Home Blog Page 268

ಒಂದೊಳ್ಳೆ ಪಾತ್ರ ಇದೆ ಆಕ್ಟ್ ಮಾಡ್ತೀಯಾ ಅಂತ ಆಫೀಸ್ ಗೆ ಕರೆಸಿಕೊಂಡ್ರು ಕೊನೆಗೆ ಮಾಡಿದ್ದೇನು ಗೊತ್ತಾ.? ಶರಣ್ & ತರುಣ್ ಅಸಲಿ ಮುಖ ಬಯಲು ಮಾಡಿದ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್

ಗುರುಶಿಷ್ಯರು ಸಿನಿಮಾ

ನಟ ಬುಲೆಟ್ ಪ್ರಕಾಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಬುಲೆಟ್ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಒಂದು ಬುಲೆಟ್ ಸಿನಿಮಾದಲ್ಲಿ ನಟನೆ ಮಾಡಿದ ಕಾರಣವೇ ಇವರ ಹೆಸರಿನ ಮುಂದೆ ಬುಲೆಟ್ ಎಂಬುದನ್ನು ಸೇರಿಸಲಾಯಿತು. ತದನಂತರ ಇವರನ್ನು ಎಲ್ಲರೂ ಕೂಡ ಬುಲೆಟ್ ಪ್ರಕಾಶ್ ಎಂದೆ ಗುರುತಿಸಲಾಯಿತು ಈ ಸಿನಿಮಾದ ಸಕ್ಸಸ್ ನಂತರ ಬುಲೆಟ್ ಪ್ರಕಾಶ್ ಅವರು ಸಾಕಷ್ಟು ಸಿನಿಮಾದಲ್ಲಿ ಹಾಸ್ಯ ಪ್ರಧಾನ ಪಾತ್ರದಲ್ಲಿ ಪೋಷಕ ಪ್ರಧಾನ ಪಾತ್ರದಲ್ಲಿ ಹಾಗೂ ಸಹೋದರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌.

ಹೆಚ್ಚಾಗಿ ಎಲ್ಲರಿಗೂ ಮನರಂಜನೆ ನೀಡಿದ್ದು ಹಾಸ್ಯ ಪ್ರಧಾನ ಪಾತ್ರಗಳ ಮೂಲಕವೇ ಆದರೆ ಕಳೆದ ಎರಡು ವರ್ಷಗಳ ಹಿಂದೆ ಬುಲೆಟ್ ಪ್ರಕಾಶ್ ಅವರು ಅನಾರೋಗ್ಯ ಕಾರಣದಿಂದ ವಿ.ಧಿ.ವ.ಶ.ರಾದ ವಿಚಾರ ನಿಮಗೆ ತಿಳಿದಿದೆ‌. ಇನ್ನು ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಕೂಡ ಇತ್ತೀಚಿನ ದಿನದಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಎಷ್ಟೇ ತೆರೆಕಂಡ ಗುರು ಶಿಷ್ಯರು ಎಂಬ ಸಿನಿಮಾದಲ್ಲಿ ಪ್ರಮುಖ ರೋಲ್ ನಲ್ಲಿ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅವರು ಕಾಣಿಸಿಕೊಂಡಿದ್ದಾರೆ.

ಇನ್ನು ಈ ಒಂದು ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್ ಆದಂತಹ ಸಿನಿಮಾಗಳ ಲಿಸ್ಟ್ ಗೆ ಸೇರ್ಪಡೆಯಾಗಿದೆ. ರಕ್ಷಕ್ ಅವರನ್ನು ಸಂದರ್ಶನ ಮಾಡುವಂತಹ ಸಂದರ್ಭದಲ್ಲಿ ಈ ಸಿನಿಮಾಗೆ ನೀವು ಆಯ್ಕೆಯಾಗಿದ್ದು ಹೇಗೆ ಈ ಸಿನಿಮಾದಲ್ಲಿ ಪಾತ್ರವನ್ನು ಹೇಗೆ ನಿಭಾಯಿಸಿದರು ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಆ ಸಮಯದಲ್ಲಿ ಶರಣ್ ಹಾಗೂ ತರುಣ್ ಅವರ ಬಗೆಗಿನ ಕೆಲವೊಂದಷ್ಟು ಮಾಹಿತಿಯನ್ನು ರಕ್ಷಕ್ ಹೇಳಿಕೊಂಡಿದ್ದಾರೆ.

ಹೌದು ಮೊದಲಿನಿಂದಲೂ ಚಿತ್ರರಂಗದಲ್ಲಿ ರಕ್ಷಕ್ ಅವರಿಗೆ ಆಸಕ್ತಿ ಇತ್ತು, ಅಷ್ಟೇ ಅಲ್ಲದೆ ಬುಲೆಟ್ ಪ್ರಕಾಶ್ ಅವರಿಗೂ ಕೂಡ ತಮ್ಮ ಮಗನನ್ನು ನಾಯಕ ನಟನಾಗಿ ಮಾಡಬೇಕು ಎಂಬ ಆಸೆ ಮತ್ತು ಕನಸು ಇತ್ತಂತೆ. ಆದರೆ ಇದಕ್ಕೂ ಮುಂಚೆ ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದು ನಿಜಕ್ಕೂ ಕೂಡ ವಿಷಾದವೇ. ತಂದೆಯ ಆಸೆ ಕನಸನ್ನು ಹೇಗಾದರೂ ಮಾಡಿ ನನಸು ಮಾಡಬೇಕು ಎಂಬುದು ರಕ್ಷಕ್ ಗುರಿಯಾಗಿದೆ ಈ ಕಾರಣಕ್ಕಾಗಿಯೇ ವಿದ್ಯಾಭ್ಯಾಸದ ಜೊತೆಗೆ ಸಿನಿಮಾ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಳ್ಳುವುದಕ್ಕೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ.

ಚಿಕ್ಕ ಪುಟ್ಟ ಪಾತ್ರವಿದ್ದರು ಸರಿಯೇ ಅದನ್ನು ಮಾಡಬೇಕು ಎಂಬ ಹಂಬಲತೆಯನ್ನು ತೋರುತ್ತಿದ್ದಾರೆ ಅವಕಾಶಕ್ಕಾಗಿ ಎಲ್ಲೆಡೆ ಅಲೆಯುತ್ತಿದ್ದಾರೆ. ಈ ಸಮಯದಲ್ಲಿ ತರುಣ್ ಅವರ ಆಫೀಸ್ ನಿಂದ ರಕ್ಷಕ್ ಅವರಿಗೆ ಒಂದು ಕರೆ ಬರುತ್ತದೆ ಒಂದೊಳ್ಳೆ ಸಿನಿಮಾದಲ್ಲಿ ನಟನೆ ಮಾಡುವಂತಹ ಅವಕಾಶವಿದೆ ನಟನೆ ಮಾಡುವುದಕ್ಕೆ ನಿನಗೆ ಆಸಕ್ತಿ ಇದೆಯಾ ಅಂತ ಕೇಳುತ್ತಾರೆ. ಈ ವಿಚಾರ ಕೇಳುತ್ತಿದ್ದ ಹಾಗೆ ಖುಷಿಗೊಂಡ ರಕ್ಷಕ್ ಹೌದು ನಾನು ಅಭಿನಯಿಸುತ್ತೇನೆ ಎಂದು ಹೇಳುತ್ತಾರೆ ತದನಂತರ ಆಫೀಸ್ ಗೆ ಬರುವುದಕ್ಕೆ ಹೇಳುತ್ತಾರಂತೆ.

ಈ ಸಮಯದಲ್ಲಿ ಶರಣ್ ಕೂಡ ಅಲ್ಲೇ ಇರುತರಂತೆ ಗುರು ಶಿಷ್ಯರು ಎಂಬ ಹೊಸ ಸಿನಿಮಾವನ್ನು ತೆಗೆಯುತ್ತಿದ್ದೇವೆ ಇದೊಂದು ಕ್ರೀಡೆಗೆ ಸಂಬಂಧಪಟ್ಟಂತಹ ಸಿನಿಮವಾಗಿದೆ ಈ ಸಿನಿಮಾದಲ್ಲಿ ನೀನು ಬಾಷಾ ಎಂಬ ಪಾತ್ರವನ್ನು ಮಾಡಬೇಕಾಗುತ್ತದೆ ಎಂದು ಕಥೆಯನ್ನು ಹೇಳುತ್ತಾರಂತೆ ಕಥೆಯನ್ನು ಕೇಳುತ್ತಿದ್ದ ಹಾಗೆ ರಕ್ಷಕ್ ತುಂಬಾನೇ ಇಷ್ಟ ಪಡುತ್ತಾರಂತೆ. ಈ ಸಿನಿಮಾದಲ್ಲಿ ನಾನು ಹೇಗಾದರೂ ಆಕ್ಟ್ ಮಾಡಬೇಕು ಎಂಬ ಛಲ ಪಡೆಯುತ್ತಾರಂತೆ ತದನಂತರ ಈ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡು ಅದ್ಭುತವಾಗಿ ನಟಿಸಿದ್ದಾರೆ.

ಇನ್ನು ಗುರು ಶಿಷ್ಯರು ಸಿನಿಮಾದಲ್ಲಿ 12 ಜನ ಹುಡುಗರಿದ್ದಾರೆ ಈ 12 ಜನರಲ್ಲಿ ಆರು ಜನರು ಸೆಲಬ್ರೆಟಿಗಳ ಮಕ್ಕಳೇ ಆಗಿದ್ದಾರೆ ಇನ್ನುಳಿದ ಆರು ಜನ ಸಾಮಾನ್ಯರಾಗಿದ್ದಾರೆ. ಮೊದಮೊದಲು ಈ ಸಿನಿಮಾಗೆ ಸಾರ್ವಜನಿಕರಿಗೆ ಅವಕಾಶ ನೀಡಬೇಕು ಎಂದು ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಈ ಸಮಯದಲ್ಲಿ ಸುಮಾರು 1500 ಅರ್ಜಿಗಳು ಬಂದಿದ್ದವಂತೆ ಅದರಲ್ಲಿ 600 ಜನರನ್ನು ಆಯ್ಕೆ ಮಾಡಿಕೊಂಡು ಶಾರ್ಟ್ ಲಿಸ್ಟ್ ತಯಾರಿಸುತ್ತಾರಂತೆ ತದನಂತರ ಶರಣ್ ಹಾಗೂ ತರುಣ್ ಇಬ್ಬರು ಯೋಚನೆ ಮಾಡಿ. ನಟನೆಯಲ್ಲಿ ಆಸಕ್ತಿ ಇರುವಂತಹ ಆಯ್ಕೆ ಮಾಡಿಕೊಂಡರೆ ಅವರಿಗೂ ಕೂಡ ಭವಿಷ್ಯದಲ್ಲಿ ಉಪಯೋಗ ಬರುತ್ತದೆ ಎಂದು ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅರಿಗೆ ಚಾನ್ಸ್ ಕೊಟ್ಟರಂತೆ ಈ ವಿಚಾರವನ್ನು ರಕ್ಷಕ್ ಹೇಳಿಕೊಂಡು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಯಶ್ ಪ್ರಾಣ ಸ್ನೇಹಿತ ಆಗಿದ್ರೂ ಕೂಡ ನಟ ಜೈದೇವ್ ಯಶ್ ಇಂದ ದೂರ ಉಳಿದಿದ್ದಾರೆ ಯಾಕೆ ಗೊತ್ತ.? ಸಂದರ್ಶನದಲ್ಲಿ ಯಾರಿಗೂ ತಿಳಿಯದ ನೋವಿನ ಕಥೆ ಹೇಳಿಕೊಂಡ ಜೈದೇವ್

ಯಶ್ ಜೈದೇವ್ ಮೋಹನ್ ಸ್ನೇಹ

ಯಶ್ ಒಬ್ಬ ಮಹಾನ್ ಸಾಧಕ ಕಂಡ ಕನಸನ್ನು ಸಾಕಾರ ಗೊಳಿಸಿಕೊಂಡು ಈಗ ಇಡೀ ಕರ್ನಾಟಕ ಮಾತ್ರವಲ್ಲದೇ ಇಡೀ ಇಂಡಿಯಾ ಪೂರ್ತಿ ರಾಕಿಂಗ್ ಸ್ಟಾರ್, ರಾಕಿ ಬಾಯ್ ಎಂದು ಕರೆಸಿಕೊಳ್ಳುತ್ತಿರುವ ಸಾಧಕ. ಈ ಹಂತಕ್ಕೆ ಬೆಳೆಯಲು ಯಶ್ ಸವಿಸಿರುವ ಹಾದಿ ಹೂವಿನದ್ದಲ್ಲ, ಕಲ್ಲು ಮುಳ್ಳಿನ ಕಷ್ಟನಷ್ಟದ ಹಾದಿಯಲ್ಲಿ ತುಳಿದು ಸಾಮಾನ್ಯನಾಗಿದ್ದ ಈತ ಇಂದು ಅಸಾಮಾನ್ಯ ಪ್ರತಿಭಾವಂತನಾಗಿ ತಲೆಯೆತ್ತಿರುವುದು.

ಆತನ ಕಥೆಯನ್ನೇ ಒಂದು ಸೂಪರ್ ಹಿಟ್ ಸಿನಿಮಾ ಮಾಡಬಹುದು ಈ ರೀತಿ ಆದರ್ಶ ಪೂರ್ವಕವಾಗಿ ಬೆಳೆದಿದ್ದಾರೆ ಯಶ್. ಯುತ್ ಐಕಾನ್ ಆಗಿ ಬೆಳೆಯುತ್ತಿರುವ ಯಶ್ ಅವರು ಸಾಮಾಜಿಕ ಕಳಕಳಿ ಕೂಡ ಹೊಂದಿದ್ದು ಸಮಾಜ ಮುಖಿ ಕೆಲಸಗಳಲ್ಲೂ ತೊಡಕಿಕೊಂಡಿದ್ದಾರೆ. ಈಗ ಯಶ್ ಬಗ್ಗೆ ಆಪ್ತ ಸ್ನೇಹಿತನಾದ ಚೈತನ್ ಮೋಹನ್ ಅವರು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಅದೇನೆಂದರೆ ಜೈದೇವ್ ಮೋಹನ್ ಪ್ರತಿಭಾವಂತ ಆದರೆ ಸಿನಿಮಾಗಳನ್ನು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಯಾಕೆ? ಯಶ್ ಅವರಿಗೆ ಆಪ್ತ ಸ್ನೇಹಿತ ಆಗಿರುವುದರಿಂದ ಯಶ್ ಕಡೆಯಿಂದ ಬೆಂಬಲ ಸಿಗುತ್ತಿಲ್ಲವಾ ನಿಮ್ಮ ಪ್ರಶ್ನೆಗಳಿಗೆ ಈತನ ಮಾತುಗಳು ಈ ರೀತಿ ಇದ್ದವು. ನನ್ನ ಮತ್ತು ಯಶ್ ಸಂಬಂಧ ಹದಿಮೂರು ಹದಿನಾಲ್ಕು ವರ್ಷದ ಹಿಂದಿನದು.

ಆ ದಿನಗಳಲ್ಲಿ ಬಹಳ ಆತ್ಮೀಯರಾಗಿದ್ದೆವು. ಆನಂತರ ತಿಪ್ ರೈಟಿಂಗ್ ಡೈರೆಕ್ಷನ್ ಎಂದು ಈ ರೀತಿಯೆಲ್ಲ ಹುಚ್ಚು ಇಟ್ಟುಕೊಂಡು ಇಡೀ ಪ್ರಪಂಚದ ಸಂಬಂಧವೇ ಕಳೆದುಕೊಂಡು ನಾನಾಯಿತು ನನ್ನ ಕೆಲಸ ಆಯ್ತು ಎಂದು ಕೆಲ ಕಾಲ ಕಣ್ಮರೆಯಾದೆ ನಾನು. ಯಶ್ ಸಹಾ ಒಂದೇ ಒಂದು ನಿಖರ ಗುರಿ ಇಟ್ಟುಕೊಂಡು ಈ ರೀತಿ ಬೆಳೆದಿದ್ದಾನೆ. ಅವನ ಸಕ್ಸಸ್ ನೋಡುತ್ತಿದ್ದರೆ ಹಳೆಯನ್ನಾಗಿ ಬಹಳ ಹೆಮ್ಮೆ ಇದೆ.

ಆದರೆ ಈಗ ನಾವು ಅದೇ ರೀತಿ ಇರಲು ಸಾಧ್ಯವಿಲ್ಲ. 13 14 ವರ್ಷದಿಂದ ಅವನ ಸರ್ಕಲ್ ಇನ್ನಷ್ಟು ಬೆಳೆದಿದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕೂಡ ನನ್ನನ್ನು ಆಹ್ವಾನಿಸಲಾಗಿತ್ತು ಆ ಸಮಯದಲ್ಲಿ ಯಶ್ ಹೇಳಿದ್ದನು ಆತ ಸಿಕ್ಕ ಸಿಕ್ಕ ಚಾನ್ಸಲಾ ಒಪ್ಪಿಕೊಂಡಿದ್ದರೆ ಇಂದು ಬಹಳ ಬ್ಯುಸಿ ಇರುತ್ತಿದ್ದ ಆದರೆ ಆತನಿಗೆ ಅವನ ಪಾತ್ರದ ಮೇಲೆ ಹಾಗೂ ಕಂಟೆಂಟ್ ಮೇಲೆ ಬಹಳ ನಿರೀಕ್ಷೆ ಇದೆ.

ಹಾಗಾಗಿ ಇವತ್ತಲ್ಲ ನಾಳೆ ಅವನು ನಿಧಾನವಾಗಿ ಹೆಸರು ಮಾಡೇ ಮಾಡುತ್ತಾನೆ ಎನ್ನುವ ಮಾತುಗಳು ಅವನ ಬಾಯಿಂದಲೇ ಬಂದಿದೆ ಅಷ್ಟೊಂದು ದೊಡ್ಡ ವೇದಿಕೆ ಮೇಲೆ ಆ ರೀತಿ ಮಾತನಾಡಿದ್ದಾನೆಂದರೆ ಅವನ ಮನಸ್ಸಿನಲ್ಲೂ ಕೂಡ ನನ್ನ ಬಗ್ಗೆ ಒಂದು ಐಡಿಯಾ ಇದೆ ಎಂದರ್ಥ ಅವನು ಸಣ್ಣಪುಟ್ಟ ಪಾತ್ರ ಕೊಡಿಸುವುದು ಬೇಡ ಎಂದು ಕೊಂಡಿರಬಹುದು ಅಥವಾ ಇಂಥದ್ದೇ ಒಂದು ಪಾತ್ರ ಬಂದಾಗ ನನಗೆ ಕೊಡಬೇಕು ಎಂದು ಇನ್ನೂ ದೊಡ್ಡದಾಗಿ ಯೋಚನೆ ಮಾಡಿರಬಹುದು.

ನನಗೆ ಸಹಾಯ ಬೇಕು ಎಂದು ಎಂದಿಗೂ ನಿರೀಕ್ಷಿಸಲ್ಲ. ಆತನ ಬಳಿ ಕೇಳಿಯೂ ಇಲ್ಲ ಹೀಗಾಗಿ ಅವನಿಂದ ಅಪೇಕ್ಷಿಸುವುದು ಸರಿಯಲ್ಲ ಅದಲ್ಲದೆ ನನ್ನ ಸಿನಿಮಾ ರಿಲೀಸ್ ಆದಾಗ ನೋಡಿ ಅಪ್ರಿಷಿಯೇಟ್ ಮಾಡಿದ್ದಾನೆ. ಗಜಕೇಸರಿ ಶೂಟಿಂಗ್ ಅಲ್ಲಿ ಬ್ಯುಸಿ ಆಗಿದ್ದರು ದಂಡುಪಾಳ್ಯ ರಿಲೀಸ್ ಆದ ತಕ್ಷಣ ಸಿನಿಮಾ ನೋಡಿ ಕರೆ ಮಾಡಿ ನನಗೆ ವಿಶ್ ಮಾಡಿದ್ದ ಎಷ್ಟು ಸಾಕು.

ಇಂದು ನಮಗೆಲ್ಲ ಯಶ್ ಒಬ್ಬನೇ ಆದರೆ ಎಷ್ಟೇ ನಮ್ಮ ರೀತಿ ಸಾಕಷ್ಟು ಮಂದಿ ಇದ್ದಾರೆ ಇನ್ನೂ ನೆನಪಿಟ್ಟುಕೊಂಡು ಗುರುತಿಸಿ ಪ್ರೀತಿಯಿಂದ ಮಾತನಾಡಿಸುತ್ತಾನೆ ಎಂದರೆ ಅದೇ ತುಂಬಾ ದೊಡ್ಡದು. ಅವನು ಇನ್ನಷ್ಟು ಬೆಳೆಯಬೇಕು ಎಂದ ಮನ ಪೂರ್ತಿಯಾಗಿ ಹರಸಿದ್ದಾರೆ ಜಯದೇವ್ ಮೋಹನ್ ಅವರು.

ಅಪ್ಪು ಫೋಟೋ ಮುಂದೆ ನಿಂತು ಶಿವಣ್ಣ ಕಳಕಳಿಯಿಂದ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದೇನು ಗೊತ್ತಾ.?

ಶಿವಣ್ಣ ಅವರ 125ನೇ ಸಿನಿಮಾ ವೇದ

ಇಂದು ಇಡೀ ಕರ್ನಾಟಕವೇ ಆರಾಧ್ಯ ದೈವವಾಗಿ ಪೂಜಿಸುತ್ತಿರುವ ಪುನೀತ್ ರಾಜಕುಮಾರ್ ಅವರನ್ನು ನೆನೆಯದ ದಿನಗಳೇ ಇಲ್ಲ ಎನ್ನಬಹುದು. ಜೊತೆಗಿರದ ಜೀವ ಸದಾ ಜೀವಂತ ಎನ್ನುವ ಅವರದೇ ಮಾತಿನಂತೆ ಇಂದು ಪ್ರತಿಯೊಂದು ಸಿನಿಮಾರಂಗದ ಕಾರ್ಯಕ್ರಮದ ಚಾಲನೆಗೂ ಮುನ್ನ ಅಪ್ಪು ಫೋಟೋ ನಮಿಸುವ ಮೂಲಕ ಶುರು ಮಾಡಲಾಗುತ್ತದೆ.

ಅಪ್ಪು ಅವರು ಇಲ್ಲದಿದ್ದರೂ ಸಹ ಅವರು ಇದ್ದಾಗ ಸಲ್ಲುತ್ತಿದ್ದ ಪ್ರೀತಿ ಹಾಗೂ ಗೌರದಷ್ಟೇ ಅಭಿಮಾನವನ್ನು ಈಗಲೂ ತೋರಲಾಗುತ್ತಿದೆ. ಇನ್ನು ಅವರ ಕುಟುಂಬದ ವಿಚಾರಕ್ಕೆ ಬರುವುದಾದರೆ ಮನೆಯ ಮುದ್ದಿನ ರಾಜಕುಮಾರನಾಗಿದ್ದ ಅಪ್ಪು ಅವರು ಎಲ್ಲರಿಗಿಂತ ಕಿರಿಯರಾಗಿದ್ದ ಕಾರಣ ಅವರ ತಂದೆ ತಾಯಿ ಮಾತ್ರ ಅಲ್ಲದೆ ಅಣ್ಣಂದಿರು ಹಾಗು ಅಕ್ಕಂದಿರು ಕೂಡ ಸ್ವಂತ ಮಗನಂತೆ ಪ್ರೀತಿಸುತ್ತಿದ್ದರು. ಅದೇ ರೀತಿ ಕಾಳಜಿ ತೋರಿ ನೋಡಿಕೊಂಡಿದ್ದರು.

ಇದೀಗ ಅವರೇ ಎಲ್ಲರಿಗಿಂತ ಮುನ್ನವೇ ಇ.ಹ.ಲೋ.ಕ.ದ ಯಾತ್ರೆ ಮುಗಿಸಿರುವ ಕಾರಣ ಅಪ್ಪು ಅವರನ್ನು ಪ್ರತಿದಿನವೂ ನೆನೆದು ಕೊರಗಿ ಆ ಜೀವಗಳು ಅನುಭವಿಸುತ್ತಿರುವ ನೋ‌.ವುಗಳನ್ನು ವಿವರಿಸಲು ಅಸಾಧ್ಯ. ಅದರಲ್ಲೂ ಶಿವಣ್ಣ ಅವರಿಗೆ ಅಪ್ಪು ಎಂದರೆ ವಿಶೇಷ ಪ್ರೀತಿ ಸಿನಿಮಾ ಇಂಡಸ್ಟ್ರಿ ಗೆ ಸಂಬಂಧ ಪಟ್ಟ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಕೂಡ ಅಪ್ಪು ಬಗ್ಗೆ ಹೊಗಳದೇ ಅವರ ಮಾತೇ ಮುಗಿಯುತ್ತಿರಲಿಲ್ಲ.

ಅಂತಹದರಲ್ಲಿ ಪ್ರಾ‌.ಣಕ್ಕೆ ಪ್ರಾ‌.ಣವಾಗಿದ್ದ ಇಂತಹ ಲಕ್ಷ್ಮಣನಂತ ತಮ್ಮನನ್ನು ಕಳೆದುಕೊಂಡಿರುವ ಶಿವಣ್ಣನ ಮುಖದಲ್ಲಿ ಇನ್ನು ಸಹ ನೋವಿನ ಛಾಯೆ ಕಡಿಮೆ ಆಗಿಲ್ಲ. ಇದೆಲ್ಲವನ್ನು ಬದಿಗಿಟ್ಟು ಬದುಕಿನ ಜವಾಬ್ದಾರಿ ಹೊರುವ ಕಾರಣ ವಾಸ್ತವನ್ನು ಒಪ್ಪಿಕೊಂಡು ಕ.ಷ್ಟಪಟ್ಟು ದಿನವನ್ನು ಸವೆಸುತ್ತಿದ್ದಾರೆ ಇವರು. ಈಗ ಶಿವಣ್ಣ ಅವರು ಮತ್ತೊಮ್ಮೆ ಅಪ್ಪು ಫೋಟೋ ಮುಂದೆ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ವಿಶೇಷವಾದ ಮನವಿ ಕೂಡ ಮಾಡಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಬಾರಿ ಶಿವಣ್ಣ ಅವರು ಮಾತನಾಡಿರುವುದು ಏನು ಎಂದರೆ ಈ ತಿಂಗಳ ಅಂತ್ಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶಿವಣ್ಣ ಅವರ ಬಹು ನಿರೀಕ್ಷಿತ ಚಿತ್ರ ಹಾಗೂ ಅವರ 125 ಚಿತ್ರವಾದ ವೇದ ಸಿನಿಮಾವು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮ ಹಾಗೂ ಟ್ರೈಲರ್ ರಿಲೀಸ್ ಕಾರ್ಯಕ್ರಮಗಳು ಬಹಳ ಅದ್ದೂರಿಯಾಗಿ ನಡೆದಿತ್ತು.

ಇದನ್ನೇ ಮುಂದುವರಿಸಿ ಈಗ ವೇದ ಸಿನಿಮಾದ ಟೀಸರ್ ಕಾರ್ಯಕ್ರಮವನ್ನು ಕೂಡ ಅಷ್ಟೇ ಅದ್ದೂರಿನಿಂದ ನಡೆಸಲು ಚಿತ್ರ ತಂಡ ತಯಾರಾಗಿದೆ. ಈ ಉದ್ದೇಶದಿಂದ ಡಿಸೆಂಬರ್ 14ರಂದು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆ. ಶಿವಣ್ಣ ಅವರು ಅಪ್ಪು ಹಾಗೂ ಅಣ್ಣಾವ್ರ ಫೋಟೋ ಮುಂದೆ ನಿಂತು ಅಭಿಮಾನಿಗಳ ಜೊತೆ ಈ ರೀತಿ ಮಾತನಾಡಿದ್ದಾರೆ.

ನೀವು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾವು ಎಂದಿಗೂ ಚಿರಋಣಿ. ಅಪ್ಪಾಜಿ ಇದ್ದ ದಿನದಿಂದಲೂ ಕೂಡ ನೀವೆಲ್ಲರೂ ನಮ್ಮನ್ನು ವಿಶೇಷವಾಗಿ ಕಂಡಿತೀರಿ ನೀವೇ ನಮ್ಮ ಪಾಲಿನ ಅಭಿಮಾನಿ ದೇವರು ಎನ್ನುವುದು ಅಕ್ಷರಶಃ ಸತ್ಯ. ಈಗ ನಮ್ಮ ಹೋಂ ಬ್ಯಾನರ್ ಇಂದ ರಿಲೀಸ್ ಆಗುತ್ತಿರುವ ವೇದ ಸಿನಿಮಾ ಮೇಲೆ ಕೂಡ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

ಇದರ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಿ ಎಂದು ಕೇಳಿದ್ದಾರೆ. ಹರ್ಷ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಹರ್ಷ ಹಾಗೂ ಶಿವಣ್ಣರ ಕಾಂಬಿನೇಷನ್ನು ಮತ್ತೊಂದು ಸಿನಿಮಾ ಆಗಿದೆ. ಈಗಾಗಲೇ ಶಿವಣ್ಣನ ಹಲವು ಸಿನಿಮಾಗಳಲ್ಲಿ ಇವರಿಬ್ಬರ ಕಾಂಬಿನೇಷನ್ ವರ್ಕ್ ಆಗಿದ್ದು ಜನ ವೇದ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ರಚಿತಾ ರಾಮ್ ಜೊತೆ ವಿಜಯ್ ರಾಘವೇಂದ್ರ ಮಾಡಿದ ಮಸ್ತ್ ಡಾನ್ಸ್ ಒಮ್ಮೆ ನಿಜಕ್ಕೂ ಫಿದಾ ಆಗ್ತಿರಾ.

ರಚಿತಾ ರಾಮ್ ವಿಜಯ ರಾಘವೇಂದ್ರ ಡ್ಯಾನ್ಸ್

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಎಂದೇ ಖ್ಯಾತಿಯಾಗಿರುವ ನಟಿ ರಚಿತಾ ರಾಮ್. ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ರಚಿತಾ, ಹಿಂದಕ್ಕೆ ತಿರುಗಿ ನೋಡಿದ್ದೆ ಇಲ್ಲ. ಕನ್ನಡ ಚಿತ್ರರಂಗದ ಮೇರು ನಟರಾದ ದರ್ಶನ್, ಪುನೀತ್ ರಾಜ್ ಕುಮಾರ್, ಸುದೀಪ್, ಶ್ರೀಮುರಳಿ, ಧ್ರುವ ಸರ್ಜಾ ಸೇರಿದಂತೆ ಎಲ್ಲಾ ಕನ್ನಡ ನಟರ ಜೊತೆಯಲ್ಲೂ ನಟಿಸಿ ಯಶಸ್ಸು ಪಡೆದಿದ್ದಾರೆ.

ಸಿನಿರಂಗದಲ್ಲಿ 10 ವರ್ಷ ಪೂರೈಸಿದ್ದಾರೆ ರಚಿತಾ. ನಟಿ ರಚಿತಾ ರಾಮ್ ಅವರು ಚಿತ್ರದಲ್ಲಿ ಅಭಿನಯಿಸುವುದು ಅಲ್ಲದೆ ಹಲವು ರಿಯಾಲಿಟಿ ಶೋ ಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಮುಂಚೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಕಾಮಿಡಿ ಶೋ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

ನಂತರ ಇತ್ತೀಚೆಗೆ ಮುಗಿದ ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ಸೀಸನ್ 4 ರಲ್ಲು ಕೂಡ ರಚಿತಾ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ಕ್ರೇಜಿ ïಸ್ಟಾರ್ ರವಿಚಂದ್ರನ್ ಹಾಗೂ ಹಿರಿಯ ನಾಯಕನಟಿ ಲಕ್ಷ್ಮಿ ಅಮ್ಮ ಅವರು ಕೂಡ ತೀರ್ಪುಗಾರರಾಗಿ ಇದ್ದರು.

ರಚಿತಾ ಅವರಎ ಎಲ್ಲಾ ಕಾರ್ಯಕ್ರಮದಲ್ಲೂ ಉತ್ತಮವಾದ ಸಲುಹೆಯನ್ನು ನೀಡುತ್ತಾ ಸೋತವರಿಗೆ ಪ್ರೋತ್ಸಾಹ ನೀಡುತ್ತಾ, ಗೆದ್ದವರಿಗೆ ಮಾರ್ಗ ವನ್ನೂ ತೋರಿಸುತ್ತಾ, ಎಲ್ಲಾರಿಗೂ ಮಾದರಿಯಾಗಿದ್ದಾರೆ ಇನ್ನು ಇತ್ತೀಚೆಗೆ ಜೀ ಕನ್ನಡ ವಾಹಿನಿಯವರು ಸೂಪರ್ ಕ್ವೀನ್ಸ್ ಎಂಬ ರಿಯಾಲಿಟಿ ಶೋ ಅನ್ನು ಶುರುಮಾಡಿದ್ದಾರೆ.

ಈ ಕಾರ್ಯಕ್ರಮಕ್ಕೆ ವಿಜಯ್ ರಾಘವೇಂದ್ರ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಜಯ್ ರಾಘವೇಂದ್ರ ಅವರು ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು, ಅಲ್ಲದೆ ವಿಜಯ್ ರಾಘವೇಂದ್ರ ಅವರಿಗೆ ಕನ್ನಡ ಚಿತ್ರರಂಗದ ನಂಟು ಚಿಕ್ಕವಯಸ್ಸಿನಿಂದಲೂ ಇದೆ. ಕಲೆ ಕ್ಷೇತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಸಂಗೀತದಲ್ಲು ಜೊತೆಗೆ ನೃತ್ಯದಲ್ಲಿಯು ಸೈ ಎನಿಸಿಕೊಂಡಿದ್ದಾರೆ.

ಹೌದು ವಿಜಯ ರಾಘವೇಂದ್ರ ಅವರು ಈಗಾಗಲೇ ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ಅಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಸದ್ಯ ಸೂಪರ್ ಕ್ವೀನ್ ‘ ಎಂಬ ಶೀರ್ಷಿಕೆಯ ಈ ರಿಯಾಲಿಟಿ ಶೋ ಹೆಣ್ತನವನ್ನು ಸಂಭ್ರಮಿಸುವುದಾಗಿದೆ. ಹೊಸ ರಿಯಾಲಿಟಿ ಶೋ ನವೆಂಬರ್ 19 ರಂದು ಕನ್ನಡದ ಪ್ರಮುಖ ಸಾಮಾನ್ಯ ಮನರಂಜನಾ ಜೀ ಚಾನಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿದೆ.

ರಿಯಾಲಿಟಿ ಶೋ ತನ್ನ ಗ್ರ್ಯಾಂಡ್ ಪ್ರೀಮಿಯರ್‌ಗಾಗಿ ಹೊಂದಿಸಲ್ಪಟ್ಟಿರುವುದರಿಂದ, ದೂರದರ್ಶನ ಉದ್ಯಮದ ಹತ್ತು ಮಹಿಳಾ ಸೆಲೆಬ್ರಿಟಿಗಳು ಹೊಸ ರಿಯಾಲಿಟಿ ಶೋನ ಸ್ಪರ್ಧಿಗಳಾಗಿ ಭಾಗವಾಗಲಿದ್ದಾರೆ. ರಶ್ಮಿ ಪ್ರಭಾಕರ್, ಐಶ್ವರ್ಯ ಶಿಂದೋಗಿ, ಚಂದ್ರಕಲಾ ಮೋಹ, ಅಪೂರ್ವ ಶ್ರೀ, ರೇಖಾ ಮೆನನ್, ಗೀತಾ ಭಾರತಿ ಭಟ್, ರಜಿನಿ, ಗೇಬ್ರಿಯೆಲಾ ಸ್ಮಿತ್ ಮತ್ತು ವಿಜೆ ಹೇಮಲತಾ ಅವರನ್ನು ಸೂಪರ್ ಕ್ವೀನ್‌ನ ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗಿದೆ.

ಹೊಸ ರಿಯಾಲಿಟಿ ಶೋನ ತೀರ್ಪುಗಾರರಾಗಿ ಚಲನಚಿತ್ರ ತಾರೆಯರಾದ ವಿಜಯ್ ರಾಘವೇಂದ್ರ ಮತ್ತು ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿ ಇರುವ ರಚಿತಾ ರಾಮ್ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೆ ಇತ್ತೀಚೆಗೆ ವಿಜಯ್ ರಾಘವೇಂದ್ರ ಅವರು ಹಾಗೂ ರಚಿತಾ ರಾಮ್ ಅವರು ಇಬ್ಬರು ಸೇರಿ ವಿಜಯ್ ಅವರ ಸೇವಂತಿ ಸಿನಿಮಾದ ಜಾಜಿ ಮಲ್ಲಿಗೆ ನೋಡೇ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಸದ್ಯ ಈ ರೀಲ್ಸ್ ಇನ್ಸ್ತಗ್ರಾಂ ಅಲ್ಲಿ ವೈರಲ್ ಆಗಿದೆ.

ನಟ ಅನಿರುಧ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಅನಿರುಧ್ ನಟಿಸಿಬೇಕಿದ್ದ ಹೊಸ ಸೀರಿಯಲ್ ಕೈ ತಪ್ಪಿ ಹೋಗುತ್ತಿದೆ ಯಾಕೆ ಗೊತ್ತ.?

ನಟ ಅನಿರುದ್ಧ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಿದ್ದಂತಹ ಜೊತೆ ಜೊತೆಯಲಿ ಎಂಬ ದಾರವಾಹಿಯಲ್ಲಿ ಆರ್ಯವರ್ಧನ್ ಪಾತ್ರ ನಿರ್ವಹಿಸುತ್ತಿದ್ದರು. ಕಳೆದ ಮೂರು ವರ್ಷಗಳಿಂದಲೂ ಕೂಡ ಈ ಧಾರಾವಾಹಿಯಲ್ಲಿ ನಟನೆ ಮಾಡುವುದರ ಮೂಲಕ ಸಾಕಷ್ಟು ಜನರಿಗೆ ಮನರಂಜನೆಯನ್ನು ನೀಡಿದ್ದರು. ಇನ್ನು ನಟ ಅನಿರುಧ್ ಅವರ ಅಭಿನಯವನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು ಒಂದು ರೀತಿಯಲ್ಲಿ ಹೇಳುವುದಾದರೆ ಸಿನಿಮಾಗಿಂತಲೂ ಕೂಡ ಧಾರಾವಾಹಿಯಲ್ಲಿ ನಟನೆ ಮಾಡುವುದರ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದರು.

ಆದರೆ ಸೀರಿಯಲ್ ತಂಡ ಮತ್ತು ಅನಿರುದ್ಧ್ ನಡುವೆ ಕೆಲವು ವಿಚಾರಕ್ಕೆ ಕಾರಣಾಂತರಗಳಿಂದ ಕಿರಿಕಿರಿ ಉಂಟಾಗುತ್ತದೆ ಚಿತ್ರತಂಡದವರು ಅನಿರುಧ್ ಅವರು ಕಿರಿಕ್ ಮಾಡಿದ್ದಾರೆ ಎಂದು ಹೇಳಿದರೆ ಮತ್ತೊಂದು ಕಡೆ ಅನಿರುಧ್ ಅವರು ಸೀರಿಯಲ್ ತಂಡದಿಂದಲೇ ನನಗೆ ಸಾಕಷ್ಟು ನೋವು ಉಂಟಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಈ ವಿಚಾರ ದೊಡ್ಡದಾಗುತ್ತಿದ್ದ ಹಾಗೆಯೇ ಜೊತೆ ಜೊತೆಯಲಿ ಧಾರಾವಾಹಿ ತಂಡ ಈ ಸೀರಿಯಲ್ ನಿಂದ ಅನಿರುಧ್ ಅವರನ್ನು ಹೊರ ಹಾಕಬೇಕು ಎಂಬ ತೀರ್ಮಾನವನ್ನು ಕೈಗೊಂಡು.

ಅದರಂತೆ ಆರ್ಯವರ್ಧನ್ ಪಾತ್ರದಿಂದ ಅನಿರುಧ್ ಅವರನ್ನು ಕೈ ಬಿಡಲಾಗುತ್ತದೆ ಆ ಪಾತ್ರಕ್ಕೆ ನಟ ಹರೀಶ್ ರಾಜ್ ಅವರನ್ನು ಆಯ್ಕೆ ಮಾಡಿಕೊಂಡು. ಇದೀಗ ಹರೀಶ್ ರಾಜ್ ಅವರೇ ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಇದು ಆರ್ಯವರ್ಧನ್ ಅಭಿಮಾನಿಗಳಿಗೆ ದೊಡ್ಡ ಆ.ಘಾ.ತ.ವನ್ನು ಉಂಟು ಮಾಡಿತು. ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹೊರ ಬಂದ ನಂತರ ಅನಿರುಧ್ ಅವರು ತಮ್ಮಷ್ಟಕ್ಕೆ ತಾವಿದ್ದರು.

ಆದರೆ ಮೊನ್ನೆಯಷ್ಟೇ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು ನಿರ್ದೇಶನ ಮಾಡುತ್ತಿರುವ ಸೂರ್ಯಕಾಂತಿ ಎಂಬ ಸೀರಿಯಲ್ ನಲ್ಲಿ ಅನಿರುಧ್ ಅವರಿಗೆ ವಿಶೇಷ ಪಾತ್ರ ಒಂದನ್ನು ನೀಡಿದ್ದಾರೆ. ಫೋಟೋಶೂಟ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಉದಯ ಟಿವಿಯಲ್ಲಿ ಮೂಡಿ ಬರುವಂತಹ ಸೂರ್ಯವಂಶ ಎಂಬ ದಾರವಾಹಿಯಲ್ಲಿ ನಟ ಅನಿರುಧ್ ಅವರು ಅಭಿನಯಿಸಲಿದ್ದಾರೆ ಎಂಬ ವಿಚಾರವನ್ನು ಸ್ವತಃ ಎಸ್ ನಾರಾಯಣ್ ಅವರೇ ರಿವಿಲ್ ಮಾಡಿದ್ದರು.

ಇದಕ್ಕೆ ಪೂರಕವಾಗುವಂತೆ ಅನಿರುಧ್ ಜಟ್ಕರ್ ಅವರು ಕೂಡ ತಮ್ಮ instagram ಖಾತೆಯಲ್ಲಿ ಎಸ್ ನಾರಾಯಣ್ ಜೊತೆ ಇರುವಂತಹ ಕೆಲವೊಂದು ಶೇರ್ ಮಾಡಿ. ನಿಮ್ಮೆಲ್ಲರ ಆಸೆಯಂತೆ ಮತ್ತೆ ನಾನು ಹೊಸ ಧಾರವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು ಸೂರ್ಯಕಾಂತಿ ಸಿನಿಮಾದಲ್ಲಿ ನನಗೆ ವಿಶೇಷ ಪಾತ್ರ ಒಂದನ್ನು ಕೊಟ್ಟಿದ್ದಾರೆ. ನಿಮ್ಮ ಹಾರೈಕೆ ಹೀಗೆ ಇರಲಿ ಪ್ರೋತ್ಸಾಹ ಮತ್ತು ಪ್ರೀತಿಯನ್ನು ನೀಡಿ ಎಂದು ಬರೆದುಕೊಂಡಿದ್ದರು ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ನಟ ಮತ್ತು ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಡುತ್ತಿರುವುದನ್ನು ನೋಡಿ ಸಂತೋಷವನ್ನು ವ್ಯಕ್ತಪಡಿಸಿದ್ದರು.

ಆದರೆ ಇದೀಗ ನಟ ಅನಿರುಧ್ ಮತ್ತೊಂದು ಸಂಕಷ್ಟ ಎದುರಾಗಿದೆ ಅದೇನೆಂದರೆ ಜೊತೆ ಜೊತೆಯಲಿ ಧಾರಾವಾಹಿ ತಂಡದಲ್ಲಿ ಕಿರಿಕ್ ಮಾಡಿಕೊಂಡು ಹೊರ ಬಂದ ನಂತರ ನಿರ್ದೇಶಕ ಮತ್ತು ನಿರ್ಮಾಪಕ ಸಂಘದಿಂದ ಅನಿರುಧ್ ಅವರನ್ನು ಎರಡು ವರ್ಷಗಳ ಕಾಲ ಬ್ಯಾನ್ ಮಾಡಬೇಕು ಯಾವ ನಿರ್ದೇಶಕ ಮತ್ತು ನಿರ್ಮಾಪಕರು ಕೂಡ ಅನಿರುಧ್ ಅವರನ್ನು ತಮ್ಮ ಧಾರಾವಾಹಿಯಲ್ಲಿ ನಟನೆ ಮಾಡುವುದಕ್ಕೆ ಆಯ್ಕೆ ಮಾಡಿಕೊಳ್ಳಬಾರದು ಎಂಬ ಷರತ್ತು ವಿಧಿಸಿದ್ದರಂತೆ.

ಆದರೆ ಇದೀಗ ಇದರ ವಿರುದ್ಧವಾಗಿ ನಿರ್ಮಾಪಕ ಎಸ್ ನಾರಾಯಣ್ ಅವರು ಅನಿರುಧ್ ಅವರನ್ನು ಸೂರ್ಯವಂಶ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವುದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ನಮ್ಮ ಸಂಘದ ವಿರುದ್ಧ ಮಾಡುತ್ತಿರುವಂತಹ ಪಿತೂರಿ ಆಗಿದೆ ಎಂದು ಎಸ್ ನಾರಾಯಣ್ ಮತ್ತು ಅನಿರುಧ್ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಸಂಘದ ವಿರುದ್ಧವಾಗಿ ಈ ರೀತಿ ನಿರ್ಧಾರವನ್ನು ಕೈಗೊಂಡಿರುವುದು ತಪ್ಪು ಅನಿರುಧ್ ಅವರನ್ನು ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಮುಂಚೆ ಸಂಘಕ್ಕೆ ಒಂದು ಬಾರಿ ತಮ್ಮ ನಿರ್ಧಾರವನ್ನು ತಿಳಿಸಬೇಕಿತ್ತು ನಮ್ಮಿಂದ ಒಪ್ಪಿಗೆ ಪಡೆದ ನಂತರವಷ್ಟೇ ಅವರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು.

ಇದೀಗ ಏಕಾಏಕಿ ಅವರನ್ನು ಆಯ್ಕೆ ಮಾಡಿಕೊಂಡು ನಮ್ಮ ಸಂಘಕ್ಕೆ ಗೌರವವನ್ನು ತೋರಿದ್ದೀರಿ ಎಂದು ಎಸ್ ನಾರಾಯಣ್ ಮತ್ತು ಅನಿರುಧ್ ಅವರ ವಿರುದ್ಧ ಆ.ಕ್ರೋ.ಶ.ವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಅನಿರುಧ್ ಅವರ ಕೆರಿಯರ್ ಗೆ ಬಹುದೊಡ್ಡ ಒಡೆತ ಬಿದ್ದಿದೆ ಒಂದು ಧಾರಾವಾಹಿಯಿಂದ ಬ್ಯಾನ್ ಆಗಿ ಇನ್ನೊಂದು ಧಾರವಾಹಿಯಲ್ಲಿ ನಟನೆ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಈ ರೀತಿ ತೊಂದರೆಯಾಗುತ್ತಿರುವುದು ನಿಜಕ್ಕೂ ಕೂಡ ವಿಷದವೇ ಅದೇನೆ ಆಗಲಿ ಈ ಎಲ್ಲಾ ಪ್ರಕರಣಗಳನ್ನು ಮೀರಿ ಸೂರ್ಯವಂಶ ಸೀರಿಯಲ್ ನಲ್ಲಿ ಅನಿರುಧ್ ಅಭಿನಯಿಸುತ್ತಾರ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ ನಿರ್ಮಾಪಕರ ಸಂಘದ ಈ ಧೋರಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

ನಿಶ್ಚಿತಾರ್ಥದ ಸಮಯದಲ್ಲಿ ಉಂಗುರ ಬದಲಾಯಿಸಿಕೊಂಡ ತಕ್ಷಣ ಕಣ್ಣೀರಿಟ್ಟ ಹರಿಪ್ರಿಯಾ, ಕಣ್ಣೀರು ಒರೆಸಿ, ಆಕೆಯನ್ನು ಸಂತೈಸಿದ ವಸಿಷ್ಠ ಸಿಂಹ ಈ ಕ್ಯೂಟ್ ವಿಡಿಯೋ ನೋಡಿ.

ಹರಿಪ್ರಿಯಾ ವಸಿಷ್ಠ ಸಿಂಹ ನಿಶ್ಚಿತಾರ್ಥ

ಕಂಚಿನ ಕಂಠವುಳ್ಳ ನಟ ವಸಿಷ್ಟ ಸಿಂಹ ಕಳೆದ ವಾರವಷ್ಟೇ ನಟಿ ಹರಿಪ್ರಿಯಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋಗಳು ವೈರಲ್ ಆದ ತಕ್ಷಣ ಎಲ್ಲರೂ ಕೂಡ ಆಶ್ಚರ್ಯ ಪಟ್ಟರು ಏಕೆಂದರೆ ಇವರಿಬ್ಬರು ಎಲ್ಲಿಯೂ ಕೂಡ ತಾವಿಬ್ಬರು ಪ್ರೇಮಿಗಳನ್ನು ಬಂದೇ ಬಿಂಬಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ವಿಚಾರವನ್ನು ಚಿತ್ರತಂಡದಲ್ಲಾಗಲಿ ಅಥವಾ ಅಭಿಮಾನಿಗಳ ಜೊತೆಯಾಗಲಿ ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ.

ಗುಟ್ಟಾಗಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಕೆಲವು ಫೋಟೋಗಳು ವೈರಲ್ ಆದ ತಕ್ಷಣ ಎಲ್ಲರೂ ಕೂಡ ಆಶ್ಚರ್ಯ ವ್ಯಕ್ತಪಡಿಸಿದರು
ಇನ್ನು ನಟಿ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಕನ್ನಡದ ಯಾವ ಸಿನಿಮಾದಲ್ಲಿಯೂ ಕೂಡ ಒಟ್ಟಿಗೆ ಅಭಿನಯಿಸಿರಲಿಲ್ಲ. ಇಬ್ಬರೂ ಚಿಕ್ಕ ವಯಸ್ಸಿನಿಂದ ಸ್ನೇಹಿತರು ಕೂಡ ಅಲ್ಲ, ಸಂಬಂಧಿಕರು ಕೂಡ ಅಲ್ಲ ಆಗಿದ್ದರೂ ಕೂಡ ಇವರ ಇಬ್ಬರ ನಡುವೆ ಪ್ರೇಮಾಂಕುರ ಹೇಗೆ ಬೆಳೆಯಿತು ಎಂಬ ಗೊಂದಲ ಸಾಕಷ್ಟು ಅಭಿಮಾನಿಗಳಲ್ಲಿ ಇತ್ತು.

ಅಸಲಿಗೆ ನಟಿ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಟ್ಟಿಗೆ ಕೆಲಸ ಮಾಡಿದೆ ಇದ್ದರೂ ಕೂಡ ತೆಲುಗು ಸಿನಿಮಾ ಒಂದರಲ್ಲಿ ಇಬ್ಬರು ಒಟ್ಟಾಗಿ ನಟಿಸುತ್ತಿದ್ದರು. ಈ ಸಮಯದಲ್ಲಿ ಇವರಿಬ್ಬರು ಸ್ನೇಹಿತರಾಗುತ್ತಾರೆ ದಿನ ಕಳೆದಂತೆ ಬಾಂಧವ್ಯ ಹೆಚ್ಚಾಗಿ ಸ್ನೇಹ ಪ್ರೀತಿಗಾಗಿ ತಿರುಗುತ್ತದೆ. ಇನ್ನು ಇವರ ಪ್ರೀತಿಯ ಸಂಕೇತವಾಗಿ ವಸಿಷ್ಠ ಸಿಂಹ ಅವರು ಕ್ರಿಸ್ಟಲ್ ಎಂಬ ನಾಯಿಮರಿ ಒಂದನ್ನು ಕೂಡ ನಟಿ ಹರಿಪ್ರಿಯಾ ಅವರಿಗೆ ಉಡುಗೊರೆಯನ್ನಾಗಿ ನೀಡಿದ್ದರಂತೆ.

ಈ ವಿಚಾರವನ್ನು ಮೊನ್ನೆ ಎಷ್ಟೇ ನಟಿ ಹರಿಪ್ರಿಯ ಅವರು ವಿಡಿಯೋ ಮಾಡುವುದರ ಮೂಲಕ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೆಲ್ಲ ಒಂದು ಕಡೆಯಾದರೆ ಇಂದು ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇಬ್ಬರೂ ಕೂಡ ತಮ್ಮ ನಿಶ್ಚಿತಾರ್ಥದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ. ಈ ವಿಡಿಯೋದಲ್ಲಿ ನಾವು ಹರಿಪ್ರಿಯಾ ಅವರಿಗೆ ವಸಿಷ್ಟ ಸಿಂಹ ಉಂಗುರವನ್ನು ತೊಡಿಸುವುದನ್ನು ಕಾಣಬಹುದು. ನಂತರ ಹರಿಪ್ರಿಯಾ ಸಂತೋಷಕ್ಕೆ ಕಣ್ಣೀರು ಹಾಕಿದ್ದಾರೆ ಇದನ್ನು ನಾವು ಆನಂದ ಭಾಷ್ಪ ಅಂತಾನೆ ಹೇಳಬಹುದು.

ಏಕೆಂದರೆ ಮದುವೆ ಎಂಬುದು ಪ್ರತಿಯೊಬ್ಬ ಹೆಣ್ಣಿನ ಜೀವನದಲ್ಲೂ ಕೂಡ ಮಹತ್ತರ ಘಟ್ಟವಾಗಿರುತ್ತದೆ ಮದುವೆಯಾದ ನಂತರ ಆಕೆಯ ಸಂಪೂರ್ಣ ಜೀವನವೇ ಬದಲಾಗಿ ಹೋಗುತ್ತದೆ. ಹಾಗಾಗಿ ಈ ಮದುವೆಯ ಬಗ್ಗೆ ಸಾಕಷ್ಟು ಹೆಣ್ಣು ಮಕ್ಕಳು ಆಸೆ ಮತ್ತು ಕನಸನ್ನು ಹೊಂದಿರುತ್ತಾರೆ. ಅದರಲ್ಲಿಯೂ ಕೂಡ ತಾವು ಪ್ರೀತಿಸಿದ ಹುಡುಗನನ್ನುಯೇ ಮದುವೆಯಾಗುತ್ತಿದ್ದೇವೆ ಎಂಬ ವಿಚಾರ ತಿಳಿದಾಗ ಆಕೆಗೆ ಆಗುವಂತಹ ಸಂತೋಷ ಹೇಳತೀರದು.

ಸದ್ಯಕ್ಕೆ ಹರಿಪ್ರಿಯಾ ಅವರ ಪರಿಸ್ಥಿತಿಯು ಕೂಡ ಅದೇ ರೀತಿ ಇದೆ ವಸಿಷ್ಠ ಸಿಂಹ ಅವರನ್ನು ಪ್ರೀತಿಸಿ ಅವರನ್ನೇ ಮದುವೆಯಾಗುತ್ತಿದ್ದಾರೆ ನಿಶ್ಚಿತಾರ್ಥದ ವೇಳೆ ತಮ್ಮ ಪ್ರೀತಿಯನ್ನು ನೆನಪಿಸಿಕೊಂಡು ಹರಿಪ್ರಿಯ ಅವರು ಕಣ್ಣೀರು ಹಾಕಿದ್ದಾರೆ. ಇನ್ನು ನಟಿ ಹರಿಪ್ರಿಯ ಕಣ್ಣೀರು ಹಾಕುತ್ತಿದ್ದ ಸಮಯದಲ್ಲಿ ಅದನ್ನು ನೋಡಿದಂತಹ ವಸಿಷ್ಟ ಸಿಂಹ ಹಾಕಿದ ಕಣ್ಣೀರು ಒರೆಸಿ ಆಕೆಗೆ ಒಂದು ಅಪ್ಪಿಗೆ ನೀಡುತ್ತಾರೆ.

ತದನಂತರ ಹಣೆಯ ಮೇಲೆ ಮುತ್ತಿಟ್ಟು ಸಂತೈಸುತ್ತಾರೆ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈ ಕ್ಯೂಟ್ ಜೋಡಿಗಳ ವಿಡಿಯೋ ವೈರಲ್ ಆಗಿದ್ದು ನೋಡುಗರ ಮನಸ್ಸನ್ನು ಸೆಳೆದಿದೆ. ಇನ್ನು ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಅಭಿಮಾನಿಗಳು ಕೂಡ ಈ ವಿಡಿಯೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನೀವು ಕೂಡ ಈ ಕ್ಯೂಟ್ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಇಂದು ಯಶ್ ಮತ್ತು ರಾಧಿಕಾ ಪಂಡಿತ್ 6ನೇ ವರ್ಷದ ವಿವಾಹ ವಾರ್ಷಿಕೋತ್ಸವ ಪತಿಗಾಗಿ ಭಾವನಾತ್ಮಕ ಸಂದೇಶ ಕಳಿಸಿದ ರಾಧಿಕಾ ಪಂಡಿತ್ ಏನದು ಗೊತ್ತಾ.?

ಯಶ್ ರಾಧಿಕಾ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ವಿಚಾರ ನಿಮಗೆ ತಿಳಿದೇ ಇದೆ. 10 ವರ್ಷದ ಹಿಂದೆಯೇ ಇವರಿಬ್ಬರೂ ಕೂಡ ಸ್ನೇಹಿತರಾಗಿದ್ದರು ಸ್ನೇಹಿತರಾದ ನಂತರ ಐದು ವರ್ಷಗಳ ಕಾಲ ಒಬ್ಬರನ್ನು ಒಬ್ಬರು ಅರಿತುಕೊಂಡು ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಎಲ್ಲಿಯೂ ಕೂಡ ರಾಧಿಕಾ ಪಂಡಿತ್ ಯಶ್ ಅವರನ್ನು ಪ್ರೀತಿ ಮಾಡುತ್ತಿದ್ದಾರೆ ಎಂಬ ವಿಚಾರವನ್ನು ರಿವೀಲ್ ಮಾಡುವುದಿಲ್ಲ.

ಬಹಳ ಗೌಪ್ಯವಾಗಿಯೇ ಈ ವಿಚಾರವನ್ನು ಮುಚ್ಚಿಡುತ್ತಾರೆ ಮುಂದೊಂದು ದಿನ ಎಂಗೇಜ್ಮೆಂಟ್ ಆಗುವಂತಹ ಸಮಯದಲ್ಲಿ ಈ ವಿಚಾರವನ್ನು ಎಲ್ಲರ ಎದುರು ಬಹಿರಂಗ ಪಡಿಸುತ್ತಾರೆ. ಇನ್ನು ನಟ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಕೂಡ ಒಂದೇ ಕಾಲ ಘಟ್ಟದವರು ಒಟ್ಟಿಗೆ ಮೊದಲ ಬಾರಿಗೆ ಸೀರಿಯಲ್ ನಲ್ಲಿ ನಟನೆ ಮಾಡುತ್ತಾರೆ ತದನಂತರ ಒಟ್ಟಿಗೆ ಒಂದೇ ಸಿನಿಮಾದ ಮೂಲಕ ನಟ ನಟಿಯರಾಗಿ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡುತ್ತಾರೆ.

ಮೊಗ್ಗಿನ ಮನಸ್ಸು ಎಂಬ ಸಿನಿಮಾದ ಮೂಲಕ ಇವರ ಜರ್ನಿ ಪ್ರಾರಂಭವಾಗುತ್ತದೆ ಅಲ್ಲಿಂದ ಹಿಡಿದು ಇಲಿಯವರೆಗು ಕೂಡ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಇಬ್ಬರೂ ಕೂಡ ತಮ್ಮನ್ನು ಸಹ ಸಕ್ರಿಯವಾಗಿ ಇಟ್ಟುಕೊಂಡಿದ್ದಾರೆ. ಎಂಗೇಜ್ಮೆಂಟ್ ಆದ ನಾಲ್ಕೇ ತಿಂಗಳಿಗೆ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡುತ್ತಾರೆ ಹೌದು

2017 ಡಿಸೆಂಬರ್ 6ನೇ ತಾರೀಕು ಎರಡು ಕುಟುಂಬಸ್ಥರ ಸಮ್ಮತಿಯ ಮೇರೆಗೆ ಅಭಿಮಾನಿಗಳ ಮುಂದೆ ಹಾಗೂ ಸಾಕಷ್ಟು ಗಣ್ಯರ ಎದುರಿಗೆ ರಾಧಿಕಾ ಪಂಡಿತ್ ಯಶ್ ಅವರನ್ನು ಮದುವೆಯಾಗುತ್ತಾರೆ. ಇಂದಿಗೆ ಯಶ್ ರಾಧಿಕಾ ಅವರನ್ನು ಮದುವೆಯಾಗಿ ಆರು ವರ್ಷವಾಗಿದೆ ಈ ಆರು ವರ್ಷದಲ್ಲಿ ಇಬ್ಬರೂ ಕೂಡ ಸಾಂಸಾರಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಡಿದ್ದಾರೆ.

ಮದುವೆಯಾದ ಎರಡು ವರ್ಷಗಳ ತನಕ ಒಬ್ಬರನ್ನು ಒಬ್ಬರು ಅರಿತುಕೊಳ್ಳುತ್ತಾರೆ ಎರಡು ಕುಟುಂಬದವರು ಕೂಡ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ತದನಂತರ ಮುದ್ದಾದ ಮಗಳು ಜನಿಸುತ್ತಾಳೆ ಮಗಳು ಹುಟ್ಟಿದ ಒಂದೇ ವರ್ಷಕ್ಕೆ ಮಗ ಕೂಡ ಹುಟ್ಟುತ್ತಾನೆ ಒಟ್ಟಾರೆಯಾಗಿ ಹೇಳುವುದಾದರೆ ಕುಟುಂಬ ಅಂದರೆ ಹೀಗಿರಬೇಕು ಎಂದು ಮಾತನಾಡಿಕೊಳ್ಳುವಂತೆ ಬೆಳೆದು ನಿಲ್ಲುತ್ತಾರೆ.

ಸದ್ಯಕ್ಕೆ ಯಶ್ ಪರಿಪೂರ್ಣ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ ಇನ್ನು ನ್ಯಾಷನಲ್ ಸ್ಟಾರ್ ಆಗಿದ್ದರು ಕೂಡ ಯಶ್ ತಮ್ಮ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ಮೀಸಲಿಡುತ್ತಾರೆ. ತಮ್ಮ ವೃತ್ತಿ ಜೀವನಕ್ಕೆ ಎಷ್ಟು ಬೆಲೆ ಗೌರವವನ್ನು ನೀಡುತ್ತಾರೋ ಅಷ್ಟೇ ಬೆಲೆ ಗೌರವವನ್ನು ತಮ್ಮ ಕುಟುಂಬಕ್ಕೂ ಕೂಡ ನೀಡುತ್ತಾರೆ. ಇನ್ನು ನಟಿ ರಾಧಿಕಾ ಪಂಡಿತ್ ತಮ್ಮ ವಿವಾಹ ವಾರ್ಷಿಕೋತ್ಸವದ ಸಲುವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಪತಿಯು ಒಟ್ಟಿಗೆ ಇರುವಂತಹ ಕೆಲವು ಸುಂದರ ಫೋಟೋಗಳನ್ನು ಶೇರ್ ಮಾಡುವುದರ ಮೂಲಕ ತಮ್ಮ ಜೀವನದ ಕೆಲವು ಸುಂದರ ಕ್ಷಣಗಳನ್ನು ಅವಿಸ್ಮರಣೀಯ ಮಾಡಿಕೊಂಡಿದ್ದಾರೆ.

ಈ ಫೋಟೋಗಳ ಅಡಿ ಬರಹದಲ್ಲಿ ಹ್ಯಾಪಿ ಆನಿವರ್ಸರಿ ಮೈ ಲವ್ ನಾವು ಈ ಆರು ವರ್ಷದಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಡಿದ್ದೇವೆ ಒಟ್ಟಿಗೆ ಸಿನಿಮಾ ಮಾಡಿದ್ದೇವೆ. ಒಟ್ಟಿಗೆ ಧಾರ್ಮಿಕ ಕಾರ್ಯಗಳನ್ನು ಮಾಡಿದ್ದೇವೆ ಒಟ್ಟಿಗೆ ಎಲ್ಲಾ ಕಡೆಯೂ ಕೂಡ ಹೋಗಿದ್ದೇವೆ ನನ್ನ ಜೀವನವನ್ನು ಇಷ್ಟೊಂದು ಸುಂದರಮಯವನ್ನಾಗಿ ಮಾಡಿದಂತಹ ನಿಮಗೆ ಧನ್ಯವಾದಗಳು ಸಲ್ಲಿಸುತ್ತೇನೆ.

ಜೀವನದ ಕೊನೆಯ ಕ್ಷಣದವರೆಗೂ ಕೂಡ ನಿಮ್ಮೊಟ್ಟಿಗೆ ಬದುಕುವುದಕ್ಕೆ ಇಷ್ಟ ಪಡುತ್ತೇನೆ ಲವ್ ಯು ಫಾರ್ ಎವರ್ ಯಶ್ ಎಂದು ಬರೆದುಕೊಂಡಿದ್ದಾರೆ. ಈ ಬರಹ ಮತ್ತು ಫೋಟೋಗಳನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಯಶ್ ಮತ್ತು ರಾಧಿಕಾ ಜೋಡಿ ಇನ್ನೂ ನೂರು ವರ್ಷಗಳ ಕಾಲ ಒಟ್ಟಾಗಿ ಬದುಕಲಿ ಎಂದು ಹರಸೋಣ ಈ ಜೋಡಿ ಎಂದಿಗೂ ಕೂಡ ಹೀಗೆ ಖುಷಿಯಾಗಿರಲಿ ಎಂಬುದಷ್ಟೇ ನಮ್ಮ ಉದ್ದೇಶ.

ಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ ತೆಗೆದುಕೊಂಡು ಆರತಿ ತಟ್ಟೆಗೆ ಕಾಸು ಹಾಕಿದ ರವಿಚಂದ್ರನ್ ವಿಡಿಯೋ ವೈರಲ್.

ರವಿಚಂದ್ರನ್ ಶಿವರಾಜ್ ಕುಮಾರ್

ಚಿತ್ರ ರಂಗ ಎಂಬುದು ಬಣ್ಣದ ಲೋಕ ಇಲ್ಲಿ ಯಾವಾಗ ಯಾರು ಹೇಗೆ ಬೇಕಾದರೂ ಕೂಡ ಬದಲಾಗುತ್ತಾರೆ. ಬಡವ ಶ್ರೀಮಂತನಾಗಬಹುದು ಶ್ರೀಮಂತ ಬಡವನಾಗಬಹುದು ಇದಕ್ಕೆ ಸಾಕಷ್ಟು ಉದಾಹರಣೆಯನ್ನು ನಾವು ನೋಡಿದ್ದೇವೆ. ಆದರೆ ಒಂದು ಕಾಲದಲ್ಲಿ ಇಡೀ ಚಿತ್ರರಂಗವನ್ನು ಆಳುತ್ತಿದ್ದ ಹಾಗೂ ಕೋಟಿ ಕೋಟಿ ಮೌಲ್ಯದ ಬಜೆಟ್ ಹೂಡಿಕೆ ಮಾಡುತ್ತಿದ್ದಂತಹ ರವಿಚಂದ್ರನ್ ಅವರು ಇಂದು ಯಾವ ಸ್ಥಿತಿಗೆ ಬಂದಿದ್ದಾರೆ ಎಂಬುದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ.

ರವಿಚಂದ್ರನ್ ಅವರು ಹುಟ್ಟುತ್ತಾ ಆಗರ್ಭ ಶ್ರೀಮಂತರು ಹಾಗೂ ಅವರ ತಂದೆ ನಿರ್ಮಾಪಕರು ಫೈನಾನ್ಸಿಯರ್ ಕೂಡ ಹೌದು ಅಂದಿನ ಕಾಲದಲ್ಲಿ ಕೋಟಿ ಕೋಟಿ ಮೌಲ್ಯದ ಹಣವನ್ನು ಹೂಡಿಕೆ ಮಾಡಿ ಅದ್ದೂರಿಯಾಗಿ ಸಿನಿಮಾ ತೆಗೆಯಿತ್ತಿದ್ದರು. ರವಿಚಂದ್ರನ್ ಸಿನಿಮಾ ಅಂದರೆ ಸಾಕು ಜನ ಹುಚ್ಚೆದ್ದು ನೋಡುತ್ತಿದ್ದರು ಏಕೆಂದರೆ ಆ ಸಿನಿಮಾದ ಮೇಕಿಂಗ್ ಅಷ್ಟರ ಮಟ್ಟಿಗೆ ಇರುತ್ತಿತ್ತು. ಆದರೆ ಇಂದು ರವಿಚಂದ್ರನ್ ಯಾವ ಪರಿಸ್ಥಿತಿಗೆ ಬಂದಿದ್ದಾರೆ ಅಂದರೆ ಇರುವ ಮನೆ ಮಠ ಎಲ್ಲವನ್ನು ಕೂಡ ಕಳೆದುಕೊಂಡು ಬಾಡಿಗೆ ಮನೆಯಲ್ಲಿದ್ದಾರೆ.

ಅಪ್ಪ ಸಂಪಾದನೆ ಮಾಡಿದ ಸಂಪೂರ್ಣ ಆಸ್ತಿಯನ್ನು ಕೂಡ ಕಳೆದುಕೊಂಡಿದ್ದಾರೆ ಎಲ್ಲರೂ ಶೋಕಿಗಾಗಿ ಹಣವನ್ನು ಖರ್ಚು ಮಾಡುತ್ತಾರೆ ಇನ್ನಿತರ ಚಟಕ್ಕಾಗಿ ಹಣವನ್ನು ವ್ಯಯ ಮಾಡುತ್ತಾರೆ. ಆದರೆ ರವಿಚಂದ್ರನ್ ಮಾತ್ರ ಸಿನಿಮಾಗಾಗಿಯೇ ತಮ್ಮ ಸಿರಿ ಸಂಪತ್ತು ಎಲ್ಲವನ್ನು ಕೂಡ ಇದೀಗ ಕಳೆದುಕೊಂಡಿರುವುದು ನಿಜಕ್ಕೂ ವಿಷಾದಕರ ವಿಚಾರವೇ. ರವಿಚಂದ್ರನ್ ಅವರೇ ವೇದಿಕೆಯೊಂದರಲ್ಲಿ ನಾನು ಸಿನಿಮಾಗಾಗಿ ಎಲ್ಲವನ್ನು ಕಳೆದುಕೊಂಡಿದ್ದೇನೆ ನನ್ನ ಆಸೆ ಕನಸು ಗುರಿ ಏನಿದ್ದರೂ ಪ್ರೇಕ್ಷಕರಿಗೆ ಮನರಂಜನೆ ಕೊಡಬೇಕೆಂಬುದಷ್ಟೇ ಎಂದು ಹೇಳಿಕೊಂಡು ಭಾವುಕರಾಗಿದ್ದರು.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ರವಿಚಂದ್ರನ್ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ರವಿಚಂದ್ರನ್ ಮತ್ತು ಶಿವಣ್ಣ ಅವರ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಒಂದು ಮೂಡಿ ಬರುತ್ತಿದೆ ಈ ಸಿನಿಮಾದ ಚಿತ್ರೀಕರಣಕ್ಕೂ ಮುಂಚೆ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವರ ದರ್ಶನವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ದೇವರಿಗೆ ಮಂಗಳಾರತಿಯನ್ನು ಮಾಡಿ ಅದನ್ನು ಮುಂದೆ ನಿಂತಿರುವಂತಹ ಎಲ್ಲರಿಗೂ ಕೊಡುತ್ತಾರೆ.

ರವಿಚಂದ್ರನ್ ಬಳಿ ಬರುವುದಕ್ಕಿಂತ ಮುಂಚೆ ಶಿವಣ್ಣ ಅವರಿಗೆ ರವಿಚಂದ್ರನ್ ಅವರ ಪರಿಸ್ಥಿತಿ ಅರಿವಾಗಿರುತ್ತದೆ ಅದೇ ಸಮಯದಲ್ಲಿ ತಮ್ಮ ಪರ್ಸ್ ನಿಂದ 500 ರೂಪಾಯಿಗಳ ನೋಟನ್ನು ತೆಗೆದುಕೊಂಡು ರವಿಚಂದ್ರನ್ ನೀಡುತ್ತಾರೆ. ಶಿವಣ್ಣನ ಬಳಿ ಹಣವನ್ನು ನಿಸ್ಸಂಕೋಚವಾಗಿ ರವಿಚಂದ್ರನ್ ಪಡೆದು ಅದನ್ನು ಆರತಿ ತಟ್ಟೆಗೆ ಹಾಕುತ್ತಾರೆ. ತದನಂತರ ಮೊದಲು ನಿಮ್ಮ ತಂದೆಯವರು ನನಗೆ ಹಣ ನೀಡುತ್ತಿದ್ದರು ಇದೀಗ ನೀನು ನೀಡುತ್ತಿದೆ ಎಂದು ಹೇಳುತ್ತಾರೆ ರವಿಚಂದ್ರನ್ ಹೇಳಿದ ಮಾತನ್ನು ಕೇಳಿ ಶಿವಣ್ಣ ನಗುತ್ತಾರೆ.

ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ರವಿಚಂದ್ರನ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರೆ ಏಕೆಂದರೆ ಒಂದು ಕಾಲದಲ್ಲಿ ಇಂಡಸ್ಟ್ರಿಯಲ್ಲಿ ರಾಜನಂತೆ ಬದುಕಿದ್ದಂತಹ ಈ ಸರದಾರ ಇಂದು ಶಿವಣ್ಣನ ಬಳಿ ಹಣ ಪಡೆದಿದ್ದು ನೋಡಿ ನಿಜಕ್ಕೂ ಕೂಡ ಕಾಲ ಯಾವಾಗ ಹೇಗೆ ಬದಲಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅದೇನೆ ಆಗಲಿ ಆದಷ್ಟು ಬೇಗ ರವಿಚಂದ್ರನ್ ಅವರ ಆರ್ಥಿಕ ಸಂಕಷ್ಟ ಕಡಿಮೆಯಾಗಲಿ, ಉತ್ತಮ ಸಿನಿಮಾ ತೆಗೆದು ಮತ್ತೆ ಮೊದಲಿನ ಸ್ಥಿತಿಗೆ ಬರಲಿ ಎಂದು ರವಿಚಂದ್ರನ್ ಅಭಿಮಾನಿಗಳು ಆಶಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ನಟ ಪ್ರಭಾಕರ್ ಬೆಡ್ ರೂಂ ನಲ್ಲಿ ಇಟ್ಟಿದ್ದ ಅಮೂಲ್ಯ ಖಜಾನೆ ರಹಸ್ಯ ರಿವೀಲ್ ಮಾಡಿದ ವಿನೋದ್ ಪ್ರಭಾಕರ್

ಟೈಗರ್

ಪ್ರಭಾಕರ್ ತಮ್ಮ ತಂದೆ ಮನೆಯಲ್ಲಿ ಇಟ್ಟಿರುವಂತಹ ಅಮೂಲ್ಯ ಖಜಾನೆಯ ರಹಸ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರಭಾಕರ್ ಶೇಖರಿಸಿದ್ದ ಅಮೂಲ್ಯ ವಸ್ತು ಏನು ಗೊತ್ತಾ.

ಸುಮಾರು 80 90 ರ ದಶಕದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದಂತಹ ಖಳ ನಾಯಕರ ಪಟ್ಟಿಯಲ್ಲಿ ಟೈಗರ್ ಪ್ರಭಾಕರ್ ಅವರು ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಅಂತ ಹೇಳಿದರೆ ತಪ್ಪಾಗಲಾರದು‌ ಕೇವಲ ಖಳ ನಾಯಕ ಮಾತ್ರವಲ್ಲದೆ ಹಲವಾರು ಸಿನಿಮಾದಲ್ಲಿ ನಾಯಕ ನಟನಾಗಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಟೈಗರ್ ಎಂಬ ಹೆಸರು ಕೇಳುತ್ತಿದ್ದ ಹಾಗೆ ಇಡೀ ಚಿತ್ರರಂಗವೇ ಅಲುಗಾಡುತ್ತಿತ್ತು ಏಕೆಂದರೆ ಹೆಸರಿಗೆ ತಕ್ಕಂತೆ ನಟನೆಯಲ್ಲಿ ದೇಹ ದಢದ್ಯತೆ ಹಾಗೂ ಅಭಿನಯದಲ್ಲಿ ಎಲ್ಲದರಲ್ಲೂ ಕೂಡ ಟೈಗರ್ ಪ್ರಭಾಕರ್ ಅವರು ನಿಸ್ಸೀಮರಾಗಿದ್ದರು.

ಇನ್ನು ನಟ ಟೈಗರ್ ಪ್ರಭಾಕರ್ ಅವರಿಗೆ ಮೂರು ಮದುವೆಯಾಗಿದ್ದು ಅದರಲ್ಲಿ ಮೊದಲನೇ ಮಡದಿ ಮೇರಿ ಅವರ ಪುತ್ರ ವಿನೋದ್, ವಿನೋದ್ ಕೂಡ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಇವರಿಗೆ ಹೆಚ್ಚು ಯಶಸ್ಸು ಮತ್ತು ಕೀರ್ತಿ ತಂದು ಕೊಟ್ಟ ಸಿನಿಮಾ ಅಂದರೆ ಅದು ನವಗ್ರಹ ಅಂತ ಹೇಳಬಹುದು. ನವಗ್ರಹ ಸಿನಿಮಾದ ಮೂಲಕ ಒಂದೊಳ್ಳೆ ಐಡೆಂಟಿಟಿಯನ್ನು ಪಡೆದುಕೊಂಡರು ಸದ್ಯಕ್ಕೆ ವಿನೋದ್ ಪ್ರಭಾಕರ್ ಅವರು ಲಂಕಾಸುರ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡುತ್ತಿದ್ದಾರೆ.

ವಿಶೇಷ ಏನೆಂದರೆ ಈ ಸಿನಿಮಾದ ಸ್ವತಃ ವಿನೋದ್ ಪ್ರಭಾಕರ್ ಅವರೇ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ ಇದಿಷ್ಟು ಸಿನಿಮಾಗೆ ಸಂಬಂಧಪಟ್ಟ ವಿಚಾರ. ಇನ್ನು ವೈಯಕ್ತಿಕ ವಿಚಾರದಲ್ಲಿ ನಟ ಪ್ರಭಾಕರ್ ಅವರು ತಮ್ಮ ಮನೆಯಲ್ಲಿ ಇಟ್ಟಿದಂತಹ ಖಜಾನೆಯ ರಹಸ್ಯ ಒಂದನ್ನು ವಿನೋದ್ ಪ್ರಭಾಕರ್ ಅವರು ರಿವೀಲ್ ಮಾಡಿದ್ದಾರೆ. ಹೌದು, ಇತ್ತೀಚಿಗಷ್ಟೇ youtube ಸಂದರ್ಶನ ಒಂದರಲ್ಲಿ ವಿನೋದ್ ಪ್ರಭಾಕರ್ ಅವರು ಪ್ರಭಾಕರ್ ವಾಸವಾಗಿದಂತಹ ಮನೆಯ ಕೆಲವೊಂದಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ತಮ್ಮ ತಂದೆ ವಾಸವಾಗಿದಂತಹ ಭವ್ಯ ಬಂಗಲಿಯಲ್ಲಿ ಇದೀಗ ವಿನೋದ್ ರವರು ಕೂಡ ವಾಸ ಮಾಡುತ್ತಿದ್ದಾರೆ ಅವರು ಉಪಯೋಗ ಮಾಡುತ್ತಿದ್ದಂತಹ ವಸ್ತುಗಳನ್ನು ಬಳಕೆ ಮಾಡುತ್ತಿದ್ದಾರೆ. ಇನ್ನು ಪ್ರಭಾಕರ್ ಅವರು ತಮ್ಮ ಬೆಡ್ ರೂಮ್ ನಲ್ಲಿ ಮರದ ಶೋಕೇಸ್ ಒಂದನ್ನು ಮಾಡಿಸಿ ಅದರಲ್ಲಿ ತುಂಬಾ ಆಂಟಿಕ್ ವಸ್ತುಗಳನ್ನು ಇಟ್ಟಿದ್ದಾರೆ ಇದರ ಜೊತೆಗೆ ಕಾಸ್ಟ್ಲಿ ಡ್ರಿಂಕ್ಸ್ ಹಾಗೂ ಕ್ರಿಸ್ಟಲ್ ಗ್ಲಾಸ್ ಗಳನ್ನು ಕೂಡ ಶೇಖರಣೆ ಮಾಡಿ ಇಟ್ಟಿದ್ದಾರೆ.

ಸಾಮಾನ್ಯವಾಗಿ ಮನೆ ಎಂದ ಮೇಲೆ ಅಲ್ಲಿ ಅಲಂಕಾರಿಕ ವಸ್ತುಗಳು ಮತ್ತು ಗೃಹ ಉಪಯೋಗಿ ವಸ್ತುಗಳು ಅಥವಾ ಯಾವುದಾದರೂ ವಿವಿಧ ಚಿತ್ರಪಟಗಳು ಇರುವುದನ್ನು ನಾವು ಕಾಣಬಹುದು. ಆದರೆ ಪ್ರಭಾಕರ್ ಅವರು ಮಾತ್ರ ತಮ್ಮ ಮನೆಯಲ್ಲಿ ಕಾಸ್ಟ್ಲಿ ಡ್ರಿಂಕ್ಸ್ ಗಳನ್ನು ಶೇಖರಣೆ ಮಾಡಿ ಇಟ್ಟಿದ್ದಾರೆ. ಪುಟ್ಟ ಪುಟ್ಟ ಬಾಟಲ್ ಗಳಲ್ಲಿ ಇದನ್ನು ಶೇಖರಣೆ ಮಾಡಿರುವುದು ನಿಜಕ್ಕೂ ಆಶ್ಚರ್ಯ ಇದು ನೋಡುವುದಕ್ಕೆ ಬಹಳ ಮನಮೋಹಕವಾಗಿ ಕಾಣುತ್ತದೆ. ವಿಶೇಷ ಏನೆಂದರೆ ಪ್ರಭಾಕರ್ ಅವರು ವಿ.ಧಿ.ವ.ಶರಾಗಿ ಸುಮಾರು 20 ವರ್ಷಗಳಾಯಿತು ಆದರೂ ಕೂಡ ಈ ಎಲ್ಲಾ ವಸ್ತುಗಳನ್ನು ವಿನೋದ್ ಪ್ರಭಾಕರ್ ಅವರು ಇನ್ನೂ ಹಾಗೆಯೇ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ಇನ್ನು ಪ್ರಭಾಕರ್ ಅವರು ಡ್ರಿಂಕ್ಸ್ ಮಾಡುತ್ತಿದ್ದ ವಿಚಾರ ಸಾಕಷ್ಟು ಜನರಿಗೆ ತಿಳಿದೆ ಇದೆ ಇವರು ಅಫಿಶಿಯಲ್ ಡ್ರಿಂಕರ್ ಆಗಿದ್ದರು ಆದರೆ ಇವರ ಜೀವನದಲ್ಲಿ ನಡೆದಂತಹ ಕೆಲವು ಕಹಿ ಘಟನೆಗಳ ನೋವಿನಿಂದಾಗಿ ದಿನ ಕಳೆಯುತ್ತಾ ಕುಡಿತಕ್ಕೆ ದಾಸರಾಗುತ್ತಾರೆ. ಇದರಿಂದ ಅವರ ಆರೋಗ್ಯವೂ ಕೂಡ ಹದಗಿಡುತ್ತದೆ ಇವೆಲ್ಲವನ್ನೂ ಕಣ್ಣಾರೆ ಕಂಡಂತಹ ವಿನೋದ್ ಪ್ರಭಾಕರ್ ಅವರು ಈ ಕುಡಿತದ ದಾಸಕ್ಕೆ ಎಂದಿಗೂ ಕೂಡ ಒಳಗಾಗಬಾರದು ಎಂದಿದ್ದಾರೆ.

ಅಷ್ಟೇ ಅಲ್ಲದೆ ವಿನೋದ್ ಪ್ರಭಾಕರ್ ಎಂದಿಗೂ ಕೂಡ ಒಂದು ಹನಿ ಎಣ್ಣೆಯನ್ನು ಕೂಡ ಮುಟ್ಟಿಲ್ಲವಂತೆ ತಮ್ಮ ತಂದೆಯ ಬಗೆಗಿನ ಜೀವನದ ಕೆಲವು ರಹಸ್ಯಗಳನ್ನು ಹೇಳಿಕೊಳ್ಳುವುದರ ಮೂಲಕ ದಯವಿಟ್ಟು ಯಾರು ಕುಡಿತಕ್ಕೆ ಒಳಗಾಗಬೇಡಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಇದರಿಂದ ಸಾಕಷ್ಟು ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ ನನ್ನ ಜೀವನದಲ್ಲಿ ಇದನ್ನು ನಾನು ಕಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಅಶ್ವಿನಿ ಪಕ್ಕಾ ನಿಂತಿರುವ ಈ ವ್ಯಕ್ತಿ ಯಾರು ಗೊತ್ತ.? ಅಪ್ಪು ಅ.ಗ.ಲಿ.ದ ಒಂದೇ ವರ್ಷಕ್ಕೆ ದಿಟ್ಟ ನಿರ್ಧಾರ ಕೈಗೊಂಡ ಅಶ್ವಿನಿ.! ಅಭಿಮಾನಿಗಳ ಮನಸ್ಸಲ್ಲಿ ಗೊಂದಲ ಮೂಡಿದೆ.

ಅಶ್ವಿನಿ ಪುನೀತ್ ರಾಜ್ ಕುಮಾರ್

ವೈರಲ್ ಆಗುತ್ತಿದೆ ಅಶ್ವಿನಿ ಪುನೀತ್ ಅವರು ಎಂಎಲ್ಎ ಮಗರೊಬ್ಬರ ಜೊತೆ ತೆಗೆಸಿಕೊಂಡ ಫೋಟೋ, ಇದು ರಾಜಕೀಯಕ್ಕಿಳಿಯುವ ಸೂಚನೆನಾ.?

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅಗಲಿಕೆ ಬಳಿಕ ಅಪ್ಪು ಹೆಸರನ್ನು ಉಳಿಸುವ ಹಾಗೂ ದೊಡ್ಡಮನೆ ಕೀರ್ತಿ ಬೆಳಗುವ ಕೆಲಸವನ್ನು ಬಹಳ ಜವಾಬ್ದಾರಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಅಪ್ಪು ಅವರೇ ನಿರ್ಮಾಣ ಮಾಡಿದ ಪಿ ಆರ್ ಕೆ ಪ್ರೊಡಕ್ಷನ್ ಹಾಗೂ ಪಿ ಆರ್ ಕೆ ಆಡಿಯೋ ಕಂಪನಿಗಳ ನಿರ್ವಹಣೆ ಮಾಡುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಕನಸಂತೆ ಕನ್ನಡದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ.

ಜೊತೆಗೆ ಅಪ್ಪು ಅವರ ಅನುಪಸ್ಥಿತಿಯಲ್ಲಿ ಅವರಿರಬೇಕಾದ ಜಾಗದಲ್ಲಿ ಇದ್ದು ಮಕ್ಕಳ ಪೋಷಣೆ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಪುನೀತ್ ಅವರು ಇರುವ ತನಕ ಹೆಚ್ಚಾಗಿ ಎಲ್ಲಿ ಹೊರಗಡೆ ಕಾಣಿಸಿಕೊಳ್ಳದ ಹಾಗೂ ಕ್ಯಾಮರ ಎದುರು ಹೆಚ್ಚಾಗಿ ಬರದೇ ನಾಚಿಕೆಯ ಸ್ವಭಾವ ತೋರುತ್ತಿದ್ದ ಅಶ್ವಿನಿ ಅವರು ಅಪ್ಪು ಅಗಲಿಕೆ ನಂತರ ಬಹಳ ಗಟ್ಟಿಯಾಗಿ ನಿಂತಿದ್ದು ತನ್ನ ಎಲ್ಲಾ ನೋವುಗಳನ್ನು ಬಚ್ಚಿಟ್ಟುಕೊಂಡು ದೊಡ್ಮನೆ ಸೊಸೆಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವರ್ಷದಿಂದ ಅಶ್ವಿನಿ ಅವರ ಕುರಿತ ಸಾಕಷ್ಟು ವರದಿಗಳು ಪ್ರಸಾರವಾಗಿವೆ. ಆದರೆ ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರಾ ಎಂದು ಅನುಮಾನ ತರೆಸುವ ಫೋಟೋ ಒಂದು ಬಹಳ ವೈರಲಾಗುತ್ತಿದ್ದು ಅದರ ಸತ್ಯಾನುಸತ್ಯತೆ ಈ ರೀತಿ ಇದೆ.

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೆಬ್ಬಾಳದ ಶಾಸಕರಾದ ಬೈರತಿ ಸುರೇಶ್ ಅವರ ಪುತ್ರ ಸಂಜಯ್ ಸುರೇಶ್ ಅವರ ಜೊತೆ ತೆಗೆದುಕೊಂಡಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜೊತೆ ಸಂಜಯ್ ಸುರೇಶ್ ಮತ್ತು ವಿನಯ ರಾಘವೇಂದ್ರ ರಾಜಕುಮಾರ್ ಅವರು ಸಹ ಇದ್ದಾರೆ.

ಹೀಗಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ರಾಜಕೀಯ ವಿಚಾರದ ಕುರಿತವಾಗಿ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದಾರಾ ಎಂದು ಕೆಲವರು ಕೇಳುತ್ತಿದ್ದರೆ ಇಲ್ಲ ಇದು ಯಾವುದೋ ಸಮಾರಂಭದ ಸಮಯದಲ್ಲಿ ಒಟ್ಟಿಗೆ ಸಿಕ್ಕಾಗ ಅಭಿಮಾನದಿಂದ ತೆಗೆಸಿಕೊಂಡಿರುವ ಫೋಟೋ ಇರಬೇಕು ಎಂದು ಕೂಡ ಕೆಲವರು ಮಾತನಾಡುತ್ತಿದ್ದಾನೆ.

ದೊಡ್ಮನೆ ಕುಟುಂಬ ರಾಜಣ್ಣ ಇದ್ದ ದಿನದಿಂದಲೂ ರಾಜಕೀಯದಿಂದ ದೂರ ಉಳಿದಿತ್ತು. ಕರ್ನಾಟಕ ಕಂಡ ಮೇರು ನಟ ಡಾ. ರಾಜಕುಮಾರ್ ಅವರಿಗೆ ಇಡೀ ಕರ್ನಾಟಕವೇ ಗೌರವ ಕೊಟ್ಟು ಪ್ರೀತಿಯಿಂದ ಅಣ್ಣನಂತೆ ಕಾಣುತ್ತಿತ್ತು. ಅಲ್ಲದೆ ಗೋಕಾಕ್ ಚಳುವಳಿ ಮುಂತಾದ ಸಂದರ್ಭಗಳಲ್ಲಿ ಅವರು ಹೋರಾಟ ಮಾಡಿದ್ದರು, ಎಲ್ಲಾ ಪಕ್ಷದವರ ಜೊತೆಗೂ ಕೂಡ ಸ್ನೇಹದಿಂದ ಇದ್ದರು.

ಹಲವು ಬಾರಿ ಇವರಿಗೆ ರಾಜಕೀಯ ಪ್ರವೇಶಿಸುವ ಅವಕಾಶ ಸಿಕ್ಕರು ಅದನ್ನು ನಯವಾಗಿ ತಿರಸ್ಕರಿಸಿ ದೂರವೇ ಉಳಿದಿದ್ದರು. ಅಂದು ಅವರು ಮನಸ್ಸು ಮಾಡಿದ್ದರೆ ಕರ್ನಾಟಕದ ಮುಖ್ಯಮಂತ್ರಿ ಬೇಕಾದರು ಆಗಬಹುದಿತ್ತು ಆದರೆ ರಾಜಣ್ಣ ಎಂದಿಗೂ ಆ ಕಡೆ ಮುಖ ಮಾಡಿದವರಲ್ಲ. ಪುನೀತ್ ರಾಜಕುಮಾರ್ ಸಹಾ ಅಪ್ಪನ ಹಾಗೆ ಬಿಜೆಪಿ ಪಕ್ಷದಿಂದ ಕರೆ ಬಂದರು ಯಾವ ಪಕ್ಷದಲ್ಲೂ ಸೇರಿಕೊಳ್ಳದೆ ರಾಜಕೀಯೇತರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡರು.

ಬಹುತೇಕ ಈಗ ಅಪ್ಪು ಅಭಿಮಾನಿಗಳೆಲ್ಲರೂ ಅಶ್ವಿನಿ ಅವರು ಸಹ ಅಪ್ಪು ಅವರಂತೆ ಇದೆ ಮಾರ್ಗದಲ್ಲಿ ನಡೆಯುತ್ತಾರೆ ಎಂದು ಹೇಳುತ್ತಿದ್ದಾರೆ. ಅವರ ಮುಂದಿನ ನಡೆ ಏನೇ ಇದ್ದರೂ ಕೂಡ ಅದರಿಂದ ಅವರ ಕುಟುಂಬಕ್ಕೆ ಹಾಗೂ ಕರ್ನಾಟಕಕ್ಕೆ ಒಳಿತಾಗಲಿ ಎಂದು ಹರಸೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.