Home Blog Page 270

ಸಖತ್ ಸೌಂಡ್ ಮಾಡ್ತಿದೆ ಅಪ್ಪು & ಅಶ್ವಿನಿ ಲಗ್ನಪತ್ರಿಕೆ ಅಂತದೇನಿದೆ ಗೊತ್ತ ಈ ಲಗ್ನಪತ್ರಿಕೆಯಲ್ಲಿ 22 ವರ್ಷದ ವಿಚಾರ ಈಗ ವೈರಲ್.

ಅಪ್ಪು ಅಶ್ವಿನಿ

ಕರ್ನಾಟಕ ಜನತೆಗೆ ಪುನೀತ್ ರವರು ಬಹಳ ಹತ್ತಿರವಾಗಿದ್ದರು ಹೌದು ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರು ಪವರ್ ಸ್ಟಾರ್ ಎಂದೇ ಖ್ಯಾತಿಯನ್ನು ಪಡೆದವರು. ಡಾಕ್ಟರ್ ರಾಜಕುಮಾರ್ ಅವರ ತೃತಿಯ ಹಾಗೂ ಮುದ್ದಿನ ಮಗನಾದ ಇವರು ತನ್ನ ತಾಯಿ ಪಾರ್ವತಮ್ಮ ರವರುಗೂ ಮುದ್ದು ಮಗ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ರವರು ನಮ್ಮನ್ನೆಲ್ಲ ಅ.ಗ.ಲಿ ಈಗಾಗಲೇ ಒಂದು ವರ್ಷವೇ ಕಳೆದರೂ ಅವರ ನೆನಪು ಮಾತ್ರ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ.

ಅವರು ದೈಹಿಕವಾಗಿವಿಲ್ಲವಾದರೂ ನಮ್ಮೆಲ್ಲರ ನೆನಪಿನ ರೂಪದಲ್ಲಿ ನಮ್ಮ ಜೊತೆ ಇದ್ದೇ ಇರುತ್ತಾರೆ. ಈಗಾಗಲೇ ಕನ್ನಡ ಜನತೆಯು ಎಲ್ಲಾ ಕಾರ್ಯಕ್ರಮದಲ್ಲೂ ಕೂಡ ಪುನೀತ್ ರವರನ್ನು ಬಿಡದೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ಮೂಲಕ ಗೌರವವನ್ನು ನೀಡಿದ್ದಾರೆ. ಇದರ ಜೊತೆಗೆ ನಮ್ಮ ಕರ್ನಾಟಕ ಸರ್ಕಾರವು ಪುನೀತ್ ರವರ ಸಾಮಾಜಿಕ ಸೇವೆಗಳಿಗಾಗಿ ಇವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇನ್ನು ಪುನೀತ್ ರವರ ಸಾವಿನ ಬಳಿಕ ಪುನೀತ್ ರವರ ಒಂದಲ್ಲ ಒಂದು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿವೆ. ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿಯವರ ಮದುವೆ ವಾರ್ಷಿಕೋತ್ಸವವಿದ್ದು ಇವರಿಬ್ಬರ ಮದುವೆ ಪತ್ರಿಕೆಯು ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡಿದೆ. ಇವರಿಬ್ಬರ ಮದುವೆಯ ಪತ್ರಿಕೆಯ ಫೋಟೋ ಒಂದು ಪ್ರೇಕ್ಷಕರ ಗಮನ ಸೆಳೆದಿದ್ದು ಇವರಿಬ್ಬರ ಲಗ್ನ ಪತ್ರಿಕೆಯೊಳಗೆ ಏನು ಇರಬಹುದು ಎಂಬ ಕುತೂಹಲವು ಹೆಚ್ಚಾಗಿದೆ.

ನಿಮಗೂ ಕೂಡ ಲಗ್ನ ಪತ್ರಿಕೆಯನ್ನು ನೋಡುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಓದಬಹುದು. ಇದರ ಜೊತೆಗೆ ನಿಮ್ಮ ಸ್ನೇಹಿತರೊಂದಿಗೆ ಕೂಡ ಹಂಚಿಕೊಳ್ಳಬಹುದು. ಸದಾ ಎಲ್ಲರನ್ನು ಬೆರೆಯುವಂತಹ ಗುಣವಿರುವ ಪುನೀತ್ ರಾಜಕುಮಾರ್ ಅವರು ಒಬ್ಬ ಗೆಳೆಯನಂತೆ ಅಶ್ವಿನಿ ಅವರಿಗೆ ಪರಿಚಯವಾಗಿದ್ದರು ಒಬ್ಬ ಕಾಮನ್ ಫ್ರೆಂಡ್ ಇಂದ ಪರಿಚಯವಾದಂತಹ ಅಶ್ವಿನಿಯವರ ಜೊತೆ ಸ್ನೇಹ ಬೆಳೆದಿತ್ತು ದಿನ ದಿನಕ್ಕೆ ತಮ್ಮ ಸ್ನೇಹವೂ ಪ್ರೀತಿಗೆ ಜರುಗಿತ್ತು.

ಒಂದು ದಿನ ಸ್ವತಃ ಪುನೀತ್ ರಾಜಕುಮಾರ್ ಅವರ ಅಶ್ವಿನಿ ಅವರ ಬಳಿ ಹೋಗಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರಂತೆ. ಪುನೀತ್ ರವರು ಅಶ್ವಿನಿ ಅವರನ್ನು ನನ್ನನ್ನು ಮದುವೆ ಮಾಡಿಕೊಳ್ಳುತ್ತೀಯ ಎಂದು ಕೇಳಿದರಂತೆ ಅದಕ್ಕೆ ಅಶ್ವಿನಿಯವರು ಹಿಂದೆ ಮುಂದೆ ನೋಡದೆ ಒಂದೇ ಬಾರಿ ಪ್ರೀತಿಯನ್ನು ಒಪ್ಪಿಕೊಂಡಿದ್ದರಂತೆ.

ಇನ್ನು ಅಶ್ವಿನಿ ಅವರು ತಮ್ಮ ತವರು ಮನೆಯಿಂದ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಪುನೀತ್ ರಾಜಕುಮಾರ್ ಅವರು ತನ್ನ ಅಣ್ಣನ ಬಳಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರಂತೆ, ಈ ಬಳಿಕ ಸಂಪೂರ್ಣ ರಾಜ ಕುಟುಂಬಕ್ಕೆ ಪುನೀತ್ ರವರ ಪ್ರೀತಿಯ ವಿಷಯವು ತಿಳಿದಿತ್ತು. ಇನ್ನು ಈ ವಿಷಯವಾಗಿ ಎರಡು ಕುಟುಂಬದವರ ಒಪ್ಪಿಗೆಯಿದ್ದು ಮದುವೆಯ ಪ್ರಸ್ತಾಪವು ನಡೆದಿತ್ತು.

ಈ ಜೋಡಿಯ ಮದುವೆಗೆ ಗುರಿ ಹಿರಿಯರ ಹಾಗೂ ಕನ್ನಡ ಸಿನಿಮಾ ರಂಗವು ಸಾಕ್ಷಿಯಾಗಿದೆ. ಡಿಸೆಂಬರ್ 1 1999 ರಂದು ಈ ಜೋಡಿಯು ತಮ್ಮ ದಾಂಪತ್ಯ ಜೀವನವನ್ನು ಶುರು ಮಾಡಿದೆ. ಇವರ ಇಬ್ಬರ ವೈವಾಹಿಕ ಜೀವನವು ಶುರುವಾಗಿ 22 ವರ್ಷಗಳು ಕಳೆದರೂ ಯಾವುದೇ ತರದ ಸಣ್ಣ ಭಿನ್ನಾಭಿಪ್ರಾಯಗಳು ಹಾಗೂ ಕಲಹಗಳು ಇವರ ಮದ್ಯ ಬಂದಿಲ್ಲದಿರುವುದು ವಿಶೇಷ. ಹಾಗೂ ಈ ಜೋಡಿಗೆ ದೃತಿ ಹಾಗೂ ವಂದಿತ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ.

ಇವರಿಬ್ಬರ ಆದರ್ಶ ದಂಪತ್ಯ ಎಷ್ಟೋ ಜೋಡಿಗಳಿಗೆ ಮಾದರಿಯಾಗಿದೆ. ಪುನೀತ್ ರವರ ಅಕಾಲಿಕ ಸಾವು ಎಲ್ಲರನ್ನೂ ಬೇಸರ ಮಾಡಿದೆ ಎಂದರೆ ಸುಳ್ಳಲ್ಲ. ಮೊನ್ನೆ ಡಿಸೆಂಬರ್ ಒಂದರಂದು ಪುನೀತ್ ರವರ ಮದುವೆ ವಾರ್ಷಿಕೋತ್ಸವದ ಸಲುವಾಗಿ ಪುನೀತ್ ರವರ ಲಗ್ನ ಪ‌ತ್ರಿಕೆಯು ವೈರಲ್ ಆಗಿದೆ.

ರವಿಚಂದ್ರನ್ ಮಾಡಬೇಕಿದ್ದ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿ ದಾಖಲೆ ಸೃಷ್ಟಿ ಮಾಡಿದ ಸಿನಿಮಾ ಯಾವುದು ಗೊತ್ತಾ.?

ವಿಷ್ಣು ದಾದಾ

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಈ ಇಬ್ಬರು ನಟರು ಕೂಡ ಕರ್ನಾಟಕ ಕಂಡ ಶ್ರೇಷ್ಠ ಕಲಾವಿದರುಗಳು. ಇಬ್ಬರದು ವಿಭಿನ್ನ ಬಗೆಯ ವ್ಯಕ್ತಿತ್ವ ಹಾಗೂ ಸಿನಿಮಾ ಬಗ್ಗೆ ಬೇರೆ ರೀತಿಯ ಅಭಿರುಚಿ. ಇಬ್ಬರೂ ಪರಸ್ಪರ ವಿಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸಿ ಜನರನ್ನು ಮನಸ್ಸು ಸೆಳೆದವರು. ಹೆಣ್ಣು ಮಕ್ಕಳ ಹಾರ್ಟ್ ಗೆದ್ದ ಡ್ರೀಮ್ ಬಾಯ್ ಆಗಿ ರವಿಚಂದ್ರನ್ ಅವರು ತೆರೆ ಮೇಲೆ ನಟಿಸಿ ಗೆದ್ದಿದ್ದರೆ.

ವಿಷ್ಣುವರ್ಧನ್ ಅವರು ಕೂಡ ಹೆಣ್ಣುಮಕ್ಕಳು ಇಷ್ಟ ಪಡುವಂತಹ ಪಾತ್ರಗಳಲ್ಲಿ ನಟಿಸಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಕಲಾವಿದ ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ. ಇಬ್ಬರು ಒಂದೇ ಸಮಯದಲ್ಲಿ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟರೂ ಕೂಡ ಇಬ್ಬರು ಯಾವುದೇ ಕಾಂಪಿಟೇಶನ್ ಇಲ್ಲದೆ ಕಡೆವರೆಗೂ ಉತ್ತಮ ಸ್ನೇಹಿತರಾಗಿದ್ದು ಕನ್ನಡಿಗರನ್ನು ರಂಜಿಸಿದ್ದಾರೆ.

ಇಷ್ಟು ವರ್ಷದ ಸಿನಿ ಜರ್ನಿಯಲ್ಲಿ ಎಷ್ಟೋ ಬಾರಿ ಎಷ್ಟೋ ಕಥೆಗಳು ವಿಷ್ಣುವರ್ಧನ್ ಅವರು ಕೇಳಿದ್ದು ಆ ಬಳಿಕದಲ್ಲಿ ರವಿಚಂದ್ರನ್ ಅವರು ಅಭಿನಯಿಸಿರುತ್ತಾರೆ. ಅದೇ ರೀತಿ ರವಿಚಂದ್ರನ್ ಅವರಿಗೆ ಹೇಳಿದ ಕಥೆಗಳಲ್ಲಿ ಅವರು ಒಪ್ಪದಿದ್ದಾಗ ಅಥವಾ ಇನ್ಯಾವುದೋ ಕಾರಣಕ್ಕಾಗಿ ಅವರು ಆ ಪಾತ್ರ ಮಾಡಲಾಗದಿದ್ದಾಗ ಅವು ವಿಷ್ಣುವರ್ಧನ್ ಅವರ ಪಾಲಿಗೆ ಬಂದಿರುತ್ತವೆ.

ಈಗ ಅಂತಹದೊಂದು ಪಾತ್ರದ ಬಗ್ಗೆ ರವಿಚಂದ್ರನ್ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ರವಿಚಂದ್ರನ್ ಅವರು ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು ಆ ಸಮಯದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡಬೇಕಾದಾಗ ಸಂದರ್ಭ ಬಂದಾಗ ನಾನು ನಟಿಸಬೇಕಾಗಿದ್ದ ಒಂದು ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿ ಹೊಸ ದಾಖಲೆ ಬರೆದು ಬಿಟ್ಟರು ಅದು ಅವರಿಗೆ ಬಹುದೊಡ್ಡ ಬ್ರೇಕ್ ತಂದು ಕೊಟ್ಟಿದ್ದು ಎಂದು ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಆ ಸಿನಿಮಾ ಯಾವುದು? ಆ ಪಾತ್ರ ಯಾವುದು ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇದೆ. ರಮೇಶ್ ಅರವಿಂದ್, ಪ್ರೇಮ, ಸೌಂದರ್ಯ ದ್ವಾರಕೀಶ್, ಪ್ರಮಿಳ ಜೋಶಾಯ್, ಶಿವರಾಂ ಸತ್ಯಜಿತ್ ಹೀಗೆ ಬಹುದೊಡ್ಡ ತಾರಾಬಳಗವೇ ಒಟ್ಟಾಗಿ ಅಭಿನಯಿಸಿ ಕನ್ನಡದಲ್ಲಿ ಐತಿಹಾಸಿಕ ಕಥೆಯೊಂದಕ್ಕೆ ಸೈನ್ಸ್ ಟಚ್ ಕೊಟ್ಟು ತಯಾರಿಸಿದ ಚಿತ್ರವಾಗಿದ್ದ.

ಆಪ್ತಮಿತ್ರ ಚಿತ್ರದಲ್ಲಿ ವಿಷ್ಣು ದಾದಾ ಅಭಿನಯಿಸಿದ ವಿಜಯ ರಾಜೇಂದ್ರ ಬಹದ್ದೂರ್ ಹಾಗೂ ವಿಜಯ್ ಪಾತ್ರವನ್ನು ರವಿಚಂದ್ರನ್ ಅವರು ನಡೆಸಬೇಕಿತ್ತಂತೆ. ಪಿ ವಾಸ್ತು ಅವರು ಈ ಬಗ್ಗೆ ರವಿಚಂದ್ರನ್ ಅವರ ಜೊತೆ ಚರ್ಚಿಸಿದ್ದರಂತೆ. ಆದರೆ ಆ ಸಿನಿಮಾದಲ್ಲಿ ರವಿಚಂದ್ರನ್ ಅವರು ಅಭಿನಯಿಸಲು ಸಾಧ್ಯವಾಗಲಿಲ್ಲ ನಂತರ ಅವರು ಆ ಪಾತ್ರದಲ್ಲಿ ನಟಿಸಿ ಪಾತ್ರವೇ ತಾವೆನ್ನುವಂತೆ ಜೀವಂತಿಕೆ ತುಂಬಿ ಅಭಿನಯಿಸಿದರು ವಿಷ್ಣುವರ್ಧನ್.

ಸಿನಿಮಾ ಆರಂಭದಲ್ಲಿ ಒಳ್ಳೆ ಪ್ರದರ್ಶನ ಕಾಣದಿದ್ದರೂ ನಿಧಾನವಾಗಿ ಚೇತರಿಸಿಕೊಂಡು ಬರೋಬ್ಬರಿ 38 ವಾರಗಳ ಕಾಲ ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಂಡಿತು. ದಾದಾ ಮಾಡಿದ ಆ ಪಾತ್ರದಲ್ಲಿ ಬೇರೆ ಯಾರನ್ನು ಸಹ ಈಗ ಊಹಿಸಿಕೊಳ್ಳಲು ಸಾಧ್ಯವಿಲ್ಲ, ಸಂದರ್ಶನದ ಕೊನೆಯಲ್ಲಿ ರವಿಚಂದ್ರನ್ ಅವರು ಇದೇ ಮಾತನ್ನು ಹೇಳಿದ್ದು ನಾನು ಆ ಪಾತ್ರದಲ್ಲಿ ನಟಿಸಿದ್ದರೆ ಖಂಡಿತವಾಗಿಯೂ ಅಷ್ಟೊಂದು ಅದ್ಭುತವಾಗಿ ನಟಿಸುತ್ತಿರಲಿಲ್ಲವೇನು ಎಂದು ಒಪ್ಪಿಕೊಂಡಿದ್ದಾರೆ.

ರವಿಚಂದ್ರನ್ ಹಾಗೂ ವಿಷ್ಣುವರ್ಧನ್ ಅವರು ಯಾರೆ ನೀನು ಚೆಲುವೆ, ಸಾಹುಕಾರ ಮುಂತಾದ ಸಿನಿಮಾಗಳು ಒಟ್ಟಾಗಿ ನಟಿಸಿದ್ದಾರೆ. ಸಾಹುಕಾರ ಸಿನಿಮಾ ಕೂಡ ಆಪ್ತಮಿತ್ರ ಸಿನಿಮಾ ರಿಲೀಸ್ ಆದ ವೇಳೆಯಲ್ಲಿ ರಿಲೀಸ್ ಆಗಿತ್ತು. ಸಾವುಕಾರ ಸಿನಿಮಾ ಕೂಡ ಆ ವರ್ಷದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ ಸೇರಿತ್ತು.

ರಾಜ್ ಕುಮಾರ್ ಅವರನ್ನು ಬಿಟ್ಟರೆ ಅತಿ ಹೆಚ್ಚು ಫ್ಯಾನ್ಸ್ ಯಾವ ನಟನಿಗೆ ಇದೆ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಡಿ ಬಸ್ ಕೊಟ್ಟ ಖಡಕ್ ಉತ್ತರ ಏನು ಗೊತ್ತ.? ಎಲ್ಲರೂ ಶಾ-ಕ್

ಕಾಂತ್ರಿ ಸಿನಿಮಾ ಸಂದರ್ಶನ

ಸದ್ಯಕ್ಕೆ ಎಲ್ಲಾ ಕಡೆ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ನಡೆಯುತ್ತಿದೆ. ಮಾಧ್ಯಮಗಳು ದರ್ಶನವರ ಕುರಿತಾಗ ಯಾವುದೇ ವರದಿ ಪ್ರಸಾರ ಮಾಡುವುದಿಲ್ಲ ಎಂದು ಬ್ಯಾನ್ ಮಾಡಿದ್ದರೂ ಕೂಡ ದರ್ಶನ್ ಅಭಿಮಾನಿಗಳಿಗಾಗಿ ಯುಟ್ಯೂಬ್ ಚಾನೆಲ್ ಗಳು ದರ್ಶನ್ ಅವರ ಸಂದರ್ಶನ ನಡೆಸುತ್ತಿವೆ. ಈ ಸಂದರ್ಶನಗಳಿಂದ ಯೂಟ್ಯೂಬ್ ಚಾನೆಲ್ ಗಳು ಅತಿ ಹೆಚ್ಚು ವೀಕ್ಷಣೆ ಪಡೆಯುತ್ತಿರುವುದಂತೂ ಸುಳ್ಳಲ್ಲ.

ದರ್ಶನ್ ಅವರು ಸಹ ಎಲ್ಲ youtube ಚಾನೆಲ್ ಗಳಿಗೂ ಸಂದರ್ಶನ ಕೊಡುವುದಾಗಿ ಹೇಳಿ ಚಿತ್ರತಂಡ ಸಮೇತವಾಗಿ ಹಾಗೂ ವೈಯಕ್ತಿಕವಾಗಿ ಕೂಡ ಈ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲಿ ಕೇಳುತ್ತಿರುವ ಸಿನಿಮಾ ಕುರಿತ ಪ್ರಶ್ನೆಗಳು ಹಾಗೂ ವೈಯಕ್ತಿಕ ವಿಚಾರದ ಪ್ರಶ್ನೆಗಳಿಗೂ ಕೂಡ ತುಂಬಾ ವಿವೇಕದಿಂದ ವಿಚಾರ ಮಾಡಿ ಮತ್ತು ತಮ್ಮ ಅನುಭವಗಳ ಸಾರವನ್ನು ಸೇರಿಸಿ ಉತ್ತರಿಸುತ್ತಿರುವ ದರ್ಶನ್ ಅವರ ಪ್ರತಿ ಮಾತು ಕೂಡ ಸಿನಿಮಾ ಮೇಲಿನ ಕುತೂಹಲ ಹಾಗೂ ದರ್ಶನ ಮೇಲಿನ ಅಭಿಮಾನ ಎರಡನ್ನು ಹೆಚ್ಚಿಸುತ್ತಿದೆ.

ಹೀಗೆ ಸಿನಿಬಝ್ ಎನ್ನುವ ಯೂ ಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ದರ್ಶನ್ ಅವರಿಗೆ ಪ್ರಶ್ನೆಯೊಂದನ್ನು ಕೇಳುತ್ತಾರೆ. ಸದ್ಯಕ್ಕೆ ಕರ್ನಾಟಕದಲ್ಲಿ ಎಲ್ಲರೂ ಕಂಡಂತೆ ಡಾಕ್ಟರ್ ರಾಜಕುಮಾರ್ ಅಂತಹ ಮೇರುನಟನಿಗೆ ಬಹಳ ದೊಡ್ಡ ಅಭಿಮಾನಿ ಬಳಗ ಇತ್ತು. ಅವರನ್ನು ಸಾಕಷ್ಟು ಜನ ಆದರ್ಶವಾಗಿ ತೆಗೆದುಕೊಂಡಿದ್ದರು ಇಂದು ಅವರು ಇಲ್ಲವಾಗಿದ್ದರೂ ಕೂಡ ಅನೇಕ ಮಂದಿ ಅವರಿಗೆ ಅಭಿಮಾನಿಗಳಾಗಿದ್ದಾರೆ.

ಹಾಗೆ ಈಗ ಎಲ್ಲರೂ ಮಾತನಾಡುತ್ತಾರೆ ರಾಜಕುಮಾರ್ ಅವರನ್ನು ಬಿಟ್ಟರೆ ದರ್ಶನ್ ಅವರಿಗೆ ಅತಿ ಹೆಚ್ಚು ಫ್ಯಾನ್ಸ್ ಇರುವುದು ಎಂದು ಈ ಬಗ್ಗೆ ನೀವೇನಂತೀರಾ ಅಂದಾಗ ಪ್ರಶ್ನೆಯನ್ನು ಪೂರ್ತಿ ಮಾಡಲು ಕೂಡ ಬಿಡದ ದರ್ಶನ್ ಅವರು ಇದನ್ನು ಇಲ್ಲಿಗೆ ಸ್ಟಾಪ್ ಮಾಡು ಎಂದು ಹೇಳುತ್ತಾರೆ. ಯಾಕೆ ಎಂದು ದರ್ಶನ್ ಅದಕ್ಕೆ ಉತ್ತರ ಕೂಡ ಹೇಳುತ್ತಾರೆ ಅಭಿಮಾನಿಗಳ ವಿಚಾರದಲ್ಲಿ ದೊಡ್ಡ ಅಭಿಮಾನಿ ಬಳಗ, ಚಿಕ್ಕ ಅಭಿಮಾನಿ ಬಳಗ ಅಥವಾ ಅಭಿಮಾನಿಗಳ ಸಂಖ್ಯೆ ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ.

ಅಭಿಮಾನಿಗಳು ಎಷ್ಟು ಜನ ಇದ್ದರೂ ಕೂಡ ಅಭಿಮಾನಿಗಳೇ ಒಬ್ಬೇ ಒಬ್ಬ ಅಭಿಮಾನಿಯನ್ನು ಸಹ ಅಷ್ಟು ಈಜಿಯಾಗಿ ಸಂಪಾದಿಸಲು ಆಗುವುದಿಲ್ಲ ಅದನ್ನು ಅವರು ಕಷ್ಟಪಟ್ಟು ಸಂಪಾದಿಸಿರುತ್ತಾರೆ. ಹೀಗಾಗಿ ಅಭಿಮಾನಿಗಳು ಎನ್ನುವುದೇ ದೊಡ್ಡ ವಿಷಯ ನಾನು ಸಹ ನನ್ನ ಜೀವನದಲ್ಲಿ ಅವರನ್ನು ಸೆಲೆಬ್ರೆಟಿಗಳು ಎಂದೇ ಕರೆಯುತ್ತೇನೆ. ಅವರ ಬಗ್ಗೆ ಅಪಾರವಾದ ಪ್ರೀತಿ ಇದೆ. ಹಾಗೆ ನನಗೆ ಇರುವಷ್ಟು ಅಭಿಮಾನಿಗಳು ಎಲ್ಲಾ ನಟರಿಗೂ ಸಹ ಇದ್ದಾರೆ.

ಈ ವಿಚಾರದಲ್ಲಿ ಲೆಕ್ಕ ಹಾಕಿ ತಾರತಮ್ಯ ಮಾಡಿ ಹೆಚ್ಚು ಕಡಿಮೆ ಎಂದು ಹೇಳುವುದೇ ತಪ್ಪು. ನೀವು ಕೇಳುತ್ತಿರುವ ಪ್ರಶ್ನೆ ತಪ್ಪು ಹಾಗಾಗಿ ನಿಲ್ಲಿಸಿ ಎಂದಿದ್ದಾರೆ. ದಚ್ಚುವಿನ ಈ ಮಾತು ಎಲ್ಲರಿಗೂ ಬಹಳ ಮೆಚ್ಚುಗೆ ಆಗಿದ್ದು ದರ್ಶನ್ ಅವರು ಒಪ್ಪದಿದ್ದರೂ ಸಹ ಸದ್ಯಕ್ಕೆ ಕರ್ನಾಟಕದಲ್ಲಿ ಸ್ಟಾರ್ ನಟರ ಪಟ್ಟಿಯಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಂಬರ್ ನಟ ದರ್ಶನ್ ಅವರೇ ಆಗಿದ್ದಾರೆ.

ಇದೇ ಸಂದರ್ಶನದಲ್ಲಿ ಮುಂದುವರೆದು ನೀವು ಬಹಳ ಚೆನ್ನಾಗಿ ಮಿಮಿಕ್ರಿ ಮಾಡುತ್ತೀರಾ ಸದಾ ಸುತ್ತ ನಡೆಯುವುದರ ಬಗ್ಗೆ ಗಮನ ಹರಿಸುವವರಿಗೆ ಮಾತ್ರ ಇಂಥಹ ಟ್ಯಾಲೆಂಟ್ ಇರಲು ಸಾಧ್ಯ ಹಾಗಾಗಿ ನೀವು ಎಲ್ಲವನ್ನು ಗಮನಿಸುತ್ತೀರಾ ಎಂದು ಕೇಳಿದ ನಿರೂಪಕಿ ಪ್ರಶ್ನೆಗೆ ನನಗೆ 360 ಡಿಗ್ರಿ ಸೆಲ್ಸಿಯಸ್ ಕಣ್ಣು ಇದೆ. ನಾನು ಇಲ್ಲಿ ಕುಳಿತು ನಿಮ್ಮ ಜೊತೆ ಮಾತನಾಡುತ್ತಿದ್ದರೂ ನನ್ನ ಸುತ್ತಮುತ್ತ ಏನಾಗುತ್ತಿದೆ ಎನ್ನುವುದರ ಅರಿವು ನನಗಿರುತ್ತದೆ ಖಂಡಿತವಾಗಿಯೂ ನಾನು ಅಂತಹ ಸೂಕ್ಷ್ಮ ವ್ಯಕ್ತಿ ಎಂದು ದರ್ಶನ್ ಉತ್ತರಿಸಿದ್ದಾರೆ.

ಬಡವ್ರು ಮಕ್ಳು ಬೆಳೀಬೇಕು ಕಣ್ರಯ್ಯ ಅಂದಿದ್ದ ಡಾಲಿ ಪ್ರೇಮ್ ಮಗಳನ್ನು ನಟಿ ಮಾಡಿದ್ದಾರೆ. ಆಡಿದ ಮಾತಿಗೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲ ಅಂತಿದ್ದಾರೆ ನೆಟ್ಟಿಗರು.

ಬಡವರ ಮಕ್ಳು ಬೆಳಿಬೇಕು ಕಣ್ರಯ್ಯ

ನಟ ಡಾಲಿ ಧನಂಜಯ್ ಅವರು ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು ಕಳೆದ ಒಂದು ದಶಕಗಳು ಕೂಡ ಡಾಲಿ ಧನಂಜಯ್ ಅವರು ಕನ್ನಡದಲ್ಲಿ ಹಲವಾರು ಸಿನಿಮಾದಲ್ಲಿ ನಾಯಕ ನಟನಾಗಿ, ಖಳ ನಾಯಕನಾಗಿ ಮತ್ತು ಪೋಷಕ ಪಾತ್ರದಲ್ಲಿ ಹಾಗೂ ಸಹ ಕಲಾವಿದನ ಪಾತ್ರದಲ್ಲಿ ಹೀಗೆ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದಾರೆ.

ಕನ್ನಡ ಮಾತ್ರವಲ್ಲದೆ ತೆಲುಗುನಲ್ಲಿಯೂ ಕೂಡ ತಮ್ಮ ಕಮಲ್ ಅನ್ನು ಸೃಷ್ಟಿ ಮಾಡಿದ್ದಾರೆ ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಹೆಡ್ ಬುಶ್ ಸಿನಿಮಾದ ಮೂಲಕ ಸಿಕ್ಕಾಪಟ್ಟೆ ಕಂಟ್ರವರ್ಸಿಗೂ ಕೂಡ ಗುರಿಯಾಗಿದ್ದರು. ಈ ಸಮಯದಲ್ಲಿ ನನ್ನನ್ನು ತುಳಿಯುವುದಕ್ಕಾಗಿ ಕೆಲವು ಕಿಡಿಗೇಡಿಗಳು ಈ ರೀತಿ ಮಾಡುತ್ತಿದ್ದಾರೆ “ಬಡವರ ಮಕ್ಕಳು ಬೆಳೀಬೇಕು ಕಂಡ್ರಯ್ಯ” ಎಂಬ ಡೈಲಾಗ್ ಹೊಡೆಯುವುದರ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಂತೆ ಮಾಡಿದ್ದರು‌.

ಇನ್ನು ಡಾಲಿ ಧನಂಜಯ್ ಅವರು ಚಿತ್ರರಂಗಕ್ಕೆ ಬಂದಿರುವುದು ತಮ್ಮ ಸ್ವಂತ ಪರಿಶ್ರಮದಿಂದ ಯಾವುದೇ ರೀತಿಯಾದಂತಹ ಸಿನಿಮಾ ಬ್ಯಾಗ್ರೌಂಡ್ ಇಲ್ಲದೆ ತಮ್ಮ ಪ್ರತಿಭೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸ್ಥಾನಮಾನ ಗಿಟ್ಟಿಸಿಕೊಂಡಿದ್ದಾರೆ. ಹೊಸಬರಿಗೆ ಹಾಗೂ ಪ್ರತಿಭೆ ಇರುವಂತಹ ವ್ಯಕ್ತಿಯನ್ನು ಹುಡುಕಿ ಅವರಿಗೆ ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ ಅದರಲ್ಲಿಯೂ ಕೂಡ ಚಿತ್ರರಂಗದ ಬ್ಯಾಕ್ ಗ್ರೌಂಡ್ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಹೆಚ್ಚು ಸಹಾಯ ಮಾಡುತ್ತಾರೆ.

ಈ ಒಳ್ಳೆಯ ಗುಣದಿಂದಲೇ ಡಾಲಿ ಧನಂಜಯ್ ಅವರು ಹೆಚ್ಚು ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದರು. ನುಡಿದಂತೆ ನಡೆಯುತ್ತಾರೆ ಎಂದು ಸಾಕಷ್ಟು ಅಭಿಮಾನಿಗಳು ಅಂದುಕೊಂಡಿದ್ದರು ಆದರೆ ಕಳೆದ ಒಂದು ವಾರದಿಂದ ದಾಳಿ ಧನಂಜ ಯ್ ಅವರ ಬಗ್ಗೆ ಇದೀಗ ಅಪಸ್ವರ ಒಂದು ಎತ್ತಿದೆ. ಹೌದು ಅದೇನೆಂದರೆ ಧನಂಜಯ್ ಅವರು ಹೇಳುವ ಮಾತಿಗೂ ಮಾಡುವಂತಹ ಕೆಲಸಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ ಎನ್ನುತ್ತಿದ್ದರೆ.

ಏಕೆಂದರೆ ಡಾಲಿ ಪಿಚ್ಚರ್ಸ್ ಅಡಿಯಲ್ಲಿ ಟಗರು ಪಲ್ಯ ಎಂಬ ಸಿನಿಮಾ ಒಂದು ನಿರ್ಮಾಣವಾಗುತ್ತಿದೆ ಈ ಸಿನಿಮಾಗೆ ಧನಂಜಯ ಅವರೇ ಸ್ವತಃ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ. ಈ ಸಿನಿಮಾದ ನಾಯಕ ನಟಿಯಾಗಿ ಲವ್ಲಿ ಸ್ಟಾರ್ ಪ್ರೇಮ್ ಅವರ ಮಗಳು ಅಮೃತ ಪ್ರೇಮ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ನಾಲ್ಕು ದಿನದ ಹಿಂದೆಯಷ್ಟೇ ಪ್ರೆಸ್ ಮೀಟ್ ಒಂದನ್ನು ನಡೆಸಿ ನಮ್ಮ ಸಿನಿಮಾಗೆ ನಾಯಕ ನಟಿಯಾಗಿ ಅಮೃತ ಪ್ರೇಮ್ ಅವರು ಆಯ್ಕೆಯಾಗಿದ್ದಾರೆ ಎಂಬ ವಿಚಾರವನ್ನು ಹೇಳಿಕೊಳ್ಳುತ್ತಾರೆ.

ಈ ವಿಚಾರ ಒಂದು ಕಡೆ ಖುಷಿ ತಂದಿದ್ದರೆ ಮತ್ತೊಂದು ಕಡೆ ವಿವಾದವನ್ನು ಸೃಷ್ಟಿಸಿದೆ ಹೌದು ಅದೇನೆಂದರೆ ಧನಂಜಯ್ ಅವರು ಬಡವರ ಮಕ್ಕಳು ಬೆಳಿಬೇಕು ಕಂಡ್ರಯ್ಯ ಎಂದು ಹೇಳಿದ್ದರು. ಈ ಮಾತಿನ ಅರ್ಥ ಹೊಸಬರಿಗೆ ಹಾಗೂ ಬಡವರಿಗೆ ಹಾಗೂ ಪ್ರತಿಭೆ ಇರುವಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಚಾನ್ಸ್ ಕೊಡಬೇಕಿತ್ತು. ಆದರೆ ಲವ್ಲಿ ಸ್ಟಾರ್ ಪ್ರೇಮ್ ಈಗಾಗಲೇ ಸಾಕಷ್ಟು ಸಿನಿಮಾದಲ್ಲಿ ನಟಿಸಿ ಒಂದಷ್ಟು ಆಸ್ತಿಯನ್ನು ಸಂಪಾದಿಸಿದ್ದಾರೆ.

ಅಷ್ಟೇ ಅಲ್ಲದೆ ಸ್ಟಾರ್ ಪುತ್ರಿ ಕೂಡ ಹೌದು ಇಷ್ಟೆಲ್ಲಾ ಬ್ಯಾಗ್ರೌಂಡ್ ಇದ್ದರೂ ಅವರಿಗೆ ಧನಂಜಯ್ ಅವರು ತಮ್ಮ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುವುದಕ್ಕೆ ಚಾನ್ಸ್ ಕೊಟ್ಟಿರುವುದು ನಿಜಕ್ಕೂ ಕೂಡ ತಪ್ಪು ಎಂಬುದು ಕೆಲವೊಂದು ಅಭಿಪ್ರಾಯವಾಗಿದೆ. ಈ ಕಾರಣಕ್ಕಾಗಿ ಡಾಲಿ ಧನಂಜಯ್ ಅವರನ್ನು ಇದೀಗ ಎಲ್ಲರು ಧುಶಿಸುತ್ತಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುತ್ತಿದ್ದರೆ. ಆದರೆ ಧನಂಜಯ್ ಅವರು ಮಾತ್ರ ಈಗಲೂ ತಾವು ಹೇಳಿದಂತಹ ಮಾತಿಗೆ ಬದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಸುದ್ದಿ ವೈರಲ್ ಆಗುತ್ತಿದ್ದ ಹಾಗೆ ಧನಂಜಯ್ ಅವರು ಇದೀಗ ಪ್ರೇಮ್ ಅವರ ಮಗಳನ್ನು ನಾಯಕ ನಟಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನು ಬಿಟ್ಟರೆ ಇನ್ನು ಎಲ್ಲರೂ ಕೂಡ ಹೊಸಬರೇ ಹಾಗೂ ಬಡವರ ಹಾಗಾಗಿ ಅವರಿಗೆ ಬದುಕು ಕಟ್ಟಿಕೊಡುವುದಕ್ಕಾಗಿ ಇಂಥದೊಂದು ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಷ್ಟರ ಮಟ್ಟಿಗೆ ಸುಳ್ಳು ಎಂಬುದು ಮಾತ್ರ ತಿಳಿದಿಲ್ಲ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಸಾಂಗ್ಲಿಯಾನ ಸಿನಿಮಾದಲ್ಲಿ ಅಂಬರೀಶ್ ನಟಿಸಬೇಕಿತ್ತು ಆದ್ರೆ ಆ ಜಾಗಕ್ಕೆ ಶಂಕರ್ ನಗ್ ಆಯ್ಕೆ ಆಗಿದ್ದು ಯಾಕೆ & ಹೇಗೆ ಗೊತ್ತ.?

ಎಸ್.ಪಿ ಸಾಂಗ್ಲಿಯಾನ

ಸಾಂಗ್ಲಿಯಾನ ಅಂದರೆ ಶಂಕರ್ ನಾಗ್ ಶಂಕರ್ ನಾಗ್ ಎಂದರೆ ಸಾಂಗ್ಲಿಯಾನ ಎನ್ನುವಂತೆ ಕರ್ನಾಟಕದ ಜನಗಳು ಈ ಸಿನಿಮಾ ಹಾಗೂ ಶಂಕರ್ ನಾಗ್ ಅವರನ್ನು ಮನಸ್ಸನ್ನಲ್ಲಿ ಅಚ್ಚಳಿಯದೆ ಇಳಿಸಿಕೊಂಡಿದ್ದಾರೆ. ಶಂಕರ್ ನಾಗ್ ಅವರು ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರ ಸಾಂಗ್ಲಿಯಾನವಾಗಿದ್ದು ಆ ಬಳಿಕ ಅನೇಕ ಸಾಂಗ್ಲಿಯಾನ ಅವತರಣಿಕೆಗಳು ಕನ್ನಡದಲ್ಲಿ ಬಂದವು.

ಸಾಂಗ್ಲಿಯಾನ ಸಿನಿಮಾವು ಒಂದು ಸಸ್ಪೆನ್ಸ್ ಚಿತ್ರವಾಗಿ ಕನ್ನಡಿಗರನ್ನು ಮನರಂಜಿಸಿದ್ದು ಇಂದಿಗೂ ಸಹ ಆ ಸಿನಿಮಾ ಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಲಿಯವರೆಗೂ ಕೂಡ ಆ ರೀತಿ ಕಾಣಿಸಿಕೊಳ್ಳದೆ ಇದ್ದ ಪಾತ್ರ ಮಾಡಿ ಗೆದ್ದವರು ಶಂಕರ್ ನಾಗ್ ಅವರು. ಆದರೆ ಶಂಕರ್ ನಾಗ್ ಬದಲು ಅಂಬರೀಶ್ ಅವರೇ ಅಭಿನಯಿಸಿದ್ದರೆ ಚೆನ್ನಾಗಿರುತ್ತೆ ಎಂದು ಇಂದಿಗೂ ಸಹ ಹಲವರು ಮಾತನಾಡುತ್ತಿದ್ದಾರೆ.

ಅಲ್ಲದೆ ಆ ದಿನಗಳಲ್ಲಿ ಸಾಂಗ್ಲಿಯಾನ ಚಿತ್ರಗಳಲ್ಲಿ ಶಂಕರ್ ನಾಗ್ ಬದಲು ಆ ಪಾತ್ರವನ್ನು ಅಂಬರೀಶ್ ಅವರು ಮಾಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ ಇಂದಿಗೂ ಕೂಡ ಅನೇಕ ಮಂದಿ ಇದನ್ನೇ ಮಾತನಾಡುತ್ತಾರೆ. ಹಾಗಾದರೆ ಸಾಂಗ್ಲಿಯಾನ ಸಿನಿಮಾ ಕಥೆಯನ್ನು ಯಾರಿಗಾಗಿ ಮಾಡಲಾಗಿತ್ತು ಮತ್ತು ಇವರಿಬ್ಬರಲ್ಲಿ ಯಾರೂ ಸೂಕ್ತ ಎನ್ನುವುದನ್ನು ವಿಚಾರಿಸುತ್ತಾ ಹೋದರೆ.

ನಿರ್ದೇಶಕರಾದ ಪಿ ನಂಜುಂಡಪ್ಪನವರು ಶಂಕರ್ ನಾಗ್ ಅವರನ್ನು ಈ ಪಾತ್ರಕ್ಕೆ ಸೂಚಿಸಿದ್ದು ಅವರು ಚಿತ್ರಕಥೆ ಮಾಡಿಕೊಂಡಿದ್ದೇ ಶಂಕರ್ ನಾಗ್ ಅವರು ಅಭಿನಯಿಸಬೇಕು ಎಂದು ಕಲ್ಪಿಸಿಕೊಂಡು. ಆದರೆ ಇದನ್ನು ನಿರ್ಮಾಪಕರ ಬಳಿ ಕಥೆ ಹೇಳುವ ಸಂದರ್ಭದಲ್ಲಿ ನಿರ್ಮಾಪಕರು ಈ ಪಾತ್ರಕ್ಕೆ ಅಂಬರೀಶ್ ಅವರನ್ನು ಸೂಚಿಸುತ್ತಾರಂತೆ. ಸ್ವತಃ ನಿರ್ಮಾಪಕರೇ ಈ ಪಾತ್ರವನ್ನು ಅಂಬರೀಶ್ ಮಾಡಲಿ ಅಂಬರೀಶ್ ಅವರಿಗೆ ಎಸ್ಪಿ ಸಾಂಗ್ಲಿಯಾನ ಕಥೆ ಚೆನ್ನಾಗಿ ಹೋಲುತ್ತದೆ ಎಂದು ಹೇಳಿದರಂತೆ.

ಆದರೆ ನಿರ್ದೇಶಕರಾಗಿದ್ದ ಪಿ ನಂಜುಂಡಪ್ಪ ಅವರು ಮಾತ್ರ ಹಠ ಹಿಡಿದು ಶಂಕರ್ ನಾಗ್ ಅವರ ಈ ಪಾತ್ರ ಮಾಡಬೇಕು ಎಂದು ಮಾಡಿಸುತ್ತಾರೆ. ಅಲ್ಲಿಯವರೆಗೂ ಅಂಬರೀಶ್ ಅವರು ಹಲವಾರು ಸಿನಿಮಾಗಳಲ್ಲಿ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದಲು ಪೊಲೀಸ್ ಪಾತ್ರವು ಅಂಬರೀಶ್ ಅವರಿಗೆ ಚೆನ್ನಾಗಿ ಹೋಲುತ್ತಿತ್ತು. ಅತಿ ಹೆಚ್ಚು ಬಾರಿ ಕನ್ನಡದಲ್ಲಿ ಪೊಲೀಸ್ ಪಾತ್ರ ಮಾಡಿರುವ ನಟ ಎನ್ನುವ ಖ್ಯಾತಿಗೂ ಒಳಗಾಗಿರುವ ಅಂಬರೀಶ್ ಅವರೇ ಎಸ್ ಪಿ ಸಾಂಗ್ಲಿಯಾನ ಸಿನಿಮಾ ಮಾಡಿದ್ದರೆ ಇನ್ನು ಹೆಚ್ಚಿಗೆ ಹಿಟ್ ಆಗುತ್ತಿತ್ತು ಎನ್ನುವವರು ಇದ್ದಾರೆ.

ಸಾಂಗ್ಲಿಯಾನ ಸಿನಿಮಾದಲ್ಲಿ ಮೊದಲಿಗೆ ಪೊಲೀಸ್ ಪಾತ್ರದಲ್ಲಿ ಅಂಬರೀಶ್ ಅವರೇ ಬರುತ್ತಾರೆ.ಮೊದಲ ಬಾರಿಗೆ ಸಿನಿಮಾ ನೋಡಿದವರು ಶಂಕರ್ ನಾಗ್ ಇದರಲ್ಲಿ ಹೀರೋ ಎಂದು ಊಹಿಸಿಯೂ ಇರುವುದಿಲ್ಲ. ಈ ರೀತಿ ಕಥೆ ಟ್ವಿಸ್ಟ್ ಪಡೆದುಕೊಂಡು ಶಂಕರ್ ನಾಗ್ ಸಾಂಗ್ಲಿಯಾನ ಆಗಿ ಕಾಣಿಸಿಕೊಳ್ಳುತ್ತಾರೆ. ಭವ್ಯ ಶಂಕರ್ ನಾಗ್ ಇವರಿಬ್ಬರ ಕಾಂಬಿನೇಷನ್ ಅಲ್ಲಿ ಮೂಡಿ ಬಂದ ಸಾಂಗ್ಲಿಯಾನ ಸಿನಿಮಾದಲ್ಲಿ ಹಾಡುಗಳು ಕೂಡ ಹಿಟ್ ಆಗಿದ್ದು.

ಬಂದಳೋ ಬಂದಳೋ ಕಾಂಚನ ಹಾಗೂ ಟು ಟು ಹಾಡು ಈಗಲೂ ಅನೇಕ ಕನ್ನಡಿಗರ ಫೆವರೇಟ್ ಲಿಸ್ಟಿನಲ್ಲಿ ಇದೆ. ಸಾಂಗ್ಲಿಯಾನ ಸಿನಿಮಾವು ಕನ್ನಡ ಸಿನಿಮಾ ರಂಗದ ಸೂಪರ್ ಹಿಟ್ ಸಿನಿಮಾಗಳ ಸಾಲಿನಲ್ಲಿ ಸೇರಿಕೊಂಡಿದ್ದು ಇನ್ನು ಎಷ್ಟೇ ಪೊಲೀಸ್ ಸ್ಟೋರಿ ಕುರಿತಾದ ಸಿನಿಮಾಗಳು ಮೂಡಿಬಂದರೂ ಕೂಡ ಸಾಂಗ್ಲಿಯನ ಸಿನಿಮಾಗೆ ಇರುವ ಕ್ರೇಜ್ ಕಡಿಮೆ ಆಗುವುದಿಲ್ಲ. ಅದಕ್ಕೆ ಕಾರಣಕರ್ತರಾದವರಲ್ಲಿ ಶಂಕರ್ ನಾಗ್ ಕೂಡ ಕ್ರೆಡಿಟ್ ಸಲ್ಲುತ್ತದೆ. ನಿಮ್ಮ ಪ್ರಕಾರ ಸಾಂಗ್ಲಿಯಾನ ಸಿನಿಮಾದಲ್ಲಿ ಯಾರು ನಟಿಸಬೇಕಿತ್ತು ಅಂಬರೀಶ್ ಅಥವಾ ಶಂಕರ್ ನಾಗ್ ತಪ್ಪದೆ ಕಾಮೆಂಟ್ ಮಾಡಿ.

ಸಾಲು ಸಾಲು ವಿವಾದಗಳಿದ್ರೂ, ಕಾಂಟ್ರವರ್ಸಿ ಮಾಡಿಕೊಂಡ್ರು ದರ್ಶನ್ ಗೆ ಇರುವ ಫ್ಯಾನ್ ಫಾಲೋವರ್ಸ್ ಮಾತ್ರ ಕಡಿಮೆಯಾಗುವುದಿಲ್ಲ ಯಾಕೆ ಗೊತ್ತ.?

ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟರ ಸಾಲಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ದರ್ಶನ್ ತಂದೆ ಮೇರು ನಟರಾಗಿದ್ದರು ಕೂಡ ದರ್ಶನ್ಗೆ ಸಿನಿಮಾದಲ್ಲಿ ಅವಕಾಶ ನೀಡುವುದಕ್ಕೆ ಹಿಂದೆ ಮುಂದು ನೋಡುತ್ತಾರೆ. ಲೈಟ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡ ದರ್ಶನ್ ಇಂದು ಬಾಕ್ಸ್ ಆಫೀಸ್ ಸುಲ್ತಾನ ಎಂಬ ಬಿರುದನ್ನು ಗಳಿಸಿಕೊಂಡಿದ್ದರೆ.

ಈ ಮಟ್ಟಕ್ಕೆ ಬೆಳೆಯುವುದಕ್ಕೆ ದರ್ಶನ್ ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದು ಅವರಿಗೆ ಮಾತ್ರ ತಿಳಿದಿದೆ ಇನ್ನು ಚಿತ್ರರಂಗಕ್ಕೆ ಕಾಲಿಟ್ಟ ಹೊಸದರಲ್ಲಿ ಯಾವುದೇ ಕಂಟ್ರವರ್ಸಿ ಹಾಗೂ ಯಾವುದೇ ವಿವಾದಗಳಿಗೆ ಸಿಲುಕದ ನಟ ದರ್ಶನ್ ಇತ್ತೀಚಿನ ದಿನದಲ್ಲಿ ಚಿಕ್ಕ ಪುಟ್ಟ ವಿಚಾರಕ್ಕೂ ಕೂಡ ಹೆಚ್ಚು ಕಾಂಟ್ರವರ್ಸಿ ಯಾಗುತ್ತಾರೆ. ದರ್ಶನ್ ಜೀವನದಲ್ಲಿ ಇಷ್ಟೆಲ್ಲಾ ಕಾಂಟ್ರವರ್ಸಿ ವಿವಾದಗಳಿದ್ದರೂ ಕೂಡ ಅವರಿಗೆ ಇರುವಂತಹ ಫ್ಯಾನ್ ಫಾಲೋ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಹೌದು ದಿನದಿಂದ ದಿನಕ್ಕೆ ತಮ್ಮ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡೆ ಹೋಗುತ್ತಿದ್ದರೆ ಇದಕ್ಕೆ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ. ಮೊದಲಿಗೆ ಡೋಂಟ್ ಕೇರ್ ಆಟಿಟ್ಯೂಡ್ ದರ್ಶನ್ ಅವರು ಯಾರಿಗೂ ಕೂಡ ಕೇರ್ ಮಾಡುವುದಿಲ್ಲ ತವಾಯಿತು ತಮ್ಮ ಕೆಲಸವಾಯಿತು ಎಂದಷ್ಟೇ ಇರುತ್ತಾರೆ. ಸ್ನೇಹ ಅಂತ ಬಂದರೆ ಅವರಿಗೆ ಪ್ರಾಣ ಕೊಡುವುದಕ್ಕೂ ಕೂಡ ಸಿದ್ಧ ಇರುತ್ತಾರೆ ಆದರೆ ಒಂದು ಬಾರಿ ನಂಬಿಕೆ ದ್ರೋಹವಾದರೆ ಅವರಿಂದ ಕಂಪ್ಲೀಟ್ ದೂರ ಉಳಿಯುತ್ತಾರೆ.

ಇದು ಇವರ ಮೊದಲನೇ ಅಂಶ ಇನ್ನು ಎರಡನೇದಾಗಿ ದರ್ಶನ್ ಅವರ ಫಿಟ್ನೆಸ್ ಅಂತಾನೆ ಹೇಳಬಹುದು ಆರು ಅಡಿ ಮೂರು ಇಂಚು ಎತ್ತರ ಇರುವ ದರ್ಶನ್ ಎಲ್ಲಾ ಪಾತ್ರಕ್ಕೂ ಕೂಡ ಸೂಟ್ ಆಗುತ್ತಾರೆ. ಫೈಟಿಂಗ್ ಇರಲಿ ಅಥವಾ ಡೈಲಾಗ್ ಡೆಲವರಿ ಇರಬಹುದು ಎಲ್ಲದರಲ್ಲೂ ಕೂಡ ನಿಸ್ಸಿಮರು ಈ ಅಜಾನುಬಾಹು ದೇಹಕ್ಕೆ ಮಾರು ಹೋಗದವರೇ ಇಲ್ಲ ಈ ಕಾರಣಕ್ಕಾಗಿಯೇ ದರ್ಶನ್ ಅವರ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗುತ್ತದೆ.

ಇದು ಎರಡನೇ ಅಂಶ ಮೂರನೆಯದಾಗಿ ಸ್ನೇಹಕ್ಕೆ ತಲೆಬಾಗುವ ಗುಣ ದರ್ಶನ್ ಅವರಿಗೆ ಹೊಸಬರನ್ನು ಚಿತ್ರರಂಗಕ್ಕೆ ಕರೆತರಬೇಕು ಅವರಿಗೆ ಅವಕಾಶವನ್ನು ನೀಡಬೇಕು ಎಂಬ ಆಸೆ ಕನಸು ಇದೆ. ಈ ಕಾರಣಕ್ಕಾಗಿ ತಮ್ಮ ಬ್ಯಾನರ್ ನಲ್ಲಿ ಹೊಸ ಹೊಸ ಕಲಾವಿದರಿಗೆ ಹೆಚ್ಚು ಚಾನ್ಸ್ ಅನ್ನು ನೀಡುತ್ತಾರೆ. ನಿಜ ಹೇಳಬೇಕೆಂದರೆ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ ರಚಿತಾ ರಾಮ್ ಹೀಗೆ ಸಾಲು ಸಾಲು ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿ ಕೊಟ್ಟು ಅವರಿಗೆ ಬದುಕನ್ನು ಕೊಟ್ಟಿ ಕೊಟ್ಟಿದ್ದಾರೆ.

ನಾಲ್ಕನೆಯದಾಗಿ ಕಷ್ಟ ಅಂದವರ ಕೈ ಹಿಡಿಯುವುದು ಹೌದು ನಟ ಆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಬಾಗಿಲಿಗೆ ಯಾರೇ ಹೋದರು ಕೂಡ ಅವರು ಬರಿಗೈನಲ್ಲಿ ಬಂದ ಇತಿಹಾಸವೇ ಇಲ್ಲ. ಪ್ರತಿನಿತ್ಯವೂ ಕೂಡ ನೂರಾರು ಜನ ದರ್ಶನ್ ಅವರ ಮನೆ ಬಾಗಿಲಿಗೆ ಸಹಾಯವನ್ನು ಕೋರಿ ಹೋಗುತ್ತಾರೆ. ಇವರ ಮನೆಗೆ ಹೋದಂತಹ ಎಲ್ಲರಿಗೂ ಕೂಡ ದರ್ಶನ್ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ ಈ ಒಂದು ಸಹನ ಗುಣದಿಂದಲೇ ದರ್ಶನ್ ಅವರಿಗೆ ಹೆಚ್ಚು ಫ್ಯಾನ್ಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.

ಐದನೆಯದಾಗಿ ಮತ್ತು ಕೊನೆಯದಾಗಿ ದರ್ಶನ್ ಅವರನ್ನು ಕಲಿಯುಗದ ಕರ್ಣ ಅಂಬರೀಶ್ ಅವರಿಗೆ ಹೋಲಿಕೆ ಮಾಡುತ್ತಾರೆ ಏಕೆಂದರೆ ಅಂಬರೀಶ್ ಅವರ ವ್ಯಕ್ತಿತ್ವವನ್ನು ದರ್ಶನ್ ಅವರು ಕೂಡ ಮೈಗೂಡಿಸಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಂಬರೀಶ್ ಅವರ ಮಾತು ಒರಟಾಗಿರುತ್ತದೆ ಆದರೆ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶ ಇರುವುದಿಲ್ಲ ಯಾವುದೇ ವಿಚಾರ ಇದ್ದರೂ ಕೂಡ ಮುಖಕ್ಕೆ ಹೊಡೆದ ಹಾಗೆ ನೇರವಾಗಿ ಹೇಳಿ ಬಿಡುತ್ತಾರೆ ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಯಾರೇ ಸಹಾಯ ಕೇಳಿದರು ಕೂಡ ಅಂಬರೀಶ್ ಮಾಡುತ್ತಿದ್ದರು.

ಇದೇ ಗುಣವನ್ನು ದರ್ಶನ್ ಕೂಡ ಮೈಗೂಡಿಸಿಕೊಂಡಿದ್ದಾರೆ ಹಾಗಾಗಿ ಅಂಬರೀಶ್ ಅಭಿಮಾನಿಗಳು ಕೂಡ ಇದೀಗ ದರ್ಶನ್ ಅವರಿಗೆ ಸಪೋರ್ಟ್ ಮಾಡುತ್ತಾರೆ. ಈ ಎಲ್ಲಾ ಕಾರಣಗಳಿಂದಲೇ ದರ್ಶನ್ ಅವರು ಯಾವುದೇ ವಿವಾದಕ್ಕೆ ಸಿಲುಕಿಕೊಂಡರು ಏನೇ ಕಾಂಟ್ರವರ್ಸಿ ಮಾಡಿಕೊಂಡಿರುವ ಕೂಡ ತಮ್ಮ ಅಭಿಮಾನಿಗಳು ಅವರ ಕೈ ಬಿಡುವುದಿಲ್ಲ. ಇನ್ನು ಜನವರಿ 26ನೇ ತಾರೀಕು ದರ್ಶನ್ ಅಭಿನಯದ ಬಹು ನಿರೀಕ್ಷಿತ ಕ್ರಾಂತಿ ಸಿನಿಮಾ ಬಿಡುಗಡೆಯಾಗಲಿದ್ದು ಈ ಸಿನಿಮಾದ ಪ್ರಚಾರ ಕಾರ್ಯಕ್ರಮವನ್ನು ಅಭಿಮಾನಿಗಳೇ ಮಾಡುತ್ತಿರುವುದು ನಿಜಕ್ಕೂ ವಿಶೇಷ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ‌.

ಎಂಗೇಜ್ಮೆಂಟ್ ಆದ ಖುಷಿಯಲ್ಲಿ ಮನೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ ನಟಿ ಹರಿಪ್ರಿಯ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಮಸ್ತ್ ಆಗಿದೆ.

Haripriya Dance

ನಟಿ ಹರಿಪ್ರಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೀರ್ ದೋಸೆ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ ನಟಿ ಕನ್ನಡದಲ್ಲಿ ಈವರೆಗೂ ಸುಮಾರು ಮೂವತ್ತಕ್ಕೂ ಅಧಿಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಸದ್ಯಕ್ಕೆ ನಟಿ ಹರಿಪ್ರಿಯ ಅವರು ಸುದ್ದಿ ಆಗಿರುವುದು ವಸಿಷ್ಟ ಸಿಂಹ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವುದರ ಮೂಲಕ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಂಚಿನ ಕಂಠವನ್ನು ಹೊಂದಿರುವ ನಟ ವಸಿಷ್ಠ ಸಿಂಹ ಅದ್ಭುತವಾದಂತಹ ಧ್ವನಿ ಇಂದಲೇ ಎಲ್ಲರ ಗಮನವನ್ನು ಸೆಳೆದಿದ್ದರೆ. ಈ ಜೋಡಿಗಳು ಕಳೆದ ಮೂರು ವರ್ಷಗಳಿಂದಲೂ ಕೂಡ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದರು ಆದರೆ ತಾವು ಪ್ರೀತಿಸುತ್ತಿರುವ ವಿಚಾರವನ್ನು ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ಕಳೆದ ವಾರವಷ್ಟೇ ದುಬೈ ಪ್ರವಾಸಕ್ಕೆ ಹೋಗಿ ಬಂದ ನಂತರ ಇವರಿಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಸಣ್ಣದಾಗಿ ರಿವಿಲ್ ಆಗಿತ್ತು.

ಏಕೆಂದರೆ ನಟಿ ಹರಿಪ್ರಿಯ ಮತ್ತು ನಟ ವಸಿಷ್ಠ ಸಿಂಹ ಇಬ್ಬರೂ ಕೂಡ ದುಬೈನ ಏರ್ಪೋರ್ಟ್ ನಲ್ಲಿ ಕೈ ಕೈ ಹಿಡಿದು ತಿರುಗಾಡುತ್ತಿದ್ದರು ಇವೆಲ್ಲವನ್ನು ನೋಡಿದಂತಹ ಅಭಿಮಾನಿಗಳು ಇಬ್ಬರು ಕೂಡ ಪ್ರೀತಿಸುತ್ತಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದರು. ಆದರೆ ಇದಕ್ಕೆ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನು ಹರಿಪ್ರಿಯ ಮತ್ತು ವಸಿಷ್ಠ ಸಿಂಹ ನೀಡಲಿಲ್ಲ ಈ ವಿಚಾರ ತಣ್ಣಗಾಗುತ್ತಿದ್ದ ಹಾಗೆಯೇ ಮತ್ತೊಂದು ವಿಚಾರ ರಿವೀಲ್ ಆಯ್ತು.

ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಇಬ್ಬರು ಕೂಡ ಮನೆಯಲ್ಲಿಯೇ ಸರಳವಾಗಿ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅಂತ. ಇನ್ನು ನಟಿ ಹರಿಪ್ರಿಯಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರವನ್ನು ಸ್ವತಃ ಅವರೇ ಸಣ್ಣದೊಂದು ಕ್ಲೂ ಕೊಡುವ ಮೂಲಕ ರಿಯಲ್ ಮಾಡಿದರು. ಹೌದು ಕಳೆದ 15 ದಿನದ ಹಿಂದೆಯಷ್ಟೇ ಹರಿಪ್ರಿಯ ಅವರು ಮೂಗು ಚುಚ್ಚಿಸಿಕೊಳ್ಳುವಂತಹ ಶಾಸ್ತ್ರವನ್ನು ಮಾಡಿಸಿಕೊಂಡಿದ್ದರು.

ಇದನ್ನು ನೋಡಿ ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತಪಡಿಸಿದರು ಏಕೆಂದರೆ ಇದು ಸಿನಿಮಾಗಾಗಿ ಮಾಡಿದಂತಹ ವಿಡಿಯೋ ಏನಲ್ಲ ಬದಲಾಗಿ ಹರಿಪ್ರಿಯಾ ಅವರೇ ಸ್ವತಃ ಮೂಗು ಚುಚ್ಚಿಸಿಕೊಳ್ಳುತ್ತಿದ್ದರು. ಇದು ನಿಜವಾದ ವಿಡಿಯೋವಾಗಿದೆ ಇನ್ನೂ ಹರಿಪ್ರಿಯಾ ಪಕ್ಕದಲ್ಲಿ ಇರುವವರು ನಿಂತುಕೊಂಡು ಹರಿಪ್ರಿಯಾ ಅವರನ್ನು ಸಂತೈಸುವಂತಹ ವಿಡಿಯೋ ವೈರಲ್ ಆಗಿತ್ತು.

ಆದರೆ ಈ ವಿಡಿಯೋದಲ್ಲಿ ಇರುವಂತಹ ವ್ಯಕ್ತಿ ಯಾರು ಎಂಬುದು ಮಾತ್ರ ತಿಳಿದಿರಲಿಲ್ಲ ಆದರೆ ಕಳೆದ ವಾರ ದುಬೈಗೆ ಹೋಗಿ ಬಂದ ನಂತರ ಹಾಗೂ ನಿಶ್ಚಿತಾರ್ಥವಾಗಿರುವಂತಹ ಫೋಟೋಸ್ಗಳನ್ನು ನೋಡಿದಂತಹ ಅಭಿಮಾನಿಗಳು ಮೂಗು ಚುಚ್ಚಿಸುವಂತಹ ಕಾರ್ಯವನ್ನು ಕೂಡ ವಸಿಷ್ಠ ಸಿಂಹ ಅವರೇ ಮಾಡಿಸಿದ್ದಾರೆ ಎಂದು ತಿಳಿದರು. ಅದೇನೇ ಆಗಲೀ ಸದ್ಯ ಕಂತು ವಸಿಷ್ಟ ಸಿಂಹ ಅಭಿಮಾನಿಗಳು ಮತ್ತು ಹರಿಪ್ರಿಯ ಅಭಿಮಾನಿಗಳು ಈ ಜೋಡಿ ಒಂದಾಗುತ್ತಿರುವಂತಹ ವಿಚಾರವನ್ನು ಕೇಳಿ ಹರುಷವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಹರಿಪ್ರಿಯಾ ಅವರು ಕೂಡ ತಮ್ಮ ನೆಚ್ಚಿನ ಹುಡುಗನನ್ನು ಕೈ ಹಿಡಿಯುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ನಟಿ ಹರಿಪ್ರಿಯಾ ಅವರು ಕೂಡ ತಮ್ಮ ಮನೆಯಲ್ಲಿಯೇ ರೆಡ್ ಕಲರ್ ಸಾರಿ ಒಂದನ್ನು ಧರಿಸಿ ತಮ್ಮ ನೆಚ್ಚಿನ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ. ಈ ವಿಡಿಯೋ ದಲ್ಲಿ ವೈರಲ್ ಆಗಿದ್ದು ಇದನ್ನು ನೋಡಿದಂತಹ ಅಭಿಮಾನಿಗಳು ನಿಶ್ಚಿತಾರ್ಥ ಆದ ಬೆನ್ನಲ್ಲೇ ಹೊಸ ಡಾನ್ಸ್ ವಿಡಿಯೋವನ್ನು ರಿವೀಲ್ ಮಾಡಿದ್ದಾರೆ.

ವಸಿಷ್ಠ ಸಿಂಹ ಅವರನ್ನು ವರಿಸಿದ ಕಾರಣವೇ ನಟಿ ಹರಿಪ್ರಿಯ ಅವರು ಇಷ್ಟು ಖುಷಿಯಾಗಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ.

ಲೀಲಾವತಿ ವಿನೋದ್ ನಿಮ್ಮ ಮಗ ಅಂತ ಅಂದಾಗ ಅಣ್ಣಾವ್ರು ಹೇಳಿದ್ದೇನು ಗೊತ್ತ.? ದಶಕಗಳ ಅನುಮಾನಕ್ಕೆ ಕೊನೆಗೂ ಸಿಕ್ತು ಉತ್ತರ.

0

ರಾಜ್ ಲೀಲಾ ಸಂಬಂಧ

ಕನ್ನಡ ಚಲನಚಿತ್ರರಂಗದ ಮೇರುನಟ ಡಾಕ್ಟರ್ ರಾಜಕುಮಾರ್ ಅವರು ಕರ್ನಾಟಕ ಕಂಡ ಬಂಗಾರದ ಮನುಷ್ಯ. ಬಹುಷಃ ಬೇರೆ ಯಾವ ಒಬ್ಬ ನಟನು ಸಹ ಈ ರೀತಿ ಪ್ರೇಕ್ಷಕರ ಮನಸ್ಸನ್ನು ಮುಟ್ಟುವ ರೀತಿ ಅವರ ಮನ ಪರಿವರ್ತನೆ ಮಾಡುವ ರೀತಿ ಒಬ್ಬ ಹೀರೋವನ್ನು ಆದರ್ಶವಾಗಿ ತೆಗೆದುಕೊಳ್ಳುವ ರೀತಿ ಬದುಕಲಿಲ್ಲವೇನೋ ಎನಿಸುತ್ತದೆ.

ಅಷ್ಟರ ಮಟ್ಟಿಗೆ ಡಾಕ್ಟರ್ ರಾಜಕುಮಾರ್ ಅವರು ಕನ್ನಡಿಗರ ಮನ ಗೆದ್ದಿದ್ದರು ಹಾಗೂ ರಾಜಕುಮಾರ್ ಅವರನ್ನು ಅನೇಕ ಅಭಿಮಾನಿಗಳು ಹಿಂಬಾಲಿಸುತ್ತಿದ್ದರು. ಆದರೆ ಇಂತಹ ರಾಜಕುಮಾರ ಅವರ ಸುಂದರವಾದ ವ್ಯಕ್ತಿತ್ವದ ಮೇಲೂ ಇಂತಹ ಬಂಗಾರದ ಮನುಷ್ಯನ ಮೇಲೂ ಕೂಡ ಅಪವಾದ ಒಂದು ಇರುವುದು ಇಡೀ ಕರ್ನಾಟಕಕ್ಕೆ ಗೊತ್ತಿರುವ ವಿಷಯ.

ವಿನೋದ್ ರಾಜಕುಮಾರ್ ಅವರು ರಾಜಕುಮಾರ್ ಅವರ ಮಗನೇ ಅಲ್ಲವೇ ಎನ್ನುವುದು ಇಡೀ ಕರ್ನಾಟಕಕ್ಕೆ ಬಿಡಿಸಲಾಗದ ಒಗಟಾಗಿದೆ‌ ಈ ಬಗ್ಗೆ ಸ್ಪಷ್ಟಣೆ ಕೊಟ್ಟು ವಿವಾದ ಮುಗಿಸಬೇಕಾದವರಲ್ಲಿ ರಾಜಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲ, ಆದರೆ ಲೀಲಾವತಿ ಅವರು ಯಾವುದಕ್ಕೂ ಸ್ಪಷ್ಟನೆ ನೀಡದೆ ಇರುವ ವಿವಾದವನ್ನೇ ನಿಜ ಮಾಡಲು ಹೊರಟಿದ್ದು ಅದಕ್ಕೆ ಕಥೆ ಕಟ್ಟುತ್ತಿದ್ದಾರೆ ಆದರೆ ಕರ್ನಾಟಕದ ಜನತೆ ಅದನ್ನು ನಂಬಲು ಪೂರ್ತಿ ಮನಸ್ಸಿಂದ ಸಿದ್ಧರಿಲ್ಲ.

ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ರವಿ ಬೆಳಗೆರೆ ಅವರು ರಾಜ್ ಲಿಲಾ ವಿನೋದ ಪುಸ್ತಕ ಬರೆದಿದ್ದರು, ಹಾಯ್ ಬೆಂಗಳೂರು ಪತ್ರಿಕೆಯಲ್ಲೂ ಕೂಡ ಇದರ ಕುರಿತು ಹಲವು ದಿನಗಳವರೆಗೆ ಸುದ್ದಿ ಆಗಿತ್ತು. ಈ ಬಗ್ಗೆ ರಾಜಕುಮಾರ್ ಅವರ ಆಪ್ತ ಬಳಗದಲ್ಲೇ ಆಗಲಿ ಕುಟುಂಬದವರು ಆಗಲಿ ಸ್ಪಷ್ಟ ನೀಡದೇ ಇದ್ದರೂ ಪ್ರಕಾಶ್ ರಾಜ್ ಮೆಹು ಎನ್ನುವ ಬರಹಗಾರರೊಬ್ಬರು ರಾಜಕುಮಾರ್ ಅವರಿಗೆ ಬಹಳ ಆತ್ಮೀಯರಾಗಿದ್ದು, ಸ್ನೇಹಿತನಂತೆ ಅವರೊಂದಿಗೆ ಇದ್ದವರು.

ಅವರು ಸಹ ಸ್ವತಃ ಬರಕಾರ ಬರಹಗಾರರೇ ಆಗಿದ್ದು ಅಂತರಂಗದಲ್ಲಿ ಅಣ್ಣ ಎನ್ನುವ ಪುಸ್ತಕ ಒಂದನ್ನು ಬರೆದಿದ್ದಾರೆ. ಈ ಪುಸ್ತಕದ ಸಂದರ್ಶನ ಒಂದರಲ್ಲಿ ವಿಷಯಗಳನ್ನು ವಿವರಿಸುವಾಗ ಡಾಕ್ಟರ್ ರಾಜಕುಮಾರ್ ಅವರು ಹೊರಗೆ ಹೇಗೆ ಒಬ್ಬ ನಾಯಕ ನಟನಾಗಿ ಸಿನಿಮಾ ಮೇಲೆ ಆದರ್ಶಮಯವಾಗಿ ಕಾಣಿಸಿಕೊಳ್ಳುತ್ತಿದ್ದರು ಅಷ್ಟು ಮಾತ್ರ ಅಲ್ಲದೆ ಅಂತರಂಗದಿಂದಲೂ ಕೂಡ ಅಂದರೆ ನಿಜ ಜೀವನದಲ್ಲೂ ಕೂಡ ಅವರ ವ್ಯಕ್ತಿತ್ವ ಹಾಗೂ ಗುಣ ನಡತೆ ಮಾತುಕತೆ ಹೀಗಿತ್ತು ಎನ್ನುವುದನ್ನು ಹತ್ತಿರದ ಕಂಡು ಬರೆದಿದ್ದಾರೆ.

ನುಡಿದಂತೆ ನಡೆದ ಹೇಳಿದಂತಹ ಬದುಕಿದ ವಿಶೇಷ ವ್ಯಕ್ತಿದವರ ಡಾಕ್ಟರ್ ರಾಜಕುಮಾರ್ ಅವರು. ಅವರ ವ್ಯಕ್ತಿತ್ವಕ್ಕೆ ಅವರೇ ಸಾಟಿ ಈ ಬಗ್ಗೆ ಅನೇಕರಿಗೆ ತಿಳಿದಿದೆ. ಪ್ರಕಾಶ್ ರಾಜ್ ಮೇಹು ಅವರು ಸಹ ಅಣ್ಣಾವ್ರ ಜೊತೆ ಅತಿ ಸಲಿಗೆ ಹೊಂದಿದ್ದು ಸಂದರ್ಭ ಒಂದು ಸಿಕ್ಕಾಗ ಈ ಪ್ರಶ್ನೆಯನ್ನು ಕೇಳಯೇ ಬಿಟ್ಟರಂತೆ. ಲೀಲಾವತಿಯವರು ಎಲ್ಲಾ ಕಡೆ ನಿಮ್ಮ ಮಗ ವಿನೋದ್ ಎಂದು ಹೇಳಿಕೊಂಡು ಬರುತ್ತಿದ್ದಾರೆ ಇದು ನಿಜವೇ ಎಂದದಕ್ಕೆ ಅಣ್ಣಾವ್ರು ಕೊಟ್ಟ ಉತ್ತರ ಕೇಳಿ ಅಂದು ಅವರು ಶಾ-ಕ್ ಆಗಿದ್ದರು‌

ಇಂದು ಇದನ್ನು ಓದುತ್ತಿರುವ ನಮಗೂ ಸಹ ಹಾಗೆ ಆಗುತ್ತದೆ ಅಣ್ಣಾವ್ರು ಅಂದು ಹೇಳಿದ ಮಾತು ಏನೆಂದರೆ ಮನುಷ್ಯನಾದ ಎಲ್ಲರೂ ಕೂಡ ತಪ್ಪು ಮಾಡುತ್ತಾರೆ ಆದರೆ ವಿನೋದ್ ರಾಜಕುಮಾರ್ ಅವರು ಹುಟ್ಟುವ 3-4 ವರ್ಷಗಳ ಹಿಂದೆ ನಮ್ಮ ಸಂಬಂಧ ಕಡಿದು ಹೋಗಿತ್ತು ನನ್ನ ಹೆಸರು ಹೇಳಿಕೊಂಡು ಹೋಗುವುದರಿಂದ ಆಕೆಗೂ ಆ ಮಗುವಿಗೂ ಒಳ್ಳೆಯದಾಗುತ್ತದೆ ಎಂದರೆ ಆಗಲಿ ಬಿಡು ಎಂದಿದ್ದರಂತೆ.

ಮತ್ತು ಅಣ್ಣಾವ್ರ ಕಾಲದ ಆ ದಿನಗಳ ಅನೇಕ ಕಲಾವಿದರು ಹೇಳುತ್ತಾರೆ ವಿನೋದ್ ರಾಜಕುಮಾರ್ ಅವರು ಮಹಾಲಿಂಗ ಭಾಗವತ್ ಅವರ ಮಗ ಎಂದು ಸ್ವತಃ ಭಕ್ತ ಕುಂಬಾರ ಸಿನಿಮಾದ ಶೂಟಿಂಗ್ ವೇಳೆಗೆ ಆ ಪುಟ್ಟ ಮಗುವನ್ನು ಭಾಗವತರ್ ಅವರು ಶೂಟಿಂಗ್ ಸೆಟ್ಟಿಗೆ ಹೊತ್ತುಕೊಂಡು ಬರುತ್ತಿದ್ದರಂತೆ ಈ ಬಗ್ಗೆ ಬಾಲಕೃಷ್ಣ ಅವರ ಸೇರಿದಂತೆ ಅನೇಕರಿಗೆ ಗೊತ್ತಿತ್ತು. ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾ ರಿಲೀಸ್ ಆಗುವವರೆಗೆ ಎಲ್ಲೂ ಸಹ ಈ ಬಗ್ಗೆ ವಿವಾದವೇ ಇರಲಿಲ್ಲ.

ಆ ಸಿನಿಮಾಗೆ ಸಂಬಂಧಪಟ್ಟವರು ಸಿನಿಮಾದ ಪ್ರಚಾರ ಮಾಡುವ ಸಲುವಾಗಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದರು ಎಂದು ಆನೇಕರು ಮಾತನಾಡುತ್ತಿದ್ದಾರೆ. ಅಲ್ಲದೆ ಲೀಲಾವತಿ ಅವರು ಕೊಡುತ್ತಿರುವ ಮಾಹಿತಿಗಳ ಪ್ರಕಾರ ಅವರು ಹೇಳಿದ ವರ್ಷಗಳಿಗೂ ವಿನೋದ್ ರಾಜಕುಮಾರ್ ಅವರು ಹುಟ್ಟಿದ ವರ್ಷಗಳಿಗೂ ತಾಳೆ ಆಗದೇ ಇರುವುದರಿಂದ ಇದೊಂದು ಕಟ್ಟುಕಥೆ ಎಂದು ಅಣ್ಣಾವ್ರ ಅಭಿಮಾನಿಗಳು ಭಾವಿಸಿದ್ದಾರೆ.

ಬಿಗ್ ಬಾಸ್ ಮನೇಲಿ ಲೇಡಿ ಕಾಸ್ಟ್ಯೂಮ್ ಹಾಕಿ ಬೆಲ್ಲಿ ಡ್ಯಾನ್ಸ್ ಮಾಡಿದ ಪ್ರಶಾಂತ್ ಸಂಬರ್ಗಿ, ವಿಡಿಯೋ ನೋಡಿ.

0

ಬಿಗ್ ಬಾಸ್ ಮನೇಲಿ ಬೆಲ್ಲಿ ಡ್ಯಾನ್ಸ್ ಮಾಡಿದ ಪ್ರಶಾಂತ್

ಕನ್ನಡ ಬಿಗ್ ಬಾಸ್ ಸೀಸನ್ 9 ಯಶಸ್ವಿಯಾಗಿ ಪ್ರಸಾರವಾಗುತ್ತಿದ್ದು, ಕಿರುತೆರೆ ಪ್ರೇಕ್ಷಕರು ಶೋವನ್ನು ಇಷ್ಟ ಪಟ್ಟು ನೋಡುತ್ತಿದ್ದಾರೆ. ಸದ್ಯಕ್ಕೆ ಮನೋರಂಜನೆಯನ್ನು ನೀಡುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ಶೆಟ್ಟಿಯವರು ಬೆಲ್ಲಿ ಡಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಹೌದು ಅನುಪಮಾ ಗೌಡರವರಿಗೆ ಬಿಗ್ ಬಾಸ್ ಟಾಸ್ಕ್ ನೀಡಿದ್ದು.

ಪ್ರತಿ ಬಾರಿಯೂ ನೀರು ಕುಡಿಯುವ ಪುರುಷ ಸದಸ್ಯನಿಗೆ ನೃತ್ಯ ಕಲಿಸಿಕೊಡಬೇಕು ಎಂದು ಆದೇಶ ನೀಡಲಾಗಿದೆ. ಬಿಗ್ ಬಾಸ್ ಆದೇಶದಂತೆ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ಶೆಟ್ಟಿಯವರಿಗೆ ನೃತ್ಯ ಕಲಿಸಿಕೊಡುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರಶಾಂತ್ ಸಂಬರ್ಗಿ ಹುಡುಗಿಯರ ಬಟ್ಟೆ ತೊಟ್ಟು ಗಮನ ಸೆಳೆದಿದ್ದಾರೆ.

ಬಿಗ್ ಬಾಸ್ ಪುರುಷ ಸ್ಪರ್ಧಿಗಳಾದ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ಗುರೂಜಿ ಬೆಲ್ಲಿ ಡಾನ್ಸ್ ಮಾಡಲು ಕಷ್ಟ ಪಟ್ಟಿದ್ದಾರೆ. ಸದ್ಯ ಈ Video ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ದಿನ ಕಳೆದಂತೆ ಟಫ್‌ ಕಾಂಪಿಟೇಶನ್‌ ಆಗುತ್ತಿದೆ.

ಇದೀಗ ಬಿಗ್ ಬಾಸ್ ಮನೆಯಿಂದ ಕಾವ್ಯಶ್ರೀ ಗೌಡ ಔಟ್‌ ಆಗಿದ್ದಾರೆ. ಹೌದು, ಮಂಗಳ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ 17ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದರು. ಚನ್ನಪಟ್ಟಣ ಊರಿನವರಾದ ಇವರು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಮನೆಯೇ ಮಂತ್ರಾಲಯ ಧಾರಾವಾಹಿ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು.

ಪ್ರಾರಂಭದಲ್ಲಿಯೇ ಕಾವ್ಯಶ್ರೀ ಗೌಡ ಅವರ ಹೆಸರು ರೂಪೇಶ್‌ ಶೆಟ್ಟಿ ಅವರ ಜತೆ ತುಳಕು ಹಾಕಿಕೊಂಡಿತ್ತು. ಅಂದ ಹಾಗೆ, ಎಲಿಮಿನೇಟ್‌ ಆದ ಎರಡು ವಾರಗಳ ಹಿಂದೆ ವಿನೋದ್‌ ಗೊಬ್ಬರಗಾಲ ಅವರು ಕಾವ್ಯಶ್ರೀ ಅವರನ್ನು ಎಲಿಮಿನೇಷನ್‌ನಿಂದ ಪಾರು ಮಾಡಿದ್ದರು. ಸಾನ್ಯ ಅಯ್ಯರ್, ವಿನೋದ್ ಗೊಬ್ಬರಗಾಲ, ಎಲಿಮಿನೇಷನ್ ನಂತರ ಇದೀಗ ಕಾವ್ಯಶ್ರೀ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.

ಹೌದು ಕಾವ್ಯಶ್ರೀ ಅವರ ಬಿಗ್ ಬಾಸ್ ಆಟ ಕೊನೆಯಾಗಿದೆ‌. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಬಿಗ್ ಬಾಸ್ ಸೀಸನ್ 9 ವಿನ್ನರ್ ಪಟ್ಟ ಯಾರ ಮುಡಿಗೇರಲಿದೆ ಎನ್ನುವ ಕುತೂಹಲ ಪ್ರೇಕ್ಷಕ ವರ್ಗಕ್ಕೆ ಇದೆ.

 

ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಟ ಸಿಂಹ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ಯಾಕೆ ಗೊತ್ತಾ.? ಈ ವಿಚಾರ ತಿಳಿದ್ರೆ ನಿಜಕ್ಕೂ ಶಾ-ಕ್ ಆಗಬಹುದು ಆದ್ರೂ ಕೂಡ ಇದು ಸತ್ಯ.

0

ಹರಿಪ್ರಿಯಾ ವಶಿಷ್ಠ ಸಿಂಹ

 

ನಮ್ಮ ಚಂದನವನದಲ್ಲಿ ಸಾಕಷ್ಟು ನಟ ನಟಿಯರು ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿರುವ ವಿಚಾರ ನಿಮಗೆ ತಿಳಿದೇ ಇದೆ ದರ್ಶನ್, ಸುದೀಪ್, ಗಣೇಶ್, ಉಪೇಂದ್ರ, ಯಶ್ ರಾಧಿಕಾ ಪಂಡಿತ್ ಹೀಗೆ ಸಾಲು ಸಾಲು ನಟ ನಟಿಯರು ತಾವು ಜೊತೆಯಲ್ಲಿ ಸಿನಿಮಾ ಮಾಡಿರುವಂತಹ ನಟ ನಟಿಯರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ಅದೇ ಸಾಲಿಗೆ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಟ ಸಿಂಹ ಅವರು ಕೂಡ ಸೇರ್ಪಡೆಯಾಗುತ್ತಿದ್ದಾರೆ‌.

ನೀರ್ ದೋಸೆ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಖ್ಯಾತಿಯನ್ನು ಗಳಿಸಿದಂತಹ ಹರಿಪ್ರಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳುನಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಇಲ್ಲಿಯವರೆಗೂ ನಟಿ ಹರಿ ಪ್ರಿಯ ಅವರು ಸುಮಾರು ಮೂವತ್ತಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

ಚಿಕ್ಕದೊಂದು ಕಾಂಟ್ರವರ್ಸಿಯಲ್ಲಿ ಸಿಲುಕಿಕೊಂಡಿಲ್ಲ ತಾವಾಯಿತು ತಮ್ಮ ಸಿನಿಮಾ ಕೆಲಸವಾಯಿತು ಎಂದಷ್ಟೇ ಜೀವನ ಸಾಗಿಸುತ್ತಿದ್ದಾರೆ ನಟಿ ಹರಿಪ್ರಿಯಾ ಅವರ ಬಗ್ಗೆ ಇಲ್ಲಿಯೂ ಕೂಡ ಎಲ್ಲಿಯೂ ಒಂದು ಅಪಸ್ವರವು ಕೇಳಿ ಬಂದಿಲ್ಲ. ಆದರೆ ಇದೀಗ ಇದಕ್ಕಿದ್ದ ಹಾಗೆ ಕಳೆದ ಎರಡು ದಿನಗಳ ಹಿಂದೆ ಎಷ್ಟೇ ನಟ ವಸಿಷ್ಠ ಸಿಂಹ ಅವರ ಜೊತೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ವಿಚಾರ ರಿವಿಲ್ ಆಗುತ್ತಿದ್ದ ಹಾಗೆ ಅಭಿಮಾನಿಗಳು ಮತ್ತು ಪ್ರೇಕ್ಷಕರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ ಏಕೆಂದರೆ ಅಭಿಮಾನಿಗಳು ತಮ್ಮ ನಟ ನಟಿಯರ ವಿಚಾರವನ್ನು ಆದಷ್ಟು ಫಾಲೋ ಮಾಡುತ್ತಾರೆ‌. ತಮ್ಮ ಜೀವನದಲ್ಲಿ ಏನೇ ಆದರೂ ಕೂಡ ಅದನ್ನು ಸಂಭ್ರಮಿಸುತ್ತಾರೆ ಇಂತಹ ಒಳ್ಳೆಯ ವಿಚಾರವನ್ನು ನಟಿ ಹರಿಪ್ರಿಯ ಮತ್ತು ವಸಿಷ್ಟ ನಿಮ್ಮ ಮುಚ್ಚಿಟ್ಟಿದ್ದೆಕ್ಕೆ‌.

ಒಂದು ವೇಳೆ ಇದನ್ನು ಜನತೆಯ ಮುಂದೆ ಹೇಳಿದರೆ ಅವರು ಕೂಡ ಈ ಜೋಡಿಗೆ ಶುಭವನ್ನು ಹಾರೈಸುತ್ತಿದ್ದರು ಆದರೆ ಈ ರೀತಿ ಗುಟ್ಟಾಗಿ ಯಾಕೆ ಮಾಡಿಕೊಂಡಿದ್ದಾರೆ ಎಂದು ಬೇಸರವನ್ನು ವ್ಯಕ್ತಪಡಿಸಿದರು. ಆದರೆ ಹರಿಪ್ರಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೂ ಕೂಡ ಒಂದು ಕಾರಣವಿದೆ. ಹೌದು ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬ ನಟ ಮತ್ತು ನಟಿ ಪ್ರೀತಿ ಮಾಡುತ್ತಿದ್ದಾರೆ ಹಾಗೂ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದಾಗ ಅದನ್ನು ಹಾಳು ಮಾಡುವ ಮಂದಿಯೇ ಜಾಸ್ತಿ ಇರುತ್ತಾರೆ.

ಇದಲ್ಲದೆ ಇಲ್ಲ ಸಲ್ಲದ ವಿಚಾರಗಳನ್ನು ಹೇಳುವುದರ ಮುಖಾಂತರ ಮದುವೆಯನ್ನು ತಪ್ಪಿಸುವುದಕ್ಕೆ ನೋಡುತ್ತಾರೆ, ಈ ಕಾರಣದಿಂದ ಇವರಿಬ್ಬರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಈಗ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಕೂಡ ತುಂಬಾ ಸರಳವಾಗಿ ಎಲ್ಲಿಯೂ ಪ್ರಚಾರ ಮಾಡಿಕೊಳ್ಳದೆ ಗುಟ್ಟಾಗಿ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥಾದ ಒಂದು ದಿನದ ಬಳಿಕ ನಿಶ್ಚಿತಾರ್ಥದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಾಕುವುದರ ಮುಖಾಂತರ ಸ್ವಷ್ಟನೆಯನ್ನು ಇಬ್ಬರು ನೀಡಿದ್ದಾರೆ.

ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ಹರಿಪ್ರಿಯ ಆಗಲಿ ವಶಿಷ್ಟ ಸಿಂಹ ಆಗಲಿ, ಇವರು ಕೂಡ ಒಂದೇ ಸಿನಿಮಾದಲ್ಲಿ ನಟನೆ ಮಾಡಿಲ್ಲ ಆದರೂ ಕೂಡ ಇವರಿಬ್ಬರ ನಡುವೆ ಪ್ರೀತಿ ಹೇಗೆ ಬೆಳೆಯಿತು ಎಂಬ ವಿಚಾರ ನಿಮ್ಮಲ್ಲಿ ಅನುಮಾನವನ್ನು ಹುಟ್ಟುಹಾಕುವುದು‌. ಕನ್ನಡದಲ್ಲಿ ಇವರಿಬ್ಬರೂ ಕೂಡ ಒಟ್ಟಾಗಿ ನಟಿಸಿದೆ ಇದ್ದರೂ ತೆಲುಗಿನ ಸಿನಿಮಾ ಒಂದರಲ್ಲಿ ಇವರು ಕೂಡ ಒಟ್ಟಾಗಿ ನಟನೆ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಾಗುತ್ತಾರೆ ತದನಂತರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪ್ರೀತಿಸಲು ಪ್ರಾರಂಭ ಮಾಡುತ್ತಾರೆ. ಈ ಪ್ರೀತಿಯ ಮುಂದುವರೆದ ಭಾಗವೇ ಇದೀಗ ಮದುವೆ ಹಂತಕ್ಕೆ ಬಂದು ನಿಂತಿದೆ.