Home Blog Page 185

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ.! ನಿಮ್ಮೂರಿನಲ್ಲಿ ನೀವೇ ಪಡಿತರ ಅಕ್ಕಿ ವಿತರಣೆ ಮಾಡಬಹುದು ಕೂಡಲೇ ಅರ್ಜಿ ಸಲ್ಲಿಸಿ.!

ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕುಟುಂಬಗಳು ಹೆಚ್ಚಾಗುತ್ತಿವೆ, ಇದರ ಜೊತೆಗೆ ರೇಷನ್ ಕಾರ್ಡ್ ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ದೇಶದ ಎಲ್ಲಾ ಕುಟುಂಬಗಳಿಗೂ ಕೂಡ ಉಚಿತ ಪಡಿತರದ ಅವಶ್ಯಕತೆ ಇರುವುದರಿಂದ ರೇಷನ್ ಕಾರ್ಡ್ ಮೂಲಕ ಅವರಿಗೆ ಈ ಅನುಕೂಲತೆಯನ್ನು ಮಾಡಿಕೊಡಲಾಗುತ್ತಿದೆ. ರೇಷನ್ ಕಾರ್ಡ್ ಸಂಖ್ಯೆ ಹೆಚ್ಚಾದಂತೆ ಹೆಚ್ಚಿನ ನ್ಯಾಯಬೆಲೆ ಅಂಗಡಿಗಳ ವ್ಯವಸ್ಥೆಯನ್ನು ಕೂಡ ಸರ್ಕಾರ ಮಾಡಬೇಕಾಗುತ್ತದೆ.

ಈ ಅವಶ್ಯಕತೆಯನ್ನು ಅರಿತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿದಾರರ ಹಿತದೃಷ್ಠಿ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆ ಪರಿಣಾಮಕಾರಿಗೊಳಿಸುವ ದೃಷ್ಟಿಯಿಂದ ಈಗ ಹೊಸ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಸದ್ಯಕ್ಕೆ ಈಗ ರಾಜ್ಯದಲ್ಲಿ ಭರಮಸಾಗರ ಗೊಲ್ಲರಹಟ್ಟಿ ಗ್ರಾಮದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ ಮಾಡಿದೆ. ಇಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಸಲ್ಲಿಸುವುದಕ್ಕೆ ಜುಲೈ 4 ಕೊನೆಯ ದಿನವಾಗಿದೆ. ಈ ಭರಮಸಾಗರ ಗೊಲ್ಲರಹಟ್ಟಿ ಗ್ರಾಮದಲ್ಲಿ 5 AAY, 170 BPL ಮತ್ತು 2 APL ಸೇರಿದಂತೆ ಒಟ್ಟು 177 ಪಡಿತರ ಚೀಟಿಗಳಿವೆ.

ಇಲ್ಲಿ ಹೊಸ ನ್ಯಾಯ ಬೆಲೆ ಅಂಗಡಿ ತೆರೆಯಲು ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಆದ್ದರಿಂದ ಇಲಾಖೆಯು ಇದಕ್ಕಾಗಿ ವಿಧಿಸಿರುವ ಅರ್ಹತೆಗಳನ್ನು ಹೊಂದಿರುವ ಆಸಕ್ತರು ಪೂರಕ ದಾಖಲೆಗಳ ಜೊತೆ ಅರ್ಜಿ ಫಾರಂ ತುಂಬಿ ಈ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಸಲ್ಲಿಸಬಹುದು. ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ಧೃಡೀಕೃತ ದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30 ದಿನದೊಳಗಾಗಿ ಅರ್ಜಿ ಸಲ್ಲಿಸಲು ಸೂಚಿಸಿದೆ.

ಜೂನ್ 4 ರಂದು ಇದಕ್ಕೆ ಸಂಬಂಧಿಸಿದ ಪ್ರಕಟಣೆ ಹೊರ ಬಿದ್ದಿದ್ದ ಕಾರಣ ಈಗ 30 ದಿನದ ಒಳಗೆ ಅಂದರೆ ಅಂದರೆ ಜುಲೈ 4 ರ ಒಳಗಾಗಿ ಜಂಟಿ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾಧಿಕಾರಿಗಳ ಕಚೇರಿ ಸಂಕಿರ್ಣ, ಚಿತ್ರದುರ್ಗ ಇವರಿಗೆ ಈ ಅರ್ಜಿಯನ್ನು ಸಲ್ಲಿಸಬೇಕು.

ನಿಗಧಿತ ಅವಧಿಯ ನಂತರ ಸಲ್ಲಿಕೆಯಾಗುವ ಅಥವಾ ಬೇರೆ ಕಚೇರಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎನ್ನುವುದನ್ನು ಇದಕ್ಕಾಗಿ ಇಲಾಖೆ ಹೊರಡಿಸಿದ್ದ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದಕ್ಕಾಗಿ ದಾಖಲೆಗಳ ಜೊತೆ ಸಲ್ಲಿಸಬೇಕಾದ ನಿಗಧಿತ ಅರ್ಜಿ ಫಾರಂ-ಎ ಅನ್ನು ಜಂಟಿ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಸಂಕಿರ್ಣ, ಚಿತ್ರದುರ್ಗ ಹಾಗೂ ಚಿತ್ರದುರ್ಗ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಪಡೆಯಬಹುದು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಆದ್ದರಿಂದ ಅಲ್ಲಿನ ಭಾಗದ ಯುವ ಜನತೆಗೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆಯುವ ಲೈಸೆನ್ಸ್ ಪಡೆದುಕೊಳ್ಳಲು ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ವಿವರವನ್ನು ಹಂಚಿಕೊಳ್ಳುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ, ಆ ಭಾಗದ ಜನತೆಗೆ ಮಾಹಿತಿಯು ತಲುಪುವಂತೆ ಮಾಡಿ. ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಅಲ್ಲಿ ಮಾಹಿತಿ ಪಡೆದುಕೊಳ್ಳಿ ಅಥವಾ ಇಲಾಖೆಯ ಕಛೇರಿಯನ್ನು ಸಂಪರ್ಕಿಸಿ.

ಕಣ್ಣಿಗೆ ಸಂಬಂಧಿಸಿದ ಯಾವುದೇ ದೋಷವಿದ್ದರೂ ಕಣ್ಣಿಗೆ 2 ಹನಿ ಈ ಎಣ್ಣೆ ಹಾಕಿ ಸಾಕು ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.!

 

ಕಣ್ಣು ಮನುಷ್ಯನ ಅತಿ ಪ್ರಮುಖವಾದ ಅಂಗ, ಜೊತೆಗೆ ಅತಿ ಸೂಕ್ಷ್ಮವಾದ ಅಂಗವೂ ಕೂಡ. ಕೂದಲಿಗಿಂತಲೂ ಬಹಳ ತೆಳುವಾದ ಸೂಕ್ಷ್ಮ ನರಗಳು ಕಣ್ಣಿನಲ್ಲಿ ಇರುತ್ತವೆ. ಕಣ್ಣಿನಿಂದ ನಾವು ಬೆಳಕನ್ನು ಗ್ರಹಿಸುತ್ತೇವೆ, ಸುತ್ತಮುತ್ತಲಿನ ಎಲ್ಲವನ್ನು ಕೂಡ ನೋಡುತ್ತೇವೆ ಎನ್ನುವುದು ಮಾತ್ರವಲ್ಲದೆ ಮೆದುಳಿನ ಮೇಲು ಕೂಡ ಇದು ಪರಿಣಾಮವನ್ನು ಬೀರುತ್ತದೆ.

ಹಾಗಾಗಿ ಒಬ್ಬ ಮನುಷ್ಯನು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿರಬೇಕು ಎಂದರೆ ಕಣ್ಣಿನ ಆರೋಗ್ಯವನ್ನು ಮೊದಲು ಕಾಪಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಕಣ್ಣಿನ ಸಮಸ್ಯೆಗಳು ಸರ್ವೇಸಾಮಾನ್ಯ ಎನಿಸಿ ಬಿಟ್ಟಿವೆ. ಆದರೆ ಇದೆಲ್ಲದಕ್ಕೂ ಕೂಡ ಶಸ್ತ್ರ ಚಿಕಿತ್ಸೆ ಪರಿಹಾರವಲ್ಲ ಆಯುರ್ವೇದದಲ್ಲಿ ಸರಳ ಉಪಾಯಗಳನ್ನು ಬಳಸುವ ಮೂಲಕ ಕಣ್ಣಿನ ಎಲ್ಲಾ ವಿಕಾರಗಳನ್ನು ದೂರ ಮಾಡಿ ದೃಷ್ಟಿಯು ಹೆಚ್ಚಾಗುವಂತೆ ಮಾಡಬಹುದು.

ಕಣ್ಣಿನಲ್ಲಿ ವಾತ, ಪಿತ್ತ, ಕಫ ಮುಂತಾದ ಯಾವುದೇ ವಿಕಾರಗಳು ಉಂಟಾದರೂ ಕೂಡ ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ, ನರಗಳ ಮೇಲೆ ಒತ್ತಡದಿಂದಾಗಿ ದೃಷ್ಟಿ ಕಡಿಮೆ ಮತ್ತು ಕಣ್ಣಿನ ನರಗಳ ಊದಿಕೊಳ್ಳುವಿಕೆ, ಕಣ್ಣಿನ ನರಗಳಲ್ಲಿ ರಕ್ತ ಸೋರುವಿಕೆ ಇನ್ನು ಮುಂತಾದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇನ್ನು ಕೆಲವು ಸಂದರ್ಭಗಳಲ್ಲಿ ರೆಟ್ರಿನಲ್ ಡಿಡಾಚ್ಮೆಂಟ್ ಆಗಿರುತ್ತದೆ ಆಗ ಗ್ಲುಕೋಮಾ, ಕಂಜೆಕ್ಟಿವಿಟೀಸ್, ಪಿಗ್ಮೆಂಟೊಸ್ ಇನ್ನೂ ಮುಂತಾದ ಹತ್ತು ಹಲವಾರು ಕಾಯಿಲೆಗಳು ಕಣ್ಣನ್ನು ಬಾಧಿಸುತ್ತವೆ. ಈ ಎಲ್ಲಾ ಕಣ್ಣಿನ ಸಮಸ್ಯೆಗಳು ಬರಲು ಮುಖ್ಯ ತರ್ಪಕ ಕಫ, ಆಲೋಚಕ ಪಿತ್ತ ಮತ್ತು ಉದಾನ ವಾಯುವಿನ ಇಂಬ್ಯಾಲೆನ್ಸ್ ಪ್ರಧಾನ ಕಾರಣ ಎನ್ನುವುದನ್ನು ಆಯುರ್ವೇದ ಹೇಳುತ್ತದೆ.

ಇವುಗಳನ್ನು ಕ್ರಿಯಾಶೀಲಗೊಳಿಸಿ ಈ ಅಸಮತೋಲನವನ್ನು ಸರಿದೂಗಿಸುವ ಗುಣವು ಎಣ್ಣೆ ಚಿಕಿತ್ಸೆಗೆ ಇದೆ. ಆಯುರ್ವೇದದಲ್ಲಿ ಕಣ್ಣಿಗೆ ಸೂಚಿಸುವ ಈ ಚಿಕಿತ್ಸೆಯನ್ನು ಎಣ್ಣೆ ಚಿಕಿತ್ಸೆ ಎಂದು ಕರೆಯುತ್ತಾರೆ. ಪ್ರತಿನಿತ್ಯವೂ ಕೂಡ ಈ ಚಿಕಿತ್ಸೆಯನ್ನು ಮಾಡುವುದರಿಂದ ಕಣ್ಣಿನ ಎಲ್ಲಾ ವಿಕಾರಗಳು ದೂರವಾಗಿ ಕಣ್ಣಿನ ಆರೋಗ್ಯವು ಉತ್ತಮಗೊಳ್ಳುತ್ತದೆ.

ಇದನ್ನು ಮಾಡುವುದು ಹೇಗೆಂದರೆ ರಾತ್ರಿ ಮಲಗುವ ಮುನ್ನ ನಾಲ್ಕು ಹನಿ ಶುದ್ಧವಾದ ಕೊಬ್ಬರಿ ಎಣ್ಣೆ ಅಥವಾ ಶುದ್ಧವಾದ ಹರಳೆಣ್ಣೆ ಅಥವಾ ಶುದ್ಧವಾದ ತುಪ್ಪವನ್ನು ಕಣ್ಣಿಗೆ ಹಾಕಿ ಕನಿಷ್ಠ 20 ಬಾರಿ ಆದರೂ ಕಣ್ಣುಗಳನ್ನು ಬ್ಲಿಂಕ್ ಮಾಡಬೇಕು. ಯಾವುದೇ ಕಾರಣಕ್ಕೂ ಅಂಗಡಿಗಳಲ್ಲಿ ಸಿಗುವ ತುಪ್ಪವನ್ನು ಇದಕ್ಕೆ ಬಳಸಬೇಡಿ. ಶುದ್ಧ ನಾಡು ಹಸುವಿನ ತುಪ್ಪವನ್ನು ಬಳಸಿದರೆ ಅದು ಅತ್ಯುತ್ತಮ, ಒಂದು ವೇಳೆ ಹಸುವಿನ ತುಪ್ಪ ಇಲ್ಲದಿದ್ದರೆ ಎಮ್ಮೆಯ ತುಪ್ಪವನ್ನು ಬಳಸಬಹುದು.

ಆದರೆ ಜರ್ಸಿ ಹಸುವಿನ ತುಪ್ಪವನ್ನು ಮಾತ್ರ ಬಳಸಬೇಡಿ ಕಣ್ಣಿನ ಸಮಸ್ಯೆ ಇಲ್ಲದೇ ಇದ್ದರೂ ಸಹಾ ಅದು ಬರದಂತೆ ಕಾಪಾಡಲು ಈ ಚಿಕಿತ್ಸೆಯನ್ನು ಬಳಸಬಹುದು. ಇದರ ಜೊತೆಗೆ ಇಷ್ಟಲಿಂಗದ ಯೋಗವನ್ನು ಮಾಡುವುದರಿಂದ ಕೂಡ ದೃಷ್ಟಿ ದೋಷಗಳು ನಿವಾರಣೆ ಆಗುತ್ತವೆ ಎನ್ನುವುದನ್ನು ಆಯುರ್ವೇದದಲ್ಲಿ ತಿಳಿಸಲಾಗಿದೆ. ಕಣ್ಣಿನ ದೃಷ್ಟಿ ದೋಷದ ಸಮಸ್ಯೆಯು ಮೊದಲನೇ ಹಂತದಲ್ಲಿ ಇದ್ದಾಗ ಎಣ್ಣೆ ಚಿಕಿತ್ಸೆಯೇ ಬಹಳ ಸೂಕ್ತ.

ಒಂದು ವೇಳೆ ಸಮಸ್ಯೆ ವಿಪರೀತವಾದಾಗ ಆಯುರ್ವೇದದಲ್ಲಿ ತರ್ಪಣ ಚಿಕಿತ್ಸೆ, ಪುಟಪಾಕ ಚಿಕಿತ್ಸೆ, ನೇ ತ್ರಪಿಂಡಿ ಚಿಕಿತ್ಸೆ, ನೇತ ಶೇಖ ಚಿಕಿತ್ಸೆ ಮುಂತಾದ ಚಿಕಿತ್ಸೆಗಳಿವೆ ಇವುಗಳನ್ನು ಪಡೆದುಕೊಂಡು ಸುಧಾರಿಸಿ ಕೊಳ್ಳಬಹುದು. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೆ ಹಂಚಿಕೊಳ್ಳಿ.

ಈ ರೀತಿ ಟಿಪ್ಸ್ ಗಳನ್ನು ಬಳಸಿದರೆ ಫ್ರಿಡ್ಜ್ ಬಾಳಿಕೆ ಬರುತ್ತದೆ ಹಾಗೂ ಎಂದಿಗೂ ರಿಪೇರಿಗೆ ಬರಲ್ಲ.

ಕೆಲವರ ಮನೆಯಲ್ಲಿ ಫ್ರಿಜ್ ಬೇಗ ರಿಪೇರಿಗೆ ಬರುತ್ತಿರುತ್ತದೆ ಹಾಗೂ ಸರಿಯಾದ ರೀತಿಯಲ್ಲಿ ಮೆನ್ಟೇನ್ ಆಗದಿರುವುದರಿಂದ ಕರೆಂಟ್ ಬಿಲ್ ಕೂಡ ಜಾಸ್ತಿ ಬರುತ್ತದೆ. ಈ ರೀತಿ ಇರುವವರು ನಾವು ಈಗ ಹೇಳುವ ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ನಿಮ್ಮ ಮನೆಗೆ ವಿದ್ಯುತ್ ಬಿಲ್ ಅಲ್ಲಿ ಸ್ವಲ್ಪ ಉಳಿತಾಯ ಮಾಡಬಹುದು ಹಾಗೂ ನಿಮ್ಮ ಮನೆಯ ರೆಫ್ರಿಜರೇಟರ್ ಹೆಚ್ಚು ದಿನ ಬಾಳಿಗೆ ಬರುವ ರೀತಿ ನೋಡಿಕೊಳ್ಳಬಹುದು.

● ಮೊದಲನೆ ಟಿಪ್ ಏನೆಂದರೆ ಫ್ರಿಡ್ಜ್ ನ ಫ್ರೀಜರ್ ಬಾಕ್ಸ್ ನಲ್ಲಿ ಐಸ್ ಫಾರ್ಮ್ ಆಗುತ್ತಿರುತ್ತದೆ. ಕೆಲವೊಮ್ಮೆ ಇದು ಗಟ್ಟಿ ಗಟ್ಟಿಯಾಗಿ ಮಂಜುಗಡ್ಡೆಯಾಗಿ ಫ್ರೀಜರ್ ಬಾಕ್ಸ್ ಒಳಗೆ ಹೊರಗೆ ಮತ್ತು ಹಾಗೂ ಕೆಲವೊಮ್ಮೆ ಫ್ರೀಜರ್ ಕೆಳಗೆ ಕೂಡ ಕಟ್ಟಿಕೊಳ್ಳುತ್ತಿರುತ್ತದೆ. ಇದರಿಂದ ಕರೆಂಟ್ ಬಿಲ್ ಹೆಚ್ಚಿಗೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿ ಮೂರು ದಿನಗಳಿಗೆ ಒಮ್ಮೆ ತಪ್ಪದೇ ನಿಮ್ಮ ಫ್ರಿಜ್ ಅಲ್ಲಿ ಇರುವ ಫ್ರೀಜರ್ ಬಟನ್ ಅನ್ನು ಪ್ರೆಸ್ ಮಾಡಿ ಆಗ ಇದೆಲ್ಲಾ ಕರಗಿ ನೀರಾಗಿ ಹೋಗುತ್ತದೆ.

● ಇದು ಮರೆತು ಹೋಗುತ್ತದೆ ಎನ್ನುವವರು ಮತ್ತೊಂದು ಸುಲಭ ಉಪಾಯ ಇದೆ ಇದನ್ನು ಮಾಡಿ. ಅದೇನೆಂದರೆ ಅಡುಗೆಗೆ ಬಳಸುವ ಪುಡಿ ಉಪ್ಪನ್ನು ತೆಗೆದುಕೊಂಡು ಫ್ರೀಜರ್ ಬಾಕ್ಸ್ ಒಳಗೆಲ್ಲಾ ಸ್ಪ್ರೆಡ್ ಮಾಡಿ ಒಂದು ಪೇಪರ್ ಸಹಾಯದಿಂದ ಬಾಕ್ಸ್ ಒಳಗೆಲ್ಲ ಉಪ್ಪಿನಿಂದ ಒರೆಸಿ. ಈ ರೀತಿ ಮಾಡುವುದರಿಂದ ಈ ಸ್ಥಳದಲ್ಲಿ ಮಂಜುಗಡ್ಡೆ ಮತ್ತೆ ಕಟ್ಟಿಕೊಳ್ಳುವುದಿಲ್ಲ. ನೀವು ಐಸ್ ಟ್ರೇ ಅಲ್ಲಿ ನೀರು ಇಟ್ಟಾಗ ಮಾತ್ರ ಟ್ರೇ ಅಲ್ಲಿ ಐಸ್ ಫಾರ್ಮ್ ಆಗುತ್ತದೆ ಅಷ್ಟೇ.

● ಫ್ರಿಡ್ಜ್ ಗ್ಯಾಸ್ಕೆಟ್ ಅನ್ನು ಆಗಾಗ ಚೆಕ್ ಮಾಡುತ್ತಿರಬೇಕು ಒಂದು ಪೇಪರ್ ತೆಗೆದುಕೊಂಡು ಅರ್ಧ ಪೇಪರ್ ಫ್ರಿಡ್ಜ್ ಒಳಗೆ ಅರ್ಧ ಪೇಪರ್ ಹೋರಗೆ ಇರುವಂತೆ ಇಟ್ಟು ಎಳೆಯಬೇಕು ಅದು ಸುಲಭವಾಗಿ ಹೊರ ಬಂದರೆ ಗ್ಯಾಸ್ಕೆಟ್ ಹಾಳಾಗಿದೆ ಅಥವಾ ಕ್ಲೀನ್ ಆಗಿಲ್ಲ ಎಂದರ್ಥ ತಕ್ಷಣವೇ ಗ್ಯಾಸ್ಕೆಟ್ ಅನ್ನು ಕ್ಲೀನ್ ಮಾಡಿ ಮತ್ತೊಮ್ಮೆ ಪ್ರಯತ್ನಿಸಬೇಕು ಈಗಲೂ ಸಹ ಅದು ಈಸಿಯಾಗಿ ಬಂದರೆ ಫ್ರಿಡ್ಜ್ ರಿಪೇರಿ ಮಾಡುವವರಿಗೆ ತೋರಿಸಬೇಕು.

● ಕೆಲವೊಂದು ಸಮಯದಲ್ಲಿ ಫ್ರಿಜ್ ಒಳಗೆ ನಾನ್ ವೆಜ್ ಇಡುವುದರಿಂದ ಅದು ಸ್ಮೆಲ್ ಬರುತ್ತಿರುತ್ತದೆ. ಅಂತಹ ಸಮಯದಲ್ಲಿ ಇದು ಹೋಗಬೇಕು ಎಂದರೆ ಈ ಟಿಪ್ ಬಳಸಿ. ಎರಡು ಸ್ಕೂಲ್ ವಿನೆಗಾರ್ ತೆಗೆದುಕೊಂಡು ನಾಲ್ಕು ಐದು ಪೇಪರ್ ಕಟ್ ಮಾಡಿ ಅದಕ್ಕೆ ಹಾಕಿ ಅದು ವಿನೆಗಾರ್ ಇಂದ ಒದ್ದೆ ಆದ ಮೇಲೆ ಅದನ್ನು ಸಣ್ಣ ಸಣ್ಣ ಉಂಡೆಯಾಗಿ ಮಾಡಿಕೊಂಡು ಮತ್ತೊಂದು ಪ್ಲೇಟಲ್ಲಿ ಇಟ್ಟುಕೊಳ್ಳಿ. ಈಗ ಈ ಉಂಡೆಗಳು ಇರುವ ಪ್ಲೇಟ್ ಅನ್ನು ಫ್ರಿಡ್ಜ್ ಒಳಗೆ ಇಟ್ಟುಕೊಂಡರೆ ಆ ಎಲ್ಲ ಬ್ಯಾಡ್ ಸ್ಮೆಲ್ ಅನ್ನು ಇದು ಅಬ್ಸರ್ವ್ ಮಾಡುತ್ತದೆ.

● ಫ್ರಿಡ್ಜ್ ನಲ್ಲಿ ಇಡುವ ನಿಂಬೆಹಣ್ಣು ಬೇಗ ಕೆಟ್ಟು ಹೋಗುತ್ತಿದ್ದರೆ ಈ ಉಪಾಯ ಬಳಸಿ. ನಿಂಬೆ ಹಣ್ಣನ್ನು ಹಾಗೆ ಇಡುವ ಬದಲು ನಿಮ್ಮ ಮನೆಗೆ ಅಡುಗೆ ಎಣ್ಣೆ ತಂದಾಗ ಎಣ್ಣೆ ಎಲ್ಲವನ್ನು ಒಂದು ಬೇರೆ ಬಾಟಲಿಗೆ ಹಾಕಿಕೊಂಡು ಖಾಲಿ ಎಣ್ಣೆ ಪ್ಯಾಕೆಟ್ ಅನ್ನು ಬಿಸಾಡುವ ಬದಲು ಅದರಲ್ಲಿ ನಿಂಬೆ ಹಣ್ಣನ್ನು ಹಾಕಿ ಫ್ರಿಡ್ಜ್ ಅಲ್ಲಿ ಸ್ಟೋರ್ ಮಾಡಿ ಇಡಿ. ಈ ರೀತಿ ಮಾಡುವುದರಿಂದ ಒಂದು ತಿಂಗಳಾದರೂ ಕೂಡ ಆ ನಿಂಬೆಹಣ್ಣು ಫ್ರೆಶ್ ಆಗಿಯೇ ಇರುತ್ತದೆ.

ಪತಿ ಪತ್ನಿ ಮಲಗುವ ವಾತಾವರಣ ಹೇಗಿರಬೇಕು, ವಾಸ್ತು ಶಾಸ್ತ್ರ ಈ ಬಗ್ಗೆ ಏನು ನೋಡಿ.! ಪ್ರತಿಯೊಬ್ಬ ದಂಪತಿಗಳು ಇದನ್ನು ನೋಡಲೇಬೇಕು.

 

ವಿವಾಹಕ್ಕೂ ಮುಂಚೆ ಇರುವ ಬದುಕೇ ಬೇರೆ, ಮದುವೆ ಆದಮೇಲೆ ಬದಲಾಗುವ ಬದಲಾವಣೆಯೇ ಬೇರೆ. ದಂಪತಿಗಳಾದ ಮೇಲೆ ಆ ಪತಿ ಹಾಗೂ ಪತ್ನಿಯ ನಡವಳಿಕೆಗಳು, ಗುಣಾವಗುಣಗಳು ಒಬ್ಬರ ಮೇಲೆ ಇನ್ನೊಬ್ಬರದ್ದು ಪರಿಣಾಮ ಬೀರುತ್ತದೆ. ಹಾಗಾಗಿ ಹೊಂದಾಣಿಕೆ ಚೆನ್ನಾಗಿರಬೇಕು ಎಂದರೆ ಶಾಸ್ತ್ರದಲ್ಲಿ ತಿಳಿಸಿರುವಂತೆ ಹಿರಿಯರು ಹೇಳಿದಂತೆ ನಡೆದುಕೊಳ್ಳಬೇಕು.

ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಮೇಲೆ ಆ ವ್ಯಕ್ತಿ ಹೇಗೆ ಬದಲಾಗಬೇಕು ಅಥವಾ ಯಾವೆಲ್ಲಾ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎನ್ನುವುದನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಜೊತೆಗೆ ಮನೆ ಯಾವ ರೀತಿ ಇರಬೇಕು ಎನ್ನುವುದನ್ನು ವಾಸ್ತುಶಾಸ್ತ್ರವು ಹೇಳುತ್ತದೆ. ಈ ಅಂಕಣದಲ್ಲಿಯೂ ಸಹ ಅದೇ ರೀತಿ ಪತಿ ಪತ್ನಿಗೆ ಅನ್ವಯಿಸುವಂತಹ ಕೆಲವು ಪ್ರಮುಖ ವಿಷಯಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಇನ್ನು ಮುಂದೆ ಇವುಗಳನ್ನು ಪಾಲಿಸಿ ಕುಟುಂಬದಲ್ಲಿ ಶಾಂತಿ ಹಾಗೂ ನೆಮ್ಮದಿಯಿಂದ ಇರಿ.

● ಪತಿ ಪತ್ನಿ ಮಲಗುವ ಹಾಸಿಗೆಯ ಎರಡು ಭಾಗದಲ್ಲೂ ಕೂಡ ಸ್ವಲ್ಪ ಜಾಗ ಇರಬೇಕು.
● ಯಾವಾಗಲೂ ಹಾಸಿಗೆಯ ಬಲಭಾಗದಲ್ಲಿ ಪತಿ ಮತ್ತು ಎಡ ಭಾಗದಲ್ಲಿ ಪತ್ನಿ ಮಲಗಬೇಕು ಎನ್ನುವುದನ್ನು ಶಾಸ್ತ್ರ ಹೇಳುತ್ತದೆ.
● ರಾತ್ರಿ ನಿದ್ರೆಯಲ್ಲಿ ನಿಮಗೆ ಪದೇಪದೇ ಎಚ್ಚರ ಆಗುತ್ತಿದ್ದರೆ ನೀವು ಮಲಗುವ ಜಾಗವನ್ನು ಬದಲಾಯಿಸಿ ಅಥವಾ ಆ ವಾತಾವರಣ ಬಿಟ್ಟು ಬೇರೆ ಕಡೆ ಮಲಗಿ.

● ವಾಸ್ತು ಪ್ರಕಾರವಾಗಿ ವಿವಾಹಿತ ಜೋಡಿಗಳು ತಲೆಯನ್ನು ದಕ್ಷಿಣದ ಕಡೆಗೆ ಅಥವಾ ಆಗ್ನೇಯ ದಿಕ್ಕಿನ ಕಡೆಗೆ ಇಟ್ಟು ಯಾವಾಗಲೂ ಮಲಗಬೇಕು.
● ಮಲಗುವಾಗ ಯಾವುದೇ ಕಾರಣಕ್ಕೂ ಉತ್ತರದ ಕಡೆಗೆ ತಲೆ ಇಟ್ಟು ಮಲಗಬಾರದು ಎನ್ನುವುದು ಕೂಡ ಶಾಸ್ತ್ರದಲ್ಲಿ ಉಲ್ಲೇಖಿತವಾಗಿದೆ.
● ಪ್ರತಿ ದಿನ ಎದ್ದ ತಕ್ಷಣ ಸೂರ್ಯೋದಯವನ್ನು ನೋಡುವ ಅಭ್ಯಾಸ ಮಾಡಿಕೊಳ್ಳಬೇಕು.

● ಸೂರ್ಯೋದಯಕ್ಕೂ ಮುನ್ನ ಏಳುವ ಅಭ್ಯಾಸವನ್ನು ತಪ್ಪದೆ ರೂಢಿ ಮಾಡಿಕೊಂಡರೆ ಉತ್ತಮ.
● ಮಲಗುವ ಕೋಣೆಯಲ್ಲಿ ಗಾಳಿ ಬರಲು ಕಿಟಕಿಯ ವ್ಯವಸ್ಥೆ ಇರಬೇಕು.
● ರಾತ್ರಿ ಹೊತ್ತು ಇದು ನೀರು ಕುಡಿಯುವ ಅಭ್ಯಾಸ ಇದ್ದರೆ ಹತ್ತಿರದಲ್ಲಿ ಒಂದು ಬಾಟೆಲ್ ಅಥವಾ ಲೋಟದಲ್ಲಿ ನೀರು ತಂದು ಇಟ್ಟುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು.

● ಪತಿ ಯಾವುದಾದರೂ ಶುಭ ಕಾರ್ಯಕ್ಕೆ ಮನೆಯಿಂದ ಹೊರಟ ಮೇಲೆ ಪತ್ನಿ ಮನೆಯಲ್ಲಿ ತಲೆ ಸ್ನಾನ ಮಾಡಬಾರದು.
● ಪತಿ ಕೆಲಸಕ್ಕೆ ಅಥವಾ ಇನ್ಯಾವುದೋ ಕಾರಣಕ್ಕೆ ಮನೆಯಿಂದ ಹೋದ ತಕ್ಷಣ ಮನೆಯಲ್ಲಿ ಕಸ ಗುಡಿಸಬಾರದು ಮನೆಯನ್ನು ಒರೆಸಬಾರದು.

ವಾಸ್ತು ಶಾಸ್ತ್ರದ ಪ್ರಕಾರ ಮನೆ ಎನ್ನುವುದಕ್ಕೆ ಬಹಳ ಪ್ರಾಶಸ್ತ್ಯ ಇದೆ. ಅದರಲ್ಲೂ ಪತಿ ಪತ್ನಿ ಮಕ್ಕಳು ಒಟ್ಟಿಗೆ ವಾಸಿಸುವ ಮನೆಯು ನಂದಗೋಕುಲ ಎಂದರು ತಪ್ಪಾಗಲಾರದು. ಆದ ಕಾರಣ ಯಾವುದೇ ದೋಷ ಉಂಟಾಗದಂತೆ ವಾಸ್ತು ಹಾಳಾಗದಂತೆ ಎಚ್ಚರಿಕೆವಹಿಸಿ ಮನೆಯಲ್ಲಿ ಗೃಹಿಣಿ ಆದವಳು ಎಲ್ಲದರ ಬಗ್ಗೆ ಗಮನ ಕೊಟ್ಟು ನೋಡಿಕೊಳ್ಳಬೇಕು.

ಜೊತೆಗೆ ಮನೆಯ ಏಳಿಗೆಗೆ ಯಾವ ರೀತಿ ಮನೆಯಲ್ಲಿ ಪೂಜೆ ಮಾಡಬೇಕು, ವ್ರತ ಮಾಡಬೇಕು ಎನ್ನುವುದರ ಬಗ್ಗೆ ಮತ್ತು ಮನೆಯಲ್ಲಿರುವ ವಸ್ತುಗಳ ಬಗ್ಗೆ ಮನೆಯ ಶುದ್ಧತೆ ಬಗ್ಗೆ ಹಾಗೂ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಉಂಟಾಗದಂತೆ ಮನೆಯ ವಾತಾವರಣ ಯಾವಾಗಲೂ ಶಾಂತಿಯುತವಾಗಿ ಸಕಾರಾತ್ಮಕವಾಗಿ ಇರುವಂತೆ ನೋಡಿಕೊಳ್ಳಬೇಕು.

ಹೀಗಾಗಬೇಕು ಎಂದರೆ ತಪ್ಪದೇ ಪ್ರತಿದಿನವೂ ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ಮನೆದೇವರ ಹೆಸರು ಹೇಳಿ ದೀಪ ಹಚ್ಚಿ ಪ್ರಾರ್ಥನೆ ಮಾಡಬೇಕು. ಮನೆಯಲ್ಲಿ ಇರುವ ಗೃಹಿಣಿ ಅಥವಾ ದಂಪತಿಗಳಲ್ಲಿ ಪತ್ನಿಯ ಮೇಲೆ ಈ ರೀತಿ ಹೊಣೆಗಾರಿಕೆ ಇರುತ್ತದೆ. ಅದನ್ನು ತಪ್ಪದೇ ಆಚರಿಸಿ ಕುಟುಂಬದ ಸೌಖ್ಯ ಕಾಯ್ದುಕೊಳ್ಳಿ.

ಅಪ್ಪನ ಆಸ್ತಿ ಪಡೆದವರು ಅಪ್ಪನ ಸಾಲವನ್ನು ಕೂಡ ಹೊರಬೇಕಾ.? ಕೋರ್ಟ್ ಕೊಟ್ಟ ತೀರ್ಪು ಏನು ನೋಡಿ.!

 

ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಂಬಂಧಗಳು ಕೂಡ ಹಣ ಆಸ್ತಿಗೆ ಮೀಸಲಾಗಿವೆ ಎಂದು ಭಾವಿಸುವಷ್ಟು ಎಲ್ಲ ಸಂಬಂಧಗಳು ತೀರಾ ಹಳಸಿವೆ. ಮುಖ್ಯವಾಗಿ ಹಣ ಮತ್ತು ಸಾ’ಲ’ದ ವಿಚಾರವಾಗಿಯೇ ಸಂಬಂಧಿಕರ ನಡುವೆ ರಕ್ತ ಸಂಬಂಧದ ನಡುವೆ ವೈ ಮನಸ್ಸು ಉಂಟಾಗುತ್ತಿದೆ. ಕಾನೂನಿನ ಪ್ರಕಾರ ಒಂದು ಅವಿಭಜಿತ ಕುಟುಂಬದಲ್ಲಿ ಯಾರ್ಯಾರಿಗೆ ಯಾವ್ಯಾವ ಹಕ್ಕು ಹಾಗೂ ಹೊಣೆಗಾರಿಕೆ ಇರುತ್ತದೆ ಎನ್ನುವುದನ್ನು ಎಲ್ಲರೂ ತಿಳಿದು ಕೊಂಡಿರಲೇಬೇಕು.

ಇದನ್ನು ಅರಿತುಕೊಂಡು ಅದರ ಪ್ರಕಾರ ನಡೆದುಕೊಂಡಾಗ ಸಮಸ್ಯೆ ಸುಧಾರಿಸಬಹುದು. ಅದಕ್ಕಾಗಿ ಈ ಅಂಕಣದಲ್ಲಿ ಅದೇ ರೀತಿಯ ಒಂದು ವಿಷಯದ ಬಗ್ಗೆ ಮಾಹಿತಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ತಂದೆಯ ಆಸ್ತಿ ಪಡೆದ ಮೇಲೆ ಆತನ ಸಾಲದಲ್ಲೂ ಕೂಡ ಮಕ್ಕಳು ಹೊಣೆಗಾರರಾಗುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಉದಾಹರಣೆಗೆ ಹೇಳುವುದಾದರೆ ಒಬ್ಬ ತಂದೆಗೆ ಇಬ್ಬರು ಹೆಂಡತಿಯರು ಇರುತ್ತಾರೆ. ಮೊದಲ ಹೆಂಡತಿಗೆ ಒಬ್ಬ ಗಂಡು ಮಗ ಹಾಗೂ ಎರಡನೇ ಹೆಂಡತಿಗೆ ಒಬ್ಬ ಗಂಡು ಮಗ ಇರುತ್ತಾರೆ. ಈಗ ತಂದೆ ತೀ’ರಿ’ಕೊಂಡ ಬಳಿಕ ಆತನ ಆಸ್ತಿಯು, ಇಬ್ಬರ ಪಾಲಾಗುತ್ತದೆ ಆದರೆ ತಂದೆ ಕೈ ಸಾಲ ಮಾಡಿಕೊಂಡಿರುವುದರಿಂದ ಹೆಚ್ಚಿನ ಜನರು ಮೊದಲ ಹೆಂಡತಿ ಹಾಗೂ ಮೊದಲ ಹೆಂಡತಿಯ ಮಗನೇ ಹಿರಿಯನಾಗಿರುವುದರಿಂದ ತಂದೆ ಸಾ’ಲ ತೀರಿಸುವಂತೆ ಒತ್ತಡ ಹೇರುತ್ತಾರೆ.

ಹಾಗಾದರೆ ಎರಡನೇ ಹೆಂಡತಿಯ ಮಗನು ನನಗೆ ಏನು ಗೊತ್ತಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಬಹುದೇ ಇಂತಹ ಪ್ರಶ್ನೆ ಅಥವಾ ಇಂತಹ ಸಮಸ್ಯೆ ಖಂಡಿತವಾಗಿಯೂ ಸಾಕಷ್ಟು ಕಡೆ ಎದುರಾಗಿರುತ್ತದೆ. ಆದರೆ ಈ ಬಗ್ಗೆ ಕಾನೂನು ಈ ರೀತಿ ಹೇಳುತ್ತದೆ. ತಂದೆ ಮಾಡಿದ ಸಾ’ಲ’ವನ್ನು ತೀರಿಸುವುದು ಹೊಣೆಗಾರಿಕೆ ಮಾತ್ರ ಅಲ್ಲದೇ ನೈತಿಕತೆಯೂ ಕೂಡ ಹೌದು.

ಆ ವ್ಯಕ್ತಿ ಅಥವಾ ಆ ತಂದೆ ಸ’ತ್ತ ಬಳಿಕ ಆತನ ಪಾಲಿನಲ್ಲಿ ಇದ್ದ ಆಸ್ತಿಯನ್ನು ಯಾರು ಭಾಗ ಮಾಡಿಕೊಳ್ಳುತ್ತಾರೋ ಆ ವಾರಸುದಾರರೆಲ್ಲರೂ ಕೂಡ ಆತ ಮಾಡಿದ ಸಾ’ಲದ ಋಣಕ್ಕೂ ಹೊಣೆಗಾರರಾಗಿರುತ್ತಾರೆ. ತಂದೆಯು ನಿ’ಧ’ನ ಹೊಂದಿದ ಬಳಿಕ ಆ ಆಸ್ತಿಯ ಹಕ್ಕು ಇಬ್ಬರು ಹೆಂಡತಿಗೆ ಹಾಗೂ ಇಬ್ಬರು ಹೆಂಡತಿರ ಮಕ್ಕಳಿಗೂ ಇದ್ದೇ ಇರುತ್ತದೆ.

ಹಾಗಾಗಿ ಅವರೆಲ್ಲರೂ ಕೂಡ ಆ ವ್ಯಕ್ತಿಯು ಮಾಡಿದ್ದ ಸಾಲಕ್ಕೂ ಕೂಡ ಹೊಣೆಗಾರರಾಗಿರುತ್ತಾರೆ, ಯಾವುದೇ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಅವಕಾಶ ಖಂಡಿತ ಇರುವುದಿಲ್ಲ. ಒಂದು ವೇಳೆ ಅವರು ಆಸ್ತಿಯ ಮೇಲಿನ ಅಧಿಕಾರ ಬೇಡ ಎನ್ನುವುದಾದರೆ ಅಥವಾ ತಂದೆಯಿಂದ ಬರಬೇಕಾದ ಆಸ್ತಿಯನ್ನು ಪಡೆದುಕೊಳ್ಳದೆ ಹೋದರೆ ಆಗ ಆ ಸಾಲದ ಹೊಣೆಗಾರಿಕೆ ಬರುವುದಿಲ್ಲ.

ಇಬ್ಬರು ಮಕ್ಕಳು ಕೂಡ ಆಸ್ತಿಯನ್ನು ಸಮಾನವಾಗಿ ಹಂಚಿಕೊಂಡಾಗ ಅದೇ ರೀತಿ ಹೊಣೆಗಾರಿಕೆಯನ್ನು ಕೂಡ ಸಮಾನವಾಗಿ ಹಂಚಿಕೊಂಡು ತಂದೆ ಮಾಡಿದ್ದ ಸಾಲವನ್ನು ತೀರಿಸಬೇಕಾಗುತ್ತದೆ ಎಂದು ಕಾನೂನು ಹೇಳುತ್ತದೆ. ಕುಟುಂಬದಲ್ಲಿ ಮೊದಲಿಗೆ ಕುರಿತು ಮಾತನಾಡಿ ಇದರ ನಿರ್ಧಾರ ತೆಗೆದುಕೊಳ್ಳಬಹುದು ಬಳಿಕ ಅದಕ್ಕೆ ಸಂಬಂಧಪಟ್ಟ ಕ್ರಮ ಕೈಗೊಳ್ಳಬೇಕು.

ಅಥವಾ ಈ ವಿಚಾರದ ಬಗ್ಗೆ ಇನ್ನೂ ಗೊಂದಲಗಳಿದ್ದರೆ ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರಕ್ಕೆ ಹೋಗಿ ಮಾಹಿತಿ ಪಡೆಯಬಹುದು ಅಥವಾ ಪರಿಚಯದ ವಕೀಲರ ಬಳಿ ಕೇಳಿ ಕಾನೂನಿನ ಸಲಹೆ ತೆಗೆದುಕೊಳ್ಳಬಹುದು. ಈ ರೀತಿ ಕಾನೂನಿನಲ್ಲಿ ಎಲ್ಲಾ ತೊಡಕಿಗೂ ಕೂಡ ಪರಿಹಾರ ಇದ್ದೇ ಇದೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

ಮೇಷ ರಾಶಿಯ ಜುಲೈ ತಿಂಗಳ ಮಾಸ ಭವಿಷ್ಯ. ಈ ತಿಂಗಳು ಒಂದು ಮಹಾನ್ ಶಕ್ತಿ ನಿಮ್ಮನ್ನು ಕಾಯುತ್ತದೆ ನಿರೀಕ್ಷೆಗೂ ಮೀರಿದ ಲಾಭ ದೊರೆಯಲಿದೆ.!

 

ಮೇಷ ರಾಶಿಯವರಿಗೆ ರಾಹು ಮತ್ತು ಬೃಹಸ್ಪತಿ, ರಾಶಿಯಲ್ಲಿಯೇ ಇದ್ದಾರೆ. ಇದರಿಂದ ನಿಮಗೆ ಹಲವಾರು ರೀತಿಯ ತೊಂದರೆಗಳು ಸಂಭವಿಸುತ್ತದೆ ಆದರೆ ಈ ಎಲ್ಲಾ ರೀತಿಯ ತೊಂದರೆಗಳಿಂದ ನಿಮ್ಮನ್ನು ಒಂದು ಶಕ್ತಿಯ ರಕ್ಷಿಸುತ್ತಿದೆ. ಹಾಗಾದರೆ ಆ ಒಂದು ಶಕ್ತಿ ಯಾವುದು ಹಾಗೂ ಆ ಒಂದು ಶಕ್ತಿ ನಿಮ್ಮನ್ನು ಈ ಒಂದು ತಿಂಗಳಲ್ಲಿ ಯಾವ ರೀತಿಯಾಗಿ ಕಾಪಾಡುತ್ತದೆ.

ಎನ್ನುವುದನ್ನು ಈ ದಿನ ತಿಳಿಯೋಣ. ವಿಶೇಷವಾಗಿ ಜುಲೈ 17ನೇ ತಾರೀಖಿನವರೆಗೆ ನಿಮಗೆ ಒಂದು ಗ್ರಹ ರಕ್ಷಣೆಯನ್ನು ಮಾಡುತ್ತದೆ. ಇದ ರಿಂದ ನಿಮಗೆ ಯಾವುದೇ ರೀತಿಯ ಕೆಲಸ ಕಾರ್ಯಗಳಾಗಿರಬಹುದು ಪ್ರತಿಯೊಂದರಲ್ಲಿಯೂ ಕೂಡ ಯಶಸ್ಸು ಎನ್ನುವುದು ಸಿಗುತ್ತಾ ಹೋಗು ತ್ತದೆ. ಅದರಲ್ಲೂ ಸರ್ಕಾರಿ ನೌಕರರಿಗೆ, ಸರ್ಕಾರದಿಂದ ಯಾವುದೇ ರೀತಿಯ ಕೆಲಸವನ್ನು ನೀವು ಮಾಡುತ್ತಿದ್ದರೆ ಅವೆಲ್ಲದರಲ್ಲಿಯೂ ಕೂಡ ಜಯ ಸಿಗುತ್ತದೆ.

ಯಾವುದೇ ರೀತಿಯ ಕೋರ್ಟ್ ಕೇಸ್ ವಿಚಾರವಾಗಿ ಅರ್ಜಿಯನ್ನು ಹಾಕಿದ್ದರೆ ಅಥವಾ ಯಾವುದಾದರೂ ಬೇರೆ ಸರ್ಕಾರಿ ಕೆಲಸಕ್ಕೆ ಪ್ರಯತ್ನಿ ಸುತ್ತಿದ್ದರೆ ಅದರೆಲ್ಲದರಲ್ಲಿಯೂ ಕೂಡ ನೀವು ಜಯಶೀಲರಾಗುತ್ತೀರಿ. ಅದರಲ್ಲೂ ಈ ಎಲ್ಲಾ ರೀತಿಯ ಕೆಲಸಗಳು 17ನೇ ತಾರೀಖಿನ ಒಳಗಡೆ ನಡೆಯುವಂತದ್ದು ಆನಂತರ ಸ್ವಲ್ಪ ಮಟ್ಟಿಗೆ ಅದರಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ತಕ್ಷಣವೇ ಅದೆಲ್ಲವೂ ನಿಂತು ಹೋಗುವ ಸಾಧ್ಯತೆಗಳು ಕೂಡ ಇದೆ.

ಆದ್ದರಿಂದ 17ನೇ ತಾರೀಖಿನ ಒಳಗಾಗಿ ಯಾವುದೇ ರೀತಿಯ ವಿಚಾರದ ಲ್ಲಿಯೂ ಹೆಚ್ಚು ಮುಂಜಾಗ್ರತೆಯನ್ನು ವಹಿಸಿ ಆ ಕೆಲಸವನ್ನು ಪೂರ್ಣ ಗೊಳಿಸಿಕೊಳ್ಳುವುದು ಉತ್ತಮ. ಅದರಲ್ಲೂ ವಿಶೇಷವಾಗಿ ನಿಮ್ಮ ಸುಖಕ್ಕೆ ತೊಂದರೆಯನ್ನು ಕೊಡುತ್ತಾನೆ ರವಿ. ಇದರಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಕುಂಟಿತ, ಮಾನಸಿಕವಾಗಿ ಕಿರಿಕಿರಿ ಉಂಟಾಗುತ್ತದೆ, ಆದರೆ ವಿಶೇಷವಾಗಿ ಚತುರ್ಥದಲ್ಲಿ ನಿಮಗೆ ಸುಖ ಸಿಗುತ್ತದೆ. ರವಿ ಚತುರ್ಥಕ್ಕೆ ಹೋದಾಗ ಸೇರಿಕೊಳ್ಳುವುದು

ಬುಧ ಗ್ರಹವನ್ನು. ಇದರಿಂದ ಬಹಳಷ್ಟು ಫಲಗಳನ್ನು ಕೊಡುತ್ತಾನೆ. ಈ ಸಂದರ್ಭದಲ್ಲಿ ಧೈರ್ಯ ವನ್ನು ಹೆಚ್ಚಿಸುವುದಾಗಿರಬಹುದು ನಿಮ್ಮ ಉತ್ಸಾಹಕತೆಯನ್ನು ಹೆಚ್ಚಿಸುವುದಾಗಿರಬಹುದು ಒಟ್ಟಾರೆಯಾಗಿ ನಿಮಗೆ ಈ ಒಂದು ಸಮಯದಲ್ಲಿ ಬುದ್ಧಿ ಶಕ್ತಿ ಎನ್ನುವುದು ಹೆಚ್ಚಾಗುತ್ತದೆ. ವಿಶೇಷವಾಗಿ ಬುಧ ಸಂಪತ್ತಿನ ಕ್ರೂಢೀಕರಣವನ್ನು ಮಾಡುತ್ತಾನೆ ಎಂದು ಹೇಳುತ್ತಾರೆ. ಆದ್ದರಿಂದ ಬಹಳಷ್ಟು ಮೂಲದಿಂದ ನಿಮಗೆ ಹಣಕಾಸಿನ ಆಗಮನ ಉಂಟಾಗುತ್ತದೆ.

ಅಂದರೆ ನಿಮ್ಮ ಯಾವ ಆದಾಯದ ಮೂಲಗಳು ಇರುತ್ತವೆಯೋ ಅದ ರಿಂದ ಸಕಾಲಕ್ಕೆ ನಿಮಗೆ ಹಣ ಬಂದು ತಲುಪುತ್ತದೆ. ಹಾಗೂ ಈ ಸಮಯದಲ್ಲಿ ನಿಮಗೆ ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ತೊಂದರೆಗಳು ಉಂಟಾಗುತ್ತದೆ. ಆದ್ದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸು ವುದು ಉತ್ತಮ. ಹಾಗೂ ಈ ಸಮಯದಲ್ಲಿ ನಿಮ್ಮ ಮಕ್ಕಳು ನಿಮಗೆ ಹೆಚ್ಚು ತೊಂದರೆಗಳನ್ನು ಉಂಟು ಮಾಡುತ್ತಿರುತ್ತಾರೆ ಪ್ರತಿಯೊಂದು ವಿಷಯಕ್ಕೂ ಹಠ ಮಾಡುವುದು ಮಾಡುತ್ತಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಗೃಹಿಣಿಯರಿಗೆ ಅಡಿಗೆಗೆ ಸಂಬಂಧಿಸಿದ ಹಾಗೆ ಕೆಲವು ಉಪಯುಕ್ತ ಟಿಪ್ಸ್ ಗಳು.! ಇವನ್ನು ಪಾಲಿಸಿದ್ರೆ ಎಷ್ಟೋ ಉಪಯೋಗ ಆಗುತ್ತೆ

 

● ಕಡ್ಲೆಹಿಟ್ಟಿಗೆ ಸ್ವಲ್ಪ ಉದ್ದಿನ ಬೇಳೆ ಹಿಟ್ಟು ಬೆರೆಸಿ ಪಕೋಡ ಮಾಡುವುದರಿಂದ ಪಕೋಡದ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.
● ಹಾಲಿನ ಕೆನೆಗೆ ಒಂದು ಟೀ ಚಮಚದಷ್ಟು ಸಕ್ಕರೆಯನ್ನು ಸೇರಿಸಿ ಕಾಯಿಸಿದರೆ ನಂತರ ಬೆಣ್ಣೆ ಕೂಡ ಹೆಚ್ಚಾಗಿ ಬರುತ್ತದೆ.
● ಬಾಳೆಹಣ್ಣಿನ ಗೊನೆಯನ್ನು ನೇತು ಹಾಕುವುದರಿಂದ ಬಾಳೆಹಣ್ಣು ಒಂದು ವಾರ ಆದರೂ ಹಾಳಾಗುವುದಿಲ್ಲ.

● ಬೇಳೆ ಬೇಗ ಬೇಯಿಸಲು ಮತ್ತು ಅದರ ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಅದಕ್ಕೆ ಸ್ವಲ್ಪ ಅರಿಶಿನ ಹಾಗೂ ಒಂದು ಚಮಚ ಎಣ್ಣೆಯನ್ನು ಹಾಕಿ ಬೇಯಿಸಿ.
● ಮಳೆಗಾಲದ ದಿನಗಳಲ್ಲಿ ಮಸಾಲೆ ಪದಾರ್ಥಗಳು ಹಾಳಾಗದಂತೆ ತಡೆಯಲು ಅವುಗಳನ್ನು ಗಾಜಿನ ಜಾರ್ ಅಲ್ಲಿ ಸಂಗ್ರಹಿಸಿಡಿ.
● ಬೆಲ್ಲದ ಪಾಕವನ್ನು ತಯಾರಿಸುವಾಗ ಆ ಪಾತ್ರೆಗೆ ಮೊದಲು ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿದರೆ ಪಾಕವು ಪಾತ್ರೆಗೆ ಅಂಟಿಕೊಳ್ಳುವುದಿಲ್ಲ.

● ಒಣಗಿದ ಮೆಕ್ಕೆಜೋಳವನ್ನು ಒಂದು ದಿನ ಬಿಸಿನಲ್ಲಿ ಇಡಿ, ಇದರಿಂದ ಪಾಪ್ಕಾರ್ನ್ ಮಾಡಿದರೆ ಚೆನ್ನಾಗಿ ಬರುತ್ತದೆ.
● ಹಾಲಿನಿಂದ ಹೆಚ್ಚಿನ ಕೆನೆಯನ್ನು ತೆಗೆಯಬೇಕು ಎಂದರೆ ಮೊದಲಿಗೆ ಹಾಲನ್ನು ಚೆನ್ನಾಗಿ ಕಾಯಿಸಿ, ನಂತರ ಅದನ್ನು ಫ್ರಿಡ್ಜಲ್ಲಿ ಇಡಿ. ಈ ರೀತಿ ಮಾಡುವುದರಿಂದ ಹಾಲಿನ ಕೆನೆ ದಪ್ಪ ಆಗುತ್ತದೆ ಹೆಚ್ಚು ಕೆನೆ ಸಿಗುತ್ತದೆ.
● ಟಮೋಟದಲ್ಲಿ ಸಿಪ್ಪೆಯನ್ನು ತೆಗೆಯಬೇಕು ಎಂದರೆ ಮೊದಲಿಗೆ ಟೊಮೆಟೊ ಮೇಲೆ ಗೆರೆಯನ್ನು ಎಳೆಯಿರಿ ನಂತರ ಅದನ್ನು ಎರಡು ನಿಮಿಷ ಬಿಸಿ ನೀರಿನಲ್ಲಿ ಬೇಯಿಸಿ, ಈಗ ಸಿಪ್ಪೆ ಸುಲಭವಾಗಿ ಬರುತ್ತದೆ.

● ಯಾವುದೇ ಮಸಾಲೆ ಪುಡಿ ಅಥವಾ ಸಾಂಬಾರ್ ಪುಡಿ ಬೇಗ ಹಾಳಾಗಬಾರದು ಎಂದರೆ ಅದರಲ್ಲಿ ಕಲ್ಲುಪ್ಪನ್ನು ಸೇರಿಸಿ ಇಡಿ.
● ಮಾವಿನಕಾಯಿ ಉಪ್ಪಿನಕಾಯಿ ಮಾಡುವಾಗ ಅದರಲ್ಲಿ ಸ್ವಲ್ಪ ಬೆಲ್ಲವನ್ನು ಸೇರಿಸಿದರೆ ಉಪ್ಪಿನಕಾಯಿ ರುಚಿಯಾಗಿರುತ್ತದೆ.
● ಸಾಂಬಾರ್ ಮಾಡುವಾಗ ತರಕಾರಿ ಮತ್ತು ಬೇಳೆ ಬೆಂದ ನಂತರ ಅಷ್ಟೇ ಹುಣಸೆ ರಸವನ್ನು ಸೇರಿಸಿ.

● ಮಳೆಗಾಲದಲ್ಲಿ ಉಪ್ಪು ನೀರಾಗಿ ಹೋಗುತ್ತದೆ, ಅದು ನೀರಾಗದಂತೆ ತಪ್ಪಿಸಬೇಕು ಎಂದರೆ ಒಂದು ಹಿಡಿ ಅಕ್ಕಿಯನ್ನು ಹಾಕಿಡಿ.
● ಅನ್ನ ಮಾಡುವಾಗ ಒಂದು ಚಿಕ್ಕ ಚಮಚದಷ್ಟು ನಿಂಬೆ ರಸವನ್ನು ಸೇರಿಸಿದರೆ ಅನ್ನ ಬಿಳಿಯಾಗಿರುತ್ತದೆ, ಮತ್ತು ಉದುರು ಉದುರಾಗಿ ಇರುತ್ತದೆ.
● ಹಲ್ವಾ ಮಾಡುವಾಗ ಸಕ್ಕರೆಯನ್ನು ಸೇರಿಸುವ ಬದಲು ಸಕ್ಕರೆ ಪಾಕವನ್ನು ಸೇರಿಸಿದರೆ ಹಲ್ವಾದ ರುಚಿ ಇನ್ನು ಹೆಚ್ಚಾಗುತ್ತದೆ.

● ಟಮೋಟೋ ಸೂಪ್ ಗಟ್ಟಿಯಾಗಿರಬೇಕು, ರುಚಿಯಾಗಿರಬೇಕು ಎಂದರೆ ಅದರಲ್ಲಿ ಸ್ವಲ್ಪ ಬ್ರೆಡ್ ತುಂಡುಗಳನ್ನು ಸೇರಿಸಿ ಮಿಕ್ಸಿಗೆ ಹಾಕಿ.
● ಹಾಲನ್ನು ಕುದಿಸುವಾಗ ಹಾಲಿನ ಪಾತ್ರೆ ಮೇಲೆ ಒಂದು ಮರದ ಚಮಚವನ್ನು ಇಟ್ಟರೆ ಹಾಲು ಉಕ್ಕಿ ಚೆಲ್ಲುವುದಿಲ್ಲ.

● ಹಾಲಿಗೆ ಹೆಪ್ಪು ಹಾಕಿದರೂ ಮೊಸರು ಆಗಿಲ್ಲ ಎಂದರೆ ಒಂದು ಅಗಲವಾದ ಚಪ್ಪಟೆ ತಟ್ಟೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಪಾತ್ರೆಯನ್ನು ಇಡಿ, ಒಂದು ಗಂಟೆ ಒಳಗಡೆ ಮೊಸರು ತಯಾರಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಪಾತ್ರೆಯನ್ನಾಗಲಿ ಅಥವಾ ತಟ್ಟೆಯನ್ನಾಗಲಿ ಒಂದು ಗಂಟೆವರೆಗೆ ಅಲುಗಾಡಿಸಬಾರದು. ಅದು ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು.

● ಸಮೋಸ ಹಿಟ್ಟನ್ನು ಕಲಸುವಾಗ ಅದರ ಜೊತೆಗೆ ಸ್ವಲ್ಪ ಅಕ್ಕಿ ಹಿಟ್ಟನ್ನು ಹಾಕಿದರೆ ಸಮೋಸ ಗರಿಗರಿಯಾಗಿ ಬರುತ್ತದೆ.
● ಮಳೆಗಾಲದಲ್ಲಿ ಅಕ್ಕಿಯಲ್ಲಿ ಹುಳಗಳು ಕೀಟಗಳು ಬರಬಾರದು ಎಂದರೆ ಆ ಹಕ್ಕಿಗೆ ಸ್ವಲ್ಪ ಬೇವಿನ ಎಲೆಗಳನ್ನು ಸೇರಿಸಿ ಇಡಿ.
● ಈರುಳ್ಳಿಯನ್ನು ಕತ್ತರಿಸಿದ ಮೇಲೆ ಕೈ ಅದೇ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಅಡುಗೆ ಸೋಡವನ್ನು ಕೈಗೆ ಹಾಕಿಕೊಂಡು ಉಜ್ಜಿ ತೊಳೆದುಕೊಳ್ಳಿ.

ಕಿಚನ್ ಕೌಂಟರ್ ಮಾಡಿಸುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ, ನಂತರ ಪಶ್ಚಾತಾಪ ಪಡುವುದು ತಪ್ಪುತ್ತದೆ.!

ಪ್ರತಿಯೊಬ್ಬರಿಗೂ ಕೂಡ ಮನೆ ಎನ್ನುವುದು ಒಂದು ಕನಸು. ಇನ್ನೊಬ್ಬರಿಗಿಂತ ವಿಭಿನ್ನವಾಗಿ ಅಥವಾ ತಮ್ಮ ಕನಸಿನಂತೆ ಅಥವಾ ದೀರ್ಘಕಾಲ ಬಾಳಿಕೆಗೆ ಬರುವಂತೆ, ಎಲ್ಲರೂ ಮೆಚ್ಚುವಂತೆ ಮನೆ ನಿರ್ಮಿಸಬೇಕು ಎನ್ನುವುದು ಎಲ್ಲರ ಆಸೆ. ಒಂದು ವೇಳೆ ನಮ್ಮ ಮನೆ ನಾವು ಅಂದುಕೊಂಡಂತೆ ಬರದೇ ಹೋದರೆ ಮನೆಯಲ್ಲಿ ಇರುವಷ್ಟು ದಿನ ಪಶ್ಚಾತಾಪದಿಂದ ಅದರ ಬಗ್ಗೆಯೇ ಯೋಚಿಸುತ್ತಿರುತ್ತೇವೆ.

ಆದ್ದರಿಂದ ಮನೆ ಕಟ್ಟುವ ಮುನ್ನವೇ ಅವುಗಳ ಬಗ್ಗೆ ಸರಿಯಾಗಿ ಪ್ಲಾನ್ ಹಾಕಿಕೊಂಡು ನಂತರ ನಿರ್ಧಾರಗಳು ಸರಿಯೇ ಎನ್ನುವ ಬಗ್ಗೆ ಕ್ರಾಸ್ ಚೆಕ್ ಮಾಡಿಕೊಂಡು ಆ ರೀತಿ ಮಾಡಿಸಿದರೆ ಒಳ್ಳೆಯದು. ಹಾಗಾಗಿ ಈ ಅಕಣದಲ್ಲೂ ಗೃಹಿಣಿಯರ ಅಚ್ಚುಮೆಚ್ಚಿನ ತಾಣವಾದ ಕಿಚನ್ ಕೌಂಟರ್ ಮಾಡಿಸುವಾಗ ಯಾವೆಲ್ಲಾ ವಿಷಯದ ಬಗ್ಗೆ ಗಮನ ಕೊಡಬೇಕು ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ.

● ಮೊದಲಿಗೆ ಕಿಚನ್ ಅಲ್ಲಿ ಸಿಂಕ್ ಹಾಕಿಸುವಾಗ ಯಾವಾಗಲೂ ಕ್ವಾರ್ಡ್ ಸಿಂಕ್ ಅನ್ನು ಹಾಕಿಸಿ, ಸಿಂಗಲ್ ಬೌಲ್ ಇರಲಿ ಹಾಗೂ ಅದರ ಟ್ಯಾಪ್ ವಾಲ್ ಮೌಂಟೆಡ್ ಆಗಿದ್ದರೆ ಒಳ್ಳೆಯದು.

● ಗ್ಯಾಸ್ ಅಥವಾ ಹಾಬ್ ಇಟ್ಟುಕೊಳ್ಳಬೇಕಾದ ಶೆಲ್ಫ್ ಅನ್ನು ಹೆಚ್ಚಿನ ಜನ ಕಪ್ಪು ಬಣ್ಣದಲ್ಲಿ ಆಯ್ದುಕೊಳ್ಳುತ್ತಾರೆ. ಕಾರಣ ಅಡುಗೆ ಮನೆಯಲ್ಲಿ ಕಲೆಗಳಾದರೆ ಕಾಣಿಸುವುದಿಲ್ಲ ಎಂದು, ಆದರೆ ಇದು ತಪ್ಪು. ಬಿಳಿ ಬಣ್ಣದ ಮೇಲೆ ಹೇಗೆ ಕಲೆಗಳು ಕಾಣುತ್ತಿರುತ್ತವೋ ಅದೇ ರೀತಿ ಕಪ್ಪು ಬಣ್ಣದ ಕಲ್ಲಿನ ಮೇಲೆ ಕೂಡ ಕಲೆಗಳು ಕಾಣುತ್ತಿರುತ್ತವೆ. ಅದರ ಬದಲು ಮಿಕ್ಸೆಡ್ ಬಣ್ಣವನ್ನು ಚೂಸ್ ಮಾಡಿ ಇದು ಕಲೆಗಳನ್ನು ಎತ್ತಿ ತೋರುವುದಿಲ್ಲ ಹಾಗೂ ಟ್ರೆಂಡಿ ಆಗಿ ಇರುತ್ತದೆ. ಕಿಚನ್ ಹಳೆಯದಾಗುತ್ತಿತ್ತಂತೆ ಕಲೆ ಹೆಚ್ಚಾದಗಲೂ ಮ್ಯಾನೇಜ್ ಆಗುತ್ತದೆ.

● ಅಡಿಗೆ ಮನೆಗೆ ಹಾಕುವ ಕಲ್ಲನ್ನು ಹೆಚ್ಚಿನವರು ಗ್ರಾನೈಟ್ ಕಲ್ಲು ಚೂಸ್ ಮಾಡುತ್ತಾರೆ. ಇದರ ಬದಲು ಕ್ವಾರ್ಡ್ಜ್ ಗಳನ್ನು ಸೆಲೆಕ್ಟ್ ಮಾಡಿದರೆ ಬಣ್ಣಗಳ ಆಪ್ಷನ್ ಹೆಚ್ಚು ಸಿಗುತ್ತದೆ ಹಾಗೂ ಡಿಸೈನ್ಸ್ ಕೂಡ ಹೆಚ್ಚಿಗೆ ಇರುತ್ತದೆ. ಲುಕ್ ಕೂಡ ಚೆನ್ನಾಗಿ ಇರುತ್ತದೆ.

● ಕಿಚನ್ ಸ್ಲ್ಯಾಬಿನ ಹೈಟ್ ವಿಷಯ ಕೂಡ ಮುಖ್ಯವಾದ ವಿಷಯ. ಯಾಕೆಂದರೆ ಸಾಮಾನ್ಯವಾಗಿ ಎಲ್ಲರೂ ಕೂಡ ಒಂದು ಸ್ಟ್ಯಾಂಡರ್ಡ್ ಎಂದು 3 ಫೀಟ್ ಗೆ ಕಿಚನ್ ಸ್ಲ್ಯಾಬ್ ಹಾಕಿಸುತ್ತಾರೆ. ಆದರೆ ಆ ರೀತಿ ಮಾಡುವ ಬದಲು ನಿಮ್ಮ ಮನೆಯಲ್ಲಿ ಯಾರು ಹೆಚ್ಚು ಅಡುಗೆ ಮನೆಯಲ್ಲಿ ಸಮಯ ಕಳೆಯುತ್ತಾರೆ, ಅಡುಗೆ ಮಾಡುತ್ತಾರೆ ಅಂತವರ ಹೈಟಿಗೆ ಮ್ಯಾಚ್ ಆಗೋ ರೀತಿ ಮಾಡಿಸಿದರೆ ನಂತರ ದಿನಗಳಲ್ಲಿ ಅವರಿಗೆ ಕಿರಿಕಿರಿ ಆಗುವುದು ತಪ್ಪುತ್ತದೆ. ಎಲ್ಲರಿಗೂ ಸಹ 3 ಫೀಟ್ ಸ್ಟ್ಯಾಂಡರ್ಡ್ ಆಗಿ ಅಡ್ಜಸ್ಟ್ ಆಗುವುದಿಲ್ಲ, ಅವರವರ ಎತ್ತರಕ್ಕೆ ಅನುಗುಣವಾಗಿ ಸ್ಲ್ಯಾಬ್ ಮಾಡಿಸಿದರೆ ಒಳ್ಳೆಯದು.

● ಕಿಚನ್ ಕ್ಯಾಬಿನೆಟ್ ಗಳಿಗೆ ಹಾಕುವ ಸ್ವಿಚ್ ಬೋರ್ಡ್ ಗಳ ಬಗ್ಗೆ ಗಮನ ಇಡಲೇಬೇಕು. ಯಾಕೆಂದರೆ ಮುಂದೆ ಟೆಕ್ನಾಲಜಿ ಇಂಪ್ರೂ ಆದಂತೆ ಕೆಳಗಿನಿಂದಲೇ ಅಪ್ಲೈಸನ್ಸ್ ಗಳಿಗೆ ಕನೆಕ್ಷನ್ ಕೊಡುವ ಟ್ರೆಂಡ್ ಬರುತ್ತದೆ. ಹಾಗಾಗಿ ಕನಿಷ್ಠ ಮೂರು ಸ್ವಿಚ್ ಬೋರ್ಡ್ ಆದರೂ ಹಾಕಿಸಿ. ಜೊತೆಗೆ ಮೇಲೆ ಗ್ರಾನೆಟ್ ಓಪನ್ ಹೋಲ್ ಗಳ ಬಗ್ಗೆ ಗಮನ ಕೊಡಿ. ಯಾಕೆಂದರೆ ವೈರ್ ಗಳು ಬರುವುದಕ್ಕೆ ಲೈನ್ಸ್ ಇಲ್ಲ ಎಂದರೆ ನಂತರದ ದಿನಗಳಲ್ಲಿ ಕಷ್ಟ ಆಗುತ್ತದೆ. ಹಾಗಾಗಿ ಕಿಚನ್ ಕೌಂಟರ್ ಮಾಡುವಾಗ ಇವುಗಳ ಬಗ್ಗೆ ಗಮನ ಇರಲಿ.

ಇದೇ ರೀತಿಯ ಇನ್ನು ಸಾಕಷ್ಟು ವಿಷಯಗಳು ಕಿಚನ್ ಕೌಂಟರ್ ಜಾಗಕ್ಕೆ ಸಂಬಂಧಪಟ್ಟಹಾಗೆ ಇವುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ. ಮತ್ತು ಈ ವಿಡಿಯೋವನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಶೇರ್ ಮಾಡಿ.

ತುಂಬಾ ಸಾಲ ಇದ್ರೆ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ತಿಂಗಳೊಳಗೆ ನಿಮ್ಮ ಸಾಲ ತೀರುತ್ತೆ, ಮನಸ್ಸಿನ ಕೋರಿಕೆಯನ್ನು ಇಡೇರಿಸುವ ಕಲಿಯುಗ ದೈವ.!

ಸಂ’ಕ’ಟ ಬಂದಾಗ ವೆಂಕಟರಮಣ ಎನ್ನುವ ಮಾತೇ ಇದೆ. ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ನಮ್ಮಿಂದ ನಿಭಾಯಿಸಲು ಆಗಲಿಲ್ಲ ಎಂದಾಗ ನಾವು ಸಹಾಯಕ್ಕಾಗಿ ಮನುಷ್ಯರ ಬದಲು ದೇವರನ್ನು ನಂಬುತ್ತೇವೆ. ಎಲ್ಲ ಭಾರವನ್ನು ಆತನ ಮೇಲೆ ಹಾಕುತ್ತೇವೆ. ಈಗಿನ ಕಾಲದಲ್ಲಿ ಬರುವ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಆರ್ಥಿಕ ಸಮಸ್ಯೆಯೇ ಸಾ’ಲ ಹೆಚ್ಚಾಗುವುದು, ಪಡೆದುಕೊಂಡ ಸಾಲವನ್ನು ತೀರಿಸಲು ಆಗದೆ ಇರುವುದು.

ಅಥವಾ ಆದಾಯದ ಮೂಲ ಕಡಿಮೆ ಆಗುವುದು ಈ ರೀತಿ ಹಣಕಾಸಿನ ಸಮಸ್ಯೆ ಎದುರಾದಾಗ ನಾವು ಹಣದ ದೇವತೆಯಾದ ಲಕ್ಷ್ಮಿ ಹಾಗೂ ಲಕ್ಷೀಪತಿ ವೆಂಕಟೇಶ್ವರನನ್ನು ನೆನೆಯುತ್ತೇವೆ. ಹಣಕಾಸಿನ ಸಮಸ್ಯೆ ಪರಿಹಾರಕ್ಕಾಗಿ ದಕ್ಷಿಣ ಭಾರತದ ಎಲ್ಲರೂ ಕೂಡ ತಿರುಪತಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಪರಿಹಾರಕ್ಕೆ ಬೇಡಿಕೊಳ್ಳುತ್ತಾರೆ.

ಎಲ್ಲರಿಗೂ ಕೂಡ ಅಷ್ಟು ದೂರ ಪ್ರಯಾಣ ಮಾಡಿ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಸಮಯದ ಅಭಾವ ಅಥವಾ ಮತ್ತಿತರ ಕಾರಣಗಳಿಂದ ನೀವು ತಿರುಪತಿಗೆ ಹೋಗಲು ಸಾಧ್ಯವಾಗದೆ ಇದ್ದರೆ ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ಬೆಂಗಳೂರಿನಲ್ಲಿರುವ ಈ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡಿ ಸಾಕು. ನಿಮಗೆ ತಿರುಪತಿಗೆ ಹೋಗಿ ಬಂದ ಅನುಭವ ಆಗುತ್ತದೆ.

ಬೆಂಗಳೂರಿನ ಬೆಳ್ಳಂದೂರು ಏರಿಯಾದಲ್ಲಿರುವ ಬೆಳ್ಳಂದೂರು ಕೆರೆ ಪಕ್ಕದಲ್ಲಿರುವ ಈ ತಿರುಪತಿ ವೆಂಕಟೇಶ್ವರ ದೇವಸ್ಥಾನವು ಬಹಳ ಫೇಮಸ್ ಆಗಿದೆ. ಈ ದೇವಸ್ಥಾನವನ್ನು ಪೂರ್ತಿ ಕಲ್ಲಿನಿಂದ ಕೆತ್ತಲಾಗಿದೆ ಮತ್ತು ಈ ದೇವಸ್ಥಾನದ ಪ್ರತಿಯೊಂದು ಕೆತ್ತನೆ ಹಾಗೂ ವಿನ್ಯಾಸ ಎಲ್ಲವೂ ಸಹ ತಿರುಪತಿಯಲ್ಲಿರುವ ತಿಮ್ಮಪ್ಪನ ದೇವಸ್ಥಾನದ ವಾಸ್ತುಶಿಲ್ಪ ಶೈಲಿಯಲ್ಲಿಯೇ ಇದೆ ಎನ್ನುವುದು ವಿಶೇಷ.

ಸ್ವತಂತ್ರ ಬಂದ ನಂತರ ಬೆಂಗಳೂರಿನಲ್ಲಿ ಪೂರ್ತಿ ಕಲ್ಲಿನಿಂದಲೇ ಕಟ್ಟಿಸಲಾದ ಒಂದೇ ದೇವಸ್ಥಾನ ಇದು, ತಿರುಪತಿಯಲ್ಲಿರುವ ಪ್ರಧಾನ ಅರ್ಚಕರೇ ಬಂದು ಇಲ್ಲಿ ಈ ದೇವಸ್ಥಾನ ನಿರ್ಮಾಣ ಮಾಡಿಸಿದ್ದಾರೆ. ಈ ದೇವಸ್ಥಾನದ ಮೂಲ ದೇವರು ತಿರುಪತಿ ತಿಮ್ಮಪ್ಪ ಆದ್ದರಿಂದ ಶನಿವಾರದಂದು ಈ ದೇವಸ್ಥಾನಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುತ್ತಾರೆ.

ಅರ್ಧ ತಾಸು ಕಾದ ಬಳಿಕ ಮಾತ್ರ ಶನಿವಾರ ಸಂಜೆ ಇಲ್ಲಿ ವೆಂಕಟೇಶ್ವರನ ದರ್ಶನ ಸಿಗುತ್ತದೆ ಅಷ್ಟು ಜನಜಂಗುಳಿ ಇಲ್ಲಿ ಸೇರಿರುತ್ತದೆ. ಈ ಎಲ್ಲಾ ಅನುಭವದಿಂದ ವೈಕುಂಠಕ್ಕೆ ಹೋದ ರೀತಿ ಫೀಲ್ ಆಗುತ್ತದೆ. ಸಾಮಾನ್ಯವಾಗಿ ಈ ದೇವಸ್ಥಾನದಲ್ಲಿ ದೋಸೆಯನ್ನು ಜೊತೆಗೆ ರಸಾಯನವನ್ನು ಪ್ರಸಾದವಾಗಿ ಕೊಡುತ್ತಾರೆ, ಶನಿವಾರ ಬಂದವರಿಗೆ ಮಾತ್ರ ವಿಶೇಷ ಪ್ರಸಾದವಾದ ತಿರುಪತಿ ಲಡ್ಡು ಸಿಗುತ್ತದೆ.

ವಾರದ ಎಲ್ಲಾ ದಿನಗಳು ಕೂಡ ಈ ದೇವಸ್ಥಾನ ತೆರೆದಿರುತ್ತದೆ. ಬಹಳ ವಿಶಾಲವಾದ ದೇವಸ್ಥಾನವಾದ ಮುಂಭಾಗದಲ್ಲಿ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಬಹಳ ನೆಮ್ಮದಿಯ ತಾಣ ಎಂದರೆ ಈ ವೆಂಕಟೇಶ್ವರ ದೇವಸ್ಥಾನವೇ ಎನ್ನುವಷ್ಟು ದೇವಸ್ಥಾನದಲ್ಲಿ ಪ್ರಶಾಂತ ವಾತಾವರಣ ಇದೆ.

ಈ ದೇವಸ್ಥಾನಕ್ಕೆ ಹೋಗಿ ಬಂದರೆ ಒಂದು ಸಕಾರಾತ್ಮಕ ಅನುಭವವಾಗುತ್ತದೆ. ವೆಂಕಟೇಶ್ವರ ಸನ್ನಿಧಾನದ ಜೊತೆ ಲಕ್ಷ್ಮಿ, ಹನುಮ ಮತ್ತು ಗಣೇಶನಿಗೂ ಪ್ರತ್ಯೇಕ ಗುಡಿಗಳಿವೆ. ಪ್ರಥಮ ಪೂಜೆಗೆ ಅಧಿಪತಿ ಗಣೇಶನ ದರ್ಶನದ ಬಳಿಕ ಉಳಿದ ದೇವರುಗಳ ದರ್ಶನ. ಇಷ್ಟು ವಿಶೇಷವಾದ ಈ ದೇವಸ್ಥಾನಕ್ಕೆ ಸಾ’ಲ ಹೆಚ್ಚಾದವರು ಭೇಟಿ ಕೊಟ್ಟರೆ ಆದಷ್ಟು ಬೇಗ ಋಣ ಮುಕ್ತರಾಗಲು ದಾರಿ ಸಿಗುತ್ತದೆ ಎನ್ನುವ ನಂಬಿಕೆ ಭಕ್ತಾದಿಗಳಲ್ಲಿದೆ. ತಪ್ಪದೇ ನೀವು ಸಹಾ ಒಮ್ಮೆ ಈ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ಕೊಡಿ.

ತಾತ ಅಥವಾ ತಂದೆಯ ಹೆಸರಲ್ಲಿರುವ ವಿದ್ಯುತ್ ಮೀಟರ್ ನಿಮ್ಮ ಹೆಸರಿಗೆ ಬದಲಾಯಿಸುವುದು ಹೇಗೆ.?

ಮನೆಯ ವಿದ್ಯುತ್ ಮೀಟರ್ ತಂದೆ ಹೆಸರಿನಲ್ಲಿ ಅಥವಾ ತಾತನ ಹೆಸರಿನಲ್ಲಿ ಇರುತ್ತದೆ. ಕಾರಣಾಂತರಗಳಿಂದ ಅದನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಸದ್ಯಕ್ಕೆ ಈಗ ಗೃಹಜ್ಯೋತಿ ಯೋಜನೆಗೆ ಕರೆಂಟ್ ಬಿಲ್ ಅಲ್ಲಿ ಇರುವ ಅಕೌಂಟ್ ಐಡಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸರ್ಕಾರ ಸೂಚಿಸಿದಾಗ ಅನೇಕರು ಇದರ ಬಗ್ಗೆ ಯೋಚಿಸಿದರು.

ಅದೇ ರೀತಿ ಇನ್ನೂ ಹಲವು ಪರಿಸ್ಥಿತಿಗಳಲ್ಲಿ ಈ ರೀತಿ ಬದಲಾವಣೆ ಮಾಡಿಸಬೇಕಾಗುತ್ತದೆ. ಒಂದು ವೇಳೆ ಮನೆಯಲ್ಲಿ ಹಿರಿಯರು ಮರಣ ಹೊಂದಿದ್ದ ಪಕ್ಷದಲ್ಲಿ ನಂತರ ಮಕ್ಕಳ ಹೆಸರಿಗೆ ಅದನ್ನು ಬದಲಾವಣೆ ಮಾಡಿಸಬೇಕಾಗಿ ಬರುತ್ತದೆ. ಆಗ ಯಾವ ರೀತಿ ಇದನ್ನು ಬದಲಾವಣೆ ಮಾಡಿಸಬೇಕು ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ದಾಖಲೆಗಳಾಗಿ ಏನನ್ನು ಕೊಡಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.

ಬೇಕಾಗಿರುವ ದಾಖಲೆಗಳು:-
● ಅರ್ಜಿದಾರನ ಆಧಾರ್ ಕಾರ್ಡ್
● 200ರೂ. ಸ್ಟ್ಯಾಂಪ್ ಪೇಪರ್ ಮೇಲೆ ಬರೆದ ಒಪ್ಪಿಗೆ ಪತ್ರ (ಒಪ್ಪಿಗೆ ಪತ್ರದಲ್ಲಿ ಯಾವ ಕಾರಣಕ್ಕಾಗಿ ಹೆಸರು ಬದಲಾವಣೆ ಮಾಡುತ್ತಿದ್ದೀರಿ ಮತ್ತು ವಿದ್ಯುತ್ ಖಾತೆ ಸಂಖ್ಯೆ, ಇವುಗಳನ್ನು ಅರ್ಜಿ ನಮೂನೆಯಲ್ಲಿ ಬರೆದು ಸಹಿ ಮಾಡಿ ಹತ್ತಿರದ ವಕೀಲರಿಂದ ನೋಟರಿ ಮಾಡಿಸಿಕೊಳ್ಳಬೇಕು).

●ಈಗಾಗಲೇ ವಿದ್ಯುತ್ ಮೀಟರ್ ಯಾರ ಹೆಸರಿನಲ್ಲಿದೆ ಅವರ ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರ, ಅವರ ಜೀವಂತವಿದ್ದಲ್ಲಿ ಒಪ್ಪಿಗೆ ಪತ್ರ.
● ಋಣ ರಹಿತ ರಶೀತಿ (ಬೇಬಾಕ ಪತ್ರ).
● ಹೆಸರು ಬದಲಾವಣೆಗಾಗಿ ಅರ್ಜಿ (ಸಹಾಯಕ ಕಾರ್ಯನಿರ್ವಾಹಕ ಅಭಿಯಂತಕರು ಇವರ ಹೆಸರಿಕೆ ಒಪ್ಪಿಗೆ ಪತ್ರ ಬರೆದ ರೀತಿಯಲ್ಲೇ ಅರ್ಜಿ ಬರೆಯಬೇಕು)

ಅರ್ಜಿ ಸಲ್ಲಿಸುವ ವಿಧಾನ:-
● ಈ ಮೇಲೆ ತಿಳಿಸಿದ ರೀತಿಯಲ್ಲಿ ವಿದ್ಯುತ್ ಮೀಟರ್ ಅಲ್ಲಿ ಹೆಸರು ಬದಲಾವಣೆಗೆ ಉಳಿದ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಹತ್ತಿರದಲ್ಲಿರುವ ವಿದ್ಯುತ್ ಇಲಾಖೆಯ ಇನ್ವಾರ್ಡ್ ವಿಭಾಗಕ್ಕೆ ಅರ್ಜಿ ಸಲ್ಲಿಸಬೇಕು.
● ನಿಮ್ಮ ತಾಲೂಕಿನಲ್ಲಿರುವ AWD ಕಚೇರಿಯಲ್ಲಿ ಕೂಡ ಅರ್ಜಿ ಸಲ್ಲಿಸಬಹುದು.
● ನಿಮ್ಮ ಅರ್ಜಿಯನ್ನು ಸ್ವೀಕರಿಸಿದ ಕಂಪ್ಯೂಟರ್ ಆಪರೇಟರ್ ಅರ್ಜಿಯನ್ನು ಪರಿಶೀಲಿಸಿ ಸರಿ ಇದ್ದರೆ ಅನುಮೋದಿಸುತ್ತಾರೆ, ಇದಾದ ಬಳಿಕ ನಿಮ್ಮ ತಾತ ಅಥವಾ ತಂದೆ ಹೆಸರಿನ ಬದಲಿಗೆ ನಿಮ್ಮ ಹೆಸರಿಗೆ ವಿದ್ಯುತ್ ಬಿಲ್ ಬರುತ್ತದೆ.

ವಿದ್ಯುತ್ ಗ್ರಾಹಕರು ಗಮನಿಸಲೇಬೇಕಾದ ಕೆಲ ಪ್ರಮುಖ ಅಂಶಗಳು:-
● ಹೆಸರು ಬದಲಾವಣೆ ಮಾಡುವಾಗ ನಿಮ್ಮ ತಂದೆ ಅಥವಾ ತಾತ ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣ ಪತ್ರ ಸಲ್ಲಿಸಲೇಬೇಕು. ಒಂದು ವೇಳೆ ಅವರು ಜೀವಂತವಾಗಿದ್ದರೆ ಸ್ಟ್ಯಾಂಪ್ ಪೇಪರ್ ಮೇಲೆ ಒಪ್ಪಿಗೆ ಪತ್ರ ಬರೆದು ಕೊಡಬೇಕು.
● ಈ ರೀತಿ ತಿದ್ದುಪಡಿ ಅಥವಾ ಹೆಸರು ಬದಲಾವಣೆ ಮಾಡುವ ಮೊದಲು ಬಾಕಿ ಉಳಿಸಿಕೊಂಡಿರುವ ಎಲ್ಲಾ ವಿದ್ಯುತ್ ಶುಲ್ಕವನ್ನು ಕಡ್ಡಾಯವಾಗಿ ಕಟ್ಟಲೇಬೇಕು.

● ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ವಿದ್ಯುತ್ ಬಿಲ್ ಹೊಂದಿರುವ ಮಾಲೀಕರು ಮ.ರಣವಾಗಿದ್ದರು ಅಥವಾ ಅವರ ಹೆಸರಿನಲ್ಲಿ ತಿದ್ದುಪಡಿಗಳಿದ್ದರೂ ಕೂಡ ಅಕೌಂಟ್ ಐಡಿ ಸರಿ ಇದ್ದರೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.
● ತಿದ್ದುಪಡಿ ಮಾಡಿಸಿಕೊಳ್ಳಲು ಅಥವಾ ಹೆಸರು ವರ್ಗಾವಣೆ ಮಾಡಿಸಿಕೊಳ್ಳಲು ನೀವು ಬಯಸಿದರೆ ಈ ಮೇಲೆ ತಿಳಿಸಿದ ಪ್ರಕಾರವಾಗಿ ಅರ್ಜಿ ಸಲ್ಲಿಸಿ ತಿದ್ದುಪಡಿ ಅಥವಾ ಹೆಸರು ವರ್ಗಾವಣೆ ಮಾಡಿಸಿಕೊಳ್ಳಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ತಪ್ಪದೇ ಹಂಚಿಕೊಳ್ಳಿ.