Home Blog Page 189

ಕಾಸಿಲ್ಲದೆ ಮನೆ ಕಟ್ಟೋದು ಹೇಗೆ.? ಮನೆ ಕಟ್ಟಬೇಕು ಅಂತ ಆಸೆ ಇರುವವರು ತಪ್ಪದೆ ಇದನ್ನು ನೋಡಿ.!

 

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಇದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಎರಡಕ್ಕೂ ಕೂಡ ಅಷ್ಟೇ ಮಹತ್ವ ಇತ್ತು. ಹೇಗೆ ಮನೆಯಲ್ಲಿರುವ ಒಬ್ಬ ಮಗಳಿಗೆ ಮದುವೆ ನಿಶ್ಚಯ ಆದಾಗ ಸಕಲ ಸಿದ್ಧತೆಗಳು ಕೂಡ ತಯಾರಾಗುತ್ತವೋ ಅದೇ ರೀತಿ ಮನೆ ನಿರ್ಮಾಣ ಆಗುತ್ತಿದೆ ಎಂದಾಗಲು ಕೂಡ ಅದು ನಿರ್ಧಾರವಾದ ದಿನದಿಂದಲೇ ಅದಕ್ಕೆ ಬೇಕಾದ ಸಕಲ ಸಿದ್ಧತೆಗಳು ಕೂಡ ತಯಾರಾಗುತ್ತದೆ.

ಒಂದು ಪಕ್ಷ ಈಗಿನ ಕಾಲದಲ್ಲಿ ಸುಲಭವಾಗಿ ಮದುವೆ ಮಾಡಿ ಮುಗಿಸಬಹುದು, ಆದರೆ ಮನೆ ಕಟ್ಟುವುದು ಅಷ್ಟು ಸುಲಭವಲ್ಲ. ಮನೆ ಎನ್ನುವುದು ಒಂದು ಕನಸು ಜೊತೆಗೆ ಅಲ್ಲಿ ನೂರಾರು ವರ್ಷಗಳ ಕಾಲ ನಾವು ಮಾತ್ರವಲ್ಲದೆ ನಮ್ಮ ಪರಿವಾರ ಹಾಗೂ ಮುಂದಿನ ಪೀಳಿಗೆ ಕೂಡ ನೆಲೆಸಬೇಕು ಹಾಗಾಗಿ ಯಾವುದೇ ದೋಷವಿಲ್ಲದ ವಾಸ್ತು ಪ್ರಕಾರವಾದ ಅಚ್ಚುಕಟ್ಟಾದ ಮನೆ ನಿರ್ಮಾಣವಾಗಬೇಕು ಎನ್ನುವುದು ಎಲ್ಲರ ಕನಸು.

ಇತ್ತೀಚಿನ ದಿನಗಳಲ್ಲಿ ವಾಸ್ತು ಬಗ್ಗೆ ಹೆಚ್ಚು ಗಮನ ಕೊಡದೆ ಇರುವುದರಿಂದ ಆ ದೋಷಗಳು ಉಂಟಾಗಿ ಮನೆ ನಿರ್ಮಾಣ ಮಾಡುವ ಕಾರ್ಯವೇ ಅರ್ಧಕ್ಕೆ ನಿಂತು ಹೋಗುತ್ತದೆ ಅಥವಾ ಮನೆ ಮಾಡಿ ಹೊಸ ಮನೆಗೆ ಹೋದ ಕೂಡಲೇ ಮನೆಯಲ್ಲಿ ಅನಾರೋಗ್ಯ, ಮನೆಯಲ್ಲಿ ಕೆಟ್ಟ ಘಟನೆಗಳು ನಡೆಯುವುದು ಅಥವಾ ಮನೆಯಲ್ಲಿರುವ ಸದಸ್ಯರಿಗೆ ದುಷ್ಚಟಗಳ ಅಭ್ಯಾಸ, ದುರ್ಜನರ ಸಹವಾಸವಾಗಿ ಹಣ ಲಾಸ್ ಆಗುವುದು ಈ ರೀತಿಯಾದ ಹೊಡೆತಗಳು ಬೀಳುತ್ತವೆ.

ಇದರ ಬದಲಿಗೆ ಸರಿಯಾಗಿ ವಾಸ್ತುವನ್ನು ಪಾಲಿಸಿ ಮನೆ ನಿರ್ಮಾಣ ಮಾಡಿದರೆ ಇದೆ ಫಲಿತಾಂಶ ವಿರುದ್ಧವಾಗಿ ಆಗಿ ಗುಣವಂತರ ಹಾಗೂ ಸಜ್ಜನರ ಸಹವಾಸ ಆಗುತ್ತದೆ. ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಬಂಧ ನಿಶ್ಚಯ ಆಗುತ್ತದೆ. ವಿದ್ಯಾಭ್ಯಾಸದಲ್ಲೇ ಆಗಲಿ ವ್ಯಾಪಾರದಲ್ಲಿ ಆಗಲಿ ಅಭಿವೃದ್ಧಿ ಬರುತ್ತದೆ. ಮನೆ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಸಾಗಿ ಮನೆಯಲ್ಲಿ ನೆಮ್ಮದಿಯಾಗಿ ವಾಸಿಸುವಂತಾಗುತ್ತದೆ.

ಮನೆ ನಿರ್ಮಾಣಕ್ಕೆ ಬೇಕಾದ ವಸ್ತುಗಳಲ್ಲಿ ಎಲ್ಲವೂ ಕೂಡ ಒಳ್ಳೊಳ್ಳೆ ಗುಣಮಟ್ಟದ್ದು ಸಿಗುತ್ತದೆ, ನಿಮ್ಮಿಂದ ಸಾಲ ಪಡೆದುಕೊಂಡು ತಲೆಮರೆಸಿಕೊಂಡಿದ್ದವರು ಅವರೇ ಹುಡುಕಿಕೊಂಡು ಬಂದು ಹಣ ಕೊಡುತ್ತಾರೆ. ಇಂತಹ ಎಲ್ಲ ಸಕಾರಾತ್ಮಕ ಬದಲಾವಣೆ ಉಂಟಾಗುವುದು ನೀವು ಮನೆಯನ್ನು ಕಟ್ಟುವ ವಾಸ್ತುವಿನ ಮೇಲೆಹ ನಿಮ್ಮ ಮನೆಯ ನಿರ್ಮಾಣ ಕಾರ್ಯ ನಿಶ್ಚಿಂತೆಯಾಗಿ ಸಾಗಬೇಕು ಹಣದ ಕೊರತೆ ಬರಬಾರದು ಜೊತೆಗೆ ಮನೆ ಏಳಿಗೆ ಆಗಬೇಕು ಎಂದರೆ ಮನೆ ಈ ರೀತಿ ಶುರು ಮಾಡಿ.

ಮೊದಲಿಗೆ ನೀವು ಸೈಟ್ ನಿರ್ಧಾರ ಮಾಡಿದ ಮೇಲೆ ಮನೆ ಕಟ್ಟಬೇಕು ಎಂದುಕೊಂಡ ಮೇಲೆ ಅರ್ಧ ಕೆಜಿ ಬಿಳಿ ಸಾಸಿವೆಯನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹರಡಿ ಬನ್ನಿ. ಬಳಿಕ ದಕ್ಷಿಣದಿಂದ ಮತ್ತು ಪಶ್ಚಿಮದಿಂದ ಕಾಂಪೌಂಡ್ ನಿರ್ಮಿಸಿ ಇದು L ಶೇಪ್ ಆಗುತ್ತದೆ. ಈ ರೀತಿ ಕಾಂಪೌಂಡ್ ನಿರ್ಮಿಸಿದರೆ ಅಲ್ಲಿ ಒಂದು ಎನರ್ಜಿ ಸ್ಟೋರ್ ಆಗುತ್ತದೆ ಆ ಎನರ್ಜಿ ಇಂದ ಮನೆಗೆ ಬೇಕಾದ ಎಲ್ಲ ಸಕಾರಾತ್ಮಕ ಶಕ್ತಿ ತುಂಬುತ್ತದೆ ಜೊತೆಗೆ ಮನೆಯ ಅಡಿಪಾಯವನ್ನು ಈಶಾನ್ಯ ದಿಕ್ಕಿನಿಂದ ನಿರ್ಮಿಸಿ ನೈರುತ್ಯ ದಿಕ್ಕಿನಿಂದ ಪಿಲ್ಲರ್ ಕಟ್ಟಿಕೊಂಡು ಬನ್ನಿ.

ಈ ರೀತಿಯಾಗಿ ಒಳ್ಳೆ ರೀತಿಯಲ್ಲಿ ನಿರ್ಮಾಣ ಕಾರ್ಯ ಶುರು ಮಾಡಿದರೆ, ಒಳ್ಳೆ ಮನೆ ನಿರ್ಮಾಣ ಮಾಡಲು ಬೇಕಾದ ಪರಿಸ್ಥಿತಿ ಅದೇ ಸೃಷ್ಟಿ ಆಗುತ್ತದೆ. ಈ ರೀತಿ ಶುರು ಮಾಡಿದಾಗ ನೀವು ಒಂದು ಮನೆಯ ನಿರ್ಮಾಣಕ್ಕೆ 10 ಲಕ್ಷ ಖರ್ಚು ಆಗುವುದಾದರೆ 2 ಲಕ್ಷ ಕೈಯಲ್ಲಿ ಇಟ್ಟುಕೊಂಡು ಶುರು ಮಾಡಿದರೆ ಸಾಕು, ಉಳಿದ ಹಣ ಅದೇ ಒದಗಿ ಬರುತ್ತದೆ.

ಜಮೀನಿನ ಪಹಣಿಯಲ್ಲಿ ತಂದೆ, ತಾತ, ಮುತ್ತಾತನ ಹೆಸರು ಇದ್ದರೂ ಯಾವ ದಾಖಲೆಯೂ ಇಲ್ಲ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಿ.!

 

ನೂತನ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ರಾಜ್ಯದ ಎಲ್ಲ ರೈತರಿಗೂ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದೇನೆಂದರೆ, ಬಗರ್ ಹುಕುಂ ಸಾಗುವಳಿದಾರರು ತಮ್ಮ ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ. ಅದಕ್ಕಾಗಿ ಅರ್ಜಿ ಸ್ವೀಕಾರ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈಗಾಗಲೇ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಿಕೊಂಡು ಕೃಷಿ ಮಾಡುತ್ತಿರುವ ರೈತರುಗಳು ಅಥವಾ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ನಿರಾಶ್ರಿತರು ಮುಂತಾದವರಿಗೆ ಅವರ ಹೆಸರಿಗೆ ಆಸ್ತಿಯನ್ನು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡುತ್ತಿದೆ.

ಇದಕ್ಕೆ ಬಗರ್ ಹುಕುಂ ಸಾಗುವಳಿ ಎಂದು ಕರೆಯಲಾಗುತ್ತಿತ್ತು, ಈಗ ಅದರ ಸಕ್ರಮಕ್ಕೆ ಅರ್ಜಿ ಆಹ್ವಾನ ಮಾಡಿದೆ. ಜನಸಂಖ್ಯೆ ಹೆಚ್ಚಳದ ಕಾರಣದಿಂದಾಗಿ ಅಥವಾ ವಾಸಿಸಲು ಕೃಷಿ ಮಾಡಲು ಜಮೀನು ಇಲ್ಲದ ಕಾರಣಕ್ಕಾಗಿ ಜನರು ಈ ರೀತಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ. ನಂತರ ಅದು ಅವರ ಹೆಸರಿಗೆ ಇಲ್ಲದೆ ಹೋದಲ್ಲಿ ಸರ್ಕಾರದಿಂದ ಯಾವ ಸೌಲಭ್ಯವನ್ನು ಕೂಡ ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ.

ಹಾಗಾಗಿ ಇದನ್ನು ಮನಗಂಡ ಸರ್ಕಾರ ಆಗಾಗ ಈ ರೀತಿ ಕೃಷಿ ಚಟುವಟಿಕೆಗಾಗಿ ಸರ್ಕಾರಿ ಭೂಮಿಯನ್ನು ಅವಲಂಬಿಸುವ ಬಗರ್ ಹುಕುಂ ಸಾಗುವಳಿದಾರರಿಗೆ ಪೂರಕ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಈಗಾಗಲೇ ಅನೇಕ ಬಾರಿ ಈ ರೀತಿ ಅವಕಾಶವನ್ನು ಸಹ ನೀಡಿದೆ. ಅದಕ್ಕೆ ಕೆಲವು ನಿಬಂಧನೆಗಳು ಸಾಗುವಳಿದಾರರಾಗಿರುವವರು ಪಾಲಿಸಬೇಕು. ಆ ಕಂಡೀಶನ್ ಒಳಗಡೆ ಇರುವ ರೈತರಿಂದ ಈಗ ಅರ್ಜಿ ಆಹ್ವಾನಿಸಿದೆ.

ಇವರಿಗೆ ಮಾತ್ರವಲ್ಲದೆ ತಂದೆ, ತಾತ, ಮುತ್ತಾತನ ಹೆಸರಿನಲ್ಲಿ ಜಮೀನು ಇದ್ದು ವಂಶಪಾರಂಪರ್ಯದಿಂದ ಅದನ್ನು ತಾವೇ ಸಾಗುವಳಿ ಮಾಡಿಕೊಂಡು ಬರುತ್ತಿರುವವರು ದಾಖಲೆ ಇಲ್ಲ ಎನ್ನುವ ಕಾರಣಕ್ಕೆ ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ ಅದು ಕೂಡ ಒಂದು ಸಮಸ್ಯೆ. ಅವರಿಗೆ ಸರ್ಕಾರದಿಂದ ಸಿಗುವ ಕೃಷಿ ಸಾಲವಾಗಲಿ ಅಥವಾ ರೈತರಿಗೆ ಸಿಗುವ ಕಿಸಾನ್ ಸಮ್ಮಾನ್ ನಿಧಿ ಇನ್ನಿತರ ಸೌಲಭ್ಯವಾಗಲಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ಸಾಗುವಳಿ ಮಾಡುವ ರೈತನ ಹೆಸರಿನಲ್ಲಿ ಜಮೀನು ಇಲ್ಲ ಎಂದರೆ ರೈತನಿಗೆ ಸಿಗುವ ಯಾವ ಸೌಲಭ್ಯವು ಕೂಡ ಸಿಗುವುದಿಲ್ಲ ಇದರಿಂದ ಈಗ ಈ ಸಮಸ್ಯೆಯನ್ನು ಅರಿತುಕೊಂಡು ಸರ್ಕಾರ ಇವರಿಗೂ ಸಹ ದಾಖಲೆಗಳು ಇಲ್ಲದಿದ್ದರೂ ನಮ್ಮ ಹೆಸರಿಗೆ ಜಮೀನನ್ನು ಮಾಡಿಕೊಳ್ಳಲು ಅರ್ಜಿ ಸಲ್ಲಿಸುವಂತೆ ಕೇಳಿದೆ. ನಂತರ ಅದಕ್ಕೆ ಮಾರ್ಗಸೂಚಿ ಕೂಡ ಇದ್ದು ಅದನ್ನು ಪೂರೈಸಿದರೆ ಸಾಗುವಳಿ ಮಾಡುವ ರೈತನ ಹೆಸರಿಗೆ ತಾತನ ಅಥವಾ ತಂದೆ ಆಸ್ತಿ ವರ್ಗಾವಣೆ ಆಗುತ್ತದೆ.

ಈ ರೀತಿಯಾಗಿ ತಮ್ಮ ಹೆಸರಿಗೆ ದಾಖಲೆಗಳನ್ನು ಬದಲಾಯಿಸಿಕೊಳ್ಳಲು ರೈತರು ಭೂ ಕಂದಾಯ ಇಲಾಖೆ, ಭೂ ದಾಖಲೆ ಇಲಾಖೆ, ತಹಶೀಲ್ದಾರ್ ಕಚೇರಿ ಈ ರೀತಿ ಕಚೇರಿಯಿಂದ ಕಚೇರಿಗೆ ಅಳೆದು ಸಾಕಾಗುತ್ತಿದ್ದರು, ಅವರಿಗೆ ಸರಿಯಾದ ಮಾಹಿತಿ ಕೂಡ ಸಿಗುತ್ತಿರಲಿಲ್ಲ. ಈಗ ಬಗರ್ ಹುಕುಂ ಆದೇಶ ಪತ್ರ ಹೊರ ಬಿದ್ದಿರುವ ಕಾರಣ ಈ ಒಂದು ಸದಾವಕಾಶವನ್ನು ಬಳಸಿಕೊಂಡು ರೈತರು ತಮ್ಮ ಹೆಸರಿಗೆ ದಾಖಲೆಗಳನ್ನು ಬದಲಾಯಿಸಿಕೊಂಡು ಸರ್ಕಾರದ ಎಲ್ಲಾ ಸೌಲಭ್ಯವನ್ನು ಕೂಡ ಪಡೆಯಬಹುದು. ಸರ್ಕಾರ ನೀಡಿರುವ ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ ಮತ್ತು ಈ ಮಾಹಿತಿ ಎಲ್ಲ ರೈತರಿಗೂ ತಲುಪುವಂತೆ ಶೇರ್ ಮಾಡಿ.

 

ಫ್ರಿಡ್ಜ್ ₹7999, ವಾಷಿಂಗ್ ಮಿಷನ್ ₹5999, ಸೈಕಲ್ ₹4000, ಟಿವಿ ₹6999 ಮನೆಗೆ ಬೇಕಾದ ಎಲ್ಲಾ ಐಟಂಗಳು ಡಿಸ್ಕೌಂಟ್ ನಲ್ಲಿ ಲಭ್ಯ

 

ಹಳ್ಳಿಗಳಲ್ಲಿ ಆಗಲಿ ಅಥವಾ ಪಟ್ಟಗಳಲ್ಲೇ ಆಗಲಿ ಈಗ ಎಲ್ಲಾ ಕೆಲಸಗಳಿಗೂ ಕೂಡ ಯಂತ್ರಗಳ ಬಳಕೆ ಮತ್ತು ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಾಗಿದೆ. ಈಗ ಮನೆಯಲ್ಲಿ ಹೋಂ ಅಪ್ಲೈನ್ಸಸ್ ಗಳದ್ದೇ ಕಾರುಬಾರು. ಅಡುಗೆ ಮನೆಯಿಂದ ಹಿಡಿದು ಬೆಡ್ರೂಮ್ ತನಕ ಮನೆ ಪೂರ್ತಿ ಎಲ್ಲಾ ಕೆಲಸಗಳಿಗೂ ಕೂಡ ನಾವು ಇವುಗಳ ಮೇಲೆ ಡಿಪೆಂಡ್ ಆಗಿಬಿಟ್ಟಿದ್ದೇವೆ.

ಇದೇ ಕಾರಣಕ್ಕೋ ಏನೋ ಈ ಹೋಮ್ ಅಪ್ಲೈನ್ಸಸ್ ಗಳ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ದುಬಾರಿ ದುನಿಯಾದಲ್ಲಿ ವಸ್ತುಗಳ ಮೇಲೆ ಆಸೆ ಇದ್ದರೂ ಅವುಗಳ ಅವಶ್ಯಕತೆಯೂ ಇದ್ದರೂ ಬೆಲೆ ನೋಡಿ ಖರೀದಿಸುವುದಕ್ಕೆ ಹಿಂದೂ ಮುಂದು ನೋಡುವಂತಾಗಿದೆ. ಸಮಯ ಉಳಿತಾಯ ಮಾಡಲು ಅಥವಾ ಮನೆಯ ಲುಕ್ ಚೆನ್ನಾಗಿ ಇಡಲು ಮತ್ತು ನಮ್ಮ ಎನರ್ಜಿ ಸೇವ್ ಮಾಡಿಕೊಳ್ಳಲು ಇವುಗಳ ಬಳಕೆ ಅನಿವಾರ್ಯವಾಗಿದೆ.

ಈಗ ಈ ಹೋಂ ಅಪ್ಲೈನ್ಸಸ್ ಖರೀದಿಸುವುದಕ್ಕೆ ಗ್ರಾಹಕರಿಗೆ ಅನುಕೂಲತೆ ಮಾಡಿಕೊಡಲು ಅನೇಕ ರೀತಿಯಲ್ಲಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಕೆಲವೊಮ್ಮೆ ಹಬ್ಬಗಳು ಹಾಗೂ ವಿಶೇಷ ದಿನಗಳ ಅಂಗವಾಗಿ ಡಿಸ್ಕೌಂಟ್ ಆಫರ್ ಕೊಟ್ಟಿರುತ್ತಾರೆ ಮತ್ತು ಇವುಗಳನ್ನು ಖರೀದಿಸುವುದಕ್ಕೆ EMI ಸಾಲ ಸೌಲಭ್ಯ ಕೂಡ ಲಭ್ಯವಿದೆ.

OLX ಅಂತಹ ಫ್ಲಾಟ್ಫಾರ್ಮ್ ಗಳಲ್ಲಿ ಸೆಕೆಂಡ್ ಹ್ಯಾಂಡಲ್ ಆಗಿದ್ದರೂ ಕೂಡ ಉತ್ತಮ ಸ್ಥಿತಿಯಲ್ಲಿರುವ ಹೋಂ ಅಪ್ಲೈನ್ಸಸ್ ಗಳನ್ನು ಖರೀದಿಸಬಹುದು. ಇವುಗಳನ್ನೆಲ್ಲಾ ಮೀರಿ ನಿಮಗೆ ಫಸ್ಟ್ ಹ್ಯಾಂಡಲ್ ಆದರೆ ಹೆಚ್ಚು ಆಫರ್ ಬೇಕು ಎಂದರೆ ಬೆಂಗಳೂರಿನಲ್ಲಿರುವ ಈ ಒಂದು ಶಾಪ್ ಗೆ ಭೇಟಿ ನೀಡಿ. 35% ವರೆಗೆ ಕೂಡ ನಿಮಗೆ ಇವುಗಳ ಬೆಲೆ ಮೇಲೆ ಆಫರ್ ಇರುತ್ತದೆ ಅದು ಕೂಡ ವರ್ಷಪೂರ್ತಿ.

ಕರ್ನಾಟಕದ ಅತ್ಯಂತ ಯಾವುದೇ ಮೂಲೆಗೆ ಬೇಕಾದರೂ ಇವರು ಡೆಲಿವರಿ ಕೂಡ ನೀಡುತ್ತಾರೆ. ಮನೆಗೆ ಬೇಕಾದ ಮಿಕ್ಸಿ ಗ್ರೈಂಡರ್, ಗ್ಯಾಸ್ ಸ್ಟವ್ ಇಂದ ಹಿಡಿದು ಕಂಪ್ಯೂಟರ್, ಲ್ಯಾಪ್ಟಾಪ್, ವಾಷಿಂಗ್ ಮಿಷನ್, ಫ್ರಿಜ್, ಫ್ಯಾನ್, ಗೀಸರ್, ಸೈಕಲ್ ಇನ್ನೂ ಮುಂತಾದ ಎಲ್ಲಾ ಪರಿಕರಗಳು ಕೂಡ ಇಲ್ಲಿ ಅತಿ ಹೆಚ್ಚಿನ ಆಫರ್ ಅಲ್ಲಿ ಸಿಗುತ್ತವೆ. ಇದು ಫಸ್ಟ್ ಹ್ಯಾಂಡಲ್ ವಸ್ತು ಆಗಿದ್ದರೂ ಕೂಡ ಇಷ್ಟು ಆಫರ್ ಗೆ ಸಿಗಲು ಕಾರಣ ಟ್ರಾನ್ಸ್ಪೋರ್ಟ್ ಸಮಯದಲ್ಲಿ ಈ ವಸ್ತುಗಳು ಟೆಂಟ್ ಆಗಿರುವುದು ಅಥವಾ ಸ್ಕ್ರಾಚಸ್ ಆಗಿರುವುದು

ಇದು ಒಂದೇ ಕಾರಣಕ್ಕಾಗಿ ಇಷ್ಟು ಆಫರ್ ಅಲ್ಲಿ ಇದನ್ನು ಸೇಲ್ ಮಾಡಲಾಗುತ್ತಿದೆ. ಆದರೆ ಒಮ್ಮೆಲೆಗೆ ನೀವು ನೋಡಿದರೆ ಇದನ್ನು ಕಂಡು ಹಿಡಿಯಲು ಆಗದಷ್ಟು ಸಣ್ಣ ಸಮಸ್ಯೆ ಇದಾಗಿರುತ್ತದೆ. ಸಮಯವಿದ್ದಾಗ ಒಮ್ಮೆ ಭೇಟಿ ಕೊಟ್ಟು ನೋಡಿ ತಿಳಿದುಕೊಳ್ಳಬಹುದು. ಸದ್ಯಕ್ಕೀಗ ಬೆಂಗಳೂರಿನ ಬೊಮ್ಮಸಂದ್ರದ ಬಳಿ ಹೆಬ್ಬಗೋಡಿಯಲ್ಲಿ ದ ಡಿಸ್ಕೌಂಟ್ ರಿಟೇಲ್ ಶಾಪ್ ಇದೆ.

ಸದ್ಯದಲ್ಲೇ ರಾಜಾಜಿನಗರದಲ್ಲೂ ಕೂಡ ಒಂದು ಹೊಸ ಬ್ರಾಂಚ್ ಓಪನ್ ಆಗಲಿದೆ ಮತ್ತು ಗ್ರಾಹಕರಗಳ ಬೇಡಿಕೆಗೆ ಅನುಸಾರವಾಗಿ ಬೆಂಗಳೂರಿನ ಬಹುತೇಕ ಕಡೆ ಬ್ರಾಂಚ್ ಗಳನ್ನು ಓಪನ್ ಮಾಡಲು ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲಿ ಕೂಡ ಬ್ರಾಂಚ್ ಓಪನ್ ಮಾಡಲು ಪ್ಲಾನ್ ಮಾಡಲಾಗುತ್ತಿದೆ. ಈ ಶಾಪ್ ರೆಪ್ರೆಸೆಂಟೇಟಿವ್ ಈ ವಸ್ತುಗಳ ಬಗ್ಗೆ ಏನು ಹೇಳುತ್ತಾರೆ ಮತ್ತು ಯಾವ ವಸ್ತುವಿಗೆ ಎಷ್ಟು ಆಫರ್ ಇದೆ ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಮನೆ ಅಭಿವೃದ್ಧಿ ಆಗದೆ ಇರಲು ಏನು ಕಾರಣ ಗೊತ್ತಾ.? ಪ್ರತಿಯೊಬ್ಬ ಪತಿ & ಪತ್ನಿ ತಿಳಿದುಕೊಳ್ಳಬೇಕಾದ ಮುಖ್ಯ ವಿಚಾರ ಇದು

 

ಇಡೀ ಪ್ರಪಂಚ ಸುತ್ತಾಡಿದರು ಕೂಡ ಕೊನೆಗೆ ನಮಗೆ ನೆಮ್ಮದಿ ಸಿಗುವ ಸ್ಥಳ ನಮ್ಮ ಮನೆ. ಕೆಲವೊಮ್ಮೆ ಹಲವು ಕಾರಣಗಳಿಂದ ನಾವು ಮನೆಯಿಂದ ಹೊರ ಹೋಗುತ್ತೇವೆ ಆದರೆ ಮನಸ್ಸು ಪ್ರತಿ ಕ್ಷಣವು ಕೂಡ ಕೆಲಸ ಮುಗಿದು ಯಾವಾಗ ಮನೆಗೆ ವಾಪಸ್ಸು ಹೋಗುತ್ತೆವೋ ಎಂದು ಯೋಚಿಸುತ್ತಿರುತ್ತದೆ. ಯಾಕೆಂದರೆ ಮನೆ ಎನ್ನುವುದು ಒಂದು ಎಮೋಷನ್ ಕೂಡ ನಾವು ವಾಸಿಸುವ ಮನೆಯಲ್ಲಿ ನಮಗೆ ಸಂತಸ ನೀಡುವ ಅನೇಕ ವಿಚಾರಗಳು ಇರುತ್ತವೆ ಇಂತಹ ಮನೆಯಲ್ಲಿ ನಾವು ಮಾತ್ರವಲ್ಲದೆ ದೈವಶಕ್ತಿ ವಾಸವು ಕೂಡ ಇರುತ್ತದೆ.

ಆದರೆ ನಾವು ಕೆಲ ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಕುಂದು ಹೋಗಿ ನಕಾರಾತ್ಮಕ ಶಕ್ತಿಗಳ ವಾಸ ಆರಂಭವಾಗಿ ನಾವು ಎಷ್ಟೇ ದುಡಿದರೂ ಕೂಡ ಅಥವಾ ಎಷ್ಟೇ ಪ್ರಯತ್ನ ಪಟ್ಟರು ಕೂಡ ಮನೆ ಏಳಿಗೆ ಆಗುವುದೇ ಇಲ್ಲ. ಈ ರೀತಿ ಆಗಲು ಮನೆಯಲ್ಲಿ ವಾಸಿಸುವ ಗೃಹಿಣಿ ಹಾಗೂ ಇತರ ಸದಸ್ಯರ ವರ್ತನೆಯೂ ಕೂಡ ಕಾರಣ ಆಗುತ್ತದೆ.

ಮನೆ ಎಂದರೆ ಹೀಗೆ ಇರಬೇಕು, ಹೀಗಿರಬಾರದು ಎನ್ನುವ ನಿಯಮ ಇದೆ ಅದನ್ನು ಮೀರಿ ನಡೆದಾಗ ಅಥವಾ ಪದೇಪದೇ ಆ ರೀತಿ ಮಾಡುತ್ತಿದ್ದಾಗ ಅದು ದುರಭ್ಯಾಸವಾಗಿ ಬೆಳೆದು ಈ ವರ್ತನೆಗಳಿಂದ ಮನೆಯ ಮೇಲೆ ದೇವರ ಆಶೀರ್ವಾದ ಕಡಿಮೆ ಆಗಿ ಎಲ್ಲಾ ಸದಸ್ಯರ ಏಳಿಗೆ ಕುಂಠಿತವಾಗುತ್ತದೆ. ಆದ್ದರಿಂದ ಇನ್ನು ಮೇಲೆ ನೀವು ಈ ರೀತಿ ತಪ್ಪುಗಳನ್ನು ಮಾಡುತ್ತಿದ್ದರೆ ತಿದ್ದುಕೊಳ್ಳಿ. ಸೂರ್ಯೋದಯ ಆದರೂ ಕೂಡ ಇನ್ನೂ ಮಲಗೇ ಇರುವುದು, ತಡವಾಗಿ ಏಳುವುದು ಜೊತೆಗೆ ಸರಿಯಾದ ಸಮಯಕ್ಕೆ ಊಟ ಮಾಡದೆ ತಡವಾದ ಸಮಯಕ್ಕೆ ಊಟ ಮಾಡುವುದು.

ದಿನ ಪೂರ್ತಿ ಸ್ನಾನ ಮಾಡದೆ ಹಾಗೆ ಇರುವುದು, ಮನೆಯಲ್ಲಿ ದೇವರ ಪೂಜೆ ಮಾಡಿರದೆ ಇರುವುದು, ಕತ್ತಲಾದರೂ ಕೂಡ ಮನೆಯಲ್ಲಿ ದೀಪ ಬೆಳಗಿಸದೇ ಹಾಗೆ ಇರುವುದು, ಮನೆಯನ್ನು ಗಲೀಜಾಗಿ ಇಟ್ಟುಕೊಳ್ಳುವುದು ಮನೆಯಲ್ಲಿ ಎಲ್ಲ ವಸ್ತುಗಳನ್ನು ಅಸ್ತವ್ಯಸ್ತವಾಗಿ ಚೆಲ್ಲಾಡುವುದು, ಮನೆಯಲ್ಲಿ ಶೌಚಾಲಯ ಕೂಡ ಶುದ್ಧವಾಗದು ಅಷ್ಟೇ ಮುಖ್ಯ.

ಶೌಚಾಲಯವು ಗಲೀಜಾಗಿದ್ದರೆ ಕೆಟ್ಟ ವಾಸನೆ ಬರುತ್ತಿದ್ದರೆ ಅದು ಕೂಡ ಮನೆಗೆ ಅಶುಭ, ಜೊತೆಗೆ ದೇವರ ಕೋಣೆಯನ್ನು ದಿನ ಸ್ವಚ್ಛ ಮಾಡದೇ ಇರುವುದು, ಮನೆಯಲ್ಲೆ ದಿನ ದೇವರ ಪೂಜೆ ಮಾಡದೇ ಇರುವುದು, ಅಡುಗೆಮನೆಯನ್ನು ಗಲೀಜಾಗಿ ಇಟ್ಟುಕೊಳ್ಳುವುದು. ದಿನವೂ ಕೂಡ ಆಹಾರ ಪದಾರ್ಥಗಳನ್ನು ವೇಸ್ಟ್ ಮಾಡುವುದು ಹಿರಿಯರಿಗೆ ಗೌರವ ಕೊಡದೆ ಇರುವುದು ಹಿರಿಯರ ಎದುರು ತಿರುಗಿ ಮಾತನಾಡುವುದು, ಕೆಟ್ಟ ಶಬ್ದಗಳನ್ನು ಬಳಸಿ ಮನೆಯಲ್ಲಿ ಮಾತನಾಡುವುದು ಅಥವಾ ಮನೆಯಲ್ಲಿ ಸದಾ ಜಗಳ ಆಡುತ್ತಾ ಇರುವುದು.

ಕೈಕಾಲು ಅಲುಗಾಡಿಸುತ್ತಾ ಕುಳಿತುಕೊಳ್ಳುವುದು, ಮಹಿಳೆಯರು ಮುರಿದ ಬಾಚಣಿಕೆಯಲ್ಲಿ ತಲೆ ಬಾಚಿಕೊಳ್ಳುವುದು ಹಾಗೂ ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು, ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವುದು, ಅತಿಥಿಗಳು ಮನೆಗೆ ಬರುತ್ತಿದ್ದಾರೆ ಎಂದು ಗೊತ್ತಾದರೆ ಬೇಸರ ಮಾಡಿಕೊಳ್ಳುವುದು, ಅತಿಥಿಗಳಿಗೆ ಗೌರವ ಕೊಡದೆ ಇರುವುದು, ಅವರ ಜೊತೆ ಒರಟಾಗಿ ವರ್ತಿಸುವುದು, ಯಾವಾಗಲೂ ಅಕ್ಕಪಕ್ಕದವರ ಮನೆಯಿಂದ ಮನೆಗೆ ಬೇಕಾದ ವಸ್ತುಗಳನ್ನು ಸಾಲ ತೆಗೆದುಕೊಳ್ಳುವುದು.

ಮನೆಯಲ್ಲಿ ನಲ್ಲಿಗಳು ಸೋರುತ್ತಿದ್ದರೆ ಅವುಗಳನ್ನು ಸರಿ ಮಾಡದೆ ಹಾಗೆ ಬಿಡುವುದು, ಮನೆಯಲ್ಲಿ ಯಾವುದಾದರೂ ವಸ್ತು ಒಡೆದು ಹೋಗಿದ್ದರೆ ಅಥವಾ ಹಾಳಾಗಿದ್ದರೆ ಅದನ್ನು ಸರಿ ಮಾಡಿಸದೆ ಹಾಗೆ ಬಿಡುವುದು ಇದೆಲ್ಲವೂ ಕೂಡ ಮನೆ ಅಭಿವೃದ್ಧಿ ಆಗದೆ ಇರುವುದಕ್ಕೆ ಮುಖ್ಯ ಕಾರಣಗಳಾಗಿರುತ್ತವೆ. ಆದ್ದರಿಂದ ಇನ್ನು ಮುಂದೆ ಈ ತಪ್ಪುಗಳನ್ನು ಮಾಡದಿರಿ.

ವಾಷಿಂಗ್ ಮಿಷನ್ ಅನ್ನು 2 ತಿಂಗಳಿಗೊಮ್ಮೆ ಈ ರೀತಿ ಕ್ಲೀನ್ ಮಾಡಿದ್ರೆ ಸಾಕು ಯಾವತ್ತಿಗೂ ಮಿಷನ್ ರಿಪೇರಿಗೆ ಬರಲ್ಲ, ಬಟ್ಟೆಲಿ ಇರೋ ಕೊಳೆ ಕೂಡ ಚೆನ್ನಾಗಿ ಕ್ಲೀನ್ ಆಗುತ್ತದೆ.! ಮಿಷನ್ ಬಾಳಿಕೆ ಬರಲು ಹೀಗೆ ಮಾಡಿ

 

ಮನುಷ್ಯ ದೈಹಿಕ ಶ್ರಮ ಖರ್ಚು ಮಾಡಿ ಮಾಡುತ್ತಿದ್ದ ಕೆಲಸಗಳನ್ನು ಮಾಡಲು ಈಗ ಯಂತ್ರಶಕ್ತಿ ಬಳಕೆ ಆಗುತ್ತಿದೆ. ಇದು ಗೃಹಿಣಿಯರಿಗೂ ಕೂಡ ಅನುಕೂಲತೆ ಮಾಡಿ ಕೊಡುತ್ತಿದ್ದು ಅಡಿಗೆ ಮನೆ ಕೆಲಸ, ಮನೆ ಕೆಲಸಗಳಿಗೂ ಯಂತ್ರ ಶಕ್ತಿಯ ಬಳಕೆ ಆಗುತ್ತಿದೆ. ಪ್ರತಿ ಮನೆಗಳಲ್ಲೂ ಕೂಡ ಬಟ್ಟೆ ವಾಶ್ ಮಾಡುವುದಕ್ಕಾಗಿ ವಾಷಿಂಗ್ ಮಷೀನ್ ಬಂದಿರೋದನ್ನ ನಾವು ಕಾಣಬಹುದು.

ಅವರವರ ಅನುಕೂಲತೆ ಅಥವಾ ಇಚ್ಛೆಗೆ ಅನುಸಾರವಾಗಿ ಫ್ರಂಟ್ ಲೋಡ್ ಅಥವಾ ಟಾಪ್ ಲೋಡ್ ವಾಷಿಂಗ್ ಮಷೀನ್ ಗಳನ್ನು ಬಳಸಿ ಅವರ ದಿನನಿತ್ಯದ ಬಟ್ಟೆಗಳನ್ನು ಕ್ಲೀನ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಮಯದ ಉಳಿತಾಯ ಆಗುತ್ತಿರುವುದರ ಜೊತೆಗೆ ಮಹಿಳೆಯರ ಶ್ರಮವೂ ಕೂಡ ಉಳಿತಾಯವಾಗುತ್ತಿದೆ.

ಆದರೆ ಮಿಷಿನ್ ಬಳಕೆ ಬಗ್ಗೆ ಅನೇಕ ಕಂಪ್ಲೀಟ್ ಗಳನ್ನು ಕೂಡ ಸರ್ವೇಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಬಟ್ಟೆ ಚೆನ್ನಾಗಿ ಕ್ಲೀನ್ ಆಗುತ್ತಿಲ್ಲ ಎನ್ನುವುದು ಹೆಚ್ಚಿನ ಕಂಪ್ಲೇಂಟ್, ಇದರ ಜೊತೆಗೆ ಪದೇ ಪದೇ ರಿಪೇರಿಗೆ ಬರುತ್ತಿದ್ದೆ ಎನ್ನುವ ದೂರು ಕೂಡ. ಮನೆಯಲ್ಲಿ ಫ್ರಂಟ್ ಲೋಡ್ ವಾಷಿಂಗ್ ಮಿಷನ್ ಇರಲಿ ಅಥವಾ ಅದು ಟಾಪ್ ಲೋಡ್ ವಾಷಿಂಗ್ ಮಿಷನ್ ಇರಲಿ ನಿಮ್ಮ ಮನೆಗೆ ವಾಷಿಂಗ್ ಮಷೀನ್ ಹೆಚ್ಚು ದಿನ ಬಾಳಿಕೆ ಬರಬೇಕು.

ಪದೇ ಪದೇ ರಿಪೇರಿ ಆಗಬಾರದು ಎಂದರೆ ಮಿಷನ್ ಗೆ ಹಾಕುವ ಬಟ್ಟೆಯು ಕ್ಲೀನ್ ಆಗಿ ವಾಶ್ ಆಗಬೇಕು ಎಂದರೆ ಈಗ ನಾವು ಹೇಳುವ ಈ ಸುಲಭ ಉಪಾಯವನ್ನು ಬಳಸಿ. ಪ್ರತಿ ಎರಡು ತಿಂಗಳಿಗೊಮ್ಮೆ ಈಗ ನಾವು ಹೇಳುವ ಈ ರೀತಿಯಾಗಿ ನೀವು ನಿಮ್ಮ ವಾಷಿಂಗ್ ಮಿಷನ್ ಅನ್ನು ಕ್ಲೀನ್ ಮಾಡಿದರೆ ಈ ಎಲ್ಲ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.

ವಾಷಿಂಗ್ ಮಿಷನ್ ಅನ್ನು ಕೂಡ ಕ್ಲೀನ್ ಮಾಡಬೇಕು ಎನ್ನುವುದನ್ನು ಅನೇಕರು ಮರೆತುಬಿಡುತ್ತಾರೆ. ಇದೇ ಕಾರಣಕ್ಕಾಗಿ ಕೊಳೆ ನೀಟಾಗಿ ಹೊರ ಹೋಗದೆ ಅಲ್ಲಿಗೆ ಹಾಕಿದ ಬಟ್ಟೆಗಳಲ್ಲಿ ಮಿಕ್ಸ್ ಆಗಿ ಬಟ್ಟೆ ನೀಟಾಗಿ ವಾಶ್ ಆದ ರೀತಿ ಕಾಣುವುದಿಲ್ಲ. ಜೊತೆಗೆ ಅದು ಅಲ್ಲಿ ಸ್ಟೋರ್ ಆಗುವುದರಿಂದ ರಿಪೇರಿಗೆ ಬರುತ್ತದೆ. ಹಾಗಾಗಿ ವಾಷಿಂಗ್ ಮಿಷನ್ ಅನ್ನು ಈ ರೀತಿ ಕ್ಲೀನ್ ಮಾಡಿ.

ಒಂದು ಲೋಟ ನೀರಿಗೆ ಅರ್ಧ ಚಮಚ ಟೂಥ್ ಪೇಸ್ಟ್ ಒಂದು ಚಮಚ ಬೇಕಿಂಗ್ ಸೋಡಾ ಮತ್ತು ಒಂದು ಹೋಳು ನಿಂಬೆಹಣ್ಣಿನ ರಸ ಅಥವಾ ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಈ ಮಿಶ್ರಣದಿಂದ ಮೇಲಿರುವ ರಬ್ಬರ್ ಅನ್ನು ನೀಟಾಗಿ ಕ್ಲೀನ್ ಮಾಡಿ ಬೇಕಿದ್ರೆ ಇದರ ಜೊತೆಗೆ ವಿಮ್ ಜೆಲ್ ಕೂಡ ಬಳಸಬಹುದು. ಬೆಲ್ಟ್ ನೀಟ್ ಆಗಿ ವಾಷ್ ಆದಮೇಲೆ ಲಿಕ್ವಿಡ್ ಅಥವಾ ಡಿಟರ್ಜೆಂಟ್ ಹಾಕುವ ಬಾಕ್ಸ್ ಅನ್ನು ಕೂಡ ಒಂದು ಚಿಕ್ಕ ಬ್ರಷ್ ಸಹಾಯದಿಂದ ಚೆನ್ನಾಗಿ ಉಜ್ಜಿ ಕ್ಲೀನ್ ಮಾಡಿ.

ನಂತರ ಫಿಲ್ಟರ್ ಗಳಲ್ಲಿ ಕೊಳೆ ಜಾಸ್ತಿ ಸ್ಟೋರ್ ಆಗಿರುತ್ತದೆ ಅದನ್ನು ಕ್ಲೀನ್ ಆಗಿ ತೊಳೆದು ಮತ್ತೆ ಹಾಕಿ. ಕೊನೆಗೆ ಈ ಮೇಲೆ ಹೇಳಿದ ಸೊಲ್ಯೂಷನ್ ಅನ್ನು ಡ್ರಮ್ ಒಳಗೆ ಹಾಕಿ ನಿಮ್ಮ ವಾಷಿಂಗ್ ಮಿಷನ್ ನಲ್ಲಿ ಟಬ್ ಕ್ಲೀನ್ ಮಾಡಲು ಯಾವ ಆಪ್ಷನ್ ಇದೆ ಆ ಆಪ್ಷನ್ ಅನ್ನು ಆನ್ ಮಾಡಿ. ಒಂದು ವೇಳೆ ನಿಮ್ಮ ವಾಷಿಂಗ್ ಮೆಷಿನ್ ನಲ್ಲಿ ಟಬ್ ಅಥವಾ ಟ್ರಮ್ ಕ್ಲೀನ್ ಮಾಡುವ ಆಪ್ಷನ್ ಇಲ್ಲ ಎಂದರೆ ಕ್ವಿಕ್ ವಾಶ್ ಆನ್ ಮಾಡಿ ಕ್ಲೀನ್ ಮಾಡಿ ಪ್ರತಿ ಎರಡು ತಿಂಗಳಿಗೆ ಒಮ್ಮೆ ಈ ರೀತಿ ಕ್ಲೀನ್ ಮಾಡಿ ವಾಷಿಂಗ್ ಮಿಷನ್ ಮೆಂಟೇನ್ ಮಾಡಿ.

9 ನಾಣ್ಯಗಳನ್ನು ಸಾಯಿಬಾಬಾ ಮುಂದೆ ಇಟ್ಟು ಈ ರೀತಿ ಮಾಡಿ ಸಾಕು ಅಂದುಕೊಂಡಿರುವ ಕೆಲಸಗಳು, ನಿಮ್ಮ ಮನಸ್ಸಿನ ಬೇಡಿಕೆಗಳೆಲ್ಲಾ ನೆರವೇರುತ್ತದೆ.!

 

ಜೀವನದಲ್ಲಿ ಆರೋಗ್ಯದ, ಹಣಕಾಸು, ಸಂತಾನ ಭಾಗ್ಯ, ವಿದ್ಯಾಭ್ಯಾಸ, ಆಸ್ತಿ ವಿಚಾರದಲ್ಲಿ ತೊಂದರೆ ಇನ್ನೂ ಮುಂತಾದ ಯಾವುದೇ ಸಂಕಷ್ಟಗಳು ಇದ್ದರೂ ಕೂಡ ಅಥವಾ ಜೀವನದಲ್ಲಿ ಮನೆ ಕಟ್ಟಬೇಕು ಆಸ್ತಿ ಖರೀದಿಸಬೇಕು ಒಳ್ಳೆಯ ಉದ್ಯೋಗ ಪಡೆಯಬೇಕು ಅಥವಾ ಇಷ್ಟ ಪಟ್ಟವರನ್ನು ಕುಟುಂಬದ ಒಪ್ಪಿಗೆ ಮೇರೆಗೆ ಮದುವೆ ಆಗಬೇಕು ಎನ್ನುವ ಕೋರಿಕೆಗಳು ಇದ್ದರೂ ಕೂಡ ಅದು ಶೀಘ್ರವಾಗಿ ನೆರವೇರಬೇಕು ಎಂದರೆ.

ಶ್ರೀ ಸತ್ಯ ಶಿರಡಿ ಸಾಯಿಬಾಬಾ ಅವರ ಪ್ರಾರ್ಥನೆಯನ್ನು ಮಾಡಿ ಈಗ ನಾವು ಹೇಳುವ ಈ ರೀತಿ ಸಾಯಿಬಾಬಾ ಅವರನ್ನು 9 ದಿನಗಳು 9 ನಾಣ್ಯಗಳ ಮೂಲಕ ಪ್ರಾರ್ಥಿಸಿ. ನಿಮಗೆ ಯಾವ ರೀತಿಯ ಸಂಕಷ್ಟಗಳು ಇದ್ದರೂ 9 ದಿನಗಳಲ್ಲಿ ಪರಿಹಾರ ಆಗುತ್ತದೆ ಅಥವಾ ನಿಮ್ಮ ಕೋರಿಕೆಗಳು ನೆರವೇರುವ ಮುನ್ಸೂಚನೆಗಳು 9 ದಿನಗಳಿಗೂ ಮುಂಚೆಯೇ ದೊರೆಯುತ್ತದೆ.

ಒಂದು ಗುರುವಾರದಿಂದ ಮನೆ ಶುದ್ಧ ಮಾಡಿ ಸ್ಥಾನ ಮಾಡಿ ಮಡಿಯುಟ್ಟು ಸಾಯಿಬಾಬಾ ಅವರ ವಿಗ್ರಹವಿದ್ದರೆ ಅಥವಾ ಫೋಟೋ ಇದ್ದರೆ ಅದನ್ನು ಸ್ವಚ್ಛ ಮಾಡಿ ಗಂಧ ಇಟ್ಟು ಹಳದಿ ಹೂವನ್ನು ಇಟ್ಟು ಪೂಜೆ ಮಾಡಿ ಧೂಪ ದೀಪದಿಂದ ಆರತಿ ಮಾಡಿದ ಮೇಲೆ ಮನೆಯಲ್ಲಿ ಇರುವ ಪದಾರ್ಥವನ್ನು ಅಥವಾ ನಿಮ್ಮ ಶಕ್ತಿಯನುಸಾರ ಏನು ಸಾಧ್ಯವೋ ಆ ರೀತಿ ನೈವೇದ್ಯವನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ.

ಸಾಯಿಬಾಬಾ ಪ್ರಾರ್ಥನೆ ಮಾಡುವ ಭಕ್ತರಿಂದ ಸಾಯಿಬಾಬಾ ಅವರು ಏನನ್ನು ನಿರೀಕ್ಷೆ ಮಾಡುವುದಿಲ್ಲ ಮನಸ್ಸಿನಲ್ಲಿ ಭಕ್ತಿಯಿಂದ ವಿಶ್ವಾಸದಿಂದ ಪೂಜೆ ಮಾಡಿದರೆ ಅದೇ ಅವರಿಗೆ ತೃಪ್ತಿ ಈ ರೀತಿ ಆದ ಮೇಲೆ ನೀವು 9 ನಾಣ್ಯಗಳನ್ನು ತೆಗೆದುಕೊಳ್ಳಬೇಕು. ಒಂದು ರೂಪಾಯಿ ಅಥವಾ ಎರಡು ರೂಪಾಯಿ ಅಥವಾ ಐದು ರೂಪಾಯಿಯ 9 ನಾಣ್ಯಗಳನ್ನು ತೆಗೆದುಕೊಂಡು ಸಾಯಿಬಾಬಾ ಅವರ ಫೋಟೋ ಮುಂದೆ ಕಂಚು ಬೆಳ್ಳಿ, ಅಥವಾ ಹಿತ್ತಾಳೆಯ ತಟ್ಟೆಯಲ್ಲಿ ಅಕ್ಕಿಯನ್ನು ತುಂಬಿದೆ ಇಡಬೇಕು.

ಯಾವುದೇ ಕಾರಣಕ್ಕೂ ಸ್ಟೀಲ್ ತಟ್ಟೆಯನ್ನು ಬಳಸಬಾರದು. ಅಕ್ಕಿ ತುಂಬಿದ ಮೇಲೆ ಅದಕ್ಕೆ 3 ನಾಣ್ಯಗಳಂತೆ 9 ನಾಣ್ಯಗಳನ್ನು 3 ಸಾಲಿನಲ್ಲಿ ಜೋಡಿಸಬೇಕು. ಅದನ್ನು ಸಹಾ ದೇವರ ಫೋಟೋ ಅಥವಾ ವಿಗ್ರಹದ ಮುಂದೆ ಇಟ್ಟು ಅದಕ್ಕೂ ಸಹ ನೀರು ಇಟ್ಟು ಪೂಜೆ ಮಾಡಿ ಕೆಲಸಮಯ ಸಾಯಿಬಾಬಾ ಮುಂದೆ ಕುಳಿತು ಧ್ಯಾನ ಮಾಡಿ ಆಮೇಲೆ ನಿಮ್ಮ ಸಮಸ್ಯೆ ಏನು ಹೇಳುವುದನ್ನು ಹೇಳಿಕೊಡಬೇಕು ಅಥವಾ ನಿಮ್ಮ ಯಾವ ಆಸೆ ನೆರವೇರಬೇಕು ಎನ್ನುವುದನ್ನು ಹೇಳಿಕೊಡಬೇಕು.

9 ದಿನಗಳವರೆಗೆ ಪ್ರತಿದಿನವೂ ಕೂಡ ಆ ತಟ್ಟೆಯನ್ನು ಬದಲಾಯಿಸದೆ ಅಲ್ಲೇ ದೇವರ ವಿಗ್ರಹ ಅಥವಾ ಫೋಟೋ ಮುಂದೆ ಇಟ್ಟು ಒಂಬತ್ತನೇ ದಿನವು ಭಕ್ತಿಯಿಂದ ಇದೇ ರೀತಿ ಹೂವು ನೀರು ಇಟ್ಟು ಪೂಜೆ ಮಾಡಿ ಸಾಯಿಬಾಬಾ ಅವರನ್ನು ಕೂಡ ಪೂಜೆ ಮಾಡಿ ಪ್ರಾರ್ಥಿಸಿಕೊಳ್ಳಬೇಕು. 9 ದಿನಗಳು ಆದ ಬಳಿಕ 10ನೇ ದಿನ ಆ ನಾಣ್ಯಗಳಿಂದ ಯಾವುದಾದರೂ ಚಾಕಲೇಟ್ ತೆಗೆದುಕೊಂಡು ಅದನ್ನು ಚಿಕ್ಕ ಮಕ್ಕಳಿಗೆ ಕೊಡಬೇಕು, ಅಥವಾ ವಯಸ್ಸಾದವರು ಇದ್ದರೆ.

ಅವರಿಗೆ ಎಲೆ ಅಡಿಕೆಯನ್ನು ತೆಗೆದುಕೊಡಬೇಕು ಅಥವಾ ಯಾರಾದರೂ ತೀರ ಅವಶ್ಯಕತೆ ಇರುವವರಿಗೆ ಕಷ್ಟದಲ್ಲಿ ಇರುವವರಿಗೆ ಸಹಾಯವಾಗಲಿ ಎಂದು ಕೊಡಬೇಕು. ಈ ರೀತಿ ಮಾಡಿ ನೋಡಿ ನೀವು ಈ 9 ದಿನಗಳ ಪೂಜೆ ಮುಗಿಸುವ ಒಳಗಡೆ ನಿಮ್ಮ ಸಮಸ್ಯೆ ಪರಿಹಾರ ಆಗಿರುತ್ತದೆ ಅಥವಾ ನಿಮ್ಮ ಕೋರಿಕೆಯು ನೆರವೇರಿರುತ್ತದೆ.

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಬಂದರೆ ಈ ರೀತಿ ಅಪ್ಲೈ ಮಾಡಿ.! ಹೊಸ ವಿಧಾನ ಅರ್ಜಿ ಸ್ವೀಕೃತಿ ಆಗುತ್ತೆ.!

 

ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಹೊಸ ಸೇವಾ ಸಿಂಧು ಪೋರ್ಟಲ್ ತೆರೆದಿದೆ. ಗೃಹಜ್ಯೋತಿ ಯೋಜನೆಯ ಅನುಕೂಲತೆ ಪಡೆಯಲು ಮನೆ ಮಾಲೀಕರು ಮತ್ತು ಸರ್ಕಾರ ಕೇಳಿರುವ ದಾಖಲೆಗಳನ್ನು ಮತ್ತು ವಿವರಗಳನ್ನು ಕೊಟ್ಟು ಆನ್ಲೈನ್ ಮತ್ತು ಆಫ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಆಫ್ಲೈನಲ್ಲಿ ಅರ್ಜಿ ಸಲ್ಲಿಸುವವರು ಅವರ ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ವಿದ್ಯುತ್ ಕಚೇರಿಗಳಿಗೆ ಹೋಗಿ ಪೂರಕ ದಾಖಲೆಗಳನ್ನು ಕೊಟ್ಟು ಅರ್ಜಿ ಫಾರಂ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಆದರೆ ಇತ್ತೀಚಿನ ದಿನದಲ್ಲಿ ಎಲ್ಲಾ ವ್ಯವಹಾರಗಳು ಕೂಡ ಆನ್ಲೈನ್ ಮೂಲಕ ನಡೆಯುತ್ತಿರುವುದರಿಂದ ಹೆಚ್ಚಿನ ಜನರು ತಮ್ಮ ಮೊಬೈಲ್ ಮೂಲಕ ಮತ್ತು ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳು ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಕರ್ನಾಟಕದಲ್ಲಿರುವ ಎಲ್ಲಾ ಕುಟುಂಬಗಳ ಬಳಕೆದಾರರು ಕೂಡ ಈ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಮುಗಿ ಬೀಳುತ್ತಿರುವುದರಿಂದ ಹಲವೆಡೆ ಸರ್ವರ್ ಪ್ರಾಬ್ಲಮ್ ಎನ್ನುವ ಮಾತು ಕೇಳಿ ಬರುತ್ತಿದೆ. ಈ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲು ವಿದ್ಯುತ್ ಇಲಾಖೆ ಕೂಡ ಶ್ರಮಿಸುತ್ತಿದೆ. ಒಂದು ವೇಳೆ ಸರ್ವರ್ ಸಮಸ್ಯೆಯಿಂದ ಗ್ರಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ತಡವಾಗುತ್ತಿದೆ ಎಂದರೆ ಈ ಟೆಕ್ನಿಕ್ ಬಳಸಿ ಅರ್ಜಿ ಸಲ್ಲಿಸಿ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ವಿದ್ಯುತ್ ಬಿಲ್
● ಆಧಾರ್ ಸಂಖ್ಯೆ
● ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ಗೂಗಲ್ ಅಲ್ಲಿ ಗೃಹ ಜ್ಯೋತಿ ಯೋಜನೆ ನೋಂದಣಿಗೆ ಅನುಕೂಲವಾಗಲು ಕರ್ನಾಟಕ ಸರ್ಕಾರವು ರೂಪಿಸಿರುವ ಸೇವಾ ಸಿಂಧು ವೆಬ್‌ಸೈಟ್‌
https://sevasindhuservices.karnataka.gov.in  ಬ್ರೌಸ್ ಮಾಡಿ.
● ಮೊದಲ ಬಾರಿಗೆ ಈ ಪೋರ್ಟಲ್ ಬಳಸುತ್ತಿದ್ದರೆ ಹೊಸ ಬಳಕೆದಾರರ ನೋಂದಣಿ ಪ್ರಾರಂಭಿಸಲು ಕ್ಯಾಪ್ಚಾ ಕೋಡ್ ಜೊತೆಗೆ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ ಈ ಹಂತ ಪೂರೈಸಿ ಮುಂದಿನ ಹಂತಕ್ಕೆ ಹೋಗಿ.

● ಆಗ ನಿಮ್ಮನ್ನು ಡಿಜಿಲಾಕರ್‌ಗೆ ಮರುನಿರ್ದೇಶಿಸಲಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ ಮುಂದಿನ ಹಂತಕ್ಕೆ ಹೋಗಿ.
● ಕೇಳಲಾಗುವ ಎಲ್ಲಾ ಅನುಮತಿಗಳಿಗೆ ಪ್ರವೇಶವನ್ನು ಅನುಮತಿಸಿ.
● ಮುಂದಿನ ಪುಟದಲ್ಲಿ, ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಮಾರ್ಗಸೂಚಿಗಳ ಆಧಾರದ ಮೇಲೆ ಹೊಸ ಪಾಸ್‌ವರ್ಡ್ ಅನ್ನು ರಚಿಸಿ, ಕ್ಯಾಪ್ಚಾವನ್ನು ನಮೂದಿಸಿ ಮತ್ತು ಸಬ್ಮಿಟ್ ಆಪ್ಷನ್ ಕ್ಲಿಕ್ ಮಾಡಿ.

● ಈಗ, ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸಿದ OTP ಗಳನ್ನು ನಮೂದಿಸಿ. ಮೌಲ್ಯೀಕರಿಸು ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಿ.
● ಯಶಸ್ವಿಯಾಗಿ ಈ ಎಲ್ಲಾ ಹಂತಗಳನ್ನು ಪೂರೈಸಿದರೆ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಹೊಸ ಬಳಕೆದಾರ ಖಾತೆಯನ್ನು ರಚನೆಯಾಗುತ್ತದೆ.
● ಈಗ ಮತ್ತೊಮ್ಮೆ ಪೋರ್ಟಲ್‌ಗೆ ಹೋಗಿ ಮತ್ತು ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಿ ಟ್ಯಾಬ್‌ ಅಥವಾ ಮೊಬೈಲ್ ನಲ್ಲಿ ನಿಮ್ಮ ಅಪ್ಲಿಕೇಶನ್ ಉಲ್ಲೇಖ ಸಂಖ್ಯೆಯನ್ನು ನಮೂದಿಸಿ.
● ನಿಮ್ಮ ಗೃಹ ಜ್ಯೋತಿ ಅಪ್ಲಿಕೇಶನ್‌ನ ವಿವರಗಳು ಮತ್ತು ಸ್ಥಿತಿಯನ್ನು ತೋರಿಸುತ್ತದೆ. ಸರ್ವರ್ ಸಮಸ್ಯೆಯಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಗೊಂದಲವಾದಾಗ ಈ ರೀತಿ ಮಾಡಿ.

ಯೂನಿಯನ್ ಬ್ಯಾಂಕ್ ನ ಹಲವು ಶಾಖೆಗಳಲ್ಲಿ ಉದ್ಯೋಗಾವಕಾಶ, 10ನೇ ತರಗತಿ ಆಗಿದ್ರೆ ಸಾಕು. ವೇತನ 25 ಸಾವಿರ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

 

ಯೂನಿಯರ್ ಬ್ಯಾಂಕಲ್ಲಿ ಚಿನ್ನಾಭರಣ ಮೌಲ್ಯಮಾಪಕ ಮತ್ತು ತೂಕ ಮಾಪನಗಾರ ಹುದ್ದೆಯ ಹಲವು ಪೋಸ್ಟ್ಗಳು ಖಾಲಿ ಇದ್ದು, ಆಸಕ್ತರಿಗೆ ಅರ್ಜಿ ಸಲ್ಲಿಸಲು ಯೂನಿಯನ್ ಬ್ಯಾಂಕ್ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎನ್ನುವ ವಿಷಯದ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

ಜೊತೆಗೆ ಯಾವ ಶಾಖೆಗಳಲ್ಲಿ ಹುದ್ದೆಗಳಿವೆ, ವೇತನ ಶ್ರೇಣಿ ಏನಿರುತ್ತದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ, ಯಾವ ರೀತಿ ಅರ್ಜಿ ಸಲ್ಲಿಸಬೇಕು ಯಾವೆಲ್ಲಾ ದಾಖಲೆಗಳನ್ನು ಕೊಡಬೇಕು ಮತ್ತು ಈ ಹುದ್ದೆ ಪಡೆಯುವವರಿಗೆ ಇರುವ ಪ್ರಮುಖ ನಿಬಂಧನೆಗಳು ಏನು? ಇತ್ಯಾದಿ ವಿಚಾರಗಳ ಬಗ್ಗೆ ಕೂಡ ವಿವರವಾಗಿ ತಿಳಿಸಲಾಗಿದೆ. ಪ್ರಕಟಣೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ಉದ್ಯೋಗ ಸಂಸ್ಥೆಯ ಹೆಸರು:- ಯೂನಿಯನ್ ಬ್ಯಾಂಕ್
ಉದ್ಯೋಗ ಸ್ಥಳ:- ಬೆಳಗಾವಿ
ಒಟ್ಟು ಹುದ್ದೆಗಳ ಸಂಖ್ಯೆ:- 200
ಹುದ್ದೆಯ ಹೆಸರು:- ಚಿನ್ನಾಭರಣ ಮೌಲ್ಯಮಾಪಕರು
ವೇತನ ಶ್ರೇಣಿ:- 25,000 ಮಾಸಿಕವಾಗಿ
ಶೈಕ್ಷಣಿಕ ವಿದ್ಯಾರ್ಹತೆ:- 10ನೇ ತರಗತಿ

ವಯೋಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 60 ವರ್ಷಗಳು

ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಬೇಕಾದ ಇತರೆ ಅರ್ಹತೆಗಳು:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಭಾರತೀಯ ಪ್ರಜೆಯಾಗಿರಬೇಕು ಮತ್ತು ಹುದ್ದೆಗಳು ಖಾಲಿ ಇರುವ ಶಾಖೆಯ ಹತ್ತಿರದ ಪ್ರದೇಶದ ಖಾಯಂ ನಿವಾಸಿಯಾಗಿರಬೇಕು. ಇ-ಕೆವೈಸಿ ಪೂರ್ಣಗೊಂಡಿರಬೇಕು.
● ಅವರ ವ್ಯಾಪಾರ, ವ್ಯವಹಾರ ಮತ್ತು ವೃತ್ತಿಯಲ್ಲಿ ಉತ್ತಮವಾಗಿ ಗುರುತಿಸಿಕೊಂಡಿರಬೇಕು.

● ಚಿನ್ನಾಭರಣಗಳ ಮೌಲ್ಯಮಾಪನ ಮತ್ತು ನಿರ್ವಹಣೆಯಲ್ಲಿ ಐದು ವರ್ಷಗಳ ಪ್ರಾಯೋಗಿಕ ಅನುಭವವನ್ನು ಹೊಂದಿರಬೇಕು. ಹಿಂದಿನ ಉದ್ಯೋಗದಾತರಿಂದ ಅನುಭವದ ಪ್ರಮಾಣ ಪತ್ರ ಪುರಾವೆ ಪಡೆದಿರಬೇಕು.
● ಜ್ಯುವೆಲ್ ಮೌಲ್ಯಮಾಪಕರ ಸಂಘದಿಂದ ಪ್ರಮಾಣ ಪತ್ರ ಕಡ್ಡಾಯ.
● ಪ್ರಾಯೋಗಿಕ ಅನುಭವದ ಆಧಾರದ ಮೇಲೆ ಅಂಗಡಿ ನಡೆಸುತ್ತಿದ್ದರೆ ಪರವಾನಗಿ ಒಂದು ವರ್ಷಗಳ ಹಳೆಯದಾಗಿರಬೇಕು.

● ಸರಿಯಾದ ಗುರುತಿನೊಂದಿಗೆ ಸ್ಥಳೀಯ ಬುಲಿಯನ್ ಮಾರುಕಟ್ಟೆಯ ಸದಸ್ಯನಾಗಿರಬೇಕು.
● ಅರ್ಜಿದಾರರು NSME ವಿಭಾಗ, ಗೋಲ್ಡ್ ಜ್ಯುವೆಲ್ ಅಸೋಸಿಯೇಷನ್, ಗೋಲ್ಡ್ ಸ್ಮಿತ್ ಅಸೋಸಿಯೇಷನ್ ಇತ್ಯಾದಿ ತರಬೇತಿ ಸಂಸ್ಥೆಯಿಂದ ನೀಡಲಾದ ಆಭರಣ ತಯಾರಿಕೆಯಲ್ಲಿ ಅನುಭವ ಪತ್ರ ಹೊಂದಿದ್ದರೂ ಮಾನ್ಯವಾಗುತ್ತದೆ.

● ಅರ್ಜಿದಾರರು ಈಗಾಗಲೇ ಯಾವುದಾದರೂ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಇದೇ ವೃತ್ತಿ ಮಾಡುತ್ತಿದ್ದರೆ NOC ಪ್ರಮಾಣಪತ್ರ ಮತ್ತು ಗೌಪ್ಯತೆಯ ರಿಪೋರ್ಟನ್ನು ಪಡೆಯಬೇಕು.
● ಉದ್ಯೋಗ ಮಾಡುವ ಶಾಖೆಯಲ್ಲಿ ರೂ.25,000 ಭದ್ರತಾ ಠೇವಣಿಯನ್ನು ಎಂಪ್ಯಾನೆಲ್ ಮೆಂಟ್ ಸಮಯದಲ್ಲಿ ಶಾಖೆಯಲ್ಲಿ ಇರಿಸಬೇಕು. ಎಂಪ್ಯಾನೆಲ್ ಆಗಿರುವ ಶಾಖೆಯ ಸಿಬ್ಬಂದಿಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರಬಾರದು.

ಉದ್ಯೋಗ ಖಾಲಿ ಯೂನಿಯನ್ ಬ್ಯಾಂಕ್ ಶಾಖೆಗಳು:-
● ಅಳಗವಾಡಿ
● ಅವರಾದಿ
● ಹೆಬ್ಬಾಳ
● ಕಡಬಿ
● ಸೌಂದಲಗಾ
● ತುರ್ಕಶಿಗಿ ಹಳ್ಳಿ
● ಚಿಕ್ಕೋಡಿ
● ಬೆಳಗಾವಿ – ಕಡಲೋಕರ ಗಲ್ಲಿ
● ಬೆಳಗಾವಿ – KLS ಗೋಗಟೆ ಕಾಲೇಜು ರಸ್ತೆ
● ಬೆಳಗಾವಿ – ಮಾರ್ಕೆಟ್ ಯಾರ್ಡ್
● ಬೆಳಗಾವಿ – RPD ಕಾಲೇಜು ರಸ್ತೆ
● ಬೆಳಗಾವಿ – ರವಿವಾರ ಪೇಟೆ
● ಬೆಳಗಾವಿ – ಶಹಾಪುರ (ECB)
● ಖಣಾಪುರ
● ಅಥಣಿ
● ಬೈಲಹೊಂಗಲ
● ಸಮಾನದೇವಿ ಗಲ್ಲಿ
● ಪೀರನವಾಡಿ
● ನವಲಿಹಾಳ

ಅರ್ಜಿ ಸಲ್ಲಿಸುವ ವಿಧಾನ:-
● ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
● ಶಾಖೆಯ ವ್ಯವಸ್ಥಾಪಕರ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 12.06.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23.06.2023.

ವರ್ಷಕ್ಕೆ ಕೇವಲ 4 ದಿನ ಮಾತ್ರ ಕೆಲಸ, ಸಂಬಳ ಮಾತ್ರ 1 ಕೋಟಿ, ಯಾವುದೇ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಈ ಕೆಲಸಕ್ಕೆ ಸೇರಿಕೊಳ್ಳಬಹುದು.! ಅದ್ಯಾವ ಹುದ್ದೆ ಗೊತ್ತಾ.?

 

ಪ್ರತಿಯೊಬ್ಬರ ವಿದ್ಯಾರ್ಥಿಯ ಜೀವನದ ಮಹತ್ವಕಾಂಕ್ಷೆ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಹೋಗಿ ಕೈ ತುಂಬ ಸಂಬಳ ಸಂಪಾದನೆ ಮಾಡಬೇಕು ಎನ್ನುವುದು. ಆ ಮೂಲಕ ಉತ್ತಮ ಗುಟ್ಟ ಮಟ್ಟದ ಜೀವನ ನಡೆಸಿ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು. ಜೊತೆಗೆ ಈಗಿನ ಕಾಲದಲ್ಲಿ ಒಬ್ಬ ವ್ಯಕ್ತಿಯ ಸಾಧನೆಯನ್ನು ಆತ ಮಾಡುತ್ತಿರುವ ಉದ್ಯೋಗ, ಆತ ತೆಗೆದುಕೊಳ್ಳುವ ಸಂಬಳದ ಆಧಾರದ ಮೇಲೆ ಲೆಕ್ಕ ಹಾಕಿಬಿಡುತ್ತಾರೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಹೆಚ್ಚು ಸಂಬಳ ಸಿಗುವ ಉದ್ಯೋಗದ ಕಡೆ ಮನಸ್ಸು ಮಾಡುತ್ತಾರೆ. ಕೆಲವರು ಅವರ ಇಚ್ಛೆಯ ಕೆಲಸ ಸಿಗುವವರೆಗೂ ಕೂಡ ಯಾವ ಕೆಲಸಕ್ಕೂ ಹೋಗದೆ ಹುಡುಕುತ್ತಾ ಕಾಯುತ್ತಿರುತ್ತಾರೆ. ಕೆಲಸದ ಸಮಯ ಕಡಿಮೆ, ಸಂಬಳ ಹೆಚ್ಚು ಸಿಗುವ ಉದ್ಯೋಗ ಸಿಕ್ಕರೆ ಬಿಟ್ಟರೆ ಆ ಬದುಕು ಸ್ವರ್ಗಕ್ಕೆ ಸಮಾನ.

ಆದರೆ ಪ್ರಸ್ತುತವಾಗಿ ಪ್ರಪಂಚದ ಯಾವುದೇ ಕಡೆ ಹೋದರು ಕೂಡ ಸಂಬಳಕ್ಕೆ ದುಡಿದವರು ವಾರದಲ್ಲಿ ಕನಿಷ್ಠ ಐದು ದಿನಗಳಾದರೂ ಕೆಲಸ ಮಾಡಲೇಬೇಕು. ಈ ರೀತಿ ಸಂಬಳಕ್ಕೆ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ತಿಂಗಳು ಪೂರ್ತಿ ಕಚೇರಿಗೆ ಹೋಗುವ ಅವಶ್ಯಕತೆ ಇರುತ್ತದೆಹ ಆದರೆ ಅಮೆರಿಕದಲ್ಲಿ ಒಂದು ಉದ್ಯೋಗ ಇದೆ.

ಭಾರತೀಯ ರೂಪಾಯಿ ಮೌಲ್ಯದಲ್ಲಿ ಒಂದು ಕೋಟಿ ಸಂಬಳ ಕೂಡ ಸಿಗುತ್ತದೆ. ಆದರೆ ಇಷ್ಟು ಸಂಬಳ ಸಿಗಬೇಕು ಎಂದರೆ ಅವರು ಇನ್ನೆಷ್ಟು ಓದಬೇಕು, ಯಾವ ಕಷ್ಟದ ಪರೀಕ್ಷೆಗಳನ್ನು ಬರೆದು ಪಾಸ್ ಮಾಡಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ಯೋಚಿಸುವ ಗೀಳಿಗೆ ಹೋಗಬೇಡಿ. ಈ ಉದ್ಯೋಗ ಮಾಡಲು ವಿದ್ಯಾಭ್ಯಾಸದ ಅವಶ್ಯಕತೆಯೇ ಇಲ್ಲ.

ಉತ್ತಮ ದೈಹಿಕ ಸಾಮರ್ಥ್ಯ ಹೊಂದಿರುವ ವ್ಯಕ್ತಿ ಈ ಉದ್ಯೋಗ ಮಾಡಬಹುದು. ಅದು ಕೂಡ ವರ್ಷದಲ್ಲಿ ನಾಲ್ಕೇ ದಿನಗಳ ಕೆಲಸ, ಇದು ಬಹಳ ಆಶ್ಚರ್ಯ ಉಂಟು ಮಾಡಿದರೂ ಈ ಮಾತು ಸತ್ಯ. ಯಾಕೆಂದರೆ ಅಮೆರಿಕದಲ್ಲಿ ಈ ರೀತಿ ವರ್ಷದಲ್ಲಿ ನಾಲ್ಕು ದಿನ ಈ ಕೆಲಸ ಮಾಡುವ ವ್ಯಕ್ತಿಗೆ ಒಂದು ಕೋಟಿ ಸಂಬಳ ಕೊಡುತ್ತಾರೆ. ಆದರೂ ಆ ಕೆಲಸ ಮಾಡಲು ಯಾರು ಮುಂದೆ ಬರುತ್ತಿಲ್ಲ. ಇದಕ್ಕೆಲ್ಲ ಕಾರಣ ಅವರು ಕೊಟ್ಟಿರುವ ಕೆಲಸ.

ಆ ಕೆಲಸ ಏನು ಎಂದರೆ ಅಮೆರಿಕದ ದಕ್ಷಿಣ ಡಕೋಟಾದಲ್ಲಿ ಇರುವ 600 ಕಿಲೋಮೀಟರ್ಗಿಂತ ಹೆಚ್ಚಿನ ಎತ್ತರದ ಟವರ್ ಮೇಲೆ ಇರುವ ಬಲ್ಬನ್ನು ಬದಲಾಯಿಸುವ ಕೆಲಸ ಇದು, ವರ್ಷದಲ್ಲಿ ಎರಡು ಬಾರಿ ಅಥವಾ ಒಮ್ಮೊಮ್ಮೆ ಆರು ತಿಂಗಳಿಗೆ ಎರಡು ಬಾರಿ ಈ ಟವರ್ ಮೇಲೆ ಇರುವ ಬಲ್ಬ್ ಅನ್ನು ಬದಲಾಯಿಸಬೇಕು ಈ ಕೆಲಸ ಮಾಡಲು ಹೆಚ್ಚು ಕಡಿಮೆ ಏಳು ಗಂಟೆಗಳ ಅವಧಿ ಹಿಡಿಯುತ್ತದೆ ಮೂರು ತಾಸುಗಳು ಟವರ್ ಏರಲು ಮತ್ತು ಅಷ್ಟೇ ಸಮಯ ಇಳಿಯಲು ಬೇಕು.

ಈ ರೀತಿ ಹೇಳುವಾಗ ಬಹಳ ಸ್ಪೀಡ್ ಆಗಿ ಗಾಳಿ ಬೀಸುತ್ತದೆ ಜೊತೆಗೆ ಈ ಕೆಲಸವನ್ನು ಒಬ್ಬರೇ ಮಾಡಬೇಕು ಇಂಥಹ ಕೆಲಸ ಮಾಡುವವರಿಗೆ ಎತ್ತರದ ಭಯ ಇರಬಾರದು. ದೈಹಿಕವಾಗಿ ಸಮರ್ಥವಾಗಿರುವ ವ್ಯಕ್ತಿಗೆ ಯಾವುದೇ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಕೋಟಿ ಸಂಬಳ ಕೊಟ್ಟು ಈ ಕೆಲಸಕ್ಕೆ ಇರಿಸಿಕೊಳ್ಳುತ್ತಾರೆ. ಆದರೂ ಬಹಳ ಅಪಾಯದ ಕೆಲಸ ಆಗಿರುವ ಕಾರಣ ಯಾರು ಕೂಡ ಈ ಕೆಲಸ ಮಾಡಲು ಮುಂದೆ ಬರುತ್ತಿಲ್ಲ.

ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಕುಡಿತದ ಚಟ ಬಿಡಿಸುವ ಮನೆಮದ್ದು.!

 

ಕುಡಿದ ಚಟ ಎನ್ನುವುದು ಒಂದು ಸಾಮಾಜಿಕ ಪಿಡುಗು ಎಂದು ಹೇಳಬಹುದು. ಯಾಕೆಂದರೆ ಒಬ್ಬ ವ್ಯಕ್ತಿ ಕುಡಿತಕ್ಕೆ ದಾಸನಾದರೆ ಆತನ ಆರೋಗ್ಯ ಹದ ಗೆಡುವುದು ಮಾತ್ರವಲ್ಲದೆ ಆತನನ್ನೇ ಅವಲಂಬಿತವಾಗಿದ್ದ ಅವನ ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ಜೊತೆಗೆ ಅವರ ಮಾನಸಿಕ ನೆಮ್ಮದಿಯನ್ನು ಹಾಳಾಗುತ್ತದೆ, ಆತನ ಮಕ್ಕಳ ಉಜ್ವಲ ಭವಿಷ್ಯ ಹಾಳಾಗಿ ಪರೋಕ್ಷವಾಗಿ ದೇಶಕ್ಕೂ ಕೂಡ ಇದು ಹಾನಿ.

ಕುಡಿತದ ಚಟವನ್ನು ಬಿಡಿಸಲು ಪ್ರತಿಯೊಂದು ಕುಟುಂಬದಲ್ಲಿರುವ ಮಹಿಳೆಯರು ಕೂಡ ಸಾಕಷ್ಟು ಹರಸಾಹಸಗಳನ್ನು ಪಡುತ್ತಾರೆ. ಇಂಗ್ಲಿಷ್ ಮೆಡಿಸಿನ್ಗಳು ಅಥವಾ ಡಿ ಅಡಿಕ್ಷನ್ ಕೇಂದ್ರಗಳಿಗೆ ಹಾಕಿದರು ಕೂಡ ಗುಣವಾಗಿರುವುದಿಲ್ಲ ಅಂತವರು ಈಗ ನಾವು ಹೇಳುವ ಈ ಮನೆಮದ್ದನ್ನು ತಪ್ಪದೆ ಒಂದು ತಿಂಗಳ ಮಾಡಿ ಸಾಕು ಜೀವನಪೂರ್ತಿ ಅವರು ಕುಡಿತ ಅಥವಾ ಇನ್ಯಾವುದೇ ದುಷ್ಚಟಗಳ ಸಹವಾಸಕ್ಕೆ ಹೋಗುವುದಿಲ್ಲ.

ಧೂಮಪಾನ, ಮಧ್ಯಪಾನ, ತಂಬಾಕು ಗುಟ್ಕಾ ಸೇವನೆ ಈ ರೀತಿ ಯಾವುದೇ ಕೆಟ್ಟ ಅಭ್ಯಾಸವನ್ನು ಹೊಂದಿದ್ದರೂ ಕೂಡ ಅವರ ಮನಸ್ಸು ಪರಿವರ್ತನೆಯಾಗಿ ಅವರೇ ಬದಲಾಗುವಂತೆ ಚಿಕಿತ್ಸೆ ನೀಡುತ್ತದೆ ಈ ಔಷಧಿ. ಇದನ್ನು ಮಾಡಲು ದುಬಾರಿ ಖರ್ಚು ಆಗುವುದು. ಮನಸ್ಸಿನ ರಜಸು ಗುಣವನ್ನು ಹೋಗಿಸಿ ಸಾತ್ವಿಕ ಭಾವನೆಯನ್ನು ತರುವ ಪಾಸಿಟಿವ್‌ ಸ್ಟಿಮುಲೆಂಟ್ ಆಹಾರ ಪದಾರ್ಥಗಳಿಂದ ಈ ಮನೆ ಮದ್ದನ್ನು ಮಾಡಬಹುದು.

ಇವುಗಳ ಸೇವನೆಯು ಮನಸ್ಸನ್ನು ಪರಿವರ್ತನೆಗೆ ತಂದು ಯಾವುದೇ ಕೆಟ್ಟ ಅಭ್ಯಾಸಗಳ ರೂಢಿ ಇದ್ದರೂ ಕೂಡ ನಿಧಾನವಾಗಿ ಅದರಿಂದ ಮುಕ್ತರಾಗಲು ಮನಸ್ಸನ್ನು ಎಚ್ಚರಗೊಳಿಸುತ್ತದೆ. ಈ ಕಾರಣದಿಂದ ಅವರಾಗಿಯೇ ದುಷ್ಚಟಗಳಿಂದ ಹೊರ ಬರುತ್ತಾರೆ.
ಇದನ್ನು ಮಾಡಲು ಏಲಕ್ಕಿ, ಬಜೆ, ಓಂಕಾಳು, ಜೀರಿಗೆ, ಒಣ ಶುಂಠಿ, ಇಷ್ಟು ಇದ್ದರೆ ಸಾಕು.

ಇದೆಲ್ಲವನ್ನು ಕೂಡ ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಗ್ರೈಂಡ್ ಮಾಡಿ ನಂತರ ಒಂದು ಬಟ್ಟೆಯ ಸಹಾಯದಿಂದ ಅದನ್ನು ಸೋಸಿ ನೈಸ್ ಪೌಡರ್ ಮಾಡಿ ಇಟ್ಟುಕೊಳ್ಳಿ. ಈ ಪೌಡರ್ ಅನ್ನು ಒಂದು ಡಬ್ಬದಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು. ಬಳಿಕ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಊಟಕ್ಕೂ ಮುನ್ನ ಒಂದು ಲೀಟರ್ ನೀರಿಗೆ ಎರಡರಿಂದ ಮೂರು ಚಮಚ ಈ ಪೌಡರ್ ಅನ್ನು ಹಾಕಿ ಚೆನ್ನಾಗಿ ಕುದಿಸಿ.

ಒಂದು ಲೀಟರ್ ನೀರು 100ml ಆಗುವವರೆಗೂ ಕೂಡ ನೀರು ಕುದಿಯಬೇಕು. 200 ml ಗೆ ಅಂದಾಗ ಚೂರು ಬೆಲ್ಲವನ್ನು ಇದಕ್ಕೆ ಹಾಕಿ 100ml ಆಗುವವರೆಗೂ ಕೂಡ ಚೆನ್ನಾಗಿ ಕುದಿಸಿ, ಅದನ್ನು ಶೋಧಿಸದೆ ಕುಡಿಯಲು ಆ ವ್ಯಕ್ತಿಗೆ ಕೊಡಿ. ಒಂದು ತಿಂಗಳಿನವರೆಗೆ ಪ್ರತಿದಿನವೂ ಕೂಡ ತಪ್ಪದೇ ಬೆಳಗ್ಗೆ ಹಾಗೂ ರಾತ್ರಿ ಇದರ ಸೇವನೆ ಮಾಡುತ್ತಾ ಬಂದರೆ ಆಶ್ಚರ್ಯಕರ ರೀತಿಯಲ್ಲಿ ಅವರೇ ಚಟದಿಂದ ಹೊರ ಬರುತ್ತಾರೆ.

ಜೊತೆಗೆ ಒಣಶುಂಠಿ, ಏಲಕ್ಕಿ, ಓಂ ಕಾಳು, ಜೀರಿಗೆ ಕಾಳು, ಬಜೆ ಇವುಗಳಲ್ಲಿರುವ ಔಷಧೀಯ ಅಂಶಗಳು ದೇಹದಲ್ಲಿ ರಕ್ತ ಶುದ್ಧಿಯಾಗಲು ಜೀರ್ಣಾಂಗ ವ್ಯವಸ್ಥೆ ಶುದ್ದಿ ಆಗಲು ರಕ್ತನಾಳಗಳಲ್ಲಿ ಇರುವ ಬ್ಲಾಕೇಜ್ ಕ್ಲಿಯರ್ ಆಗಲು ಸಹಾಯ ಮಾಡುತ್ತದೆ. ಅವರು ಆರೋಗ್ಯವಾಗಿ ಸದೃಢವಾಗುವುದರ ಜೊತೆಗೆ ಇನ್ನೆಂದು ಕೂಡ ಧೂಮಪಾನ ಮದ್ಯಪಾನ ಮಾಡುವುದಿಲ್ಲ.

90%ರಷ್ಟು ಜನ ಇದರಿಂದ ಪರಿಹಾರ ಕಂಡುಕೊಂಡಿದ್ದಾರೆ. ಒಂದು ವೇಳೆ ಇದು ವರ್ಕ್ ಆಗಲಿಲ್ಲ ಎಂದರೆ ಆಯುರ್ವೇದ ಮೆಡಿಸನ್ ಆದ ನಶಾ ಮುಕ್ತ ಚೂರ್ಣವನ್ನು ಅವರು ಸೇವಿಸುವ ಆಹಾರ ಪದಾರ್ಥದಲ್ಲಿ ದಿನಕ್ಕೆ ಒಂದು ಬಾರಿ ಅವರಿಗೆ ಗೊತ್ತಾಗದಂತೆ ಹಾಕಿ ಕೊಡಬಹುದು. ಒಂದು ತಿಂಗಳು ಈ ರೀತಿ ನಶಮುಕ್ತ ಚೂರ್ಣ ಸೇವನೆ ಮಾಡಿದ ಮೇಲೆ ಅವರು ಕೆಟ್ಟ ಅಭ್ಯಾಸಗಳಿಂದ ಮುಕ್ತರಾಗುತ್ತಾರೆ.