Home Blog Page 267

ಗಟ್ಟಿಮೇಳ ಸೀರಿಯಲ್ ಅಧಿತಿ ಹಾಗೂ ಪಾರು ಸೀರಿಯಲ್ ಪ್ರೀತಮ್ ಮದುವೆ ಸಂಭ್ರಮ, ಮದುವೆಗೆ ಯಾರೆಲ್ಲಾ ಬಂದಿದ್ರು ನೋಡಿ.

ಸಿದ್ದುಮೂಲಿಮನಿ ಪ್ರಿಯಾ ಜೆ ಆಚಾರ್ ಮದುವೆ

ಈ ವರ್ಷ ಕನ್ನಡ ಸಿನಿಮಾ ಇಂಡಸ್ಟ್ರಿಯ ಅನೇಕ ತಾರೆಗಳು ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಕೆಲವು ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ವರ್ಷ ಹಸೆಮಣೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವರ್ಷದ ಆರಂಭದಿಂದಲೇ ಶುಭ ಪೂಂಜ ಅವರ ಮದುವೆ ನಡೆದಿತ್ತು, ಇತ್ತೀಚೆಗೆ ನಟಿ ಅಧಿತಿ ಪ್ರಭುದೇವ ಅವರು ಕೂಡ ಮದುವೆ ಆಗಿದ್ದಾರೆ.

ನೆನ್ನೆ ಅಷ್ಟೇ ಅಭಿಷೇಕ್ ಅಂಬರೀಶ್ ಅವರ ಎಂಗೇಜ್ಮೆಂಟ್ ಅವಿವಾ ಬಿದಪ್ಪ ಅವರೊಂದಿಗೆ ನಡೆದಿದೆ. ಮತ್ತು ಕೆಲವರು ತಮ್ಮ ಜೊತೆ ಕೆಲಸ ಮಾಡಿದ ತಾರೆಯರನ್ನೇ ಬಾಳ ಸಂಗಾತಿ ಆಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರನ್ನು ಉದಾಹರಣೆಯಾಗಿ ಮಾಡಬಹುದು.

ಬೆಳ್ಳಿ ಪರದೆ ಕಲಾವಿದರು ಮಾತ್ರವಲ್ಲದೆ ಕಿರುತೆರೆ ಕಲಾವಿದರಲ್ಲೂ ಹಲವರು ಈ ವರ್ಷ ಮದುವೆ ಮತ್ತು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದರಲ್ಲೂ ಅನೇಕರು ತಮ್ಮ ವೃತ್ತಿಯವರನ್ನೇ ಆರಿಸಿಕೊಂಡು ಕೈ ಹಿಡಿಯುತ್ತಿದ್ದಾರೆ. ಈ ಸಾಲಿನಲ್ಲಿ ಈ ವರ್ಷ ಕಿರುತೆರೆ ಕಲಾವಿದರಲ್ಲಿ ಮದುವೆಯಾದವರ ಹೆಸರನ್ನು ಹೇಳುವುದಾದರೆ.

ಸಾಗರ್ ಪುರಾಣಿಕ್, ರಶ್ಮಿ ಪ್ರಭಾಕರ್, ಐಶ್ವರ್ಯ ಸಾಲಿಮಠ ಮತ್ತು ತೇಜಸ್ವಿನಿ ಪ್ರಕಾಶ್ ಮುಂತಾದವರನ್ನು ಹೆಸರಿಸಬಹುದು. ವರ್ಷದ ಅಂತ್ಯದಲ್ಲಿ ಮತ್ತಿಬ್ಬರು ಕಲಾವಿದರು ಎಂಗೇಜ್ಮೆಂಟ್ ಮಾಡಿಕೊಂಡು ಎಲ್ಲರಿಗೂ ಶಾ-ಕ್ ನೀಡಿದ್ದಾರೆ.

ಯಾರು ಕೂಡ ಇವರಿಬ್ಬರೂ ಮದುವೆ ಆಗುತ್ತಾರೆ ಎಂದು ಊಹಿಸಲೇ ಇಲ್ಲ. ಕನ್ನಡ ಕಿರುತೆರೆಯಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಜನರ ಜನಮನ್ನಣೆ ಗಳಿಸಿ ಜೀ ಕನ್ನಡ ವಾಹಿನಿಗೆ ಅತ್ಯುತ್ತಮ ಟಿ ಆರ್ ಪಿ ತಂದು ಕೊಡುತ್ತಿರುವ ಎರಡು ಹಿಟ್ ಧಾರಾವಾಹಿಗಳಾದ ಗಟ್ಟಿಮೇಳ ಮತ್ತು ಧಾರಾವಾಹಿಯ ಇಬ್ಬರು ಕಲಾವಿದರುಗಳು ಪ್ರೀತಿಸಿ ಮದುವೆಯಾಗುತ್ತಿದ್ದಾರೆ.

ಗಟ್ಟಿಮೇಳ ಧಾರವಾಹಿ ನಾಯಕಿ ಅಮೂಲ್ಯ ಅವರ ತಂಗಿಯ ಪಾತ್ರ ಮಾಡಿರುವ ಅಧಿತಿ ಅವರು ತಮ್ಮ ಬಜಾರಿ ಪಾತ್ರದಿಂದ ಧಾರಾವಾಹಿಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ತಿಂಡಿಪೋತಿ ಸೋಂಬೆರಿ ಹುಡುಗಿ ಅಧಿತಿ ಆಗಿ ಕಾಣಿಸಿಕೊಂಡಿರುವ ಪೂಜಾ ಜೆ ಆಚಾರ್ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ಆದಿತ್ಯನ ತಮ್ಮ ಪ್ರೀತು ಆಗಿ ಅಭಿನಯಿಸಿರುವ ಸಿದ್ದು ಮೂಲಿಮನಿ ಅವರನ್ನು ಮದುವೆ ಆಗುತ್ತಿದ್ದಾರೆ.

ಗುರು ಹಿರಿಯರ ಸಮ್ಮುಖದೊಂದಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರ ನಡುವೆ ಅದ್ದೂರಿಯಾಗಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು, ಕಾರ್ಯಕ್ರಮಕ್ಕೆ ಅನೇಕ ಕಲಾವಿದರು ಬಂದು ಹರಸಿ ಹೋಗಿದ್ದರು. ಇದೀಗ ಇಬ್ಬರ ಮದುವೆ ತಯಾರಿ ಕೂಡ ಜೋರಾಗಿದ್ದು ಫ್ರೀ ವೆಡ್ಡಿಂಗ್ ಶೂಟ್ ಅಲ್ಲಿ ಭಾಗಿಯಾಗಿದ್ದಾರೆ.

ಈ ಪ್ರೀ ವೆಡ್ಡಿಂಗ್ ಶೂಟ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದ್ದು ನೋಡಿದವರೆಲ್ಲರೂ ಯಾವುದೇ ಸಿನಿಮಾ ಸೀನಿಗಿಂತ ಕೂಡ ಇದು ಕಡಿಮೆ ಏನಿಲ್ಲ ಎಂದು ಹಾಡಿ ಹೊಗಳುತ್ತಿದ್ದಾರೆ. ವೆಸ್ಟರ್ನ್ ಕಾಸ್ಟ್ಚೂಮ್ ಅಲ್ಲಿ ಇಬ್ಬರು ಕೂಡ ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ಅಪ್ಸರೆ ಅಂತೆ ಕಾಣುತ್ತಿರುವ ಅಧಿತಿಗೆ ಮನ್ಮತನಂತಹ ಪ್ರೀತು ಜೋಡಿಯಾಗುತ್ತಿದ್ದು ಇವರಿಬ್ಬರ ಜೋಡಿ ಎಲ್ಲರಿಗೂ ಇಷ್ಟ ಆಗಿದೆ.

ಈಗಾಗಲೇ ಪ್ರೀತು ಅಲಿಯಾಸ್ ಸಿದ್ದು ಮೂಲಿಮನಿ ಅವರು ಸಿನಿಮಾ ಇಂಡಸ್ಟ್ರಿಗೆ ಕೂಡ ಕಾಲಿಟ್ಟಿದ್ದು ಅನೇಕ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ರಂಗಿತರಂಗ ಮತ್ತು ವಿಕ್ರಂತ್ ರೋಣ ಅಂತಹ ಸಿನಿಮಾಗಳಲ್ಲೂ ಕೂಡ ಪ್ರಮುಖ ಪಾತ್ರ ನಿರ್ವಹಿಸಿರುವ ಖ್ಯಾತಿ ಇವರಿಗಿದೆ. ಮತ್ತು ಇವರಿಬ್ಬರು ಜೋಡಿಯಾಗಿಯೇ ಹೊಸ ಆಲ್ಬಮ್ ಸಾಂಗ್ ಅಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಆ ಹಾಡು ಕೂಡ ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿ ಇದೆ. ಇಬ್ಬರಿಗೂ ಕೂಡ ವಯಕ್ತಿಕ ಮತ್ತು ವೃತ್ತಿ ಜೀವನ ಎರಡರಲ್ಲೂ ಶುಭವಾಗಲಿ ಎಂದು ಹರಸೋಣ.

 

ವಯಸ್ಸಿನಲ್ಲಿ ತನಿಗಿಂತ 3 ವರ್ಷ ಹಿರಿಯ ಹುಡುಗಿಯೊಂದಿಗೆ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದೆಕೆ ಗೊತ್ತ.? ಅವಿವಾ ಬಿದ್ದಪ್ಪ ಬ್ಯಾಗ್ರೌಂಡ್ ಕೇಳಿದ್ರೆ ಬೆಚ್ಚಿ ಬಿಳ್ತೀರಾ

ಅಭಿಷೇಕ್ ಅವಿವಾ

ಅಗರ್ಭ ಶ್ರೀಮಂತೆ ಜೊತೆ ಅಂಬರೀಶ್ ಪುತ್ರನ ವಿವಾಹ, ಇಬ್ಬರ ನಡುವಿನ ವಯಸ್ಸಿನ ಅಂತರ ಕೇಳಿ ಶಾ-ಕ್ ಆದ ಜನತೆ.

ಕಳೆದ ಕೆಲವು ದಿನಗಳಿಂದ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಅಂಬರೀಷ್ ಮತ್ತು ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಅವರ ವಿವಾಹದ ಬಗ್ಗೆ ಹೆಚ್ಚು ಸುದ್ದಿ ಆಗುತ್ತಿತ್ತು. ಇದೇ ಡಿಸೆಂಬರ್ ತಿಂಗಳಿನಲ್ಲಿ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ಆಗಲಿದೆ ಮುಂದಿನ ತಿಂಗಳಲ್ಲಿ ಅವರ ಮದುವೆ ನಡೆಯುತ್ತದೆ ಎಂದು ಎಲ್ಲರೂ ಸುದ್ದಿಯನ್ನು ಬಿತ್ತರ ಪಡಿಸಿದ್ದರೂ ಕೂಡ ಹುಡುಗಿ ಯಾರು ಎನ್ನುವ ಸುಳಿವನ್ನು ಬಿಟ್ಟು ಕೊಟ್ಟಿರಲಿಲ್ಲ ಇದೀಗ ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದಿದೆ.

ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಅಭಿಷೇಕ್ ಅಂಬರೀಶ್ ಅವರು ತನ್ನ ಮನದರಿಸಿಗೆ ಉಂಗುರ ತೊಡಿಸಿ ಎಂಗೇಜ್ಮೆಂಟ್ ಮಾಡಿಕೊಂಡು ಅದನ್ನು ಅಫಿಶಿಯಲ್ ಆಗಿ ಅನೌನ್ಸ್ ಕೂಡ ಮಾಡಿದ್ದಾರೆ. ಇಷ್ಟಕ್ಕೂ ಜೂನಿಯರ್ ರೆಬಲ್ ಸ್ಟಾರ್ ಕೈ ಹಿಡಿಯುತ್ತಿರುವ ಅದೃಷ್ಟವಂತೆ ಹೆಸರು ಅವಿವಾ ಬಿದಪ್ಪ.

ಮಾಡಲ್ ಕಮ್ ಫ್ಯಾಶನ್ ಡಿಸೈನರ್ ಆಗಿರುವ ಅವಿವಾ ಅವರು ಲಂಡನ್ ಅಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ಈಗ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ. ಭಾರತದ ಫ್ಯಾಷನ್ ಡಿಸೈನಿಂಗ್ ಲೋಕದಲ್ಲಿ ಫ್ಯಾಶನ್ ಗುರು ಹೆಸರು ಮಾಡಿರುವ ಪ್ರಸಾದ್ ಬಿದ್ದಪ್ಪ ಅವರ ಮುದ್ದಿನ ಮಗಳು ಈಕೆ. ಪ್ರಸಾದ್ ಬಿದ್ದಪ್ಪ ಅವರು ಮಾಡಲಿಂಗ್ ಹಾಗೂ ಫ್ಯಾಷನ್ ಅನ್ನು ಉದ್ಯೋಗ ಹಾಗೂ ಉದ್ದಿಮೆ ಮಾಡಿಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಲಾರಾದತ್ತರಂತಹ ನಟಿಮಣಿಯರಿಗೂ ಕೂಡ ಫ್ಯಾಷನ್ ಡಿಸೈನಿಂಗ್ ಮಾಡಿ ಸೈ ಎನಿಸಿಕೊಂಡಿರುವ ಪ್ರಸಾದ್ ಬಿದ್ದಪ್ಪ ಅವರ ಹೆಸರು ಕರ್ನಾಟಕದಲ್ಲಿ ಮಾತ್ರವಲ್ಲದೆ ಬಾಲಿವುಡ್ ಅಲ್ಲೂ ಸಹ ಬಹಳ ಫೇಮಸ್. ಈಗ ಇಂಡಿಯಾದ ಫ್ಯಾಶನ್ ಲೋಕದಲ್ಲಿ ಹೆಚ್ಚು ಪ್ರಚಲಿತರಾಗಿರುವ ಪ್ರಸಾದ್ ಬಿದ್ದಪ್ಪ ಅವರು ಮೂಲತಃ ಕೊಡಗಿನವರು.

ಈಗ ಬೆಂಗಳೂರಿನಲ್ಲಿಯೇ ನೆಲೆಸಿರುವ ಇವರು ಪ್ರಸಾದ್ ಬಿದ್ದಪ್ಪ ಅಸೋಸಿಯೇಟ್ ಕೂಡ ನಡೆಸುತ್ತಿದ್ದಾರೆ. ಅ ಮೂಲಕ ಸಾವಿರಾರು ಪ್ರತಿಭೆಗಳನ್ನು ಫ್ಯಾಶನ್ ಲೋಕಕ್ಕೆ ಪರಿಚಯಿಸಿದ್ದಾರೆ. ಇದೀಗ ಅವರ ಮಗಳು ಅವಿವಾ ಕೂಡ ಇದೇ ಕ್ಷೇತ್ರವನ್ನು ಆಯ್ದುಕೊಂಡಿದ್ದು ಪ್ರಸಾದ್ ಬಿದ್ದಪ್ಪ ಅಸೋಸಿಯೇಟಿಗೆ ನಿರ್ದೇಶಕಿ ಮತ್ತು ಖ್ಯಾತ ಮಾಡಲ್ ಹಾಗೂ ನಟಿ ಕೂಡ ಆಗಿದ್ದಾರೆ.

ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಶ್ ಅವರ ನಡುವೆ ನಾಲ್ಕು ವರ್ಷದ ಪರಿಚಯ ಇದ್ದು ಆ ಸ್ನೇಹ ಪ್ರೀತಿಯಾಗಿ ತಿರುಗಿ ಈಗ ಹಸೆಮೆಣೆ ಏರಲು ನಿರ್ಧಾರ ಮಾಡಿದ್ದಾರೆ. ಅಂಬರೀಶ್ ಅವರು ಸಹ ಇದೇ ರೀತಿ ಸುಮಲತಾ ಅವರನ್ನು ಪ್ರೇಮ ವಿವಾಹ ಆಗಿದ್ದರು ಈಗ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದು ಅವಿವಾ ಅವರ ಕೈ ಹಿಡಿಯುತ್ತಿದ್ದಾರೆ.

ಈಗ ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಬಾರಿ ಚರ್ಚೆ ಆಗುತ್ತಿದ್ದು 29 ವರ್ಷ ವಯಸ್ಸಿನ ಅಭಿಷೇಕ್ ಅಂಬರೀಶ್ ಅವರು ತಮಗಿಂತ ಮೂರು ವರ್ಷ ಹಿರಿಯರಾದ 32 ವರ್ಷ ಆ ವಯಸ್ಸಿನ ಅವಿವಾ ಅವರನ್ನು ಕೈ ಹಿಡಿಯುತ್ತಿದ್ದಾರೆ. ಆದರೆ ಈ ರೀತಿ ವಯಸ್ಸಿಗಿಂತ ಹಿರಿಯರನ್ನು ಮದುವೆ ಆಗುತ್ತಿರುವವರಲ್ಲಿ ಇವರೇ ಮೊದಲಿಗರೇನಲ್ಲ ವಿಷ್ಣುವರ್ಧನ್, ರಾಕಿಂಗ್ ಸ್ಟಾರ್ ಯಶ್, ಸಚಿನ್ ತೆಂಡೂಲ್ಕರ್ ಈ ರೀತಿ ಸಾಕಷ್ಟು ಜನ ತಮಗಿಂತ ಹಿರಿಯರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಈಗ ಅಭಿಷೇಕ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು ಅವರಿಗೂ ಸಹ ದಾಂಪತ್ಯ ಜೀವನದಲ್ಲಿ ಸಂತೋಷ ಸಿಗಲಿ ಎಂದು ಹರಸೋಣ.

ಮುನಿಸು ಮರೆತು ಮತ್ತೆ ಒಂದಾದ ದೋಸ್ತಿಗಳು, ಕ್ರಾಂತಿ ಸಿನಿಮಾ ಸಂದರ್ಶನದಲ್ಲಿ ದರ್ಶನ್ ಬಾಯಲ್ಲಿ ಸುದೀಪ್ ಹೆಸರು ಕೇಳಿ ಬೆರಗಾದ ಅಭಿಮಾನಿಗಳು.

ಕುಚ್ಚಿಕು ಗೆಳೆಯರು ಒಂದಾಗುತ್ತಿದ್ದಾರೆ

ಕಿಚ್ಚನ ಮಾತುಗಳಲ್ಲಿ ದರ್ಶನ್ ಹೆಸರು ದರ್ಶನ್ ಬಾಯಿಲ್ಲಿ ಸುದೀಪ್ ಜೊತೆ ಸಿನಿಮಾ ಬಗ್ಗೆ ಮಾತು ಮುನಿಸು ಮರೆತು ಒಂದಾಗಿದ್ದಾರಾ ದೋಸ್ತಿಗಳು.

ಚಂದನವನದ ಸ್ನೇಹಿತರ ಬಗ್ಗೆ ಉದಾಹರಣೆ ಕೊಡುವುದಾದರೆ ಅಂಬರೀಶ್ ಹಾಗೂ ವಿಷ್ಣುವರ್ಧನ್ ಸ್ನೇಹವನ್ನು ಎಲ್ಲರೂ ಮೊದಲಿಗೆ ಹೇಳುತ್ತಾರೆ. ವಿಷ್ಣುವರ್ಧನ್ ಅವರು ಶಾಂತ ಸ್ವಭಾವದ ನಾಚಿಕೆ ವ್ಯಕ್ತಿತ್ವದ ಸಂತನ ರೀತಿಯ ಬದುಕು ಬದುಕಿದವರು. ಇತ್ತ ರೆಬಲ್ ಸ್ಟಾರ್ ಮಾತಿನಲ್ಲಿ ರಫ್ ಮತ್ತು ಮುಖ ಮೂತಿ ನೋಡದೆ ಯಾರಿಗೆ ಆದರೂ ಅವರ ಎದುರಿಗೆ ಇದನ್ನು ಹೇಳಿಬಿಡುವ ವ್ಯಕ್ತಿತ್ವ ಇಬ್ಬರ ಟೇಸ್ಟ್ಗಳು ಕೂಡ ಬೇರೆ, ಇಬ್ಬರು ಬೆಳೆದು ಬಂದ ರೀತಿ ಹಾಗೂ ಬದುಕುತ್ತಿದ್ದ ರೀತಿ ಕೂಡ ಬೇರೆ ಬೇರೆ.

ಆದರೆ ಇವರಿಬ್ಬರ ನಡುವೆ ಇದ್ದ ಗಾಢವಾದ ಸ್ನೇಹ ಎಂತದ್ದು ಎಂದು ಈಗಾಗಲೇ ಕನ್ನಡಿಗರು ಕಂಡಿದ್ದಾರೆ. ಆ ಸ್ನೇಹವನ್ನು ಮತ್ತೆ ನೆನಪಿಸುವಂತಹ ಮತ್ತೊಂದು ಸ್ಟಾರ್ ಜೋಡಿಗಳು ಇಂಡಸ್ಟ್ರಿಯಲ್ಲಿ ಇದ್ದರು. ಜೂನಿಯರ್ ವಿಷ್ಣುವರ್ಧನ್ ಮತ್ತು ಅಂಬರೀಶ್ ಎಂದೇ ಅವರು ಕರೆಸಿಕೊಳ್ಳುತ್ತಿದ್ದರು.

ಇದು ಬೇರೆ ಯಾರು ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು. ಇವರಿಬ್ಬರು ಒಂದೇ ಸಮಯದಲ್ಲಿ ಚಿತ್ರರಂಗ ಪ್ರವೇಶ ಮಾಡಿ ಒಂದೇ ಸಮಯದಲ್ಲಿ ಸ್ಟಾರ್ ಹೀರೋ ಆಗಿ ಬೆಳೆದವರು. ಎಷ್ಟೇ ಬಾರಿ ಇಬ್ಬರ ಚಿತ್ರಗಳು ಕೂಡ ಒಂದೇ ದಿನ ರಿಲೀಸ್ ಆಗಿವೆ. ಆದರೆ ಮೊದಲಿನಿಂದಲೂ ಇವರಿಬ್ಬರ ನಡುವೆ ಒಂದು ಅಂತರ ಕಾಡುತ್ತಿತ್ತು.

ಉಳಿದ ಎಲ್ಲಾ ಸ್ಟಾರ್ಟಗಳ ಜೊತೆ ಬೆರೆಯುತ್ತಿದ್ದರೂ ಕೂಡ ಇವರಿಬ್ಬರು ಮಾತ್ರ ಎಂದೂ ಒಟ್ಟಿಗೆ ಕಾಣಿಸಿಕೊಂಡವರಲ್ಲ. ಯಾವಾಗ ದರ್ಶನ್ ಬದುಕಿನಲ್ಲಿ ಬಿರುಗಾಳಿ ಎದ್ದಿತು. ಅಂದಿನಿಂದ ದರ್ಶನ್ ಗೆ ಸುದೀಪ್ ಸಾಥ್ ಕೊಡಲು ಶುರು ಮಾಡಿದರು. ದರ್ಶನ್ ಅವರ ಅಂತಹ ಕೆಟ್ಟ ಪರಿಸ್ಥಿತಿಯಲ್ಲಿ ಅವರ ಸ್ನೇಹಕ್ಕೆ ಕೈಜೋಡಿಸಿದ ಮೊದಲ ಸ್ಟಾರ್ ಸುದೀಪ್.

ಆನಂತರ ಇವರಿಬ್ಬರೂ ಕಾಣಿಸಿಕೊಳ್ಳುತ್ತಿದ್ದ ಬಗೆ ನೋಡಿ ಚಡ್ಡಿ ದೋಸ್ತ್ಗಳಿರಬೇಕು ಎಂದು ಎಲ್ಲರೂ ಮಾತನಾಡುವಂತಿತ್ತು. ಸುದೀಪ್ ಅವರಿಗಾಗಿ ಸಿಸಿಎಲ್ಅಲ್ಲಿ ದರ್ಶನ್ ಅವರು ಆಟ ಆಡಿದ್ದರು, ದರ್ಶನ್ ಅವರ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಕಥೆ ಹೈಲೈಟ್ಸ್ ಹೇಳಲು ಸುದೀಪ್ ಅವರು ಧ್ವನಿಕೊಟ್ಟು ಚಿತ್ರದ ಮೆರಗನ್ನು ಹೆಚ್ಚಿಸಿದ್ದರು. ಇಬ್ಬರು ಒಟ್ಟಿಗೆ ಅಕ್ಕ ಪಕ್ಕ ಕೂತು ಊಟ ಮಾಡುತ್ತಿದ್ದರು ಒಂದೇ ಕಾರಿನಲ್ಲಿ ತೆರಳುತ್ತಿದ್ದರು.

ಹೀಗೆ ಒಬ್ಬರನ್ನು ಒಬ್ಬರು ಬಿಟ್ಟಿರಲಾಗದಷ್ಟು ಹೆಗಲ ಮೇಲೆ ಕೈ ಹಾಕಿ ಕೊಂಡು ಓಡಾಡುತ್ತಿದ್ದರು. ಆದರೆ ಅದು ಯಾವ ಕೆಟ್ಟ ದೃಷ್ಟಿ ಈ ಸ್ನೇಹದ ಮೇಲೆ ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಮಧ್ಯದವರ ಹುಳಿ ಹಿಂಡುವಿಕೆಯಿಂದ ಇಬ್ಬರ ನಡುವೆ ಈಗ ಕೋಲ್ಡ್ ವಾರ್ ನಡೆಯುತ್ತಿದೆ. ದರ್ಶನ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಸುದೀಪ್ ನನ್ನ ಸ್ನೇಹಿತ ಅಲ್ಲ ಇಬ್ಬರು ಒಂದೇ ಇಂಡಸ್ಟ್ರಿಯ ನಾಯಕರು ಅಷ್ಟೇ ಎಂದು ಟ್ವೀಟ್ ಮಾಡುವಷ್ಟು ಇಬ್ಬರ ನಡುವೆ ತಂದಿಟ್ಟು ತಮಾಷೆ ನೋಡಿದ್ದಾರೆ.

ಇದೆಲ್ಲಾ ಆಗಿ ಹಲವು ಸಮಯ ಕಳೆದಿದ್ದರೂ ಕೂಡ ಸುದೀಪ್ ಎಂದು ದರ್ಶನ್ ಬಗ್ಗೆ ಹಗುರವಾಗಿ ಮಾತನಾಡಿದವರಲ್ಲ. ಬದಲಾಗಿ ಮೀಡಿಯಾದವರು ಬೇಕೆಂದಲೇ ಕಾಂಟ್ರವರ್ಸಿ ಮಾಡಿ ಪ್ರಶ್ನೆ ಕೇಳಿದಾಗಲೂ ದರ್ಶನ್ ನನ್ನ ಸ್ನೇಹಿತ ಎಂದೇ ಉತ್ತರ ಕೊಟ್ಟಿದ್ದಾರೆ. ಇತ್ತ ಕ್ರಾಂತಿ ಸಿನಿಮಾದ ಪ್ರಚಾರ ವೇಳೆ ಕೂಡ ಮಲ್ಟಿಸ್ಟಾರ್ ಸಿನಿಮಾ ಮಾಡುವ ಬಗ್ಗೆ ದರ್ಶನ್ ಅವರನ್ನು ಪ್ರಶ್ನಿಸಿದಾಗ.

ದರ್ಶನ್ ಅವರು ಸಹ ಸುದೀಪ್ ಅವರೊಂದಿಗೆ ಯಶ್ ಅವರೊಂದಿಗೆ ಶಿವಣ್ಣ ಅವರೊಂದಿಗೆ ಸಿನಿಮಾ ಮಾಡುವ ಇಚ್ಛೆ ಇದೆ ಎಂದು ಓಪನ್ ಆಗಿ ಹೇಳಿಕೊಂಡಿದ್ದಾರೆ. ಇವರಿಬ್ಬರ ನಿಜ ಅಭಿಮಾನಿಗಳು ಈಗಾಗಲೇ ಸಾಕಷ್ಟು ಬಾರಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿ ಎಂದು ರಿಕ್ವೆಸ್ಟ್ ಕೂಡ ಮಾಡಿದ್ದಾರೆ. ಕನ್ನಡಿಗರ ಅಭಿಲಾಷೆಗೋಸ್ಕರ ಆದರು ದಚ್ಚು ಹಾಗೂ ಕಿಚ್ಚ ಮುನಿಸು ಮರೆತು ಒಂದಾಗಲಿ ಎನ್ನುವುದೇ ಅಭಿಮಾನಿಗಳ ಆಶಯ.

ದಿನಕ್ಕೆ ಒಂದು ಕೋಟಿ ಮಾತ್ರ ಬಿಗ್ ಬಾಸ್ ಹೋಗ್ತಿನಿ ಅಂದಿದ್ದ ಆರ್ಯವರ್ಧನ್ ಗುರೂಜಿ ವಿಡಿಯೋ ವೈರಲ್

 

ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ಸಂಭಾವನೆ ವಿಚಾರಕ್ಕೆ ಟ್ರೋಲ್ ಆಗಿದ್ದ ಆರ್ಯವರ್ಧನ್ ಗುರೂಜಿ.

ನಾನು ಅಂದರೆ ನಂಬರ್ ನಂಬರ್ ಎಂದರೆ ನಾನು ಈ ಡೈಲಾಗ್ ಹೇಳಿಕೊಂಡು ಕರ್ನಾಟಕದಾದ್ಯಂತ ಮನೆ ಮಾತಾಗಿರುವ ನಂಬರ್ ಗುರೂಜಿ ಎಂದೇ ಕರೆಸಿಕೊಳ್ಳುತ್ತಿರುವ ಆರ್ಯವರ್ಧನ್ ಅವರ ಹಳೆ ಟ್ರೋಲಿಂಗ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಆರ್ಯವರ್ಧನ್ ಅವರು ಮಾಧ್ಯಮಗಳಲ್ಲಿ ಪ್ರಚಲಿತವಾಗುತ್ತಿದ್ದಂತೆ ಅವರನ್ನು ಅನೇಕ ಬಾರಿ ಟ್ರೋಲ್ ಮಾಡಲಾಗಿದೆ.

ಟ್ರೋಲ್ ಮಾಡುವವರಿಗೆ ಆರ್ಯವರ್ಧನ್ ಅವರು ಮಾತನಾಡುವ ಪ್ರತಿ ವಿಷಯ ಕೂಡ ಕಂಟೆಂಟ್ ಆಗಿರುತ್ತದೆ. ಯಾಕೆಂದರೆ ವಿಷಯಜ್ಞಾನ ಅಳವಾಗಿದ್ದರೂ ಕೂಡ ಅವಿದ್ಯಾವಂತನಂತೆ ಮಾತನಾಡಿ ಮಾತುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಇವರು. ಒಮ್ಮೊಮ್ಮೆ ಅವರು ಹೇಳುವ ರೀತಿಗೂ ನಡೆದುಕೊಳ್ಳುವ ರೀತಿಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ.

ಹೀಗಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಈಗ ಬಿಗ್ ಬಾಸ್ ಕಾರ್ಯಕ್ರಮದ ಕುರಿತ ಅವರು ಆಡಿದ ಮಾತಿನಿಂದ ಸಿಕ್ಕಿಹಾಕಿಕೊಂಡಿರುವ ಇವರ ವಿಡಿಯೋ ಹೊಸ ರೂಪದಲ್ಲಿ ಬಹಳ ವೈರಲ್ ಆಗುತ್ತಿದೆ. ಹಿಂದೊಮ್ಮೆ ಕಾರು ಡ್ರೈವ್ ಮಾಡುತ್ತಾ, ಸಂದರ್ಶನಕಾರೊಬ್ಬರಿಗೆ ಇವರು ಉತ್ತರಿಸುತ್ತಿದ್ದರು. ಆ ಸಮಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಪ್ರಶ್ನೆ ಕೇಳಿದ್ದರು.

ನನ್ನನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪ್ರತಿ ಸಲ ಕರೆಯುತ್ತಾರೆ ಆದರೆ ನಾನು ನನ್ನ ಸಂಭಾವನೆಯನ್ನು ಒಂದು ದಿನಕ್ಕೆ ಒಂದು ಕೋಟಿ ಕೊಡಿ ಎಂದು ಕೇಳುತ್ತಿದ್ದೇನೆ ಅವರು ಕೊಡುವುದಿಲ್ಲ ಎಂದರು ನನ್ನ ಮಾತಿಗೆ ಒಪ್ಪಲಿಲ್ಲ ಹೀಗಾಗಿ ನಾನು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಬಿಟ್ಟೆ ಎಂದು ಹೇಳಿರುವ ವಿಡಿಯೋ ಈಗ ಟ್ರೋಲಿಗರಿಗೆ ಸಿಕ್ಕಿ.

ಆಗ ಈ ರೀತಿ ಹೇಳಿದ್ದಾರೆ ಈಗ ಯಾಕೆ 9ನೇ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಹಾಗಾದರೆ ಈ ಅವರಿಗೆ ಒಂದು ದಿನಕ್ಕೆ ಒಂದು ಕೋಟಿ ಕೊಡುತ್ತಿದ್ದಾರಾ ಎಂದು ಕಾಲೆಳೆದಿದ್ದಾರೆ. ಆರ್ಯವರ್ಧನ್ ಅವರು ಆಡಿರುವ ಮಾತುಗಳಿಗೆ ರಂಗಣ್ಣನವರ ಕೆಲವು ಡೈಲಾಗ್ ಗಳನ್ನು ಸೇರಿಸಿ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ನೋಡಿದವರು ನಕ್ಕು ನಕ್ಕು ಸುಸ್ತಾಗಬೇಕು ಆ ರೀತಿ ವಿಡಿಯೋವನ್ನು ಎಡಿಟ್ ಮಾಡಲಾಗಿದೆ.

ಅದಕ್ಕೆ ಸೂಕ್ತವಾಗುವಂತೆ ರಂಗಣ್ಣ ಅವರ ಫೇಮಸ್ ಡೈಲಾಗ್ ಗಳನ್ನು ಸೇರಿಸಿರುವುದು ಇದಕ್ಕೆ ಮತ್ತಷ್ಟು ಹಾಸ್ಯವನ್ನು ಸೇರಿಸಿದಂತಿದೆ. ಎರಡು ಕೂಡ ಬಹಳ ಮ್ಯಾಚ್ ಆಗಿ ಕೊನೆಯಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾದ ಡೈಲಾಗ್ ಕೂಡ ಸೇರಿಸಲಾಗಿದೆ. ಆ ಸಿನಿಮಾದ ಒಂದು ಸಂದರ್ಭದಲ್ಲಿ ನಾಯಕನಿಗೆ ಆತನ ಸ್ನೇಹಿತ ನೀನೆನು ಶಾರುಖ್ ಖಾನ್ ರೀತಿ ಇದ್ದೀಯಾ? ಬ್ಯಾಂಕ್ ಜನಾರ್ಧನ್ ಕಡೆ ತಮ್ಮನ ರೀತಿ ಇದ್ದೀಯ ಎಂದು ಹೇಳಿದ ಡೈಲಾಗ್ ಆರ್ಯವರ್ಧನ್ ಅವರ ಈ ವಿಡಿಯೋಗೆ ತುಂಬಾ ಚೆನ್ನಾಗಿ ಸಿಂಕ್ ಆಗುತ್ತಿದೆ.

ಸದ್ಯಕ್ಕೀಗ ಬಿಗ್ ಮನೆಯಲ್ಲಿರುವ ಆರ್ಯವರ್ಧನ್ ಅವರು ಅಡುಗೆ ಮನೆಯಲ್ಲಿ ಹೆಚ್ಚು ಗುರುತಿಸಿಕೊಂಡು ಟಾಸ್ಕ್ ಗಳಲ್ಲೂ ಕೂಡ ತಮಗಾದಷ್ಟು ಪ್ರಯತ್ನ ಮಾಡಿ ಎಂಟರ್ಟೈನಿಂಗ್ ವಿಷಯದಲ್ಲಿ ಮಾತ್ರ ಮನೆಯಲ್ಲಿ ಎಲ್ಲರಿಗಿಂತ ಲೀಡ್ ಅಲ್ಲಿ ಇದ್ದಾರೆ. ಸದ್ಯಕ್ಕೆ ಈಗ ಬಿಗ್ ಬಾಸ್ ಮನೆಯಲ್ಲಿ ಆರ್ಯ ವರ್ಧನ್ ಅವರನ್ನು ನೋಡುತ್ತಿದ್ದರೆ ಹೊರಗಿದ್ದ ಆರ್ಯವರ್ಧನ್ ಅವರಿಗೂ ಈಗ ಮನೆ ಸೇರಿದ ಅವರಿಗೂ ಬಹಳ ವ್ಯತ್ಯಾಸ ಕಾಣಿಸುತ್ತಿದೆ.

ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಕಂಟೆಸ್ಟೆಂಟ್ ಗಳಿಗಿಂತಲೂ ಇವರೇ ಮುಗ್ಧರಂತೆ ಕಾಣುತ್ತಿದ್ದು ತಾವು ಮಾಡಿಕೊಳ್ಳುವ ಎಡವಟ್ಟಿನಿಂದ ಮತ್ತು ಮಾತುಗಳಿಂದ ಮನೆಯ ಎಲ್ಲರನ್ನು ಮತ್ತು ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದ್ದಾರೆ. ಅಲ್ಲದೆ ಈ ಬಾರಿಯ ವಿನ್ನರ್ ಕೂಡ ಆರ್ಭವರ್ಧನ್ ಅವರೇ ಆಗಲಿದ್ದಾರೆ ಎನ್ನುವ ಊಹಾಪೋಹಗಳು ಜೋರಾಗಿದೆ.

ನಟಿ ಆಶು ರೆಡ್ಡಿ ಕಾಲು ಚಪ್ಪರಿಸಿ ನೆಕ್ಕಿದ ನಿರ್ದೇಶಕ ರಾಮ್ ಗೋಪಾಲ್ ರೆಡ್ಡಿ ವಿಡಿಯೋ ವೈರಲ್

ಆಶುರೆಡ್ಡಿ

ರಾಮ್ ಗೋಪಾಲ್ ವರ್ಮ ಮತ್ತು ಅಶು ರೆಡ್ಡಿ ಕುರಿತ ಸುದ್ದಿ ಬಗ್ಗೆ ಸ್ಪೋ.ಟ.ಕ ಹೇಳಿಕೆ ನೀಡಿದ ನಟಿ.

ಸದ್ಯಕ್ಕೆ ಸೋಶಿಯಲ್ ಮೀಡಿಯಾ ತುಂಬೆಲ್ಲಾ ತೆಲುಗು ನಟಿ ಅಶು ರೆಡ್ಡಿ ಹಾಗೂ ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಕುರಿತ ಸುದ್ದಿಗಳು ಬಾರಿ ಚರ್ಚೆ ಆಗುತ್ತಿವೆ. ಇದಕ್ಕೆಲ್ಲ ಕಾರಣ ಇತ್ತೀಚೆಗೆ ರಾಮ್ ಗೋಪಾಲ್ ವರ್ಮ ಅವರು ಅಶು ರೆಡ್ಡಿ ಅವರ ಕಾಲಿನ ಬೆರಳನ್ನು ನೆಕ್ಕುತ್ತಿರುವ ವೀಡಿಯೋ ವೈರಲ್ ಆಗಿರುವುದು.

ಅಶು ರೆಡ್ಡಿ ಅವರು ರಾಮ್ ಗೋಪಾಲವರ್ಮ ಅವರ ನಿರ್ದೇಶನದ ಡೇಂ.ಜ.ರ್ ಎನ್ನುವ ತೆಲುಗು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಬಗ್ಗೆ ಜನತೆಗೆ ಬಾರಿ ನಿರೀಕ್ಷೆ ಇದ್ದು ಡಿಸೆಂಬರ್ 9 ರಂದು ತೆಲುಗು ಹಾಗೂ ಹಿಂದಿಯಲ್ಲಿ ಚಿತ್ರ ಬಿಡುಗಡೆಗೊಂಡಿದೆ. ಈ ಚಿತ್ರದ ಪ್ರಚಾರ ಮಾಡಲು ಸಂದರ್ಶನ ಒಂದರಲ್ಲಿ ನಿರ್ದೇಶಕ ರಾಜಗೋಪಾಲ್ ವರ್ಮ ಹಾಗೂ ಅಶು ರೆಡ್ಡಿ ಅವರು ಭಾಗಿಯಾಗಿದ್ದರು.

ಸಂದರ್ಶನದ ಮಧ್ಯದಲ್ಲಿ ಅಶು ರೆಡ್ಡಿ ಅವರ ಕಾಲು ಬೆರಳಿಗೆ ಆರ್.ಜಿ ವರ್ಮ ಅವರು ಮುತ್ತನಿಟ್ಟಿದ್ದಾರೆ ಹಾಗೂ ಅವರ ಕಾಲನ್ನು ನೆಕ್ಕಿದ್ದಾರೆ. ಸಿನಿಮಾ ಕುರಿತ ಪ್ರಚಾರಕ್ಕಾಗಿ ಅವರು ಈ ರೀತಿ ನಡೆದುಕೊಂಡಿದ್ದಾರೋ ಅಥವಾ ಆರ್ ಜಿ ವರ್ಮ ಅವರ ವ್ಯಕ್ತಿತ್ವವೇ ಈ ರೀತಿ ಇರುವುದರಿಂದ ಅವರು ಸಹಜವಾಗಿ ಈ ರೀತಿ ನಡೆದುಕೊಂಡಿದ್ದಾರೋ ಗೊತ್ತಿಲ್ಲ.

ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆ ಫೋಟೋಗಳು ಹಾಗೂ ವೀಡಿಯೋಗಳು ಭಾರಿ ಸಂಚಲನ ಉಂಟು ಮಾಡಿವೆ. ಕಳೆದ ಎರಡು ಮೂರು ದಿನಗಳಿಂದ ಇದೇ ವಿಷಯಕ್ಕಾಗಿ ಅಶುರೆಡ್ಡಿ ಹಾಗೂ ರಾಮ್ ಗೋಪಾಲ್ ವರ್ಮ ಅವರನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ. ಇದನ್ನು ಗಮನಿಸಿದ ನಟಿ ಅಶುರೆಡ್ಡಿ ಅವರು ಇದಕ್ಕೆ ತಿರುಗೇಟು ಸಹ ನೀಡಿದ್ದಾರೆ.

ರಾಮ್ ಗೋಪಾಲ್ ವರ್ಮ ಅವರು ಆ ರೀತಿ ಮಾಡಿರುವುದು ನನಗೆ ಖುಷಿ ನೀಡಿದೆ. ಈ ಬಗ್ಗೆ ಯಾರು ಏನೇ ಹೇಳಿದರೂ, ಏನೇ ಮಾತನಾಡಿಕೊಂಡರು ಕೂಡ ಐ ಡೋಂಟ್ ಕೇರ್ ಎಂದಿದ್ದಾರೆ. ಈ ರೀತಿ ಹೇಳಿಕೆ ಕೊಡುವ ಮೂಲಕ ತಾನು ಟ್ರೋಲ್ ಆಗುತ್ತಿರುವುದರ ಬಗ್ಗೆ ತಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ನುಡಿದಿದ್ದಾರೆ.

ಅಶು ರೆಡ್ಡಿ ಅವರು ಮೊದಲಿನಿಂದ ಕೂಡ ಇದೇ ರೀತಿ ಬೋಲ್ಡ್ ಆಗಿ ಇದ್ದವರು. ತೆಲುಗಿನ ಬಿಗ್ ಬಾಸ್ ಮೂರರಲ್ಲಿ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದ ಇವರು ಸೋಶಿಯಲ್ ಮೀಡಿಯಾ ಸ್ಟಾರ್ ಎನ್ನಬಹುದು. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇವರನ್ನು ಅದೇ ಕೋಟದಿಂದ ಬಿಗ್ ಬಾಸ್ ಮನೆಗೆ ಸೇರಿಸಕೊಳ್ಳಲಾಗಿತ್ತು. ಆ ಮೂಲಕ ಇನ್ನು ಹೆಚ್ಚು ಫೇಮಸ್ ಆದ ಇವರು ನಂತರ ಸಿನಿಮಾಗಳಲ್ಲಿ ಪಾತ್ರ ಮಾಡುವ ಅವಕಾಶ ಪಡೆದುಕೊಂಡರು.

ಇನ್ಸ್ಟಾಗ್ರಾಮ್ ಅಲ್ಲಿ ಅತಿ ಹೆಚ್ಚು ಸಂಖ್ಯೆಯ ಫಾಲೋವರ್ಸ್ ಹೊಂದಿರುವ ಈಕೆ ತನ್ನ ಫಾಲೋವರ್ಸ್ ಹಾಗೂ ಅಭಿಮಾನಿಗಳನ್ನು ರಂಜಿಸಲು ಹೊಸ ಹೊಸ ಫೋಟೋ ಶೂಟ್ ಮಾಡಿಸಿ ಹಂಚಿಕೊಳ್ಳುತ್ತಾರೆ. ಅಲ್ಲದೆ ವಿಡಿಯೋ ಎಡಿಟರ್ ಬಗ್ಗೆ ಕೂಡ ಆಸಕ್ತಿ ಹೊಂದಿರುವ ಇವರು ಅದನ್ನು ಸಹ ಅಪ್ಲೋಡ್ ಮಾಡುತ್ತಾರೆ.

ನೋಡುವುದಕ್ಕೆ ಸಮಂತ ಅವರನ್ನೇ ಹೋಲುವ ಇವರು ಜೂನಿಯರ್ ಸಮಂತ ಎಂದು ಕೂಡ ಫೇಮಸ್ ಆಗಿದ್ದಾರೆ. ಸಿನಿಮಾ ರಂಗದಲ್ಲಿ ಅವಕಾಶಗಳನ್ನು ಪಡೆಯುತ್ತಿರುವ ಇವರ ಈ ನಡೆ ಮುಂದೆ ಯಾವ ತಿರುವು ಪಡೆದುಕೊಳ್ಳಲಿದಿಯೋ ಗೊತ್ತಿಲ್ಲ ಆದರೆ ಆದರೆ ನೆಟ್ಟಿಗರು ಮಾತ್ರ ವೈರಲ್ ಆಗುತ್ತಿರುವ ಈ ಫೋಟೋ ನೋಡಿ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ

ಅಭಿಷೇಕ್ ಅಂಬರೀಶ್ ಅವಿವಾ ಬಿದ್ದಪ್ಪ ನಿಶ್ಚಿತಾರ್ಥ.

ದೀರ್ಘಕಾಲ ಗೆಳತಿ ಜೊತೆ ನಿಶ್ಚಿತಾರ್ಥ

ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಕುರಿತು ತಿಂಗಳಿಂದ ಅನೇಕ ಸುದ್ದಿಗಳು ಕೇಳಿ ಬರುತ್ತಿದ್ದವು. ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರಿನ ಅರಮನೆ ಮೈದಾನದ ಅಂಗಳದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತದೆ ಎಂದು ಗಾಂಧಿನಗರದಲ್ಲಿ ಸುದ್ದಿ ಎದ್ದಿತ್ತು ಆದರೆ ದಿನಾಂಕ ಇನ್ನು ನಿಗದಿ ಆಗಿರಲಿಲ್ಲ.

ಇದರ ಮಧ್ಯದಲ್ಲೇ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ನಡೆದು ಹೋಗಿದೆ. ಚಂದನ ವನದ ಹ್ಯಾಂಡ್ ಸಮ್ ಬಾಯ್ ಅಭಿ ಅನೇಕರಿಗೆ ಕ್ರಶ್ ಆಗಿದ್ದರು. ರಾಜಕೀಯ ಮತ್ತು ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವ ಇವರಿಗೆ ಅನೇಕ ಜನ ಫ್ಯಾನ್ ಫಾಲೋವರ್ಸ್ ಇದ್ದಾರೆ, ಅದರಲ್ಲೂ ಯುವ ಅಭಿಮಾನಿಗಳೇ ಹೆಚ್ಚು.

ಇದೀಗ ಎಂಗೇಜ್ಮೆಂಟ್ ಆಗುವ ಮೂಲಕ ಕಾಲೇಜ್ ಹೆಣ್ಮಕ್ಕಳ ಹಾರ್ಟ್ ಬ್ರೇಕ್ ಮಾಡಿದ್ದಾರೆ ಅಭಿ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಸುದ್ದಿ ಹಬ್ಬಿದಾಗಿಂದಲೂ ಹುಡುಗಿ ಯಾರಾಗಿರಬಹುದು ಎನ್ನುವ ಕುತೂಹಲ ಮನೆ ಮಾಡಿದ್ದು. ಅವರೂ ಸಿನಿಮಾ ಅಥವಾ ಮಾಡಲಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟವರಾಗಿರುತ್ತಾರೆ ಎನ್ನುವ ಸುಳಿವು ಸಿಕ್ಕಿದ್ದರೂ ಈವರೆಗೆ ಹುಡುಗಿ ಹೆಸರನ್ನು ಬಹಿರಂಗಪಡಿಸಲಿಲ್ಲ.

ಈ ಬಗ್ಗೆ ಅನೇಕ ಬಾರಿ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅವರನ್ನು ಪ್ರಶ್ನಿಸಿದ್ದರೂ ಕೂಡ ಎಂಗೇಜ್ಮೆಂಟ್ ದಿನವೇ ಅದನ್ನು ರಿವೀಲ್ ಮಾಡಲಾಗುತ್ತದೆ ಎಂದಷ್ಟೇ ಹೇಳುತ್ತಿದ್ದರು. ಇದೀಗ ಎಲ್ಲಾ ಕುತೂಹಲಕ್ಕೂ ತೆರೆ ಬಿದ್ದಿದ್ದು ಅಭಿಷೇಕ್ ಅಂಬರೀಶ್ ಅವರ ಕೈಹಿಡಿದು ಮಂಡ್ಯದ ಸೊಸೆ ಆಗಲಿರುವ ಆ ಹುಡುಗಿ ಯಾರು ಎನ್ನುವ ಗುಟ್ಟು ರಟ್ಟಾಗಿದೆ.

ಇಂಡಿಯಾದ ಫ್ಯಾಶನ್ ಡಿಸೈನಿಂಗ್ ಮತ್ತು ಮಾಡಲಿಂಗ್ ಲೋಕದಲ್ಲಿ ಫ್ಯಾಶನ್ ಗುರು ಎಂದೇ ಫೇಮಸ್ ಆಗಿರುವ ಕನ್ನಡದ ಮೂಲದವರೇ ಆದ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರನ್ನು ಅಭಿಷೇಕ್ ಅಂಬರೀಶ್ ಅವರು ಕೈ ಹಿಡಿಯುತ್ತಿದ್ದಾರೆ ಪ್ರಸಾದ್ ಬಿದ್ದಪ್ಪ ಅವರು ಸಹ ಫ್ಯಾಷನ್ ಡಿಸೈನಿಂಗ್ ಮತ್ತು ಮಾಡೆಲ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಇವರ ತಂದೆಯಾದ ಪ್ರಸಾದ್ ಬಿದ್ದಪ್ಪ ಅವರು ಪ್ರಸಾದ್ ಬಿದ್ದಪ್ಪ ಎನ್ನುವ ಅಸೋಸಿಯೇಷನ್ ನಡೆಸಿಕೊಂಡು ಕಳೆದ 20 ವರ್ಷಗಳಿಂದ ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿಕೊಂಡು ಬಂದಿದ್ದಾರೆ. ಬಾಲಿವುಡ್ ನ ಖ್ಯಾತ ತಾರೆಯರಾದ ಅನುಷ್ಕಾ ಶರ್ಮ, ದೀಪಿಕಾ ಪಡುಕೋಣೆ, ಲಾರ ದತ್ತ ಇವರಿಗೂ ಸಹ ಫ್ಯಾಷನ್ ಡಿಸೈನಿಂಗ್ ಮಾಡಿರುವ ಪ್ರಸಾದ್ ಬಿದ್ದಪ್ಪ ಅವರಿಗೆ ಭಾರತದಾದ್ಯಂತ ಈ ಕ್ಷೇತ್ರದಲ್ಲಿ ಒಳ್ಳೆ ಫೇಮ್ ಇದೆ.

ಅವಿವಾ ಬಿದ್ದಪ್ಪ ಅವರು ಸಹ ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದು ಸದ್ಯದಲ್ಲೇ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಸಾಧ್ಯತೆಗಳು ಕೂಡ ಇವೆ. ಬಲ್ಲ ಮೂಲಗಳ ಪ್ರಕಾರ ಮುಂದಿನ ವರ್ಷದಲ್ಲೇ ಜೋಡಿಗಳು ಹೊಸಮಣೆ ಏರಲಿದ್ದು ಆನಂತರ ಅವರು ತಮ್ಮ ಕಾಳಿ ಚಿತ್ರದ ಕಡೆ ಗಮನ ಹರಿಸಬೇಕಾಗಿದೆ.

ಕೃಷ್ಣ ಅವರ ನಿರ್ದೇಶನದ ಕಾಳಿ ಸಿನಿಮಾ ಈಗಾಗಲೇ ಘೋಷಣೆ ಆಗಿದ್ದು ಸಿನಿಮಾದಲ್ಲಿ ಕಾಂತರಾ ಖ್ಯಾತಿಯ ಸಪ್ತಮಿ ಗೌಡ ಅವರು ನಾಯಕಿ ಅಗಲಿದ್ದಾರೆ ಎಂದು ಅನೌನ್ಸ್ ಕೂಡ ಆಗಿತ್ತು. ಕಳೆದ ವಾರ ಅಷ್ಟೇ ಬಂಡಿ ಮಾಕಳಮ್ಮ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯ ಕೂಡ ನೆರವೇರಿತು. ಅಂಬರೀಶ್ ಅವರ ವೈವಾಹಿಕ ಬದುಕು ಹಾಗೂ ಕೆರಿಯರ್ ಎರಡಕ್ಕೂ ಶುಭವಾಗಲಿ ಎಂದು ಹರಸೋಣ.

 

ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿಗೆ ಗೇಟ್ ಪಾಸ್

ಪ್ರಶಾಂತ್ ಸಂಬರ್ಗಿ ಆಟ ಮುಕ್ತಾಯ

ಬಿಗ್ ಬಾಸ್ ಮನೆಯ ಕಾಂಟ್ರವರ್ಸಿ ಕಿಂಗ್ ಎಂದೇ ಖ್ಯಾತಿ ಹೊಂದಿರುವ ಪ್ರಶಾಂತ್ ಸಂಬರ್ಗಿ ಅವರು 13ನೇ ವಾರಕ್ಕೆ ತಮ್ಮ ಆಟ ಮುಗಿಸಿ ಹೊರ ಬಿದ್ದಿದ್ದಾರೆ. ಸೀಸನ್ ಎಂಟರ ಕಂಟೆಸ್ಟೆಂಟ್ ಕೂಡ ಆಗಿದ್ದ ಪ್ರಶಾಂತ್ ಆ ಮೂಲಕ ಬಿಗ್ ಬಾಸ್ ಪ್ರಶಾಂತ್ ಸಂಬರ್ಗಿ ಎಂದೇ ಕರ್ನಾಟಕದಲ್ಲಿ ಫೇಮಸ್ ಕೂಡ ಆದರು.

ಇದಕ್ಕೂ ಮೊದಲು ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಪ್ರಶಾಂತ್ ಸಂಬರ್ಗಿ ಅವರು ಅದೇ ವ್ಯಕ್ತಿತ್ವವನ್ನು ಬಿಗ್ ಬಾಸ್ ಮನೆಯಲ್ಲಿ ಸಹ ಉಳಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಂದು ವಿಷಯಕ್ಕೂ ಕೂಡ ಗಲಾಟೆ ಮಾಡಿ ಗದ್ದಲ ಸೃಷ್ಟಿಸುತ್ತಿದ್ದ ಇವರ ಮಾತು ಬಹಳ ನೇರದಿಂದ ಕೂಡಿರುತ್ತಿತ್ತು.

ಇವರ ನೇರನುಡಿ ಕಟು ಮಾತುಗಳಿಂದ ಸಹ ಸ್ಪರ್ಧಿಗಳು ಇವರ ಮೇಲೆ ಯಾವಾಗಲೂ ಕೆಂಡ ಕಾರುತ್ತಿದ್ದರು. ಮೊದ ಮೊದಲಿಗೆ ಪ್ರಶಾಂತ್ ಸಂಬರ್ಗಿ ಅವರ ಆರೋಪಗಳು ಜಗಳಗಳು ಗಲಾಟೆಗಳು ಕಿರಿಕಿರಿ ಎನಿಸಿದರೂ ಸಹ ವಿಮರ್ಶೆ ಮಾಡಿದಾಗ ಅದು ನ್ಯಾಯ ಪರವಾಗಿರುತ್ತಿತ್ತು.

ಈ ಕಾರಣದಿಂದಲೇ ಬಿಗ್ ಬಾಸ್ ಮನೆಯ ಮಂದಿಗೆ ಇಷ್ಟವಾಗದಿದ್ದರೂ ಹೊರಗಡೆ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಕೂಡ ನಾಮಿನೇಟ್ ಆಗುವುದರಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಸಾಂಬಾರ್ಗಿ ಅವರನ್ನು ಅವರ ಅಭಿಮಾನಿಗಳು ಮಾತ್ರ ವೋಟ್ ಮಾಡಿ ಉಳಿಸಿಕೊಳ್ಳುತ್ತಿದ್ದರು.

ಈ ಬಾರಿ 9ನೇ ಸೀಸನ್ ಕೂಡ ವಿಶೇಷತೆಯಿಂದ ಕೂಡಿದ್ದು ನವೀನರ ಜೊತೆ ಪ್ರವೀಣರನ್ನು ಮನೆ ಒಳಗಡೆ ಬಿಡಲಾಗಿತ್ತು. ಬಿಗ್ ಬಾಸ್ ಓಟಿಟಿ ಸೀಸನ್ ಅಲ್ಲಿ ಗೆದ್ದಿದ್ದ ನಾಲ್ಕು ಕಂಟೆಸ್ಟೆಂಟ್ಗಳ ಜೊತೆ, ಇದುವರೆಗಿನ ಹಳೆ ಸೀಸನ್ ಗಳಲ್ಲಿ ಜನಮನ್ನಣೆ ಗಳಿಸಿದ್ದ ಅನುಪಮ ಗೌಡ, ದೀಪಿಕಾ ದಾಸ್, ಅರುಣ್ ಸಾಗರ್, ದಿವ್ಯ ಉರುಡುಗ ಜೊತೆ ಸಂಬರ್ಗಿ ಅವರು ಸಹ ಬಿಗ್ ಮನೆ ಸೇರಿದ್ದರು.

ಕಳೆದ ಸೀಸನ್ ಅಷ್ಟೇ ಚಟುವಟಿಕೆಯಿಂದ ಹಾಗೂ ಆ ಅನುಭವದಿಂದ ಈ ಸೀಸನ್ ಅಲ್ಲೂ ಕೂಡ ಮನೆ ಪೂರ್ತಿ ಕಾಣಿಸಿಕೊಳ್ಳುತ್ತಿದ್ದ ಅವರು ಈ ಬಾರಿ ಕೂಡ ಹಲವು ಬಾರಿ ಮನೆಯಲ್ಲಿ ಚರ್ಚೆಯ ವಿಷಯ ಆಗಿದ್ದರು. ಎದುರಾಳಿಗಳ ಜೊತೆ ಮಾತಿನ ಚಕಮಕಿಯೊಂದಿಗೆ ಫೈಟಿಂಗೆ ಬೀಳುತ್ತಿದ್ದ ಇವರು ಅದನ್ನು ಹೊರತುಪಡಿಸಿ ದಿನದ ಸಾಮಾನ್ಯ ಸಮಯದಲ್ಲೂ ಕೆಲವೊಮ್ಮೆ ಸಣ್ಣಪುಟ್ಟ ವಿಚಾರಕ್ಕೆ ವಿವಾದ ಶುರು ಮಾಡಿ ಜಗಳ ಮಾಡಿ ವಿಷಯ ಮುಗಿಸುತ್ತಿದ್ದರು.

ಸಹ ಕಂಟೆಸ್ಟೆಂಟ್ಗಳ ಜೊತೆ ಈ ಬಾರಿ ಕೆಲವರೊಂದಿಗೆ ಹೊಂದಿಕೊಂಡು ಹಾಗೂ ಕೆಲವರಿಗೆ ಕಿರಿಕಿರಿ ಮಾಡಿ ನೋಡುಗರಿಗೆ ಮನೋರಂಜನೆ ನೀಡುತ್ತಿದ್ದರು. ಇದುವರೆಗೆ ಹಲವು ಬಾರಿ ಕಳಪೆ ಪಟ್ಟ ತೊಟ್ಟು ,ಅತ್ಯುತ್ತಮವನ್ನು ಸಹ ಪಡೆದು ಕಿಚ್ಚನ ಚಪ್ಪಾಳೆಗೂ ಕೂಡ ಭಾಜರಾಗಿದ್ದರು ಇವರು. ಪ್ರಶಾಂತ್ ಸಂಬರ್ಗಿಯವರನ್ನು ನೋಡಲೆಂದೇ ಹಲವು ಮಂದಿ ಬಿಗ್ ಬಾಸ್ ನೋಡುತ್ತಿದ್ದರು.

ಇದೀಗ ಪ್ರಶಾಂತ್ ಸಾಂಬರ್ಗಿ ಅವರು ಬಹಳ ಬೇಗ ಔಟ್ ಆಗಿದ್ದು ಆ ಅಭಿಮಾನಿಗಳಿಗೆಲ್ಲ ಇದು ಬೇಸರ ತರಿಸಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಬರ್ಗಿ ಅವರು ಔಟ್ ಆಗಿರುವ ವಿಷಯ ತಿಳಿದು ಅಭಿಮಾನಿಗಳು ಬೇಸರದಿಂದ ಕಮೆಂಟ್ ಕೂಡ ಮಾಡುತ್ತಿದ್ದಾರೆ. ಈ ವಾರದಲ್ಲಿ ಸಂಬರ್ಗಿ ಅವರು ಬಹಳ ಚೆನ್ನಾಗಿ ಕಾಣಿಸಿಕೊಂಡಿದ್ದರು.

ಅವರ ಬದಲಾಗಿ ಅಮೂಲ್ಯ ಗೌಡ ಅವರು ಹೊರ ಹೋಗಬೇಕಿತ್ತು ಅಥವಾ ಇತರ ಯಾರಾದರೂ ಹೊರಗೆ ಹೋಗಬೇಕಿತ್ತು. ಇನ್ನು ಸ್ವಲ್ಪ ದಿನ ಪ್ರಶಾಂತ್ ಅವರ ಆಟ ನೋಡಬೇಕಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ. ನಿಮ್ಮ ಪ್ರಕಾರ ಈ ವಾರ ಮನೆಯಿಂದ ಯಾರು ಹೊರ ಹೋಗಬೇಕಿತ್ತು ಕಾಮೆಂಟ್ ಮಾಡಿ

40 ವರ್ಷ ವಯಸ್ಸಾದರೂ ರಂಗೋಲಿ ಸೀರಿಯಲ್ ನಟಿ ಸಿರಿ ಯಾಕಿನ್ನು ಮದುವೆಯಾಗಿಲ್ಲ ಗೊತ್ತ.? ಸಿರಿ ಮದುವೆ ಮಾಡಿಕೊಳ್ಳುವ ಹುಡುಗನಿಗೆ ಏನೆಲ್ಲಾ ಕಂಡೀಶನ್ ಹಾಕಿದ್ದಾರೆ ಗೊತ್ತ

ನಟಿ ಸಿರಿ (Siri Actor)

ಕನ್ನಡದ ಕಿರುತೆರೆಯ ರಂಗೋಲಿ ಹಾಗೂ ಬದುಕು ಧಾರಾವಾಹಿಗಳು ಯಾರಿಗೆ ತಿಳಿದಿಲ್ಲ ಅದೊಂದು ಕಾಲದಲ್ಲಿ ಬಹಳ ಹೆಸರುವಾಸಿಯಾಗಿದ್ದ ಈ ಎರಡು ಧಾರವಾಹಿ ಮನೆ ಮಾತಾಗಿದ್ದಂತು ನಿಜ. ಈ ಎರಡು ದಾರವಾಹಿಯ ನಾಯಕನಾಗಿ ಅಭಿನಯಿಸಿದ ಸಿರಿಯವರು ಅಂದು ಜನರ ಮನೆಮಗಳಾಗಿದ್ದರು. ಸಿರಿಯವರು ಈಗಲೂ ಕೂಡ ಕಿರುತೆರೆ ಹಾಗೂ ಚಿತ್ರರಂಗಗಳಲ್ಲಿ ನಟಿಸುತ್ತಿರುವುದು ನಿಜ ಅವರು ಈಗಲೂ ಕೂಡ ಯುವತಿಯಂತೆ ಕಾಣುತ್ತಿದ್ದಾರೆ.

ಬಣ್ಣದ ಬದುಕಿನಲ್ಲಿ ಕೆಲಸ ಮಾಡುತ್ತಿರುವ ಸಿರಿಯವರು ಇನ್ನೂ ಮದುವೆ ಆಗದೆ ಉಳಿದಿರುವ ಕಾರಣವೇನು? ಎನ್ನುವ ಪ್ರಶ್ನೆ ಎಷ್ಟೋ ಜನರನ್ನು ಕಾಡುತ್ತಿದೆ ಅಲ್ಲದೆ ಇಂದು ನಮ್ಮ ಪುಟದಲ್ಲಿ ಈ ಪ್ರಶ್ನೆಗೆ ಸಂಪೂರ್ಣವಾಗಿ ಉತ್ತರವನ್ನು ನೀಡಲಿದ್ದೇವೆ. ಈ ಮೇಲಿನ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವ ಕುತೂಹಲವು ನಿಮಗಿದ್ದರೆ ಈ ಪುಟವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.

ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಹೆಚ್ಚು ಜನಪ್ರಿಯವಾಗಿ ಕಾಣಿಸಿಕೊಂಡಂತ ನಟಿ ಎಂದರೆ ನಟಿ ಸಿರಿವವರು. ರಂಗೋಲಿ ಆಧಾರವಾಗಿ ಪ್ರಪ್ರಥಮವಾಗಿ ನಟಿಸಿದ ಸಿರಿಯವರು ಮೊದಲನೇ ಧಾರವಾಹಿಯಲ್ಲಿ ಹೆಚ್ಚು ಜನಪ್ರಿಯಗೊಂಡರು. ಪಿಯುಸಿಯನ್ನು ಓದುವಾಗಲೇ ಸಿರಿಯವರು ರಂಗೋಲಿ ಧಾರವಾಹಿಯಲ್ಲಿ ಒಳ್ಳೆಯ ಪಾತ್ರವನ್ನು ಗಿಟ್ಟಿಸಿಕೊಂಡಿರುವುದು ಸಿರಿಯವರ ಅದೃಷ್ಟವೇ ಸರಿ.

ತನ್ನ ಚಿಕ್ಕ ವಯಸ್ಸಿಗೆ ಒಳ್ಳೆ ಪಾತ್ರವನ್ನು ಪಡೆದುಕೊಂಡಿದ್ದ ಸಿರಿಯವರು ಕೆಲವು ದಿನಗಳ ನಂತರ ತೆಲುಗು ಕಿರುತೆರೆಯಲು ಕೂಡ ನಟಿಸಲು ಅವಕಾಶವನ್ನು ಪಡೆದುಕೊಂಡಿದ್ದರು ಹಾಗೆ ತೆಲುಗು ಧಾರಾವಾಹಿಗಳ ಮೂಲಕ ಇನ್ನು ಹೆಚ್ಚು ಜನಪ್ರಿಯರಾದರು ನಂತರ ತಮಿಳು ಧಾರಾವಾಹಿಗಳನ್ನು ನಟಿಸಿ ಆಗಿನ ಕಾಲದ ಟಾಪ್ ಕಿರುತರೆಯ ನಟಿಯರಲ್ಲಿ ಒಂದಾಗಿದ್ದರು.

ಸಿರಿ ಅವರು ಈಗಲೂ ಸಹ ಒಂದೆಲ್ಲಾ ಒಂದು ಧಾರಾವಾಹಿಗಳಲ್ಲಿ ನಟಿಸುತ್ತಾ ಇರುವುದು ನಿಜ. ಸದ್ಯ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ಸಿರಿಯವರು ಅದ್ಭುತವಾಗಿ ನಟಿಸುತ್ತಿದ್ದಾರೆ. ಈ ಮೂಲಕ ತನ್ನ ಪ್ರೇಕ್ಷಕರನ್ನು ಮತ್ತೆ ಮನೋರಂಜನಿಸುತ್ತಿದ್ದಾರೆ ಎಂದರೆ ಸುಳ್ಳಲ್ಲ. ಇದರ ಜೊತೆ ಪ್ರೇಕ್ಷಕರು ಕೂಡ ಸಿರಿಯವರ ಅಭಿನಯವನ್ನು ಪ್ರೀತಿಸುತ್ತಾರೆ.

ಇನ್ನು ಸಿರಿಯವರು ಗರಿಷ್ಠ ಮುಕ್ತ ಹಾಗೂ ಸೌಮ್ಯ ಪಾತ್ರಗಳನ್ನು ಮಾಡುತ್ತಿದ್ದರು ಆದರೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ
ಮದುಮಗಳು ಧಾರವಾಹಿಯಲ್ಲಿ ಅತ್ತೆಯ ಪಾತ್ರವನ್ನು ಮಾಡಿ ನೆಗೆಟಿವ್ ಆಗಿ ಕಾಣಿಸಿಕೊಂಡಿದ್ದಾರೆ ಈ ಮೂಲಕ ಕೊಂಚ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ ನಟ ಸಿರಿ.

ಇನ್ನು 40 ವರ್ಷಗಳಾದರೂ ಕೂಡ ಸೀರಿಯವರು ತಮ್ಮ ಲೈಫ್ ಪಾರ್ಟ್ನನ್ನು ಹುಡುಕಿಕೊಳ್ಳದೆ ಇರುವುದು ವಿಶೇಷ. ಇವರ ವೈವಾಹಿಕ ಜೀವನದ ಬಗ್ಗೆ ಹಲವು ಅಭಿಮಾನಿಗಳು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ಇಲ್ಲಿಯವರೆಗೂ ಸಿಂಗಲ್ಲಾಗಿ ಇದ್ದ ಸಿರಿಯವರು ಮನೆಯವರ ಒತ್ತಾಯದ ಮೇರೆಗೆ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಹೌದು ಸ್ನೇಹಿತರೆ, ಸಿರಿಯವರು ಮದುವೆಗೆ ಒಪ್ಪಿದ್ದರು ಕೆಲವು ಕಂಡೀಶನ್ಗಳನ್ನು ಕೂಡ ಇಟ್ಟಿದ್ದಾರೆ. ಅವರ ವೃತ್ತಿಯನ್ನು ಒಪ್ಪಿಕೊಳ್ಳುವ ಹಾಗೂ ತಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿ ನಿಂತಿ ಪ್ರೋತ್ಸಾಹ ನೀಡುವ ಒಳ್ಳೆಯ ಗುಣ ಉಳ್ಳ ಸಂಗಾತಿ ಸಿಕ್ಕರೆ ಮಾತ್ರ ಸಿರಿಯವರು ಮದುವೆಯಾಗುತ್ತಾರಂತೆ ಹಾಗಾಗಿ ಈಗಾಗಲೇ ವರನಿಗಾಗಿ ಹುಡುಕಾಟವು ಶುರುವಾಗಿದೆ.

ಸದ್ಯ ಸ್ವಲ್ಪ ದಿನಗಳಲ್ಲಿ ಇನ್ನೊಂದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುವುದು ನಿಜ. ಇನ್ನು ಸಿರಿಯವರಿಗೇ ಒಳ್ಳೆಯ ವರ ಸಿಕ್ಕಿ ತಮ್ಮ ದಾಂಪತ್ಯ ಜೀವನವನ್ನು ಬೇಗ ಶುರು ಮಾಡಲಿ ಎಂದು ಹರಿಸೋಣ. ಸಾಮಾನ್ಯವಾಗಿ ನಟಿಯರು ಮದುವೆಯಾಗುವುದಕ್ಕೆ ಹುಡುಗರಿಗೆ ಸಾಕಷ್ಟು ಕಂಡೀಶನ್ ಹಾಕುತ್ತಾರೆ. ಅದರಲ್ಲಿ ಹಣ ಆಸ್ತಿ ಸಿರಿ ಸಂಪತ್ತಿನ ಬಗ್ಗೆ ಇರುತ್ತದೆ. ಆದರೆ ನಟಿ ಸಿರಿಯವರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನನ್ನನ್ನು ಅರ್ಥಮಾಡಿಕೊಂಡು ಹೋದರೆ ಸಾಕು ಎಂದು ಹೇಳಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

ಸ್ಟಾರ್ ನಟಿ ಆಗಿದ್ರೂ ಕೂಡ ನಟಿ ಅದಿತಿ ಪ್ರಭುದೇವ ಸಾಮಾನ್ಯ ರೈತನನ್ನು ಮದುವೆಯಾಗಿದ್ದೇಕೆ ಗೊತ್ತಾ ನಿಜಕ್ಕೂ ಆಶ್ಚರ್ಯ ಅನ್ನಿಸುತ್ತದೆ ಇವರ ಬಾಳ ಸಂಗಾತಿಯ ಆಯ್ಕೆ.

ಅದಿತಿ ಯಶಶ್

ಸ್ಟಾರ್ ಡಮ್ ಇರುವಾಗಲೇ ಮದುವೆ ಮಾಡಿಕೊಂಡ ನಟಿ ಅಧಿತಿ ಪ್ರಭುದೇವ ಈ ಬಗ್ಗೆ ಹೇಳಿದ್ದೇನು ಗೊತ್ತಾ.

ನೋಡಲು ಅಪ್ರತಿಮ ಸುಂದರಿ, ಬ್ಯೂಟಿಗೆ ತಕ್ಕ ಹಾಗೆ ಟ್ಯಾಲೆಂಟ್ ಹಾಗೂ ಆ ಟ್ಯಾಲೆಂಟಿಗೆ ಸಿಕ್ಕ ತಕ್ಕನಾದ ಅವಕಾಶಗಳು ಈಕೆಯನ್ನು ಅದೃಷ್ಟದ ನಟಿ ಎಂದು ಕರೆಯುವಂತೆ ಮಾಡಿದೆ. ಅತಿ ಕಡಿಮೆ ಸಮಯದಲಿ ಮಾಡಿದ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿ ಸದ್ಯಕ್ಕೆ ಕನ್ನಡದಲ್ಲಿ ತನ್ನದೇ ಆದ ಒಂದು ಫ್ಯಾನ್ ಬೇಸ್ ಕ್ರಿಯೆಟ್ ಮಾಡಿಕೊಂಡಿರುವ ಅಧಿತಿ ಪ್ರಭುದೇವ ಅವರು ಶಾನೆ ಟಾಪ್ ಆಗಿರುವ ನಟಿ.

ಅಧಿತಿ ಪ್ರಭುದೇವ ಎಂದರೆ ಕನ್ನಡ ಪ್ರೇಕ್ಷಕರು ಹಾಗೂ ಅಭಿಮಾನಿಗಳಿಗೆ ಬಹಳ ಇಷ್ಟ ಯಾಕೆಂದರೆ ತಾವು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಕೂಡ ತನ್ನ ಸ್ವಂತಿಕೆಯನ್ನು ಬಿಡದ ಈಕೆ ಈಗಲೂ ಸಹ ಸಾದಾ ಜೀವನ ನಡೆಸುತ್ತಾರೆ, ಇವರ ಈ ಸರಳತೆ ಎಲ್ಲರ ಇಷ್ಟಕ್ಕೂ ಕಾರಣ. ವೃತ್ತಿ ರಂಗದಲ್ಲೂ ಕೂಡ ಟಾಪ್ ಆಗಿರುವ ನಟಿ ಇದೇ ಸಮಯದಲ್ಲಿ ದಾಂಪತ್ಯ ಜೀವನಕ್ಕೂ ಕೂಡ ಕಾಲಿಟ್ಟಿದ್ದಾರೆ.

ಈ ಬಗ್ಗೆ ಮದುವೆಯಾಗಿ ನೀಡಿರುವ ಮೊದಲ ಸಂದರ್ಶನದಲ್ಲಿಯೇ ಅದರ ಬಗ್ಗೆ ಮಾತನಾಡಿದ್ದು ಇಷ್ಟು ಬೇಗ ಮದುವೆಯಾಗಿದ್ದು ಯಾಕೆ ಎನ್ನುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ ಅವರ ಮಾತುಗಳು ಹೀಗಿದ್ದವು. ನನಗೆ ಟೀನೇಜ್ ಅಲ್ಲಿ ಮದುವೆ ಬಗ್ಗೆ ಕನಸಿತ್ತು ಬೆಳೆಯುತ್ತಾ ಬಂದಂತೆ ಜೀವನದಲ್ಲಿ ಮುಂದೆ ಒಂದಿನ ಆಗಲೇಬೇಕು ಆದರೆ ಆಯಿತು ಎಂದುಕೊಂಡಿದ್ದೆ.

ಆಮೇಲೆ ನಟಿ ಆಗಿ ಹೆಸರು ಬಂದ ಮೇಲೆ ಈಗ ನನಗೆ ಮದುವೆ ಅವಶ್ಯಕತೆ ಇದೆಯಾ ಎನ್ನುವ ಅನುಮಾನ ಇತ್ತು ಸಾಕಷ್ಟು ಗೊಂದಲದ ನಡುವೆ ಮನೆಯವರಿಗೆ ಕೊಟ್ಟಿದ್ದ ಮಾತಿನ ಪ್ರಕಾರ ಮದುವೆಯಾಗಲೇ ಬೇಕಾಯಿತು. ಹಾಗಾಗಿ ಒಪ್ಪಿಕೊಂಡೆ ಆದರೆ ತಕ್ಷಣವೇ ಇಷ್ಟೆಲ್ಲ ಬೇಗ ಅರೆಂಜ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ಅದೃಷ್ಟಕ್ಕೆ ನನಗೆ ಸಿಕ್ಕಿರುವ ಪಾರ್ಟ್ನರ್ ನನಗಾಗಿ ಹುಟ್ಟಿದ್ದರೇನು ಎನಿಸುತ್ತದೆ.

ಹೀಗಾಗಿ ನಮ್ಮ ಜೊತೆ ಜೀವನ ಪೂರ್ತಿ ಇರುವವರು ಸರಿಯಾದ ಜೋಡಿ ಸಿಕ್ಕಾಗ ಈಗ ಯಾವುದೋ ಕಾರಣಕ್ಕೆ ಅದನ್ನು ಕಳೆದುಕೊಂಡು ಮುಂದೆ ಒಂದು ದಿನ ಪಶ್ಚಾತ್ತಾಪ ಪಡುವಂತಾಗಬಾರದು ಎನ್ನುವ ಕಾರಣಕ್ಕೆ ಒಪ್ಪಿಕೊಂಡಿದ್ದೇನೆ. ಅದು ಮಾತ್ರ ಅಲ್ಲದೆ ಇಲ್ಲಿ ಯಾವುದು ಶಾಶ್ವತ ಅಲ್ಲ. ನಟಿಯರಾದ ಸುಧಾರಾಣಿ ಶ್ರುತಿ ಮಾಲಾಶ್ರಿ ಅಂತವರ ಹೆಸರನ್ನು ಕೇಳಿದಾಗ ನಾವು ವಾವ್ ಎನ್ನುತ್ತೇವೆ ಅವರ ಮುಂದೆ ನಾವೆಲ್ಲಾ ಏನೂ ಅಲ್ಲ.

ಇದೆಲ್ಲ ಶಾಶ್ವತ ಅಲ್ಲ ಇಂದು ನನಗೆ ಚೆನ್ನಾಗಿ ಅರಿವಿದೆ ಜೀವನ ಸರ್ಕಲ್ ತರ ಎಷ್ಟೇ ಪೀಕ್ ಅಲ್ಲಿ ಇದ್ದರೂ ಮತ್ತೆ ಎಲ್ಲಿಂದ ಬಂದೆವು ಅಲ್ಲಿಗೆ ಹೋಗಲೇಬೇಕು. ಇನ್ನೂ ಹೇಳಬೇಕು ಎಂದರೆ ಈಗ ದುಡಿಯುತ್ತಿರುವುದು ಐಡೆಂಟಿಟಿ ಕ್ರಿಯೇಟ್ ಮಾಡಲು ಹಾಗೂ ವೈಯಕ್ತಿಕ ಜೀವನಕ್ಕೆ ಸಹಾಯವಾಗಲಿ ಎಂದು ಮದುವೆಯಾಗುವದರಿಂದ ಸರಿಯಾದ ಕುಟುಂಬ ಸೇರುವುದರಿಂದ ಯಾವುದಕ್ಕೂ ತೊಂದರೆ ಇಲ್ಲ ಎನ್ನುವುದಾದರೆ ಯಾಕೆ ಕಳೆದುಕೊಳ್ಳಬೇಕು ಎನ್ನುವ ಯೋಚನೆಯಿಂದ ಒಪ್ಪಿಕೊಂಡೆ ಇಂತಹ ಕುಟುಂಬ ಹಾಗೂ ಹುಡುಗ ಸಿಗುವುದಕ್ಕೆ ನಾನು ಬಹಳ ಪುಣ್ಯ ಮಾಡಿದ್ದೆ.

ಆದರೆ ಹಲವು ವರ್ಷದ ತನಕ ಏಕೆ ಓಡಾಡುವುದು ಅಲ್ಲಿ ಎಲ್ಲಿ ಕಾಣಿಸಿಕೊಳ್ಳುವುದು ಆಗಾಗ ಸುದ್ದಿ ಆಗುವುದು ಅಥವಾ ಗಾಸಿಪ್ ಆಗುವುದು ನನಗೆ ಇಷ್ಟ ಇರಲಿಲ್ಲ. ಎರಡು ಕುಟುಂಬದವರು ಒಪ್ಪಿಕೊಂಡಿದ್ದರು ಹಾಗೂ ನಮ್ಮಿಬ್ಬರಿಗೂ ಇಷ್ಟವಾಗಿತ್ತು ಇದೇ ಕಾರಣಕ್ಕಾಗಿ ಬೇಗ ಮದುವೆಯನ್ನು ಮಾಡಿಕೊಂಡೆವು ಎಂದ ಹೇಳಿಕೊಂಡಿದ್ದಾರೆ.

ಅದೃಷ್ಟ ದೇವತೆ ಮನೆಗೆ ಬಂದಾಗ ಬಟ್ಟೆ ಬಿಚ್ಚಿ ಬೆಡ್ರೂಮ್ ನಲ್ಲಿ ಕೂರಿಸಬೇಕು – ವಿವಾದಕ್ಕೀಡಾಯ್ತು ಸಂದರ್ಶನದಲ್ಲಿ ದರ್ಶನ್ ಹೇಳಿದ ಮಾತು, ಡಿ ಬಾಸ್ ಮಾತು ಕೇಳಿ ಅಭಿಮಾನಿಗಳು ಬೇಸರ

ದರ್ಶನ್ ವಿವಾದಾತ್ಮಕ ಹೇಳಿಕೆ

ನಟ ದರ್ಶನ್ ಅವರು ಇತ್ತೀಚಿಗಷ್ಟೇ ನಡೆದ ಸಂದರ್ಶನ ಒಂದರಲ್ಲಿ ಹೇಳಿದ ಮಾತು ಇದೀಗ ಸಿಕ್ಕಾಪಟ್ಟೆ ವೈರಲಾಗಿದೆ ಈ ಮಾತುಗಳನ್ನು ಕೇಳಿ ಸ್ವತಹ ದರ್ಶನ್ ಅಭಿಮಾನಿಗಳೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅಷ್ಟಕ್ಕೂ ಡಿ ಬಾಸ್ ಹೇಳಿದ್ದು ಏನು ಎಂಬುದನ್ನು ನೋಡುವುದಾದರೆ.

“ಅದೃಷ್ಟ ದೇವತೆ ಯಾವಾಗಲೋ ಒಮ್ಮೆ ಬಂದು ಬಾಗಿಲು ಬಡಿಯುತ್ತಾಳೆ, ಅವಳು ಬಾಗಿಲನ್ನು ಬಡಿಯುತ್ತಿದ್ದ ವೇಳೆ ಮನೆ ಒಳಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿ ಬೆಡ್ರೂಮ್ ನಲ್ಲಿ ಆಕೆಯನ್ನು ಕೂರಿಸಿಕೊಳ್ಳಬೇಕು, ಬಟ್ಟೆ ಕೊಟ್ಟರೆ ತಾನೇ ಅವಳು ಇನ್ನೊಬ್ಬರ ಮನೆಗೆ ಹೋಗುವುದಕ್ಕೆ ಸಾಧ್ಯ ಎನ್ನುವ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ”.

ಸಂದರ್ಶನ ಒಂದರಲ್ಲಿ ನಟ ದರ್ಶನ್ ಅವರು ಮಾತನಾಡಿದಂತಹ ಪರಿ ಇದು ಈ ವಿಚಾರ ಇದೀಗ ಹಿಗ್ಗಾಮುಗ್ಗ ಟ್ರೋಲ್ ಗೆ ಒಳಗಾಗಿದೆ ಜನರು ಕೂಡ ಇವರ ಮಾತಿಗೆ ತೀ.ವ್ರವಾದಂತಹ ಆಕ್ಷೇಪವನ್ನು ಹೊರ ಹಾಕುತ್ತಿದ್ದಾರೆ ಜನರ ಮಾತು ಏನಪ್ಪ ಎಂದರೆ. ಅದೃಷ್ಟ ದೇವತೆಯನ್ನು ನಾವು ಲಕ್ಷ್ಮಿ ಎಂದು ಕರೆಯುತ್ತೇವೆ ಅವಳನ್ನು ನಾವು ಪೂಜಿಸುತ್ತೇವೆ ಆರಾಧಿಸುತ್ತೇವೆ ನಮ್ಮ ಸಂಪ್ರದಾಯದ ಪ್ರಕಾರ ಲಕ್ಷ್ಮಿ ಎಂದ ತಕ್ಷಣ ಆಕೆಗೆ ಬೇರೆಯಾದಂತಹ ಸ್ಥಾನಮಾನ ಇದೆ.

ಆದರೆ ಅದೇ ಲಕ್ಷ್ಮಿಯನ್ನು ಬಟ್ಟೆ ಬಿಚ್ಚುತ್ತೇನೆ ಬೆಡ್ರೂಮ್ ನಲ್ಲಿ ಕೂರಿಸುತ್ತೇನೆ ಅಂತ ಹೇಳಿಕೆಯನ್ನು ಕೊಡುವುದು ಎಷ್ಟರ ಮಟ್ಟಿಗೆ ಸರಿ ಅದು ಕೂಡ ಓರ್ವ ಸ್ಟಾರ್ ನಟ ಈ ರೀತಿ ಹೇಳುವುದು ತಪ್ಪು ಎಂದು ಜನ ತೀವ್ರವಾದಂತಹ ಆ.ಕ್ರೋ.ಶ.ವನ್ನು ಹೊರ ಹಾಕುತ್ತಿದ್ದಾರೆ. ಆದರೆ ಪ್ರತಿಯೊಬ್ಬರೂ ಕೂಡ ದರ್ಶನ್ ಅವರು ಯಾವ ಕಾರಣಕ್ಕಾಗಿ ಈ ರೀತಿಯಾದಂತಹ ಮಾತನ್ನು ಹೇಳಿದರು ಎಂದು ನೋಡುವುದಾದರೆ.

ಸಂದರ್ಶನ ಒಂದರಲ್ಲಿ ಸಂದರ್ಶಕರಿಂದ ಯಾವುದೋ ಒಂದು ಪ್ರಶ್ನೆ ಬರುತ್ತದೆ ಹಾಗೆ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾರೆ. ಆಗ ದರ್ಶನ್ ಅವರು ನಮ್ಮ ತಂದೆ ಒಂದು ಮಾತನ್ನು ಹೇಳುತ್ತಾ ಇದ್ದರು ಎಂದು ಹೇಳಿ ಈ ಸ್ಟೇಟ್ಮೆಂಟ್ ಕೊಟ್ಟು ಅದಕ್ಕೂ ಕೂಡ ಒಂದು ಸಮರ್ಥನೆಯನ್ನು ಕೊಡುತ್ತಾ ಹೋಗುತ್ತಾರೆ.

ಪ್ರೊಡ್ಯೂಸರ್ಸ್ ಮನೆಗೆ ಬಂದಂತಹ ಸಂದರ್ಭದಲ್ಲಿ ಅವರಿಗೆ ಅಡ್ವಾನ್ಸ್ ಹಣವನ್ನು ಕೊಟ್ಟು ತಕ್ಷಣ ಅವರನ್ನು ಬುಕ್ ಮಾಡಿ ಕೊಳ್ಳಬೇಕು ಅಡ್ವಾನ್ಸ್ ಕೊಟ್ಟಾಗ ಅವರು ಬೇರೆ ಕಡೆ ಹೋಗುವುದಿಲ್ಲ. ನೀವು ಅಡ್ವಾನ್ಸ್ ಕೊಟ್ಟಿಲ್ಲ ಅವರನ್ನು ಬುಕ್ ಮಾಡಿಕೊಂಡಿಲ್ಲ ಎಂದಾಗ ಅವರು ಬೇರೆ ಕಡೆ ಹೋಗಿ ಬಿಡುತ್ತಾರೆ ಎನ್ನುವಂತಹ ಸಮರ್ಥನೆಯನ್ನು ಕೊಡುತ್ತಾರೆ.

ಈ ವಿಚಾರದಲ್ಲಿ ಅವರು ಅದಕ್ಕೆ ಅದೃಷ್ಟ ದೇವತೆಯನ್ನು ಹೋಲಿಕೆಯನ್ನು ಮಾಡುತ್ತಾರೆ ಅವರು ಪ್ರೊಡ್ಯೂಸರ್ಸ್ ಬಗ್ಗೆ ಹೇಳಿದ ಮಾತಿನಲ್ಲಿ ಯಾವುದೇ ರೀತಿಯಲ್ಲೂ ತಪ್ಪು ಇಲ್ಲ ಪ್ರೊಡ್ಯೂಸರ್ ಬಂದಾಗ ಅಡ್ವಾನ್ಸ್ ಹಣವನ್ನು ಕೊಡಬೇಕು ಎನ್ನುವುದು ಎಲ್ಲಾ ಸರಿ. ಆದರೆ ಅದೃಷ್ಟ ದೇವತೆಯ ಬಟ್ಟೆ ಬಿಚ್ಚುತ್ತೀನಿ ಬೆಡ್ ರೂಮ್ ನಲ್ಲಿ ಕೂರಿಸುತ್ತೇನೆ ಆಕೆಗೆ ನಾನು ಬಟ್ಟೆ ಕೊಡುವುದಿಲ್ಲ ಇಂತಹ ಪದ ಬಳಕೆ ಬಗ್ಗೆ ಜನ ದರ್ಶನ್ ಅವರ ಬಗ್ಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ಒಬ್ಬ ನಟ ಒಳ್ಳೆಯ ಕೆಲಸವನ್ನು ಮಾಡಿದಾಗ ಅವರನ್ನು ಹೊಗಳಬೇಕು ಜೊತೆಗೆ ಕೆಟ್ಟ ಕೆಲಸವನ್ನು ಮಾಡಿದಾಗ ಅವರನ್ನು ದೂಷಿಸಲುಬೇಕು ಆಗ ಮಾತ್ರ ಯಾವುದೇ ಒಬ್ಬ ವ್ಯಕ್ತಿ ತಪ್ಪು ಮಾಡಿದಂತಹ ವಿಷಯದ ಬಗ್ಗೆ ಅರಿವಾಗುತ್ತದೆ. ಬದಲಾಗಿ ಅವರು ಮಾಡಿದಂತಹ ಕೆಲಸ ಅವರು ಮಾತನಾಡಿದಂತಹ ರೀತಿ ಎಲ್ಲವನ್ನು ಸರಿ ಎಂದು ಹೇಳಿದರೆ ಅವರು ಯಾವುದೇ ಕಾರಣಕ್ಕೂ ಬುದ್ಧಿ ಕಲಿಯುವುದಿಲ್ಲ ಬದಲಾಗಿ ಯಾವ ಒಂದು ವಿಚಾರಕ್ಕೆ ಯಾವ ರೀತಿಯಾದಂತಹ ಪದ ಬಳಕೆ ಮಾಡುತ್ತೇವೆ ಯಾವ ರೀತಿ ಸ್ಪಷ್ಟೀಕರಿಸುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ. ತದನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.