Home Blog Page 184

ಅಜ್ಜನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಎಷ್ಟು ಪಾಲು ಸಿಗುತ್ತದೆ ಗೊತ್ತಾ.?

ಭಾರತದ ಕುಟುಂಬಗಳಲ್ಲಿ ಆಸ್ತಿ ವಿಭಜನೆ ಕುರಿತಾದ ವಿಷಯ ಬಹಳ ಜಟಿಲವಾದ ಸಮಸ್ಯೆ ಆಗಿದೆ. ಇಂದು ಕೋರ್ಟುಗಳಲ್ಲಿ ದಾಖಲಾಗುತ್ತಿರುವ ಕೇಸ್ ಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಯ ಮೇಲಿನ ಹಕ್ಕಿನ ಕುರಿತಾದ ಕೇಸ್ ಗಳೇ ಹೆಚ್ಚಾಗಿ ಇರುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಪಾಲಿನ ಹಕ್ಕುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಲೇ ಬೇಕು. ಆಸ್ತಿಯ ಮೇಲೆ ತಮ್ಮ ಹಕ್ಕು ಏನಿದೆ ಎನ್ನುವುದನ್ನು ಅರಿತಿಕೊಂಡಿರಬೇಕು.

ಹಿಂದೂ ಉತ್ತರಾಧಿಕಾರತ್ವದ ಕಾಯಿದೆ ಪ್ರಕಾರ ಯಾವುದೇ ಮಗ ಅಥವಾ ಮಗಳು ಹುಟ್ಟಿದಾಗ ಆಸ್ತಿಯ ಭಾಗವಾಗಿರುತ್ತಾರೆ ಅಂದರೆ ನಾಲ್ಕು ತಲೆಮಾರುಗಳಿಂದ ಆ ವಿಭಜಿತ ಕುಟುಂಬದಲ್ಲಿ ಪುರುಷ ಸದಸ್ಯರು ಅಥವಾ ಮಹಿಳಾ ಸದಸ್ಯರು ಪಾರಂಪರಿಕವಾಗಿ ವರ್ಗಾವಣೆ ಮಾಡಿಕೊಂಡು ಬಂದಿರುವ ಆಸ್ತಿಯಲ್ಲಿ ಆ ಕುಟುಂಬದಲ್ಲಿ ಜನಿಸಿದ ಪ್ರತಿಯೊಂದು ಮಗ ಅಥವಾ ಮಗಳಿಗೂ ಕೂಡ ಜನ್ಮಸಿದ್ಧವಾದ ಹಕ್ಕು ಇರುತ್ತದೆ.

ಹಾಗೆಯೇ ಒಬ್ಬ ಅಜ್ಜನು ಒಂದು ಆಸ್ತಿಯನ್ನು ಆತ ಸ್ವಯಂ ಸಾಧೀನಪಡಿಸಿಕೊಂಡಿದ್ದರೆ ಆತನದ್ದು ಸ್ವಯಾರ್ಜಿತ ಆಸ್ತಿ ಆಗಿದ್ದರೆ ಅದರಲ್ಲಿ ಹಕ್ಕು ಕೇಳಲು ಯಾರಿಗೂ ಸಹ ಅವಕಾಶವೇ ಇರುವುದಿಲ್ಲ. ಆತನು ತಾನು ಸಂಪಾದನೆ ಮಾಡಿದ ಆತನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಯಾವುದೇ ಹೆಣ್ಣು ಮಕ್ಕಳಿಗೆ ಅಥವಾ ಗಂಡು ಮಕ್ಕಳಿಗೆ ಅಥವಾ ಮೊಮ್ಮಕ್ಕಳಿಗೆ ಬೇಕಾದರೂ ದಾನ ಪತ್ರದ ಮೂಲಕ ಅಥವಾ ಕ್ರಯ ಮಾಡಬೇಕು ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಬಹುದು.

ಹಾಗಾದರೆ ಅಜ್ಜನ ಯಾವ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಪಾಲು ಇರುತ್ತದೆ ಎಂದು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದರೆ ಈ ಅಂಕಣವನ್ನು ಪೂರ್ತಿಯಾಗಿ ಓದಲೇಬೇಕು. ಯಾಕೆಂದರೆ ಒಂದು ಆಸ್ತಿಯ ಹಕ್ಕು ಅದು ಹೇಗೆ ವರ್ಗಾವಣೆ ಆಗಿದೆ ಅಥವಾ ಆಸ್ತಿಯು ಹೇಗೆ ಬಂದಿದೆ ಎನ್ನುವುದರ ಆಧಾರದ ಮೇಲೆ ಉಳಿದ ಹಕ್ಕುಗಳು ನಿರ್ಧಾರ ಆಗುತ್ತದೆ.

ಮೊದಲೇ ತಿಳಿಸಿದಂತೆ ಒಬ್ಬ ಅಜ್ಜನಿಗೆ ಆಸ್ತಿಯು ಆತನ ತಂದೆಯಿಂದ ಬಂದಿದ್ದರೆ ಮೊಮ್ಮಕ್ಕಳಿಗೂ ಕೂಡ ಅದರಲ್ಲಿ ಹಕ್ಕು ಇರುತ್ತದೆ. ಹಾಗೆಯೇ ವಿಭಜನೆ ಆಗುವ ಸಂದರ್ಭದಲ್ಲಿ ಆ ತಾತನಿಗೆ ಐದು ಜನ ಮಕ್ಕಳಿದ್ದು 10 ಎಕರೆ ಆಸ್ತಿ ಇತ್ತು ಎಂದು ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಐದು ಜನ ಮಕ್ಕಳಿಗೆ ಸಮಾನವಾಗಿ ತಲಾ ಎರಡೆಎರಡು ಎಕರೆ ಆಸ್ತಿ ಬರುತ್ತದೆ.

ಈಗ ಇದು ಮೊಮ್ಮಕಳಿಗೆ ಅವರ ತಂದೆಯ ಆಸ್ತಿ ಆಯಿತು. ಈಗ ಆ ಮೊಮ್ಮಕ್ಕಳಿಗೆ ತಂದೆಯ ಪಾಲಿನ ಆಸ್ತಿ ಮಾತ್ರ ಬರುತ್ತದೆ. ಐದು ಜನ ಮೊಮ್ಮಕ್ಕಳದಲ್ಲಿ ಒಬ್ಬ ಮಗನಿಗೆ ಇಬ್ಬರು ಮಕ್ಕಳಿದ್ದು ಮತ್ತೊಬ್ಬ ಮಗನಿಗೆ ಒಬ್ಬನೇ ಮಗನಿದ್ದರೆ ಇಬ್ಬರು ಮಕ್ಕಳನ್ನು ಹೊಂದಿದ್ದ ಮಗನ ಮೊಮ್ಮಕ್ಕಳಿಗೆ ತಲಾ ಒಂದೊಂದು ಎಕರೆ ಆಸ್ತಿ, ಒಬ್ಬನೇ ಮಗನನ್ನು ಹೊಂದಿದ್ದ ಮೊಮ್ಮಗನಿಗೆ ಅಜ್ಜನ ಆಸ್ತಿಯಲ್ಲಿ ಎರಡು ಎಕರೆ ಆಸ್ತಿ ಸಿಗುತ್ತದೆ.

ಒಂದು ವೇಳೆ ತಂದೆಯು ಜೀವಂತವಾಗಿಲ್ಲದ ಪಕ್ಷದಲ್ಲಿ ತಾತನು ಮೊಮ್ಮಕ್ಕಳಿಗೆ ಆಸ್ತಿ ಕೊಡಲು ನಿರಾಕರಿಸಿದ ಸಂದರ್ಭದಲ್ಲಿ ಮೊಮ್ಮಕ್ಕಳು ಕೇಸು ದಾಖಲಿಸಿ ಆಸ್ತಿ ಮೇಲಿನ ಹಕ್ಕನ್ನು ಕೇಳಬಹುದು. ಆದರೆ ತಂದೆಯ ಪಾಲಿನ ಆಸ್ತಿ ಮಾತ್ರ ಮೊಮ್ಮಕ್ಕಳಿಗೆ ಸಿಗುತ್ತದೆ. ಮತ್ತೊಮ್ಮೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶ ಏನು ಎಂದರೆ ತಾತನ ಸ್ವಯಾರ್ಜಿತ ಆಸ್ತಿ ಆಗಿದ್ದರೆ ಮೊಮ್ಮಕ್ಕಳಿಗೆ ಕೋರ್ಟಿನಲ್ಲಿ ಕೇಸು ಹಾಕಲು ಅವಕಾಶ ಇರುವುದಿಲ್ಲ.

ಒಂದು ವೇಳೆ ತಾತ ಅದನ್ನು ಯಾರಿಗೂ ತನ್ನ ಆಸ್ತಿಯ ಮೇಲಿನ ಹಕ್ಕನ್ನು ವರ್ಗಾವಣೆ ಮಾಡದೆ ಮರಣ ಹೋಗಿದ್ದರೆ ಆ ಸಂದರ್ಭದಲ್ಲಿ ಉಳಿದ ಎಲ್ಲಾ ವಾರಸುದಾರರು ಕೂಡ ಸಮಾನವಾಗಿ ಭಾಗ ಮಾಡಿಕೊಳ್ಳಬಹುದು. ಈ ಬಗ್ಗೆ ನಿಮಗೆ ಏನೇ ಗೊಂದಲಗಳಿದ್ದರೂ ಹತ್ತಿರದಲ್ಲಿರುವ ವಕೀಲರಿಂದ ಕಾನೂನಿನ ಸಲಹೆ ಪಡೆದುಕೊಂಡು ಸಮಸ್ಯೆ ಬಗೆ ಹರಿಸಿಕೊಳ್ಳಿ.

ಕಳಸ ಇಟ್ಟು ಪೂಜೆ ಮಾಡುವವರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

 

ಕಳಶ ಎಂದರೆ ಲಕ್ಷ್ಮಿ ದೇವಿಯ ಸ್ವರೂಪ. ಹಾಗಾಗಿ ಅಂತಹ ಕಳಶವನ್ನು ಮನೆಯಲ್ಲಿ ಇಡುವಂತಹ ಸಮಯದಲ್ಲಿ ಬಹಳಷ್ಟು ಎಚ್ಚರಿಕೆಯಿಂದ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ ವಾಗಿರುತ್ತದೆ. ಇಲ್ಲವಾದರೆ ನಿಮ್ಮ ಮನೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳು ತೊಂದರೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಹಾಗಾದರೆ ಈ ದಿನ ಮನೆಯಲ್ಲಿ ಕಳಸ ಇಟ್ಟು ಪೂಜೆ ಮಾಡುವಂತಹ ಸಮಯದಲ್ಲಿ ನಾವು ಯಾವುದೆಲ್ಲ ರೀತಿಯ ವಿಷಯಗಳನ್ನು ತಿಳಿದು ಕೊಂಡಿರಬೇಕು ಹಾಗೂ ಯಾವ ನಿಯಮಗಳನ್ನು ಅನುಸರಿಸಬೇಕಾಗು ತ್ತದೆ ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ. ಹಾಗಾದರೆ ನಾವು ಕಳಶವನ್ನು ಯಾವುದರಲ್ಲಿ ಇಡಬೇಕು ಅಂದರೆ ಯಾವ ಒಂದು ಚೊಂಬನ್ನು ಬಳಸಬೇಕಾಗುತ್ತದೆ ಎಂದು ನೋಡುವುದಾದರೆ.

• ಕಳಸಕ್ಕೆ ಯಾವತ್ತಿಗೂ ಸ್ಟೀಲ್ ಅಥವಾ ಕೋಟಿಂಗ್ ಕಳಸದ ಚೊಂಬನ್ನು ಬಳಸಲೇಬಾರದು.
• ಕಳಸಕ್ಕೆ ಬೆಳ್ಳಿ, ಹಿತ್ತಾಳೆ, ತಾಮ್ರದ ಚೊಂಬುಗಳು ಬಹಳ ಶ್ರೇಷ್ಠ ನಿಮ್ಮ ಶಕ್ತಿಗನುಸಾರವಾಗಿ ಇಟ್ಟು ಪೂಜಿಸಿ.
• ನಿಮ್ಮ ಪೂರ್ವಜರು ಯಾವ ರೀತಿ ಕಳಸ ಸ್ಥಾಪನೆ ಮಾಡಿ ಪೂಜಿಸು ತ್ತಿದ್ದರೋ ಅದೇ ರೀತಿ ನೀವು ಪಾಲಿಸುವುದು ಉತ್ತಮ.

• ಕೆಲವರು ಲಕ್ಷ್ಮೀ ಕಳಸ ಇಡುತ್ತಾರೆ ಇನ್ನೂ ಕೆಲವರು ಮನೆ ದೇವರ ಕಳಸ ಇಡುತ್ತಾರೆ, ಇನ್ನೂ ಕೆಲವರು ಕಾಯಿ ಕಳಸ ಇಡುತ್ತಾರೆ, ಹಾಗೂ ಇನ್ನೂ ಕೆಲವರು ಎಲೆ ಕಳಸ ಇಡುತ್ತಾರೆ, ಯಾವುದೇ ಆದರೂ ನಿಯಮ ಪಾಲಿಸುವುದು ಉತ್ತಮ. ಒಂದು ವೇಳೆ ನೀವು ಲಕ್ಷ್ಮೀ ಕಳಸ ಇಡುವುದಾ ದರೆ ಕಳಸಕ್ಕೆ ಮಾಂಗಲ್ಯಹಾಕಲೇಬೇಕು ಮಾಂಗಲ್ಯ ಇಲ್ಲದಿದ್ದರೆ ಅರಿಶಿನದ ಕೊಂಬನ್ನಾದರೂ ಕಟ್ಟಬೇಕು ನೆನಪಿರಲಿ.

• ಕಳಸವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಒಂದು ತಟ್ಟೆಗೆ 3 ಅಳತೆ / ಹಿಡಿ ಅಥವಾ 5 ಅಳತೆ | ಹಿಡಿ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿನ ಕುಂಕುಮ ಹಾಕಿ ಉಂಗುರುದ ಬೆರಳಿನಿಂದ ಅಷ್ಟದಳದ ಕಮಲವನ್ನು ಬಿಡಿಸಿ ಅದರ ಮೇಲೆ ಇಡಬೇಕು.

• ಕಳಸಕ್ಕೆ ಶುದ್ಧವಾದ ಚೊಂಬನ್ನು ತೆಗೆದುಕೊಳ್ಳಿ ನಂತರ ಅದಕ್ಕೆ ಅರಿಶಿನ ಕುಂಕುಮ, ಗಂಧ ಹಚ್ಚಿ ಶುದ್ಧವಾದ ನೀರು ಹಾಕಿ ನಂತರ ಅದಕ್ಕೆ 1ಚಿಟಿಕೆ ಅರಿಶಿನ ಕುಂಕುಮ ಹಾಕಿ ಸ್ವಲ್ಪ ಮಂತ್ರಾಕ್ಷತೆ ಹಾಕಿ ನಂತರ ಒಂದು ಹೂವು ಹಾಗೂ ಒಂದು ನಾಣ್ಯ ಯಾವುದಾದರು ಸರಿ ಹಿತ್ತಾಳೆ, ಬೆಳ್ಳಿ ಅಥವಾ ನಾವು ಪ್ರತಿನಿತ್ಯ ಉಪಯೋಗಿಸುವಂತಹ ನಾಣ್ಯ ಯಾವುದಾದರೂ ಸರಿ ಮರೆಯದೇ ಹಾಕಿ ಇದು ಪ್ರಾಣದ ಪ್ರತೀಕ. ಕಳಸಕ್ಕೆ ಹಾಕುವ ನೀರು ತೆಂಗಿನಕಾಯಿಗೆ ತಾಕುವಂತೆ ಇರಬೇಕು.

ಆದರೆ ಚೊಂಬಿನಿಂದ ಚೆಲ್ಲುವಂತೆ ಇರಬಾರದು. ಇನ್ನೂ ಕೆಲವರು ಕವಡೆ, ಗೋಮತಿ ಚಕ್ರ, ಕಮಲದ ಬೀಜವನ್ನು ಹಾಕುತ್ತಾರೆ. ಆದರೆ ಇದು ಹಾಕಲೇಬೇಕು ಎಂದೇನಿಲ್ಲ. ಬದಲಿಗೆ ಹಬ್ಬ ಹರಿದಿನದಲ್ಲಿ ಇವುಗಳನ್ನು ಬಳಸಬಹುದು.
• ತೆಂಗಿನಕಾಯಿ ವಿಷಯಕ್ಕೆ ಬಂದರೆ ಹಾಳಾಗದ ಅಥವಾ ಒಳ್ಳೆಯ ತೆಂಗಿನಕಾಯಿ ಆರಿಸಿ ಜೊತೆಗೆ ಜುಟ್ಟು ಇರುವ ತೆಂಗಿನಕಾಯಿ ಇಡಬೇಕು ಕಣ್ಣು ಕಾಣಿಸದ ತೆಂಗಿನಕಾಯಿ ಇಡಬೇಕು ಇದು ಬಹಳ ಮುಖ್ಯ.

• ಕಳಸಕ್ಕೆ ವೀಳ್ಯದೆಲೆ ಅಥವಾ ಮಾವಿನ ಎಲೆ ಯಾವುದಾದರೂ ಸರಿ ಇಡಬಹುದು. ಆದರೆ ಎಲೆ ಹರಿದಿರಬಾರದು, ತೂತಾಗಿರಬಾರದು ಹಾಗೂ ಎಲೆಗಳು ಒಂದೇ ಅಳತೆಯಲ್ಲಿರಬೇಕು ಇದನ್ನು ಗಮನದಲ್ಲಿಡಿ.
• ಯಾವುದೇ ಕಾರಣಕ್ಕೂ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆ ದಿನ ಕಳಸ ಕದಲಿಸಬಾರದು. ನಾಳೆ ಇದೆ ಅನ್ನುವಾಗಲೇ ತೆಗೆದು ಸ್ವಚ್ಚ ಮಾಡಿ.
• ಕಳಸ ಕದಲಿಸುವಾಗ 3 ಸಲ ಬಲಕ್ಕೆ ಸರಿಸಿ ನಂತರ ತೆಗೆಯಬೇಕು.
• ಇನ್ನೂ ತುಂಬಾ ಮುಖ್ಯವಾದ ವಿಷಯ ಎಂದರೆ ಕಳಸ ಪ್ರತಿಷ್ಠಾಪನೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಪದೇ ಪದೇ ಮುಟ್ಟುವುದು ಸರಿಪಡಿಸುವುದು ಮಾಡಲೇಬಾರದು.

ಸ್ವಂತ ಮನೆ ಇಲ್ಲದವರಿಗೆ ಬಂಪರ್ ಗುಡ್ ನ್ಯೂಸ್, ಸರ್ಕಾರದಿಂದ ಸಿಗಲಿದೆ 2.5 ಲಕ್ಷ ಸಂಪೂರ್ಣ ಉಚಿತ.!

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಒಂದು ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವ ಕನಸನ್ನು ಹೊಂದಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ತಮ್ಮ ಕನಸನ್ನು ಅಂದರೆ ಮನೆ ಕಟ್ಟುವಂತಹ ಕನಸನ್ನು ಈಡೇರಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆ ಎಂದರೆ ಅವರಿಗೆ ಬರುವಂತಹ ಆದಾಯದ ಮೂಲ ಅಧಿಕವಾಗಿದ್ದರೆ ಮಾತ್ರ ಕೆಲವೊಂದಷ್ಟು ಜನ ಅವರ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ.

ಆದರೆ ಕೆಲವೊಂದಷ್ಟು ಜನರಿಗೆ ಹಣಕಾಸಿನ ಲಾಭವೇ ಇಲ್ಲ ಎಂದರೆ ಅವರು ಈ ಕನಸನ್ನು ಹೇಗೆ ಈಡೇರಿಸಿಕೊಳ್ಳಲು ಸಾಧ್ಯ. ಹೌದು ಬಡ ವರ್ಗದ ಜನರು ಈ ಒಂದು ಕನಸನ್ನು ನನಸಾಗಿಸಿಕೊಳ್ಳಲು ಬಹಳ ಕಷ್ಟ ಎಂದೇ ಹೇಳಬಹುದು ಆದರೆ ಇಂದಿನ ಸರ್ಕಾರ. ಇಂತಹ ವಿಷಯಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕಿ ಬಡ ಜನರಿಗೆ ಅಂದರೆ ಕಡಿಮೆ ಹಣವನ್ನು ಸಂಪಾದನೆ ಮಾಡುವಂತಹ ಬಡ ಕುಟುಂಬಗಳಿಗೆ ಅವರು ವಾಸಿಸಲು ಸ್ವಂತ ಮನೆ ಇಲ್ಲದೆ ಇರುವವರಿಗೆ ಸರ್ಕಾರದ ವತಿಯಿಂದ ಇಂತಿಷ್ಟು ಎಂಬಂತೆ ಹಣವನ್ನು ಉಚಿತವಾಗಿ ಕೊಡುತ್ತಿದ್ದಾರೆ.

ಹೌದು ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ಜನರಿಗೆ ಕೆಲವು ಗ್ಯಾರಂಟಿಗಳನ್ನು ನಾವು ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಘೋಷಣೆಯನ್ನು ಮಾಡಿದ್ದರು. ಅದೇ ರೀತಿಯಾಗಿ ಆ ಯೋಜನೆಗಳಲ್ಲಿ ಮೊದಲನೆಯದಾಗಿ ಉಚಿತ ಬಸ್ ಪ್ರಯಾಣದ ಯೋಜನೆ ಈಗಾಗಲೇ ಜಾರಿಗೆ ಬಂದಿದ್ದು ಎಲ್ಲ ಮಹಿಳೆಯರು ಕೂಡ ಉಚಿತವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಪ್ರಯಾಣವನ್ನು ಮಾಡಬಹುದಾಗಿದೆ.

ಅದೇ ರೀತಿಯಾಗಿ ಈಗ ನೂತನ ವಸತಿ ಸಚಿವರಾಗಿರುವಂತಹ ಜಮೀರ್ ಅಹ್ಮದ್ ಅವರು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ಕಲೆಹಾಕಿ ಯಾರಿಗೆ ಸ್ವಂತ ಮನೆ ಸ್ವಂತ ಜಾಗ ಇರುವುದಿಲ್ಲವೋ ಹಾಗೂ ಅವರು ಬಡ ಜನರಾಗಿರುತ್ತಾರೋ ಅವರಿಗೆ ಸರ್ಕಾರದ ವತಿಯಿಂದ ಉಚಿತವಾಗಿ 25,000 ಹಣವನ್ನು ಕೊಡುವಂತೆ ಮಾಹಿತಿಯನ್ನು ಹೊರಡಿಸಿದ್ದಾರೆ.

ಹೌದು ಇದರಿಂದ ಅಂತಹ ಜನರು ಉಚಿತವಾಗಿ ಈ ಹಣವನ್ನು ಪಡೆದು ತಮ್ಮ ಮನೆ ಕೆಲಸಗಳಿಗೆ ಬಳಸಿಕೊಳ್ಳಬಹುದಾಗಿದೆ ಹಾಗೂ ಈ ಒಂದು ಯೋಜನೆ ಅವರಿಗೆ ತುಂಬಾ ಅನುಕೂಲವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ಮುಖ್ಯಮಂತ್ರಿ ವಸತಿ ಯೋಜನೆಯಡಿ ಹಲವಾರು ಜನರಿಗೆ ಈ ಒಂದು ಯೋಜನೆಯ ಪ್ರಯೋಜನ ಸಿಕ್ಕಿಲ್ಲ ಈ ವಿಷಯ ತಿಳಿದು ನನಗೆ ತುಂಬಾ ನೋವಾಗಿದೆ ಆದರೆ ಇನ್ನು ಮುಂದೆ ಈ ರೀತಿಯ ಯಾವುದೇ ಘಟನೆ ಸಂಭವಿಸುವುದಿಲ್ಲ ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ.

ಈಗ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ಈ ಒಂದು ಅಧಿಕಾರ ಜನರಿಗೆ ಪ್ರಯೋಜನವಾ ಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಹಿಂದಿನ ಪಕ್ಷ ಮಾಡಿದಂತಹ ಸಹಾಯವು ಮುಂದೆ ಅಂದರೆ ಈಗ ನೆನಪಿಗೆ ಬಾರದಂತೆ ನಾವು ಕೂಡ ಒಳ್ಳೆಯ ಯೋಚನೆಗಳನ್ನು ಜಾರಿಗೆ ತರುವುದರ ಮೂಲಕ ಜನರಿಗೆ ಉತ್ತಮವಾದಂತಹ ಪ್ರಯೋಜನವನ್ನು ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ಸಹ ಜಮೀರ್ ಅಹ್ಮದ್ ಅವರು ತಿಳಿಸಿಕೊಟ್ಟಿದ್ದಾರೆ ಹಾಗೂ ಈ ಒಂದು ಯೋಜನೆಯಡಿ ನಿಗದಿತ ಕಾಲಮಾನದೊಳಗಡೆ ಎಲ್ಲರಿಗೂ ನಾವು ಯೋಜನೆಯ ಪ್ರಯೋಜನ ವನ್ನು ಕೊಡುವುದಾಗಿ ಹಲವಾರು ಸಭೆಗಳನ್ನು ನಡೆಸಿ ಮಹತ್ತರವಾದ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ ಎಂದು ಸಹ ತಿಳಿಸಿದ್ದಾರೆ.

ಮನೆಯಲ್ಲಿ ಈ ಸಂಕೇತಗಳು ಕಂಡು ಬಂದರೆ ನಿಮ್ಮ‌ ಮನೆಯಲ್ಲಿ ದುಷ್ಟ ಶಕ್ತಿಗಳು ವಾಸವಾಗಿದೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ.!

 

ಸಾಮಾನ್ಯವಾಗಿ ಕೆಲವೊಂದಷ್ಟು ಜನರಿಗೆ ಕೆಲವೊಂದಷ್ಟು ಸಂಕೇತಗಳು ತಿಳಿದಿರುತ್ತದೆ ಅಂದರೆ ಯಾವ ರೀತಿಯ ಕೆಲವು ಗುಣಲಕ್ಷಣಗಳಾಗಿರ ಬಹುದು ಅಥವಾ ಯಾವ ಕೆಲವು ಲಕ್ಷಣಗಳು ಅವರ ಕಣ್ಣ ಮುಂದೆ ಕಾಣಿಸಿಕೊಳ್ಳುತ್ತಿದ್ದರೆ ಅವು ಅವರಿಗೆ ಅಶುಭ ಎಂದು ತಿಳಿದಿರುತ್ತದೆ. ಆದರೆ ಕೆಲವೊಂದಷ್ಟು ಜನರಿಗೆ ಈ ವಿಷಯವಾಗಿ ಯಾವುದೇ ರೀತಿಯ ಮಾಹಿತಿಗಳು ಸಹ ಇರುವುದಿಲ್ಲ.

ಹಾಗೂ ಈ ಕೆಲವು ಲಕ್ಷಣಗಳು ಅವರ ಜೀವನದಲ್ಲಿ ಅಂದರೆ ಅವರ ಪ್ರತಿನಿತ್ಯದ ಕೆಲಸ ಕಾರ್ಯಗಳಲ್ಲಿ ಕೆಲವೊಂದಷ್ಟು ಅಡ್ಡಿ ಆತಂಕಗಳನ್ನು ಉಂಟು ಮಾಡುತ್ತಿರುತ್ತದೆ. ಆದರೆ ಅವರಿಗೆ ಅದು ಯಾವ ಒಂದು ಕಾರಣಕ್ಕಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಅರ್ಥವೂ ಸಹ ಮಾಡಿಕೊಳ್ಳುವುದಿಲ್ಲ.

ಹಾಗಾದರೆ ಈ ದಿನ ಯಾವ ರೀತಿಯ ಕೆಲವು ಗುಣಲಕ್ಷಣಗಳು ಅಂದರೆ ಸಂಕೇತಗಳು ನಮ್ಮ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ನಮ್ಮ ಮನೆ ಯಲ್ಲಿ ದುಷ್ಟ ಶಕ್ತಿಗಳು ಇದೆ ಎಂದು ಗೊತ್ತಾಗುತ್ತದೆ. ಹಾಗೂ ಆ ಸಂಕೇತ ಗಳು ಯಾವುವು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಅದಕ್ಕೂ ಮೊದಲು ಪ್ರತಿಯೊ ಬ್ಬರೂ ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ಯಾವುದೇ ಮನೆಯಾಗಿರಲಿ ಆ ಮನೆಯಲ್ಲಿರುವಂತಹ ಮಹಿಳೆಯರು ಮನೆಯ ವಿಚಾರವಾಗಿ ಕೆಲವೊಂದಷ್ಟು ಆಚಾರ ವಿಚಾರಗಳನ್ನು ಹಾಗೂ ಹಿಂದಿನ ದಿನದಿಂದಲೂ ಯಾವ ಕೆಲವು ನಿಯಮಗಳನ್ನು ಅನುಸರಿಸುತ್ತಿದ್ದರೋ ಅವೆಲ್ಲವನ್ನು ಸಹ ಕಡ್ಡಾಯವಾಗಿ ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲದಿದ್ದರೆ ಆ ಮನೆಯಲ್ಲಿ ನೆಗೆಟಿವ್ ಎನರ್ಜಿ ಅಂದರೆ ದುಷ್ಟ ಶಕ್ತಿಗಳ ಆಗಮನ ಆಗುತ್ತದೆ ಎಂದೇ ಹೇಳಲಾಗುತ್ತದೆ. ಆದ್ದರಿಂದ ಯಾವುದೇ ರೀತಿಯ ತೊಂದರೆಗಳು ಬರುವುದಕ್ಕೂ ಮೊದಲು ಇಂತಹ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದು ಉತ್ತಮ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾವ ಕೆಲವು ಸಂಕೇತಗಳು ನಮ್ಮ ಮನೆಯಲ್ಲಿ ಕಂಡು ಬರುತ್ತಿದ್ದರೆ. ಆ ಮನೆಯಲ್ಲಿ ದುಷ್ಟ ಶಕ್ತಿಗಳು ಇದೆ ಎಂದು ಗೊತ್ತಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ಒಂದೊಂದಾಗಿ ತಿಳಿದು ಕೊಳ್ಳುತ್ತಾ ಹೋಗೋಣ.

1)ಮಧ್ಯರಾತ್ರಿ ಎದ್ದೇಳುವುದು. ಹೌದು ಇದ್ದಕ್ಕಿದ್ದ ಹಾಗೆ ರಾತ್ರಿ ಮಲಗಿದ್ದಾಗ ಯಾವುದೋ ಒಂದು ಕೆಟ್ಟ ಕನಸು ಕಂಡು ತಕ್ಷಣವೇ ಎದ್ದೇಳುವುದು ಕೂಡ ಮನೆಯಲ್ಲಿ ದುಷ್ಟ ಶಕ್ತಿಗಳು ಇದೆ ಎಂಬ ಸೂಚನೆಯನ್ನು ಕೊಡುತ್ತದೆ.

2) ಮನೆಯಲ್ಲಿ ಪೋಷಿಸುವ ಸಸ್ಯ ಗಿಡ ಮರಗಳು ಒಣಗಿ ಹೋಗುತ್ತವೆ. ಅದರಲ್ಲೂ ಬಹಳ ಮುಖ್ಯ ವಾಗಿ ಮನೆಯ ಮುಂದೆ ಇರುವಂತಹ ತುಳಸಿ ಗಿಡವೂ ಒಣಗುವುದು ಕೂಡ ಇದರ ಒಂದು ಪ್ರಮುಖ ಲಕ್ಷಣವಾಗಿದೆ.

3) ಮನೆಯಲ್ಲಿ ವಸ್ತು ಗಳು ಕಾಣಿಸುವುದಿಲ್ಲ.
4) ಮನೆಯಲ್ಲಿ ಇರುವಾಗ ಅಶಾಂತಿ.
5. ಏನೋ ಒಂದು ಕೊಳಾಯಿನಿಂದ ನೀರು ನಿರಂತರವಾಗಿ ಕಾರುವುದು. 6. ಯಾವಾಗಲೂ ಹಾಲು ಕೆಳಗೆ ಬೀಳುವುದು ಅಥವಾ ಹಾಲು ಕುದಿಯು ವಾಗ ಒಡೆದು ಹೋಗುವುದು.
7. ಅಥವಾ ಕೈಯಿಂದ ಸುಮ್ಮನೆ ವಸ್ತು ಗಳು ಜಾರಿ ಹೋಗೋದು.
8. ಗೊತ್ತಿಲ್ಲದ ಒಂದು ಬಾದೆ ಕುಟುಂಬವನ್ನು ಕಾಡುತ್ತದೆ.
9. ಮನೆಯಲ್ಲಿ ಅಶಾಂತಿ ಇರುವುದು ಕಾರಣವಿಲ್ಲದೆ ಜಗಳ ವಾಡುವುದು.

10. ನಾವು ಗೊತ್ತಿಲ್ಲದೇ ಮಾಡುವ ಕೆಲವು ಕೆಲಸಗಳು ಮನೆಯಲ್ಲಿ ನೆಗೆಟಿವ್ ಎನರ್ಜಿಯನ್ನು ಬರಿಸುತ್ತದೆ.
11. ಅಶ್ರದ್ಧೆಯಾಗಿ ಇರುವುದು, ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು.
12. ಬಿಚ್ಚಿದ ಬಟ್ಟೆಗಳು, ತಿಂದಿದ್ದ ಆದಮೇಲೆ ತೊಳೆಯದೇ ಇರುವ ಪಾತ್ರೆಗಳು, ಹೀಗೆ ಅನೇಕ ಅಶ್ರದ್ದೆ ಕೆಲಸಗಳಿಂದ ನಾವು ನಮ್ಮ ಮನೆಯಲ್ಲಿ ಇಲ್ಲದ ಕಷ್ಟಗಳನ್ನು ತರಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮಕ್ಕಳಾಗದವರು ಇಲ್ಲಿ ಬಂದು ತೊಟ್ಟಿಲು ಕಟ್ಟಿದರೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಇಲ್ಲಿರುವ ಲಕ್ಷಾಂತರ ತೊಟ್ಟಿಲುಗಳೇ ಹೇಳುತ್ತದೆ ಈ ತಾಯಿಯ ಮಹಿಮೆಯನ್ನು.!

 

ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಎಲ್ಲಾ ದೇವಾನುದೇವತೆಗಳ ಶಕ್ತಿ ಹಾಗೂ ಆ ದೇವಿಯ ಪವಾಡಗಳನ್ನು ನೋಡಿರುತ್ತಾರೆ. ಅದೇ ರೀತಿ ಯಾಗಿ ಯಾರು ಯಾವ ರೀತಿಯ ತೊಂದರೆ ಇರುತ್ತದೆ ಅವರ ಕಷ್ಟ ಗಳನ್ನು ದೂರ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿಯಾಗಿ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನರಿಗೆ ಮದುವೆಯಾಗಿ ಹಲವಾರು ವರ್ಷ ಕಳೆದರೂ ಕೂಡ ಅವರಿಗೆ ಸಂತಾನ ಭಾಗ್ಯ ಎನ್ನುವುದು ಇರುವುದಿಲ್ಲ.

ಅಂತವರು ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಖುಷಿಯನ್ನು ಮರೆತಿರು ತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಅಷ್ಟು ನೋವನ್ನು ಅವರು ಅನುಭವಿಸುತ್ತಿರುತ್ತಾರೆ. ಆ ನೋವು ಅನುಭವಿಸಿದವರಿಗಷ್ಟೇ ತಿಳಿದಿರುತ್ತದೆ. ಬದಲಿಗೆ ಬೇರೆ ಯಾರಿಗೂ ಕೂಡ ಆ ನೋವಿನ ಬಗ್ಗೆ ತಿಳಿಯುವುದಿಲ್ಲ.

ಅಂಥವರು ಯಾರು ಏನೇ ರೀತಿಯ ಪೂಜೆಯನ್ನು ಹೇಳಿದರು ಯಾವ ವ್ರತವನ್ನು ಮಾಡಿ ಎಂದು ಹೇಳಿದರು ಅವೆಲ್ಲವನ್ನು ಸಹ ಮಾಡುವುದಕ್ಕೆ ಸಿದ್ಧರಿರುತ್ತಾರೆ. ಏಕೆಂದರೆ ಅವರು ತಮ್ಮ ಜೀವನದಲ್ಲಿ ತಾಯ್ತನದ ಅನುಭವವನ್ನು ಅನುಭವಿಸಬೇಕು ಎನ್ನುವ ಉದ್ದೇಶದಿಂದ ಅವರಿಗೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶದಿಂದ ಯಾರು ಏನೇ ಹೇಳಿದರು ಅವೆಲ್ಲವನ್ನು ಸಹ ಅವರು ಮಾಡಲು ಮುಂದಿರುತ್ತಾರೆ.

ಅದೇ ರೀತಿಯಾಗಿ ಈ ದಿನ ಯಾರಿಗೆ ಮದುವೆಯಾಗಿ ಇನ್ನೂ ಮಕ್ಕಳಾಗಿರುವು ದಿಲ್ಲ ಅವರು ಈ ಒಂದು ದೇವಸ್ಥಾನಕ್ಕೆ ಬಂದು ಹರಕೆ ಮಾಡಿ ಹೋದರೆ ಒಂದು ವರ್ಷದೊಳಗೆ ಅವರಿಗೆ ಮಕ್ಕಳ ಭಾಗ್ಯ ಎನ್ನುವುದು ಆಗುತ್ತದೆ ಆ ಒಂದು ಪವಾಡವನ್ನು ಸೃಷ್ಟಿಸುತ್ತಿರುವಂತಹ ಒಂದು ಪವಿತ್ರವಾದ ಸ್ಥಳ ಯಾವುದು ಹಾಗೂ ಅಲ್ಲಿ ನೆಲೆಸಿರುವಂತಹ ದೇವಿ ಯಾರು.

ಹಾಗೂ ಈ ಒಂದು ದೇವಸ್ಥಾನಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಅಚ್ಚರಿ ಮೂಡಿಸುವಂತಹ ವಿಷಯಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಈ ದೇವಸ್ಥಾನ ಇರುವುದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹತ್ತಿರ ಹೌದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗುವಂತಹ ದಾರಿಯಲ್ಲಿ ಸಿಗುವಂತಹ ವನದುರ್ಗಿ, ಅಥವಾ ಮಾಸ್ತಿ ಕಟ್ಟೆ ಎಂಬ ಸ್ಥಳದಲ್ಲಿ ಈ ಒಂದು ದೇವಸ್ಥಾನ ನಿಮಗೆ ಕಂಡುಬರುತ್ತದೆ.

ಈ ಒಂದು ದೇವಸ್ಥಾನಕ್ಕೆ ಹೋಗಿ ನೀವು ಹರಕೆ ಮಾಡಿ ಅಲ್ಲಿ ಕೊಡುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ನೀವು ಉಪ ಯೋಗಿಸಿ ಅಲ್ಲಿ ಹೇಳುವ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸಿ ದರೆ ನಿಮಗೆ ಖಂಡಿತವಾಗಿಯೂ ಒಂದು ವರ್ಷದೊಳಗೆ ಮಕ್ಕಳ ಭಾಗ್ಯ ಎನ್ನುವುದು ಉಂಟಾಗುತ್ತದೆ. ಹೌದು ಇಲ್ಲಿ ನೆಲೆಸಿರುವಂತಹ ವನ ದುರ್ಗೆ ತಾಯಿಯು ಅವರಿಗೆ ಮಕ್ಕಳ ಭಾಗ್ಯವನ್ನು ಕರುಣಿಸುತ್ತಾಳೆ ಎನ್ನುವ ನಂಬಿಕೆ ಬಹಳ ದಿನದಿಂದಲೂ ಸಹ ಇದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ದೇವಿಯ ದರ್ಶನ ಪಡೆಯು ವುದು ಒಳ್ಳೆಯದು ಅದರಲ್ಲೂ ಮಕ್ಕಳಾಗದೆ ಇರುವಂಥ ದಂಪತಿಗಳು ಇಲ್ಲಿ ಬಂದು ಹರಕೆ ಹೊತ್ತು ಹೋಗಿದರೆ ಅವರಿಗೆ ಮಕ್ಕಳ ಭಾಗ್ಯ ಆಗುವುದು ಖಚಿತ. ಆ ನಂತರ ಅವರು ಹರಕೆ ತೀರಿಸುವ ಮೂಲಕ ಈ ದೇವಸ್ಥಾನದಲ್ಲಿ ತೊಟ್ಟಿಲನ್ನು ಕಟ್ಟುವುದು ಇಲ್ಲಿನ ಪದ್ಧತಿಯಾಗಿದೆ ಅದೇ ರೀತಿಯಾಗಿ ಗಂಡು ಮಗು ಬೇಕು ಎಂದು ಹರಕೆ ಹೊತ್ತವರು ಇಲ್ಲಿ ಬಂದು ಒಂದು ಗಂಟೆಯನ್ನು ಕಟ್ಟುವುದರ ಮೂಲಕ ಹರಕೆ ತೀರಿಸುತ್ತಾರೆ.

ಈ ಒಂದು ದೇವಸ್ಥಾನದಲ್ಲಿ ನೀವು ಲಕ್ಷಾಂತರ ತೊಟ್ಟಿಲುಗಳನ್ನು ನೀವು ಕಾಣಬಹುದಾಗಿದೆ ಹಾಗೂ ಇಲ್ಲಿ ನಡೆಯುತ್ತಿರುವಂತಹ ಪವಾಡ ಕೆಲವೊಂದಷ್ಟು ಜನರಿಗೆ ತಿಳಿದಿಲ್ಲ ಆದ್ದರಿಂದ ಯಾರಿಗೆ ಮಕ್ಕಳ ಭಾಗ್ಯ ಇಲ್ಲವೋ ಅವರು ಈ ಒಂದು ದೇವಿಯ ದರ್ಶನ ಪಡೆಯುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ ಉಚಿತವಾಗಿ ಪಡೆಯಿರಿ.!

 

ಕೇಂದ್ರ ಸರ್ಕಾರದಿಂದ ರಾಜ್ಯದಾದ್ಯಂತ ಇರುವ ಎಲ್ಲಾ ಮಹಿಳೆಯರಿಗೆ ಅದರಲ್ಲೂ ಮನೆಯಲ್ಲಿರುವಂತಹ ಗೃಹಿಣಿಯರಿಗೆ ಬಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ. 18 ವರ್ಷದಿಂದ 55 ವರ್ಷದ ಒಳಗಿನ ಪ್ರತಿಯೊಬ್ಬ ಮಹಿಳೆಯರಿಗೆ ಕೇಂದ್ರ ಸರ್ಕಾರವು ಉಚಿತವಾಗಿ ಬಟ್ಟೆ ಹೊಲಿಗೆ ಯಂತ್ರವನ್ನು ನೀಡುತ್ತಿದೆ. ಇದು ಕೇಂದ್ರ ಸರ್ಕಾರವು ಜಾರಿಗೊಳಿಸಿರು ವಂತಹ ಹೊಸ ಯೋಜನೆ ಇದಾಗಿದ್ದು.

ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಹಾಗೂ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಆಗಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೊಳಿ ಸಿದೆ. ಹಾಗಾದರೆ ಈ ದಿನ ಯಾವ ಮಹಿಳೆಯರು ಈ ಒಂದು ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ.

ಯಾವ ಕೆಲವರು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಹಾಗೂ ಯೋಜನೆಯನ್ನು ನೀವು ಎಲ್ಲಿ ಪಡೆದುಕೊಳ್ಳಬಹುದು ಹಾಗೂ ಯಾವು ದೆಲ್ಲ ಅರ್ಹತೆಗಳು ಇರಬೇಕು ಹಾಗೂ ಈ ಒಂದು ಯೋಜನೆಯ ಅಡಿ ಯಲ್ಲಿ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬೇಕು ಎಂದರೆ ಯಾವ ಕೆಲವು ನಿಯಮಗಳನ್ನು ನೀವು ಅನುಸರಿಸಬೇಕಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಮನೆಯಲ್ಲಿರುವಂತಹ ಪ್ರತಿಯೊಬ್ಬ ಮಹಿಳೆಯರು ಕೂಡ ಯಾವುದೇ ಒಂದು ವಿಚಾರವಾಗಿ ಅದರಲ್ಲೂ ಆರ್ಥಿಕವಾಗಿ ಅವರು ಕೆಲವೊಂದಷ್ಟು ಯಾವ ಕೆಲಸವನ್ನು ಮಾಡುವುದರ ಮೂಲಕ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬಹುದು ಎನ್ನುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಅಂದರೆ ಮನೆಯಲ್ಲಿರುವಂತಹ ಮಹಿಳೆಯರು ಕೇವಲ ಮನೆಯ ಕೆಲಸ ವನ್ನು ಮಾಡುವುದಷ್ಟೇ ಅಲ್ಲದೆ ಮನೆಯಲ್ಲಿಯೇ ಕುಳಿತು ಕೆಲವು ಕೆಲಸ ಗಳನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬಹು ದಾಗಿದೆ. ಹೌದು ಅದೇ ರೀತಿಯಾಗಿ ಈ ದಿನ ಹೊಲಿಗೆ ಯಂತ್ರವನ್ನು ಅವರು ಕಲಿಯುವುದರ ಮೂಲಕ ಆರ್ಥಿಕವಾಗಿ ಅವರು ಅಭಿವೃದ್ಧಿ ಯನ್ನು ಹೊಂದಬಹುದಾಗಿದೆ ಎಂದೇ ಹೇಳಬಹುದು.

ದೇಶದಲ್ಲಿರು ವಂತಹ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ನಡೆಸುತ್ತಲೇ ಇದೆ. ಅದರಲ್ಲಿ ಪ್ರಧಾನ ಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ ಕೂಡ ಒಂದು. ಈ ಯೋಜನೆಯ ಅಡಿ ಹೊಲಿಗೆ ಯಂತ್ರವನ್ನು ನೀಡು ತ್ತಿದೆ. ಅದರಂತೆ ದೇಶದಲ್ಲಿರುವಂತಹ ಮಹಿಳೆಯರು ಪ್ರಧಾನ ಮಂತ್ರಿಯವರ ಉಚಿತ ಹೊಲಿಗೆ ಯಂತ್ರ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವ ಮೂಲಕ ಪಡೆಯಬಹುದಾಗಿದೆ.

ಕೇಂದ್ರ ಸರ್ಕಾರ ದೇಶದ ಪ್ರತಿ ರಾಜ್ಯದ ಐವತ್ತು ಸಾವಿರ ಮಹಿಳೆಯರಿ ಗಾಗಿ ಈ ಯೋಜನೆಯನ್ನು ಸಿದ್ಧಪಡಿಸಿದೆ. ಅರ್ಜಿ ಸಲ್ಲಿಸುವಂತಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ದೊರೆಯಲಿದೆ ಈ ಯೋಜನೆ ಯ ಅಡಿ ಅರ್ಜಿ ಸಲ್ಲಿಸುವಂತಹ ಮಹಿಳೆಯರ ವಯಸ್ಸು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 40 ವರ್ಷದ ಒಳಗಿರಬೇಕು. ಅರ್ಜಿದಾರ ದೇಶದ ಪ್ರಜೆಯಾಗಿದ್ದು ಆರ್ಥಿಕವಾಗಿ ದುರ್ಬಲರಾಗಿರಬೇಕು ಅರ್ಜಿದಾರರ ಪತಿಯ ವಾರ್ಷಿಕ ಆದಾಯ 12000 ಮೀರಿರಬಾರದು.

ಇನ್ನು ವಿಧವೆಯರು ಹಾಗೂ ದಿವ್ಯಾಂಗ ಮಹಿಳೆಯರು ಈ ಯೋಜನೆಯ ಅಡಿ ಅರ್ಜಿಯನ್ನು ಸಲ್ಲಿಸಬಹುದು. ನೀವು ಈ ಒಂದು ಅರ್ಜಿಯನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು ಅಲ್ಲಿ ಅರ್ಜಿಯನ್ನು ಪಡೆದು ಅಲ್ಲಿ ಕೇಳಿರುವಂತಹ ಕೆಲವೊಂದಷ್ಟು ದಾಖಲಾತಿಗಳನ್ನು ಕೊಟ್ಟು ಅಲ್ಲಿ ಹೇಳಿರುವಂತಹ ಕಚೇರಿಗೆ ಸಲ್ಲಿಸುವಂಥದ್ದು. ಆನಂತರ ಅಲ್ಲಿ ನೀವು ಕೊಟ್ಟ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಆ ಮೂಲಕ ನಿಮಗೆ ಈ ಒಂದು ಯೋಜನೆ ಸಿಗುತ್ತದೆಯ ಸಿಗುವುದಿಲ್ಲವ ಎನ್ನುವುದನ್ನು ಅವರು ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಪುರುಷರಲ್ಲಿ ಈ ರೀತಿಯ ಲಕ್ಷಣಗಳು ಇದ್ದರೆ ಅವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ.! ನಿಮ್ಮಲ್ಲು ಇಂಥ ಲಕ್ಷಣಗಳಿದೆಯೇ.? ನೋಡಿ.!

 

1. ಪುರುಷರ ಹಣೆಯ ಭಾಗವು ಅಗಲವಾಗಿ ದೊಡ್ಡದಾಗಿದ್ದರೆ ಅಂದರೆ ನಿಮ್ಮ ಕೈನ ನಾಲ್ಕು ಬೆರಳುಗಳನ್ನು ಒಟ್ಟಿಗೆ ಸೇರಿಸಿ ಇಡುವಷ್ಟು ಅಗಲ ವಾಗಿದ್ದರೆ ಅಂತವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಹಾಗೂ ಅಂತವರು ತಮ್ಮ ಜೀವನದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿ ದರು ಅದರಲ್ಲಿ ಯಶಸ್ಸು ಎನ್ನುವುದು ಸಿಗುತ್ತದೆ ಎಂದೇ ಹೇಳಬಹುದು. ಹಾಗೂ ಅಂದು ಕೊಂಡಂತೆ ಜೀವನದಲ್ಲಿ ಎಲ್ಲದರಲ್ಲಿಯೂ ಯಶಸ್ಸನ್ನು ಸಾಧಿಸುತ್ತಾರೆ

2. ಪುರುಷರ ಕಣ್ಣುಗಳು ಅತಿಹೆಚ್ಚಾಗಿ ಹೊಳಪಿನಿಂದ ಕೂಡಿದ್ದರೆ ಅವರು ಬಹಳ ಅದೃಷ್ಟವಂತರು ಎಂದು ಹೇಳಬಹುದು, ವಿಶೇಷವಾಗಿ ವಿಷ್ಣು ದೇವರ ಕೃಪೆಯು ಇವರ ಮೇಲೆ ಇರುತ್ತದೆ ಎಂದು ಹೇಳಬಹುದು.

3. ಪುರುಷರ ದೇಹದಿಂದ ಹೊರ ಬರುವ ಬೆವರು ಬಹಳ ದುರ್ಗಂಧದಿಂದ ಕೂಡಿದ್ದರೆ ಇದರ ಅರ್ಥ ಇವರ ಜಾತಕದಲ್ಲಿ ಮಂಗಳ ನೀಚ ಸ್ಥಾನದಲ್ಲಿ ಇದೆ ಎಂದು ತಿಳಿಸುತ್ತದೆ. ಹೀಗಿದ್ದಾಗ ಇವರ ಜೀವನದಲ್ಲಿ ಯಾವುದೇ ರೀತಿಯ ಒಳ್ಳೆಯದು ಎಂಬುವುದು. ನಡೆಯುವುದಿಲ್ಲ, ಇವರ ಬೆವರಿನಿಂದ ಈ ರೀತಿಯಾಗಿ ದುರ್ಗಂಧವು ಬರುತ್ತಿದ್ದರೆ ಆಗ ಅವರು ದೇಹಕ್ಕೆ ಆಗಾಗ ಚಂದನದ ಲೇಪನವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಬೆವರಿನ ದುರ್ಗಂಧ ಕಡಿಮೆ ಯಾಗುತ್ತದೆ ಮತ್ತು ಮಂಗಳ ನಿಂದ ಉಂಟಾಗುವ ಪರಿಣಾಮಗಳು ಸಹ ಕುಂಠಿತಗೊಳ್ಳುತ್ತದೆ.

4. ಯಾವ ಪುರುಷರು ಧೈರ್ಯವಾಗಿ ಸ್ಪಷ್ಟವಾಗಿ ಮಾತನಾಡುತ್ತಿದ್ದಾರೆ ಎಂದರೆ, ಮಾತಿನಲ್ಲಿಯೇ ಎಂತಹ ಎಲ್ಲಾ ರೀತಿಯ ವ್ಯವಹಾರಗಳನ್ನು ನಡೆಸುವಂತಹ ಚಾಲಕ್ಯ ತನವನ್ನು ಹೊಂದಿರುವ ವರು ಸಹ ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಯಾಕೆಂದ ರೆ ಅವರಿಗೆ ಇರುವಂತಹ ಒಂದು ಮಾತಿನ ಕಲೆಯು ದೇವರು ಕೊಟ್ಟಿ ರುವ ಆಶೀರ್ವಾದ ಎಂದು ಹೇಳಬಹುದು. ಅದೇ ರೀತಿಯಾಗಿ ಇವರು ತಮ್ಮ ಮಾತಿನಲ್ಲಿ ಎಲ್ಲರನ್ನೂ ಕೂಡ ತಮ್ಮತ್ತ ಆಕರ್ಷಿಸಿಕೊಳ್ಳುತ್ತಾರೆ ಇವರ ಮಾತಿನಿಂದ ಪ್ರತಿಯೊಬ್ಬರೂ ಇವರಿಗೆ ಇಷ್ಟವಾಗುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

5. ಪುರುಷರ ಕಾಲಿನ ಎರಡನೆಯ ಬೆರಳು ಅಂದರೆ ಹೆಬ್ಬೆಟ್ಟಿನ ಪಕ್ಕದ ಬೆರಳು ಉಳಿದ ಬೆರಳಿಗಿಂತ ಉದ್ದವಾಗಿದ್ದರೆ ಅವರು ಕೂಡ ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ, ಹಿಂದಿನ ಕಾಲದಲ್ಲಿ ಪುರುಷರ ಕಾಲಿನ ಬೆರಳನ್ನು ನೋಡಿ ವಿವಾಹವನ್ನು ಮಾಡುತ್ತಿದ್ದರು. ಇದರಿಂದ ಆತನ ಅದೃಷ್ಟ ಹೇಗಿದೆ ಎಂಬುವುದನ್ನು ಹಿರಿಯರು ಕಂಡು ಕೊಳ್ಳುತ್ತಿದ್ದರು ಎನ್ನಬಹುದು ಹಾಗಾಗಿ ಇದು ಕೂಡ ಒಂದು ಅದೃಷ್ಟದ ಸಂಕೇತ ಎಂದು ಹೇಳಬಹುದು.

ಈ ರೀತಿಯಾದ ಗುಣಲಕ್ಷಣಗಳು ಇರುವಂತಹ ಪುರುಷರು ಬಹಳ ಅದೃಷ್ಟವಂತರು ಎಂದು ಹೇಳಬಹುದು, ಇದನ್ನು ಬೇಕಾದರೆ ನೀವೇ ಸ್ವತಹ ಗಮನಿಸ ಬಹುದು ಇಂತಹ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ಕಾಣುತ್ತಾರೆ. ಅದೇ ರೀತಿಯಾಗಿ ಅವರ ಗುಣ ಲಕ್ಷಣಗಳ ಆಧಾರದ ಮೇಲೆ ಹಾಗೂ ಅವರ ಜಾತಕದ ಆಧಾರದ ಮೇಲೆ ಅವರಿಗೆ ಪ್ರತಿಯೊಂದು ಶುಭ ಘಟನೆಗಳು ಕೂಡ ಅವರ ಜೀವನದಲ್ಲಿ ನಡೆಯುತ್ತದೆ ಎಂದೇ ಹೇಳಬಹುದು.

ಈ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಇಂತಹ ಕೆಲವೊಂದಷ್ಟು ಗುಣಲಕ್ಷಣ ಗಳನ್ನು ಹೊಂದಿರುತ್ತೀರಿ ಹಾಗೂ ಮೇಲೆ ಹೇಳಿದಂತೆ ಅವುಗಳನ್ನು ನೀವೇ ನಿಮ್ಮಲ್ಲಿ ಯಾವ ಗುಣಲಕ್ಷಣಗಳು ಇದೆ ಎಂಬುದನ್ನು ಕಂಡುಕೊಳ್ಳಬಹುದು. ಹಾಗೂ ಅದರಿಂದ ಕೆಲವೊಂದಷ್ಟು ಯಶಸ್ಸುಗಳನ್ನು ಸಹ ನೀವು ಪಡೆಯಬಹು ದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ದೇವಸ್ಥಾನದ ಚೌಕದಲ್ಲಿ ನಿಂತು ಬೇಡಿಕೊಂಡರೆ ಬೆನ್ನು ಸೊಂಟ ಮಂಡಿ ನೋವು ಗುಣಮುಖವಾಗುತ್ತದೆ. ಅತ್ಯಂತ ಶಕ್ತಿಶಾಲಿ ದೇವಾಲಯ ನಂಬಿಕೆ ಇಟ್ಟು ಒಮ್ಮೆ ಹೋಗಿ ಬನ್ನಿ.!

 

ಭಾರತ ದೇಶದಲ್ಲಿಯೇ ಅತ್ಯಂತ ಮುಂದುವರೆದ ನಗರ ಇನ್ನೂ ಮುಂದೆ ಹೋಗುತ್ತಿರುವ ನಗರ ನಮ್ಮ ಬೆಂಗಳೂರು. ನಿಮಗೆ ಗೊತ್ತಿದೆಯೋ ಇಲ್ಲವೋ ಸಾವಿರಾರು ವರ್ಷಗಳ ಹಿಂದೆ ಕೂಡ ಅತ್ಯಂತ ಮುಂದುವರೆದ ನಗರ ಈ ಬೆಂಗಳೂರು ಆಗಿತ್ತು. ಚೋಳ ಸಾಮ್ರಾಜ್ಯವು ಈ ಬೆಂಗಳೂರು ನಗರವನ್ನು ಮೊದಲ ಬಾರಿಗೆ ನಾಮಕರಣ ಮಾಡಿದ್ದು ವೆಲ್ಲೂರು ಅಂತ.

ಈ ಪದದ ಅರ್ಥ ಏನು ಎಂದರೆ ಸಿಟಿ ಆಫ್ ಗಾಡ್ಸ್ ಎಂದು. ಅಂದರೆ ಸೈನಿಕರ ನಗರ. ಈಗಿನ ಸಮಯದಲ್ಲಿ ಲಕ್ಷಾಂತರ ಯುವಕರು ಕೆಲಸವನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾರೆ. ಅದೇ ರೀತಿ ಅಂದಿನ ಸಮಯದಲ್ಲಿಯೂ ಕೂಡ ಲಕ್ಷಾಂತರ ಜನರು ಶಸ್ತ್ರ ವಿದ್ಯೆಯನ್ನು ಕಲಿಯಲು ಬೆಂಗಳೂರಿಗೆ ಬರುತ್ತಿದ್ದರು.

ಹೊಯ್ಸಳ ಹಾಗೂ ಚೋಳ ಸಾಮ್ರಾಜ್ಯ ಆಳಿದ ಬೆಂಗಳೂರಿನಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ಪುರಾತನವಾದ ದೇವಸ್ಥಾನಗಳನ್ನು ಇಂದಿಗೂ ಕೂಡ ನೋಡಬಹುದು. ಅದೇ ರೀತಿ ಆ ದೇವಸ್ಥಾನಗಳಲ್ಲಿ ಒಂದಾಗಿರುವಂತಹ ಅತ್ಯದ್ಭುತವಾದಂತಹ ಪುರಾತನವಾದಂತಹ ದೇವಸ್ಥಾನದ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನಿರ್ಮಾಣಗೊಂಡಂತಹ ಮೊದಲ ದೇವಸ್ಥಾನ ಎಂದು ಸಹ ಹೇಳಲಾಗಿದೆ.

ಹಾಗಾದರೆ ಈ ಒಂದು ದೇವಸ್ಥಾನ ಇರುವುದಾದರೂ ಎಲ್ಲಿ ಇದರ ಸಂಪೂರ್ಣವಾದಂತಹ ಮಾಹಿತಿ ಎಲ್ಲವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಕರ್ನಾಟಕದ ರಾಜಧಾನಿ ಬೆಂಗಳೂರು ಇದೇ ಬೆಂಗಳೂರಿನಲ್ಲಿ ಇರುವ ದೊಮ್ಮಲೂರು ನಗರದ ಐದನೇ ಅಡ್ಡರಸ್ತೆಯಲ್ಲಿ ನೆಲೆಸಿರುವ ಚೊಕ್ಕ ನಾಥ ಸ್ವಾಮಿ ದೇವಸ್ಥಾನ. ಈ ಚೊಕ್ಕನಾಥ ಸ್ವಾಮಿ ದೇವಸ್ಥಾನದಲ್ಲಿ ನೆಲೆಸಿರುವುದು ವಿಷ್ಣು ದೇವರು.

ಚೊಕ್ಕ ಎಂದರೆ ತೆಲುಗು ಭಾಷೆಯಲ್ಲಿ ಸೊಗಸುಗಾರ ಎಂಬ ಅರ್ಥ ಬರುತ್ತದೆ. ಈ ದೇವಸ್ಥಾನ ನಿರ್ಮಾಣಗೊಂಡಿದ್ದು 10ನೇ ಶತಮಾನದಲ್ಲಿ. ಹತ್ತನೇ ಶತಮಾನದಲ್ಲಿ ಕೆತ್ತನೆ ಮಾಡಿದ ಕಲಾಕೃತಿಗಳು ಈ ದೇವಸ್ಥಾನ ದಲ್ಲಿ ಇದೆ ನಾವು ಅವುಗಳನ್ನು ಈಗಲೂ ಸಹ ನೋಡಬಹುದು. ಅಷ್ಟೇ ಅಲ್ಲದೆ ಈ ದೇವಸ್ಥಾನದ ಕಲ್ಲಿನ ಮೇಲೆ ಚೋಳ ಸಾಮ್ರಾಜ್ಯದ ತಮಿಳು ಶಾಸನವಿದ್ದು ಹತ್ತನೇ ಶತಮಾನದಲ್ಲಿ ಬರೆದ ಶಾಸನ ಎಂದು ಕೂಡ ಹೇಳಲಾಗುತ್ತದೆ.

ಈ ತಮಿಳು ಶಾಸನಗಳು ಚೋಳ ಸಾಮ್ರಾಜ್ಯದ ಕಥೆ ಮತ್ತು ದೇವಸ್ಥಾನದ ಮಹತ್ವವನ್ನು ಹೇಳುತ್ತದೆ. ಬೆಂಗಳೂರು ನಗರದಲ್ಲೇ ಅತ್ಯಂತ ಸುಂದರವಾದ ದೇವಸ್ಥಾನ ಎಂದು ಸಹ ಬಿರುದು ಸಿಕ್ಕಿದೆ. ಈ ಚೊಕ್ಕನಥ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಪವಾಡ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ ಎಂದು ಹೇಳಬಹುದು.

ದೇವಸ್ಥಾನದಲ್ಲಿ ನೆಲೆಸಿರುವ ವಿಷ್ಣು ಮೂಲ ವಿಗ್ರಹವನ್ನು ದೇವಸ್ಥಾನದ ಮೂಲ ಗರ್ಭಗುಡಿಯಲ್ಲಿ ಎತ್ತರದ ಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾ ಗಿದೆ. ಈ ದೇವಸ್ಥಾನ ಯಾವ ರೀತಿ ನಿರ್ಮಾಣ ಆಗಿದೆ ಎಂದು ನಿಮಗೆ ತಿಳಿದರೆ ನೀವು ಈಗಲೇ ಈ ದೇವಸ್ಥಾನಕ್ಕೆ ಹೋಗುತ್ತೀರಿ. ಅಷ್ಟು ವಿಸ್ಮಯ ಹಾಗೂ ವೈಜ್ಞಾನಿಕವಾಗಿ ಹತ್ತನೇ ಶತಮಾನದಲ್ಲಿಯೇ ನಿರ್ಮಾಣ ಮಾಡಿದ್ದಾರೆ.

ವಿಷ್ಣುದೇವರ ಮೂಲ ವಿಗ್ರಹವು ಅಂತರಿಕ್ಷ ದಿಂದ ಬರುವ ಕಾಸ್ಮಿಕ್ ಕಿರಣಗಳನ್ನು ಹೀರಿಕೊಂಡು ದೇವಸ್ಥಾನದ 12 ದಿಕ್ಕುಗಳಿಗೂ ಈ ಕಾಸ್ಮಿಕ್ ಕಿರಣಗಳನ್ನು ಹರಡುತ್ತದೆ. ಪ್ರತ್ಯೇಕವಾಗಿ ದೇವಸ್ಥಾನದ 12 ದಿಕ್ಕುಗಳಿಗೂ ಈ ಕಾಸ್ಮಿಕ್ ಕಿರಣಗಳನ್ನು ಬಿಡುತ್ತದೆ. ವಿಜ್ಞಾನಿಗಳೇ ಈ ವಿಚಾರದ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದಾರೆ. ಕಾಸ್ಮಿಕ್ ರೇಸ್ ಅನ್ನು ಪ್ರಾಣಿಕ್ ಎನರ್ಜಿ ಎಂದು ಸಹ ಹೇಳಲಾಗುತ್ತದೆ ಈ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬರು ಕೂಡ ಈ ಕಾಸ್ಮಿಕ್ ಎನರ್ಜಿ ಯನ್ನು ತೆಗೆದುಕೊಳ್ಳುವುದಕ್ಕೆ ಬರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ವಿ.ಚ್ಚೇ.ದನದ ನಂತರ ಇಂತಹ ಮಹಿಳೆಯರಿಗೆ ಜೀವನಾಂಶ ನೀಡುವಂತಿಲ್ಲ ಹೊಸ ತೀರ್ಪು ಕೊಟ್ಟ ಕೋರ್ಟ್

ಆಸ್ತಿಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕಾನೂನು ಕೊಡುವ ನ್ಯಾಯಬದ್ದವಾದ ತೀರ್ಪು ಕೆಲವೊಮ್ಮೆ ನ್ಯಾಯಾಲಯದ ಮೇಲೆ ಇರುವ ಗೌರವ ಹಾಗೂ ನಂಬಿಕೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಮತ್ತೊಮ್ಮೆ ಇದೇ ರೀತಿಯಾದ ಘಟನೆ ಮುಂಬೈ ಸೆಷನ್ ಕೋರ್ಟ್ ಅಲ್ಲಿ ನಡೆದಿದೆ.

ದಂಪತಿಗಳ ಇಬ್ಬರ ವಿಚ್ಛೇದನಕ್ಕೆ ಸಂಬಂಧಪಟ್ಟ ಹಾಗೆ ಪತ್ನಿ ಕೋರಿದ ಜೀವನಾಂಶದ ಪ್ರಕರಣದಲ್ಲಿ ಕೋರ್ಟ್ ಪತಿಯ ಪರವಾಗಿ ತೀರ್ಪು ನೀಡಿರುವುದು ಮೊದಲ ನೋಟಕ್ಕೆ ಆಶ್ಚರ್ಯ ಎನಿಸಿದರು ಕೂಡ ಪ್ರಕರಣದ ತನಿಖೆ ನಡೆಸಿ ಕೋರ್ಟ್ ಕೊಟ್ಟಿರುವ ಈ ತೀರ್ಪಿಗೆ ತಲೆಬಾಗಲೇ ಬೇಕು ಎನಿಸುತ್ತದೆ.

ಇಂತಹ ಒಂದು ತೀರ್ಪಿಗೆ ಮೇ 28 ನೇ ತಾರೀಕು, ಮುಂಬೈ ಸೆಷನ್ನ ಕೋರ್ಟ್ ಸಾಕ್ಷಿ ಆಗಿದೆ. ಪ್ರಕರಣದ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ. ವಿ.ಚ್ಛೇದನ ಪಡೆದಿದ್ದ ಪತಿಯ ಮೇಲೆ ಪತ್ನಿಯು ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮ್ಯಾಜಿಸ್ಟೇಟ್ ಕೋರ್ಟ್ ಪತ್ನಿಯು ಪತಿಗಿಂತ ಹೆಚ್ಚು ಆದಾಯ ಹೊಂದಿದ್ದಾರೆ ಎನ್ನುವುದನ್ನು ಪರಿಗಣಿಸಿ ಆಕೆ ಪತಿಗಿಂತ 4 ಲಕ್ಷ ಹೆಚ್ಚು ಆದಾಯವನ್ನು ಪಡೆಯುತ್ತಿರುವ ಕಾರಣ ಜೀವನಾಂಶವನ್ನು ನೀಡುವ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿತ್ತು.

ಆದರೆ ಆಕೆ ನಂತರ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಮುಂಬೈ ಸೆಷನ್ಸ್ ಕೋರ್ಟ್ ನ್ಯಾಯಾಲಯದ ನ್ಯಾಯಮೂರ್ತಿ ಸಿವಿ ಪಾಟೀಲ್ ನೇತೃತ್ವದ ಪೀಠವು ಈ ಕೇಸ್ ಅನ್ನು ಕೈಗೆತ್ತಿಕೊಂಡು ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ತೀರ್ಪು ಈ ಪರಿಸ್ಥಿತಿಯ ದೃಷ್ಟಿಯಿಂದ ಸರಿಯಾಗಿದೆ ಎನ್ನುವುದನ್ನು ತಿಳಿಸಿ ಅದೇ ತೀರ್ಪನ್ನು ಎತ್ತಿ ಹಿಡಿದಿದೆ. ಪತಿಗಿಂತ ಪತ್ನಿ ಹೆಚ್ಚು ಸಂಪಾದನೆ ಮಾಡುತ್ತಾ ಇದ್ದರೆ ಜೀವನಾಂಶ ನೀಡುವ ಅವಶ್ಯಕತೆ ಇಲ್ಲ ಎನ್ನುವ ತೀರ್ಪನ್ನು ಈ ಪ್ರಕರಣಕ್ಕೆ ನೀಡಿದೆ.

ಪ್ರಕರಣದಲ್ಲಿ ಪತಿಯು ಲೈಂಗಿಕ ಸಮಸ್ಯೆ ಹೊಂದಿದ್ದು ಅದನ್ನು ಪತ್ನಿಯಿಂದ ಮುಚ್ಚಿಟ್ಟಿದ್ದರು. ಆದರೆ ಆಕೆ ಗರ್ಭಿಣಿ ಆಗಿದ್ದರಿಂದ ಆಕೆಯ ಚಾರಿತ್ಯದ ಮೇಲೆ ಅನುಮಾನ ಪಟ್ಟು ದಿನ ಜಗಳ ಆಡುತ್ತಿದ್ದರು. ಮಗು ಜನಿಸಿದ ಬಳಿಕ ಆಕೆಯನ್ನು ಬಲವಂತವಾಗಿ ತಾಯಿ ಮನೆಗೆ ಕಳಿಸಿದ್ದರು, ವಿಚ್ಛೇದನವು ಆಗಿತ್ತು. ನಂತರ ಪತ್ನಿಯು 2011ರಲ್ಲಿ ಮಾಜಿ ಪತಿ ಕುಟುಂಬದವರ ವಿರುದ್ಧ ಕೌಟುಂಬಿಕ ಹಿಂಸೆಯ ಪ್ರಕರಣ ದಾಖಲಿಸಿ, ಜೀವನಾಂಶ ಬೇಕು ಎಂದು ಕೋರ್ಟ್ ಮೆಟ್ಟಿಲು ಏರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕೂಲಂಕುಶವಾಗಿ ತನಿಖೆ ನಡೆಸಿದ ಕೌಟುಂಬಿಕ ಕೋರ್ಟ್ ಈಗ ಇಂತಹ ನ್ಯಾಯಬದ್ಧವಾದ ತೀರ್ಪನ್ನು ನೀಡಿದೆ. ಇನ್ನು ಮುಂದೆ ಇದೇ ರೀತಿಯಾಗಿ ಪತ್ನಿಯು ಪತಿ ಆದಾಯಕ್ಕಿಂತ ಹೆಚ್ಚು ಆದಾಯ ಹೊಂದಿದ್ದು ನಂತರ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದರೆ ಅವರಿಗೂ ಸಹ ಇದು ಅನ್ವಯ ಆಗುವ ಸಾಧ್ಯತೆಯೂ ಇದೆ.

ಒಂದೇ ತರನಾದ ಕೇಸ್ಗಳಿಗೆ ಒಂದೇ ರೀತಿಯ ತೀರ್ಪುಗಳು ಹೊರ ಬೀಳುತ್ತವೆ ಎನ್ನುವುದನ್ನು ಕೂಡ ಖಂಡಿತವಾಗಿ ಊಹಿಸುವುದು ಅಸಾಧ್ಯ. ಯಾಕೆಂದರೆ ಪ್ರಕರಣಗಳನ್ನು ದಾಖಲಿಸಿಕೊಂಡು ಅದನ್ನು ಕುಲಂಕುಶವಾಗಿ ನೋಡಿ ನಂತರ ಅನ್ಯಾಯ ಆದವರ ಪರ ನ್ಯಾಯಾಲಯ ನಿಲ್ಲುತ್ತದೆ. ಆದ್ದರಿಂದ ಒಂದು ವೇಳೆ ಇಂತಹ ಪ್ರಕರಣಗಳಲ್ಲಿ ಪತಿ ನೊಂದಿದ್ದು ಪತ್ನಿಯು ಜೀವನಾಂಶವನ್ನು ಒಂದು ಅಸ್ತ್ರವನ್ನಾಗಿ ಬಳಸುತ್ತಿದ್ದರೆ.

ಇನ್ನು ಮುಂದೆ ಅವರ ಪರವಾಗಿ ಕೋರ್ಟ್ ಇರುತ್ತದೆ ಎನ್ನುವ ಧೈರ್ಯವನ್ನು ಈ ಪ್ರಕರಣ ನೀಡಿದೆ ಎಂದೇ ಭಾವಿಸಬಹುದು. ಒಟ್ಟಿನಲ್ಲಿ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಕರಣದ ವಿಷಯವು ಹೆಚ್ಚು ಗಮನ ಸೆಳೆಯುತ್ತಿದ್ದು ಎಲ್ಲರೂ ಈ ಬಗ್ಗೆ ಪರ ಹಾಗೂ ವಿರೋಧ ಚರ್ಚೆ ಮಾಡುತ್ತಿದ್ದಾರೆ.

ಮೆಟ್ರಿಕ್ ನಂತರದ BCM ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ…

10ನೇ ತರಗತಿ ವಿದ್ಯಾಭ್ಯಾಸ ಮುಗಿಸಿ ದೂರದ ಊರುಗಳಲ್ಲಿ PUC ಮತ್ತು PUC ಸಮನಾಂತರ ಕೋರ್ಸ್ ಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆ ನೀಡಲಾಗುತ್ತಿದೆ. 2024-25ನೇ ಶೈಕ್ಷಣಿಕ ವರ್ಷಗಳು ಆರಂಭವಾಗಿದ್ದು, ಈ ವರ್ಷ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆಯನ್ನು ಹೊರಡಿಸಿ ಮಾಹಿತಿ ತಿಳಿಸಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಅಂದರೆ PUC ಮತ್ತು PUC ಸಮನಾಂತರ ಕೋರ್ಸ್ ಗಳಿಗೆ 2024-2025ನೇ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಯಾಗಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಬಯಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಪ್ರವರ್ಗ-1, 2A,2B,3A,3B ಮತ್ತು ಇತರೆ ಜನಾಂಗಕ್ಕೆ ಸೇರಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ಇರುವ ಪ್ರಮುಖ ಅಂಶಗಳ ಮತ್ತು ನಿಬಂಧನೆಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಇರುವ ಪ್ರಮುಖ ನಿರ್ಬಂಧನೆಗಳು:-
● ಎಸ್.ಸಿ & ಎಸ್.ಟಿ, ಪವರ್ಗ-1 ಸೇರಿದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು 2.50 ಲಕ್ಷ ಒಳಗಿರಬೇಕು.
● ಪ್ರವರ್ಗ-2ಎ, 2ಬಿ, 3ಎ, 3ಬಿ, ಇತರೆ ಹಿಂದುಳಿದ ವರ್ಗ ಹಾಗೂ ಇತರೆ ವರ್ಗಗಳಿಗೆ ಸೇರಿದ ಪೋಷಕರ ಆದಾಯವು 1 ಲಕ್ಷದೊಳಗಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:-
● ವಿದ್ಯಾರ್ಥಿಯ ಆಧಾರ್ ಕಾರ್ಡ್
● SSP ಸ್ಟೂಡೆಂಟ್ ಐಡಿ
● SSLC ಅಕಪಟ್ಟಿ
● ಹಿಂದಿನ ವರ್ಷದ ಅಂಕಪಟ್ಟಿ
● ಜಾತಿ ಪ್ರಮಾಣ ಪತ್ರ
● ಆದಾಯ ಪ್ರಮಾಣಪತ್ರ
● ವರ್ಗಾವಣೆ ಪ್ರಮಾಣಪತ್ರ
● ಪಾಸ್ಪೋರ್ಟ್ ಗಾತ್ರದ ಫೋಟೋ
● ಮೊಬೈಲ್ ನಂಬರ್
● ಕಾಲೇಜ್ ಸ್ಟಡಿ ಸರ್ಟಿಫಿಕೇಟ್

ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು SHP ತಂತ್ರಾಂಶದ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
● ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
● SHP ಪೋರ್ಟಲ್ ನಲ್ಲಿ ಮೇಲೆ ಕಾಣಿಸುತ್ತಿರುವ HOSTEL APPLUCATION POSTMATRIC ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಇಲ್ಲಿ ನಿಮ್ಮ SSP ಐಡಿಯನ್ನು ನಮೂದಿಸಿ, ಗೆಟ್ ಡೇಟಾ ಮೇಲೆ ಕ್ಲಿಕ್ ಮಾಡಿ
● ನಂತರ ನಿಮ್ಮ ಶೈಕ್ಷಣಿಕ ವರ್ಷದ ಮಾಹಿತಿ ದೊರೆಯುತ್ತದೆ ಮತ್ತು ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
● ಅರ್ಜಿ ಸಲ್ಲಿಸಿದ ನಂತರ ಭವಿಷ್ಯದ ಬಳಕೆಗಾಗಿ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಿ.
● ಇಲಾಖೆಯು ಪರಿಶೀಲನೆ ನಡೆಸಿ ಆಯ್ಕೆಯಾದ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ.
● ನೀವು ಅರ್ಹರಿದ್ದು ಪ್ರವೇಶಾತಿ ದೊರೆಯದೆ ಇದ್ದರೆ ವಿದ್ಯಾಸಿರಿ ಯೋಜನೆಯಡಿ ಮಾಸಿಕವಾಗಿ 1500 ರುಪಾಯಿಯಂತೆ 10 ತಿಂಗಳಿಗೆ 15,000ರೂಗಳು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.

ಪ್ರಮುಖ ದಿನಾಂಕಗಳು:-
● ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 16.06.2024.
● ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 16.07.2024.
● ಹೊಸ ಅರ್ಜಿಗಳನ್ನು ತಾಲೂಕು ಕಲ್ಯಾಣ ಅಧಿಕಾರಿಗಳು ಪರಿಶೀಲನೆ ಮಾಡಲು ನಿಗದಿ ಪಡಿಸಿದ ದಿನಾಂಕ – 19.07.2024.
● ಕೌನ್ಸಿಲಿಂಗ್ ಮೂಲಕ ಆಯ್ಕೆ ಆದ ಹೊಸ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಪ್ರಕಟಣೆ ದಿನಾಂಕ – 21.07.2024.
● ಆಯ್ಕೆ ಆದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆಯಲು ನಿಗದಿಪಡಿಸಿದ ಅಂತಿಮ ದಿನಾಂಕ – 25.07.2024.