Home Blog Page 190

ಇನ್ಮೇಲೆ ಆಸ್ತಿ ರಿಜಿಸ್ಟರ್ ಮಾಡಿಸಿದ್ರೆ ಸಾಲಲ್ಲ, ಆಸ್ತಿ ವಿಚಾರವಾಗಿ ಹೊಸ ರೂಲ್ಸ್ ಜಾರಿ. ಈ ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ಆಸ್ತಿ ನಿಮ್ಮ ಸ್ವಂತದಾಗುತ್ತೆ.!

 

ಆಸ್ತಿ ಖರೀದಿ ಹಾಗೂ ಮಾರಾಟದ ವಿಚಾರವಾಗಿ ಅನೇಕರಿಗೆ ಇನ್ನು ಸರಿಯಾದ ಮಾಹಿತಿಯೇ ತಿಳಿದಿಲ್ಲ. ಹಣ ಕೊಟ್ಟು ನಂತರ ಮೋಸ ಹೋಗಿರುವ ಅನೇಕ ಪ್ರಕರಣಗಳನ್ನು ನಾವು ಕೇಳಿದ್ದೇವೆ. ಹಾಗಾಗಿ ಆಸ್ತಿ ಖರೀದಿ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಒಂದು ಆಸ್ತಿಯ ಸಂಪೂರ್ಣ ಹಕ್ಕು ವರ್ಗಾವಣೆ ಖರೀದಿಸಿದಾತನಿಗೆ ಆಗಲು ಏನೆಲ್ಲಾ ದಾಖಲೆಗಳನ್ನು ಬೇಕು, ಅದಕ್ಕಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾವಾಗ ಸಂಪೂರ್ಣವಾಗಿ ಆಸ್ತಿ ಹಕ್ಕು ಖರೀದಿಸಿದವರ ಹೆಸರಿಗೆ ಬರುತ್ತದೆ ಎನ್ನುವ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡಿರಬೇಕು.

ಇಲ್ಲವಾದಲ್ಲಿ ಭವಿಷ್ಯದಲ್ಲಿ ಅನೇಕ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಆಸ್ತಿಯನ್ನು ಮಾರಾಟ ಮಾಡುವುದಾಗಿ ಹೇಳಿ ಹಣ ತೆಗೆದುಕೊಂಡ ವ್ಯಕ್ತಿಯೇ ಅಥವಾ ಅವರ ಕುಟುಂಬಸ್ಥರುಗಳೇ ಮತ್ತೆ ಬಂದು ಆಸ್ತಿ ತನ್ನ ಹೆಸರಿನಲ್ಲಿ ಇದೆ ಎಂದು ಕಿರಿಕ್ ಮಾಡುವ ಸಂದರ್ಭಗಳು ಕೂಡ ಇರುತ್ತವೆ.

ಹಾಗಾಗಿ ಯಾವುದೇ ಆಸ್ತಿ ಖರೀದಿಸುವ ಮುನ್ನ ಆ ಆಸ್ತಿ ಮಾರುತ್ತಿರುವ ವ್ಯಕ್ತಿಗೆ ಯಾವ ಮೂಲದಿಂದ ಆಸ್ತಿ ಬಂತು, ಆಸ್ತಿಯ ಕುರಿತಾಗಿ ಇರುವ ದಾಖಲೆಗಳು ಸರಿಯಾಗಿ ಇದೆಯೇ, ಆ ಇಲ್ಲ ದಾಖಲೆಗಳು ಈಗ ಮಾರಾಟ ಮಾಡುತ್ತಿರುವ ವ್ಯಕ್ತಿಯ ಹೆಸರಿನೊಂದಿಗೆ ಇದೆಯೇ ಎನ್ನುವುದನ್ನು ಸರಿಯಾಗಿ ಪರಿಶೀಲಿಸಿ ತಿಳಿದುಕೊಳ್ಳಬೇಕು. ಸೈಟ್ ಅಥವಾ ಜಮೀನಿನ ಸಂಖ್ಯೆ, ವಿಸ್ತೀರ್ಣ ಇತ್ಯಾದಿ ವಿಚಾರಗಳ ಬಗ್ಗೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು.

ನೀವು ಹಣ ಕೊಟ್ಟು ಆ ವ್ಯಕ್ತಿಯಿಂದ ಆಸ್ತಿ ಖರೀದಿಸಿದ ಮೇಲೆ ನೋಂದಣಿಗಾಗಿ ಅರ್ಜಿ ಸಲ್ಲಿಸುತ್ತೀರಿ ಮತ್ತು ನಿಮ್ಮ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡಿಕೊಂಡು ನಿಮ್ಮ ಹೆಸರಿನಲ್ಲಿ ಇದೆ ಎಂದು ಸಮಾಧಾನ ಪಟ್ಟಿಕೊಳ್ಳುತ್ತೀರಿ. ಆದರೆ ಅಲ್ಲಿಗೆ ಆ ಪ್ರಕ್ರಿಯೆ ಮುಗಿಯುವುದಿಲ್ಲ. ಅಷ್ಟಕ್ಕೆ ಸಂಪೂರ್ಣವಾಗಿ ಆಸ್ತಿ ನಿಮ್ಮ ಹೆಸರಿಗೆ ಬಂದಿದೆ ಎಂದು ಅರ್ಥ ಅಲ್ಲ.

ಆಸ್ತಿ ಮಾರುವಾತನ ದಾಖಲೆಗಳ ಜೊತೆಗೆ ಅದಕ್ಕೆ ಸಂಬಂಧಪಟ್ಟ ವಾರಸುದಾರರುಗಳ ಸಮ್ಮುಖದಲ್ಲಿ ಮತ್ತು ಅವರುಗಳ ಸಾಕ್ಷಿಯ ಎದುರು ರಿಜಿಸ್ಟರ್ ಆಫೀಸ್ ಅಲ್ಲಿ ನಿಮ್ಮ ಹೆಸರಿಗೆ ಆಸ್ತಿ ರಿಜಿಸ್ಟರ್ ಆಗಬೇಕು ನಂತರವೂ ಕೂಡ ನಿಮ್ಮಹೆಸರಿಗೆ ಆಸ್ತಿ ರಿಜಿಸ್ಟರ್ ಆಗಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಈ ರೀತಿ ಆಸ್ತಿ ನಿಮ್ಮ ಹೆಸರಿಗೆ ವರ್ಗಾವಣೆ ಆಗುವ ಪ್ರಕ್ರಿಯೆ ಜೊತೆಗೆ ಮಾರುವ ವ್ಯಕ್ತಿ ಕಡೆಯಿಂದ ಸೇಲ್ ಡೀಡ್ ಕೂಡ ಮಾಡಿಸಿಕೊಳ್ಳಬೇಕು.

ಈ ರೀತಿ ಆದಾಗ ಮಾತ್ರ ಆಸ್ತಿ ನ್ಯಾಯ ಬದ್ಧವಾಗಿ, ಕಾನೂನು ರೀತಿಯಾಗಿ ನಿಮ್ಮ ಹೆಸರಿಗೆ ಬಂದಿದೆ ಎಂದು ಅರ್ಥ. ಈ ರೀತಿ ಮಾಡಲು ನಿಮ್ಮ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ತೆಗೆದುಕೊಂಡು ನೀವು ತಹಶಿಲ್ದಾರ್ ಕಛೇರಿ, ನೋಂದಣಾಧಿಕಾರಿ ಕಛೇರಿ ಇವುಗಳಿಗೆ ಭೇಟಿ ಕೊಟ್ಟು ಸರಿಯಾಗಿ ದಾಖಲೆ ಪತ್ರಗಳನ್ನು ಮಾಡಿಸಬೇಕು.

ಈ ರೀತಿ ಸರಿಯಾದ ಕ್ರಮದಲ್ಲಿ ಆಸ್ತಿಯನ್ನು ಖರೀದಿಸಿದಾಗ ಮಾತ್ರ ಭವಿಷ್ಯದಲ್ಲಿ ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕೇವಲ ಪತ್ರದಲ್ಲಿ ನಿಮ್ಮ ಹೆಸರು ಇದೆ ಎನ್ನುವ ಮಾತ್ರಕ್ಕೆ ಯಾವುದೇ ಕಾರಣಕ್ಕೂ ಆಸ್ತಿ ನಿಮ್ಮ ಹೆಸರಿನಲ್ಲಿ ಇದೆ ಎಂದು ಭಾವಿಸಬೇಡಿ. ನಂತರದ ರಿಜಿಸ್ಟರ್ ಪ್ರಕ್ರಿಯೆಯನ್ನು ತಪ್ಪದೆ ಮಾಡಿಸಿ ಮತ್ತು ಮುಂದಿನ ಪ್ರಕ್ರಿಯೆಗಳನ್ನು ಕೂಡ ತಪ್ಪದೇ ಪಾಲಿಸಿ. ಯಾವುದೇ ಗೊಂದಲಗಳು ಇದ್ದರೂ ಕೂಡ ಅನುಭವಸ್ಥರ ಬಳಿ ಕೇಳಿ ಸಲಹೆ ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೂ ಕೂಡ ಹಂಚಿಕೊಳ್ಳಿ.

ಪ್ರೀತಿಸಿದ ಹುಡುಗಿಗಾಗಿ ಹಿಂದು ಧರ್ಮವನ್ನು ಸ್ವೀಕರಿಸಿದ ಮುಸ್ಲಿಂ ಯುವಕ…

 

ಪರಿಶುದ್ಧವಾದ ಪ್ರೀತಿಗೆ ಜಾತಿ, ಧರ್ಮ, ಹಣ, ಅಂತಸ್ತು, ದೇಶ, ಗಡಿಯ ಬೇಧ ಇಲ್ಲ ಎನ್ನುವುದು ನಿಜವಾದರೂ ಬಳಿಕ ಆ ಜೋಡಿ ಮದುವೆ ಆಗುವುದಕ್ಕೆ ಇದು ಅಡ್ಡಿಯಾಗುತ್ತದೆ. ಇದುವರೆಗೆ ನಾವು ಅನೇಕ ಪಾಪುಲರ್ ಲವ್ ಸ್ಟೋರಿಗಳ ಬಗ್ಗೆ ಕೇಳಿರುತ್ತೇವೆ. ಏಳು ಸಮುದ್ರಗಳನ್ನು ದಾಟಿ ಪ್ರೀತಿ ಹುಡುಕಿ ಬಂದವರ ಕಥೆ, ಅರಮನೆಯಂತಹ ವೈಭೋಗದಲ್ಲಿ ಬೆಳೆದವರು ಮನೆ ಆಳನ್ನು ಪ್ರೀತಿಸಿ ಕುಟುಂಬದ ವಿರೋಧ ಬಂದಾಗ ಪ್ರೀತಿ ಒಪ್ಪಿಕೊಂಡು ಎಲ್ಲವನ್ನು ಬಿಟ್ಟು ಪ್ರೇಮಿ ಜೊತೆ ಬಡತನದಲ್ಲೇ ಬದುಕು ಕಳೆದ ಕಥೆಗಳು ಚರಿತ್ರೆಯ ಪುಟದಲ್ಲಿ ದಾಖಲಾಗಿವೆ.

ಆದರೆ ಈಗಿನ ಕಾಲದಲ್ಲಿ ದೇಶದಲ್ಲಿ ಹೆಚ್ಚು ಸುದ್ದಿ ಆಗುತ್ತಿರುವ ಲವ್ ಸ್ಟೋರಿಗಳನ್ನು ನೋಡಿದಾಗ ಅನೇಕರ ಪ್ರೀತಿಗೆ ಬೇರೆ ಎಲ್ಲದಕ್ಕಿಂತ ಜಾತಿಯೇ ಅಡ್ಡವಾಗಿದೆ. ಪ್ರತಿದಿನವೂ ಕೂಡ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಪ್ರೀತಿಗೆ ಕುಟುಂಬದವರು ಅಥವಾ ಸಮುದಾಯ ಅಡ್ಡ ಬಂದಿರುವುದು ಅಥವಾ ಜಾತಿ ಕಾರಣದಿಂದ ಪ್ರೇಮಿಗಳು ದೂರ ಆಗಿರುವುದು ಒಂದು ವೇಳೆ ಪ್ರೀತಿಗಾಗಿ ಒಬ್ಬರ ಧರ್ಮವನ್ನು ಇನ್ನೊಬ್ಬರು ಒಪ್ಪಿಕೊಂಡಿದ್ದರೆ ಅದಕ್ಕೆ ಬೇರೊಂದು ಹೆಸರು ಕೊಟ್ಟು ವಿವಾದ ಆಗಿರುವ ಸುದ್ದಿಗಳನ್ನು ನೋಡುತ್ತಿದ್ದೇವೆ.

ಅದರಲ್ಲೂ ಹಿಂದೂ ಮತ್ತು ಮುಸ್ಲಿಂ ಧರ್ಮದ ನಡುವೆ ಪ್ರೇಮ ವಿವಾಹ ಆದರೆ ಅದು ದೇಶದ ಯಾವುದೇ ಮೂಲೆಯಲ್ಲಿ ನಡೆದಿದ್ದರೂ ದೇಶದಾದ್ಯಂತ ಎಲ್ಲರ ಗಮನವನ್ನು ಸೆಳೆದುಬಿಡುತ್ತದೆ. ಇದುವರೆಗೆ ಹಿಂದು ಯುವತಿಯರು ಮುಸ್ಲಿಂ ಧರ್ಮವನ್ನು ಸ್ವೀಕರಿಸಿ ಮತಾಂತರವಾಗಿ ವಿವಾಹ ಮಾಡಿಕೊಂಡಿರುವ ಉದಾಹರಣೆಗಳ ಬಗ್ಗೆ ನೋಡಿದ್ದೇವೆ.

ಇದಕ್ಕೆ ಹಿಂದೂ ಧರ್ಮದ ವಿರೋಧ ಸದಾ ಇದ್ದು ಈ ರೀತಿ ಹಿಂದೂ ಯುವತಿಯರನ್ನು ಮುಸ್ಲಿಂ ಗೆ ಬದಲಾಯಿಸಿಕೊಂಡರೆ ಅದು ಪ್ರೀತಿ ಹೆಸರಿನಲ್ಲಿ ಮಾಡುತ್ತಿರುವ ಮೋಸ, ಇದು ಲವ್ ಜಿಹಾದ್ ಎನ್ನುತ್ತಾರೆ. ಆದರೆ ಮಧ್ಯ ಪ್ರದೇಶದಲ್ಲಿ ಈ ಸ್ಟೋರಿ ಉಲ್ಟಾ ಆಗಿದೆ. ಮಧ್ಯಪ್ರದೇಶದ ನರಸಿಂಗ್ ಪುರದ ಫಾಜಿಲ್ ಖಾನ್ ಎನ್ನುವ ಮುಸ್ಲಿಂ ಯುವಕ ಸೋನಾಲಿ ಎನ್ನುವ ಹೆಸರಿನ ಹಿಂದೂ ಯುವತಿಯನ್ನು ಮದುವೆ ಆಗುವ ಉದ್ದೇಶದಿಂದ ಹಿಂದು ಧರ್ಮವನ್ನು ಸ್ವೀಕರಿಸಿದ್ದಾರೆ.

ಫಾಜಿಲ್ ಖಾನ್ ಮತ್ತು ಸೋನಾಲಿ ಬಹು ವರ್ಷಗಳ ಸ್ನೇಹಿತರು ಮತ್ತು ಅವರ ನಡುವೆ ಪ್ರೀತಿ ಚಿಗುರಿ ಅದು ಇಬ್ಬರಲ್ಲೂ ಆಳವಾಗಿ ಬೇರೂರಿತ್ತು. ಆದರೆ ಮದುವೆ ವಿಷಯಕ್ಕೆ ಧರ್ಮ ಅಡ್ಡಿಯಾಗಿದ್ದರಿಂದ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿ ಸೋನಾಲಿಯನ್ನು ಮದುವೆ ಆಗಿದ್ದಾರೆ. ಫಾಜಿಲ್ ಖಾನ್ ಎಂದು ಇದ್ದ ತಮ್ಮ ಹೆಸರನ್ನು ಅಮನ್ ರೈ ಎಂದು ಬದಲಾಯಿಸಿಕೊಂಡಿದ್ದಾರೆ.

ಈ ವಿವಾಹವು ಮಧ್ಯಪ್ರದೇಶದ ಕರೇಲಿ ರಾಮ್ ದೇವಾಲಯದಲ್ಲಿ ನಡೆದಿದ್ದು ಇವರ ಮದುವೆಗೆ ಇಬ್ಬರ ಕುಟುಂಬವೂ ಕೂಡ ಸಾಕ್ಷಿಯಾಗಿತ್ತು ಎನ್ನುವುದು ಇನ್ನೂ ವಿಶೇಷ. ಈಗ ವಿವಾಹ ನೋಂದಣಿಗಾಗಿ ಇಬ್ಬರು ಅರ್ಜಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಮಾಧ್ಯಮದರ ಜೊತೆ ತಮ್ಮ ವಿವಾಹದ ಬಗ್ಗೆ ಮಾಹಿತಿ ಹಂಚಿಕೊಂಡ ಅಮನ್ ರೈ ಅವರು ಮತ್ತೊಂದು ವಿಷಯದ ಬಗ್ಗೆ ತಿಳಿಸಿದ್ದಾರೆ.

ಅದೇನೆಂದರೆ, ಅಮನ್ ರೈ ಅವರ ತಂದೆ ಹಿಂದೂ. ನನ್ನ ತಂದೆ ನನ್ನ ತಾಯಿಯನ್ನು ಮದುವೆಯಾಗುವ ಕಾರಣಕ್ಕಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು ಈಗ ನಾನು ನನ್ನ ಪತ್ನಿಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮರಳಿದ್ದೇನೆ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಇವರಿಬ್ಬರ ಮದುವೆ ನಡೆದಿರುವ ಫೋಟೋಗಳು ವೈರಲ್ ಆಗಿದ್ದು ಅಮನ್ ರೈ ಘರ್ ವಾಪಾಸಿಯಾದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಕ್ಕಳಿರುವ ತಂದೆ ತಾಯಿ ಈ 27 ಸೂತ್ರಗಳನ್ನು ತಪ್ಪದೇ ಪಾಲಿಸಿ. ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈನಲ್ಲೆ ಇದೆ.

 

ತಂದೆ ತಾಯಿ ಆಗುವುದಕ್ಕೂ ಉತ್ತಮ ಪೋಷಕರಾಗುವುದಕ್ಕೂ ಬಹಳ ವ್ಯತ್ಯಾಸ ಇದೆ. ಹೆತ್ತವರೆಲ್ಲರಿಗೂ ಕೂಡ ತಮ್ಮ ಮಕ್ಕಳು ತಮ್ಮ ಸುತ್ತಮುತ್ತಲಿನವರಿಗಿಂತ ಹೆಚ್ಚು ಪ್ರಖ್ಯಾತಿ ಹೊಂದಬೇಕು, ಬುದ್ಧಿವಂತರಾಗಿರಬೇಕು, ಹೆಚ್ಚು ಹಣ ಸಂಪಾದನೆ ಮಾಡಬೇಕು, ಯಾವಾಗಲೂ ಮೇಲ್ಮಟ್ಟದಲ್ಲಿರಬೇಕು ಎಂದು ಆಸೆ ಪಡುತ್ತಾರೆ. ತಮ್ಮ ಮಕ್ಕಳು ಸಂಸ್ಕಾರವಂತರಾಗಿ ನಾಲ್ಕು ಜನರ ನಡುವೆ ಒಳ್ಳೆಯವರು ಎಂದು ಕರೆಸಿಕೊಂಡು ಗುರುತಿಸಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ.

ಈ ರೀತಿ ಮಕ್ಕಳ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ, ಆದರೆ ಅದಕ್ಕೂ ಮುನ್ನ ಪೋಷಕರು ಕೂಡ ಉತ್ತಮ ಪೋಷಕರಾಗಲು ಪ್ರಯತ್ನಿಸಬೇಕು. ಮಕ್ಕಳು ಪೋಷಕರು ಹೇಳಿದ್ದಕ್ಕಿಂತ ಅವರು ಮಾಡಿದ್ದನ್ನೇ ನೋಡಿ ಕಲಿಯುವುದು ಹೆಚ್ಚು ಹಾಗಾಗಿ ಉತ್ತಮ ಪೋಷಕರಾಗಲು ಕೆಲ ಸೂತ್ರಗಳನ್ನು ಇಂದು ಈ ಅಂಕಣದಲ್ಲಿ ನಾವು ತಿಳಿಸುತ್ತಿದ್ದೇವೆ.

● ಮಕ್ಕಳು ಜೊತೆಯಲ್ಲಿದ್ದಾಗ ಹೆಚ್ಚಾಗಿ ಫೋನ್ ಗಳನ್ನು ಬಳಸಬೇಡಿ.
● ಮಕ್ಕಳು ನಿಮ್ಮ ಬಳಿ ಏನನ್ನಾದರೂ ಹೇಳಲು ಬಂದಾಗ ಗಮನವಿಟ್ಟು ಅದನ್ನು ಕೇಳಿಸಿಕೊಂಡು ಅದಕ್ಕೆ ಸ್ಪಂದಿಸಿ.
● ಮಕ್ಕಳ ದೃಷ್ಟಿಕೋನ ಹಾಗೂ ಅವರ ಅಭಿಪ್ರಾಯಗಳನ್ನು ಗೌರವದಿಂದ ಒಪ್ಪಿಕೊಳ್ಳಿ.
● ದಿನದಲ್ಲಿ ಸಾಧ್ಯವಾದಷ್ಟು ಹೊತ್ತು ಅವರ ಜೊತೆ ಮಾತುಕತೆಯಲ್ಲಿ ತೊಡಗಿಕೊಳ್ಳಿ.
● ಮಕ್ಕಳೆಂದ ಮಾತ್ರಕ್ಕೆ ಅವರ ಮೇಲೆ ನಿರ್ಲಕ್ಷ ಬೇಡ ಅವರಿಗೂ ಕೂಡ ಗೌರವ ಕೊಡಿ.

● ಮಕ್ಕಳ ಕ್ರಿಯೇಟಿವಿಟಿ ಅನ್ನು ಹೊಗಳಿ.
● ಮಕ್ಕಳೊಂದಿಗೆ ಯಾವಾಗಲೂ ಸಕಾರಾತ್ಮಕವಾಗಿ ಮಾತನಾಡಿ ಅವರ ಜೊತೆ ಸಂತಸದ ವಿಚಾರಗಳನ್ನು ಹಂಚಿಕೊಳ್ಳಿ.
● ಅವರ ಸ್ನೇಹಿತರ ಬಗ್ಗೆ ಹಾಗೂ ಅವರು ಇಷ್ಟಪಡುವ ವ್ಯಕ್ತಿಗಳ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ.
● ಮಕ್ಕಳು ಮಾಡಿದ ಒಳ್ಳೆಯ ಕೆಲಸಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
● ಮಕ್ಕಳು ಹೇಳಿದ ವಿಚಾರಗಳನ್ನೇ ಪದೇಪದೇ ಹೇಳುತ್ತಿದ್ದರು ಕೂಡ ಕುತೂಹಲದಿಂದ ಮೊದಲ ಬಾರಿ ಕೇಳುತ್ತಿರುವ ರೀತಿಯೇ ಆಲಿಸಿ.

● ಕಳೆದು ಹೋದ ಕಹಿ ನೆನಪುಗಳನ್ನು ಪದೇ ಪದೇ ನೆನಪಿಸಬೇಡಿ.
● ಮಕ್ಕಳು ಜೊತೆಯಲ್ಲಿ ಇದ್ದಾಗ ಅವರಿಗೆ ಇಷ್ಟವಾಗದ ಅನುಚಿತ ಸಂಭಾಷಣೆಗಳು ಬೇಡ.
● ಮಕ್ಕಳ ಆಲೋಚನೆಗಳು ಮತ್ತು ಅವರು ಕೊಡುವ ಅಭಿಪ್ರಾಯಗಳಿಗೂ ಬೆಲೆ ಕೊಡಿ.
● ಮಕ್ಕಳನ್ನು ಪದೇ ಪದೇ ಚಿಕ್ಕವರು ಎಂದು ಜರಿಯಬೇಡಿ, ಮಕ್ಕಳ ಜೊತೆ ಅವರ ವಯಸ್ಸಿಗೆ ಅನುಸಾರವಾಗಿ ಗೌರವ ಕೊಡುತ್ತ ಬೆಳೆಸಿರಿ.

● ಮಕ್ಕಳು ಮಾತನಾಡಲು ಬಾಯಿ ತೆರೆದ ತಕ್ಷಣವೇ ಹೆದರಿಸಿ ಬಾಯಿ ಮುಚ್ಚಿಸಬೇಡಿ.
● ಅವರಿಗೆ ನಾಯಕತ್ವದ ಅವಕಾಶಗಳನ್ನು ನೀಡಿ, ಸಣ್ಣ ಪುಟ್ಟ ಜವಾಬ್ದಾರಿಗಳನ್ನು ವಹಿಸಿ ಮೇಲ್ವಿಚಾರಣೆ ಮಾಡಿ.
● ಮಕ್ಕಳ ಜೊತೆ ಗಟ್ಟಿಯಾದ ಧ್ವನಿಯಲ್ಲಿ ಮಾತನಾಡಬೇಡಿ.
● ಮಕ್ಕಳು ಮಾಡುವ ಒಳ್ಳೆಯ ಕೆಲಸಗಳಲ್ಲಿ ಹೊಸ ಪ್ರಯತ್ನಗಳಲ್ಲಿ ಜೊತೆಯಾಗಿ ನಿಲ್ಲಿರಿ.

● ಅವರ ಸಣ್ಣ ಪುಟ್ಟ ವಿಷಯಗಳನ್ನು ಕೂಡ ಗಮನಿಸಿ ಅವುಗಳ ಬಗ್ಗೆ ಹೊಗಳಿ ಪ್ರೋತ್ಸಾಹ ನೀಡುತ್ತಾ ಇರಿ.
● ಮಕ್ಕಳಲ್ಲಿ ಆಸಕ್ತಿ ಹೆಚ್ಚು ಹೀಗಾಗಿ ಎಷ್ಟೇ ಪ್ರಶ್ನೆ ಮಾಡಿದರು ಆದಷ್ಟು ತಾಳ್ಮೆಯಿಂದ ಪ್ರತಿಯೊಂದಕ್ಕೂ ಉತ್ತರಿಸುವ ಪ್ರಯತ್ನ ಮಾಡಿ.
● ಎಷ್ಟೇ ಒತ್ತಡದಲ್ಲಿ ಇದ್ದರೂ ಕೂಡ ದುಡುಕಿ ಮಕ್ಕಳ ಮೇಲೆ ರೇಗಾಡಬೇಡಿ. ಅವರ ಬಗ್ಗೆ ಕೀಳಾಗಿ ಮಾತನಾಡಬೇಡಿ.
● ನಿಮ್ಮ ಪ್ರಾರ್ಥನೆ, ಯೋಗ ಮುಂತಾದ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಅವರು ಜೊತೆಗೆ ಇರಲಿ.

● ಅವರ ಜೊತೆ ಮಾತನಾಡುವಾಗ, ಅವರೊಂದಿಗೆ ಆಟದಲ್ಲಿ ತೊಡಗಿರುವಾಗ ಬೋರಾದಂತೆ ಸುಸ್ತಾದಂತೆ ಕಾಣಿಸಿ ಕೊಳ್ಳಬೇಡಿ.
● ಅವರ ತಪ್ಪುಗಳನ್ನು ಹಂಗಿಸಿ ಮಾತನಾಡಬೇಡಿ.
● ಮಕ್ಕಳ ಜೊತೆ ಮಾತನಾಡುವಾಗ ನೀವು ಬಳಸುವ ಭಾಷೆ ಬಗ್ಗೆ ಗಮನ ಇರಲಿ.
● ಮಕ್ಕಳಿಗೆ ಇಷ್ಟವಾಗುವ ಹೆಸರಿನಿಂದಲೇ ಅವರನ್ನು ಕರೆಯಿರಿ.
● ನಿಮ್ಮ ಜೀವನದಲ್ಲಿ ಮಕ್ಕಳಿಗೆ ಮೊದಲನೆಯ ಆದ್ಯತೆ ನೀಡಿ. ಅವರೇ ನಿಮ್ಮ ಜೀವನದ ಪ್ರಮುಖ ಜವಾಬ್ದಾರಿ ಆಗಿರಲಿ.

ಬಟ್ಟೆ ಸರಿಯಾಗಿ ಕ್ಲೀನ್ ಆಗಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ. ವಾಷಿಂಗ್ ಮಿಷನ್ ಬಳಸುವವರು ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

 

ಈಗಿನ ಕಾಲದಲ್ಲಿ ಬಟ್ಟೆಗಳನ್ನು ಮ್ಯಾನುವಲ್ ಆಗಿ ವಾಶ್ ಮಾಡುವಷ್ಟು ಸಮಯ ಹಾಗೂ ಆಸಕ್ತಿ ಯಾರಲ್ಲೂ ಇಲ್ಲ. ಯಂತ್ರಶಕ್ತಿಯಿಂದ ತಮ್ಮ ದಿನನಿತ್ಯದ ಕೆಲಸಗಳನ್ನು ಸರಾಗ ಮಾಡಿಕೊಳ್ಳುವ ಅನುಕೂಲತೆ ಇರುವುದರಿಂದ ಯಾರೂ ಕೂಡ ದೈಹಿಕ ಶ್ರಮ ಹೆಚ್ಚಾಗಿರುವ ಕೆಲಸಗಳನ್ನು ಕಷ್ಟಪಟ್ಟು ಮಾಡಲು ಇಚ್ಛೆ ಪಡುವುದಿಲ್ಲ.

ಜೊತೆಗೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರು ದುಡಿಯುವ ಅನಿವಾರ್ಯತೆ ಇರುವುದರಿಂದ ಮನೆಯಲ್ಲಿರುವ ಗೃಹಣಿ ಕೂಡ ಈಗ ಮನೆ ನಿಭಾಯಿಸುವುದರ ಜೊತೆಗೆ ಸಮಯ ಹೊಂದಿಸಿಕೊಂಡು ದುಡಿಯುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ ಹಾಗಾಗಿ ಇಂತವರಿಗೆ ಮನೆ ಕೆಲಸಕ್ಕೆ ಯಂತ್ರಗಳು ನೆರವಾಗುತ್ತಿವೆ.

ಆದರೆ ಅವುಗಳ ಮೂಲಕ ಹೇಗೆ ಅಚ್ಚುಕಟ್ಟಾಗಿ ಕೆಲಸ ತೆಗೆಯಬೇಕು ಎನ್ನುವ ಕಲೆ ಗೊತ್ತಿರಬೇಕು. ಅದರ ಬಗ್ಗೆ ಕೆಲ ಟಿಪ್ ಗಳನ್ನು ಕೊಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಬಟ್ಟೆ ಒಗೆಯುವ ಕೆಲಸಕ್ಕೆ ಈಗ ಎಲ್ಲರ ಮನೆಯಲ್ಲೂ ಕೂಡ ವಾಷಿಂಗ್ ಮಿಷನ್ ಗಳು ಇವೆ. ಅವರವರ ಇಚ್ಛೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಫ್ರಂಟ್ ಲೋಡ್ ಅಥವಾ ಟಾಪ್ ಲೋಡ್ ಅಥವಾ ಮಾರ್ಕೆಟ್ ನಲ್ಲಿ ಹೆಚ್ಚು ಪ್ರತಿಚಲಿತದಲ್ಲಿರುವ ಕಂಪನಿ ಮಿಷನ್ ಗಳನ್ನು ಖರೀದಿಸಿ ತಂದು ಬಟ್ಟೆ ವಾಶ್ ಮಾಡುತ್ತಾರೆ.

ಈ ರೀತಿ ಬಟ್ಟೆ ವಾಶ್ ಮಾಡುವವರು ತಾವು ಮ್ಯಾನುವಲ್ ಆಗಿ ವಾಷ್ ಮಾಡಿದಷ್ಟು ಮಿಷಿನ್ ನಲ್ಲಿ ಹಾಕಿದ ಬಟ್ಟೆಗಳು ಕ್ಲೀನ್ ಆಗಿಲ್ಲ ಎನ್ನುವ ದೂರು ಹೇಳುವುದು ಸರ್ವೆ ಸಾಮಾನ್ಯ. ಈ ರೀತಿ ಆಗಲು ಅವರೇ ಮಾಡುವ ಕೆಲಸಗಳು ಕಾರಣ ಆಗಿವೆ. ಅದರಲ್ಲೂ ಫ್ರಂಟ್ ಡೋರ್ ವಾಷಿಂಗ್ ಮಿಷನ್ ಬಳಸುತ್ತಿರುವವರು ಮಾಡುತ್ತಿರುವ ಸಣ್ಣ ತಪ್ಪುಗಳಿಂದ ಅವರ ಬಟ್ಟೆ ಕ್ಲೀನ್ ಆಗಿ ವಾಶ್ ಆಗುತ್ತಿಲ್ಲ.

ಇನ್ನು ಮುಂದೆ ವಾಷಿಂಗ್ ಮಿಷನ್ ಗೆ ಬಟ್ಟೆ ಹಾಕಿ ವಾಷ್ ಮಾಡುವಾಗ ನಾವು ಹೇಳುವ ಉಪಾಯಗಳನ್ನು ಬಳಸಿ ನಿಮ್ಮ ಬಟ್ಟೆ ಹೇಗೆ ಕ್ಲೀನ್ ಆಗುತ್ತದೆ ಎಂದು ನೀವೇ ಕಣ್ಣಾರೆ ನೋಡಿ. ಫ್ರಂಟ್ ಲೋಡ್ ಮಿಷನ್ ಬಳಸುವವರು ಡಿಟರ್ಜೆಂಟ್ ಬಳಸುವುದರ ಬದಲು ಲಿಕ್ವಿಡ್ ಬಳಸುವುದು ಉತ್ತಮ. ಎಲ್ಲರೂ ಮೊದಲು ಬಟ್ಟೆಯನ್ನು ತುಂಬಿ ಡಿಟರ್ಜೆಂಟ್ ಅಥವಾ ಲಿಕ್ವಿಡ್ ಹಾಕಿ ಆಮೇಲೆ ಪ್ರೋಗ್ರಾಮ್ ಸೆಟ್ ಮಾಡಿ ಸ್ಟಾರ್ಟ್ ಮಾಡುತ್ತಾರೆ ಈ ವಿಧಾನ ತಪ್ಪು.

ಮೊದಲಿಗೆ ಬಟ್ಟೆಗಳನ್ನು ಹಾಕಿ ಪ್ರೋಗ್ರಾಮ್ ಸೆಟ್ ಮಾಡಿ ಸ್ಟಾರ್ಟ್ ಮಾಡಿ ಅದು ನೀರು ತೆಗೆದುಕೊಳ್ಳಲು ಶುರು ಮಾಡಿದಾಗ ಬಾಕ್ಸ್ ಅಲ್ಲಿ ಡಿಟರ್ಜೆಂಟ್ ಅಥವಾ ಲಿಕ್ವಿಡ್ ಹಾಕಬೇಕು. ಈ ರೀತಿ ಮಾಡಿದಾಗ ನೀರಿನ ಜೊತೆ ಲಿಕ್ವಿಡ್ ಅಥವಾ ಡಿಟರ್ಜೆಂಟ್ ಚೆನ್ನಾಗಿ ಮಿಕ್ಸ್ ಆಗಿ ಬಟ್ಟೆ ಕ್ಲೀನ್ ಆಗಲು ಅನುಕೂಲವಾಗುತ್ತದೆ.

ಎಷ್ಟು ಕೆಜಿ ಮಿಷನ್ ತೆಗೆದುಕೊಳ್ಳುತ್ತಾರೋ ಅಷ್ಟು ಬಟ್ಟೆಗಳನ್ನು ತುಂಬುವುದು ತಪ್ಪು. 1:3 ಅನುಪಾತದಲ್ಲಿ ಅಂದರೆ ಮುಕ್ಕಾಲು ಭಾಗ ಬಟ್ಟೆ ತುಂಬಿ ಕಾಲು ಭಾಗ ಖಾಲಿ ಬಿಡಬೇಕು, ಈ ರೀತಿ ಬಿಟ್ಟಾಗ ರೊಟೇಷನ್ ಆಗಲು ಅನುಕೂಲವಾಗುತ್ತದೆ. ಆಗ ಬಟ್ಟೆ ಚೆನ್ನಾಗಿ ಕ್ಲೀನ್ ಆಗಿ ಪರ್ಫಾರ್ಮೆನ್ಸ್ ಚೆನ್ನಾಗಿರುತ್ತದೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಪೂರ್ತಿಯಾಗಿ ಬಟ್ಟೆಗಳನ್ನು ತುಂಬಬೇಡಿ.

ಹಾಗೆಯೇ ಫ್ರಂಟ್ ಲೋಡ್ ಬಳಸುವವರು ಸ್ಟಾಂಡ್ ಹಾಕುವ ಅವಶ್ಯಕತೆಯೂ ಇಲ್ಲ. ಫ್ರಂಟ್ ಲೋಡ್ ಮಿಷನ್ 70 ರಿಂದ 80 ಕೆಜಿ ತೂಕ ಇರುವುದರಿಂದ ಅವುಗಳಿಗೆ ಸ್ಟ್ಯಾಂಡ್ ಅವಶ್ಯಕತೆ ಇರುವುದಿಲ್ಲ, ಸ್ಟಾಂಡ್ ಹಾಕಿದರೂ ಕೂಡ ಜಾಗ ಬೇರೆ ಇದ್ದಾಗ ಅದು ರನ್ ಆಗುವಾಗ ಮೂವ್ ಆದರೆ ಮಷೀನ್ ಮೋಟರ್ ಗೆ ತೊಂದರೆ ಆಗುತ್ತದೆ.

ಕೋಟಿ ಸಾಲ ಇದ್ದರೂ ಕೂಡ ತೀರುತ್ತೆ, ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಇದೊಂದು ವಸ್ತು ಕೊಟ್ಟು ಬನ್ನಿ ಸಾಕು.!

 

ಪ್ರತಿಯೊಬ್ಬರು ಕೂಡ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನ ಮಾಡುತ್ತಿದ್ದರು ಕೂಡ ತೆಗೆದುಕೊಂಡು ಸಾಲವನ್ನು ಮರಳಿ ತೀರಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕೆಲ ಎಚ್ಚರಿಕೆಗಳನ್ನು ವಹಿಸಬೇಕು. ಯಾಕೆಂದರೆ ಶನಿವಾರದಂದು ಯಾವುದೇ ಕಾರಣಕ್ಕೂ ಸಾಲ ತೆಗೆದುಕೊಳ್ಳಬಾರದು.

ಶನಿವಾರದಂದು ತೆಗೆದುಕೊಂಡ ಸಾಲ ಬೇಗ ತೀರುವುದಿಲ್ಲ ಮತ್ತು ಶನಿವಾರದಂದು ಸಾಲ ಪತ್ರಗಳಿಗೆ ಸಹಿ ಕೂಡ ಮಾಡಬಾರದು, ಯಾವುದೇ ಸಾಲ ಪತ್ರಗಳಿಗೆ ಸಹಿ ಮಾಡುವಾಗ ಕಪ್ಪು ಬಣ್ಣದ ಇಂಕನ್ನು ಬಳಸಬಾರದು. ಮತ್ತು 8,17,26 ಈ ದಿನಾಂಕಗಳಲ್ಲಿ ಸಾಲ ತೆಗೆದುಕೊಂಡರೆ ಆ ಸಾಲ ಕೂಡ ಬೇಗ ತೀರುವುತ್ತಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಈ ದಿನಗಳಂದು ಸಾಲ ಪಡೆಯಬೇಡಿ.

ನೀವೇನಾದರೂ ಈಗಾಗಲೇ ಸಾಲ ಮಾಡಿದ್ದರೆ ಆದಷ್ಟು ಬೇಗ ಋಣ ಮುಕ್ತರಾಗಬೇಕು ಎಂದು ಬಯಸುತ್ತಿದ್ದರೆ ಆಂಜನೇಯ ಸ್ವಾಮಿಯನ್ನು ಈ ರೀತಿ ಪ್ರಾರ್ಥಿಸಿ. ನಿಮಗೆ ಸಾಧ್ಯವಾದಷ್ಟು ವಾರ ಮಂಗಳವಾರ ದಿನದಂದು ಸಂಜೆ ಹೊತ್ತು ಸ್ಥಾನ ಮಾಡಿ ಮಡಿಯುಟ್ಟು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ.

ಈ ರೀತಿ ಹೋಗುವಾಗ ಮನೆಯಿಂದ ಹಸಿರು ಬಣ್ಣದ ತಾಜಾ ವೀಳ್ಯದೆಲೆ ತೆಗೆದುಕೊಂಡು ಅದರ ತೊಟ್ಟನ್ನು ಬಿಡಿಸಿ ಅದಕ್ಕೆ ಎರಡು ಲವಂಗ ಹಾಗೂ ಒಂದು ಏಲಕ್ಕಿಯನ್ನು ಹಾಕಿ ಪ್ಯಾನ್ ರೀತಿ ಮಾಡಿಕೊಳ್ಳಿ. ನಿಮ್ಮೊಂದಿಗೆ ಅದನ್ನು ತೆಗೆದುಕೊಂಡು ಹೋಗಿ ಆಂಜನೇಯ ಸ್ವಾಮಿಗೆ ಅರ್ಪಿಸಿ ಮತ್ತು ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಸಾಲದ ಹೊರೆ ಇಳಿಸುವಂತೆ ಕೇಳಿಕೊಳ್ಳಿ.

ಮಂಗಳಾರದಂದು ಹರಿಯುವ ನದಿಯ ಬಳಿ ಹೋಗಿ ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ತೊಟ್ಟನ್ನು ಬಿಡಿಸಿ ಒಂದು ಬಾರಿ ಫೋಲ್ಡ್ ಮಾಡಿ. ಈ ರೀತಿ ಪೋಲ್ಡ್ ಮಾಡುವಾಗ ವಿಳ್ಯದೆಲೆಯ ಬಿರುಸಾದ ಭಾಗ ಹೊರಮುಖ ಇರಬೇಕು, ನುಣುಪಾದ ಭಾಗ ಒಳಮುಖವಾಗಿ ಇರಬೇಕು. ಅದರ ಮೇಲೆ ಎರಡು ಲವಂಗವನ್ನು ಹಾಕಿ ನಿಮ್ಮ ಕಷ್ಟಗಳನೆಲ್ಲ ಹೇಳಿಕೊಂಡು ಆಂಜನೇಯನನ್ನು ಪ್ರಾರ್ಥಿಸಿ ಮತ್ತು ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಅದನ್ನು ಹರಿಯುವ ನೀರಿನಲ್ಲಿ ಬಿಟ್ಟುಬಿಡಿ.

ಈ ರೀತಿ ಸಾಧ್ಯವಾದಷ್ಟು ಮಂಗಳವಾರಗಳು ಮಾಡಿ ನಿಮ್ಮ ಸಮಸ್ಯೆ ಕೂಡ ನೀರಿನಂತೆ ಕೊಚ್ಚಿ ಹೋಗುತ್ತದೆ. ಅದೇ ರೀತಿಯ ಮತ್ತೊಂದು ಉಪಾಯ ಇದೆ ಇದನ್ನು ಮನೆಯ ಮಹಿಳೆಯರು ಮಾಡಬಹುದು. ಅದೇನೆಂದರೆ ಶನಿವಾರದಂದು ಉಪ್ಪು ಹಾಕದ ಆಹಾರ ಪದಾರ್ಥಗಳನ್ನು ಸೇವಿಸಬಾರದು, ತೀರ ಅವಶ್ಯಕತೆ ಇದ್ದರೆ ಕಲ್ಲು ಉಪ್ಪು ಹಾಕಿದ ಆಹಾರವನ್ನು ಸೇವಿಸಬಹುದು.

ಈರುಳ್ಳಿ, ಬೆಳ್ಳುಳ್ಳಿ ಈ ರೀತಿ ಪದಾರ್ಥಗಳನ್ನು ಹಾಕದೆ ಇವುಗಳಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಿ ಆಚರಣೆ ಮಾಡಬೇಕು. ಶನಿವಾರದಂದು ಸಂಜೆ ಹೊತ್ತು ಸ್ನಾನ ಮಾಡಿ ರಾತ್ರಿ ಹನ್ನೊಂದು ಗಂಟೆಯ ಮೇಲೆ ಆಂಜನೇಯ ಸ್ವಾಮಿಗೆ ಕೆಂಪು ಬಣ್ಣದ ಹೂಗಳಿಂದ ಅಲಂಕಾರ ಮಾಡಿ ಧೂಪದೀಪ ಬೆಳಗಿ ನೈವೇದ್ಯ ಅರ್ಪಿಸಿ ಸಾಲದ ಪರಿಹಾರಕ್ಕಾಗಿ ಪ್ರಾರ್ಥಿಸಿ, ಹನುಮಾನ್ ಚಾಲೀಸ ವನ್ನು ಪಠಿಸಬೇಕು.

ಈ ರೀತಿ 11 ವಾರಗಳು ಮಾಡಿದರೆ ಆದಷ್ಟು ಬೇಗ ಸಾಲ ಮುಕ್ತರಾಗುತ್ತೀರಿ ಮತ್ತು ಮಹಿಳೆಯರು ಸಾಧ್ಯವಾದಷ್ಟು ಆಂಜನೇಯಕ್ಕೆ ಕೆಂಪು ಹೂವುಗಳನ್ನು ಅರ್ಪಿಸಬೇಕು ಮತ್ತು ಪುರುಷರು ಕೇಸರಿಯನ್ನು ಅರ್ಪಿಸಿದರೆ ಬಹಳ ಬೇಗ ಸಾಲದಿಂದ ಮುಕ್ತಿ ಹೊಂದುತ್ತಾರೆ. ಇದರ ಜೊತೆಗೆ ಕನಕಧಾರ ಸ್ತೋತ್ರ, ಋಣಮೋಚನ ಮಂಗಳ ಸ್ತೋತ್ರ ಇವುಗಳನ್ನು ಪಾರಾಯಣ ಮಾಡಿ ಹಾಗೂ ಮತ್ತಷ್ಟು ಶ್ರಮದಿಂದ ಆದಷ್ಟು ಬೇಗ ಸಾಲದಿಂದ ಹೊರಬರಲು ಕೆಲಸ ಮಾಡಿ.

ಸಂಬಳ ಬಂದ ತಕ್ಷಣ ಈ ರೀತಿ ಮಾಡಿ ಸಾಕು, ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ ಹಣ ಖಾಲಿ ಆಗಲ್ಲ, ದುಡ್ಡಿಗಾಗಿ ಪರದಾಡುವುದು ನಿಲ್ಲುತ್ತದೆ ಮನೆಯಲ್ಲಿ ಹಣ ಉಳಿತಾಯ ಆಗುತ್ತೆ.

ಹಣ ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆ ವಸ್ತು. ಈಗಿನ ಕಾಲದಲ್ಲಿ ಹಣ ಇಲ್ಲದೆ ಇದ್ದರೆ ಏನು ಕೂಡ ನಡೆಯುವುದಿಲ್ಲ. ಅಲ್ಲದೆ ಪ್ರತಿನಿತ್ಯದ ನಮ್ಮ ಚಟುವಟಿಕೆಗಳು ಅಂತ್ಯದಲ್ಲಿ ಹಣದ ಮೂಲವನ್ನೇ ಅನುಸರಿಸಿದೆ ಎಂದರು ಕೂಡ ಅದು ತಪ್ಪಾಗುವುದಿಲ್ಲ. ಈಗಿನ ಕಾಲಮಾನದಲ್ಲಿ ಬದುಕು ನಡೆಯುತ್ತಿರುವುದೇ ಹಣದಿಂದ, ಹಾಗಾಗಿ ಇಂತಹ ಹಣದ ಅವಶ್ಯಕತೆ ಮತ್ತು ಆಕರ್ಷಣೆಯನ್ನು ಎಲ್ಲರೂ ಬಯಸುತ್ತಾರೆ.

ನೀವು ಪ್ರತಿದಿನ ದುಡಿಯುವವರಾಗಿರಬಹುದು ಅಥವಾ ತಿಂಗಳ ಸಂಬಳ ತೆಗೆದುಕೊಳ್ಳವವರಾಗಿದ್ದರು ಕೂಡ ನಿಮಗೆ ಹಣ ಬಂದ ತಕ್ಷಣ ಈಗ ನಾವು ಹೇಳುವ ಈ ರೀತಿ ತಂತ್ರವನ್ನು ಮಾಡಿ. ಇದರಿಂದ ಹಣದ ಆಕರ್ಷಣೆ ಹೆಚ್ಚಾಗಿ ನಿಮ್ಮ ಹಣಕಾಸಿನ ತೊಂದರೆಗಳನ್ನು ನಿವಾರಿಸಿಕೊಳ್ಳುವುದರ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಯ ಸುಧಾರಣೆಯಾಗುತ್ತದೆ.

ಇದಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಿ ವಿಶೇಷವಾದ ಆಚರಣೆಗಳನ್ನು ಮಾಡುವ ಅವಶ್ಯಕತೆಯೇ ಇಲ್ಲ. ಈಗ ನಾವು ಹೇಳುವ ರೀತಿ ಮಾಡಿ ಸಾಕು. ನಿಮಗೆ ಸ್ಯಾಲರಿ ಅಕೌಂಟಿಗೆ ಬರುತ್ತಿದ್ದರು ಕೂಡ ಬಂದ ಹಣದಲ್ಲಿ ಸ್ವಲ್ಪ ಮೊತ್ತದ ಹಣವನ್ನು ಡ್ರಾ ಮಾಡಿಕೊಂಡು ನಗದು ರೂಪದಲ್ಲಿ ಮನೆಗೆ ತನ್ನಿ. ಮತ್ತು ಇದೇ ಹಣದಿಂದ ತಪ್ಪದೆ ಉಪ್ಪನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಬನ್ನಿ.

ಒಂದು ಮಣ್ಣಿನ ಮಡಿಕೆಯಲ್ಲಿ ಆ ಉಪ್ಪನ್ನು ಸುರಿದು ಅದರ ಮೇಲೆ ನೀವು ತಂದ ಹಣವನ್ನು ಇಟ್ಟು ದೇವರ ಕೋಣೆಯಲ್ಲಿ ಇಡಿ. ಸ್ನಾನ ಮಾಡಿ ಮಡಿಯುಟ್ಟುಕೊಂಡು ಶುದ್ಧ ಮನಸ್ಸಿನಿಂದ ಪೂಜೆ ಮಾಡಿ. ಹಾಗೆ ಈ ಮಡಿಕೆಯಲ್ಲಿರುವ ಉಪ್ಪು ಹಾಗೂ ಅದರ ಮೇಲಿರುವ ಹಣಕ್ಕೂ ಕೂಡ ಪೂಜೆ ಮಾಡಿ ಆ ದಿನಪೂರ್ತಿ ಅದನ್ನು ದೇವರ ಮನೆಯಲ್ಲಿಯೇ ಬಿಡಿ.

ಮರುದಿನ ನೀವು ನಿಮ್ಮ ಹಣಕಾಸಿನ ಖರ್ಚಿಗೆ ಅಂದರೆ ನಿಮ್ಮ ಸಂಬಳವನ್ನು ಯಾವುದಕ್ಕೆ ಖರ್ಚು ಮಾಡುತ್ತಿದ್ದೀರಾ ಅವುಗಳಿಗೆ ಮನೆ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್, ಮಕ್ಕಳ ಫೀಸ್ ಅಥವಾ ಮನೆಗೆ ದಿನಸಿ ತರುವುದು ಇನ್ಯಾವುದೇ ಖರ್ಚುಗಳು ಇದ್ದರೂ ಆ ಖರ್ಚಿಗೆ ಈ ಹಣವನ್ನು ತೆಗೆದುಕೊಂಡು ಖರ್ಚು ಮಾಡಿ. ಈ ರೀತಿ ಮಾಡುವುದರಿಂದ ಆ ಹಣದಲ್ಲಿ ಒಂದು ಎನರ್ಜಿ ಕ್ರಿಯೇಟ್ ಆಗಿರುತ್ತದೆ.

ಅದು ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ಸಕಾರಾತ್ಮಕತೆ ತುಂಬಿ ಎಲ್ಲವು ಒಳ್ಳೇದಾಗುವ ರೀತಿ ಮಾಡುತ್ತದೆ. ಯಾವುದೇ ಸಮಸ್ಯೆ ಆಗದ ಕಾರಣ ನೀವು ಕೈಕೊಂಡ ಎಲ್ಲಾ ಕಾರ್ಯವು ಪೂರ್ತಿ ಆಗುತ್ತದೆ. ಆ ಹಣದಿಂದ ನಿಮ್ಮ ಹಣವು ಉಳಿತಾಯ ಆಗುತ್ತದೆ ಮತ್ತು ನಿಮ್ಮ ಮನೆಗೆ ಹಣದ ಆಕರ್ಷಣೆ ಹೆಚ್ಚಾಗುತ್ತದೆ. ನೀವು ದಿನದ ಸಂಬಳ ತೆಗೆದುಕೊಳ್ಳುವವರಾಗಿದ್ದರು ಕೂಡ ಈ ಉಪಾಯವನ್ನು ಮಾಡಬಹುದು.

ಒಂದು ದಿನ ಅಂದರೆ ಶುಕ್ರವಾರದಂದು ಮಾಡಿದರೆ ಇನ್ನೂ ಉತ್ತಮ ಫಲ. ಶುಕ್ರವಾರದಂದು ಬೆಳಿಗ್ಗೆ ಎದ್ದ ಕೂಡಲೇ ಮೊದಲು ಉಪ್ಪನ್ನು ಖರೀದಿಸಿ ತನ್ನಿ, ಅದೇ ರೀತಿ ಮಣ್ಣಿನ ಮಡಿಕೆಗೆ ಹಾಕಿ ದೇವರ ಕೋಣೆಯಲ್ಲಿ ಇಡಿ, ನೀವು ದುಡಿದ ಹಣವನ್ನು ಕೂಡ ಅದರ ಮೇಲಿಡಿ. ಒಂದು ದಿನ ಪೂರ್ತಿ ಆ ಹಣ ಅಲ್ಲೇ ಇರಲಿ ಮರುದಿನ ನಿಮ್ಮ ಖರ್ಚಿಗೆ ಆ ಹಣವನ್ನು ತೆಗೆದುಕೊಳ್ಳಿ ಮತ್ತು ಮರುದಿನವೂ ಕೂಡ ನೀವು ದುಡಿದ ಹಣವನ್ನು ಅದೇ ರೀತಿ ಆ ಮಡಿಕೆ ಮೇಲೆ ಹಾಕಿ ಪ್ರತಿ ಶುಕ್ರವಾರದಂದು ಉಪ್ಪನ್ನು ಬದಲಾಯಿಸಿ ಹೊಸ ಉತ್ಪನ್ನ ತಂದು ಮಡಿಕೆ ಶುದ್ಧ ಮಾಡಿ ಅದಕ್ಕೆ ಹಾಕಿ. ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಎಷ್ಟು ಉತ್ತಮವಾಗುತ್ತದೆ ಎಂದು ನೀವೇ ಪರೀಕ್ಷೆ ಮಾಡಿ ನೋಡಿ.

ಆಷಾಡ ಮಾಸದ ಮೊದಲ ಮಂಗಳವಾರ ಇಂದು ದುರ್ಗಾ ದೇವಿಯ ಆಶೀರ್ವಾದ ಈ 5 ರಾಶಿಯವರ ಮೇಲಿದೆ, ಮಾಡುವ ಕೆಲಸ ಕಾರ್ಯದಲ್ಲಿ ಇಂದು ನಿರೀಕ್ಷೆಗೂ ಮೀರಿದ ಲಾಭ.!

 

ಮೇಷ ರಾಶಿ:- ಹಣದ ವಿಚಾರಗಳಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದಾಗಿದೆ. ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ಖರೀದಿಸುತ್ತೀರಿ. ಬಹಳ ದಿನಗಳ ನಂತರ ನಿಮ್ಮ ಮಕ್ಕಳ ಜೊತೆ ಸಂತೋಷದ ಸಮಯವನ್ನು ಕಳೆಯುತ್ತೀರಿ. ಸಂಗಾತಿ ಜೊತೆಗಿದ್ದ ಮನಸ್ಥಾಪ ಸರಿ ಹೋಗುತ್ತದೆ. ಕೆಲಸದ ವಿಚಾರದಲ್ಲಿ ಜಾಗರೂಕರಾಗಿರಲು ತಿಳಿಸಲಾಗಿದೆ.
ಅದೃಷ್ಟದ ಸಂಖ್ಯೆ – 04 ಅದೃಷ್ಟದ ಬಣ್ಣ – ಕೆಂಪು
ಉತ್ತಮ ಸಮಯ – ಮಧ್ಯಾಹ್ನ 1:40 ರಿಂದ ರಾತ್ರಿ 9:30ವರೆಗೆ.

ವೃಷಭ ರಾಶಿ:- ಇಂದು ನಿಮ್ಮ ಎಲ್ಲಾ ಪ್ರಮುಖ ಕಾರ್ಯಗಳು ಪೂರ್ತಿಗೊಳ್ಳುವ ಸಾಧ್ಯತೆ ಇದೆ ಮತ್ತು ಅದು ದೊಡ್ಡ ಲಾಭವನ್ನು ನೀಡುತ್ತದೆ. ಕೆಲಸದ ಜಾಗದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಹಾಗೂ ಪ್ರಶಂಸೆ ಸಿಗುತ್ತದೆ. ಸಂಗಾತಿ ಜೊತೆಗೆ ನಯವಾಗಿ ವರ್ತಿಸಿ. ಕೌಟುಂಬಿಕ ಸಮಸ್ಯೆಗಳು ಇಂದು ನಿಮ್ಮನ್ನು ಕಾಡಬಹುದು.
ಅದೃಷ್ಟದ ಸಂಖ್ಯೆ – 01 ಅದೃಷ್ಟದ ಬಣ್ಣ – ಗುಲಾಬಿ
ಉತ್ತಮ ಸಮಯ – ಬೆಳಗ್ಗೆ 5:25 ರಿಂದ ಮಧ್ಯಾಹ್ನ 2:00 ರವರೆಗೆ.

ಮಿಥುನ ರಾಶಿ:- ಮನೆಯಲ್ಲಿ ಪರಿಸ್ಥಿತಿ ಶಾಂತಿಯುತವಾಗಿರುತ್ತದೆ. ನೀವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ಕೂಡ ನಿಮ್ಮ ಕುಟುಂಬಸ್ಥರ ಬೆಂಬಲ ಸಿಗುತ್ತದೆ. ನಿಮ್ಮ ಒಡಹುಟ್ಟಿದವರು ನಿಮ್ಮ ಸಹಾಯಕ್ಕೆ ಬರುತ್ತಾರೆ. ಬಹಳ ದಿನಗಳಿಂದ ತಾಯಿಯ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದ ನಿಮಗೆ ಇಂದು ಸಮಾಧಾನ ಸಿಗುತ್ತದೆ ಅವರ ಆರೋಗ್ಯ ಸುಧಾರಣೆಯಾಗಲಿದೆ.
ಅದೃಷ್ಟದ ಸಂಖ್ಯೆ – 01 ಅದೃಷ್ಟದ ಬಣ್ಣ – ಹಳದಿ
ಉತ್ತಮ ಸಮಯ – ಸಂಜೆ 6:00 ರಿಂದ ರಾತ್ರಿ 10:00 ರವರೆಗೆ.

ಕರ್ಕಾಟಕ ರಾಶಿ:- ಸಂಗಾತಿ ಜೊತೆಗೆ ವಾದ ಆಗಬಹುದು, ಆದರೆ ಸಂಜೆ ವೇಳೆಗೆ ಎಲ್ಲವೂ ಸರಿ ಹೋಗಲಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ನೀಡಲು ಇದು ಉತ್ತಮ ದಿನವಾಗಿದೆ. ನಿಮ್ಮ ಜೊತೆ ಪ್ರೀತಿಯಲ್ಲಿ ಇರುವವರು ಈ ಸಂಬಂಧದ ಬಗ್ಗೆ ಕುಟುಂಬದವರ ಜೊತೆ ಮಾತನಾಡಬಹುದು. ಆರ್ಥಿಕ ಸ್ಥಿತಿ ಇಂದು ಉತ್ತಮವಾಗಿರಲಿದೆ.
ಅದೃಷ್ಟದ ಸಂಖ್ಯೆ – 09 ಅದೃಷ್ಟದ ಬಣ್ಣ – ಬಿಳಿ
ಉತ್ತಮ ಸಮಯ – ಬೆಳಗ್ಗೆ 5:50 ರಿಂದ ಮಧ್ಯಾಹ್ನ 12:20 ರವರೆಗೆ.

ಸಿಂಹ ರಾಶಿ:- ಕೆಲಸದಲ್ಲಿ ಈ ದಿನವು ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ನಿಮ್ಮ ಭವಿಷ್ಯವು ಒಳ್ಳೆಯ ರೀತಿಯಲ್ಲಿ ಬದಲಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಯಾವುದಾದರೂ ಸಂದರ್ಶನಕ್ಕೆ ಹೋಗಿದ್ದರೆ ಸಕರಾತ್ಮಕವಾದ ಫಲಿತಾಂಶವನ್ನು ಪಡೆಯುತ್ತೀರಿ. ಉದ್ಯಮಿಗಳಿಗೂ ಕೂಡ ಉತ್ತಮ ಲಾಭವಾಗುವ ಸಾಧ್ಯತೆಗಳಿವೆ.
ಅದೃಷ್ಟದ ಸಂಖ್ಯೆ – 03 ಅದೃಷ್ಟದ ಬಣ್ಣ – ಹಳದಿ
ಉತ್ತಮ ಸಮಯ – ಸಂಜೆ 4:30 ರಿಂದ ರಾತ್ರಿ 10:05 ರವರೆಗೆ.

ಕನ್ಯಾ ರಾಶಿ:- ನೀವು ಜೀವನದಲ್ಲಿ ಯಶಸ್ವಿಯಾಗಲು ಪ್ರಯತ್ನಿಸುತ್ತಿದ್ದರೆ ಅದಕ್ಕಾಗಿ ಹೆಚ್ಚು ಶ್ರಮಿಸಬೇಕು. ಸೋಮಾರಿಗಳಾಗಿರುವುದನ್ನು ತಪ್ಪಿಸಿ. ಇಲ್ಲವಾದಲ್ಲಿ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ನಿರಂತರವಾಗಿ ವಿಷಾದಿಸುತ್ತೀರಿ. ಈ ದಿನದ ಎಲ್ಲಾ ಕೆಲಸಗಳಿಗೆ ಹಿರಿಯರ ಬೆಂಬಲವಿರುತ್ತದೆ. ನೀವು ಉದ್ಯಮಿಗಳಾಗಿದ್ದರೆ ಕೆಲಸದ ಕಾರಣಕ್ಕಾಗಿ ಅನಗತ್ಯವಾಗಿ ತಿರುಗಾಡಬೇಕು.
ಅದೃಷ್ಟದ ಸಂಖ್ಯೆ – 08 ಅದೃಷ್ಟದ ಬಣ್ಣ – ಹಸಿರು
ಉತ್ತಮ ಸಮಯ – ಸಂಜೆ 6:00 ರಿಂದ 10:45 ರವರೆಗೆ.

ತುಲಾ ರಾಶಿ:- ಇಂದು ನೀವು ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಬೇಕು. ಹಣಕಾಸಿನ ನಿರ್ಧಾರ ಮಾಡುವುದಕ್ಕೆ ಈ ದಿನ ಉತ್ತಮವಾಗಿರುವುದಿಲ್ಲ. ನೌಕರರು ತಮ್ಮ ಸಭೆಯ ಬಗ್ಗೆ ಹೆಚ್ಚು ಗಮನಹರಿಸುತ್ತಿರುವುದರಿಂದ ನೌಕರರಿಗೆ ಕಚೇರಿಯಲ್ಲಿ ಬಹಳ ಕಾರ್ಯನಿರತವಾದ ಕಾರ್ಯನಿರತವಾದ ದಿನವಾಗಿರುತ್ತದೆ.
ಅದೃಷ್ಟದ ಸಂಖ್ಯೆ – 02 ಅದೃಷ್ಟದ ಬಣ್ಣ – ನೇರಳೆ
ಉತ್ತಮ ಸಮಯ – ಬೆಳಿಗ್ಗೆ 9:55 ರಿಂದ ಮಧ್ಯಾಹ್ನ 2:25 ವರೆಗೆ.

ವೃಶ್ಚಿಕ ರಾಶಿ:- ವಿದ್ಯಾರ್ಥಿಗಳಿಗೆ ಈ ದಿನವೂ ತುಂಬಾ ಶುಭಕರವಾಗಿದೆ. ಇಂದು ನೀವು ಉತ್ತಮ ಯಶಸ್ಸನ್ನು ಪಡೆಯುವ ನಿರೀಕ್ಷೆ ಇದೆ. ಗುರುಗಳ ಆಶೀರ್ವಾದ ಮತ್ತು ಬೆಂಬಲವು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಉದ್ಯಮಿಗಳಿಗೆ ಈ ದಿನವೂ ಪ್ರಯೋಜನಕಾರಿಯಾಗಿದೆ. ದೀರ್ಘ ಕಾಲದಿಂದ ಸಿಲುಕಿಕೊಂಡಿದ್ದ ಕಾನೂನು ಸಮಸ್ಯೆಯಲ್ಲಿ ಇಂದು ನೀವು ಯಶಸ್ವಿಯಾಗುವ ಅವಕಾಶಗಳಿದೆ.
ಅದೃಷ್ಟದ ಸಂಖ್ಯೆ – 08 ಅದೃಷ್ಟದ ಬಣ್ಣ – ಕಂದು
ಉತ್ತಮ ಸಮಯ – ಮಧ್ಯಾಹ್ನ 12:00 ರಿಂದ ರಾತ್ರಿ 8:00 ರವರೆಗೆ.

ಧನಸ್ಸು ರಾಶಿ:- ನಿಮ್ಮ ವಿರೋಧಿಗಳು ಇಂದು ಸಕ್ರಿಯರಾಗಿರುವುದರಿಂದ ಜಾಗರೂಕರಾಗಿರಿ. ಇಂದು ಅವರಿಂದ ತೊಂದರೆಗಳಾಗುವ ಸಾಧ್ಯತೆಗಳಿವೆ. ಇಂದು ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಹಣಕಾಸಿನ ಖರ್ಚಿನ ವಿಚಾರವಾಗಿ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆಗಳಿವೆ. ಇದು ನಿಮ್ಮ ಮುಂದಿನ ಎಲ್ಲಾ ಯೋಜನೆಗಳನ್ನು ಹಾಳು ಮಾಡುತ್ತದೆ. ಪೋಷಕರ ಜೊತೆಗಿನ ಸಂಬಂಧಗಳು ಉತ್ತಮವಾಗಿರುತ್ತದೆ.
ಅದೃಷ್ಟದ ಸಂಖ್ಯೆ – 05 ಅದೃಷ್ಟದ ಬಣ್ಣ – ನೇರಳೆ
ಉತ್ತಮ ಸಮಯ – ಬೆಳಿಗ್ಗೆ 10:05 ರಿಂದ ರಾತ್ರಿ 10:45 ರವರೆಗೆ.

ಮಕರ ರಾಶಿ:- ಇಂದು ನೀವು ನಿಮ್ಮ ಸಂಗಾತಿ ಜೊತೆ ಸೈಧ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಿ ಬರುತ್ತದೆ. ಇಂತಹ ಸನ್ನಿವೇಶಗಳಲ್ಲಿ ನೀವು ಆಡುವ ಪದಗಳನ್ನು ಎಚ್ಚರಿಕೆಯಿಂದ ಬಳಸಿ. ಇಂತಹ ಪರಿಸ್ಥಿತಿ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಹಣದ ಕೊರತೆಯಿಂದಾಗಿ ನಿಮ್ಮ ಕೆಲವು ಯೋಜನೆಗಳಿಗೆ ಅಡ್ಡಿಯಾಗಬಹುದು.
ಅದೃಷ್ಟದ ಸಂಖ್ಯೆ – 05 ಅದೃಷ್ಟದ ಬಣ್ಣ – ಕಿತ್ತಳೆ
ಉತ್ತಮ ಸಮಯ – ಸಂಜೆ 05:15 ರಿಂದ ರಾತ್ರಿ 9:20ರವರೆಗೆ.

ಕುಂಭ ರಾಶಿ:- ನಿಮ್ಮ ಜೀವನ ಸಂಗಾತಿಯಿಂದ ಸಂಪೂರ್ಣ ಪ್ರೀತಿ ಹಾಗೂ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಹೆತ್ತವರ ಸಹಕಾರದಿಂದ ಕುಟುಂಬಕ್ಕೆ ಸಂಬಂಧಿಸಿದ ಒಂದು ಪ್ರಮುಖ ಕಾರ್ಯವು ಪೂರ್ಣಗೊಳ್ಳುತ್ತದೆ. ಈ ಕಾರಣದಿಂದ ನಿಮ್ಮ ಖರ್ಚು ಹೆಚ್ಚಾಗುತ್ತಿದ್ದರೂ ಹಣಕಾಸಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಬರುವುದಿಲ್ಲ. ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ.
ಅದೃಷ್ಟದ ಸಂಖ್ಯೆ – 03 ಅದೃಷ್ಟದ ಬಣ್ಣ – ಕೇಸರಿ
ಉತ್ತಮ ಸಮಯ – ಮಧ್ಯಾಹ್ನ 02:15 ರಿಂದ ಸಂಜೆ 07:20ರವರೆಗೆ.

ಮೀನ ರಾಶಿ:- ಇಂದು ನಿಮ್ಮ ಪ್ರಣಯ ಜೀವನದಲ್ಲಿ ಸ್ವಲ್ಪ ನಿರಾಶೆಯನ್ನು ಎದುರಿಸಬಹುದು. ನಿಮ್ಮ ಸಂಗಾತಿಯ ಆಕ್ರಮಣಕಾರಿ ಸ್ವಭಾವವು ನಿಮ್ಮಿಬ್ಬರ ನಡುವೆ ದೊಡ್ಡ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇಂದು ನಿಮ್ಮ ನಿರೀಕ್ಷೆಯಂತೆ ಸಂಗಾತಿಯ ವರ್ತನೆ ಇರುವುದಿಲ್ಲ. ವಿವಾಹಿತ ದಂಪತಿಗಳಿಗೆ ಸಾಮಾನ್ಯ ದಿನವಾಗಿರುತ್ತದೆ. ಕೆಲಸದ ವಿಚಾರದಲ್ಲಿ ಇಂದು ಕಾರ್ಯನಿರತರಾಗಿರುತ್ತೀರಿ.
ಅದೃಷ್ಟದ ಸಂಖ್ಯೆ – 02 ಅದೃಷ್ಟದ ಬಣ್ಣ – ನೀಲಿ
ಉತ್ತಮ ಸಮಯ – ಮಧ್ಯಾಹ್ನ 02:15 ರಿಂದ ರಾತ್ರಿ 9:18 ರವರೆಗೆ.

ಈ 4 ಕಾರಣಗಳಿಂದ ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು ಈಗಾಗಲೇ 1 ಲಕ್ಷಕ್ಕೂ ಹೆಚ್ಚಿನ ಕಾರ್ಡ್ ರದ್ದು ಆಗಿದೆ ಕೇಂದ್ರ ಸರ್ಕಾರದ ಈ ಹೊಸ ನಿಯಮದ ಬಗ್ಗೆ ತಪ್ಪದೆ ತಿಳಿಯಿರಿ.

 

ಪಡಿತರ ಚೀಟಿ ಈಗ ಒಂದು ಮುಖ್ಯ ದಾಖಲೆ ಎಂದೇ ಹೇಳಬಹುದು. ಯಾಕೆಂದರೆ ಸರ್ಕಾರವು ಬಡ ಜನರಿಗೆ ಕನಿಷ್ಠ ಬೆಲೆಯಲ್ಲಿ ಅಥವಾ ಉಚಿತವಾಗಿ ಆಹಾರ ಧಾನ್ಯಗಳನ್ನು ತಲುಪಿಸುವ ಕಾರಣದಿಂದಾಗಿ ಪಡಿತರ ವ್ಯವಸ್ಥೆ ಮಾಡಿ ಈ ಸೌಲಭ್ಯ ಪಡೆಯಲು ಪಡಿತರ ಚೀಟಿಯನ್ನು ಒಂದು ಮಾನದಂಡವಾಗಿ ನೀಡಿತ್ತು. ನಂತರದ ದಿನಗಳಲ್ಲಿ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳಿಗೆ ಪಡಿತರ ಚೀಟಿಯನ್ನು ಒಂದು ಪ್ರಮುಖ ದಾಖಲೆಯಾಗಿ ಕೇಳಲಾಗುತ್ತಿದೆ.

ಈಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯನ್ನು ತಂದಿದೆ. ಇನ್ನು ಮುಂದೆ ಕೂಡ ಬಡ ಜನರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಪಡಿತರ ಚೀಟಿ ಆಧಾರದ ಮೇಲೆ ರೇಷನ್ ಹಂಚಿ ಅಗತ್ಯ ಹಾಗೂ ಗುಣಮಟ್ಟದ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ತಲುಪಿಸಿ ಹಸಿವುಮುಕ್ತ ಸದೃಢ ಭಾರತವನ್ನು ಕಟ್ಟಬೇಕು ಎನ್ನುವುದು ಸರ್ಕಾರಗಳ ಧ್ಯೇಯವಾಗಿದೆ.

ಮತ್ತೊಂದೆಡೆ ಅನಧಿಕೃತ ವ್ಯಕ್ತಿಗಳು ಕೂಡ ಜೊತೆಗೆ ಅನುಕೂಲತೆ ಇರದವರು ಕೂಡ ಸುಳ್ಳು ದಾಖಲೆಗಳನ್ನು ತೋರಿ, ಈ ಉಚಿತ ಪಡಿತರವನ್ನು ಪಡೆದುಕೊಳ್ಳುವ ಕಾರಣಕ್ಕಾಗಿ ನಕಲಿ ರೇಷನ್ ಕಾರ್ಡ್ ಗಳನ್ನು ಅರ್ಹತೆ ಇಲ್ಲದಿದ್ದರೂ ಪಡೆದಿದ್ದಾರೆ ಎನ್ನುವ ದಾಖಲೆ ಸರ್ಕಾರಕ್ಕೆ ಸಿಕ್ಕಿದೆ. ಕಳೆದ ವರ್ಷದಿಂದಲೂ ಕೂಡ ಕೇಂದ್ರ ಸರ್ಕಾರವು ಈ ರೀತಿ ನಕಲಿ ರೇಷನ್ ಕಾರ್ಡ್ ಹೊಂದಿರುವವರ ಮಾಹಿತಿಯನ್ನು ಕಲೆ ಹಾಕುತ್ತಿದ್ದು ಶೀಘ್ರದಲ್ಲಿಯೇ ಆ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಿದೆ.

ಇದಕ್ಕಾಗಿಯೇ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕಟ್ಟುನಿಟಿನ ನಿಯಮ ಹಾಗೂ ಇನ್ನಿತರ ನಿಯಮಗಳನ್ನು ಜಾರಿಗೆ ತಂದಿದೆ. ಜೊತೆಗೆ ಸರ್ಕಾರವು ಅರ್ಹತೆ ಇಲ್ಲದಿದ್ದರೂ ಕೂಡ ಕಾರ್ಡ್ ಹೊಂದಿ ಈ ಉಚಿತ ಪಡಿತರ ಪಡೆಯುತ್ತಿರುವವರಿಗೆ ಎಚ್ಚರಿಕೆಯನ್ನು ಕೂಡ ನೀಡಿದೆ.

ಆ ಪ್ರಕಾರವಾಗಿ 100 ಚದರ ಮೀಟರ್ ಮನೆಯನ್ನು ಸ್ವಂತ ಖರ್ಚಿನಲ್ಲಿ ಕಟ್ಟಿಸಿರುವವರು ಅಥವಾ ಮನೆ ತೆಗೆದು ಕೊಂಡಿರುವವರು, ಮನೆಯಲ್ಲಿ ನಾಲ್ಕು ಚಕ್ರದ ವಾಹನ ಮತ್ತು ಟ್ರಾಕ್ಟರ್ ಅಂತಹ ವಾಹನಗಳನ್ನು ಹೊಂದಿರುವವರು, ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕವಾಗಿ 2 ಲಕ್ಷ ಆದಾಯ ಮತ್ತು ಪಟ್ಟಣ ಪ್ರದೇಶದಲ್ಲಿ ವಾರ್ಷಿಕವಾಗಿ 3 ಲಕ್ಷ ಆದಾಯ ಹೊಂದಿರುವವರು ಬಡತನ ರೇಖೆಗಿಂತ ಕೆಳಗೆ ಇರುವುದಿಲ್ಲ.

ಇಂಥವರು ಸರ್ಕಾರ ಬಡಜನರಿಗೆ ನೀಡುತ್ತಿರುವ ಪ್ರಯೋಜನ ಪಡೆಯಲು ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಬಡ ಜನರಿಗೆ ನೀಡುವ ಕಾರ್ಡುಗಳನ್ನು ಪಡೆದಿದ್ದರೆ ತಕ್ಷಣವೇ ಅದನ್ನು ತಹಶೀಲ್ದಾರ್ ಆಫೀಸ್, DSO ಆಫೀಸ್ ಅಲ್ಲಿ ಸರಂಡರ್ ಮಾಡಬೇಕು ಎಂದು ಸುತ್ತೊಲೆಯನ್ನು ಹೊರಡಿಸಿದೆ.

ಒಂದು ವೇಳೆ ಸರ್ಕಾರ ನಡೆಸುತ್ತಿರುವ ಕ್ರಾಸ್ ಚೆಕ್ ವೇಳೆ ಸಿಕ್ಕಿ ಬಿದ್ದರೆ ಅಂತಹ ಕಾರ್ಡುಗಳನ್ನು ರದ್ದುಪಡಿಸುವುದು ಮಾತ್ರವಲ್ಲದೆ ಈ ರೀತಿ ಕಾರ್ಡ್ ಗಳನ್ನು ಹೊಂದಿರುವವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಮತ್ತು ಇಷ್ಟು ವರ್ಷಗಳಿಂದ ಅವರು ಪಡೆದಿದ್ದ ರೇಷನ್ ಕೂಡ ಹಿಂಪಡೆಯುವ ನಿರ್ಧಾರಕ್ಕೂ ಬರಬಹುದು ಎನ್ನುವ ಎಚ್ಚರಿಕೆ ಕೂಡ ಸರ್ಕಾರದ ಕಡೆಯಿಂದ ಕೇಳಿ ಬಂದಿದೆ.

ಇಂತಹ ಉಪಯುಕ್ತ ಮಾಹಿತಿಯನ್ನು ಶೀಘ್ರವಾಗಿ ಎಲ್ಲರ ಜೊತೆ ಹಂಚಿಕೊಳ್ಳಿ ಯಾಕೆಂದರೆ ಬಡತನ ಪರಿಧಿಗೆ ಬರದೇ ಇದ್ದರು ಅಂತಹ ಸೌಲಭ್ಯಗಳನ್ನು ಪಡೆದಿರುವವರು ತಕ್ಷಣವೇ ಸರ್ಕಾರ ನಿಯಮವನ್ನು ಒಪ್ಪಿಕೊಳ್ಳದೆ ಹೋದಲ್ಲಿ ಮುಂದೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

ಡೈರಿ ಫಾರ್ಮ್‌ ಮಾಡ್ಬೇಕು ಅನ್ಕೊಂಡೋರಿಗೆ ಸುವರ್ಣವಕಾಶ. ಕೇಂದ್ರ ಸರ್ಕಾರದಿಂದ ನಿಮಗೆ ಸಿಗಲಿದೆ 7 ಲಕ್ಷ ರೂಪಾಯಿ.!

ರಾಜ್ಯದ ರೈತರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ನಿಮಗೆ ತಿಳಿದಿರುವಂತೆ ಕಾಲಕಾಲಕ್ಕೆ ಕೇಂದ್ರ ಸರ್ಕಾರವು ದೇಶದ ಜನರಿಗೆ ಉದ್ಯೋಗವನ್ನು ಒದಗಿಸಲು ಹೊಸ ಯೋಜನೆಗಳನ್ನು ಮಾಡುತ್ತಲೇ ಇರುತ್ತದೆ. ಅದೇ ರೀತಿ ಹೈನುಗಾರಿಕೆ ಹಣವನ್ನು ಒದಗಿಸಲು ಸರ್ಕಾರ ಮುಂದಾಗಿದೆ ಡೈರಿ ಫಾರ್ಮಿಂಗ್ ಎಷ್ಟು ಹಣಕಾಸಿನ ನೆರವನ್ನು ನೀಡುತ್ತದೆ ಎಂದು ತಿಳಿಯಬೇಕಾದರೆ ಈ ಲೇಖನವನ್ನು ಮಿಸ್‌ ಮಾಡದೆ ಕೊನೆಯವರೆಗೂ ಓದಿ…

ಕರೋನಾ ಬಿಕ್ಕಟ್ಟಿನ ಮಧ್ಯೆ ‘ಆತ್ಮನಿರ್ಭರ್ ಭಾರತ್’ ಗೆ ಪಿಎಂ ಮೋದಿ ಕರೆ ನೀಡಿದ ನಂತರ, ರಾಷ್ಟ್ರವನ್ನು ಸ್ವಾವಲಂಬಿ ಆರ್ಥಿಕತೆಯನ್ನಾಗಿ ಮಾಡಲು ಸರ್ಕಾರವು ಕೃಷಿ ಮತ್ತು ಕೃಷಿ-ವ್ಯವಹಾರದ ಮೇಲೆ ಹೆಚ್ಚು ಗಮನಹರಿಸಿದೆ. ಕೇಂದ್ರವು ಭಾರತದ ಡೈರಿ ಕ್ಷೇತ್ರಕ್ಕೆ ದೊಡ್ಡ ನಿಧಿ ಮತ್ತು ಹೊಸ ಅವಕಾಶಗಳನ್ನು ಬಿಡುಗಡೆ ಮಾಡಿದೆ.

ಇದಲ್ಲದೆ, ಹೈನುಗಾರಿಕೆಯು ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಕೃಷಿ-ವ್ಯವಹಾರವಾಗಿ ವೇಗವಾಗಿ ಬೆಳೆಯುತ್ತಿದೆ, ಅಲ್ಲಿ ರೈತರಿಗೆ ನಷ್ಟದ ಸಾಧ್ಯತೆಗಳು ತುಂಬಾ ಕಡಿಮೆ. ಇದರ ಜೊತೆಯಲ್ಲಿ, ಅನೇಕ ಹೊಸ ವೈಜ್ಞಾನಿಕ ವಿಧಾನಗಳು ಮತ್ತು ಸರ್ಕಾರದ ಯೋಜನೆಗಳು ರೈತರಿಗೆ ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಡೈರಿ ಮತ್ತು ಹಾಲಿನ ಉತ್ಪನ್ನಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಡೈರಿ ಉದ್ಯಮಿ ಅಭಿವೃದ್ಧಿ ಯೋಜನೆ (ಡಿಇಡಿಎಸ್) ಅನ್ನು ಪ್ರಾರಂಭಿಸಿದೆ.

ಯೋಜನೆಯ ಉದ್ದೇಶಗಳು :
ದೇಶದ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಹೈನುಗಾರಿಕೆಯ ಕಾರ್ಯಾಚರಣೆಯು ಸಾಕಷ್ಟು ಅಸಂಘಟಿತವಾಗಿತ್ತು ಆದರೆ ನಬಾರ್ಡ್ ಯೋಜನೆಯಲ್ಲಿ ಡೈರಿ ಉದ್ಯಮವನ್ನು ಸಂಘಟಿಸಿ ಸುಗಮವಾಗಿ ನಡೆಸಲಾಗುವುದು. ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವುದು ಮತ್ತು ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಈ ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆಯ ಮೂಲಕ ಜನರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು ಇದರಿಂದ ಜನರು ತಮ್ಮ ವ್ಯವಹಾರವನ್ನು ಸುಲಭವಾಗಿ ನಡೆಸಬಹುದು ಇದರಿಂದ ನಮ್ಮ ದೇಶದ ನಿರುದ್ಯೋಗವನ್ನು ಕೊನೆಗೊಳಿಸುತ್ತದೆ ಮತ್ತು ಅದೇ ಸಮಯದಲ್ಲಿ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯು ಬಲಗೊಳ್ಳುತ್ತದೆ.

ಹೈನುಗಾರಿಕೆಗೆ ನಬಾರ್ಡ್ ಸಾಲ ಪಡೆಯುವುದು ಹೇಗೆ ?
* ಗ್ರಾಮೀಣಾಭಿವೃದ್ಧಿ ನಬಾರ್ಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
https://www.nabard.org/
* ಇದರ ನಂತರ ಅಧಿಕೃತ ವೆಬ್‌ಸೈಟ್‌ನ ಮುಖಪುಟವು ಪರದೆಯ ಮೇಲೆ ತೆರೆಯುತ್ತದೆ.
* ಇಲ್ಲಿ ನಿಮಗೆ ಮಾಹಿತಿ ಕೇಂದ್ರದ ಆಯ್ಕೆಯನ್ನು ತೋರಿಸಲಾಗಿದೆ.
* ಇದರ ನಂತರ ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
* ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಮುಂದಿನ ಪುಟವು ಈ ಪರದೆಯಲ್ಲಿ ತೆರೆಯುತ್ತದೆ.

* ಇಲ್ಲಿ ನೀವು ಯೋಜನೆಯ ಪ್ರಕಾರ PDF ಅನ್ನು ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
* ಈ ರೀತಿಯಾಗಿ ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡುತ್ತೀರಿ ಮತ್ತು ಯೋಜನೆಯ ಸಂಪೂರ್ಣ ಅರ್ಜಿ ನಮೂನೆಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
* ನಂತರ ನೀವು ಈ ಫಾರ್ಮ್ ಅನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಸಂಬಂಧಿತ ಮಾಹಿತಿಯನ್ನು ಭರ್ತಿ ಮಾಡಬೇಕು.
* ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡುವ ಮೂಲಕ ಫಾರ್ಮ್ ಅನ್ನು ಸಲ್ಲಿಸಿ.

ಸೂಚನೆ
ಇತ್ತೀಚೆಗೆ ನಬಾರ್ಡ್ ಡೈರಿ ಫಾರ್ಮಿಂಗ್ ಸ್ಕೀಮ್ 2023 ರಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಪ್ರಾರಂಭಿಸಿದೆ. ಈ ನಬಾರ್ಡ್ ಹೈನುಗಾರಿಕೆ ಯೋಜನೆಯ ಮೂಲಕ ದೇಶದ ರೈತರಿಗೆ 30,000 ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ನೆರವು ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹನುಮಂತನ ಎದೆಯಲ್ಲಿ ಚಿಮ್ಮುತ್ತದೆ ಅಮೃತ ಜಲ, ಇಲ್ಲಿಗೆ ಬಂದ ಭಕ್ತಾಧಿಗಳ ಕಷ್ಟ ವಾರದೊಳಗೆ ನಿವಾರಣೆಯಾಗುತ್ತದೆ. ಮನಸ್ಸಿನಲ್ಲಿ ಬೇಡಿಕೊಂಡ ಕೆಲಸಗಳು ನೆರವೇರುತ್ತದೆ.!

 

ಹನುಮಂತ, ಆಂಜನೇಯ, ಮಾರುತಿ ಎಂದರೆ ಎಲ್ಲರಿಗೂ ಕೂಡ ವಿಶೇಷ ಪ್ರೀತಿ. ಭಕ್ತಿಗೆ, ಯುಕ್ತಿಗೆ ಸಾಹಸಕ್ಕೆ ಹೆಸರುವಾಸಿಯಾದ ಈ ಅಂಜನೀಪುತ್ರ ಕಷ್ಟ ಕಾಲದಲ್ಲಿ ನೆರವಾಗುವ ರಾಮ ಭಂಟ. ಭಾರತದಾದ್ಯಂತ ಆಂಜನೇಯನಿಗೆ ಭಕ್ತಾದಿಗಳು ಇದ್ದಾರೆ. ಆಂಜನೇಯ ಮೇಲಿನ ಭಕ್ತಿಯಿಂದ ಪ್ರೀತಿಯಿಂದ ಭಾರತದಾದ್ಯಂತ ಲಕ್ಷಾಂತರ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

ಅದರಲ್ಲಿ ಕೆಲ ದೇವಾಲಯಗಳು ತಮ್ಮ ವಿಶೇಷತೆಯಿಂದ ಎಲ್ಲರ ಗಮನ ಸೆಳೆಯುತ್ತವೆ. ಇಂತಹದ್ದೇ ಒಂದು ವಿಶೇಷವಾದ ದೇವಸ್ಥಾನ ರಾಜಸ್ಥಾನದಲ್ಲಿದೆ. ಇಂದಿಗೂ ಕೂಡ ವೈದ್ಯ ಹಾಗೂ ವಿಜ್ಞಾನ ಲೋಕಕ್ಕೆ ಸವಾಲಾಗುವಂತಹ ಪವಾಡಗಳು ಇಲ್ಲಿರುವ ಆಂಜನೇಯನ ವಿಗ್ರಹದಲ್ಲಿ ನಡೆಯುತ್ತಿವೆ. ಜೊತೆಗೆ ಈ ದೇವಾಲಯಕ್ಕೆ ಮೊದಲ ಬಾರಿಗೆ ಭೇಟಿ ಕೊಡುವವರು ಡಬಲ್ ಗುಂಡಿಗೆ ಹೊಂದಿರಬೇಕು ಎಂದು ಹೇಳಲಾಗುತ್ತದೆ, ಇಂತಹ ದೇವಸ್ಥಾನದ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸಾಮಾನ್ಯವಾಗಿ ಆಂಜನೇಯನನ್ನು ಏಕಾಗ್ರತೆಗಾಗಿ ಮತ್ತು ಧೈರ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಹನುಮಾನ್ ಚಾಲೀಸವನ್ನು ಪಟಿಸುವುದರಿಂದ ಮತ್ತು ಆಂಜನೇಯನ ಫೋಟೋ ಹಾಗೂ ವಿಗ್ರಹಗಳನ್ನು ಇಟ್ಟುಕೊಳ್ಳುವುದರಿಂದ ಯಾವುದೇ ದುಷ್ಟ ಶಕ್ತಿಗಳ ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವ ನಮ್ಮ ಮೇಲೆ ಬೀಳುವುದಿಲ್ಲ ಎನ್ನುವುದು ಹಿಂದೂ ಧರ್ಮದ ನಂಬಿಕೆ ಹಾಗೆಯೇ ನಕರಾತ್ಮಕ ಶಕ್ತಿಗಳಿಂದ ಕಾಟ ಆಗುತ್ತಿದೆ ಎನ್ನುವ ಮಾತುಗಳನ್ನು ನಾವು ಕೇಳಿದ್ದೇವೆ.

ಅವರು ರಾಜಸ್ಥಾನದಲ್ಲಿರುವ ಈ ಆಂಜನೇಯನ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಟ್ಟರೆ ಸಾಕು ಮೈ ಮೇಲೆ ಇರುವ ದೆವ್ವ ಭೂತ ಇದ್ದರೂ ಕೂಡ ಬಿಟ್ಟು ಹೋಗುತ್ತದೆ. ಅವುಗಳಿಗೆ ಮುಕ್ತಿ ಸಿಕ್ಕಿ ಇನ್ನೆಂದು ಅವರನ್ನು ಕಾಡದ ರೀತಿ ಆಗುತ್ತದೆ. ಇದೇ ಕಾರಣಕ್ಕಾಗಿ ಈ ದೇವಸ್ಥಾನವು ಫೇಮಸ್ ಆಗಿದೆ. ದೇವಸ್ಥಾನದ ವಿಚಾರವನ್ನು ಹೇಳುವುದಾದರೆ ತಿರುಪತಿಯ ದೇವಸ್ಥಾನ ಕ್ಕಿಂತ ಕೂಡ ದೊಡ್ಡದಾಗಿರುವ ಈ ದೇವಸ್ಥಾನವು ವಿಶ್ವದಲ್ಲೇ ಅತಿ ದೊಡ್ಡ ದೇವಸ್ಥಾನ ಎಂದು ಕರೆಸಿಕೊಂಡಿದೆ.

ಈ ದೇವಸ್ಥಾನಕ್ಕೆ ದಿನಕ್ಕೆ ಲಕ್ಷಕ್ಕಿಂತ ಹೆಚ್ಚು ಜನರು ಭೇಟಿ ಕೊಡುತ್ತಾರೆ ಇವುಗಳಲ್ಲಿ ಹೆಚ್ಚಿನ ಜನಸಂಖ್ಯೆ, ಈ ರೀತಿ ದೆವ್ವ ಭೂತಗಳ ಕಾಟದಿಂದ ಬಳಲುತ್ತಿರುವವರು ಆಗಿರುತ್ತಾರೆ. ಪ್ರತಿಯೊಬ್ಬರಿಗೂ ಕೂಡ ಆಂಜನೇಯ ದರ್ಶನ ಸಿಗುತ್ತದೆ ಆದರೆ ದೇವಸ್ಥಾನದ ಪೂರ್ತಿ ಈ ರೀತಿ ವಿಚಿತ್ರ ವರ್ತನೆಗಳಿಂದ ನರಳುವವರು ಇರುವುದರಿಂದ ಕನಿಷ್ಠ 3-4 ತಾಸುಗಳನ್ನಾದರೂ ಕಾಯಲೇಬೇಕು. ಇಲ್ಲಿರುವ ಆಂಜನೇಯ ವಿಗ್ರಹದ ಪವಾಡದ ಬಗ್ಗೆ ಕೂಡ ಈ ದೇವಸ್ಥಾನದಲ್ಲಿ ಕಾಣಬಹುದು.

ಆಂಜನೇಯನ ಹೃದಯ ಭಾಗದಿಂದ ಒಂದು ಪವಿತ್ರವಾದ ಜಲ ಹರಿದು ಬರುತ್ತದೆ ಇದನ್ನು ಅಮೃತ ಜಲ ಎಂದು ಕರೆಯಲಾಗುತ್ತಿದೆ. ಈ ನೀರು ಪ್ರತಿದಿನ ಬೆಳಿಗ್ಗೆ 5:30 ರಿಂದ 7 ಗಂಟೆ ಸಮಯದವರೆಗೆ ಮಾತ್ರ ಈ ರೀತಿ ಹೊರ ಬೀಳುತ್ತದೆ. ಅದನ್ನು ಶೇಖರಿಸಿಕೊಂಡು ದೇವಸ್ಥಾನಕ್ಕೆ ದೆವ್ವ ಭೂತಗಳ ಕಾಟದಿಂದ ಬರುವವರ ಮೇಲೆ ಸಿಂಪಡಿಸಲಾಗುತ್ತದೆ. ಆ ತಕ್ಷಣವೇ ಅತೃಪ್ತ ಆತ್ಮಗಳು ಅವರನ್ನು ಬಿಟ್ಟು ಹೋಗುತ್ತವೆ.

ಮೊದಲಿಗೆ ಈ ನೀರನ್ನು ಗಂಗಾ ನದಿಯ ನೀರು ಎಂದು ಭಾವಿಸಲಾಗಿತ್ತು ಆದರೆ ಪರೀಕ್ಷೆ ಮಾಡಿದ ಬಳಿಕ ಎರಡು ನೀರಿಗೆ ವ್ಯತ್ಯಾಸಗಳಿವೆ ಮತ್ತು ಈ ನೀರಿನ ಮೂಲ ಯಾವುದು ಎನ್ನುವುದೇ ಇನ್ನು ಪತ್ತೆ ಆಗಿಲ್ಲ. ಜೊತೆಗೆ ದೇವಸ್ಥಾನಕ್ಕೆ ಬಂದ ಪ್ರತಿಯೊಬ್ಬರೂ ಕೂಡ ಈ ನೀರನ್ನು ತಪ್ಪದೆ ಪ್ರಸಾದವಾಗಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ.

ಮನೆಯಲ್ಲಿ ಈ ನೀರನ್ನು ಪೂಜಿಸಿದ ಮೂರು ದಿನಗಳ ಒಳಗೆ ಎಂತಹದ್ದೇ ಕಷ್ಟಗಳಿದ್ದರೂ ಕೂಡ ಪರಿಹಾರ ಆಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ. ಇಷ್ಟು ಫೇಮಸ್ ಆದ ಈ ದೇವಸ್ಥಾನವು ರಾಜಸ್ಥಾನದ ದೌಸ ಎಂಬ ಊರಿನಿಂದ 48 ಕಿಲೋಮೀಟರ್ ದೂರದಲ್ಲಿದೆ. ಆಂಜನೇಯನ ಬಾಲ್ಯದ ಹೆಸರು ಬಾಲ ಆದಕಾರಣ ಇಲ್ಲಿನ ಭಾಗದ ಜನರು ಆಂಜನೇಯನನ್ನು ಬಾಲಾಜಿ ಎಂದು ಕರೆಯುತ್ತಾರೆ. ಆಂಜನೇಯ ನೆಲ ನಿಂತಿರುವ ಸ್ಥಳವನ್ನು ಮೆಹಂದಿಪುರ್ ಬಾಲಾಜಿ ದೇವಸ್ಥಾನ ಎಂದು ಕರೆಯುತ್ತಾರೆ.