Home Blog Page 274

ನಾನಿನ್ನು ಹೆಚ್ಚು ದಿನ ಬದುಕಲ್ಲ ಎಂದು ಭಾವನಾತ್ಮಕ ಸ್ಟೇಟಸ್ ಹಾಕಿದ ನಟಿ ಧನುಶ್ರೀ. ಏನಾಗಿದೆ ಗೊತ್ತ ಈ ಯುವ ನಟಿಗೆ.!

ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿ ಧನುಶ್ರೀ.

ಟಿಕ್ ಟಾಕ್ ಎನ್ನುವ ಜನಪ್ರಿಯ ಮನೋರಂಜನ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಅನೇಕ ಜನರಿಗೆ ಸೆಲೆಬ್ರಿಟಿ ಪಟ್ಟ ತಂದು ಕೊಟ್ಟಿತ್ತು. ಈ ಸಾಲಿನಲ್ಲಿ ನಿಖಿಲ್ ನಿಕಿತಾ, ಅಲ್ಲು ರಘು, ಸುಶ್ಮಿತಾ, ಸೋನು ಶ್ರೀನಿವಾಸ್ ಗೌಡ, ಭೂಮಿಕ ಬಸವರಾಜು, ಶಮಂತ್ ಬ್ರೋ, ಧನುಶ್ರೀ ಇನ್ನೂ ಅನೇಕರು ಇದ್ದಾರೆ.

ಕರ್ನಾಟಕದ ಅನೇಕ ಟಿಕ್ ಟಾಕ್ ಪ್ರತಿಭೆಗಳಿಗೆ ಕಿರುತೆರೆ ಕಾರ್ಯಕ್ರಮಗಳು, ಧಾರಾವಾಹಿಗಳು ಹಾಗೂ ಸಿನಿಮಾಗಳನ್ನು ಅಭಿನಯಿಸುವ ಅವಕಾಶ ದೊರಕಿದ್ದು ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂಬರ್ ಒನ್ ಸೀರಿಯಲ್ ಜೊತೆ ಜೊತೆಯಲಿ ಖ್ಯಾತಿಯ ನಾಯಕಿ ಮೇಘ ಶೆಟ್ಟಿ ಕೂಡ ಹೀಗೆ ಅವಕಾಶ ಪಡೆದವರು ಎಂದು ಉದಾಹರಿಸಬಹುದು.

ಮತ್ತು ರಿಯಾಲಿಟಿ ಶೋಗಳ ಬಿಗ್ ಶೋ ಎಂದು ಕರೆಸಿಕೊಳ್ಳುವ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡ ಟಿಕ್ ಟಾಕ್ ಸ್ಟಾರ್ ಗಳಿಗೆ ಅವಕಾಶ ಕೊಡಲಾಗಿದ್ದು ಈ ಕೋಟಾದಲ್ಲಿ ಶಮಂತ್ ಮತ್ತು ಧನಶ್ರೀ ಅವರು ಕಳೆದ ಸೀಸನ್ ನಲ್ಲಿ ಕಂಟೆಸ್ಟೆಂಟ್ ಆಗಿ ಭಾಗಿಯಾಗಿದ್ದರು. ಟಿಕ್ ಟಾಕ್ ಬ್ಯಾನ್ ಆದ ಮೇಲೆ ಎಲ್ಲರೂ ಕೂಡ ಬೇರೆ ಆಪ್ ಗಳ ಮೂಲಕ ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.

ಅದರಲ್ಲಿ ಇನ್ಸ್ಟಾಗ್ರಾಮ್ ಎನ್ನುವ ಆಪ್ ಎಲ್ಲರಿಗೂ ಇಷ್ಟವಾಗಿದ್ದು ಅದರಲ್ಲೂ ಸಹ ರೀಲ್ಸ್ ಮತ್ತು ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ. ಈಗ ಇದೇ ಟಿಕ್ ಟಾಕ್ ಪ್ರತಿಭೆ ಧನುಶ್ರೀ ಅವರ ಇನ್ಸ್ಟಾಗ್ರಾಂ ಖಾತೆಯಿಂದ ಹೊಸಬಗೆಯ ವಿಡಿಯೋ ಒಂದು ಪೋಸ್ಟ್ ಆಗಿದೆ. ಕೆಲವು ಕಹಿ ಘಟನೆಗಳ ಫೋಟೋಗಳನ್ನು ವೀಡಿಯೋ ಮಾಡಿ ಅದಕ್ಕೆ ಹಾಡು ಮತ್ತು ಆ ಸಂದರ್ಭವನ್ನು ನೆನಪನ್ನು ಸೇರಿಸಿ ಬರೆದು ಹಂಚಿಕೊಂಡಿದ್ದಾರೆ.

ಅವರು ಬರೆದಿರುವ ಸಾಲುಗಳು ಈ ರೀತಿ ಇವೆ. ನಾನು ಈ ರೀತಿಯ ಪೋಸ್ಟ್ ಹಾಕುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಆದರೆ ಬಹಳ ದಿನಗಳಿಂದ ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯ ಬಹಳ ಹಾಳಾಗಿದೆ ಇಂತಹ ದಿನಗಳಲ್ಲಿ ನನಗೆ ಕರೆ ಮಾಡಿ ಸಂದೇಶ ಕಳುಹಿಸಿ ವಿಚಾರಿಸಿಕೊಂಡ ಎಲ್ಲರಿಗೂ ಧನ್ಯವಾದಗಳು. ಮುಖ್ಯವಾಗಿ ನನ್ನ ಕುಟುಂಬದ ಎಲ್ಲರಿಗೂ ಬಹಳ ಧನ್ಯವಾದಗಳು.

ಈ ರೀತಿ ಪೋಸ್ಟ್ ಮಾಡಲು ಕಾರಣ ಏನೆಂದರೆ, ಇದೇ ರೀತಿ ಅನೇಕರು ಅನೇಕ ರೀತಿಯ ಸಮಸ್ಯೆಗಳಲ್ಲಿ ಪ್ರತಿನಿತ್ಯ ಹೋರಾಡುತ್ತಲೇ ಇರುತ್ತದೆ. ಇವುಗಳನ್ನೆಲ್ಲ ಧೈರ್ಯದಿಂದ ದಾಟಬೇಕು ಎನ್ನುವ ಶಕ್ತಿ ಬರಲಿ ಎಂದು ಅಷ್ಟೇ ಎಂದು ಹಂಚಿಕೊಂಡಿದ್ದಾರೆ ಮತ್ತು ಪೋಸ್ಟ್ ಮಾಡಿದ ವಿಡಿಯೋಗಳಲ್ಲಿ ಅವರು ಹಾಸ್ಪಿಟಲೈಝ್ ಆಗಿರುವ ಫೋಟೋಗಳು, ಅವರ ಅಮ್ಮ ಪಕ್ಕದಲ್ಲಿ ಕುಳಿತು ಆರೈಕೆ ಮಾಡುತ್ತಿರುವ ಫೋಟೋಗಳಿವೆ.

ಆ ಫೋಟೋಗಳ ಜೊತೆ ನಾನು ಬದುಕೋದೇ ಇಲ್ಲವೇನೋ ಎನ್ನುವ ನಂಬಿಕೆಯನ್ನು ಕಳೆದುಕೊಂಡೆ ಎಂದು ಸಹ ಬರೆದಿದ್ದಾರೆ ಜೊತೆಗೆ ತನ್ನ ನೆಚ್ಚಿನ ಪೆಟ್ ಪೋಕೋ ಮಾನಸಿಕ ಆರೋಗ್ಯ ಸುಧಾರಿಸಿದ್ದು, ಇವೆಂಟ್ ಒಂದರಲ್ಲಿ ಬದಲಾವಣೆಗಾಗಿ ಭಾಗಿಯಾಗಿದ್ದು ಮತ್ತೆ ಲಿಪ್ಸ್ಟಿಕ್ ಹಚ್ಚಿ ನಗು ಚೆಲ್ಲಲು ಪ್ರಯತ್ನಿಸಿದ್ದು ಎಲ್ಲವನ್ನು ಸಹ ಬರೆದುಕೊಂಡಿದ್ದಾರೆ. ಧನುಶ್ರೀ ಅವರು ಸಾಮಾನ್ಯ ಕುಟುಂಬದ ಹುಡುಗಿ ಆಗಿದ್ದರೂ ಕೂಡ ಎಲ್ಲರಂತೆ ಸಾಮಾನ್ಯರಾಗಬಾರದು ಎಂದು ಎಂಎನ್ಸಿ ಉದ್ಯೋಗ ತೊರೆದು ಸ್ವಂತ ದುಡಿಮೆ ಮಾಡಬೇಕು ಎಂದುಕೊಂಡಾಗ ಸಿಕ್ಕಿದ್ದು ಈ ಟಿಕ್ ಟಾಕ್ ಎನ್ನುವ ವೇದಿಕೆ.

ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮ ವಿಶೇಷ ವಿಡಿಯೋಗಳಿಂದ ಅನೇಕ ಸಂಖ್ಯೆಯ ಪಾಲವರ್ಸ್ ಗಳನ್ನು ಪಡೆದಿದ್ದರು. ಇವರ ಅಭಿಮಾನಿಗಳು ಇವರನ್ನು ಕೋಟಿಗೊಬ್ಬ 2 ಸಿನಿಮಾ ಖ್ಯಾತಿಯ ನಿತ್ಯ ಅವರ ಜೊತೆ ಹೋಲಿಕೆ ಮಾಡುತ್ತಾರೆ. ಬ್ಯೂಟಿ ಜೊತೆ ಟ್ಯಾಲೆಂಟ್ ಕೂಡ ಹೊಂದಿರುವ ಇವರು ಆದಷ್ಟು ಬೇಗ ಸಮಸ್ಯೆಯಿಂದ ಹೊರ ಬರಲಿ ಅವರ ಆಸೆಯಂತೆ ಬಣ್ಣದ ಪ್ರಪಂಚಕ್ಕೆ ಆದಷ್ಟು ಬೇಗ ಕಾಲಿಡಲಿ ಎಂದು ಹರಸೋಣ.

 

 

ಗಂಡ ಸ-ತ್ತು 6 ತಿಂಗಳು ಕೂಡ ತುಂಬಿಲ್ಲ, ಆಗಲೇ ಮತ್ತೊಂದು ಮದುವೆಗೆ ಸಿದ್ದರಾದ ನಟಿ ಮೀನಾ.

ಎರಡನೇ ಮದುವೆಗೆ ಓಕೆ ಎಂದು ಹೇಳಿದ್ದಾರಾ ನಟಿ ಮೀನಾ.

ಕೆಲವರ ಜೀವನದಲ್ಲಿ ಎಲ್ಲವೂ ತುಂಬಿರುತ್ತದೆ. ಹಣ, ವಿದ್ಯೆ, ಉದ್ಯೋಗ, ಸೌಂದರ್ಯ ಇಷ್ಟೆಲ್ಲ ಇದ್ದು ಇವರೇ ಸುಖಿಗಳು ಎಂದುಕೊಳ್ಳುವಷ್ಟರಲ್ಲಿ ಇನ್ಯಾವುದೋ ಒಂದು ಸಂಕಷ್ಟ ಎದುರಾಗಿ ಬದುಕು ಬಿರುಗಾಳಿಗೆ ಸಿಕ್ಕಂತಾಗಿ ಬಿಡುತ್ತದೆ. ಆ ವಿಧಿ ಎನ್ನುವುದು ಯಾರನ್ನು ಕೂಡ ಬಿಡುವುದಿಲ್ಲ ಎನ್ನುವುದು ಈ ನಟಿ ಬದುಕು ನೋಡಿದ ಮೇಲೆ ಅಕ್ಷರಶಃ ಸತ್ಯ ಎನಿಸುತ್ತದೆ.

ಯಾಕೆಂದರೆ ನಟಿ ಮೀನಾ ಅವರ ಬದುಕು ಕೂಡ ಇದೇ ರೀತಿ ಆಗಿದೆ. ಬಾಲ್ಯದಲ್ಲಿಯೇ ಅಪ್ರತಿಮ ಸುಂದರಿ ಹಾಗೂ ಬುದ್ಧಿವಂತೆ ಆದ ಕಾರಣದಿಂದ ಸಲೀಸಾಗಿ ಚಿತ್ರರಂಗಕ್ಕೆ ಬರುವ ಅವಕಾಶಗಳನ್ನು ಪಡೆದುಕೊಂಡರು. ಬಾಲ ನಟಿಯಾಗಿ ಬಂದ ಇವರು ನೋಡ ನೋಡುತ್ತಿದ್ದಂತೆ ಸ್ಟಾರ್ ನಟಿ ಪಟ್ಟ ಕೂಡ ಸೇರಿಕೊಂಡರು. ಕನ್ನಡ ತಮಿಳು ತೆಲುಗು ಹೀಗೆ ಎಲ್ಲಾ ಭಾಷೆಯಲ್ಲಿ ಕೂಡ ಆಗಿನ ಸಮಯದ ಸೂಪರ್ ಸ್ಟಾರ್ ಗಳ ಜೊತೆಗೆ ನಟಿಸಿ ತಾವು ಕೂಡ ಲೇಡಿ ಸೂಪರ್ ಸ್ಟಾರ್ ಆದವರು.

ನೋಡುವುದಕ್ಕೆ ಅದ್ಭುತ ಚೆಲುವೆಯಂತಿದ್ದ ಇಂತಹ ಅಪ್ಸರೆಯನ್ನು ಕನಸಿನಲ್ಲಿ ಅದೆಷ್ಟೋ ಯುವಕರು ಮದುವೆ ಆಗಿದ್ದರು. 2009ರಲ್ಲಿ ವಿದ್ಯಾಸಾಗರ್ ಎನ್ನುವ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಅಗರ್ಭ ಶ್ರೀಮಂತನನ್ನು ಮದುವೆಯಾಗಿ ಮೀನಾ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು ಈಗ ಇವರಿಗೆ ಆರು ವರ್ಷದ ಪುಟ್ಟ ಮಗಳು ಕೂಡ ಇದ್ದಾರೆ.

46 ವರ್ಷದ ವಯಸ್ಸಿನ ಮೀನಾ ಅವರಿಗೆ ಈಗಲೂ ಕೂಡ ಸಿನಿಮಾಗಳಲ್ಲಿ ಲೀಡ್ ರೋಲಲ್ಲಿ ಮಾಡಲು ಆಫರ್ ಗಳು ಹೋಗುತ್ತಿವೆ. ಇಷ್ಟೆಲ್ಲಾ ಕೊಟ್ಟಿದ್ದ ಭಗವಂತನು ಸಂತೋಷವನ್ನು ಕೊಡಲು ಮರೆತ ಎನಿಸುತ್ತದೆ ಈ ವರ್ಷ ಜೂನ್ 26ರಂದು ಮೀನಾ ಅವರ ಪ್ರೀತಿಯ ಪತಿ ಕೊರೊನಾಗೆ ತುತ್ತಾಗಿ ಹಸು ನೀಗಿದ್ದಾರೆ.

ಈ ವರ್ಷದ ಆರಂಭದಲ್ಲಿಯೇ ನಟಿ ಮೀನಾವರ ಕುಟುಂಬದ ಎಲ್ಲಾ ಸದಸ್ಯರು ಕೂಡ ಕರೋನ ಸೋಂಕಿಗೆ ತುತ್ತಾಗಿದ್ದರು, ಬಹಳ ದಿನಗಳವರೆಗೆ ಹೋರಾಟ ಮಾಡಿದ ವಿದ್ಯಾಸಾಗರ್ ಅವರು ಚಿಕಿತ್ಸೆ ಫಲಕಾರಿ ಆಗದೆ ಇಹಲೋಕ ತ್ಯಜಿಸಿದ್ದಾರೆ. ಇತ್ತ ಅವರ ಅ‌.ಗ.ಲಿ.ಕೆ ನೋವಿನಲ್ಲಿ ಮೀನ ಕಂಗೆಟ್ಟು ಹೋಗಿದ್ದಾರೆ ಈ ಕಾರಣದಿಂದಾಗಿ ಅವರು ಇತ್ತೀಚಿಗೆ ಶೂಟಿಂಗ್ ಗಳಲ್ಲೂ ಕೂಡ ಭಾಗಿಯಾಗದೆ ಒಬ್ಬರೇ ಸಮಯ ಕಳೆಯುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಇವೆ.

ಪತಿ ಅ.ಗ.ಲಿ.ಕೆಯಾದಗಲಿಂದ ಮೀನಾ ಕುರಿತ ಯಾವ ಸುದ್ದಿಯು ಕೂಡ ಇಲ್ಲ ಹೆಚ್ಚಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಲೂ ಇಲ್ಲ. ಹಾಗಾಗಿ ನಟಿ ಮೀನ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದೇ ಎಲ್ಲರೂ ಅರ್ಥೈಸಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದ ಅವರ ಕುಟುಂಬಸ್ಥರು ಮೀನ ಅವರಿಗೆ ಎರಡನೇ ಮದುವೆ ಮಾಡುವ ನಿರ್ಧಾರ ಮಾಡಿದ್ದಾರಂತೆ.

ಹಣದ ಬೆಂಬಲ ಬೇಡದೆ ಇದ್ದರೂ ಕೂಡ ಭಾವನಾತ್ಮಕ ಆಸರೆ ಕಾರಣದಿಂದ ಆದರೂ ಮೀನಾ ಮತ್ತೆ ಮದುವೆ ಆಗಲೇಬೇಕು ಎಂದು ಕುಟುಂಬಸ್ಥರು ಹಠ ಹಿಡಿದಿದ್ದಾರಂತೆ. ತಮ್ಮ ಕುಟುಂಬದ ಪರಿಚಿತರೊಬ್ಬರೊಂದಿಗೆ ಮದುವೆ ಆಗಲು ಮೀನಾ ಅವರು ಕೂಡ ಸಮ್ಮತಿ ಸೂಚಿಸಿದ್ದಾರೆ ಎನ್ನುವ ಗಾಳಿ ಸುದ್ದಿ ಕೂಡ ಇದೆ.

ಆದರೆ ಅಧಿಕೃತವಾಗಿ ಎಲ್ಲಿಯೂ ಕೂಡ ಇದರ ಕುರಿತು ಕುಟುಂಬಸ್ಥರೇ ಆಗಲಿ ಮೀನಾ ಅವರೇ ಆಗಲಿ ಹೇಳಿಕೊಂಡಿಲ್ಲ. ಆಗಿದ್ದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ವಾಸ್ತವವನ್ನು ಒಪ್ಪಿಕೊಂಡು ನಟಿ ಏನೇ ತೀರ್ಮಾನ ತೆಗೆದುಕೊಂಡರು ಅವರ ಬದುಕಿನಲ್ಲಿ ಮತ್ತೆ ಹಿಂದಿನ ಸುಖ ಶಾಂತಿ ಸಿಗುವಂತಿರಲಿ ಎಂದು ಅಭಿಮಾನಿಗಳಾಗಿ ನಾವು ಹರಸೋಣ.

ಈ 6 ಅಡಿ ಕಟೌಟ್ ನಾ ಮುಗಿಸಲು 5 ಅಡಿ ಕಟೌಟ್ ಗಳು ಏನೆಲ್ಲಾ ಒಳಸಂಚು ಮಾಡ್ತಿದ್ದಾರೆ ಗೊತ್ತ.? ಮೊದಲ ಬಾರಿಗೆ ಮಿಡಿಯಾ ಮುಂದೆ ಎಲ್ಲಾ ರಹಸ್ಯ ಬಯಲು ಮಾಡಿದ ಡಿ ಬಾಸ್

 

ಕ್ರಾಂತಿ ಸಿನಿಮಾ ಸಂದರ್ಶನ

ಸದ್ಯಕ್ಕೆ ಇಂಡಸ್ಟ್ರಿಯಲ್ಲಿ ಈಗ ಕ್ರಾಂತಿ ಸಿನಿಮಾದ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ದರ್ಶನ್ ಅವರ ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾವು ಜನವರಿ ತಿಂಗಳಲ್ಲಿ ಬಿಡುಗಡೆಗೆ ರೆಡಿ ಆಗಿದ್ದು, ಈಗಾಗಲೇ ಚಿತ್ರತಂಡದಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಈ ಸಲುವಾಗಿ ನಾಯಕನಟ ದರ್ಶನ್ ಸೇರಿದಂತೆ ಎಲ್ಲರೂ ಸಹ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.

ಸ್ವತಃ ದರ್ಶನ್ ಅವರೇ ಯುಟ್ಯೂಬ್ ಚಾನೆಲ್ ಗಳಿಗೆ ಇಂಟರ್ವ್ಯೂ ಕೊಡುವ ಮೂಲಕ ಕ್ರಾಂತಿ ಚಿತ್ರದ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಕ್ರಾಂತಿ ಸಿನಿಮಾವು ಶಿಕ್ಷಣದ ಕ್ರಾಂತಿ ಮಾಡಲು ಬರುತ್ತಿರುವ ಸಾಮಾಜಿಕ ಸಂದೇಶ ಹೊಂದಿದ ಸಿನಿಮಾ ಆಗಿದ್ದು ಈ ಸಿನಿಮಾದ ಮುಖ್ಯ ವಿಷಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸ ತಿಳಿಸುತ್ತಿರುವುದು ಹಾಗೂ ಹಣದ ಹೆಸರಿನಲ್ಲಿ ಖಾಸಗಿ ಶಾಲೆಗಳು ಮಾಡುತ್ತಿರುವ ಅನ್ಯಾಯಗಳನ್ನು ತಿಳಿಸುವುದು ಸರ್ಕಾರವನ್ನು ಎಚ್ಚರಿಸುವುದು ಇನ್ನೂ ಅನೇಕ ಸಂಗತಿಗಳು ಇದರಲ್ಲಿ ಸೇರಿದೆ.

ಇದಕ್ಕೆ ಸಂಬಂಧಪಟ್ಟ ಹಾಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರು ಕೊಡುತ್ತಿರುವ ಸಂದರ್ಶನಗಳು ಹೆಚ್ಚು ಚರ್ಚೆ ಆಗುತ್ತಿದ್ದು ಈ ಸಂದರ್ಶನದಲ್ಲಿ ದರ್ಶನ್ ಅವರ ಬಳಿ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ದರ್ಶನ್ ಅವರೂ ಸಹ ಸಿನಿಮಾ ವಿಚಾರವಾಗಿ ಮತ್ತು ಸಿನಿಮೇತರ ವಿಚಾರವಾಗಿ ಕೂಡ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅವರ ಪ್ರಶ್ನೆಗಳಿಗೆ ಅನುಗುಣವಾಗಿ ಉದಾಹರಣೆ ಕೊಡಲು ತಮ್ಮ ಜೀವನದ ಘಟನೆಗಳನ್ನು, ನೆನೆಸಿಕೊಂಡು ಬಾಲ್ಯವನ್ನು ನೆನೆಸಿಕೊಂಡು, ತಾವು ಪಟ್ಟದ ಕಷ್ಟದ ದಿನಗಳನ್ನು ನೆನೆಸಿಕೊಂಡು, ಆ ಅನುಭವಗಳನ್ನು ಹಂಚಿಕೊಂಡು ಮಾತನಾಡುತ್ತಿರುವ ದರ್ಶನ್ ಅವರಿಗೆ ಸಿನಿಬಸ್ ಎನ್ನುವ ಚಾನೆಲ್ ಸಂದರ್ಶಕರು ಪರಭಾಷೆಯಲ್ಲಿ ನಟಿಸುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ದಚ್ಚು ಕೊಟ್ಟ ನೇರ ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ದರ್ಶನ್ ಅವರು ಹೇಳುತ್ತಿದ್ದಾರೆ ಕರ್ನಾಟಕದ ಜನರು ನಾನು ಎಲ್ಲೋ ಫುಡ್ಬಾತ್ ಅಲ್ಲಿ ಇರಬೇಕಾದವನನ್ನು ಹೊತ್ತು ಮೆರೆಸಿ ಈ ಸ್ಥಾನದಲ್ಲಿ ಇಟ್ಟಿದ್ದಾರೆ. ಇಲ್ಲಿ ನನ್ನನ್ನು ರಾಜನಂತೆ ನೋಡಿಕೊಳ್ಳುತ್ತಿದ್ದಾರೆ ಇಷ್ಟು ಪ್ರೀತಿ ಇಲ್ಲೇ ಸಿಗಬೇಕಾದರೆ ನಾನೇಕೆ ಪರಭಾಷೆಗಳಲ್ಲಿ ಹೋಗಿ ನಟಿಸಬೇಕು. ಇದಕ್ಕಿಂತ ನನಗೆ ದುಪ್ಪಟ್ಟು ಸಂಭಾವನೆ ಅಲ್ಲಿ ಕೊಡಬಹುದು ಆದರೆ ಇಲ್ಲಿ ನಾಯಕ ನಟನಾಗಿರುವ ನಾನು ಅಲ್ಲಿ ಸೈಟ್ ರೋಲ್ ಹೋಗಿ ಮಾಡಿದರೆ ಏನು ಮರ್ಯಾದೆ ಇರುತ್ತದೆ.

ಹಾಗೂ ಒಂದು ವೇಳೆ ನಾನು ಅಲ್ಲಿ ಖಳ ನಾಯಕನಾಗಿ ಹೋದರೆ ಇಲ್ಲಿ ಆರು ಅಡಿ 3 ಇಂಚು ಹೀರೋ ಆಗಿ ಮೆರೆದಿರುವ ನನ್ನನ್ನು ಹೊಡೆಯಲು 5 ಅಡಿಯ ಎಷ್ಟು ಹೀರೋಗಳು ಕಾಯುತ್ತಿರಬಹುದು ಹಾಗಾಗಿ ಅಂತಹ ಆಸೆ ನನಗಿಲ್ಲ ಕನ್ನಡಿಗರು ಕೊಟ್ಟಿರುವ ಪ್ರೀತಿಯೇ ನನಗೆ ಬೇಕಾದಷ್ಟು ಇದೆ ಅಷ್ಟೇ ಸಾಕು ಎಂದಿದ್ದಾರೆ. ಮತ್ತು ಬೇರೆ ಭಾಷೆಗಳಲ್ಲೂ ನಿಮಗೆ ಅಭಿಮಾನಿಗಳು ಇದ್ದಾರೆ ಅವರ ಸಲುವಾಗಿ ಸಿನಿಮಾ ಮಾಡಬಹುದಲ್ಲ ಎಂದು ಕೇಳಿದಾಗ ನಾವು ನಮ್ಮ ಸಿನಿಮಾಗಳನ್ನು ಡಬ್ ಮಾಡುತ್ತಿದ್ದೇವೆ ಅಷ್ಟೇ ಸಾಕು ಎಂದು ಹೇಳಿದ್ದಾರೆ.

ಈ ಹಿಂದೆ ಡಬ್ಬಿಂಗ್ ಸಿನಿಮಾಗಳನ್ನು ವಿರೋಧ ಮಾಡಿ ದರ್ಶನ್ ಅವರು ಕೊಟ್ಟಿದ್ದ ಹೇಳಿಕೆಯನ್ನು ನೆನೆಸಿಕೊಂಡು ಈಗ ತೆಲುಗು ಇಂಡಸ್ಟ್ರಿಯಲ್ಲಿ ಕೂಡ ಹಬ್ಬದ ಸಮಯದಲ್ಲಿ ಮಾತ್ರ ಬೇರೆ ಭಾಷೆ ಸಿನಿಮಾಗಳನ್ನು ರಿಲೀಸ್ ಮಾಡಬೇಕು ಎಂದು ಮಾತನಾಡುತ್ತಿದ್ದಾರೆ. ಆದರೆ ನಮಗೆ ಈ ಹಿಂದೆಯೇ ಅನುಭವ ಆಗಿ ನಾವು ಡಬ್ಬಿಂಗ್ ವಿರೋಧ ಹೋಗಿದ್ದು ಅವರಿಗೆ ಈಗ ತಳ ಸುಟ್ಟಿದೆ ಹಾಗಾಗಿ ಈಗ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹೀಗೆ ಪರಭಾಷೆಯಲ್ಲಿ ನಟಿಸಲು ಹೋಗುವವರಿಗೂ ಹಾಗೂ ನಟಿಸಿರುವವರಿಗೂ ದರ್ಶನ್ ಮಾತಿನ ಏಟು ಕೊಟ್ಟಿದ್ದಾರೆ.

ವಿದ್ಯಾಭರಣ್ ಜೊತೆ ಎಂಗೇಜ್ಮೆಂಟ್ ಮುರಿದು ಬಿದ್ದು ಇನ್ನು ಒಂದು ವಾರ ಕೂಡ ಆಗಿಲ್ಲ, ಆಗಲೇ ನಟ ಗಗನ್ ಜೊತೆ ಸಿಹಿ ಸುದ್ದಿ ಹಂಚಿಕೊಂಡ ವೈಷ್ಣವಿ ಗೌಡ.

ಕಳೆದವಾರ ನಿಶ್ಚಯವಾಗಿದ್ದ ವೈಷ್ಣವಿ ಮದುವೆ ಅರ್ಧಕ್ಕೆ ಮುರಿದು ಬಿದ್ದಿದೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ನಾಯಕ ನಟಿ ಪಾತ್ರವನ್ನು ಮಾಡುತ್ತಿದ್ದ ವೈಷ್ಣವಿಗೆ ಮದುವೆಯು ಇತ್ತೀಚಿಗಷ್ಟೇ ನಿಶ್ಚಯವಾಗಿತ್ತು ವೈಷ್ಣವಿಯವರು ವಿದ್ಯಾಭರಣ ಅವರ ಜೊತೆ ದಾಂಪತ್ಯ ಜೀವನವನ್ನು ಶುರು ಮಾಡಲು ಸಿದ್ದರಾಗಿದ್ದರು ಮದುವೆಯ ಮುಂಚೆ ಬುಟ್ಟು ಇಡುವ ಶಾಸ್ತ್ರವು ನಡೆಯಬೇಕಾದ ಕಾರಣ ವೈಷ್ಣವಿ ಅವರ ಮನೆಯಲ್ಲಿ ಕೇವಲ ನೆಂಟರು ಹಾಗೂ ತುಂಬಾ ಬೇಕಾದವರು.

ಸುಮಾರು 75 ರಿಂದ 80 ಜನ ಸೇರಿ ಕಾರ್ಯವನ್ನು ಸಂತೋಷದಿಂದ ನಡೆಸಿಕೊಟ್ಟರು. ಆದರೆ ಈ ಈ ಕಾರ್ಯಕ್ರಮದ ಫೋಟೋಗಳು ಯಾವಾಗ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿಯ ತೊಡಗಿದವು ಅನಾಮಧೆಯ ಹುಡುಗಿಯ ಕಡೆಯಿಂದ ಆಡಿಯೋ ಒಂದು ವೈರಲ್ಲಾಗಿ ರಾಧಾಂತವಾಗಿದೆ. ಮದುವೆಯ ಶುರುವಿನಲ್ಲಿ ಹೀಗೆ ಆಗಿರುವುದು ವೈಷ್ಣವಿ ಅವರಿಗೆ ಬೇಸರವನ್ನು ಉಂಟು ಮಾಡಿದೆ.

ಈ ಬಗ್ಗೆ ವೈಷ್ಣವಿಯವರ ತಂದೆಯು ಹೇಳಿಕೆಯನ್ನು ಕೊಟ್ಟಿದ್ದು ವೈಷ್ಣವಿಯವರು ಈ ವಿಷಯದ ಬಗ್ಗೆ ಅವರಿಗೆ ಎರಡು ದಿನಗಳ ಕಾಲ ಚೇತರಿಸಿಕೊಳ್ಳಲು ಸಮಯ ಬೇಕಾಗಿದೆ ಎಂದು ಹೇಳಿದ್ದರು ಆದರೆ ಈ ವಿಷಯದ ಬೆನ್ನೆಲು ವೈಶ್ಣವಿಯವರ ಮದುವೆ ಸಲುವಾಗಿ ಕೆಲವೊಂದು ಸುದ್ದಿಗಳು ಹರಿದಾಡುತ್ತಿವೆ.

ಜೀ ಕನ್ನಡ ವಾಹಿನಿ ಅವರು ಸದಾ ಹೊಸ ಹೊಸ ತರದ ಕಥೆಗಳನ್ನು ಹೊತ್ತು ತಂದು ಅಭಿಮಾನಿಗಳನ್ನು ಮನರಂಜಿಸುತ್ತಾ ಇರುತ್ತಾರೆ. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು ಇನ್ನು ವಿಧವಿಧವಾದ ಶೋಗಳನ್ನು ನಡೆಸುತ್ತಾ ಕುತೂಹಲಗಳಿಗೆ ದಾರಿ ಮಾಡಿಕೊಡುತ್ತಾ ಜನರ ನೋವನ್ನು ಮರೆಸುತ್ತಾರೆ.

ಈ ಬಗ್ಗೆ ಧಾರವಾಹಿಗಳು ಕೂಡ ಉತ್ತಮವಾದ ಕಥೆಗಳನ್ನು ಹೊಂದಿ, ಒಳ್ಳೆಯ ಉದ್ದೇಶಗಳನ್ನು ಹೊಂದಿದೆ ಈ ಪಟ್ಟಿಯಲ್ಲಿ ಹೊಸ ಧಾರವಾಹಿ ಆದ ಸೀತಾರಾಮ ಎಂಬ ಧಾರವಾಹಿ ಮುಂದಿನ ದಿನಗಳಲ್ಲಿ ಬರಲಿದೆ. ಸ್ವಪ್ನ ಕೃಷ್ಣ ಅವರ ನಿರ್ದೇಶನದ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಗೆ ನಾಯಕ ನಾಯಕಿಯರನ್ನು ಆರಿಸುತ್ತಿದ್ದಾರೆ.

ಸೀತಾರಾಮ ಧಾರಾವಾಹಿಗೆ ಆಯ್ಕೆಯಾಗಿರುವ ನಾಯಕಿ ಎಂದರೆ ವೈಷ್ಣವಿಯವರು ವೈಷ್ಣವಿಯವರು ಈ ಹಿಂದೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಎಂಬ ಪಾತ್ರಕ್ಕೆ ಜೀವ ತುಂಬಿದರು ಆಧಾರವಾಗಿ ಇಲ್ಲಿ ಗಂಡನ ಮನೆಯನ್ನು ನಡೆಸಿಕೊಂಡು ಬರುವ ಜವಾಬ್ದಾರಿಯನ್ನು ಹೊತ್ತು ಬಂದಿರುವ ಸೊಸೆ ಪಾತ್ರವನ್ನು ಮಾಡಿ ಪ್ರೇಕ್ಷಕರ ಮನಸನ್ನು ಗೆದ್ದಿದ್ದರು.

ಇನ್ನು ಅದೇ ಸೀತಾರಾಮ ಧಾರಾವಾಹಿಗೆ ಮಂಗಳ ಗೌರಿ ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪನವರು ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳದಿದ್ದರೆ. ಇನ್ನು ಈ ಮುಂಚೆ ಗಗನ್ ಸಿದ್ದಪ್ಪನವರು ಕಲರ್ಸ್ ಕನ್ನಡ ವಾಹಿನಿಯ ಮಂಗಳ ಗೌರಿ ಧಾರವಾಹಿಯ ನಾಯಕನ ಪಾತ್ರವಾದ ರಾಜೀವ್ ಪಾತ್ರವನ್ನು ಮಾಡುತ್ತಿದ್ದರು ಈ ಮೂಲಕ ಗಗನ್ ರವರು ಜನರ ಮನಸನ್ನು ಗೆದ್ದಿದ್ದಾರೆ ಎಂದರೆ ಸುಳ್ಳಾಗುವುದಿಲ್ಲ.

ಇತ್ತೀಚಿಗೆ ವೈಷ್ಣವಿಯವರ ನಿಶ್ಚಿತಾರ್ಥ ಬಿದ್ದಿದ್ದು ವೈಷ್ಣವಿ ಅವರ ಅಭಿಮಾನಿಗಳಿಗೆ ಸ್ವಲ್ಪ ಬೇಸರ ತಂದಿತ್ತು ಅಲ್ಲದೆ ವೈಷ್ಣವಿಯವರು ಸೋಶಿಯಲ್ ಮೀಡಿಯಾ ಗಳಲ್ಲಿ ಸದಾ ಆಕ್ಟಿವಾಗಿರುತ್ತಾರೆ. ಸದ್ಯ ವೈಷ್ಣವಿಯವರು ಬೇಸರದಿಂದ ಇದ್ದರು ಜೀ ಕನ್ನಡ ವಾಹಿನಿಯ ಮೂಲಕ ಸಂತೋಷವಾಗಿದ್ದಾರೆ.

ಹೌದು ಜೀ ಕನ್ನಡ ವಾಹಿನಿಯ ಸೀತಾರಾಮ ಕಲ್ಯಾಣದಲ್ಲಿ ವೈಷ್ಣವಿ ಅವರ ಸಂಗಾತಿಯಾಗಿ ಗಗನ್ ರವರು ಕಾಣಿಸಿಕೊಳ್ಳದಿದ್ದರೆ ಈ ವಿಷಯವಾಗಿ ವೈಷ್ಣವಿಯವರು ಹಾಗೂ ವೈಷ್ಣವಿ ಅವರ ಅಭಿಮಾನಿಗಳು ಕೂಡ ಸಂತೋಷದಿಂದಿದ್ದಾರೆ ಎಂದರೆ ಸುಳ್ಳಾಗುವುದಿಲ್ಲ ಇನ್ನು ಸೀತಾರಾಮ ಧಾರವಾಹಿಯು ಜನರ ಮನಸ್ಸನ್ನು ಗೆಲ್ಲುತ್ತದೆಯೋ ಇಲ್ಲವೋ ಎಂದು ಮುಂದೆ ಬರುವ ದಿನಗಳಲ್ಲಿ ಕಾದುನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿ

ಮದುವೆ ಆದ ನಾಲ್ಕೇ ದಿನಕ್ಕೆ ನನ್ನ ಅಣ್ಣ ಸಂಪೂರ್ಣ ಬದಲಾಗಿ ಬಿಟ್ಟ ಎಂದು ಕಣ್ಣೀರು ಹಾಕಿ ಬಿಗ್ ಬಾಸ್ ಮನೆಯಲ್ಲಿ ಜೀವನದ ಕಥೆ ಹೇಳಿಕೊಂಡ ನಟಿ ದೀಪಿಕಾ ದಾಸ್

ಇಷ್ಟು ದಿನ ಮುಚ್ಚಿಟ್ಟಿದ್ದ ಕಹಿ ಘಟನೆ ಹೊರ ಹಾಕಿದ ನಟಿ(Deepika Das) ದೀಪಿಕಾ ದಾಸ್.

ಬದುಕು ಎಂಬುದು ಎಲ್ಲರಿಗೂ ಒಂದೇ ಅದು ಸೆಲೆಬ್ರಿಟಿ ಆಗಿರಲಿ ಅಥವಾ ಜನ ಸಮಾನ್ಯರಾಗಿರಲಿ

(Deepika Das)ದೀಪಿಕಾ ದಾಸ್ ಅವರು ನಾಗಿಣಿ ಎನ್ನುವ ಕಿರುತೆರೆ ಧಾರಾವಾಹಿ ಮೂಲಕ ಕನ್ನಡಿಗರಿಗೆ ಚಿರಪರಿಚಿತರು. ಇದಾದ ಬಳಿಕ ಬಿಗ್ ಬಾಸ್ ಸೀಸನ್ ಎಂಟರ ಕಂಟೆಸ್ಟೆಂಟ್ ಆಗಿ ಮನೆ ಒಳಗಿದ್ದ ಇವರ ವ್ಯಕ್ತಿತ್ವವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಸದ್ಯಕ್ಕೆ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 9ನೇ ಅಲ್ಲೂ ಕೂಡ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿದ್ದ ಇವರು ಕಳೆದ ವಾರ ಮನೆಯಿಂದ ಎಲಿಮಿನೇಟ್ ಆಗಿದ್ದರು.

ಪ್ರೇಕ್ಷಕರಿಗೆ ಮತ್ತು ಮನೆ ಮಂದಿಗೆ ಶಾ-ಕ್ ಆಗುವಂತೆ ಮತ್ತೆ ವೈಲ್ಡ್ ಕಾರ್ಡ್ ಎಂಟಿಯಾಗಿ ಬಿಗ್ ಮನೆ ಸೇರಿದ್ದಾರೆ. ಈ ರೀತಿ ಮೂರು ಮೂರು ಬಿಗ್ ಬಾಸ್ ಮನೆಗೆ ಹೋಗುವ ಭಾಗ್ಯ ಸಿಕ್ಕಿರುವುದು ದೀಪಿಕ ದಾಸ್ ಅವರಿಗೆ ಮಾತ್ರ. ದೀಪಿಕಾ ದಾಸ್ ಅವರನ್ನು ಸೀಸನ್ ಎಂಟರಿಂದಲೂ ಸಹ ಜನ ನೋಡಿದ್ದಾರೆ.

ಸದಾ ಗಾಂಭೀರ್ಯದಿಂದ ಇರುವ ಎಲ್ಲೂ ಕೂಡ ಬೇಕಾಬಿಟ್ಟಿ ಮಾತನಾಡದೆ ಬೇಕಾದದ್ದಷ್ಟು ಮಾತ್ರ ಸ್ಪಷ್ಟವಾಗಿ ಚಿಕ್ಕದಾಗಿ ನೇರವಾಗಿ ಹೇಳಿ ಮುಗಿಸುವ ಸದಾ ಶಾಂತವಾಗಿರುವ ಯಾರ ಜೊತೆಗೂ ಕೂಡ ಅತಿ ಹೆಚ್ಚು ಸಲಿಗೆ ಬೆಳೆಸದೆ ಒಂದು ಅಂತರ ಕಾಯ್ದುಕೊಂಡೆ ಎಲ್ಲರ ಜೊತೆಗೂ ಸ್ನೇಹದಿಂದ ಇರುವ ದಿಪಿಕಾ ನೋಡುವುದಕ್ಕೆ ಆಟಿಟ್ಯೂಡ್ ಗರ್ಲ್ ಎನಿಸಿದರೂ ಒಬ್ಬ ಸ್ಟ್ಯಾಂಡರ್ಡ್ ವುಮೆನ್.

ಇವರ ಇಂತಹ ವ್ಯಕ್ತಿತ್ವವೇ ಅನೇಕ ಜನರಿಗೆ ಸ್ಪೂರ್ತಿ ಕೂಡ ಆಗಿದ್ದು ಹೆಣ್ಣುಮಗಳೆಂದರೆ ಹೀಗೆ ಇರಬೇಕು ಎಂದು ಖ್ಯಾತ ಬರಹಗಾರ ರವಿ ಬೆಳಗೆರೆ ಅವರೇ ಸೀಸನ್ ಎಂಟರಲ್ಲಿ ಇವರ ಜೊತೆಗಿದ್ದಾಗ ನೋಡಿ ಹೊಗಳಿದ್ದರು. ದೀಪಿಕಾ ದಾಸ್ ಅವರು ಎಲ್ಲೂ ಕೂಡ ತಮ್ಮ ಕಥೆಯ ಬಗ್ಗೆ ಹೆಚ್ಚು ಹೇಳಿಕೊಳ್ಳುವುದಿಲ್ಲ ಸದಾ ಪ್ರಾಕ್ಟಿಕಲ್ ಆಗಿ ಆ ಘಳಿಕೆ ನಡೆಯುವುದರ ಬಗ್ಗೆ ಮಾತನಾಡುವ ಇವರು ಇತರರಂತೆ ಹಳೆ ಕಥೆಗಳನ್ನು ನೆನೆದು ಕಥೆ ಹೊಡೆಯುವುದು ತೀರಾ ವಿರಳ.

ಆದರೆ ಬಿಗ್ ಬಾಸ್ ಕಡೆಯಿಂದ ಬಂದ ಟಾಸ್ಕ್ ಕಾರಣ ಎಲ್ಲರೂ ಸಹ ಅವರ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹೇಳಿಕೊಳ್ಳಲೇ ಬೇಕಾಗಿತ್ತು. ಈ ಸಂದರ್ಭದಲ್ಲಿ ದೀಪಿಕ ದಾಸ್ ಅವರು ಸಹ ಆ ಚಟುವಟಿಕೆಯಲ್ಲಿ ಭಾಗವಹಿಸಿ ಪ್ರಾಮಾಣಿಕವಾಗಿ ತಮ್ಮ ಜೀವನದಲ್ಲಿ ತಮಗಾದ ಅತ್ಯಂತ ಕಹಿಯ ನೋವು ಯಾವುದು ಎನ್ನುವುದನ್ನು ಹೇಳಿಕೊಂಡು ಭಾವುಕರಾಗಿ ಕಣ್ಣೀರು ಇಟ್ಟಿದ್ದಾರೆ.

ಅಷ್ಟಕ್ಕೂ ದೀಪಿಕಾ ದಾಸ್ ಅವರು ಇನ್ನೂ ಸಹ ನೊಂದುಕೊಳ್ಳುತ್ತಿರುವ ಆ ಕಹಿ ಘಟನೆ ಯಾವುದು ಎಂದರೆ ಅವರ ಅಣ್ಣ ಮದುವೆ ಆದ ತಕ್ಷಣ ಬದಲಾದದ್ದು. ದೀಪಿಕಾ ದಾಸ್ ಅವರಿಗೆ ಒಬ್ಬ ಅಣ್ಣನಿದ್ದು ಅವರ ತಂದೆ ತೀರಿ ಹೋದ ಸಂದರ್ಭದಲ್ಲಿ ಅವರ ಮದುವೆ ನಡೆದಿರುತ್ತದೆ. ದೀಪಿಕಾ ದಾಸ್ ಅವರು ಬಹಳ ಇಷ್ಟಪಡುತ್ತಿದ್ದ ತಂದೆ ಲಿವರ್ ಜಾಂಡಿಸ್ಸಿನಿಂದ ತೀರಿ ಹೋಗುತ್ತಾರೆ.

ಅದೇ ಸಮಯದಲ್ಲಿ ಸಂಬಂಧಿಕರು ವರ್ಷದೊಳಗೆ ಶುಭ ಕಾರ್ಯ ಮಾಡಬೇಕು ಎಂದು ಹೇಳಿದ್ದರಂತೆ. ಆಗ ದೀಪಿಕಾ ದಾಸ್ ಅವರು ಆಗಷ್ಟೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು ತಾನಿನ್ನು ಚಿಕ್ಕವಳು ಈಗಲೇ ಮದುವೆಯಾಗುವುದಿಲ್ಲ ಎಂದು ಕಡಾ ಖಂಡಿತವಾಗಿ ಹೇಳಿ ಬಿಟ್ಟರಂತೆ. ಈ ಕಾರಣದಿಂದ ದೀಪಿಕಾ ಬದಲು ಅವರ ಅಣ್ಣನಿಗೆ ಮದುವೆ ಮಾಡಲು ನಿರ್ಧರಿಸಿದ ಕುಟುಂಬ ಅಂತಹ ಕಷ್ಟದ ಸಂದರ್ಭದಲ್ಲೂ ಅದ್ದೂರಿಯಾಗಿ ಮದುವೆ ಮಾಡಿಕೊಡುತ್ತಾರೆ.

Deepika Das

Deepika Das

ಅಲ್ಲದೆ ಆ ಮದುವೆ ನಡೆಸಲು ಸಾಲ ಕೂಡ ಮಾಡಬೇಕಾಗುತ್ತದೆ. ಆದರೆ ಅವರ ಅಣ್ಣ ಮಾತ್ರ ಮದುವೆ ಆದ ಎರಡೇ ದಿನಕ್ಕೆ ಮನೆಯಲ್ಲಿ ಆದ ಸಣ್ಣ ವಿಷಯಕ್ಕೆ ದೊಡ್ಡದಾಗಿ ಜಗಳ ಆಡಿ ಅತ್ತಿಗೆ ಎದುರೇ ತಟ್ಟೆ ಎಸೆದು ರಂಪ ಮಾಡಿದ್ದರಂತೆ. ಅದಾದ ಬಳಿಕ ಮನೆ ಬಿಟ್ಟು ಹೋಗಿ ಬೇರೆ ಮನೆಯಲ್ಲಿ ನೆಲೆಸಿದ್ದ ಇವರು ತಂಗಿ ಹಾಗೂ ಅಮ್ಮನನ್ನು ಹಲವು ದಿನಗಳವರೆಗೆ ದೂರ ಇಟ್ಟಿದ್ದರಂತೆ.

ಆ ಸಂದರ್ಭದಲ್ಲಿ ತನಗೆಷ್ಟು ನೋವು ಆಗಿತ್ತು ಎನ್ನುವುದನ್ನು ಹೇಳಿಕೊಂಡು ದೀಪಿಕಾ ಕಣ್ಣೀರಿಟ್ಟಿದ್ದಾರೆ. ಆದರೆ ಸದ್ಯ ದೇವರ ದಯೆಯಿಂದ ಈಗ ಎಲ್ಲಾ ಸರಿ ಆಗಿದ್ದು ಅಣ್ಣ ವಾಪಸ್ ಮನೆಗೆ ಬಂದಿದ್ದಾರಂತೆ. ಸಾಮಾನ್ಯ ಜನರ ಮನೆಯಲ್ಲಿ ಇಂತಹ ಘಟನೆ ನಡೆಯುವುದನ್ನು ನಾವು ಕೇಳಿದ್ದೇವೆ ನೋಡಿದ್ದೇವೆ ಆದರೆ ಸೆಲೆಬ್ರಿಟಿಗಳ ಬದುಕಲು ಕೂಡ ಇಂತಹ ಕಹಿ ಘಟನೆಗಳು ಇದೆ ಎಂಬುದನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಅನಿಸುತ್ತದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.

ಅಪ್ಪುಗೆ ಪವರ್ ಸ್ಟಾರ್ ಅಂತ ಹೆಸರಿಟ್ಟ ಪುಣ್ಯಾತ್ಮ ಯಾರು ಗೊತ್ತ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪುನೀತ್ ಎನ್ನುವ ಹೆಸರಿಗಿಂತ ಅಪ್ಪು ಎನ್ನುವ ಹೆಸರಿನಲ್ಲಿ ಹೆಚ್ಚಾಗಿ ಕರೆಸಿಕೊಂಡವರು. ಅವರ ಮನೆಯಲ್ಲಿ ಅವರನ್ನು ಪುನೀತ್ ಎನ್ನುವ ಹೆಸರಿನ ಬದಲಾಗಿ ಅಪ್ಪು ಎಂದು ಕರೆಯುತ್ತಿದ್ದರು. ಇಡೀ ಕರ್ನಾಟಕ ಅವರನ್ನು ಮನೆಯ ಮಗ ಎಂದು ಪ್ರೀತಿಸುತ್ತಿದ್ದ ಕಾರಣ ಎಲ್ಲರೂ ಸಹ ಅವರನ್ನು ಪವರ್ ಸ್ಟಾರ್ ಎಂದಾಗಲಿ ಅಥವಾ ಪುನೀತ್ ಎಂದಾಗಲಿ ಕರೆಯುವುದರ ಬದಲು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು.

ಚಿಕ್ಕ ಮಕ್ಕಳಿಂದ ಹಿಡಿದು ಯುವಕರಿಗೆ ವೃದ್ದರಿಗೆ ಹೀಗೆ ಎಲ್ಲರಿಗೂ ಇಷ್ಟವಾಗುತ್ತಿದ್ದ ನಟರಾಗಿದ್ದ ಇವರು ಸಿನಿಮಾದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿ ಕೂಡ ಇಂತಹದೇ ವ್ಯಕ್ತಿತ್ವ ಹೊಂದಿದವರು. ಇಂತಹ ಪವರ್ ಸ್ಟಾರ್ ಅನ್ನು ಕಳೆದುಕೊಂಡ ದಿನದಿಂದ ಚಿತ್ರರಂಗ ಮತ್ತು ರಾಜ್ ಕುಟುಂಬದಲ್ಲಿ ಮಾತ್ರವಲ್ಲದೆ ಇಡೀ ಕರ್ನಾಟಕದಲ್ಲಿ ಕೂಡ ನೋವಿನ ಮೌನ ಮುಡುಗಟ್ಟಿದೆ.

ಪುನೀತ್ ರಾಜಕುಮಾರ್ ಅವರು ಬಾಲ್ಯದಿಂದಲೂ ಅಪ್ಪನ ಜೊತೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು. ಬಾಲ ನಟನಾಗಿಯೇ ಕರ್ನಾಟಕದ ಜನತೆ ಅವರನ್ನು ಒಪ್ಪಿ ಅಪ್ಪಿಕೊಂಡಿದ್ದರು. ಮೂರನೇ ವಯಸ್ಸಿಗೆ ಹಾಡುತ್ತಾ, ಆರನೇ ವಯಸ್ಸಿಗೆ ಅಭಿನಯಿಸಿದ ಆಟ ಆಡುವ ವಯಸ್ಸಿನಲ್ಲಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಭಾಗ್ಯವಂತ ಇವರು.

ಇನ್ನು ಬೆಳೆಯುತ್ತಾ ಬಂದಂತೆ ಹೋಂ ಪ್ರೊಡಕ್ಷನ್ ಜವಾಬ್ದಾರಿಯನ್ನು ಅಮ್ಮನ ಜೊತೆ ಹಂಚಿಕೊಂಡು ಅವುಗಳಲ್ಲಿ ತಲ್ಲಿನರಾಗಿದ್ದ ಇವರು ಅಪ್ಪು ಎನ್ನುವ ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದರು. ಕೆಲವು ದಿನಗಳವರೆಗೆ ಲವರ್ ಬಾಯ್ ಲುಕ್ಕಿನಲ್ಲಿ ಕಾಣಿಸಿಕೊಂಡ ಇವರು ಆ ನಂತರದ ಚಿತ್ರಕಥೆ ಆಯ್ಕೆಯ ವಿಷಯದಲ್ಲಿ ಬಹಳ ಪ್ರಬುದ್ಧರಾಗಿದ್ದರು.

ಇತ್ತೀಚೆಗೆ ಅವರ ಮೈತ್ರಿ, ನಟಸಾರ್ವಭೌಮ, ರಾಜಕುಮಾರ, ಯುವರತ್ನ ಇಂತಹ ಸಿನಿಮಾಗಳು ಸಾಮಾಜಿಕ ಸಂದೇಶ ಹೊತ್ತು ತಂದ ಸಿನಿಮಾಗಳಾಗಿದ್ದು ಸಮಾಜಮುಖಿ ಕಾರ್ಯಗಳಲ್ಲಿ ಸಿನಿಮಾ ಮತ್ತು ಸಿನಿಮಾ ಹೊರತಾಗಿಯೂ ಕೂಡ ಅಪ್ಪು ತೊಡಗಿಕೊಂಡಿದ್ದರು. ಅಪ್ಪು ಅವರು ಕರ್ನಾಟಕದ ಜನತೆಯ ಬಗ್ಗೆ ಎಷ್ಟು ಪ್ರೀತಿ ಒಲವು ಹೊಂದಿದ್ದರು ಹಾಗೂ ನೊಂದವರ ಪಾಲಿಗೆ ಎಷ್ಟು ಸಹಾಯ ಹಸ್ತ ಚಾಚಿದರು ಎನ್ನುವುದು ಅವರು ಇದ್ದ ದಿನಕ್ಕಿಂತಲೂ ಅವರ ಅಗಲಿಕೆಯ ಬಳಿಕ ಎಲ್ಲರಿಗೂ ತಿಳಿಯಿತು.

ಕರ್ನಾಟಕದ ಯಾವೊಬ್ಬ ಸೆಲಬ್ರೆಟಿಯೂ ಕೂಡ ಮಾಡದಷ್ಟು ಸೇವೆಯನ್ನು ಪುನೀತ್ ರಾಜಕುಮಾರ್ ಅವರೊಬ್ಬರೇ ಮಾಡಿದ್ದಾರೆ. ಇಂತಹ ಒಬ್ಬ ಮಹಾನ್ ಪುರುಷನನ್ನು ಪಡೆದ ಕರ್ನಾಟಕವೇ ಧನ್ಯ. ಅವರ ಇಂತಹ ಗುಣಗಳಿಂದಲೇ ಇಂದು ಪುನೀತ್ ರಾಜಕುಮಾರ್ ಅವರು ಅಭಿಮಾನಿಗಳ ದೇವರು ಎಂದು ಕರೆಸಿಕೊಳ್ಳುತ್ತಿದ್ದಾರೆ. ಅಣ್ಣಾವ್ರ ಮುದ್ದಿನ ಮಗನಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗ ನಿಜವಾಗಿಯೂ ಸನ್ ಆಫ್ ಬಂಗಾರದ ಮನುಷ್ಯ ಆಗಿಯೇ ಬದುಕಿ ಹೋಗಿದ್ದಾರೆ.

ಇನ್ನು ಅಪ್ಪು ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಪವರ್ ಸ್ಟಾರ್ ಎಂದು ಟೈಟಲ್ ಕೊಡಲಾಗಿದ್ದು, ಈ ಹೆಸರನ್ನು ಕೊಟ್ಟಿದ್ದು ಯಾರು ಎಂದು ಮೂಲ ಹುಡುಕುತ್ತಾ ಹೋದಾಗ ತಿಳಿದದ್ದು ಈ ಹೆಸರು ಅಪ್ಪುಗೆ ಬಂದಿದ್ದು ಅವರ ಅಣ್ಣನಾದ ಶಿವರಾಜ್ ಕುಮಾರ್ ಅವರಿಂದ ಎಂದು. ಶಿವರಾಜ್ ಕುಮಾರ್ ಅವರ ಅಪ್ಪು ಅವರ ಎನರ್ಜಿಯನ್ನು ಗುರುತಿಸಿ ಪವರ್ ಎಂದು ಕರೆದರೂ ಆನಂತರ ಅವರಿಗೆ ಪವರ್ ಸ್ಟಾರ್ ಎನ್ನುವ ಸ್ಟಾರ್ ಗಿರಿ ಉಳಿದುಕೊಂಡಿತ್ತು.

ಇಂದು ತಮ್ಮನ ಅಗಲಿಕೆ ನೋವಿನಲ್ಲಿರುವ ಶಿವಣ್ಣನ ಮುಖದಲ್ಲೂ ಕೂಡ ವರ್ಷವಾದರೂ ಸಹ ಆ ನೋವಿನ ಛಾಯೆ ಕುಂದಿಲ್ಲ. ಸ್ವಂತ ಮಗನನ್ನೇ ಕಳೆದುಕೊಂಡ ಆ ಅನಾಥ ಭಾವದಲ್ಲಿರುವ ಅಣ್ಣನ ಕಣ್ಣೀರು ನೋಡಿದರೆ ಎಲ್ಲರ ಕರುಳು ಕೂಡ ಚುರುಕ್ ಎನ್ನುತ್ತದೆ. ಆದಷ್ಟು ಬೇಗ ಅವರ ಕುಟುಂಬಕ್ಕೆ ದೇವರು ಇದನ್ನೆಲ್ಲಾ ಸಹಿಸಿಕೊಳ್ಳುವ ಧೈರ್ಯ ನೀಡಲಿ ಎಂದು ಕೇಳಿಕೊಳ್ಳೋಣ.

“ನೋಡ್ತಿದಂಗೆ ಕಳ್ದೋಗ್ಬಿಟ್ಟೆ ರಾಮ ರಾಮ” ಎಂದು ಮನಬಿಚ್ಚಿ ಕುಣಿದ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.

ಶ್ವೇತಾ ಚಂಗಪ್ಪ ಕ್ಯೂಟ್ ವಿಡಿಯೋ

ಕೊಡಗಿನ ಚೆಲುವೆ ಶ್ವೇತ ಚಂಗಪ್ಪ ಕರ್ನಾಟಕದಾದ್ಯಂತ ಸೀರಿಯಲ್ ಕಲಾವಿದೆ ಆಗಿ ಪರಿಚಿತರು. ಉದಯ ಟಿವಿಯಲ್ಲಿ ಪ್ರಸಾರವಾದ ಕಾದಂಬರಿ ಎನ್ನುವ ಮೆಘಾ ದಾರವಾಹಿಯಲ್ಲಿ 10 ವರ್ಷಕ್ಕಿಂತಲೂ ಹೆಚ್ಚಿನ ಕಾಲ ನಾಯಕಿ ಪಾತ್ರದಲ್ಲಿ ಅಭಿನಯಿಸಿದ ಇವರನ್ನು ಮಜಾ ಟಾಕೀಸ್ ಬರುವವರೆಗೂ ಜನ ಅದೇ ಕಾದಂಬರಿ ಹೆಸರಿನಿಂದಲೇ ಗುರುತಿಸುತ್ತಿದ್ದರು.

ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಎರಡನೇ ಸೀಸನ್ನಲ್ಲಿ ಕೂಡ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗಿದ್ದ ಇವರು ಅಂತಿಮ ದಿನದವರೆಗೂ ಮನೆಯಲ್ಲಿ ಇದ್ದುಕೊಂಡು ಟಫ್ ಫೈಟ್ ಕೊಟ್ಟ ಗಟ್ಟಿಗಿತ್ತಿ. ಕಡೆಯ ಮೂರನೇ ಸ್ಪರ್ಧೆಯಾಗಿ ಗೆಲುವನ್ನು ಕೂದಲ ಅಂತರದಲ್ಲಿ ಕಳೆದುಕೊಂಡ ಇವರು ನಂತರ ಬಂದ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ತಂಡವನ್ನು ಸೇರಿಕೊಂಡರು.

ಮಜಾ ಟಾಕೀಸ್ ಅಲ್ಲಿ ಸೃಜನ್ ಅವರ ಸಪ್ನೋಕಿ ರಾಣಿ ಆಗಿ ಪತ್ನಿಯಂತೆ ಅಭಿನಯ ಮಾಡಿದ ಇವರ ಹಾಸ್ಯದ ಮೋಡಿಗೆ ಜನ ಆಶ್ಚರ್ಯ ಚಕಿತರಾದರು. ಧಾರಾವಾಹಿಗಳಲ್ಲಿ ಕಣ್ಣೀರಿನ ನಾಯಕಿ ಆಗಿದ್ದ ಶ್ವೇತ ಚಂಗಪ್ಪ ಅವರು ಹಾಸ್ಯಕ್ಕೂ ಕೂಡ ಅಷ್ಟೇ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ತಿಳಿದಿದ್ದು ಮಜಾ ಟಾಕೀಸ್ ಇಂದ.

ಶ್ವೇತ ಚಂಗಪ್ಪ ಅವರು ಬಹುಮುಖ ಪ್ರತಿಭೆ ಆಕ್ಟಿಂಗ್, ರಿಯಾಲಿಟಿ ಶೋಗಳ ಹೋಸ್ಟಿಂಗ್, ಮತ್ತು ಸ್ವಂತ ಉದ್ದಿಮೆ ಹಾಗೇ ತನ್ನದೇ ಯೌಟ್ಯೂಬ್ ಚಾನೆಲ್ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿರುವ ಇವರು ಸದ್ಯಕ್ಕೆ ಮತ್ತೊಮ್ಮೆ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋಗೆ ಆಂಕರ್ ಆಗಿದ್ದಾರೆ. ಈ ಹಿಂದೆ ಇದೇ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸಾಲಕ್ಕೊಂದು ಸಲಾಮ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಕೊಟ್ಟಿದ್ದರು.

ಬಹಳ ವರ್ಷಗಳ ನಂತರ ಮತ್ತೆ ನಿರೂಪಣೆಗೆ ಇಳಿದಿರುವ ಇವರು ಈ ಬಾರಿ ಜೋಡಿ ನಂಬರ್ ಒನ್ ಕಾರ್ಯಕ್ರಮಕ್ಕೆ ಆಂಕರ್ ಆಗಿದ್ದಾರೆ. ತನ್ನ ನಗು ಹಾಗೂ ಮಾತಿನ ಚಾತುರ್ಯದಿಂದ ಅದ್ಭುತವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ಇವರಿಗೆ ಕಿರುತೆರೆಯ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮೊದಲಿನಿಂದಲೂ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಸಕ್ರಿಯವಾಗಿದ್ದಾರೆ.

ತನ್ನ ಸೋಶಿಯಲ್ ಮೀಡಿಯಾ ಅಭಿಮಾನಿಗಳನ್ನು ಫಾಲೋವರ್ ಗಳನ್ನು ರಂಜಿಸುವ ಸಲುವಾಗಿ ಆಗಾಗ ರೀಲ್ಸ್ ಗಳನ್ನು ಮಾಡಿ ಅಪ್ಲೋಡ್ ಕೂಡ ಮಾಡುತ್ತಿರುತ್ತಾರೆ. ಇದೀಗ ಶ್ವೇತಾ ಚಂಗಪ್ಪ ಅವರು ನೋಡುತ್ತಿದ್ದಾಗೆ ಕಳೆದು ಹೋದೆ ರಾಮ ರಾಮ ಎಂದು ಹಾಡಿಗೆ ಕುಣಿದು ರೀಲ್ಸ್ ಮಾಡಿದ್ದಾರೆ. ಈ ಹಾಡು ಈಗಷ್ಟೇ ಬಿಡುಗಡೆ ಆಗಿರುವ ಡಾರ್ಲಿಂಗ್ ಕೃಷ್ಣ ಮತ್ತು ನಿಷ್ವಿಕ ನಾಯ್ಡು ಹಾಗೂ ಮೇಘ ಶೆಟ್ಟಿ ಅವರು ಅಭಿನಯಿಸಿರುವ ದಿಲ್ ಪಸಂದ್ ಚಿತ್ರದಾಗಿದ್ದು.

ಈ ಚಿತ್ರದಲ್ಲಿ ನಿಶ್ವಿಕ ನಾಯ್ಡು ಅವರು ಬಹಳ ಅದ್ಭುತವಾಗಿ ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಯಾವ ಊರ ಚೆಲುವಾನೋ, ಹೊತ್ಕೊಂಡು ಹೋಗಲು ಬಂದಾನೋ ನೋಡುತ್ತಿದ್ದಂತೆ ಕಳೆದು ಹೋದನಲ್ಲ ರಾಮ ರಾಮ ಎಂದು ಸ್ಟೆಪ್ ಹಾಕಿರುವ ನಿಶ್ವಿಕ ನಾಯ್ಡು ಅವರ ನೃತ್ಯ ಮತ್ತು ಈ ಹಾಡಿನ ಕ್ಯಾಚಿ ಲಿರಿಕ್ಸ್ ಎಲ್ಲರಿಗೂ ಇಷ್ಟ ಆಗಿದ್ದು ಸದ್ಯಕ್ಕೆ ಟ್ರೆಂಡಿಂಗ್ ಅಲ್ಲಿ ಇರುವ ರೀಲ್ಸ್ ಹಾಡುಗಳಲ್ಲಿ ಇದು ಕೂಡ ಒಂದು.

ಇದೇ ಹಾಡನ್ನು ಆಯ್ದುಕೊಂಡು ಶ್ವೇತ ಚೆಂಗಪ್ಪ ಕೂಡ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಜೀ ಕನ್ನಡ ವಾಹಿನಿಯು ತನ್ನ instagram ಖಾತೆಯಲ್ಲಿ ಹಂಚಿಕೊಂಡಿದೆ ಹಾಗೂ ಶ್ವೇತ ಚಂಗಪ್ಪ ಅವರನ್ನು ಟ್ಯಾಗ್ ಮಾಡಿದೆ. ಇದನ್ನು ನೋಡಿದ ಅಭಿಮಾನಿಗಳು ಕಾಮೆಂಟ್ಗಳಲ್ಲಿ ಶ್ವೇತ ಚಂಗಪ್ಪ ಅವರ ಬ್ಯೂಟಿ ಹಾಗೂ ಸ್ಟೆಪ್ಗಳನ್ನು ಹಾಡಿ ಹೊಗಳುತ್ತಿದ್ದಾರೆ.

ನೆನಪಿರಲಿ ಪ್ರೇಮ್ ಮಗಳು ಅಮೃತ ನಾಯಕ ನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಯಾವ ಹೀರೋ ಜೊತೆ ಸ್ಕ್ರಿನ್ ಶೇರ್ ಮಾಡಿ ಕೊಳ್ಳಲಿದ್ದಾರೆ ಗೊತ್ತ.?

ಡಾಲಿ ಧನಂಜಯ್ ಸಿನಿಮಾದಲ್ಲಿ ಪ್ರೇಮ್ ಪುತ್ರಿ ಅಮೃತ ಲಾಂಚ್.

ಸಿನಿಮಾ ರಂಗದಲ್ಲಿರುವ ಮಕ್ಕಳು ಕೂಡ ಈ ಕ್ಷೇತ್ರದತ್ತ ಆಕರ್ಷಿತರಾಗಿ ಅವರು ಅಭಿನಯದಲ್ಲಿ ತೊಡಗಿಕೊಳ್ಳುವುದು ಹೊಸದೇನಲ್ಲ. ಡಾ. ರಾಜಕುಮಾರ್, ರವಿಚಂದ್ರನ್, ಶ್ರೀನಾಥ್ ಇವರುಗಳ ಮಕ್ಕಳುಗಳಂತೆ ಈಗಿನ ಕಾಲದ ಹೀರೋಗಳ ಮಕ್ಕಳು ಕೂಡ ಇದೇ ರಂಗದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಮೊನ್ನೆ ಮೊನ್ನೆ ಅಷ್ಟೇ ಮಾಲಾಶ್ರೀ ಅವರ ಪುತ್ರಿ ರಾಧನ ದರ್ಶನ್ ಅವರ ಸಿನಿಮಾದಲ್ಲಿ ಲಾಂಚ್ ಆಗುತ್ತಿದ್ದಾರೆ ಎನ್ನುವುದು ಸುದ್ದಿ ಆಗುತ್ತಿತ್ತು. ಈಗ ಮತ್ತೊಬ್ಬ ಸ್ಟಾರ್ ಪುತ್ರಿ ಕೂಡ ಫೇಮಸ್ ಹೀರೋ ಒಬ್ಬರ ಸಿನಿಮಾದಲ್ಲಿ ಲಾಂಚ್ ಆಗುತ್ತಿದ್ದಾರೆ. ಅಮೃತ ಎನ್ನುವ ಹೊಸ ಪ್ರತಿಭೆ ನೆನಪಿರಲಿ ಪ್ರೇಮ್ ಅವರ ಪುತ್ರಿಯಾಗಿದ್ದು, ಡಾಲಿ ಧನಂಜಯ್ ಅವರ ಸಿನಿಮಾ ಮೂಲಕ ಲಾಂಚ್ ಆಗುತ್ತಿದ್ದಾರೆ.

ಆದರೆ ಸಿನಿಮಾದಲ್ಲಿ ಇವರು ಧನಂಜಯ್ ಅವರಿಗೆ ನಾಯಕಿ ಆಗಿ ಅಲ್ಲ ಬದಲಾಗಿ ಅವರ ನಿರ್ಮಾಣದ ಸಂಸ್ಥೆಯ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಅಷ್ಟೇ. ಈ ಬಗ್ಗೆ ಅಮೃತ ಅವರ ತಂದೆ ಪ್ರೇಮ್ ಅವರೇ ವಿಷಯ ಹಂಚಿಕೊಂಡಿದ್ದು ನಮ್ಮ ಮನೆಯ ಮಗಳನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ ಆಶೀರ್ವದಿಸಿ ಎಂದು ಕೇಳಿಕೊಂಡು ಮಗಳ ಮುಂದಿನ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದಾರೆ.

ಅಮೃತ ಅವರು ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ ಪ್ರೊಡಕ್ಷನ್ ಕಡೆಯಿಂದ ತಯಾರಾಗುತ್ತಿರುವ ಮೂರನೇ ಸಿನಿಮವಾದ ಟಗರು ಪಲ್ಯ ಎನ್ನುವ ಸಿನಿಮಾದಲ್ಲಿ ನಾಯಕಿ ಆಗಿ ಲಾಂಚ್ ಆಗುತ್ತಿದ್ದು, ಟಗರು ಪಲ್ಯ ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ನಾಗಭೂಷಣ್ ಅವರು ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ ಎನ್ನುವುದು ತಿಳಿದು ಬಂದಿದೆ.

ಡಾಲಿ ಪಿಕ್ಚರ್ಸ್ ಹೊಸ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರಲು ಅವಕಾಶ ನೀಡುತ್ತಿದ್ದು. ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಉಮೇಶ್ ಕೆ ಕೃಪ ಎನ್ನುವರು ಚಿತ್ರರಂಗ ಎಂಟ್ರಿ ಆಗುತ್ತಿದ್ದಾರೆ. ಈಗಾಗಲೇ ಯೋಗರಾಜ್ ಭಟ್ ಅಂತಹ ಫೇಮಸ್ ಡೈರೆಕ್ಟರ್ ಜೊತೆ ಪಳಗಿರುವ ಉಮೇಶ್ ಕೆ ಕೃಪ ಅವರ ಮೊದಲ ನಿರ್ದೇಶನದ ಸಿನಿಮಾ ಇದಾಗಿದೆ.

ಸಿನಿಮಾಗೆ ವಾಸುಕಿ ವೈಭವ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದು, ಎಸ್ ಕೆ ರಾವ್ ಕ್ಯಾಮರಾ ವರ್ಕ್ ಮಾಡುವ ಹೊಣೆ ಹೊತ್ತಿದ್ದಾರೆ. ಇದರೊಂದಿಗೆ ಸಾಹಸ ನಿರ್ದೇಶನವನ್ನು ಮಾಸ್ಟರ್ ವಿನೋದ್ ಅವರು ಮಾಡುತ್ತಿದ್ದು ರಂಗಾಯಣ ರಘು, ನಾಗಭೂಷಣ್, ತಾರಾ, ಶರತ್ಹೋಹಿತಶ್ವ ಇನ್ನು ಮುಂತಾದ ದೊಡ್ಡ ಕಲಾವಿದರ ಹಿಂಡೇ ಟಗರುಪಲ್ಯ ಸಿನಿಮಾದಲ್ಲಿ ಇರಲಿದೆ.

ಈಗಾಗಲೇ ಸಿನಿಮಾ ಪೋಸ್ಟರ್ ರಿಲೀಸ್ ಆಗಿದ್ದು ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಚಿತ್ರೀಕರಣ ಶುರು ಆಗಲಿದೆ ಎನ್ನುವ ಸುದ್ದಿ ಇದೆ. ಈ ಸಿನಿಮಾ ಮೂಲಕ ಅಮೃತ ಎನ್ನುವ ಹೊಸ ಪ್ರತಿಭೆ ನಾಯಕಿ ಆಗಿ ಬೆಳ್ಳಿತರೆಗೆ ಬರಲಿದ್ದು ಪ್ರೇಮ್ ಅವರ ಮಗಳು ಆಗಿರುವುದರಿಂದ ಇವರ ಸಿನಿಮಾ ಮೇಲೆ ಜನರಿಗೆ ನಿರೀಕ್ಷೆ ಇದೆ.

ಡಾಲಿ ಪಿಕ್ಚರ್ಸ್ ಅಲ್ಲಿ ಈಗಾಗಲೇ ಬಡವರಾಸ್ಕಲ್ ಮತ್ತು ಹೆಡ್ ಅಂಡ್ ಬುಶ್ ಈ ಎರಡು ಸಿನಿಮಾಗಳು ನಿರ್ಮಾಣ ಆಗಿದ್ದವು. ಎರಡು ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿರುವುದರಿಂದ ಈ ಸಂಸ್ಥೆ ನಿರ್ಮಾಣದ ಮುಂದಿನ ಸಿನಿಮಾಗಳ ಬಗ್ಗೆ ಕೂಡ ಕುತೂಹಲ ಇದೆ.

ಸದ್ಯಕ್ಕೆ ಸ್ಯಾಂಡಲ್ವುಡ್ ಅಂಗಳದಲ್ಲಿ ಬಹು ಬೇಡಿಕೆ ನಟ ಆಗಿ ಪರಭಾಷೆಗಳನ್ನು ಕೂಡ ಆಫರ್ ಗಳನ್ನು ಬಾಚುತ್ತಿರುವ ಡಾಲಿ ನಿರ್ಮಾಪಕನಾಗಿ ಕೂಡ ಗೆಲ್ಲುತ್ತಿದ್ದಾರೆ. ಸಿನಿಮಾ ತಂಡಕ್ಕೆ ಶುಭವಾಗಲಿ ಇದೇ ರೀತಿ ಇನ್ನಷ್ಟು ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು ಮತ್ತು ಹೊಸ ಪ್ರತಿಭೆಗಳು ಈ ಸಂಸ್ಥೆಯ ಮೂಲಕ ಚಂದನವನಕ್ಕೆ ದೊರಕಲಿ ಎಂದು ಆಶಿಸೋಣ.

BigBoss: ಬಿಗ್ ಬಾಸ್ ಮನೆಯ ಮತ್ತೊಂದು ವಿಡಿಯೋ ವೈರಲ್, ಲಿಪ್ ಟು ಲಿಪ್ ಕಿಸ್ ಮಾಡಿ ವಿವಾದ ಸೃಷ್ಟಿಸಿಕೊಂಡ ಸೆಲೆಬ್ರಿಟಿಗಳು.

ಬಿಗ್ ಬಾಸ್ ರಿಯಾಲಿಟಿ ಶೋ

ಎಲ್ಲಾ ರಿಯಾಲಿಟಿ ಶೋಗಳ ದೊಡ್ಡಣ್ಣ ಆಗಿರುವ ಬಿಗ್ ಬಾಸ್ ಕಾರ್ಯಕ್ರಮವು ವಿಶ್ವದಾದ್ಯಂತ ಹೆಸರುವಾಸಿ. ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ನಡೆಸಲಾಗುತ್ತದೆ. ವರ್ಷಕೊಂದು ಬಾರಿ ನಡೆಯುವ ಈ ಸೀಸನ್ ನೋಡಲು ವರ್ಷಪೂರ್ತಿ ಅಭಿಮಾನಿಗಳು ಕಾಯುತ್ತಿರುತ್ತಾರೆ.

ಹಾಗೂ ತಮ್ಮ ನೆಚ್ಚಿನ ನಟ ನಟಿಯರು ಅಥವಾ ಕಲಾವಿದರು, ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದು ಆಸೆ ಪಡುತ್ತಾರೆ. ಜನ ಸಾಮಾನ್ಯರಿಗೂ ಕೂಡ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ನೀಡಲಾಗುತ್ತಿದ್ದು ಆ ರೀತಿ ಅವಕಾಶ ಇದ್ದ ಸೀಸನ್ ಅಲ್ಲಿ ಆಸಕ್ತರು ಸಹ ಬಿಗ್ ಬಾಸ್ ಮನೆಗೆ ಹೋಗಲು ಮುಗಿ ಬೀಳುತ್ತಾರೆ.

ಕೆಲವರು ಹೊರಗಿನಿಂದ ಪ್ರೇಕ್ಷಕರಂತೆ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿಕೊಂಡೆ ಖುಷಿಪಡುತ್ತಾರೆ. ಹೀಗೆ ಆಡುವವರಿಗೆ ಮತ್ತು ನೋಡುವವರಿಗೆ ಎಲ್ಲರಿಗೂ ಒಂದು ಬೃಹತ್ ಪಾಠಶಾಲೆ ಆಗಿರುವ ಬಿಗ್ ಬಾಸ್ ಕಾರ್ಯಕ್ರಮವು ಇಂತಹ ಹತ್ತು ಹಲವು ವಿಶೇಷತೆಗಳಿಂದ ಹೆಸರುವಾಸಿ ಆಗಿದೆ.

ಸದ್ಯಕ್ಕೆ ವ್ಯಕ್ತಿತ್ವಗಳ ಅನಾವರಣ ಎಂದು ಹೆಸರುವಾಸಿ ಆಗಿದ್ದ ಬಿಗ್ ಬಾಸ್ ಕಾರ್ಯಕ್ರಮವು ಒಂದು ರೀತಿ ಲವರ್ಸ್ ಸ್ಪಾಟ್ ಆಗಿಬಿಟ್ಟಿದೆ. ದಿನದ 24 ಗಂಟೆಗಳ ಕಾಲ ತೀರ ಹತ್ತಿರದಿಂದ ಒಬ್ಬರ ಜೊತೆ ಒಬ್ಬರು ಸಮಯ ಕಳೆಯುವುದರಿಂದ ಸಹಜವಾಗಿ ಒಬ್ಬರ ಮೇಲೆ ಒಬ್ಬರಿಗೆ ಫೀಲಿಂಗ್ ಬೆಳೆಯುತ್ತಿದೆ. ಅದರಲ್ಲಿ ಹಲವರು ಅದನ್ನು ಗಟ್ಟಿಯಾಗಿ ಇಟ್ಟುಕೊಂಡು ಹೊರಬಂದ ಬಳಿಕ ರಿಲೇಶನ್ ಶಿಪ್ ಮುಂದುವರೆಸಿ ಜೀವನದಲ್ಲೂ ಜೊತೆಯಾಗಿದ್ದರೆ.

ಕೆಲವರು ಕಾರ್ಯಕ್ರಮದಲ್ಲಿ ಹಲವು ದಿನಗಳ ಕಾಲ ಉಳಿದುಕೊಳ್ಳಲು ಇದನ್ನೇ ಒಂದು ಸ್ಟಾಟರ್ರ್ಜಿ ಆಗಿ ಮಾಡಿಕೊಂಡು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಈ ರೀತಿಯ ಒಂದು ಆರೋಪ ಕನ್ನಡ ಮಾತ್ರವಲ್ಲದೆ ಎಲ್ಲ ಭಾಷೆಯ ಬಿಗ್ ಬಾಸ್ ಕಾರ್ಯಕ್ರಮಗಳನ್ನು ಕೂಡ ಇದೆ. ಈಗ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಕ್ಯಾಮರಗಳ ಎದುರೇ ನಟಿಯೊಬ್ಬರು ಲಿಪ್ ಟು ಲಿಪ್ ಕಿಸ್ ಮಾಡಿ ಸಂಚಲನ ಸೃಷ್ಟಿ ಮಾಡಿದ್ದಾರೆ.

ಸಿರಿ ಎನ್ನುವ ಕಳೆದ ಸೀಸನ್ ಬಿಗ್ ಬಾಸ್ ಕಂಟೆಸ್ಟೆಂಟ್ ತನ್ನ ಗೆಳೆಯ ಶ್ರೀಹಾನ್ ಎನ್ನುವರು ಈ ಬಾರಿಯ ಕಂಟೆಸ್ಟೆಂಟ್ ಆಗಿರುವುದರಿಂದ ಮನೆ ಒಳಗೆ ಬಂದಿದ್ದು, ಇಷ್ಟು ಕಾಲ ಅಗಲಿಕೆ ವಿರಹದಲ್ಲಿದ್ದ ಶ್ರೀಹಾನ್ ಗೆ ಲಿಪ್ ಲಾಕ್ ಮಾಡುವ ಮೂಲಕ ಸುದ್ದಿ ಆಗಿದ್ದಾರೆ. ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಸಿರಿ ಅವರು ಕಳೆದ ಸೀಸನ್ ಅಲ್ಲಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದರು.

ಆ ಸಮಯದಲ್ಲಿ ಶನ್ನು ಅವರೊಂದಿಗೆ ಹೆಚ್ಚು ಜಗಳ ಮಾಡುವ ಮೂಲಕ ಆಗಾಗ ಅಪ್ಪುಗೆ ಕೊಡುವ ಮೂಲಕ ಸುದ್ದಿಯಲ್ಲಿದ್ದರು. ಒಂದು ಬಾರಿ ಹಾಸಿಗೆ ವಿಷಯಕ್ಕೆ ಜಗಳವಾಗಿ ಶನ್ನು ಕಪಾಳಕ್ಕೆ ಸಿರಿ ಬಾರಿಸಿದ್ದರು ಅದಾದ ಬಳಿಕ ಶನ್ನು ಬದುಕಿನಲ್ಲಿ ಅಲ್ಲೋಲ ಕಲ್ಲೋಲ ನಡೆದು ಅವರ ಗರ್ಲ್ ಫ್ರೆಂಡ್ ದೀಪ್ತಿ ಸುನೈನ ಶನ್ನು ಜೊತೆ ಬ್ರೇಕಪ್ ಮಾಡಿಕೊಳ್ಳಲು ಸಿರಿ ಕಾರಣವಾಗಿದ್ದರು.

ಇಷ್ಟಾದ ಬಳಿಕ ಸಿರಿ ಮತ್ತು ಷನ್ನು ನಡುವೆ ಪ್ರೀತಿ ಚಿಗುರೊಡೆದಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈಗ ಮನೆಯೊಳಕ್ಕೆ ಬಂದ ಸಿರಿ ಅವರು ಶ್ರೀಹನ್ ಗೆ ಕಿಸ್ ಮಾಡಿದ್ದರಿಂದ ಎಲ್ಲರೂ ಬಹಳ ಕನ್ಫ್ಯೂಸ್ ಆಗಿಬಿಟ್ಟಿದ್ದಾರೆ. ಸದ್ಯಕ್ಕೆ ಈಗ ಎಲ್ಲರ ಮನಸ್ಸಲ್ಲಿ ಓಡುತ್ತಿರುವ ಪ್ರಶ್ನೆಗಳಿಗೆ ಸಿರಿ ಅವರೇ ಉತ್ತರ ಕೊಟ್ಟು ಕನ್ಫ್ಯೂಷನ್ ಗಳನ್ನು ಸಾಲ್ವ್ ಮಾಡಬೇಕಿದೆ.

ಯಾಕೆಂದರೆ ಶನ್ನು ಜೊತೆಗೆ ಕೂಡ ಸಿರಿ ಹಿಂದೆ ಕಿಸ್ ಮಾಡಿದ್ದರು. ಹಾಗಾಗಿ ಇದನ್ನು ಕಾಮನೆಂದು ತೆಗೆದುಕೊಳ್ಳಬೇಕೆ ಅಥವಾ ವಿಶೇಷ ಎಂದು ಕೊಳ್ಳಬೇಕೆ ಎಂದು ಶ್ರೀಹಾನ್ಗಿಂತ ಪ್ರೇಕ್ಷಕರೇ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

Vaishnavi Gowda: ನೋವಿನಿಂದ ಹೊರ ಬರಲು ಟ್ಯಾಟೋ ಹಾಕಿಸಿಕೊಂಡ ನಟಿ ವೈಷ್ಣವಿ ಗೌಡ, ಈ ಟ್ಯಾಟೋದ ಹಿಂದಿರುವ ಅರ್ಥವೇನು ಗೊತ್ತಾ.?

ವೈಷ್ಣವಿ ಗೌಡ ಹೊಸ ಟ್ಯಾಟೋ ನೋಡಿ

ನೋವಿನಿಂದ ಹೊರ ಬರಲು ಈ ರೀತಿ ದಾರಿ ಹುಡಿಕಿದ್ರಾ ಸನ್ನಿಧಿ

ಬದುಕಲ್ಲಿ ನೆಡೆಯಬಾರದ ಘಟನೆ ನೆಡೆದು ಹೋಯ್ತು

ಕಿರುತೆರೆಯ ಸಿಂಪಲ್ ಕ್ವೀನ್, ಅಗ್ನಿಸಾಕ್ಷಿ ಯ ಸುಂದರಿ, ಲೇಡಿ ಬುದ್ದ ಹೀಗೆಲ್ಲಾ ಕರೆಸಿಕೊಂಡಿರುವ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರಿಗೆ ಕರ್ನಾಟಕದಾದ್ಯಂತ ಬಹಳ ಅಭಿಮಾನಿಗಳು ಇದ್ದಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಮೇಲೆ ಇನ್ನು ಹೆಚ್ಚಿನ ಜನರಿಗೆ ಪರಿಚಿತವಾದ ಇವರು ಈ ಹಿಂದೆ ದೇವಿ, ಮುಂಗಾರು ಮಳೆ, ಪುನರ್ ವಿವಾಹ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರೂ.

ಅಗ್ನಿಸಾಕ್ಷಿ ಎನ್ನುವ ಧಾರಾವಾಹಿಯು ಈಕೆಗೆ ಬೆಳ್ಳಿತೆರೆ ನಟಿಯಷ್ಟೇ ಸ್ಥಾನಮಾನ ತಂದು ಕೊಟ್ಟಿತು. ಜೊತೆಗೆ ಬಿಗ್ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಸದಾ ತಾಳ್ಮೆ ಮತ್ತು ನಗುಮುಖದಿಂದ ಇದ್ದ ಇವರ ವ್ಯಕ್ತಿತ್ವಕ್ಕೆ ನೋಡುಗರು ಮಾರು ಹೋಗಿದ್ದರು. ಯೋಗ, ಧ್ಯಾನ ಮೆಡಿಟೇಶನ್ ಹೀಗೆ ಅಂದುಕೊಂಡು ಸಾಧ್ಯವಾದಷ್ಟು ಎಲ್ಲವನ್ನು ಶಾಂತವಾಗಿ ತೆಗೆದುಕೊಂಡು ಮನೆ ಒಳಗೆ ಆಟವಾಡುತ್ತಿದ್ದ ಇವರ ಆಟದ ಪರಿಗೆ ಪ್ರೇಕ್ಷಕರು ಮನಸೋತಿದ್ದರು.

ಸಹಜ ಸುಂದರಿ ಆಗಿರುವ ಇವರು ಬಹಳ ಸರಳವಾಗಿ ಕಾಣಿಸಿಕೊಳ್ಳುತ್ತಾರೆ. ಇದುವರೆಗೆ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ವ್ಯಕ್ತಿತ್ವ ಮತ್ತು ಕೆರಿಯರ್ ರೂಪಿಸಿಕೊಂಡಿದ್ದ ವೈಷ್ಣವಿ ಗೌಡ ಅವರ ಬದುಕಿನಲ್ಲಿ ವಿವಾದಾತ್ಮಕ ಘಟನೆಯೊಂದು ನಡೆದಿದೆ. ವಿರಾಟ್ ಸಿನಿಮಾದ ನಾಯಕ ವಿದ್ಯಾಭರಣ್ ಎನ್ನುವವರ ಜೊತೆ ಹಾರ ಬದಲಾಯಿಸಿಕೊಂಡು ಸಿಹಿ ತಿನಿಸಿದ್ದ ಇವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದ್ದಂತೆ ನಿಶ್ಚಿತಾರ್ಥ ಆಗಿದೆ ಎಂದುಕೊಂಡು ಎಲ್ಲರೂ ಕಮೆಂಟ್ ಮಾಡುತ್ತಿದ್ದರು.

ಸನ್ನಿಧಿ ಅವರ ಗಮನಕ್ಕೆ ಇದು ಬಂದ ತಕ್ಷಣ ಆಗಿರೋದು ನಿಶ್ಚಿತಾರ್ಥವಲ್ಲ ತಾವಿನ್ನು ಮದುವೆಗೆ ಒಪ್ಪಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಇಷ್ಟಾಗುತ್ತಿದ್ದಂತೆ ಇಬ್ಬರು ಯುವತಿಯರು ವಿದ್ಯಾಭರಣ್ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಹಾಗೂ ಅವರು ಸರಿ ಇಲ್ಲ ಅವರ ಜೊತೆ ವೈಷ್ಣವಿ ಮದುವೆಯಾಗಬಾರದು ಎಂದು ಹೇಳಿರುವ ಆಡಿಯೋ ಎಲ್ಲೆಡೆ ಹಬ್ಬಿ ವಿವಾದ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.

ಈಗ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ವೈಷ್ಣವಿ ಗೌಡ ಅವರ ಮದುವೆ ವಿಚಾರವೇ ಹೆಚ್ಚು ಚರ್ಚೆ ಆಗುತ್ತಿದ್ದು, ಇಷ್ಟೆಲ್ಲಾ ಆದ ಮೇಲೆ ವೈಷ್ಣವಿ ಗೌಡ ಅವರು ತಮ್ಮ ಮದುವೆ ವಿದ್ಯಾಭರಣ್ ಜೊತೆ ಆಗುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿ ಬಿಟ್ಟಿದ್ದಾರೆ. ಮತ್ತು ಇಷ್ಟೆಲ್ಲ ಘಟನೆಗಳಿಂದ ನೊಂದಿರುವ ವೈಷ್ಣವಿ ಗೌಡ ಅವರು ತಮ್ಮ ದುಃಖವನ್ನೆಲ್ಲ ತಾಯಿ ಬಳಿ ಹೇಳಿಕೊಂಡು ಹೊರಗಿನ ಪ್ರಪಂಚದಲ್ಲಿ ಏನು ಆಗಿಲ್ಲ ಎನ್ನುವಂತೆ ನಗು ಮುಖವಾಡ ಇಟ್ಟುಕೊಂಡು ಓಡಾಡುತ್ತಿದ್ದಾರೆ.

ಪಾಂಡವಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಡ್ಯಾನ್ಸಿಂಗ್ ತಾಲೀಮಿನಲ್ಲಿ ತೊಡಗಿಕೊಂಡಿರುವ ಇವರು ಇಂದು ಬಿಡುವು ಮಾಡಿಕೊಂಡು ಟ್ಯಾಟು ಹಾಕಿಸಿಕೊಳ್ಳಲು ಹೋಗಿದ್ದಾರೆ. ಬಹಳ ವಿಶೇಷವಾದ ಟ್ಯಾಟುವನ್ನು ಇವರ ಹಾಕಿಸಿಕೊಂಡಿದ್ದು, ತಮ್ಮ ಮೊದಲ ಟಾಟು ಹಾಕಿಸಿಕೊಳ್ಳುವ ವಿಡಿಯೋವನ್ನು instagram ಖಾತೆಯಲ್ಲಿ ಶೇರ್ ಮಾಡಿ ಅದರ ಅರ್ಥವನ್ನು ತಿಳಿಸಿದ್ದಾರೆ.

ಇವರು ಹಾಕಿಸಿಕೊಂಡಿರುವ ಟ್ಯಾಟುವಿನ ಅರ್ಥ ಸೂರ್ಯ ಎನ್ನುವ ಪುರುಷ ಶಕ್ತಿ ಹಾಗೂ ಚಂದ್ರ ಎನ್ನುವ ಪ್ರಕೃತಿ ಶಕ್ತಿ ಸೇರಿ ಸೃಷ್ಟಿ ಮಾಡುವ ಎನರ್ಜಿಯು ಡಿವೈನ್ ಯೂನಿಯನ್ ಸ್ಪಿರಿಟ್ ಎಂದು ಕರೆಸಿಕೊಳ್ಳುತ್ತದೆ. ಎತ್ತರಕ್ಕೆ ಬೆಳೆದು ಜೀವನದಲ್ಲಿ ಮುಂದೆ ನಡೆಯಲು ದಾರಿ ಎನ್ನುವ ಇನ್ಸ್ಪಿರೇಷನ್ ಇದರಿಂದ ಸಿಗುತ್ತದೆ ಎಂದು ವೈಷ್ಣವಿ ಆ ವಿಡಿಯೋ ಜೊತೆ ಬರೆದು ಹಂಚಿಕೊಂಡಿದ್ದಾರೆ.

ಈ ಸಿಂಬಲ್ “ದ ರೈಸಿಂಗ್ ವುಮೆನ್” ಎನ್ನುವ ಅರ್ಥವನ್ನು ಕೊಡುತ್ತದೆ. ಈ ಸಂದರ್ಭದಲ್ಲಿ ಅವರು ಈ ರೀತಿ ಟ್ಯಾಟು ಹಾಕಿಸಿಕೊಂಡಿರುವುದು ಇನ್ನು ಹತ್ತು ಹಲವು ರೀತಿಯ ಚರ್ಚೆಗಳಿಗೆ ವಿಷಯ ಕೂಡ ಆಗಿದೆ. ಆಗಿರುವುದೆಲ್ಲವನ್ನು ಮರೆತು ಸನ್ನಿಧಿ ಆದಷ್ಟು ಬೇಗ ಈ ವಿಚಾರಗಳಿಂದ ಆಚೆ ಬಂದು ಮುಂಚೆಯಂತೆ ಲವಲವಿಕೆಯಿಂದ ಕಾಣಿಸಿಕೊಳ್ಳಲಿ ಎಂದು ಹಾರೈಸೋಣ.