Home Blog Page 271

ಅದ್ದೂರಿಯಾಗಿ ಮಗಳ ಹುಟ್ಟುಹಬ್ಬ ಮಾಡಿದ ರಾಕಿಂಗ್ ಸ್ಟಾರ್ ಯಶ್ ದಂಪತಿ ಈ ಕ್ಯೂಟ್ ವಿಡಿಯೋ ನೋಡಿ.

0

ಯಶ್ ಅವರ ಮುದ್ದು ಮಗಳು ಐರಾ ಬರ್ತಡೇ ಪಾರ್ಟಿ ಹೇಗಿತ್ತು ನೋಡಿ.

ರಾಕಿಂಗ್ ಸ್ಟಾರ್ ಯಶ್ ಅವರು ಪಕ್ಕ ಫ್ಯಾಮಿಲಿ ಮ್ಯಾನ್, ತಾವು ಎಷ್ಟೆ ಸೂಪರ್ ಸ್ಟಾರ್ ಆಗಿ ಬೆಳೆದಿದ್ದರು ಕುಟುಂಬಕ್ಕಾಗಿ ಸಮಯ ಮೀಸಲಿಡುತ್ತಾರೆ. ಅಲ್ಲದೆ ತಮ್ಮ ಪತ್ನಿ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಸಂಬಂಧ ಪಟ್ಟ ವಿಶೇಷ ಸಂದರ್ಭಗಳನ್ನು ವಿಶೇಷವಾಗಿ ಆಚರಿಸುತ್ತಾರೆ. ಎಲ್ಲಾ ಹುಡುಗಿಯರು ಕೂಡ ಇಷ್ಟಪಡುವಂತಹ ವ್ಯಕ್ತಿತ್ವ ಯಶ್ ಅವರದ್ದು ಆಗಿದ್ದು.

ಅವರ ಬದುಕು ಎಷ್ಟು ಸ್ಪೂರ್ತಿದಾಯಕವಾಗಿದೆಯೋ ವೈಯಕ್ತಿಕ ಜೀವನ ಕೂಡ ಅಷ್ಟೇ ಆದರ್ಶಮಯವಾಗಿದೆ. ಸಿನಿಮಾ ಕೆರಿಯರ್ ಬಿಟ್ಟು ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ತಮ್ಮ ಜೊತೆಗೆ ಬಣ್ಣದ ಪಯಣ ಆರಂಭಿಸಿದ ರಾಧಿಕಾ ಪಂಡಿತ್ ಅವರ ಜೊತೆ ಧಾರಾವಾಹಿ ದಿನಗಳಿಂದಲೂ ಯಶ್ ಅವರಿಗೆ ಸ್ನೇಹವಿತ್ತು. ನಂತರ ಮೊಗ್ಗಿನ ಮನಸ್ಸು, ಡ್ರಾಮಾ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಮೇಲೆ ಅದು ಪ್ರೀತಿಯಾಗಿ ಬದಲಾಯಿತು.

ಹಲವು ವರ್ಷಗಳ ನಂತರ ಪ್ರೀತಿಯಲ್ಲಿ ಇದ್ದವರು ಕನ್ನಡದಲ್ಲಿ ಒಟ್ಟು ನಾಲ್ಕು ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಕನ್ನಡ ಚಲನಚಿತ್ರ ರಂಗದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಎಂದು ಖ್ಯಾತಿ ಹೊಂದಿರುವ ಇವರಿಬ್ಬರು ಡಿಸೆಂಬರ್ 9, 2016ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟರು. ಮದುವೆ ಆದ ಎರಡೇ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ರಾಧಿಕಾ ಪಂಡಿತ್ ಅವರು ಡಿಸೆಂಬರ್ 2 2018 ರಲ್ಲಿ ಐರಾ ಎನ್ನುವ ಮುದ್ದಾದ ಮಗುವಿಗೆ ಜನ್ಮ ನೀಡಿದರು.

ಐರಾ ಯಶ್ ಬದುಕಿಗೆ ಅದೃಷ್ಟ ದೇವತೆ ಆಗಿದ್ದು ಐರಾ ಹುಟ್ಟಿದ ಬಳಿಕ ಕರ್ನಾಟಕದಲ್ಲಿ ರಾಕಿಂಗ್ ಸ್ಟಾರ್ ಆಗಿದ್ದ ಯಶ್ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇವರಿಬ್ಬರಿಗೂ ಅಥರ್ವ್ ಎನ್ನುವ ಮುದ್ದಾದ ಮಗನು ಕೂಡ ಇದ್ದಾನೆ. ರಾಕಿಂಗ್ ಸ್ಟಾರ್ ಯಶ್ ಅವರು ಬಿಡುವ ಇದ್ದಾಗಲೆಲ್ಲ ಮಕ್ಕಳ ಜೊತೆ ಆಟ ಆಡುವ ಸಮಯ ಕಳೆಯುವ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಬ್ರೇಕ್ ಸಿಕ್ಕಾಗಲ್ಲ ಪತ್ನಿ ಹಾಗೂ ಮಕ್ಕಳ ಜೊತೆ ಪಿಕ್ನಿಕ್ ಟ್ರಿಪ್ ಟೂರ್ ಮಾಡಿ ಖುಷಿಪಡುತ್ತಾರೆ.

ಯಶ್ ಅವರ ಮುದ್ದಾದ ಕುಟುಂಬದ ಫೋಟೋ ನೋಡುವುದೇ ಚೆಂದ. ಇತ್ತ ರಾಧಿಕ ಪಂಡಿತ್ ಅವರು ಕೂಡ ಮದುವೆಯಾದ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದು ಯಶ್ ಅವರ ಸಾಧನೆಗೆ ಬೆನ್ನೆಲುಬಾಗುತ್ತ , ಎರಡು ಮಕ್ಕಳನ್ನು ಲಾಲನೆ ಪಾಲನೆ ಮಾಡಿ ಬೆಳೆಸುತ್ತಾ ಅವರ ಜೊತೆ ಸಮಯ ಕಳೆಯುವುದರಲ್ಲಿ ಬಿಝಿ ಆಗಿದ್ದಾರೆ. ರಾಧಿಕಾ ಪಂಡಿತ್ ಅವರ ಕಂಬ್ಯಾಕ್ ಬಗ್ಗೆ ಸಹಾ ಸಾಕಷ್ಟು ನಿರೀಕ್ಷೆ ಇದ್ದು, ಲಕ್ಷಾಂತರ ಅಭಿಮಾನಿಗಳು ಅವರ ಸಿನಿಮಾಗಾಗಿ ಕಾಯುತ್ತಿದ್ದಾರೆ.

ಇದೀಗ ಯಶ್ ಮಗಳಿಗೆ ನಾಲ್ಕು ವರ್ಷ ತುಂಬಿದೆ. ಈ ವರ್ಷದ ಹುಟ್ಟು ಹಬ್ಬವನ್ನು ಪ್ರತಿವರ್ಷದಂತೆ ಅದ್ದೂರಿಯಾಗಿ ಯಶ್ ದಂಪತಿ ಆಚರಿಸಿದ್ದಾರೆ. ಕುಟುಂಬಸ್ಥರು, ಚಿತ್ರರಂಗದ ಕಲಾವಿದರುಗಳು ಸ್ನೇಹಿತರು ಎಲ್ಲರೂ ಐರಾ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದಾರೆ. ಹುಟ್ಟು ಹಬ್ಬದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಹುಟ್ಟು ಹಬ್ಬದ ಪ್ರಯುಕ್ತವಾಗಿ ಐರಾ ಕುರಿತು ಇನ್ನೊಂದು ವಿಷಯ ಹೊರ ಬಿದ್ದಿದೆ. ಯಶ್ ತಮ್ಮ ಮುದ್ದಿನ ಮಗಳ ಹೆಸರಿನಲ್ಲಿ ಪ್ರೊಡಕ್ಷನ್ ಶುರು ಮಾಡುತ್ತಿದ್ದು ಮುಂದಿನ ಸಿನಿಮಾವನ್ನು ತಮ್ಮದೇ ಬ್ಯಾನರ್ ಅಲ್ಲಿ ಮಾಡಲಿದ್ದಾರೆ ಎಂದು ಸುದ್ದಿ ಆಗುತ್ತಿದೆ. ಇದು ಯಶ್ ಅವರ 19ನೇ ಸಿನಿಮಾ ಆಗಿರಲಿದ್ದು ಹಲವಾರು ವಿಷಯಗಳಿಂದ ಕುತೂಹಲ ಹೆಚ್ಚಿಸಿದೆ.

ಅಪ್ಪು ಮಾಡುತ್ತಿದ್ದ ಸಮಾಜ ಸೇವೆ ಮುಂದುವರಿಸಿಕೊಂಡು ಹೋಗಲು ಶಿವಣ್ಣ ವರ್ಷಕ್ಕೆ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತ.?

0

ಅಪ್ಪು ಸಮಾಜಿಕ ಕಾರ್ಯ

ಅಪ್ಪು ಅವರು ಸಮಾಜ ಕಾರ್ಯ ಮಾಡುತ್ತಿದ್ದ ವಿಚಾರ ನಿಮಗೆ ತಿಳಿದೇ ಇದೆ ಚಲನಚಿತ್ರ ನಟನಾಗಿದ್ದರೂ ಕೂಡ ತಮ್ಮ ಆದಾಯದ ಭಾಗಶಃ ಹಣವನ್ನು ಸಮಾಜ ಸೇವೆಗಾಗಿ ಮೀಸಲು ಇಡುತ್ತಿದ್ದರು. ಅದೆಷ್ಟೋ ಜನಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ ಆದರೆ ತಾವು ಸಹಾಯ ಮಾಡಿದಂತಹ ವಿಚಾರವನ್ನು ಅವರು ಎಲ್ಲಿಯೂ ಕೂಡ ಹೇಳಿಕೊಳ್ಳುತ್ತಿರಲಿಲ್ಲ‌.

ಬಲಗೈನಲ್ಲಿ ಕೊಟ್ಟದ್ದು ಎಡಗೈಗೂ ಕೂಡ ತಿಳಿಯಬಾರದು ಎಂಬಂತೆ ಬದುಕಿ ತೋರಿಸಿ ಕೊಟ್ಟ ಮಹಾನ್ ಪುಣ್ಯಾತ್ಮ ನಿಜ ಹೇಳಬೇಕು ಅಂದರೆ ಡಾಕ್ಟರ್ ರಾಜಕುಮಾರ್ ಕುಟುಂಬದಲ್ಲಿ ಅಪ್ಪು ಅವರು ಮಾಡಿದಷ್ಟು ಸಹಾಯವನ್ನು ಇನ್ಯಾರೂ ಕೂಡ ಮಾಡಿಲ್ಲ ಅಂತ ಹೇಳಬಹುದು. ಆದರೆ ಅಪ್ಪು ಅವರು ಅಗಲಿದ ಮೇಲೆ ಈ ಸಮಾಜ ಕಾರ್ಯವನ್ನು ಯಾರು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬುದು ಹಲವು ಅಭಿಮಾನಿಗಳ ಪ್ರಶ್ನೆಯಾಗಿತ್ತು ಹಾಗೂ ಅನುಮಾನವೂ ಕೂಡ ಆಗಿತ್ತು.

ಅಪ್ಪು ಅವರು ಹೋದ ಮೇಲೆ ಇನ್ಯಾರೂ ಕೂಡ ಈ ಸಮಾಜ ಸೇವೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಅಂತ ತಿಳಿದುಕೊಂಡಿದ್ದರು ಆದರೆ ಇದೀಗ ಅಪ್ಪು ಅವರು ಮಾಡುತ್ತಿದ್ದಂತಹ ಸಮಾಜ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗುವಂತಹ ನಿರ್ಧಾರವನ್ನು ಡಾಕ್ಟರ್ ರಾಜಕುಮಾರ್ ಕುಟುಂಬದವರು ಮಾಡಿದ್ದಾರೆ. ಹೌದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.

ಇದರ ಜೊತೆಗೆ ಅಪ್ಪು ಅವರ ಅಣ್ಣ ಶಿವಣ್ಣ ಅವರು ಕೂಡ ಅಪ್ಪು ಮಾಡುತ್ತಿದ್ದಂತಹ ಸಮಾಜ ಸೇವೆಗೆ ಕೈಗೂಡಿಸಿದ್ದಾರೆ ಅಪ್ಪು ಮಾಡುತ್ತಿದ್ದ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗಲು ಶಿವಣ್ಣ ಅವರು ಅದೆಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬುದು ತಿಳಿದರೆ ನಿಜಕ್ಕೂ ಕೂಡ ನಿಮಗೆ ಆಶ್ಚರ್ಯ ಆಡಿಸಬಹುದು ಆದರೂ ಕೂಡ ಇದು ಸತ್ಯ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಾಮಾಜಿಕವಾಗಿ ಎಷ್ಟು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂಬುದು ಅವರ ಮ.ರ.ಣ ನಂತರವೇ ಇಡೀ ಜಗತ್ತಿಗೆ ತಿಳಿದು ಬಂದಿದ್ದು. ಅಷ್ಟರ ಮಟ್ಟಿಗೆ ತಾವು ಮಾಡಿಕೊಂಡು ಬರುತ್ತಿದ್ದ ಸಾಮಾಜಿಕ ಕಾರ್ಯಗಳನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದರು. ಈಗ ಅಪ್ಪು ಅವರ ಮ.ರ.ಣ ನಂತರ ಕೆಲವೊಂದು ಕಾರ್ಯಗಳನ್ನು ಮಾತ್ರ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಶಕ್ತಿ ಧಾಮ ಸೇರಿದಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿಕೊಂಡು ಹೋಗುತ್ತಿರುವ ಹಲವಾರು ಕಾರ್ಯಗಳನ್ನು ಅವರ ಅಣ್ಣನಾಗಿ ಕರುನಾಡ ಚಕ್ರವರ್ತಿ ಶಿವಣ್ಣ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಶಿವಣ್ಣ ಅವರ ಭಜರಂಗಿ 2 ಸಿನಿಮಾ ಬಿಡುಗಡೆ ಆದ ದಿನದಂದೇ ಅಪ್ಪು ಅವರು ನಮ್ಮನ್ನೆಲ್ಲ ಆ.ಗ.ಲಿ ಹೋಗಿದ್ದು ಅಣ್ಣನಾಗಿ ಅವರಿಗೆ ಯಾವ ಮಟ್ಟಿಗೆ ದುಃ.ಖವನ್ನು ತಂದಿರಬೇಡ ಎಂಬ ಅಂದಾಜು ಕೂಡ ಸಿಗುವುದಿಲ್ಲ.

ಇನ್ನು ಶಿವಣ್ಣ ಅಪ್ಪು ಮಾಡಿಕೊಂಡು ಹೋಗುತ್ತಿದ್ದ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಅದರಲ್ಲಿ ಅಪ್ಪು ಅವರನ್ನು ಜೀವಂತವಾಗಿರಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ ಎಂದರೆ ತಪ್ಪೇ ಅಲ್ಲ. ಇನ್ನು ಈ ಕೆಲಸಗಳನ್ನು ಹಾಗೂ ಸಾಮಾಜಿಕ ಕಾರ್ಯಗಳ ಒಟ್ಟಾರೆಯಾಗಿ ಶಿವಣ್ಣ ವರ್ಷಕ್ಕೆ ಮಾಡುತ್ತಿರುವ ಖರ್ಚು ಎಷ್ಟು ಎಂದು ಗೊತ್ತಾದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಮಿತ್ರರೇ ಕರುನಾಡ ಚಕ್ರವರ್ತಿ ಶಿವಣ್ಣ ವರ್ಷಕ್ಕೆ ಹತ್ತರಿಂದ ಹದಿನೈದು ಕೋಟಿ ರೂಪಾಯಿಗಳನ್ನು ಅಪ್ಪು ಅವರು ನಡೆಸಿಕೊಂಡು ಹೋಗುತ್ತಿದ್ದ ಕಾರ್ಯಗಳಿಗೆ ಹಾಗೂ ತಾವು ಇಷ್ಟು ವರ್ಷ ಮಾಡಿಕೊಂಡು ಬರುತ್ತಿದ್ದ ಸಾಮಾಜಿಕ ಕೆಲಸಗಳಿಗೆ ಖರ್ಚು ಮಾಡುತ್ತಾರೆ.

ಹಣವನ್ನು ಅದೆಷ್ಟು ಜನ ಸಂಪಾದನೆ ಮಾಡಿರಬಹುದು ಆದರೆ ಅದನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಒಳ್ಳೆಯ ಮನಸ್ಸಿರಬೇಕು. ಅದು ನಮ್ಮ ಶಿವಣ್ಣ ಅವರಿಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಿವಣ್ಣ ಅವರ ಈ ಮಹಾನ್ ಕಾರ್ಯಕ್ಕೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.

0

ಯಶ್ ಕ್ರೇಜ್

ಇಂಡಿಯಾದ ಗೋಲ್ಡನ್ ಗೈಸ್ ಎಂದೇ ಕರೆಸಿಕೊಂಡಿರುವ ಸನ್ನಿ ಅಲಿಯಾಸ್ ಸನ್ನಿ ನಾನ ಸಾಹೇಬ್ ಹಾಗೂ ಬಂಟಿ ಅಲಿಯಾಸ್ ಸಂಜಯ್ ಗುಜ್ಜಾರ್ ಬಗ್ಗೆ ಸೋಶಿಯಲ್ ಮೀಡಿಯಾ ಬಳಕೆದಾರರೆಲ್ಲರಿಗೂ ಗೊತ್ತಿದೆ.ತಮ್ಮ ಗೋಲ್ಡ್ ಕ್ರೇಝ್ ಇಂದಲೇ ಫೇಮಸ್ ಆಗಿರುವ ಇವರು ಸದ್ಯಕ್ಕೆ ಯಾವ ಸೆಲೆಬ್ರಿಟಿ ಗಳಿಗೂ ಕಡಿಮೆ ಇಲ್ಲ. ಇವರು ಹೋದಲ್ಲೆಲ್ಲಾ ಇವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಜನ ಕಾಯುತ್ತಿರುತ್ತಾರೆ.

ಇವರ ಕುರಿತ ಸಣ್ಣ ವಿಷಯಗಳು ಕೂಡ ದೊಡ್ಡ ಸುದ್ದಿಯಾಗಿ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತವೆ. ಅಷ್ಟು ಫೇಮಸ್ ಆಗಿರುವ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಾರಿ ಆಕ್ಟಿವ್ ಆಗಿದ್ದಾರೆ. ಸ್ವತಃ ಇವರೇ ಸೆಲೆಬ್ರಿಟಿಗಳು ಆಗಿದ್ದರೂ ಕೂಡ ಇವರಿಗೂ ಸಹ ಬೇರೆ ಸೆಲೆಬ್ರಿಟಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಹಂಚಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ ಅದೇ ರೀತಿ ಮಾಡಲು ಹೋಗಿ ಈಗ ಸುದ್ದಿಯಾಗಿದ್ದಾರೆ.

ಸನ್ನಿ ಹಾಗೂ ಬಂಟಿ ಇಬ್ಬರು ಸ್ನೇಹಿತರಾಗಿದ್ದು ಹೆಚ್ಚಾಗಿ ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಹಾಗಾಗಿ ಇವರನ್ನು ಜೋಡಿ ಎಂದು ಕರೆಯಲಾಗುತ್ತದೆ ಮತ್ತು ಇವರಿಬ್ಬರು ಹಲವಾರು ಬಿಸಿನೆಸ್ ಗಳನ್ನು ಹೊಂದಿದ್ದು ಮುಖ್ಯವಾಗಿ ಬಾಲಿವುಡ್ ಅಲ್ಲಿ ಸಿನಿಮಾಗಳಿಗಾಗಿ ಫೈನಾನ್ಸ್ ಕೊಡುತ್ತಾರೆ ಮತ್ತು ಫರ್ನಿಚರ್ ಶೋರೂಮ್ ಸೇರಿದಂತೆ ಹಲವಾರು ಬ್ಯುಸಿನೆಸ್ ಗಳನ್ನು ಹೊಂದಿದ್ದಾರೆ.

ಇವರಿಗೆ ಚಿನ್ನದ ಮೇಲಿರುವ ವ್ಯಾಮೋಹದಿಂದ ಗೋಲ್ಡನ್ ಗೈಗಳು ಎಂದು ಹೆಸರು ಪಡೆದಿದ್ದಾರೆ. ಇವರು ಹಾಕಿಕೊಳ್ಳುವ ಒಡವೆಯಿಂದಲೇ ಜನರನ್ನು ತಮ್ಮತ್ತ ಆಕರ್ಷಿಸುತ್ತಿದ್ದಾರೆ ಎಂದು ಕೂಡ ಹೇಳಬಹುದು. ಆದರೆ ಯಾರಿಗೆ ಆದರೂ ಇವರನ್ನ ನೋಡಿದ ತಕ್ಷಣ ಫೋಟೋ ತೆಗೆದು ಇಟ್ಟುಕೊಳ್ಳಬೇಕು ಎನಿಸುವಷ್ಟು ವಿಶೇಷ ವ್ಯಕ್ತಿಗಳಾಗಿದ್ದರೆ ಇವರು. ಜನ ಸಾಮಾನ್ಯರು ಈ ಚಿನ್ನದ ಹುಡುಗರ ಜೊತೆ ಫೋಟೋ ತೆಗೆದುಕೊಳ್ಳಲು ಆಸೆ ಪಟ್ಟರೆ ಇವರು ಕೆಜಿಎಫ್ ಒಡೆಯನ ಹಿಂದೆ ಫೋಟೋಗಾಗಿ ಸುತ್ತಿದ್ದಾರೆ.

ಮುಂಬೈ ಹೋಟೆಲ್ ಒಂದರಲ್ಲಿ ಯಶ್ ಅವರ ಸುತ್ತ ಜನ ಸುತ್ತುಕೊಂಡು ಫೋಟೋ ತೆಗೆಸಿಕೊಳ್ಳಲು ಆಸೆ ಪಡುತ್ತಿರುತ್ತಾರೆ. ಅವರ ಜೊತೆ ಫೋಟೋ ಗಾಗಿ ಆಸೆ ಪಟ್ಟ ಪ್ರತಿಯೊಬ್ಬರಿಗೂ ಕೂಡ ಯಶ್ ಅವರು ತಾಳ್ಮೆಯಿಂದ ಹಾಗೂ ಖುಷಿಯಿಂದ ಜೊತೆಗೆ ನಿಂತು ಫೋಟೋ ತೆಗೆದುಕೊಳ್ಳುವ ಅವಕಾಶ ನೀಡಿದ್ದಾರೆ. ಒಬ್ಬರ ಹಿಂದೆ ಒಬ್ಬರಂತೆ ಸಾಕಷ್ಟು ಮಂದಿ ಇವರ ಹಿಂದೆ ಓಡಾಡುತ್ತಿರುತ್ತಾರೆ‌.

ಆ ಗುಂಪಿನಲ್ಲಿಯೇ ಈ ಗೋಲ್ಡನ್ ಜೋಡಿ ಕೂಡ ಹೋಗಿ ಫೋಟೋ ತೆಗೆದುಕೊಳ್ಳಲು ನೋಡುತ್ತಾರೆ. ಆದರೆ ಹಲವು ಸಮಯದವರೆಗೆ ಯಶ್ ಅವರು ಅವರ ಕಡೆ ಗಮನವೇ ಕೊಟ್ಟಿರುವುದಿಲ್ಲ ಮತ್ತು ಯಶ್ ಅವರು ಮುಂದೆ ಹೋಗುತ್ತಲೇ ಇರುತ್ತಾರೆ ಆಗಲು ಸಹ ಅವರ ಹಿಂದೆ ಹಿಂದೆ ಫೋಟೋ ಗಾಗಿ ಸನ್ನಿ ಹಾಗೂ ಬಂಟಿ ಹೋಗುತ್ತಾರೆ.

ಯಶ್ ಅವರು ಹಿಂದೆ ತಿರುಗಿ ನೋಡದ ಕಾರಣ ಅವರು ಅಲ್ಲಿದ್ದಾರೆ ಎಂದು ಯಶ್ ಅವರಿಗೂ ತಿಳಿಯುವುದಿಲ್ಲ ಮತ್ತು ಇವರು ಸಹ ಹೇಗೆ ಹೋಗಿ ಸೆಲ್ಫಿ ಕೇಳುವುದು ಎನ್ನುವ ಮುಜುಗರದಿಂದ ಅವರೇ ನೋಡಲಿ ಎಂದುಕೊಂಡೆ ಕಾಯ್ದುಬಿಡುತ್ತಾರೆ ಕೊನೆಗೂ ಅವರಿಗೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಕ್ಕಿತ್ತೋ ಇಲ್ಲವೋ ಗೊತ್ತಿಲ್ಲ.

ಆದರೆ ಸಾವಿರಾರು ಕೋಟಿ ಒಡೆಯರಾದ ಇವರು ಸಾಮಾನ್ಯರಂತೆ ಸ್ಟಾರ್ ಹೀರೋಗೆ ಕಾದಿರುವುದು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿದೆ. ಯಶ್ ಅಭಿಮಾನಿಗಳು ಇದು ಕೆಜಿಎಫ್ ಗೆ ಇರುವ ತಾಕತ್ತು ಹಾಗೂ ಯಶ್ ಅಂದರೆ ಹೀಗೇನೆ ಸಾಮಾನ್ಯರು ಹಾಗೂ ಶ್ರೀಮಂತರ ನಡುವೆ ಭೇದ ಮಾಡದೆ ಎಲ್ಲರನ್ನೂ ಒಂದೇ ರೀತಿ ಕಾಣುತ್ತಾರೆ ಎಂದು ಯಶ್ ಪರ ಬ್ಯಾಟ್ ಬೀಸುತ್ತಿದ್ದಾರೆ.

ಕಾಂತರ ಸಕ್ಸಸ್ ನಂತರ ಅಭಿಷೇಕ್ ಅಂಬರೀಶ್ ಅಭಿನಯದ ಕಾಳಿ ಚಿತ್ರಕ್ಕೆ ನಟಿ ಸಪ್ತಮಿ ಗೌಡ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ.

0

ಅಭಿಷೇಕ್ ಅಂಬರೀಶ್ ಜೊತೆ ಕಾಳಿ ಸಿನಿಮಾದಲ್ಲಿ ಅಭಿನಯಿಸುತ್ತಿರುವ ನಟಿ ಸಪ್ತಮಿ ಗೌಡ

ಕಾಂತರಾ ಎನ್ನುವ ಅದ್ಭುತ ಚಲನಚಿತ್ರವು ಇಡೀ ಚಿತ್ರತಂಡದ ಅದೃಷ್ಟವನ್ನೇ ಬದಲಾಯಿಸಿದೆ. ಈ ಒಂದು ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಿಷಬ್ ಶೆಟ್ಟಿ ಬದಲಾಗಿದ್ದು ದಿವೈನ್ ಸ್ಟಾರ್ ಎನ್ನುವ ಸ್ಟಾರ್ ಗಿರಿ ಕೂಡ ಪಡೆದುಕೊಂಡಿದ್ದಾರೆ. ಈ ಸಿನಿಮಾವನ್ನು ಇವರೇ ನಿರ್ದೇಶನ ಮಾಡಿದ್ದ ಕಾರಣ ನಟನೆ ಹಾಗೂ ನಿರ್ದೇಶನ ಎರಡನ್ನು ಮೆಚ್ಚಿ ದೇಶದ ಎಲ್ಲಾ ಸಿನಿ ಪ್ರೇಕ್ಷಕರು ಶಭಾಷ್ ಹೇಳುತ್ತಿದ್ದಾರೆ.

ಸಿನಿಮಾವು ನಿರೀಕ್ಷೆಗೂ ಮೀರಿದ ಗೆಲುವನ್ನು ತಂದು ಕೊಟ್ಟಿದ್ದು ಈಗ ಅದರಲ್ಲಿ ನಟಿಸಿದ್ದ ಎಲ್ಲಾ ಕಲಾವಿದರಿಗೂ ಕೂಡ ಬಾರಿ ಡಿಮ್ಯಾಂಡ್ ಇದೆ. ಪ್ರಮುಖನಾಗಿ ನಾಯಕ ನಟ ಆಗಿರುವ ರಿಷಬ್ ಅವರಿಗೂ ಸಹ ಬಾಲಿವುಡ್ ಸಿನಿಮಾಗಳಿಂದ ಆಫರ್ ಬರುತ್ತಿದ್ದು ನಯವಾಗಿಯೇ ಅದನ್ನು ರಿಜೆಕ್ಟ್ ಮಾಡಿ ಕರ್ಮ ಭೂಮಿಯಲ್ಲಿ ತೊಡಗಿಕೊಳ್ಳುವುದಾಗಿ ರಿಷಭ್ ಹೇಳಿದ್ದಾರೆ.

ಆದರೆ ಕಾಂತರಾ ಸಕ್ಸಸ್ ಆದ ಬೆನ್ನಲ್ಲೇ ಸ್ನೇಹಿತ ರಕ್ಷಿತ್ ನಿರ್ದೇಶನದ ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರಬಂದಿರುವ ರಿಷಭ್ ಅವರ ಈ ನಿರ್ಧಾರಕ್ಕೆ ಕಾರಣ ಹೆಚ್ಚಿಸಿಕೊಂಡಿರುವ ಸಂಭಾವನೆ ಎನ್ನುವ ಗಾಳಿ ಸುದ್ದಿಗಳು ಇವೆ. ಇನ್ನು ನಾಯಕ ನಟಿ ಆಗಿರುವ ಸಪ್ತಮಿ ಗೌಡ ಅವರಿಗೂ ಸಹ ಪರಭಾಷೆಗಳಿಂದಲೂ ಆಫರ್ ಬರುತ್ತಿದ್ದು ಆಯ್ಕೆಯಲ್ಲಿ ಸಪ್ತಮಿ ಸೆಲೆಕ್ಟೀವ್ ಆಗಿದ್ದಾರೆ.

ಸಪ್ತಮಿ ಗೌಡ ಅವರಿಗೆ ಕನ್ನಡ ಚಲನಚಿತ್ರ ರಂಗದಲ್ಲಿ ಬಾರಿ ಭವಿಷ್ಯ ಇದೆ ಎನ್ನುವ ಲಕ್ಷಣಗಳು ಕಂಡು ಬರುತ್ತಿವೆ. ಆಗಷ್ಟೇ ಎಜುಕೇಶನ್ ಮುಗಿಸಿದ್ದ ಸಪ್ತಮಿ ಅವರು ನಿರ್ದೇಶಕ ಸೂರಿ ಅವರ ನಿರ್ಮಾಣದ ಪಾಪ್ಕಾರ್ನ್ ಮಂಕಿ ಟೈಗರ್ ಎನ್ನುವ ಸಿನಿಮಾದಲ್ಲಿ ಟೈಗರ್ ಸೀನ ಪತ್ನಿ ಬಜಾರಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅಚನಕ್ಕಾಗಿ ಸೆಲೆಕ್ಟ್ ಆದರೂ. ಅವಕಾಶ ಅಚಾನಕ್ ಆಗಿದ್ದರು, ತನ್ನ ಸಹಜ ನಟನೆಯಿಂದ ಪಾತ್ರಕ್ಕೆ ನ್ಯಾಯ ಧಕ್ಕಿಸಿದ ಇವರ ಬೋಲ್ಡ್ ಡೈಲಾಗ್ ಗಳು ಬಹಳ ಮಾಸ್ ಆಗಿ ಇದ್ದವು.

ಸಿನಿಮಾದಲ್ಲಿ ಮೂರು ನಾಯಕಿಯರಿದ್ದರೂ ಸಪ್ತಮಿ ಮಾತ್ರ ಸ್ಪೆಷಲ್ ಆಗಿ ಹೈಲೈಟ್ ಆದರು. ನಂತರ ಸಿಕ್ಕಿದ್ದೇ ಕಾಂತರಾ ಸಿನಿಮಾದ ಲೀಲಾ ಪಾತ್ರ. ಕಾಂತಾರ ಸಿನಿಮಾದಲ್ಲಿ ರಿಷಬ್ ಹಾಗೂ ಸಪ್ತಮಿ ಅವರ ಕೆಮಿಸ್ಟ್ರಿ ಬಹಳ ಚೆನ್ನಾಗಿ ವರ್ಕ್ ಆಗಿದ್ದು ಶಿವ ಮತ್ತು ಲೀಲ ಪಾತ್ರದಲ್ಲಿ ಬಹಳ ಸಹಜವಾಗಿ ಮತ್ತು ಸರಳವಾಗಿ ಇಬ್ಬರು ನಟಿಸಿದ್ದಾರೆ. ಈ ಲೀಲಾ ಪಾತ್ರದ ನಟನೆಯಿಂದಲೇ ಸಪ್ತಮಿ ಗೌಡ ಅವರು ಈಗ ಫೇಮಸ್ ಆಗಿದ್ದಾರೆ.

ಮುಂದಿನ ಸಿನಿಮಾದ ಅನೌನ್ಸ್ ಕೂಡ ಮಾಡಿರುವ ಸಪ್ತಮಿ ಗೌಡ ಅವರ ನೆಕ್ಸ್ಟ್ ಚಿತ್ರ ಅಭಿಷೇಕ್ ಗೌಡ ಅವರ ಜೊತೆ ಇರಲಿದ್ದು ಕಾಳಿ ಎಂದು ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದೆ. ಕೃಷ್ಣ ಅವರ ನಿರ್ದೇಶನ ಚಿತ್ರಕ್ಕಿರಲಿದ್ದು ಮುಹೂರ್ತ ಕೂಡ ಕಳೆದ ವಾರ ಶ್ರೀನಗರದ ಬಂಡಿ ಮಾಕಳಮ್ಮ ದೇವಸ್ಥಾನದಲ್ಲಿ ನೆರವೇರಿದೆ.

ಆದರೆ ಈಗ ಸಿಕ್ಕಿರುವ ಮಾಹಿತಿಗಳ ಪ್ರಕಾರ ಕಾಂತರಾ ಸಿನಿಮಾ ಆದಮೇಲೆ ಸಪ್ತಮಿ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದು ಈ ಚಿತ್ರಕ್ಕಾಗಿ ಬರೋಬರಿ 80 ಲಕ್ಷ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಈಗಷ್ಟೇ ಸಿನಿಮಾ ರಂಗದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಿರುವ ಸಪ್ತಮಿ ಗೌಡ ಅವರ ಮೂರನೇ ಸಿನಿಮಾಗೆ ಇಷ್ಟೊಂದು ಭಾರಿ ಸಂಭಾವನೆ ಪಡೆಯುತ್ತಿರುವುದರಿಂದ ಸುದ್ದಿ ಆಗುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ

ಕರುನಾಡ ಅತ್ತಿಗೆ ನಟಿ ಮೇಘಾನ ರಾಜ್ ಮಾಡಿರುವ ಈ ಕೆಲಸ ಗೊತ್ತದ್ರೆ ನಿಜಕ್ಕೂ ನಿಂತಲ್ಲೆ ಡ್ಯಾನ್ಸ್ ಮಾಡೋಕೆ ಸ್ಟಾರ್ಟ್ ಮಾಡ್ತಿರಾ.

0

ನಟಿಯಾಗಿರುವುದರ ಜೊತೆಗೆ ಇನ್ನು ಒಂದು ಹೆಜ್ಜೆ ಮುಂದೆ ನಡೆದ ಮೇಘನಾ ರಾಜ್.

ಮೇಘನಾ ರಾಜ್ ಅವರು ಬಾಲ್ಯದಿಂದಲೂ ಅಭಿನಯದಲಿ ತೊಡಗಿಕೊಂಡಿದ್ದು ರಂಗಭೂಮಿ ಕಲಾವದೆ ಆಗಿ ಮತ್ತು ಈಗ ಕನ್ನಡ ಚಲನಚಿತ್ರರಂಗದ ಫೇಮಸ್ ನಟಿ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲೂ ಅಭಿನಯಿಸಿರುವ ಇವರು ಕನ್ನಡ ಮತ್ತು ಮಲಯಾಳಂ ಚಲನಚಿತ್ರ ರಂಗದ ಬೇಡಿಕೆಯ ನಟಿ.

ಮೇಘನಾ ರಾಜ್ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ರಾಜಾಹುಲಿ, ಬಹುಪರಾಕ್, ಆಟಗಾರ ಮತ್ತು ಇರುವುದೆಲ್ಲವ ಬಿಟ್ಟು ಹಾಗೂ ಎಂಎಂಸಿಎಚ್ ಈ ಸಿನಿಮಾಗಳ ಇವರ ಪಾತ್ರಗಳು ಇವರಿಗೆ ಬಹಳ ಫೇಮಸ್ ತಂದು ಕೊಟ್ಟಿವೆ. ಗ್ಲಾಮರ್ ಮಾತ್ರ ಅಲ್ಲದೆ ಪಾತ್ರಕ್ಕೂ ಮಹತ್ವ ಇರುವ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುವವರು ಮೊದಲು ಮೇಘನಾ ರಾಜ್ ಅವರನ್ನು ಸೂಚಿಸುತ್ತಾರೆ ಅಷ್ಟರಮಟ್ಟಿಗೆ ಪಾತ್ರಕ್ಕೆ ನ್ಯಾಯ ದಕ್ಕಿಸುತ್ತಾರೆ ಮೇಘನಾ ರಾಜ್.

ಕಲಾವಿದರ ಕುಟುಂಬದಲ್ಲಿ ಬಂದ ಇವರಿಗೆ ರಕ್ತಗತವಾಗಿಯೇ ಈ ವಿದ್ಯೆ ಬಂದಿದೆ. ಕೆರಿಯರಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದಾಗಲೇ ತಮ್ಮದೇ ಕ್ಷೇತ್ರದ ಚಿರಂಜೀವಿ ಅವರ ಪ್ರೀತಿಯಲ್ಲಿ ಬಿದ್ದು 10 ವರ್ಷಗಳ ಪ್ರೀತಿ ನಂತರ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ವಿವಾಹವಾದರು. ಆದರೆ ದುರಾದೃಷ್ಟವಶಾತ್ ಮೇಘನ ಗರ್ಭಿಣಿ ಆಗಿರುವಾಗಲೇ ಪತಿ ಅಗಲಿಕೆ ನೋವನ್ನು ಅನುಭವಿಸಬೇಕಾಯಿತು.

ಈಗಲೂ ಸಹ ಮೇಘನಾ ರಾಜ್ ಆ ಶಾಕ್ ಇಂದ ಹೊರ ಬಂದಿಲ್ಲ ಎನಿಸುತ್ತದೆ. ಆದರೂ ಮಗ ರಾಯಲ್ ಸರ್ಜ ಅವರ ಆರೈಕೆ ಮಾಡುತ್ತಾ ಮತ್ತು ಮತ್ತೆ ಸಿನಿಮಾ ರಂಗದಲ್ಲಿ ತೊಡಿಸಿಕೊಳ್ಳುವತ್ತ ಮನಸ್ಸು ಮಾಡುತ್ತಾ ಸಹಜ ಜೀವನ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಮೇಘನಾರಾಜ್ ಅವರ ಕಮ್ ಬ್ಯಾಕ್ ಗಾಗಿ ಸ್ಯಾಂಡಲ್ವುಡ್ ಕಾಯುತ್ತಿದ್ದು ಈಗಾಗಲೇ ಹಲವು ಸಿನಿಮಾ ಆಫರ್ ಗಳು ಅವರನ್ನು ಅರಸಿ ಹೋಗಿದೆ.

ಆದರೆ ಸದ್ಯಕ್ಕೆ ಈಗ ಪಾತ್ರಗಳ ಆಯ್ಕೆಯಲ್ಲಿ ಚೂಸಿ ಆಗಿರುವ ಇವರು ಕಥೆ ಕೇಳಿ ನಿರ್ಧಾರ ಮಾಡುತ್ತಿದ್ದಾರೆ. ಈ ನಡುವೆ ಬಹಳ ದಿನಗಳ ಹಿಂದೆ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದ ಫೋಟೋ ಒಂದು ಶೇರ್ ಆಗಿದ್ದು, ಮೇಘನಾ ರಾಜ್ ಪನ್ನಾಗಭರಣ, ವಿಶಾಲ್ ಹಾಗೂ ವಾಸಕಿ ವೈಭವ್ ಅವರು ಒಟ್ಟಿಗಿರುವ ಫೋಟೋ ಅದಾಗಿತ್ತು. ಇದು ಅವರ ಮುಂದಿನ ಸಿನಿಮಾದ ಅಪ್ಡೇಟ್ಸ್ ಎಂದು ಸೂಚನೆ ಕೂಡಾ ಕೊಟ್ಟಿದ್ದರು.

ಆದರೆ ಹಲವು ಜನ ಇದು ಜಾಹೀರಾತುಗೆ ಸಂಬಂಧಪಟ್ಟ ಫೋಟೋ ಇರಬೇಕು ಎಂದು ಅಂದುಕೊಂಡಿದ್ದರು ಮತ್ತೆ ಈಗ ಆ ಹಳೆ ವಿಷಯ ಮತ್ತೆ ಸುದ್ದಿ ಆಗುತ್ತಿದೆ ಮೇಘನಾ ಇದೀಗ ತನ್ನದೇ ಹೋಂ ಪ್ರೊಡಕ್ಷನ್ ಅಲ್ಲಿ ಸಿನಿಮಾ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅದಕ್ಕೆ ಸಂಬಂಧಪಟ್ಟ ಫೋಟೋ ಇದಾಗಿದ್ದು ಗಾಂಧಿನಗರದ ಸುದ್ದಿಗಳ ಪ್ರಕಾರ ಪನ್ನಗಾಭರಣ ಮತ್ತು ಮೇಘನಾ ರಾಜ್ ಅವರು ಮೇಘನಾ ಅವರ ಮುಂದಿನ ಸಿನಿಮಾ ಗೆ ಹಣ ಹೂಡುತ್ತಿದ್ದಾರಂತೆ.

ಹೀಗಾಗಿ ಮೇಘನಾ ಕೂಡ ಪ್ರೊಡಕ್ಷನ್ ಹೌಸ್ ಶುರು ಮಾಡಿದ ಮೊದಲ ನಟಿ ಎನ್ನುವ ಖ್ಯಾತಿಗೆ ಒಳಗಾಗಲಿದ್ದಾರೆ. ಈ ಸಿನಿಮಾ ಗೆ ವಿಶಾಲ್ ಅವರು ನಿರ್ದೇಶನ ಮಾಡಲಿದ್ದು, ವಾಸುಕಿ ವೈಭವ್ ಅವರ ಸಂಗೀತ ಚಿತ್ರಕ್ಕಿರಲಿದೆ. ಸದ್ಯದಲ್ಲೇ ಸಿನಿಮಾ ಚಿತ್ರೀಕರಣ ಕೂಡ ಆರಂಭ ಆಗಲಿದ್ದು ಇದು ಮಹಿಳಾ ಪ್ರಧಾನ ಕಥೆ ಹೊಂದಿರುವ ಸಿನಿಮವಾಗಿರಲಿದೆಯಂತೆ. ಸದ್ಯಕ್ಕೆ ಇಷ್ಟು ಸುದ್ದಿಗಳು ಹೊರ ಬಂದಿದ್ದು ಚಿತ್ರತಂಡದ ಕಡೆಯಿಂದ ಸ್ಪಷ್ಟನೆ ಸಿಗುವುದಷ್ಟೇ ಬಾಕಿ ಇದೆ.

ಭಿಕ್ಷುಕಿ ಅವತಾರದಲ್ಲಿ ಕಾಣಿಸಿಕೊಂಡ ನಿವೇದಿತ ಗೌಡ ಫನ್ನಿ ವಿಡಿಯೋ, ಹೊಣ್ಣೆ ಹುಣ್ಣಗುವಷ್ಟು ನಗ್ತಿರ ಪಕ್ಕಾ.

0

ನಿವೇದಿತಾ ಗೌಡ ನ್ಯೂವ್ ವರ್ಸನ್

ನಿವೇದಿತ ಗೌಡ ಅವರು ಕನ್ನಡ ಕಿರುತೆರೆಯ ಗೊಂಬೆ ಆಗಿ ಫೇಮಸ್ ಆಗಿದ್ದಾರೆ ಮೈಸೂರಿನಲ್ಲಿ ಹುಟ್ಟಿ ಬೆಳೆದ ಈಕೆ ಇಲ್ಲೇ ವಿದ್ಯಾಭ್ಯಾಸ ಮುಗಿಸಿ ನೆಲೆ ಕಂಡುಕೊಂಡಿದ್ದಾರೆ. ಇವರ ಹಾವಭಾವ ವಿಶೇಷತೆಯಿಂದ ವಿಶೇಷವಾಗಿ ಗುರುತಿಸಿಕೊಂಡಿರುವವರು ನಿವೇದಿತ ಗೌಡ ಅವರ ಇಂಗ್ಲಿಷ್ ಮಿಶ್ರಿತ ಕನ್ನಡ ಮತ್ತು ಬೇಬಿ ಡಾಲ್ ಅಂತಹ ಲುಕ್ ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿದ್ದು ಕನ್ನಡಿಗರು ಈಕೆಯನ್ನು ಮನೆಮಗಳಂತೆ ಕಾಣುತ್ತಿದ್ದಾರೆ.

ಕಿರುತೆರೆಯ ಬಹು ಬೇಡಿಕೆ ಆಗಿರುವ ನಿವಿಗೆ ಬಿಗ್ ಬಾಸ್ ಸೀಸನ್ ಐದರಲ್ಲಿ ಭಾಗವಹಿಸಿದ ನಂತರ ಸಾಲು ಸಾಲು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಆಫರ್ಗಳು ಬಂದವು. ಭರ್ಜರಿ ಕಾಮಿಡಿ, ಕುಕ್ ವಿಥ್ ಕಿರಿಕ್ ರಾಜ ರಾಣಿ ಗಿಚ್ಚ ಗಿಲಿಗಿಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮನೋರಂಜನೆ ನೀಡಿವುದರ ಜೊತೆಗೆ ತಮ್ಮದೇ ಆದ ಛಾಪನ್ನು ಕೂಡ ಮೂಡಿಸಿದ್ದಾರೆ.

ಕಿರುತೆರೆ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಆಗಾಗ ಪತಿ ಜೊತೆ ರೀಲ್ ಮಾಡಿ ಅಪ್ಲೋಡ್ ಮಾಡುತ್ತಿರುತ್ತಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ಹೊಂದಿರುವವರು ಅಲ್ಲೂ ಸಹ ವಿಶೇಷ ಕಂಟೆಂಟ್ ಗಳನ್ನು ತಂದು ಕಾಣಿಸಿಕೊಳ್ಳುತ್ತಾರೆ. ತಮ್ಮ ಕೆರಿಯರ್ ಹಾಗೂ ವೈಯಕ್ತಿಕ ಜೀವನ ಕುರಿತು ಫೋಟೋಗಳನ್ನು ಹಂಚಿಕೊಂಡು ವಿಷಯಗಳನ್ನು ಹಂಚಿಕೊಳ್ಳುವ ಇವರ ಫೋಟೋಶೂಟ್ ಗಳಲ್ಲಿ ಗ್ಲಾಮರ್ ಲುಕ್ ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ.

ಇದೇ ಕಾರಣದಿಂದ ನಿವೇದಿತ ಗೌಡ ಅವರು ಒಳ್ಳೆಯ ಸುದ್ದಿಗಳ ಜೊತೆ ಟ್ರೋಲ್ ಆಗಿ ಕೂಡ ಫೇಮಸ್ ಆಗಿದ್ದಾರೆ. ಇತ್ತೀಚೆಗಷ್ಟೇ ಅವರು ತುಂಡುಡುಗೆ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು ಆದರೆ ಆ ಫೋಟೋಗಳನ್ನು ನೋಡಿದ ಕನ್ನಡಿಗರು ಅವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡು ಮದುವೆಯಾದ ಬಳಿಕ ಇತಿಮಿತಿಯಲ್ಲಿ ಇರುವಂತೆ ಸೂಚಿಸಿದ್ದರು.

ಎಷ್ಟೆ ಟ್ರೋಲ್ ಆದರೂ ಕೂಡ ಅವಕಾಶಗಳಲ್ಲಿ ನಿವೇದಿತ ಗೌಡ ಅವರು ಅದೃಷ್ಟವಂತರು ಎನ್ನಬಹುದು ಈಗಷ್ಟೇ ಮಿಸಸ್ ಇಂಡಿಯಾ 2022 ಇಂಕ್ನಾ ಪೀಪಲ್ ಚಾಯ್ಸ್ ಅವಾರ್ಡ್ ಅನ್ನು ಸಹ ಮೂಡಿಗೇರಿಸಿಕೊಂಡಿರುವ ನಿವೇದಿತ ಗೌಡ ಅವರು ಸಿನಿಮಾಗಳಲ್ಲಿ ನಾಯಕಿ ಆಗುವ ಆಫರ್ ಗಳನ್ನು ಕೂಡ ಪಡೆಯುತ್ತಿದ್ದಾರಂತೆ. ಈಗಾಗಲೇ ಅದರ ತಯಾರಿಯಲ್ಲಿ ತೊಡಗಿಕೊಂಡಿರುವ ನಿವೇದಿತ ಗೌಡ ಅವರು ಸದ್ದಿಲ್ಲದೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದ್ದಾರೆ.

ಮತ್ತು ಪರಭಾಷೆ ಸಿನಿಮಾಗಳಲ್ಲೂ ಕೂಡ ನಾಯಕಿ ಆಗುತ್ತಿದ್ದಾರೆ ಎನ್ನುವ ಸುದ್ದಿಗಳು ಇವೆ. ಪತಿ ಚಂದನ್ ಶೆಟ್ಟಿ ಕೂಡ ಕನ್ನಡದ ಫೇಮಸ್ ರಾಪರ್ ಆಗಿದ್ದು ಇಬ್ಬರು ಉನ್ನತ ಸ್ಥಿತಿಯಲ್ಲಿದ್ದಾರೆ ಆದರೂ ಈಗ ನಿವೇದಿತ ಗೌಡ ಅವರು ಭಿಕ್ಷುಕಿಯಂತೆ ಕಾಣಿಸಿಕೊಂಡಿರುವ ಫೋಟೋ ಒಂದು ವೈರಲ್ ಆಗಿ ಎಲ್ಲರಿಗೂ ಶಾಕ್ ಆಗಿದೆ.

ನಿವೇದಿತ ಗೌಡ ಅವರು ಈ ರೀತಿ ಕಾಣಿಸಿಕೊಳ್ಳಲು ಕಾರಣ ಕೂಡ ಇದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚ ಗಿಲಿ ಗಿಲಿ ಎನ್ನುವ ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ಕಾಮಿಡಿ ಮಾಡುವ ಸಲುವಾಗಿ ಆ ಸಂದರ್ಭದಲ್ಲಿ ಧರಿಸಿದ ಕಾಸ್ಟ್ಯೂಮ್ ಫೋಟೋ ಇದಾಗಿದೆ. ಈ ಕಾರ್ಯಕ್ರಮದಲ್ಲಿ ನಿವೇದಿತ ಗೌಡ ಅವರು ಬಹಳ ಪ್ರಬುದ್ಧತೆಯಿಂದ ಅಭಿನಯ ಮಾಡುತ್ತಿದ್ದು.

ಇವರಿಗೆ ಕಾಮಿಡಿ ಸೆನ್ಸ್ ಕೂಡ ಇದೆ ಎಂದು ಎಷ್ಟೋ ಜನ ಗುರುತಿಸಿರಲಿಲ್ಲ ಅಷ್ಟರಮಟ್ಟಿಗೆ ಇವರು ಎಲ್ಲರನ್ನೂ ನಕ್ಕು ನಗಿಸುತ್ತಿದ್ದಾರೆ. ಕನ್ನಡಿಗರು ನೀಡುತ್ತಿರುವ ಕೆಲವು ಸಲಹೆಗಳನ್ನು ಸಂಸ್ಕಾರದ ವಿಚಾರವಾಗಿ ನಿವೇದಿತ ಗೌಡ ಅವರು ತಿದ್ದುಕೊಂಡು ಕೆರಿಯರಲ್ಲಿ ಇನ್ನಷ್ಟು ಉನ್ನತ ಸ್ಥಾನಕ್ಕೆ ಏರಲಿ ಎನ್ನುವುದೇ ಕನ್ನಡಿಗರ ಆಶಯ.

ಕನ್ನಡದಲ್ಲಿ ಇದುವರೆಗೂ ಯಾರು ನಿರ್ಮಿಸದ ಹೊಸ ಸಿನಿಮಾ ನಿರ್ಮಾಣ ಮಾಡಿ ನೂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರ ನಟ ಕ್ರೇಜಿಸ್ಟಾರ್ ರವಿಚಂದ್ರನ್

0

ಕ್ರೇಜಿ ಸ್ಟಾರ್ ರವಿಚಂದ್ರನ್

 

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಂದನವನಕ್ಕೆ ಹೊಸರೂಪದ ಚಲನಚಿತ್ರಗಳನ್ನು ನೀಡಿದವರು. ಅಲ್ಲಿವರೆಗೆ ಇದ್ದ ಒಂದು ಪದ್ಧತಿಯನ್ನು ತಿದ್ದಿ ನೂತನ ಯುಗದ ಸಿನಿಮಾಗಳಿಗೆ ನಾಂದಿ ಬರೆದವರು. ಈಗಲೂ 60 ದಾಟಿದ ವಯಸ್ಸಾಗಿದ್ದರು ಸಹ ನಟನೆ ಉತ್ಸಾಹ ಮತ್ತು ಸಿನಿಮಾ ಬಗೆಗಿನ ಕ್ರೇಝ್ ಇನ್ನೂ ಕಡಿಮೆ ಆಗಿಲ್ಲ. ತನ್ನ ಜೀವನವನ್ನೇ ಸಿನಿಮಾಗಾಗಿ ಮೀಸಲಿಟ್ಟ ರವಿಚಂದ್ರನ್ ಅವರು ಈವರೆಗೆ ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ, ನಿರ್ಮಾಣ ಮಾಡಿದ್ದಾರೆ ಹಾಗೂ ನಟನೆ ಕೂಡ ಮಾಡಿದ್ದಾರೆ.

ಈಗಲೂ ಕೂಡ ರವಿಚಂದ್ರನ್ ಅವರಿಗೆ ಸಿನಿಮಾರಂಗದಲ್ಲಿ ಭಾರಿ ಬೇಡಿಕೆ ಇದೆ. ಪೋಷಕ ನಟನಾಗಿ ಹೀರೋ ಆಗಿ ಇನ್ನು ಸಕ್ರಿಯರಾಗಿರುವ ಇವರಿಗಾಗಿ ಹೊಸ ಬಗೆಯ ಒಂದು ಚಿತ್ರಕಥೆ ತಯಾರಾಗಿದ್ದು ಇದು ಈ ಹಿಂದೆ ಕನ್ನಡದಲ್ಲಿ ಬರದೇ ಇರುವ ಹೊಸ ಮಾದರಿಯ ಸಿನಿಮಾ ಆಗಲಿದೆಯಂತೆ.

ಇಂತಹದೊಂದು ಪ್ರಯೋಗಕ್ಕೆ ಒಗ್ಗಿಕೊಂಡು ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರಂತೆ ರವಿಚಂದ್ರನ್. ಇದಕ್ಕೆ ಕಾರಣ ಸಿನಿಮಾದ ಕಥೆ. ಅಮೆರಿಕಾದ ಸೈನ್ಯದಲ್ಲಿ ಹಲ ದಿನಗಳವರೆಗೆ ಜರ್ನಲಿಸ್ಟ್ ಆಗಿ ಕ ಮ್ಯಾಕ್ಸಿನ್ ಒಂದಕ್ಕೆ ಕೆಲಸ ಮಾಡಿರುವ ಅನುಭವ ಹೊಂದಿರುವ ತಮಿಳುನಾಡಿನ ಮೂಲದ ಅನೀಶ್ ಎನ್ನುವ ಯುವ ನಿರ್ದೇಶಕರೊಬ್ಬರು ಇಂಥದೊಂದು ಕಥೆಯನ್ನು ರೆಡಿ ಮಾಡಿದ್ದಾರಂತೆ.

ಮಿಡಲ್ ಈಸ್ಟ್ ದೇಶಗಳು ಸೇರಿದಂತೆ ಪ್ರಪಂಚದ ಹಲವು ದೇಶಗಳನ್ನು ಸುತ್ತಿ ಅನುಭವ ಹೊಂದಿರುವ ಇವರು ಸದ್ಯಕ್ಕೆ ಈಗ ತಮಿಳುನಾಡಿಗೆ ಬಂದು ನೆಲೆಸಿದ್ದಾರೆ ಅಲ್ಲಿ ಸಿನಿಮಾ ಲೋಕದ ಬೆನ್ನೆತ್ತಿರುವ ಇವರು ಈಗಾಗಲೇ ಹಲವು ಸಿನಿಮಾಗಳಿಗೆ ಸ್ಕ್ರಿಪ್ ವಿಭಾಗದಲ್ಲಿ ಮತ್ತು ನಿರ್ದೇಶಕ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ ಮತ್ತು 60 ಜಾಹೀರಾತುಗಳನ್ನು ನಿರ್ದೇಶನ ಮಾಡಿರುವ ಇವರಿಗೆ ಸ್ವತಂತ್ರವಾಗಿ ಮೊದಲ ಆಕ್ಷನ್ ಕಟ್ ಹೇಳುವ ಭಾಗ್ಯ ಈ ಸಿನಿಮಾದಿಂದ ದೊರೆತಿದೆ.

ರಾಜಕುಮಾರ್ ಅವರನ್ನು ಸಂಪರ್ಕಿಸಿ ಕಥೆ ಹೇಳಿರುವ ಇವರು ಸಿನಿಮಾ ಕಥೆ ಬರೆಯುವಾಗಲೇ ರವಿಚಂದ್ರನ್ ಅವರನ್ನು ಊಹಿಸಿಕೊಂಡಿದ್ದರಂತೆ. ರವಿಚಂದ್ರನ್ ಅವರಿಗೂ ಸಹ ಸಿನಿಮಾದ ಸ್ಟೋರಿ ಬಹಳ ಇಷ್ಟವಾಗಿದ್ದು ಕೇಳಿದ ತಕ್ಷಣ ನಟಿಸುತ್ತೇನೆ ಎಂದು ಒಪ್ಪಿಕೊಂಡಿದ್ದಾರಂತೆ. ಇದೊಂದು ಗಂಡ ಹೆಂಡತಿ ನಡುವಿನ ಸಂಬಂಧದ ಸ್ಟೋರಿ ಆಗಿದ್ದು ಸಿನಿಮಾದಲ್ಲಿ ಕಾಡು ಕೂಡ ಒಂದು ಭಾಗ ಆಗಿರದೆ ಎನ್ನುವುದು ವಿಶೇಷ.

ಕಾಡಿನ ಮಧ್ಯೆ ಶೂಟಿಂಗ್ ನಡೆಯಲಿದ್ದು ಈಗಾಗಲೇ ಜಮಾಲಿ ಗುಡ್ಡ ಹಾಗೂ ದಾಂಡೇಲಿ ಕಡೆ ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆಯಂತೆ ಮತ್ತು ಕೆಲ ದಿನಗಳ ಶೂಟಿಂಗ್ ಬ್ಯಾಂಕಾಕ್ ಅಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆಯಂತೆ. ಸಿನಿಮಾದಲ್ಲಿ ರವಿಚಂದ್ರನ್ ಅವರ ಪಾತ್ರ ಬಹಳ ರಾಯಲ್ ಆಗಿ ಇರಲಿದ್ದು ನಾಯಕನ ಪಾತ್ರದಷ್ಟೇ ನಾಯಕಿ ಪಾತ್ರಕ್ಕೂ ಮಹತ್ವ ಇರಲಿದೆ ಮತ್ತು ಚಿತ್ರದ ನಾಯಕಿ ಪಾತ್ರಕ್ಕೆ ಉತ್ತರ ಭಾರತದಿಂದ ನಟಿ ಕರೆತರಲಿದ್ದಾರೆ ಎನ್ನುವ ಮಾಹಿತಿಗಳು ಕೂಡ ಹರಿದಾಡುತ್ತಿವೆ.

ಈ ಸಿನಿಮಾಗೆ ಟೈಟಲ್ ಫಿಕ್ಸ್ ಆಗುವುದು ಬಾಕಿ ಇದ್ದು ಡಿಸೆಂಬರ್ 15 ರಿಂದ ಶೂಟಿಂಗ್ ಶುರು ಮಾಡಲು ಚಿತ್ರತಂಡ ಸಜ್ಜಾಗಿದೆಯಂತೆ. ರವಿ ಚಂದ್ರನ್ ಅವರ ನಟನೆ ಹಾಗೂ ರಾಜಕುಮಾರ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರ ಇದಾಗಿದ್ದು ಈ ಹಿಂದೆ ಕನ್ನಡಿಗ ಮತ್ತು ಕ್ರೇಜಿಸ್ಟಾರ್ ಎನ್ನುವ ಸಿನಿಮಾಗಳು ಇದೇ ಕಾಂಬಿನೇಷನ್ ನಲ್ಲಿ ಮೂಡಿ ಬಂದಿವೆ.

ಆ ಎರಡು ಸಿನಿಮಾಗಳು ಕೂಡ ಕನ್ನಡಿಗರ ಮನ ಗೆದ್ದಿರುವುದರಿಂದ ಈ ಹೊಸ ಹೆಸರಿಡದ ಚಿತ್ರ ಕೂಡ ಈಗಾಗಲೇ ಸಕ್ಕತ್ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರುವುದರಿಂದ ಈ ಸಿನಿಮಾ ಕೂಡ ಸದ್ದು ಮಾಡಲಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಆಫರ್ ಗಳು ಇಲ್ಲದೆ ನಟನೆಗೆ ಗುಡ್ ಬೈ ಹೇಳಿ ಗಂಡ ಹಂಡ್ತಿ ಇಬ್ರು ಈಗ ಅಡುಗೆ ಕೆಲಸಕ್ಕೆ ಕೈ ಹಾಕಿದ್ದಾರೆ. ಎಲ್ಲಿದೆ ಗೊತ್ತಾ ಇವರ ನೂತನ ಹೋಟೆಲ್.

0

ಚಂದನ್ ಕುಮಾರ್ ಕವಿತ ಗೌಡ

ಕನ್ನಡ ಕಿರುತೆರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಕ್ರಿಯರಾಗಿರುವ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಅವರಿಬ್ಬರಿಗೂ ಅಪಾರ ಪ್ರಮಾಣದ ಅಭಿಮಾನಿಗಳನ್ನು ಇದ್ದಾರೆ. ಇಬ್ಬರು ಸಹ ನೋಡಲು ಸ್ಪುರಧ್ರೂಪಿಗಳು, ನಟನೆ ವಿಷಯದಲ್ಲಿ ಇಬ್ಬರು ಸಹ ಅಷ್ಟೇ ಅದ್ಭುತ ಕಲೆಗಾರರು. ರಾಧಾ ಕಲ್ಯಾಣ ಎನ್ನುವ ಧಾರವಾಹಿ ಮೂಲಕ ಚಂದನ್ ಗೌಡ ಅವರು ಕಿರುತೆರೆಲೋಕವನ್ನು ಪ್ರವೇಶಿಸಿದರು.

ನಂತರ ಲಕ್ಷ್ಮೀ ಬಾರಮ್ಮ ಎನ್ನುವ ಮೇಘ ಧಾರವಾಹಿ ಇವರಿಗೆ ದೊಡ್ಡ ಪ್ರಮಾಣದ ಹಿಟ್ ಕೊಟ್ಟಿತ್ತು. ಈ ಸಕ್ಸಸ್ಸಿನಿಂದ ಬೆಳ್ಳಿತೆರೆ ಮೇಲೆ ಹೀರೋ ಆಗಿ ಮಿಂಚಲು ಶುರು ಮಾಡಿದ ಇವರು ಬೆಂಗಳೂರು 56, ಲವ್ ಯು ಅಲಿಯ ಮತ್ತು ಪ್ರೇಮ ಬರಹ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಿನ್ನು ಎನ್ನುವ ಪಾತ್ರಧಾರಿಯಾದ ಕವಿತ ಗೌಡ ಅವರು ಸಹ ಚಂದನ್ ಅವರ ಜೊತೆ ಜೊತೆಯೇ ಆಕ್ಟಿಂಗ್ ಕೆರಿಯರ್ ಶುರು ಮಾಡಿದವರು.

ಭರತನಾಟ್ಯ ಕಲಾವಿದೆ ಆಗಿದ್ದ ಇವರಿಗೆ ಸಲೀಸಾಗಿ ಕಿರುತೆರೆಯಲಿ ಆಗುವ ಅವಕಾಶ ಬಂತು, ತನ್ನ ಮೊದಲ ಧಾರವಾಹಿಯಲ್ಲೇ ಹೆಸರು ಮಾಡಿದ ಇವರು ನಂತರ ಪರಭಾಷೆ ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಶ್ರೀನಿವಾಸ ಕಲ್ಯಾಣ, ಗೋವಿಂದ ಗೋವಿಂದ, ಬೀರಬಲ್, ದ್ವಿಮುಖ ಮುಂತಾದ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೊನೆ ಎಪಿಸೋಡ್ ವರೆಗೂ ಉಳಿದುಕೊಂಡಿದ್ದ ಸ್ಟ್ರಾಂಗೆಸ್ಟ್ ವುಮೆನ್ ಆದ ಕವಿತ ಗೌಡ ಅವರು ಬಿಗ್ ಬಾಸ್ ಇಂದ ಬಂದಮೇಲೆ ಚಂದನ್ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಇವರಿಬ್ಬರದು ಪ್ರೇಮ ವಿವಾಹವಾಗಿದ್ದು ಮದುವೆ ಆದ ಮೇಲೆ ಸಿನಿಮಾ ಧಾರವಾಹಿ ಜೊತೆ ಬಿಸಿನೆಸ್ ಕಡೆ ಕೂಡ ಗಮನ ಹರಿಸಿದ್ದಾರೆ.

ಚಂದನ್ ಕುಮಾರ್ ಅವರು ಸಹ ಬಿಗ್ ಬಾಸ್ ಸೀಸನ್ ಮೂರರಲ್ಲಿಯೇ ಭಾಗವಹಿಸಿ ರನ್ನರ್ ಆಗಿ ಹೊರಬಂದಿದ್ದರು. ಅಲ್ಲಿಂದ ಬಂದ ಮೇಲೆ ಸರ್ವ ಮಂಗಳ ಮಾಂಗಲ್ಯೇ ಮತ್ತು ತೆಲುಗಿನ ಎರಡು ಮೂರು ಧಾರವಾಹಿಗಳಲ್ಲಿ ನಾಯಕನಟನಾಗಿ ಅಭಿನಯಿಸಿದ ಇವರು ಸದ್ಯಕ್ಕೆ ಸುವರ್ಣ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸಾಗಿದೆ ಧಾರವಾಹಿಯಲ್ಲಿ ಮುಖ್ರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಜೊತೆಗೆ ನಾಗಶೇಖರ್ ಅವರ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅವರ ನಿರ್ಮಾಣದ ಶ್ರೀ ಕೃಷ್ಣ ಜಿ ಮೇಲ್ ಡಾಟ್ ಕಾಮ್ ಸಿನಿಮಾದಲ್ಲಿ ಪ್ರಮುಖ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಬಿಸಿನೆಸ್ ಕಡೆ ಕೂಡ ಮುಖ ಮಾಡಿದ ಈ ಜೋಡಿ ಒಟ್ಟಿಗೆ ಬಿರಿಯಾನಿ ಪ್ಯಾಲೆಸ್ ಎನ್ನುವ ರೆಸ್ಟೋರೆಂಟ್ ಅನ್ನು ಬೆಂಗಳೂರಿನ ಸಹಕಾರ ನಗರದಲ್ಲಿ ಓಪನ್ ಮಾಡಿದ್ದರು.

ಹ್ಯಾಟ್ರಿಕ್ ಹೀರೋ ಶಿವಣ್ಣ ಅವರೇ ಸಮಾರಂಭದಲ್ಲಿ ಭಾಗಿಯಾಗಿ ಉದ್ಘಾಟನೆ ಮಾಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ಇದೇ ಹೋಟೆಲ್ ಅಲ್ಲಿ ಕಳ್ಳತನವಾಗಿದೆ ಎನ್ನುವ ಸುದ್ದಿ ಪ್ರಸಾರವಾಗಿತ್ತು. ಅದೇ ಸಮಯದಲ್ಲಿ ಚಂದನ್ ಅವರು ಮಾಡಿಕೊಂಡ ಒಂದು ಎಡವಟ್ಟಿನಿಂದ ತೆಲುಗು ಧಾರಾವಾಹಿಗಳಿಂದ ಬ್ಯಾನ್ ಆದರು. ಈ ರೀತಿ ಸಂಕಷ್ಟದ ಸಮಯ ಮತ್ತು ಬೇಸರದ ಸ್ಥಿತಿಯಲ್ಲಿದ್ದ ಇವರ ಮನಸ್ಸಿನಲ್ಲಿ ಈಗ ಭರವಸೆ ಮೂಡಿದೆ.

ಇಬ್ಬರು ಮತ್ತೆ ಬಿಸಿನೆಸ್ ಅಲ್ಲಿ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದ್ದು ಮೈಸೂರು ರೋಡ್ ಅಲ್ಲಿ ಸಿಕೆ ಮಂಡಿಪೇಟೆ ಪಲಾವ್ ಎನ್ನುವ ಹೆಸರಿನಲ್ಲಿ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ. ನಿನ್ನೆ ಅಷ್ಟೇ ರೆಸ್ಟೋರೆಂಟ್ ಓಪನ್ ಆಗಿದ್ದು ಕಲಾವಿದರು ಹಾಗೂ ಇವರ ಸ್ನೇಹಿತರ ಕುಟುಂಬಸ್ಥರೆಲ್ಲರೂ ಇಬ್ಬರಿಗೂ ಶುಭವಾಗಲಿ ಎಂದು ಹರಸಿದ್ದಾರೆ ಮತ್ತು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರೂ ಕೂಡ ತಮ್ಮ ರೆಸ್ಟೋರೆಂಟ್ ಓಪನ್ ಸಮಾರಂಭದ ಫೋಟೋಗಳನ್ನು ಅಪ್ಲೋಡ್ ಮಾಡಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ ಮನಸ್ತಾಪ, ಗುಟ್ಟು ಬಿಟ್ಟು ಕೊಡದ ಭಾರತಿ ವಿಷ್ಣುವರ್ಧನ್.

0

ವಿಷ್ಣು ವರ್ಧನ್

ಕರುನಾಡ ದಾದಾ ಸಾಹಸಸಿಂಹ ವಿಷ್ಣುವರ್ಧನ್ ಅವರು ಒಬ್ಬ ಸಂತನಂತೆ ತಮ್ಮ ಜೀವನ ಸಾಗಿಸಿದ್ದಾರೆ. ಭಾರತಿ ಅವರನ್ನು ವಿವಾಹವಾಗಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಚೆನ್ನಾಗಿ ಬೆಳೆಸಿದ ಇದರ ಬದುಕು ಅನೇಕ ಪಾಲಿಗೆ ಆದರ್ಶಮಯ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸದಾ ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಹಾಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ.

ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಮತ್ತು ಅವರ ಸಮಾಧಿಗೆ ಸಂಬಂಧಪಟ್ಟ ವಿವಾದಗಳು ಇಂತಹ ಸಮಯದಲ್ಲೆಲ್ಲ ಕುಟುಂಬಸ್ಥರು ಮೀಡಿಯಾ ಮುಂದೆ ಕಾಣಿಸಿಕೊಳ್ಳುತ್ತಾರೆ. ಆದರೆ ಭಾರತಿ ವಿಷ್ಣುವರ್ಧನ್, ಹಿರಿಯ ಮಗಳು ಕೀರ್ತಿ ಹಾಗೂ ಅನಿರುದ್ಧ್ ಅವರೇ ಹೆಚ್ಚಾಗಿ ಮಾತನಾಡುತ್ತಾರೆ ಹೊರತು ವಿಷ್ಣು ವರ್ಧನ್ ಅವರ ಇನ್ನೊಬ್ಬ ಪುತ್ರಿ ಚಂದನ ಬಗ್ಗೆ ಎಲ್ಲೂ ಕೂಡ ಹೆಚ್ಚಿನ ಮಾಹಿತಿ ಇಲ್ಲ.

ಹೀಗಾಗಿ ಅವರು ವಿದೇಶದಲ್ಲಿ ಇದ್ದಾರಾ ಎನ್ನುವ ಅನುಮಾನ ಅನೇಕರಲ್ಲಿ ಇದೆ. ಆದರೆ ಇದು ಸುಳ್ಳು, ವಿಷ್ಣುವರ್ಧನ್ ಅವರ ಎರಡನೇ ಮಗಳು ಚಂದನ ಕೂಡ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕೀರ್ತಿ ಅವರು ಡಿಗ್ರಿ ಆದ ಬಳಿಕ ಫ್ಯಾಶನ್ ಡಿಸೈನಿಂಗ್ ಅಂತ ಆಕರ್ಷಣೆ ಇದೆ ಎಂದು ಹೇಳಿ ಆ ಕ್ಷೇತ್ರ ಆಯ್ದುಕೊಂಡು ಮುಂದುವರೆದರು. ಕೋಟಿಗೊಬ್ಬ ಯಜಮಾನ ಮುಂತಾದ ವಿಷ್ಣುವರ್ಧನ್ ಅವರ ಅನೇಕ ಸಿನಿಮಾಗಳಿಗೆ ಕೀರ್ತಿ ಅವರು ಕಾಸ್ಟ್ಚೂಮ್ ಡಿಸೈನ್ ಮಾಡಿದ್ದಾರೆ.

ನಂತರ ತಂದೆ ಮೆಚ್ಚಿದ ಕಲಾವಿದ ಅನಿರುದ್ಧ್ ಅವರನ್ನೇ ವಿವಾಹ ಆಗಿ ಇಬ್ಬರು ಮಕ್ಕಳ ತಾಯಿ ಆಗಿದ್ದಾರೆ. ಇನ್ನೇನು ಕೀರ್ತಿ ಹಾಗೂ ಅನಿರುದ್ಧ್ ಅವರ ಹಿರಿಯ ಪುತ್ರ ಜೇಷ್ಠ ವರ್ಧನ್ ಕೂಡ ಬೆಳೆದಿದ್ದು ಸದ್ಯದಲ್ಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಲಾಂಚ್ ಕೂಡ ಆಗಲಿದ್ದಾರೆ. ಕೀರ್ತಿ ಅವರು ವಿಷ್ಣುವರ್ಧನ್, ಭಾರತಿ ಮತ್ತು ಅನಿರುದ್ಧ ಅವರಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಆಗಾಗ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಸಂದರ್ಶನ ಕೊಡುತ್ತಾರೆ.

ಎರಡನೇ ಪುತ್ರಿ ಚಂದನ ಮಾತ್ರ ಯಾವುದೇ ಮೀಡಿಯಾಗಳಿಗೆ ಇದುವರೆಗೆ ಸಂದರ್ಶನ ಕೊಟ್ಟಿಲ್ಲ. ಇವರಿಗೆ ಏನು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಅನೇಕರಿಗೆ ಗೊತ್ತೇ ಇಲ್ಲ. ವಿಷ್ಣುವರ್ಧನ್ ಅವರು ಚಂದನ ಅವರನ್ನು ಒಬ್ಬ ಉದ್ಯಮಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಇಬ್ಬರೂ ಕೂಡ ಈಗ ತಮ್ಮ ಬಿಸಿನೆಸ್ ಕಡೆ ತೊಡಗಿಕೊಂಡಿದ್ದು ಬದುಕು ಕಟ್ಟಿಕೊಂಡಿದ್ದಾರೆ.

ವಿಷ್ಣುವರ್ಧನ್ ಅವರ ಕುಟುಂಬದ ಎಲ್ಲಾ ಕಾರ್ಯಕ್ರಮಗಳಿಗೂ ಕೂಡ ಚಂದನ ಅವರು ಬರುತ್ತಾರೆ ಆದರೆ ಮೀಡಿಯಾದವರಿಗೆ ಮಾತ್ರ ಕಾಣಿಸುವುದಿಲ್ಲ ಯಾಕೆಂದರೆ ಇನ್ನೂ ಸಹ ಅವರಿಗೆ ಕ್ಯಾಮರ ಎಂದರೆ ಮುಜುಗರವಂತೆ. ಎಷ್ಟೋ ಬಾರಿ ಇವರಿಗಾಗಿ ಸಂದರ್ಶನಗಳನ್ನು ಕರೆದಿದ್ದರು ಚಂದನ ಮಾತ್ರ ಎಲ್ಲೂ ಈವರಿಗೆ ಮಾತನಾಡಿಲ್ಲ.

ಮೊನ್ನೆ ಅಷ್ಟೇ ವಿಷ್ಣುವರ್ಧನ್ ಅವರ ಹಳೆಯ ನಿವಾಸವು ಹೊಸ ವಿನ್ಯಾಸಗೊಂಡು ವಲ್ಮೀಕ ಎನ್ನುವ ಹೆಸರಿನಲ್ಲಿ ಗೃಹಪ್ರವೇಶ ಕೂಡ ನಡೆದಿದೆ. ಈ ಕಾರ್ಯಕ್ರಮದಲ್ಲೂ ಸಹ ಚಂದನ ಅವರು ಭಾಗಿಯಾಗಿದ್ದರು ಆದರೆ ಮಾಧ್ಯಮದವರನ್ನು ಕಂಡ ತಕ್ಷಣ ಮನೆ ಒಳಗಡೆ ಹೋಗಿಬಿಟ್ಟರಂತೆ.

ವಿಷ್ಣುವರ್ಧನ್ ಅವರ ಆರೈಕೆಯಲ್ಲಿ ಬೆಳೆದಿರುವ ಚಂದನ ಅವರ ಸಹ ಬಹಳ ಸರಳ ಜೀವನ ಇಷ್ಟಪಡುತ್ತಾರಂತೆ. ಸೂಪರ್ ಸ್ಟಾರ್ ಪುತ್ರಿ ಆಗಿದ್ದರೂ ಕೂಡ ಎಲ್ಲೂ ಆ ಹೆಸರು ಬಳಸದೆ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರಂತೆ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆಗಾಗ ವಿಷ್ಣುವರ್ಧನ್ ಅವರ ಕುಟುಂಬದ ಹಳೆ ಫೋಟೋಗಳು ವೈರಲ್ ಆದಾಗ ಚಂದನ ಅವರನ್ನು ಫೋಟೋಗಳಲ್ಲಿ ಕಾಣಬಹುದಾಗಿದೆ.

ದರ್ಶನ್ ಬಗ್ಗೆ ಯಾರಿಗೂ ತಿಳಿಯದ ವಿಚಾರ ರಿವೀಲ್ ಮಾಡಿದ ನಟ ದಿಂಗತ್, ಡಿ-ಬಾಸ್ ಅಸಲಿ ಮುಖದ ಬಗ್ಗೆ ತಿಳಿದ್ರೆ ನಿಜಕ್ಕೂ ದಂಗಾಗುತ್ತಿರ.

0

 

ಪಾಕೆಟ್ ಗೆ ಕೈ ಹಾಕಿದ್ರೆ ಒದೆ ತಿಂತಿಯಾ ಎಂದು ದಿಗಂತ್ ಗೆ ಡಿ ಬಾಸ್ ಎಚ್ಚರಿಕೆ ಕೊಟ್ಟಿದ್ದು ಯಾಕೆ ಗೊತ್ತಾ?

ಸ್ಯಾಂಡಲ್ವುಡ್ ದೂದ್ ಪೇಡ ದಿಗಂತ್ ಅನಂತನಾಗ್ ಹಾಗೂ ಐಂದ್ರಿತಾ ರೇ ಕಾಂಬಿನೇಷನ್ನ ತಿಮ್ಮಯ್ಯ ವರ್ಸಸ್ ತಿಮ್ಮಯ್ಯ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು ಚಿತ್ರತಂಡದ ಎಲ್ಲರೂ ಕೂಡ ಪ್ರಚಾರ ಕಾರ್ಯಗಳಲ್ಲಿ ಬಿಸಿ ಆಗಿದ್ದಾರೆ. ಈ ರೀತಿ ತಿಮ್ಮಯ್ಯ ವರ್ಸಸ್ ತಿಮ್ಮಯ್ಯ ಸಿನಿಮಾದ ಪ್ರಚಾರದ ಸಮಯದಲ್ಲಿ ದಿಗಂತ್ ಅವರು ದರ್ಶನ್ ಅವರನ್ನು ನೆನೆಸಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮಾತಿನ ಮಧ್ಯೆ ದರ್ಶನ್ ಅವರನ್ನು ನೆನೆದ ದಿಗಂತ್ ಅವರು ಹಲವಾರು ವಿಷಯಗಳನ್ನು ದರ್ಶನ್ ಅವರ ಬಗ್ಗೆ ಹಂಚಿಕೊಂಡಿದ್ದಾರೆ. ಮೊದಲಿಗೆ ಮಂಡ್ಯ ಸಿನಿಮಾದಲ್ಲಿ ದರ್ಶನ ಅವರ ಜೊತೆ ದಿಗಂತ್ ಅವರು ಕಾಣಿಸಿಕೊಂಡಿದ್ದರು, ದಿಗಂತ್ ಅವರು ಆಗಸ್ಟೇ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದ ದಿನವದು.

ಆ ಸಮಯದಲ್ಲಿ ಫೈಟಿಂಗ್ ಸೀನ್ ಒಂದರಲ್ಲಿ ತುಂಬಾ ಸುಸ್ತಾಗಿದ್ದ ದಿಗಂತ್ ಅವರನ್ನು ಕಾಪಾಡಲು ದರ್ಶನ್ ಅವರು ಬರುತ್ತಾರೆ ಹಾಗೂ ದರ್ಶನ್ ದಿಗಂತ್ ಅಣ್ಣನಾಗಿ ಸಿನಿಮಾದಲ್ಲಿ ಇರುತ್ತಾರೆ. ಈ ಸಿನಿಮಾದಲ್ಲಿ ದಿಗಂತವರಿಗೆ ಒಂದೇ ಒಂದು ಡೈಲಾಗ್ ಇತ್ತು ಅಷ್ಟೇ ಆದರೆ ಆ ಬಗ್ಗೆ ಯಾವುದೇ ಬೇಸರ ಇಲ್ಲ ಯಾಕೆಂದರೆ ಆ ಸಿನಿಮಾ ಇಂದ ದರ್ಶನ್ ಅಂತಹ ಉತ್ತಮ ಸ್ನೇಹಿತರನ್ನು ಪಡೆದುಕೊಂಡೆ ಎಂದಿದ್ದಾರೆ ದಿಗಂತ್.

ದರ್ಶನ್ ಅವರು ಬಹಳ ಸೂಕ್ಷ್ಮ ಮನೋಭಾವದ ವ್ಯಕ್ತಿ. ಆ ರೀತಿ ವಿಶೇಷ ವ್ಯಕ್ತಿತ್ವ ಹೊಂದಿದ್ದ ಜನರನ್ನು ನಾನು ಬಹಳ ಕಡಿಮೆ ನೋಡಿದ್ದೇನೆ. ಯಾಕೆಂದರೆ ಶೂಟಿಂಗ್ ಸೆಟ್ ಅಲ್ಲಿ ಯಾರಿಗೆ ಹಸಿವಾದರೂ ಅವರು ಸಹಿಸಿಕೊಳ್ಳುವುದಿಲ್ಲ ತಕ್ಷಣ ಊಟದ ವ್ಯವಸ್ಥೆ ಮಾಡುತ್ತಾರೆ ಅಲ್ಲದೆ ಅವರ ಜಿಪ್ಸಿ ಒಂದು ಇರುತ್ತದೆ ಅದರಲ್ಲಿ ಆಹಾರ ಸಾಮಾಗ್ರಿಗಳೇ ತುಂಬಿರುತ್ತದೆ.

ಅವರ ಜೊತೆ ಜರ್ನಿ ಮಾಡುವವರಿಗೆ ಹಸಿವಾದಾಗ ತಕ್ಷಣ ಆಮ್ಲೆಟ್ ಅಥವಾ ಬ್ರೆಡ್ ಅನ್ನು ಮಾಡಿಕೊಡುತ್ತಾರೆ ಅವರು ಬೈಕ್ ರೈಸ್ ಮಾಡಲು ಇಷ್ಟ ಪಟ್ಟರೆ ಮೊದಲಿಗೆ ನನಗೆ ಕರೆ ಮಾಡುತ್ತಾರೆ. 10, 12 ಜನ ಬೈಕ್ ರೈಡ್ ಹೊರಟರು ಯಾರಿಗೂ ಪೆಟ್ರೋಲ್ ಹಾಕಿಸಲು ಬಿಡುವುದಿಲ್ಲ. ನಾವೇನಾದರೂ ಹಣ ಕೊಡಲು ಹೋದರೆ ಯಾರಾದರೂ ಪರ್ಸ್ ಗೆ ಕೈ ಹಾಕಿದರೆ ಒದೆ ಬೀಳುತ್ತವೆ ಎಂದು ಎಚ್ಚರಿಸುತ್ತಾರೆ.

ಎಲ್ಲರ ಬೈಕ್ಗಳು ಕೂಡ ದುಬಾರಿ ಬೆಲೆಯ ಬೈಕ್ ಗಳು ಆಗಿದ್ದು ಸುಮಾರು ಲೀಟರ್ ಪೆಟ್ರೋಲ್ ಕುಡಿಯುತ್ತವೆ. ಆದರೂ ದರ್ಶನ್ ಅವರೇ ಎಲ್ಲರಿಗೂ ಫುಲ್ ಟ್ಯಾಂಕ್ ಮಾಡಿಸಿಕೊಡುತ್ತಾರೆ ಎಂದಿದ್ದಾರೆ. ಜೊತೆಗೆ ಪ್ರಾಣಿಗಳ ಬಗ್ಗೆ ದರ್ಶನ್ ಅವರಿಗೆ ಇರುವಷ್ಟು ಇಂಟರೆಸ್ಟ್ ಬೇರೆ ಯಾರಿಗೂ ಇಲ್ಲ ಯಾಕೆಂದರೆ ಅವರು ವೈಲ್ಡ್ ಲೈಟ್ ಫೋಟೋಗ್ರಾಫಿ ಬಗ್ಗೆ ಅಷ್ಟು ಕ್ರೇಜ್ ಹೊಂದಿದ್ದಾರೆ.

ಒಂದು ಪಕ್ಷಿಯ ಫೋಟೋ ತೆಗೆಯುವ ಸಲುವಾಗಿ 12 ದಿನಗಳವರೆಗೆ ಕಾದಿದ್ದು ಅದು ಬಂದ ನಂತರ ತೆಗೆದಿದ್ದಾರೆ ಇಷ್ಟು ಅವುಗಳ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಹೊಂದಿರುವ ಒಬ್ಬರೇ ಒಬ್ಬ ನಾನು ಕಂಡ ವ್ಯಕ್ತಿ ಎಂದರೆ ಅದು ದರ್ಶನ್ ಅವರು ಎಂದು ದರ್ಶನ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.

ಮಂಡ್ಯ ಸಿನಿಮಾದ ಬಳಿಕ ಚೌಕ ಸಿನಿಮಾದಲ್ಲೂ ಸಹ ದರ್ಶನ ಅವರ ಜೊತೆ ಕಾಣಿಸಿಕೊಳ್ಳುವ ಅದೃಷ್ಟ ಸಿಕ್ಕಿತು, ಕೊನೆಯವರೆಗೂ ಕೂಡ ನಾನು ಈ ಸ್ನೇಹವನ್ನು ಹಾಗೆ ಉಳಿಸಿಕೊಳ್ಳುತ್ತೇನೆ ಎಂದು ಕೂಡ ಮಾತನಾಡಿದ್ದಾರೆ. ಸದ್ಯಕ್ಕೆ ತಿಮ್ಮಯ್ಯ ವರ್ಸಸ್ ತಿಮ್ಮಯ್ಯ ಸಿನಿಮಾದಲ್ಲಿ ದಿಗ್ಗಿ ಮತ್ತು ಅನಂತ್ ನಾಗ್ ಹಾಗೂ ದಿಗ್ಗಿ ಮತ್ತು ಐಂದ್ರಿತಾ ಕಾಂಬಿನೇಷನ್ ಅನ್ನು ಬಹುದಿನಗಳ ಬಳಿಕ ತೆರೆ ಮೇಲೆ ಕಾಣಲು ಪ್ರೇಕ್ಷಕರು ಕಾತುರವಾಗಿದ್ದು ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ.