Home Blog Page 188

ಫ್ರಿಡ್ಜ್ ಹೊಸದರಂತೆ ಇರಬೇಕು, ಬಹಳ ದಿನ ಬಾಳಿಕೆ ಬರಬೇಕು, ರಿಪೇರಿಗೆ ಬರಬಾರದು ಅಂದ್ರೆ ಈ ಉಪಾಯ ಮಾಡಿ ಸಾಕು.!

ಈಗಿನ ಕಾಲದಲ್ಲಿ ಯಾರಿಗೂ ಕೂಡ ಪ್ರತಿದಿನವೂ ಕೂಡ ಮಾರ್ಕೆಟ್ಗೆ ಹೋಗಿ ತರಕಾರಿ ತರುವಷ್ಟು ಸಮಯ ಯಾರಿಗೂ ಇಲ್ಲ. ಜೊತೆಗೆ ಕೆಲವೊಂದು ವಸ್ತುಗಳನ್ನು ಒಂದೇ ಬಾರಿಗೆ ಪೂರ್ತಿಯಾಗಿ ಉಪಯೋಗಿಸಲು ಆಗುವುದಿಲ್ಲ. ಹೀಗಾಗಿ ಅವುಗಳು ಬಹಳ ದಿನದವರೆಗೆ ಫ್ರೆಶ್ ಆಗಿ ಇರಬೇಕು ಎನ್ನುವ ಕಾರಣಕ್ಕೆ ನಾವೆಲ್ಲರೂ ಫ್ರಿಜ್ ಗಳ ಮೊರೆ ಹೋಗುತ್ತೇವೆ. ಆದರೆ ಅವುಗಳನ್ನು ಬಹಳ ದಿನ ಬಾಳಿಕೆ ಬರಲು ಸರಿಯಾಗಿ ಮೈನ್ಟೈನ್ ಮಾಡಬೇಕು. ಹಾಗಾಗಿ ಫ್ರಿಡ್ಜ್ ಗಳ ಬಾಳಿಕೆ ಹೆಚ್ಚಿಸಲು ನಾವು ಕೆಲ ಟಿಪ್ಸ್ ಗಳನ್ನು ಕೊಡುತ್ತೇವೆ. ಇವುಗಳನ್ನು ಫಾಲೋ ಮಾಡಿ.

● ಫ್ರಿಡ್ಜ್ ಗಳ ಗ್ಯಾಸ್ಕೆಟ್ ಸ್ಥಿತಿಯು ಫ್ರಿಡ್ಜ್ ಗಳ ಕಾರ್ಯನಿರ್ವಹಣೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಂದು ವೇಳೆ ಗ್ಯಾಸ್ಕೆಟ್ ಹಾಳಾಗಿದ್ದರೆ ಹೆಚ್ಚು ಹೊತ್ತು ಫ್ರಿಡ್ಜ್ ಕೂಲಿಂಗ್ ಇರುವುದಿಲ್ಲ, ಒಳಗಿರುವ ಪದಾರ್ಥಗಳು ಕೆಟ್ಟು ಹೋಗುತ್ತಿರುತ್ತವೆ ಹಾಗಾಗಿ ಗ್ಯಾಸ್ಕೆಟ್ ಸರಿಯಾಗಿದೆಯಾ ಎಂದು ಚೆಕ್ ಮಾಡಿ.

ಒಂದು ಪೇಪರ್ ಅನ್ನು ಅರ್ಧ ಫ್ರಿಡ್ಜ್ ಒಳಗಿರುವಂತೆ ಅರ್ಧ ಹೊರಗಿರುವಂತೆ ಮಾಡಿ ನಿಧಾನವಾಗಿ ಅದನ್ನು ಎಳೆದು ನೋಡಿದಾಗ ಪೇಪರ್ ಹೊರಗೆ ಬಂದರೆ ಅಥವಾ ಮೂವ್ ಆಗುತ್ತಿದ್ದರೆ ಗ್ಯಾಸ್ಕೆಟ್ ಸಡಿಲವಾಗಿದೆ ಎಂದರ್ಥ. ಆಗ ಗ್ಯಾಸ್ಕೆಟ್ ಬದಲಾಯಿಸಿ ಮತ್ತು ಗ್ಯಾಸ್ಕೆಟ್ ಅನ್ನು ಆಗಾಗ ಕ್ಲೀನ್ ಆಗಿ ಇಟ್ಟುಕೊಳ್ಳುತ್ತಿರಿ. ಇದರಿಂದ ಫ್ರಿಡ್ಜ್ ದೀರ್ಘಕಾಲ ಬಾಳಿಕೆಗೆ ಬರುತ್ತದೆ.

● ಕಂಡೆನ್ಸರ್ ಗಳನ್ನು ಕೂಡ ಮೈನ್ಟೈನ್ ಮಾಡೋದು ಮುಖ್ಯ. ಫ್ರಿಡ್ಜ್ ಹಿಂದೆಗಡೆ ಕಂಡೆನ್ಸರ್ ಇರುತ್ತದೆ ಅದರ ಮೇಲೆ ಧೂಳು, ಕೂದಲು ಬೀಳುತ್ತಿರುತ್ತದೆ. ಇದರಿಂದಲೂ ಕೂಲಿಂಗ್ ಕಡಿಮೆಯಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಫ್ರಿಡ್ಜ್ ಆಫ್ ಮಾಡಿ ಒಣ ಬಟ್ಟೆಯಿಂದ ಇವುಗಳನ್ನು ನೀಟಾಗಿ ಕ್ಲೀನ್ ಮಾಡಿಕೊಳ್ಳುವುದರಿಂದ ಫ್ರಿಜ್ ಸರಿಯಾಗಿ ಕೆಲಸ ಮಾಡುತ್ತದೆ.

● ಸೀಸನ್ ಗಳಿಗೆ ತಕ್ಕ ಹಾಗೆ ಫ್ರಿಡ್ಜ್ ಟೆಂಪರೇಚರ್ ಸೆಟ್ ಮಾಡುವುದು ಮುಖ್ಯ. ಇದರಿಂದ ಸರಿಯಾದ ಕೂಲಿಂಗಲ್ಲಿ ಫ್ರಿಡ್ಜ್ ಕೆಲಸ ಮಾಡುತ್ತದೆ.
● ಫ್ರಿಡ್ಜ್ ಒಳಗಿರುವ ಏರ್ ವೆಂಟ್ ಮುಂದೆ ಏನನ್ನು ಇಡಬಾರದು, ಏರ್ ಮೆಂಟ್ ಮುಂದೆ ಪದಾರ್ಥಗಳು ಹೆಚ್ಚಿಗೆ ಇಟ್ಟಷ್ಟು ಕೂಲಿಂಗ್ ಕಡಿಮೆ ಆಗಿ ಕೂಲಿಂಗ್ ಹೆಚ್ಚು ಮಾಡುವುದಕ್ಕಾಗಿ ಹೆಚ್ಚು ಪವರ್ ಬಳಕೆ ಆಗುತ್ತದೆ ಇದರ ಬಗ್ಗೆ ಗಮನ ಕೊಡಿ.

● ಆಗಾಗ ಫ್ರಿಜ್ ಗಳನ್ನ ಡೀಪ್ ರೋಸ್ಟ್ ಮಾಡಿ.
● ಗೋಡೆ ಮತ್ತು ಫ್ರಿಡ್ಜ್ ನ ನಡುವೆ ಸಾಕಷ್ಟು ಅಂತರ ಇರಬೇಕು. ಗೋಡೆಗೆ ಸೇರಿಸಿ ಫ್ರಿಜ್ ಇಡುವುದರಿಂದ ಅದರ ಉಷ್ಣಾಂಶದಲ್ಲಿ ವ್ಯತ್ಯಾಸವಾಗುತ್ತದೆ. ಫ್ರಿಡ್ಜ್ ನಲ್ಲಿ ಉತ್ಪತ್ತಿಯಾದ ಉಷ್ಣಾಂಶ ಹೊರ ಹೋಗಬೇಕು ಎಂದರೆ ಗೋಡೆ ಮತ್ತು ಫ್ರಿಡ್ಜ್ ನಡುವೆ ಗ್ಯಾಪ್ ಇರಬೇಕು. ಇಲ್ಲವಾದಲ್ಲಿ ಕೂಲಿಂಗ್ ಕಡಿಮೆ ಯಾಗುತ್ತದೆ.

● ಫ್ರಿಜ್ ಅಲ್ಲಿ ಇಡುವ ತರಕಾರಿಗಳು ಹಾಗೂ ಹಣ್ಣುಗಳು ಯಾವಾಗಲೂ ಫ್ರೆಶ್ ಆಗಿರಬೇಕು ಮತ್ತು ಫ್ರಿಡ್ಜಿ ನಲ್ಲಿ ಕೆಟ್ಟ ವಾಸನೆ ಹೋಗಬೇಕು ಎಂದರೆ ತರಕಾರಿ ಮತ್ತು ಹಣ್ಣುಗಳು ಇಡುವುದರ ಜೊತೆ ಒಂದು ಚಮಚ ಉಪ್ಪನ್ನು ಒಂದು ಕಪ್ ಒಳಗೆ ಹಾಕಿ ಇಟ್ಟುಬಿಡಿ. ಈ ಟಿಪ್ಸ್ ಫಾಲೋ ಮಾಡಿದರೆ ಹೆಚ್ಚು ದಿನ ವೆಜಿಟೇಬಲ್ಸ್ ಫ್ರೆಶ್ ಆಗಿರುತ್ತದೆ. ಫ್ರಿಜ್ ಅಲ್ಲಿರುವ ಬ್ಯಾಡ್ ಸ್ಮೆಲ್ ಕೂಡ ಹೋಗುತ್ತದೆ. ಮರೆಯದೇ 15 ದಿನಕ್ಕೊಮ್ಮೆ ಈ ಉಪ್ಪನ್ನು ಚೇಂಜ್ ಮಾಡುತ್ತಿರಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ಹೆಚ್ಚು ಜನರ ಜೊತೆ ಹಂಚಿಕೊಳ್ಳಿ.

ಗೃಹಿಣಿಯರಿಗೆ ಅಡುಗೆ ಮಾಡುವಾಗ ಅನುಕೂಲ ಮಾಡಿಕೊಡುವ ಸಲಹೆಗಳು ಇವು.! ಇವನ್ನ ಪಾಲಿಸಿದ್ರೆ ಅರ್ಧ ಕೆಲಸ ಬೇಗ ಮುಗಿದಂತೆ

 

ಮಸಾಲೆ ದೋಸೆ ಮಾಡುವಾಗ ಸ್ವಲ್ಪ ತೊಗರಿ ಬೇಳೆಯನ್ನು ನೆನಿಸಿ, ಸೇರಿಸಿ ರುಬ್ಬುವುದರಿಂದ ದೋಸೆಯ ಬಣ್ಣ ಚೆನ್ನಾಗಿರುತ್ತದೆ. ದೋಸೆ ಅಕ್ಕಿ ರುಬ್ಬುವಾಗ ಸ್ವಲ್ಪ ಹೆಸರುಬೇಳೆಯನ್ನು ಸೇರಿಸಿ ರುಬ್ಬುವುದರಿಂದ ದೋಸೆ ಮೃದುವಾಗಿ ಬರುತ್ತದೆ. ದೋಸೆ ಹಿಟ್ಟು ಹುಳಿಯಾಗಿದ್ದರೆ ಅದಕ್ಕೆ ಒಂದು ಲೀಟರ್ ಅಷ್ಟು ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಮೇಲಿನ ನೀರನ್ನು ಬಸಿದು ಕೆಳಗೆ ಉಳಿದಿರುವ ಹಿಟ್ಟನ್ನು ಉಪಯೋಗಿಸುವುದರಿಂದ ಹುಳಿ ಕಡಿಮೆ ಆಗುತ್ತದೆ.

ಮಸಾಲ ದೋಸೆ ಗರಿಗರಿಯಾಗಿ ಬರಬೇಕು ಎಂದರೆ ದೋಸೆ ಹಾಕುವಾಗ ಹಿಟ್ಟಿಗೆ ಅಕ್ಕಿ ಹಿಟ್ಟು ಮಿಕ್ಸ್ ಮಾಡಿ ಹಾಕಬೇಕು. ದೋಸೆಯ ಕಾವಲಿಯನ್ನು ಬಳಪದ ಕಲ್ಲಿನಿಂದ ಉಜ್ಜಿದರೆ ದೋಸೆಯು ಸ್ವಲ್ಪವೂ ಹರಿಯದೆ ಬರುತ್ತದೆ. ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಅದನ್ನು ಕಾವಲಿ ಮೇಲೆ ಉಜ್ಜಿ ದೋಸೆ ಹಾಕುವುದರಿಂದ ದೋಸೆ ಅಂಟಿಕೊಳ್ಳದೆ ಬರುತ್ತದೆ.

ದೋಸೆ ಮಾಡುವಾಗ ಉದ್ದಿನಬೇಳೆ ಬದಲು ಕಡ್ಲೆಪುರಿಯನ್ನು ಕೂಡ ಉಪಯೋಗಿಸಬಹುದು. ದೋಸೆ ಹಂಚಿಗೆ ಕಚ್ಚಿಕೊಳ್ಳುತ್ತಿದ್ದರೆ ವ್ಯಾಕ್ಸ್ ಪೇಪರ್ ಇಂದ ಉಜ್ಜಿದರೆ ಸರಿ ಹೋಗುತ್ತದೆ. ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟಿನ ಜೊತೆಗೆ ಸ್ವಲ್ಪ ಅಕ್ಕಿ ಹಿಟ್ಟು ಮಿಕ್ಸ್ ಮಾಡಿ ಗಟ್ಟಿಯಾಗಿ ಕಲಸಿ ಪೂರಿ ಮಾಡಿದರೆ ಅವು ದಪ್ಪವಾಗಿ ಉಬ್ಬಿ ಗರಿಗರಿಯಾಗಿ ಬರುತ್ತದೆ. ಪೂರಿ ಹಿಟ್ಟನ್ನು ಕಲಸುವಾಗ ಕಾಯಿಸಿದ ಎಣ್ಣೆಯನ್ನು ಹಾಕಿ ಕಲಸಿದರೆ ಪೂರಿ ಗರಿಗರಿಯಾಗಿ ಬರುವುದರ ಜೊತೆಗೆ ರುಚಿ ಹೆಚ್ಚಾಗುತ್ತದೆ.

ಪೂರಿ ರುಚಿಯಾಗಿರಬೇಕು ಮೃದುವಾಗಿ ಬರಬೇಕು ಎಂದರೆ ಮೈದಾಹಿಟ್ಟು ಕಲಸುವಾಗ ಮೊಸರನ್ನು ಸೇರಿಸಿ ಕಲಸಬೇಕು. ಚಪಾತಿ ಹಿಟ್ಟು ಕಲಸುವಾಗ ನೀರಿನ ಜೊತೆ ಹಾಲು ಹಾಕಿಕೊಂಡು ಕಲಸಿದರೆ ಚಪಾತಿ ಮೃದುವಾಗುತ್ತದೆ ಹಾಗೂ ಪುಷ್ಟಿ ಆಗುತ್ತದೆ. ಬೆಂದರೊಟ್ಟಿಗಳನ್ನು ಮೃದುವಾಗಿ ಇರಿಸಬೇಕು ಎಂದರೆ ಅವುಗಳನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಡಬ್ಬದಲ್ಲಿ ಇಡಬೇಕು.

ಅನ್ನ ಮಾಡುವಾಗ ಪಾತ್ರೆಯ ಒಳಗಿನ ಅಂಚಿನಿಂದ 3-4 ಅಂಗುಲ ಜಿಡ್ಡು ಸವರಿದರೆ ಅನ್ನ ಉಕ್ಕುವುದಿಲ್ಲ. ಅಕ್ಕಿ ಬೆಂದು ಅನ್ನ ಆಗುವಾಗ ಅಕ್ಕಿಯ ಮೂರರಷ್ಟು ಆಗುತ್ತದೆ ಹಾಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಅನ್ನ ಮಾಡಲು ಪಾತ್ರೆ ಇಡಬೇಕು. ಅಲ್ಯುಮಿನಿಯಂ ಪಾತ್ರೆಯಲ್ಲಿ ಅನ್ನ ಮಾಡುವಾಗ ಒಂದೆರಡು ಹನಿ ವಿನೇಗರ್ ಹಾಕಿದರೆ ಪಾತ್ರೆ ಕಪ್ಪಾಗುವುದಿಲ್ಲ.

ಹೊಸ ಅಕ್ಕಿಯಲ್ಲಿ ಅನ್ನ ಮಾಡುವಾಗ ನೀರು ಕುದಿದ ಮೇಲೆ ಅಕ್ಕಿ ಹಾಕಿ ಒಂದೆರಡು ಕುದಿ ಬಂದ ಮೇಲೆ ಉರಿ ಕಡಿಮೆ ಮಾಡಿ ಪಾತ್ರೆಗೆ ಬಾಯಿಯನ್ನು ಮುಚ್ಚಿದರೆ ಅನ್ನ ಉದುರು ಉದುರಾಗಿ ಆಗುತ್ತದೆ. ಒಂದು ತುಂಡು ಬ್ರೆಡ್ ಪೀಸನ್ನು ಅನ್ನದ ಮೇಲೆ ಇಟ್ಟರೆ ತೇವಾಂಶವನ್ನು ಬ್ರೆಡ್ ಹೀರಿಕೊಳ್ಳುವುದರಿಂದ ಅನ್ನ ಉದುರು ಉದುರಾಗಿ ಆಗುತ್ತದೆ.

ಟೀ ಪುಡಿಯೊಂದಿಗೆ ಚಿಟಿಕೆ ಉಪ್ಪು ಚಿಟಿಕೆ ದಾಲ್ಚಿನ್ನಿ ಹಾಗೂ ಚಿಟಿಕೆ ಏಲಕ್ಕಿ ಸೇರಿಸಿ ಟೀ ಮಾಡಿದರೆ ಒಳ್ಳೆಯ ಸುವಾಸನೆ ಬರುತ್ತದೆ. ಟೀ ತಯಾರಿಸಿದ ಮೇಲೆ ಒಂದು ಲೋಟ ಟೀಗೆ ಒಂದು ಹನಿ ವಿನೆಗರ್ ಎಸೆನ್ಸ್ ಸೇರಿಸಿದರೆ ಒಳ್ಳೆಯ ರುಚಿ ಹಾಗೂ ಘಮ ಬರುತ್ತದೆ. ಕಾಫಿ ಮಾಡಿದ ಪಾತ್ರೆಯಲ್ಲಿ ಟೀ ಮಾಡಿದರೆ ಬಹಳ ರುಚಿ ಇರುತ್ತದೆ. ಒಂದು ಪಾತ್ರೆಯಲ್ಲಿ ತಣ್ಣೀರು ಹಾಗೂ ಟೀಸೊಪ್ಪು ಹಾಕಿ ಮುಚ್ಚಿ ಬಿಸಿಲಿನಲ್ಲಿ ಹಲವಾರು ಗಂಟೆಗಳ ಕಾಲ ಇಟ್ಟರೆ ಒಳ್ಳೆಯ ಐಸ್ ಟೀ ತಯಾರಾಗುತ್ತದೆ.

ಪ್ರೆಷರ್ ಕುಕ್ಕರ್ ನಲ್ಲಿ ಇಡ್ಲಿಗಳನ್ನು ಬೇಯಿಸುವಾಗ ಒಂದು ಬಟ್ಟಲನ್ನು ಬೋರಲು ಹಾಕುವುದರಿಂದ ಇಡ್ಲಿಗಳು ಮೆತ್ತೆಗೆ ಬರುತ್ತವೆ ಮತ್ತು ಇಡ್ಲಿ ಪಾತ್ರೆಯಲ್ಲಿ ಮಾಡಿದಂತೆ ಉಬ್ಬುತ್ತವೆ. ಇಡ್ಲಿಯನ್ನು ಅಡ್ಡವಾಗಿ ಕುಯ್ದು ಮಧ್ಯದಲ್ಲಿ ಚಟ್ನಿ ಚಟ್ನಿ ಪುಡಿ ಪಲ್ಯ ಜಾಮ್ ಅಥವಾ ಬೆಣ್ಣೆ ಇಟ್ಟು ಸ್ಯಾಂಡ್ ವಿಚ್ ತರಹ ಮಾಡಿ ಉಪಯೋಗಿಸಬಹುದು.

ATM ಪಾಸ್ವರ್ಡ್ ಮರೆತು ಹೋಗಿದ್ದೀರಾ.? ಈ ವಿಧಾನದಿಂದ ಸುಲಭವಾಗಿ ರಿಸೆಟ್ ಮಾಡಿಕೊಳ್ಳಿ.!

 

ಇತ್ತೀಚಿನ ದಿನಗಳಲ್ಲಿ ಪಾಸ್ವರ್ಡ್ ಅಥವಾ ಪಿನ್ ಕೋಡ್ ಗಳನ್ನು ನಾವು ಹೆಚ್ಚಾಗಿ ಬಳಸುತ್ತಿದ್ದೇವೆ. ಯಾಕೆಂದರೆ ನಮ್ಮ ಕೈಯಲ್ಲಿರುವ ಮೊಬೈಲ್ ಅನ್ನು ಅನ್ಲಾಕ್ ಮಾಡುವುದರಿಂದ ಹಿಡಿದು ನಮ್ಮ ಸಿಸ್ಟಮ್ ನನ್ನ ಷಟ್ ಆನ್ ಮಾಡುವ ತನಕ ಹೀಗೆ ಪ್ರತಿಯೊಂದು ವಿಚಾರಕ್ಕೂ ಕೂಡ ನಮಗೆ ಪಿನ್ ಕೋಡ್ ಹಾಗೂ ಪಾಸ್ವರ್ಡ್ ಬೇಕು ಬ್ಯಾಂಕಿಂಗ್ ಕ್ಷೇತ್ರದಲ್ಲೂ ಕೂಡ ಪಿನ್ ಕೋಡ್ ಎನ್ನುವುದು ಹೆಚ್ಚು ಬಳಕೆಯಾಗುತ್ತಿದೆ.

ಯಾಕೆಂದರೆ ಇತ್ತೀಚೆಗೆ ನಾವು ನಮ್ಮ ಖಾತೆಗಳಲ್ಲಿರುವ ಹಣವನ್ನು ಪಡೆಯಲು ಬ್ಯಾಂಕ್ ಶಾಖೆಗೆ ಹೋಗುವುದು ಬಹಳ ಕಡಿಮೆ. ಬ್ಯಾಂಕ್ ಗಳು ನೀಡಿರುವ ATM ಕಾರ್ಡ್ ಗಳ ಅನುಕೂಲತೆ ಮಾಡಿ ಕೊಟ್ಟಿರುವುದರಿಂದ ಅವುಗಳ ಪಾಸ್ವರ್ಡ್ ಅನ್ನು ಹಾಕಿ ATM ಮಿಷನ್ಗಳಲ್ಲಿ ಹಣವನ್ನು ಪಡೆಯುತ್ತೇವೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕೆಂಬ ಅಂಶ ಏನೆಂದರೆ, ಆ ಕಾರ್ಡಿಗೆ ಅದೇ ಪಿನ್ ಕೋಡ್ ಅನ್ನು ಹಾಕಿದಾಗ ಮಾತ್ರ ನಮಗೆ ಹಣ ಸಿಗುವುದು ಎನ್ನುವುದು.

ಸಮಸ್ಯೆ ಏನೆಂದರೆ ನಾವು ಒಂದು ATM ಕಾರ್ಡ್ ಹೊಂದಿದ್ದರೆ ಒಂದು ಪಾಸ್ವರ್ಡ್ ಅನ್ನು ನೆನಪು ಇಟ್ಟುಕೊಳ್ಳಬಹುದು. ಆದರೆ ಈಗೀಗ ಪ್ರತಿಯೊಬ್ಬರ ಬಳಿಯೂ ಎರಡು ಅಥವಾ ಎರಡಕ್ಕಿಂತ ಹೆಚ್ಚು ಹೀಗೆ ATM ಕಾರ್ಡ್ ಗಳು ಇರುತ್ತದೆ. ಎಲ್ಲಾ ಪಾಸ್ವರ್ಡ್ ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸ್ವಲ್ಪ ಕಷ್ಟವೇ.

ಯಾವುದಾದರೂ ಒಂದು ATM ಕಾರ್ಡನ್ನು ಬಹಳ ದಿನದವರೆಗೆ ಬಳಸದೆ ಇದ್ದಾಗ ನಾವು ಈಸಿಯಾಗಿ ಅದರ ಪಿನ್ ಕೋಡ್ ಅಥವಾ ಪಾಸ್ವರ್ಡ್ ಅನ್ನು ಮರೆತು ಬಿಡುತ್ತೇವೆ. ಅಂತಹ ಸಮಯದಲ್ಲಿ ಹೋಗಿ ಹಲವು ಬಾರಿ ನಾವು ಪ್ರಯತ್ನಗಳನ್ನು ಮಾಡಿದರೆ ಹಣ ನಮಗೆ ಬರುವುದು ಇಲ್ಲ ಮತ್ತು ನಮ್ಮ ATM ಕಾರ್ಡ್ ಕೂಡ ಬ್ಲಾಕ್ ಆಗಬಹುದು.

ಕೆಲವೊಮ್ಮೆ ನಮಗೆ ಪಿನ್ ಕೋಡ್ ನೆನಪಿದ್ದರೂ ಸಹ ಆಗಾಗ ಅವುಗಳನ್ನು ಬದಲಾಯಿಸುವುದು ಅನಿವಾರ್ಯ ಹಾಗೂ ಕ್ಷೇಮ ಕೂಡ. ಇಂತಹ ಸಮಯಗಳಲ್ಲಿ ಕ್ಷಣದಲ್ಲಿಯೇ ನಮ್ಮ ATM ಕಾರ್ಡ್ ಅನ್ನು ಬದಲಾಯಿಸುವ ಅನುಕೂಲತೆಯನ್ನು ಬ್ಯಾಂಕ್ ಗಳು ಮಾಡಿಕೊಟ್ಟಿವೆ. ಹೀಗೆ ಮಾಡಲು ನಮ್ಮ ಮೊಬೈಲ್ ನಂಬರ್ ಗಳು ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಲಿಂಕ್ ಆಗಿರಲೇಬೇಕು. ಮೊಬೈಲ್ ಮತ್ತು ATM ಕಾರ್ಡ್ ನಿಮ್ಮ ಕೈಲಿದ್ದರೆ ನೀವು ATM ಮೆಷಿನ್ ಗಳ ಮೂಲಕವೇ ನಿಮ್ಮ ಪಿನ್ ಕೋಡ್ ಅನ್ನು ಬದಲಾಯಿಸಿಕೊಳ್ಳಬಹುದು.

● ಮೊದಲಿಗೆ ನಿಮ್ಮ ಹತ್ತಿರದಲ್ಲಿರುವ ಯಾವುದಾದರೂ ನಿಮ್ಮ ಬ್ಯಾಂಕ್ ಖಾತೆಯ ATM ಗೆ ಭೇಟಿ ಕೊಡಿ.
● ಬ್ಯಾಂಕಿನಿಂದ ಪಡೆದಿರುವ ATM ಕಾರ್ಡನ್ನು ಮಿಷನ್ ಗೆ ಹಾಕಿ ಬ್ಯಾಂಕಿಂಗ್ ಎನ್ನುವ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ.
● ಜನರೇಟ್ ಪಿನ್ ಅಥವಾ ಪಿನ್ ರಿಸೆಟ್ ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿದಾಗ ನಿಮ್ಮ ಅಕೌಂಟ್ ನಂಬರ್ ಅನ್ನು ಕೇಳುತ್ತದೆ.

● ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ. ಹಾಗೆ ನಿಮ್ಮ ಮೊಬೈಲ್ ನಂಬರ್ ಕೇಳುತ್ತದೆ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಅನ್ನು ಕೂಡ ಎಂಟ್ರಿ ಮಾಡಿ.
● ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ. OTPಯನ್ನು ಎಂಟ್ರಿ ಮಾಡಿದ ನಂತರ ನಿಮ್ಮ ಪಿನ್ ಕೋಡ್ ಅನ್ನು ಬದಲಾಯಿಸಲು ಕೇಳುತ್ತದೆ ಆಗ ನಿಮಗೆ ಇಷ್ಟವಾದ ಯಾವುದಾದರೂ ನಾಲ್ಕು ಸಂಖ್ಯೆಯನ್ನು ನಿಮ್ಮ ಪಿನ್ ಕೋಡ್ ಆಗಿ ಸೆಟ್ ಮಾಡಿಕೊಳ್ಳಿ.

ಕೇವಲ 4 ಲಕ್ಷದ ಬಜೆಟ್ ನಲ್ಲಿ ಕಟ್ಟಿರುವ ಈ RCC ಮನೆ ಒಮ್ಮೆ ನೋಡಿ. ಕಡಿಮೆ ಬಜೆಟ್ ನಲ್ಲಿ ಮನೆ ಕಟ್ಟಲು ಸಾಧ್ಯವಿದೆಯಾ ಎಂದು ಅನುಮಾನ ಪಡುವವರು ಒಮ್ಮೆ ಇದನ್ನು ಓದಿ.!

 

ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಅರಮನೆಯಂತಹ ಸಕಲ ಸೌಲಭ್ಯಗಳು ಇರುವ ಮನೆಗಳು ಹಾಗೂ ನೋಡಿದವರ ಕಣ್ಣನ್ನು ಮನಸೂರೆ ಗೊಳಿಸುವಂತಹ ಮನಮೋಹಕ ವಿನ್ಯಾಸದ ಮನೆಗಳು ಯಾರಿಗೆ ಇಷ್ಟ ಇರುವುದಿಲ್ಲ ಆದರೆ ಎಲ್ಲರಿಗೂ ಕೂಡ ಅಷ್ಟು ಬಜೆಟ್ ಅಲ್ಲಿ ಮನೆ ಕಟ್ಟಲು ಆಗುವುದಿಲ್ಲ.

ಅದರಲ್ಲೂ ಭಾರತದಂತಹ ದೇಶದಲ್ಲಿ ಬಡವರು ಮತ್ತು ಸಾಮಾನ್ಯ ವರ್ಗದವರೇ ಹೆಚ್ಚಾಗಿರುವುದರಿಂದ ಮೂಲಭೂತ ಅವಶ್ಯಕತೆ ಅದ ಒಂದು ಸ್ವಂತ ಮನೆ ಇದ್ದರೆ ಸಾಕು ಅದರಲ್ಲೂ ಕೂಡ ಸಾಧ್ಯವಾದಷ್ಟು ಕಡಿಮೆ ಬಜೆಟ್ಟಿಗೆ ಇದ್ದರೆ ಸಾಕು ಎಂದು ಆಸೆಪಡುವವರೇ ಹೆಚ್ಚು. ಈಗಿನ ಕಾಲದಲ್ಲಿ RCC ಛಾವಣಿಯ ಒಂದು ಚಿಕ್ಕ ಮನೆ ಕಟ್ಟಬೇಕೆಂದರು ಕನಿಷ್ಠ ಏಳರಿಂದ ಎಂಟು ಲಕ್ಷ ಬಜೆಟ್ ಬೇಕೆ ಬೇಕು.

ಆದರೆ ಕೆಲ ಅಡ್ಜಸ್ಟ್ಮೆಂಟ್ ಗಳನ್ನು ಮಾಡಿಕೊಂಡರೆ ಅದರ ಅರ್ಧ ಖರ್ಚಿನಲ್ಲಿ ಕೂಡ ಮನೆ ಕಟ್ಟಬಹುದು. ಮನೆ ಕಟ್ಟುವಾಗ ಈ ನಿಯಮಗಳನ್ನು ಪಾಲಿಸಿದರೆ ನೀವು ನಾಲ್ಕೇ ಲಕ್ಷದಲ್ಲಿ ಕೂಡ RCC ಮನೆ ಕಟ್ಟಬಹುದು.
● ನೀವು ಈ ಬಜೆಟ್ ಅಲ್ಲಿ 450sq.ft 20:20 ಮನೆ ಕಟ್ಟಬಹುದು ಅಷ್ಟೇ
● ಟೆರೇಸ್ ಗೆ ಹೋಗಲು ಸಿವಿಲ್ ಆಗಿ ಮಾಡುವ ಮೆಟ್ಟಿಲುಗಳನ್ನ ಪೋರ್ಚನ್ನು ನಿರ್ಮಾಣ ಮಾಡಿದರೆ ಖರ್ಚು ಹೆಚ್ಚು,ಹಾಗಾಗಿ ಎಂ ಎಸ್ ಲಾಡರ್ಗಳನ್ನು ಮಾಡಿಕೊಳ್ಳಿ, ಮೆಟ್ಟಿಲು ರೀತಿಯ ಇರುವ ಫ್ಲಾಟ್ ಆಗಿರುವ ಲಾಡರ್ಗಳನ್ನು ಅಳವಡಿಸಿಕೊಳ್ಳಬಹುದು.

● ಹೊರಗಿನ ಗೋಡೆಗಳು 6 ಇಂಚಿನಲ್ಲಿ ಹಾಗೂ ಒಳಗಿನ ಗೋಡೆಗಳು 4 ಇಂಚಿನಲ್ಲಿ ಇರಬೇಕು. ಬೇಕಿದ್ದಲ್ಲಿ ಒಳಗಿನ ಗೋಡೆಗಳು ಗಟ್ಟಿಯಾಗಿರಲಿ ಎನ್ನುವ ಕಾರಣಕ್ಕೆ ಅಲ್ಲಲ್ಲಿ ಭೀಮ್ ಗಳನ್ನು ಹಾಕಿಸಬಹುದು. ಎರಡು ಕಡೆ ಪ್ಲಾಸ್ಟಿಂಗ್ ಇರುವುದರಿಂದ ಗೋಡೆಗಳು ಗಟ್ಟಿಯಾಗಿರುತ್ತವೆ.
● ಫೌಂಡೇಶನ್ ವಿಷಯಕ್ಕೆ ಬಂದಾಗ ಲೋಡ್ ಬೇರಿಂಗ್ ಸೆಕ್ಶನಲ್ಲಿ ಅಥವಾ 3 ಫೀಟ್ ಫೌಂಡೇಶನ್ ಅಲ್ಲಿ ನಿರ್ಮಿಸಬಹುದು. ಮುಂದೆ ಮನೆಯನ್ನು ಎಕ್ಸ್ಟೆಂಡ್ ಮಾಡುವ ಯೋಚನೆ ಇದ್ದರೆ 4:3:3 ಫೌಂಡೇಶನ್ ಮಾಡಿಸಿ.

● ಮೋಲ್ಡ್ ನಾಲ್ಕು ರಿಂದ ಐದು ಇಂಚು ಇದ್ದರೆ ಸಾಕು.
● PPC ಸಿಮೆಂಟ್ ಬಳಸಿ. ಉಳಿದ ಸಿಮೆಂಟ್ ರೇಟ್ ಗಿಂತ ಇದು ಕಡಿಮೆ ಇರುತ್ತದೆ ಆದರೆ ಕ್ಯೂರಿಂಗ್ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಅಷ್ಟೇ.
ಸಿಮೆಂಟ್ ರೇಟ್ ವಿಷಯದಲ್ಲಿ ನಿರ್ಲಕ್ಷ ಮಾಡುವಂತಿಲ್ಲ ಯಾಕೆಂದರೆ PPC ಸಿಮೆಂಟ್ ಬಳಸುವುದರಿಂದ ಕನಿಷ್ಠ 20,000 ಆದರೂ ಉಳಿತಾಯ ಹಾಗೆ ಆಗುತ್ತದೆ. PPC ಸಿಗದೆ ಇದ್ದ ಪಕ್ಷದಲ್ಲಿ ಜುವಾರಿ, ಪ್ರಿಯ, ಮಹಾ 43 ಗ್ರೇಡ್ ಇವುಗಳನ್ನು ಸಹ ಬಳಸಬಹುದು.

● ಹಾಲ್ ಸೈಜ್ 10:12 ಇದ್ದರೆ ಸಾಕು, ಟೈಲ್ಸ್ ಗಳನ್ನು ಆರಿಸುವಾಗ 30rs sq.ft ಬೆಲೆಯಲ್ಲಿ ತೆಗೆದುಕೊಳ್ಳಿ ಸಾಕು ಅದಕ್ಕಿಂತ ಹೆಚ್ಚಿನದನ್ನು ಆರಿಸಬೇಡಿ.
● ಹಾಲ್ ಗೆ 2:2 ಅದನ್ನು ಹೊರತುಪಡಿಸಿ ಕಿಚನ್ ಪಾರ್ಕಿಂಗ್ ಬಾತ್ರೂಮ್ ಉಳಿದ ಕಡೆಯೆಲ್ಲ 1:1 ಟೈಲ್ಸ್ ಬಳಸಿ. 1:1 ಟೈಲ್ಸ್ ಗಳ ಬೆಲೆ 20rs sq.ft ಇರುತ್ತದೆ ಅಷ್ಟೇ. ಟೈಲ್ಸ್ ಶಾಪ್ಗಳಲ್ಲಿ ಉಪಯೋಗಿಸದೆ ಇರುವ ಟೈಲ್ಸ್ ಗಳನ್ನು ಖರೀದಿಸಿದರೆ ಅದು ಹತ್ತು ರೂಪಾಯಿಗೆ ಸಿಗುತ್ತದೆ. ಅವುಗಳನ್ನು ನೀವೇ ಡಿಸೈನಾಗಿ ಜೋಡಿಸಿಕೊಂಡು ಬಾತ್ರೂಮ್ ಮುಂತಾದ ಕಡೆ ಉಪಯೋಗಿಸಿಕೊಂಡರೆ ಅದರಲ್ಲೂ ಸಹ ಖರ್ಚನ್ನು ಕಡಿಮೆ ಮಾಡಬಹುದು.

ಈ ರೀತಿ ಖರ್ಚು ಕಡಿಮೆ ಮಾಡಿ ಮನೆ ಕಟ್ಟಲು ಇನ್ನೂ ಅನೇಕ ಟೆಕ್ನಿಕ್ ಗಳು ಇವೆ. ಅವುಗಳನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಫ್ರಿಡ್ಜ್ ನಲ್ಲಿ ಎಲ್ಲಾ ಪದಾರ್ಥಗಳನ್ನು ಇಡುವಂತಿಲ್ಲ, ಫ್ರಿಡ್ಜ್ ನಲ್ಲಿ ಇಡಬಾರದ ಪದಾರ್ಥಗಳು ಯಾವುದು ಅಂತ ತಿಳಿದುಕೊಳ್ಳಿ.! ಪ್ರತಿಯೊಬ್ಬರೂ ಕೂಡ ಈ ವಿಚಾರ ತಿಳಿಯಲೇ ಬೇಕು.

 

ಫ್ರಿಡ್ಜ್ ನಲ್ಲಿ ನಾವು ತರಕಾರಿಗಳು ಹಣ್ಣುಗಳು ಮತ್ತು ಇತರೆ ಆಹಾರ ಪದಾರ್ಥಗಳನ್ನು ಸ್ಟೋರ್ ಮಾಡುತ್ತೇವೆ. ಇಂದು ಬಹುತೇಕ ಮನೆಗಳಲ್ಲಿ ಫ್ರಿಡ್ಜ್ ಇಲ್ಲ ಎಂದರೆ ಆಗುವುದೇ ಇಲ್ಲ. ಯಾಕೆಂದರೆ ಹಾಲು ಮೊಸರಿನಿಂದ ಹಿಡಿದು ಅನೇಕ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಅದು ಹೆಚ್ಚು ದಿನ ಬಾಳಿಕೆ ಬರುವಂತೆ ನೋಡಿಕೊಂಡು ಅಭ್ಯಾಸವಾಗಿ ಬಿಟ್ಟಿದೆ.

ಹೀಗಾಗಿ ಫ್ರಿಡ್ಜ್ ನಲ್ಲಿ ಇಟ್ಟ ವಸ್ತುಗಳು ಹೆಚ್ಚು ದಿನ ಬಾಳಿಕೆ ಬರುತ್ತವೆ ಎನ್ನುವ ಕಾರಣಕ್ಕಾಗಿ ಇವುಗಳಿಗೆ ಡಿಮ್ಯಾಂಡ್ ಹೆಚ್ಚು. ಆದರೆ ಎಲ್ಲಾ ಪದಾರ್ಥಗಳನ್ನು ಕೂಡ ಈ ರೀತಿ ಫ್ರಿಡ್ಜ್ ಅಲ್ಲಿ ಇಡುವಂತಿಲ್ಲ. ಕೆಲವು ಆಹಾರ ಪದಾರ್ಥಗಳನ್ನು ಫ್ರಿಜ್ನಲ್ಲಿ ಇಟ್ಟು ತಿನ್ನುವುದರಿಂದ ಆರೋಗ್ಯ ಬೇಗ ಹಾಳಾಗುತ್ತದೆ ಮತ್ತು ಕೆಲವು ಪದಾರ್ಥಗಳು ಫ್ರಿಡ್ಜಲ್ಲಿ ಇಡುವುದರಿಂದಲೇ ಬೇಗ ಹಾಳಾಗುತ್ತವೆ.

ಅವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ ಫ್ರಿಡ್ಜ್ ಅಲ್ಲಿ ಟೊಮೊಟೊ ಹಣ್ಣನ್ನು ಎಲ್ಲರೂ ಇಡುತ್ತಾರೆ. ಯಾಕೆಂದರೆ ಟಮೋಟೋ ಹಣ್ಣಿನ ಬೆಲೆ ಯಾವಾಗಲೂ ವ್ಯತ್ಯಾಸವಾಗುತ್ತಿರುತ್ತದೆ. ಬೆಲೆ ಕಡಿಮೆ ಇದ್ದಾಗ ಹೆಚ್ಚು ತಂದು ಇಡುತ್ತಾರೆ, ಬೆಲೆ ಹೆಚ್ಚಾದಾಗ ಹಾಳಾಗದೆ ಇರಲಿ ಎನ್ನುವ ಕಾರಣಕ್ಕಾಗಿ ಇಡುತ್ತಾರೆ.

ಈ ರೀತಿ ಟೊಮೇಟೊ ಹಣ್ಣನ್ನು ಫ್ರಿಡ್ಜ್ ಒಳಗೆ ಇಡುವುದರಿಂದ ಅದು ಒಳಗಿನಿಂದ ಹಾಳಾಗುತ್ತಾ ಬರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಇವುಗಳನ್ನು ಫ್ರಿಡ್ಜ್ ಒಳಗೆ ಇಡಬಾರದು. ಫ್ರಿಡ್ಜ್ ಒಳಗೆ ಇಟ್ಟ ಟೊಮೇಟೊಗಳನ್ನು ಆಹಾರಕ್ಕೆ ಬಳಸುತ್ತಿದ್ದರೆ ನಮಗೆ ಗೊತ್ತಿಲ್ಲದೆ ಕೆಟ್ಟ ಟೊಮೊಟೊವನ್ನು ತಿನ್ನುತ್ತಿದ್ದೇವೆ ಎಂದರ್ಥ. ಇದೇ ರೀತಿ ಬ್ರೆಡ್ ಗಳನ್ನು ತಿಂದರೆ ಜೀರ್ಣಕ್ರಿಯೆ ನಿಧಾನ ಆಗುತ್ತದೆ ಆದ್ದರಿಂದ ಇದನ್ನು ಕೂಡ ಫ್ರಿಜ್ಜಲ್ಲಿ ಇನ್ನು ಮುಂದೆ ಇವುಗಳನ್ನು ಇಡಬೇಡಿ.

ಬಾಳೆಹಣ್ಣು ಪ್ರತಿದಿನ ನಾವು ಸೇವಿಸುವಂತಹ ಒಂದು ಹಣ್ಣು. ಈ ಬಾಳೆಹಣ್ಣನ್ನು ಕೂಡ ಅನೇಕರು ಕೆಡಬಾರದು ಎಂದು ಫ್ರಿಡ್ಜ್ ಒಳಗೆ ಇಡುತ್ತಾರೆ. ಆದರೆ ಫ್ರಿಡ್ಜ್ ಒಳಗೆ ಇಡುವ ಬಾಳೆಹಣ್ಣು ಬೇಗ ಕಪ್ಪಾಗುತ್ತದೆ ಜೊತೆಗೆ ಇದು ಎಥಲಿನ್ ಗ್ಯಾಸ್ ಅನ್ನು ಬಿಡುಗಡೆ ಮಾಡುವುದರಿಂದ ಇದರ ಜೊತೆಗೆ ಇರುವ ಇತರೆ ಹಣ್ಣುಗಳು ಕೂಡ ಹಾಳಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಫ್ರಿಡ್ಜ್ ಒಳಗೆ ಬಾಳೆಹಣ್ಣನ್ನು ಇಡಬೇಡಿ.

ಜೇನುತುಪ್ಪವನ್ನು ಕೂಡ ಅನೇಕರು ಫ್ರಿಡ್ಜ್ ಒಳಗೆ ಇಡುತ್ತಾರೆ ಆದರೆ ಜೇನು ತುಪ್ಪ ಬಹಳ ಬೇಗ ಕೆಡುವಂತಹ ಆಹಾರ ಪದಾರ್ಥ ಅಲ್ಲ ಇದನ್ನು ಫ್ರಿಜ್ ಅಲ್ಲಿ ಇಡುವುದರಿಂದ ಇದು ಸಣ್ಣ ಸಣ್ಣ ಹರಳುಗಳಾಗಿ ಬದಲಾಗುತ್ತದೆ. ಅದರ ಬದಲು ಒಂದು ಗಾಜಿನ ಸೀಸದಲ್ಲಿ ತುಂಬಿಸಿ ಇದನ್ನು ಹೊರಗೆ ಸ್ಟೋರ್ ಮಾಡಿಟ್ಟರೆ ಹೆಚ್ಚು ಸೂಕ್ತ.

ಆಲೂಗೆಡ್ಡೆಯನ್ನು ಕೂಡ ಅನೇಕ ಫ್ರಿಡ್ಜ್ ಒಳಗೆ ಇಡುತ್ತಾರೆ. ಆದರೆ ಇದನ್ನು ಸಹ ಫ್ರಿಡ್ಜ್ ಒಳಗೆ ಇಡುವ ಅವಶ್ಯಕತೆ ಇಲ್ಲ ಯಾಕೆಂದರೆ ಫ್ರಿಡ್ಜ್ ಒಳಗೆ ಇಟ್ಟ ಆಲೂಗೆಡ್ಡೆಯ ಪಿಷ್ಟವು ಸಕ್ಕರೆ ಆಗಿ ಬದಲಾಗುತ್ತದೆ. ಅನ್ನು ಬೇಯಿಸಿದಾಗ ಅಕ್ರಿಮಲೈಡ್ ಎನ್ನುವ ರಾಸಾಯನಿಕ ಬಿಡುಗಡೆ ಆಗುತ್ತದೆ, ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಇದರ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಕೂಡ ಇರುತ್ತವೆ ಆದ್ದರಿಂದ ಆಲೂಗೆಡ್ಡೆಯನ್ನು ಫ್ರಿಡ್ಜ್ ಒಳಗೆ ಇಡುವುದನ್ನು ತಪ್ಪಿಸಿ.

ಅದೇ ರೀತಿ ಕಲ್ಲಂಗಡಿ ಹಣ್ಣುಗಳು ಹಾಗೂ ಕತ್ತರಿಸಿದ ಕಲ್ಲಂಗಡಿ ಹಣ್ಣುಗಳನ್ನು ಕೂಡ ಫ್ರಿಡ್ಜ್ ಒಳಗೆ ಇಡುತ್ತಾರೆ. ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಗಳು ಹೇರಳವಾಗಿ ಇರುತ್ತವೆ. ಇವುಗಳನ್ನು ಫ್ರಿಡ್ಜ್ ನಲ್ಲಿ ಇರುವುದರಿಂದ ಅವು ನಾಶವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇವುಗಳನ್ನು ಫ್ರಿಡ್ಜ್ ಅಲ್ಲಿ ಇಡಬೇಡಿ.

ಜೂನ್ 30 ರ ಒಳಗೆ ಈ ಕೆಲಸ ಮಾಡದಿದ್ದರೆ ರೈತರಿಗೆ PM ಕಿಸಾನ್ ಯೋಜನೆಯ 2000 ಹಣ ಬರುವುದಿಲ್ಲ.!

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಯೋಜನೆಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಚನೆಯು ದೇಶದಾದ್ಯಂತ ಎಲ್ಲಾ ರೈತರಿಗೂ ಬಹಳ ಅನುಕೂಲಕರವಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಯಲ್ಲಿ ದೇಶದ ಅರ್ಹ ರೈತ ಫಲಾನುಭವಿಗಳಿಗೆ ವಾರ್ಷಿಕವಾಗಿ 6,000ರೂ. ಸಹಾಯಧನವನ್ನು 4 ತಿಂಗಳ ಅಂತರದಲ್ಲಿ 3 ಬಾರಿ ನೀಡುತ್ತದೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ಸಹಾಯಧನವನ್ನು ಪಡೆಯುತ್ತಿರುವ ರೈತರುಗಳು ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದಲೂ ಕೂಡ 2 ಕಂತುಗಳಲ್ಲಿ 4,000 ಸಹಾಯಧನವನ್ನು ಪಡೆಯುತ್ತಿದ್ದಾರೆ. ರೈತರಿಗೆ ಕೃಷಿ ಚಟುವಟಿಕೆಗೆ ಹಣದ ಅವಶ್ಯಕತೆ ಇದ್ದಾಗ ಈ ಸಹಾಯಧನದ ಮೂಲಕ ನೆರವಾಗಿ ಕೃಷಿ ಚಟುವಟಿಕೆಯನ್ನು ಸರ್ಕಾರಗಳು ಪ್ರೋತ್ಸಾಹಿಸುತ್ತಿವೆ.

ಇದುವರೆಗೆ ಕೇಂದ್ರ ಸರ್ಕಾರದ ವತಿಯಿಂದ 13 ಕಂತಿನ ಹಣವನ್ನು ಎಲ್ಲ ರೈತರು ಪಡೆದಿದ್ದಾರೆ. ಆದರೆ ನಕಲಿ ರೈತರು ಕೂಡ ಈ ಯೋಜನೆಯಲ್ಲಿ ಸಹಾಯ ಪಡೆಯುತ್ತಿರುವುದು ಹಾಗೂ ಈ ಯೋಜನೆಗಾಗಿ ನೀಡಿರುವ ನಿರ್ದೇಶನಗಳನ್ನು ಪೂರೈಸದೇ ಇರುವುದರಿಂದ ಕಳೆದ ಬಾರಿಯಿಂದ ಅನೇಕ ರೈತರ ಹೆಸರುಗಳು ಈ ಪಟ್ಟಿಯಲ್ಲಿ ಬಿಟ್ಟು ಹೋಗಿದೆ. ಇದರಲ್ಲಿ ಮುಖ್ಯವಾಗಿ ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ಎನ್ನುವುದು ಸರ್ಕಾರದ ಆದೇಶವಾಗಿತ್ತು.

ಇ-ಕೆವೈಸಿ ಅಪ್ಡೇಟ್ ಮಾಡಿಸದ ರೈತರ ಖಾತೆಗೆ ಕಿಸಾನ್ ಸಮ್ಮಾನ್ ಹಣ ಜಮೆ ಆಗದೆ ಸ್ಥಗಿತಗೊಂಡಿದೆ. ಇನ್ನೇನು ಈ ತಿಂಗಳ ಅಂತ್ಯದಲ್ಲಿ 14ನೇ ಕಂತಿನ ಹಣವು ಕೊಡ ಕೇಂದ್ರ ಸರ್ಕಾರದಿಂದ ಜಮೆ ಆಗಲಿದೆ. ಆದ್ದರಿಂದ ಕೂಡಲೇ ರೈತರು ತಮ್ಮ ಇ-ಕೆವೈಸಿ ಅಪ್ಡೇಟ್ ಆಗಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು, ಒಂದು ವೇಳೆ ಅಪ್ಡೇಟ್ ಆಗದೇ ಇದ್ದಲ್ಲಿ ಆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ತಿಗೊಳಿಸಬೇಕು.

ಇ-ಕೆವೈಸಿ ಅಪ್ಡೇಟ್ ಮಾಡಿಸಲು ರೈತರು https://pmkisan.gov.in ಪೋರ್ಟಲ್ ಗೆ ಭೇಟಿ ಕೊಟ್ಟು ಫಾರ್ಮ್ ಫಿಲ್ ಮಾಡಬೇಕು. ಕಿಸಾನ್ ಸಮ್ಮಾನ್ ಯೋಜನೆಗೆ ರೈತರು ನೋಂದಣಿ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ದಾಖಲಿಸಿದರೆ ತಂತ್ರಾಂಶ ಆಧಾರಿತ ಪರಿಶೀಲನೆಗಾಗಿ ಯಶಸ್ವಿಯಾಗಿ ಇ-ಕೆವೈಸಿ ಅಪ್ಡೇಟ್ ಪೂರ್ತಿಯಾಗಿರುವ ಬಗ್ಗೆ ಘೋಷಣೆ ಬರುತ್ತದೆ.

ಒಂದು ವೇಳೆ ಈಗಾಗಲೇ ನಿಮ್ಮ ಇ-ಕೆವೈಸಿ ಅಪ್ಡೇಟ್ ಆಗಿದ್ದರೂ ಕೂಡ ಅದನ್ನು ಸಹ ಘೋಷಿಸುತ್ತದೆ. ಒಂದು ವೇಳೆ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಗೆ ಲಿಂಕ್ ಆಗದೆ ಇದ್ದಲ್ಲಿ ಅಥವಾ OTP ಮೊಬೈಲ್ ಗೆ ಬರದೇ ಇದ್ದಲ್ಲಿ ಅಂತವರು ನಾಗರಿಕ ಸೇವಾ ಕೇಂದ್ರಕ್ಕೆ ಹೋಗಿ ಬಯೋಮೆಟ್ರಿಕ್ ಮಾಹಿತಿಗಳನ್ನು ಕೊಟ್ಟು ಇ-ಕೆವೈಸಿ ಅಪ್ಡೇಟ್ ಮಾಡಿಸಬಹುದು.

ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ PM KISAN GOI
ಆಪ್ ಅಥವಾ Adhar face rd ಆಪ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಎಲ್ಲಾ ಹಂತಗಳನ್ನು ಕೂಡ ಎಚ್ಚರಿಕೆಯಿಂದ ಪೂರೈಸುವ ಮೂಲಕ ಅಂತಿಮವಾಗಿ ಇ-ಕೆವೈಸಿ ಅಪ್ಡೇಟ್ ಮಾಡಬಹುದು. ಇದಕ್ಕೆ ಕೊನೆ ದಿನಾಂಕ ಜುಲೈ 30 ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಗಳು ಬೇಕಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯಲು ಸೂಚಿಸಿದ್ದಾರೆ.

ಕಳೆದ 12 ತಿಂಗಳಿನಿಂದ ನೀವು ಬಳಸಿದ ವಿದ್ಯುತ್ ಚೆಕ್ ಮಾಡುವುದು ಹೇಗೆ.? ಈ ಲಿಂಕ್ ಕ್ಲಿಕ್ ಮಾಡಿ ಸಾಕು.!

 

ಗೃಹಜ್ಯೋತಿ ಯೋಜನೆಯಡಿ ಕರ್ನಾಟಕ ರಾಜ್ಯ ಸರ್ಕಾರವು ಈಗ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವರೆಗೆ ಗೃಹಬಳಕೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಈ ಗೃಹಜ್ಯೋತಿ ಯೋಜನೆಗೆ ಯಾರೆಲ್ಲಾ ಅರ್ಹರು ಯಾವ ರೀತಿ ಈ ಯೋಜನೆಯ ಫಲಾನುಭವಿಗಳಾಗಬಹುದು ಮತ್ತು ಅವರಿಗೆ ಇರುವ ನಿಬಂಧನೆಗಳು ಮತ್ತು ಮಾರ್ಗಸೂಚಿಗಳು ಏನು ಎನ್ನುವುದರ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಪತ್ರವು ಹೊರ ಬಿದ್ದಿದ್ದು.

ಜೂನ್ 18ರಿಂದ ಈ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತಿದೆ. ಈ ಆದೇಶದ ಪ್ರಕಾರ ಇರುವ ಕಂಡಿಶನ್ ಏನೆಂದರೆ ಕಳೆದ 12 ತಿಂಗಳಿನಿಂದ ಬಳಸಿದ ವಿದ್ಯುತ್ ಬಳಕೆಯ 10% ಮಾತ್ರ ಹೆಚ್ಚುವರಿಯಾಗಿ ಉಚಿತವಾಗಿ ಬಳಸಬಹುದು ಇದಕ್ಕಿಂತಲೂ ಹೆಚ್ಚಿನ ವಿದ್ಯುತ್ ಬಳಸಿದವರು ಹೆಚ್ಚುವರಿ ವಿದ್ಯುತ್ ಬಳಕೆಗೆ ಬಿಲ್ ಪಾವತಿ ಮಾಡಬೇಕು.

ಒಂದು ವೇಳೆ ಆ ಮಿತಿ 200 ಯೂನಿಟ್ ದಾಟಿದರೆ ಪೂರ್ತಿ ವಿದ್ಯುತ್ ಬಿಲ್ ಅನ್ನು ಗ್ರಾಹಕರೇ ಪಾವತಿಸಬೇಕು ಎನ್ನುವುದು ಸರ್ಕಾರದ ನಿಯಮ. ಹಾಗಾಗಿ ಈಗ ಎಲ್ಲರೂ ಕೂಡ ತಮ್ಮ ವಿದ್ಯುತ್ ಬಿಲ್ ಅನ್ನು ಗಮನಿಸುತ್ತಿದ್ದಾರೆ ಆದರೆ ಒಂದೆರಡು ತಿಂಗಳ ವಿದ್ಯುತ್ ಬಿಲ್ ಸಿಗಬಹುದು, ಕಳೆದ 12 ತಿಂಗಳುಗಳ ವಿವರ ಬೇಕು ಅದರ ಸರಾಸರಿಯನ್ನು ಲೆಕ್ಕ ತೆಗೆದುಕೊಳ್ಳಬೇಕು.

ಕಳೆದ 12 ತಿಂಗಳಿಂದ ಬಳಸಿರುವ ಯೂನಿಟ್ ಗಳ ಲೆಕ್ಕ ಹಾಕಿ ಅದನ್ನು 12 ರಿಂದ ಭಾಗಿಸಿದರೆ ಬರುವ ಸರಾಸರಿಗಿಂತ 10% ಅನ್ನು ಇನ್ನು ಮುಂದೆ ಉಚಿತವಾಗಿ ಬಳಸಬಹುದು. ಇದನ್ನು ತಿಳಿದುಕೊಳ್ಳಲು ಕಳೆದ 12 ತಿಂಗಳ ವಿದ್ಯುತ್ ಬಿಲ್ ಇರಬೇಕು ಒಂದು ವೇಳೆ ನಿಮ್ಮ ಬಳಿ ವಿದ್ಯುತ್ ಬಿಲ್ ಇಲ್ಲ ಎಂದರೆ ಆನ್ಲೈನ್
ಅಲ್ಲಿ ಇದರ ವಿವರ ಪಡೆದುಕೊಳ್ಳಬಹುದು.

● ನಿಮ್ಮ ಮನೆಗೆ ಯಾವ ವಿದ್ಯುತ್ ಕಂಪನಿಯಿಂದ ವಿದ್ಯುತ್ ಸರಬರಾಜು ಆಗುತ್ತಿದೆ ಆ ಲಿಂಕ್ ಅನ್ನು ಕ್ಲಿಕ್ ಮಾಡಿ.
HESCOM : https://hescom.karnataka.gov.in
BESCOM : https://bescom.karnataka.gov.in
GESCOM : https://gescom.karnataka.gov.in
MESCOM : https://mescom.karnataka.gov.in
● ಉದಾಹರಣೆಗೆ HESCOM ಆಗಿದ್ದರೆ ಆ ಲಿಂಕ್ ಕ್ಲಿಕ್ ಮಾಡಿದ ನಂತರ HESCOM ವಿದ್ಯುತ್ ಸರಬರಾಜು ಕಂಪನಿಯ ವೆಬ್ಸೈಟ್ ಓಪನ್ ಆಗುತ್ತದೆ.

ಆ ಪೇಜ್ ಅಲ್ಲಿ ಆನ್ಲೈನ್ ಸೇವೆಗಳು ಎನ್ನುವ ಆಪ್ಷನ್ ಸಿಗುತ್ತದೆ ಅದರಲ್ಲಿ ಆನ್ಲೈನ್ ವಿದ್ಯುತ್ ಬಿಲ್ ಪಾವತಿ ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಿ.
● ನಂತರ ಮತ್ತೊಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ ಅದರಲ್ಲಿ ಪಟ್ಟಣ ಪ್ರದೇಶದವರಿಗಾಗಿ ಒಂದು ಆಪ್ಷನ್ ಮತ್ತು ಗ್ರಾಮೀಣ ಪ್ರದೇಶದವರಿಗೆ ಮತ್ತೊಂದು ಆಪ್ಷನ್ ಇರುತ್ತದೆ ಅದರ ಅನುಸಾರವಾಗಿ ನಿಮ್ಮ ಆಯ್ಕೆಯನ್ನು ಕ್ಲಿಕ್ ಮಾಡಿ.

● ಈಗ ಓಪನ್ ಆಗುವ ಹೆಸ್ಕಾಂ ಹೋಂ ಪೇಜ್ ಅಲ್ಲಿ ಎಡ ಭಾಗದ ಮೇಲೆ ಯೂಸರ್ ಐಡಿ ಪಾಸ್ವರ್ಡ್ ಎನ್ನುವ ಆಪ್ಷನ್ ಕಾಣುತ್ತದೆ. ನೀವು ಮೊದಲ ಬಾರಿಗೆ ಈ ಪೇಜ್ ಓಪನ್ ಮಾಡಿದರೆ ಅಥವಾ ಬಳಸುತ್ತಿದ್ದರೆ ನಿಮ್ಮ ಯೂಸರ್ ಐಡಿ ಅನ್ನು ಕ್ರಿಯೇಟ್ ಮಾಡಬೇಕಾಗುತ್ತದೆ. ಅದಕ್ಕಾಗಿ ಹೊಸ ಬಳಕೆದಾರರು ರಿಜಿಸ್ಟರ್ ಮಾಡಲು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಕೇಳಲಾಗುವ ವಿವರಗಳಾದ ವಿದ್ಯುತ್ ಬಿಲ್ ಅಲ್ಲಿ ಇರುವ ಅಕೌಂಟ್ ಐಡಿ ಇ-ಮೇಲ್ ಐಡಿ ಇತ್ಯಾದಿಗಳ ವಿವರಗಳನ್ನು ಕೊಟ್ಟು ನಂತರದ ಪ್ರಕ್ರಿಯೆಗಳನ್ನು ಪೂರೈಸಿ ಯೂಸರ್ ಐಡಿ ಮತ್ತು ಪಾಸ್ವರ್ಡ್ ಪಡೆದುಕೊಳ್ಳಿ.

● ರಿಜಿಸ್ಟ್ರೇಷನ್ ಆದಮೇಲೆ HESCOM ಹೋಂ ಪೇಜ್ ಅಲ್ಲಿರುವ ಯೂಸರ್ ಐಡಿ ಮತ್ತು ಪಾಸ್ವರ್ಡ್ ಆಪ್ಷನ್ ಫಿಲ್ ಮಾಡಿ ಲಾಗಿನ್ ಆಗಿ ಆಗ ಕಾಣಿಸಿಕೊಳ್ಳುವ ಪ್ರೊಫೈಲ್ ಅಲ್ಲಿ ನಿಮ್ಮ ವಿದ್ಯುತ್ ಬಿಲ್ ಸಮ್ಮರಿ ಇರುತ್ತದೆ.

● ಎಡಭಾಗದಲ್ಲಿ ಹಲವಾರು ಆಪ್ಷನ್ಗಳಿರುತ್ತವೆ, ಅದರಲ್ಲಿ ಕಂಜೂಮರ್ ಕ್ಯಾಲಿಕೇಟರ್ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಬೇಕು ಎನ್ನುವ ಆಪ್ಷನ್ ಕಾಣುತ್ತದೆ ಅಲ್ಲಿ ವರ್ಷ ಮತ್ತು ತಿಂಗಳನ್ನು ಸೆಲೆಕ್ಟ್ ಮಾಡಿ. ಮೇ 2022 ರಿಂದ ಮೇ 2023 ಆಪ್ಷನ್ ಆಯ್ಕೆ ಮಾಡಿ. ನಂತರ ಕ್ಯಾಲ್ಕುಲೇಟ್ ಯುಸೇಜ್ ಎನ್ನುವ ಆಪ್ಶನ್ ಕ್ಲಿಕ್ ಮಾಡಿದರೆ ನೀವು ಸೆಲೆಕ್ಟ್ ಮಾಡಿದ ತಿಂಗಳುಗಳವರೆಗೆ ಬಳಸಿರುವ ವಿದ್ಯುತ್ ಬಳಕೆಯ ಬಾರ್ ಗ್ರಾಫ್ ಕಾಣುತ್ತದೆ. ಪ್ರಿಂಟ್ ಆರ್ ವಿವ್ಯು ಡೇಟಾ ಎನ್ನುವುದರ ಮೇಲೆ ಕ್ಲಿಕ್ ಮಾಡಿದರೆ ಕಳೆದ 12 ತಿಂಗಳಿಂದ ವಿದ್ಯುತ್ ಬಳಕೆಯ ಮಾಹಿತಿಯು ಚಾರ್ಟ್ ಸಮೇತ ಸಿಗುತ್ತದೆ.

ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಆಸಕ್ತರು ಈ ಅರ್ಜಿ ಸಲ್ಲಿಸಿ.! ವೇತನ 35000/-

ಕರ್ನಾಟಕದಲ್ಲಿರುವ ಎಲ್ಲಾ ನಿರುದ್ಯೋಗಿ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸದಾವಕಾಶ. ಮೈಸೂರಿನಲ್ಲಿರುವ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಅರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತ ಪ್ರಕಟಣೆಯೊಂದನ್ನು ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಹೊರಡಿಸಿದೆ. ಇದು ಕರ್ನಾಟಕ ರಾಜ್ಯ ಸರ್ಕಾರದ ಉದ್ಯೋಗವಾಗಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿವರದ ಬಗ್ಗೆ ಕೂಡ ನೋಟಿಫಿಕೇಶನಲ್ಲಿ ತಿಳಿಸಿದೆ.

ಪ್ರಕಟಣೆಯಲ್ಲಿ ತಿಳಿಸಿರುವಂತೆ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಉದ್ಯೋಗ ಪಡೆಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಈ ಅಂಕಣದಲ್ಲಿ ಈ ಹುದ್ದೆಗಳ ಕುರಿತಂತೆ ಪೂರ್ತಿ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೇ ಶೇರ್ ಮಾಡಿ.

ಉದ್ಯೋಗ ಸಂಸ್ಥೆ:- ರೈಲ್ವೆ ಕೋ ಆಪರೇಟಿವ್ ಬ್ಯಾಂಕ್
ಉದ್ಯೋಗದ ಮಾದರಿ:- ರಾಜ್ಯ ಸರ್ಕಾರದ ಉದ್ಯೋಗ
ಉದ್ಯೋಗ ಸ್ಥಳ:- ಮೈಸೂರು
ಒಟ್ಟು ಹುದ್ದೆಗಳ ಸಂಖ್ಯೆ:- 21

ಹುದ್ದೆಗಳ ವಿವರ:-
● ಬ್ರಾಂಚ್ ಮ್ಯಾನೇಜರ್ – 1
ಅಕೌಂಟೆಂಟ್ – 4
● ಸೀನಿಯರ್ ಕ್ಯಾಷಿಯರ್ – 1
● ಕಂಪ್ಯೂಟರ್ ಸೂಪರ್ವೈಸರ್ – 1
● ಜೂನಿಯರ್ ಕ್ಲರ್ಕ್ – 10
● ಆಫೀಸ್ ಅಸಿಸ್ಟೆಂಟ್ – 4

ಶೈಕ್ಷಣಿಕ ವಿದ್ಯಾರ್ಹತೆ:-
● ಬ್ರಾಂಚ್ ಮ್ಯಾನೇಜರ್ – ಸಹಕಾರ ವಿಷಯದಲ್ಲಿ ಪದವಿ
● ಅಕೌಂಟೆಂಟ್ – ವಾಣಿಜ್ಯಶಾಸ್ತ್ರದಲ್ಲಿ ಪದವಿ
● ಸೀನಿಯರ್ ಕ್ಯಾಷಿಯರ್ – ಸಹಕಾರ ವಿಷಯದಲ್ಲಿ ಪದವಿ
● ಕಂಪ್ಯೂಟರ್ ಸೂಪರ್ವೈಸರ್ – ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಇಂಜಿನಿಯರಿಂಗ್ / B.Sc. / BCA
● ಜೂನಿಯರ್ ಕ್ಲರ್ಕ್ – PUC
● ಆಫೀಸ್ ಅಸಿಸ್ಟೆಂಟ್ – SSLC

ವೇತನ ಶ್ರೇಣಿ:- ಮಾಸಿಕವಾಗಿ
● ಬ್ರಾಂಚ್ ಮ್ಯಾನೇಜರ್ – 35,400
● ಅಕೌಂಟೆಂಟ್ – 35,400
● ಸೀನಿಯರ್ ಕ್ಯಾಷಿಯರ್ – 35,400
● ಕಂಪ್ಯೂಟರ್ ಸೂಪರ್ವೈಸರ್ – 29,200
● ಜೂನಿಯರ್ ಕ್ಲರ್ಕ್ – 19,900
● ಆಫೀಸ್ ಅಸಿಸ್ಟೆಂಟ್ – 18,000

ವಯೋಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 35 ವರ್ಷಗಳು

ಅರ್ಜಿ ಶುಲ್ಕ:-
● SC/ST, ಪ್ರವರ್ಗ 1, ಅಂಗವಿಕಲರು, ಮಾಜಿ ಸೈನಿಕರ ಅಭ್ಯರ್ಥಿಗಳಿಗೆ – 500ರೂ.
● ಸಾಮಾನ್ಯ, ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ – 1000ರೂ.
● ಅರ್ಜಿ ಶುಲ್ಕವನ್ನು DD ಅಥವಾ ಪೇ ಆರ್ಡರ್ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ:-
● ಪ್ರಕಟಣೆಯಲ್ಲಿ ತಿಳಿಸಿದಂತೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
● ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗೆ ತಿಳಿಸುವ ವಿಳಾಸಕ್ಕೆ ರೆಸ್ಯುಮ್ ಮತ್ತು ಅರ್ಜಿ ಶುಲ್ಕ ಪಾವತಿ ಮಾಡಿರುವ ದಾಖಲೆಯನ್ನು ಕಳುಹಿಸಿಕೊಡಬೇಕು.
● ಭವಿಷ್ಯದಲ್ಲಿ ಅಭ್ಯರ್ಥಿಗಳ ಜೊತೆ ಪರೀಕ್ಷಾ ಪ್ರಾಧಿಕಾರ ಸಂಪರ್ಕಿಸಲು ರೆಸ್ಯೂಮ್ ನಲ್ಲಿ ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಅಧಿಕೃತ ವಿಳಾಸವನ್ನು ಸರಿಯಾಗಿ ತಿಳಿಸಿರಬೇಕು.

ವಿಳಾಸ:-
ಮೆಂಬರ್ ಸೆಕ್ರೆಟರಿ, ರೆಕ್ಯೂಟ್ಮೆಂಟ್ ಕಮಿಟಿ
ದ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್
ಶೇಷಾದ್ರಿ ಅಯ್ಯರ್ ರಸ್ತೆ
ಮೈಸೂರು – 570001

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 28 ಜೂನ್, 2023.
● ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – 28 ಜೂನ್, 2023.

ಕಣ್ಣಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗೂ ಕೂಡ ಈ ಮೂರು ಎಣ್ಣೆಯ ದೀಪ ಪರಿಹಾರ.!

 

ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯ ದೃಷ್ಟಿ ದೋಷ ಇದ್ದೇ ಇರುತ್ತದೆ. ಶಾಲೆಗೆ ಹೋಗುವ ಮಕ್ಕಳು ಕೂಡ ಈಗ ಕನ್ನಡಕ ಧರಿಸುವ ಪರಿಸ್ಥಿತಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಲ್ಯದಿಂದಲೇ ಟಿವಿ, ಮೊಬೈಲ್, ಲ್ಯಾಪ್ಟಾಪ್ ಸ್ಕ್ರೀನ್ ಗಳನ್ನು ನೋಡಿಕೊಂಡು ಬೆಳೆಯುವ ಕಾರಣ ಎಲ್ಲರಿಗೂ ದೃಷ್ಟಿ ದೋಷಗಳು ಸರ್ವೇಸಾಮಾನ್ಯವಾಗಿ ಹೋಗಿದೆ.

ಇದರ ಜೊತೆಗೆ ಅನೇಕರಿಗೆ ವಯಸ್ಸಿನ ಕಾರಣಗಳಿಂದ ಅಥವಾ ಇನ್ನಿತರ ಕಾರಣದಿಂದ ಸಮೀಪ ದೃಷ್ಟಿದೋಷ, ದೂರ ದೃಷ್ಟಿದೋಷ ಕಣ್ಣಿನ ಪೊರೆ ಇನ್ನು ಮುಂತಾದ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತಿವೆ. ಈ ಸಮಸ್ಯೆಗಳು ಇಲ್ಲದಿದ್ದರೂ ಕೂಡ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವವರು ಈಗ ನಾವು ಹೇಳುವ ಈ ಪ್ರಯೋಗವನ್ನು ಮಾಡಿ.

ಒಂದು ತಿಂಗಳು ಈ ಚಟುವಟಿಕೆ ಮಾಡಿದರೆ ಕಣ್ಣಿಗೆ ಸಂಬಂಧಪಟ್ಟ ಎಲ್ಲಾ ದೋಷಗಳು ಕೂಡ ಪರಿಹಾರ ಆಗುತ್ತದೆ. ಆದೆನೆಂದರೆ 100 ಗ್ರಾಂ ಹಿಪ್ಪೆಎಣ್ಣೆ, 100 ಗ್ರಾಂ ಬೇವಿನ ಎಣ್ಣೆ ಹಾಗೂ 100 ಗ್ರಾಂ ಹೊಂಗೆ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಒಂದು ಮಣ್ಣಿನ ದೀಪಕ್ಕೆ ಹಾಕಬೇಕು. ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಹಿತ್ತಾಳೆ ಅಥವಾ ಗಾಜಿನ ದೀಪಗಳನ್ನು ಬಳಸಬಾರದು.

ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಮಣ್ಣಿನ ದೀಪಕ್ಕೆ ಈ ಎಣ್ಣೆಯನ್ನು ಹಾಕಿ ಅದರ ಕೆಳಗೆ ಸೆಗಣಿಯ ಉಂಡೆಯನ್ನು ಇಡಬೇಕು. ಮನೆಯ ಉಳಿದ ಎಲ್ಲಾ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಈ ಮೂರು ಎಣ್ಣೆ ಮಿಶ್ರಿತವಾದ ಮಣ್ಣಿನ ದೀಪವನ್ನು ಮಾತ್ರ ಹಚ್ಚಿ ಈ ಪ್ರಯೋಗವನ್ನು ಮಾಡಬೇಕು. ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಈ ಪ್ರಯೋಗವನ್ನು ಮಾಡಬೇಕು.

ಸಮಯದ ಅಭಾವ ಇರುವವರು ರಾತ್ರಿ ಸಮಯದಲ್ಲಿ ಆದರೂ ತಪ್ಪದೆ ಒಂದು ತಿಂಗಳವರೆಗೆ ಈ ಪ್ರಯೋಗವನ್ನು ಮಾಡಲೇಬೇಕು. ಕತ್ತಲೆಯಲ್ಲಿ ಈ ಪ್ರಯೋಗವನ್ನು ಮಾಡುವುದರಿಂದ ಅದು ಇನ್ನೂ ಪರಿಣಾಮಕಾರಿಯಾಗಿ ಫಲ ಕೊಡುತ್ತದೆ. ನಿಮ್ಮಿಂದ ಒಂದರಿಂದ ಒಂದೂವರೆ ಅಡಿಯ ದೂರದಲ್ಲಿ ಈ ಮಣ್ಣಿನ ದೀಪವನ್ನು ಹಚ್ಚಿ ಇಡಿ. ನೀವು ದೀಪಕ್ಕೆ ನೇರವಾಗಿ ಕುಳಿತುಕೊಳ್ಳಿ.
g
ಉರಿಯುತ್ತಿರುವ ದೀಪವನ್ನು ನೀವು ನೋಡುತ್ತಾ ನಿಮ್ಮ ಕಣ್ಣನ್ನು ಎಡಕ್ಕೂ ಬಲಕ್ಕೂ ಚಲಿಸಿ ಅಥವಾ ಪೂರ್ತಿ ನಿಮ್ಮ ಕುತ್ತಿಗೆಯನ್ನು ಎಡಕ್ಕೆ ಬಲಕ್ಕೆ ಚಲಿಸಿ ಓರೆ ಕಣ್ಣುಗಳಿಂದ ಆ ದೀಪ ಉರಿಯುತ್ತಿರುವುದನ್ನೇ ನೋಡಿ. ನೀವು ನಿಮ್ಮ ಮನಸ್ಸಿನಲ್ಲಿ 50 ಸಂಖ್ಯೆಯವರೆಗೆ ಕೌಂಟ್ ಮಾಡುತ್ತಾ ಐವತ್ತು ಬಾರಿ ಎಡಕ್ಕೂ ಬಲಕ್ಕೂ ಈ ರೀತಿ ನಿಮ್ಮ ಕುತ್ತಿಗೆಯನ್ನು ತಿರುಗಿಸುತ್ತಾ ದೀಪವನ್ನು ನೋಡುತ್ತೀರಿ.

ಇಷ್ಟು ಪರಿಹಾರ ಸಾಕು ನಿಮ್ಮ ಎಲ್ಲಾ ದೃಷ್ಟಿ ದೋಷವು ಪರಿಹಾರ ಆಗಿ ಕಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ. ಇದರ ಜೊತೆಗೆ ನೀವು ಕಣ್ಣಿನ ಆರೋಗ್ಯವನ್ನು ವೃದ್ದಿ ಮಾಡುವ ವಿಟಮಿನ್ ಎ ಮತ್ತು ಸಿ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ನೀವು ಹೆಚ್ಚಾಗಿ ಮೊಬೈಲ್ ಅಥವಾ ಲ್ಯಾಪ್ಟಾಪ್ ಸ್ಕ್ರೀನ್ ನೋಡಲೇಬೇಕಾದ ಪರಿಸ್ಥಿತಿಯಲ್ಲಿದ್ದರೆ 10 ನಿಮಿಷಗಳಿಗೊಮ್ಮೆ ನಿಮ್ಮ ದೃಷ್ಟಿಯನ್ನು ಬೇರೆ ಕಡೆ ಬದಲಾಯಿಸಿ ನಂತರ ಸ್ಕ್ರೀನ್ ನೋಡಬೇಕು.

ಹಸಿರು ಬಣ್ಣವನ್ನು ಹೆಚ್ಚಾಗಿ ನೋಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ ಮತ್ತು ನಿಮ್ಮ ದೃಷ್ಟಿಯ ಸಾಮರ್ಥ್ಯತೆ ಹೆಚ್ಚಾಗುತ್ತದೆ. ಇವುಗಳನ್ನು ಇನ್ನು ಮುಂದೆ ಪಾಲಿಸಿ ಮತ್ತು ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೆ ಹಂಚಿಕೊಳ್ಳಿ.

ಮನೆ ಕ್ಲೀನ್ ಮಾಡುವ ಸುಲಭ ಉಪಾಯ ಇಲ್ಲಿದೆ ನೋಡಿ.!

 

ಮನೆ ಅಂದಮೇಲೆ ಅದು ಅಂದವಾಗಿರುವುದು ಕೂಡ ಅಷ್ಟೇ ಮುಖ್ಯ. ಮನೆಗೆ ಯಾರೇ ಹೊರಗೆನಿಂದ ಬಂದು ನೋಡಿದರು ಎಷ್ಟು ನೀಟಾಗಿ ಇಟ್ಟುಕೊಂಡಿದ್ದಾರೆ ಎಂದು ಮೆಚ್ಚಬೇಕು. ಜೊತೆಗೆ ಮನೆಯಲ್ಲಿ ವಾಸಿಸುವ ನಮಗೂ ಕೂಡ ಮನೆ ಅಷ್ಟೇ ಕ್ಲೀನ್ ಆಗಿ ಕಾಣಬೇಕು. ಗೃಹಿಣಿಯರಿಗೆ ಇದೇ ಅತಿ ದೊಡ್ಡ ಸವಾಲಿನ ಕೆಲಸ. ಯಾಕೆಂದರೆ ಮನೆಯೆಂದ ಮೇಲೆ ಗಲೀಜಾಗುವುದು ಕೂಡ ಸರ್ವೇಸಾಮಾನ್ಯ ಅದರಲ್ಲಂತು ಅಡುಗೆ ಮನೆ, ಬಾತ್ರೂಮ್ ಇವುಗಳಲ್ಲಿ ಕಲೆಗಳು ಕಟ್ಟಿರುತ್ತವೆ.

ಅವುಗಳನ್ನೆಲ್ಲ ಹೋಗಲಾಡಿಸಿ ಹೊಸ ಮನೆಯಂತೆ ಪಳಪಳ ಹೊಳೆಯುವಂತೆ ಮಾಡಲು, ಮನೆಯ ಫ್ಲೋರ್ ಅನ್ನು ನೀಟಾಗಿ ಇಟ್ಟುಕೊಳ್ಳಲು ಗೃಹಿಣಿಯರು ಪಡುವ ಹರಸಹಸ ಅಷ್ಟಿಷ್ಟಲ್ಲ. ಮಾರ್ಕೆಟಲ್ಲಿ ಅದಕ್ಕಾಗಿಯೇ ದುಬಾರಿ ಬೆಲೆ ತೆತ್ತು ಕ್ಲೀನರ್ ಗಳನ್ನು ಕೂಡ ತರುತ್ತಾರೆ. ಆದರೆ ಇದ್ಯಾವುದರಿಂದಲೂ ಆಗದಷ್ಟು ಪರಿಣಾಮಕಾರಿಯಾಗಿ ಮನೆಯಲ್ಲೇ ಇರುವ ಒಂದು ಚಿಕ್ಕ ವಸ್ತು ಕೆಲಸ ಮಾಡುತ್ತದೆ.

ನಿಂಬೆ ಹಣ್ಣಿನ ಚಮತ್ಕಾರಿ ಗುಣದ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಿಂಬೆ ಹಣ್ಣಿನ ರಸ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎನ್ನುವುದನ್ನು ಎಲ್ಲರೂ ಬಲ್ಲರು. ಆರೋಗ್ಯದ ಸಮಸ್ಯೆಗಳೇ ಇರಲಿ ಅಥವಾ ಬಾಡಿಯನ್ನು ಡಿ ಟಾಕ್ಸಿನ್ ಮಾಡುವುದಕ್ಕೆ ಆಗಲಿ ನಿಂಬೆಹಣ್ಣು ಉತ್ತಮ ಔಷಧ. ಹೀಗೆ ದೇಹಕ್ಕೆ ಮಾತ್ರ ಅಲ್ಲದೆ ಮನೆಯ ಸೌಂದರ್ಯಕ್ಕೂ ಕೂಡ ಈ ನಿಂಬೆಹಣ್ಣು ಸಹಾಯಕ್ಕೆ ಬರುತ್ತದೆ. ಮನೆಯನ್ನು ಕ್ಲೀನ್ ಮಾಡುವ ಈ ಸುಲಭ ಟಿಪ್ ಗೂ ಕೂಡ ಇದನ್ನು ಉಪಯೋಗಿಸಿ ಕೊಳ್ಳಬಹುದು. ನೀವು ಮನೆಯಲ್ಲಿ ಅಡುಗೆಗೆ ನಿಂಬೆಹಣ್ಣಿನ ರಸವನ್ನು ಬಳಸುತ್ತೀರಿ ಬಳಿಕ ಅದರ ಸಿಪ್ಪೆಯನ್ನು ಬಿಸಾಕುತ್ತೀರಿ.

ಆದರೆ ಇನ್ನು ಮುಂದೆ ಈ ರೀತಿ ಮಾಡಬೇಡಿ. ಈ ನಿಂಬೆ ಹೋಳುಗಳನ್ನು ಫ್ರಿಜ್ ಅಲ್ಲಿ ಶೇಖರಿಸಿ ಇಡಿ. ಇಲ್ಲವಾದರೆ ಒಣಗಿಸಿ ಇಟ್ಟುಕೊಳ್ಳಿ. ಮನೆ ಕ್ಲೀನ್ ಮಾಡುವಾಗ ಈ ರೀತಿ ಏಳೆಂಟು ನಿಂಬೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ. ಈಗ ಅದನ್ನು ಒಂದು ಜಾಲರಿ ಸಹಾಯದಿಂದ ಶೋಧಿಸಿಕೊಳ್ಳಿ ಆ ರಸಕ್ಕೆ ಒಂದು ಚಮಚ ಅಡುಗೆ ಸೋಡಾ ಅಥವಾ ಇನೋ ಪುಡಿಯನ್ನು ಸೇರಿಸಿ.

ಈಗ ನೀವು ಮನೆ ಕ್ಲೀನ್ ಮಾಡುವ ಸೊಲ್ಯೂಷನ್ ರೆಡಿ ಆಯ್ತು. ಇದನ್ನು ಮನೆಯನ್ನು ಒರೆಸುವಾಗ ನೀರಿಗೆ ಸ್ವಲ್ಪ ಹಾಕಿಕೊಂಡು ಒರೆಸಿದರೆ ಟೈಲ್ಸ್ ಮೇಲೆ ಇರುವ ಎಲ್ಲಾ ಕರೆಯು ಕೂಡ ಮಾಯವಾಗುತ್ತದೆ. ಹಾಗೆಯೇ ಸಿಲಿಂಡರ್ ಇಡುವ ಜಾಗದಲ್ಲಿ ಆಗಿರುವ ತುಕ್ಕಿನ ಕಲೆಗೂ ಕೂಡ ಇದರ ಜೊತೆಗೆ ಸ್ವಲ್ಪ ಸೋಪ್ ವಾಟರ್ ಹಾಕಿ ಒರೆಸಿದರೆ ಸಾಕು ಮತ್ತೆ ಮೊದಲಿನ ರೀತಿ ಆಗುತ್ತದೆ.

ಅಡುಗೆ ಮನೆಯ ಅರಿಶಿಣದ ಕಲೆ, ಎಣ್ಣೆ ಜಿಡ್ಡು, ಮಸಾಲೆ ಕಲೆ ತೆಗೆಯಲು ಗ್ಯಾಸ್ ಸ್ಟವ್ ಒರಿಸಲು ಅಡುಗೆ ಮನೆಯ ಟೈಲ್ಸ್ ಗಳನ್ನು ಕ್ಲೀನ್ ಮಾಡಲು ಇದನ್ನು ಬಳಸಬಹುದು. ಈ ಸಲ್ಯೂಷನ್ ಹಾಕಿ ಐದು ನಿಮಿಷ ಬಿಟ್ಟು ಸ್ಕ್ರಬ್ಬರ್ ಇಂದ ನೀಟಾಗಿ ಉಜ್ಜಿ ನೀರಿನಿಂದ ತೊಳೆದರೆ ಅಡುಗೆ ಮನೆ ಮತ್ತೆ ಪಳಪಳ ಎನ್ನುತ್ತದೆ. ಹಾಗೆ ಬಾತ್ರೂಮ್ ಕಲೆಗಳು, ವಾಷ್ ಬೇಸಿನ್,ಸಿಂಕ್, ಟ್ಯಾಪ್ ಗಳ ಮೇಲಿನ ಕಲೆಗಳು ಈ ರೀತಿ ಎಲ್ಲಾ ಕಲೆಗಳಿಗೂ ಕೂಡ ಈ ಸಲ್ಯೂಷನ್ ಚೆನ್ನಾಗಿ ವರ್ಕ್ ಆಗುತ್ತದೆ. ಇನ್ನು ಮುಂದೆ ಈ ಉಪಾಯ ಬಳಸಿ ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಿ.