Home Blog Page 265

ಮಿಣಿ ಮಿಣಿ ಮೀನಾಕ್ಷಿ, ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಅವತಾರ ನೋಡಿ ನಕ್ಕು ನಕ್ಕು ಸುಸ್ತಾದ ಅಭಿಮಾನಿಗಳು, ಮದುವೆ ಆಗಲು ಹುಡುಗ ಬೇಕಂತೆ, ಈ ಫನ್ನಿ ವಿಡಿಯೋ ನೋಡಿ

ಮಿಣಿ ಮಿಣಿ ಮೀನಾಕ್ಷಿ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು

ಬಿಗ್ ಬಾಸ್ ಮನೆಯಲ್ಲಿ ದಿನದಿನಕ್ಕೆ ಮನರಂಜನೆ ಹಾಗೂ ಕಾಂಪಿಟೇಶನ್ ಜೋರಾಗುತ್ತಿದೆ. ಎಲ್ಲಾ ಸ್ಪರ್ಧಿಗಳು ಸಹ ಒಬ್ಬರಿಗಿಂತ ಒಬ್ಬರು ಮನೆಯಲ್ಲಿ ಉಳಿದುಕೊಳ್ಳಲು ತಮ್ಮಂದ ಆದಷ್ಟು ಶ್ರಮ ಹಾಕುತ್ತಿದ್ದಾರೆ. ಮನೋರಂಜನೆ ವಿಚಾರದಲ್ಲಂತೂ ಇಡೀ ಮನೆಗೆ ಮನೆಯೇ ಎಲ್ಲರನ್ನು ಎಂಟರ್ಟೈನ್ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುತ್ತದೆ.

ಆರ್ಯವರ್ಧನ್, ಅರುಣ್ ಸಾಗರ್, ರೂಪೇಶ್ ಶೆಟ್ಟಿ ಹಾಗೂ ರೂಪೇಶ್ ರಾಜಣ್ಣ ಅತಿ ಹೆಚ್ಚು ಮನರಂಜನೆ ನೀಡುವ ವ್ಯಕ್ತಿಗಳು ಎಂದು ಬಿಗ್ ಬಾಸ್ ಪ್ರೇಕ್ಷಕರೇ ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಜನಹೆಚ್ಚು ಮಾತನಾಡುತ್ತಿದ್ದು ಅವರ ಮುಗ್ಧತೆ ಹಾಗೂ ಮಾತುಕತೆಗಳು ಪಂಚಿಂಗ್ ಲೈನ್ ಗಳು ಹಾಗೂ ಕಾಮಿಡಿ ಸೀನ್ಸ್ ಮನೋರಂಜನೆ ಮಹಾಪೂರವನ್ನು ಹರಿಸುತ್ತದೆ ಎಂದು ಹಾಡಿ ಹೊಗಳುತ್ತಿದ್ದಾರೆ.

ಇದೀಗ ಮಹಿಳಾ ಕಂಟೆಸ್ಟೆಂಟ್ ಒಬ್ಬರು ಅದೇ ಸಾಲು ಸೇರುತ್ತಿದ್ದು ಈಗ ಹೊಸ ಅವತಾರದಲ್ಲಿ ಅವರನ್ನು ನೋಡಿ ಪ್ರೇಕ್ಷಕರು ಹಾಗೂ ಮನೆಯಲ್ಲಿದ್ದ ಎಲ್ಲರೂ ಆಶ್ಚರ್ಯ ಹಾಗೂ ಗಾಬರಿಗೊಂಡಿದ್ದಾರೆ. ಈ ಬಾರಿ ಪ್ರವೀಣರ ಪಟ್ಟಿಯಿಂದ ಮನೆ ಸೇರಿದ್ದ ದೀಪಿಕ ದಾಸ್ ಅವರು ತಮ್ಮ ವ್ಯಕ್ತಿತ್ವವನ್ನು ಹಾಗೆ ಉಳಿಸಿಕೊಂಡಿದ್ದರು.

ಕಳೆದ ಸೀಸನ್ ನಲ್ಲಿ ಹೇಗಿದ್ದರೋ ಹಾಗೆ ಈ ಸೀಸನ್ ನಲ್ಲಿ ಸಹ ಅವಶ್ಯಕತೆಗೆ ತಕ್ಕ ಅಷ್ಟೇ ಮಾತು, ವಿವಾದಗಳಾದಾಗ ರಿಸಲ್ಟ್ ಏನೇ ಆದರೂ ನೇರ ಉತ್ತರ, ಟಾಸ್ಕ್ ಗಳಲ್ಲಿ ಅತ್ಯುತ್ತಮ ಪಾಲ್ಗೊಳ್ಳುವಿಕೆ ಹೀಗೆ ಖಡಕ್ ಆಗಿ ಇದ್ದವರು. ಹೆಚ್ಚಾಗಿ ಯಾರೊಂದಿಗೂ ಕೂಡ ಅತಿ ಸಲಿಗೆ ಬಳಸಿಕೊಳ್ಳದ ಇವರು ಎಲ್ಲರ ಜೊತೆ ಒಂದು ಡಿಸ್ಟೆನ್ಸ್ ಮೇಂಟೆನ್ ಮಾಡುತ್ತಿದ್ದರು.

ಆದರೆ ನೆನ್ನೆ ಇವರ ಫರ್ಫಾರ್ಮೆಸ್ ನೋಡಿ ಎಲ್ಲರೂ ನಿಜಕ್ಕೂ ಇದು ದೀಪಿಕಾ ದಾಸ್ ಅವರ ಎಂದು ಅನುಮಾನ ಪಟ್ಟಿದ್ದಾರೆ. ಮನೋರಂಜನೆ ವಿಚಾರದಲ್ಲಿ ದೀಪಿಕಾ ಸ್ವಲ್ಪ ಡಲ್ ಎಂದೆ ಎಲ್ಲರೂ ಭಾವಿಸಿದ್ದರು. ಇದೀಗ ಅರುಣ್ ಸಾಗರ್ ಅವರ ಜೊತೆ ಮಿಣಿ ಮಿಣಿ ಮೀನಾಕ್ಷಿ ಎನ್ನುವ ಅವತಾರ ತೊಟ್ಟಿದ್ದ ದೀಪಿಕಾ ದಾಸ್ ಅವರು ಗುರುತು ಸಿಗದ ರೀತಿ ಹಳ್ಳಿ ಹುಡುಗಿಯ ಮೇಕಪ್ ಮಾಡಿಕೊಂಡಿದ್ದರು.

ಅವರ ಈ ಮೇಕಪ್ ಗೆ ಅರುಣ್ ಸಾಗರ್ ಅವರು ಸಹ ಕೈಜೋಡಿಸಿ ಸಹಾಯ ಮಾಡಿದ್ದು ಅವರಿಗೆ ಮಿಣಿ ಮಿಣಿ ಮೀನಾಕ್ಷಿ ಎಂದು ನಾಮಕರಣ ಕೂಡ ಮಾಡಿದರು. ಅರುಣ್ ಸಾಗರ್ ಮಿಣಿ ಮಿಣಿ ಮೀನಾಕ್ಷಿ ನನ್ನ ತಂಗಿ ಮದುವೆ ಆಗಲು ಹುಡುಗ ಹುಡುಕುತ್ತಿದ್ದೇವೆ ಎಂದು ಮನೆ ಪೂರ್ತಿ ಹೇಳಿಕೊಂಡು ಓಡಾಡಿದ್ದಾರೆ. ಅಲ್ಲದೆ ಯಾರಾದರೂ ಮದುವೆ ಆಗಬೇಕು ಅನ್ನಿಸಿದರೆ ಸಂಪರ್ಕಿಸಬೇಕು ಎಂದು ಕೇಳಿದ್ದಾರೆ.

ದೀಪಿಕಾ ದಾಸ್ ಅವರನ್ನು ನೋಡಿ ಎಲ್ಲರೂ ಸಹ ಶಾಕ್ ಆಗಿದ್ದು ಮೊದಲಿಗೆ ಯಾರು ಯಾರು ಎಂದು ಅವರೇ ಕನ್ಫ್ಯೂಸ್ ಆಗಿದ್ದಾರೆ. ಎಲ್ಲರೂ ಸಹ ಮದುವೆ ಆಗುತ್ತೇವೆ ಎಂದು ಮುಂದೆ ಬಂದಿದ್ದಾರೆ ಅವರಿಗೆ ದೀಪಿಕಾ ಅವರು ಕೆಲವು ಪ್ರಶ್ನೆಗಳನ್ನು ಸಹ ಕೇಳಿದ್ದಾರೆ. ಆರ್ಯವರ್ಧನ್ ಅವರ ದೊಡ್ಡ ಚಿನ್ನದ ಸರ ನೋಡಿ ಅಣ್ಣಯ್ಯನಿಗೆ ಅದನ್ನು ಕೊಡ್ತಾರಾ ಕೇಳಿ ಎಂದು ಹೇಳುತ್ತಾರೆ. ಅದನ್ನು ಕೇಳಿಸಿಕೊಂಡ ಆರ್ಯವರ್ಧನ್ ಬರೀ ಚಿನ್ನ ಏನು ನಿನಗಾಗಿ ಮನಸೇ ಕೊಡುತ್ತೇನೆ ಎಂದು ಕೇಳಿದ್ದಾರೆ.

ನಿಜಕ್ಕೂ ನೆನ್ನೆ ದೀಪಿಕಾ ದಾಸ್ ಅವರ ಹಾವಭಾವ ಮಾತು ವೇಷಭೂಷಣ ಎಲ್ಲವೂ ವಿಭಿನ್ನವಾಗಿ ಇದ್ದಿದ್ದಲ್ಲದೆ ಸಾಕಷ್ಟು ಜನರ ಮೆಚ್ಚುಗೆಗೂ ಪಾತ್ರವಾಗಿದೆ ಹೊರಗಡೆ ಜನ ಸಹ ದೀಪಿಕಾ ಅವರಿಗೆ ಈಗ ಸರಿಯಾಗಿ ಬಿಗ್ ಬಾಸ್ ಅರ್ಥ ಆಗಿದೆ ಅನಿಸುತ್ತದೆ ಎಂದು ಮಾತನಾಡುವುದಲ್ಲದೆ ಇದೇ ರೀತಿ ಇದ್ದರೆ ಈ ಬಾರಿ ದೀಪಿಕಾ ಅವರೇ ವಿನ್ನರ್ ಎಂದು ಸಹ ಭವಿಷ್ಯ ಹೇಳುತ್ತಿದ್ದಾರೆ.

ದೀಪಿಕಾ ಮತ್ತು ಶಾರುಖ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ಧ ಸಿಡಿದೆದ್ದ ನಟ ಚೇತನ್ ಅಹಿಂಸ, ಬಹಿರಂಗವಾಗಿ ಬೇಷ್ ರಮ್ ಹಾಡಿಗೆ ಬೆಂಬಲ ನೀಡಿದ ಚೇತನ್

ದೀಪಿಕಾ ಕೇಸರಿ ಬಿಕಿನಿ ವಿವಾದ, ಅಖಾಡಕ್ಕಿಳಿದ ನಟ ಚೇತನ್.

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ದೊಡ್ಡ ಬ್ರೇಕ್ ನಂತರ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ ಈವರೆಗೆ ಯಾರಿಗೂ ಸಹ ರಹಸ್ಯ ಬಿಟ್ಟುಕೊಡದೆ ಚಿತ್ರೀಕರಣ ಚಾಲು ಮಾಡಿದ್ದ ಚಿತ್ರತಂಡ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಪಟಾಣ್ ಎನ್ನುವುದು ಸಿನಿಮಾ ಹೆಸರಾಗಿದ್ದು, ಹಾಡು ಬಿಡುಗಡೆ ಆಗುವುದರ ಕುರಿತು ಶಾರುಖ್ ಖಾನ್ ಅವರೇ ಟ್ವೀಟ್ ಮಾಡಿ ಅಭಿಮಾನಿಗಳ ಜೊತೆ ವಿಷಯ ಹಂಚಿಕೊಂಡಿದ್ದರು.

ಅವರು ಟ್ವೀಟ್ ಮಾಡಿದ್ದ ಕ್ಷಣಗಳಿಗೆ ಇಂದ ಇಲ್ಲಿಯವರೆಗೆ ಯೂಟ್ಯೂಬ್ ಅಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ. ಕಡಲ ತೀರದಲ್ಲಿ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಅವರು ರೊಮಾಂಟಿಕ್ ಆಗಿ ಈ ಮೆಲೋಡಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಆ ಹಾಡಿನಲ್ಲಿ ದೀಪಿಕಾ ಧರಿಸಿರುವ ಕಾಸ್ಟ್ಯೂಮ್ ಬಾರಿ ಚರ್ಚೆ ಆಗುತ್ತಿದ್ದು ಅದು ಬೇರೆ ಅರ್ಥವನ್ನು ಪಡೆದುಕೊಳ್ಳುತ್ತಿದೆ.

ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಉಡುಗೆ ಹಾಗೂ ಬಿಕಿನಿ ತೊಟ್ಟಿದ್ದಾರೆ ಮತ್ತು ನಟ ಶಾರುಖ್ ಖಾನ್ ಅವರು ಹಸಿರು ಬಣ್ಣದ ಶರ್ಟ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡು ರಿಲೀಸ್ ಆದಾಗ ಮೊದಲು ಎಲ್ಲರೂ ದೀಪಿಕಾ ಅವರು ಈ ಹಾಡಿನಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮದುವೆಗೂ ಮುನ್ನ ಚಿತ್ರಗಳೇ ಪರವಾಗಿಲ್ಲ ಈಗಂತೂ ತುಂಬಾ ಎಕ್ಪೋಸ್ ಮಾಡುತ್ತಿದ್ದಾರೆ ಎಂದು ಮಾತನಾಡುತ್ತಿದ್ದರು.

ಈ ಹಾಡಿನ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಕಾರ್ಯಕರ್ತರು ದೀಪಿಕಾ ಅವರ ಮೇಲೆ ತಿರುಗಿ ಬಿದ್ದಿದ್ದಾರೆ ಅಲ್ಲದೆ ಈ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂದು ಹಠಕ್ಕೆ ಬಿದ್ದು ಈ ಬಗ್ಗೆ ಒತ್ತಡ ಹೇಳುತ್ತಿದ್ದಾರೆ. ಈ ಹಿಂದೆ ದೀಪಿಕಾ ಜೆಎನ್ಯು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿಷಯ ಇಟ್ಟುಕೊಂಡು ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡ ಮಾಡಲಾಗುತ್ತಿದೆ.

ರಿಲೀಸ್ ಆಗಿರುವ ಈ ಹಾಡಿನಲ್ಲಿ ದೀಪಿಕಾ ಹಾಕಿರುವ ಬಿಕನಿ ಕೇಸರಿ ಬಣ್ಣದ್ದಾಗಿದೆ. ಅದು ಇಷ್ಟೆಲ್ಲ ಅನರ್ಥಗಳಿಗೆ ಕಾರಣ ಆಗಿದೆ ಆದರೆ ಈ ವಿವಾದದ ಬಗ್ಗೆ ಸಾಕಷ್ಟು ಜನ ಪರ ಮತ್ತು ವಿರೋಧವಾಗಿ ಮಾತನಾಡುತ್ತಿದ್ದಾರೆ ಕರ್ನಾಟಕದಲ್ಲಿ ಸಹ ಈ ಬಗ್ಗೆ ಮಾತುಕತೆ ಜೋರಾಗಿದ್ದು ಈಗ ದೀಪಿಕಾ ಪಡುಕೋಣೆ ಪರವಾಗಿ ವಿವಾದಿತ ನಟ ಎನ್ನುವ ಖ್ಯಾತಿಗೆ ಗುರಿ ಆಗಿರುವ ಚೇತನ್ ಅಹಿಂಸ ಬ್ಯಾಟ್ ಬೀಸಿದ್ದಾರೆ.

ಪಟಾಣ್ ಚಿತ್ರದ ಹಾಡು ಕೇಸರಿ ಹಾಗೂ ಹಸಿರು ಬಣ್ಣದ ಕಾರಣದಿಂದ ರಾಜಕೀಯಗೊಳ್ಳುತ್ತಿದೆ, ಬಟ್ಟೆಯ ಬಣ್ಣದ ಕಾರಣಕ್ಕಾಗಿ ಅವರ ವ್ಯಕ್ತಿತ್ವವನ್ನು ಗುರುತಿಸುವುದು ತೀರ ಚಿಕ್ಕಮಟ್ಟದ್ದು. ಬುದ್ಧ ಹಾಗೂ ಬಸವಣ್ಣವರ ಕೇಸರಿ ಬಣ್ಣವನ್ನು ಹಿಂದುತ್ವ ತನ್ನದು ಎಂದು ಹೇಳಿಕೊಳ್ಳುತ್ತಿದೆ ಪ್ರಕೃತಿ ಹಾಗೂ ರೈತರ ಬಣ್ಣವಾದ ಹಸಿರು ಇಸ್ಲಾಂ ಧರ್ಮದ್ದು ಎಂದು ಗುರುತಿಸುತ್ತಾರೆ.

 

ಈ ಹಾಡಿನ ವಿವಾದವು ಬೇಕೆಂದಲೆ ಮಾಡಲಾಗಿದೆ ಇದರಲ್ಲಿ ವಿವಾದ ಮಾಡುವಂತಹ ವಿಷಯವೇನು ಇಲ್ಲ ಎಂದು ಹೇಳಿದ್ದಾರೆ ಈ ಬಗ್ಗೆ ದೀಪಿಕ ವಿರೋಧವಾಗಿ ಕೂಡ ಕನ್ನಡದ ಸೆಲೆಬ್ರಿಟಿಗಳು ಮಾತನಾಡುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಈಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಪ್ರಶಾಂತ್ ಸಂಬರ್ಗಿಯವರು ಸಹ ಮಾತನಾಡಿದ್ದು ದೀಪಿಕಾ ಪಡುಕೋಣೆ ಅವರು ಹಲವು ವರ್ಷಗಳಿಂದ ಬಾಲಿವುಡ್ ಚಿತ್ರೋದ್ಯಮ ಈ ರೀತಿ ಹಿಂದು ಭಾವನೆಗಳಿಗೆ ಧಕ್ಕೆ ಆಗುವ ರೀತಿ ನಡೆದುಕೊಳ್ಳುತ್ತಿದೆ.

ಅವರ ಮದುವೆಗಳನ್ನು ನೋಡಿದರೆ ಲವ್ ಜಿಹಾದ್ ಇರಬಹುದಾ ಎನ್ನುವ ಅನುಮಾನಗಳು ಸಹ ಮೂಡುತ್ತವೆ ಸಿನಿಮಾದಲ್ಲಿ ಬೇಕೆಂತಲೇ ದೀಪಿಕಾ ಅವರಿಗೆ ಈ ಬಣ್ಣದ ಬಿಕಿನಿ ಹಾಕಿಸಿರಬಹುದು ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಶಾರುಕ್ ಮತ್ತು ದೀಪಿಕಾ ಅಭಿನಯದ ಪಠಾಣ್ ಸಿನಿಮಾ ಬೇಷರಮ್ ಹಾಡಿಗೆ ಬೆಂಬಲ ನೀಡಿದ ಪ್ರಕಾಶ್ ರಾಜ್, ಇದನ್ನಲ್ಲ ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು, ಈ ಹಾಡಿನಲ್ಲಿ ಅ-ಶ್ಲೀ-ಲ ದೃಶ್ಯ ಎಲ್ಲಿದೆ.?

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕಾಶ್ ರೈ

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರಕಾಶ್ ರೈ ಮತ್ತೊಮ್ಮೆ ಕನ್ನಡಿಗರ ಮತ್ತು ಹಿಂದುಗಳ ಕೆಂಗಣ್ಣಿಗೆ ಗುರಿಯದ ನಟ ಬಾಲಿವುಡ್ ಸಿನಿಮಾ ಗೆಲ್ಲಿಸುವುದಕ್ಕೆ ಹೋಗಿ ಹಿಂದೂ ಧರ್ಮವನ್ನು ಮರೆಯುತ್ತಿದ್ದಾರ ಪ್ರಕಾಶ್ ರೈ.?

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೊಣೆ ಅಭಿನಯದ ಪಠಣ್ ಸಿನಿಮಾದ ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿ ಸಿನಿಮಾದಲ್ಲಿ “ಬೇಷ್ ರಮ್ ರಂಗ್” ಎಂಬ ಹಾಡನ್ನು ಕೂಡ ಇದೀಗ ಚಿತ್ರೀಕರಣ ಮಾಡಲಾಗಿದ್ದು. ಈ ಹಾಡಿನ ಕೆಲವೊಂದಷ್ಟು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಇದನ್ನು ನೋಡಿದಂತಹ ಹಿಂದೂ ಪರವಾದಿಗಳು ಹಾಗೂ ಕೆಲವು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಏಕೆಂದರೆ ಈ ಹಾಡಿನಲ್ಲಿ ದೀಪಿಕಾ ಪಡುಕೋಣೆಯವರು ಸಿಕ್ಕಾಪಟ್ಟೆ ಗ್ಲಾಮರಾಗಿ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಕೇಸರಿ ಬಣ್ಣದ ಬಿಕಿನಿಯನ್ನು ಹಾಕಿಕೊಂಡಿದ್ದರೆ. ಇದು ಹಿಂದೂ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಿದೆ ಎಂದು ಕೆಲವು ಅಭಿಮಾನಿಗಳು ಮತ್ತು ಹಿಂದೂ ಪರ ಹೋರಾಟಗಾರರು ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಕ್ರಾಂತಿಯನ್ನು ಎಬ್ಬಿಸುತ್ತಿದ್ದಾರೆ.

ಇದರ ನಡುವೆ ಮಧ್ಯಪ್ರದೇಶದ ಸಚಿವರೊಬ್ಬರು ಕೂಡ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುವುದಿಲ್ಲ ಬಾಯ್ಕಟ್ ಮಾಡಬೇಕು ಎಂದು ಹೇಳಿದ್ದಾರೆ. ಒಂದರ ಹಿಂದೆ ಮತ್ತೊಂದರಂತೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನ ವಿರುದ್ಧ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಇದರ ನಡುವೆಯೇ ಪ್ರಕಾಶ್ ರಾಜ್ ಅವರು ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಅವರ ಬೆಂಬಲವಾಗಿ ನಿಂತಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಹೌದು ಪ್ರಕಾಶ್ ರಾಜ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಸಿನಿಮಾದ ಹಾಡಿನ ಬಗ್ಗೆ ದೀರ್ಘ ಬರಹಗಳನ್ನು ಬರೆದುಕೊಂಡಿದ್ದಾರೆ ಅಷ್ಟಕ್ಕೂ ಪ್ರಕಾಶ್ ರಾಜ್ ಬರೆದುಕೊಂಡಿದ್ದಾದರೂ ಏನು ಎಂಬುದನ್ನು ನೋಡುವುದಾದರೆ. “ಈ ಚಿತ್ರವನ್ನು ಮಧ್ಯಪ್ರದೇಶದ ಗೃಹ ಸಚಿವ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು ಅವರ ನಿರ್ಧಾರ ಅಸಹ್ಯಕರ ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ”.

ಈ ಹಾಡಿನ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವವರಿಗೆ ಮತ್ತು ಶಾರೂಖ್ ಖಾನ್ ಅವರ ಪ್ರತಿಕೃತಿಯನ್ನು ದಹಿಸವವರನ್ನು ನಾಚಿಕೆ ಇಲ್ಲದ ಮತಾಂಧರು ಎಂದಿರುವ ಪ್ರಕಾಶ್ ರೈ “ಕೇಸರಿ ಬಣ್ಣದವರು ರೇ-ಪಿ-ಸ್ಟ್‌ಗಳಿಗೆ ಮಾಲೆ ಹಾಕುತ್ತಾರೆ. ದ್ವೇಷದ ಮಾತುಗಳನ್ನಾಡುತ್ತಾರೆ ಕೇಸರಿ ಬಣ್ಣ ತೊಟ್ಟವರು ಮೈನರ್‌ಗಳನ್ನು ರೇ-ಪ್ ಮಾಡುತ್ತಾರೆ . ಆದರೆ ಚಿತ್ರದಲ್ಲಿ ಕೇಸರಿ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ಮೊದಲಿನಲ್ಲ ಪ್ರಕಾಶ್ ರೈ ಅವರು ಈ ರೀತಿಯ ವಿಚಾರಗಳಿಗೆ ತಲೆ ಹಾಕಿರುವುದು ಇದಕ್ಕಿಂತ ಹಿಂದೆ ಸಾಕಷ್ಟು ಬಾರಿ ಹಿಂದುಗಳ ಭಾವನೆಗೆ ಧಕ್ಕೆ ತರುವಂತ ಕೆಲಸವನ್ನೇ ಮಾಡಿದ್ದಾರೆ. ಈ ಬಾರಿಯೂ ಕೂಡ ಬಾಲಿವುಡ್ ಸಿನಿಮಾ ಗೆ ಸಪೋರ್ಟ್ ಮಾಡಲು ಹೋಗಿ ನಮ್ಮ ಧರ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಅಂತ ಕಾಣಿಸುತ್ತದೆ.

ಅದೇನೇ ಆಗಲಿ ಸದ್ಯಕ್ಕೆ ಪಠಣ್ ಸಿನಿಮಾದ ವಿರುದ್ಧ ಆ.ಕ್ರೋ.ಶ ವ್ಯಕ್ತ ಪಡಿಸುತ್ತಿದ್ದಂತಹ ಅಭಿಮಾನಿಗಳು ಇದೀಗ ಪ್ರಕಾಶ್ ರೈ ಅವರ ವಿರುದ್ಧವೂ ಕೂಡ ಆ.ಕ್ರೋ.ಶ.ವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ ಹಾಗೂ ಈ ಸಿನಿಮಾದ ಹಾಡು ಮತ್ತು ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂಬುದು ನಿಮ್ಮ ಉದ್ದೇಶವಾಗಿದ್ದರೆ ತಪ್ಪದೆ ಬಾಯ್ಕಟ್ ಪಠಾಣ್ ಎಂದು ಕಮೆಂಟ್ ಮಾಡಿ.

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗ ಮತ್ತೊಂದು ತಾರಾ ಜೋಡಿ, ಫೋಟೋಶೂಟ್ ಮಾಡಿಸುವ ಮೂಲಕ ಅಭಿಮಾನಿಗಳಿಗೆ ಶುಭಸುದ್ದಿ ಕೊಟ್ಟ ನಟಿ ಚಂದನ ಮತ್ತು ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್

ವಾಸುಕಿ ವೈಭವ್ ಚಂದನ ರಾಮಕೃಷ್ಣ ಫೋಟೋಶೂಟ್

ವಾಸುಕಿ ವೈಭವ್ ಎನ್ನುವ ಅಪ್ಪಟ ಕನ್ನಡದ ಪ್ರತಿಭೆ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ಗಾಯಕನೂ ಹೌದು, ನಟನು ಹೌದು ಮತ್ತು ಸಂಗೀತ ನಿರ್ದೇಶಕನು ಹೌದು. ವಾಸುಕಿ ವೈಭವ್ ಅವರು ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಇಡೀ ಕರ್ನಾಟಕಕ್ಕೆ ಪರಿಚಯ ಆದರು ಅದಕ್ಕೂ ಮುನ್ನ ದಿನಗಳಿಂದಲೇ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರೂ.

ಈಗ ಬಿಗ್ ಬಾಸ್ ವಾಸುಕಿ ವೈಭವ್ ಎಂದೇ ಫೇಮಸ್ ಆಗಿರುವ ಇವರಿಗೆ ಅತಿ ದೊಡ್ಡ ಅಭಿಮಾನಿಗಳ ಬಳಗವೇ ಸೃಷ್ಟಿಯಾಗಿದೆ. ರಿಷಬ್ ಶೆಟ್ಟಿ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದ ಹೇ ಶಾರದೆ ಹಾಡು ಮತ್ತು ಮುಂದಿನ ನಿಲ್ದಾಣ ಸಿನಿಮಾದ ಇನ್ನೂ ಬೇಕಾಗಿದೆ ಇಂತಹ ವೈಭವ ಪೂರಿತ ಸುಮಧುರ ಗೀತೆಗಳನ್ನು ಕಟ್ಟಿರುವ ಇವರು ಈಗ ತಾಳಿ ಕಟ್ಟಿ ಸಂಸಾರ ಗೀತೆ ಹಾಡಲು ತಯಾರಾಗುತ್ತಿದ್ದಾರೆ.

ಕಳೆದ ವರ್ಷದಿಂದ ಕನ್ನಡ ಚಲನಚಿತ್ರರಂಗದ ಹಾಗೂ ಕಿರುತೆರೆಯ ಹಲವು ಕಲಾವಿದರುಗಳು ಮದುವೆ ಆಗಿದ್ದಾರೆ. ಇನ್ನೂ ಕೆಲವರು ಎಂಗೇಜ್ಮೆಂಟ್ ಮಾಡಿಕೊಂಡು ಮುಂದಿನ ವರ್ಷದಲ್ಲಿ ಹಸೆಮಣೆ ಏರಲಿದ್ದಾರೆ. ಇದರಲ್ಲಿ ವಿಶೇಷ ಏನೆಂದರೆ ಹಲವರು ತಮ್ಮಂತೆ ಅಭಿರುಚಿ ಉಳ್ಳ ಕಲಾವಿದರನ್ನೇ ಮದುವೆ ಆಗಿದ್ದಾರೆ.

ಇದೇ ಸಾಲಿಗೆ ಸೇರುತ್ತಿದ್ದಾರೆ ವಾಸುಕಿ ವೈಭವ್ ಕೂಡ. ವಾಸುಕಿ ವೈಭವ್ ಅವರು ಬಿಗ್ ಬಾಸ್ ಗೆ ಹೋಗಿದ್ದ ಸಮಯದಲ್ಲಿ ಚಂದನ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಚಂದನ ಮತ್ತು ವಾಸುಕಿ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಎನ್ನುವಂತೆ ಅವರು ನಡೆದುಕೊಳ್ಳುತ್ತಿದ್ದರು. ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮದ ಹಲವು ಜೋಡಿಗಳು ನಿಜ ಜೀವನದಲ್ಲಿಯೂ ಮದುವೆಯಾಗಿ ಜೊತೆಯಾಗಿದ್ದಾರೆ.

ಈಗ ಆ ಉದಾಹರಣೆಗೂ ಕೂಡ ಚಂದನ ಮತ್ತು ವಾಸುಕಿ ಸೇರುವ ಸಾಧ್ಯತೆಗಳು ಇವೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜರಾಣಿ ಮತ್ತು ಹೂ ಮಳೆ ಎನ್ನುವ ಧಾರಾವಾಹಿಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಚಂದನ ಅವರು ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಕಂಟೆಸ್ಟೆಂಟ್ ಕೂಡ ಆಗಿದ್ದರು.

ಅಲ್ಲದೆ ಇವರು ಮನೆ ಒಳಗೆ ಇದ್ದಷ್ಟು ದಿನ ಟಾಸ್ಕ್ ಗಳ ಜೊತೆ ವಾಸುಕಿ ವೈಭವ್ ಅವರು ನಿರ್ದೇಶನ ಮಾಡುವ ಹಾಡುಗಳಿಗೆ ಧ್ವನಿ ಕೊಡುವ ಮೂಲಕ ಕೂಡ ಫೇಮಸ್ ಆಗಿದ್ದರು. ಆಗಿನಿಂದಲೂ ಇವರಿಬ್ಬರ ನಡುವೆ ಹೊಂದಾಣಿಕೆ ಇದ್ದು ಮನೆಯಿಂದ ಆಚೆ ಬಂದ ಮೇಲೂ ಆ ಬಾಂಧವ್ಯವನ್ನು ಹಾಗೆ ಉಳಿಸಿಕೊಂಡಿದ್ದರು.

ಇತ್ತೀಚೆಗಷ್ಟೇ ವಾಸುಕಿ ವೈಭವ್ ಅವರ ಹುಟ್ಟುಹಬ್ಬಕ್ಕೆ ಇನ್ಸ್ಟಾಗ್ರಾಮಲ್ಲಿ ಅವರ ಫೋಟೋ ಹಾಕಿ ವಿಶೇಷ ಬರಹ ಬರೆದು ಚಂದನ ಹಂಚಿಕೊಂಡಿದ್ದರು. ವಾಸುಕಿ ವೈಭವ್ ಅವರು ನನ್ನ ಬದುಕಿನ ಅತಿ ದೊಡ್ಡ ಗಿಫ್ಟ್ ಅವರು ನನ್ನ ಬೆಸ್ಟ್ ಫ್ರೆಂಡ್ ನನ್ನ ಸೀಕ್ರೆಟ್ ಎಲ್ಲವನ್ನೂ ಹಂಚಿಕೊಳ್ಳಬಹುದಾದ ನಂಬಿಕಸ್ಥ ಎಂದು ಬರೆದುಕೊಂಡಿದ್ದರು. ವಿಶೇಷ ವ್ಯಕ್ತಿ ಆದ ಮೇಲೆ ಇವರೇ ಚಂದನ ಅವರ ಇನಿಯ ಇರಬೇಕು ಎಂದೇ ಎಲ್ಲರೂ ಭಾವಿಸಿದ್ದರು.

ಈ ಬಗ್ಗೆ ಅಧಿಕೃತವಾಗಿ ಹೇಳಿಕೊಳ್ಳದೆ ಇದ್ದರೂ ಕೂಡ ಇಬ್ಬರು ಈಗ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಇದು ತಮ್ಮ ಮದುವೆ ಬಗ್ಗೆ ಘೋಷಣೆ ಮಾಡುವುದಕ್ಕಾಗಿ ಮಾಡಿಸಿರುವ ಫೋಟೋ ಶೂಟ್ ರೀತಿ ಇದ್ದು ಇಬ್ಬರು ಸಹ ಮಧು ಮಕ್ಕಳಂತೆ ಕಾಣುತ್ತಿದ್ದಾರೆ. ಎಲ್ಲರ ಊಹೆಯಂತೆ ಇದು ನಿಜವಾದರೆ ಈ ವರ್ಷ ಮದುವೆಯಾದ ಮತ್ತೊಂದು ತಾರ ಜೋಡಿ ಪಟ್ಟಿಗೆ ಇವರು ಸೇರಲಿದ್ದಾರೆ.

ಶಿವಣ್ಣನಿಗಾಗಿ ಹೊಸ ಹಾಡು ರಚನೆ ಮಾಡಿ ಸರಿಗಮಪ ವೇದಿಕೆಯಲ್ಲಿ ಹಾಡಿದ ದಿಯಾ ಹೆಗ್ಡೆ, ಪುಟ್ಟ ಬಾಲಕಿ ಹಾಡಿಗೆ ಮನಸೋತು ಎದ್ದು ನಿಂತು ಚಪ್ಪಾಳೆ ಹೊಡೆದ ಶಿವಣ್ಣ ಈ ಕ್ಯೂಟ್ ವಿಡಿಯೋ ನೋಡಿ

ದಿಯಾ ಹಾಡಿದ ಮನಸೋತು ಶಿವಣ್ಣ

.

ದಿಯಾ ಹೆಗ್ಡೆ ಈಗ ಸರಿಗಮಪ ದಿಯಾ, ವೈರಲ್ ಗಾಯಕಿ ಈ ರೀತಿ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸೀಸನ್ 19ರ ಕಂಟೆಸ್ಟೆಂಟ್ ಆಗಿರುವ ದಿಯಾ ಹೆಗ್ಡೆ ಅವರು ಈ ಕಾರ್ಯಕ್ರಮಕ್ಕೆ ಬರೊಕ್ಕಿಂತ ಮುಂಚೆಯಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದರು.

ಈಗಾಗಲೇ ಇವರ ವಿಭಿನ್ನ ರೀತಿಯ ನಟನೆಯ ಹಾಡುಗಾರಿಕೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಾಗಿದೆ. ಆದರೆ ಈಕೆಗೆ ಕರ್ನಾಟಕದಾದ್ಯಂತ ಹೆಸರು ತಂದು ಕೊಟ್ಟಿದ್ದು ಸರಿಗಮಪ ಕಾರ್ಯಕ್ರಮ ಎಂದರೆ ತಪ್ಪೇನಿಲ್ಲ. ಸರಿಗಮಪ ಕಾರ್ಯಕ್ರಮದ ಮೊದಲ ಎಪಿಸೋಡ್ ಅಲ್ಲಿಯೇ ನಾ ಮುದುಕಿ ಆದರೆ ಏನಂತೆ ಇನ್ನೂ ಇರಾಕಿ ಎನ್ನುವ ಹಾಡನ್ನು ಹಾಡಿ.

ಆ ಹಾಡಿಗೆ ಸರಿಗಮಪ ಕಾರ್ಯಕ್ರಮದ ಸನ್ನಿವೇಶಗಳನ್ನು ಬೆರೆಸಿ ಅನುಶ್ರೀಯನ್ನು ತನ್ನ ಸೊಸೆ ಮಾಡಿಕೊಳ್ಳುತ್ತೇನೆ ಎಂದು ಹೇಳುವಂತಹ ಹಾಡನ್ನು ತನ್ನ ಸುಮಧುರ ಕಂಠದಿಂದ ಹಾಡಿ ಮೊದಲ ಹಾಡಿನಲ್ಲೇ ಎಲ್ಲರ ಮನ ಗೆದ್ದುಬಿಟ್ಟರು. ಕಾರ್ಯಕ್ರಮದಲ್ಲಿ ಇವರ ಪರ್ಫಾರ್ಮೆನ್ಸ್ ಮುಗಿದ ಬಳಿಕ ಏನಾದರೂ ಒಂದು ವಿಶೇಷ ಚಟುವಟಿಕೆ ಮಾಡಿ.

ಆಗಲೂ ಕೂಡ ಅಲ್ಲಿದ್ದವರೆಲ್ಲರ ಗಮನ ಸೆಳೆದು ಮನೋರಂಜನೆ ನೀಡಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಳ್ಳುವ ದಿಯಾ ಟ್ಯಾಲೆಂಟ್ ನೋಡಿ ಸಹಕಂಟೆಸ್ಟೆಂಟ್ಗಳು, ಜಡ್ಜಸ್ ಗಳು ಜೂರಿ ಮೆಂಬರ್ಸ್ ಮತ್ತು ಪ್ರೇಕ್ಷಕರು ಫಿದಾ ಆಗಿ ಹೋಗಿದ್ದಾರೆ. ಈಗ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೋಗಿದ್ದಾರೆ ದಿಯಾ ಎಂದರೆ ಅದು ಕೂಡ ತಪ್ಪಲ್ಲ. ಪ್ರತಿ ವಾರ ಕೂಡ ಈ ಬಾರಿ ಯಾವ ಹೊಸ ರೀತಿಯ ಕಥೆ ಹೇಳುತ್ತಾರೆ.

ಅಥವಾ ಯಾವ ರೀತಿ ಹೊಸ ಹಾಡು ಕಟ್ಟಿಕೊಂಡು ಬರುತ್ತಾರೆ ಎಂದು ಪ್ರೇಕ್ಷಕರು ಹಾಗೂ ಸರಿಗಮಪ ತಂಡ ಕಾಯುತ್ತಿದೆ. ಹೀಗೆ ಪೋಷಕರ ಸಹಾಯದಿಂದ ದಿಯಾ ಎನ್ನುವ ಟ್ಯಾಲೆಂಟ್ ಒಂದು ಕರ್ನಾಟಕಕ್ಕೆ ಪರಿಚಯ ಆಗಿದ್ದು ಆಕೆಗೆ ಆಕೆಯೇ ಸಾಟಿ ಆಗಿದ್ದಾಳೆ. ಈ ವಾರ ಸರಿಗಮಪ ಕಾರ್ಯಕ್ರಮದಲ್ಲಿ ದೊಡ್ಡ ಮನೆ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಅಲ್ಲದೆ ಕಾರ್ಯಕ್ರಮಕ್ಕೆ ಶಿವಣ್ಣ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮ ಪೂರ್ತಿ ಶಿವಣ್ಣ ಅವರ ಸಿನಿಮಾದ ಹಾಡುಗಳನ್ನು ಹಾಡಿ ಸ್ಪರ್ಧಿಗಳು ಮನೋರಂಜಿಸಿದರು. ದಿಯಾ ಸಮಯ ಬಂದಾಗ ಅವರು ತಾವೇ ಕಟ್ಟಿಕೊಂಡು ಬಂದಿದ್ದ ಅಚ್ಚುಮೆಚ್ಚಿನ ಅಣ್ಣಾವ್ರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಏನು ಸಡಗರ, ಸ್ಟಂಟು ಮಾಡಿ ಹೆಜ್ಜೆ ಹಾಕಿ ಸೆಂಟಿಮೆಂಟಲ್ ಲುಕ್ಕು ಕೊಟ್ಟು ಚಂ ಚಂ ಅಂತ ಮಿಂಚುತ್ತಾರೆ ಏನು ಸಿಂಗಾರ ಎಂದು ಹಾಡಿದ್ದಾರೆ.

ಈ ಹಾಡಿನ ಪೂರ್ತಿ ಶಿವಣ್ಣ ಅವರ ಗುಣಗಾನ ಮಾಡಿರುವ ದಿಯಾ ಅಮ್ಮನ ಪ್ರೀತಿ ಮಗನಾದ ಜೋಗಿ, ತಂಗಿಯರ ಪಾಲಿಗೆ ಪ್ರೀತಿಯ ಮುತ್ತಣ್ಣ, ಶಿವಣ್ಣ ನೊಂದವರ ಪಾಲಿಗೆ ಕಣ್ಣೀರೊರೆಸುವ ದೈವ. ದಾನ ಧರ್ಮ ಮಾಡಿ ಜಗವನ್ನೇ ಗೆಲ್ಲುತ್ತಿರುವ ಅಣ್ಣಾವ್ರ, ಮಗ ಭಜರಂಗಿಯ ಭಕ್ತ ಈಗ ವೇದ ಎಂದು ಸಾಧ್ಯವಾದಷ್ಟು ಶಿವಣ್ಣನ ಸಿನಿಮಾ ಹೆಸರುಗಳನ್ನು ಸೇರಿಸಿದ್ದಾರೆ.

ಹಾಡನ್ನು ಕೇಳುತ್ತಿದ್ದಂತೆ ನೆರೆದಿದ್ದವರೆಲ್ಲ ಶಿಲ್ಲೆ ಚಪ್ಪಾಳೆ ಹಾಕಿ ಪೋತ್ಸಾಹ ಕೊಟ್ಟಿದ್ದಾರೆ. ಅಲ್ಲದೆ ಶಿವಣ್ಣ ಕೂಡ ಈ ಹಾಡನ್ನು ಮೆಚ್ಚಿ ಪುಟ್ಟ ಹುಡುಗಿ ನನ್ನ ಬಗ್ಗೆ ಹಾಡು ಕಟ್ಟಿ ಬರೆದಿದ್ದಾಳೆ, ಹಾಡುತ್ತಿದ್ದಾಳೆ ಅದೇ ನನ್ನ ಜೀವನಕ್ಕೆ ಸಾರ್ಥಕ. ಕಂಠ ಕೂಡ ಚೆನ್ನಾಗಿದೆ, ಅಷ್ಟೇ ಧೈರ್ಯ ಹಾಗೂ ಟ್ಯಾಲೆಂಟ್ ಕೂಡ ಇದೆ ಮುಂದೆ ಇವರು ಹಂಸಲೇಖ ಅವರಂತೆ ಆಗಬಹುದು ಎಂದು ಭವಿಷ್ಯ ಕೂಡ ನುಡಿದಿದ್ದಾರೆ.

ವಿನೋದ್ ರಾಜ್ ಮನೆಯಲ್ಲಿ ಮದುವೆ ಸಂಭ್ರಮ, ತಾವೇ ಮುಂದೆ ನಿಂತು ಮದುವೆ ಮಾಡಿಸುತ್ತಿರುವ ಈ ಜೋಡಿ ಯಾರು ಗೊತ್ತ.?

 

ಮನೆ ಕೆಲಸದ ಹುಡುಗಿಗೆ ಮದುವೆ ಮಾಡಿಸಿದ ವಿನೋದ್ ರಾಜ್

ವಿನೋದ್ ರಾಜಕುಮಾರ್ ಅಲಿಯಾಸ್ ಡ್ಯಾನ್ಸ್ ರಾಜಾ ಎಂದೇ ಫೇಮಸ್ ಆಗಿರುವ ವಿನೋದ್ ರಾಜ್ ಕುಮಾರ್ ಅವರು ಸದ್ಯಕ್ಕೆ ಚಿತ್ರರಂಗದಿಂದ ದೂರ ಉಳಿದಿದ್ದು ನೆಲಮಂಗಲ ಸಮೀಪ ತಾಯಿ ಲೀಲಾವತಿ ಅವರ ಜೊತೆ ವಾಸವಾಗಿದ್ದಾರೆ. ನೆಲಮಂಗಲ ಸಮೀಪ ಜಮೀನು ಖರೀದಿಸಿ ವ್ಯವಸಾಯ ಮಾಡಿಕೊಂಡು ತಾಯಿ ಮಗ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಸಾಕಷ್ಟು ವೈಯುಕ್ತಿಕ ವಿಚಾರಗಳಿಂದ ಬೇಸರಗೊಂಡಿರುವ ಹಾಗೂ ಬದುಕಿನಲ್ಲಿ ನಡೆದಿರುವ ಕೆಲವು ಕಹಿ ಘಟನೆಗಳಿಂದ ನೊಂದಿರುವ ಇವರು ಈಗ ಪ್ರಕೃತಿ ಕಡೆಗೆ ಮರುಳಿದ್ದಾರೆ. ಇದರ ಜೊತೆಗೆ ಸಾಧ್ಯವಾದಷ್ಟು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಷ್ಟೇ ಅವರು ತಮ್ಮ ಜಮೀನು ಮಾರಿ ಬಂದ ಹಣದಿಂದ ಅವರ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯಿಂದಲೂ ಕಟ್ಟಿಸಿದರು, ಇದರ ಉದ್ಘಾಟನೆ ಸಹ ನಡೆದಿದ್ದು ಮಾನ್ಯ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರೇ ಇದನ್ನು ನಡೆಸಿಕೊಟ್ಟಿದ್ದಾರೆ.

ಹೀಗೆ ಇವರು ಮಾಡುವ ಕೆಲ ಸಮಾಜಮುಖಿ ಕೆಲಸಗಳಷ್ಟೇ ಮಾಧ್ಯಮದಲ್ಲಿ ಪ್ರಚಾರವಾಗಿರಬಹುದು. ಆದರೆ ಯಾವುದೇ ಪ್ರಚಾರ ಪಡೆಯಲು ಇಷ್ಟವಿರದ ಇವರು ಸದ್ಯಕ್ಕೆ ತಮ್ಮ ಬದುಕನ್ನೇ ಈ ರೀತಿ ಪರರಿಗಾಗಿ ಮೀಸಲಿಟ್ಟಿದ್ದಾರೆ ಎನ್ನಬಹುದು. ಅನೇಕ ಕೆಲಸಗಳನ್ನು ಯಾವುದೇ ಪ್ರಚಾರ ಪಡೆಯದೆ ಮಾಡುತ್ತಿರುವ ತಾಯಿ ಮಗ ಈಗ ಅಂತಹದೇ ಮತ್ತೊಂದು ಪುಣ್ಯಕಾರ್ಯ ಮಾಡಿದ್ದಾರೆ.

ಅದೇನೆಂದರೆ ವಿನೋದ್ ರಾಜಕುಮಾರ್ ಅವರ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅನ್ನಪೂರ್ಣ ಎನ್ನುವ ಮಹಿಳೆ ಒಬ್ಬರು ಮನೆ ಕೆಲಸ ಮಾಡಿಕೊಂಡು ಇದ್ದರು. ಈಗ ಆಕೆಗೆ ತಾವೇ ಮುಂದೆ ನಿಂತು ಮದುವೆ ಮಾಡಿಸುವ ಮೂಲಕ ಅನೇಕರಿಗೆ ಮಾದರಿ ಆಗಿದ್ದಾರೆ, ವಿನೋದ್ ರಾಜ್ ಕುಟುಂಬ. ಮನೆ ಕೆಲಸದವರನ್ನು ಪ್ರಾಣಿಗಿಂತಲೂ ಕಡೆಯಾಗಿ ಕಾಣುವ ಈಗಿನ ಕಾಲದಲ್ಲೂ ತಮ್ಮ ಮನೆ ಸದಸ್ಯೆ ಎಂದುಕೊಂಡು ಆಕೆಯ ಬದುಕು ಕಟ್ಟಿಕೊಟ್ಟಿರುವುದು ನಿಜಕ್ಕೂ ಹಲವರಿಗೆ ಆದರ್ಶ.

ಮದ್ದೂರು ತಾಲೂಕಿನ ಹುಳಗನಹಳ್ಳಿ ಗ್ರಾಮದ ಪ್ರಕಾಶ್ ಎನ್ನುವವರ ಜೊತೆ ಅನ್ನಪೂರ್ಣ ಅವರ ವಿವಾಹವನ್ನು ನಡೆಸಿಕೊಟ್ಟಿದ್ದಾರೆ ವಿನೋದ್ ರಾಜ್. ಪ್ರಕಾಶ್ ಕಳೆದ ಏಳು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರ ಮದುವೆ ಕಾರ್ಯಕ್ರಮವು ಸಂಪ್ರದಾಯಬದ್ಧವಾಗಿ ನಡೆದಿದ್ದು ನೆಲಮಂಗಲ ತಾಲೂಕಿನ ಎಂಟಗಾನ ಹಳ್ಳಿಯ ಗೂಬೆಕಲ್ಲಮ್ಮ ದೇವಸ್ಥಾನದಲ್ಲಿ ಗುರು ಹಿರಿಯರ ಒಪ್ಪಿಗೆ ಮೇರೆಗೆ ನಡೆದಿದೆ.

ಸ್ವತಃ ವಿನೋದ್ ರಾಜಕುಮಾರ್ ಅವರ ಓಡಾಟವೇ ಮದುವೆಯಲ್ಲಿ ಬಹಳ ಜೋರಾಗಿತ್ತು ಸ್ವಂತ ತಂಗಿಯ ಮದುವೆ ರೀತಿ ಅನ್ನಪೂರ್ಣ ಮದುವೆಯನ್ನು ನಡೆಸಿಕೊಟ್ಟಿದ್ದಾರೆ. ವಿನೋದ್ ರಾಜಕುಮಾರ್ ಅವರು ಮದುವೆಯ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿ ವೈರಲ್ ಆಗುತ್ತಿದ್ದಂತೆ ಇವರ ಈ ಕಾರ್ಯ ನೋಡಿ ನೆಟ್ಟಿಗರು ವಿನೋದ್ ರಾಜಕುಮಾರ್ ಅವರ ಗುಣವನ್ನು ಹಾಡಿ ಹೋಗುತ್ತಿದ್ದಾರೆ.

ವಿನೋದ್ ರಾಜಕುಮಾರ್ ಅವರನು ಚಿತ್ರರಂಗ ಗುರುತಿಸದೆ ಹೋದ ಒಬ್ಬ ಅಪ್ರತಿಮಾ ಕಲಾವಿದ ಡ್ಯಾನ್ಸ್ ಕಿಂಗ್ ಎಂದೆ ಫೇಮಸ್ ಆಗಿದ್ದ ವಿನೋದ್ ರಾಜಕುಮಾರ್ ಅವರು ಆರಂಭದಲ್ಲಿ ಡ್ಯಾನ್ಸ್ ರಾಜ್ ಡ್ಯಾನ್ಸ್ ಮಹಾಭಾರತ ಸ್ನೇಹಲೋಕ ಮತ್ತಿತರ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದರು. ಆದರೆ ಕಾಲ ಕ್ರಮೇಣ ಅವಕಾಶಗಳಿಂದ ವಂಚಿತರಾಗಿ ಮತ್ತು ಇತರೆ ಕೆಲವು ಕಾರಣಗಳಿಂದ ಬೇಸತ್ತು.

ಕೃಷಿ ಕಡೆ ಮುಖ ಮಾಡಿ ತಾಯಿ ಜೊತೆ ಜೀವನ ಸಾಗಿಸಕಾಅದ್ದಾರೆ ಕೊನೆಯದಾಗಿ ಅವರ ಕನ್ನಡದ ಕಂದ ಮತ್ತು ಯಾರಿದು ಎನ್ನುವ ಸಿನಿಮಾಗಳು ರಿಲೀಸ್ ಆಗಿದ್ದವು ಆ ಬಳಿಕ ಬರೀ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಇವರ ಹೆಸರು ಕೇಳಿ ಬರುತ್ತಿದೆ ತಿಳಿತರೆಯಲ್ಲಿ ನಡೆಸುವ ಡ್ಯಾನ್ಸಿಂಗ್ ಕಾರ್ಯಕ್ರಮಗಳಿಗೆ ಇವರನ್ನು ಜಡ್ಜ್ ಆಗಿ ಕರಿಯಬೇಕು ಎನ್ನುವ ಕೋರಿಕೆಗಳು ಕೂಡ ಅಭಿಮಾನಿಗಳ ಕಡೆಯಿಂದ ಬಲವಾಗಿದೆ.

ನಮಗೆ ಅನ್ಯಾಯ ಆಗಿದೆ, ಕಾನೂನು ಹೋರಾಟ ನಡೆಸುತ್ತೇನೆ ನನ್ನ ಅತ್ತಿಗೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದ ನಟಿ ಅಭಿನಯ ಎರಡು ವರ್ಷ ಜೈಲು ಶಿಕ್ಷೆ ಆಗುತ್ತಾ ಅಥವಾ ಇಲ್ಲವಾ.?

ಅಭಿನಯ ಜೈಲು ಶಿ-ಕ್ಷೆಯಿಂದ ತಪ್ಪಿಸಿಕೊಳ್ತಾರ. ?

ಅನುಭವ ಸಿನಿಮಾದಲ್ಲಿ ನಟನೆ ಮಾಡಿರುವ ಖ್ಯಾತ ನಟಿ ಅಭಿನಯ ಅವರಿಗೆ ಎರಡು ವರ್ಷ ಜೈಲು ಶಿ.ಕ್ಷೆಯಾಗಿದೆ ನೆನ್ನೆಯಷ್ಟೇ ಸುಪ್ರೀಂ ಕೋರ್ಟ್ ನಿಂದ ಈ ಆದೇಶ ಹೊರ ಬಿದ್ದಿದೆ. ಅಷ್ಟಕ್ಕೂ ಅಭಿನಯ ಮಾಡಿದ ತಪ್ಪಾದರೂ ಏನು ಎಂಬುದನ್ನು ನೋಡುವುದಾದರೆ ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರು 1998 ರಲ್ಲಿ ಲಕ್ಷ್ಮಿ ದೇವಿ ಎಂಬ ಯುವತಿಯನ್ನು ಮದುವೆಯಾಗುತ್ತಾರೆ.

ಮದುವೆಯ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಯವರು ವರದಕ್ಷಿಣೆಯಾಗಿ 80000 ನಗದು ಹಾಗೂ 250 ಗ್ರಾಂ ಚಿನ್ನವನ್ನು ನೀಡಿದ್ದರು. ಆದರೆ ಅಭಿನಯ ಹಾಗೂ ಅವರ ತಮ್ಮ ಚೆಲುವರಾಜು ಮತ್ತು ತಂದೆ ತಾಯಿ ಶ್ರೀನಿವಾಸ್ ಐವರು ಕೂಡ ಹೆಚ್ಚಿನ ಹಣದ ಬೇಡಿಕೆಯನ್ನು ಇಡುತ್ತಾರೆ ಮತ್ತಷ್ಟು ಹಣವನ್ನು ವರದಕ್ಷಿಣೆ ರೂಪದಲ್ಲಿ ತರಬೇಕು ಎಂದು ಕಿ.ರು.ಕು.ಳ ನೀಡುವುದಕ್ಕೆ ಮುಂದಾಗುತ್ತಾರೆ.

ಲಕ್ಷ್ಮಿದೇವಿ ತಮ್ಮ ತಂದೆಯ ಬಳಿ ತಮ್ಮ ನೋವನ್ನು ಹೇಳಿಕೊಂಡು ಮರಳಿ 20000 ವರದಕ್ಷಿಣೆ ರೂಪವಾಗಿ ತಂದು ಶ್ರೀನಿವಾಸ್ ಅವರಿಗೆ ನೀಡುತ್ತಾರೆ‌. ಇದಾದ ನಂತರವೂ ಕೂಡ ವರದಕ್ಷಿಣ ಕಿ.ರು.ಕು.ಳ ತಪ್ಪುವುದಿಲ್ಲ ಪ್ರತಿನಿತ್ಯವೂ ಕೂಡ ಹಣಕ್ಕಾಗಿ ಪೀಡಿಸುತ್ತಾರೆ. ಇದರ ಜೊತೆಗೆ ಅಭಿನಯ ಕೂಡ ಕೈಜೋಡಿಸಿ ಅತ್ತಿಗೆಗೆ ಇಲ್ಲಸಲ್ಲದ ಹಿಂಸೆಯನ್ನು ನೀಡುತ್ತಾರೆ.

ಅಭಿನಯ ಅವರ ಅತ್ತಿಗೆ ಲಕ್ಷ್ಮೀದೇವಿ ಅವರು ಪೊಲೀಸ್ ಕಂಪ್ಲೇಂಟ್ ಕೊಡುತ್ತಾರೆ 2002ರಲ್ಲಿ ಈ ದೂರು ದಾಖಲಾಗುತ್ತದೆ. ಸುಮಾರು 20 ವರ್ಷದಿಂದಲೂ ಕೂಡ ಈ ಕೇಸ್ ಮುಂದುವರೆದುಕೊಂಡು ಹೋಗುತ್ತದೆ. ಇದೀಗ ಲಕ್ಷ್ಮೀದೇವಿ ಅವರ ಪರವಾಗಿ ಕೋರ್ಟ್ ತೀರ್ಪನ್ನು ನೀಡಿದ್ದು ವರದಕ್ಷಿಣೆ ಕಿ.ರು.ಕು.ಳ ನೀಡಿದ ಸಲುವಾಗಿ ಸುಮಾರು ಐದು ಜನ ಆರೋಪಿಗಳಿಗೆ ಕ.ಠಿ.ಣ ಶಿ.ಕ್ಷೆಯನ್ನು ವಿಧಿಸಿದೆ.

ಆದರೆ ಲಕ್ಷ್ಮೀದೇವಿ ಪತಿ ಶ್ರೀನಿವಾಸ್ ಹಾಗೂ ಅವರ ತಂದೆ ಇಬ್ಬರೂ ಕೂಡ ವಿ.ಧಿ.ವ.ಶ.ರಾಗಿದ್ದಾರೆ. ಇನ್ನು ಅಭಿನಯ ಹಾಗೂ ಆತನ ತಮ್ಮ ಚೆಲುವರಾಜು ಮತ್ತು ತಾಯಿ ಮೂವರಿಗೂ ಕೂಡ ಕ.ಠಿ.ಣ ಶಿಕ್ಷೆ ವಿಧಿಸಿದ್ದು ಅಭಿನಯಾಗೆ ಎರಡು ವರ್ಷ ಜೈಲಿ ಶಿ‌.ಕ್ಷೆ ಅಭಿನಯ ತಾಯಿಗೆ ಐದು ವರ್ಷ ಶಿ.ಕ್ಷೆ ಹಾಗೂ ಚೆಲುವರಾಜುಗೆ ಮೂರು ವರ್ಷ ಶಿಕ್ಷೆಯನ್ನು ವಿಧಿಸಿದೆ.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಸಾಕಷ್ಟು ಜನ ಆಶ್ಚರ್ಯವನ್ನು ವ್ಯಕ್ತಪಡಿಸಿದರು ಏಕೆಂದರೆ ಅಭಿನಯ ಅವರು ಕೇವಲ ಸಿನಿಮಾ ಮಾತ್ರವಲ್ಲದೆ ಸದ್ಯಕ್ಕೆ ಹಿಟ್ಲರ್ ಕಲ್ಯಾಣ ಎಂಬ ಧಾರಾವಾಹಿಯಲ್ಲೂ ಕೂಡ ಕೌಶಲ್ಯ ಎಂಬ ಪಾತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಇವರ ಸಿನಿ ಪ್ರೇಮಿ ಮತ್ತು ಧಾರವಾಹಿ ಪ್ರೇಮಿಗಳು ನಿಜಕ್ಕೂ ಕೂಡ ಇದು ಆ.ಘಾ.ತ.ಕಾ.ರಿ ವಿಚಾರವೇ.

ತೆರೆಯ ಮೇಲೆ ಇಷ್ಟು ಚೆನ್ನಾಗಿ ಕಾಣುವ ನಟಿ ನಿಜ ಜೀವನದಲ್ಲಿ ಇಷ್ಟೆಲ್ಲ ಕಾಟ ಕೊಟ್ಟಿದ್ದಾರೆ ಎಂದು ಹಿಡಿ ಶಾಪವನ್ನು ಹಾಕುತ್ತಿದ್ದಾರೆ ಆದರೆ ನಟಿ ಅಭಿನಯ ಅವರು ಈಗ ಹೇಳುತ್ತಿರುವುದು ಬೇರೆ. ನಮಗೆ ಅನ್ಯಾಯ ಆಗಿದೆ ನಾವು ನಮ್ಮ ಅತ್ತಿಗೆಗೆ ಯಾವುದೇ ರೀತಿಯಾದಂತಹ ಕಿ.ರು.ಕು.ಳ.ವ.ನ್ನು ನೀಡಿಲ್ಲ ಅವರು ಸುಳ್ಳು ಹೇಳುತ್ತಿದ್ದಾರೆ.

ನಾವು ಕಾನೂನಿನ ಹೋರಾಟವನ್ನು ಮುಂದುವರಿಸುತ್ತೇವೆ ನಮ್ಮದು ತಪ್ಪಿಲ್ಲದೆ ಇದ್ದರೂ ಕೂಡ ಶಿ.ಕ್ಷೆಯನ್ನು ವಿಧಿಸಿದ್ದಾರೆ ಕಳೆದ ಬಾರಿ ಕೋರ್ಟ್ ಜಡ್ಜ್ ಮೆಂಟ್ ನಮ್ಮ ಪರವಾಗಿತ್ತು. ಆದರೆ ಇದೀಗ ಲಕ್ಷ್ಮಿ ದೇವಿ ಅವರ ಪರವಾಗಿದೆ ಹಾಗಾಗಿ ಈ ಕೇಸ್ ಅನ್ನು ನಾನು ಹೀಗೆ ಸುಮ್ಮನೆ ಬಿಡುವುದಿಲ್ಲ. ನಮಗೆ ಆಗಿರುವ ಅನ್ಯಾಯದ ಬಗ್ಗೆ ನಾನು ಮತ್ತೆ ಕೋರ್ಟ್ ನಲ್ಲಿ ಕೇಸ್ ಹಾಕುತ್ತೇನೆ, ಕಾನೂನು ಹೋರಾಟ ಮಾಡುತ್ತೇನೆ. ಸತ್ಯಕ್ಕೆ ಜಯ ಸಿಗಲೇಬೇಕು ಎಂದು ನಟಿ ಅಭಿನಯ ಅವರು ಕಣ್ಣೀರು ಹಾಕಿ ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ.

ಆದರೆ ಯಾವುದೇ ವಿಚಾರವಾದರೂ ಕೂಡ ಬೆಂಕಿ ಇಲ್ಲದೆ ಹೋಗೆ ಆಡುವುದಿಲ್ಲ ಎಂಬುದು ಎಷ್ಟು ಸತ್ಯವೋ ವರದಕ್ಷಿಣೆ ಕಿರುಕುಳ ಕೊಡದೆ ಲಕ್ಷ್ಮಿದೇವಿ ಸುಮಾರು 20 ವರ್ಷಗಳ ಕಾಲ ಈ ಕೇಸ್ ನಡೆಸಿಕೊಂಡು ಬಂದಿರುವುದು ಸುಳ್ಳಲ್ಲ ಎಂಬುದು ಮಾತ್ರ ತಿಳಿಯುತ್ತದೆ. ಅದೇನೇ ಆಗಲಿ ಸದ್ಯಕ್ಕೆ ಅಭಿನಯ ಅವರ ವಿರುದ್ಧ ವಿಧಿಸಿರುವ ಈ ಎರಡು ವರ್ಷ ಶಿಕ್ಷೆ ಈ ನಟಿಗೆ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಜನಪ್ರಿಯ ಧಾರವಾಹಿ “ಕನ್ನಡತಿ” ಮುಕ್ತಾಯವಾಗುತ್ತಿದೆ ಇದರ ಬಗ್ಗೆ ರಂಜನಿ ರಾಘವನ್ ಹೇಳಿದ್ದೇನು ಗೊತ್ತ.? ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ.

ಕನ್ನಡತಿ ಧಾರಾವಾಹಿ ಮುಗಿಯುವ ಬಗ್ಗೆ ಸುಳಿವು ಕೊಟ್ಟ ನಟಿ ರಂಜನಿ ರಾಘವನ್.

ನಟಿ ರಂಜನಿ ರಾಘವನ್ ಅವರು ಈ ಹಿಂದೆ ಪುಟ್ಟಗೌರಿ ಎಂದ ಫೇಮಸ್ ಆಗಿದ್ದರು. ಇದೀಗ ಅವರನ್ನು ಜನ ನಿಧನವಾಗಿ ಪುಟ್ಟಗೌರಿ ಪಾತ್ರದಿಂದ ಮರೆತು ಕನ್ನಡ ಲೆಕ್ಚರರ್ ಅಥವಾ ಭುವಿ ಎಂದು ಕರೆಯುವಷ್ಟು ಕನ್ನಡತಿ ಧಾರಾವಾಹಿ ಪಾತ್ರಕ್ಕೆ ರಂಜಿನಿ ರಾಘವನ್ ಒಗ್ಗಿಕೊಂಡು ಬಿಟ್ಟಿದ್ದಾರೆ. ಕನ್ನಡತಿ ಧಾರವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದ್ದು ಪ್ರತಿವಾರದ ಟಿ ಆರ್ ಪಿ ಅಲ್ಲಿ ಇದರದೇ ಮೇಲು ಗೈ ಆಗಿರುತ್ತದೆ.

ಕಳೆದ ಹಲವು ವರ್ಷಗಳಿಂದಲೂ ಕೂಡ ಕನ್ನಡತಿ ಧಾರವಾಹಿ ಪ್ರಸಾರ ಆಗುತ್ತಿದ್ದು ಈ ಧಾರಾವಾಹಿ ಹಿಂದಿಯಲ್ಲಿ ಕೂಡ ಡಬ್ ಆಗಿ ಪ್ರಸಾರವಾಗುತ್ತಿದೆ. ಧಾರಾವಾಹಿಯ ಪ್ರಮುಖ ಪಾತ್ರಗಳಾದ ಹರ್ಷ ಭುವಿ ಅಮ್ಮಮ್ಮ ಮತ್ತು ಸಾನಿಯಾ ಹಾಗೂ ವರು ಪಾತ್ರಗಳು ಜನರ ಮನಸ್ಸಿಗೆ ಬಹಳ ಹಿಡಿಸಿವೆ.

ಎಲ್ಲಾ ಧಾರವಾಹಿಗಳಂತೆ ಇದರಲ್ಲೂ ಟ್ರೈ ಆಂಗಲ್ ಲವ್ ಸ್ಟೋರಿ ಇದ್ದರೂ ಅದರ ಆಚೆಗೆ ಕಥೆ ಬಹಳ ಇಂಟರೆಸ್ಟಿಂಗ್ ಆಗಿದೆ. ಹಸಿರು ಪೇಟೆಯ ಕನ್ನಡ ಟೀಚರ್ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲೂ ಕೆಲಸ ಮಾಡುತ್ತಾ ಕನ್ನಡ ಕಲಿಸಿ ಉಳಿಸುವ ಪ್ರಯತ್ನದಲ್ಲಿದ್ದರೆ ಈಕೆ ಸಿಂಪ್ಲಿಸಿಟಿ ನೋಡಿ ಹರ್ಷ ಎನ್ನುವ ಹೀರೋ ಆಕೆಯನ್ನು ಬಹಳ ಇಷ್ಟ ಪಡುತ್ತಾನೆ.

ಹರ್ಷನ ತಾಯಿ ರತ್ನಮಾಲ ಅವರು ಸಹ ಹಸಿರು ಪೇಟೆಯವರಾಗಿದ್ದು ಸಣ್ಣ ಕುಟುಂಬದ ಈಕೆ ಇಂದು ದೊಡ್ಡ ಕಂಪನಿ ಕಟ್ಟಿ ನಡೆಸಿಕೊಂಡು ಹಾಗೂ ಅದನ್ನು ಉಳಿಸಲು ಒದ್ದಾಡುತ್ತಿರುತ್ತಾರೆ. ನೂರಾರು ಕೋಟಿ ಮೌಲ್ಯದ ಆಸ್ತಿಗೆ ಒಡತಿ ಆಗಿರುವ ರತ್ನಮ್ಮ ಅವರ ಮಗ ಸ್ಟೈಲ್ ಐಕಾನ್ ಹರ್ಷ ಭುವಿ ಆಪ್ತ ಸ್ನೇಹಿತ ಸ್ನೇಹಿತೆ ವರುವಿನ ಹೃದಯ ಕದ್ದಿರುತ್ತಾನೆ.

ಆದರೆ ಹರ್ಷನ ಪ್ರೀತಿ ಭುವಿ ಕಡೆ ತಿರುಗಿದ ಕಾರಣ ನಾನು ಇಷ್ಟಪಟ್ಟಿದ್ದನ್ನು ದಕ್ಕಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ತಲುಪುವ ವರು ಕೋಪವೀಗ ಭುವಿ ಕಡೆ ತಿರುಗಿದೆ. ತನ್ನ ಮಗನ ಪ್ರೇಯಸಿ ಎನ್ನುವುದನ್ನು ತಿಳಿಯುವ ಮೊದಲೇ ಅಮ್ಮಮ್ಮ ಮತ್ತು ಭುವಿ ನಡುವೆ ಒಂದೊಳ್ಳೆ ಬಾಂಧವ್ಯ ಏರ್ಪಟ್ಟಿರುತ್ತದೆ.

ಮನೆಯ ಹಿರಿ ಸೊಸೆ ಆದ ಸಾನಿಯಾ ರತ್ನಮ್ಮ ಕಂಪನಿಯ ಸಿಇಒ ಆಗುವ ಕಾರಣಕ್ಕಾಗಿ ಆದಿಯ ಜೊತೆ ಪ್ರೀತಿ ನಾಟಕವಾಗಿ ಮನೆ ಸೇರುತ್ತಾಳೆ ಇದು ಹರ್ಷ ಹಾಗೂ ಅಮ್ಮಮನಿಗೂ ತಿಳಿದಿರುತ್ತದೆ. ಸಾನಿಯಾ ಮತ್ತು ವರು ನಡುವಿನ ಜುಗಲ್ ಬಂದಿ ಹರ್ಷ ಸಾನಿಯಾ ನಡುವೆ ನಡೆಯುವ ಸಂಘರ್ಷ ನೋಡಲು ಬಹಳ ಮಜವಾಗಿರುತ್ತದೆ.

ಜೊತೆಗೆ ಸುಚಿ, ಬಿಂದು, ಪ್ರತಿಮ, ಭೂಮಿ ಅಜ್ಜಿ ಹಾಗೂ ಲಾಯರ್ ಪಾತ್ರಗಳು ಪಾತ್ರಗಳು ಆಗ ಕಾಣಿಸಿಕೊಂಡು ಕಥೆ ರುಚಿಯನ್ನು ಹೆಚ್ಚಿಸಿದೆ. ಈ ವಿಶೇಷ ಕಥೆಯನ್ನು ಪ್ರತಿದಿನ ನೋಡಲು ಎಲ್ಲರೂ ರಾತ್ರಿ 7:30 ಆಗುವುದನ್ನೇ ಕಾಯುತ್ತಿದ್ದರು. ಆದರೆ ಇದೀಗ ಚಿತ್ರತಂಡದಿಂದ ಶೀಘ್ರದಲ್ಲೇ ಧಾರಾವಾಹಿ ಮುಕ್ತಾಯ ಆಗವುದರ ಬಗ್ಗೆ ಸುಳಿವು ಸಿಗುತ್ತಿದೆ.

ಸ್ವತಃ ಧಾರಾವಾಹಿ ನಾಯಕಿ ಪಾತ್ರಧಾರಿ ಆಗಿರುವ ರಂಜಾನಿ ರಾಘವನ್ ಅವರೇ ರುಚಿ ನಾಲಿಗೆಯಲ್ಲಿ ಇರುವಾಗಲೇ ಊಟ ಮುಗಿಯಬೇಕು ಎನ್ನುವ ಗಾದೆ ಇದೆ ಅದೇ ರೀತಿ ಕಥೆ ಚೆನ್ನಾಗಿರುವಾಗಲೇ ನಾವು ಅಂತ್ಯ ಮಾಡಲು ಬಯಸಿದ್ದೇವೆ. ಸದ್ಯದಲ್ಲೇ ಕನ್ನಡತಿ ಮುಗಿಯಲಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ ಈಗಷ್ಟೇ ಕನ್ನಡತಿ ಯಲ್ಲಿ ಅಮ್ಮಮ್ಮ ಪಾತ್ರ ಮುಗಿದಿದೆ.

ಅಮ್ಮಮ್ಮ ಇಲ್ಲದೆ ಧಾರಾವಾಹಿ ನೋಡಲು ಪ್ರೇಕ್ಷಕರು ಕೂಡ ಬೇಸರದಲ್ಲಿ ಇದ್ದಾರೆ. ಮನೆ ಹಿರಿಯರು ಇರದ ಮನೆ ಕಥೆ ಹೇಗಿರಲಿ ಭುವಿ ಅಮ್ಮಮ್ಣ ಗೆ ಕೊಟ್ಟ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾಳೆ ಎನ್ನುವ ಕಾತುರದಿಂದ ಜನ ಕಾಯುತ್ತಿದ್ದಾರೆ ಕಥೆ ಹೇಗೆ ಮುಕ್ತಾಯಗೊಳಲಿದೆ ಎನ್ನುವ ನಿರೀಕ್ಷೆ ಕೂಡ ಈಗ ಹೆಚ್ಚಾಗಿದೆ.

ನನ್ನನ್ನು ತುಂಬಾ ಕಾಡಿದ ಸಿನಿಮಾ ಇದು, ತುಂಬಾ ಇಷ್ಟ ಪಟ್ಟು ಶ್ರಮವಹಿಸಿ ಈ ಸಿನಿಮಾ ಮಾಡ್ದೆ, ಆದ್ರೆ ಜನ ಈ ಸಿನಿಮಾ ನೋಡೋಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಿವಣ್ಣ

 

ತಾನೇ ಇಷ್ಟಪಟ್ಟು ಮಾಡಿದ್ದ ತನ್ನದೇ ಸಿನಿಮಾವನ್ನು ನೋಡಲು ಥಿಯೇಟರ್ ಗೆ ಜನ ಬರಲಿಲ್ಲವಲ್ಲ ಎಂದು ಬೇಸರ ಮಾಡಿಕೊಂಡ ಶಿವಣ್ಣ.

ಶಿವಣ್ಣ ಅವರು ಮಾಡುತ್ತಿದ್ದ ಸಿನಿಮಾಗಳು ಅಣ್ಣಾವ್ರು ಮಾಡುತ್ತಿದ್ದ ಸಿನಿಮಾ ಕಥೆಗಳಂತೆ ಜನರಿಗೆ ಬಹಳ ಇಷ್ಟವಾಗುತ್ತಿತ್ತು. ಹೀಗಾಗಿಯೇ ಇವರು ಮಾಡಿದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳೇ. ಮೊದಲ ಮೂರು ಸಿನಿಮಾಗಳು ಸೂಪರ್ ಹಿಟ್ ಆದ ಕಾರಣ ಇವರಿಗೆ ಹ್ಯಾಟ್ರಿಕ್ ಹೀರೋ ಎನ್ನುವ ಟೈಟಲ್ ಕೂಡ ಬಂತು. ಸಿನಿಮಾಗಳು ಸೋಲು ಗೆಲುವು ಎನ್ನುವುದು ಎಲ್ಲಾ ಹೀರೋಗಳ ಸಿನಿ ಕೆರಿಯರ್ ಅಲ್ಲಿ ಸಾಮಾನ್ಯ ವಿಷಯ.

ಹಾಗೆಯೇ ಶಿವಣ್ಣ ಅವರು ಬಹಳ ಇಷ್ಟಪಟ್ಟು ಸಿನಿಮಾ ಮಾಡಿದ್ದರು. ಈ ಸಿನಿಮಾಗೆ ಕಥೆಯನ್ನು ಪಾರ್ವತಮ್ಮ ಡಾಕ್ಟರ್ ರಾಜಕುಮಾರ್ ಹಾಗೂ ವರದಣ್ಣ ಅವರೇ ಸೆಲೆಕ್ಟ್ ಮಾಡಿ ನಿರ್ದೇಶನದ ಜವಾಬ್ದಾರಿಯನ್ನು ಟಿಎಸ್ ನಾಗಾಭರಣ ಅವರಿಗೆ ನೀಡಿದ್ದರು, ಸಂಗೀತ ನಿರ್ದೇಶನದ ಹೊಣೆ ವಿ ಮನೋಹರ್ ಅವರು ಹೊತ್ತಿದ್ದರು.

ಈ ಹಿಂದೆ ಇವರ ಕಾಂಬಿನೇಷನ್ ಅಲ್ಲಿ ಬಂದಿದ್ದ ಜನುಮದ ಜೋಡಿ ಎನ್ನುವ ಚಿತ್ರವು ಮ್ಯೂಸಿಕ್ ಹಿಟ್ ಅಲ್ಲದೆ ಬ್ಲಾಕ್ ಬ್ಲಾಸ್ಟರ್ ಆಗಿತ್ತು. ಸಿನಿಮಾ ವನ್ನು ಜನ ಬಹಳ ಇಷ್ಟ ಪಟ್ಟು ನೋಡಿ ಗೆಲ್ಲಿಸಿದ್ದಲ್ಲದೇ ಹಾಡುಗಳಂತೂ ಇಂದಿಗೂ ಜನರ ಫೇವರೆಟ್ ಲಿಸ್ಟ್ ನಲ್ಲಿ ಇದೆ. ಹಾಗಾಗಿ ಇದೇ ನಿರೀಕ್ಷೆಯೊಂದಿಗೆ ಈ ತಂಡದೊಂದಿಗೆ ತೆರೆದ ಮತ್ತೊಂದು ಸಿನಿಮಾ ಚಿಗುರಿದ ಕನಸು.

ಈ ಸಿನಿಮಾ ಕೂಡ ವಿಶಿಷ್ಟ ಕಥೆ ಯನ್ನು ಹೊಂದಿತ್ತು, ಈ ಕಥೆ ಜನರಿಗೆ ಇಷ್ಟವಾಗಿಯೇ ಆಗುತ್ತದೆ ಎಂದು ಎಲ್ಲರಿಗೂ ನಂಬಿಕೆ ಇತ್ತು. ತಾಯಿ ನೆಲವನ್ನು ಬಿಟ್ಟು ದೂರ ಹೋಗಿದ್ದ ಯುವಕನೊಬ್ಬ ತನ್ನ ಮೂಲವನ್ನು ತಿಳಿದುಕೊಂಡಾಗ ಅಲ್ಲಿಗೆ ಮರಳಿ ಬರುವ ಕಥೆಯನ್ನು ಈ ಸಿನಿಮಾ ಹೊಂದಿತ್ತು.

ತನ್ನ ಮೂಲವನ್ನು ಹುಡುಕಿ ಹಳ್ಳಿಗೆ ಬಂದ ಯುವಕನಿಗೆ ಇಲ್ಲಿಯ ಜಲ ನೆಲ ಭಾಷೆ ತನ್ನವರು ಎನ್ನುವ ಭಾವನೆ ಬೆಳೆಯುತ್ತದೆ. ಆಗ ಆತ ತನ್ನ ಹಿಂದಿನ ಪ್ರೇಮ ಕಥೆ ಹಾಗೂ ಅಲ್ಲಿನ ಸನ್ನಿವೇಶಕ್ಕೆ ಸಿಲುಕಿ ಹಾಕಿಕೊಂಡು ಒದ್ದಾಡುವ ಪ್ರಸಂಗದೊಂದಿಗೆ ಮ್ಯೂಸಿಕ್ ಹಾಗೂ ಹಾಡು ಮಲೆನಾಡಿನ ಸುಂದರ ವಾತಾವರಣ ಎಲ್ಲವೂ ಸಿನಿಮಾಗೆ ಇತ್ತು.

ಕಥೆಗೆ ಅವಶ್ಯಕತೆ ಇದ್ದ ಕಾರಣ ಎರಡು ಶೇಡ್ ಅಲ್ಲಿ ಶಿವಣ್ಣ ಕಾಣಿಸಿಕೊಂಡು ತನ್ನ ಹಿರಿಯರ ಸ್ಟೋರಿ ಹೇಳುವಾಗಲೂ ತಾತನ ಪಾತ್ರದಲ್ಲಿ ಶಿವಣ್ಣ ಅವರೇ ಕಾಣಿಸಿಕೊಂಡಿದ್ದರು. ಈ ಸಿನಿಮಾ ಯಾವುದೆಂದು ನೀವೆಲ್ಲರೂ ಗೆಸ್ ಮಾಡುತ್ತೀರಾ ಇದು ಬೇರಾವುದು ಅಲ್ಲ ಚಿಗುರಿದ ಕನಸು ಎನ್ನುವ ಸಿನಿಮಾ.

ಈ ಸಿನಿಮಾವನ್ನು ಇಡೀ ತಂಡ ಹಾಗೂ ಸ್ವತಃ ಶಿವಣ್ಣನು ಸಹ ಬಹಳ ಆಸೆಪಟ್ಟು ಮಾಡಿದ್ದರು. ಆದರೆ ಈ ಸಿನಿಮಾ ರಿಲೀಸ್ ಆದಾಗ ಥೀಯೇಟರ್ ಕಡೆ ಜನ ಬರಲೇ ಇಲ್ಲ ಸಿನಿಮಾ ಫ್ಲಾಫ್ ಆಗಿ ಹೋಯಿತು ಆಗ ಎಲ್ಲರೂ ಬಹಳ ಬೇಸರ ಪಟ್ಟಿ ಕೊಂಡಿದ್ದರಂತೆ. ಜನರಿಗೆ ಎಂತಹ ಕಥೆ ನೀಡಬೇಕು ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಗೊಂದಲಕ್ಕೆ ಒಳಗಾಗಿದ್ದಾರಂತೆ.

ಆದರೆ ಅದೇ ಸಿನಿಮಾ ಟಿವಿಯಲ್ಲಿ ಬಂದ ಮೇಲೆ ಜನ ಬಹಳ ಇಷ್ಟ ಪಟ್ಟಿದ್ದಾರೆ ಈಗಲೂ ಸಹ ಬಂದು ಜನರು ಚಿಗುರಿದ ಕನಸು ಇಂತಹ ಸಿನಿಮಾಗಳನ್ನು ಮಾಡಿ ಎಂದು ಕೇಳುತ್ತಾರಂತೆ. ಅದಕ್ಕೆ ಶಿವಣ್ಣ ರಿಲೀಸ್ ಆದಾಗ ಸಿನಿಮಾ ಗೆದ್ದಿದ್ದಾರೆ ಅದೇ ರೀತಿ ಸಿನಿಮಾ ಮಾಡಲು ಹುರುಪು ಬರುತ್ತಿತ್ತು. ಸೋತ ಕಾರಣ ಆ ರೀತಿ ಸಿನಿಮಾ ಹೆಚ್ಚಾಗಿ ಮಾಡಲಾಗಲಿಲ್ಲ ಈಗ ಅದರ ಬಗ್ಗೆ ಹೇಳಿದರೆ ಏನು ಮಾಡುವುದು ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

ಮುದ್ದಾದ ಹೆಣ್ಣು ಮಗುವಿನ ತಂದೆಯಾದ ಸಮೀರ್ ಆಚಾರ್ಯ ಮಗಳಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ.!

ಬಿಗ್ ಬಾಸ್ ಸೀಸನ್ 5 ಖ್ಯಾತಿಯ ಸಮೀರ್ ಆಚಾರ್ಯ

ಕನ್ನಡದ ಕಿರುತೆರಿ ಶೋ ಆಗಿರುವ ಏಕೈಕ ದೊಡ್ಡ ವೇದಿಕೆ ಎಂದರೆ ಅದು ಬಿಗ್ ಬಾಸ್ ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಸೀಸನ್ ಕಂಟೆಸ್ಟೆಂಟ್ ಆಗಿ ಜನರಿಗೆ ಪರಿಚಯವಾದ ಸಮೀರ್ ಆಚಾರ್ಯ. ಬಿಗ್ ಬಾಸ್ ಸ್ಪರ್ಧೆಯಲ್ಲಿ ತಮ್ಮದೇ ಆದ ಶೈಲಿಯಿಂದ ಆಟವನ್ನು ಆಡಿದ್ದರು ಅಲ್ಲದೆ ಇವರು ಇವರದೇ ಆದ ಅಭಿಮಾನಿಗಳನ್ನು ಬಿಗ್ ಬಾಸ್ ನಲ್ಲಿ ಆಟವಾಡುವಾಗ ಹೊಂದಿದ್ದರು.

ಹೌದು ಸಮೀರ್ ಆಚಾರ್ಯ ಬಿಗ್ ಬಾಸ್ ಮೂಲಕವೇ ಪರಿಚಯವಾದರು ತಮ್ಮ ಹೆಂಡತಿ ಶ್ರಾವಣಿ ಮಾನಸ ಜೋಶಿ ಜೊತೆ ರಾಜ ರಾಣಿ ಕಾರ್ಯಕ್ರಮದಲ್ಲೂ ಕೂಡ ಇಬ್ಬರು ಭಾಗವಹಿಸಿದ್ದರು. ಈ ಮೂಲಕ ಮತ್ತಷ್ಟು ಜನಪ್ರಿಯರಾದ ಈ ಜೋಡಿಯು ಇತ್ತೀಚಿಗೆ ಸಿಹಿ ಸುದ್ದಿಯೊಂದಿಗೆ ವೈರಲ್ ಆಗಿದ್ದಾರೆ.

ಇನ್ನು ರಾಜ ರಾಣಿ ಕಾರ್ಯಕ್ರಮದಲ್ಲಿ ಕೂಡ ಇವರಿಬ್ಬರ ವೈಶಿಷ್ಟತೆಯಿಂದ ಹೆಚ್ಚು ಆಕರ್ಷಿತಗೊಂಡಿದ್ದರು ಹೌದು ಇವರಿಬ್ಬರು ಮೂಲತಃ ಸಾಂಪ್ರದಾಯಕ ಮನೆಯಿಂದ ಬಂದವರು ಹಾಗೂ ಜ್ಯೋತಿಷ್ಯದಲ್ಲಿ ಪ್ಪಾಂಡಿತ್ಯ ಹೊಂದಿರುವರು ಆಗಿರುತ್ತಾರೆ. ಹೌದು ರಾಜ ರಾಣಿ ಕಾರ್ಯಕ್ರಮದ ಒಂದು ಎಮೋಷನಲ್ ಎಪಿಸೋಡಿನಲ್ಲಿ ಶ್ರಾವಣಿ ಮಾನಸ ಜೋಶಿಯವರು ತಮ್ಮ ಪತಿ ಸಮೀರ್ ಆಚಾರ್ಯ ಅವರ ಬಳಿ ಒಂದು ಮಗು ಬೇಕು ಎಂದು ಕೇಳಿಕೊಂಡಿರುತ್ತಾರೆ.

ಈ ಎಮೋಷನ್ ಎಪಿಸೋಡ್ ಕೂಡ ಎಲ್ಲರನ್ನು ಭಾವುಕರನ್ನಾಗಿ ಮಾಡಿತು. ಇದೇ ಕಾರಣಕ್ಕಾಗಿ ಇತ್ತೀಚಿಗೆ ಸಮೀರ್ ಆಚಾರ್ಯ ಅವರು ತಾವು ತಂದೆಯಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. ಹೌದು, ತಮ್ಮ ಸಾಂಪ್ರದಾಯಕ ಶಾಸ್ತ್ರದ ಪ್ರಕಾರ ತಮ್ಮ ಪತ್ನಿ ಶ್ರಾವಣಿಯವರಿಗೆ ಶ್ರೀಮಂತವನ್ನು ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ ಸಮೀರ್ ಆಚಾರ್ಯ ಅವರ ಪತ್ನಿ ಶ್ರಾವಣಿಯವರು ಕೂಡ ತಾವು ಗರ್ಭಿಣಿ ಆಗಿರುವ ಬೇಬಿ ಬಂಪ್ ನ ವಿಧವಿಧವಾದ ಫೋಟೋಗಳನ್ನು ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾ ಗಳಲ್ಲಿ ಅಪ್ಲೋಡ್ ಮಾಡಿದ್ದರು. ಹೌದು ಆಚಾರ್ ಹಾಗೂ ಶ್ರಾವಣಿ ಮಾನಸಿ ಅವರ ದಂಪತಿಗಳಿಗೆ ಈಗ ಮುದ್ದಾದ ಹೆಣ್ಣು ಮಗು ಒಂದು ಜನಿಸಿದೆ. ಈ ಮೂಲಕ ಸಮೀರ್ ಆಚಾರ್ ಹಾಗೂ ಶ್ರಾವಣಿಯವರು ತಂದೆ ತಾಯಿ ಆಗಿದ್ದಾರೆ.

ಈ ದೊಡ್ಡದಾದ ವಿಷಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ತಮಗೆ ಹೆಣ್ಣು ಮಗುವಾಗಿ ಜನಿಸಿದ್ದು ಅವಳಿಗೆ ತುಳಿಜಾ ಭವಾನಿ ಎಂದು ಹೆಸರಿಡಲಾಗಿದೆ ಈ ಮೂಲಕ ನಮ್ಮ ಮನೆಗೆ ಮಹಾಲಕ್ಷ್ಮಿಯು ಆಗಮಿಸಿದ್ದಾಳೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹೌದು ಹೆಣ್ಣು ಮಗು ಜನಿಸಿರುವ ಕಾರಣ ಈ ದಂಪತಿಗಳು ತಮ್ಮ ಸಂತೋಷವನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಿಕೊಂಡಿದ್ದಾರೆ.

ಅಲ್ಲದೆ ಸಮೀರ್ ಆಚಾರ್ಯ ಅವರು ಸಂದರ್ಶನ ಒಂದರಲ್ಲಿ ನಮ್ಮ ಮನೆಗೆ ಬಹಳ ದಿನದ ನಂತರ ಹೆಣ್ಣು ಮಗು ಜನಿಸಿದೆ ಈ ಮೂಲಕ ನಮ್ಮ ಮನೆಯವರೆಲ್ಲರೂ ತುಂಬಾ ಖುಷಿಯಿಂದ ಇದ್ದಾರೆ ಎಂದು ಹೇಳಿದರು. ಹಾಗೆಯೆ ಈ ವಿಷಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ತಕ್ಷಣವೇ ಅಭಿಮಾನಿಗಳು ಇನ್ಸ್ತಾಗ್ರಾಂ ಮೂಲಕ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ಎಂದು ಸಮೀರ್ ಆಚಾರ್ಯ ಅವರು ತಿಳಿಸಿದ್ದಾರೆ ಸದ್ಯ ಇವರ ಈ ವಿಷಯವು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿರುವುದು ನಿಜ. ಹೌದು ಬಹಳ ದಿನಗಳ ನಂತರ ಸಂತೋಷದಿಂದ ಇರುವ ಸಮೀರ್ ಆಚಾರ್ಯರವರಿಗೆ ಅಭಿಮಾನಿಗಳು ಶುಭಾಶಯಗಳು ತಿಳಿಸಿರುವುದು ಸತ್ಯ.