Home Blog Page 187

ಗೃಹಿಣಿಯರಿಗೆ ಅಡುಗೆ ಮನೆಯಲ್ಲಿ ಅನುಕೂಲ ಮಾಡಿಕೊಡುವ ಸಿಂಪಲ್ ಟ್ರಿಕ್ ಗಳು ಇವು.!

 

● ಸಾರಿಗೆ ಉಪ್ಪು ಹೆಚ್ಚಾದರೆ ಒಂದು ಕಬ್ಬಿಣದ ಸೌಟನ್ನು ಕೆಂಪಾಗುವಂತೆ ಚೆನ್ನಾಗಿ ಕಾಯಿಸಿ ನಂತರ ಅದನ್ನು ಸಾರಿನ ಒಳಗೆ ಅದ್ದಿದರೆ ಆಟೋಮೆಟಿಕ್ ಆಗಿ ಉಪ್ಪು ಕಡಿಮೆ ಆಗುತ್ತದೆ.
● ದ್ರಾಕ್ಷಿ, ಟೊಮೆಟೊ, ಮೂಸಂಬಿ, ಕಿತ್ತಳೆ ಇಂತಹ ಹಣ್ಣುಗಳನ್ನು ಕುದಿಯುವ ನೀರಿಗೆ ಹಾಕಿ ಎರಡು ನಿಮಿಷ ಬಿಟ್ಟು ನಂತರ ತಣ್ಣೀರಿಗೆ ಹಾಕಿದರೆ ಅವುಗಳ ಮೇಲೆ ಇರುವ ಸಿಪ್ಪೆಯನ್ನು ಸುಲಭವಾಗಿ ಬಿಡಿಸಬಹುದು.

● ಗಾಜಿನ ಲೋಟಕ್ಕೆ ಬಿಸಿಯಾದ ಕಾಫಿ ಚಹಾ ಹಾಕುವ ಮುನ್ನ ಆ ಲೋಟಕ್ಕೆ ಒಂದು ಚಮಚ ಹಾಕಿ ನಂತರ ಕಾಫಿ ಟೀ ಹಾಕಿದರೆ ಮೊದಲಿಗೆ ಚಮಚ ಅದರ ಬಿಸಿಯನ್ನು ಹೀರಿಕೊಳ್ಳುವ ಕಾರಣ ಗಾಜಿನ ಗ್ಲಾಸು ಬಿಸಿಗೆ ಒಡೆಯುವುದು ತಪ್ಪುತ್ತದೆ.
● ಕಾಫಿಗೆ ಒಂದು ಚಿಟಿಕೆ ಉಪ್ಪನ್ನು ಹಾಕಿ ಕಲಸಿ ಕುಡಿದರೆ ಕಾಫಿಯ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

● ಆಲೂಗೆಡ್ಡೆ ಬೇಯಿಸಿ ಆ ನೀರಿನಿಂದ ಬೆಳ್ಳಿ ಮತ್ತು ಇತರ ಲೋಹದ ಪಾತ್ರೆಗಳನ್ನು ಅಚ್ಚುಕಟ್ಟಾಗಿ ತೊಳೆಯಬಹುದು.
● ಟೀ ಸೊಪ್ಪನ್ನು ಗಾಜಿನ ಜಾಡಿಗಳಲ್ಲಿ ಹಾಕಿ ಇಟ್ಟರೆ ಟೀ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಟೀ ಕುದಿಯುವಾಗ ಕಿತ್ತಾಳೆ ಸಿಪ್ಪೆ ಅಥವಾ ಏಲಕ್ಕಿ ಸಿಪ್ಪೆಯನ್ನು ಹಾಕಿದರೆ ಆ ಟೀ ಗೆ ವಿಶೇಷ ರುಚಿ ಬರುತ್ತದೆ.
● ತೊಗರಿ ಬೇಳೆಯನ್ನು ಬೇಯಲು ಇಡುವಾಗ ಅದರ ಜೊತೆ ಒಂದು ಚೂರು ತೆಂಗಿನ ಕಾಯಿಯನ್ನು ಬೇಯಲು ಇಟ್ಟರೆ ಬೇಳೆ ಬೇಗ ಬೇಯುತ್ತದೆ ಮತ್ತು ಚೆನ್ನಾಗಿ ಬೇಯುತ್ತದೆ.

● ಕಡಗೋಲನ್ನು ಬಿಸಿನೀರಿಗೆ ಹಾಕಿ ತೆಗೆದು ಮಜ್ಜಿಗೆ ಕಡೆದರೆ ಅದಕ್ಕೆ ಬೆಣ್ಣೆ ಅಂಟುವುದಿಲ್ಲ. ಮಳೆಗಾಲದಲ್ಲಿ ಮಿಕ್ಸಿಯಲ್ಲಿ ಬೆಣ್ಣೆ ತೆಗೆಯುವಾಗ ಬಿಸಿ ನೀರನ್ನು ಮತ್ತು ಬೇಸಿಗೆ ಕಾಲದಲ್ಲಿ ಮಿಕ್ಸಿಯಲ್ಲಿ ಬೆಣ್ಣೆ ತೆಗೆಯುವಾಗ ತಂಪು ನೀರನ್ನು ಹಾಕಿದರೆ ಬೆಣ್ಣೆ ಬೇಗ ಬರುತ್ತದೆ.
● ಹಾಲು ಕಾಯಿಸುವಾಗ ಆ ಪಾತ್ರೆಯಲ್ಲಿ ಒಂದು ಚಿಕ್ಕ ಸೌಟು ಅಥವಾ ಚಮಚವನ್ನು ಹಾಕಿ ಇಟ್ಟರೆ ಹಾಲು ಉಕ್ಕಿ ಚೆಲ್ಲುವುದಿಲ್ಲ.

● ಸೊಪ್ಪುಗಳನ್ನು ಬೇಯಿಸುವಾಗ ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿ ಇಡಬೇಡಿ, ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಉಳಿದುಬಿಡುತ್ತದೆ.
● ಕಾಲಿ ಫ್ಲವರ್ ಗೆ ಸ್ವಲ್ಪ ವಿನೆಗರ್ ಬಳಸಿ ಬೇಯಿಸಿದರೆ ಅದರ ಬಿಳಿ ಬಣ್ಣ ಹಾಗೆಯೇ ಇರುತ್ತದೆ.
● ಮಸಾಲೆ ಅಥವಾ ಕೊಬ್ಬರಿಯನ್ನು ರುಬ್ಬುವಾಗ ಸ್ವಲ್ಪ ಉಪ್ಪು ಸೇರಿಸಿ ರುಬ್ಬಿದರೆ ಅದು ಬೇಗ ನುಣ್ಣಗಾಗುತ್ತದೆ ಮತ್ತು ಒರಳು ಕಲ್ಲಿನಲ್ಲಿ ಈ ರೀತಿ ರುಬ್ಬುವಾಗ ಉಪ್ಪು ಹಾಕಿದರೆ ಅದು ಸಿಡಿಯುವುದಿಲ್ಲ.

● ಪಲಾವ್ ಮಾಡುವ ಮೊದಲು ಬಾಸುಮತಿ ಅಕ್ಕಿಯನ್ನು ಮೊದಲು ಸ್ವಲ್ಪ ನೀರಿನಲ್ಲಿ ನೆನೆಸಿಟ್ಟು, ನೀರು ಬಸಿದು 3-4 ನಿಮಿಷಗಳ ಹಾಗೆಯೇ ಬಿಟ್ಟು ನಂತರ ಪಲಾವ್ ಮಾಡಿದರೆ ಅನ್ನ ಮುದ್ದೆ ರೀತಿ ಆಗದೆ ಉದುರು ಉದುರಾಗಿರುತ್ತದೆ.
● ದೋಸೆ ಅಕ್ಕಿ ಜೊತೆ ಸ್ವಲ್ಪ ಹೆಸರುಬೇಳೆ ಹಾಕಿ ರುಬ್ಬಿ ದೋಸೆ ಮಾಡಿದರೆ ದೋಸೆ ಮೃದುವಾಗಿರುತ್ತದೆ.
● ಬಾಳೆಕಾಯಿ ಹೆಚ್ಚುವಾಗ ಕೈಗಳಿಗೆ ಮಜ್ಜಿಗೆ ಸವರಿಕೊಂಡರೆ ಕೈಗಳು ಕಪ್ಪಾಗುವುದಿಲ್ಲ.
● ಗಾಳಿ ಬರುವ ಜಾಗದಲ್ಲಿ ಕುಳಿತುಕೊಂಡು ಈರುಳ್ಳಿ ಹಚ್ಚಿದರೆ ಕಣ್ಣೀರು ಬರುವುದಿಲ್ಲ

● ಕೈ ಸೀಮೆಎಣ್ಣೆ ಆಗಿ, ಅದೇ ವಾಸನೆ ಬರುತ್ತಿದ್ದರೆ ತಿಳಿ ಮಜ್ಜಿಗೆಯಿಂದ ಕೈಗಳನ್ನು ತೊಳೆಯಿರಿ. ಆಗ ಅದು ಸರಿ ಹೋಗುತ್ತದೆ.
● ಬೆಳ್ಳಿ ಪಾತ್ರೆಗಳನ್ನು ವಿಭೂತಿಯಿಂದ ಮತ್ತು ಸ್ಟೀಲ್ ಪಾತ್ರೆಗಳನ್ನು ಗೋಧಿ ಹಿಟ್ಟಿನಿಂದ ತಿಕ್ಕಿ ತೊಳೆದರೆ ಅವುಗಳಿಗೆ ಅಂಟಿರುವ ಕೊಳೆ ಹಾಗೂ ಜಿಡ್ಡು ಬೇಗ ಹೋಗುತ್ತದೆ ಮತ್ತು ಹೊಸದರಂತೆ ಬಹಳ ಫಳ
ಫಳ ಎಂದು ಹೊಳೆಯುತ್ತದೆ.
● ಕೈಗಳಿಗೆ ಕೊಬ್ಬರಿ ಎಣ್ಣೆ ಸವರಿಕೊಂಡು ಹಸಿಮೆಣಸಿನಕಾಯಿ ಹಚ್ಚಿದರೆ ಖಾರದಿಂದ ಕೈಗಳು ಉರಿಯುವುದಿಲ್ಲ.

ಮನೆಯಲ್ಲೇ ಕುಳಿತು 5 ನಿಮಿಷಗಳಲ್ಲಿ ಆಧಾರ್ ತಿದ್ದುಪಡಿ ಮಾಡುವ ವಿಧಾನ.!

 

ಕಾರಣಾಂತರಗಳಿಂದ ನಮ್ಮ ಆಧಾರ್ ಸಂಖ್ಯೆಯಲ್ಲಿರುವ ಮೊಬೈಲ್ ನಂಬರನ್ನು ಬದಲಾಯಿಸಬೇಕಾಗಿ ಬರುತ್ತದೆ ಜೊತೆಗೆ ಆಧಾರ್ ಕಾರ್ಡ್ ಅಲ್ಲಿ ಅನೇಕ ತಿದ್ದುಪಡಿಗಳನ್ನು ಮಾಡಿಸಬೇಕಾದ ಅನಿವಾರ್ಯತೆ ಬರುತ್ತದೆ. ಈ ಸಂದರ್ಭದಲ್ಲಿ ಆಧಾರ್ ಕೇಂದ್ರಗಳಿಗೆ ಹೋಗಿ ಸಮಯ ವ್ಯರ್ಥ ಮಾಡಿಕೊಂಡು ಕಾಯುವುದರ ಬದಲು ಮನೆಯಲ್ಲಿ ಕುಳಿತು ನಾವು ಈಗ ನಮ್ಮ ಆಧಾರ್ ಕಾರ್ಡನ್ನು ತಿದ್ದುಪಡಿ ಮಾಡಿಕೊಳ್ಳಬಹುದು.

ಇದರ ಜೊತೆಗೆ ಐದು ವರ್ಷದ ಒಳಗಿನ ಮಕ್ಕಳು ನಮ್ಮ ಮನೆಯಲ್ಲಿ ಇದ್ದರೆ ನಾವೇ ಅವರ ಆಧಾರ್ ಕಾರ್ಡ್ ಅನ್ನು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸಹಾಯದಿಂದ ಪಡೆದುಕೊಳ್ಳಬಹುದು. ಇದಕ್ಕಾಗಿ ಇಂಡಿಯನ್ ಪೋಸ್ಟ್ ಸರ್ವಿಸ್ ಒಂದು ವೆಬ್ಸೈಟ್ ಬಿಡುಗಡೆ ಮಾಡಿದೆ ಈ ಲೇಖನದಲ್ಲಿ ಹಂತ ಹಂತವಾಗಿ ಯಾವ ರೀತಿ ನಾವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು ಮತ್ತು ಅಪ್ಲಿಕೇಶನ್ ಹಾಕಬಹುದು ಎನ್ನುವುದನ್ನು ತಿಳಿಸಿಕೊಡುತ್ತಿದ್ದೇವೆ.

● ಮೊದಲಿಗೆ ಇಂಡಿಯನ್ ಪೋಸ್ಟ್ ಆಫೀಸಿನ ಸರ್ವಿಸ್ ಲಿಂಕ್ ಆದ https://ccc.cept.gov.in/serviceRequest/request.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
● ಅದರಲ್ಲಿ ನಿಮ್ಮ ಆಧಾರ್ ಅಲ್ಲಿ ಇರುವಂತೆ ಹೆಸರು, ಅಡ್ರೆಸ್, ಪಿನ್ ಕೋಡ್, ಇಮೇಲ್ ಅಡ್ರೆಸ್, ಮೊಬೈಲ್ ಸಂಖ್ಯೆ ಫಿಲ್ ಮಾಡಿ ನಂತರ ಇರುವ ಎರಡು ಆಪ್ಷನ್ಗಳಲ್ಲಿ ಮೊದಲನೇದರಲ್ಲಿ ಸೆಲೆಕ್ಟ್ ಸರ್ವಿಸ್ ಎಂದು ಇರುತ್ತದೆ ಅದರಲ್ಲಿ IPPB Aadhar service ಎನ್ನುವ ಆಪ್ಶನ್ ಇರುತ್ತದೆ. ಅದನ್ನು ಸೆಲೆಕ್ಟ್ ಮಾಡಿ.

● ಆ ಆಪ್ಶನ್ ಫಿಲ್ ಆದಮೇಲೆ ಅದರ ಕೆಳಗಿರುವ ಬಾಕ್ಸ್ ಅಲ್ಲಿ ಸಬ್ ಸರ್ವಿಸ್ ಎಂದು ಆಪ್ಷನ್ ಇರುತ್ತದೆ ಅದರಲ್ಲಿ ನೀವು ಆಧಾರ್ ಗಿ ಮೊಬೈಲ್ ನಂಬರ್ ಲಿಂಕ್ ಮಾಡಬೇಕೆ ಅಥವಾ ನಿಮ್ಮ ಮನೆಯಲ್ಲಿರುವ ಐದು ವರ್ಷದ ಒಳಗಿರುವ ಮಗುವಿನ ಆಧಾರ್ ಕಾರ್ಡ್ ಪಡೆಯಬೇಕೆ ಎನ್ನುವ ಆಯ್ಕೆಗಳು ಇರುತ್ತವೆ, ಅದರಲ್ಲಿ ನಿಮ್ಮ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

● ಸದ್ಯಕ್ಕೆ ಈಗ ಆಧಾರ್ ನಂಬರ್ ಹಾಕಿ ಯಾವುದೇ ಅಪ್ಲಿಕೇಶನ್ ಹಾಕಿದರೂ OTP ಬರಲು ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬೇಕು. ಆ ಕಾರಣಕ್ಕಾಗಿ ಈಗ ನೀವು ನಿಮ್ಮ ಆಧಾರ್ ಅಲ್ಲಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕು ಎಂದಿದ್ದರೆ ಅದಕ್ಕಾಗಿ ಇರುವ ಆಪ್ಷನ್ ಅನ್ನು ಕ್ಲಿಕ್ ಮಾಡಿ ಮತ್ತು ರಿಕ್ವೆಸ್ಟ್ OTP ಎಂದು ಬರುತ್ತದೆ ಅದನ್ನು ಸೆಲೆಕ್ಟ್ ಮಾಡಿ, OTP ಪಡೆಯಿರಿ.

● OTP ಎಂಟ್ರಿ ಮಾಡಿದ ಮೇಲೆ ಕನ್ಫರ್ಮ್ ಸರ್ವಿಸ್ ರಿಕ್ವೆಸ್ಟ್ ಎನ್ನುವುದನ್ನು ಕ್ಲಿಕ್ ಮಾಡಿ. ನಿಮ್ಮ ರಿಕ್ವೆಸ್ಟ್ ಸಕ್ಸಸ್ಫ್ಯೂಲ್ ಆಗಿದ್ದರೆ ಒಂದು ರೆಫರೆನ್ಸ್ ನಂಬರ್ ಬರುತ್ತದೆ ಅದನ್ನು ಕಾಪಿ ಮಾಡಿ ಇಟ್ಟುಕೊಳ್ಳಬೇಕು ಅಥವಾ ಬರೆದು ಇಟ್ಟುಕೊಳ್ಳಬೇಕು.
● ನೀವೇನಾದರೂ ನಿಮ್ಮ ಅರ್ಜಿ ಸಲ್ಲಿಸಿ ಆದ ಮೇಲೆ ಅದರ ಸ್ಟೇಟಸ್ ಚೆಕ್ ಮಾಡಬೇಕು ಎಂದರೆ ಅದೇ ಪೇಜ್ ಅಲ್ಲಿ ಟ್ರ್ಯಾಕ್ ಯುವರ್ ಆಧಾರ್ ರಿಕ್ವೆಸ್ಟ್ ಎಂದು ಇರುತ್ತದೆ, ಅದನ್ನು ಕ್ಲಿಕ್ ಮಾಡಿ.

● ನಿಮ್ಮ ಮೊಬೈಲ್ ನಂಬರ್ ಅಥವಾ ನೀವು ಪಡೆದುಕೊಂಡ ರೆಫರೆನ್ಸ್ ನಂಬರ್ ಎಂಟ್ರಿ ಮಾಡಿ ಫೆಚ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ರಿಕ್ವೆಸ್ಟ್ ಸ್ಟೇಟಸ್ ಏನಾಗಿದೆ ಎಂದು ತಿಳಿಯುತ್ತದೆ.
● ಇಷ್ಟಾದ ಬಳಿಕ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ವತಿಯಿಂದ ಒಬ್ಬರು ಸಿಬ್ಬಂದಿ ನಿಮ್ಮ ಮನೆಗೆ ಬಂದು ನಿಮ್ಮ ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡುವ ಅಥವಾ ಇ-ಮೇಲ್ ಐಡಿ ಲಿಂಕ್ ಮಾಡುವ ಮತ್ತು ಐದು ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಅರ್ಜಿ ಸ್ವೀಕರಿಸುವ ಕೆಲಸವನ್ನು ಮಾಡುತ್ತಾರೆ.

● ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಯಾವುದೇ ದಾಖಲೆಗಳನ್ನು ಕೊಡುವ ಅಗತ್ಯ ಇಲ್ಲ. ಆದರೆ ಮಗುವಿನ ಆಧಾರ್ ಕಾರ್ಡ್ ಪಡೆಯಲು ಪೋಷಕರೊಬ್ಬರ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ ಮುಂತಾದ ದಾಖಲೆಗಳನ್ನು ನೀಡಬೇಕು.

ಒಳ್ಳೆ ಗಂಡಸರಿಗೆ ಇರುವ ಗುಣ ಸ್ವಭಾವಗಳು ಇವು, ಪ್ರತಿಯೊಬ್ಬ ಮಹಿಳೆಯೂ ಕೂಡ ಇದನ್ನು ನೋಡಬೇಕು…

 

ಮನುಷ್ಯನಾದ ಪ್ರತಿಯೊಬ್ಬರಿಗೂ ಕೂಡ ಸಂಗಾತಿಯ ಅವಶ್ಯಕತೆ ಇರುತ್ತದೆ. ಒಬ್ಬ ವ್ಯಕ್ತಿಯು ಅವನ ಜೀವನದಲ್ಲಿ ಏರುವ ಉನ್ನತ ಸ್ಥಾನಕ್ಕೂ ಅಥವಾ ಆತನ ಅಧೋಗತಿಗೂ ಅವನ ಬದುಕಿನಲ್ಲಿ ಬರುವ ಸಂಗಾತಿಯೇ ಕಾರಣವಾಗಿರುತ್ತಾರೆ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಪ್ರೀತಿ ಹೆಸರಿನಲ್ಲಿ ಅಥವಾ ಮದುವೆ ವಿಷಯದಲ್ಲಿ ಜೊತೆಯಾಗುವವರು ನಿಜವಾಗಿಯೂ ಎಂತಹ ಗುಣದವರು ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಸಮಯ ಮೀರಿ ಹೋಗಿರುತ್ತದೆ.

ಆದ್ದರಿಂದ ಅವರ ಕೆಲ ಗುಣಲಕ್ಷಣಗಳ ಮತ್ತು ವರ್ತನೆಗಳ ಆಧಾರದ ಮೇಲೆ ಅವರು ಒಳ್ಳೆಯವರಾ? ಕೆಟ್ಟವರಾ? ಅಥವಾ ನಿಮಗೆ ಯೋಗ್ಯರಾ ಎಂದು ನಿರ್ಧರಿಸಬಹುದು. ಈ ಅಂಕಣದಲ್ಲಿ ಈ ರೀತಿ ಒಳ್ಳೆ ಗುಣ ಹೊಂದಿರುವ ಗಂಡಸರ ಕೆಲ ಲಕ್ಷಣಗಳ ಬಗ್ಗೆ ತಿಳಿಸುತ್ತಿದ್ದೇವೆ. ನಿಮ್ಮ ಸಂಗಾತಿಯಲ್ಲೂ ಈ ಗುಣಗಳು ಇದೆಯೇ ಎಂದು ತಾಳೆ ಮಾಡಿ ನೋಡಿಕೊಳ್ಳಿ.

● ಯಾವ ಕಂಡೀಷನ್ ಗಳನ್ನು ಹಾಕದೆ ಅವರು ನೀವು ಹೇಗಿದ್ದೀರೋ ಹಾಗೆ ನಿಮ್ಮನ್ನು ಸ್ವೀಕರಿಸುತ್ತಾರೆ ಮತ್ತು ಪ್ರೀತಿಸುತ್ತಾರೆ.
● ಅವರು ನಿಮ್ಮ ಅಗತ್ಯಕ್ಕೆ ಸದಾ ಸಿದ್ಧರಿರುತ್ತಾರೆ, ಮತ್ತು ನಿಮ್ಮ ಕಷ್ಟ ಸುಖ ಅವಶ್ಯಕತೆಗಳು ಬೇಗ ಅವರಿಗೆ ಅರಿವಾಗುತ್ತವೆ.
● ಆತ ನಿಮ್ಮ ಸಮಯ ಬಿಟ್ಟು ಬೇರೇನೂ ಬಯಸುವುದಿಲ್ಲ, ಸದಾ ನಿಮ್ಮ ಜೊತೆ ಕಾಲ ಕಳೆಯಲು ಹಾತೊರೆಯುತ್ತಿರುತ್ತಾರೆ.

● ಆತನು ವಿಶ್ವಾಸಕ್ಕೆ ಅರ್ಹನಾಗಿರುತ್ತಾನೆ. ಎಂದಿಗೂ ಕೂಡ ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬರುವ ರೀತಿ ವರ್ತಿಸುವುದಿಲ್ಲ, ನೀವು ನಿಮ್ಮನ್ನು ನಂಬುವಷ್ಟೇ ಅವರನ್ನು ಸಂಪೂರ್ಣವಾಗಿ ನಂಬಬಹುದು ಅಷ್ಟು ಪಾರದರ್ಶಕವಾಗಿರುತ್ತಾರೆ.
● ಸದಾ ನಿಮಗೆ ಒಳಿತನ್ನೆ ಬಯಸುತ್ತಾರೆ, ಪ್ರತಿಕ್ಷಣವೂ ನೀವು ಸಂತೋಷವಾಗಿರಲಿ ಎಂದು ನೆನೆಯುತ್ತಾರೆ. ನೀವು ಸದಾ ಸುರಕ್ಷಿತರಾಗಿರಬೇಕು ಎಂದುಕೊಳ್ಳುತ್ತಾರೆ.

● ಜೀವನದಲ್ಲಿ ಯಾವುದೇ ರೀತಿಯ ಸಂದರ್ಭ ಬಂದರೂ ಕೂಡ ಅವರು ನಿಮಗೆ ಮೋಸ ಮಾಡುವುದಿಲ್ಲ, ನಿಮ್ಮ ಜೊತೆ ಸುಳ್ಳು ಹೇಳುವುದಿಲ್ಲ, ಯಾವುದಕ್ಕೂ ಕೂಡ ಹೆದರುವುದಿಲ್ಲ, ಕಷ್ಟದ ಸಮಯದಲ್ಲಿ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ.
● ನಿಮ್ಮ ಬುದ್ಧಿವಂತಿಕೆ ಮತ್ತು ಸಾಧನೆಗಳನ್ನು ಅವರು ಮೆಚ್ಚಿ ಮಾತನಾಡುತ್ತಾರೆ ಹಾಗೂ ನಿಮ್ಮ ಬಗ್ಗೆ ಅವರು ಹೆಮ್ಮೆ ಪಡುತ್ತಾರೆ. ನಿಮ್ಮ ಸಾಧನೆಯನ್ನು ನಿಮ್ಮ ಯಶಸ್ಸನ್ನು ಅವರದ್ದು ಎನ್ನುವಂತೆ ಅದನ್ನು ಅನುಭವಿಸುತ್ತಾರೆ, ಸಂಭ್ರಮಿಸುತ್ತಾರೆ.

● ಆತ ಎಂದಿಗೂ ನಿಮ್ಮನ್ನು ಕೀಳಾಗಿ ನೋಡುವುದಿಲ್ಲ ಎಷ್ಟೇ ಕೋಪದಲ್ಲಿ ಇದ್ದರೂ ಕೂಡ ವೈಯುಕ್ತಿಕವಾಗಿ ಮತ್ತು ಇತರರ ಎದುರು ಕೂಡ ನಿಮ್ಮ ಗೌರವಕ್ಕೆ ಧಕ್ಕೆ ಬರುವ ರೀತಿ ಮಾತನಾಡುವುದಿಲ್ಲ, ವರ್ತಿಸುವುದಿಲ್ಲ.
● ನೀವು ಅವರ ಮೇಲೆ ಮಾಡುವ ಕಾಳಜಿ ಬಗ್ಗೆ ಅವರು ಗೌರವ ತೋರುತ್ತಾರೆ ಮತ್ತು ನೀವು ಅವರ ಮೇಲೆ ಇಟ್ಟಿರುವ ಪ್ರೀತಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕನಾಗಿ ನಡೆದುಕೊಳ್ಳುತ್ತಾರೆ.

● ಆತನೇ ನಿಮ್ಮ ಆತ್ಮೀಯ ಸ್ನೇಹಿತನಾಗಿರುತ್ತಾನೆ, ಸ್ನೇಹಿತರು ಎಂದ ಕೂಡಲೇ ಆತನ ಹೆಸರೇ ಮೊದಲು ನೆನಪಾಗುವಷ್ಟು ಹತ್ತಿರವಾಗಿರುತ್ತಾನೆ.
● ಸಂದರ್ಭ ಯಾವುದೇ ಇರಲಿ ಪರಿಸ್ಥಿತಿ ಎಂತಹದ್ದೇರಲ್ಲಿ ಆತ ಎಂದಿಗೂ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ.

● ನಿಮ್ಮ ಕೆಟ್ಟ ಪರಿಸ್ಥಿತಿಯನ್ನು ನೋಡಿ ಇನ್ನಷ್ಟು ಕುಗ್ಗಿಸುವುದಿಲ್ಲ ಬದಲಾಗಿ ನಿಮ್ಮನ್ನು ಆ ಪರಿಸ್ಥಿತಿಯಿಂದ ಹಾಗೂ ಮನಸ್ಥಿತಿಯಿಂದ ಹೊರತೆಗೆಯಲು ಪ್ರಯತ್ನಿಸುತ್ತಾರೆ. ನಿಮ್ಮ ಬದುಕಿನಲ್ಲಿ ಭರವಸೆ ಮೂಡುವಂತಹ ಧೈರ್ಯದ ಮಾತುಗಳನ್ನು ಆಡುತ್ತ ಪ್ರೇರೇಪಿಸುತ್ತಾರೆ.
● ಆತನೇ ನಿಮ್ಮ ಸ್ಪೂರ್ತಿಯ ಚಿಲುಮೆ ಆಗಿರುತ್ತಾನೆ. ನಿಮಗೆ ಬೆಂಬಲ ಕೊಡುವವರಲ್ಲಿ ಮೊದಲಿಗನಾಗಿರುತ್ತಾನೆ.

● ಆತನು ನಿಮಗೆ ಭಾವನಾತ್ಮಕವಾಗಿ ಆರ್ಥಿಕವಾಗಿ ಮಾನಸಿಕವಾಗಿ ಆಧ್ಯಾತ್ಮಿಕವಾಗಿ ಬೆಂಬಲ ನೀಡುತ್ತಾನೆ. ಆತನು ಸಮಗ್ರತೆ ನಿಷ್ಠೆಯನ್ನು ಗೌರವಿಸುತ್ತಾನೆ.
● ಆತನು ನಿಮ್ಮ ಜೊತೆ ಪ್ರಾಮಾಣಿಕತೆ ಮತ್ತು ಗೌರವದಿಂದ ಇರುತ್ತಾನೆ. ಇಂತಹ ಗುಣಗಳನ್ನು ಹೊಂದಿರುವ ಸಂಗಾತಿ ಬದುಕಿನಲ್ಲಿ ಬದುಕು ಸಾರ್ಥಕ ಎನಿಸುತ್ತದೆ. ಎಂದಿಗೂ ಕೂಡ ಅವರನ್ನು ಕಳೆದುಕೊಳ್ಳಬೇಡಿ.

ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವವರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದ.?

 

ಕರ್ನಾಟಕ ರಾಜ್ಯದ ಎಲ್ಲಾ ಕುಟುಂಬಗಳು ಕೂಡ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಹೊರಡಿಸಿದ್ದಂತೆ ಜುಲೈ ತಿಂಗಳಿನಿಂದ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಲಿದ್ದಾರೆ. ಯಾರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಿ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಪ್ರಕಾರ ವಿದ್ಯುತ್ ಬಳಕೆ ಮಾಡುತ್ತಾರೋ ಅಂತವರು ಜುಲೈ ತಿಂಗಳಲ್ಲಿ ಬಳಸಿದ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್ ಅನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ ಸರ್ಕಾರವೇ ಅದನ್ನು ಭರಿಸುವುದಾಗಿ ಒಪ್ಪಿಕೊಂಡಿದೆ.

ಆದರೆ ಈಗಾಗಲೇ ಸರ್ಕಾರದಿಂದ ಅನೇಕ ಕುಟುಂಬಗಳು ಉಚಿತ ವಿದ್ಯುತ್ ಯೋಜನೆ ಪ್ರಯೋಜನವನ್ನು ಪಡೆಯುತ್ತಿವೆ. ಈ ಹಿಂದೆಯೇ ರಾಜ್ಯದಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಯಡಿ ಅರ್ಹ ಬಡ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆದಿದ್ದವು. ಈಗ ಎಲ್ಲರಿಗೂ ಗೃಹಜೋತಿ ಯೋಜನೆ ಉಚಿತ ವಿದ್ಯುತ್ ಅನುಕೂಲತೆ ಸಿಗುತ್ತಿರುವುದರಿಂದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಯ ಪ್ರಯೋಜನ ಪಡೆಯುತ್ತಿರುವವರು ಕೂಡ ಮತ್ತೊಮ್ಮೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುವುದಕ್ಕೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕೆ ಎನ್ನುವ ಗೊಂದಲ ಇದೆ.

ಈ ಬಗ್ಗೆ ನಮ್ಮ ಬೆಸ್ಕಾಂ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಟ್ರೀಟ್ ಒಂದನ್ನು ಮಾಡಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ. ನಮ್ಮ ಬೆಸ್ಕಾಂ ಟ್ವೀಟ್ ನಲ್ಲಿ ನೀವು ಈಗಾಗಲೇ ಭಾಗ್ಯಜ್ಯೋತಿ, ಕುಟೀರಜ್ಯೋತಿ ಅಮೃತಜ್ಯೋತಿ ಯೋಜನೆಯಿಂದ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದರು ಕೂಡ ಗೃಹಜ್ಯೋತಿ ಯೋಜನೆ ಪ್ರಯೋಜನ ಪಡೆಯಲು ನೋಂದಣಿ ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದೆ.

ಇದರಿಂದಾಗಿ ಈ ಮೇಲ್ಕಂಡ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದರು ಕೂಡ ಗೃಹಜ್ಯೋತಿ ಯೋಜನೆಗೆ ಮತ್ತೊಮ್ಮೆ ಇವರು ಸಹ ನೋಂದಣಿ ಆಗಬೇಕು ಎನ್ನುವುದು ಸ್ಪಷ್ಟವಾಗುತ್ತಿದೆ. ಈ ಬಗ್ಗೆ ಇನ್ನೂ ಗೊಂದಲ ಇದ್ದರೆ ನಿಮ್ಮ ಮನೆಗಳಿಗೆ ವಿದ್ಯುತ್ ಬಿಲ್ ನೀಡಲು ಬರುವ ವಿದ್ಯುತ್ ಇಲಾಖೆ ಪ್ರತಿನಿಧಿಗಳ ಬಳಿ ನೀವು ಅವರಿಗೆ ಬಂದಿರುವ ಆದೇಶದ ಕುರಿತು ಕೇಳಿ ಮಾಹಿತಿ ಪಡೆಯಬಹುದು. ಹಲವರಿಗೆ ಈ ವಿಷಯದಲ್ಲಿ ಮತ್ತೊಮ್ಮೆ ಗೊಂದಲ ಆಗುವುದು ಏನೆಂದರೆ.

ಈವರೆಗೆ ಈ ಮೇಲೆ ತಿಳಿಸಿದ ಯೋಜನೆಗಳಿಂದ ಉಚಿತ ವಿದ್ಯುತ್ ಪ್ರಯೋಜನ ಪಡೆದವರು ವಿದ್ಯುತ್ ಬಿಲ್ ಕಟ್ಟದೇ ಇರುವುದರಿಂದ ಅವರಿಗೆ ವಿದ್ಯುತ್ ಬಿಲ್ ದಾಖಲೆಯಾಗಿ ಹೇಗೆ ಸಿಗುತ್ತದೆ ಎನ್ನುವುದು. ಅದಕ್ಕೂ ಸಹ ವಿದ್ಯುತ್ ಪ್ರತಿನಿಧಿಗಳ ಬಳಿ ಮಾಹಿತಿ ಇರುತ್ತದೆ ಕೇಳಿ ಪಡೆಯಬಹುದು. ವಿದ್ಯುತ್ ಬಿಲ್ ಪಾವತಿ ಮಾಡದೆ ಇದ್ದರೂ ಕೂಡ ಅವರು ಬಳಸಿರುವ ವಿದ್ಯುತ್ ಬಳಕೆಗೆ ಖಂಡಿತವಾಗಿಯೂ ಬಿಲ್ ನೀಡಿರುತ್ತಾರೆ. ಅದರ ಪ್ರಕಾರ ಇರುವ ಅಕೌಂಟ್ ಐಡಿ ತೆಗೆದುಕೊಂಡು ಅರ್ಜಿ ಸಲ್ಲಿಸಬಹುದು.

ಇವರು ಗೃಹಜೋತಿ ಯೋಜನೆಗೆ ಎಲ್ಲರಂತೆ ಸೇವಾ ಸಿಂಧು ಪೋರ್ಟಲ್ ಮೂಲಕ ಮೊಬೈಲ್ ನಲ್ಲಿ ಮತ್ತು ಕಂಪ್ಯೂಟರ್ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದಲ್ಲಿರುವ ವಿದ್ಯುತ್ ಇಲಾಖೆ ಕಛೇರಿ ಅಥವಾ ಗ್ರಾಮ ಪಂಚಾಯಿತಿಗೆ ಹೋಗಿ ಕೂಡ ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್ ಕೇಂದ್ರ, ಬೆಂಗಳೂರು ಒನ್ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಕೂಡ ಸೂಕ್ತ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ ನೋಂದಣಿ ಆಗಬಹುದು. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಬಟ್ಟೆ ಒಗೆಯಲು ಸೂಪರ್ ಟಿಪ್ಸ್ ಮಹಿಳೆಯರು ಆಗಿರಲಿ ಅಥವಾ ಪುರುಷರಾಗಿರಲಿ ಈ ಸಿಂಪಲ್ ಟ್ರಿಕ್ ಬಳಸಿದ್ರೆ ಸಾಕು ಚಿಟಿಕೆ ಹೊಡೆಯೋದ್ರ ಒಳಗೆ ಕೆಲಸ ಮುಗಿಯುತ್ತೆ.!

 

ಬಟ್ಟೆ ಒಗೆಯುವ ಕೆಲಸ ನೆನೆಸಿಕೊಂಡರೆ ಗೃಹಿಣಿಯರಿಗೆ ಒಮ್ಮೆಲೆ ಟೆನ್ಶನ್ ಜಾಸ್ತಿ ಆಗುತ್ತದೆ. ಯಾಕೆಂದರೆ ಬಹಳ ಸಮಯ ಹಿಡಿಯುವ ಮತ್ತು ಬಹಳ ಗಮನವಿಟ್ಟು ಮಾಡಬೇಕಾದ ಕೆಲಸ ಇದು. ಇಂದು ಅನೇಕ ಮನೆಗಳಲ್ಲಿ ವಾಷಿಂಗ್ ಮಿಷನ್ ಇದೆ ಆದರೂ ಕೂಡ ಮ್ಯಾನುವಲ್ ಆಗಿ ಒಗೆದ ಬಟ್ಟೆಗಳನ್ನು ಧರಿಸಿಕೊಂಡರೆ ಇರುವ ಲುಕ್ ಬೇರೆ.

ಹಾಗಾಗಿ ಹೆಚ್ಚಿನ ಜನರು ಕೈಗಳಲ್ಲಿ ಬಟ್ಟೆ ಒಗೆಯಲು ಇಷ್ಟಪಡುತ್ತಾರೆ. ನಿಮಗೆ ಬಟ್ಟೆಗಳಲ್ಲಿ ಕೊಳೆ ತೆಗೆಯುವ ಕೆಲಸ ಸಲೀಸಾಗಬೇಕಾದರೆ, ಸುಲಭವಾಗಿ ಹಳೆ ಕಲೆಗಳನ್ನು ತೆಗೆಯಬೇಕು ಎಂದರೆ ಮತ್ತು ಬಟ್ಟೆಯ ಕೆಟ್ಟ ವಾಸನೆ ಹೋಗಿ ಫ್ರೆಶ್ ಆಗಬೇಕು ಎಂದರೆ ಈಗ ನಾವು ಹೇಳುವ ಈ ಸಿಂಪಲ್ ಟ್ರಿಕ್ ಗಳನ್ನು ಬಳಸಿ ಸಾಕು. ಬಟ್ಟೆ ಕೂಡ ಕ್ಲೀನ್ ಆಗುತ್ತದೆ ನಿಮಗೂ ಆಯಾಸ ಕಡಿಮೆ ಆಗುತ್ತದೆ.

● ಬೆವರಿನಿಂದ ಕಲೆ ಆಗಿರುವ ಉಡುಪಿನ ಭಾಗಕ್ಕೆ ಆಸ್ಪರಿನ್ ಗುಳಿಗೆಯ ಪುಡಿಯನ್ನು ಉದುರಿಸಿ ನಂತರ ಉಜ್ಜಿ ತೊಳೆದರೆ ಕಳೆಯೂ ಮಾಯವಾಗುತ್ತದೆ ಮತ್ತು ಬೆವರಿನ ವಾಸನೆ ಕೂಡ ಇರುವುದಿಲ್ಲ.
● ಶಾಂಪೂಗಳನ್ನು ಉಪಯೋಗಿಸಿ ಉಣ್ಣೆಯ ಬಟ್ಟೆಯನ್ನು ತೊಳೆಯುವುದರಿಂದ ಉಣ್ಣೆ ಬಟ್ಟೆ ತೊಳೆಯುವ ಕೆಲಸ ಸಲೀಸಲಾಗುತ್ತದೆ.

● ರೇಷ್ಮೆ, ನೈಲಾನ್ ಮತ್ತು ಉಣ್ಣೆ ಬಟ್ಟೆಗಳನ್ನು ಒಗೆದ ಮೇಲೆ ಹಿಂಡಬೇಡಿ.
● ಎಲಾಸ್ಟಿಕ್ ಇರುವ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ನೆನೆಸಬಾರದು. ಇದರಿಂದ ಎಲಾಸ್ಟಿಕ್ ಬೇಗನೆ ಹಾಳಾಗುತ್ತದೆ.
● ಸ್ವಲ್ಪ ಅಮೋನಿಯ ಬೆರೆಸಿದ ನೀರಿನಲ್ಲಿ ಬಟ್ಟೆಗಳನ್ನು ಜಾಲಾಡಿ ಹಾಕಿದರೆ ಬೆವರಿನ ವಾಸನೆ ಹೊರಟು ಹೋಗುತ್ತದೆ.
● ನೈಲಾನ್, ಉಣ್ಣೆ, ಟೆರಿಕಾಟ್ ಮತ್ತು ಸಿಂಥೆಟಿಕ್ ಬಟ್ಟೆಗಳನ್ನು ಸೋಪು ಹಾಕಿ ನೆನೆಸಬಾರದು.

● ಬಟ್ಟೆಗಳನ್ನು ಒಗೆಯುವುದಕ್ಕೂ ಮುಂಚೆ ಅವುಗಳನ್ನು ರಾತ್ರಿ ಹೊತ್ತು ಉಪ್ಪು ನೀರಿನಲ್ಲಿ ನೆನೆಸಿ ಅಥವಾ ಕನಿಷ್ಠ 8 ಗಂಟೆಗಳಿಗೂ ಮುನ್ನ ಉಪ್ಪು ನೀರಿನಲ್ಲಿ ನೆನೆಸಿ ಹೋಗಿರುವುದರಿಂದ ಅವು ಬಣ್ಣ ಬಿಡುವುದಿಲ್ಲ.
● ಬಿಳಿಯ ಬಣ್ಣದ ರೇಷ್ಮೆ ಬಟ್ಟೆಗಳನ್ನು ಒಗೆಯುವಾಗ ಕೊನೆಯ ಸಲ ಜಾಲಡುವ ನೀರಿನಲ್ಲಿ ಸ್ವಲ್ಪ ಮಧ್ಯಸಾರವನ್ನು ಸೇರಿಸಿ ಜಾಲಾಡಿದರೆ ಬಟ್ಟೆ ಬಿಳಿಯದಾಗಿಯೇ ಇರುತ್ತದೆ.

● ರಾತ್ರಿ ಹೊತ್ತು ಕೊಳೆಯಾದ ಕಾಲರ್ ಹಾಗೂ ಕಪ್ ಗಳ ಭಾಗಕ್ಕೆ ಸೀಮೆಸುಣ್ಣದಿಂದ ಉಜ್ಜಿ ಹಾಗೆ ಬಿಟ್ಟರೆ ಅವು ಜಿಡ್ಡನ್ನು ಹೀರಿಕೊಳ್ಳುತ್ತವೆ. ಬಳಿಕ ಮಾರನೇ ದಿನ ಅವನ್ನು ಮತ್ತೆ ಚೆನ್ನಾಗಿ ಒಗೆದು ಹಾಕಿದರೆ ಕೊಳೆ ಪೂರ್ತಿಯಾಗಿ ಹೋಗುತ್ತದೆ.
● ರೇಷ್ಮೆ ಬಟ್ಟೆಗಳನ್ನು ಒಗೆಯುವಾಗ ನೀರಿನಲ್ಲಿ ನಿಂಬೆಹಣ್ಣನ್ನು ಹಿಂಡಿ ಆ ನೀರಿನಲ್ಲಿ ಅವುಗಳನ್ನು ಅದ್ದಿ ಜಾಲಾಡಿಸಿದರೆ ಆ ಬಟ್ಟೆಗಳ ಬಣ್ಣ ಹೋಗುವುದಿಲ್ಲ ಹಾಗೂ ಅವು ಸ್ವಚ್ಛವಾಗಿ ಹೊಳೆಯುತ್ತವೆ.

● ಬಿಳಿ ಬಟ್ಟೆಗಳಿಗೆ ನೀಲಿಯನ್ನು ಹಾಕುವಾಗ ಮೊದಲು ನೀರಿಗೆ ಸ್ವಲ್ಪ ಅಡಿಗೆ ಸೋಡಾ ಹಾಕಿ ನಂತರ ನೀಲಿಯನ್ನು ಹಾಕುವುದರಿಂದ ಬಟ್ಟೆಗಳ ಮೇಲೆ ಒಂದೇ ಕಡೆ ನೀಲಿ ಕಲೆ ಆಗುವುದಿಲ್ಲ.
● ಉಣ್ಣೆ ಬಟ್ಟೆಗಳನ್ನು ಒಗೆಯುವಾಗ ಅವುಗಳನ್ನು ನೆನೆ ಹಾಕುವ ನೀರಿಗೆ ಒಂದು ಚಮಚ ಗ್ಲಿಸರಿನ್ ಹಾಕಿ ನೆನೆಸಿ ಮತ್ತು ಅವುಗಳನ್ನು ಜಾಲಾಡುವ ನೀರಿಗೆ ಒಂದು ಚಮಚ ಗ್ಲಿಸರಿನ್ ಹಾಕಿದರೆ ಬಟ್ಟೆ ಹೆಚ್ಚು ಸುಕ್ಕಾಗುವುದಿಲ್ಲ. ಇಂತಹ ಸುಲಭ ಟ್ರಿಕ್ ಗಳನ್ನು ಬಳಸಿ ನಿಮ್ಮ ಮನೆಯ ಬಟ್ಟೆಗಳನ್ನು ಒಗೆಯಿರಿ ಮತ್ತು ಈ ಟಿಪ್ಸ್ ಗಳ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತೆಯರ ಜೊತೆಗೂ ಕೂಡ ಹಂಚಿಕೊಳ್ಳಿ.

ಕೂದಲು ಕತ್ತರಿಸಲು ಯಾವ ದಿನ ಸೂಕ್ತ.? ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಿಗಾಗಳಿ ಅಪ್ಪಿ ತಪ್ಪಿಯೂ ಈ ವಾರಗಳಲ್ಲಿ ಹೇರ್ ಕಟ್ ಮಾಡಿಸಬೇಡಿ.!

 

ಸಾಮಾನ್ಯವಾಗಿ ಹೇರ್ ಕಟ್ ಮಾಡಿಸುವುದಕ್ಕೆ ಎಲ್ಲರೂ ರಜಾದಿನವನ್ನೇ ನೋಡುತ್ತಾರೆ. ಈಗಿನ ಬ್ಯುಸಿ ಲೈಫ್ ಶೆಡ್ಯೂಲ್ ಅಲ್ಲಿ ರಜಾದಿನಗಳು ಮಾತ್ರ ಅವರ ವೈಯಕ್ತಿಕ ಕೆಲಸಗಳಿಗೆ ಸಮಯ ಸಿಗುವುದು ಅಥವಾ ಯಾವುದಾದರೂ ಇಂಟರ್ವ್ಯೂಗೆ ಹೋಗಬೇಕು ಅಥವಾ ಹೊಸ ಜಾಗಗಳಿಗೆ ಹೋಗಬೇಕು ಅಥವಾ ಸಮಾರಂಭಗಳಿಗೆ ಹೋಗಬೇಕು ಎನ್ನುವಾಗ ಮಾತ್ರ ಈ ಬಗ್ಗೆ ಗಮನ ಹೋಗುತ್ತದೆ.

ಆದರೆ ಇದೇ ದಿನದಂದು ಹೇರ್ ಕಟ್ ಮಾಡಿಸಬೇಕು ಎನ್ನುವ ನಿಯಮ ನಮ್ಮ ಹಿಂದೂ ಧರ್ಮದಲ್ಲಿ ಪಾಲನೆಯಾಗಿ ಬಂದಿದೆ. ನಮ್ಮಲ್ಲಿ ಹಿರಿಯರು ಮಕ್ಕಳು ಯಾವ ದಿನ ಹುಟ್ಟಿರುತ್ತಾರೋ ಆ ದಿನ ಅವರ ಹೇರ್ ಕಟ್ ಮಾಡಿಸಬಾರದು ಎನ್ನುವುದನ್ನು ಪಾಲಿಸಿಕೊಂಡು ಬಂದಿದ್ದಾರೆ. ಅದರ ಜೊತೆಗೆ ಇನ್ನೂ ಕೆಲವು ದಿನಗಳು ಮತ್ತು ವಾರಗಳು ಕೂಡ ಹೇರ್ ಕಟ್ ಮಾಡಿಸುವುದಕ್ಕೆ ನಿಷಿದ್ಧ, ಅವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

● ಸೋಮವಾರ ಹೇರ್ ಕಟ್ ಮಾಡಿಸುವವರಿಗೆ ಏಳು ತಿಂಗಳು ಆಯಸ್ಸು ವೃದ್ಧಿ ಆಗುತ್ತದೆ. ಶಾಸ್ತ್ರಗಳ ಪ್ರಕಾರ ಈ ದಿನ ಕ್ಷೌರಕ್ಕೆ ಉತ್ತಮವಲ್ಲ, ಈ ದಿನ ಕ್ಷೌರವು ಮಾನಸಿಕ ಕ್ಷೀಣತೆಯನ್ನು ತರುತ್ತದೆ, ಅಲ್ಲದೆ ಇದು ಮಕ್ಕಳಿಗೆ ಒಳ್ಳೆಯದು ಅಲ್ಲ. ಆದ್ದರಿಂದ ನೀವೇನಾದರೂ ಸೋಮವಾರ ಕ್ಷೌರ ಮಾಡಿಸುತ್ತಿದ್ದರೆ ಅದನ್ನು ತಪ್ಪಿಸಿ.

● ಮಂಗಳವಾರ ಹೇರ್ ಕಟ್ ಮಾಡಿಸಿದರೆ 11 ತಿಂಗಳು ಅವರ ಆಯುಷ್ಯ ಕಡಿಮೆ ಆಗುತ್ತದೆ. ಧರ್ಮ ಗ್ರಂಥಗಳು ಹೇಳುವ ಪ್ರಕಾರ ಮಂಗಳವಾರ ಕ್ಷೌರಕ್ಕೆ ಯೋಗ್ಯವಲ್ಲ, ಮಂಗಳವಾರ ಕ್ಷೌರ ಮಾಡಿಸುವವರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಎನ್ನುವ ಮಾತಿದೆ.

● ಬುಧವಾರ ಹೇರ್ ಕಟ್ ಮಾಡಿಸಿದರೆ 5 ತಿಂಗಳು ಅವರ ಆಯುಷ್ಯ ಹೆಚ್ಚಾಗುತ್ತದೆ. ಕೂದಲು ಮತ್ತು ಉಗುರುಗಳನ್ನು ಕತ್ತರಿಸಲು ಬುಧವಾರ ಉತ್ತಮವಾದ ದಿನವಾಗಿರುತ್ತದೆ. ಇದು ಸಂಪತ್ತನ್ನು ಹೆಚ್ಚಿಸುತ್ತದೆ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳುತ್ತದೆ.

● ಗುರುವಾರ ಹೇರ್ ಕಟ್ ಮಾಡಿಸಿದರೆ ಮೂರು ತಿಂಗಳು ಅವರ ಆಯುಷ್ಯ ಹೆಚ್ಚಾಗುತ್ತದೆ. ಆದರೆ ಶಾಸ್ತ್ರಗಳ ಪ್ರಕಾರ ಈ ದಿನ ಕ್ಷೌರಕ್ಕೆ ಯೋಗ್ಯವಲ್ಲ. ಈ ದಿನ ಕ್ಷೌರ ಮಾಡಿಸುವವರಿಗೆ ಹಣದ ನಷ್ಟ ಉಂಟಾಗುತ್ತದೆ. ಇದರ ಜೊತೆಗೆ ಅವರ ಘನತೆ ಗೌರವಕ್ಕೂ ಧಕ್ಕೆ ತರುವಂತಹ ಘಟನೆಗಳು ಸೃಷ್ಟಿ ಆಗುತ್ತವೆ.

● ಶುಕ್ರವಾರ ಹೇರ್ ಕಟ್ ಮಾಡಿಸಿದರೆ 11 ತಿಂಗಳು ಅವರ ಆಯುಷ್ಯ ಜಾಸ್ತಿ ಆಗುತ್ತದೆ. ಶುಕ್ರವಾರ ಇವುಗಳಿಗೆ ಉತ್ತಮವಾದ ದಿನ ಯಾಕೆಂದರೆ ಶುಕ್ರ ಗ್ರಹದ ಸ್ವಭಾವವೇ ಸೌಂದರ್ಯ ಆಗಿರುವುದರಿಂದ ಸೌಂದರ್ಯವನ್ನು ವೃದ್ದಿ ಮಾಡುವಂತಹ ಕೆಲಸಗಳಿಗೆ ಇದು ಸೂಕ್ತ ದಿನ. ಶುಕ್ರವಾರ ಕೂದಲು ಕಟ್ ಮಾಡಿಸುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ ಬದಲಾಗಿ ಲಾಭವು ಹೆಚ್ಚಾಗುತ್ತದೆ ಮತ್ತು ನಿಮ್ಮ ಖ್ಯಾತಿಯೂ ಹೆಚ್ಚಾಗುತ್ತದೆ.

● ಶನಿವಾರ ಹೇರ್ ಕಟ್ ಮಾಡಿಸುವವರಿಗೆ ಎರಡು ತಿಂಗಳು ಅವರ ಆಯುಷ್ಯ ಕಡಿಮೆ ಆಗುತ್ತದೆ. ಮಂಗಳವಾರದಂತೆ ಶನಿವಾರ ಕ್ಷೌರ ಮಾಡಿಸುವವರಿಗೂ ಕೂಡ ಆಕಾಲಿಕ ಮೃತ್ಯು ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ದಿನಗಳ ಕ್ಷೌರ ಮಾಡಿಸುವುದನ್ನು ಮತ್ತು ಹೇರ್ ಕಟ್ ಮಾಡಿಸುವುದನ್ನು ತಪ್ಪಿಸಿ.

● ಭಾನುವಾರ ಹೇರ್ ಕಟ್ ಮಾಡಿಸಿದರೆ ಒಂದು ತಿಂಗಳು ಅವರ ಆಯುಷ್ಯ ಕಡಿಮೆ ಆಗುತ್ತದೆ. ಭಾನುವಾರ ಆದಿತ್ಯನ ವಾರವೆಂದು ಪರಿಗಣಿಸಲಾಗಿದೆ ಸೂರ್ಯನ ವಾರವಾದ ಈ ದಿನದಂದು ಕ್ಷೌರ ಮಾಡಿಸುವುದರಿಂದ ನಿಮ್ಮ ಸಂಪತ್ತು, ಬುದ್ಧಿವಂತಿಕೆ ಮತ್ತು ಧರ್ಮ ನಶಿಸುತ್ತದೆ. ಆದ್ದರಿಂದ ಭಾನುವಾರದ ದಿನ ಹೇರ್ ಕಟ್ ಮತ್ತು ಕ್ಷೌರ ನಿಷಿದ್ಧ.

KSRTC ಬಸ್ ಬಸ್ ನಿಲ್ಲಸಲಿಲ್ಲ ಅಂತ ಕಲ್ಲು ಹೊಡೆದ ಮಹಿಳೆ.! ಶಕ್ತಿ ಯೋಜನೆ ಎಫೆಕ್ಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.!

ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ​ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ (Shakti Yojana) ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಸಹಸ್ರಾರು ಮಹಿಳಾ ಪ್ರಯಾಣಿಕರು ಉಚಿತವಾಗಿ ಸುಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಬಸ್​ಗಳು ತುಂಬಿತುಳುಕುತ್ತಿವೆ. ಇನ್ನು ಕೆಲವೆಡೆ ಪ್ರಯಾಣಿಕರು ಹಾಗೂ ಬಸ್​ ಚಾಲಕ-ನಿರ್ವಹಕರ ನಡುವೆ ಗಲಾಟೆಗಳು ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಇದರ ನಡುವೆ ಇಲ್ಲೋರ್ವ ಮಹಿಳಾ ಪ್ರಯಾಣಿರೊಬ್ಬರು ಬಸ್​ಗೆ ಕಲ್ಲೆಸಿದಿದ್ದಾಳೆ. ತನ್ನ ಊರಿಗೆ ತೆರಳಲು ಯಾವುದೊಂದು ಬಸ್​ ನಿಲ್ಲಿಸದ ಕಾರಣ, ಕೊಪ್ಪಳದಿಂದ – ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್​ಗೆ ಮಹಿಳೆಯೊಬ್ಬರು ಕಲ್ಲೆಸೆದ ಘಟನೆ ಕೊಪ್ಪಳದಲ್ಲಿ ಜರುಗಿದೆ. ಕೊಪ್ಪಳದ ಹೊಸಲಿಂಗಾಪುರ ಬಳಿ ಈ ಘಟನೆ ನಡೆದಿದೆ. ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬಾಕೆ ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು.

ಹುಲಿಗೆಮ್ಮನ ದರ್ಶನ ಪಡೆದು ಲಿಂಗಾಪುರ ಬಳಿ ಬಸ್​ಗಾಗಿ ಮಳೆಯಲ್ಲಿ ಕಾದು ಕುಳಿತಿದ್ದ ಲಕ್ಷ್ಮಿಗೆ ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪ ಬಂದು ಬಸ್​ಗೆ ಕಲ್ಲೆಸೆದಿದ್ದಾರೆ. ಪರಿಣಾಮ ಬಸ್​ನ ಕಿಟಕಿ ಕೆಳಗಿನ ಗಾಜು ಒಡೆದಿದೆ.‌ 5000 ರೂ. ದಂಡ ಕಟ್ಟಿದ ಮಹಿಳೆ: ಕೊಪ್ಪಳ ಘಟಕದ KA-35, F-252 ಬಸ್​ನ ಗ್ಲಾಸ್ ಡ್ಯಾಮೇಜ್ ಆದ ಕಾರಣ, ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ಬಸ್​ ನಿರ್ವಾಹಕರು ಬಸ್​ ಅನ್ನು ಪ್ಯಾಸೆಂಜರ್ ಸಮೇತ ಬಸ್ ನಿಲ್ಲಿಸಿ ದೂರು ನೀಡಲು ಮುಂದಾಗಿದ್ದರು.

ಆದರೆ ಡಿಪೋ ಮ್ಯಾನೇಜರ್ 5000ರೂ, ದಂಡ ಕೇಳಿದ್ದಾರೆ. ಇಲ್ಲವಾದಲ್ಲಿ ಎಫ್ ಐ ಆರ್ ಮಾಡುವುದಾಗಿ ಲಕ್ಷ್ಮಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಳಿಕ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಪೊಲೀಸರಿಗೆ ಮನವಿ ಮಾಡಿ ಕೊನೆಗೆ 5000 ದಂಡ ಕಟ್ಟಿ ಅದೇ ಬಸ್​ಲ್ಲಿ ಲಕ್ಷ್ಮಿ ತೆರಳಿದ್ದಾರೆ.

ನಾರಿ ‘ಶಕ್ತಿ’ ಎಫೆಕ್ಟ್​
ನೂತನ ಕಾಂಗ್ರೆಸ್​ ಸರ್ಕಾರ ತನ್ನ ಗ್ಯಾರಂಟಿಯಲ್ಲಿ ಒಂದಾದ ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಅವಕಾಶ ಒದಗಿಸಿದೆ. ಪರಿಣಾಮ ರಾಜ್ಯದಲ್ಲಿ ಮಹಿಳೆಯ ಬಸ್​ ಓಡಾಟ ಹೆಚ್ಚಾಗಿದೆ. ಎಲ್ಲ ಸರ್ಕಾರಿ ಬಸ್​ನಲ್ಲಿ ನಾರಿಮಣಿಯರೇ ತುಂಬಿ ತುಳುಕಿ ಕಂಡೆಕ್ಟರ್​ಗೇ ಬಸ್​ನಲ್ಲಿ ನಿಲ್ಲಲು ಜಾಗವ ಇಲ್ಲದಂತಾಗಿದೆ.

ಇನ್ನು ಹಾವೇರಿ ನಿಲ್ದಾಣದಲ್ಲಿ ಡ್ರೈವರ್​ ಸೀಟ್​ನ ಡೋರ್​ನ ಮೂಲಕವೇ ಪುರುಷರು ಬಸ್​ ಏರಿದ ಘಟನೆ ನಡೆದಿದೆ. ಬಸ್ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಿದ್ದಾರೆ. ಅದರಲ್ಲೂ ಪುರುಷ ಪ್ರಯಾಣಿಕರು ಬಸ್​ನಲ್ಲಿ ಆಸನಕ್ಕಾಗಿ ಪೈಪೋಟಿ ನಡೆಸುವ ಪರಿಸ್ಥಿತಿ ಇದೆ. ಬಸ್​ನ ಬಾಗಿಲ ಬಳಿಯೂ ಮಹಿಳೆಯರೇ ತುಂಬಿದ್ದರಿಂದ ತಾಳ್ಮೆ ಕಳೆದುಕೊಂಡ ಪುರುಷರು ಬಸ್​ ಒಳಗೆ ಹೋಗಲು ಬಸ್​ನ ಡ್ರೈವರ್​ ಸೀಟ್​ನಿಂದ ಬಸ್​ ಹತ್ತಿದ್ದಾರೆ.

ಇನ್ನೊಂದು ಕಡೆ ಚಾಮರಾಜನಗರದ ಕೊಳ್ಳೇಗಾಲದಲ್ಲಂತೂ ಮಹಿಳೆಯರ ಕಿತ್ತಾಟಕ್ಕೆ ಸರ್ಕಾರಿ ಬಸ್​ನ ಬಾಗಿಲೇ ಕಿತ್ತು ಬಂದಿತ್ತು. ಆ ಪೋಟೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿದ್ದು, ಈ ಘಟನೆಗೆ ‘ವುಮೆನ್​ ಪವರ್​’ ಅಂತ ನೆಟ್ಟಿಗರು ಕಾಮೆಂಟ್​ ಮಾಡಿದ್ದರು. ಇನ್ನು ಮಹಿಳೆಯರೇ ಬಸ್​ನಲ್ಲಿದ್ದರಿಂದ ಬಸ್​ ಏರಲು ನಿರಾಕರಿಸಿ ಕಣ್ಣೀರಿಟ್ಟ ಗದಗದ ಬಾಲಕನ ವಿಡಿಯೋವಂತೂ ಎಲ್ಲೆಡೆ ಸದ್ದು ಮಾಡಿತ್ತು.

https://telegram.me/bigdeals4sale

ಬಾಲಕ ತನ್ನ ತಾಯಿ ಜತೆಗೆ ದಾವಲ್ ಮಲ್ಲಿಕ್ ದರ್ಗಾ ನೋಡಲು ಬಂದಿದ್ದ. ವೀಕೆಂಡ್ ಹಾಗೂ ಅಮಾವಾಸ್ಯೆ ಹಿನ್ನೆಲೆ ಬಸ್‌ಗಳೆಲ್ಲ ಮಹಿಳೆಯರಿಂದ ಭರ್ತಿ ಆಗಿ ಬರುತ್ತಿದ್ದವು. ಇದರಿಂದ ಸುಸ್ತಾದ ಬಾಲಕ ಎಲ್ಲ ಬಸ್​ಗಳು ಭರ್ತಿಯಾಗಿ ಹೋಗುತ್ತಿರುವುದನ್ನು ನೋಡಿ ಕಣ್ಣೀರು ಹಾಕತೊಡಗಿದ. ಅಲ್ಲದೇ ಈ ನೂಕು ನುಗ್ಗಲಿನಲ್ಲಿ ನಾನು ಬರುವುದಿಲ್ಲ ಎಂದು ಹಠ ಹಿಡಿದಿದ್ದ. ಬಾಲಕನನ್ನು ಸಮಾಧಾನ ಮಾಡಲು ತಾಯಿ ಹರಸಾಹಸ ಪಡಬೇಕಾದ ಸನ್ನಿವೇಶ ಉಂಟಾಗಿತ್ತು.

ಇಂಥಹ ನಾಟಿ ವೈದ್ಯರು ಸಿಗುವುದು ಬಹಳ ಅಪರೂಪ, 800 ರೂಪಾಯಿ ನಲ್ಲಿ ಲಕ್ವಾ ವಾಸಿ ಮಾಡುವ ನಾಟಿವೈದ್ಯರು.!

 

ಕೆಲವೊಂದು ಕಾಯಿಲೆಗಳಿಗೆ ಇನ್ನೂ ಸಹ ನಮ್ಮ ಜನರು ಆಸ್ಪತ್ರೆ ಔಷಧಿಗಳಿಗಿಂತ ನಾಟಿ ಚಿಕಿತ್ಸೆ ಬಗ್ಗೆ ಹೆಚ್ಚು ನಂಬಿಕೆ ಇಡುತ್ತಾರೆ. ಇಂತಹ ಕಾಯಿಲೆಗಳಲ್ಲಿ ಲಕ್ವಾ ಕೂಡ ಒಂದು. ಈ ಕಾಯಿಲೆಗೆ ಒಳಗಾದ ಅನೇಕರು ಹೋಗುವುದು ನಾಟಿ ಚಿಕಿತ್ಸೆಗೆ, ಜೊತೆಗೆ ನಾಟಿ ಚಿಕಿತ್ಸೆ ಒಂದರಿಂದಲೇ ಇದು ಗುಣವಾಗಿರುವ ಸಾಕಷ್ಟು ಉದಾಹರಣೆಗಳು ಇವೆ.

ಈ ಲಕ್ವ ಕಾಯಿಲೆಗೆ ತುತ್ತಾದವರಿಗೆ ಅನೇಕ ಕಡೆ ಅನೇಕ ರೀತಿಯ ನಾಟಿ ಔಷಧಿಗಳನ್ನು ಕೊಡುತ್ತಾರೆ. ಅವರ ಪೂರ್ವಿಕರು ಅಥವಾ ಮನೆಯಲ್ಲಿ ಹಿರಿಯರು ಯಾವ ರೀತಿ ಔಷಧಿಗಳನ್ನು ನೀಡುತ್ತಿದ್ದರು ಅದನ್ನೇ ಕಲಿತುಕೊಂಡು ಈಗಿನ ಜನರೇಶನ್ ಅವರು ಕೂಡ ಔಷಧಿ ಕೊಡುತ್ತಿದ್ದಾರೆ. ಅವರ ಕೈ ಗುಣದಿಂದಲೋ ಅಥವಾ ಔಷಧಿ ಅಂಶದ ಪ್ರಭಾವದಿಂದಲೂ ಕಾಯಿಲೆ ಗುಣವಾಗಿ ಅವರ ಬದುಕು ಮೊದಲಿನಂತಾದಾಗ ಒಬ್ಬರಿಂದ ಒಬ್ಬರಿಗೆ ಇವರ ಖ್ಯಾತಿ ಹಬ್ಬುತ್ತಾ ಹೋಗುತ್ತದೆ.

ಈ ರೀತಿಯ ಒಬ್ಬರು ಅಪರೂಪದ ನಾಟಿ ವೈದ್ಯರು ಬಿಜಾಪುರ್ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಎನ್ನುವ ಗ್ರಾಮದಲ್ಲಿ ಇದ್ದಾರೆ, ಇವರ ಹೆಸರು ರಾಜಶೇಖರ್ ಹೂಗಾರ ಇವರ ದೂರವಾಣಿ ಸಂಖ್ಯೆ 8431923402. ಕಳೆದ 9 ವರ್ಷಗಳಿಂದ ಇವರು ಈ ರೀತಿ ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇದನ್ನು ಜನಸೇವೆ ಎನ್ನಲು ಕಾರಣ ಇವರು 800ರೂ. ಖರ್ಚಿನಲ್ಲಿ ಯಾವ ರೀತಿಯ ಲಕ್ವ ಕಾಯಿಲೆ ಬಂದಿದ್ದರೂ ಕೂಡ ಅದನ್ನು ಗುಣ ಮಾಡುತ್ತಾರೆ.

ಇವರ ತಂದೆ ಹಾಗೂ ಇವರ ತಾತ ಹೀಗೆ ಮೂರು ತಲೆಮಾರುಗಳಿಂದ ಇವರು ಈ ಪಾರಂಪರಿಕ ನಾಟಿ ಚಿಕಿತ್ಸೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಕುಟುಂಬವಾಗಿದ್ದಾರೆ. ಊರಿನ ಗ್ರಾಮ ದೇವತೆಯನ್ನು ಪೂಜೆ ಮಾಡುವ ಈ ಕುಟುಂಬದವರು ಆ ದೇವರ ಶಕ್ತಿಯಿಂದಲೇ ಈ ರೀತಿಯ ಒಂದು ಗುಣ ಬಂದಿದೆ ಎನ್ನುತ್ತಾರೆ.

ಮೋಡಿ ಭಾಷೆಯಲ್ಲಿದ್ದ ಒಂದು ಆಯುರ್ವೇದಿಕ್ ಗ್ರಂಥವನ್ನು ಒಬ್ಬರು ಹಿರಿಯರಿಂದ ಪಡೆದ ಈ ರಾಜಶೇಖರ್ ಹೂಗಾರ ಅವರ ತಾತ ಅದರಲ್ಲಿದ್ದ ಅನೇಕ ಚಿಕಿತ್ಸೆಗಳಲ್ಲಿ ಈ ಲಕ್ವಾ ಚಿಕಿತ್ಸೆ ಬಗ್ಗೆ ಅಧ್ಯಯನ ಮಾಡಿ ಅದರ ಔಷಧಿಯ ಕುರಿತು ಕಲಿತು ಆಗಿನಿಂದ ಈ ಚಿಕಿತ್ಸೆಯನ್ನು ಶುರು ಮಾಡಿದ್ದಾರೆ. ಈಗ ರಾಜಶೇಖರ್ ಹೂಗಾರ ಅವರು ಕೂಡ ಐದಕ್ಕಿಂತ ಹೆಚ್ಚು ವಿಧದ ಈ ರೀತಿ ನರಕ್ಕೆ ಸಂಬಂಧಪಟ್ಟ ಖಾಯಿಲೆಯನ್ನು ಹೋಲುವ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತಾರೆ.

ಪೋಲಿಯೋ ಅಟ್ಯಾಕ್ ಆಗಿ ಒಂದು ಕೈ ಸಣ್ಣವಾಗಿ ಹೋಗಿರುವ ಮಕ್ಕಳಿಗೆ ಅದು ಅಟ್ಯಾಕ್ ಆಗಿದೆ ಎಂದು ತಿಳಿದು ತಕ್ಷಣ ಅದು ಕ್ರಾಸ್ ಆಗದಂತೆ ತಡೆಯಲು ಚಿಕಿತ್ಸೆ ಕೊಡುತ್ತಾರೆ, ಕಣ್ಣು ಅಥವಾ ತುಟಿ, ಬಾಯಿ ಯಾವಾಗಲೂ ಅದುರುವ ಸಮಸ್ಯೆ ಇರುವವರೆಗೂ ಕೂಡ ಔಷಧಿ ನೀಡುತ್ತಾರೆ.

ಹಾಗೆಯೇ ಜೋಮು ಹಿಡಿಯುವ ಕಾಯಿಲೆಗೂ ಕೂಡ ಇವರು ಚಿಕಿತ್ಸೆ ಕೊಡುತ್ತಾರೆ. ಕೈ ಕಾಲು ಯಾವಾಗಲೂ ನಡುಗುತ್ತಲೆ ಇರುವ ಹನುಮ ಶಾಸ ಎನ್ನುವ ಕಾಯಿಲೆಗೂ ಕೂಡ ಔಷಧಿ ನೀಡುತ್ತಾರೆ, ಕತ್ತಿನಿಂದ ಕೆಳಗಡೆ ಸಂಪೂರ್ಣ ಚಲನೆಗೆ ನಿಂತು ದೇಹ ದುರ್ಬಲವಾಗಿ ಹೋಗುವ ಕಾಯಿಲೆಗೂ ಕೂಡ ಇವರು ಚಿಕಿತ್ಸೆಯನ್ನು ನೀಡುತ್ತಾರೆ.

ಇವರ ಕೈಗುಣದ ಬಗ್ಗೆ ತಿಳಿದಿರುವುದರಿಂದ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಕೂಡ ಇವರ ಬಳಿ ಚಿಕಿತ್ಸೆಗೆ ಜನ ಬರುತ್ತಾರೆ. ಇವರು ಕೊಡುವ ಚಿಕಿತ್ಸೆ ಬೇರೆ ನಾಟಿ ವೈದ್ಯರು ಲಕ್ವಾ ಖಾಯಿಲೆಗೆ ಕೊಡುವ ಚಿಕಿತ್ಸೆಗಿಂತ ವಿಭಿನ್ನವಾಗಿದ್ದು ಅದು ಯಾವ ರೀತಿ ಇರುತ್ತದೆ ಎನ್ನುವ ಇನ್ನಿತರ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಮದುವೆ ಆದ ಹೆಣ್ಣು ಈ ವಿಷಯಗಳನ್ನು ತಿಳಿದುಕೊಂಡಿಲ್ಲ ಎಂದರೆ ಡಿವೋರ್ಸ್ ಆಗುವುದು ಗ್ಯಾರಂಟಿ…!

ಮದುವೆ ಎನ್ನುವುದು ಒಂದು ಸುಂದರವಾದ ಅನುಬಂಧ. ಅದುವರೆಗೂ ಕೂಡ ಪುರುಷ ಹಾಗೂ ಮಹಿಳೆ ಆಗಿದ್ದ ಇಬ್ಬರು ಬೇರೆ ಬೇರೆ ವ್ಯಕ್ತಿತ್ವದವರು ದಂಪತಿಗಳಾಗಿ ಒಂದೇ ಉಸಿರು ಎರಡು ಜೀವ ಎನ್ನುವಂತೆ ಜೀವನಪೂರ್ತಿ ಜೊತೆಗೆ ಬಾಳವ ಭರವಸೆಯೊಂದಿಗೆ ಒಂದಾಗುವ ಅನುಬಂಧ. ಪ್ರತಿ ಮದುವೆಗಳು ಕೂಡ ಇಂತಹದೇ ಒಂದು ಆಸೆ, ಆಕಾಂಕ್ಷೆ ಹಾಗೂ ನಂಬಿಕೆಯಿಂದ ಶುರುವಾಗುತ್ತದೆ.

ಎಲ್ಲರೂ ಕೂಡ ಇದೇ ರೀತಿ ಜೀವನ ಪೂರ್ತಿ ಬದುಕುತ್ತಾರೆ ಎಂದುಕೊಳ್ಳುವುದು ಸುಳ್ಳು. ಕೆಲವೊಮ್ಮೆ ಪತಿ ಹಾಗೂ ಪತ್ನಿ ನಡುವಿನ ಹೊಂದಾಣಿಕೆ ಸಮಸ್ಯೆ ಗಿಂತ ಮನೆಯಲ್ಲಿರುವ ಇತರ ಸದಸ್ಯರ ಕಾರಣದಿಂದಾಗಿ ಜೋಡಿಗಳು ಬೇರೆ ಆಗಿರುವ ಉದಾಹರಣೆಗಳು ಇವೆ. ಅದರಲ್ಲೂ ಕೂಡ ಈಗಿನ ಕಾಲದಲ್ಲಿ ವಿವಾಹ ನೋಂದಣಿ ಆಗುವಷ್ಟೇ ಕೋರ್ಟಿನಲ್ಲಿ ಡಿವೋರ್ಸ್ ಕೇಸುಗಳು ದಾಖಲಾಗುತ್ತಿರುವುದು ಬಾರಿ ಆತಂಕದ ವಿಷಯವಾಗಿದೆ.

ನಮ್ಮ ದೇಶದ ಸಂಸ್ಕೃತಿಯಲ್ಲಿ ಒಬ್ಬರಿಗೆ ಒಂದೇ ಭಾರಿ ಮದುವೆ ಹಾಗೂ ಅದೇ ಸಂಸ್ಕಾರ. ಹಾಗಾಗಿ ಬಹಳ ತಿಳುವಳಿಕೆಯಿಂದ ಇದನ್ನು ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ಅದರಲ್ಲಿ ಹೆಚ್ಚಿನ ಹೊರೆ ಮನೆಯಲ್ಲಿ ಇರುವ ಗೃಹಣಿಯ ಮೇಲೆ ಬೀಳುತ್ತದೆ. ಹಾಗಾಗಿ ಮದುವೆ ಆಗಿ ಗೃಹಸ್ಥಾಶ್ರಮಕ್ಕೆ ಕಾಲಿಡುವ ಹೆಣ್ಣು ಮದುವೆ ಸಂಭ್ರಮದ ಜೊತೆಗೆ ಸಾಕಷ್ಟು ಜವಾಬ್ದಾರಿ ಹೊರೆಗಳನ್ನು ಕೂಡ ಹೊತ್ತುಕೊಂಡು ಹೊಸ ಮನೆಗೆ ಕಾಲಿಡುತ್ತಾಳೆ.

ತಂದೆ ತಾಯಿ ಮನೆಯಲ್ಲಿ ಮುದ್ದಿನ ಮಗಳಾಗಿ, ಸೋದರಿಯಾಗಿ ಯುವರಾಣಿಯಂತೆ ಇದ್ದವಳು ಹೋದ ಮನೆಯಲ್ಲಿ ಹೊಸ ತವರಮನೆ ಕಟ್ಟುವ ಯಜಮಾನಿ ಆಗಬೇಕು. ಹಾಗಾಗಿ ತಾಳ್ಮೆ ಹಾಗೂ ತಿಳುವಳಿಕೆ ಮತ್ತು ಬುದ್ಧಿವಂತಿಕೆ ಎಲ್ಲವೂ ಬೇಕಾಗುತ್ತದೆ. ಮದುವೆ ಆಗುವ ಪ್ರತಿ ಹೆಣ್ಣು ಕೂಡ ಕೆಲವು ಸೂಕ್ಷ್ಮ ವಿಷಯಗಳ ಬಗ್ಗೆ ತಿಳಿದುಕೊಂಡಿರಬೇಕು. ಆಗ ಮಾತ್ರ ಅವರ ಬದುಕು ನಂದನವನ ಆಗುತ್ತದೆ.

ನಿಮ್ಮ ವಿವಾಹ ಜೀವನವನ್ನು ಇತರರ ವಿವಾಹ ಜೀವನದ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಡಿ. ಇಲ್ಲಿ ಪ್ರತಿಯೊಬ್ಬರಿಗೂ ಕೂಡ ಅವರದ್ದೇ ಆದ ಬದುಕಿದೆ. ಎಲ್ಲರೂ ಒಂದೇ ರೀತಿ ಬದುಕಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಜೊತೆಗೆ ಮದುವೆಯಾದ ಕೂಡಲೇ ಬೇರೆ ಮನೆಗೆ ಹೋಗುವ ಯೋಚನೆಯನ್ನು ಮಾಡಬೇಡಿ, ಇದು ನಿಮ್ಮ ಪತಿಯ ಮನಸ್ಸನ್ನು ಒಡೆಯಬಹುದು. ಕೆಲವೊಮ್ಮೆ ಗಂಡನ ತಂದೆ ತಾಯಿಗಳು ವ್ಯಂಗ್ಯವಾಗಿ ಅಥವಾ ಟೀಕೆ ಮಾಡಿ ಮಾತನಾಡುವುದು ಇರುತ್ತದೆ.

ಸಾಧ್ಯವಾಗುವವರೆಗೂ ಮಟ್ಟಿಗೆ ಅದನ್ನು ಸಹಿಸಿಕೊಳ್ಳುವ ಪ್ರಯತ್ನ ಮಾಡಿ, ಬಹಳ ತೀಕ್ಷ್ಣವಾಗಿ ಅದಕ್ಕೆ ಉತ್ತರಿಸಬೇಡಿ. ನಿಮಗೆ ಯಾವುದೇ ರೀತಿಯ ಸಮಸ್ಯೆ ಆ ಹೊಸ ಮನೆಯಲ್ಲಿ ಆಗುತ್ತಿದ್ದರೆ ನಿಮ್ಮ ಗಂಡನಿಗೆ ಅದು ಅರ್ಥ ಆಗುವ ರೀತಿ ಪ್ರೀತಿಯಿಂದ ಹೇಳಿ ಮತ್ತು ಸಮಸ್ಯೆ ಪರಿಹಾರ ಮಾಡಿಕೊಳ್ಳುವುದರ ಕಡೆ ಮಾತ್ರ ಗಮನ ಕೊಡಿ.

ಗಂಡ ದಿನಪೂರ್ತಿ ದುಡಿದು ಮನೆಗೆ ಬಂದು ತಕ್ಷಣವೇ ಅವರ ಕುಟುಂಬದವರ ಮೇಲೆ ಕಂಪ್ಲೇಟ್ ಗಳನ್ನು ಹೇಳಲು ಶುರು ಮಾಡಬೇಡಿ. ಗಂಡನ ಮನೆಯಲ್ಲಿರುವ ಸಮಸ್ಯೆಗಳ ಬಗ್ಗೆ ಬೇರೆ ಯಾರೊಂದಿಗೂ ಹಂಚಿಕೊಳ್ಳಬೇಡಿ ಪರಿಹಾರ ಕೊಡುವಂತಹ ಆಪ್ತರಲ್ಲಿ ಮಾತ್ರ ಸಲಹೆ ಕೇಳಿ. ವರ್ಷಗಳೇ ಕಳೆದರೂ ಗಂಡನ ಮನೆಯವರ ಜೊತೆ ಹೊಂದಾಣಿಕೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಬಂದಾಗ ನಗುನಗುತ್ತಲೆ ಮನೆಯಿಂದ ಹೊರ ಬರುವ ಪ್ರಯತ್ನ ಮಾಡಿ.

ಯಾವುದೇ ನೋವು ಹಾಗೂ ಸಮಸ್ಯೆಗಳ ಬಗ್ಗೆ ಗಂಡನ ಜೊತೆ ತಾಳ್ಮೆಯಿಂದ ಚರ್ಚೆ ಮಾಡಿ. ಜೊತೆಗೆ ಮದುವೆ ಆದ ಪುರುಷನಿಗೆ ತಂದೆ ತಾಯಿ ಸ್ನೇಹಿತೆ ಎಲ್ಲವೂ ಕೂಡ ಮಡದಿ ಮಾತ್ರ ಆಗಿರುವುದರಿಂದ ಅವರ ಭಾವನೆಗಳಿಗೂ ಬೆಲೆ ಕೊಡಿ, ಅವರ ಮಾತುಗಳಿಗೂ ಸಮಯ ಕೊಡಿ. ಯಾವ ವಿಷಯದ ಬಗ್ಗೆಯೂ ವಿಪರೀತವಾಗಿ ವಾಗ್ವಾದ ಮಾಡಬೇಡಿ.

ಮನೆಯಲ್ಲಿ ಗಂಡಸರು ಈ ರೀತಿ ಇರುವುದು ಒಳ್ಳೆಯದಲ್ಲ.! ದರಿದ್ರ ಪುರುಷರ ಲಕ್ಷಣಗಳು ಇವು.!

 

ನಮ್ಮ ಸಮಾಜದಲ್ಲಿ ಹೆಣ್ಣಿನ ಮೇಲೆ ಇರುವಷ್ಟು ಅನುಕಂಪ ಕರುಣೆ ಗಂಡು ಮಕ್ಕಳ ಬೆಲೆ ಇರುವುದಿಲ್ಲ. ಗಂಡು ಮಕ್ಕಳು ಒಂದು ವಯಸ್ಸು ದಾಟುತ್ತಿದ್ದಂತೆ ದೊಡ್ಡವರಾಗಿ ಬಿಡುತ್ತಾರೆ ಯಾರು ಹೇಳದೆ ಇದ್ದರೂ ಕೂಡ ಮನೆಯ ಪರಿಸ್ಥಿತಿ ನೋಡಿ ಅವರೇ ಜವಾಬ್ದಾರಿಗಳನ್ನು ತೆಗೆದುಕೊಂಡು ನಿಭಾಯಿಸಲು ಪ್ರಯತ್ನಿಸುತ್ತಾರೆ.

ಗಂಡು ಮಕ್ಕಳು ಎಂದ ತಕ್ಷಣ ಒರಟು ಸ್ವಭಾವದವರು, ಧೈರ್ಯವಂತರು, ಹಠವಾದಿಗಳು ಇಂತಹದೇ ಭಾವನೆಗಳು ಬಂದರೂ ಕೂಡ ಆ ಗಂಡು ಮನಸ್ಸಿನ ಒಳಗಡೆ ಇರುವ ನೋವು, ಕನಸು ಹಾಗೂ ಕುಟುಂಬದ ಮೇಲೆ ಇರುವ ಪ್ರೀತಿ ಎಲ್ಲರಿಗೂ ಕಾಣುವುದಿಲ್ಲ. ತನ್ನ ಕುಟುಂಬಕ್ಕಾಗಿ ತನ್ನೆಲ್ಲ ಕನಸುಗಳನ್ನು ಬಲಿಕೊಟ್ಟು ತನ್ನ ಬದುಕನ್ನೇ ಬದಲಿಸಿಕೊಂಡು ಮನೆಯವರಿಗಾಗಿ ಬದುಕುವರು ಗಂಡು ಮಕ್ಕಳು.

ಒಂದು ಕುಟುಂಬದಲ್ಲಿ ತಂದೆಯಾಗಿ, ಅಣ್ಣನಾಗಿ, ಮಗನಾಗಿ, ಪತಿಯಾಗಿ ಹೀಗೆ ನಾನಾ ಪಾತ್ರಗಳ ಜವಾಬ್ದಾರಿ ತುಂಬುವುದರಲ್ಲಿ ಅವರ ಬದುಕಿನ ಆಯಸ್ಸು ತುಂಬಿಹೋಗಿರುತ್ತದೆ. ಎಲ್ಲಾ ಗಂಡಸರು ಕೂಡ ಕೆಟ್ಟವರಲ್ಲ ಹಾಗೆಯೇ ಎಲ್ಲಾ ಪುರುಷರು ಕೂಡ ಒಳ್ಳೆಯವರು ಅಲ್ಲ. ಈ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿರುವ ಗಂಡು ಮಕ್ಕಳಲ್ಲಿಯೇ ಅನೇಕರ ಬಗ್ಗೆ ನಮಗೆ ಅಸಮಾಧಾನ ಇದ್ದೆ ಇರುತ್ತದೆ.

ಕೆಲವರನ್ನು ನೋಡಿದರೆ ತಕ್ಷಣವೇ ಕೋಪ ಬರುತ್ತದೆ ನಮ್ಮ ಸಂಬಂಧಿಕರ ಕುಟುಂಬದಲ್ಲೇ ಇರುವ ಅಥವಾ ಸ್ನೇಹಿತೆಯರು ಸ್ನೇಹಿತರು ಹೇಳುವ ಪುರುಷರ ಬಗ್ಗೆ ಕೇಳುತ್ತಿರುವಾಗಲೇ ನಮಗೆ ಸಹನೆಯ ಕಟ್ಟೆ ಹೊಡೆಯುತ್ತದೆ. ಇಂತಹ ಗಂಡಸರೂ ಕೂಡ ನಮ್ಮ ನಡುವೆಯೇ ಇದ್ದಾರೆ. ಇಂಥವರು ಮನೆಗೂ ಮಾರಕ ಸಮಾಜಕ್ಕೂ ಮಾರಕ.

ಹಾಗಾಗಿ ಯಾವೆಲ್ಲ ಪುರುಷರು ದರಿದ್ರ ಪುರುಷರಾಗಿರುತ್ತಾರೆ, ಅವರ ಲಕ್ಷಣಗಳು ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಜವಾಬ್ದಾರಿಯನ್ನು ನಿಭಾಯಿಸಲು ಮೊದಲಿಗೆ ಬೇಕಾಗಿರೋದು ಹಣ, ಹಣ ಮಾಡಲು ಉದ್ಯೋಗ. ಯಾವ ಪುರುಷನು ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಿಲ್ಲ ಹಾಗೂ ಮನೆಯವರಿಗಾಗಿ ತನಗಾಗಿ ದುಡಿಯುವುದಿಲ್ಲ ಅಂತವರು ಬದುಕಿನ ಅರ್ಥವನ್ನು ತಿಳಿದಿರುವುದಿಲ್ಲ. ಕುಡಿಯದೆ ಸೋಂಬೇರಿಗಳಾಗಿರುವುದು ಕೆಟ್ಟ ಪುರುಷನ ಮೊದಲ ಲಕ್ಷಣ.

ಯಾವ ಗಂಡಸರು ಪ್ರತಿ ಮಾತಿಗೂ ಬೈಗುಳಗಳನ್ನು ಸೇರಿಸಿ ವಾದ ಮಾಡಿ ಬಾಯಿ ಮುಚ್ಚಿಸುತ್ತಾರೋ ಹಾಗೂ ವಾದವನ್ನು ಗೆಲ್ಲುತ್ತಾರೋ ಅವರು ಸಹ ಕೆಟ್ಟ ಪುರುಷರೇ. ಯಾವ ಗಂಡಸರು ತಂದೆ ತಾಯಿಯನ್ನು ಗೌರವಿಸುವುದಿಲ್ಲ ಹಾಗೂ ಮಡದಿಯನ್ನು ಗೌರವಿಸುವುದಿಲ್ಲ, ಸಾರಾಯಿ ಕುಡಿದು ಬಂದು ಅವರಿಗೆ ತೊಂದರೆ ಕೊಡುತ್ತಾರೆ ಅವರೆಲ್ಲಾ ದರಿದ್ರ ಪುರುಷರೇ. ಇತರರ ಮುಂದೆ ಹೆಂಡತಿಗೆ ಗೌರವ ಕೊಡದೆ ಇರುವುದು, ಹೆಂಡತಿಯ ಪ್ರತಿ ಕೆಲಸದಲ್ಲೂ, ಪ್ರತಿ ಮಾತಿನಲ್ಲೂ ತಪ್ಪು ಹುಡುಕುವುದು ದುಷ್ಟತನದ ಲಕ್ಷಣವಾಗಿದೆ.

ಆರ್ಥಿಕ ಸ್ವಾತಂತ್ರ್ಯವಿಲ್ಲದೆ ಪ್ರತಿ ಖರ್ಚಿಗೂ ಬೆಳೆದ ಮೇಲೂ ಕೂಡ ಕುಟುಂಬದವರನ್ನೇ ಅವಲಂಬಿಸುವುದು ಜೊತೆಗೆ ದುಡಿದರೂ ಕೂಡ ಅದನ್ನು ಕುಟುಂಬ ನಿರ್ವಹಣೆಗೆ ನೀಡದೆ ಕುಡಿದು ಮೋಜು-ಮಸ್ತಿ ಮಾಡಿ ಊರು ತಿರುಗಲು ಖರ್ಚು ಮಾಡುವುದು ಇದು ಕೂಡ ಜವಾಬ್ದಾರಿ ಇಲ್ಲದ ಕೆಟ್ಟ ವ್ಯಕ್ತಿಯ ಲಕ್ಷಣ.

ತಡವಾಗಿ ಮಲಗುವುದು, ತಡವಾಗಿ ಏಳುವುದು, ತಡವಾಗಿ ಊಟ ಮಾಡುವುದು ಧೂಮಪಾನ ಮದ್ಯಪಾನ ತಂಬಾಕು ಸೇವನೆ ಜೂಜಾಡುವುದು ಈ ಪ್ರತಿ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಳ್ಳುವವರು ಕೂಡ ಕೆಟ್ಟ ಪುರುಷರಾಗಿರುತ್ತಾರೆ. ಇಂತಹ ಗುಣಗಳು ಇದ್ದವರು ಆದಷ್ಟು ಬೇಗ ತಮ್ಮ ತಪ್ಪನ್ನು ಮನವರಿಕೆ ಮಾಡಿಕೊಂಡು ಬದಲಾಗಲಿ ಎನ್ನುವುದಷ್ಟೇ ಈ ಲೇಖನದ ಆಶಯ.