Home Blog Page 273

ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವೂ ಕೂಡ ನಟನೆ ಮಾಡುವ ಚಾನ್ಸ್ ಪಡೆಯಬಹುದು ಹೇಗೆ ಗೊತ್ತ.?

0

ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವು ಕೂಡ ಭಾಗವಹಿಸಬಹುದು

ಕನ್ನಡ ಚಿತ್ರರಂಗದಲ್ಲಿ ದೊಡ್ಮನೆಯಿಂದ ಖ್ಯಾತಿ ಗಳಿಸಿದ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ. ದೊಡ್ಮನೆಯಲ್ಲಿರುವಂತಹ ಎಲ್ಲರೂ ಕೂಡ ಕನ್ನಡ ಚಿತ್ರರಂಗಕ್ಕೆ ಅವರದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಇನ್ನು ಡಾಕ್ಟರ್ ರಾಜಕುಮಾರ್ ಅವರ ಮೂರು ಮಕ್ಕಳಾದ ಶಿವರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಕೂಡ ನಾಯಕ ನಟರಾಗಿ ಎಷ್ಟೋ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದರೊಂದಿಗೆ ಕನ್ನಡ ಜನತೆಯ ಅಭಿಮಾನವನ್ನು ಸಂಪಾದಿಸಿದ್ದಾರೆ ಆದರೆ ರಾಜಕುಮಾರ ಅವರ ಮೊಮ್ಮಕ್ಕಳಾದ ಹಾಗೂ ರಾಘವೇಂದ್ರ ರಾಜಕುಮಾರ್ ಅವರ ಮಕ್ಕಳಾದ ವಿನಯ್ ಹಾಗೂ ಯುವ ರಾಜ್ಕುಮಾರವರು ಕೂಡ ಕನ್ನಡ ಚಿತ್ರರಂಗಕ್ಕೆ ಅವರದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ. ಸದ್ಯ ಇತ್ತೀಚಿಗೆ ಯುವ ರಾಘವೇಂದ್ರ ರಾಜಕುಮಾರ್ ಅವರ ಚಿತ್ರ ಒಂದು ಸೆಟ್ ಏರುತ್ತಿದೆ.

ಹೌದು ಯುವರಾಜ್ ಕುಮಾರ್ ಅವರ ಸಿನಿಮಾಗಾಗಿ ಹೊಂಬಾಳೆ ಫಿಲಂ ಪ್ರೊಡಕ್ಷನ್ಸ್ ಅವರು ಆಡಿಷನ್ನ ನಡೆಸುತ್ತಿದ್ದಾರೆ. ಒಂದು ವೇಳೆ ಯಾರಿಗಾದರೂ ಆಸಕ್ತಿ ಇದ್ದರೆ ಈ ಆಡಿಶನ್ ನಲ್ಲಿ ಭಾಗವಹಿಸಬಹುದು. ಹೌದು ಸಿನಿಮಾದಲ್ಲಿ ನಟಿಸಬೇಕು ಹೆಸರು ಗಳಿಸಬೇಕು ಎಂಬ ಆಸೆ ಇದ್ದರೆ ಆನಂದ್ ರಾಮ್ ಹಾಗೂ ಯುವರಾಜ್ ಕುಮಾರ್ ಅವರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಈ ಚಿತ್ರಕ್ಕೆ ಆಡಿಷನ್ ಕೊಡಬಹುದಾಗಿದೆ.

ಅಪ್ಪುವಿನ ನಿ.ಧ.ನ.ದ ನಂತರ ಯುವರಾಜ್ ಕುಮಾರ್ ಅವರು ಅಪ್ಪು ಅವರ ಉತ್ತರಧಿಕಾರಿಯಂದೆ ಹೇಳಬಹುದಾಗಿದೆ. ಅದಕ್ಕಾಗಿ ಅಪ್ಪುವಿನ ಅಭಿಮಾನಿಗಳ ಸಂಪೂರ್ಣ ಬೆಂಬಲವೂ ಇವರಿಗಿದೆ. ಹಾಗಾಗಿ ಅಪ್ಪು ಅಭಿಮಾನಿಗಳು ಈ ಚಿತ್ರದ ಅಪ್ಡೇಟ್ ನೀಡಿ ಎಂದು ಚಿತ್ರರಂಗಕ್ಕೆ ಕೋರಿದರು. ಆನಂದ್ ರಾಮ್ ರವರ ನಿರ್ದೇಶನದ ಅಡಿ ಇವರ ಯುವರಾಜ ಕುಮಾರವರ ಸಿನಿಮಾವು ಲಾಂಚ್ ಆಗುತ್ತಿದ್ದು ಈ ಮುಂಚೆಯೇ ಹೊಂಬಾಳೆ ಫಿಲಂಸ್ ರವರು ಅನೌನ್ಸ್ ಮಾಡಿತ್ತು.

ಈ ಚಿತ್ರಕ್ಕಾಗಿ ಯುವರಾಜ್ ಕುಮಾರ್ ಅವರು ಫೋಟೋಶೂಟ್ ಕೂಡ ಮಾಡಿಸಿದರು ಯುವ ರಾಜಕುಮಾರ ಅವರ ಲುಕ್ ನ ಮೂಲಕ ಚಿತ್ರದ ಬಗ್ಗೆ ಪೋಸ್ಟರ್ಗಳನ್ನು ಹಂಚಿಕೊಂಡಿದ್ದರು ಕೂಡ ಸ್ವಲ್ಪ ದಿನಗಳ ಕಾಲ ಯಾವುದೇ ತರಹದ ಸುಳಿವಿರಲಿಲ್ಲ. ಇತ್ತೀಚಿಗೆ ಆನಂದವರು ಚಿತ್ರೀಕರಣವನ್ನು ಶುರು ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ ಈ ಮೂಲಕ ಚಿತ್ರದಲ್ಲಿ ನಟಿಸಲು ಇಚ್ಛೆ ಇರುವವರು ಆಡಿಶನ್ ಅನ್ನು ಕೊಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ಚಿತ್ರಕ್ಕಾಗಿ 16 ರಿಂದ 25 ವರ್ಷದ ವಯಸ್ಸಿಗರು ಭಾಗವಹಿಸಬಹುದು ಎಂದು ಕೂಡ ತಿಳಿಸಿದ್ದಾರೆ. ಮಂಗಳೂರು ನಗರದ ಕೂಟಕ್ಕಳ ಆಡಿಟೋರಿಯಂನಲ್ಲಿ ನವೆಂಬರ್ 26 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಡಿಷನ್ ನಡೆಯಲಿದೆ, ಈ ಚಿತ್ರತಂಡದ ಜತೆ ಕೆಲಸ ಮಾಡಬೇಕು ಎನ್ನುವ ಆಸೆ ಇರುವವರು ಈ ಅವಕಾಶವನ್ನು ತುಂಬಾ ಚೆನ್ನಾಗಿ ಉಪಯೋಗಿಸಬಹುದು. ಹೊಸ ಪ್ರತಿಭೆಗಳಿಗೆ ಪುನೀತ್ ರಾಜಕುಮಾರ್ ಅವರು ಈ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಿದ್ದು.

ಅವರ ಈ ಒಳ್ಳೆಯ ಉದ್ದೇಶವೇ ಎಷ್ಟೋ ಜನರಿಗೆ ದಾರಿದೀಪವಾಗಿದೆ ಎಂದರೆ ಸುಳ್ಳಾಗುವುದಿಲ್ಲ ಹೌದು ಅವರ ಈ ಉದ್ದೇಶವನ್ನೇ ಹೊಂಬಾಳೆ ಫಿಲಂಸ್ ರವರ ಅಡಿಯಲ್ಲಿ ಹೊರ ಬರುತ್ತಿರುವ ಯುವರಾಜ್ ಕುಮಾರ್ ಅವರ ಚಿತ್ರ ತಂಡವು ಹಿಂಬಾಲಿಸುತ್ತಿದೆ. ಸದ್ಯ ಈ ವಿಷಯವು ಕನ್ನಡಿಗರಿಗೆ ಉತ್ತಮ ಅವಕಾಶವನ್ನು ನೀಡಿದೆ. ಹಾಗಾಗಿ ಚಿತ್ರದಲ್ಲಿ ಅಭಿನಯಿಸಲು ಇಚ್ಚಿಸುವವರು ಮಂಗಳೂರಿಗೆ ಹೋಗಿ ಆಡಿಷನ್ನ ನೀಡಬೇಕಾಗಿದೆ ಈ ಮೂಲಕ ನಿಮ್ಮ ಆಸೆಯನ್ನು ಪೂರೈಸಲು ದಾರಿಯನ್ನು ಒದಗಿಸಲಾಗಿದೆ.

ಯಶ್ ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ ಎಷ್ಟು ಕೋಟಿ ಬಜೆಟ್ ನಲ್ಲಿ ತಯರಾಗ್ತಿದೆ ಗೊತ್ತ ಯಶ್ ಹೊಸ ಸಿನಿಮಾ.!

 

ನನಸಾದ ಯಶ್ ಕನಸು, ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ.

ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಟು ಸಿನಿಮಾ ಭಾರತದಾದ್ಯಂತ ಹೊಸ ಚರಿತ್ರೆಯನ್ನೇ ಸೃಷ್ಟಿಸಿದೆ. ಸದ್ಯಕ್ಕೆ ಕಲೆಕ್ಷನ್ ವಿಚಾರವಾಗಿ ಮತ್ತಿತರ ವಿಚಾರವಾಗಿ ಭಾರತ ಸಿನಿಮಾ ಇಂಡಸ್ಟ್ರಿಯ ನಂಬರ್ ಒನ್ ಸಿನಿಮಾ ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿಯ ನಂಬರ್ ಒನ್ ಸಿನಿಮಾ ಸ್ಥಾನದಲ್ಲಿರುವ ಕೆಜಿಎಫ್ ಟು ಸಿನಿಮಾ ಆದಮೇಲೆ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ.

ಹೀಗಾಗಿ ಕನ್ನಡಿಗರಿಗೆ ಮಾತ್ರವಲ್ಲದೆ ದೇಶದ ಎಲ್ಲಾ ರಾಕಿ ಭಾಯ್ ಅಭಿಮಾನಿಗಳಿಗೆ ಅವರ ಮುಂದಿನ ನಡೆ ಬಗ್ಗೆ ಬಾರಿ ಕುತೂಹಲ ಇದೆ. ಈಗಾಗಲೇ ಯಶ್ ಅವರ ಮುಂದಿನ ಸಿನಿಮಾ ಯಾವುದು? ಇದಕ್ಕೆ ಡೈರೆಕ್ಷನ್ ಯಾರು ಮಾಡುತ್ತಾರೆ, ಯಾವ ಪ್ರೊಡಕ್ಷನ್ ಹೌಸ್ ನಲ್ಲಿ ಸಿನಿಮಾ ಎಷ್ಟು ಬಜೆಟ್ ಅಲ್ಲಿ ತಯಾರಾಗುತ್ತದೆ, ನಾಯಕಿ ಯಾರಾಗಿರುತ್ತಾರೆ.

ಕಥೆ ಏನು ಎನ್ನುವುದರ ಬಗ್ಗೆ ಸಾಕಷ್ಟು ಚರ್ಚೆಗಳು ಊಹಾಪೋಹಗಳು ಹರಿದಾಡಿದ್ದು ರಾಕಿ ಭಾಯ್ ಮಾತ್ರ ಯಾವುದಕ್ಕೂ ಸ್ಪಷ್ಟನೆ ನೀಡಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಯಶ್ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದ ಹಾಲಿವುಡ್ ನಿರ್ದೇಶಕರೊಬ್ಬರ ಜೊತೆ ಅವರು ತೆಗೆಸಿಕೊಂಡಿದ್ದ ಮತ್ತು ಶೂಟಿಂಗ್ ಕಲಿಯಲು ಅವರು ತೊಡಗಿಕೊಂಡಿರುವುದಕ್ಕೆ.

ಸಂಬಂಧಪಟ್ಟ ಫೋಟೋಗಳು ಅಪ್ಲೋಡ್ ಆಗಿದ್ದರಿಂದ ಹಾಲಿವುಡ್ ಸಿನಿಮಾದಲ್ಲಿ ಯಶ್ ಅಭಿನಯಿಸಲಿದ್ದಾರೆ ಅದಕ್ಕಾಗಿ ತಾಲೀಮು ನಡೆಸುತ್ತಿದ್ದಾರೆ ಎಂದು ಸುದ್ದಿ ಆಗಿತ್ತು. ನಂತರ ಆ ವಿಚಾರವಾಗಿ ಮಾತೇ ಇಲ್ಲ ಹೀಗಾಗಿ ಕೆಜಿಎಫ್ ತ್ರೀ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡಿಕೊಳ್ಳಲು ಶುರು ಮಾಡಿದರು. ಕೆಜಿಎಫ್ ತ್ರೀ ಶೂಟಿಂಗ್ ಶುರು ಆಗಿದೆ ಎನ್ನುವಷ್ಟರ ಮಟ್ಟಿಗೆ ಹರಡಿದ ಸುದ್ದಿ ಕೂಡ ಸ್ವಲ್ಪ ಸಮಯ ಆದ ಬಳಿಕ ತಣ್ಣಗಾಯಿತು.

ಮತ್ತು ಕೆವಿಎನ್ ಸಂಸ್ಥೆಯ ನಿರ್ಮಾಪಕರ ಜೊತೆ ಸೂರ್ಯ ಹಾಗೂ ಯಶ್ ಅವರು ತೆಗೆಸಿಕೊಂಡಿದ್ದ ಫೋಟೋ ಒಂದು ವೈರಲ್ ಆಗಿ ಮುಂದಿನ ಸಿನಿಮಾದ ಮಾತುಕತೆ ಬೀಳತಿಸಿಕೊಂಡಿರುವ ಫೋಟೋ ಇರಬೇಕು ಎನ್ನುವ ಅನುಮಾನ ಸೃಷ್ಟಿಸಿತ್ತು. ಆದರೆ ಈಗ ಗಾಂಧಿನಗರದಲ್ಲಿ ಯಶ್ ಮುಂದಿನ ಸಿನಿಮಾ ಬಗ್ಗೆ ಬೇರೆ ಮಾತು ಕೇಳಿ ಬರುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮದೇ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಮಾಡಲು ತಯಾರಾಗುತ್ತಿದ್ದು ಇದಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುವ ಮಾತು ಕಥೆಗಳು ಜೋರಾಗಿದೆ. ತಮ್ಮ ಲಕ್ಕಿ ಮಗಳಾದ ಐರಾ ಹೆಸರಿನಲ್ಲಿಯೇ ಪ್ರೊಡಕ್ಷನ್ ಹೌಸ್ ತೆರೆಯಲು ರಾಕಿಂಗ್ ದಂಪತಿ ನಿರ್ಧರಿಸಿದ್ದು, ಯಶ್ 19ನೇ ಸಿನಿಮಾ ಇದೇ ಬ್ಯಾನರ್ ಅಡಿಯಲ್ಲಿ ಬರಲಿದೆ ಎಂದು ಮಾಹಿತಿ ಇದೆ.

ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾನಾ, ನಾಯಕಿ ಯಾರು, ಕಥೆ ಏನಿರಲಿದೆ ನಿರ್ದೇಶನ ಮಾಡುವುದು ಯಾರು ಎನ್ನುವ ಯಾವುದರ ಬಗ್ಗೆ ಕೂಡ ಮಾಹಿತಿ ಇಲ್ಲ ಆದರೆ ಮಗಳ ಹೆಸರಿನ ಸಂಸ್ಥೆ ಎನ್ನುವುದಷ್ಟೇ ನಿಖರವಾಗಿದೆ. ಈಗಾಗಲೇ ಶಿವಣ್ಣ, ಪುನೀತ್, ದರ್ಶನ್, ಸುದೀಪ್ ಎಲ್ಲಾ ಹೀರೋಗಳು ಕೂಡ ತಮ್ಮದೇ ಪ್ರೊಡಕ್ಷನ್ ಹೌಸ್ ತೆರೆದಿದ್ದಾರೆ.

ಮೊನ್ನೆ ಮೊನ್ನೆ ಅಷ್ಟೇ ಡಾಲಿ ಧನಂಜಯ್ ಅವರು ಈ ಪಿಕ್ಚರ್ಸ್ ಸಂಸ್ಥೆ ಸ್ಥಾಪಿಸಿ ಈಗಾಗಲೇ ಎರಡು ಸೂಪರ್ ಹಿಟ್ ಸಿನಿಮಾಗಳ ಸಕ್ಸಸ್ ಕಂಡು ಮುಂದಿನ ಸಿನಿಮಾದ ಅನೌನ್ಸ್ ಕೂಡ ಮಾಡಿಬಿಟ್ಟಿದ್ದಾರೆ. ಯಶ್ ಅಶರು ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು ಅವರಿಗೂ ಶುಭವಾಗಲಿ ಎಂದು ಹಾರೈಸೋಣ.

ನನ್ ಹೆಂಡ್ತಿ ಓದಿರೋದು ಇಂಜಿನಿಯರಿಂಗ್ ಆದ್ರೂ ಮಗನಿಗೆ ಹೋಮ್ ವರ್ಕ್ ಮಾಡಿಸಲು ಗೂಗಲ್ ಸರ್ಚ್ ಮಾಡ್ತಾಳೆ ಎಂದು ಶಿಕ್ಷಣ ವ್ಯವಸ್ಥೆ ಬಗ್ಗೆ ಸಿಡಿದೆದ್ದ ಡಿ ಬಾಸ್.

ಮಗನ ಶಿಕ್ಷಣದ ಬಗ್ಗೆ ಮನಬಿಚ್ಚಿ ಮಾತನಾಡಿದ ಡಿ-ಬಾಸ್

ದರ್ಶನ್ ಅವರ ಕ್ರಾಂತಿ ಸಿನಿಮಾವು ಇಡೀ ಕರ್ನಾಟಕವೇ ಬಿಡುಗಡೆಗಾಗಿ ಕಾಯುತ್ತಿರುವ ಸಿನಿಮಾ ಆಗಿದ್ದು ಜನವರಿ 26ರಂದು ಗಣರಾಜ್ಯೋತ್ಸವ ದಿನದ ಪ್ರಯುಕ್ತ ಬಿಡುಗಡೆ ಆಗಲಿದೆ. ಇದರ ನಿಮಿತ್ತವಾಗಿ ಚಿತ್ರತಂಡ ಹಾಗೂ ನಾಯಕ ನಟನಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.

ಮಾಧ್ಯಮಗಳು ದರ್ಶನ್ ಅವರ ಸಿನಿಮಾ ಪ್ರಚಾರ ಮಾಡದೆ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ದರ್ಶನ್ ಅವರ ಇಂಟರ್ವ್ಯೂ ಪಡೆಯಲು ಎಲ್ಲಾ ಯುಟ್ಯೂಬ್ ಚಾನೆಲ್ ಗಳು ಕಾಯುತ್ತಿವೆ. ಹೀಗಾಗಿ ದಿನ ಪೂರ್ತಿ ದರ್ಶನ್ ಅವರು ಸದ್ಯಕ್ಕೆ ಸಂದರ್ಶನದ ಕೊಡುವುದರಲ್ಲಿ ಬ್ಯುಸಿ ಆಗಿದ್ದಾರೆ ಎನ್ನಬಹುದು.

ಯಾವಾಗಲೂ ನೇರ ನುಡಿಗೆ ಹೆಸರುವಾಸಿ ಆಗಿರುವ ಪ್ರೇಕ್ಷಕರ ಪ್ರೀತಿಯ ದಚ್ಚು ಕ್ರಾಂತಿ ಸಿನಿಮಾದ ಸಬ್ಜೆಕ್ಟ್ ಕುರಿತು ಸಿನಿಮಾ ಸಂದೇಶದ ಕುರಿತು ಹಾಗೂ ಅದಕ್ಕೆ ಸಂಬಂಧಿತ ತಮ್ಮ ಜೀವನದ ಘಟನೆಗಳನ್ನು ಸೇರಿಸಿ ಸಂದರ್ಶನದಲ್ಲಿ ಮಾತನಾಡುತ್ತಿದ್ದಾರೆ. ಈ ವೇಳೆ ಸಂದರ್ಶನ ಕಾರರೊಬ್ಬರು ದರ್ಶನ್ ಅವರಿಗೆ ಕ್ರಾಂತಿ ಸಿನಿಮಾ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ವ್ಯತ್ಯಾಸ ಮತ್ತು ಮಹತ್ವ ತಿಳಿಸುವ ಸಂದೇಶ ಇದೆ ಅಂತ ಎಂದು ಹೇಳುತ್ತಿದ್ದೀರಿ.

ವರ್ಷದಿಂದ ಈ ಸಿನಿಮಾ ಪ್ರಾಜೆಕ್ಟ್ ನಲ್ಲಿ ತೊಡಗಿಕೊಂಡಿದ್ದೀರಿ. ಈಗ ನಿಮ್ಮ ಮನಸ್ಸಿಗೆ ಬಂದಿದೆಯಾ? ಮುಂದೆ ನಿಮ್ಮ ಮಗನನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಬೇಕೆಂದು ಅನಿಸಿದೆಯಾ ಎಂದು ಕೇಳಿದ್ದಾರೆ ಇದಕ್ಕೆ ಉತ್ತರಿಸಿದ ದರ್ಶನ್ ಅವರು ಇದರಲ್ಲಿ ನನ್ನದೇನು ಇಲ್ಲ ನನಗೆ ಆ ಬಗ್ಗೆ ಯೋಚನೆ ಇಲ್ಲ.

ಯಾಕೆಂದರೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಈ ರೀತಿ ಮಾಡುತ್ತಿದ್ದಾರೆ, ನನ್ನ ಹೆಂಡತಿಗೆ ಇಂಗ್ಲಿಷ್ ಶಾಲೆಯಲ್ಲಿ ಓದಿಸುವ ಶೋಕಿ ಇರುವುದು ಹಾಗಾಗಿ ಅವರಿಗಾಗಿ ಸುಮ್ಮನಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. ಆದರೆ ನಾನು ನನ್ನ ಮಗನಿಗೆ ಬದುಕುವುದು ಹಾಗೂ ದುಡಿಯುವುದನ್ನು ಕಲಿಸುತ್ತಿದ್ದೆನೆ ಅಷ್ಟೇ.

ಈಗ ಮಗನಿಗೆ 14 ವರ್ಷ ಇನ್ನೂ ಒಂದು ವರ್ಷ ಸಮಯ ಕೊಟ್ಟಿದ್ದೇನೆ. ನಂತರ ಅವನು ವಿದ್ಯಾಭ್ಯಾಸದಲ್ಲಿ ಮುಂದುವರಿಯಬೇಕಾ ಅಥವಾ ಬೇರೆ ಯಾವುದಾದರೂ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕಾ ಎಂದು ಅವನೇ ನಿರ್ಧರಿಸಬೇಕು. ಅದಕ್ಕೆ ತಕ್ಕ ಹಾಗೆ ಅವನನ್ನು ರೂಪಿಸುವುದು ನನ್ನ ಜವಾಬ್ದಾರಿ, ಆಯ್ಕೆ ಮಾತ್ರ ಅವನಿಗೆ ಬಿಟ್ಟಿದ್ದೇನೆ.

ಈಗಿನ ಪ್ರಪಂಚದಲ್ಲಿ ಕಾಂಪಿಟೇಶನ್ ಬಹಳ ಇದೆ ಇ ನ್ನು ಸ್ವಲ್ಪ ದಿನ ಹೋದರೆ ಮನುಷ್ಯನೇ ಮನುಷ್ಯನನ್ನು ಬಗೆದು ತಿನ್ನುತ್ತಾನೆ. ಹಾಗಾಗಿ ಎಲ್ಲರೂ ಸಹ ಮಕ್ಕಳಿಗೆ ಬದುಕುವುದನ್ನು ಕಲಿಸಿ ಎಂದು ಹೇಳಿದ್ದಾರೆ. ಮತ್ತು ಮುಂದುವರೆದು ಸಹ ಸಂದರ್ಶನ ಕಾರರಯ ನೀವು ಎಂದಾದರೂ ಮಗನ ಜೊತೆ ಕುಳಿತುಕೊಂಡು ಹೋಂ ವರ್ಕ್ ಮಾಡಿಸಿದ್ದೀರಾ ಎಂದು ಕೇಳಿದ್ದಾರೆ.

ಅದಕ್ಕೆ ಉತ್ತರಿಸಿದ ದರ್ಶನ್ ಅವರು ನಾನೇ 10ನೇ ತರಗತಿ ಕಷ್ಟಪಟ್ಟು ಜಸ್ಟ್ ಪಾಸ್ ಆಗಿದ್ದೇನೆ ಇನ್ನೇನು ಹೋಂವರ್ಕ್ ಮಾಡಿಸಲಿ. ನನ್ನ ತಂದೆ ಎಂದು ನಮ್ಮ ಕೈ ಹಿಡಿದು ಬರೆಸಿದವರಲ್ಲ, ನಮ್ಮ ಮನೆಯಲ್ಲಿ ಇರುವ ಹೆಂಗಸರು ಆ ಕೆಲಸ ನೋಡಿಕೊಳ್ಳುತ್ತಾರೆ. ಮಗನಿಗೆ ಹೋಂವರ್ಕ್ ಮಾಡಲು ಶಾಲೆಯಲ್ಲಿ ಕೊಟ್ಟರೆ, ನನ್ನ ಹೆಂಡತಿಗೆ ಅದು ಹೋಂ ವರ್ಕ್ ರೀತಿ ಆಗಿರುತ್ತದೆ.

ಯಾಕೆಂದರೆ ನನ್ನ ಹೆಂಡತಿ ಶಾಲೆಯಲ್ಲಿ ಕೊಡುವ ಹೋಂವರ್ಕನ್ನು ಗೂಗಲ್ ಮಾಡಿ ಅರ್ಥ ತಿಳಿದುಕೊಂಡು ಬರೆಸುತ್ತಾಳೆ. ಅವಳು ಓದಿರುವುದು ನೋಡಿದರೆ ಇಂಜಿನಿಯರಿಂಗ್ ಗೂಗಲ್ ನಲ್ಲಿ ಹುಡುಕಿ ಮಾಡುವುದಾದರೆ ಇಂಜಿನಿಯರಿಂಗ್ ಓದಿ ಪ್ರಯೋಜನವೇನು ಬಂತು ಎಂದು ಲೈಟಾಗಿ ಪತ್ನಿಯ ಕಾಲೆಳೆದು ಮಾತನಾಡಿದ್ದಾರೆ.

ಎಂಗೆಜ್ಮೆಂಟ್ ಮುರಿದು ಬಿದ್ದ ಮೇಲೆ ಮನಸ್ಸಿನ ನೋವು ದೂರ ಮಾಡಿಕೊಳ್ಳಲು ಮನ ಬಿಚ್ಚಿ ಕುಣಿದ ನಟಿ ವೈಷ್ಣವಿ ಗೌಡ ಈ ವಿಡಿಯೋ ನೋಡಿ.

ಎಂಗೆಜ್ಮೆಂಟ್ ಮುರಿದು ಬಿದ್ದ ಮೇಲೆ ಮನಸ್ಸಿನ ನೋವು ದೂರ ಮಾಡಿಕೊಳ್ಳಲು ಮನ ಬಿಚ್ಚಿ ಕುಣಿದ ನಟಿ ವೈಷ್ಣವಿ ಗೌಡ ಈ ವಿಡಿಯೋ ನೋಡಿ.

ಸದ್ಯಕ್ಕೆ ಕಿರುತೆರೆ ನಟಿ ವೈಷ್ಣವಿ ಗೌಡ ಅಲಿಯಾಸ್ ಸನ್ನಿಧಿ ಅವರು ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸುದ್ದಿ ಆಗುತ್ತಿದ್ದಾರೆ. ಮದುವೆ ವಿಚಾರವಾಗಿ ಆದ ವಿವಾದದಿಂದಾಗಿ ಪ್ರತಿನಿತ್ಯ ಈಗ ಅವರ ವಿಷಯದ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಇದನ್ನು ನೋಡಿ ನಟಿ ಕಂಗಾಲು ಆಗಿದ್ದಾರೆ.

ಅವರ ತಾಯಿಯೇ ಹೇಳಿಕೆ ಕೊಟ್ಟಂತೆ ನನ್ನ ಜೀವನದಲ್ಲೇ ಇದೆಲ್ಲ ಆಗಬೇಕಾಗಿದ್ದ ಎಂದು ದುಃಖಿಸಿರುವ ವೈಷ್ಣವಿ ಗೌಡ ಅವರು ಇದರಿಂದ ಬಹಳ ನೊಂದುಕೊಂಡು ಅಮ್ಮನ ಮಡಿಲಲ್ಲಿ ಮಲಗಿ ಕಣ್ಣೀರಿಟ್ಟಿದ್ದಾರಂತೆ.

ಸೆಲಬ್ರೆಟಿಗಳ ಜೀವನದಲ್ಲಿ ಇದೆಲ್ಲವೂ ಬಹಳ ಸಹಜ ಘಟನೆ ಆಗಿದೆ. ಸಾಮಾನ್ಯರ ಜೀವನದಲ್ಲೂ ಇದೆಲ್ಲ ನಡೆದರೂ ಸೆಲೆಬ್ರಿಟಿಗಳ ವಿಷಯ ಬಂದಾಗ ಅದು ಹೆಚ್ಚು ವದಂತಿ ಆಗುತ್ತದೆ. ಹೀಗಾಗಿ ಸುಖಾ ಸುಮ್ಮನೆ ಹಾಡಿಕೊಳ್ಳುವರಿಗೆ ಹಾಟ್ ಟಾಪಿಕ್ ಅದನ್ನೆಲ್ಲ ಎಂದು ವೈಷ್ಣವಿ ಬೇಸರಿಸಿಕೊಂಡು ಇದೇ ಬೇಸರದಲ್ಲಿ ತಮ್ಮ ದಿನನಿತ್ಯದ ಕಾರ್ಯಗಳತ್ತ ತೊಡಗಿಕೊಂಡಿದ್ದಾರೆ.

ಸದ್ಯಕ್ಕೆ ನಟಿ ವೈಷ್ಣವಿ ಗೌಡ ಅವರು ಪಾಂಡವಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಒಂದಕ್ಕೆ ನೃತ್ಯ ಮಾಡಲು ಹೋಗಿದ್ದು ತಂಡದೊಂದಿಗೆ ಅವರು ನೃತ್ಯ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕಿರುತೆರೆಯ ಡ್ಯಾನ್ಸಿಂಗ್ ಶೋಗಳ ಜನಪ್ರಿಯ ಕೊರಿಯೋಗ್ರಾಫರ್ ಆಗಿರುವ ರುದ್ರ ಮಾಸ್ಟರ್ ಅವರು ವೈಷ್ಣವಿ ನೃತ್ಯ ಮಾಡುತ್ತಿರುವ ತಂಡಕ್ಕೆ ಕೊರಿಯೋಗ್ರಾಫ್ ಮಾಡುತ್ತಿದ್ದು ಅವರ ಗರಣಿನಲ್ಲಿ ಸನ್ನಿಧಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ.

ಈಗ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಅವರು ಶಿವಣ್ಣ ಅವರ ಜೋಗಯ್ಯ ಸಿನಿಮಾದ ಯಾರು ಕಾಣದೂರು ಯಾರು ಇಲ್ಲದೋರು ಅಲ್ಲಿ ನಾನು ನೀನೇ ಕೇಳು ಜೋಗಿ ಎನ್ನುವ ಹಾಡಿಗೆ ನವಿಲುನಂತೆ ನರ್ತಿಸುತ್ತಿರುವುದು ಕಾಣ ಬರುತ್ತದೆ. ವೇದಿಕೆ ಮೇಲೆ ತಂಡದ ಜೊತೆ ಪ್ರಾಕ್ಟೀಸ್ ಮಾಡುತ್ತಾ ಕುಣಿಯುತ್ತಿರುವ ವೈಷ್ಣವಿ ಅವರನ್ನು ನೋಡಿದರೆ ಇಷ್ಟೆಲ್ಲ ಆದ ಮೇಲೆ ಆ ನೋವಿನಿಂದ ಹೊರ ಬರಲು ಅವರು ಈ ರೀತಿ ನೃತ್ಯ ಮಾಡುತ್ತಿದ್ದೀರಾ ಎನಿಸುವಂತೆ ಅದರಲ್ಲಿ ಮುಳುಗಿ ಹೋಗಿದ್ದಾರೆ.

ಸಾಮಾನ್ಯವಾಗಿ ಬೇಸರವಾದಾಗ ಎಲ್ಲರೂ ಸಹ ಅದನ್ನು ತೋರಿಸಿಕೊಂಡು ಬಿಡುತ್ತಾರೆ. ಆದರೆ ವೈಷ್ಣವಿ ಅವರು ಬಹಳ ಸ್ಟ್ರಾಂಗ್ ಆಗಿರುವ ಗರ್ಲ್ ಆಗಿದ್ದಾರೆ. ಮೆಡಿಟೇಶನ್ ಯೋಗ ಈ ರೀತಿ ತಮ್ಮ ಭಾವನೆಗಳನ್ನು ಕಂಟ್ರೋಲ್ ಮಾಡುವುದರಲ್ಲಿ ಎಕ್ಸ್ಪರ್ಟ್ ಆಗಿರುವ ಇವರ ವ್ಯಕ್ತಿತ್ವ ಬಿಗ್ ಬಾಸ್ ಮನೆಯಲ್ಲೇ ಎಲ್ಲರಿಗೂ ಪರಿಚಯವಾಗಿತ್ತು ಈಗಲೂ ಸಹ ಮನದಲ್ಲಿ ಎಷ್ಟು ನೋವಿದ್ದರೂ ಅದನ್ನು ಕುಟುಂಬಕ್ಕೆ ಸೀಮಿತ ಮಾಡಿ ಹೊರಗಡೆ ಏನು ಆಗಿಲ್ಲ ಎನ್ನುವಂತೆ ನಗುನಗುತ್ತಾ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ.

ಕೆಲ ಮಾಹಿತಿಗಳ ಪ್ರಕಾರ ಇದು ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ ವೇದ ಸಿನಿಮಾಗಾಗಿ ನಡೆಯುತ್ತಿರುವ ಕಾರ್ಯಕ್ರಮ ಆಗಿದ್ದು ನೃತ್ಯಗಳಲ್ಲಿ ಬಹಳ ಆಸಕ್ತಿ ಹೊಂದಿರುವ ಸನ್ನಿಧಿ ಅವರು ಈ ಕಾರ್ಯಕ್ರಮದಲ್ಲಿ ಒಂದು ಭಾಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಸನ್ನಿಧಿ ಅವರ ಚಿಕ್ಕವಯಸ್ಸಿನಿಂದಲೂ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದ್ದು ಭರತನಾಟ್ಯ ಮತ್ತು ಬೆಲ್ಲಿ ಡ್ಯಾನ್ಸ್ ಪ್ರವೀಣತೆ ಕೂಡ ಆಗಿದ್ದಾರೆ.

ಈಗಾಗಲೇ ಕಿರುತೆರೆ ಹಲವು ಕಾರ್ಯಕ್ರಮಗಳಲ್ಲಿ ಇವರ ಡ್ಯಾನ್ಸ್ ಝಲಕ್ ನೋಡಿ ಪ್ರೇಕ್ಷಕರ ವಾವ್ ಎಂದು ಹೇಳಿದ್ದಾರೆ. ಸದ್ಯಕ್ಕೆ ತಮ್ಮ ನೆಚ್ಚಿನ ಡ್ಯಾನ್ಸ್ ಮಾಡುವ ಮೂಲಕ ಮನದ ನೋವನ್ನು ಹೊರ ಹಾಕುವ ಪ್ರಯತ್ನದಲ್ಲಿದ್ದಾರೆ ಸನ್ನಿಧಿ.

ನನ್ನ ಈ ಗತಿಗೆ ತಂದವ್ರನ್ನ ಯಾವ್ದೆ ಕಾರಣಕ್ಕೂ ಸುಮ್ನೆ ಬಿಡಲ್ಲ, ಪಬ್ಲಿಕ್ ನಲ್ಲಿ ಮುಖ ಮುಚ್ಚಿ ತಿರುಗಡೋ ಪರಿಸ್ಥಿತಿ ತಂದ್ಬಿಟ್ರು ಎಂದು ಗರಂ ಆದ ರಶ್ಮಿಕಾ.

 

 

ಸ್ಯಾಂಡಲ್ ವುಡ್ ಅಲ್ಲಿ ಬಾಯ್ಕಾಟ್ ಮಾತು ಕೇಳುತ್ತಿದ್ದಂತೆ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಗೆ ಬಂದ ರಶ್ಮಿಕ.

ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದ ಸಾನ್ವಿ ಪಾತ್ರದಲ್ಲಿ ನಟಿಸಿದಾಗ ಇಡೀ ಕರ್ನಾಟಕದ ನಮ್ಮ ಮನೆಯ ಸಾನ್ವಿ ಎಂದು ಹೇಳುವಷ್ಟು ಪ್ರೀತಿ ಪಾತ್ರರಾಗಿದ್ದರು. ಆದರೆ ಯಾವಾಗ ಪರಭಾಷೆಗಳಲ್ಲಿ ಅಭಿನಯಿಸುವ ಅವಕಾಶಗಳು ಹೆಚ್ಚಾಗಿ ಬಂತು, ಇವರು ಕನ್ನಡ ಹಾಗೂ ಕರ್ನಾಟಕಕ್ಕೆ ನಾನು ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಳ್ಳಲು ಶುರು ಮಾಡಿದರು.

ಒಂದರ ಮೇಲೆ ಒಂದರಂತೆ ಸಾಲು ಸಾಲು ಈ ರೀತಿ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಅವಮಾನ ಮಾಡುವ ರೀತಿ ವರ್ತಿಸಿದ ರಶ್ಮಿಕ ಮಂದಣ್ಣ ಅವರ ಮೇಲೆ ಕನ್ನಡಿಗರು ಕೆಂಡ ಕಾರಿದರು. ಅಲ್ಲದೆ ರಕ್ಷಿತ್ ಜೊತೆ ನಿಶ್ಚಿತಾರ್ಥ ಮುರಿದುಕೊಂಡ ಬಳಿಕ ಇವರು ರಕ್ಷಿತ್ ಮನಸನ್ನು ಮಾತ್ರ ಅಲ್ಲದೆ ಇಡೀ ಕರ್ನಾಟಕದ ಕೋಟಿ ಕೋಟಿ ಜನರ ಹೃದಯ ಒಡೆದರು.

ಇದಕ್ಕೆ ತಕ್ಕ ಹಾಗೆ ಕನ್ನಡಿಗರು ಸಹ ಈಕೆಯನ್ನು ಸಾಕಷ್ಟು ಟ್ರೋಲ್ ಮಾಡಿ ಕೋಪ ತೀರಿಸಿಕೊಳ್ಳುವ ಪ್ರಯತ್ನ ಮಾಡಿದರು. ಇಷ್ಟಾದರೂ ಇನ್ನು ಸಹ ಈಕೆಯ ತರಲೆ ಮತ್ತು ಚೇಷ್ಟೆಗಳು ನಿಂತಿಲ್ಲ ಇತ್ತೀಚೆಗಷ್ಟೇ ರಶ್ಮಿಕ ಮಂದಣ್ಣ ಹಿಂದಿಯ ಇಂಟರ್ವ್ಯೂ ಒಂದರಲ್ಲಿ ತನ್ನ ಆಕ್ಟಿಂಗ್ ಕೆರಿಯರ್ ಹೆಂಗೆ ಶುರುವಾಯಿತು ಎಂದು ಹೇಳಿಕೊಳ್ಳುವಾಗ ತನಗೆ ಅವಕಾಶ ಕೊಟ್ಟು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣಕರ್ತರಾದ ಮೊದಲ.

ಸಿನಿಮಾ ಮತ್ತು ಮೊದಲ ನಿರ್ದೇಶಕ ಹಾಗೂ ನಿರ್ಮಾಣ ಸಂಸ್ಥೆಯ ಹೆಸರು ಹೇಳಿಕೊಳ್ಳಲು ಇಷ್ಟಪಡದೆ ಕೋಟ್ ಚಿಹ್ನೆ ಮಾಡಿ ತೋರಿಸಿ ಎಡವಟ್ಟು ಮಾಡಿದರು. ಇದಕ್ಕೆ ತಕ್ಕ ಹಾಗೆ ಅವಕಾಶ ಸಿಕ್ಕಾಗ ರಿಷಬ್ ಶೆಟ್ಟಿ ಕೂಡ ಅದೇ ಬಾಲಿವುಡ್ ಇಂಟರ್ವ್ಯೂ ಅಲ್ಲಿ ಅವರು ಮಾಡಿದ್ದ ಚಿಹ್ನೆಯನ್ನು ತೋರಿಸಿ ಇಂತಹ ನಟಿಯರು ನನಗೆ ಇಷ್ಟ ಆಗುವುದಿಲ್ಲ ಎಂದು ತಿರುಗೇಟು ನೀಡಿದ್ದರು.

ರಶ್ಮಿಕ ಈ ವರ್ತನೆಯಿಂದ ಕನ್ನಡಿಗರ ಮನಸ್ಸಿಗೆ ಸಾಕಷ್ಟು ನೋವಾಗಿದೆ. ಈ ಹಿಂದೆ ಮಾಧ್ಯಮದವರು ಕಾಂತರಾ ಸಿನಿಮಾ ನೋಡಿದ್ದೀರಾ ಎಂದು ಪ್ರಶ್ನಿಸಿದಾಗಲೂ ಕೂಡ ಕನ್ನಡದ ಸಿನಿಮಾವೊಂದು ವಿಶ್ವದಾದ್ಯಂತ ಇಷ್ಟು ಹೆಸರು ಮಾಡುತ್ತಿದೆ ಅದರ ಬಗ್ಗೆ ಕುತೂಹಲಕ್ಕಾದರು ನೋಡಬೇಕು ತಿಳಿದುಕೊಳ್ಳಬೇಕು ಎನ್ನುವ ಜವಾಬ್ದಾರಿಯನ್ನು ತೋರದೆ ಇನ್ನು ಇಲ್ಲ ಎಂದು ಸನ್ನೆ ಮಾಡಿ ಹೋದ ರಶ್ಮಿಕ ಅವರ ನಡತೆ ಕೂಡ ಬೇಸರ ತರಿಸಿದೆ.

ಇದೆಲ್ಲವನ್ನು ಇಷ್ಟು ದಿನ ಸಹಿಸಿಕೊಂಡಿದ್ದ ಕನ್ನಡಿಗರು ಈಗ ತಿರುಗಿ ಬಿದ್ದಿದ್ದು ರಶ್ಮಿಕ ಮಂದಣ್ಣ ಅವರನ್ನು ಕನ್ನಡ ಸಿನಿಮಾದಿಂದ ಬ್ಯಾನ್ ಮಾಡಬೇಕು ಎಂದು ಬಾರಿ ಅಭಿಯಾನ ಮಾಡುತ್ತಿದ್ದಾರೆ. ಈಗ ರಶ್ಮಿಕ ಮಂದಣ್ಣ ಪರಿಸ್ಥಿತಿ ಹೇಗಾಗಿದೆ ಎಂದರೆ ಮುಂಬೈನ ಏರ್ಪೋರ್ಟ್ ಒಂದರಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಲೆಗೆ ಕ್ಯಾಪ್ ಹಾಕಿಕೊಂಡು ಕದ್ದು ಮುಚ್ಚಿ ಓಡಾಡುತ್ತಿದ್ದಾರೆ.

ಹಿಂದೆಲ್ಲ ತುಂಡು ಉಡುಗೆ ತೊಟ್ಟು ಗ್ಲಾಮರ್ ಆಗಿ ಸಾರ್ವಜನಿಕ ಸ್ಥಳ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕಾ ಮಂದಣ್ಣ ಅವರು ಈ ರೀತಿ ಈಗ ಕಾಣಿಸಿಕೊಂಡಿರುವುದು ನೋಡಿದರೆ ಬಾಯ್ಕಾಟ್ ಬಿಸಿ ಅವರಿಗೆ ತಟ್ಟಿರುವ ರೀತಿ ಇದೆ ಎಂದು ಕನ್ನಡಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇಷ್ಟು ದಿನ ನ್ಯಾಷನಲ್ ಕ್ರಶ್ ಆಗಿ ಮೆರೆದಿದ್ದ ರಶ್ಮಿಕ ಮಂದಣ್ಣ ಅವರ ಅದೃಷ್ಟ ದಿನೇ ದಿನೇ ಕಡಿಮೆ ಆಗುತ್ತಿದ್ದು ಈ ವರ್ಷ ಮಾಡಿದ ಸಾಲು ಸಾಲು ಸಿನಿಮಾಗಳು ಫ್ಲಾಫ್ ಆಗಿ ಹಳ್ಳ ಹಿಡಿದಿವೆ. ಮುಂದೆ ರಶ್ಮಿಕಾ ಪರಿಸ್ಥಿತಿ ಏನಾಗಲಿದೆ ಎಂದು ಕನ್ನಡಿಗರು ಕುತೂಹಲದಿಂದ ನೋಡುತ್ತಿದ್ದಾರೆ.

ಡಾಲಿ ಅಭಿನಯದ “ಟಗರು ಪಲ್ಯ” ಸಿನಿಮಾಗೆ ನಾಯಕ ನಟಿಯಾಗಿ ಆಯ್ಕೆ ಆಗಿರುವ ಪ್ರೇಮ್ ಮಗಳು ಅಮೃತ ಇಟ್ಟ ದುಬಾರಿ ಸಂಭಾವನೆ ಎಷ್ಟು ಗೊತ್ತ.?

ಅಮೃತ ಪ್ರೇಮ್

ನೆನಪಿರಲಿ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಆಗಿ ಅದೇ ಹೆಸರಿನೊಂದಿಗೆ ಹೆಸರು ಉಳಿಸಿಕೊಂಡ ನೆನಪಿರಲಿ ಪ್ರೇಮ್ ಎನ್ನುವ ಸ್ಯಾಂಡಲ್ ವುಡ್ ಲವ್ಲಿ ಸ್ಟಾರ್ ಈಗಲೂ ಕೂಡ ಹೆಂಗಳೆಯರ ಡ್ರೀಮ್ ಬಾಯ್ ಆಗಿದ್ದಾರೆ. ಕಳೆದ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಸಾಲು ಸಾಲು ಸೂಪರ್ ಹಿಟ್ ಮನರಂಜನ ಚಿತ್ರಗಳನ್ನು ಕೊಟ್ಟಿರುವ ಪ್ರೇಮ್ ಅವರ ಪುತ್ರಿ ಕೂಡ ಚಿತ್ರರಂಗದಲ್ಲಿ ನಾಯಕ ನಟಿ ಆಗಿ ಲಾಂಚ್ ಆಗುವಷ್ಟು ದೊಡ್ಡವರಾಗಿದ್ದಾರೆ.

ಅಪ್ರತಿಮ ಸುಂದರಿ ಅಂದಕ್ಕೆ ತಕ್ಕ ಪ್ರತಿಭೆ ಮತ್ತು ಈಗಾಗಲೇ ಸಿನಿಮಾ ರಂಗಕ್ಕೆ ಸೇರಿಕೊಳ್ಳಲು ಬೇಕಾದ ಎಲ್ಲಾ ತರಗತಿ ಪಡೆದು ತಯಾರಾಗಿರುವ ಪ್ರೇಮ್ ಪುತ್ರಿ ಅಮೃತ ಅವರನ್ನು ಡಾಲಿ ಧನಂಜಯ್ ಅವರ ನಿರ್ಮಾಣದ ಡಾಲಿ ಪಿಕ್ಚರ್ಸ್ ಸಂಸ್ಥೆಯು ಲಾಂಚ್ ಮಾಡಲು ಒಪ್ಪಿಕೊಂಡಿದೆ. ಡಾಲಿ ಧನಂಜಯ್ ಅವರೇ ನಾಯಕನಾಗಿ ಮತ್ತು ನಿರ್ವಾಪಕನಾಗಿ ಕೂಡ ಕಾಣಿಸಿಕೊಳ್ಳುತ್ತಿರುವ ಮೂರನೇ ಸಿನಿಮಾ ಆದ ಟಗರು ಪಲ್ಯ ಸಿನಿಮಾದಲ್ಲಿ ಅಮೃತ ಅವರು ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸುದ್ದಿ ವಾರದಿಂದ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗುತ್ತಿದೆ. ಇದುವರೆಗೆ ತಂದೆ ಸಿನಿಮಾ ವಿಷಯದಲ್ಲಿ ಹಾಗೂ ವಿದ್ಯಾಭ್ಯಾಸದಲ್ಲಿ ಬಹಳ ಮುಂದೆ ಇರುವ ಕಾರಣಕ್ಕಾಗಿ ಸುದ್ದಿ ಆಗುತ್ತಿದ್ದ ಅಮೃತ ಅವರು ನಾಯಕನಟಿ ಆಗುತ್ತಿರುವ ಬಗ್ಗೆ ಸುದ್ದಿ ವರದಿ ಆಗುತ್ತಿದ್ದಂತೆ ಸಿನಿಮಾ ಇಂಡಸ್ಟ್ರಿ ಹಲವಾರು ಕಲಾವಿದರುಗಳು ಮತ್ತು ಪ್ರೇಮ್ ಅಭಿಮಾನಿಗಳು ಶುಭ ಹಾರೈಸಿ, ಚಿತ್ರರಂಗಕ್ಕೆ ವೆಲ್ಕಮ್ ಕೂಡ ಮಾಡಿದ್ದಾರೆ.

ಮತ್ತು ಟಗರು ಪಲ್ಯ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು ಅಮೃತ ಅವರ ಫೋಟೋಶೂಟ್ ಕೂಡ ಆಗಿದೆ ,ಎಲ್ಲಾ ಫೋಟೋಗಳು ಬಹಳ ಗ್ರಾಂಡ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಅದೇ ಟ್ರೆಂಡಿಂಗ್ ನ್ಯೂಸ್ ಆಗಿದೆ. ಮೊದಲ ಸಿನಿಮಾಗೆ ಅವಕಾಶ ಪಡೆಯಲು ಹಲವು ಜನರು ಬಹಳ ಸಾಹಸ ಪಟ್ಟಿರುತ್ತಾರೆ. ಸಿನಿಮಾ ಇಂಡಸ್ಟ್ರಿಗೆ ಸಂಬಂಧಪಟ್ಟವರ ಮಕ್ಕಳೇ ಆದರೂ ಸಹ ಎಷ್ಟೋ ಜನಕ್ಕೆ ಈ ಹಾದಿ ಅಷ್ಟು ಸುಲಭದಲ್ಲ.

ಹೀಗಾಗಿ ತಮ್ಮ ಆರಂಭಿಕ ದಿನಗಳ ಅವಕಾಶಗಳಿಗಾಗಿ ಎಷ್ಟೋ ಜನ ಸಂಭಾವನೆ ಕೂಡ ಪಡೆಯದೆ ನಡೆಸುವವರು ಸಹ ಇದ್ದಾರೆ. ಆದರೆ ಪ್ರೇಮ್ ಪುತ್ರಿ ತನ್ನ ಮೊದಲ ಸಿನಿಮಾಗೆ ಡಿಮ್ಯಾಂಡ್ ಮಾಡಿರುವ ಸಂಭಾವನೆ ಬಗ್ಗೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಅಮೃತ ಅವರು ಟಗರು ಪಲ್ಯ ಸಿನಿಮಾದಲ್ಲಿ ಅಭಿನಯ ಮಾಡಲು ಬರೋಬ್ಬರಿ 10 ಲಕ್ಷ ರೂಗಳನ್ನು ಸಂಭಾವನೆ ಆಗಿ ಕೇಳಿದ್ದಾರೆ ಎನ್ನುವ ಬಗ್ಗೆ ಮಾಹಿತಿಗಳು ದೊರೆತಿದ್ದು ಎಲ್ಲರೂ ಇದರ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಸ್ವತಃ ಪ್ರೇಮ್ ಅವರಿಗೆ ತಮ್ಮ ಕೆರಿಯರ್ ಆರಂಭದಲ್ಲಿ ಬಹಳ ಸ್ಟ್ರಗಲಿಂಗ್ ಇತ್ತು, ಅವರೇ ಒಂದು ಆಡಿಶನ್ ನಲ್ಲಿ ಭಾಗವಹಿಸಲು ಸ್ನೇಹಿತ ಬಳಿಯೆಲ್ಲಾ ಕೇಳಿ ಒಂದು ಬ್ಯಾಗ್ ಬಟ್ಟೆ ತೆಗೆದುಕೊಂಡು ಹೋಗಿದ್ದರಂತೆ ಮತ್ತು ನಿಜ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿ ನಟಿಸಿದ್ದರು ಅದು ಹೆಸರು ಮಾಡಲೇ ಇಲ್ಲ, ನೆನಪಿರಲಿ ಎನ್ನುವುದು ನನ್ನ ಪಾಲಿಗೆ ಬಹುದೊಡ್ಡ ವರ ಎನ್ನುವುದನ್ನು ಸಂದರ್ಶನ ಒಂದರಲ್ಲಿ ಪ್ರೇಮ್ ಹೇಳಿಕೊಂಡಿದ್ದರು. ಆದರೆ ಮೊದಲ ಸಿನಿಮಾದಲ್ಲಿಯೇ ಈ ಮಟ್ಟದ ಸಂಭಾವನೆಗೆ ಡಿಮ್ಯಾಂಡ್ ಮಾಡಿರುವ ಅಮೃತ ಅವರ ಸ್ಟಾರ್ಟಿಂಗ್ ಚೆನ್ನಾಗಿಯೇ ಇದ್ದು ಮುಂದೆ ಇದು ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕಾಗಿದೆ.

ಮೆಜೆಸ್ಟಿಕ್ ಸಿನಿಮಾಗೆ 1 ರೂಪಾಯಿ ಸಂಭಾವನೆ ಇಲ್ಲ, ಕರಿಯಾ ಸಿನಿಮಾಗೆ 5 ಸಾವಿರ ಸಂಭಾವನೆ, 1 ಲಕ್ಷ ಸಂಭಾವನೆ ಪಡೆಯೋಕೆ 9 ಸಿನಿಮಾದಲ್ಲಿ ನಟಿಸಿದ್ದಿನಿ ಎಂದು ಭಾವುಕರಾದ ದರ್ಶನ್.

ಮೆಜಸ್ಟಿಕ್, ಕರಿಯ, ಕಲಾಸಿಪಾಳ್ಯದಿಂದ ಕ್ರಾಂತಿವರೆಗೆ 25 ವರ್ಷದ ಸಿನಿ ಜರ್ನಿ

ಚಾಲೆಂಜಿಂಗ್ ಸ್ಟಾರ್ ಎಂದೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ದರ್ಶನ್ ಅವರು ಈಗಲೂ ಸಹ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಯಜಮಾನ. ಬಾಕ್ಸ್ ಆಫೀಸ್ ಸುಲ್ತಾನ ಎನ್ನುವ ಟೈಟಲ್ ಪಡೆದಿದ್ದರೂ ಕೂಡ ಅಭಿಮಾನಿಗಳ ಪಾಲಿಗಂತು ಪ್ರೀತಿಯ ದಚ್ಚು ದರ್ಶನ್ ಅವರು 55 ಸಿನಿಮಾಗಳನ್ನು ಮಾಡಿ ತಮ್ಮ ಸಿನಿ ಜರ್ನಿಯ 25ನೇ ವಸಂತದಲ್ಲಿದ್ದಾರೆ.

ಈ ಸಮಯಕ್ಕೆ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಜನವರಿ 26 ಕ್ಕೆ ಬಿಡುಗಡೆ ಆಗಿ ಹೊಸ ಬಗೆಯ ಕ್ರಾಂತಿ ಮಾಡಲು ತಯಾರಾಗಿದೆ. ಇದರ ಸಲುವಾಗಿ ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ದರ್ಶನ್ ಅವರು ಸಹ ಫೇಮಸ್ ಯುಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ಕೊಡುವ ಮೂಲಕ ಸಿನಿಮಾ ಕುರಿತು ಮತ್ತು ಸಿನಿಮೇತರ ವಿಷಯದ ಕುರಿತು ತಮ್ಮನ್ನು ಕೇಳುತ್ತಿರುವ ಪ್ರಶ್ನೆಗಳಿಗೆಲ್ಲ ನೇರವಾಗಿ ಉತ್ತರಿಸುತ್ತಿದ್ದಾರೆ.

ಡೆಕ್ಕನ್ ಹೆರಾಲ್ಡ್ ಎನ್ನುವ ಯೂಟ್ಯೂಬ್ ಚಾನೆಲ್ ದರ್ಶನ್ ಅವರ ಇಂಟರ್ವ್ಯೂ ಮಾಡಿದ್ದು ದರ್ಶನ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮುಖ್ಯವಾಗಿ ಮೊದಲಿಗೆ ಕ್ರಾಂತಿ ಸಿನಿಮಾ ಬಗ್ಗೆ ಕೇಳಿದಾಗ ಕ್ರಾಂತಿ ಸಿನಿಮಾವು ಶಿಕ್ಷಣ ವ್ಯವಸ್ಥೆಯ ವ್ಯತ್ಯಾಸವನ್ನು ಅದರಲ್ಲೂ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಈಗಿನ ವಿದ್ಯಾಭ್ಯಾಸದ ಕುರಿತು ಬೆಳಕು ಚೆಲ್ಲುವ ಪ್ರಾಜೆಕ್ಟ್ ಆಗಿತ್ತು ಸಿನಿಮಾ ಮನೋರಂಜನೆ ಜೊತೆ ಸಂದೇಶ ಸಾರುವ ಸಿನಿಮಾ ಆಗಿದೆ.

ಯಜಮಾನ ಟೀಮ್ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು ಯಜಮಾನ ಸಿನಿಮಾದಂತೆ ಇದರಲ್ಲೂ ಸಹ ಸಂದೇಶವನ್ನು ಕಮರ್ಷಿಯಲ್ ಆಗಿ ರವಾನಿಸಿದ್ದೇವೆ ಎಂದು ದರ್ಶನ್ ಉತ್ತರಿಸಿದ್ದಾರೆ. ಇನ್ನು ದರ್ಶನ್ ಅವರ ಸಿನಿ ಜರ್ನಿ ಬಗ್ಗೆ ಸಂದರ್ಶಕರು ಪ್ರಶ್ನೆ ಕೇಳಿ ಕರಿಯ, ಕಲಾಸಿಪಾಳ್ಯ ಸಿನಿಮಾದಿಂದ ಹಿಡಿದು ಕ್ರಾಂತಿ ಸಿನಿಮಾದವರೆಗೆ ನಿಮ್ಮ ಜರ್ನಿಯಲ್ಲಿ ಆದ ಬದಲಾವಣೆ ಏನು ಎಂದು ಕೇಳಿದ್ದಾರೆ.

ಅದಕ್ಕೆ ದರ್ಶನ್ ಅವರು ನಾನಂತೂ ಏನು ಬದಲಾಗಿಲ್ಲ ನಾನು ಆಗ ಹೇಗಿದ್ದೇನೋ ಈಗಲೂ ಹಾಗೆ ಇದ್ದೇನೆ ಆದರೆ ಸಿನಿಮಾಗಳು ಬದಲಾಗಿವೆ ಅಷ್ಟೇ. ನಾನು ಮೊದಲ ಸಿನಿಮಾ ಮಾಡಿದ್ದಾಗ 39 ರಿಂದ 40 ಲಕ್ಷದ ಒಳಗೆ ಮೆಜೆಸ್ಟಿಕ್ ಮುಗಿದಿತ್ತು. ಅದು ನನ್ನ ಮೊದಲನೇ ಅವಕಾಶ ಸಂಭಾವನೆ ಇಲ್ಲದೆ ಕೆಲಸ ಮಾಡಿದ್ದೆ. ಆನಂತರ ನಿನಗೋಸ್ಕರ, ನೀನಂದ್ರೆ ಇಷ್ಟ ಸಿನಿಮಾಗಳಿಗಾಗಿ 10 ರಿಂದ 12,000 ಪಡೆದಿರಬಹುದು.

ಕರಿಯ ಎನ್ನುವ ಬ್ಲಾಕ್ ಬ್ಲಾಸ್ಟರ್ ಸಿನಿಮಾ ಕೊಟ್ಟಾಗ ನಾನು 5000 ರ ರೂಗಳ ಹೀರೊ ಆಗಿದ್ದೆ ಮತ್ತು ಕೆಲವೊಮ್ಮೆ ಒಂದು ಲಕ್ಷ ತೆಗೆದುಕೊಂಡು 9 ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಇಂದು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರಬಹುದು, ಸಿನಿಮಾಗಳು ಕೂಡ ಈಗ ಕನ್ನಡ ಸಿನಿಮಾಗಳ ಜೊತೆ ಮಾತ್ರ ಅಲ್ಲದೆ ಬೇರೆ ಸಿನಿಮಾಗಳ ಜೊತೆ ಕಾಂಪಿಟೇಶನ್ ಮಾಡಬೇಕಾಗಿರುವುದರಿಂದ ಅವುಗಳು ಅಷ್ಟೇ ದೊಡ್ಡ ಬಜೆಟ್ಗಳಲ್ಲಿ ತಯಾರಾಗುತ್ತಿವೆ, ಬದಲಾವಣೆ ಆಗಿರುವುದು ಈ ವಿಚಾರದಲ್ಲಿ ಅಷ್ಟೇ ಎಂದು ಹೇಳಿದ್ದಾರೆ.

ಮುಂದುವರೆದು ಆಕ್ಟಿಂಗ್ ಬಗ್ಗೆ ಕೇಳಿದಾಗ ನನಗೆ ಸ್ಟಾರ್ ಹೀರೋ ಆಗಿ ಅಭಿನಯಿಸುವುದು ಸ್ವಲ್ಪ ಸರಳ ಆದರೆ ಹಿಸ್ಟಾರಿಕಲ್ ಅಥವಾ ಮೈತಾಲಜಿಕಲ್ ಪಾತ್ರಗಳಲ್ಲಿ ನಟಿಸುವಾಗ ಸ್ವಲ್ಪ ಕಷ್ಟ ಎನಿಸುತ್ತದೆ ಯಾಕೆಂದರೆ ಈಗಾಗಲೇ ಅದೊಂದು ಪಾತ್ರವಾಗಿದೆ ಯಾರೋ ಆ ರೀತಿ ಇದ್ದು ಹೋಗಿದ್ದಾರೆ. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕಾದಾಗ ನಾನು ಇನ್ನಷ್ಟು ಹೆಚ್ಚು ತಯಾರಿಯಲ್ಲಿ ತೊಡಗಿಕೊಳ್ಳುತ್ತೇನೆ.

ಆ ಪಾತ್ರದ ಬಗ್ಗೆ ತಿಳಿದುಕೊಂಡು ಕಲ್ಪಿಸಿಕೊಂಡು ಜವಾಬ್ದಾರಿಯುತವಾಗಿ ಮಾಡುತ್ತೇನೆ. ಆದರೆ ಹೀರೋ ಆದಾಗ ನಾನು ಏನು ಬೇಕಾದರೂ ಮಾಡಿದರು ಅದೊಂದು ಸ್ಟೈಲ್ ಎನಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಇವರು ಆಡಿದ ಪ್ರತಿ ಮಾತುಗಳು ಕೂಡ ನೇರವಾಗಿದ್ದು, ಅಷ್ಟೇ ಸತ್ಯವಾಗಿದೆ ಅವುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಸಿದ್ದರಾಮಯ್ಯ ಬಯೋಪಿಕ್ ಸಿನಿಮಾ ಸಿದ್ದವಾಗ್ತಿದೆ, ಯಾವ ನಟ ಸಿದ್ದರಾಮಯ್ಯ ಪಾತ್ರ ಮಾಡ್ತಿದ್ದಾರೆ ಗೊತ್ತ.?

 

ಕಾಂಗ್ರೆಸ್ ಪಾಳಯದಲ್ಲಿ ಪ್ರಭಾವಿ ರಾಜಕಾರಣಿ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರ ಬದುಕು ಖಂಡಿತವಾಗಿಯೂ ಒಂದು ಯಶೋಗಾಥೆ ಎಂದರೆ ತಪ್ಪಲ್ಲ. ಯಾಕೆಂದರೆ ಮೈಸೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇವರು ಇಂದು ಅತಿ ಹೆಚ್ಚು ಬಾರಿ ಕರ್ನಾಟಕದ ಹಣಕಾಸು ಮಂತ್ರಿ ಆದ ಖ್ಯಾತಿಗೆ ಒಳಗಾಗಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಆಗಿಯೂ ಕೂಡ ಅಧಿಕಾರ ಹೊಂದಿದ್ದ ಇವರು ಆ ಸಮಯದಲ್ಲಿ ಪ್ರಜೆಗಳಿಗೆ ಕೊಟ್ಟ ಭಾಗ್ಯಗಳು ಕೂಡ ಇನ್ನು ಎಷ್ಟೇ ಪಕ್ಷ ಅಧಿಕಾರಕ್ಕೆ ಬಂದರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತದ್ದು. ಇಲ್ಲಿಯವರೆಗಿನ ಸಿದ್ದರಾಮಯ್ಯ ಅವರ ಬದುಕಿನ ಜರ್ನಿಯ ಒಂದು ಝಲಕ್ ಅನ್ನು ಸಾಧಕರ ವೇದಿಕೆ ಎನಿಸಿಕೊಂಡಿರುವ ಜೀ ಕನ್ನಡ ವಾಹಿನಿ ಮೂಲಕ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಣ್ಣದಾಗಿ ನಾವು ನೋಡಿದ್ದೇವೆ.

ಅದನ್ನು ಅಂದು ನೋಡಿದ ಪ್ರತಿಯೊಬ್ಬರು ಯೋಚನೆ ಮಾಡಿರುತ್ತಾರೆ ಇದು ಯಾವ ಸಿನಿಮಾದ ಕಥೆಗಿಂತಲೂ ಕಡಿಮೆ ಇಲ್ಲ ಎಂದು. ಹಾಗಾಗಿ ಕನ್ನಡ ಸಿನಿಮಾ ರಂಗದವರು ಹೇಗೆ ಬಾಲಿವುಡ್ ಅಲ್ಲಿ ಅಲ್ಲಿ ಭಾರತೀಯ ಗಣ್ಯ ವ್ಯಕ್ತಿಗಳ ಬಯೋಪಿಕ್ ಮಾಡುತ್ತಿದ್ದಾರೆ ಹಾಗೇ ಕರ್ನಾಟಕದಲ್ಲಿ ಕೂಡ ಇದೇ ರೀತಿ ಒಂದು ಪ್ರಯತ್ನ ಮಾಡುವ ಎನ್ನುವ ಯೋಚನೆಯಲ್ಲಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಕ್ಕೆ ಸಿಕ್ಕ ಸಿದ್ದು ಅವರನ್ನು ಪತ್ರಿಕಾ ರಂಗದವರು ಪ್ರಶ್ನಿಸಿದ್ದಾರೆ. ಮೊದಲಿಗೆ ರಾಜಕೀಯ ಹಾಗೂ ನೇಮಕಾತಿಗಳ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದ ಮಾಧ್ಯಮದವರು ನಂತರ ಸಿದ್ದರಾಮಯ್ಯ ಅವರ ಸಿನಿಮಾ ಬರುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. ಮಾಧ್ಯಮದವರು ನಿಮ್ಮ ಬಯೋಪಿಕ್ ಬರುತ್ತಿದೆಯಂತೆ ಹೌದಾ.? ಅದರಲ್ಲಿ ನೀವೇ ಆಕ್ಟಿಂಗ್ ಮಾಡುತ್ತಿದ್ದೀರಾ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರ ಕೊಟ್ಟ ಸಿದ್ದರಾಮಯ್ಯ ಅವರು ಹೌದು ಕನಕಗಿರಿ ಕ್ಷೇತ್ರದ ಜೊತೆ ಕೆಲವರು ಸಿನಿಮಾ ಮಾಡುವುದಾಗಿ ಕೇಳಿಕೊಂಡು ಬಂದಿದ್ದರು, ಮಾತನಾಡಿ ಹೋಗಿದ್ದಾರೆ. ಆದರೆ ಸಿನಿಮಾದಲ್ಲಿ ನಾನು ಅಭಿನಯಿಸುವುದಿಲ್ಲ ಯಾಕೆಂದರೆ ನನಗೆ ನಟನೆ ಮಾಡಲು ಬರುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.

ಈ ರೀತಿ ಮಾತುಕತೆ ಆಗಿರುವುದನ್ನು ಸಿದ್ದರಾಮಯ್ಯ ಅವರೇ ಧೃಡಪಡಿಸಿರುವುದರಿಂದ ಸದ್ಯದಲ್ಲೇ ಸಿದ್ದು ಸಿನಿಮಾ ತೆರೆ ಮೇಲೆ ಬರುವುದರಲ್ಲಿ ಅನುಮಾನವಿಲ್ಲ ಎನಿಸುತ್ತದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಾವೆಲ್ಲರೂ ಕಂಡಂತೆ ಸಿದ್ದರಾಮಯ್ಯ ಅವರು ಬಾಲ್ಯದಲ್ಲಿ ಶಾಲೆಗೆ ಹೋಗಿರಲಿಲ್ಲ, ಬಳಿಕ ಶಾಲಾ ಶಿಕ್ಷಕರೊಬ್ಬರು ಅವರನ್ನು ಗುರುತಿಸಿ ನೇರವಾಗಿ ಐದನೇ ತರಗತಿಗೆ ಕೂರಿಸಿದ್ದರಂತೆ.

ಇದಾದ ಬಳಿಕ ಸಿದ್ದು ಅವರ ಬದುಕು ಬದಲಾಗಿದ್ದೆ ಒಂದು ರೋಚಕ ಕಥೆ. ಮೈಸೂರಿನಲ್ಲಿ ಬಿಎ ಮತ್ತು ಎಲ್ ಎಲ್ ಬಿ ವ್ಯಾಸಂಗವನ್ನು ಕೂಡ ಪೂರೈಸಿದ ಸಿದ್ದರಾಮಯ್ಯ ಅವರು ನಂತರ ಆಕರ್ಷಿತರಾಗಿದ್ದು ರಾಜಕೀಯದ ಕಡೆಗೆ. ಮೊದಲಿಗೆ ಜೆಡಿಎಸ್ ಪಕ್ಷದಲ್ಲಿ ಹಲವು ವರ್ಷಗಳ ಕಾಲ ಇದ್ದ ಸಿದ್ದರಾಮಯ್ಯ ಅವರು ದೇವೇಗೌಡ ಅವರಿಗೆ ಪರಮ ಆಪ್ತರಾಗಿದ್ದರು. ನಂತರ ಪಕ್ಷಾಂತರ ಆದ ಸಿದ್ದರಾಮಯ್ಯ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡರು.

ಕುಟುಂಬದ ವಿಚಾರವಾಗಿ ಹೇಳುವುದಾದರೂ ಕೂಡ ಇನ್ನೂ ಸಹ ಅಣ್ಣ-ತಮ್ಮಂದಿರು ಒಗ್ಗಟ್ಟಿನಿಂದ ಇರುವ ಕುಟುಂಬ ಮತ್ತು ತಾವು ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದರೂ ತಮ್ಮ ಮೂಲ ಸಂಪ್ರದಾಯಗಳನ್ನು ಬಿಡದೆ ಹುಟ್ಟೂರಿನಲ್ಲಿ ಮಕ್ಕಳ ಮದುವೆ ಮುಂತಾದ ಕಾರ್ಯಗಳನ್ನು ಮಾಡುವ ಸಿದ್ದರಾಮಯ್ಯ ಅವರ ಸಿಂಪ್ಲಿಸಿಟಿ ಎಲ್ಲವು ಸೇರಿದರೆ ನಿಜಕ್ಕೂ ಇದೊಂದು ಸ್ಪೂರ್ತಿದಾಯಕ ಆದರ್ಶ ಕಥೆ ಆಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗಾಗಿ ಇವರ ಬಯೋಪಿಕ್ ಬಗ್ಗೆ ಎಲ್ಲರಿಗೂ ಆಸಕ್ತಿ ಇದೆ.

ಇನ್ನು ಸಿದ್ದರಾಮಯ್ಯ ಸಿನಿಮಾವನ್ನು ಮಾಡುತ್ತಿರುವ ನಟ ತಮಿಳುನಾಡು ವಿಜಯ್ ಸೇತುಪತಿ, ನೋಡುವುದಕ್ಕೆ ಸಿದ್ಧರಾಮಯ್ಯ ಅವರನ್ನೇ ಹೋಲಿಕೆ ಆಗುವಂತಹ ವಿಜಯ್ ಸೇತುಪತಿ ಸಿದ್ದರಾಮಯ್ಯ ರೋಲ್ ಹೇಗೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ ಕನ್ನಡದಲ್ಲಿ ಬಯೋಪಿಕ್ ಸಿನಿಮಾಗಳ ಸಂಖ್ಯೆ ತುಂಬಾನೇ ಕಡಿಮೆ ಇದೀಗ ಸಿದ್ದರಾಮಯ್ಯ ಅವರ ಬಯೋಪಿಕ್ ಮೂಡಿ ಬರುತ್ತಿರುವುದು ನಿಜಕ್ಕೂ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಕೊನೆಗೂ ತನ್ನ ತಪ್ಪಿನ ಅರಿವಾಗಿ ರಿಷಬ್ ಶೆಟ್ಟಿಗೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಾತನಾಡಿರೋ ಆಡಿಯೋ ವೈರಲ್ ಈ ಕಾಲ್ ರೆಕಾರ್ಡ್ ಒಮ್ಮೆ ಕೇಳಿ ನಿಜಾಂಶ ತಿಳಿಯುತ್ತೆ.

ರಶ್ಮಿಕಾ ರಿಷಬ್ ಶೆಟ್ಟಿಗೆ ಕ್ಷಮೆ ಕೇಳಿದ್ದಾರೆ

ಕನ್ನಡ ಚಿತ್ರರಂಗದಲ್ಲಿ ನಟಿ ರಶ್ಮಿಕ ಮಂದಣ್ಣ ಅವರ ಬಗ್ಗೆ ಸುದ್ದಿಯಾಗಿದೆ ಹೌದು, ರಶ್ಮೀಕ ಮಂದಣ್ಣ ಅವರು ಒಂದೆಲ್ಲಾ ಒಂದು ವಿಷಯದಲ್ಲಿ ಸದಾ ಟ್ರೊಲ್ ಆಗುತ್ತಾ ಇರುತ್ತಾರೆ. ತಾವು ಮಾತನಾಡುವಾಗ ತಮ್ಮ ಮಾತಿನ ಮೇಲೆ ಸರಿಯಾಗಿ ನಿಗವಹಿಸದೆ ಕನ್ನಡಿಗರ ಬಗ್ಗೆ ಹಾಗೂ ಕನ್ನಡದ ನಟ ನಟಿಯರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಕನ್ನಡಿಗರ ವಕ್ರದೃಷ್ಟಿಗೆ ನೇರವಾಗಿ ಗುರಿಯಾಗುತ್ತಾರೆ

ಸದ್ಯ ರಶ್ಮಿಕ ಮಂದಣ್ಣ ರವರು ತಾವು ಮಾಡಿದ ತಪ್ಪಿಗೆ ನಟ ಹಾಗೂ ನಿರ್ದೇಶಕ ರೀಶಬ್ ಶೆಟ್ಟಿ ಅವರ ಬಳಿ ಕ್ಷಮೆಯನ್ನು ಕೋರಿದ್ದಾರೆ ಇವರ ಈ ಆಡಿಯೋ ಈಗಾಗಲೇ ವೈರಲ್ ಆಗಿ ಎಲ್ಲಾ ಕಡೆ ಹರಡಿದೆ. ಇತ್ತೀಚಿಗೆ ಕೆಲವು ದಿನಗಳ ಹಿಂದ ಕರ್ಲಿ ಟೈಲ್ಸ್ ಎಂಬುವ ಯೂಟ್ಯೂಬ್ ಚಾನೆಲ್ ನ ಸಂದರ್ಶನ ಒಂದರಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಕನ್ನಡಿಗರ ಕೋಪಕ್ಕೆ ರಶ್ಮಿಕ ರವರು ಗುರಿಯಾಗಿದ್ದರು.

ಇನ್ನು ಅವರ ಮೊದಲ ಚಿತ್ರದ ಬಗ್ಗೆ ಕೇಳಿದಾಗ ರಶ್ಮಿಕ ರವರು ಹೀಗೆ ಉತ್ತರಿಸಿದ್ದಾರೆ ಅವರು ಮೊದಲ ಬಾರಿಗೆ ಫ್ರೆಶ್ ಫೇಸ್ ಎನ್ನುವ ಶೋನಲ್ಲಿ ಭಾಗವಹಿಸಿದ್ದರಂತೆ, ಅಲ್ಲದೆ ಅದಕ್ಕೆ ಕೆಟ್ಟದಾದ ಫೋಟೋವನ್ನು ಕೂಡ ನೀಡಿದ್ದರಂತೆ ಇನ್ನು ಅದನ್ನು ನೋಡಿದ ಕಿರಿಕ್ ಪಾರ್ಟಿಯ ಚಿತ್ರ ತಂಡದ ನಟ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕರು ಕಿರಿಕ್ ಪಾರ್ಟಿ ಚಿತ್ರದಲ್ಲಿ ನಡೆಸಬೇಕು ಎಂದು ಕೇಳಿಕೊಂಡಿದ್ದರಂತೆ.

ಇನ್ನು ಕಿರಿಕ್ ಪಾರ್ಟಿ ಚಿತ್ರದಲ್ಲಿ ರಶ್ಮಿಕಾ ರವರು ಮೊದಲ ಬಾರಿಗೆ ನಟಿಸಲು ನಿರಾಕರಿಸಿದ್ದರಂತೆ, ಆದರೂ ಕಿರಿಕ್ ಪಾರ್ಟಿಯ ಚಿತ್ರ ತಂಡದವರು ಬಹಳ ಫೋರ್ಸ್ ಮಾಡಿದ್ದರಿಂದ ವಿಧಿ ಇಲ್ಲದೆ, ರಶ್ಮಿಕ ರವರು ನಟಿಸಬೇಕಾಗಿತ್ತು ಎಂದು ಹೇಳುತ್ತಾ ಕೈ ಬೆರಳುಗಳನ್ನು ತೋರಿಸುತ್ತಾ ಅಸಭ್ಯವಾಗಿ ನಡೆದುಕೊಂಡು, ಸಂದರ್ಶನದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಇನ್ನು ಈ ಹಿಂದೆ ರಕ್ಷಿತ್ ಶೆಟ್ಟಿ ಯವರನ್ನು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು ಸದ್ಯ ಕೆಲವು ಮನಸ್ಥಾಪಗಳಿಂದ ಇವರ ಮದುವೆಯು ಅರ್ಧಕ್ಕೆ ಮುರಿದುಬಿದ್ದಿತ್ತು. ಆದರೂ ಇವರಿಗೆ ನಟಿಸಲು ಮೊದಲ ಬಾರಿಯಾಗಿ ಅವಕಾಶಕೊಟ್ಟ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ನಾವು ಹತ್ತಿಹೋದ ಏಣಿಯನ್ನು ಒದಿದ್ದಾರೆ ಎಂದು ಕೆಲವರು ಟ್ರೊಲ್ ಕೂಡ ಮಾಡಿದ್ದಾರೆ.

ಇತ್ತೀಚೆಗೆ ಕನ್ನಡಿಗರು ಇವರ ಕೆಟ್ಟದ ಕೆಟ್ಟದಾದ ವರ್ತನೆಯಿಂದ ಇವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂದು ಒತ್ತಾಯಿಸುತ್ತಿದ್ದರು ಇದೆ ಇದನ್ನು ತಿಳಿದ ರಶ್ಮಿಕಾ ಮಂದಣ್ಣ ರವರು ಬಹಳ ನೊಂದು ಪಶ್ಚಾತಾಪವನ್ನು ಪಟ್ಟಿದ್ದಾರೆ. ಹೌದು, ಈ ಬಗ್ಗೆ ರಶ್ಮಿಕಾ ರವರ ಸ್ನೇಹಿತರು ತಿಳಿಸಿದರಂತೆ ಅದಕ್ಕೆ ರಶ್ಮಿಕಾ ರವರು ಇದು ತಮಾಷೆ ಇರಬಹುದು ಎಂದು ತಿಳಿದಿದ್ದರು‌.

ಆದರೆ ಈ ವಿಷಯ ಯಾವಾಗ ಗಂಭೀರವಾಯಿತೋ ಆಗ ರಶ್ಮಿಕ ರವರು ರಿಷಬ್ ಶೆಟ್ಟಿ ಅವರಿಗೇ ಕರೆಯನ್ನು ಮಾಡಿ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಶ್ಮಿಕಾ ರವರು ಕನ್ನಡಿಗರು ನನ್ನನ್ನು ಮಾತ್ರ ಯಾವಾಗಲೂ ಫೋನ್ ಮಾಡುತ್ತಾ ಇರುತ್ತಾರೆ ಅಲ್ಲದೆ ಈ ತರದ ರೂಮರ್ಸ್ಗಳು ಕೂಡ ಹರಡುತ್ತಿವೆ.

ರಿಷಬ್ ಶೆಟ್ಟಿ ಸರ್ ಅವರನ್ನು ಒಮ್ಮೆ ಭೇಟಿ ಆಗಬೇಕಾಗಿತ್ತು, ಅವರು ಯಾರನ್ನು ಚಿಕ್ಕವರು ದೊಡ್ಡವರು ಎಂದು ಭೇದ ಭಾವ ಮಾಡಿಲ್ಲ, ನನಗೆ ಕನ್ನಡ ಇಂಡಸ್ಟ್ರು ಬಗ್ಗೆ ಹೇಳಿಕೊಡಿ ಎಂದು ರಿಶಬ್ ಶೆಟ್ಟಿ ಅವರನ್ನು ಕೇಳಿದ್ದಾರೆ. ಅಲ್ಲದೆ ರಿಷಬ್ ಶೆಟ್ಟಿಯವರು ರಶ್ಮಿಕಾ ರವರಿಗೆ ನಟನೆಯಲ್ಲಿ ಕೆಲವು ವಿಷಯಗಳನ್ನು ಕೂಡ ಹೇಳಿಕೊಟ್ಟಿದ್ದಾರೆ ಎಂದು ಕೂಡ ಹೇಳಿದ್ದಾರೆ. ಸದ್ಯ ರಶ್ಮಿಕ ರವರು ಮಾತನಾಡಿರುವ ಈ ಆಡಿಯೋ ವೈರಲ್ ಆಗಿರುವುದು ನಿಜ.

ಮದುವೆಗೆ ಮುನ್ನ ಹನಿಮೂನ್ ಗೆ ದುಬೈಗೆ ಹಾರಿದ ನಟಿ ಹರಿಪ್ರಿಯಾ & ವಿಶಿಷ್ಠ ಸಿಂಹ ವಿಡಿಯೋ ವೈರಲ್, ಏರ್ ಪೋರ್ಟ್ ನಲ್ಲಿ ಮುಖಮುಚ್ಚಿ ಕೈ ಕೈ ಹಿಡಿದು ತಿರುಗಾಡುತ್ತಿರುವ ಜೋಡಿ ಹಕ್ಕಿಗಳು.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸ್ಯಾಂಡಲ್ ವುಡ್ ನ ಮತ್ತೊಂದು ಸ್ಟಾರ್ ಜೋಡಿ, ಒಟ್ಟೊಟ್ಟಿಗೆ ಕಾಣಿಸಿಕೊಂಡು ಊಹೆ ಅಲ್ಲ ನಿಜ ಎನ್ನುತ್ತಿರುವ ನವ ಜೋಡಿ.

ಈ ವರ್ಷ ಸ್ಯಾಂಡಲ್ ವುಡ್ ಸ್ಟಾರ್ಗಳ ಪಾಲಿಗೆ ಸಾಲು ಸಾಲು ಸಿಹಿ ಸುದ್ದಿ ಕೊಟ್ಟ ವರ್ಷ .ಒಂದು ಕಡೆ ನಮ್ಮ ಕನ್ನಡದ ಕೆಜಿಎಫ್ 2, ಚಾರ್ಲಿ777, ವಿಕ್ರಾಂತ್ ರೋಣ, ಜೇಮ್ಸ್ ಕಾಂತರಾದಂತಹ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಇಡೀ ದೇಶದಲ್ಲೇ ಭರ್ಜರಿಯಾಗಿ ಪ್ರದರ್ಶನ ಕಂಡು ಎಲ್ಲರೂ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ.

ಜೊತೆಗೆ ನಮ್ಮ ಸ್ಟಾರ್ ಗಳು ಕೂಡ ವೈಯಕ್ತಿಕ ಜೀವನದಲ್ಲೂ ಸಹಾ ಸಿಹಿ ಸುದ್ದಿ ಪಡೆಯುತ್ತಿದ್ದು ಮದುವೆ, ನಿಶ್ಚಿತಾರ್ಥ, ಮಗುವಿನ ಆಗಮನದ, ಹೊಸ ಮನೆ ಗೃಹಪ್ರವೇಶದ ಸಂತಸದಲ್ಲಿದ್ದಾರೆ. ವರ್ಷದ ಆರಂಭದಲ್ಲಿಯೇ ಅಮೂಲ್ಯ ಅವರು ಅವಳಿ ಮಕ್ಕಳಿಗೆ ಜನ್ಮ ಕೊಟ್ಟು ಇಡೀ ಕರ್ನಾಟಕಕ್ಕೆ ಖುಷಿಪಡುವ ಸುದ್ದಿ ನೀಡಿದ್ದರು.

ಬಹಳ ದಿನಗಳಿಂದ ಮಗುವಿನ ನಿರೀಕ್ಷೆಯಲ್ಲಿದ್ದಂತೆ ಧ್ರುವ ಅವರಿಗೂ ಕೂಡ ದೇವರ ಕರುಣೆಯಿಂದ ಅಪ್ಪನಾಗುವ ಭಾಗ್ಯ ಸಿಕ್ಕಿದೆ. ರವಿಚಂದ್ರನ್ ಅವರ ಪುತ್ರ ಮನೋರಂಜನ್ ಕೂಡ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾಕ್ಟರ್ ವಿಷ್ಣುವರ್ಧನ್ ಅವರ ಕುಟುಂಬವು ಹೊಸಮನೆ ಗೃಹಪ್ರವೇಶ ಮಾಡಿ ವಿಷ್ಣು ದಾದಾ ಅವರ ಕನಸನ್ನು ನನಸಾಗಿಸಿದೆ.

ಮತ್ತು ನೆನ್ನೆ ಅಷ್ಟೇ ಅಧಿತಿ ಪ್ರಭುದೇವ ಅವರು ಕೂಡ ನೆಚ್ಚಿನ ಇನಿಯನ ಕೈಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಷೇಕ್ ಅಂಬರೀಶ್ ಅವರು ಕೂಡ ಮುಂದಿನ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಗುಲ್ಲೇರಿದೆ. ಇದೇ ಸಾಲಿನಲ್ಲಿ ಮತ್ತಿಬ್ಬರು ಸ್ಟಾರ್ಗಳ ಹೆಸರುಗಳು ಕೇಳಿ ಬರುತ್ತಿದ್ದು ಶೀಘ್ರದಲ್ಲೇ ಇವರಿಬ್ಬರು ಜೋಡಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ತಮ್ಮ ವಿಶಿಷ್ಟ ಅಭಿನಯ ಹಾಗೂ ವಿಶೇಷ ಕಂಠದಿಂದ ಫೇಮಸ್ ಆಗಿರುವ ವಸಿಷ್ಠ ಸಿಂಹ ಅವರು ಕನ್ನಡದ ಹೆಸರಾಂತ ನಾಯಕಿ ಹರಿಪ್ರಿಯಾ ಅವರ ಕೈ ಹಿಡಿಯುತ್ತಿದ್ದಾರೆ ಎನ್ನುವ ಸುದ್ದಿ ಬಾರಿ ಚರ್ಚೆ ಆಗುತ್ತಿದೆ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಇದೇ ವಿಷಯದ ಬಗ್ಗೆ ಬಹಳ ಚರ್ಚೆ ಆಗುತ್ತಿದ್ದು ಸದ್ಯದಲ್ಲೇ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಹಾಗೂ ಶೀಘ್ರದಲ್ಲಿಯೇ ಹಸೆಮಣೆ ಕೂಡ ಏರಲಿದ್ದಾರೆ ಎಂದು ಈ ಜೋಡಿಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ.

ಸಾಲದ್ದಕ್ಕೆ ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಳ್ಳುವ ಶಾಸ್ತ್ರ ಕೂಡ ಮಾಡಿಕೊಂಡಿದ್ದರು. ಕೆಲವು ಮೂಲಗಳ ಮಾಹಿತಿ ಪ್ರಕಾರ ಆ ಶಾಸ್ತ್ರವನ್ನು ಮಾಡಿಸಿದ್ದೆ ವಸಿಷ್ಟ ಸಿಂಹ ಅವರಂತೆ. ಅವರೇ ಕುದ್ದು ನಿಂತು ಹರಿಪ್ರಿಯಾ ಅವರಿಗೆ ಮೂಗು ಚರ್ಚಿಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇಷ್ಟೆಲ್ಲಾ ಸುದ್ದಿಯಾಗುತ್ತಿದ್ದರು ಹರಿಪ್ರಿಯ ಕಡೆಯಿಂದಾಗಲಿ ಅಥವಾ ವಸಿಷ್ಟ ಸಿಂಹ ಅವರ ಕಡೆಯಿಂದಾಗಲಿ ಯಾವುದೇ ಸ್ಪಷ್ಟನೆ ಅಥವಾ ವಿವರಣೆ ಕೊಡುವ ಕೆಲಸ ನಡೆದಿಲ್ಲ.

ಹೀಗಾಗಿ ಇವರಿಬ್ಬರೂ ಸೀಕ್ರೆಟ್ ಆಗಿ ಎಂಗೇಜ್ಮೆಂಟ್ ಆಗುತ್ತಿದ್ದಾರಾ ಅಥವಾ ಸರ್ಪ್ರೈಸ್ ಕೊಟ್ಟು ಅನೌನ್ಸ್ ಮಾಡಲಿದ್ದಾರಾ ಎಂದು ಅಭಿಮಾನಿಗಳ ಯೋಚಿಸುತ್ತಿದ್ದಾರೆ. ಈಗ ದುಬೈ ಪ್ರವಾಸಕ್ಕೆ ಕೂಡ ಒಟ್ಟಿಗೆ ಹೋಗಿರುವ ಮತ್ತು ಅಲ್ಲಿನ ಪ್ರವಾಸದ ಬಗ್ಗೆ ಹಂಚಿಕೊಳ್ಳುತ್ತಿರುವ ಫೋಟೋಗಳನ್ನು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಇವರಿಬ್ಬರ ಫೋಟೋಗಳನ್ನು ನೋಡಿದರೆ.

ನಿಶ್ಚಿತಾರ್ಥ ಸುದ್ದಿ ನಿಜ ಅನಿಸುತ್ತದೆ ಮತ್ತು ಕೆಲವರ ಪ್ರಕಾರ ಇದು ಯಾವುದೋ ಸಿನಿಮಾಗಾಗಿ ಇರಬಹುದು, ಸಿನಿಮಾ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಾ ಇರಬಹುದು ಎನ್ನುವ ಲೆಕ್ಕಾಚಾರ ಕೂಡ ಇದೆ. ಈ ಸುದ್ದಿ ಸಿನಿಮಾ ಕುರಿತೆ ಆಗಿದ್ದರೂ ಅಥವಾ ನಿಜ ಜೀವನದಲ್ಲಿ ಇವರಿಬ್ಬರೂ ಒಂದಾಗುತ್ತಿದ್ದರು ಶುಭವಾಗಲಿ ಎಂದು ಹರಸುವುದು ಅಷ್ಟೇ ಅಭಿಮಾನಿಗಳಾಗಿ ನಮ್ಮ ಕೆಲಸವಾಗಿದೆ.