Home Blog Page 269

ಹೊಸ ಧಾರವಾಹಿಯ ಮೂಲಕ ಕಿರುತೆರೆಗೆ ಮತ್ತೆ ರೀ ಎಂಟ್ರಿ ಕೊಟ್ಟ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಯಾವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ ಗೊತ್ತಾ.

ಅನಿರುಧ್ & ಎಸ್ ನಾರಾಯಣ್

ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿ ಆದಂತಹ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುಧ್ ಅವರು ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಮೂರು ವರ್ಷದಿಂದ ಈ ತಂಡದೊಟ್ಟಿಗೆ ಉತ್ತಮವಾದಂತಹ ಅವಿನಾಭಾವನಾ ಸಂಬಂಧವನ್ನು ಒಳಗೊಂಡಿದ್ದರು. ಅಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ನಟನೆ ಮಾಡಿದ್ದರು ಕೂಡ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದರು‌.

ಆದರೆ ಕೆಲವು ಕಾರಣಾಂತರಗಳಿಂದ ಧಾರಾವಾಹಿ ತಂಡ ಮತ್ತು ಅನಿರುಧ್ ಅವರ ನಡುವೆ ಮಾತಿನ ಚಕಮಕಿಯಾಗಿ ಈ ಸೀರಿಯಲ್ ಇಂದ ಹೊರ ಬರುತ್ತಾರೆ. ಅಷ್ಟೇ ಅಲ್ಲದೆ ಅನಿರುದ್ಧ್ ಅವರನ್ನು ಕಿರುತೆರೆಯಿಂದ ಎರಡು ವರ್ಷಗಳ ಕಾಲ ಬ್ಯಾನ್ ಮಾಡಬೇಕು ಎಂಬ ನಿರ್ಧಾರವನ್ನು ಕಿರುತೆರೆ ತಂಡದವರು ಮಾಡುತ್ತಾರೆ. ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹೊರ ಬಂದು ಅನಿರುದ್ಧ ಅವರು ಸುಮಾರು ಎರಡು ತಿಂಗಳೇ ಆಯಿತು.

ಯಾವುದೇ ಚಿತ್ರ ಹಾಗೂ ಸೀರಿಯಲ್ ಕುರಿತು ಎಲ್ಲಿಯೂ ಕೂಡ ಮಾಹಿತಿಯನ್ನು ಅನಿರುಧ್ ಅವರು ಬಿಟ್ಟು ಕೊಟ್ಟಿರಲಿಲ್ಲ ಕಳೆದ ವಾರ ವಸ್ತು ಹೊಸ ಮನೆಯ ಗೃಹ ಪ್ರವೇಶವನ್ನು ಕೂಡ ಮಾಡಿದ್ದರು. ಇದೀಗ ಅಭಿಮಾನಿಗಳಿಗೆ ಮತ್ತೊಂದು ಸಂತಸ ಸುದ್ದಿಯನ್ನು ನೀಡಿದ್ದಾರೆ ಹೌದ ಹೊಸ ಸೀರಿಯಲ್ ನಲ್ಲಿ ಅಭಿನಯ ಮಾಡುವ ಮೂಲಕ ಮತ್ತೆ ಕಿರುತೆರೆಗೆ ವಾಪಸ್ ಆಗಿದ್ದಾರೆ‌. ವಿಶೇಷ ಏನೆಂದರೆ ಅನಿರುಧ್ ಅವರಿಗೆ ಸಾತ್ ನೀಡುವುದಕ್ಕೆ ನಟ ಮತ್ತು ನಿರ್ಮಾಪಕ ನಿರ್ದೇಶಕ ಆಗಿರುವ ಎಸ್ ನಾರಾಯಣ್ ಅವರು ಬೆಂಬಲಕ್ಕೆ ನಿಂತಿದ್ದಾರೆ.

ಹೌದು ಉದಯ ಟಿವಿಯಲ್ಲಿ “ಸೂರ್ಯವಂಶ” ಎಂಬ ಹೊಸ ಸೀರಿಯಲ್ ಪ್ರಾರಂಭವಾಗುತ್ತಿದೆ ಈ ಸೀರಿಯಲ್ ನಲ್ಲಿ ನಟ ಅನಿರುದ್ಧ ವರು ಮುಖ್ಯ ಭೂಮಿಗೆಯಲ್ಲಿ ನಟಿಸಲಿದ್ದಾರೆ. ಎಸ್ ನಾರಾಯಣ್ ಅವರು ಅನಿರುದ್ಧ ಕೈಯನ್ನು ಹಿಡಿದುಕೊಂಡು ಕರೆತರುವಂತಹ ಕೆಲವೊಂದಷ್ಟು ಫೋಟೋಸ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಇದನ್ನು ನೋಡಿದಂತಹ ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು.

ಇದಾಗ ಕೆಲವೇ ಗಂಟೆಯಲ್ಲಿ ಅನಿರುದ್ ಮತ್ತು ಎಸ್ ನಾರಾಯಣ್ ಇಬ್ಬರೂ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರಕ್ಕೆ ಸಂಬಂಧ ಪಟ್ಟಂತಹ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸೂರ್ಯಕಾಂತಿ ಧಾರಾವಾಹಿಯಲ್ಲಿ ಅನಿರುಧ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರ ಕೇಳುತ್ತಿದ್ದ ಹಾಗೆ ಅನಿರುದ್ಧ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಆದರೆ ಕೆಲವರ ಮನಸ್ಸಿನಲ್ಲಿ ಇನ್ನೂ ಕೂಡ ಅನುಮಾನ ಹಾಗೆಯೇ ಉಳಿದಿದೆ ಹೌದು ಜೊತೆ ಜೊತೆಯಲಿ ತಂಡದಿಂದ ಕಿರಿಕ್ ಮಾಡಿಕೊಂಡು ಹೊರ ಬಂದ ನಂತರ ಎರಡು ವರ್ಷಗಳ ಕಾಲ ಇವರನ್ನು ಬ್ಯಾನ್ ಮಾಡಬೇಕು ಎಂದು ಕಿರುತರೆ ಸಂಘದವರು ನಿರ್ಧಾರ ಕೈಗೊಂಡಿದ್ದರು. ಆದರೂ ಕೂಡ ಇದೀಗ ಇದ್ದಕ್ಕಿದ್ದ ಹಾಗೆ ಹೇಗೆ ಬೇರೊಂದು ಹೊಸ ಧಾರವಾಹಿಯಲ್ಲಿ ನಟನೆ ಮಾಡುವುದಕ್ಕೆ ಸಾಧ್ಯ ಎಂಬುದು ಎಲ್ಲರ ತಲೆಯಲ್ಲೂ ಕೂಡ ಹುಳು ಬಿಟ್ಟ ಹಾಗಿದೆ.

ಆದರೆ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆರ್ಯ ವರ್ಧನ್ ಅಗಲಿ ಅಥವಾ ಎಸ್ ನಾರಾಯಣ್ ಆಗಲಿ ಯಾರು ಕೂಡ ಮಾತನಾಡಿಲ್ಲ ಅದೇನೇ ಆಗಲಿ ಸದ್ಯಕ್ಕೆ ಅನಿರುದ್ಧ ವರು ಮತ್ತೆ ಕಿರುತರೆಗೆ ಕಮ್ ಬ್ಯಾಕ್ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರವೇ. ಈ ಧಾರಾವಾಹಿಯಿಂದ ಇನ್ನಷ್ಟು ಹೆಸರು ಕೀರ್ತಿ ಅನಿರುಧ್ ಅವರಿಗೆ ದೊರೆಯಲಿ ಎಂಬುದಷ್ಟೇ ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ

“ಹೌದು ನಾನು ಬಾವಿ ಕಪ್ಪೇನೆ” ನನ್ಗೆ ನನ್ನ ಮಾತೃ ಭಾಷೆ ಮೊದಲು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತೀನಿ ಅಂತ ಬಿಲ್ಡಪ್ ಕೊಡಲ್ಲ ಎಂದು ಇದ್ದಕ್ಕಿದ್ದ ಹಾಗೆ ಸಂದರ್ಶನದಲ್ಲಿ ಗರಂ ಆದ ದರ್ಶನ್.

ಕ್ರಾಂತಿ ಸಿನಿಮಾ ಸಂದರ್ಶನದ ಸಮಯ

ನಟ ದರ್ಶನವರು ಕಳೆದ ಒಂದು ತಿಂಗಳಿನಿಂದ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡುತ್ತಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಲಾಗಿದೆ. ಬ್ಯಾನ್ ಮಾಡಿದ ಪರಿಣಾಮ ಕ್ರಾಂತಿ ಸಿನಿಮಾಗೆ ಸರಿಯಾದ ರೀತಿಯ ಪ್ರಮೋಷನ್ ದೊರೆಯುತ್ತಿಲ್ಲ ಹಾಗಾಗಿ ಸ್ವತಃ ದರ್ಶನ್ ಅವರೇ ಇದೀಗ ಪ್ರತಿನಿತ್ಯವೂ ಕೂಡ ಒಂದೊಂದು ಯುಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುವುದರ ಮೂಲಕ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಕ್ರಾಂತಿ ಸಿನಿಮಾದಲ್ಲಿ ಇರುವಂತಹ ಕೆಲವೊಂದು ವಿಚಾರವನ್ನು ಹೇಳಿ ತಮ್ಮ ಅಭಿಮಾನಿಗಳಿಗೆ ಈ ಸಿನಿಮಾವನ್ನು ಯಾಕೆ ನೋಡಬೇಕು. ಈ ಸಿನಿಮಾ ಮಾಡಿರುವ ಉದ್ದೇಶವಾದರೂ ಏನು ಎಂಬುದರ ಬಗ್ಗೆ ಅರಿವನ್ನು ಮೂಡಿಸುತ್ತಿದ್ದಾರೆ ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅಭಿಮಾನಿಗಳಿಗೆ ತಿಳಿಯದ ಸಾಕಷ್ಟು ವಿಚಾರವನ್ನು ದರ್ಶನವರು ಈ ಒಂದು ಸಂದರ್ಶನದ ಮೂಲಕ ತಿಳಿಸಿದ್ದಾರೆ.

ಕ್ರಾಂತಿ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಲ್ಲ ಆದರೆ ಈ ಸಿನಿಮಾವನ್ನು ಐದು ಭಾಷೆಯಲ್ಲಿ ಡಬ್ಬಿಂಗ್ ಮಾಡುತ್ತೇವೆ ಐದು ರಾಜ್ಯದಲ್ಲಿಯೂ ಕೂಡ ಬಿಡುಗಡೆ ಮಾಡುತ್ತೇವೆ‌. ಇಷ್ಟ ಇರುವಂತಹ ವ್ಯಕ್ತಿಗಳು ಹೋಗಿ ನೋಡಬಹುದು ಆದರೆ ನಾನು ಯಾವುದೇ ಕಾರಣಕ್ಕೂ ಕೂಡ ಬೇರೆ ರಾಜ್ಯಕ್ಕೆ ಹೋಗಿ ಪ್ರಚಾರ ಮಾಡುವುದಿಲ್ಲ ಎಂದು ದರ್ಶನ್ ಖಡಕ್ಕಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಇರುವಂತಹ ಸಾಕಷ್ಟು ಸಮಸ್ಯೆಗಳನ್ನು ತಿಳಿಸಿದ್ದಾರೆ ಜೊತೆಗೆ ನಾನ್ಯಾಕೆ ಹೋಗಿ ಬೇರೆ ರಾಜ್ಯದಲ್ಲಿ ಪ್ರಚಾರ ಮಾಡಬೇಕು. ನನ್ನ ರಾಜ್ಯದಲ್ಲಿ ನಾನೇ ರಾಜ ನನ್ನ ಅಭಿಮಾನಿಗಳು ನನ್ನನ್ನು ಪ್ರೀತಿಸುತ್ತಾರೆ ಗೌರವಿಸುತ್ತಾರೆ ಇಷ್ಟೆಲ್ಲ ಪ್ರೀತಿ ಗೌರವ ಸಿಗುವಾಗ ಬೇರೆ ರಾಜ್ಯಕ್ಕೆ ಹೋಗಿ ನಾನ್ಯಾಕೆ ಕಾಕಾ ಹಿಡಿಯಬೇಕು ಎಂದು ಹೇಳಿದ್ದಾರೆ.

‘ಕ್ರಾಂತಿ’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗ್ತಿದೆ. ಆದರೆ ದರ್ಶನ್ “ನಾನು ಕರ್ನಾಟಕ ಬಿಟ್ಟು ಬೇರೆ ಕಡೆ ಹೋಗಿ ಪ್ರಚಾರ ಮಾಡಲ್ಲ. ಮೇರಾ ಕುತ್ತಾ ಮೇರಾ ಗಲಿ ಶೇರ್ ಹೈ’ ಅನ್ನೋ ಗಾದೆ ಇದೆ. ಅಂದರೆ ನಮ್ಮ ಬೀದಿಗೆ ನಮ್ಮ ನಾಯಿನೇ ಅಂತ. ಇದು ನನ್ನ ಟೆರಿಟರಿ ಇಲ್ಲಿಗೆ ಸಿನಿಮಾ ಮಾಡುತ್ತೀನಿ. ಬೇರೆ ಭಾಷೆಗೆ ಡಬ್ ಮಾಡಿ ಕೊಡ್ತೀನಿ. ಅವರು ಹಾಕಿದ್ರು ಖುಷಿ ಹಾಕದೇ ಇದ್ದರೂ ಖುಷಿ” ಎಂದು ದರ್ಶನ್ ಹೇಳಿದ್ದರು. ಯಾಕೆ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಅನ್ನೋದ್ರ ಬಗ್ಗೆ ಮತ್ತೆ ಮಾತನಾಡಿದ್ದಾರೆ.

“ಈಗ ಇರುವ ಲೆವೆಲ್ ಚೆನ್ನಾಗಿದೆ ಅಲ್ವಾ. ದೊಡ್ಡ ಲೆವೆಲ್ ಅಂದರೆ ಏನು? ಸಾಮಾನ್ಯವಾಗಿ ಅಂದುಕೊಳ್ಳಬಹುದು. ನಾನು ಬಾವಿಯಲ್ಲಿರುವ ಕಪ್ಪೆ ಅಂತ. ಹೌದು ನಾನು ಬಾವಿಯಲ್ಲಿರುವ ಕಪ್ಪೆನೇ. ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ನ್ಯಾಷನಲ್ ಇಶ್ಯೂ ತೆಗೆದುಕೊಳ್ಳಬೇಕು. ಆಗ ಕರ್ನಾಟಕದ ವಿಚಾರ ಹೇಳಲು ಸಾಧ್ಯವಿಲ್ಲ. ನಾರ್ಥ್‌ ಅವರಿಗೆ ಕನೆಕ್ಟ್ ಮಾಡಬೇಕು, ಈ ಕಡೆ ಮತ್ಯಾರಿಗೋ ಕನೆಕ್ಟ್ ಮಾಡಬೇಕು ಎಂದಾಗ ನ್ಯಾಷನಲ್ ಇಶ್ಯುಗೆ ಹೋಗಬೇಕು. ಎಷ್ಟೋ ಜನಕ್ಕೆ ನ್ಯಾಷನಲ್ ಇಶ್ಯುಗಳೇ ಗೊತ್ತಿರಲ್ಲ”

ಇತ್ತೀಚೆಗೆ ದೆಹಲಿ ಸರ್ಕಾರಿ ಶಾಲೆಗಳ ಬಗ್ಗೆ ವಿಡಿಯೋ ನೋಡ್ತಿದ್ದೆ. ತುಂಬಾ ಚೆನ್ನಾಗಿದೆ. ಅಲ್ಲಿ ಸರ್ಕಾರಿ ಶಾಲೆಗಳೆಲ್ಲಾ ಅಪ್‌ಗ್ರೇಡ್ ಆಗಿದೆ. ತುಂಬಾ ಚೆನ್ನಾಗಿದೆ. ಹೈಟೆಕ್ ಶಾಲೆಗಳ ರೀತಿ ಇದೆ. ‘ಕ್ರಾಂತಿ’ ಸಿನಿಮಾ ಕೊಟ್ಟರೆ ಅಲ್ಲಿ ನೋಡುತ್ತಾರಾ? ಅವರು ಅಯ್ಯೋ ನಮ್ಮ ಶಾಲೆಗಳು ಇದಕ್ಕಿಂತ ಚೆನ್ನಾಗಿದೆ. ಇವನೇನು ಹೇಳೋಕೆ ಹೋಗ್ತಿದ್ದಾನೆ ಅಂತಾರೆ.

ನಾನು ಮಾಡುತ್ತಿರುವುದು ಕನ್ನಡ ಸಿನಿಮಾ. ಕನ್ನಡ ಪ್ರೇಕ್ಷಕರು ಕನೆಕ್ಟ್ ಆಗುತ್ತಾರೆ. ಮಾತೃಭೂಮಿ ಮೊದಲು. ಉಳಿದಿದ್ದೆಲ್ಲಾ ಆಮೇಲೆ ನೋಡಿಕೊಳ್ಳೋಣ” ಎಂದು ದರ್ಶನ್ ಹೇಳಿದ್ದಾರೆ. ಸುಜುಕಿ ದರ್ಶನ್ ಅವರು ಹೇಳಿರುವ ಈ ಮಾತಿಗೆ ದರ್ಶನ್ ಅಭಿಮಾನಿಗಳು ಮೆಚ್ಚಿದೆ ಎಂದು ವ್ಯಕ್ತಪಡಿಸಿದರೆ.

ಇನ್ನು ಕೆಲವು ಅಭಿಮಾನಿಗಳು ನಿಮಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಅದಕ್ಕೆ ಹೀಗೆ ಹೇಳುತ್ತಿದ್ದೀರಾ ಎಂದು ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇನೇ ಆಗಲಿ ಸದ್ಯಕ್ಕೆ ಕ್ರಾಂತಿ ಸಿನಿಮಾದ ಬರುವಿಕೆಗಾಗಿ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದು ಸತ್ಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

ವಿನೋದ್ ರಾಜ್ ತಂದೆ ಬೇರೆ ಯಾರೋ ಅಂತ ಹೇಳೋರಿಗೆ ಇಲ್ಲಿದೆ ನೋಡಿ ಖಡಕ್ ಉತ್ತರ ಸಂದರ್ಶನದಲ್ಲಿ ಮೊದಲ ಬಾರಿಗೆ ತಂದೆ ವಿಚಾರ ಹೇಳಿಕೊಂಡ ವಿನೋದ್ ಈ ವಿಡಿಯೋ ನೋಡಿ ಸತ್ಯ ತಿಳಿಯಿರಿ

ವಿನೋದ್ ರಾಜ್ ತಂದೆ

ಕಳೆದ ಐದಾರು ದಶಕಗಳಿಂದಲೂ ಕೂಡ ಡಾಕ್ಟರ್ ರಾಜಕುಮಾರ್ ಮತ್ತು ಲೀಲಾವತಿ ಅವರ ನಡುವಿನ ಸಂಬಂಧದ ಬಗ್ಗೆ ಚರ್ಚೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಆದರೆ ಈ ವಿಚಾರದ ಬಗ್ಗೆ ರಾಜ್ ಕುಟುಂಬ ಆಗಲಿ ಅಥವಾ ಲೀಲಾವತಿ ಕುಟುಂಬ ಆಗಲಿ ಎಲ್ಲಿಯೂ ಕೂಡ ಬಹಿರಂಗ ಹೇಳಿಕೆಯನ್ನು ನೀಡಿಲ್ಲ. ಕೆಲವು ಮೂಲಗಳ ಪ್ರಕಾರ ಡಾಕ್ಟರ್ ರಾಜಕುಮಾರ್ ಮತ್ತು ಲೀಲಾವತಿ ಅವರ ಮಗನೇ ವಿನೋದ್ ರಾಜಕುಮಾರ್ ಎಂದು ಹೇಳುತಿದೆ.

ಇನ್ನು ಕೆಲವು ಮೂಲಗಳ ಪ್ರಕಾರ ಲೀಲಾವತಿ ಅವರು ನಾಟಕ ಕಂಪನಿ ಓನರ್ ಆದಂತಹ ಮಹಾಲಿಂಗ ಭಾಗವತ ಅವರನ್ನು ಮದುವೆಯಾಗಿದ್ದರು. ಈ ದಂಪತಿಗಳ ಮಗನೇ ವಿನೋದ್ ಎಂದು ಹೇಳುತ್ತಾರೆ ಆದರೆ ಇದು ಎಷ್ಟು ಸುಳ್ಳು ಎಷ್ಟು ಸತ್ಯ ಎಂಬುದು ಮಾತ್ರ ತಿಳಿದಿಲ್ಲ. ಆದರೆ ಇತ್ತೀಚಿಗಷ್ಟೇ ವಿನೋದ್ ರಾಜಕುಮಾರ್ ಅವರನ್ನು ಸಂದರ್ಶನ ಮಾಡಲಾಯಿತು, ಈ ಸಮಯದಲ್ಲಿ ವಿನೋದ್ ರಾಜ್ ಅವರು ಹೇಳಿದಂತಹ ಕೆಲವು ವಿಚಾರ ಕೇಳಿ ಎಲ್ಲರೂ ಕೂಡ ನಿಜಕ್ಕೂ ಆ.ಘಾ.ತ.ಕ್ಕೆ ಒಳಗಾಗಿದ್ದಾರೆ.

ಹೌದು ವಿನೋದ್ ರಾಜಕುಮಾರ್ ಅವರು ಹೇಳಿರುವ ಮಾತಿನಲ್ಲಿ ಡಾಕ್ಟರ್ ರಾಜಕುಮಾರ್ ಅವರೇ ನಮ್ಮ ತಂದೆ ಎಂಬ ಮಾತುಗಳನ್ನು ಇಲ್ಲಿ ಬಹಿರಂಗ ಪಡಿಸಿದ್ದಾರೆ. ಹೌದು ಕಳೆದ ಒಂದು ವರ್ಷದ ಹಿಂದೆ ಅಪ್ಪು ಅವರನ್ನು ಕಳೆದುಕೊಂಡಿರುವಂತಹ ವಿಚಾರ ನಿಮಗೆ ತಿಳಿದೇ ಇದೆ ಅಪ್ಪು ಅವರನ್ನು ಕಳೆದುಕೊಂಡಂತಹ ಅಭಿಮಾನಿಗಳು ಸಾಕಷ್ಟು ದುಃಖವನ್ನು ವ್ಯಕ್ತಪಡಿಸಿದ್ದಾರೆ. ಇದೇ ರೀತಿಯಲ್ಲಿ ವಿನೋದ್ ರಾಜಕುಮಾರ್ ಅವರನ್ನು ಕೂಡ ಸಂದರ್ಶನ ಮಾಡುವ ವೇಳೆಯಲ್ಲಿ ಅಪ್ಪು ಅವರನ್ನು ಕಳೆದುಕೊಂಡಿರುವುದು ನಿಜಕ್ಕೂ ತುಂಬಲಾರದ ನಷ್ಟ

ಇದು ನಮ್ಮ ಕುಟುಂಬಕ್ಕೆ ಒಂದು ದೊಡ್ಡ ಆ.ಘಾ.ತ ಅಪ್ಪು ಅ.ಗ.ಲಿ.ದ ನಂತರ ನನ್ನ ತಾಯಿಯ ಆರೋಗ್ಯ ಇನ್ನಷ್ಟು ಅದಗೆಟ್ಟಿದೆ ಇದಕ್ಕಿಂತ ಮುಂಚೆ ಸ್ವಲ್ಪ ಚೇತರಿಕೆ ಕಂಡಿದ್ದರು. ಆದರೆ ಯಾವಾಗ ಅಪ್ಪು ನಮ್ಮನ್ನು ಬಿಟ್ಟು ಹೋದರು ಇದೇ ಕೊರಗಿನಲ್ಲಿ ನಮ್ಮ ತಾಯಿ ಹಾಸಿಗೆ ಹಿಡಿದಿದ್ದಾರೆ ಪುತ್ರಶೋಕ ನಿರಂತರ ಎಂಬಂತೆ ಮಗನ ನೆನಪಿನಲ್ಲಿಯೇ ಲೀಲಾವತಿಯವರು ಹಾಸಿಗೆ ಹಿಡಿದಿದ್ದಾರೆ ಎಂಬ ರೀತಿ ಮಾತನಾಡಿದ್ದಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ನಾವು ಯಾರಿಗೂ ಕೂಡ ನೋವನ್ನು ಉಂಟು ಮಾಡುವುದಿಲ್ಲ ಯಾರಿಗೂ ಕೂಡ ಕೆಟ್ಟದ್ದನ್ನು ಬಯಸುವುದಿಲ್ಲ.

ನಮ್ಮ ಬಗ್ಗೆ ಇಲ್ಲಸಲ್ಲದ ಅವಹೇಳನಕಾರಿ ಹೇಳಿಕೆಯನ್ನು ನೀಡಬೇಡಿ ನಮ್ಮಿಬ್ಬರ ಕುಟುಂಬದವರು ಕೂಡ ಅನ್ಯೋನ್ಯವಾಗಿ ಇದ್ದೇವೆ ನಮ್ಮಲ್ಲಿ ಯಾವುದೇ ರೀತಿಯಾದಂತಹ ತಾರತಮ್ಯವಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ಒಂದು ನೀತಿ ಪಾಠವನ್ನು ಹೇಳುವ ಮೂಲಕ ತಮ್ಮ ಹಾಗೂ ಡಾಕ್ಟರ್ ರಾಜಕುಮಾರ್ ನಡುವಿನ ಸಂಬಂಧವನ್ನು ವ್ಯಕ್ತಪಡಿಸಿದ್ದಾರೆ. ಲವಕುಶರನ್ನು ನೋಡಿ ಶ್ರೀರಾಮಚಂದ್ರ ನಿಮ್ಮ ತಂದೆ ಯಾರು ಎಂದು ಕೇಳಿದರಂತೆ. ಹಾಗೆಯೇ ನನ್ನನ್ನು ಮತ್ತು ಅಪ್ಪು ಅವರನ್ನು ನೋಡಿ ನಿಮ್ಮ ತಂದೆ ಯಾರು ಅಂದರೆ ನಾನು ಏನೆಂದು ಉತ್ತರಿಸಲಿ ಎಂದು ಹೇಳಿದ್ದಾರೆ.

ಈ ಮಾತಿನ ಒಳ ಅರ್ಥ ವಿನೋದ್ ರಾಜಕುಮಾರ್ ಅವರ ತಂದೆ ಡಾ. ರಾಜಕುಮಾರ್ ಎಂಬುದೇ ತಿಳಿಯುತ್ತದೆ ಇದನ್ನು ಕೆಲವು ಬುದ್ಧಿಜೀವಿಗಳು ಒಪ್ಪಿಕೊಂಡರೆ ಇನ್ನೂ ಕೆಲವು ಬುದ್ಧಿಜೀವಿಗಳು ತಿರಸ್ಕರಿಸುತ್ತಿದ್ದಾರೆ. ಅಣ್ಣಾವ್ರ ಅಭಿಮಾನಿಗಳು ವಿನೋದ್ ರಾಜ್ ಕುಮಾರ್ ಅವರನ್ನು ತಮ್ಮ ಮಗ ಎಂದು ಯಾವುದೇ ಕಾರಣಕ್ಕೂ ಕೂಡ ಒಪ್ಪಿಕೊಳ್ಳುತ್ತಿಲ್ಲ. ದಶಮಾನಗಳಿಂದಲೂ ಕೂಡ ಈ ವಿಚಾರಕ್ಕೆ ಸಂಬಂಧಪಟ್ಟಂತಹ ಚರ್ಚೆಗಳು ನಡೆಯುತ್ತಲೇ ಇದೆ.

ಅದೇನೇ ಆಗಲಿ ಸದ್ಯಕ್ಕೆ ವಿನೋದ್ ರಾಜ್ ಅವರು ಬಹಿರಂಗವಾಗಿ ಹೇಳಿರುವಂತಹ ಈ ಮಾತು ಎಲ್ಲಡೆ ಸಂಚಲನವನ್ನು ಸೃಷ್ಟಿ ಮಾಡಿದೆ ನೀವು ವಿನೋದ್ ರಾಜಕುಮಾರ್ ಅವರು ಮಾತನಾಡಿದಂತಹ ವಿಡಿಯೋ ನೋಡಿ ಸತ್ಯದ ಅರಿವಾಗುತ್ತದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಸ್ನೇಹಿತರೆ.

ಅಂದು ಇಡೀ ಚಿತ್ರರಂಗವೇ ಬೇಡ ಬೇಡ ಎಂದು ರವಿಚಂದ್ರನ್ ಗೆ ಬುದ್ದಿ ಹೇಳಿದ್ರು, ಆದ್ರೂ ಕೂಡ ರಜನಿಕಾಂತ್ ಕಾಂತ್ ಗೆ ರವಿಚಂದ್ರನ್ ಸವಾಲ್ ಹಾಕಿದ್ರು ನಂತರ ಇಬ್ಬರಲ್ಲಿ ಗೆದ್ದವರು ಯಾರು ಗೊತ್ತ.?

 

((Rajinikanth)ರಜನಿಕಾಂತ್ ಎದುರು ತೊಡೆತಟ್ಟಿ ಗೆದ್ದಿದ್ದ ರವಿಚಂದ್ರನ್(Ravichandran) ಯಾವ ಕಾರಣಕ್ಕಾಗಿ ಗೊತ್ತಾ.?

ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳಿನ ಒಬ್ಬ ಶ್ರೇಷ್ಠ ನಟ ಈ ಹೆಸರಾಂತ ನಟ ಇಂದು ತಮಿಳಿಗೆ ಮಾತ್ರ ಸೀಮಿತವಾಗದೆ ಭಾರತದಾದ್ಯಂತ ತಮ್ಮ ಹವಾ ಕ್ರಿಯೆಟ್ ಮಾಡಿದ್ದಾರೆ. ಭಾರತದ ಸಿನಿಮಾ ಲೋಕದಲ್ಲಿಯೇ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ರಜನಿಕಾಂತ್ ಅವರು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ.

ಕರ್ನಾಟಕ ಮೂಲದವರಾದ ರಜನಿಕಾಂತ್ ಅವರು ಚೆನ್ನೈ ಹೋಗಿ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಕಂಡುಕೊಂಡ ಕಥೆಯೇ ರೋಚಕ. ರಜನಿಕಾಂತ್ ಅವರ ಯುಗ ಎಂದೆ ಒಂದು ಸಮಯವನ್ನು ಕರೆಯಲಾಗುತ್ತಿತ್ತು. ಯಾಕೆಂದರೆ ಆ ಸಮಯದಲ್ಲಿ ತಮಿಳು ಮಾತ್ರವಲ್ಲದೆ ಪರಭಾಷೆಯ ಸಿನಿರಂಗದವರು ಕೂಡ ರಜನಿಕಾಂತ್ ಅವರ ಸಿನಿಮಾ ರಿಲೀಸ್ ಆದ ಸಮಯದಲ್ಲಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಹೆದರುತ್ತಿದ್ದರು.

ಯಾಕೆಂದರೆ ರಜನಿಕಾಂತ್ ಅವರಿಗೆ ಭಾರತದಾದ್ಯಂತ ಅಷ್ಟು ಅಭಿಮಾನಿಗಳು ಇದ್ದರು. ಹಾಗಾಗಿ ಅವರ ಸಿನಿಮಾ ರಿಲೀಸ್ ಆದಾಗ ಅದರ ಎದುರು ಯಾವುದೇ ನಟನ ಸಿನಿಮಾ ರಿಲೀಸ್ ಆದರೂ ಥಿಯೇಟರ್ ನಲ್ಲಿ ಜನ ಇಲ್ಲದೆ ಸಿನಿಮಾ ಫ್ಲಾಫ್ ಆಗುತ್ತಿತ್ತು. ಹಾಗಾಗಿ ಬಾಲಿವುಡ್ ಮುಂದಿ ಕೂಡ ಹಿಂದೂ ಮುಂದು ನೋಡಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದರು.

ಆ ರೀತಿಯ ರಜನಿ ಯುಗ ಇದ್ದ ಕಾಲದಲ್ಲಿ ಕನ್ನಡ ಸ್ಟಾರ್ ನಟರೊಬ್ಬರು ರಜನಿಕಾಂತ್ ಅವರ ಭಾಷ ಸಿನಿಮಾ ರಿಲೀಸ್ ಆದ ದಿನವೇ ತಮ್ಮ ಸಿನಿಮಾವನ್ನು ರಿಲೀಸ್ ಮಾಡಿ ಅಷ್ಟೇ ಮಟ್ಟದ ಸಕ್ಸಸ್ ಕೂಡ ಪಡೆದುಬಿಟ್ಟರು. ಆತ ಮತ್ಯಾರು ಅಲ್ಲ ಕನ್ನಡದಲ್ಲಿ ಸಿನಿಮಾಗಳ ಬಗ್ಗೆ ಕನಸು ಕಾಣುತ್ತಾ ತಮ್ಮ ಇಡೀ ಜೀವನವನ್ನು ಸಿನಿಮಾಗಾಗಿ ಅರ್ಪಿಸಿದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರು.

1995 ಜನವರಿ 12ರಂದು ರಜನಿಕಾಂತ್ ಅವರ ಭಾಷಾ ಸಿನಿಮಾ ರಿಲೀಸ್ ಆಗಿತ್ತು, ಅದೇ ದಿನದಂದು ಕನ್ನಡದಲ್ಲಿ ವೀರ ಸ್ವಾಮಿ ಅವರ ನಿರ್ಮಾಣದ ಪುಟ್ನಂಜ ಸಿನಿಮಾ ಕೂಡ ರಿಲೀಸ್ ಆಯ್ತು. ಎರಡು ಸಹ ವಿಭಿನ್ನ ಬಗೆಯ ಕಥೆ ಹೊಂದಿದ ವಿಭಿನ್ನ ಝೋನರ್ ಸಿನಿಮಾ ಆಗಿತ್ತು. ಭಾಷಾ ಸಿನಿಮಾ ರಿಲೀಸ್ ಆದ ದಿನ ರಜನಿಕಾಂತ್ ಸಿನಿಮಾ ಎದುರು ಪುಟ್ನಂಜ ರಿಲೀಸ್ ಆಗುತ್ತಿದೆ ಇದು ಖಂಡಿತ ಸೋಲುತ್ತದೆ ಎಂದೆ ಎಲ್ಲರೂ ಮಾತನಾಡಿಕೊಂಡಿದ್ದರು.

ಆದರೆ ಪುಟ್ನಂಜ ಸಿನಿಮಾದ ಕಥೆ ಮೆಚ್ಚಿಕೊಂಡು ರವಿಚಂದ್ರನ್ ಅಭಿನಯ, ಹಂಸಲೇಖ ಅವರ ಸಂಗೀತ, ಉತ್ತಮ ಸಾಹಿತ್ಯ ಹೊಂದಿದ ಹಾಡುಗಳು ಇವೆಲ್ಲ ಕಾರಣದಿಂದ ಸಿನಿಮಾ ಗೆದ್ದಿತ್ತು. ಇಂದಿಗೂ ಸಹ ರವಿಚಂದ್ರನ್ ಅವರ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಗಳ ಸಾಲಿನಲ್ಲಿ ಪುಟ್ನಂಜ ಸಿನಿಮಾ ಕೂಡ ಇದೆ ಇಂದು ಅದು ರಿಲೀಸ್ ಆಗಿ 27 ವರ್ಷಗಳಾಗುತ್ತಿದ್ದರೂ ಕೂಡ ಜನ ಇನ್ನೂ ಅಷ್ಟೆ ಖುಷಿಯಿಂದ ಪುಟ್ನಂಜ ಸಿನಿಮಾವನ್ನು ಮತ್ತೊಮ್ಮೆ ಮಗದೊಮ್ಮೆ ನೋಡುತ್ತಿದ್ದಾರೆ.

ಸಂಕ್ರಾಂತಿ ಹತ್ತಿರ ಸಮಯದಲ್ಲಿ ಬಿಡುಗಡೆ ಆದ ಈ ಸಿನಿಮಾ ಹಳ್ಳಿ ಸೊಡಗಿನ ಸಿನಿಮಾ ಕೂಡ ಆಗಿತ್ತು ಅಲ್ಲದೆ ಸುಗ್ಗಿ ಬಗ್ಗೆ ಹಾಡು ಕೂಡ ಒಂದಿತ್ತು. ಕನ್ನಡಕ್ಕೆ ರವಿಚಂದ್ರನ್ ಕಡೆಯಿಂದ ಸಿಕ್ಕ ಶ್ರೇಷ್ಠ ಸಿನಿಮಾಗಳಲ್ಲಿ ಪುಟ್ನಂಜ ಕೂಡ ಒಂದು. ಭಾಷಾ ಸಿನಿಮಾ ಕೂಡ ತಮಿಳುನಲ್ಲಿ ಸೂಪರ್ ಹಿಟ್ ಆಗಿ ರಜನಿಕಾಂತ್ ಅವರಿಗೆ ಬ್ರೇಕ್ ನೀಡಿತ್ತು. ಇತ್ತ ರವಿಚಂದ್ರನ್ ಅವರು ಕೂಡ ಪುಟ್ನಂಜ ಸಕ್ಸಸ್ ನಿಂದ ಮತ್ತೊಂದು ಮಟ್ಟದಲ್ಲಿ ಬೆಳೆದರು. ಈ ಎರಡು ಸಿನಿಮಾಗಳನ್ನು ಸಿನಿಮಾ ಆರಾಧಕರು ಮೆಚ್ಚಿ ಅಪ್ಪಿಕೊಂಡಿದ್ದರು.

ಚುಟು ಚುಟು ಹಾಡಿಗೆ ಕುರಿ ಪ್ರತಾಪ್ & ಶ್ವೇತ ಚಂಗಪ್ಪ ಮಾಡಿದ ಜಾಭರ್ದಾಸ್ತ್ ಡ್ಯಾನ್ಸ್.

ಸೂಪರ್ ಕ್ವೀನ್ ಶೋ

ಶ್ವೇತಾ ಚಂಗಪ್ಪ ರವರು ಕನ್ನಡದ ಕಿರುತೆರೆಯಲ್ಲಿ ಅವರದೇ ಆದ ಹೆಸರನ್ನು ಮೂಡಿಸಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಕಿರುತೆರೆಯ ನಿರೂಪಕಿಯಾಗಿ ಪ್ರಖ್ಯಾತಿಯನ್ನು ಹೊಂದಿದ್ದಾರೆ. ಮೊದಲು ಸುಮತಿ ಧಾರಾವಾಹಿಯಲ್ಲಿ ಅವಕಾಶವನ್ನು ಪಡೆದುಕೊಂಡ ಶ್ವೇತಾರವರು ನಂತರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾದಂಬರಿ ಧಾರಾವಾಹಿಯ ಮೂಲಕ ಜನರ ಮನಸನ್ನು ಗೆದ್ದಿದ್ದಾರೆ.

ಇವರು ಮೂಲತಃ ಕೊಡಗಿನ ಸೋಮವಾರಪೇಟೆಯವರು. ಹೌದು ಎಸ್ ನಾರಾಯಣ್ ಅವರು ನಿರ್ದೇಶನದ ಸುಮತಿ ಮೂಲಕ ಪಾದಾರ್ಪಣೆಯನ್ನು ಮಾಡಿದ ಶ್ವೇತಾ ಅವರು ಕಾದಂಬರಿ ಮೂಲಕ ಇಡೀ ಕರ್ನಾಟಕ ಜನತೆಯನ್ನು ಅವರತ್ತ ಸೆಳೆದಿದ್ದರು.ಈ ಧಾರಾವಾಹಿ ಆ ಕಾಲದಲ್ಲಿ ಸೃಷ್ಟಿಸಿದ್ದ ಕ್ರೇಜ್ ಅಭೂತಪೂರ್ವವಾಗಿತ್ತು.ಮುಂದೆ ಈ ಟಿವಿ ಕನ್ನಡದಲ್ಲಿ ಪ್ರಸಾರವಾದ `ಸುಕನ್ಯ’ ಮತ್ತು `ಅರುಂಧತಿ’ ಧಾರಾವಾಹಿಯಲ್ಲಿಯೂ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.

ನಟನೆ ಮಾತ್ರವಲ್ಲದೇ ನಿರೂಪಣೆಗೂ ಇಳಿದ ಶ್ವೇತಾ ಕಿರುತೆರೆಯಲ್ಲಿ `ಯಾರಿಗುಂಟು ಯಾರಿಗಿಲ್ಲಾ’ ಎಂಬ ಕಾರ್ಯಕ್ರಮ ರೂಪಿಸಿ ಸೈ ಎನಸಿಕೊಂಡರು.ನಂತರ ಜೀ ಕನ್ನಡದಲ್ಲಿ `ಕುಣಿಯೋಣ ಬಾರಾ’ ಎಂಬ ಚಿಣ್ಣರರ ನೃತ್ಯ ಶೋ ಅನ್ನು ನಿರೂಪಿಸಿದರು. `ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್’ ಮುಂತಾದ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಇತ್ತೀಚಿಗೆ ನಡೆದ ಜೋಡಿ ನಂಬರ್ ಒನ್ ಕಾರ್ಯಕ್ರಮವನ್ನು ಕೂಡ ಶ್ವೇತಾ ಚಂಗಪ್ಪ ರವರು ನಿರೂಪಕಿಯಾಗಿ ನಡೆಸಿಕೊಟ್ಟಿದ್ದಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ತಂಗಿಗಾಗಿ’ ಚಿತ್ರದಲ್ಲಿ ದರ್ಶನ್ ಅವರ ತಂಗಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಪಯಣ ಆರಂಭಿಸಿದರು.ನಂತರ ಸಾಹಸಸಿಂಹ ವಿಷ್ಣುವರ್ಧನ ಅಭಿನಯದ `ವರ್ಷ’ ಚಿತ್ರದಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದರು.

`ಕೃಷ್ಣನ್ ಮ್ಯಾರೇಜ್ ಸ್ಟೋರಿ’,`ಗನ್’ ಮುಂತಾದ ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿ ಕೂಡ ಮೆಚ್ಚುಗೆ ಗಳಿಸಿದರು.ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ 2 ನೇ ಸೀಜನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಇವರು ನಾಲ್ಕನೆ ಸ್ಥಾನಗಳಿಸಿದರು. ಇವರ ಜೊತೆ ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಶಕೀಲಾ, ನೀತು ಮುಂತಾದವರು ಈ ಸೀಸನ್‌ನಲ್ಲಿ ಭಾಗವಹಿಸಿದ್ದರು.

ಸೃಜನ್ ಲೋಕೇಶ್ ನಿರೂಪಣೆಯ `ಮಜಾಟಾಕೀಸ್’ ಕಾಮಿಡಿ ಶೋನಲ್ಲಿ ರಾಣಿ ಪಾತ್ರಧಾರಿಯಾಗಿ ಸೃಜನ್ ಜೊತೆ ಸೇರಿ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಿದ್ದರು. ಎರಡು ಬಾರಿ ಜೀ ಕನ್ನಡದ ಬೆಸ್ಟ್ ಆಂಕರ್ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ಶ್ವೇತಾ ಚಂಗಪ್ಪ ರವರು ತಮ್ಮ ಮಗುವಿನ ಜನನದ ನಂತರ ಕೆಲವು ವರ್ಷಗಳು ಯಾವುದೇ ಚಿತ್ರರಂಗಕ್ಕು ಅಥವಾ ಕಿರುತ್ತರೆಗು ಬಂದಿರಲಿಲ್ಲ ಈಗ ಸ್ವಲ್ಪ ಬಿಡುವಿನ ನಂತರ ಜೀ ಕನ್ನಡದ ಜೋಡಿ ನಂಬರ್ ವನ್ ರಿಯಾಲಿಟಿ ಶೋ ಮೂಲಕ ಮತ್ತೆ ನಿರುಪಕಿಯಾಗಿ ಕಿರುತೆರೆಗೆ ಹಿಂದಿರುಗಿದ್ದಾರೆ.

ಹೌದು ಈಗ ಹೊಸದಾಗಿ ಶುರುವಾಗಿರುವ ಸೂಪರ್ ಕ್ವೀನ್ ರಿಯಾಲಿಟಿ ಶೋ ಅಲ್ಲೂ ಕೂಡ ಶ್ವೇತಾ ಚಂಗಪ್ಪ ರವರು ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಅಲ್ಲದೆ ಇದರ ಜೊತೆಗೆ ಕುರಿ ಪ್ರತಾಪ್ ರವರು ಕೂಡ ನಿರೂಪಣೆಯನ್ನು ಮಾಡಲಿರುವುದು ವಿಶೇಷವಾಗಿದೆ. ಸದ್ಯ ಶ್ವೇತಾ ಚಂಗಪ್ಪ ರವರು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ. ಇನ್ನು ಇನ್ಸ್ಟಾಗ್ರಾಮ್ ನ ರೂಲ್ಸ್ ಮೂಲಕ ತನ್ನ ಅಭಿಮಾನಿಗಳನ್ನು ಮನರಂಜಿಸುತ್ತಾ ಇರುತ್ತಾರೆ.

ಇತ್ತೀಚಿಗೆ ಶ್ವೇತಾ ಚಂಗಪ್ಪ ಅವರು ಹಾಗೂ ಕುರಿ ಪ್ರತಾಪ್ ಅವರೂ ಸೂಪರ್ ಕ್ವೀನ್ ವೇದಿಕೆಯ ಮೇಲೆ ಶರಣ್ ರವರ ಚುಟು ಚುಟು ಹಾಡಿಗೆ ರೀಲ್ಸ್ ಮಾಡಿದ್ದಾರೆ. ಹೆಚ್ಚು ಫಾಲೋವರ್ಸ್ ಅನ್ನು ಹೊಂದಿರುವ ಶ್ವೇತಾ ಚಂಗಪ್ಪ ರವರು ಹೆಚ್ಚು ಲೈಕ್ಗಳನ್ನು ಕೂಡ ಪಡೆದಿದ್ದಾರೆ ಸದ್ಯ ಈ ವಿಡಿಯೋ ಇನ್ಸ್ಟಾಗ್ರಾಮ್ ರಿಲ್ಸ್ ನಲ್ಲಿ ವೈರಲ್ ಆಗಿರುವುದು ನಿಜ.

ಕಮಲಿ ಸೀರಿಯಲ್ ಅನಿಕಾ ಜಗ್ಗೇಶ್ ಅವರ ಫೇಮಸ್ ಡೈಲಾಗ್ ಗೆ ಡ್ಯಾನ್ಸ್ ಮಾಡಿದ ಈ ವಿಡಿಯೋ ನೋಡಿ, ನಿಜಕ್ಕೂ ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ.

ಅನಿಕಾ ಅಲಿಯಾಸ್ ಗ್ಯಾಬ್ರಿಯಾಲ

ಗೇಬ್ರಿಯಾಲ ಎಂದರೆ ಇದು ಯಾರೋ ಫಾರಿನ್ ಹುಡುಗಿ ಇರಬೇಕು ಎಂದು ಎಲ್ಲರೂ ತಿಳಿದುಕೊಳ್ಳುತ್ತಾರೆ ಆದರೆ ಏಕೆ ಅಪ್ಪಟ ಕನ್ನಡತಿ ಅಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಎನ್ನುವ ಸೂಪರ್ ಹಿಟ್ ಜನ ಮನ ಗೆದ್ದ ಸೀರಿಯಲ್ ಅಲ್ಲಿ ನಾಯಕ ನಾಯಕಿ ಪಾತ್ರಕ್ಕೆ ಸಮಾನವಾಗಿ ಇದ್ದ ಖಳನಾಯಕಿ ಪಾತ್ರದಲ್ಲಿ ನಟಿಸಿದ ಪ್ರತಿಭಾವಂತೆ.

ಈ ಧಾರಾವಾಹಿಯಲ್ಲಿ ರಿಷಿ ಹಾಗೂ ಕಮಲಿ ಎನ್ನುವ ನಾಯಕ ನಾಯಕಿ ಎಷ್ಟು ಫೇಮಸ್ ಆಗಿದ್ದರೂ ಅಷ್ಟೇ ಖಳನಾಯಕಿ ಪಾತ್ರವಾಗಿದ್ದ ಅನಿಕ ಕೂಡ ಫೇಮಸ್. ಈ ಅನಿಕಾ ಪಾತ್ರವನ್ನು ಅದ್ಭುತವಾಗಿ ನಟಿಸಿ ಕನ್ನಡದ ಸೀರಿಯಲ್ ಗಳಲ್ಲಿ ಸ್ಟೈಲ್ ಐಕಾನ್ ಖಳನಾಯಕಿ ಪಾತ್ರಕ್ಕೆ ಉದಾಹರಣೆಯಾಗಿ ಉದಾಹರಣೆ ಆದ ಅನಿಕ ಅವರ ನಿಜವಾದ ನಾಮಧೇಯ ಗೆಬ್ರಿಯಲಾ.

ಆದರೆ ಗೇಬ್ರಿಯಾಲ ಎನ್ನುವ ಹೆಸರಿಗಿಂತ ಅನಿಕ ಎನ್ನುವ ಹೆಸರಿನಿಂದಲೇ ಇವರನ್ನು ಜನ ಗುರುತಿಸುವುದು. ಅನಿಕಾ ಅಲಿಯಾಸ್ ಗೇಬ್ರಿಯಾಲ ಅವರು ಕಮಲಿ ಧಾರಾವಾಹಿ ಜೊತೆಗೆ ಜೀ ಕನ್ನಡ ವಾಹಿನಿಯ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಡಿಕೆಡಿ ಡ್ಯಾನ್ಸಿಂಗ್ ಶೋ ಅಲ್ಲಿ ಕಂಟೆಸ್ಟೆಂಟ್ ಆಗಿ ಕೂಡ ತನ್ನ ಛಾಪನ್ನು ಮೂಡಿಸಿದ ಈಕೆ ನೃತ್ಯದಲ್ಲಿ ತಾನೆಂತ ಮೇಲುಗೈ ಎನ್ನುವುದನ್ನು ತೋರಿಸಿದ್ದಾರೆ.

ಇದರ ಜೊತೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅನೇಕ ಫಂಕ್ಷನ್ಗಳಲ್ಲೂ ಭಾಗಿಯಾಗುತ್ತಾರೆ. ಆಗಾಗ ಇತರ ರಿಯಾಲಿಟಿ ಶೋಗಳನ್ನು ಕೂಡ ಅತಿಥಿ ಪಾತ್ರದಲ್ಲಿ ಬರುವ ಅನಿಕಾ ಅವರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಮತ್ತು ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲೂ ಕೂಡ ಕೆಲವು ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡಿದ್ದರು.

ಈಗ ಕಮಲಿ ಸೀರಿಯಲ್ ಮುಗಿದಿರುವುದು ಎಲ್ಲರಿಗೂ ಬೇಸರ ಮೂಡಿಸಿದೆ. ಇತರ ಕಲಾವಿದರಂತೆ ಅನಿಕ ಅಲಿಯಾಸ್ ಗೇಬ್ರಿಯಾಲ ಅವರು ಈಗ ಬೇರೆ ಪ್ರಾಜೆಕ್ಟ್ ಗಳತ್ತ ಮುಖ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಹಾಗಾಗ ಕೆಲವು ಪೋಸ್ಟ್ ಗಳನ್ನು ಆಗುತ್ತಾ ಸುದ್ದಿ ಆಗುತ್ತಿರುತ್ತಾರೆ.

ತನ್ನ ಫೋಟೋ ಶೂಟ್ಗಳು ಮತ್ತು ರೀಲ್ಸ್ ಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಅನಿಕ ಅವರಿಗೆ ಸಾಕಷ್ಟು ಸಂಖ್ಯೆ ಅಭಿಮಾನಿಗಳು ಮತ್ತು ಫಾಲೋವರ್ಸ್ ಗಳು ಕೂಡ ಇದ್ದಾರೆ. ಈಗ ಇವರ ಖಾತೆಯಿಂದ ಹೊಸದೊಂದು ರೀಲ್ ಅಪ್ಲೋಡ್ ಆಗಿದ್ದು ಇದು ಬಹಳ ವಿಶೇಷವಾಗಿದೆ ಕಾರಣ ಜಗ್ಗೇಶ್ ಅವರ ಹಳೆ ಸಿನಿಮಾ ಒಂದರ ಫೇಮಸ್ ಡೈಲಾಗ್ ಗೆ ಅನಿಕ ರೀಲ್ಸ್ ಮಾಡಿದ್ದಾರೆ.

ಈ ವಿಡಿಯೋ ಈಗ ಜೀ ಕನ್ನಡ ವಾಹಿನಿಯ ಅಫಿಶಿಯಲ್ ಇನ್ಸ್ಟಾಗ್ರಾಮ್ ಅಕೌಂಟ್ ಅಲ್ಲಿ ಗೇಬ್ರಿಯಾಲ ಜೊತೆ ಟ್ಯಾಗ್ ಆಗಿ ಶೇರ್ ಆಗಿದೆ. ಸರ್ವರ್ ಸೋಮಣ್ಣ ಸಿನಿಮಾದಲ್ಲಿ ಜಗ್ಗೇಶ್ ಅವರು ಸಿನಿಮಾ ಅಡಿಶನ್ ಗೆ ಹೋಗಿದ್ದ ಸಂದರ್ಭ ಒಂದರ ಫೇಮಸ್ ಡೈಲಾಗ್ ಆದ ಮೈ ಡಿಯರ್ ರೇಖಾ ಏನು ನಿನ್ನ ಆಟ ಮಾಡು ನಿಮ್ಮ ಡ್ಯಾಡಿಗೆ ಟಾಟಾ ಹಾಕಿಸುವೆ ಮದುವೆ ಊಟ ಆಮೇಲೆ ಪ್ರೇಮದ ಆಟ ಡೈಲಾಗ್ ಅನ್ನು ಜಗ್ಗೇಶ್ ಅವರ ರೀತಿ ಪಂಚೆ ಟವಲ್ ಹಾಕಿಕೊಂಡು ಹಳ್ಳಿ ಹೈದನ ಅವತಾರದಲ್ಲಿ ಅಭಿನಯಿಸಿದ್ದಾರೆ.

ಇವರ ಈ ಲುಕ್ಕಿಗೆ ಹಾಗೂ ಡೈಲಾಗ್ ಡೆಲಿವರಿ ರೀತಿಗೆ ನೋಡಿದವರೆಲ್ಲ ಫಿದಾ ಆಗಿದ್ದಾರೆ. ಈ ಡೈಲಾಗ್ ಹೇಳುವಾಗ ಜಗ್ಗೇಶ್ ಅವರಿಗೆ ಉಮಾಶ್ರೀ ಅವರು ಕೌಂಟರ್ ಕೊಟ್ಟಿದ್ದರು, ಉಮಾಶ್ರೀ ಡೈಲಾಗ್ ಹೇಳುವಾಗ ಜಗ್ಗೇಶ್ ಅವರು ಕೊಟ್ಟಿದ್ದ ಎಕ್ಸ್ಪ್ರೆಶನ್‌ಗಳನ್ನು ತಾವು ಕೂಡ ಮಾಡಿ ತೋರಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಬಿಗ್ ಫೈಟ್, ಕಂಟ್ರೋಲ್‌ ತಪ್ಪಿ ರೂಪೇಶ್ ರಾಜಣ್ಣ & ಆರ್ಯ ವರ್ಧನ್ ಗುರೂಜಿ ಮಾಡುತ್ತಿರುವ ಕುಸ್ತಿ ನೋಡಿ ಎಲ್ಲರೂ ಶಾ-ಕ್

ಗೊಂದಲದ ಗೂಡದ ಬಿಗ್ ಬಾಸ್ ಮನೆ, ರೂಪೇಶ್ ರಾಜಣ್ಣ ಹಾಗೂ ಆರ್ಯವರ್ಧನ್ ನಡುವೆ ನಡೆದ ಬಿಗ್ ಫೈಟ್.

ಬಿಗ್ ಬಾಸ್ ಸೀಸನ್ ೯ ರ ಕಾರ್ಯಕ್ರದ ಕಾಂಪಿಟೇಶನ್ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಅರ್ಧ ಜರ್ನಿ ಮುಗಿಸಿರುವ ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಹಾಗೂ ಅದೇ ರೀತಿ ಕೋಲ್ಡ್ ವಾರ್ ಕೂಡ ನಡೆಯುತ್ತಿದೆ. ಗೆಲುವಿನ ಗದ್ದಿಗೆ ಏರಲು ಎಲ್ಲರೂ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈಗಿರುವ ಕಂಟೆಸ್ಟೆಂಟ್ಗಳಲ್ಲಿ ಕೆಲವರು ವಯಸ್ಸಿಗೆ ಮೀರಿದ ಪ್ರಬುದ್ಧತೆ ತೋರಿ ತಮ್ಮ ದೃಢ ನಿರ್ಧಾರಗಳು ಹಾಗೂ ಬುದ್ಧಿವಂತಿಕೆಯಿಂದ ಹೆಸರು ಮಾಡುತ್ತಿದ್ದರೆ ಕೆಲ ಕಂಟೆಸ್ಟೆಂಟ್ ಗಳು ವಯಸ್ಸಿನಲ್ಲಿ ಇತರರಿಗಿಂತ ಹಿರಿಯರಾಗಿದ್ದರು, ಚಿಕ್ಕ ಮಕ್ಕಳ ರೀತಿ ನಡೆದುಕೊಳ್ಳುತ್ತಾ ಪ್ರೇಕ್ಷಕರ ಮನ ಗೆಲುತ್ತಿದ್ದಾರೆ.

ಈ ಸಾಲಿನಲ್ಲಿ ಆರ್ಯವರ್ಧನ್ ಮತ್ತು ರೂಪೇಶ್ ರಾಜಣ್ಣ ಅವರನ್ನು ಮಗುವಿನಂತಹ ಮನಸ್ಸಿನವರು ಎಂದು ಹೇಳಬಹುದು. ರಾಜಣ್ಣ ಹಾಗೂ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆಯಲ್ಲಿ ಎಂಟರ್ಟೈನ್ಮೆಂಟ್ ಮಾಡುವುದರಲ್ಲಿ ಪ್ರಬಲ ಸ್ಪರ್ಧಿಗಳು ಎಂದರೆ ತಪ್ಪಾಗುವುದಿಲ್ಲ.

ಮನರಂಜನೆ ವಿಷಯ ಬಂದಾಗ ಮನೆಯಲ್ಲಿ ಇರೋರನ್ನೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗಿಸುವ ವಿಚಿತ್ರ ಸ್ವಭಾವ ಹಾಗೂ ಶುದ್ಧ ಮನಸ್ಸು ಇಬ್ಬರಿಗೂ ಇದೆ. ಇಬ್ಬರು ನೋಡಲು ಒರಟರಂತೆ ಕಂಡರೂ ಕೋಪ ಬಂದಾಗ ಕಂಟ್ರೋಲ್ ಗೆ ಸಿಗದಷ್ಟು ಘರ್ಜಿಸಿದರು ಸಾಮಾನ್ಯವಾಗಿ ಮನೆ ಮಂದಿ ಜೊತೆ ಇದ್ದಾಗ ಮಕ್ಕಳಂತೆ ಮುಳುಗಿ ಹೋಗುತ್ತಾರೆ.

ಮಗುವಿನಂತಹ ಮುಗ್ಧತೆ ಇದ್ದು ಅದನ್ನೇ ಇತರ ಸ್ಪರ್ಧಿಗಳು ಇವರುಗಳ ಕಾಲೆಳೆಯಲು ಅಸ್ತ್ರ ಮಾಡಿಕೊಂಡಿದ್ದಾರೆ. ಅವರುಗಳ ಮುಗ್ಧತೆ ಕಾರಣ ಸಾಕಷ್ಟು ಬಾರಿ ಮನೆಯಲ್ಲಿ ಅವರನ್ನು ಪ್ರಾಂಕ್ ಕೂಡ ಮಾಡಲಾಗಿದ್ದು ಮನೆಯಲ್ಲಿದ್ದ ಇತರ ಸ್ಪರ್ಧಿಗಳಿಗೆ ಹಾಗೂ ಪ್ರೇಕ್ಷಕರಿಗೆ ಆ ಎಪಿಸೋಡ್ಗಳು ಬರಪೂರ ಮನೋರಂಜನೆಯನ್ನು ನೀಡಿದೆ.

ನೋಡಿದವರಲ್ಲ ಮನಪೂರ್ತಿ ನಕ್ಕಿದ್ದರು. ಆದರೆ ನೆನ್ನೆ ಎಪಿಸೋಡಲ್ಲಿ ಇಬ್ಬರ ನಡುವೆ ದೊಡ್ಡ ಜಗಳವೇ ನಡೆದು ಹೋಗಿದೆ, ತಮಾಷೆಗೆ ಶುರುವಾದ ಈ ಜಗಳ ತಾರಕಕ್ಕೇರಿ ಮನೆ ಮಂದಿ ಜೊತೆ ಪ್ರೇಕ್ಷಕರು ಕೂಡ ಶಾಕ್ ಆಗಿ ಹೋಗಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಆರ್ಯವರ್ಧನ್ ಹಾಗೂ ರೂಪೇಶ್ ರಾಜಣ್ಣ ಅವರ ನಡುವೆ ತಮಾಷೆ ಶುರುವಾಗುತ್ತದೆ ಹೊಡೆಯುವ ಆಟ ಶುರುಮಾಡುತ್ತಾರೆ. ಪದೇ ಪದೇ ಹೊಡೆಯುತ್ತಿದ್ದನ್ನು ನೋಡಿ ರೂಪೇಶ್ ರಾಜಣ್ಣ ಕಿರಿಕಿರಿ ಆಗಿ ಏನು ಮಾಡ್ತಾ ಇದ್ದೀರಾ? ಕಪಿ ರೀತಿ ಆಟ ಆಡ್ತಾ ಇದ್ದೀರಲ್ಲ ಎಂದಿದ್ದಾರೆ ಇದಕ್ಕೆ ಆರ್ಯವರ್ಧನ್ ಅವರು ನೀವು ಕಪಿ ರಾಜಣ್ಣ ಅಂದಿದ್ದಾರೆ.

ಇದರಿಂದ ತಕ್ಷಣ ಸಿಟ್ಟಿಗೆದ್ದ ರೂಪೇಶ್ ರಾಜಣ್ಣ ಅವರು ಯಾಕೆ ಹೀಗೆ ಹೊಡೆಯುತ್ತಿದ್ದಾರ ಎಂದು ಪ್ರಶ್ನಿಸಿದ್ದಾರೆ ಅದಕ್ಕೆ ತಮಾಷೆಗೆ ರಿ ಎಂದ ಅವರ ಉತ್ತರ ರೂಪೇಶ್ ರಾಜಣ್ಣ ಅವರ ಕೋಪವನ್ನು ಇನ್ನಷ್ಟು ಕೆರಳಿಸಿದೆ. ಯಾವುದು ತಮಾಷೆ ಸ್ವಲ್ಪ ಸಲಿಗೆ ಕೊಟ್ರೆ ಇಷ್ಟೊಂದು ಆಡ್ತಾ ಇದ್ದೀರಲ್ಲ ಇಂದು ರೂಪೇಶ್ ರಾಜಣ್ಣ ಗದರಿದ್ದಾರೆ.

ಅದಕ್ಕೆ ನಾವು ತಮಾಷೆಗಾಗಿ ಮಾಡಿದ್ದನ್ನು ನೀವು ಸೀರಿಯಸ್ ಆಗಿ ತೆಗೆದುಕೊಂಡರೆ ಅದು ನಮ್ಮ ತಪ್ಪ ಎಂದು ಆರ್ಯವರ್ಧನ್ ಕೇಳಿದ್ದಾರೆ. ನೀವು ಲಾರ್ಡ್ ಗವರ್ನರ್ ತರ ಆಡಬೇಡಿ ಎಂದು ರೂಪೇಶ್ ರಾಜಣ್ಣ ಬೈದಿದ್ದಕ್ಕೆ ನೀವು ಲಾಡ್ಜ್ ಗವರ್ನರ್ ಅವರ ಅಪ್ಪನ್ ತರ ಆಡುತ್ತಿದ್ದೀರಾ ಎಂದು ತಿರುಗಿಸಿ ಟಾಂಗ್ ನೀಡಿದ್ದಾರೆ ಆರ್ಯವರ್ಧನ್.

ಮತ್ತೆ ಕೈ ತೋರಿಸಿ ಅದಕ್ಕೇನು ಈಗ ಹೊಡಿತೀರಾ ಹೊಡಿರಿ ನೋಡೋಣ ಎಂದು ಕೂಡ ಜೋರಾಗಿ ಮಾತನಾಡಿದ್ದಾರೆ. ಮತ್ತೊಮ್ಮೆ ಹೊಡೆದರೆ ಸರಿ ಇರಲ್ಲ ಎಂದು ರೂಪೇಶ್ ರಾಜಣ್ಣ ಜಗಳ ಮಾಡಿದ್ದಾರೆ. ಇಬ್ಬರ ನಡುವೆ ತಮಾಷೆಯಾಗಿ ಶುರುವಾಗಿ ದೊಡ್ಡ ಹಂಗಾಮವೇ ಆಗಿ ಹೋಗಿದೆ. ಮಧ್ಯದಲ್ಲಿ ರೂಪೇಶ್ ಶೆಟ್ಟಿ ಮತ್ತು ಅರುಣ್ ಸಾಗರ್ ಇದನ್ನು ಬಿಡಿಸುವ ಪ್ರಯತ್ನ ಕೂಡ ಮಾಡಿದ್ದಾರೆ.

KGF ಸಿನಿಮಾ ಖ್ಯಾತಿಯ ಹಿರಿಯ ನಟ ಕೃಷ್ಣೋಜಿರಾವ್ ವಿ.ಧಿ.ವ.ಶ

ಕೆ.ಜಿ.ಎಫ್ ಸಿನಿಮಾ ಹಿರಿಯ ಕಲಾವಿದ ಕೃಷ್ಣೋಜಿರಾವ್

ಕೆಜಿಎಫ್ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ ನಟ ಕೃಷ್ಣೋಜಿ ರಾವ್ ಅವರು ಇಂದು ಸಂಜೆ ಸುಮಾರು 4:30 ಸಮೀಪದಲ್ಲಿ ವಿ.ಧಿ.ವ.ಶ.ರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದಲೂ ಕೂಡ ಕೃಷ್ಣೋಜಿ ರಾವ್ ಕಳೆದ ಒಂದು ವಾರದಿಂದಲೂ ಕೂಡ ಚಿಕಿತ್ಸೆ ಪಡೆಯುತ್ತಿದ್ದರು. ವಯೋ ಸಹಜ ಕಾಯಿಲೆಗೆ ತುತ್ತಾಗಿದ್ದ ಕೃಷ್ಣೋಜಿ ರಾವದ ಅವರು ಇಂದು ನಮ್ಮೆಲ್ಲರನ್ನು ಬಿಟ್ಟು ಅ.ಗ.ಲಿದ್ದರೆ.

ನಿಜಕ್ಕೂ ಇದು ಚಿತ್ರರಂಗಕ್ಕೆ ತುಂಬಲಾರದ ನ.ಷ್ಟ ಅಂತಾನೆ ಹೇಳಬಹುದು ಕಳೆದ ಎರಡು ವರ್ಷಗಳಿಂದ ನಾವು ನಮ್ಮ ಚಿತ್ರರಂಗದಲ್ಲಿ ಸಾಕಷ್ಟು ನಟ ನಟಿಯರನ್ನು ಹಾಗೂ ಪೋಷಕ ಕಲಾವಿದರನ್ನು ಕಳೆದುಕೊಂಡಿದ್ದೇವೆ. ಇದೀಗ ಅದೇ ಸಾಲಿನಲ್ಲಿ ಕೃಷ್ಣ ಅವರು ಕೂಡ ಸೇರ್ಪಡೆಯಾಗಿದ್ದಾರೆ ನಿಜಕ್ಕೂ ಇದು ದುಃಖಕರ ಸಂಗತಿ ಅಂತಾನೆ ಹೇಳಬಹುದು. ಇನ್ನು ಹಿರಿ ವಯಸ್ಸಿನವರಾದ ಇವರು ಕನ್ನಡದ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಮೂಲತಃ ರಂಗಭೂಮಿಯವರು ನಾಟಕದಲ್ಲಿಯೇ ತಮ್ಮ ಜೀವನವನ್ನು ಕಳೆದರು ಅಭಿನಯವನ್ನೇ ಕರಗತವಾಗಿ ಮಾಡಿಕೊಂಡಿರುವ ಇವರು.

ಕಳೆದ 15 ದಿನದ ಹಿಂದೆಯೂ ಕೂಡ ಸಿನಿಮಾ ಒಂದರಲ್ಲಿ ಅಭಿನಯಿಸಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಕಾರಣ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ವೈದ್ಯರು ಎಲ್ಲ ರೀತಿಯ ಚಿಕಿತ್ಸೆಯನ್ನು ನೀಡಿದ್ದರು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಂಜೆಯ ಹೊತ್ತಿಗೆ ಇವರು ವಿ.ಧಿ.ವ.ಶ.ರಾಗಿದ್ದಾರೆ. ಈ ವಿಚಾರ ಕೇಳುತ್ತಿದ್ದ ಹಾಗೆ ಚಿತ್ರರಂಗದ ಸಾಕಷ್ಟು ನಟ ನಟಿಯರು ಮತ್ತು ಕಲಾವಿದರು ದುಃಖ ವ್ಯಕ್ತ ಪಡಿಸಿದ್ದಾರೆ.

ಕೃಷ್ಣ ಅವರು ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದರೂ ಕೂಡ ಇವರಿಗೆ ಹೆಚ್ಚು ಹೆಸರು ಕೀರ್ತಿ ಮತ್ತು ಐಡೆಂಟಿಟಿಯನ್ನು ತಂದುಕೊಟ್ಟ ಸಿನಿಮಾ ಅಂದರೆ ಅದು ಕೆಜಿಎಫ್ ಅಂತಾನೆ ಹೇಳಬಹುದು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಇಂಡಿಯಾ ಸಿನಿಮಾ ಕೆಜಿಎಫ್ ನಲ್ಲಿ ಕೃಷ್ಣ ಅವರು ಬಹು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಒಂದು ಪಾತ್ರದ ಮೂಲಕ ಕೃಷ್ಣ ಅವರು ಹೆಚ್ಚು ಗುರುತಿಸಿಕೊಂಡಿದ್ದರು ಕೆಜಿಎಫ್ ಸಿನಿಮಾದ ನಂತರ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ.

ವಿಶೇಷ ಏನೆಂದರೆ ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ಹೊಸ ಸಿನಿಮಾ ಒಂದಕ್ಕೆ ಸಹಿ ಹಾಕಿದ್ದು ಈ ಸಿನಿಮಾದಲ್ಲಿ ಸ್ವತಃ ಇವರೇ ನಾಯಕ ನಟರಾಗಿ ಅಭಿನಯಿಸುವಂತಹ ಚಾನ್ಸದ ಅನ್ನು ಕೂಡ ಪಡೆದುಕೊಂಡಿದ್ದರು. ಆದರೆ ವಿಧಿ ಲಿಖಿತ ಬೇರೆ ಈ ಸಿನಿಮಾದ ಚಿತ್ರೀಕರಣ ಸಂಪೂರ್ಣ ವಾಗುವುದಕ್ಕಿಂತ ಮುಂಚೆ ಕೆಜಿಎಫ್ ತಾತ ಅಂತಾನೆ ಫೇಮಸ್ ಆಗಿದ್ದಂತಹ ಕೃಷ್ಣ ಅವರು ವಿ.ಧಿ.ವ.ಶ.ರಾಗಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದ ಹಾಗೆ ಚಿತ್ರರಂಗದ ಹಲವು ಹಿರಿಯ ಕಲಾವಿದರು ಆಸ್ಪತ್ರೆಗೆ ಧಾವಿಸಿ ಕೃಷ್ಣ ಅವರ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಇನ್ನು ಕೃಷ್ಣ ಅವರ ಮಕ್ಕಳು ಹಾಗೂ ಸಹೋದರರು ಸಂಬಂಧಿಗಳು ಕೂಡ ಆಸ್ಪತ್ರೆಗೆ ಧಾವಿಸಿದ್ದು ಇದೀಗ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳುತ್ತಿದ್ದರು. ಅದೇನೇ ಆಗಲಿ ಎಲ್ಲರನ್ನೂ ರಂಜಿಸುತ್ತಿದ್ದ ಈ ಹಿರಿಯ ಕಲಾವಿದ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದು ನಿಜಕ್ಕೂ ಕೂಡ ವಿಷಾದವೇ.

ಇವರ ಆ.ತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಹಾರೈಸೋಣ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಓಂ ಶಾಂತಿ ಎಂದು ಕಾಮೆಂಟ್ ಮಾಡಿ ಹಾಗೂ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ ಮತ್ತೊಮ್ಮೆ ಕೃಷ್ಣ ಅವರು ಹುಟ್ಟು ಬರಲಿ ಇನ್ನಷ್ಟು ಕನ್ನಡ ಸಿನಿಮಾದಲ್ಲಿ ನಟನೆ ಮಾಡಲಿ ಎಂದು ಎಲ್ಲರೂ ಆಶಿಸೋಣ.

ವಸಿಷ್ಠ ಸಿಂಹ ಮೇಲೆ ಲವ್ ಆಗಿದ್ದು ಹೇಗೆ ಎಂಬುದನ್ನು ನಿಸ್ಸಕೋಂಚವಾಗಿ ಹೇಳಿಕೊಂಡ ನಟಿ ಹರಿಪ್ರಿಯಾ ಇವರ ಪ್ರೀತಿಗೆ ಸೇತುವೆಯೇ ಕ್ರಿಸ್ಟಲ್ ಅಂತೆ, ಈ ಕ್ರಿಸ್ಟಲ್ ಅಂದ್ರೆ ಯಾರು ಗೊತ್ತ.?

ಹರಿಪ್ರಿಯಾ ವಸಿಷ್ಠ ಸಿಂಹ ಕ್ಯೂಟ್ ಲವ್ ಸ್ಟೋರಿ

ಕಳೆದ ಕೆಲವು ದಿನಗಳಿಂದ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ನಟ ವಶಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯಾ ಜೋಡಿ ಕುರಿತಾಗಿ ಹಲವು ಸುದ್ದಿಗಳು ಪ್ರಸಾರವಾಗಿದ್ದವು. ಇವರಿಬ್ಬರಿಗೂ ಎಂಗೇಜ್ಮೆಂಟ್ ಕೂಡ ಆಗಿ ಈಗಾಗಲೇ ಆ ಊಹಾಪೋಹಗಳಿಗೆಲ್ಲ ತೆರೆ ಬಿದ್ದಿದೆ. ಮುಂದಿನ ಜನವರಿಯಲ್ಲಿ ಜೋಡಿಗಳು ಹಸೆಮಣೆ ಕೂಡ ಏರಲಿದ್ದಾರೆ ಎನ್ನುವುದು ಫಿಕ್ಸ್ ಆಗಿದೆ.

ಇಂತಹ ಸಂದರ್ಭದಲ್ಲಿ ಹರಿಪ್ರಿಯಾ ಅವರು ವಸಿಷ್ಟ ಸಿಂಹ ಅವರಿಗೆ ತಾವೆಷ್ಟು ಆಪ್ತರಾಗಿದ್ದರು ಹೇಗೆ ಅವರ ಸ್ನೇಹ ಶುರುವಾಗಿ ಅದು ಪ್ರೀತಿ ಆಯಿತು ಎನ್ನುವ ಎಲ್ಲಾ ವಿಚಾರವನ್ನು ಅವರು ಕೊಟ್ಟಿದ್ದ ಸುಂದರವಾದ ಗಿಫ್ಟ್ ಜೊತೆ ವಿವರಿಸಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರೇ ಅವರ ಧ್ವನಿಯಲ್ಲಿ ಮಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಸಿಷ್ಟ ಸಿಂಹ ಅವರು ಹರಿಪ್ರಿಯವರಿಗೆ ಹತ್ತಿರವಾದ ಸಮಯದಲ್ಲಿ ಒಂದು ನಾಯಿಮರಿ ಅನ್ನು ಗಿಫ್ಟ್ ನೀಡಿದ್ದರಂತೆ. ಈಗಾಗಲೇ ಹರಿಪ್ರಿಯಾ ಅವರ ಮನೆಯಲ್ಲಿ ಎರಡು ನಾಯಿ ಮರಿಗಳು ಇದ್ದವು ಒಂದು ಹ್ಯಾಪಿ ಮತ್ತು ಮತ್ತೊಂದು ಲಕ್ಕಿ ಎನ್ನುವುದು. ಆದರೆ ಲಕ್ಕಿ ಅನ್ನುವುದು ಬಹಳ ಬೇಗ ಹರಿಪ್ರಿಯ ಹಾಗೂ ಅವರ ಕುಟುಂಬದಿಂದ ದೂರ ಆಯಿತು.

ಎಲ್ಲರೂ ಲಕ್ಕಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದರು ಹ್ಯಾಪಿ ಕೂಡ ಲಕ್ಕಿ ಇಲ್ಲದೆ ಹ್ಯಾಪೆ ಮೋರಿ ಹಾಕಿಕೊಂಡು ಇರುತ್ತಿತ್ತು ಅಂತಹ ಸಮಯದಲ್ಲಿ ಆ ಎಲ್ಲ ದುಃಖವನ್ನು ಮರೆಯ ಮರೆಸುವ ಉದ್ದೇಶದಿಂದ ನಾಯಿಮರಿಯನ್ನು ಸಿಂಹ ಗಿಫ್ಟ್ ಮಾಡಿದ್ದರು. ಅದಕ್ಕೆ ಹರಿಪ್ರಿಯ ಕ್ರಿಸ್ಟಲ್ ಎಂದು ಹೆಸರಿಟ್ಟು ಹ್ಯಾಪಿ ಜೊತೆ ತಂದು ಬಿಟ್ಟಿದ್ದರು.

ಮೊದಮೊದಲು ಹ್ಯಾಪಿ ಆಟ ಸಾಮಾನುಗಳಲ್ಲಿ ಆಟ ಆಡುತ್ತಿದ್ದ ಕ್ರಿಸ್ಟಲ್ ನೋಡಿ ಹ್ಯಾಪಿಗೆ ಬಹಳ ಕೋಪ ಬರುತ್ತಿತ್ತು. ಅಲ್ಲದೆ ಕ್ರಿಸ್ಟಲ್ ಬಹಳ ತುಂಟನಾಗಿತ್ತು, ಹ್ಯಾಪಿಯನ್ನು ಯಾವಾಗಲೂ ಗೋಳು ಹೊಯ್ದು ಕೊಳ್ಳುತ್ತಿತ್ತು. ಸದಾ ಇವರಿಬ್ಬರ ಆಟ ಕಿತ್ತಾಟ ಚೆಲ್ಲಾಟಗಳು ಮನೆಯವರಿಗೆ ಸಾಕೆನಿಸಿತ್ತು. ಕೊನೆಗೆ ನಿಧಾನವಾಗಿ ಹ್ಯಾಪಿ ಮತ್ತು ಕ್ರಿಸ್ಟಲ್ ಇಬ್ಬರು ಒಳ್ಳೆಯ ಸ್ನೇಹಿತರಾದರು.

ಹೀಗೆ ಹಲವು ದಿನಗಳು ಕಳೆದ ಮೇಲೆ ಲಕ್ಕಿ ಸ್ಥಾನವನ್ನು ಕ್ರಿಸ್ಟಲ್ ತುಂಬಿದ್ದು ಈಗ ಹ್ಯಾಪಿ ಮತ್ತು ಕ್ರಿಸ್ಟಲ್ ಒಟ್ಟಿಗೆ ಆಟ ಆಡುತ್ತಾರೆ, ಒಟ್ಟಿಗೆ ಊಟ ಮಾಡುತ್ತಾರೆ ಮತ್ತು ಒಟ್ಟಿಗೆ ಮಲಗುತ್ತಾರೆ. ಈಗ ಇವರಿಬ್ಬರ ನಡುವೆ ಒಂದು ಅನ್ಯೋನ್ಯ ಬಾಂಧವ್ಯ ಬೆಳೆದಿದೆ ಎನ್ನುವುದನ್ನು ತಮ್ಮ ಧ್ವನಿಯಲ್ಲಿ ಹೇಳುತ್ತಾ.

ಹ್ಯಾಪಿ ಮತ್ತು ಕ್ರಿಸ್ಟಲ್ ಇಬ್ಬರ ಆಟಗಳು, ಜಗಳಗಳು ಮತ್ತು ಈಗ ಒಟ್ಟಿಗೆ ಇರುವ ಕೆಲವು ಕ್ಷಣಗಳ ವಿಡಿಯೋ ತುಣುಕುಗಳನ್ನು ಒಟ್ಟಿಗೆ ಸೇರಿಸಿ ಅದನ್ನು ಹಂಚಿಕೊಂಡಿದ್ದಾರೆ ಹರಿಪ್ರಿಯ. ವಸಿಷ್ಠ ಸಿಂಹ ಕ್ರಿಸ್ಟಲನ್ನು ಗಿಫ್ಟ್ ಕೊಡುವುದರ ಜೊತೆಗೆ ಅವರೊಂದು ಸೀಕ್ರೆಟ್ ಮೆಸೇಜ್ ಕೂಡ ಕಳುಹಿಸಿದರು ಎಂದು ಆ ಸೀಕ್ರೆಟ್ ಏನು ಎನ್ನುವುದನ್ನು ಕೂಡ ರಿವೀಲ್ ಮಾಡಿದ್ದಾರೆ.

ಕ್ರಿಸ್ಟಲ್ ಹೊಟ್ಟೆ ಭಾಗದಲ್ಲಿ ಹಾರ್ಟ್ ಸಿಂಬಲ್ ಇದೆ ಅದನ್ನು ತಂದಾಗ ಯಾರು ಗಮನಿಸಿದೆ ಹೋದರು ಕ್ರಿಸ್ಟಲ್ ಬೆಳೆಯುತ್ತಾ ಹೋದಂತೆ ಆ ಹಾರ್ಟ್ ಬರ್ತ್ ಮಾರ್ಕ್ ಕೂಡ ದೊಡ್ಡದಾಗಿ ಬೆಳೆದಿದೆ. ಕ್ರಿಸ್ಟಲ್ ಹೊಟ್ಟೆ ತೋರಿಸುತ್ತಾ ಹೇಗೆ ಕ್ರಿಸ್ಟಲ್ ಹೊಟ್ಟೆ ಮೇಲಿನ ಸಿಂಬಲ್ ಬೆಳೆಯುತ್ತಾ ಇದೆಯೋ ಹಾಗೆ ನನ್ನ ಮತ್ತು ವಸಿಷ್ಠ ಸಿಂಹ ನಡುವಿನ ಸ್ನೇಹ ಪ್ರೀತಿಯಾಗಿ ಪ್ರೀತಿ ಈಗ ಬಾಳ ಸಂಗಾತಿ ಆಗುವ ತನಕ ಆತ್ಮೀಯತೆ ಬೆಳೆದಿದೆ ಎಂದು ಹೇಳಿಕೊಂಡಿದ್ದಾರೆ ಹರಿಪ್ರಿಯಾ ಅವರು.

ಜೂನಿಯರ್ ಪ್ರಜ್ವಲ್ ಎಂಟ್ರಿ ಯಾವಾಗ ಎಂದಾಗ ನಟಿ ರಾಗಿಣಿ ಪ್ರಜ್ವಲ್ ಕೊಟ್ಟ ಉತ್ತರವೇನು ಗೊತ್ತ.?

ರಾಗಿಣಿ ಪ್ರಜ್ವಲ್ ದಂಪತಿ

ಕನ್ನಡ ಚಿತ್ರರಂಗದ ಡೈನಾಮಿಕ್ ಹೀರೋ ಎಂದು ಪ್ರಖ್ಯಾತಿಯಾಗಿರುವ ದೇವರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಉತ್ತಮವಾದ ಕೊಡುಗೆಯನ್ನು ನೀಡಿದ್ದಾರೆ ಸುಮಾರು ಎರಡು ದಶಕಗಳಿಂದನೂ ಕೂಡ ಕನ್ನಡದಲ್ಲಿ ಎಲ್ಲಾ ತರಹದ ಪಾತ್ರಗಳನ್ನು ಮಾಡುತ್ತಾ ಇದ್ದಾರೆ. ಇನ್ನು ಅವರ ಮಗ ಡೈನಮಿಕ್ ಪ್ರಿನ್ಸ್ ಎಂದೇ ಹೆಸರು ಪಡೆದಿರುವ ಪ್ರಜ್ವಲ್ ದೇವರಾಜ್ ಅವರು ಕೂಡ ಉತ್ತಮವಾದ ನಾಯಕ ನಟ ಎಂದು ಈಗಾಗಲೇ ಸಾಬೀತು ಪಡಿಸಿದ್ದಾರೆ.

ಇನ್ನು ಇವರ ಪತ್ನಿಯಾದ ರಾಗಿಣಿ ಪ್ರಜ್ವಲ್ ಅವರು ಕೂಡ ಒಬ್ಬ ಉತ್ತಮವಾದ ನಟಿ ಹಾಗೂ ಮಾಡಲ್ ಎಂದು ಕನ್ನಡಿಗರಿಗೆ ತಿಳಿದಿರುವ ವಿಷಯ. ರಾಗಿಣಿ ಪ್ರಜ್ವಲ್ ದೇವರಾಜ್ ಹಾಗು ಪ್ರಜ್ವಲ್ ದೇವರಾಜ್ ಇಬ್ಬರೂ ಕೂಡ ಕನ್ನಡ ಚಿತ್ರರಂಗದ ಸುಂದರವಾದ ದಂಪತಿಗಳು ಎಂದು ಹೇಳಬಹುದು. ಚಿಕ್ಕ ವಯಸ್ಸಿನಿಂದ ಜೊತೆಯಲ್ಲಿ ಬೆಳೆದು ಸ್ನೇಹಿತರಾಗಿದ್ದರು. ನಂತರ ಸ್ನೇಹವು ಪ್ರೀತಿಗೆ ತಿರುಗಿ ಇವರಿಬ್ಬರ ಮಧ್ಯ ಪ್ರೀತಿ ಶುರುವಾಯಿತು.

ಬಹಳ ದಿನದಿಂದ ಒಬ್ಬರು ಇನ್ನೊಬ್ಬರನ್ನು ತಿಳಿದಿರುವ ಕಾರಣ ಇವರೊಬ್ಬರ ಮಧ್ಯೆ ಯಾವುದೇ ತರಹದ ವೈ ಮನಸು ಬಂದಿಲ್ಲ, ಇನ್ನು ಒಬ್ಬರು ಇನ್ನೊಬ್ಬರಿಗೆ ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ಸಮಯದಲ್ಲೂ ಪ್ರೋತ್ಸಾಹ ನೀಡಿ ಬೆನ್ನೆಲುಬಾಗಿ ನಿಲ್ಲುತ್ತಾರೆ ಈ ಕಾರಣ ಈ ಸಿನಿ ತಾರೆಯರ ಜೋಡಿಯು ಎಷ್ಟೋ ಜೋಡಿಗಳಿಗೆ ಮಾದರಿಯಾಗಿದೆ

ಪ್ರಜ್ವಲ್ ದೇವರಾಜ್ ಅವರು ಮದುವೆಯಾಗಿ ಏಳು ವರ್ಷಗಳಾಗಿವೆ. ಇವರಿಬ್ಬರು 2015 ರಲ್ಲಿ ವಿವಾಹವಾದರು, ರಾಗಿಣಿಯವರು ಪ್ರಜ್ವಲ್ ದೇವರಾಜ್ ಅವರಿಗೆ ಉತ್ತಮವಾದ ಸಂಗಾತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಹೌದು ಸ್ನೇಹಿತರೆ ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಒಬ್ಬ ಮೋಡಲ್ ಹಾಗೂ ಖಾಸಗಿ ಜಾಹೀರಾತುಗಳಲ್ಲಿ ಅಭಿನಯಿಸುತ್ತಾರೆ.

ಇನ್ನು ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಆರೋಗ್ಯಕ್ಕಾಗಿ ಎಷ್ಟು ಬೇಕೋ ಅಷ್ಟು ಆಹಾರ ಹಾಗೂ ವ್ಯಾಯಾಮಗಳ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಪುನೀತ್‌ ರಾಜ್‌ಕುಮಾರ್‌ ಬ್ಯಾನರ್‌ನ ‘ಲಾ’ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದ ಚೆಲುವೆ ರಾಗಿಣಿ ಚಂದ್ರನ್‌. ಮಾಡೆಲ್‌, ಡ್ಯಾನ್ಸರ್‌, ಟ್ರೈನರ್‌ ಆಗಿಯೂ ಗುರುತಿಸಿಕೊಂಡವರು.

ಡ್ಯಾನ್ಸ್‌, ಯೋಗ, ಫಿಟ್‌ನೆಸ್‌ ಎಲ್ಲಾ ವಯಸ್ಸಿಗರಿಗೂ ಹೇಳಿ ಕೊಡುತ್ತಾರೆ. ಇನ್ನು ಇಷ್ಟು ವರ್ಷವಾದರೂ ಈ ಜೋಡಿಗೆ ಮಗುವಿನ ಜನನವು ಯಾವಾಗ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ. ಇನ್ನು ರಾಗಿಣಿ ಪ್ರಜ್ವಲ್ ರವರಿಗೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಫ್ಯಾನ್ ಫಾಲೋವರ್ಸ್ ತುಂಬಾ ಹೆಚ್ಚಾಗಿದ್ದು, ಅವರ ಅಭಿಮಾನಿಗಳು ಕೂಡ ಹೆಚ್ಚು ಇದ್ದಾರೆ. ಹಾಗಾಗಿ ರಾಗಿಣಿಯವರು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ.

ಇನ್ನು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ರಾಗಿಣಿಯವರು ಜೂನಿಯರ್ ಪ್ರಜ್ವಲ್ ರವರ ಬಗ್ಗೆ ಮಾತನಾಡಿದ್ದಾರೆ ಹೌದು. ಪನ್ನಗ ನಾಗಾಭರಣ, ಹಾಗೂ ಚಿರಂಜೀವಿ ಸರ್ಜಾ, ಮೇಘನಾ ರಾಜ್, ಪ್ರಜ್ವಲ್ ರಾಗಿಣಿ ಇವರೆಲ್ಲರೂ ಉತ್ತಮವಾದ ಸ್ನೇಹಿತರು ಈಗಾಗಲೇ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರಿಗೂ ಮಗು ಜನಿಸಿದ್ದು ಜೊತೆಯಲ್ಲಿ ಪನ್ನಗ ನಾಗಭರಣ ಅವರಿಗೂ ಒಂದು ಮಗುವಿದೆ ಹಾಗಾಗಿ ಪ್ರಜ್ವಲ್ ಹಾಗೂ ರಾಗಿಣಿ ದಂಪತಿಗಳಿಗೆ ಮಗುವನ್ನು ನೋಡಿಕೊಳ್ಳುವುದು ಅಭ್ಯಾಸವಾಗಿದೆಯಂತೆ.

ಹಾಗಾಗಿ ಇವರು ನೀಡಿರುವ ಉತ್ತರ ಜೂನಿಯರ್ ಪ್ರಜ್ವಲ್ ಅಂದರೆ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಅವರ ಮಗುವನ್ನು ಆದಷ್ಟು ಬೇಗ ಅಪೇಕ್ಷಿಸಬಹುದು ಎಂದು ಹೇಳಿದ್ದಾರೆ ಅವರಿಗೂ ಕೂಡ ತಮ್ಮ ಮಗುವನ್ನು ಬೇಗ ನೋಡುವ ತವಕ ಇದೆಯಂತೆ ಹೀಗೆಂದು ಸಂದರ್ಶನ ಒಂದರಲ್ಲಿ ಉತ್ತರಿಸಿ. ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದ್ದಾರೆ ಅಲ್ಲದೆ ಈ ವಿಡಿಯೋ ವೈರಲ್ ಆಗಿರುವುದು ನಿಜ.