Home Blog Page 266

ಬಾಲಿವುಡ್ ಸಿನಿಮಾ ಗೆಲ್ಲಿಸುವುದಕ್ಕಾಗಿ ಸಖತ್ ಬೋಲ್ಡ್ ಆಗಿ ಶರೂಖ್ ಖಾನ್ ಜೊತೆ ಕಾಣಿಸಿಕೊಂಡ ದೀಪಿಕಾ ಪಡುಕೋಣೆ, ಫೋಟೋ ನೋಡಿ ಗರಂ ಆದ ನೆಟ್ಟಿಗರು.

ಮದುವೆ ಆದ ಬಳಿಕ ಮೊದಲ ಬಾರಿಗೆ ಗ್ಲಾಮರ್ ಅವತಾರದಲ್ಲಿ ದೀಪಿಕಾ ಪಡುಕೋಣೆ

ಒಂದು ಕಾಲದಲ್ಲಿ ಭಾರತದ ಸಿನಿಮಾ ಇಂಡಸ್ಟ್ರಿ ಎಂದರೆ ಬರೀ ಬಾಲಿವುಡ್ ಎಂದೇ ಬಿಂಬಿಸಿಕೊಳ್ಳಲಾಗುತ್ತಿತ್ತು. ಆದರೆ ಇಂದು ಕಾಲಚಕ್ರ ಬದಲಾಗಿ ಬಾಲಿವುಡ್ ಸಿನಿಮಾಗಳಿಗಿಂತಲೂ ಸೌತ್ ಇಂಡಿಯಾ ಸಿನಿಮಾಗಳು ಇಡೀ ಭಾರತದಲ್ಲಿ ರಾರಾಜಿಸುತ್ತಿವೆ. ಅಲ್ಲದೆ ಭಾರತದ ಖ್ಯಾತಿಯನ್ನು ಪರದೇಶಗಳಿಗೂ ಹಂಚುವ ಕೆಲಸವನ್ನು ದಕ್ಷಿಣ ಕನ್ನಡದ ಸಿನಿಮಾಗಳು ಮಾಡುತ್ತಿವೆ.

ಅದರಲ್ಲೂ ವಿಶೇಷವಾಗಿ ಈ ವರ್ಷ ಬಾಲಿವುಡ್ ಸಂಪೂರ್ಣವಾಗಿ ಮಕಾಡೆ ಮಲಗಿದೆ ಎಂದು ಹೇಳಬಹುದು. ಹಲವು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತು ಸಪ್ಪೆ ಆಗಿರುವ ಬಾಲಿವುಡ್ ಈ ವರ್ಷ ಇನ್ನು ಕುಸಿದಿದೆ. ಈಗ ಅಲ್ಲೂ ಕೂಡ ನಮ್ಮ ಸೌತ್ ಇಂಡಿಯಾದ ಪ್ಯಾನ್ ಇಂಡಿಯಾ ಸಿನಿಮಾಗಳು ಮಾತ್ರ ಗೆಲ್ಲುತ್ತಿವೆ. ಜನ ನಮ್ಮ ಕಥೆಗಳನ್ನು ನೋಡಿ ಮೆಚ್ಚಿ ಸಿನಿಮಾ ಎಂದರೆ ಈ ರೀತಿ ಇರಬೇಕೆಂದು ಕೊಂಡಾಡುತ್ತಿದ್ದಾರೆ.

ಇದಕ್ಕೆಲ್ಲಾ ಕಾರಣ ನಮ್ಮ ದಕ್ಷಿಣ ಕನ್ನಡದ ಸಿನಿಮಾಗಳ ಕಥೆಗಳು. ಬಾಲಿವುಡ್ ಸಿನಿಮಾಗಳಲ್ಲಿ ಒಂದೇ ರೀತಿಯ ಕಥೆಯಿಂದ ಬೇಸತ್ತು ಹೋಗಿರುವ ಜನಕ್ಕೆ ಇಲ್ಲಿನ ವಿಭಿನ್ನ ಪ್ರಯೋಗಗಳು ಹಾಗೂ ಸಿನಿಮಾದಿಂದ ಸಿನಿಮಾ ಗೆ ಆಗುತ್ತಿರುವ ಹೊಸ ರೀತಿ ಎಕ್ಸ್ಪರಿಮೆಂಟ್ ಗಳು ರುಚಿಸಿವೆ.

ಅಲ್ಲದೆ ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್ ಗಳಲ್ಲಿ ಬಹುತೇಕ ಎಲ್ಲಾ ಸ್ಟಾರ್ಗಳ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಗಳು ಆಗಿರುವುದರಿಂದ ಹಿಂದಿ ಭಾಷೆಯ ಪ್ರೇಕ್ಷಕರು ತಮ್ಮ ಭಾಷೆಯಲ್ಲಿಯೇ ಈ ಕಥೆಗಳನ್ನು ನೋಡುತ್ತಿದ್ದು ಇಲ್ಲಿನ ಸಿನಿಮಾವನ್ನೇ ಗೆಲ್ಲಿಸುತ್ತಿದ್ದಾರೆ.

ಹೀಗಾಗಿ ಸಹಜವಾಗಿ ಬಾಲಿವುಡ್ ಗೆ ಈಗ ದೊಡ್ಡ ಅಗ್ನಿಪರೀಕ್ಷೆ ಎಂದು ಎದುರಾಗಿದೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜನರಿಗೆ ಮೆಚ್ಚುಗೆ ಆಗಿ ಇಷ್ಟಪಡುವ ಕಂಟೆಂಟ್ ಗಳನ್ನು ಕೊಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಖಾನ್ ಗಳ ಸಿನಿಮಾಗಳೂ ಕೂಡ ಈಗ ಅಲ್ಲಿ ವರ್ಕ್ ಆಗುತ್ತಿಲ್ಲ. ಅಲ್ಲದೆ ಕೆಲವರು ತೀರ ಕಡಿಮೆ ಸಿನಿಮಾಗಳನ್ನು ಮಾಡುತ್ತಿದ್ದಾರೆ ಅದರಲ್ಲಿ ಶಾರುಖ್ ಖಾನ್ ಅವರಂತೂ ತಮ್ಮ ಜೀರೋ ಸಿನಿಮಾ ಆದಮೇಲೆ ದೊಡ್ಡ ಬ್ರೇಕ್ ಪಡೆದುಕೊಂಡಿದ್ದಾರೆ.

ಇದೀಗ ಅವರ ಪಟಾಣ್ ಎನ್ನುವ ಚಿತ್ರದ ಬಗ್ಗೆ ಗಾಸಿಪ್ ಇದ್ದು ಚಿತ್ರತಂಡ ಮಾತ್ರ ಇದುವರೆಗೆ ಸಣ್ಣ ಸುಳಿವು ಕೂಡ ಬಿಟ್ಟುಕೊಡದೆ ಎಲ್ಲಿಯೂ ಸಹ ಪ್ರಚಾರ ಮಾಡದೆ ಚಿತ್ರಿಕರಣ ಮಾಡುತ್ತಿದೆ. ಶಾರುಖ್ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಕೊಡಲು ಸಿದ್ಧತೆ ನಡೆದಿದ್ದು ಇದರ ಫಸ್ಟ್ ಲುಕ್ ಹಾಗೂ ಒಂದು ಸಾಂಗ್ ಬಿಡುಗಡೆ ಆಗಿದೆ. ಸ್ವತಃ ಶಾರುಖ್ ಖಾನ್ ಅವರೇ ಟ್ವೀಟ್ ಮಾಡಿ ತಮ್ಮ ಪಟಾಣ್ ಸಿನಿಮಾದ ಮೊದಲ ಹಾಡನ್ನು ನೋಡಲು ತಾವು ಸಹ ಕಾತುರದಿಂದ ಇರುವುದಾಗಿ ಬರೆದುಕೊಂಡಿದ್ದಾರೆ.

ಇಷ್ಟಾಗುತ್ತಿದ್ದಂತೆ ರಿಲೀಸ್ ಆದ ಕ್ಷಣದಲ್ಲೇ ದಾಖಲೆಗಟ್ಟಲೆ ವೀವ್ಸ್ ಕೂಡ ಈ ಹಾಡು ಪಡೆದಿದ್ದು ಹಾಡಿನಲ್ಲಿ ಶಾರುಖ್ ಅವರ ಹೊಸ ಗೆಟಪ್ ನೋಡಿ ಜನ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಪಟಾಣ್ ಚಿತ್ರಕ್ಕೆ ದೀಪಿಕಾ ಪಡುಕೋಣೆ ಅವರು ನಾಯಕಿ ಆಗಿದ್ದಾರೆ, ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಕೆಮಿಸ್ಟ್ರಿ ಈಗಾಗಲೇ ಓಂ ಶಕ್ತಿ ಓಂ ಮತ್ತು ಚೆನ್ನೈ ಎಕ್ಸ್ಪ್ರೆಸ್ ಸಿನಿಮಾಗಳಲ್ಲಿ ವರ್ಕ್ ಆಗಿದೆ.

ಈಗ ರಿಲೀಸ್ ಆಗಿರುವ ಪಟಾಣ್ ಸಿನಿಮಾದ ಹಾಡಿನಲ್ಲಿ ಕೂಡ ದೀಪಿಕಾ ಪಡುಕೋಣೆ ಮೊದಲಿನಂತೇ ಸಕ್ಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರ ಗೆಲ್ಲಿಸಲೇಬೇಕೆಂಬ ಹಠದಿಂದ ಸಿನಿಮಾ ತಯಾರಾಗುತ್ತಿರುವ ರೀತಿ ಇದೆ. ಈ ಸಿನಿಮಾವಾದರೂ ಬಾಲಿವುಡ್ ಅಲ್ಲಿ ಸದ್ದು ಮಾಡಲಿದೆಯೇ ಎಂದು ಕಾದು ನೋಡಬೇಕಾಗಿದೆ.

ಕನ್ನಡದ ಖ್ಯಾತಿ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್ ಅಷ್ಟಕ್ಕೂ ಅಭಿನಯ ಮಾಡಿದ ತಪ್ಪಾದರೂ ಏನು ಗೊತ್ತ.? ತೆರೆ ಮೇಲೆ ಕಾಣುವಷ್ಟು ಒಳ್ಳೆಯವರಲ್ಲ ನಿಜ ಜೀವನದಲ್ಲಿ.

0

 

ವರದಕ್ಷಿಣೆ ಕಿ.ರು.ಕು.ಳ ಆರೋಪ, ನಟಿ ಅಭಿನಯಗೆ ಎರಡು ವರ್ಷ ಕ.ಠಿ.ಣ ಶಿ-ಕ್ಷೆ ಜೈಲು ಪಾಲಾದ ಖ್ಯಾತ ನಟಿ.

ಅನುಭವ ಸಿನಿಮಾದ ಮೂಲಕ ಕೇವಲ 14 ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿಟ್ಟ ಅಭಿನಯ ಅವರು ಕನ್ನಡದಲ್ಲಿ ಸುಮಾರು 30ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಹಿಟ್ಲರ್ ಕಲ್ಯಾಣ ಎಂಬ ಧಾರಾವಾಹಿಯಲ್ಲಿ ಕೂಡ ಲೀಲಾ ಅವರ ಅಮ್ಮನ ಪಾತ್ರದಲ್ಲಿ ಕೌಶಲ್ಯ ಎಂಬ ಹೆಸರಿನ ಮೂಲಕ ಸಿಕ್ಕಾಪಟ್ಟೆ ಹೆಸರುವಾಸಿಯಾಗಿದ್ದಾರೆ.

ತಮ್ಮ ಅದ್ಭುತವಾದ ಅಭಿನಯದಿಂದಲೇ ಎಲ್ಲರ ಮನೆ ಮಾತಾಗಿದ್ದರೂ ಆದರೆ ಇದೀಗ ಖ್ಯಾತ ನಟಿ ಅಭಿನಯ ಅವರು ಜೈಲು ಶಿ.ಕ್ಷೆ‌.ಗೆ ಒಳಗಾಗಿದ್ದಾರೆ‌. ಅಷ್ಟಕ್ಕೂ ಅಭಿನಯ ಮಾಡಿದ ತಪ್ಪಾದರೂ ಏನು ಎಂಬುದನ್ನು ನೋಡುವುದಾದರೆ ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರು ಲಕ್ಷ್ಮಿ ದೇವಿ ಎಂಬ ಯುವತಿಯನ್ನು 1998 ರಲ್ಲಿ ಮದುವೆಯಾಗಿದ್ದರು‌‌. ಈ ಸಮಯದಲ್ಲಿ ವರದಕ್ಷಿಣೆಯಾಗಿ 80 ಸಾವಿರ ರೂಪಾಯಿ ನಗದು ಹಾಗೂ 250 ಗ್ರಾಂ ಚಿನ್ನವನ್ನು ಪಡೆದುಕೊಂಡಿದ್ದರು.

ಮದುವೆಯಾದ ಒಂದೇ ವರ್ಷಕ್ಕೆ ವರದಕ್ಷಣೆ ಕಿ.ರು.ಕು.ಳ ಕೊಡುವುದಕ್ಕೆ ಅಭಿನಯ ಅವರ ಕುಟುಂಬದವರು ಮುಂದಾಗುತ್ತಾರೆ. 1 ಲಕ್ಷ ವರದಕ್ಷಿಣೆಯನ್ನು ತೆಗೆದುಕೊಂಡು ಬರುವಂತೆ ಲಕ್ಷ್ಮಿ ದೇವಿ ಅವರಿಗೆ ಹಿಂ.ಸೆ ನೀಡುತ್ತಾರೆ. ತದನಂತರ ತಂದೆಯ ಮನೆಯಿಂದ 20,000 ಗಳನ್ನು ತಂದು ಕೊಡುತ್ತಾಳೆ. ಆದರೂ ಕೂಡ ವರದಕ್ಷಿಣೆ ಕಿ.ರು‌‌.ಕು.ಳ ನಿಲ್ಲುವುದಿಲ್ಲ ಮುಂದುವರಿಯುತ್ತದೆ.

ಇದರಿಂದ ಬೇಸತ್ತಂತಹ ಲಕ್ಷ್ಮಿ ದೇವಿ, ಶ್ರೀನಿವಾಸ್ ಹಾಗೂ ಅಭಿನಯ ರಾಮಕೃಷ್ಣ ಹಾಗೂ ಅವರ ತಂದೆ ತಾಯಿ ಐದು ಜನರ ವಿರುದ್ಧವೂ ಕೂಡ ಪೊಲೀಸ್ ಸ್ಟೇಷನಲ್ಲಿ ದೂರನ್ನು ದಾಖಲಿಸುತ್ತಾರೆ. 2002 ರಲ್ಲಿ ಈ ಒಂದು ಪ್ರಕರಣ ಬೆಳಕಿಗೆ ಬರುತ್ತದೆ ಅಲ್ಲಿಂದ ಇಲ್ಲಿಯವರೆಗೂ ಕೂಡ ಈ ಕೇಸ್ ಮುಂದುವರಿದುಕೊಂಡು ಹೋಗಿರುತ್ತದೆ. ಆದರೆ ಇದೀಗ ಲಕ್ಷ್ಮಿ ದೇವಿ ಮಾಡಿರುವ ಆರೋಪಗಳೆಲ್ಲವೂ ಕೂಡ ಸಾಬೀತು ಆಗಿರುವುದರಿಂದ ಅಭಿನಯ ಅವರಿಗೆ ಎರಡು ವರ್ಷ ಕ.ಠಿ.ಣ ಶಿ.ಕ್ಷೆ.ಯನ್ನು ಹೈಕೋರ್ಟ್ ನೀಡಿದೆ.

ಇನ್ನು ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರು ಇದಾಗಲೇ ಸಾ.ವಿ.ಗೀ.ಡಾ.ಗಿದ್ದಾರೆ ಹಾಗಾಗಿ ಇವರನ್ನು ಹೊರತುಪಡಿಸದರೆ ಇವರ ತಂದೆ ರಾಮಕೃಷ್ಣ ಇವರು ಕೂಡ ವಿ.ಧಿ.ವ.ಶ.ರಾಗಿರುವುದರಿಂದ ಇವರಿಬ್ಬರನ್ನು ಹೊರತು ಪಡಿಸಿ ಅಭಿನಯ ಹಾಗೂ ಅವರ ತಾಯಿ ಮತ್ತೋರ್ವ ಆರೋಪಿ ಒಟ್ಟು ಮೂರು ಜನರಿಗೆ ಜೈಲು ಶಿ‌‌.ಕ್ಷೆಯಾಗಿದೆ ಅಭಿನಯ ಅವರಿಗೆ ಎರಡು ವರ್ಷ ಶಿಕ್ಷೆಯಾಗಿದ್ದರೆ.

ಅಭಿನಯ ಅವರ ತಾಯಿಗೆ ಐದು ವರ್ಷ ಶಿಕ್ಷೆಯಾಗಿದೆ ನಿಜಕ್ಕೂ ಇದು ಅಭಿಮಾನಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ ತೆರೆಯ ಮೇಲೆ ಚೆನ್ನಾಗಿ ನಟಿಸುವಂತಹ ನಟಿ ಮಣಿಯರೇ ನಿಜ ಜೀವನದಲ್ಲಿ ಒಬ್ಬ ಹೆಣ್ಣು ಮಗಳಿಗೆ ಇಷ್ಟೆಲ್ಲಾ ಕಿರುಕುಳ ಕೊಟ್ಟಿರುವುದು ನಿಜಕ್ಕೂ ವಿಷಾದವೇ. ಕಾನೂನು ಎಲ್ಲರಿಗೂ ಒಂದೇ ಅದು ಸಾಮಾನ್ಯ ಜನರಾಗಿರಲಿ ಅಥವಾ ಸೆಲೆಬ್ರಿಟಿಗಳಾಗಿರಲಿ ಎಂಬುದಕ್ಕೆ ಇದು ನೈಜ ಉದಾರಣೆ ಅಂತಾನೆ ಹೇಳಬಹುದು.

ಬರೋಬ್ಬರಿ 20 ವರ್ಷದ ನಂತರ ಈ ಕೇಸ್ ಗೆ ಒಂದು ಅಂತ್ಯ ಸಿಕ್ಕಿರುವುದು ನಿಜಕ್ಕೂ ಆಶ್ಚರ್ಯ ಪಡೆಯಬೇಕಾದ ವಿಚಾರ ಸದ್ಯಕ್ಕೆ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನಟನೆ ಮಾಡುತ್ತಿರುವಂತಹ ಅಭಿನಯ ಅವರು ಜೈಲು ಪಾಲಾಗಿರುವುದರಿಂದ ಮುಂದಿನ ದಿನದಲ್ಲಿ ಹಿಟ್ಲರ್ ಕಲ್ಯಾಣದಲ್ಲಿ ಕೌಶಲ್ಯ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದು ನಿಜಕ್ಕೂ ಅಭಿನಯ ಅವರ ಬದುಕಿನಲ್ಲಿ ಒಂದು ಕಪ್ಪು ಚುಕ್ಕಿ ಅಂತಾನೆ ಹೇಳಬಹುದು ಜೈಲು ಶಿ‌‌.ಕ್ಷೆ ಅನುಭವಿಸಿ ಬಂದ ನಂತರ ಇದು ಇವರ ಸಿನಿ ಜೀವನಕ್ಕೆ ಮತ್ತಷ್ಟು ಹೊಡೆತವನ್ನು ತರಬಹುದು ಸದ್ಯಕ್ಕೆ ಅಭಿನಯ ಅವರ ಜೈಲು ಪಾಲು ಆಗಿರುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ನಮಸ್ತೆ ದೇವ್ರು ಅಂತ ಇಡೀ ಪ್ರಪಂಚನೇ ಕನ್ನಡಿಗರಿಗೆ ಪರಿಚಯ ಮಾಡಿಕೊಡುತ್ತಿದ್ದ ಡಾ.ಬ್ರೋ ಬೆನ್ನಿಗೆ ಚೂ-ರಿ ಹಾಕಿದ ಮತ್ತೋರ್ವ ಯೂಟ್ಯೂಬರ್, ನಂಬಿಕೆ ದ್ರೋಹ

Dr BRO ಗೆ ಮೋಸ ಮಾಡಿದ ಯೂಟ್ಯೂಬರ್ ನೋವು ತೋಡಿಕೊಂಡ Dr BRO

ಡಾಕ್ಟರ್ ಬ್ರೋ ಈ ಹೆಸರು ಸೋಶಿಯಲ್ ಮೀಡಿಯಾ ದ ಮುಖಾಂತರ ಎಲ್ಲರಿಗೂ ಚಿರಪರಿಚಿತ ಹೌದು ವಿವಿಧ ದೇಶಗಳ ಕುರಿತಾಗಿ ವ್ಲಾಗಿಂಗ್ ಮಾಡುವವರ ವಿಡಿಯೋ ನೋಡುವಂತಹ ಪ್ರತಿಯೊಬ್ಬರಿಗೂ ಚಿರಪರಿಚಿತವಾದಂತಹ ಹೆಸರು ಡಾಕ್ಟರ್ ಬ್ರೋ ಎಂದೇ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದಿರುವ ಈ ಯುವಕ ಗಗನ್ ಶ್ರೀನಿವಾಸ್ ಅವರು ತಮ್ಮದೇ ಆದಂತಹ ವಿಶಿಷ್ಟ ಶೈಲಿಯಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತಾ.

ಜಗತ್ತಿನಲ್ಲಿರುವಂತಹ ನಾನಾ ದೇಶಗಳಿಗೆ ಹೋಗಿ ಅಲ್ಲಿನ ಪರಿಚಯಗಳನ್ನು ಜನರಿಗೆ ಮಾಡಿಕೊಡುವ ತಮ್ಮ ವಿಶಿಷ್ಟ ವಿಡಿಯೋಗಳನ್ನು ಇಂದು ಇಡೀ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದು ಯೂಟ್ಯೂಬ್ ನಲ್ಲಿ ಲಕ್ಷಾಂತರ ಜನರ ಮೆಚ್ಚುಗೆಯನ್ನು ಕೂಡ ಪಡೆದುಕೊಂಡಿದ್ದಾರೆ ಆದರೆ ಇದೀಗ ಡಾಕ್ಟರ್ ಬ್ರೋ ಅವರು ಬೇರೆಯವರಿಗೆ ಸಹಾಯ ಮಾಡಿ.

ಅವರಿಂದಲೇ ತನಗೆ ನಂಬಿಕೆ ದ್ರೋಹ ಆಯಿತು ಅನ್ನೋ ವಿಚಾರವನ್ನು ಒಂದು ಸುಧೀರ್ಘ ಪೋಸ್ಟ್ ನಲ್ಲಿ ಸ್ವ ವಿವರವಾಗಿ ಬರೆದುಕೊಂಡು ತಮ್ಮ ಮನಸ್ಸಿನ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ ಹೌದು ಗಗನ್ ಶ್ರೀನಿವಾಸ ಅವರು ಈ ಹಿಂದೆ ಆಫ್ಘಾನಿಸ್ತಾನದ ತಾಲಿಬಾನ್ ದೇಶದಿಂದ ಹೆದರಿ ದುಬೈಗೆ ಓಡಿ ಬಂದಿದ್ದ ಮತ್ತೊಬ್ಬ ವ್ಲಾಗರ್ ಲೋಹಿತ್ ಕನ್ನಡ ಟ್ರಾವೆಲರ್ ಗೆ ಧೈರ್ಯ ತುಂಬಿ ಅವರ ಚಾನಲ್ ನಲ್ಲಿ ಅವರೊಂದಿಗೆ ವಿಡಿಯೋ ಮಾಡಿ ಅವರಿಗೆ ಸಪೋರ್ಟ್ ಮಾಡಿದ ವಿಷಯದ ಬಗ್ಗೆ ತಿಳಿಸಿದ್ದಾರೆ.

ಆದರೆ ಈಗ ತಾನು ಸಪೋರ್ಟ್ ಮಾಡಿದಂತಹ ಈ ವ್ಲಾಗರ್ ನಿಂದಲೇ ಮೋಸ ಹೋಗಿರುವಂತಹ ವಿಷಯದ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದಾರೆ ಗಗನ್ ಅವರು. ಹೌದು ಡಾಕ್ಟರ್ ಬ್ರೋ ತಾಂಜೀನಿಯಕ್ಕೆ ಹೋಗುವಾಗ ಲೋಹಿತ್ ಅವರು ತಾಂಜೀನಿಯಾದ ಹಾರ್ಟ್ ಟ್ರೀ ಟ್ರೈನ್ ಬಗ್ಗೆ ವಿಡಿಯೋವನ್ನು ಮಾಡುತ್ತೀರಾ ಎಂದು ಕೇಳಿದಾಗ ಡಾಕ್ಟರ್ ಬ್ರೋ ಹೌದು ನಾನು ಈಗ ಅದರ ಬಗ್ಗೆ ರಿಸರ್ಚ್ ಮಾಡುತ್ತಾ ಇದ್ದು ಭಾನುವಾರ ಅಲ್ಲಿಗೆ ಹೋಗುವುದಾಗಿ ಮೊದಲೇ ಹೇಳಿದರಂತೆ.

ಆದರೆ ಲೋಹಿತ್ ಅವರು ತಾನು ಈಗಾಗಲೇ ಮೊದಲು ಇದ್ದ ಕಡೆಯಿಂದ ಬಹಳ ಬೇಗ ಬಂದು ತಾಂಜೀನಿಯಾಕೆ ಬಂದು ಡಾಕ್ಟರ್ ಬ್ರೋ ಎಡಿಟ್ ಮಾಡುತ್ತಾ ಇದ್ದಂತಹ ಹಾರ್ಟ್ ಜಿ ಟ್ರಬ್ ನ ಕುರಿತಾಗಿ ಹೊಸ ವಿಡಿಯೋ ವನ್ನು ಮಾಡಿ ಮಾರನೇ ದಿನವೇ ಆ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ ಒಂದು ವಾರದಿಂದ ಅಲ್ಲೇ ಇದ್ದು ಡಾಕ್ಟರ್ ಬ್ರೋ ಅವರು ಮಾಡಿದ ಎಲ್ಲಾ ಕೆಲಸವನ್ನು.

ಹಾಳು ಮಾಡಿದ್ದಾರೆ ಹೌದು ಇದೇ ವಿಚಾರವಾಗಿ ಡಾಕ್ಟರ್ ಬ್ರೋ ಅವರು ಬೇಸರದಿಂದ ಮಾನವೀಯತೆ ಇರುವ ಯಾವುದೇ ವ್ಯಕ್ತಿ ಇಂತಹ ಕೆಲಸವನ್ನು ಮಾಡುತ್ತಾ ಇರಲಿಲ್ಲವೇನೋ ಎಲ್ಲ ನ್ಯೂಸ್ ಚಾನೆಲ್ ಅವರು ಇಂಟರ್ ವ್ಯೂ ಗೆ ಕರೆದಿದ್ದರು ಕನಿಷ್ಠ ನೂರು ಜನ ಯೂಟ್ಯೂಬರ್ಸ್ ಕೊಲ್ಯಾಬರೇಶನ್ ಗೆ ಕರೆದಿದ್ದರು ಎಲ್ಲವನ್ನು ಬಿಟ್ಟು ಲೋಹಿತ್ ಕನ್ನಡ ಟ್ರಾವೆಲರ್ ಕಷ್ಟದಲ್ಲಿದ್ದಾಗ ಸಹಾಯ ಮಾಡಿದೆ.

ಆದರೆ ಅವರು ಈ ದಿನ ನನಗೆ ಕೊಟ್ಟಂತಹ ಬಹುಮಾನ ಇದು ಧನ್ಯವಾದ ಹೇಳುತ್ತಾ ಲೋಹಿತ್ ಕನ್ನಡ ಟ್ರಾವೆಲರ್ ಧನ್ಯವಾದ ನಿಮಗೆ ದೇವರು ಒಳ್ಳೆಯ ಆಯಸ್ಸು ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ಇನ್ನು ಮುಂದೆ ಯಾದರೂ ಸಹಾಯ ಮಾಡಿದವರಿಗೆ ಯಾವತ್ತಿಗೂ ನಂಬಿಕೆ ದ್ರೋಹವನ್ನು ಮಾಡಬೇಡಿ ಎನ್ನುವಂತಹ ವಿಷಯವನ್ನು ಬರೆದಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕ್ರಾಂತಿ ಸಿನಿಮಾ ಪ್ರಚಾರದಲ್ಲಿ ತಮ್ಮ ದಿನಚರಿ ಬಗ್ಗೆ ಹೇಳಿಕೊಂಡ ದರ್ಶನ್ ಸದ್ಯದಲ್ಲಿ ಇದು ಕೂಡ ವಿವಾದ ಆಗುವ ಸಾಧ್ಯತೆ ಇದೆ. ಅಷ್ಟಕ್ಕೂ ಡಿ ಬಾಸ್ ಹೇಳಿದ್ದೇನು ಗೊತ್ತ.?

ಡಿ ಬಾಸ್ ದಿನಚರಿ

ದರ್ಶನ್ ಅವರಿಗೆ ಫ್ಯಾನ್ಸ್ ಸಪೋರ್ಟ್ ಹೇಗಿದೆ ಎಂದರೆ ಮೀಡಿಯಾ ಬ್ಯಾನ್ ಮಾಡಿದರು ಕೂಡ ಇಂದು ಕರ್ನಾಟಕದ ಕಡೆ ಹಳ್ಳಿಯ ದರ್ಶನ್ ಅಭಿಮಾನಿಗೂ ತಲುಪುವ ಹಾಗೆ ಕ್ರಾಂತಿ ಸಿನಿಮಾದ ಪ್ರಚಾರವನ್ನು ಮೀಡಿಯಾಗೆ ತೊಡೆ ತಟ್ಟಿ ಅಭಿಮಾನಿಗಳೇ ಮಾಡುತ್ತಿದ್ದಾರೆ. ಎಲ್ಲರ ನಿರೀಕ್ಷೆಯಂತೆ ಕ್ರಾಂತಿ ಸಿನಿಮಾವು ಜನವರಿ 26ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.

ಈಗಾಗಲೇ ಚಿತ್ರೀಕರಣ ಪೂರ್ತಿಯಾಗಿ ಮುಕ್ತಾಯಗೊಂಡಿದ್ದು ಪ್ರಚಾರ ಕಾರ್ಯದಲ್ಲಿ ಎಲ್ಲರೂ ಬಿಸಿ ಆಗಿದ್ದಾರೆ. ಅದರಲ್ಲೂ ನಾಯಕ ನಟ ಆದ ದರ್ಶನ್ ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ಅನೇಕ ಯೂಟೂಬ್ ಚಾನಲ್ಗಳಿಗೆ ತಮ್ಮ ಸಂದರ್ಶನಗಳನ್ನು ನೀಡುತ್ತಿದ್ದಾರೆ.

ಈ ಸಂದರ್ಶನದಲ್ಲಿ ಅವರು ಮಾತನಾಡುತ್ತಿರುವ ಕೆಲವು ವಿಷಯಗಳು ವಿವಾದವನ್ನು ಕೂಡ ಸೃಷ್ಟಿಸುತ್ತಿದೆ. ಈಗಷ್ಟೇ ಮೊನ್ನೆ ಮೊನ್ನೆ ಅದೃಷ್ಟ ಲಕ್ಷ್ಮಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನುವ ವಿಚಾರಕ್ಕೆ ಹಲವು ಮಂದಿ ಇವರ ಮೇಲೆ ಬೇಸರ ಪಟ್ಟಿಕೊಂಡಿದ್ದಾರೆ. ಆದರೆ ದರ್ಶನ್ ಅವರು ಬಹಳ ನೇರ ನುಡಿ ಹೊಂದಿರುವವರು. ಇದ್ದದ್ದನ್ನು ಇದ್ದ ಹಾಗೆ ಮುಖದ ಮೇಲೆ ಹೇಳಿಬಿಡುವ ಇವರು ರಿಯಾಲಿಟಿ ಕಿಂಗ್.

ಯಾಕೆಂದರೆ ಆಡು ಬಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಯಾವುದೇ ಫಿಲ್ಟರ್ ಇಲ್ಲದೆ ಸಾಮಾನ್ಯ ಜನ ಮಾತನಾಡುವಂತೆ ಸತ್ಯವನ್ನು ಮಾತನಾಡಿ ಬಿಡುತ್ತಾರೆ. ಇದೇ ನೆಪ ಹೇಳಿ ಅವರನ್ನು ಎಷ್ಟೋ ಜನ ತಪ್ಪಾಗಿ ತಿಳಿದುಕೊಳ್ಳುತ್ತಾರೆ ಆದರೆ ನಿಧಾನವಾಗಿ ವಿಚಾರ ಮಾಡಿ ನೋಡಿದಾಗ ಈತ ಎಷ್ಟೇ ಸ್ಟ್ರೈಟ್ ಫಾರ್ವರ್ಡ್ ಆಗಿದ್ದರು ಮಾತುಗಳಲ್ಲಿ ನಿಜ ಇದೆ ಎಂದು ಅರ್ಥವಾಗಿ ಈತನನ್ನು ಪ್ರೀತಿಸಲು ಶುರು ಮಾಡುತ್ತಾರೆ.

ಇಂತಹದೇ ಒಂದು ಮಾತನ್ನು ಕ್ರಾಂತಿ ಸಂದರ್ಶನದ ಹೇಳಿ ದರ್ಶನ್ ಅವರು ಎಲ್ಲರಿಗೂ ಶಾಕ್ ಉಂಟು ಮಾಡಿದ್ದಾರೆ. ಯಾಕೆಂದರೆ ಹೀರೋಗಳು ಎಂದರೆ ಸಾಮಾನ್ಯವಾಗಿ ಎಲ್ಲರೂ ಅವರನ್ನು ಆದರ್ಶವಾಗಿ ತೆಗೆದುಕೊಳ್ಳುತ್ತಾರೆ. ಡಾಕ್ಟರ್ ರಾಜಕುಮಾರ್ ಕಾಲದಿಂದಲೂ ಈ ರೀತಿ ನಡೆದುಕೊಂಡು ಬಂದಿದ್ದು ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮ ನೋಡಿ ಎಷ್ಟೋ ಮಂದಿ ಸಿಟಿ ತೊರೆದು ಹಳ್ಳಿಗೆ ಹೋಗಿ ವ್ಯವಸಾಯ ಮಾಡಲು ಆರಂಭಿಸಿದ್ದರು.

ಹಾಗಾಗಿ ನಮ್ಮಲ್ಲಿ ಹೀರೋ ಎಂದರೆ ಪಾಸಿಟಿವ್ ಒಳ್ಳೆಯತನ ಒಳ್ಳೆಯ ವ್ಯಕ್ತಿತ್ವ ಹಾಗೂ ಗುಣ ಎನ್ನುವುದೇ ನಮ್ಮ ತಲೆಯಲ್ಲಿ ಓಡುತ್ತಿದೆ ಆದರೆ ಅವರಿಗೂ ಸಹ ಒಂದು ಪರ್ಸನಲ್ ಲೈಫ್ ಇರುತ್ತದೆ. ತೆರೆ ಮೇಲೆ ಅವರು ಒಂದು ಪಾತ್ರವನ್ನಷ್ಟೇ ನಿಭಾಯಿಸುತ್ತಾರೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಹಾಗೆ ದರ್ಶನ್ ಅವರ ದಿನಚರಿ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ದರ್ಶನ್ ಅವರು ಸಂದರ್ಶಕ ಕೇಳಿದ ನಿಮ್ಮ ದಿನ ಹೇಗೆ ಶುರುವಾಗುತ್ತದೆ ಎನ್ನುವ ಪ್ರಶ್ನೆಗೆ.

ಬೆಳಗ್ಗೆ ನಾನು 4:30 ಇಂದ 5:00 ಎದ್ದು ಬಿಡುತ್ತೇನೆ ರಾತ್ರಿ ಎಷ್ಟೇ ಲೇಟಾಗಿ ಮಲಗಿದರೂ ಕೂಡ ನನಗೆ ಬೇಗ ಏಳುವ ಅಭ್ಯಾಸ ಇದೆ. ಜಾಸ್ತಿ ಹೊತ್ತು ನಿದ್ದೆ ಮಾಡುವುದೇ ಇಲ್ಲ ಎದ್ದ ಕೂಡಲೇ ಎರಡು ಸಿಗರೇಟ್ ಹೊಡೆಯುತ್ತೇನೆ. ನಂತರ ನನ್ನ ಟ್ರೈನಿಂಗ್ ಬರುತ್ತಾರೆ ಎಂಟು ವರ್ಷಗಳಿಂದ ಹೇಮಂತ್ ಎನ್ನುವವರೇ ನನಗೆ ಕೋಚ್ ಆಗಿದ್ದಾರೆ. ಅವರ ಜೊತೆ ಜೋಶ್ ಆಗಿ ವರ್ಕ್ ಔಟ್ ಮಾಡಲು ಹೋಗುತ್ತೇನೆ ಅದಕ್ಕೂ ಮುನ್ನ ಟೀ ಕುಡಿದು ನಂತರ ಪ್ರೋಟಿನ್ ಸಹ ಕುಡಿಯುತ್ತೇನೆ ಆಮೇಲೆ ನಾನು ಮತ್ತೆ ಸಿಗರೇಟ್ ಹೊಡೆಯಲೇಬೇಕು ಎಂದು ಹೇಳಿ ಕೊಂಡಿದ್ದಾರೆ.

ಇದನ್ನು ಕೇಳಿದ ಜನತೆ ಅದರಲ್ಲೂ ದರ್ಶನ್ ಅಭಿಮಾನಿಗಳು ಈ ರೀತಿ ತಮಗಿರುವ ಒಂದು ಕೆಟ್ಟ ಅಭ್ಯಾಸದ ಬಗ್ಗೆ ರಾಜ ರೋಷವಾಗಿ ಮೀಡಿಯಾ ಮುಂದೆ ಹೇಳಿಕೊಳ್ಳಲು ಎಲ್ಲ ಹೀರೋಗಳಿಗೂ ಧೈರ್ಯ ಇರುವುದಿಲ್ಲ. ನಮ್ಮ ಬಾಸ್ ಇದ್ದದ್ದು ಇದ್ದ ಹಾಗೇನೆ ಹೇಳಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

ಪತ್ನಿಗಾಗಿ ಕೊರಗಜ್ಜನ ಮೊರೆ ಹೋದ ಶಿವಣ್ಣ, ಅಂತದ್ದೇನಾಗಿದೆ ಗೊತ್ತಾ ಗೀತಾಕ್ಕನಿಗೆ.?

 

ಕೊರಗಜ್ಜ ದೇವರ ಮಹಿಮೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಕೊರಗಜ್ಜನನ್ನು ಬಹಳ ನಂಬುತ್ತಾರೆ. ಆ ಪಾಲಿನ ಜನರಿಗೆ ದೈವವಾಗಿರುವ ಕೊರಗಜ್ಜನ ಬಳಿ ನಮ್ಮ ಕಷ್ಟಗಳನ್ನೆಲ್ಲ ಹೇಳಿಕೊಂಡು ಹರಕೆ ಕಟ್ಟಿಕೊಳ್ಳುತ್ತಾರೆ. ತಲ ತಲಾಂತರದಿಂದಲೂ ಇಲ್ಲಿಯ ಜನರು ಗುಣವಾಗದ ಯಾವುದೇ ಅನಾರೋಗ್ಯ ಸಮಸ್ಯೆ ಆದರೂ ಅಥವಾ ಬಹಳ ಮುಖ್ಯವಾದ ವಸ್ತುವನ್ನೇನಾದರೂ ಕಳೆದುಕೊಂಡಿದ್ದರೂ ಇಲ್ಲಿಗೆ ಬಂದು ಹರಕೆ ಸಲ್ಲಿಸುತ್ತಾರೆ.

ಹಾಗೆ ಅವರ ಸಮಸ್ಯೆ ಸರಿ ಹೋಗಿರುವುದರ ಬಗ್ಗೆ ಮನೆ ಮನೆಯಲ್ಲೂ ಕೂಡ ಉದಾಹರಣೆಗಳನ್ನು ಕೊಡುತ್ತಾರೆ. ಹೀಗಾಗಿ ಕರಾವಳಿ ಭಾಗವಾಗದ ನಂಬಿಕೆ ದೈವಗಿದ್ದ ಕೊರಗಜ್ಜನ ಮಹಿಮೆಯನ್ನು ಇಂದು ಕರ್ನಾಟಕದ ಎಲ್ಲಾ ಜನರು ಅರಿತಿದ್ದಾರೆ. ಈ ವಿಷಯವನ್ನು ತಿಳಿದಿದ್ದ ಶಿವರಾಜ್ ಕುಮಾರ್ ಅವರು ಪತ್ನಿ ಸಮೇತವಾಗಿ ಹೋಗಿ ಕೊರಗಜ್ಜನ ಮೂಲ ಕ್ಷೇತ್ರ ಆದ ಕುತ್ತಾರುವಿನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿ ಹರಕೆ ಕಟ್ಟಿಕೊಂಡು ಬಂದಿದ್ದಾರೆ ಅದು ಸಹ ಪತ್ನಿಗಾಗಿ ಎನ್ನುವುದು ವಿಶೇಷ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವೇದ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಮಂಗಳೂರಿನಲ್ಲಿ ನಡೆಯುತ್ತಿದೆ. ಸಿನಿಮಾಗೆ ನಿರ್ಮಾಪಕಿ ಆಗಿರುವ ಗೀತ ಶಿವ ರಾಜಕುಮಾರ್ ಅವರು ಸಿನಿಲೋಕದ ತಮ್ಮ ಮೊದಲ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಕಾರ್ಯಕ್ರಮಕ್ಕಾಗಿ ಪತ್ನಿ ಮತ್ತು ಕುಟುಂಬ ಸಮೇತವಾಗಿ ಮಂಗಳೂರಿನ ಕಡೆಗೆ ಶಿವಣ್ಣನ ಕುಟುಂಬ ಹೊರಟಿದೆ.

ಮೊದಲಿಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಿಗೆ ಭೇಟಿಕೊಟ್ಟು ನಂತರ ಕೊರಗಜ್ಜನ ಕ್ಷೇತ್ರದ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ರಕ್ಷಿತಾ ಪ್ರೇಮ್ ಅವರು ಶಿವರಾಜ್ ಕುಮಾರ್ ಅವರಿಗೆ ತಿಳಿಸಿದರಂತೆ. ಕೊರಗಜ್ಜನ ಕಾರಣಿಕದ ಬಗ್ಗೆ ಹಲವಾರು ಜನರಿಂದ ವಿಷಯ ತಿಳಿದಿದ್ದ ಶಿವಣ್ಣ ಅವರು ತಾವು ಸಹ ಕೊರಜ್ಜನ ಕ್ಷೇತ್ರಕ್ಕೆ ಭೇಟಿಕೊಟ್ಟು ತಮ್ಮ ವೇದ ಸಿನಿಮಾಗೆ ಒಳಿತಾಗಲಿ ಈ ಮೂಲಕ ಯಶಸ್ವಿ ನಿರ್ಮಾಪಕಿಯಾಗಿ ಗೀತ ಹೆಸರು ಮಾಡಲಿ ಎಂದು ಹರಕೆ ಕಟ್ಟಿ ಕೊಂಡಿದ್ದಾರಂತೆ.

ಕೊರಗಜ್ಜನ ಕ್ಷೇತ್ರದಲ್ಲಿ ಯಾರೇ ಆದರೂ ಸಹ ಯಾವುದೇ ಆಡಂಬರ ಇಲ್ಲದೆ ಪೂಜೆ ಸಲ್ಲಿಸಬಹುದು. ಭಕ್ತಿಯಿಂದ ಇಲ್ಲಿ ವೀಳ್ಯದೆಲೆ ಇಟ್ಟು ಚಕ್ಕಲಿ ಮತ್ತು ಶರಾಬು ಇಟ್ಟು ಭಕ್ತಾದಿಗಳು ಪ್ರಾರ್ಥಿಸಿ ಹರಕೆ ಕಟ್ಟಿಕೊಳ್ಳುತ್ತಾರೆ. ಮತ್ತು ಬಹುತೇಕ ಈ ಎಲ್ಲಾ ಹರಕೆಗಳು ಕೂಡ ನೆರವೇರಿವೆ. ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡಬೇಕು ಅಷ್ಟೇ.

ಕೊರಗಜ್ಜ ಈ ರೀತಿ ತಮ್ಮನ್ನು ಹರಿಸಿ ಬಂದ ಎಲ್ಲಾ ಭಕ್ತಾದಿಗಳ ಕೈ ಹಿಡಿಯುತ್ತಾರೆ ಎನ್ನುವುದು ಇಲ್ಲಿನ ಬಲವಾದ ನಂಬಿಕೆ ಹಾಗೂ ಕೊರಗಜ್ಜ ಕೂಡ ಅಂತಹ ಶಕ್ತಿವಂತ ಕಟ್ಟುನಿದ್ದಾಗ ದೈವ. ಈ ಹಿಂದೆ ರಕ್ಷಿತ ಪ್ರೇಮ್ ಅವರು ಸಹ ಸಾಕಷ್ಟು ಬಾರಿ ಈ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ ಹರಕೆ ಕಟ್ಟಿಕೊಂಡು ತೀರಿಸಿದ್ದಾರೆ ಹಾಗಾಗಿ ಈ ಸಲಹೆಯನ್ನು ಶಿವಣ್ಣ ಅವರಿಗೂ ನೀಡಿದ್ದಾರೆ.

ಕೊರಗಜ್ಜನ ದರ್ಶನ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಶಿವಣ್ಣ ಸಹ ರಕ್ಷಿತಾ ಪ್ರೇಮ್ ಅವರು ಕೊಟ್ಟ ಸಲಹೆ ಬಳಿಕ ನಾನು ಇಲ್ಲಿ ಬಂದೆ ಇಲ್ಲಿ ಬಂದು ನೋಡಿದ ಮೇಲೆ ಇಲ್ಲಿನ ಆಚಾರ ವಿಚಾರ ಹಾಗೂ ಸಂಪ್ರದಾಯಗಳು ನನ್ನ ಮನಸ್ಸಿಗೆ ಬಹಳ ಶಾಂತಿ ನೀಡಿತು. ಭಕ್ತಿಯಿಂದ ಪ್ರಾರ್ಥನೆ ಮಾಡುವುದಷ್ಟೇ ಭಕ್ತಾದಿಗಳಾಗಿ ನಮ್ಮ ಕರ್ತವ್ಯ ಏನು ಆಗಬೇಕು ಅದು ಈಗಾಗಲೇ ನಿರ್ಧಾರ ಆಗಿರುತ್ತದೆ ಅದು ದೈವದ ಇಚ್ಛೆ ಎಂದು ಮಾತನಾಡಿದ್ದಾರೆ.

ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತು ಮತ್ತೆ ಹೊಸ ಸಿನಿಮಾ ಶುರು ಮಾಡಿದ ರವಿಮಾಮ

 

ಸದ್ದಿಲ್ಲದೇ ಸೆಟ್ಟೇರಿದ ರವಿಚಂದ್ರನ್ ಅವರ ಹೊಸ ಸಿನಿಮಾ, ಸ್ನೇಹಿತನಿಗೆ ಕ್ಲಾಪ್ ಮಾಡಿ ಶುಭ ಹಾರೈಸಿದ ಶಿವಣ್ಣ

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಂದನವನ ಕಂಡ ಕನಸುಗಾರ. ಸಿನಿಮಾ ಲೋಕದಲ್ಲಿ ಹೊಸ ಹೊಸ ವಿಭಿನ್ನ ಬಗೆಯ ಪ್ರಯೋಗಗಳನ್ನು ಮಾಡಿ ಕನ್ನಡಿಗರಿಗೆ ಹೊಸ ರೀತಿಯ ಸಿನಿಮಾಗಳನ್ನು ಮತ್ತು ಕನ್ನಡ ಚಿತ್ರರಂಗಕ್ಕೆ ನೂತನ ಮಾದರಿಯ ಸಿನಿಮಾಗಳನ್ನು ಕೊಟ್ಟವರು ರವಿ ಸರ್ ವಯಸ್ಸು 60 ದಾಟಿದ್ದರೂ ಕೂಡ ಸಿನಿಮಾ ಉತ್ಸಾಹ ಇವರಿಗೆ ಸ್ವಲ್ಪ ಕೂಡ ಕಡಿಮೆ ಆಗಿಲ್ಲ.

10 ವರ್ಷಗಳ ವೃತ್ತಿ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ಅವರು ಸಿನಿಮಾ ಇಂಡಸ್ಟ್ರಿಗೆ ಕೊಟ್ಟಿರುವ ಕೊಡುಗೆ ಬರಿ ಪದಗಳಲ್ಲಿ ವಿವರಿಸಿದಷ್ಟು ಹಗುರವಾದದಲ್ಲ. ಇತ್ತೀಚಿಗಷ್ಟೇ ಖಾಸಗಿ ಕಾರ್ಯಕ್ರಮ ಒಂದರಲ್ಲಿ ವೈಯಕ್ತಿಕ ಜೀವನದ ಕಹಿ ಘಟನೆ ನೆನೆದು ಭಾವುಕರಾಗಿ ಮಾತನಾಡಿದ್ದರು ರವಿಚಂದ್ರನ್.

ಆನಂತರ ಕನ್ನಡದ ಸ್ಟಾರ್ ಹೀರೋಗಳು ಅವರಿಗೆ ಸಹಾಯ ಮಾಡಿದ್ದಾನೆ ಎನ್ನುವ ಗಾಳಿ ಸುದ್ದಿಗಳು ಹಬ್ಬಿತ್ತು. ಅದಕ್ಕೂ ಕೂಡ ರವಿಚಂದ್ರನ್ ಅವರೇ ಸ್ಪಷ್ಟನೆ ನೀಡಿದ್ದರು. ರವಿಚಂದ್ರನ್ ಅವರಿಗೆ ಅವರ ವೈಯಕ್ತಿಕ ಜೀವನ ಕಷ್ಟಕಿಂತ, ಜನರಿಗೆ ಇಷ್ಟ ಆಗುವ ಸಿನಿಮಾ ಕೊಡುತ್ತಿಲ್ಲ ಜನ ನನ್ನ ಸಿನಿಮಾ ನೋಡಲು ಥಿಯೇಟರ್ ಕಡೆ ಬರುತ್ತಿಲ್ಲ ಎನ್ನುವುದೇ ಹೆಚ್ಚು ಕಾಡುತ್ತಿರುವುದು ಎಂದು ಅವರೇ ಹೇಳಿಕೊಂಡಿದ್ದಾರೆ.

ಹೀಗಾಗಿ ಅವರಿಗೆ ಈ ಬಾರಿ ಜನರಿಗೆ ಸಾಕಷ್ಟು ಹತ್ತಿರವಾಗುವ ಆಗುವ ಸಿನಿಮಾ ಒಂದರಲ್ಲಿ ನಾಯಕ ಆಗುವ ಅವಕಾಶ ಸಿಕ್ಕಿದೆ. ಅದು ಸಹ ತೆಲುಗಿನ ಮೂಲದ ಯುವ ನಿರ್ದೇಶಕ ಅನೀಸ್ ಕುಮಾರ್ ಎನ್ನುವ ನಿರ್ದೇಶಕನ ಜೊತೆ. ಅನೀಸ್ ಅವರು ಅಮೆರಿಕದ ಸೈನ್ಯದಲ್ಲಿ ಹಲವು ವರ್ಷಗಳ ಕಾಲ ಫೋಟೋ ಜರ್ನಲಿಷ್ಟಾಗಿ ಕೆಲಸ ಮಾಡಿದ್ದರು

ಈಗ ತಮಿಳುನಾಡಿನಲ್ಲಿ ನೆಲೆಸಿರುವ ಅವರು 80ಕ್ಕೂ ಹೆಚ್ಚು ಜಾಹಿರಾತುಗಳಿಗೆ ನಿರ್ದೇಶನ ಮಾಡಿದ್ದಾರೆ. ಮಿಡ್ಲ್ ಈಸ್ಟ್ ದೇಶಗಳಲ್ಲಿ ತಿರುಗಿ ಅನುಭವ ಪಡೆದುಕೊಂಡು ಚಿತ್ರಕಥೆಯನ್ನು ರೆಡಿ ಮಾಡಿಕೊಂಡಿರುವ ಈ ಸಿನಿಮಾ ರವಿಚಂದ್ರನ್ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದು ಅಂದುಕೊಂಡಿದ್ದರಂತೆ.

ಅಲ್ಲದೆ ಚಿತ್ರದ ಕಥೆಯನ್ನು ನಿರ್ಮಾಪಕರಾದ ಎನ್ ಎಸ್ ರಾಜಕುಮಾರ್ ಹಾಗೂ ವಿ ಎಸ್ ರಾಜಕುಮಾರ್ ಅವರಿಗೆ ಹೇಳಿದಾಗ ಅವರು ಸಹ ಇವರನ್ನೇ ಸೂಚಿಸುತ್ತಾರೆ. ಮತ್ತು ರವಿಚಂದ್ರನ್ ಅವರೂ ಸಹ ಕಥೆ ಕೇಳಿದ ತಕ್ಷಣವೇ ಖುಷಿಯಾಗಿ ಈ ಪಾತ್ರ ಮಾಡೋದಾಗಿ ಒಪ್ಪಿಗೆ ಕೊಂಡರಂತೆ.

ಗಂಡ ಹೆಂಡತಿಯರ ನಡುವಿನ ಹಗ್ಗ ಜಗ್ಗಾಟದ ಎಳೆಯ ಸಿನಿಮಾದ ಮೂಲ ಕಥೆ ಆಗಿದ್ದು ಆದರೆ ಈ ರೀತಿಯ ಒಂದು ಪ್ರಯೋಗಾತ್ಮಕ ಸಿನಿಮಾ ಕನ್ನಡದಲ್ಲಿ ಇದುವರೆಗೆ ಬಂದಿಲ್ಲವಂತೆ. ಸಿನಿಮಾದಲ್ಲಿ ರವಿಚಂದ್ರನ್ ರಾಯಲ್ ಆಗಿ ಕಾಣಿಸಿಕೊಳ್ಳಲಿದ್ದು ಸಿನಿಮಾ ಪೂರ್ತಿ ಕಾಡಿನಲ್ಲಿ ಶೂಟಿಂಗ್ ಆಗಲಿದೆಯಂತೆ.

ಇದಕ್ಕಾಗಿ ಜಮಾಲಿಗುಡ್ಡ ದಾಂಡೇಲಿ ಕಡೆ ಸ್ಥಳ ಸೆಲೆಕ್ಟ್ ಕೂಡ ಮಾಡಲಾಗಿದೆಯಂತೆ ಮತ್ತು ಕೆಲವು ಸನ್ನಿವೇಶಗಳನ್ನು ಬ್ಯಾಂಕಾಕ್ ಅಲ್ಲಿ ಕೂಡ ಶೂಟಿಂಗ್ ಮಾಡಲು ನಿರ್ಧರಿಸಿದೆಯಂತೆ ಚಿತ್ರತಂಡ. ಸಿನಿಮಾದ ನಾಯಕಿ ಪಾತ್ರಕ್ಕೆ ಮುಂಬೈ ಬೆಡಗಿ ಬಾರ್ಕ್ ಬಿಸ್ಟ್ ಅವರನ್ನು ಕರೆತರಲಾಗಿದೆಯಂತೆ ಅವರಿಗೂ ಸಹ ಇದು ಮೊದಲ ದಕ್ಷಿಣ ಭಾರತದ ಸಿನಿಮಾ ಆಗಿರಲಿದೆ.

ಇನ್ನು ನಿರ್ದೇಶಕ ಅನೀಶ್ ಸಾಕಷ್ಟು ಅನುಭವ ಹೊಂದಿದ್ದರೂ ಸ್ವತಂತ್ರವಾಗಿ ಮೊದಲಿಗೆ ಆಕ್ಷನ್ ಕಟ್ ಹೇಳುತ್ತಿರುವುದು ಇದೇ ಸಿನಿಮಾಗೆ. ಸಾಕಷ್ಟು ವಿಚಾರಗಳಿಂದ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ನೆನ್ನೆ ಅಷ್ಟೇ ಬೆಂಗಳೂರಿನ ಶೇಷಾದ್ರಿಪುರಂ ಅಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯಕ್ರಮ ನಡೆದಿದೆ.

ರವಿಚಂದ್ರನ್ ಅವರ ಆಪ್ತ ಸ್ನೇಹಿತ ಶಿವಣ್ಣ ಬಂದು ಕ್ಲಾಪ್ ಮಾಡಿ ಶುಭ ಕೂಡ ಹಾರೈಸಿದ್ದಾರೆ. ಎಲ್ಲವು ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಕನ್ನಡದಲ್ಲಿ ಒಂದು ಹೊಸ ರೀತಿಯ ಕಂಟೆಂಟ್ ಓರಿಯೆಂಟೆಡ್ ಫ್ಯಾಮಿಲಿ ಡ್ರಾಮಾ ಸಿನಿಮಾ ಒಂದನ್ನು ನೋಡುವ ಅವಕಾಶ ಕನ್ನಡಿಗರ ಪಾಲಿಗೆ ದೊರೆಯಲಿದೆ.

ಅಂದು ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಮಾಡಿಕೊಂಡು ಕೈ ಕೊಟ್ಟ ಹುಡುಗಿ ಇಂದು ಯಾರನ್ನು ಮದುವೆಯಾಗಿದ್ದಾರೆ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

ಅಂದು ನಿಖಿಲ್ ಕುಮಾರಸ್ವಾಮಿ ಜೊತೆ ನಿಶ್ಚಿತಾರ್ಥ ಮುರಿದುಕೊಂಡಿದ್ದ ಸ್ವಾತಿ ಈಗ ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ.?

ನಿಖಿಲ್ ಕುಮಾರಸ್ವಾಮಿ ಅವರು ಕೊರನಾ ಲಾಕ್ ಡೌನ್ ವೇಳೆ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು. ರೇವತಿ ಎನ್ನುವವರನ್ನು ಕೈಹಿಡಿದಿರುವ ನಿಖಿಲ್ ಕುಮಾರಸ್ವಾಮಿ ಅವರ ದಾಂಪತ್ಯಕ್ಕೆ ಎರಡು ವರ್ಷ ತುಂಬುತ್ತಿದ್ದು ಮುದ್ದಾದ ಗಂಡು ಮಗು ಕೂಡ ಇದೆ.

ಇತ್ತೀಚೆಗಷ್ಟೇ ಅದ್ದೂರಿಯಾಗಿ ಮಗುವಿಗೆ ನಾಮಕರಣ ಕಾರ್ಯಕ್ರಮ ಕೂಡ ಮಾಡಿ ಅವ್ಯಾನ್ ದೇವ್ ಎನ್ನುವ ಹೆಸರು ಕೂಡ ಇಟ್ಟಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ.

ಕರ್ನಾಟಕದಲ್ಲಿ ಈ ರೀತಿ ವರ್ಚಸ್ಸು ಹೊಂದಿರುವ ಇವರು ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಈಗಾಗಲೇ ಇವರ ನಟನೆಯ ಜಾಗ್ವಾರ್, ಸೀತಾರಾಮ ಕಲ್ಯಾಣ, ರೈಡರ್ ಮತ್ತು ಕುರುಕ್ಷೇತ್ರ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು ಕನ್ನಡದಲ್ಲಿ ಭರವಸೆಯ ನಾಯಕ ಎನಿಸಿಕೊಂಡಿದ್ದಾರೆ.

ಇಂತಹ ಒಬ್ಬ ಯಂಗ್ ಸೆಲೆಬ್ರಿಟಿ ಬಗ್ಗೆ ಸಾಕಷ್ಟು ಗಾಸಿಪ್ ಗಳು ಸೃಷ್ಟಿ ಆಗಿರುತ್ತವೆ ಮತ್ತು ಸಣ್ಣ ಪುಟ್ಟ ವಿಚಾರ ಕೂಡ ದೊಡ್ಡದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗುತ್ತದೆ. ಹೀಗೆ ರೇವತಿ ಅವರೊಂದಿಗೆ ಕುಮಾರಸ್ವಾಮಿ ಅವರ ವಿವಾಹವಾದ ಸಂದರ್ಭದಲ್ಲಿ ಈ ಹಿಂದೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಡಿಯೋ ಒಂದು ವೈರಲ್ ಆಗಿತ್ತು.

ಆ ವಿಡಿಯೋದಲ್ಲಿ ಇದ್ದ ಹುಡುಗಿ ನಿರ್ಮಾಪಕ ಕೆ ಸಿ ಎಂ ಮೋಹನ್ ಅವರ ಮಗಳು ಸ್ವಾತಿ ಎನ್ನುವುದು ಎಲ್ಲರಿಗೂ ತಿಳಿಯಿತು. ಸ್ವಾತಿ ಅವರೊಂದಿಗೆ ನಿಖಿಲ್ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದ್ದು ಆ ಎಂಗೇಜ್ಮೆಂಟ್ ವಿಡಿಯೋದಲ್ಲಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಚೆನ್ನಮ್ಮ, ದೇವೇಗೌಡ ಅವರು ಸೇರಿದಂತೆ ಸಿನಿಮಾ ರಂಗದ ಅನೇಕರು ಕೂಡ ಕಾಣಸಿಗುತ್ತಾರೆ.

ಆದರೆ ಸ್ವಾತಿ ಅವರ ಬದಲು ರೇವತಿ ಅವರನ್ನು ನಿಖಿಲ್ ಯಾಕೆ ಮದುವೆಯಾದರು ಎನ್ನುವುದಕ್ಕೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ. 2018ರಲ್ಲಿ ಸ್ವಾತಿ ಅವರೊಂದಿಗೆ ನಿಶ್ಚಿತಾರ್ಥ ನಡೆದಿತ್ತು ಆದರೆ ಹಲವು ದಿನಗಳು ಕಳೆದರೂ ಕೂಡ ಮದುವೆ ನಡೆಯದ ಕಾರಣ ಈ ನಿಶ್ಚಿತಾರ್ಥ ಬಿದ್ದಿದೆ ಎಂದು ಎಲ್ಲರೂ ಮಾತನಾಡಿಕೊಳ್ಳಲು ಶುರು ಮಾಡಿದರು.

ಅದಕ್ಕೆ ಸಾಕ್ಷಿ ಅನ್ನುವಂತೆ ಇದ್ದಕ್ಕಿದ್ದ ಹಾಗೆ ರೇವತಿ ಅವರೊಂದಿಗೆ ಮದುವೆ ಕೂಡ ನಡೆದು ಹೋಯಿತು. ಇಷ್ಟೆಲ್ಲ ನಡೆದಿದ್ದರೂ ಸಹ ಇನ್ನೂ ಎರಡು ಕುಟುಂಬಗಳ ಕಡೆಯಿಂದ ಈ ಎಂಗೇಜ್ಮೆಂಟ್ ಮುರಿದು ಬಿದ್ದ ಬಗ್ಗೆ ಯಾರು ಸಹ ಮಾತನಾಡಿಲ್ಲ. ಇತ್ತ ನಿಖಿಲ್ ಕುಮಾರಸ್ವಾಮಿ ಅವರು ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಬದುಕುತ್ತಿದ್ದಾರೆ.

ಈಗ ಮಾಜಿ ಪ್ರೇಯಸಿ ಸ್ವಾತಿ ಅವರು ಕೂಡ ಬೇರೆಯವರೊಂದಿಗೆ ಹಸೆಮಣೆಯಿರಿ ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸ್ವಾತಿ ಅವರು ಕೈ ಹಿಡಿಯುತ್ತಿರುವ ಆ ವ್ಯಕ್ತಿ ನೆಹನೀಶ್. ಈತ ಮಾಜಿ ಮುಖ್ಯಮಂತ್ರಿ ಶ್ರೀಕಂಠಯ್ಯ ಅವರ ಮೊಮ್ಮಗನಾಗಿದ್ದಾರೆ, ಸದ್ಯಕ್ಕೆ ದೇವೇಗೌಡ ಅವರ ಕುಟುಂಬಕ್ಕೆ ರಾಜಕೀಯ ವಿರೋಧಿಗಳಾಗಿರುವ ಮನೆಗೆ ಕೆ ಸಿ ಎಂ ಮೋಹನ್ ಅವರು ತಮ್ಮ ಮಗಳನ್ನು ಕೊಟ್ಟಿದ್ದಾರೆ.

ಸೆಲೆಬ್ರಿಟಿ ಅವರ ಬದುಕಿನಲ್ಲಿ ಈ ರೀತಿ ಬ್ರೇಕಪ್ ಆಗುವುದು ನಿಶ್ಚಿತಾರ್ಥ ಮುಡಿದು ಬಿಡುವುದು ಡೈವೋರ್ಸ್ ಆಗುವುದು ಸದ್ಯದ ಜನರೇಶನ್ ಅಲ್ಲಿ ಸಹಜ ಪ್ರಕ್ರಿಯೆ ಆಗಿದೆ. ಆದದ್ದನ್ನೆಲ್ಲ ಮರೆತು ಸ್ವಾತಿ ಅವರು ಸಹಜವಾಗಿ ತಮ್ಮ ಮುಂದಿನ ಜೀವನದಲ್ಲಿ ಸಂತೋಷವನ್ನು ಕಾಣಲಿ ಎಂದು ಹರಸೋಣ.

ಅವಿವಾ ಬಿದ್ದಪ್ಪಗೆ ಅಭಿಷೇಕ್ ಅಂಬರೀಶ್ ತೊಡಿಸಿದ ಉಂಗುರದ ಮೌಲ್ಯ ಎಷ್ಟು ಗೊತ್ತಾ.? ನಿಜಕ್ಕೂ ಬಾಯಿ ಮೇಲೆ ಬೆರಳು ಇಡ್ತಿರಾ ಇದರ ಬೆಲೆ ಗೊತ್ತದ್ರೆ

ಸಖತ್ ಸದ್ದು ಮಾಡ್ತಿದೆ ಅಭಿಷೇಕ್ ಅಂಬರೀಶ್ ಅವಿವಾಗೆ ತೊಡಿಸಿದ ಉಂಗುರದ ಬೆಲೆ

ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಮದುವೆ ವಿಚಾರ ಸಾಕಷ್ಟು ತಿಂಗಳಿಂದ ಚರ್ಚೆಯಲ್ಲಿತ್ತು. ಸುಮಲತಾ ಹಾಗೂ ಅಭಿಷೇಕ್ ಹೋದ ಕಡೆಯಲೆಲ್ಲಾ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ಅಲ್ಲದೆ ಅಭಿಷೇಕ್ ಅವರು ಯಾವುದೋ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ‌‌.

ಎನ್ನುವ ಮಾತುಗಳು ಹಾಗೂ ಸುಮಲತಾ ಅಂಬರೀಶ್ ಅವರೇ ತಮ್ಮ ಮನೆ ಸೊಸೆಯನ್ನು ಸೆಲೆಕ್ಟ್ ಮಾಡುತ್ತಾರೆ ಅಮ್ಮ ಹೇಳಿದ ಹುಡುಗಿಗೆ ಅಭಿಷೇಕ್ ತಾಳಿ ಕಟ್ಟಲಿದ್ದಾರೆ ಎನ್ನುವ ರೀತಿಯ ಸುದ್ದಿಗಳು ಪ್ರಚಲಿತದಲ್ಲಿದ್ದವು.

ಭಾನುವಾರ ಖಾಸಗಿ ಹೋಟೆಲ್ ಒಂದರಲ್ಲಿ ಕುಟುಂಬಸ್ಥರ ಹಾಗೂ ಸ್ನೇಹಿತರ ಆಪ್ತ ವಲಯದ ಎದುರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಈ ಎಲ್ಲಾ ಸುದ್ದಿಗಳಿಗೂ ತೆರೆ ಎಳೆದಿದ್ದಾರೆ ಅಭಿಷೇಕ್ ಅಂಬರೀಶ್ ಅವರು. ಅಭಿಷೇಕ್ ಅಂಬರೀಶ್ ಅವರು ಕೈ ಹಿಡಿದಿರುವ ಹುಡುಗಿಯ ಹೆಸರು ಅವಿವಾ ಬಿದ್ದಪ್ಪ.

ಕೊಡಗಿನ ಮೂಲದವರಾದ ಇವರ ತಂದೆ ಪ್ರಸಾದ್ ಬಿದಪ್ಪ ಈಗ ಭಾರತದ ಫ್ಯಾಷನ್ ಡಿಸೈನಿಂಗ್ ಲೋಕದಲ್ಲಿ ಗಣ್ಯ ಸ್ಥಾನದಲ್ಲಿದ್ದು ಫ್ಯಾಶನ್ ಗುರು ಎಂದೆ ಪ್ರಖ್ಯಾತಿ ಹೊಂದಿದ್ದಾರೆ. ಫ್ಯಾಷನ್ ಕೊರಿಯೋಗ್ರಾಫರ್ ಮತ್ತು ಮಾಡೆಲ್ ಆಗಿ ಹೆಸರು ಮಾಡಿರುವ ಇವರ ಪುತ್ರಿ ಅವಿಭಾ ಬಿದ್ದಪ್ಪ ಅವರನ್ನು ಅಭಿಷೇಕ್ ಅಂಬರೀಶ್ ಅವರು ಕೈ ಹಿಡಿಯುತ್ತಿದ್ದಾರೆ.

ಅವಿವಾ ಹಾಗೂ ಅಭಿಷೇಕ್ ಅವರು ಸಾಕಷ್ಟು ವರ್ಷಗಳಿಂದ ಡೇಟಿಂಗ್ ಅಲ್ಲಿ ಇದ್ದರು ಇದೀಗ ಪ್ರೀತಿಯಾಗಿ ಕುಟುಂಬಸ್ಥರ ಒಪ್ಪಿಗೆ ಪಡೆದು ಸಾಂಪ್ರದಾಯ ಬದ್ಧವಾಗಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ. ಲಂಡನ್ ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಹಿಂದಿರುಗಿರುವ ಅವಿವಾ ಅವರು ಅಪ್ಪನಂತೆ ಫ್ಯಾಶನ್ ಡಿಸೈನಿಂಗ್ ಅನ್ನು ಕೆರಿಯರ್ ಆಗಿ ಆಯ್ದುಕೊಂಡಿದ್ದಾರೆ.

ಅವಿಭಾ ಅವರು ಕೂಡ ಮಾಡೆಲ್ ಆಗಿದ್ದು ಅಲೆ ಎನ್ನುವ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ಕೂಡ ಅಭಿನಯಿಸಿದ್ದಾರೆ ಅಲ್ಲದೆ ಪ್ರಸಾದ್ ಬಿದಪ್ಪ ಅಸೋಸಿಯೇಷನ್ ನ ನಿರ್ದೇಶಕಿ ಕೂಡ ಆಗಿದ್ದಾರೆ. ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಮತ್ತು ಸಿನಿಮಾರಂಗದ ಹಲವರು ಭಾಗಿಯಾಗಿದ್ದರು.

ದರ್ಶನ್, ಯಶ್ ಮತ್ತು ರಾಧಿಕಾ ಪಂಡಿತ್, ಪ್ರಜ್ವಲ್ ದೇವರಾಜ್ ಹಾಗು ರಾಗಿಣಿ, ಗುರುಕಿರಣ್ ದಂಪತಿ, ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವಾರು ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಾಶಯ ಕೋರಿದ್ದಾರೆ. ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅವಿವಾ ಅವರು ದೇವಲೋಕದಂತೆ ಕಾಣುತ್ತಿದ್ದರು.

ಅಭಿಷೇಕ್ ಅವರು ವಜ್ರದ ಉಂಗುರವನ್ನು ಅವಿವಾ ಅವರಿಗೆ ತೊಡಿಸಿ ಮುತ್ತನಿಟ್ಟು ಬದುಕು ಪೂರ್ತಿ ಜೊತೆ ಇರುವ ಭರವಸೆಯನ್ನು ನೀಡಿದ್ದಾರೆ. ಇನ್ನು ಈಕೆಗೆ ತೊಡಿಸಿರುವ ವಜ್ರದ ಉಂಗುರದ ಮೌಲ್ಯ ಎಲ್ಲೆಡೆ ಚರ್ಚೆ ಆಗುತ್ತಿದ್ದು ಇದರ ಬೆಲೆ ಕೇಳಿದ ಕನ್ನಡದ ಜನತೆ ಶಾಕ್ ಆಗಿದ್ದಾರೆ.

ಅಭಿಷೇಕ್ ಅವರು ಅವಿವಾ ಅವರಿಗೆ ತೊಡಿಸಿರುವ ಉಂಗುರ ಅನ್ನು ಸುಮಲತಾ ಅವರ ಸೆಲೆಕ್ಟ್ ಮಾಡಿದ್ದು ಪುಣೆಯಲ್ಲಿ ಆರ್ಡರ್ ಕೊಟ್ಟು ಮಾಡಿಸಿದ್ದಾರಂತೆ. ಈ ಉಂಗುರದ ಬೆಲೆ ಬರೋಬ್ಬರಿ 37 ಲಕ್ಷಗಳಾಗಿದ್ದು ಭಾವಿ ಸೊಸೆಗೆ ಅತ್ತೆಯ ಮೊದಲ ಸೆಲೆಕ್ಷನ್ ಎಂದೇ ಹೇಳಬಹುದು.

ಈ ಜೋಡಿಯು ಮುಂದಿನ ವರ್ಷ ಹಸಿ ಮನೆ ಏರಲಿದ್ದಾರೆ. ಈಗಷ್ಟೇ ಅಭಿಷೇಕ್ ಅಂಬರೀಶ್ ಅವರ ನಟನೆಯ ಕಾಳಿ ಚಿತ್ರದ ಸೆಟ್ಟೇರಿದೆ. ಅಲ್ಲದೆ ಬ್ಯಾಡ್ ಮ್ಯಾನರ್ಸ್ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ ಮುಂದಿನ ವರ್ಷ ಅಭಿಷೇಕ್ ಬದುಕಲ್ಲಿ ವೈಯಕ್ತಿಕವಾಗಿ ಹಾಗೂ ಸಿನಿಮಾ ಬದುಕಲ್ಲಿ ಶುಭ ತರುವ ವರ್ಷ ಎಂದೇ ಹೇಳಬಹುದು.

ನಟಿ ರಮ್ಯ ವಿರುದ್ಧ ದೂರು ದಾಖಲು, ಸಂಕಷ್ಟಕ್ಕೆ ಸಿಲುಕಿದ ರಮ್ಯ

ರಮ್ಯ ನಿರ್ಮಾಣದ ಹೊಸ ಸಿನಿಮಾಗೆ ವಿಘ್ನ

ನಟಿ ರಮ್ಯ ನಿರ್ಮಾಣದ ಮೊದಲ ಸಿನಿಮಾ “ಸ್ವಾತಿ ಮುತ್ತಿನ ಮಳೆಹನಿಯೇ” ಚಿತ್ರಕ್ಕೆ ಸಂ.ಕ.ಷ್ಟ ರಮ್ಯ ವಿರುದ್ಧ ದೂರು ದಾಖಲು. ರಮ್ಯಾ ನಿರ್ಮಾಣದ ಸಿನಿಮಾಗೆ ಸಂಕಷ್ಟ, ರಕ್ಷಿತ್ ರಿಷಬ್ ನಂತರ ರಾಜ್ ಬಿ ಶೆಟ್ಟಿ ಮೇಲೂ ಹಕ್ಕು ಚ್ಯುತಿ ಆರೋಪ.

ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯ ಅವರು ಮತ್ತೆ ಸಿನಿಮಾ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡುತ್ತಿರುವುದು ಅವರ ಅಭಿಮಾನಿಗಳು ಹಾಗೂ ಇಡೀ ಚಿತ್ರರಂಗಕ್ಕೆ ಸಂತಸ ತಂದಿದೆ. ಆದರೆ ನಾಯಕಿಗೂ ಮುಂಚೆ ಈ ಬಾರಿ ಅವರು ನಿರ್ಮಾಪಕಿ ಆಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ತಮ್ಮದೇ ಆದ ಆಪಲ್ ಬಾಕ್ಸ್ ಸಂಸ್ಥೆಯನ್ನು ನಿರ್ಮಾಣ ಮಾಡಿ ಅದರ ಮೊದಲ ಸಿನಿಮಾ ಆಗಿ ಸ್ವಾತಿ ಮುತ್ತಿನ ಮಳೆ ಹನಿ ಸಿನಿಮಾ ವನ್ನು ಘೋಷಣೆ ಕೂಡ ಮಾಡಿದ್ದರು.

ನಿರ್ದೇಶನ ಜವಾಬ್ದಾರಿಯನ್ನು ರಾಜ್ ಬಿ ಶೆಟ್ಟಿ ಅವರಿಗೆ ವಹಿಸಿದ್ದರು. 45 ದಿನಗಳಲ್ಲಿ ಪೂರ್ತಿ ಚಿತ್ರೀಕರಣ ಮುಗಿಸಿ ದಾಖಲೆ ಕೂಡ ಮಾಡಿದ್ದರು ರಾಜ್ ಶೆಟ್ರು. ಇನ್ನೇನು ಮಂಜಿನ ಹನಿ ನೋಡಲು ಪ್ರೇಕ್ಷಕರು ಕೂಡ ಸಂತಸದಲ್ಲಿದ್ದರು. ಕೆಲವರು ಇದು ಶಾರ್ಟ್ ಮೂವಿ ಇರಬೇಕು ಹಾಗಾಗಿ ಇಷ್ಟು ಬೇಗ ಚಿತ್ರಿಕರಣ ಆಗಿದೆ ಎಂದು ಗೊಂದಲಕ್ಕೂ ಒಳಗಾಗಿದ್ದರು.

ಆದರೆ ಇದು ಓಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಪೂರ್ಣ ಪ್ರಮಾಣದ ಸಿನಿಮಾವೇ ಆಗಿದ್ದು ಚಿತ್ರೀಕರಣ ಮಾತ್ರ 45 ದಿನಗಳಲ್ಲಿ ಕಂಪ್ಲೀಟ್ ಆಗಿದೆ ಆದರೆ ಮುಂದುವರೆದ ಡಬ್ಬಿಂಗ್ ಹಾಗೂ ಇನ್ನಿತರ ತಾಂತ್ರಿಕ ವರ್ಗದ ಕೆಲಸಗಳು ಬಾಕಿ ಇದ್ದು ಮುಂದಿನ ವರ್ಷ ಖಂಡಿತವಾಗಿ ಪ್ರೇಕ್ಷಕರ ಎದುರು ಸಿನಿಮಾ ಬರಲಿದೆ.

ಆದರೆ ಇದೆಲ್ಲದರ ನಡುವೆ ಸಿನಿಮಾ ಟೈಟಲ್ ಮೇಲೆ ಆರಂಭವೊಂದು ಕೇಳಿ ಬಂದಿದೆ. ನೆನ್ನೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಕರ್ನಾಟಕ ಚಿತ್ರಮಂಡಳಿ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದು ಸ್ವಾತಿ ಮುತ್ತಿನ ಮಳೆ ಹನಿ ಸಿನಿಮಾ ಟೈಟಲ್ ನಮಗೆ ಸೇರಬೇಕಿದ್ದು ಇದನ್ನು ರಾಜ್ ಬಿ ಶೆಟ್ಟಿ ಅನುಮತಿ ಇಲ್ಲದೆ ಬಳಸಿದ್ದಾರೆ ಎಂದು ಹೇಳುತ್ತಿದ್ದಾರೆ.

ರಾಜೇಂದ್ರ ಸಿಂಗ್ ಬಾಬು ಅವರು ಹೇಳುತ್ತಿರುವ ಪ್ರಕಾರ ಅಂಬರೀಷ್ ಹಾಗೂ ಸುಹಾಸಿನಿ ಅವರ ಮುಖ್ಯ ಭೂಮಿಕೆಯಲ್ಲಿ ಈ ಚಿತ್ರ ಸೆಟ್ಟೇರಿತಂತೆ ಆದರೆ ಅದು ಪೂರ್ತಿಗೊಳ್ಳುವ ಮುನ್ನವೇ ಅಂಬಿ ಅವರು ಇಲ್ಲವಾದ ಕಾರಣ ಅದು ಅಲ್ಲಿಗೆ ನಿಂತಿದೆಯಂತೆ. ಆದರು ಇದರ ಸಂಪೂರ್ಣ ಹಕ್ಕು ನನಗೆ ಸೇರಿದ್ದು ಈಗಲೇ ಚಿತ್ರ ತಂಡ ಆ ಹೆಸರನ್ನು ಕೈಬಿಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ ಹಾಗೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ ಮುಂದಿನ ತೀರ್ಮಾನಗಳು ಏನಾಗಲಿದ್ಯೋ ಕಾದು ನೋಡಬೇಕಾಗಿದೆ. ಆದರೆ ನೆಟ್ಟಿಗರು ಮಾತ್ರ ಇಷ್ಟು ದಿನ ಸುಮ್ಮನಿದ್ದು ಈಗ ಚಿತ್ರ ಈ ಹಂತಕ್ಕೆ ಬಂದು ಪ್ರಚಾರ ಪಡೆದ ಮೇಲೆ ಈ ರೀತಿ ಮಾಡುತ್ತಿರುವುದು ತಪ್ಪು.

ಈಗಾಗಲೇ ಹಲವು ತಿಂಗಳಿಂದ ರಮ್ಯಾ ನಿರ್ಮಾಣದ ರಾಜ್ ಬಿ ಶೆಟ್ಟಿ ನಿರ್ದೇಶನದ ಸ್ವಾತಿಮುತ್ತಿನ ಮಳೆ ಹನಿ ಎಂದು ಸಾಕಷ್ಟು ಸುದ್ದಿಗಳು ಪ್ರಸಾರ ಆಗಿವೆ. ಕೊನೆ ಸಮಯದಲ್ಲಿ ಈ ರೀತಿ ಮಾಡುತ್ತಿರುವುದು ತಪ್ಪು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿ ಹಕ್ಕು ಚ್ಯುತಿ ಆರೋಪಗಳು ಬರುವುದು ಸರ್ವೇಸಾಮಾನ್ಯವಾಗಿ ಹೋಗಿದೆ.

ಈ ಹಿಂದೆ ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾದ ಹಾಡಿಗೂ ಕೂಡ ಲಹರಿ ಆಡಿಯೋ ಸಂಸ್ಥೆಯಿಂದ ಈ ಆರೋಪ ಬಂದಿತ್ತು. ಈಗ ವಿಶ್ವ ದಾಖಲೆ ಮಾಡಿರುವ ಕಾಂತರಾ ಸಿನಿಮಾದ ವರಾಹ ರೂಪಂ ಹಾಡು ಕೂಡ ಈ ರೀತಿ ಕಾಪಿ ರೈಟ್ಸ್ ಉಲ್ಲಂಘನೆಯ ಆರೋಪ ಹೊಂದಿತ್ತು. ಈಗ ಕರ್ನಾಟಕದ ತ್ರಿಬಲ್ ಆರ್ ಬಳಗದ ರಾಜ್ ಶೆಟ್ಟಿ ಅವರ ನಿಮ್ಮ ಮೇಲು ಸಹ ಆರೋಪ ಬಂದಿದೆ. ಎಲ್ಲವೂ ನಿರಾತಂಕವಾಗಿ ಕಳೆದು ಆದಷ್ಟು ಬೇಗ ಸಿನಿಮಾ ಪ್ರೇಕ್ಷಕರಿಗೆ ಸಿಗಲಿ ಎನ್ನುವುದಷ್ಟೇ ಕನ್ನಡಿಗರ ಆಶಯ.

ಶುಭಸುದ್ದಿ ಹಂಚಿಕೊಂಡ ನಟ ರಾಮ್ ಚರಣ್ & ಉಪಾಸನಾ, ನೂರಾರು ಪ್ರಶ್ನೆಗಳಿಗೆ ಕೊನೆಗೂ ಉತ್ತರ ಕೊಟ್ಟ ದಂಪತಿಗಳು.

ಎಲ್ಲಾ ಸಂಕಷ್ಟಗಳನ್ನು ಮೆಟ್ಟಿನಿಂತ ಜೋಡಿ

ಚಿರಂಜೀವಿ ಕುಟುಂಬಕ್ಕೆ ಹೊಸ ಅತಿಥಿ ಆಗಮನ, ತಾತ ಆಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮೆಗಾಸ್ಟಾರ್

ಮೆಗಾಸ್ಟಾರ್ ಚಿರಂಜೀವಿ ಅವರು ಇಂದು ತಾವು ಮತ್ತೊಮ್ಮೆ ತಾತ ಆಗುತ್ತಿರುವ ಸಂತಸದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ವೀರಯ್ಯ ವಲ್ತೇರು ಸಿನಿಮಾದ ಸಾಂಗ್ ಶೂಟಿಂಗ್ ಆಗಿ ವಿದೇಶದಲ್ಲಿ ಇರುವ ಚಿರಂಜೀವಿ ಅವರು ಅಲ್ಲಿಂದಲೇ ಈ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದು ಈಗ ಮೆಗಾಸ್ಟಾರ್ ಮನೆಯಲ್ಲಿ ಖುಷಿಯ ವಾತಾವರಣ ನಿರ್ಮಾಣ ಆಗಿದೆ.

ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮಚರಣ್ ತೇಜ ಅವರು ಉಪಾಸನ ಎನ್ನುವವರನ್ನು ಮದುವೆ ಆಗಿ ಹತ್ತು ವರ್ಷಗಳು ಆಗಿತ್ತು. ಈಗ ಕಳೆದ ಐದು ತಿಂಗಳ ಹಿಂದೆ ಅಷ್ಟೇ ಹತ್ತನೇ ವರ್ಷದ ವಾರ್ಷಿಕೋತ್ಸವವನ್ನು ಕೂಡ ವಿದೇಶದಲ್ಲಿ ಬಹಳ ಗ್ರಾಂಡ್ ಆಗಿ ಆಚರಿಸಿಕೊಂಡಿದ್ದರು.

ಆದರೆ ಅವರಿಗೆ ಇನ್ನೂ ಮಕ್ಕಳಿಲ್ಲ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಚರ್ಚೆ ಆಗುತ್ತಿತ್ತು. ಉಪಾಸನ ಹಾಗೂ ರಾಮ್ ಚರಣ್ ಅವರು ಯಾವುದೇ ಸಂದರ್ಶನ ಎದುರಿಸಿದರು ಕೂಡ ಅಲ್ಲಿ ಈ ಕುರಿತಾದ ಪ್ರಶ್ನೆ ಬರುತ್ತಲೇ ಇತ್ತು. ಎಷ್ಟೋ ಬಾರಿ ರಾಮ್ ಚರಣ್ ತೇಜ ಅವರೇ ಮೌನವಾಗಿ ಸುಮ್ಮನಿದ್ದರೂ ಉಪಾಸನ ಮಾತ್ರ ಕೊನೆ ಕೊನೆಯಲ್ಲಿ ಖಾರವಾಗಿಯೇ ಉತ್ತರಿಸುತ್ತಿದ್ದರು.

ಮಕ್ಕಳನ್ನು ಹಡೆಯುವುದು ನನ್ನ ಪರ್ಸನಲ್ ವಿಷಯ ಈಗ ನಾನು ಏನೇ ಮಾತನಾಡಿದರು ವಿವಾದ ಆಗುತ್ತದೆ ಎಂದು ನನಗೆ ಗೊತ್ತಿದೆ. ಹಾಗೆ ನನ್ನ ಫೇರ್ ಲೈನ್ ಮೀರಿ ನಾನು ಯಾವ ಪ್ರಶ್ನೆಗಳಿಗೂ ಉತ್ತರಿಸಬೇಕಾದ ಅವಶ್ಯಕತೆ ಇಲ್ಲ. ಸಮಯ ಬಂದಾಗ ನಾನು ಎಲ್ಲವನ್ನು ಹೇಳುತ್ತೇನೆ ಎಂದು ತಿರುಗೇಟು ನೀಡುತ್ತಿದ್ದರು. ಇದೀಗ ಉಪಸನ ಹಾಗೂ ರಾಮ್ ಚರಣ್ ತೇಜ್ ಅವರು ಸಿಹಿ ಸುದ್ದಿ ಹೇಳಿರುವುದು ಎಲ್ಲರ ಪ್ರಶ್ನೆಗಳಿಗೆ ತೆರೆ ಬಿದ್ದಂತಾಗಿದೆ.

ಈ ವಿಷಯ ಕೇಳಿ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಅವರ ಅಭಿಮಾನಿಗಳು ಬಹಳ ಸಂತಸ ಪಟ್ಟಿದ್ದಾರೆ. ಉಪಾಸನ ಅವರು ಈ ಹಿಂದೆ ಸದ್ಗುರು ಬಳಿ ಸಂದರ್ಶನದಲ್ಲಿ ಕೂಡ ಇದೇ ವಿಷಯದ ಬಗ್ಗೆ ಪ್ರಶ್ನೆ ಕೇಳಿದ್ದರು. ನಾನು ಸಂತೋಷವಾಗಿಯೇ ನನ್ನ ಕುಟುಂಬದಲ್ಲಿ ಇದ್ದೇನೆ ಆದರೂ ಕೂಡ ಜನ ನನ್ನ ರಿಲೇಶನ್ಶಿಪ್ ಬಗ್ಗೆ ರಿಪ್ರೊಡ್ಯೂಸ್ ಬಗ್ಗೆ ರೂಲ್ ಆಫ್ ಲೈಫ್ ಬಗ್ಗೆ ಪ್ರಶ್ನೆ ಮಾಡುತ್ತಾರೆ.

ಇದರಿಂದ ನನಗೆ ಸಾಕಾಗಿದೆ ಎಂದು ತಮ್ಮ ಸಂಕಟವನ್ನು ತೋಡಿಕೊಂಡಿದ್ದರು. ಆ ವೇಳೆ ಸದ್ಗುರು ಭಾರತ ದೇಶದಲ್ಲಿ ಮಕ್ಕಳು ಹೆರುವ ಶಕ್ತಿ ಇದ್ದು ಕೂಡ ಮಕ್ಕಳನ್ನು ಹೆರದ ಹೆಣ್ಣು ಮಕ್ಕಳ ಬಗ್ಗೆ ನನಗೆ ವಿಶೇಷ ಗೌರವ ಇದೆ ಖಂಡಿತವಾಗಿ ಅಂತವರು ಸನ್ಮಾನಕ್ಕೆ ಭಾದ್ಯರು ಎಂದು ಹೇಳಿದ್ದರು ಇದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಕೂಡ ಆಗಿತ್ತು.

ಉಪಾಸನ ಆ ರೀತಿ ಮನಸ್ಥಿತಿಯ ಎಲ್ಲಾ ಹೆಣ್ಣುಮಕ್ಕಳ ಪರವಾಗಿ ಪ್ರಶ್ನೆ ಕೇಳಿದ್ದರೂ ಮತ್ತು ಸದ್ಗುರು ಅವರ ಸಹ ಅದಕ್ಕೆ ಸರಿಯಾದ ಉತ್ತರ ಹೇಳಿದ್ದರು. ಆ ಸಂದರ್ಶನ ಆದಮೇಲೆ ಉಪಾಸನ ಅವರು ಮಕ್ಕಳನ್ನು ಹೆರದೇ ಹಾಗೇ ಇರುವ ನಿರ್ಧಾರವನು ಮಾಡಿಬಿಟ್ಟಿದ್ದಾರೆ ಎನ್ನುವ ಅನುಮಾನ ಕೂಡ ಇತ್ತು. ಇದೀಗ ಅಫಿಶಿಯಲ್ ಆಗಿ ಉಪಾಸನ ಹಾಗೂ ರಾಮ್ ಚರಣ್ ಅವರೇ ತಾವಿಬ್ಬರು ತಂದೆ ತಾಯಿ ಆಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.

ತ್ರಿಬಲ್ ಆರ್ ಸಕ್ಸಸ್ ಇಂದ ಹೊರಬಂದ ರಾಮ್ ಚರಣ್ ಅವರು ಶಂಕರ್ ನಿರ್ದೇಶನದ ಸಿನಿಮಾ ಒಂದರಲ್ಲಿ ಈಗ ಅಭಿನಯಿಸುತ್ತಿದ್ದಾರೆ. ಅದರ ಸಲುವಾಗಿ ನ್ಯೂಜಿಲೆಂಡ್ ಗೆ ತೆರಳಿದ್ದಾರೆ ಅವರ ಮುಂದಿನ ಸಿನಿಮಾಗಳಿಗೆ ಶುಭವಾಗಲಿ ಹಾಗೂ ಶೀಘ್ರದಲ್ಲಿಯೇ ಸುಗಮವಾಗಿ ಜೂನಿಯರ್ ರಾಮ್ ಚರಣ್ ಅಥವಾ ಜೂನಿಯರ್ ಉಪಾಸನ ಅವರನ್ನು ಪಡೆಯಲಿ ಎಂದು ಹರಸೋಣ.