆನಂತರ ಕೊಬ್ಬರಿ ಸ್ವಲ್ಪ ತಣ್ಣಗಾದ ಮೇಲೆ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅದರಲ್ಲಿಯೇ ಇರುವಂತಹ ನೀರನ್ನು ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು.
* ನಂತರ ಒಂದು ಶೋಧಿಸುವ ಪಾತ್ರೆ ತೆಗೆದುಕೊಂಡು ಅದರ ಮೇಲೆ ಒಂದು ಕಾಟನ್ ಬಟ್ಟೆ ಹಾಕಿ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಶೋಧಿಸಿಕೊಳ್ಳಬೇಕು. ಬಟ್ಟೆಯಲ್ಲಿ ಹಾಕುವುದರಿಂದ ಅದನ್ನು ಹಿಂಡುವ ಮೂಲಕ ಮತ್ತಷ್ಟು ಆ ಕೊಬ್ಬರಿಯಲ್ಲಿ ಇರುವಂತಹ ಅಂಶವನ್ನು ತೆಗೆದುಕೊಳ್ಳಬಹುದು.

* ಈ ರೀತಿ ಸಿಕ್ಕಂತಹ ಹಾಲನ್ನು ಒಂದು ದಿನ ಪೂರ್ತಿ ಫ್ರಿಜ್ ನಲ್ಲಿ ಇಡಬೇಕು ಆನಂತರ ಅದರ ಮೇಲೆ ಇರುವಂತಹ ಗಟ್ಟಿಯ ಅಂಶವನ್ನೆಲ್ಲ ಒಂದು ಬಾಣಲಿಗೆ ಹಾಕಿಕೊಳ್ಳಬೇಕು ಅದನ್ನು ಚೆನ್ನಾಗಿ ಬಿಸಿ ಮಾಡುವು ದರ ಮೂಲಕ ಅದು ಸಂಪೂರ್ಣವಾಗಿ ಕಪ್ಪಾಗುವ ತನಕ ಅದನ್ನು ಹಾಗೆ ಬಿಡಬೇಕು. ಆಗ ನಿಮಗೆ ಶುದ್ಧವಾದ ಕೊಬ್ಬರಿ ಎಣ್ಣೆ ಸಿಗುತ್ತದೆ. ಅದನ್ನು ಕೂಡ ಸಂಪೂರ್ಣವಾಗಿ ಶೋಧಿಸಿಕೊಂಡು ಆನಂತರ ಮತ್ತೆ ಅದನ್ನು ಐದು ನಿಮಿಷ ಬಿಸಿ ಮಾಡಿಕೊಳ್ಳುವುದರಿಂದ ಶುದ್ಧವಾದ ಕೊಬ್ಬರಿ ಎಣ್ಣೆ ನಿಮಗೆ ಸಿಗುತ್ತದೆ.

ಕೈ ಕಾಲು ಜೋಮು ಹಿಡಿಯುವುದು ಮರಗಟ್ಟುವುದು ಪಾದದಲ್ಲಿ ಉರಿ ಜೋಮು ನರ ದೌರ್ಬಲ್ಯ ಗುಣವಾಗಲು ಈ 5 ನಿಯಮ ಪಾಲಿಸಿ ಸಾಕು.!

 

ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು ಪಾದದಲ್ಲಿ ಉರಿ ನರ ದೌರ್ಬಲ್ಯತೆ ಹೀಗೆ ಹಲವಾರು ಕಾರಣಗಳು ಹಲವಾರು ಜನರಲ್ಲಿ ಕಾಣಿಸಿ ಕೊಳ್ಳುತ್ತದೆ. ಆದರೆ ಈ ಸಮಸ್ಯೆ ಯಾವ ಒಂದು ಕಾರಣಕ್ಕಾಗಿ ಬರುತ್ತದೆ ಎನ್ನುವ ಮಾಹಿತಿ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ. ಇದಕ್ಕಾಗಿ ಹಲವಾರು ಜನ ಹೆಚ್ಚಿನ ಹಣಕಾಸನ್ನು ಖರ್ಚು ಮಾಡಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತಾರೆ.

ಆದರೆ ಎಷ್ಟೇ ಚಿಕಿತ್ಸೆ ಪಡೆದುಕೊಂಡರು ಕೂಡ ಈ ಸಮಸ್ಯೆಯ ಪರಿಹಾರ ಎನ್ನುವುದು ಅವರಿಗೆ ಸಿಗುತ್ತಿರುವುದಿಲ್ಲ. ಆದ್ದರಿಂದ ಇಂತಹ ಸಮಸ್ಯೆ ಅನುಭವಿಸುತ್ತಿರುವವರು ಈ ದಿನ ನಾವು ಹೇಳುವಂತಹ ಪರಿಹಾರ ಮಾರ್ಗವನ್ನು ಮಾಡಿಕೊಳ್ಳುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಹಾಗಾದರೆ ಈ ದಿನ ಈ ಒಂದು ಸಮಸ್ಯೆ ಕಾಣಿಸಿಕೊಳ್ಳಲು ಪ್ರಧಾನವಾಗಿರುವಂತಹ ಕಾರಣಗಳು ಏನು? ಹಾಗೂ ಇದನ್ನು ಸರಿಪಡಿಸಿಕೊಳ್ಳುವಂತಹ ಪರಿಹಾರ ಮಾರ್ಗಗಳು ಯಾವುವು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸಮಸ್ಯೆಗೆ ವಾತವಿಕಾರಗಳು ಮತ್ತು ಪಿತ್ತ ವಿಕಾರಗಳು ಪ್ರಧಾನವಾದ ಕಾರಣ ಎಂದು ಹೇಳಬಹುದು.

ಪಿತ್ತದಿಂದ ಆಮ ವಿಕಾರದ ಸಮಸ್ಯೆ ಗಳು ಅಂದರೆ ನರ್ವ್ ಸೆಲ್ಸ್ ಗಳು ಶಕ್ತಿ ಕಡಿಮೆಯಾಗುತ್ತದೆ. ಅಂದರೆ ನಮ್ಮ ದೇಹದಲ್ಲಿ ಸರಿಸುಮಾರು 72,000 ನರಗಳು ಇದ್ದು ಇವುಗಳ ಆರೋಗ್ಯ ಸಂಪೂರ್ಣವಾಗಿ ಚೆನ್ನಾಗಿದ್ದರೆ ಮಾತ್ರ ಆ ವ್ಯಕ್ತಿ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಹಾಗೇನಾದರೂ ಅದರಲ್ಲಿ ಒಂದು ಸ್ವಲ್ಪ ಅನಾರೋಗ್ಯ ಕಾಣಿಸಿಕೊಂಡರೆ ನಮ್ಮ ಇಡೀ ದೇಹ ಸಂಪೂರ್ಣವಾಗಿ ಕುಗ್ಗುತ್ತದೆ ಎಂದೇ ಹೇಳಬಹುದು. ಆದ್ದರಿಂದಲೇ ಮನುಷ್ಯನನ್ನು ನರಮಾನವ ಎಂದು ಕರೆಯುತ್ತಾರೆ.

ಆದ್ದರಿಂದ ಮನುಷ್ಯ ನರಗಳ ಚೈತನ್ಯವನ್ನು ಗಟ್ಟಿಯಾಗಿ ಇಟ್ಟುಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ವಾತವಿಕಾರದಿಂದ ನರನಾಡಿಗಳಲ್ಲಿ ರಕ್ಷತೆ ಉಂಟಾಗುತ್ತದೆ. ಅಂದರೆ ಹಾರ್ಡ್ ನೆಸ್ ಉಂಟಾಗುತ್ತದೆ ಇದರಿಂದಲೂ ಕೂಡ ನರನಾಡಿಗಳಲ್ಲಿ ಜೋಮು ಹಿಡಿಯುವುದು, ನರ ದೌರ್ಬಲ್ಯತೆ ಈ ರೀತಿಯ ಸಮಸ್ಯೆಗಳು ಬರುತ್ತದೆ.

ಪಿತ್ತ ಹೆಚ್ಚಾಗುವುದಕ್ಕೆ ಸ್ನಿಗ್ಧ ಆಹಾರಗಳ ಸೇವನೆಯ ಕೊರತೆ ಹಾಗೂ ವಾತ ಹೆಚ್ಚಾಗುವುದಕ್ಕೆ ಸ್ನಿದ್ದ ಆಹಾರ ಸೇವನೆಯ ಜೊತೆಗೆ ಅಭ್ಯಂಗ ರಹಿತವಾಗಿರುವಂತಹ ಜೀವನ ಅಂದರೆ ನಮ್ಮ ದೇಹಕ್ಕೆ ಯಾವುದೇ ರೀತಿಯ ಮಸಾಜ್ ಮಾಡಿಕೊಳ್ಳದೆ ಇರುವುದು ಇದಕ್ಕೆ ಬಹಳ ಪ್ರಮುಖವಾದ ಕಾರಣ. ಹಾಗಾದರೆ ಈ ದಿನ ಇಂತಹ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳ ಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ.

ಪ್ರತಿಯೊಬ್ಬ ಮನುಷ್ಯನು ಕೂಡ ಬಿಸಿಲಿನಲ್ಲಿ ತನ್ನ ಮೈಯನ್ನು ಒಡ್ಡ ಬೇಕು ಹಾಗೂ ಭೂಸ್ಪರ್ಶ ಮಾಡಬೇಕು ಜೊತೆಗೆ ಎಣ್ಣೆ ಸ್ನಾನ ಮಾಡ ಬೇಕು. ಇದರಿಂದ ನರ ದೌರ್ಬಲ್ಯತೆ ಸಮಸ್ಯೆಗಳು ಬರುವುದಿಲ್ಲ, ಕೈ ಕಾಲುಗಳಲ್ಲಿ ಜೋಮು ಹಿಡಿಯುವಂತಹ ಸಮಸ್ಯೆಗಳು ಕೂಡ ಬರುವುದಿಲ್ಲ ಜೊತೆಗೆ ತಮ್ಮ ಆಹಾರ ಪದ್ಧತಿಯಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪ, ಸೇವನೆ ಮಾಡಬೇಕು ಇದರಿಂದ ವಾತ ಪಿತ್ತದ ಸಮಸ್ಯೆಗಳು ಬರುವುದಿಲ್ಲ.

ಇದನ್ನು ಸೇವನೆ ಮಾಡುವುದರಿಂದ ನಮ್ಮ ಕೈಕಾಲುಗಳಲ್ಲಿ ಜೋಮು ಹಿಡಿಯುವಂತಹ ಸಮಸ್ಯೆ, ನರ ದೌರ್ಬಲ್ಯತೆ ಯಾವುದು ಕೂಡ ಬರುವುದಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಇಂತಹ ಆಹಾರ ಪದ್ಧತಿಯನ್ನು ಸೇವನೆ ಮಾಡುವುದು ಬಹಳ ಮುಖ್ಯ ಇದರ ಜೊತೆ ಶುದ್ಧವಾದoತಹ ಗಾಣದ ಎಣ್ಣೆಯನ್ನು ಅದರಲ್ಲೂ ಕಡಲೆಕಾಯಿ ಎಣ್ಣೆಯನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು.

15 ರಿಂದ 20 ದಿನಗಳು ಕಳೆದರೂ ಬಾಳೆಹಣ್ಣು ಫ್ರೆಶ್ ಆಗಿ ಬಿಡಬೇಕಾ.? ಈ ಟಿಪ್ಸ್ ಅನುಸರಿಸಿ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬಾಳೆಹಣ್ಣನ್ನು ಸದಾ ಕಾಲ ತರುತ್ತೇವೆ ಆದರೆ ಅದನ್ನು ಹೆಚ್ಚಿನ ದಿನಗಳ ಕಾಲ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕೆಲವೊಂದಷ್ಟು ಜನ ದಿನ ಅಂಗಡಿಗಳಿಂದ ಖರೀದಿ ಮಾಡಿ ತರುತ್ತಾರೆ. ಆದರೆ ಪ್ರತಿನಿತ್ಯ ಅಂಗಡಿಗೆ ಹೋಗಿ ಬಾಳೆ ಹಣ್ಣನ್ನು ತರಬೇಕು ಎಂದು ಕೆಲವೊಂದಷ್ಟು ಜನ ಹೋಗುವುದೇ ಇಲ್ಲ.

ಆದರೆ ಇನ್ನು ಮುಂದೆ ಪ್ರತಿನಿತ್ಯ ಬಾಳೆಹಣ್ಣನ್ನು ತರುವಂತಹ ಅವಶ್ಯಕತೆ ಇರುವುದಿಲ್ಲ. ಒಮ್ಮೆಲೆ 1 ಕೆಜಿ 2 ಕೆಜಿ ತಂದರೆ ಅದನ್ನು 15 ರಿಂದ 20 ದಿನಗಳವರೆಗೆ ಹಾಳಾಗದಂತೆ ಫ್ರೆಶ್ ಆಗಿ ಇಡಬಹುದು. ಹೌದು ಈಗ ನಾವು ಹೇಳುವಂತಹ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರ ಮೂಲಕ.

ನೀವು ಬಾಳೆಹಣ್ಣನ್ನು ಸರಿ ಸುಮಾರು 15 ರಿಂದ 20 ದಿನಗಳವರೆಗೆ ಇಡಬಹುದಾಗಿದೆ. ಸಾಮಾನ್ಯವಾಗಿ ಕೆಲವೊಂದಷ್ಟು ಮನೆಗಳಲ್ಲಿ ಬಾಳೆಹಣ್ಣು ಹಾಳಾಗುತ್ತದೆ ಎನ್ನುವ ಉದ್ದೇಶದಿಂದ ಹಣ್ಣಿನ ರಸಾಯನ ವನ್ನು ಹಾಗೂ ಕೆಲವೊಂದು ಪದಾರ್ಥಗಳನ್ನು ಮಾಡುವುದರ ಮೂಲಕ ಅದನ್ನು ಬೇಗ ಖಾಲಿ ಮಾಡುತ್ತಾರೆ.

ಆದರೆ ಇನ್ನು ಮುಂದೆ ಇಂತಹ ವಿಧಾನಗಳನ್ನು ಅನುಸರಿಸುವ ಅವಶ್ಯಕತೆ ಇರುವುದಿಲ್ಲ ಹೌದು. ಬಾಳೆಹಣ್ಣನ್ನು 15 ರಿಂದ 20 ದಿನಗಳವರೆಗೆ ಇಟ್ಟುಕೊಂಡು ನೀವು ಸೇವನೆ ಮಾಡಬಹುದು. ಹಾಗಾದರೆ ಆ ಟಿಪ್ಸ್ ಗಳು ಯಾವುದು ಹಾಗೂ ಅದನ್ನು ಯಾವ ವಿಧಾನದಲ್ಲಿ ಅನುಸರಿಸುವುದರ ಮೂಲಕ ಹಾಗೂ ಫ್ರಿಡ್ಜ್ ನಲ್ಲಿ ಯಾವ ರೀತಿಯಾಗಿ ಇಡುವುದರ ಮೂಲಕ ಅದನ್ನು ಹೆಚ್ಚು ದಿನಗಳವರೆಗೆ ಇಡಬಹುದು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

* ಸಾಮಾನ್ಯವಾಗಿ ಪ್ರತಿಯೊಬ್ಬರು ಗಮನಿಸಬೇಕಾದಂತಹ ಅಂಶ ಏನು ಎಂದರೆ ನೀವು ಬಾಳೆಹಣ್ಣನ್ನು ಕೊಳ್ಳುವುದಕ್ಕೂ ಮುಂಚೆ ಬಾಳೆ ಹಣ್ಣಿನ ತೊಟ್ಟು ಹಸಿರಾಗಿರುವುದನ್ನು ನೋಡಿ ಅವುಗಳನ್ನು ಖರೀದಿ ಮಾಡಿ ಇವುಗಳನ್ನು ಹೆಚ್ಚು ದಿನಗಳವರೆಗೆ ಇಟ್ಟುಕೊಳ್ಳಬಹುದು ಹಾಗೂ ಇದು ಬೇಗ ಹಾಳಾಗುವುದಿಲ್ಲ.

* ಒಂದು ಅಗಲವಾದ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಇಟ್ಟು ಬಾಳೆಹಣ್ಣಿನ ತೊಟ್ಟನ್ನು ನೀರಿನಲ್ಲಿ ಸೋಕುವ ಹಾಗೆ ಇಡಬೇಕು. ಈ ರೀತಿ ಇಡುವುದ ರಿಂದ ಬಾಳೆಹಣ್ಣನ್ನು ಹೆಚ್ಚು ದಿನಗಳವರೆಗೆ ಇಟ್ಟುಕೊಳ್ಳಬಹುದು.
* ಫ್ರಿಡ್ಜ್ ನಲ್ಲಿ ಬಾಳೆಹಣ್ಣನ್ನು ಇಡುತ್ತಿದ್ದರೆ ಒಂದು ಪೇಪರ್ ಕವರ್ ನಲ್ಲಿ ಬಾಳೆಹಣ್ಣು ಹಾಗೂ ಕೆಲವೊಂದಷ್ಟು ಹಣ್ಣುಗಳು ಹಾಗೂ ನಿಂಬೆಹಣ್ಣು ಇವುಗಳನ್ನು ಹಾಕುವುದರಿಂದ ಬಾಳೆಹಣ್ಣು ಬೇಗ ಹಣ್ಣಾಗುವುದಿಲ್ಲ ಹಾಗೂ ಹೆಚ್ಚು ದಿನಗಳವರೆಗೆ ಇರುತ್ತದೆ.

* ಸಾಮಾನ್ಯವಾಗಿ ಈ ಮಾಹಿತಿ ಎಲ್ಲರಿಗೂ ತಿಳಿದಿರುತ್ತದೆ ಎಂದೇ ಹೇಳ ಬಹುದು ಅದೇನೆಂದರೆ ಬಾಳೆಹಣ್ಣನ್ನು ಒಂದು ದಾರದ ಸಹಾಯದಿಂದ. ಕಟ್ಟಿ ಅದನ್ನು ಒಂದು ನೇತು ಹಾಕುವುದರಿಂದ ಬಾಳೆಹಣ್ಣು ಬೇಗ ಹಣ್ಣಾಗುವುದಿಲ್ಲ ಹಾಗೂ ಹೆಚ್ಚು ದಿನಗಳವರೆಗೆ ಬರುತ್ತದೆ.
* ಬಾಳೆಹಣ್ಣಿನ ತೊಟ್ಟಿಗೆ ಅಲ್ಯೂಮಿನಿಯಂ ಫಾಯಿಲ್ ಪೇಪರ್ ಅನ್ನು ಸುತ್ತಿರಬೇಕು ಈ ಪೇಪರ್ ಇಲ್ಲದವರು ಪ್ಲಾಸ್ಟಿಕ್ ಕವರ್ ಅನ್ನು ಸುತ್ತಿ ಫ್ರಿಡ್ಜ್ ನಲ್ಲಿ ಇಡುವುದರಿಂದ ಬಾಳೆಹಣ್ಣು ಬೇಗ ಹಣ್ಣಾಗುವುದಿಲ್ಲ ಹಾಗೂ ಹೆಚ್ಚು ದಿನಗಳವರೆಗೆ ಚೆನ್ನಾಗಿರುತ್ತದೆ.

* ಫ್ರಿಡ್ಜ್ ಇಲ್ಲದೆ ಇರುವವರು ಒಂದು ಕಾಟನ್ ಬಟ್ಟೆಯನ್ನು ಸ್ವಲ್ಪ ತೇವ ಮಾಡಿ ಗಾಳಿ ಆಡುವ ಪಾತ್ರೆಯನ್ನು ತೆಗೆದುಕೊಂಡು ಅದರ ಮೇಲೆ ಹಾಕಿ ಒಳಗಡೆ ಬಾಳೆಹಣ್ಣನ್ನು ಇಟ್ಟು ತೇವದ ಬಟ್ಟೆಯಿಂದ ಮುಚ್ಚಿಡುವುದ ರಿಂದ ಬಾಳೆಹಣ್ಣು 10 ರಿಂದ 15 ದಿನಗಳವರೆಗೆ ಇರುತ್ತದೆ. ಈ ರೀತಿ ಮಾಡುವುದರಿಂದಲೂ ಕೂಡ ಬಾಳೆಹಣ್ಣು ಹೆಚ್ಚು ಹಾಳಾಗುವುದಿಲ್ಲ.

ಈ ದೇವಸ್ಥಾನದಲ್ಲಿ ಊಟ ವಸತಿ ಸೇವೆ ಉಚಿತ ಕೇವಲ ಏಳು ದಿನದಲ್ಲಿ ದೇಹದ ಎಲ್ಲಾ ಕಾಯಿಲೆಗಳು ಸಂಪೂರ್ಣವಾಗಿ ಗುಣಮುಖವಾಗುತ್ತದೆ.!

 

ಪ್ರಪಂಚದಲ್ಲಿ ಒಂದಕ್ಕಿಂತ ಒಂದು ದೊಡ್ಡ ರೋಗಗಳು ಇದೆ. ಕೆಲ ವೊಂದು ರೋಗಗಳನ್ನು ವೈದ್ಯರು ಕೂಡ ಗುಣಪಡಿಸಲು ಸಾಧ್ಯವಾಗು ವುದಿಲ್ಲ ಅಂತಹ ರೋಗಗಳನ್ನು ಕೂಡ ನಾವು ನೋಡಬಹುದು. ಆದರೆ ವೈದ್ಯರು ಗುಣಪಡಿಸಲು ಸಾಧ್ಯವಾಗದೇ ಇರುವಂತಹ ರೋಗಗಳನ್ನು ನಾವು ಈ ದೇವಸ್ಥಾನಕ್ಕೆ ಹೋಗುವುದರ ಮೂಲಕ ಗುಣಪಡಿಸಿಕೊಳ್ಳಬಹುದು ಹೌದು ಏನಿದು ಆಶ್ಚರ್ಯ ಎಂದು ನಿಮಗೆ ಅನ್ನಿಸಬಹುದು ಆದರೆ ಇದು ಸತ್ಯ.

ಭಾರತದಲ್ಲಿ ಅತಿ ಹೆಚ್ಚು ಜನರಿಗೆ ಆಗುವಂತಹ ಪಾರ್ಶ್ವ ವಾಯು ಅಥವಾ ಪ್ಯಾರಾಲಿಸಿಸ್, ಕಣ್ಣಿನ ಸಮಸ್ಯೆ ಅತಿಯಾದ ತಲೆನೋವಿನ ಸಮಸ್ಯೆ, ಎಲ್ಲಾ ರೀತಿಯ ಚರ್ಮರೋಗದ ಸಮಸ್ಯೆ ಗಳಿಗೂ ಕೂಡ ಈ ದೇವಸ್ಥಾನಕ್ಕೆ ಹೋದರೆ ಸಾಕು ಅದು ಸಂಪೂರ್ಣವಾಗಿ ಗುಣವಾಗುತ್ತದೆ.

ಈ ದೇವಸ್ಥಾನದ ಹೆಸರು :- ಚತುರ್ ದಾಸ್ ಜಿ ಮಹಾರಾಜ್ ಬುಟಾಟಿ ಧಮ್. ನೂರಕ್ಕೆ ನೂರರಷ್ಟು ರೋಗವನ್ನು ನಿವಾರಿಸುವಂತಹ ಮಂದಿರ ಎಂದೇ ಹೇಳಬಹುದು.
ಈ ದೇವಸ್ಥಾನದ ವಿಳಾಸ :- ರಾಜಸ್ಥಾನ ರಾಜ್ಯದ ಜೋಧಪುರ್ ನಗರಕ್ಕೆ ಹೋಗಬೇಕು ಜೋಧಪುರ್ ನಗರದಿಂದ 146 ಕಿಲೋಮೀಟರ್ ಪ್ರಯಾಣ ಮಾಡಿದರೆ ಬುಠಟಿಹಳ್ಳಿ ಸಿಗುತ್ತೆ ಇದೇ ಹಳ್ಳಿಯಲ್ಲಿ ನೆಲೆಸಿರುವ “ಚತುರ್ದಾಸ್ ಜಿ ಮಹಾರಾಜ ದೇವಸ್ಥಾನ”.

ಮತ್ತೊಂದು ಅದ್ಭುತವಾದ ಸಂಗತಿ ಏನು ಎಂದರೆ. ಈ ದೇವಸ್ಥಾನ ಸಂಪೂರ್ಣವಾಗಿ ಉಚಿತ ಬರುವ ಭಕ್ತಾದಿಗಳಿಗೆ ಊಟ ವಸತಿ ಸೇವೆ ಎಲ್ಲವೂ ಕೂಡ ಉಚಿತ. ಈ ದೇವಸ್ಥಾನಕ್ಕೆ ಹೋಗುವ ಯಾರೊಬ್ಬ ಭಕ್ತಾದಿಗಳು ಕೂಡ ಕಾಣಿಕೆಯನ್ನು ಹಾಕುವಂತಿಲ್ಲ.

ಈ ದೇವಸ್ಥಾನದಲ್ಲಿ ಹೋಗುವಂತಹ ಭಕ್ತಾದಿಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ ಹೊರತು ಇಲ್ಲಿರುವಂತಹ ದೇವರು ಯಾವುದೇ ರೀತಿಯ ಕಾಣಿಕೆಯನ್ನು ಕೇಳುವುದಿಲ್ಲ ಹಾಗೂ ಅಲ್ಲಿ ಯಾರು ಕೂಡ ಕಾಣಿಕೆ ಯನ್ನು ಕೇಳುವುದಿಲ್ಲ. ವಿದೇಶಗಳಿಂದಲೂ ಕೂಡ ಸಾಕಷ್ಟು ಭಕ್ತಾದಿಗಳು ಇಲ್ಲಿಗೆ ಬಂದು ಸಾಕಷ್ಟು ರೋಗಗಳನ್ನು ಗುಣಪಡಿಸಿಕೊಂಡು ಹೋಗಿದ್ದಾರೆ.

ಅಷ್ಟೇ ಅಲ್ಲದೆ ಕರ್ನಾಟಕದಿಂದಲೂ ಕೂಡ ನೂರಾರು ಮಂದಿ ಈ ದೇವಸ್ಥಾನಕ್ಕೆ ಬಂದು ಅವರ ಸಮಸ್ಯೆಗಳನ್ನು ಕೂಡ ಗುಣಪಡಿಸಿ ಕೊಂಡು ಹೋಗಿದ್ದಾರೆ. ಈ ದೇವಸ್ಥಾನದಲ್ಲಿ ನೆಲೆಸಿರುವ ದೇವರು ಚತುರ್ ದಾಸ್ ಜಿ ಮಹಾರಾಜ್ ಬುಟಾಟಿ. ಇವರನ್ನು ನಡೆಯುತ್ತಿದ್ದ ದೇವರು ಎಂದೇ ಕರೆಯುತ್ತಾರೆ. ಇವರು ಜೀವಂತವಾಗಿ ಸಮಾಧಿ ಯಾಗಿರುವ ದೈವ ಪುರುಷರು ಸುಮಾರು 500 ವರ್ಷಗಳ ಹಿಂದೆ ಬುಟಾಟಿ ನಗರಕ್ಕೆ ಬಂದು ನೆಲೆಸುತ್ತಾರೆ.

ಇವರು ಯಾವ ಒಂದು ಕಾರಣಕ್ಕಾಗಿ ಬುಟಾಟಿ ನಗರಕ್ಕೆ ಬಂದು ಸೇರಿದರು ಇವರ ತಂದೆ ತಾಯಿಗಳು ಯಾರು ಇವರ ಹಿನ್ನೆಲೆ ಏನು ಎಂದು ಸಹ ಇಲ್ಲಿಯವರೆಗೆ ಯಾರಿಗೂ ಕೂಡ ತಿಳಿದಿಲ್ಲ. ಅಂದಿನ ಸಮಯದಲ್ಲಿ ಚತುರ್ ದಾಸ್ ಜಿ ಮಹಾರಾಜ್ ಅವರು ಭಕ್ತರ ಕೈಗಳನ್ನು ಮುಟ್ಟಿದರೆ ಸಾಕು ರೋಗಗಳೆಲ್ಲವೂ ಕೂಡ ಗುಣವಾಗುತ್ತಿತ್ತು 1970 ರಲ್ಲಿ ಲಕ್ಷಾಂತರ ಭಕ್ತಾದಿಗಳ ಮುಂದೆ ಜೀವಂತ ಸಮಾಧಿಯಾಗುತ್ತಾರೆ.

ಈಗ ಶ್ರೀ ರಾಘವೇಂದ್ರ ಸ್ವಾಮಿಗಳು ಹೇಗೆ ಇದ್ದಾರೋ ಅದೇ ರೀತಿ ಚತುರ್ ದಾಸ್ ಜಿ ಮಹಾರಾಜ್ ಅವರು. ಪ್ಯಾರಾಲಿಸಿಸ್, ಕಣ್ಣಿನ ಸಮಸ್ಯೆ ಅತಿಯಾದ ತಲೆನೋವಿನ ಸಮಸ್ಯೆ, ಚರ್ಮದ ಸಮಸ್ಯೆ ಇದ್ದವರು ಈ ದೇವಸ್ಥಾನದಲ್ಲಿ ಏಳು ದಿನಗಳ ಕಾಲ ಇದ್ದು ಪರಿಕರಂ ಸೇವೆ ಮಾಡಬೇಕು. ಪರಿಕರಂ ಸೇವೆ ಎಂದರೆ ಬೆಳಗಿನ ಜಾವ 5:30ಕ್ಕೆ ತಣ್ಣೀರಿನ ಸ್ನಾನ ಮಾಡಿ ದೇವಸ್ಥಾನದ ಸುತ್ತ 108 ಪ್ರದಕ್ಷಿಣೆಯನ್ನು ಹಾಕಬೇಕು.

ಆನಂತರ ದೇವಸ್ಥಾನದ ಮುಂಭಾಗದಲ್ಲಿ ನಿಂತು 11 ದೀರ್ಘ ದಂಡ ನಮಸ್ಕಾರ ಹಾಕಬೇಕು ಅದೇ ರೀತಿಯಾಗಿ ಸಂಜೆ 21 ಪ್ರದಕ್ಷಿಣೆ ಮಾಡಿ 11 ದೀರ್ಘ ದಂಡ ನಮಸ್ಕಾರ ಹಾಕಬೇಕು. ಹೀಗೆ ಈ ರೀತಿ ಮಾಡಿದರೆ ಒಂದು ಪರಿಕರಂ ಸೇವೆ ಮುಕ್ತಾಯ ಆದಂತೆ ಅರ್ಥ ಇದೇ ರೀತಿಯಾಗಿ ಏಳು ದಿನಗಳ ಕಾಲ ಪರಿಕರಂ ಸೇವೆ ಮಾಡಬೇಕು ಏಳು ದಿನಗಳು ಕೂಡ ಭಕ್ತಾದಿಗಳಿಗೆ ಉಚಿತವಾದ ವಸತಿ ಊಟದ ಸೇವೆ ಇರುತ್ತದೆ.

ಒಂದು ವೇಳೆ ಆರೋಗ್ಯ ಸಮಸ್ಯೆ ಇರುವವರು ಇದನ್ನು ಮಾಡಲು ಸಾಧ್ಯವಿಲ್ಲ ಎಂದರೆ ಅವರ ಜೊತೆ ಬಂದಿರುವವರು ಈ ಸೇವೆಯನ್ನು ಮಾಡಬಹುದು. ಏಳು ದಿನಗಳು ಕಳೆದ ಮುಂದಿನ ಏಳು ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ನಿಮ್ಮ ಕಣ್ಣಮುಂದೆ ಕಾಣಿಸುತ್ತದೆ. ಈ ಸಮಸ್ಯೆ ಗುಣವಾದ ಒಂದು ವರ್ಷದ ಒಳಗಾಗಿ ನೀವು ಈ ದೇವಸ್ಥಾನಕ್ಕೆ ಬಂದು ಎರಡು ದಿನಗಳು ಇದ್ದು ಚತುರ್ದಾಸ್ ಜಿ ಅವರ ಸೇವೆ ಮಾಡಿಕೊಂಡು ಹೋಗಬೇಕು.

ಮಹಿಳೆಯರಿಗಾಗಿ ಉಪಯುಕ್ತ ಟಿಪ್ಸ್ ಗಳು.!

 

ಅಡುಗೆ ಮನೆಯ ಟಿಪ್ಸ್ ಗಳುಅಡುಗೆ ಮನೆಯಲ್ಲಿ ಹಾಕಬೇಕಾದ ಶ್ರಮವನ್ನು ಕಡಿಮೆ ಮಾಡುತ್ತದೆ ಹಾಗೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಸಾರಿಗೆ ಉಪ್ಪು ಜಾಸ್ತಿ, ಟೊಮೆಟೊ ಸಿಪ್ಪೆ ಬಿಡಿಸಬೇಕು ಇಂಥ ಅಡುಗೆ ಸಮಸ್ಯೆಗಳಿಗೆ ಸೂಪರ್ ಟಿಪ್ಸ್ ಗಳು.

ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸಿದರೆ ಕೆಲವು ಖಾದ್ಯ ಇನ್ನಷ್ಟು ರುಚಿಯಾಗುತ್ತದೆ ಹಾಗೂ ಅಡುಗೆ ಕೆಲಸವೂ ಸುಲಭವಾಗುತ್ತದೆ. ಅಡುಗೆ ಮನೆಯಲ್ಲಿ ಯಾವ ಕೆಲವು ಟಿಪ್ಸ್ ಗಳನ್ನು ಯಾವ ಸಮಯದಲ್ಲಿ ಅನುಸರಿಸುವುದರಿಂದ ಆ ಕೆಲಸ ನಮಗೆ ಸುಲಭವಾಗಿ ಯಾವ ಕೆಲಸವನ್ನು ಹೇಗೆ ಕಡಿಮೆ ಸಮಯದಲ್ಲಿ ಬೇಗ ಮಾಡಬಹುದು ಎನ್ನುವ ಮಾಹಿತಿ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ಸಾರಿಗೆ ಉಪ್ಪು ಹೆಚ್ಚಾದರೆ ಕಬ್ಬಿಣದ ಸೌಟನ್ನು ಒಲೆಯ ಮೇಲಿಟ್ಟು ಅದು ಕೆಂಪಗೆ ಕಾದ ಮೇಲೆ ಸಾರಿನಲ್ಲಿ ಅದ್ದಿದರೆ ಉಪ್ಪು ಸರಿಯಾಗುತ್ತದೆ
* ದ್ರಾಕ್ಷಿ, ಟೊಮೆಟೊ, ಕಿತ್ತಳೆ ಹಣ್ಣುಗಳನ್ನು ಕುದಿಯುವ ನೀರಿನಲ್ಲಿ ಎರಡು ನಿಮಿಷಗಳ ಕಾಲ ಇಟ್ಟು ನಂತರ ತಣ್ಣೀರಿಗೆ ಹಾಕಿದರೆ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು.

* ಗಾಜಿನ ಲೋಟಕ್ಕೆ ಬಿಸಿ ಬಿಸಿ ಕಾಫಿ ಅಥವಾ ಟೀ ಹಾಕುವ ಮುಂಚೆ ಆ ಲೋಟದಲ್ಲಿ ಒಂದು ಚಮಚ ಹಾಕಿಟ್ಟರೆ ಲೋಟಕ್ಕೆ ಬಗ್ಗಿಸಿದ ಪೇಯದ ಬಿಸಿಯನ್ನು ಆ ಚಮಚ ಸಾಕಷ್ಟು ತೆಗೆದುಕೊಳ್ಳುವ ಕಾರಣ ಆ ಲೋಟ ಬಿಸಿಗೆ ಒಡೆಯುವುದಿಲ್ಲ.
* ಕಾಫಿಗೆ ಒಂದು ಚಿಟಿಕೆ ಉಪ್ಪು ಹಾಕಿ ಕಲಸಿ ಕುಡಿದರೆ ಕಾಫಿಯ ರುಚಿ ಹೆಚ್ಚುತ್ತದೆ.
* ಆಲೂಗೆಡ್ಡೆ ಬೇಯಿಸಿದ ನೀರಿನಿಂದ ಬೆಳ್ಳಿ ಮತ್ತು ಇತರ ಪಾತ್ರೆಗಳನ್ನು ಅಚ್ಚುಕಟ್ಟಾಗಿ ತೊಳೆಯಬಹುದು.

* ಟೀ ಸೊಪ್ಪನ್ನು ಗಾಜಿನ ಜಾಡಿಗಳಲ್ಲಿ ಹಾಕಿಟ್ಟರೆ ಟೀ ರುಚಿ ಹೆಚ್ಚುತ್ತದೆ. ಟೀ ಕುದಿಯುವಾಗ ಕಿತ್ತಳೆ ಸಿಪ್ಪೆ ಅಥವಾ ಏಲಕ್ಕಿ ಸಿಪ್ಪೆ ಹಾಕಿದರೆ ವಿಶಿಷ್ಟ ರುಚಿ ಸಿಗುತ್ತದೆ.
* ತೊಗರಿ ಬೇಳೆ ಬೇಯಲು ಇಡುವಾಗ ಅದರ ಜೊತೆ ಒಂದು ಚೂರು ತೆಂಗಿನಕಾಯಿ ಹಾಕಿದರೆ ಬೇಳೆ ಬೇಗ ಮತ್ತು ಚೆನ್ನಾಗಿ ಬೇಯುತ್ತದೆ.
* ಕಡಗೋಲನ್ನು ಬಿಸಿ ನೀರಿನಲ್ಲಿ ಹಾಕಿ ತೆಗೆದು ಮಜ್ಜಿಗೆ ಕಡೆದರೆ ಅದಕ್ಕೆ ಬೆಣ್ಣೆ ಅಂಟುವುದಿಲ್ಲ. ಮಳೆಗಾಲದಲ್ಲಿ ಮಿಕ್ಸಿಯಲ್ಲಿ ಬೆಣ್ಣೆ ತೆಗೆಯುವಾಗ ಬಿಸಿ ನೀರು ಮತ್ತು ಬೇಸಿಗೆಯಲ್ಲಿ ತಂಪು ನೀರು ಹಾಕಿದರೆ ಬೆಣ್ಣೆ ಸುಲಭವಾಗಿ ಬರುತ್ತದೆ.

* ಹಾಲು ಕಾಯಿಸುವಾಗ ಆ ಪಾತ್ರೆಯಲ್ಲಿ ಒಂದು ಸ್ಟೀಲ್ ಸೌಟು ಹಾಕಿಟ್ಟರೆ ಹಾಲು ಉಕ್ಕಿ ಚೆಲ್ಲುವುದಿಲ್ಲ. ಸೊಪ್ಪು ಬೇಯಿಸುವಾಗ ಪಾತ್ರೆ ಮೇಲೆ ಮುಚ್ಚಳ ಇಡಬೇಡಿ. ಇದರಿಂದ ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಇರುತ್ತದೆ.
* ಕಾಲಿಫ್ಲವರ್‌ಗೆ ಸ್ವಲ್ಪ ವಿನಿಗರ್ ಬೆರೆಸಿ ಬೇಯಿಸಿದರೆ ಅದರ ಬಿಳಿ ಬಣ್ಣ ಹಾಗೆಯೇ ಇರುತ್ತದೆ. ಮಸಾಲೆ ಅಥವಾ ಕೊಬ್ಬರಿ ರುಬ್ಬುವಾಗ ಸ್ವಲ್ಪ ಉಪ್ಪು ಹಾಕಿದರೆ ಕೊಬ್ಬರಿ ಬೇಗ ನುಣ್ಣಗಾಗುತ್ತದೆ ಮತ್ತು ಮೈ ಮೇಲೆ ಸಿಡಿಯುವುದಿಲ್ಲ.

* ಪಲಾವ್ ಮಾಡುವ ಮೊದಲು ಬಾಸುಮತಿ ಅಕ್ಕಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟು ನೀರು ಬಸಿದು ಮೂರ್ನಾಲ್ಕು ನಿಮಿಷ ಹಾಗೆಯೇ ಬಿಟ್ಟು ನಂತರ ಪಲಾವ್ ಮಾಡಿದರೆ ಅನ್ನ ಮುದ್ದೆಯಾಗದೆ ಉದುರು ಉದುರಾಗಿರುತ್ತದೆ.
* ದೋಸೆ ಅಕ್ಕಿಗೆ ಸ್ವಲ್ಪ ಹೆಸರುಬೇಳೆ ಹಾಕಿ ರುಬ್ಬಿದರೆ ದೋಸೆ ಮೃದುವಾಗುತ್ತದೆ. ಬಾಳೆಕಾಯಿಯನ್ನು ಹೆಚ್ಚುವಾಗ ಕೈಗಳಿಗೆ ಮಜ್ಜಿಗೆ ಸವರಿದರೆ ಕೈ ಕಪ್ಪಾಗುವುದಿಲ್ಲ.
* ಗಾಳಿ ಬರುವ ಸ್ಥಳದಲ್ಲಿ ಈರುಳ್ಳಿ ಹೆಚ್ಚಿದರೆ ಕಣ್ಣೀರು ಬರುವುದನ್ನು ತಪ್ಪಿಸಬಹುದು. ಕೈಯೆಲ್ಲಾ ಸೀಮೆಎಣ್ಣೆ ವಾಸನೆಯಿದ್ದರೆ ತಿಳಿ ಮಜ್ಜಿಗೆಯಿಂದ ಕೈಗಳನ್ನು ತೊಳೆಯಿರಿ.

* ಬೆಳ್ಳಿ ಪಾತ್ರೆಗಳನ್ನು ವಿಭೂತಿಯಿಂದ ಮತು ಸ್ಟೀಲ್ ಪಾತ್ರೆಗಳನ್ನು ಗೋಧಿ ಹಿಟ್ಟಿನಿಂದ ತಿಕ್ಕಿ ತೊಳೆದರೆ ಅವುಗಳಲ್ಲಿ ಅಂಟಿದ ಜಿಡ್ಡು ಹೋಗಿ ಪಾತ್ರೆಗಳು ಹೊಳೆಯುತ್ತವೆ.
* ಕೈಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಹಸಿ ಮೆಣಸಿನಕಾಯಿಗಳನ್ನು ಹೆಚ್ಚಿದರೆ ಕೈಗಳು ಉರಿಯುವುದಿಲ್ಲ. ಸೀಮೆ ಬದನೆಕಾಯಿ ಹೆಚ್ಚುವಾಗ ಅಂಗೈಗೆ ಕೊಬ್ಬರಿ ಎಣ್ಣೆ ಹಚ್ಚಿದರೆ ಕೈಯಲ್ಲಿ ಅಂಟಿನ ಸಿಪ್ಪೆ ಏಳುವುದಿಲ್ಲ.