Home Blog Page 186

ಎಷ್ಟೇ ಹಳೆ ಕಲೆ, ಕೆಟ್ಟ ಕಲೆ ಇದ್ದರೂ ಇದನ್ನು ಹಚ್ಚಿ ಸಾಕು ನಿಮಿಷದಲ್ಲೇ ಕಲೆ ಮಾಯ.!

 

ಬಟ್ಟೆ ಒಗೆಯುವುದು ಗೃಹಿಣಿಯರ ಅತಿ ಸವಾಲಿನ ಕೆಲಸ. ಈಗ ಆ ಕೆಲಸವನ್ನು ಸುಲಭ ಮಾಡಲು ವಾಷಿಂಗ್ ಮಿಷನ್ ಗಳು ಬಂದಿವೆ. ಆದರೆ ಬಟ್ಟೆಗಳಿಗೆ ಆಗಿರುವ ಕಲೆಯನ್ನು ಹೋಗಿಸುವುದೇ ಅವರಿಗೆ ಚಾಲೆಂಜ್. ಅದರಲ್ಲೂ ಬಿಳಿ ಬಟ್ಟೆಗಳಲ್ಲಿರುವ ಕಲೆಗಳನ್ನು ಹೋಗಿಸುವುದಂತೂ ಸವಾಲಿನ ಕೆಲಸವೇ ಸರಿ ಬಿಳಿ ಬಟ್ಟೆ ಹೆಸರೇ ಹೇಳುವಂತೆ ಶುಭ್ರವಾಗಿದ್ದಾಗ ಮಾತ್ರ ಅದನ್ನು ಹಾಕಿಕೊಂಡರೆ ಒಂದು ಲುಕ್.

ಆಫೀಸಿಗೆ ಹೋಗುವವರು, ಶಾಲೆಗೆ ಹೋಗುವ ಮಕ್ಕಳ ಯೂನಿಫಾರಂ, ಕಾಲೇಜಿಗೆ ಹೋಗುವವರ ಬಿಳಿ ಬಟ್ಟೆಗಳಲ್ಲಿ ಕಲೆ ಇದ್ದರೆ ಅವರಿಗೆ ಬಹಳ ಮುಜುಗರ ಆಗುತ್ತದೆ, ಜೊತೆಗೆ ಕಾನ್ಫಿಡೆನ್ಸ್ ಅನ್ನು ಕೂಡ ಕಲೆ ಕಡಿಮೆ ಮಾಡಿ ಬಿಡುತ್ತದೆ ಹಾಗಾಗಿ ಈ ಬಿಳಿ ಬಟ್ಟೆಯನ್ನು ಮತ್ತೆ ಹಾಲಿನ ಬಣ್ಣಕ್ಕೆ ತರಲು ಹೆಣ್ಣು ಮಕ್ಕಳು ಪಡುವ ಪಾಡು ಅಷ್ಟಿಷ್ಟಲ್ಲ.

ಯಾವುದೇ ಕಂಪನಿಯ ಡಿಟರ್ಜೆಂಟ್ ಪೌಡರ್ ಲಿಕ್ವಿಡ್ ಗಳನ್ನು ಬಳಸಿದರು, ಅದೆಷ್ಟೇ ವಿಧದ ಡಿಟರ್ಜೆಂಟ್ ಬಾರ್ ಗಳನ್ನು ಬದಲಿಸಿ ನೋಡಿದರೂ ಕೂಡ ಈ ಬಿಳಿ ಬಟ್ಟೆಯ ಮೇಲಿನ ಕಲೆ ಹೋಗದೆ ಇರುವುದು ಬೇಸರ ತರಿಸಿದೆ, ಇದಕ್ಕಾಗಿ ಯಾರ್ಯಾರು ಏನೇನು ಹೇಳಿದ್ದಾರೆ ಎಲ್ಲಾ ಟಿಪ್ಸ್ಗಳನ್ನು ಬಳಸಿ ನೋಡಿ ಆಗಿದೆ ಆದರೂ ಕೂಡ ಬಿಳಿ ಬಟ್ಟೆಯಲ್ಲಿರುವ ಕಾಲರ್ ಮೇಲಿನ ಕೊಳೆ ಕಪ್ ಗಳಲ್ಲಿ ಇರುವ ಕೊಳೆ ಜಗ್ಗಿಲ್ಲ ಎಂದು ಹೇಳುವವರು ಈಗ ನಾವು ಹೇಳುವ ಈ ಟೆಕ್ನಿಕ್ ಬಳಸಿ ಸಾಕು.

ಬಿಳಿ ಬಟ್ಟೆ ಮಾತ್ರ ಅಲ್ಲದೆ ಉಳಿದ ಬಟ್ಟೆಗಳಲ್ಲೂ ಆಗಿರುವ ಅರಿಶಿಣದ ಕಲೆ, ನೇಲ್ ಫಾಲಿಶ್, ಪೇಯಿಂಟ್ ಬಣ್ಣ, ಬಾಳೆಹಣ್ಣಿನ ಕಲೆ ಇಂತಹ ಕಠಿಣ ಕಲೆಗಳು ಕೂಡ ನಿಮಿಷಗಳಲ್ಲಿ ಮಾಯವಾಗಿ ಬಿಡುತ್ತದೆ. ಅಷ್ಟು ಪರಿಣಾಮಕಾರಿಯಾಗಿ ಒಂದು ಪ್ರಾಡಕ್ಟ್ ಕೆಲಸ ಮಾಡುತ್ತದೆ.

ಪೋರ್ಟೆಬಲ್ ಡಿಟರ್ಜೆಂಟ್ ಎನ್ನುವ ಹೆಸರಿನ ಒಂದು ಚಿಕ್ಕ ಬಾಟಲ್ ರೀತಿ ಇರುವ ಪ್ರಾಡಕ್ಟ್ ಅಮೆಜಾನ್ ಅಲ್ಲಿ ಸಿಗುತ್ತದೆ ಅಥವಾ ಅಂಗಡಿಗಳಲ್ಲೂ ಕೂಡ ಸಿಗಬಹುದು ವಿಚಾರಿಸಿ ತೆಗೆದುಕೊಳ್ಳಬೇಕು. ಇದರ ಕ್ಯಾಪ್ ತೆಗೆದರೆ ಒಳಗಡೆ ಬಾಲ್ ರೂಪದ ಜಲ್ ಹಾಗೆ ಕಾಣುವ ಡಿಟರ್ಜೆಂಟ್ ಇರುತ್ತದೆ.

ಇದನ್ನು ಬಿಳಿ ಬಟ್ಟೆಯಲ್ಲಿ ಎಲ್ಲೆಲ್ಲಿ ಕಲೆಗಳು ಆಗಿರುತ್ತವೆ ಆ ಭಾಗಕ್ಕೆ ಮಾತ್ರ ಹಚ್ಚಬೇಕು. ಕಾಲರ್ ಗಳು, ಕಪ್ ಗಳು ಅಥವಾ ಅರಿಶಿನದ ಕಲೆಗೆ, ನೇಲ್ ಪಾಲಿಷ್ ಕಲೆ ಅಥವಾ ಇನ್ನಿತರ ಯಾವುದೇ ಕಲೆ ಆಗಿದ್ದರು ಯಾವ ಕಲೆಯನ್ನು ನಿಮ್ಮ ಬಟ್ಟೆಯಿಂದ ತೆಗೆಯಬೇಕು ಅದರ ಮೇಲೆ ಹಾಕಬೇಕು ಬಳಿಕ ಇದನ್ನು ಬ್ರಶ್ ಸಹಾಯದಿಂದ ಮ್ಯಾನುಅಲ್ ಆಗಿ ಉಜ್ಜಿ ವಾಶ್ ಮಾಡಿ ಹಾಕಬಹುದು.

ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ವಾಶ್ ಮಾಡುತ್ತೇವೆ ಎನ್ನುವವರು ಈ ರೀತಿ ಪೋರ್ಟೆಬಲ್ ಡಿಟರ್ಜೆಂಟ್ ಅನ್ನು ಉಜ್ಜಿ ನಂತರ ವಾಷಿಂಗ್ ಮಿಷನ್ ಗೆ ಹಾಕಬಹುದು. ನೀವೇ ಆಶ್ಚರ್ಯ ಪಡುವ ರೀತಿಯಲ್ಲಿ ಯಾವುದೇ ಕಲೆಗಳು ಇದ್ದರೂ ಕೂಡ ಅದು ಹೊರಟುಹೋಗಿರುತ್ತದೆ. ಬಿಳಿ ಬಟ್ಟೆಗಳು ಮಾತ್ರ ಅಲ್ಲದೆ, ಬಿಳಿ ಶೂ ಬಿಳಿ ಸ್ಕೂಲ್ ಬ್ಯಾಗ್ ಗಳು, ವ್ಯಾನಿಟಿ ಬ್ಯಾಗ್ ಗಳು ಈ ರೀತಿ ಬಿಳಿ ಬಣ್ಣದ ಯಾವುದೇ ವಸ್ತುಗಳ ಮೇಲೆ ಕಲೆಯನ್ನು ತೊಳೆಯಲು ಇದನ್ನು ಬಳಸಬಹುದು. ಈ ಪ್ರಾಡಕ್ಟ್ ಬಳಸಿದ ಮೇಲೆ ನಿಮಗೆ ಇದರ ಫಲಿತಾಂಶದ ಬಗ್ಗೆ ತಿಳಿಯುತ್ತದೆ. ಬಳಿಕ ಇದರ ಅನುಕೂಲತೆ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜೊತೆಗೂ ಕೂಡ ಮಾಹಿತಿ ಹಂಚಿಕೊಳ್ಳಿ.

ಎದೆಯಲ್ಲಿ ಕಟ್ಟಿದ ಕಫ, ಸುಸ್ತು, ನಿಶ್ಯಕ್ತಿ, ಆಯಾಸ, ನಿದ್ರಾಹೀನತೆ ಇನ್ನು ಮುಂತಾದ 50 ಕಾಯಿಲೆಗಳಿಗೂ ಔಷಧಿ ಈ ಬೇರು.!

ಅಶ್ವಗಂಧ ಈ ಹೆಸರೇ ಸೂಚಿಸುವಂತೆ ಅದೇ ರೀತಿಯ ಶಕ್ತಿಯ ಗುಣವನ್ನು ಹೊಂದಿದೆ ಇದು. ಅಶ್ವಗಂಧಕ್ಕೆ ಈ ಹೆಸರು ಬರಲು ಕಾರಣ ಇದರ ಬೇರಿನ ವಾಸನೆಯು ಕುದುರೆಯ ವಾಸನೆಯ ರೀತಿ ಇರುವುದು. ಜೊತೆಗೆ ಈ ಅಶ್ವಗಂಧದಿಂದ ತಯಾರಿಸಿದ ಔಷಧಿಯು ಅನೇಕ ರೋಗಗಳಿಗೆ ಚಿಕಿತ್ಸೆಯಾಗಿರುವುದರಿಂದ ಈ ಮೂಲಕ ಅವರ ಕಾಯಿಲೆ ಗುಣವಾಗಿ ಸದೃಢರಾಗುವ ಕಾರಣ ಇದಕ್ಕೆ ಅಶ್ವದಷ್ಟು ಶಕ್ತಿ ಇದೆ ಎಂದು ಅಶ್ವಗಂಧ ಎಂದು ಕರೆದಿರಬಹುದು.

ಆಯುರ್ವೇದ ಪದ್ಧತಿಯಲ್ಲಿ ಅನೇಕ ಸಂಹಿತೆಗಳಲ್ಲಿ ಅಶ್ವಗಂಧದ ಬಗ್ಗೆ ಸವಿವರವಾದ ಉಲ್ಲೇಖಗಳು ಇದೆ. ಇಂದಿಗೂ ಕೂಡ ಮನುಷ್ಯರನ್ನು ಬಾಧಿಸುತ್ತಿರುವ ಸಾಮಾನ್ಯ ಕಾಯಿಲೆಯಿಂದ ಹಿಡಿದು ಗಂಭೀರ ಅನಾರೋಗ್ಯದ ತನಕ ಅನೇಕ ಸಮಸ್ಯೆಗಳಿಗೆ ಅಶ್ವಗಂಧ ದಿವ್ಯ ಔಷಧ ಆಗಿದೆ. ಅವುಗಳಲ್ಲಿ ಕೆಲವೊಂದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

● ಅಶ್ವಗಂಧದ ಬೇರನ್ನು ಒಣಗಿಸಿ ಸುಟ್ಟು ಭಸ್ಮ ಮಾಡಿ, ಇದರ ಜೊತೆಗೆ ಅಮೃತಬಳ್ಳಿ ಕಾಂಡವನ್ನು ಕೂಡ ಸುಟ್ಟು ಭಸ್ಮ ಮಾಡಿ ಇವೆರಡನ್ನು ತುಲಾ ಕಾಲು ಚಮಚ ತೆಗೆದುಕೊಂಡು ಒಂದು ಚಮಚ ಜೇನುತುಪ್ಪದ ಜೊತೆ ಮಿಕ್ಸ್ ಮಾಡಿ ಸೇವಿಸಿದರೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸರ್ವ ಸಮಸ್ಯೆಗಳು ನಿವಾರಣೆ ಆಗುತ್ತವೆ.

● ಚರ್ಮವ್ಯಾಧಿಗಳಿಂದ ಬಳಯುತ್ತಾ ಇರುವವರಿಗೆ ಪಿತ್ತವಿಕಾರದಿಂದ ಚರ್ಮವ್ಯಾಧಿ ಹೆಚ್ಚಾಗುತ್ತಾ ಇದ್ದರೆ ಅಶ್ವಗಂಧದ ಬೇರಿನ ಪುಡಿಯನ್ನು ಕಷಾಯದ ರೂಪದಲ್ಲಿ ಸೇವಿಸಿದರೆ ಗುಣವಾಗುತ್ತದೆ. ಅಶ್ವಗಂಧ ಕ್ವಾತ ಚೂರ್ಣವನ್ನು ಕಷಾಯ ಮಾಡಿಕೊಂಡು ಸೇವಿಸಿದರೂ ಕೂಡ ಚರ್ಮರೋಗಗಳು ನಿವಾರಣೆ ಆಗುತ್ತವೆ.
● ಅಶ್ವಗಂಧದ ಭಸ್ಮವನ್ನು ಕೊಬ್ಬರಿ ಎಣ್ಣೆ ಜೊತೆ ಮಿಕ್ಸ್ ಮಾಡಿ ಶ್ವೇತ ಕುಟಜ (ತೊನ್ನು), ಬಿಳಿ ಮಚ್ಚೆ ಸಮಸ್ಯೆ ಇರುವವರು ಹಚ್ಚುವುದರಿಂದ ಈ ಸಮಸ್ಯೆ ಕಡಿಮೆ ಆಗುತ್ತದೆ.

● ಅಶ್ವಗಂಧ ಕ್ವಾತಚೂರ್ಣ, ಅಮೃತ ಬಳ್ಳಿ ಕ್ವಾತ ಚೂರ್ಣ, ಮಂಜಿಷ್ಠ ಕ್ವಾತಚೂರ್ಣ ಈ ಮೂರನ್ನು ಎರಡು ಚಮಚಗಳಷ್ಟು ತೆಗೆದುಕೊಂಡು ಒಂದು ಲೀಟರ್ ನೀರಿಗೆ ಸೇರಿಸಿ ಅದು ಕಾಲು ಲೀಟರ್ ಆಗುವವರೆಗೂ ಕುದಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸೋರಿಯಾಸಿಸ್ ನಂತಹ ಕಾಯಿಲೆಗಳು ಕೂಡ ಗುಣವಾಗುತ್ತವೆ. ಹುಳಕಡ್ಡಿ, ಗ್ಯಾಂಗ್ರಿನ್ ಇಂತಹ ಸಮಸ್ಯೆಗಳು ಕೂಡ ದೂರವಾಗುತ್ತವೆ.
● ಅಶ್ವಗಂಧವನ್ನು ಸತ್ ಅಥವಾ ರಸಾಯನ ರೂಪದಲ್ಲಿ ಸೇವನೆ ಮಾಡುವುದರಿಂದ ನರಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಬರುವುದಿಲ್ಲ.

● ರಕ್ತನಾಳಗಳು ಬಂದಿ ಆಗುವುದರಿಂದ ವೃಷಣದಲ್ಲಿ ಉಂಟಾಗುವ ವೆರಿಕೋಸಿಲ್, ಮತ್ತು ದೇಹದ ಇತರೆ ಭಾಗದಲ್ಲಿ ಕಂಡುಬರುವ ಹೈಡ್ರೋಸಿನ್ ಇಂತಹ ಕಾಯಿಲೆಗಳು ಕೂಡ ಬರುವುದಿಲ್ಲ, ಹೃದಯದಲ್ಲಿ ರಕ್ತನಾಳಗಳು ಬ್ಲಾಕ್ ಆಗಿದ್ದರೆ ಅದು ಕೂಡ ಕ್ಲಿಯರ್ ಆಗುತ್ತದೆ.
● ಅಶ್ವಗಂಧವನ್ನು ರಸಾಯನ ರೂಪದಲ್ಲಿ ಸೇವನೆ ಮಾಡಿದರೆ ಮೆದುಳಿಗೆ ಮೇಧ್ಯವಾಗಿ ಕೆಲಸ ಮಾಡುತ್ತದೆ.

● ಅಶ್ವಗಂಧದ ಮಾತ್ರೆಗಳನ್ನು ಸೇವನೆ ಮಾಡುವುದರಿಂದ ನಿದ್ರಾಹೀನತೆ, ಒತ್ತಡ, ಡಿಪ್ರೆಶನ್ ಮುಂತಾದ ಮಾನಸಿಕ ವಿಕಾರಗಳು ದೂರ ಆಗುತ್ತವೆ.
● ಅಶ್ವಗಂಧದ ಸೇವನೆಯಿಂದ ಕೂದಲು ಹಾಗೂ ಕಣ್ಣಿನ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.
● ಸುಸ್ತು, ನಿಶಕ್ತಿ, ಆಯಾಸ ಈ ರೀತಿ ಸಮಸ್ಯೆಗಳಿಗೂ ಕೂಡ ಔಷಧಿಯಾಗಿ ಇದು ಕೆಲಸ ಮಾಡುತ್ತದೆ. ಇದರೊಂದಿಗೆ ಕೆಮ್ಮು, ಕಫ, ನೆಗಡಿ ಇವುಗಳಿಗೂ ಕೂಡ ಅಶ್ವಗಂಧದ ಸೇವನೆ ಒಳ್ಳೆಯ ಔಷಧ. ಅಶ್ವಗಂಧದ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಹುಟ್ಟಿದ ದಿನದ ಆಧಾರದ ಮೇಲೆ ಹೆಣ್ಣು ಮಕ್ಕಳ ವ್ಯಕ್ತಿತ್ವ ಹೇಗಿರುತ್ತದೆ ನೋಡಿ.!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವರ ಹುಟ್ಟಿರುವ ದಿನ, ಘಳಿಗೆ, ವಾರ, ರಾಶಿ, ನಕ್ಷತ್ರದ ಇವುಗಳ ಆಧಾರದ ಮೇಲೆ ಅವರ ಗುಣಲಕ್ಷಣಗಳು ಹೇಗಿರುತ್ತವೆ ಎಂದು ಲೆಕ್ಕ ಹಾಕಬಹುದು. ಜೊತೆಗೆ ಇಟ್ಟಿರುವ ಹೆಸರು ಕೂಡ ಅವರ ಗುಣ ಸ್ವಭಾವ ಮತ್ತು ಜನ್ಮ ರಾಶಿ ನಕ್ಷತ್ರಕ್ಕೆ ಹೊಂದುವ ರೀತಿ ಇಟ್ಟಿರುವುದರಿಂದ ಬಳಿಕ ಅವರ ಹೆಸರನ್ನು ಕೇಳಿದವರು ಕೂಡ ಅವರ ಸ್ವಭಾವ ಹೇಗಿರುತ್ತದೆ ಎಂದು ಲೆಕ್ಕಾಚಾರ ಹಾಕಬಹುದು.

ಇದರಲ್ಲಿ ಬಹಳ ವಿಶೇಷ ಎನಿಸುವುದು ಹುಟ್ಟಿದ ವಾರದ ಆಧಾರದ ಮೇಲು ಕೂಡ ಅವರ ವ್ಯಕ್ತಿತ್ವ ನಿರ್ಧಾರ ಆಗುತ್ತದೆ ಎನ್ನುವುದು. ಇದು ಮಹಿಳೆ ಮತ್ತು ಪುರುಷರಲ್ಲಿ ಬೇರೆ ಬೇರೆ ರೀತಿ ಸ್ವಭಾವ ಆಗಿರುತ್ತದೆ, ಪ್ರತಿಯೊಂದು ವಾರಗಳ ಮೇಲು ಸಂಬಂದಿಸಿದ ಗ್ರಹಗಳ ಪ್ರಭಾವ ಹೆಚ್ಚಾಗಿರುವುದರಿಂದ ಯಾವ ವಾರದಲ್ಲಿ ಜನಿಸಿದವರ ಸ್ಥಿತಿ ಯಾವ ರೀತಿ ಇರುತ್ತದೆ ಎಂದು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● ಭಾನುವಾರ ಹೆಸರೇ ಹೇಳುವಂತೆ ಸೂರ್ಯನ ಪ್ರಭಾವ ಹೆಚ್ಚಾಗಿರುವ ವಾರ. ಈ ವಾರ ಜನಿಸಿದ ಹುಡುಗಿಯರು ಕೂಡ ಸೂರ್ಯನಂತೆ ಪ್ರಕಾಶಮಾನವಾದ ತೇಜಸ್ಸನ್ನು ಹೊಂದಿರುತ್ತಾರೆ. ಇವರು ಬಹಳ ಬುದ್ಧಿವಂತರಾಗಿದ್ದು ಬಹಳ ಹೆಸರು ಗಳಿಸುತ್ತಾರೆ. ಇವರ ಕಲ್ಪನಾ ಶಕ್ತಿ ಮತ್ತು ಜ್ಞಾಪಕ ಶಕ್ತಿಗೆ ಇವರೇ ಸರಿಸಾಟಿ. ನಾಯಕತ್ವದ ಗುಣ ಹೊಂದಿರುವ ಇವರು ಬಹಳ ಧೈರ್ಯವಂತರಾಗಿರುತ್ತಾರೆ.

● ಸೋಮವಾರ ಹುಟ್ಟಿದವರು ಚಂದ್ರನಂತೆ ಹೆಚ್ಚು ಸುಂದರವಾಗಿರುತ್ತಾರೆ. ಇವರು ಬಹಳ ಸೂಕ್ಷ್ಮ ಮನಸ್ಸಿನವರು ಬಹಳ ಭಾವನ ಜೀವಿಗಳು. ಸಣ್ಣ ಪುಟ್ಟ ವಿಚಾರಗಳಿಗೂ ಕೂಡ ಬಹಳ ಬೇಗ ಗೊಂದಲಕ್ಕೆ ಒಳಗಾಗುತ್ತಾರೆ ಮತ್ತು ಚಿಂತೆ ಮಾಡುತ್ತಾರೆ. ಅಧಿಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಬಹಳ ಮೃದು ಸ್ವಭಾವದವರಾಗಿದ್ದು ಎಲ್ಲರ ಭಾವನೆಗಳನ್ನು ಗೌರವಿಸುತ್ತಾರೆ.

● ಮಂಗಳವಾರ ಹುಟ್ಟಿದ ಹುಡುಗಿಯರು ಬಹಳ ಚುರುಕಿನ ಸ್ವಭಾವದವರು ಮತ್ತು ಎಲ್ಲಾ ವಿಷಯಗಳಲ್ಲೂ ಕೂಡ ಬಹಳ ಉತ್ಸಾಹ ತೋರುತ್ತಾರೆ. ಯಾವುದೇ ಹೊಸ ವಿಷಯದ ಬಗ್ಗೆ ಕೂಡ ಬಹಳ ಬೇಗ ತಿಳಿದುಕೊಂಡು ಕರಗತ ಮಾಡಿಕೊಳ್ಳುತ್ತಾರೆ. ಇವರಿಗೂ ಸಹ ಧೈರ್ಯ ಹೆಚ್ಚಾಗಿರುತ್ತದೆ ಬಹಳ ಸ್ಟ್ರಾಂಗ್ ಆದ ನಿರ್ಧಾರಗಳನ್ನು ತೆಗೆದುಕೊಂಡು ಅದಕ್ಕೆ ಬದ್ದವಾಗಿ ಬದುಕುತ್ತಾರೆ.

● ಬುಧವಾರ ಜನಿಸಿದ ಹೆಣ್ಣು ಮಕ್ಕಳು ಸದಾ ಲವಲವಿಕೆಯಿಂದ ಇರುತ್ತಾರೆ, ನಗುನಗುತ್ತ ಮಾತನಾಡುವ ಇವರು ಎಷ್ಟು ಜನರ ಮಧ್ಯೆ ಇದ್ದರೂ ಗುರುತಿಸಿಕೊಳ್ಳುತ್ತಾರೆ. ಬುಧವಾರ ಜನಿಸಿದವರಿಗೂ ಕೂಡ ಬುದ್ಧಿವಂತಿಕೆ ಹೆಚ್ಚಿಗೆ ಇರುತ್ತದೆ. ಯಾವುದಾದರೂ ಒಂದು ವಿಷಯದ ಬಗ್ಗೆ ಇವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಇದೇ ಕಾರಣಕ್ಕೆ ಅನೇಕ ಬಾರಿ ಸಮಸ್ಯೆಗೆ ಸಿಲುಕಿ ಕೊಳ್ಳುತ್ತಾರೆ. ಜೀವನದಲ್ಲಿ ಏನೇ ಆದರೂ ಕೂಡ ಸಂತೋಷದಿಂದಲೇ ಇರುವ ಮನಸ್ಥಿತಿ ಇವರದ್ದು. ಇವರಿಗೂ ಸಹ ಯಾವಾಗಲೂ ಕಲಿಯುವ ಆಸಕ್ತಿ ಹೆಚ್ಚಿಗೆ ಇರುತ್ತದೆ.

● ಹೆಣ್ಣು ಮಕ್ಕಳು ಗುರುವಾರ ಜನಿಸಿದ್ದರೆ ಇವರಿಗೆ ಎಲ್ಲಾ ವಿಷಯದಲ್ಲೂ ಕೂಡ ತಿಳುವಳಿಕೆ ಹೆಚ್ಚು ಮತ್ತು ಇವರ ಸುತ್ತಮುತ್ತ ಯಾವಾಗಲೂ ಜನರು ಇರುತ್ತಾರೆ. ಇವರು ಎಲ್ಲರ ಸಮಸ್ಯೆಯನ್ನು ಆಲಿಸುವ ಮತ್ತು ಒಳ್ಳೆ ಸಲಹೆಯನ್ನು ನೀಡುವಂತಹ ಸ್ವಭಾವದವರಾಗಿರುತ್ತಾರೆ.

● ಶುಕ್ರವಾರ ಜನಿಸಿದ ಹೆಣ್ಣು ಮಕ್ಕಳು ಹೆಚ್ಚು ಆಕರ್ಷಣೀಯವಾಗಿರುತ್ತಾರೆ ಇದರ ಜೊತೆಗೆ ಇವರಿಗೆ ಒಳ್ಳೆ ಗುಣ ಕೂಡ ಇರುತ್ತದ. ಯಾವಾಗಲೂ ಒಳ್ಳೆಯದನ್ನೇ ಯೋಚಿಸುತ್ತಾ ಇತರರಿಗೆ ಒಳ್ಳೆಯದನ್ನೇ ಮಾಡುವ ಮತ್ತು ಎಲ್ಲರ ಜೊತೆ ಸಂತೋಷದಿಂದ ಇರುವ ಗುಣವು ಇವರಿಗೆ ಇರುತ್ತದೆ. ಜೀವನದಲ್ಲಿ ಯಾವಾಗಲೂ ಸಂತೋಷದಿಂದ ಇರುತ್ತಾರೆ.

● ಶನಿವಾರ ಹುಟ್ಟಿದ ಹೆಣ್ಣು ಮಕ್ಕಳು ಕೂಡ ಬಹಳ ಧೈರ್ಯವಂತರು ಇವರು ಸ್ನೇಹಕ್ಕಾಗಿ ಏನನ್ನು ಬೇಕಾದರೂ ಮಾಡುವ ಮನಸ್ಥಿತಿಯವರಾಗಿರುತ್ತಾರೆ. ಜೀವನದಲ್ಲಿ ಏನೇ ಕಷ್ಟ ಬಂದರೆ ಕೂಡ ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವ ಕಲೆ ಹೊಂದಿರುತ್ತಾರೆ, ಇವರು ನಂಬಿಕೆಗೆ ಅರ್ಹರು.

ಆಸ್ತಿ ಖರೀದಿ ಕುರಿತು ಸರ್ಕಾರದ ಹೊಸ ನಿಯಮ, ಈ ವಾರಸುದಾರರ ಒಪ್ಪಿಗೆ ಇಲ್ಲದೆ ಪಡೆದುಕೊಂಡ ಆಸ್ತಿ ಸಂಪೂರ್ಣ ಸರ್ಕಾರದ ವಶಕ್ಕೆ.!

 

ನಮ್ಮಲ್ಲಿ ಇನ್ನು ಸಹ ಆಸ್ತಿ ಮಾರಾಟ ಹಾಗೂ ಖರೀದಿಯ ಕುರಿತು ಇರುವ ನಿಯಮಗಳ ಬಗ್ಗೆ ಹಲವಾರು ಗೊಂದಲಗಳು ಜನಸಾಮಾನ್ಯರಿಗೆ ಇವೆ. ಪದೇ ಪದೇ ಈ ಆಸ್ತಿ ಹಕ್ಕಿನ ಕುರಿತು ತಿದ್ದುಪಡಿಗಳು ಕೂಡ ನಡೆದಿದ್ದು ಜೊತೆಗೆ ಸರ್ಕಾರವು ಕೂಡ ಈ ಬಗ್ಗೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇಂತಹ ಪ್ರಕರಣಗಳ ಬಗ್ಗೆ ನ್ಯಾಯಾಲಯ ಕೊಡುವ ತೀರ್ಪುಗಳು ಕೂಡ ಅಷ್ಟೇ ಮುಖ್ಯವಾಗಿ ಇರುತ್ತವೆ.

ಈಗ ಸರ್ಕಾರ ವಾರಸುದಾರರುಗಳ ಒಪ್ಪಿಗೆ ಇಲ್ಲದೆ ಖರೀದಿಸುವ ಆಸ್ತಿಯನ್ನು ವಶಪಡಿಸಿಕೊಳ್ಳುವ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ ಇದರ ಬಗ್ಗೆ ಮಾಹಿತಿ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಈ ಹಿಂದೆಯೇ 2008 ರಲ್ಲಿ, ಹೈಕೋರ್ಟ್‌ನ ಏಕ ಪೀಠವು ಹಿಂದೂ ವಿಭಾಗದ ಅಡಿಯಲ್ಲಿನ ನಿಬಂಧನೆಗಳು ಕೃಷಿ ಭೂಮಿ ಮಾರಾಟಕ್ಕೆ ಅನ್ವಯಿಸುವುದಿಲ್ಲ ಎನ್ನುವ ತೀರ್ಪನ್ನು ನೀಡಿತ್ತು.

ಬಳಿಕ ಏಳು ವರ್ಷಗಳ ನಂತರ ಇದೇ ವಿಷಯಕ್ಕೆ ಸಂಬಂಧಿಸಿದಂತೆ 2015 ರಲ್ಲಿ ಎರಡನೇ ಏಕ ಪೀಠವು ಹಿಂದೂ ವಿಭಾಗದ ನಿಬಂಧನೆಗಳು ಕೃಷಿ ಭೂಮಿ ಮಾರಾಟಕ್ಕೆ ಅನ್ವಯಿಸಬಹುದು ಎಂದು ಸೂಚಿಸಿತು. ಇದಾದ ನಂತರ, ಎರಡು ವ್ಯತಿರಿಕ್ತ ತೀರ್ಪುಗಳನ್ನು ಗಮನಿಸಿದ ಏಕ ಪೀಠವು ಸೂಕ್ತ ನಿರ್ಧಾರಕ್ಕಾಗಿ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ವಿಷಯವನ್ನು ಉಲ್ಲೇಖಿಸಿತು.

ಈಗ ಈ ಪ್ರಕರಣದ ಬಗ್ಗೆ ಹೈ ಕೋರ್ಟ್ ನ ವಿಭಾಗೀಯ ಪೀಠವು ಅಂತಿಮ ತೀರ್ಪನ್ನು ಪ್ರಕಟಿಸಿದೆ. 2015ರಲ್ಲಿ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ನ ವಿಭಾಗೀಯ ಪೀಠ ಹಿಂದೂ ಉತ್ತರಾಧಿಕಾರ ಕಾಯ್ದೆಯ ನಿಬಂಧನೆಗಳು ಹಿಂದೂ ಕಾನೂನಿನ ಸೆಕ್ಷನ್ 22 ರ ಪ್ರಕಾರ ಕೃಷಿ ಭೂಮಿ ಸೇರಿದಂತೆ ಎಲ್ಲಾ ಭೂ ವಿವಾದಗಳಿಗೆ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದೆ.

ಅದರ ಪ್ರಕಾರ ಇನ್ನು ಮುಂದೆ ಆಸ್ತಿ ಮಾರಾಟ ಮಾಡುವಾಗ ಅದು ತಂದೆ ಅಥವಾ ತಾತನ ಆಸ್ತಿ ಅಂದರೆ ಪಿತ್ರಾಜಿತ ಆಸ್ತಿ ಆಗಿದ್ದರೆ ಅದನ್ನು ಮಾರಾಟ ಮಾಡಲು ಆ ಆಸ್ತಿಗೆ ಸಂಬಂಧಿಸಿದ ಎಲ್ಲ ವಾರಸುದಾರರ ಅನುಮತಿ ಬೇಕು ಕುಟುಂಬದ ಎಲ್ಲಾ ಸದಸ್ಯರ ಒಪ್ಪಿಗೆಯ ಮೇರೆಗೆ ಆಸ್ತಿಯನ್ನು ಮಾರಾಟ ಮಾಡಬಹುದು ಎನ್ನುವರ್ಥದ ತೀರ್ಪನ್ನು ನೀಡಿದೆ.

ಸೆಕ್ಷನ್ 22 ರಲ್ಲಿ ಇರುವುದು ಏನೆಂದರೆ ಅವಿಭಕ್ತ ಹಿಂದೂ ಕುಟುಂಬದ ಆಸ್ತಿಯ ವಿಭಜನೆ ಆಗುವುದಕ್ಕೂ ಮುನ್ನ ಆ ಆಸ್ತಿಯ ವಾರಸುವುದಾರರಲ್ಲಿ ಒಬ್ಬರು ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಲು ಬಯಸಿದರೆ ಇತರ ಸದಸ್ಯರ ಒಪ್ಪಿಗೆ ಇಲ್ಲದೆ ಅವರು ಮಾರಾಟ ಮಾಡಲು ಸಾಧ್ಯವಿಲ್ಲ, ಇತರ ವಾರಸುದಾರರು ಸಹ ಆದ್ಯತೆಯ ಆಧಾರದ ಮೇಲೆ ಆ ಆಸ್ತಿಯನ್ನು ಖರೀದಿಸಲು ಹಕ್ಕು ಸಾಧಿಸಬಹುದು ಎಂದು ತಿಳಿಸಿದೆ.

ಯಾವುದೇ ಮೂರನೇ ವ್ಯಕ್ತಿಗೆ ಆಸ್ತಿಯನ್ನು ಮಾರಾಟ ಮಾಡುವ ಮೊದಲು, ಎಲ್ಲಾ ಸದಸ್ಯರ ಒಪ್ಪಿಗೆ ಇರಲೇಬೇಕು ಎನ್ನುವುದನ್ನು ಅದು ಸ್ಪಷ್ಟಪಡಿಸಿದೆ. ಒಂದು ವೇಳೆ ಈ ನಿಯಮವನ್ನು ಮೀರಿ ಎಲ್ಲಾ ವಾರಸುದಾರರ ಒಪ್ಪಿಗೆ ಇಲ್ಲದೆ ಇದ್ದರೂ ಇಂತಹ ಆಸ್ತಿಯನ್ನು ವ್ಯಕ್ತಿಯೊಬ್ಬ ಖರೀದಿಸಿದರೆ ಆ ವಾರಸುದಾರರಿಂದ ಆಕ್ಷೇಪ ವ್ಯಕ್ತವಾಗಿ ಕೇಸ್ ಹಾಕಿದರೆ ಸರ್ಕಾರವು ಆ ಆಸ್ತಿಯನ್ನು ವಪಡಿಸಿಕೊಳ್ಳಲಿದೆ ಎನ್ನುವ ಎಚ್ಚರಿಕೆ ನೀಡಿ ಇಂತಹ ಹೊಸ ನಿಯಮವನ್ನು ಸರ್ಕಾರ ಮಾಡಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.

ಗೃಹಿಣಿಯರು ಅಡುಗೆ ಮನೆಯಲ್ಲಿ ಈ ವಸ್ತುಗಳು ಎಂದೂ ಖಾಲಿ ಆಗದಂತೆ ನೋಡಿಕೊಳ್ಳಿ ನಿಮ್ಮ ಮನೆ ಏಳಿಗೆಯ ರಹಸ್ಯ ವಿಷಯ ಇವು.!

 

ಅಡುಗೆ ಮನೆ ಎನ್ನುವುದು ಅಡುಗೆ ಮಾಡುವ ಜಾಗ ಅಷ್ಟೇ ಅಲ್ಲ, ಇಡೀ ದಿನ ಆ ಕುಟುಂಬದ ಸದಸ್ಯರು ಲವಲವಿಕೆಯಿಂದ ನಗುನಗುತ ಓಡಾಡಿಕೊಂಡಿರಲು ಬೇಕಾದ ಎಲ್ಲಾ ಶಕ್ತಿಯ ಮೂಲ ಅಡುಗೆಮನೆ. ಅಡುಗೆ ಮನೆಯಲ್ಲಿ ರುಚಿಕರವಾದ ಆರೋಗ್ಯಕರವಾದ ಆಹಾರ ತಯಾರಾಗುವುದರ ಮೂಲಕ ಕುಟುಂಬ ಸದಸ್ಯರೆಲ್ಲರ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ನಿರ್ಧಾರವಾಗುತ್ತದೆ.

ಇಂತಹ ಅಡುಗೆ ಮನೆಯ ಬಗ್ಗೆ ನಮ್ಮ ಹಿರಿಯರು ಅನೇಕ ನಂಬಿಕೆಗಳನ್ನು ಇಟ್ಟುಕೊಂಡು ಪಾಲಿಸಿಕೊಂಡು ಬಂದಿದ್ದಾರೆ. ಅಡಿಗೆಮನೆಯು ಅನ್ನಪೂರ್ಣೇಶ್ವರಿಯ ವಾಸಸ್ಥಳ ಆದ್ದರಿಂದ ಈ ಜಾಗ ಶುದ್ಧವಾಗಿರಬೇಕು. ಅಡುಗೆಮನೆ ಇಡೀ ಕುಟುಂಬದ ಏಳಿಗೆ ನಿರ್ಧಾರವಾಗುವ ಸ್ಥಳವು ಹೌದು, ಹಾಗಾಗಿ ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಎಂದೂ ಖಾಲಿಯಾಗಬಾರದು ಎಂದು ಶಾಸ್ತ್ರವು ತಿಳಿಸುತ್ತದೆ.

● ಅವುಗಳಲ್ಲಿ ಮೊದಲನೆಯದಾಗಿ ಮನೆಯಲ್ಲಿ ನಾವು ಅಡುಗೆಗೆ ಬಳಸುವ ಹಿಟ್ಟುಗಳಾದ ಅಕ್ಕಿಹಿಟ್ಟು, ಗೋಧಿಹಿಟ್ಟು, ರಾಗಿಹಿಟ್ಟು ಇಂಥವುಗಳು ಯಾವುದೇ ಕಾರಣಕ್ಕೂ ಪೂರ್ತಿ ಖಾಲಿಯಾಗಲು ಬಿಡಬಾರದು. ಮನೆಯ ಗೃಹಣಿಯಾದವರು ಆ ಕಡೆ ಗಮನ ಕೊಟ್ಟು ಖಾಲಿ ಆಗುವ ಮುನ್ನವೇ ತರಿಸಿಕೊಳ್ಳಬೇಕು. ಹಿರಿಯರು ಹೇಳಿರುವ ಈ ನಿಯಮದ ಹಿಂದಿನ ಕಾರಣ ಸಾಕಷ್ಟು ಸಿಗುತ್ತದೆ, ಆದರೆ ಇದನ್ನು ತಪ್ಪದೆ ಪಾಲಿಸಿಕೊಂಡು ಬಂದರೆ ಆ ಕುಟುಂಬಕ್ಕೆ ಒಳಿತು.

● ಪ್ರತಿಯೊಬ್ಬರೂ ಕೂಡ ಅಡುಗೆಗೆ ಅರಿಶಿನ ಬಳಸುತ್ತಾರೆ, ಅರಿಶಿಣವು ಆಂಟಿ ಬಯೋಟೆಕ್ ಎಲ್ಲರಿಗೂ ಗೊತ್ತಿದೆ. ಇದು ಮಾತ್ರ ಅಲ್ಲದೆ ಅರಿಶಿಣದ ಜೊತೆ ಗುರು ಗ್ರಹವು ನೇರವಾಗಿ ಸಂಪರ್ಕ ಹೊಂದಿರುವುದರಿಂದ ಅಡುಗೆ ಮನೆಯಲ್ಲಿ ಅರಿಶಿನ ಪೂರ್ತಿ ಖಾಲಿ ಆಗುವಂತೆ ಬಿಡಬಾರದು ಇನ್ನು ಮುಂದೆ ಅದು ಖಾಲಿ ಆದ ಮೇಲೆ ತಂದರಾಯಿತು ಎಂದು ಅಸಡ್ಡೆ ಮಾಡಬೇಡಿ ಅದು ನಿಮ್ಮ ಕುಟುಂಬದ ಏಳಿಗೆಗೆ ಧಕ್ಕೆ ತರುತ್ತದೆ.

● ಅದೇ ರೀತಿ ಇಂದು ಬಹುತೇಕ ಎಲ್ಲಾ ಕುಟುಂಬಗಳಲ್ಲೂ ಕೂಡ ಅಕ್ಕಿ ಹೆಚ್ಚು ಆಹಾರ ತಯಾರಿಸಲು ಬೇಕಾದ ಪದಾರ್ಥ. ಈ ಅಕ್ಕಿ ಡಬ್ಬ ಕೂಡ ಖಾಲಿ ಆಗಬಾರದು. ಅಕ್ಕಿ ಶುಕ್ರ ಗ್ರಹಕ್ಕೆ ಸಂಪರ್ಕ ಹೊಂದಿದೆ. ಒಂದು ವೇಳೆ ಅಡುಗೆ ಮನೆಯಲ್ಲಿ ಅಕ್ಕಿಯ ಡಬ್ಬ ಪೂರ್ತಿ ಖಾಲಿಯಾದರೆ ದೋಷ ಉಂಟಾಗುತ್ತದೆ. ಆ ದೋಷದಿಂದಾಗಿ ವಿನಾಕಾರಣ ಪ್ರತಿಪತ್ನಿ ನಡುವೆ ವಿರಸ, ಮನಸ್ತಾಪ ಉಂಟಾಗುವುದು ಮಾತ್ರವಲ್ಲದೆ ಬಡತನ ಕೂಡ ಬರುತ್ತದೆ. ಹಾಗಾಗಿ ಈ ರೀತಿ ಅಕ್ಕಿ ಡಬ್ಬ ಖಾಲಿ ಆಗುವಂತೆ ಮಾಡುವುದು ದರಿದ್ರ ಎಂದು ಹಿರಿಯರು ಹೇಳಿದ್ದಾರೆ.

● ಉಪ್ಪು ಇದಿಲ್ಲದೆ ಯಾವ ಆಹಾರ ಪದಾರ್ಥಕ್ಕೂ ರುಚಿ ಇರುವುದಿಲ್ಲ. ಉಪ್ಪಿಲ್ಲದ ಅಡುಗೆ ನೆನಸಿಕೊಳ್ಳುವುದು ಕೂಡ ಅಸಾಧ್ಯ. ಅದೇ ರೀತಿ ಮನೆಯಲ್ಲಿ ಉಪ್ಪು ಇರದೇ ಇರುವುದನ್ನು ಊಹಿಸಿಕೊಳ್ಳುವುದು ತಪ್ಪು ಯಾಕೆಂದರೆ ಉಪ್ಪು ಲಕ್ಷ್ಮಿಯ ಸ್ವರೂಪ ಆದಕಾರಣ ಉಪ್ಪಿನ ಡಬ್ಬಿ ಯಾವುದೇ ಕಾರಣಕ್ಕೂ ಖಾಲಿ ಆಗಲೇಬಾರದು. ಒಂದು ವೇಳೆ ಉಪ್ಪಿನ ಡಬ್ಬಿ ಖಾಲಿ ಆಗಿದ್ದರೆ ರಾಹುವಿನ ಕೆಟ್ಟ ದೃಷ್ಟಿ ಆ ಮನೆ ಮೇಲೆ ಬೀಳುತ್ತದೆ.

● ಮನೆಯಲ್ಲಿ ಅಡುಗೆ ಎಣ್ಣೆ ಕೂಡ ಯಾವುದೇ ಕಾರಣಕ್ಕೂ ಖಾಲಿ ಆಗಬಾರದು. ಯಾಕೆಂದರೆ ಇದು ಶನಿ ಗ್ರಹದ ಜೊತೆ ಸಂಪರ್ಕ ಹೊಂದಿದೆ. ಮನೆಯಲ್ಲಿ ಅಡುಗೆ ಎಣ್ಣೆ ಖಾಲಿಯಾದರೆ ಸದಸ್ಯರ ನಡುವೆ ಮನಸ್ತಾಪ, ಕಿರಿಕಿರಿ, ಜಗಳ ಉಂಟಾಗುತ್ತದೆ. ಇನ್ನು ಮುಂದೆ ಈ ವಿಷಯದಲ್ಲಿ ಎಚ್ಚರಿಕೆ ಇರಲಿ ಹಾಗೂ ಈ ಮೇಲೆ ತಿಳಿಸಿದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ ಮತ್ತು ಯಾರಿಂದಲೂ ಸಾಲ ತೆಗೆದುಕೊಳ್ಳಬೇಡಿ.

ಮಕರ ರಾಶಿಯ ಜುಲೈ 2023ರ ಮಾಸ ಭವಿಷ್ಯ.! ನೀರಿಕ್ಷೆಗೂ ಮೀರಿದ ಧನಲಾಭವಾಗಲಿದೆ.! ಜುಲೈ ತಿಂಗಳ ಫಲಾನುಪಲ ಹೇಗಿದೆ ನೋಡಿ.!

 

ದ್ವಾದಶ ರಾಶಿಗಳಲ್ಲಿ 10ನೇ ರಾಶಿಯಾಗಿರುವ ಮಕರ ರಾಶಿಯವರ ರಾಶಿ ಅಧಿಪತಿ ಶನಿ ಆಗಿರುತ್ತದೆ. ಮಕರ ರಾಶಿಯವರು ಸದಾ ಸೃಜನಶೀಲರಾಗಿರುವ, ಬದ್ಧತೆಯಿಂದ ಕಾರ್ಯವನ್ನು ನಿರ್ವಹಿಸುವ, ಸದಾ ಕಾರ್ಯನಿರತರಾಗಿರುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಟ್ರಾವೆಲಿಂಗ್ ಮಾಡುವುದು ಇವರಿಗೆ ಬಹಳ ಇಷ್ಟವಾದ ಹವ್ಯಾಸ.

ಇವರಿಗೆ ಇರುವ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ ವಾಸಿಸುವ ಅಥವಾ ಲಾಭ ಪಡೆದುಕೊಳ್ಳುವ ಗುಣಗಳು ಜನ್ಮತಹವಾಗಿಯೇ ಬಂದಿರುತ್ತದೆ. ಜುಲೈ ತಿಂಗಳಿನಲ್ಲಿ ಇವರ ಭವಿಷ್ಯ ಯಾವ ರೀತಿ ಇರುತ್ತದೆ ಯಾವ ವಿಚಾರಗಳಲ್ಲಿ ಲಾಭ ಇರುತ್ತದೆ ಯಾವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

● ಗುರು ಮೂರನೇ ಮನೆಯಿಂದ ನಾಲ್ಕನೇ ಮನೆಗೆ ಹೋಗುವುದರಿಂದ ಈ ಸಮಯದಲ್ಲಿ ರಾಹುವಿನ ಜೊತೆ ಗುರು ಸೇರಲಿದೆ, ಇದನ್ನು ಗುರು ಚಾಂಡಾಳ ಯೋಗ ಎನ್ನುತ್ತಾರೆ. ಈ ಸಮಯದಲ್ಲಿ ಸುಲಭವಾಗಿ ಆಗುವಂತಹ ಕೆಲಸಗಳು ಕೂಡ ಕಠಿಣವಾಗುತ್ತವೆ. ಗುರು ನಾಲ್ಕನೇ ಮನೆಯಲ್ಲಿ ಇರುವುದರಿಂದ ಪ್ರಯಾಣ ಮಾಡುವಾಗ ಹಣದ ನಷ್ಟ ಆಗುವ ಸಂದರ್ಭಗಳು ಇರುತ್ತವೆ. ಹಣ ಕಳ್ಳತನ ವಾಗಬಹುದು ಅಥವಾ ಅನಿರೀಕ್ಷಿತವಾಗಿ ಹಣ ಖರ್ಚಾಗುವ ಸಂದರ್ಭಗಳು ಎದುರಾಗಬಹುದು ಆದ್ದರಿಂದ ಜಾಗರೂಕರಾಗಿರಿ.

● ಗುರುವಿನ ಸ್ಥಾನ ಬದಲಾವಣೆಯ ಕಾರಣದಿಂದಾಗಿ ನಿಮಗೆ ಹಣಕಾಸಿನ ವಿಚಾರದಲ್ಲಿ ಕೂಡ ಅಡಚಣೆಗಳು ಉಂಟಾಗುತ್ತವೆ. ನೀವು ನಿರೀಕ್ಷಿಸಿದಷ್ಟು ಉಳಿತಾಯ ಅಥವಾ ಆದಾಯ ಆಗದೇ ಇರಬಹುದು ಅಥವಾ ನಿರೀಕ್ಷೆಗಿಂತ ಹೆಚ್ಚು ಖರ್ಚು ಆಗಲೂಬಹುದು.
● ಎರಡನೇ ಮನೆಯಲ್ಲಿ ಹಿಮ್ಮುಖವಾಗಿರುವ ಶನಿಯು ಹಣಕಾಸಿನ ತೊಂದರೆಯನ್ನು ನಿವಾರಿಸುತ್ತಾರೆ. ಹಣಕಾಸಿನ ಆದಾಯ ಮೂಲವನ್ನು ತುಂಬಿಸುತ್ತಾರೆ ಆದರೆ ಹಣಕಾಸಿನ ಮೂಲದ ವಿಚಾರದಲ್ಲಿ ಹೆಚ್ಚು ನಿರ್ಬಂಧನೆಯನ್ನು ವಿಧಿಸುತ್ತಾರೆ.

● ಹತ್ತನೇ ಮನೆಯಲ್ಲಿ ಇರುವ ಕೇತುವಿನ ಉಪಸ್ಥಿತಿಯು ಆಧ್ಯಾತ್ಮಿಕ ವಿಚಾರವಾಗಿ ಒಲವು ಉಂಟಾಗುವ ರೀತಿ ಮಾಡುತ್ತಾರೆ. ಆಧ್ಯಾತ್ಮಿಕ ವಿಚಾರವಾಗಿ ಪ್ರಯಾಣಗಳನ್ನು ಬೆಳೆಸುವ ಸಾಧ್ಯತೆಗಳು ಕೂಡ ಇವೆ. ಆ ರೀತಿ 10ನೇ ಮನೆಯಲ್ಲಿರುವ ಕೇತು ನಿಮ್ಮನ್ನು ಪ್ರೇರೇಪಿಸುತ್ತಾರೆ ಮತ್ತು ಆಧ್ಯಾತ್ಮದ ಕಡೆಗೆ ಆಸಕ್ತಿಯನ್ನು ಹುಟ್ಟಿಸುತ್ತಾರೆ.

● ಹತ್ತನೇ ಮನೆಯಲ್ಲಿರುವ ಕೇತು ನಿಮ್ಮನ್ನು ಭೌತಿಕ ವ್ಯವಹಾರಗಳಿಂದ ದೂರ ಇಡುವ ಪ್ರಯತ್ನ ಮಾಡುತ್ತಾರೆ. ಈ ಮೇಲೆ ತಿಳಿಸಿದಂತೆ ಅದು ಆಧ್ಯಾತ್ಮದ ವಿಚಾರಕ್ಕೆ ಸೇರುತ್ತದೆ ಹೀಗಾಗಿ ನೀವು ಆಧ್ಯಾತ್ಮಿಕ ಗುರುವನ್ನು ಹುಡುಕಿಕೊಂಡು ಹೋಗುವ ರೀತಿ ಕೇತು ನಿಮ್ಮಲ್ಲಿ ಬದಲಾವಣೆಯನ್ನು ತರಲಿದ್ದಾರೆ.
● ಸತ್ಸಂಗ ಗಳಲ್ಲಿ ಭಾಗಿಯಾಗುವುದು, ಪ್ರವಚನಗಳನ್ನು ಕೇಳುವುದು, ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸುವಂತಹ ಕೆಲಸಗಳನ್ನು ಕೇತು ಗ್ರಹವು ಜುಲೈ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಮಾಡಲಿದ್ದಾರೆ.

● ಪ್ರೀತಿಯ ಗ್ರಹ ಎನಿಸಿರುವ ಶುಕ್ರನು ಸಹ ಹಿಮ್ಮುಖವಾಗಿ 8ನೇ ತಾರೀಕಿನಂದು ಅಸ್ತಾಂಗತರಾಗಿ 18ನೇ ತಾರೀಕು ಉದಯಿಸಲಿದ್ದಾರೆ. ಇದರ ಪ್ರಭಾವವಾಗಿ ಸಂಗಾತಿ ಜೊತೆಗಿನ ವಿರಸ ಕಡಿಮೆಯಾಗಿ ಸಾಮರಸ್ಯ ಮೂಡುತ್ತದೆ. ಯಾವುದೇ ರೀತಿಯ ಕೆಟ್ಟ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಇಲ್ಲ. ಪ್ರೀತಿ, ಪ್ರೇಮ ಅಥವಾ ಸಾಂಗತ್ಯದ ವಿಚಾರವಾಗಿ ನಿರಾಳವಾಗಿ ಇರುತ್ತೀರಿ. ಆದರೆ ಶುಕ್ರನು ಐದನೇ ಮನೆಯಲ್ಲಿ ಮತ್ತು ಹತ್ತನೇ ಮನೆಯಲ್ಲಿ ಅಧಿಪತಿ ಆಗಿರುವುದರಿಂದ ವೃತ್ತಿಯಲ್ಲಿ ಹಿನ್ನಡೆಯನ್ನು ಅನುಭವಿಸುತ್ತೀರಿ.

● ಬುಧ ಗ್ರಹವು ಕೂಡ ಹಿಮ್ಮುಖವಾದ ಚಲನೆ ಹೊಂದಿರುವುದರಿಂದ ಅಂತಹ ವಿಶೇಷ ಏನು ಇರುವುದಿಲ್ಲ, ಸಮಾಧಾನಕರವಾದ ಪ್ರಭಾವ ಉಂಟಾಗಲಿದೆ.
● ಮಕರ ರಾಶಿಯವರು ಪರಿಹಾರವಾಗಿ ಪ್ರತಿನಿತ್ಯವೂ ಕೂಡ ತಪ್ಪದೆ 108 ಬಾರಿ ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರವನ್ನು ಜಪಿಸಿದರೆ ಮಹದೇವನ ಆಶೀರ್ವಾದದಿಂದ ಎಲ್ಲವೂ ಒಳಿತಾಗಲಿದೆ.

ಈ ಪದಾರ್ಥಗಳನ್ನು ಸೇರಿಸಿ ಟೀ ಮಾಡಿ, ಅಮೃತದಂತಹ ರುಚಿ ಮತ್ತು ಗುಣವನ್ನು ಪಡೆಯುತ್ತದೆ.!

 

ನಮ್ಮ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಕುಡಿವ ಒಂದು ಪೇಯ ಎಂದರೆ ಅದು ಟೀ. ಕೆಲವರಿಗೆ ಟೀ ಕುಡಿಯದೆ ದಿನವೇ ಆರಂಭ ಆಗುವುದಿಲ್ಲ. ಹಾಗಾಗಿ ಬೆಡ್ ಗಳಲ್ಲಿಯೇ ಟಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಯಾವುದೇ ಆಫೀಸಿನಲ್ಲಿ ಆದರೂ ಕೂಡ ಟೀಗಾಗಿ ಒಂದು ಬ್ರೇಕ್ ಇದ್ದೇ ಇರುತ್ತದೆ.

ಬೆಳಿಗ್ಗೆ ಕುಡಿವ ಟೀ ಗೆ ಒಂದು ಶಕ್ತಿ ಇದ್ದರೆ, ಸಂಜೆ ಸಮಯ ಕುಡಿಯುವ ಟೀ ಗೆ ಮನಸ್ಸು ಹಾಗೂ ದೇಹವನ್ನು ರಿಲಾಕ್ಸ್ ಮಾಡುವ ಒಂದು ವಿಶೇಷ ಗುಣ ಇರುತ್ತದೆ. ಕೆಲವರಿಗೆ ಟೀ ಕುಡಿದರೆ ಸಾಕು ಅವರ ಮೆದುಳು ಪಾದರಸದಂತೆ ಚುರುಕಾಗಿ ಕೆಲಸ ಮಾಡಲು ಶುರು ಆಗುತ್ತದೆ ಮತ್ತು ಬಾಡಿ ಆಕ್ಟಿವ್ ಆಗುತ್ತದೆ ಇಷ್ಟೆಲ್ಲ ಕಾರಣಗಳಿಂದ ಟೀ ಗೆ ಪ್ರಪಂಚದಾದ್ಯಂತ ಅಭಿಮಾನಿಗಳು ಇದ್ದಾರೆ.

ಆದರೆ ಟೀ ಕುಡಿಯುವುದರಿಂದ ದೇಹಕ್ಕೆ ಏನು ಪ್ರಯೋಜನವಿಲ್ಲ, ಆರೋಗ್ಯ ಹಾಳಾಗುತ್ತದೆ ಎನ್ನುವ ಮಾತುಗಳನ್ನು ಕೂಡ ಕೆಲವರು ಆಡುತ್ತಾರೆ. ಇದನ್ನು ಸಂಪೂರ್ಣವಾಗಿ ಒಪ್ಪಲು ಆಗುವುದಿಲ್ಲ. ಒಂದು ಮಿತಿಯಲ್ಲಿ ಸರಿಯಾದ ರೀತಿಯಲ್ಲಿ ಟೀ ಕುಡಿಯುವುದರಿಂದ ದೇಹಕ್ಕೆ ಯಾವುದೇ ಅನಾರೋಗ್ಯ ಉಂಟಾಗುವುದಿಲ್ಲ, ಬದಲಾಗಿ ಪ್ರಯೋಜನಗಳೆ ಉಂಟಾಗುತ್ತದೆ ಎಂದು ಹೇಳಬಹುದು.

ಆದರೆ ಟೀ ಮಾಡುವ ವಿಧಾನ ಮತ್ತು ಅದಕ್ಕೆ ಬಳಸುವ ಪದಾರ್ಥಗಳಿಂದ ಟೀ ಆರೋಗ್ಯಕ್ಕೆ ಪೂರಕವೋ, ಮಾರಕವೋ ಎಂದು ಹೇಳಬಹುದು. ಸಾಮಾನ್ಯವಾಗಿ ಎಲ್ಲರೂ ಸಹ ಹಾಲು, ಸಕ್ಕರೆ, ನೀರು ಮತ್ತು ಟೀ ಪುಡಿ ಹಾಕಿ ಟೀ ಮಾಡುತ್ತಾರೆ. ಕೆಲವರು ಬ್ಲಾಕ್ ಟೀ, ಗ್ರೀನ್ ಟೀ ಇವುಗಳ ಮೊರೆ ಹೋಗುತ್ತಾರೆ. ಇವುಗಳ ಜೊತೆ ಕೆಲ ವಿಶೇಷ ಪದಾರ್ಥಗಳನ್ನು ಸೇರಿಸಿ ನೋಡಿ ಟೀ ನ ರುಚಿ ಹೆಚ್ಚಾಗುವುದರ ಜೊತೆಗೆ ಆರೋಗ್ಯ ಕೂಡ ವೃದ್ಧಿ ಆಗುತ್ತದೆ.

ಟೀ ಮಾಡುವಾಗ ಶುಂಠಿ ಸೇರಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹದಲ್ಲಿ ಯಾವುದೇ ರೀತಿ ನೋವುಗಳು ಇದ್ದರೂ ಕೂಡ ಆ ನೋವನ್ನು ನಿವಾರಣೆ ಮಾಡುವ ಶಕ್ತಿ ಶುಂಠಿಗೆ ಇರುತ್ತದೆ ಮತ್ತು ಕೆಮ್ಮು, ಕಫ, ಇನ್ಫೆಕ್ಷನ್ ಗಳನ್ನು ಕಡಿಮೆ ಮಾಡುವ ಗುಣವನ್ನು ಕೂಡ ಶುಂಠಿ ಹೊಂದಿದೆ. ಹಾಗಾಗಿ ಟೀಗೆ ಶುಂಠಿಯನ್ನು ಸೇರಿಸಿ.

ಜೊತೆಗೆ ದಾಲ್ಚಿನ್ನಿ ಪುಡಿಯನ್ನು ಕೂಡ ಸೇರಿಸಿ. ಇದು ದೇಹದ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ. ಬಿಪಿ ನಾರ್ಮಲ್ ಮಾಡಲು ಹೆಲ್ಪ್ ಮಾಡುತ್ತದೆ ಮತ್ತು ಟೀ ರುಚಿಯನ್ನು ಕೂಡ ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಕೂಡ ಸೇರಿಸಿ ಇದರ ಜೊತೆಗೆ ಏಲಕ್ಕಿ ಕೂಡ ಪ್ರಕೃತಿದತ್ತವಾಗಿರುವ ಒಂದು ಆಂಟಿ ಬಯೋಟೆಕ್ ಇದನ್ನು ಸಹ ಟೀಗೆ ಸೇರಿಸುವುದರಿಂದ ರಕ್ತನಾಳದಲ್ಲಿರುವ ಬ್ಲೋಟಿಂಗ್ ಗಳನ್ನು ಇದು ಸರಿಪಡಿಸುತ್ತದೆ.

ರಕ್ತನಾಳಗಳಿಗೆ ಶಕ್ತಿಯನ್ನು ತುಂಬುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ವೃದ್ಧಿಸುತ್ತದೆ ಹಾಗೂ ಟೀ ಗೆ ಒಳ್ಳೆ ಸುವಾಸನೆಯನ್ನು ಕೊಡುತ್ತದೆ. ಹಾಗಾಗಿ ಇವುಗಳನ್ನು ಸಹಾ ಟೀ ನಲ್ಲಿ ಸೇರಿಸಿ. ಅರ್ಧ ಚಮಚ ಶುಂಠಿ, ಕಾಲು ಚಮಚ ದಾಲ್ಚಿನ್ನಿ ಮತ್ತು ಒಂದು ಏಲಕ್ಕಿಯನ್ನು ಹಾಕಿ ಒಂದು ಚಮಚ ನಿಮ್ಮ ಮನೆಯಲ್ಲಿ ಉಪಯೋಗಿಸುವ ಟೀಪುಡಿಯನ್ನು ಹಾಕಿ ನೀರಿನಲ್ಲಿ ಚೆನ್ನಾಗಿ ಕುದಿಸಿ.

ನೀವು ಎಷ್ಟು ಚೆನ್ನಾಗಿ ನೀರಿನಲ್ಲಿ ಇದೆಲ್ಲವನ್ನು ಕುದಿಸುತ್ತಿರೋ ಅಷ್ಟು ಅದರಲ್ಲಿರುವ ಅಲ್ಕಲಿನ್ ಅಂಶಗಳು ಒಂದಕೊಂದು ಬೆರೆತುಕೊಳ್ಳುತ್ತವೆ. ಕೊನೆಯಲ್ಲಿ ಇದಕ್ಕೆ ಹಾಲನ್ನು ಸೇರಿಸಿ ಸ್ವಲ್ಪ ಕುದಿಸಿ ಸೇವಿಸಿ. ಇದನ್ನು ಶುಗರ್ ಫ್ರೀ ಆಗಿಯೇ ಸೇವಿಸಬಹುದು. ಒಂದು ವೇಳೆ ಸಿಹಿ ಬೇಕಾದಲ್ಲಿ ಸಕ್ಕರೆ ಬದಲು ಬೆಲ್ಲವನ್ನು ಹಾಕುವುದರಿಂದ ಇನ್ನೂ ಒಳ್ಳೆಯದು. ಈ ಮೆಥಡ್ ಅಲ್ಲಿ ಟೀ ಮಾಡಿ ಕುಡಿದು ಆರೋಗ್ಯ ವೃದ್ಧಿಸಿಕೊಳ್ಳಿ.

ಬ್ಯಾಂಕ್ ನಲ್ಲಿ 1 ಲಕ್ಷ ಹಣ ಇಟ್ಟರೆ ಎಷ್ಟು ಲಾಭ ಸಿಗಲಿದೆ ಗೊತ್ತಾ.? ಬ್ಯಾಂಕಿನ ಪ್ರಸ್ತುತ ಬಡ್ಡಿದರ ಎಷ್ಟಿದೆ ನೋಡಿ.! ಬೇರೆ ಅವರಿಗೆ ಬಡ್ಡಿಗೆ ಕೊಡದಕ್ಕಿಂತ ಇದೇ ಬೆಸ್ಟ್ ನೋಡಿ.!

 

 

RBI ಈ ವರ್ಷ ತನ್ನ ರೆಪೋ ದರವನ್ನು ಹೆಚ್ಚಿಸಿದೆ. ಈ ರೀತಿ ರೆಪೋ ದರ ಹೆಚ್ಚಿಗೆ ಆಗುವುದರಿಂದ ಅದು ದೇಶದಲ್ಲಿನ ಎಲ್ಲಾ ಖಾಸಗಿ ಮತ್ತು ಸರ್ಕಾರ ವಲಯದ ಹಣಕಾಸು ಸಂಸ್ಥೆಗಳ ವ್ಯವಹಾರದ ಮೇಲೆ ಪರಿಣಾಮ ಬೀರಲಿದೆ. ರೆಪೋದರ ಹೆಚ್ಚಿಗೆ ಆದಾಗ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡುವವರಿಗೆ ಅವರ ಉಳಿತಾಯದ ಮೇಲೆ ಸಿಗುವ ಬಡ್ಡಿದರ ಕೂಡ ಹೆಚ್ಚಿಗೆ ಆಗಲಿದೆ.

ಕಳೆದ ಎರಡು ವರ್ಷಗಳ ಹಿಂದೆ ಆದ ಕೊರೋನಾ ಲಾಕ್ಡೌನ್ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದ ಕಾರಣ ರೆಪೋ ದರದಲ್ಲಿ ತೀವ್ರ ಇಳಿಕೆ ಆಗಿತ್ತು. ಆದರೀಗ ಚೇತರಿಕೆ ಕಾಣುತ್ತಿದೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಗಳು ತಮ್ಮ ಬಡ್ಡಿದರವನ್ನು ಹೆಚ್ಚಿಸುವುದರಿಂದ ಗ್ರಾಹಕರಿಗೂ ಕೂಡ ತಮ್ಮ ಉಳಿತಾಯಗಳ ಮೇಲೆ ಹೆಚ್ಚಿನ ಲಾಭ ಸಿಗುತ್ತದೆ.

ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಒಂದಾದ SBI ಕೂಡ ಈಗ ಈ ವರ್ಷ ತನ್ನ ದರವನ್ನು ಹೆಚ್ಚಿಗೆ ಮಾಡಿದೆ. SBI ಬ್ಯಾಂಕಿನಲ್ಲಿ ಹಿರಿಯ ನಾಗರಿಕರಿಗಾಗಿ, ಹೆಣ್ಣು ಮಕ್ಕಳಿಗಾಗಿ ಮತ್ತು ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆಗಳ ಅನುಕೂಲತೆ ಇರುವುದರಿಂದ ದೇಶದ ಅತೀ ಹೆಚ್ಚಿನ ಜನರು SBI ಬ್ಯಾಂಕಿನಲ್ಲಿ ತಮ್ಮ ಉಳಿತಾಯವನ್ನು ನಿಶ್ಚಿತ ಠೇವಣಿ ಮೂಲಕ ಹೂಡಿಕೆ ಮಾಡಲು ಇಚ್ಛೆ ಪಡುತ್ತಾರೆ.

ಈಗ ಬಡ್ಡಿದರವು ಹೆಚ್ಚಿಗೆ ಆಗಿರುವುದರಿಂದ ನಿಶ್ಚಿತ ಠೇವಣಿಗಳ ಮೇಲೆ ಸಿಗುತ್ತಿದ್ದ ಲಾಭದ ಮೊತ್ತವು ಕೂಡ ಹೆಚ್ಚಾಗುತ್ತದೆ. ಪ್ರಸ್ತುತವಾಗಿ SBI ಬ್ಯಾಂಕಿನಲ್ಲಿ ಯಾವ ಯಾವ ಯೋಜನೆಗಳಿಗೆ ಎಷ್ಟೆಷ್ಟು ಬಡ್ಡಿದರ ಇದೆ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.

SBI ನಲ್ಲಿ 7 ದಿನಗಳಿಂದ 10 ವರ್ಷಗಳ ಅವಧಿಗೆ ಹಣವನ್ನು ನಿಶ್ಚಿತ ಠೇವಣಿ ಇಡಬಹುದು.
● SBIನಲ್ಲಿ ಹಲವು ರೀತಿಯ ಯೋಜನೆಗಳು ಇವೆ. ಯೋಜನೆಗಳಿಗೆ ಅನುಸಾರವಾಗಿ ಮತ್ತು ಠೇವಣಿ ಇಡುವ ವರ್ಷಗಳ ಆಧಾರದ ಮೇಲೆ ಬಡ್ಡಿ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತದೆ.
● SBI ಜಾರಿಗೆ ತಂದಿರುವ ಅಮೃತ ಕಳಶ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದವರಿಗೆ ಅವರ ಉಳಿತಾಯದ ಹಣದ ಮೇಲೆ 7.6% ಬಡ್ಡಿದರದಲ್ಲಿ ಲಾಭ ಸಿಗುತ್ತದೆ.

● ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿಗೆ ಪರಿಷ್ಕರಿಸಿದ ತನ್ನ ಬಡ್ಡಿದರಗಳ ಪ್ರಕಾರ ಸಾಮಾನ್ಯ ನಾಗರಿಕರು ಒಂದು ವರ್ಷದಿಂದ ಎರಡು ವರ್ಷದವರೆಗೆ ನಿಶ್ಚಿತ ಠೇವಣಿ ಇಡುವ ಹಣದ ಮೊತ್ತದ ಮೇಲೆ 6.80% ಬಡ್ಡಿದರವು ನಿಗದಿ ಆಗಿದೆ.
ಆದರೆ ಹಿರಿಯ ನಾಗರಿಕರಿಗೆ ಇದರಲ್ಲಿ ಹೆಚ್ಚಿನ ವಿನಾಯಿತಿ ಇದೆ ಹಿರಿಯ ನಾಗರಿಕರು ಇದೇ ಅವಧಿಯಲ್ಲಿ ಹೂಡಿಕೆ ಮಾಡುವ ಅದೇ ಮೊತ್ತದ ಹಣಕ್ಕೆ 7.30% ಬಡ್ಡಿದರದಲ್ಲಿ ಲಾಭವನ್ನು ಪಡೆಯುತ್ತಾರೆ.

● ಸಾಮಾನ್ಯ ನಾಗರಿಕರು ಎರಡು ವರ್ಷದಿಂದ ಮೂರು ವರ್ಷಗಳ ವರೆಗೆ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಇಟ್ಟರೆ ಅವರಿಗೆ 7% ಮತ್ತು ಹಿರಿಯ ನಾಗರಿಕರಿಗೆ 0.5% ಹೆಚ್ಚುವರಿಯಾಗಿ 7.50% ಬಡ್ಡಿದರ ಅನ್ವಯಿಸಲಿದೆ.
● ಮೂರು ವರ್ಷದಿಂದ ಐದು ವರ್ಷಗಳವರೆಗಿನ FD ಮೇಲೆ ಸಾಮಾನ್ಯ ನಾಗರಿಕರಿಗೆ 6.50% ಮತ್ತು ಹಿರಿಯ ನಾಗರಿಕರಿಗೆ 7% ಮತ್ತು ರಿಂದ 10 ವರ್ಷದವರೆಗಿನ FD ಹೂಡಿಕೆ ಮೇಲೆ ಸಾಮಾನ್ಯ ನಾಗರಿಕ 6.50% ಮತ್ತು ಹಿರಿಯ ನಾಗರಿಕರಿಗೆ 7.50% ಬಡ್ಡಿದರ ನಿಗದಿಪಡಿಸಲಾಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿಗೆ ಹತ್ತಿರದಲ್ಲಿರುವ SBI ಶಾಖೆಗೆ ಭೇಟಿ ಕೊಡಿ.

ಶಾಲಾ ದಾಖಲೆಗಳಲ್ಲಿ ಜಾತಿ ತಿದ್ದುಪಡಿ ಮಾಡಿಸುವುದು ಹೇಗೆ.? ತಿದ್ದುಪಡಿ ಮಾಡುವ ಸಿಂಧುತ್ವ ನೀಡುವ ಅಧಿಕಾರ ಯಾರಿಗಿದೆ.? ಯಾವ ರೀತಿ ಇದನ್ನು ಮಾಡಿಸಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಅನೇಕ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಈ ರೀತಿ ಒಂದು ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿರುತ್ತಾರೆ. ಅದೇನೆಂದರೆ, ಜಾತಿ ಪ್ರಮಾಣ ಪತ್ರದಲ್ಲಿರುವ ಮಾಹಿತಿಯ ಬಗ್ಗೆ.ಯಾಕೆಂದರೆ ಮೀಸಲಾತಿ ವಿಷಯ ಬಂದಾಗ ಜಾತಿ ಪ್ರಮಾಣ ಪತ್ರ ಒಂದು ಅಧಿಕೃತ ದಾಖಲೆಯಾಗಿ ಕೆಲಸ ಮಾಡುತ್ತದೆ.

ಆದರೆ ಶಾಲೆಗೆ ದಾಖಲಾದ ಸಮಯದಲ್ಲಿ ಈಗಾಗಲೇ ಜಾತಿ ಹೆಸರು ನೋಂದಣಿ ಆಗಿರುವುದರಿಂದ, ಶಾಲೆಯಿಂದ ಕೊಡುವ TCಯಲ್ಲಿ ಸಹ ಅದನ್ನೇ ನಮೂದಿಸಲಾಗುತ್ತದೆ. ಅದರ ಆಧಾರದ ಮೇಲೆ ತಹಶೀಲ್ದಾರರು ಜಾತಿ ಪ್ರಮಾಣ ಪತ್ರವನ್ನು ಕೊಡುತ್ತಾರೆ. ಅದನ್ನು ಇಟ್ಟುಕೊಂಡು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಸೀಟ್ ಪಡೆಯುತ್ತಾರೆ.

ಆದರೆ ನಂತರ ದಿನಗಳಲ್ಲಿ ಕೆಲವರಿಗೆ ಸಮಸ್ಯೆ ಆಗಿರುವುದು ಅರಿವಿಗೆ ಬರುತ್ತದೆ. ಅದೇನೆಂದರೆ ಅವರ ನಿಜವಾದ ಜಾತಿಯ ಬೇರೆ ಆಗಿರುತ್ತದೆ ಶಾಲಾ ದಾಖಲೆಗಳಲ್ಲಿ ಕೊಟ್ಟಿರುವ ಜಾತಿಯೇ ಬೇರೆ ಆಗಿರುತ್ತದೆ. ಆ ಕಾರಣಕ್ಕಾಗಿ ತಹಶೀಲ್ದಾರರು ಕೊಟ್ಟ ಸರ್ಟಿಫಿಕೆಟ್ ಅಲ್ಲಿರುವ ಜಾತಿಯು ಬೇರೆ ಆಗಿರುತ್ತದೆ. ಹೀಗೆ ಒಂದಕ್ಕೊಂದು ಹೋಲಿಕೆ ಆಗದ ಕಾರಣ ಅವರ ಉದ್ಯೋಗ ಸಿಂಧುತ್ವಕ್ಕೆ ಬಂದಿದ್ದರು ಕೂಡ ಹೋಲ್ಡ್ ಆಗಬಹುದು.

ಇಂತಹ ಸಮಯದಲ್ಲಿ ಅವರು ಕೋರ್ಟಿಗೆ ಹೋಗಿ ಡಿಗ್ರಿ ಪಡೆದುಕೊಂಡು ಬನ್ನಿ ಎಂದು ಒಂದು ಮಾತು ಹೇಳುತ್ತಾರೆ. ಆದರೆ ಈಗ ಅದು ಸಹ ಮಾನ್ಯವಾಗಿಲ್ಲ. 2015 ಮತ್ತು 2017ರಲ್ಲಿ ಪದೇಪದೇ ಈ ನಿಯಮಗಳಲ್ಲಿ ತಿದ್ದುಪಡಿ ಆಗಿದೆ. ಕೆಲವೊಮ್ಮೆ ಇವುಗಳ ತಿದ್ದುಪಡಿ ಮಾಡುವ ಅಧಿಕಾರವನ್ನು ತಹಶೀಲ್ದಾರ್ ಕಛೇರಿಗೆ ನೀಡಿದ್ದರೆ, ಕೆಲವೊಮ್ಮೆ ಜಿಲ್ಲಾಮಟ್ಟದಲ್ಲಿರುವ ಜಾತಿ ಪರಿಶೀಲನ ಸಮಿತಿಗೆ ಈ ಬಗ್ಗೆ ಅಧಿಕಾರ ಕೊಡಲಾಗಿದೆ.

ಕೆಲವೊಮ್ಮೆ ಸಮಾಜ ಕಲ್ಯಾಣ ಇಲಾಖೆಗೆ ಇದರ ಜವಾಬ್ದಾರಿಯನ್ನು ಹೊರಸಿ ಕೊಡಲಾಗಿದೆ. ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳು ಈ ರೀತಿ ತಮ್ಮ ಶಾಲಾ ದಾಖಲೆಗಳಲ್ಲಿ ತೊಂದರೆಗಳಾದಾಗ ಎಲ್ಲಿ ಹೋಗಬೇಕು ಯಾವ ರೀತಿ ಇದನ್ನು ಸರಿಪಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ.

ಸರ್ಕಾರದಿಂದ ಇದುವರೆಗೆ ಹೊರಬಿದ್ದಿರುವ ಎಲ್ಲಾ ಸುತ್ತೋಲೆಗಳ ಪ್ರಕಾರ ಸರ್ಕಾರ ಹೇಳುವುದು ಏನೆಂದರೆ, ತಮಿಳುನಾಡಿನ ಗುರುಮೂರ್ತಿ ಎನ್ನುವ ಪ್ರಕರಣದಲ್ಲಿ ನ್ಯಾಯಾಲಯವು ಸ್ಪಷ್ಟವಾಗಿ ತಿಳಿಸಿತು. ಇಂತಹ ಯಾವುದೇ ಕೇಸ್ಗಳು ಬಂದಾಗ ಅಥವಾ ಜಾತಿ ಸಂಬಂಧಿಸಿದ ಸಮಸ್ಯೆಗಳು ಬಂದಾಗ ಅಲ್ಲಿನ ಸಿವಿಲ್ ಕೋರ್ಟ್ ಆ ವಿಷಯದಲ್ಲಿ ತಲೆ ಹಾಕುವಂತಿಲ್ಲ, ಅವುಗಳಿಗೆ ಅದನ್ನು ತೀರ್ಪು ಕೊಡುವ ಹಕ್ಕು ಬರುವುದಿಲ್ಲ ಎಂದು ಹೇಳಿತ್ತು.

ನಂತರದ ದಿನಗಳಲ್ಲಿ ಅವುಗಳನ್ನು ತಿದ್ದುಪಡಿಗಾಗಿ ಬೇರೆಲ್ಲಿ ಹೋಗಬೇಕು ಎನ್ನುವ ಗೊಂದಲ ಶುರುವಾಯಿತು. ನಂತರದ ದಿನಗಳಲ್ಲಿ ಸರ್ಕಾರ ಮತ್ತೊಂದು ಸುತ್ತೋಲೆಯನ್ನು ಹೊರಡಿಸಿತು. ಜಿಲ್ಲಾ ಮಟ್ಟದ ಜಾತಿ ಪರಿಶೀಲನ ಸಮಿತಿಯು ತಹಶೀಲ್ದಾರರು ನೀಡಿದ ಜಾತಿ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಅದಕ್ಕೆ ಸಿಂಧುತ್ವ ಕೊಡಬಹುದು ಹೊರತು ಶಾಲಾ ಕಾಲೇಜುಗಳಲ್ಲಿ ಇರುವ ಜಾತಿಗಳನ್ನು ತಿದ್ದುವ ಅಧಿಕಾರ ಅದಕ್ಕೆ ಇಲ್ಲ ಎಂದು ತಿಳಿಸಿತು.

ಮತ್ತೊಂದು ಸುತ್ತೋಲೆಯಲ್ಲಿ ತಹಶೀಲ್ದಾರ್ ಕಚೇರಿಗಳಲ್ಲಿ ಈ ರೀತಿ ಜಾತಿ ಪ್ರಮಾಣ ಪತ್ರವನ್ನು ನೀಡುವಾಗ ಬರಿ ಶಾಲಾ ದಾಖಲೆಗಳನ್ನು ಆಧರಿಸಿ ಕೊಡಬಾರದು. ಅಲ್ಲಿ ಸ್ಥಳ ಮಹಜರು ಕೂಡ ಮುಖ್ಯವಾಗುತ್ತದೆ. ಇದರೊಂದಿಗೆ ಇತರ ದಾಖಲೆಗಳನ್ನು ಪರಿಶೀಲನೆ ಮಾಡುವುದು ಮುಖ್ಯವಾಗುತ್ತದೆ.

ಇದನ್ನೆಲ್ಲ ಮಾಡಿದ ಬಳಿಕ ಜಾತಿ ಪ್ರಮಾಣ ಪತ್ರ ಕೊಟ್ಟಾಗ ಈ ರೀತಿ ಸಮಸ್ಯೆಗಳು ಎದುರಾಗುವುದು ತಪ್ಪುತ್ತದೆ ಎಂದು ತೀರ್ಪು ನೀಡಿದೆ. ಈ ವಿಚಾರವಾಗಿ ಪದೇ ಪದೇ ಹೊಸ ಹೊಸ ಅಪ್ಡೇಟ್ಗಳು ಹೊರಬಿದ್ದಿದ್ದು ಇವುಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಪಲಾವ್ ಎಲೆಗೆ ಇರುವ ಶಕ್ತಿ ಎಂತಹದ್ದು ಗೊತ್ತಾ.? ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಪಲಾವ್ ಎಲೆಯ ಈ ತಂತ್ರದಿಂದ ಪರಿಹಾರ ಮಾಡಬಹುದು.!

 

ಇದುವರೆಗೆ ಪಲಾವ್ ಎಲೆಯನ್ನು ಒಂದು ಮಸಾಲೆ ಪದಾರ್ಥ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಆದರೆ ಪಲಾವ್ ಎಲೆಗೆ ಆಹಾರದ ರುಚಿ ಹೆಚ್ಚಿಸುವ ಗುಣದ ಜೊತೆಗೆ ವಿಶೇಷ ತಂತ್ರ ಶಕ್ತಿಯು ಕೂಡ ಇದೆ. ಪಲಾವ್ ಎಲೆಯನ್ನು ಬಳಸಿಕೊಂಡು ಕೆಲವೊಂದು ತಂತ್ರಗಳನ್ನು ಮಾಡುವ ಮೂಲಕ ನಾವು ನಮ್ಮ ಜೀವನದ ಅನೇಕ ಸಮಸ್ಯೆಗಳನ್ನು ಹಾಗೂ ನಮ್ಮ ಕುಟುಂಬದ ಅನೇಕ ಕೌಟುಂಬಿಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.

ಇಂದು ಈ ಅಂಕಣದಲ್ಲಿ ಪಲಾವ್ ಎಲೆಗೆ ಇರುವ ಅದ್ಭುತ ಚಮತ್ಕಾರಿ ಶಕ್ತಿಯ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

ಪಲಾವ್ ಎಲೆಯಿಂದ ಹೇಗೆ ತಂತ್ರ ಮಾಡಬೇಕು:-
ಮೊದಲನೇ ದಿನ ಶುದ್ಧ ಮನಸ್ಸಿನಿಂದ ದೇವರ ಪೂಜೆ ಮಾಡಿ ನಿಮ್ಮ ಯಾವ ಸಮಸ್ಯೆ ಪರಿಹಾರ ಆಗಬೇಕು ಎನ್ನುವುದರ ಬಗ್ಗೆ ಸಂಕಲ್ಪ ಮಾಡಿಕೊಳ್ಳಿ, ಬಹಳ ನಂಬಿಕೆ ಹಾಗೂ ಶ್ರದ್ಧೆಯಿಂದ ಈ ತಂತ್ರವನ್ನು ಮಾಡಿದರೆ ಶೀಘ್ರವಾಗಿ ಇದು ಕೆಲಸ ಮಾಡುತ್ತದೆ.

ಒಂದು ಪಲಾವ್ ಎಲೆಯನ್ನು ತೆಗೆದುಕೊಳ್ಳಿ ಆ ಪಲಾವ್ ಎಲೆ ಅರಿದಿರಬಾರದು, ರಂಧ್ರವಾಗಿರಬಾರದು ಮತ್ತು ಅದರ ಮೇಲೆ ಯಾವುದೇ ಕಲೆ ಇರಬಾರದು ಆ ರೀತಿಯ ಪಲಾವ್ ಎಲೆ ತೆಗೆದುಕೊಂಡು ನೀಲಿ ಬಣ್ಣದ ಪೆನ್ನಿನಿಂದ ನಿಮ್ಮ ಕೋರಿಕೆ ಏನು ಎನ್ನುವುದನ್ನು ಪಾಸಿಟಿವ್ ಆಗಿ ಬರೆಯಿರಿ. ಉದಾಹರಣೆಗೆ ನಿಮಗೆ ಬೇಗ ಉದ್ಯೋಗ ಸಿಗಬೇಕು ಎಂದಿದ್ದರೆ ನನಗೆ ನನ್ನ ಕನಸಿನ ಉದ್ಯೋಗ ಸಿಕ್ಕಿತು ಎಂದು ಬರೆಯಿರಿ.

ನಂತರ ಆ ಪಲಾವ್ ಎಲೆಯನ್ನು ಸುಟ್ಟು ಬೂದಿ ಮಾಡಿ, ಆ ಬೂದಿಯನ್ನು ಮನೆಯಿಂದ ಹೊರಗೆ ತಂದು ಊದಿಬಿಡಿ. ತಪ್ಪದೇ ನಿರಂತರವಾಗಿ 21 ದಿನಗಳು ಈ ತಂತ್ರವನ್ನು ಮಾಡುವುದರಿಂದ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ. ನಿಮ್ಮ ಯಾವುದೇ ಕೋರಿಕೆ ಇದ್ದರೂ ಕೂಡ ಅದು ಶೀಘ್ರವಾಗಿ ನೆರವೇರುತ್ತದೆ.

ಪಲಾವ್ ಎಲೆಯ ತಂತ್ರವು ಪರಿಹಾರ ಮಾಡುವ ಸಮಸ್ಯೆಗಳು:-
● ನಮ್ಮ ಜೀವನದ ದೈನಂದಿಕ ಜಂಜಾಟಗಳಾದ ನಿರುದ್ಯೋಗ ಸಮಸ್ಯೆ, ಹಣ-ಆಸ್ತಿ ವಿಚಾರದಲ್ಲಿ ಸಂಬಂಧಿಕರ ನಡುವೆ ಕಲಹ, ಕುಟುಂಬದಲ್ಲಿ ಸದಸ್ಯರ ನಡುವೆ ಮನಸ್ತಾಪ, ಗಂಡ ಹೆಂಡತಿ ನಡುವೆ ಸದಾ ಜಗಳ, ಪ್ರಮೋಷನ್ ಸಿಗದೇ ಇರುವುದು, ಓದಿನಲ್ಲಿ ಏಕಾಗ್ರತೆ ಇಲ್ಲದೆ ಇರುವುದು, ಮದುವೆ ವಿಳಂಬ, ಸಂತಾನ ಸಮಸ್ಯೆ, ಬಿಜಿನೆಸ್ ಲಾಸ್ ಆಗುತ್ತಿರುವುದು, ಸಾಲ ಕೊಟ್ಟವರು ವಾಪಸ್ ಕೊಡದೆ ಇರುವುದು ಸಾಲಗಾರರ ಕಾಟ ಇನ್ನು ಮುಂತಾದ ಅನೇಕ ಸಮಸ್ಯೆಗಳು ಪರಿಹಾರ ಆಗುತ್ತವೆ.

● ಯಾವುದೇ ಕೋರಿಗಳು ಇದ್ದರೂ ಕೂಡ ಅದನ್ನು ಸಹ ಬರೆದುಕೊಳ್ಳಬಹುದು, ಆಗ ಆ ಕೋರಿಕೆಗಳು ನೆರವೇರುತ್ತವೆ. ಉದಾಹರಣೆಗೆ ಮನೆ ಕಟ್ಟಿಸಬೇಕು, ಆಸ್ತಿ ಖರೀದಿಸಬೇಕು, ಚಿನ್ನಾಭರಣ ಖರೀದಿಸಬೇಕು ವಾಹನ ಖರೀದಿಸಬೇಕು ಇನ್ನು ಮುಂತಾದ ಯಾವುದೇ ಕೋರಿಕೆಗಳಿದ್ದರೂ ಬರೆಯಬಹುದು.

● ಆಲಸ್ಯ, ಅಂಗಾಂಗಗಳ ನೋವು ಸೇರಿದಂತೆ ದೀರ್ಘ ಕಾಲದಿಂದ ಬಳಲುತ್ತಿರುವ ಅನಾರೋಗ್ಯ ಸಮಸ್ಯೆಗಳಿಗೂ ಕೂಡ ಈ ತಂತ್ರ ಪರಿಣಾಮಕಾರಿಯಾಗಿ ಪರಿಹಾರ ನೀಡುತ್ತದೆ.
● ನಿಮ್ಮ ಕುಟುಂಬದ ಮೇಲೆ ಕೆಟ್ಟ ಕಣ್ಣು ಬಿದ್ದು ದೃಷ್ಟಿ ದೋಷ ಆಗಿದ್ದರೂ ಕೂಡ ಆ ದೋಷವೆಲ್ಲಾ ನಿವಾರಣೆ ಆಗುತ್ತದೆ.
● ಜಿರಳೆ, ಪತಂಗ ಇನ್ನು ಮುಂತಾದ ಕೀಟಬಾಧೆಯಿಂದ ಸಮಸ್ಯೆ ಇದ್ದರೂ ಕೂಡ ಅದೆಲ್ಲವೂ ಪರಿಹಾರ ಆಗುತ್ತದೆ.

● ಕೆಲವರಿಗೆ ಮನಸಿನಲ್ಲಿ ಯಾವಾಗಲೂ ಒಂದು ಆತಂಕ ಭಯದ ವಾತಾವರಣ ಇರುತ್ತದೆ ಅಂತವರು ಕೂಡ ಈ ತಂತ್ರ ಮಾಡಿದರೆ ಅವರ ಮನಸ್ಸು ಶಾಂತವಾಗುತ್ತದೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಉಂಟಾಗುತ್ತದೆ.