Home Blog Page 275

Haripriya, Vasista Simha: ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಟಿ ಹರಿಪ್ರಿಯಾ ನಟ ವಶಿಷ್ಠ ಸಿಂಹ, ಮೂರು ವರ್ಷದ ಪ್ರೀತಿಗೆ ಕೊನೆಗೂ ಅರ್ಥ ಸಿಕ್ತು.

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ಜೋಡಿಗಳು ಹೊರ ಬರುತ್ತಿವೆ ಕನ್ನಡದ ಚಿತ್ರ ನಟ ನಟಿಯರು ಕಾಲಿಡುತ್ತಿರುವುದು ಕನ್ನಡಿಗರ ಮನಸನ್ನು ಸೆಳೆಯುತ್ತಿದೆ. ಕನ್ನಡ ಚಿತ್ರರಂಗದ ಹೊಸ ಜೋಡಿಯು ಮದುವೆ ಸಂಭ್ರಮದಲ್ಲಿ ಬಿಸಿಯಾಗಿದೆ. ಸದ್ಯ ಕನ್ನಡ ಚಿತ್ರರಂಗದ ನಟಿಯಾದ ಅದಿತಿ ಪ್ರಭುದೇವ ಅವರು ನವೆಂಬರ್ 27ರಂದು ಮದುವೆ ಆಗಲಿದ್ದು, ಹೊಸ ಜೀವನವನ್ನು ಶುರು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಕನ್ನಡದ ಖ್ಯಾತ ನಟಿಯಾದ ಹರಿಪ್ರಿಯಾ ರವರು ಕೂಡ ಹಸಮಣೆಯನ್ನು ಏರಲು ಸಜ್ಜಾಗಿದ್ದಾರೆ. ಹೌದು ನಟಿ ಹರಿಪ್ರಿಯಾ ರವರ ಮದುವೆಯ ಬಗ್ಗೆ ಸುದ್ದಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಹರಿಪ್ರಿಯ ರವರ ಮದುವೆ ಸುದ್ದಿ ಅಂದಂತೆ ಹುಡುಗ ಯಾರು ಎಂಬ ಗೊಂದಲಗಳ ಬಗ್ಗೆ ಚರ್ಚೆ ಹೆಚ್ಚಾಗಿವೆ. ಈ ವಿಷಯದ ಬಗ್ಗೆ ಸದ್ಯ ಮಾಹಿತಿದ್ದು ಈಗಾಗಲೇ ಹರಿಪ್ರಿಯ ರವರ ಮದುವೆಯು ನಿಶ್ಚಯ ಆಗಿದೆಯಂತೆ.

ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಹರಿಪ್ರಿಯಾ ಅವರಿಗೆ ಈಗಾಗಲೇ ಹುಡುಗ ಕೂಡ ಫಿಕ್ಸ್ ಆಗಿದ್ದಾರಂತೆ. ಇತ್ತೀಚಿಗೆ ಹರಿಪ್ರಿಯಾ ರವರು ಮೂಗು ಚುಚ್ಚಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು ಸದ್ಯ ಈ ವಿಡಿಯೋ ಕೂಡ ವೈರಲ್ ಆಗಿದ್ದು ನಿಜ. ಮೂಲಗಳ ಪ್ರಕಾರ ಹರಿಪ್ರಿಯಾ ರವರು ಮದುವೆಯಾಗುತ್ತಿರುವುದು ಸತ್ಯ ಎಂದು ಹೇಳಲಾಗಿದೆ.

ಹಾಗೂ ಹರಿಪ್ರಿಯಾ ರವರನ್ನು ಮದುವೆಯಾಗಲಿರುವ ಹುಡುಗ ಯಾರೆಂದರೆ ನಮ್ಮ ಕನ್ನಡ ಚಿತ್ರರಂಗದ ಕಂಚಿನ ಕಂಠದ ನಟ ವಶಿಷ್ಠ ಸಿಂಹ ರವರು, ಹೌದು ವಶಿಷ್ಠ ಹಾಗೂ ನಟಿ ಹರಿಪ್ರಿಯಾ ರವರು ಹಸೆಮಣೆಯನ್ನು ಏರಲು ಸಿದ್ದರಾಗಿದ್ದಾರೆ. ಇವರಿಬ್ಬರದು ಲವ್ ಮ್ಯಾರೇಜ್, ಈ ಜೋಡಿಯು ಬಹಳ ದಿನದಿಂದ ಪ್ರೀತಿ ಮಾಡುತ್ತಿದ್ದು, ವಶಿಷ್ಠ ಹಾಗೂ ಹರಿಪ್ರಿಯಾ ಇಬ್ಬರು ಅನೊಂತದಿಂದ ಇದ್ದಾರೆ.

ಈ ಜೋಡಿಯ ಡಾನ್ಸ್ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಗಳಲ್ಲಿ ಹರಿದಾಡುತ್ತದೆ. ಸದ್ಯ ಇವರಿಬ್ಬರು ಪರಸ್ಪರ ಒಬ್ಬರು ಇನ್ನೊಬ್ಬರನ್ನು ಪಾರ್ಟ್ನರ್ಸ್ ಎಂದು ಕರೆದುಕೊಳ್ಳುತ್ತಾರೆ ಇವರ ಪ್ರೀತಿ ಯಾರಿಗೂ ತಿಳಿದಿಲ್ಲ ಅಲ್ಲದೆ ಇವರಿಬ್ಬರ ಪ್ರೀತಿ ಬಗ್ಗೆ ಎಲ್ಲಿಯೂ ಸುಳಿವು ನೀಡಿಲ್ಲ ಆದರೂ ಎಲ್ಲರಿಗೂ ಇತ್ತೀಚಿಗೆ ಬಹಿರಂಗವಾಗಿ ತಿಳಿದು ಬಂದಿದೆ.

ಇಬ್ಬರ ಪ್ರೀತಿಯ ವಿಷಯವು ತಿಳಿದು ಬಂದಿತು ಮಾತ್ರ ಹರಿಪ್ರಿಯಾ ರವರ ಮೂಗುತಿಯನ್ನು ಚುಚ್ಚಿಸುವ ವೇಳೆ. ಹೌದು ಇತ್ತೀಚಿಗೆ ಹರಿಪ್ರಿಯ ರವರು ಮೂಗುತಿಯನ್ನು ಚುಚ್ಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ ಈ ವಿಡಿಯೋದಲ್ಲಿ ಹರಿಪ್ರಿಯಾ ರವರ ಜೊತೆ ವಶಿಷ್ಟ ಸಿಂಹ ರವರು ಇದ್ದಾರೆ ಅಲ್ಲದೆ ಮೂಗುಚಿಸುವ ವೇಳೆ ವಶಿಷ್ಟ ರವರು ಹರಿಪ್ರಿಯಾ ರವರಿಗೆ ಹಣೆಯ ಮೇಲೆ ಮುತ್ತು ಕೊಟ್ಟಿದ್ದಾರೆ.

ಅಲ್ಲದೆ ಹರಿಪ್ರಿಯ ರವರ ಮೂಗುತಿಯನ್ನು ಚುಚ್ಚಿಸುವ ಗುರುತನ್ನು ಸ್ವತಃ ವಶಿಷ್ಠ ರವರೆ ಮಾಡಿದ್ದಾರೆ ಅಲ್ಲದೆ ವಿಡಿಯೋದಲ್ಲಿ ವಶಿಷ್ಠ ಸಿಂಹ ರವರ ಮುಖವು ಕಾಣಿಸಿಲ್ಲವಾದರೂ ಹರಿಪ್ರಿಯರವರ ಜೊತೆ ವಶಿಷ್ಠ ಸಿಂಹ ಎಂಬ ವಿಷಯ ಸದ್ಯ ರಿವಿಲ್ ಆಗಿದೆ. ಇವರಿಬ್ಬರ ನಿಶ್ಚಿತಾರ್ತಕ್ಕಾಗಿ ಎಲ್ಲಾ ತಯಾರಿಗಳು ನಡೆಯುತ್ತಿವೆ. ಇನ್ನೊಂದು ತಿಂಗಳಲ್ಲಿ ನಿಶ್ಚಿತಾರ್ಥವು ಮುಗಿದು ಬಳಿಕ ಎರಡು ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂಬ ಮಾತುಗಳು ತಿಳಿದು ಬಂದಿದೆ.

ಆದರೆ ವಶಿಷ್ಟ ಸಿಂಹರವರೇ ಆಗಲಿ ಹರಿಪ್ರಿಯಾ ರವರೆ ಆಗಲಿ ಈ ವಿಷಯದ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ. ಸದ್ಯ ಈ ಜೋಡಿಯ ಪ್ರೀತಿ ಹಾಗೂ ಮದುವೆ ವಿಷಯವನ್ನು ತಿಳಿದು ಅಭಿಮಾನಿಗಳು ಸಂತಸದಲ್ಲಿದ್ದಾರೆ ಅಲ್ಲದೆ ಈ ಜೋಡಿಗೆ ಶುಭಾಶಯ ಸಾಗರವನ್ನೇ ಹರಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಸದ್ದಿಲ್ಲದೆ ಪ್ರೀತಿಸಿದ ಹುಡುಗಿ ಕೈ ಹಿಡಿದ ಪಾರು ಸೀರಿಯಲ್ ನಟ ಆದಿತ್ಯ ಅಲಿಯಾಸ್ ಶರತ್

 

ಕಿರುತೆರೆ ಧಾರವಾಹಿಗಳು ಮಹಿಳಾ ಅಭಿಮಾನಿಗಳ ಪಾಲಿಗೆ ತೀರ ಆತ್ಮೀಯ ವಿಷಯ. ಪ್ರತಿದಿನ ಕೂಡ ಅವರು ಟಿವಿ ಮುಂದೆ ಕುಳಿತು ಧಾರವಾಹಿಗಳನ್ನು ನೋಡುವುದರಿಂದ ಅಲ್ಲಿ ಬರುವ ಪಾತ್ರಗಳನ್ನು ತಮ್ಮ ಸುತ್ತಮುತ್ತ ಇರುವವರೇ ಎನ್ನುವಷ್ಟು ಹಚ್ಚಿಕೊಂಡು ಬಿಡುತ್ತಾರೆ.

ಸೀರಿಯಲ್ ಅಲ್ಲಿ ಅವರು ಒಂದು ಪಾತ್ರವನ್ನು ಮಾತ್ರ ನಟ ಮಾಡುತ್ತಿದ್ದಾರೆ ಎನ್ನುವುದನ್ನು ಕೂಡ ಮರೆತು ನಿಜ ಜೀವನದಲ್ಲಿ ನಡೆಯುತ್ತಿರುವ ಕಥೆಯೇ ಎನ್ನುವಂತೆ ಗಾಢವಾಗಿ ಅದಕ್ಕೆ ತಲೆಕೆಡಿಸಿಕೊಂಡು ಬಿಡುವ ಇವರು ಅದನ್ನು ನಟಿಸುವ ಪಾತ್ರಗಳ ಕಲಾವಿದರ ಬಗ್ಗೆ ಕೂಡ ಬಹಳ ಪ್ರೀತಿ ತೋರುತ್ತಾರೆ.

ಈ ಸೀರಿಯಲ್ ಕಲಾವಿದರಲ್ಲಿ ಧಾರಾವಾಹಿಯ ನಾಯಕ ಮತ್ತು ನಾಯಕಿಗೆ ಸಿನಿಮಾ ಸ್ಟಾರ್ ಗಳಿಗೂ ಕಡಿಮೆ ಇಲ್ಲದಂತೆ ಅಭಿಮಾನಿಗಳು ಇರುತ್ತಾರೆ. ಈಗ ಈ ಅಭಿಮಾನಿಗಳ ಸಾಲಿನಲ್ಲಿ ಮಹಿಳೆಯರು ಮಾತ್ರ ಅಲ್ಲದೆ ಮಕ್ಕಳು ಮತ್ತು ಪುರುಷರುಗಳ ಸೇರಿದ್ದಾರೆ ಎನ್ನುವುದು ವಿಶೇಷ.

ಈಗೀಗ ಸೀರಿಯಲ್ ಲೋಕದಲ್ಲೂ ಕೂಡ ಬಹಳ ಮಾರ್ಪಾಡು ಆಗುತ್ತಿರುವುದರಿಂದ ಬಹಳ ಗ್ರಾಂಡ್ ಆಗಿ ಮೂಡಿ ಬರುವ ಧಾರಾವಾಹಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಜೊತೆ ಅಂಟಿಕೊಂಡಿರುವ ಕಥೆಗಳು ಆಗಿರುವ ಕಾರಣ ಮಹಿಳೆಯರಿಗೆ ಮಾತ್ರ ಸೀರಿಯಲ್ ಎನ್ನುತ್ತಿದ್ದ ಕಾಲ ಬದಲಾಗಿ ಪುರುಷರು, ವೃದ್ದರು, ಶಾಲಾ ಕಾಲೇಜು ಮಕ್ಕಳು ಎಲ್ಲರೂ ಸಹ ಈಗ ಸೀರಿಯಲ್ ಪ್ರಿಯರಾಗಿ ಬಿಟ್ಟಿದ್ದಾರೆ.

ಇನ್ನು ಧಾರಾವಾಹಿಯಲ್ಲಿ ನಟನೆ ಮಾಡುವ ಕಲಾವಿದರ ಬಗ್ಗೆ ಹೇಳುವುದಾದರೆ ನಾಯಕ ನಾಯಕಿ ಮತ್ತು ಖಳನಾಯಕ ಪಾತ್ರಗಳಿಗೆ ಮುಖ್ಯಸ್ಥಾನವಿರುತ್ತದೆ. ಸಿನಿಮಾಗಿಂತ ಬಹಳ ಹೆಚ್ಚಾಗಿಯೇ ಕಿರುತೆರೆಯ ತೆರೆ ಮೇಲೆ ಧಾರಾವಾಹಿ ನಾಯಕ ನಾಯಕಿಯರು ವಿಜೃಂಭಿಸುತ್ತಿರುತ್ತಾರೆ.

ಹಾಗಾಗಿ ತಮ್ಮ ಕನಸಿನ ನಾಯಕ ನಾಯಕಿಯನ್ನು ಊಳಿಸಿಕೊಳ್ಳುವವರು ಇವರ ಜೊತೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಇಂಥಹ ನಾಯಕರ ಸಾಲಿನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರವಾಹಿಯ ನಾಯಕನಟ ಆಗಿರುವ ಆದಿ ಕೂಡ ಮೊದಲ ಸಾಲಿನಲ್ಲಿ ಇದ್ದಾರೆ.

ಪತಿ ಎಂದರೆ ಆದಿತ್ಯ ಹಾಗೆ ಇರಬೇಕು, ಬಾಸ್ ಎಂದರೆ, ಇನಿಯ ಎಂದರೆ, ಮಗ ಎಂದರೆ, ಅಣ್ಣ ಎಂದರೆ ಆದಿ ರೀತಿ ಇರಬೇಕು ಎಂದು ಎಲ್ಲರೂ ಕೂಡ ಎಕ್ಸಾಂಪಲ್ ಕೊಡುತ್ತಿದ್ದಾರೆ. ಈ ರೀತಿ ನಾಯಕನ ಪಾತ್ರಕ್ಕೆ ಎಕ್ಸಾಂಪಲ್ ಆಗಿರುವ ಆದಿ ಅವರ ನಿಜವಾದ ಹೆಸರು ಶರತ್ ಪದ್ಮನಾಭ್.

ಈ ಹಿಂದೆ ಕಿರುತೆರೆಯ ಬೇರೆ ಧಾರಾವಾಹಿಗಳನ್ನು ನಟಿಸಿದ್ದರು ಕೂಡ ಪಾರು ಧಾರಾವಾಹಿ ಇವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗೆ ಕಳೆದ ಹಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಪಾರು ಧಾರವಾಹಿಯ ನಾಯಕನಟ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ಮಹಿಳಾ ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದ್ದಾರೆ.

ತಾವು ಪ್ರೀತಿಸುತ್ತಿದ್ದ ಹುಡುಗಿಯ ಕೈ ಹಿಡಿದು ಶರತ್ ಅವರು ಎಂಗೇಜ್ಮೆಂಟ್ ಮಾಡಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಎಂಗೇಜ್ಮೆಂಟ್ ಗೆ ಪಾರು ಧಾರವಾಹಿಯ ಹೊಣೆ ಹೊತ್ತಿರುವ ಮತ್ತು ಶರತ್ ಅವರಿಗೆ ಬಹಳ ಆತ್ಮೀಯ ಆಗಿರುವ ದಿಲೀಪ್ ರಾಜ್ ದಂಪತಿ ಮತ್ತು ಝೀ ಧಾರವಾಹಿಗಳ ಕಲಾವಿದರುಗಳಾದ.

ಪ್ರೀತು, ಸೀತಾರಾ, ಪ್ರಿಯ ಜೆ ಆಚಾರ್ ಇನ್ನು ಮುಂತಾದವರು ಭಾಗಿ ಆಗಿದ್ದಾರೆ ಮುಂದಿನ ವರ್ಷ ಶೃಂಗೇರಿಯಲ್ಲಿ ಅದ್ದೂರಿಯಾಗಿ ಇವರಿಬ್ಬರ ವಿವಾಹ ಜರುಗಲಿದೆ ಎನ್ನುವ ಮಾತುಗಳು ಕೂಡ ಇವೆ. ಒಳ್ಳೊಳ್ಳೆ ಪ್ರಾಜೆಕ್ಟ್ಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಶರತ್ ರವರ ವೈವಾಹಿಕ ಜೀವನ ಕೂಡ ಅಷ್ಟೇ ಸುಖವಾಗಿರಲಿ ಎಂದು ಹರಸೋಣ.

ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಿರುವ ದರ್ಶನ್ ಕಾರಣವೇನು ಗೊತ್ತ.?

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಉಳಿದ ಎಲ್ಲಾ ಸ್ಟಾರ್ ಗಳಿಗಿಂತಲೂ ಹೆಚ್ಚಿಗೆ ಅಭಿಮಾನಿಗಳನ್ನು ಹೊಂದಿದ್ದಾರೆ. ದಚ್ಚು ಬಗ್ಗೆ ವಿವಾದಗಳು ಎಷ್ಟೇ ಇದ್ದರೂ ಕೂಡ ಅಭಿಮಾನಿಗಳು ಮಾತ್ರ ಕಿಂಚಿತ್ತು ಅವರ ಮೇಲಿರುವ ಪ್ರೀತಿಯನ್ನು ಕಡಿಮೆ ಮಾಡಿಕೊಂಡಿಲ್ಲ. ದರ್ಶನ್ ಅವರು ಸಹ ಅಭಿಮಾನಿಗಳನ್ನು ಹೆಚ್ಚು ನಂಬಿದ್ದು, ಅವರನ್ನೇ ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ.

ಸಿನಿಮಾ ವಿಚಾರವಾಗಿ ಹೇಳುವುದಾದರೆ ದರ್ಶನ್ ಅವರ ಯಾವ ಸಿನಿಮಾ ಕೂಡ ಈ ವರ್ಷ ಬಿಡುಗಡೆ ಆಗಿಲ್ಲ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ರಾಬರ್ಟ್ ಸಿನಿಮಾ ನಂತರ ದರ್ಶನ್ ಅವರ ಯಾವ ಸಿನಿಮಾಗಳ ಸುದ್ದಿಯೂ ಇಲ್ಲ. ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ಒಂದರಂದು ಬಿಡುಗಡೆ ಆಗುತ್ತದೆ ಎಂದು ಅನೌನ್ಸ್ ಆಗಿತ್ತು.

ಆದರೆ ಚಿತ್ರೀಕರಣದ ವಿಳಂಬವಾದ ಕಾರಣ ಆ ದಿನ ಮುಂದಕ್ಕೆ ಹೋಗಿದೆ. ಜನವರಿ 26, 2023 ರಂದು ಗಣರಾಜ್ಯೋತ್ಸವ ದಿನದ ಪ್ರಯುಕ್ತ ಸಾಮಾಜಿಕ ಸಂದೇಶ ಹೊಂದಿರುವ ಶಿಕ್ಷಣದ ವಿಷಯವಾಗಿ ಕ್ರಾಂತಿ ಮಾಡುವ ಸಿನಿಮಾ ಒಂದು ತೆರೆ ಕಾಣುತ್ತಿತ್ತು ದರ್ಶನ್ ಅಭಿಮಾನಿಗಳ ಪಾಲಿಗೆ ಆ ದಿನ ಹಬ್ಬವಾಗಲಿದೆ. ಈಗಾಗಲೇ ಸಾಲು ಸಾಲು ಸಾಕಷ್ಟು ಸಿನಿಮಾಗಳನ್ನು ನೀಡಿರುವ ದರ್ಶನ್ ಅವರು ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ.

ಇದೇ ಸಮಯದಲ್ಲಿ ಅವರ ಕ್ರಾಂತಿ ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು ಇವೆರಡರ ಪ್ರಯುಕ್ತವಾಗಿ ಬೆಂಗಳೂರು ಟೈಮ್ಸ್ ನಡೆಸಿದ ಇಂಟರ್ವ್ಯೂ ಅಲ್ಲಿ ಭಾಗಿಯಾಗಿದ್ದಾರೆ. ವಿಶೇಷವಾದ ಸಂದರ್ಶನ ಇದಾಗಿದ್ದು ಈ ಸಂದರ್ಶನದಲ್ಲಿ ದರ್ಶನ್ ಅವರ ವೃತ್ತಿ ಜೀವನದ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ. ಮೊದಲಿನಿಂದಲೂ ನೇರನುಡಿಗೆ ಹೆಸರಾಗಿರುವ ದರ್ಶನ್ ಅವರು ಕೂಡ ಅದೇ ರೀತಿ ನಿರೀಕ್ಷಿತ ಉತ್ತರಗಳನ್ನು ನೀಡಿದ್ದಾರೆ.

ದರ್ಶನ್ ಅವರಿಗೆ ಈ ಸಂದರ್ಶನದಲ್ಲಿ ಚಿತ್ರರಂಗಕ್ಕೆ ಬರಲು ಸ್ಪೂರ್ತಿ ಏನು, ಯಾವಾಗ ನಟ ಆಗಬೇಕು ಎಂದು ನಿರ್ಧಾರ ಮಾಡಿದಿರಿ, ಸಿನಿಮಾ ಕಥೆಗಳ ಆಯ್ಕೆ ಯಾವ ರೀತಿ ಮಾಡುತ್ತೀರಿ ಮತ್ತು ಅದರಿಂದ ಗೆದ್ದಾಗ ಆ ಸಕ್ಸಸ್ ಅನ್ನು ಹೇಗೆ ಹ್ಯಾಂಡಲ್ ಮಾಡುತ್ತೀರಿ ಇನ್ನು ಮುಂತಾದ ಅನೇಕ ಪ್ರಶ್ನೆಗಳನ್ನು ಕೇಳಿ ಕೊನೆಯಲ್ಲಿ ಚಿತ್ರರಂಗದಿಂದ ನಿವೃತ್ತಿ ಹೊಂದುವ ಯೋಚನೆ ಯಾವಾಗಲಾದರೂ ಮಾಡಿದ್ದೀರಾ ಎಂದು ಕೇಳಿದ್ದಾರೆ.

ಇದಕ್ಕೆಲ್ಲಕ್ಕೂ ಉತ್ತರಿಸಿದ ದರ್ಶನ್ ಅವರ ಉತ್ತರಗಳು ಈ ರೀತಿ ಇತ್ತು. ನಾನು ಮೊದಲಿಗೆ ಹೀರೋ ಆಗಬೇಕು ಎಂದು ಆಸೆ ಪಟ್ಟವನಲ್ಲ ಆದರೆ ನನ್ನ ತಂದೆ ನಿಧನವಾದ ದಿನ ನನ್ನ ಮನೆ ಮುಂದೆ ನೆರೆದಿದ್ದ ಜನಸಾಗರ ನೋಡಿ ನಾನು ಸತ್ತಾಗಲೂ ಕೂಡ ಇದೇ ರೀತಿ ಜನ ಸೇರಬೇಕು ಹಾಗಾಗಿ ನಾನು ಹೀರೋ ಆಗಬೇಕು ಎಂದು ನಿರ್ಧಾರ ಮಾಡಿದೆ.

ಅಂದಿನಿಂದ ಇಲ್ಲಿಯ ತನಕ ಅದಕ್ಕಾಗಿ ನಾನು ಪಟ್ಟ ಶ್ರಮ ಅಷ್ಟಿಷ್ಪಲ್ಲ. ಇದ್ಯಾವುದು ನನ್ನ ಅದೃಷ್ಟದಿಂದ ದೊರಕಿಲ್ಲ ಕಠಿಣ ಪರಿಶ್ರಮದಿಂದ ಮೆಜೆಸ್ಟಿಕ್ ಸಿನಿಮಾದಿಂದ ಇಲ್ಲಿಯ ತನಕ ನಾನು ಹೆಸರು ಮಾಡಿದ್ದೇನೆ. ಮತ್ತು ಸಿನಿಮಾ ರಂಗದಿಂದ ನಿವೃತ್ತಿ ಹೊಂದುವ ಮಾತೇ ಇಲ್ಲ ಇಲ್ಲಿಗೆ ಅಷ್ಟು ಸುಲಭವಾಗಿ ಬಂದಿಲ್ಲ ಹಾಗಾಗಿ ಇಷ್ಟು ಕಷ್ಟಪಟ್ಟು ಬೆಳೆದದ್ದನ್ನು ಬಿಟ್ಟು ಕೊಡುವ ಮಾತೇ ಇಲ್ಲ.

ನಾನು ಬಣ್ಣ ಹಚ್ಚಿ ನಟಿಸುತ್ತಿರುವಾಗಲೇ ನನ್ನ ಪ್ರಾಣ ಹೋಗಬೇಕು, ನಾನು ಇರುವ ಕೊನೆಯ ದಿನದವರೆಗೂ ಕೂಡ ಅಭಿನಯಿಸುತ್ತಲೇ ಇರಬೇಕು ಎನ್ನುವುದಷ್ಟೇ ನನ್ನ ಆಸೆ ಹಾಗಾಗಿ ನಾನು ಸಾಯುವ ತನಕ ನಿವೃತ್ತಿ ಹೊಂದುವುದೇ ಇಲ್ಲ ಎಂದು ಹೇಳಿದ್ದಾರೆ.

ಇದೆಲ್ಲ ನನ್ಗೆ ಆಗ್ಬೇಕಿತ್ತಾ ಎಂದು ಅಮ್ಮನ ಮಡಿಲಲ್ಲಿ ಮಲಗಿ ಕಣ್ಣೀರಿಟ್ಟ ವೈಷ್ಣವಿ

 

ಕಿರುತೆರೆ ನಟಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಕಳೆದ ತಿಂಗಳು ವೈಷ್ಣವಿ ಗೌಡ ಅವರು ವಿರಾಜ್ ಎನ್ನುವ ಸಿನಿಮಾದ ಹೀರೋ ಆದ ವಿದ್ಯಾಭರಣ ಅವರೊಂದಿಗೆ ಹಾರ ಬದಲಾಯಿಸಿಕೊಂಡು ಸಿಹಿ ತಿನಿಸಿರುವ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ಮತ್ತು ಫೋಟೋಗಳಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರು ಸೇರಿದಂತೆ ಸನ್ನಿಧಿ ಮತ್ತು ವಿದ್ಯಾಭರಣ ಅವರ ಕುಟುಂಬದ ಅನೇಕ ಸದಸ್ಯರು ಇದ್ದರು.

ಹೀಗಾಗಿ ಎಲ್ಲರೂ ಸಹ ಸನ್ನಿಧಿಯವರು ಗುಟ್ಟಾಗಿ ಮದುವೆ ಒಪ್ಪಂದ ಅಥವಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಭಾವಿಸಿದ್ದರು. ಇದಾದ ಸ್ವಲ್ಪ ದಿನಗಳ ನಂತರ ನಾನಿನ್ನು ಮದುವೆಗೆ ಒಪ್ಪಿಗೆ ಕೊಟ್ಟಿಲ್ಲ ಎನ್ನುವ ಹೇಳಿಕೆ ಕೊಟ್ಟು ವೈಷ್ಣವಿ ಗೊಂದಲ ಕ್ರಿಯೇಟ್ ಮಾಡಿದ್ದರು. ಇದರ ಬೆನ್ನಲ್ಲೇ ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾಭರಣ ಅವರ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಆಡಿಯೋಗಳು ಅಪ್ಲೋಡ್ ಆಗಿವೆ.

ಕಿರುತೆರೆ ನಟಿ ಎಂದು ಹೇಳಿಕೊಂಡಿರುವ ಯುವತಿ ಮತ್ತು ಮತ್ತೊಬ್ಬ ಹುಡುಗಿ ಇಬ್ಬರು ಈ ಆಡಿಯೋದಲ್ಲಿ ಮಾತನಾಡಿದ್ದಾರೆ. ಇವರಿಬ್ಬರ ಪರಸ್ಪರ ಒಬ್ಬರಿಗೊಬ್ಬರು ಕರೆ ಮಾಡಿ ಮಾತನಾಡಿರುವ ಆಡಿಯೋ ಇದಾಗಿದ್ದು ಬೇಕಂತಲೇ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ವಿದ್ಯಾಭರಣ್ ಅವರು ಒಳ್ಳೆಯ ವ್ಯಕ್ತಿತ್ವ ಹೊಂದಿಲ್ಲ ಈಗಾಗಲೇ ನಾಲ್ಕೈದು ಹುಡುಗಿಯರ ಜೊತೆ ಇವರಿಗೆ ಸಂಬಂಧ ಇತ್ತು, ಮತ್ತು ಇವರ ಈ ಎಲ್ಲಾ ಆಟಗಳಿಗೆ ಅವರ ಕುಟುಂಬಸ್ಥರ ಸಪೋರ್ಟ್ ಇದೆ.

ವೈಷ್ಣವಿ ಅವರನ್ನು ಇವನು ವಿವಾಹವಾದರೆ ಮೂರೇ ವರ್ಷಗಳಲ್ಲಿ ಆ ಮದುವೆ ಮುರಿದು ಬೀಳುತ್ತದೆ ಹೀಗಾಗಿ ಈ ವಿಷಯವನ್ನು ಮೀಡಿಯಾದವರಿಗೆ ಹಾಗೂ ವೈಷ್ಣವಿ ಕುಟುಂಬದವರಿಗೆ ತಿಳಿಸಬೇಕು ಎಂದು ಹೇಳಿ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು. ಇದಾದ ಬಳಿಕ ವೈಷ್ಣವಿ ಗೌಡ ಅವರು ಮುಂಚೆ ಅವರ ಬಗ್ಗೆ ತಿಳಿದಿದ್ದು ಒಳ್ಳೆಯದಾಯಿತು ಎಂದು ಹೇಳಿ ಆಗಿದ್ದ ಮಾತುಕತೆ ಮುರಿದುಕೊಳ್ಳುವ ತರಹ ಮಾತನಾಡಿದ್ದಾರೆ.

ಅತ್ತ ವಿದ್ಯಾಭರಣ್ ಈ ಆಡಿಯೋದಲ್ಲಿ ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲ ಸುಳ್ಳು ನಾವು ಇದಕ್ಕಾಗಿ ಈಗಾಗಲೇ ಸಂಪಂಗಿ ರಾಮನಗರ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದೇವೆ. ಅವರು ಯಾರು ಯಾವ ಉದ್ದೇಶದಿಂದ ಈ ರೀತಿ ನನ್ನ ಮೇಲೆ ಆರೋಪ ಹೊರಿಸಿದ್ದಾರೆ ಎನ್ನುವುದನ್ನು ಹುಡುಕುತ್ತಿದ್ದೇವೆ. ಎಲ್ಲರ ಜೀವನದಲ್ಲಿ ಇರುವಂತೆ ನನ್ನ ಜೀವನದಲ್ಲೂ ಒಬ್ಬಳು ಗರ್ಲ್ ಫ್ರೆಂಡ್ ಇದ್ದಳು ಅಷ್ಟೇ ಆದರೆ ನನ್ನ ಮೇಲೆ ಇಲ್ಲಸಲ್ಲದ ಮಾತುಗಳು ಈ ಆಡಿಯೋ ದಲ್ಲೇ ಉದ್ದೇಶಪೂರ್ವಕವಾಗಿ ಮಾತನಾಡಲಾಗಿದೆ ಎಂದು ಹೇಳಿದ್ದರು.

ಸನ್ನಿಧಿ ಕುಟುಂಬದವರು ಇಂದು ಮೀಡಿಯಾದವರ ಜೊತೆ ಮಾತನಾಡಿದ್ದಾರೆ, ಜೊತೆಗೆ ವಿದ್ಯಾಭರಣ ಅವರ ತಾಯಿ ಕಳಿಸಿರುವ ಆಡಿಯೋ ಕೂಡ ಮೀಡಿಯಾಗೆ ಕೊಟ್ಟಿರುವ ವೈಷ್ಣವಿ ಗೌಡ ಅವರ ತಾಯಿ ಈ ಆರೋಪಗಳಲ್ಲಿ ಎಷ್ಟು ಸತ್ಯವಿದೆಯೋ ಸುಳ್ಳು ಇದೆಯೋ ಗೊತ್ತಿಲ್ಲ ಆದರೆ ಆ ಹುಡುಗಿಯರು ನನಗೆ ಡೈರೆಕ್ಷನ್ ಕೊಡುವ ರೀತಿ ಮಾತನಾಡಿದ್ದಾರೆ ಅದು ಸರಿ ಇಲ್ಲ ಎನಿಸುತ್ತದೆ.

ಮೊದಲ ದಿನವೇ ನಾನು ನಮ್ಮ ಮಗಳಿಗೆ ಈ ವಿಷಯ ತಿಳಿಸಲಿಲ್ಲ. ಮೀಡಿಯಾದಲ್ಲಿ ವಿಷಯ ಜೋರಾಗಿ ಪ್ರಸಾರವಾಗುತ್ತಿದ್ದಂತೆ ಮಗಳು ಬಂದು ಇಷ್ಟೆಲ್ಲಾ ಆಗಿದೆಯಾ ಎಂದು ಕೇಳಿದಳು ಮತ್ತು ನನಗೆ ಮಾತ್ರ ಯಾಕೆ ಹೀಗೆ ಆಗುತ್ತಿದೆ ಎಂದು ದುಃಖಿಸಿದಳು. ಇಂದು ಅವಳು ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು ಕೂಡ ಮುಂಚೆ ಇದ್ದ ಲವಲವಿಕೆ ಆಕೆಯ ಮುಖದಲ್ಲಿ ಕಾಣದೆ ನೋವು ತುಂಬಿಕೊಂಡಿತ್ತು ಎಂದು ಹೇಳಿ ವೈಷ್ಣವಿ ತಾಯಿ ಭಾನು ರವಿಕುಮಾರ್ ಕೂಡ ಬೇಸರಿಸಿ ಕೊಂಡಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಟ್ಟಿಮೇಳ ಧಾರವಾಹಿ ಸ್ವಾತಿ, ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ.

 

ಈ ವರ್ಷ ಕನ್ನಡದ ಕಿರುತೆರೆ ಹಾಗೂ ಬೆಳ್ಳಿತರೆಯ ಕಲಾವಿದರುಗಳಿಗೆ ಮದುವೆ ಯೋಗ ಕೂಡಿ ಬಂದಿದೆ. ಈಗಾಗಲೇ ಕನ್ನಡದ ಅನೇಕ ನಾಯಕ ನಟ ನಟಿಯರು ಈ ವರ್ಷ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಮತ್ತೆ ಕೆಲವರು ಸಪ್ತಪದಿ ತುಳಿಯುವ ಮೂಲಕ ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ ಇಟ್ಟಿದ್ದಾರೆ.

ಮೊನ್ನೆ ಅಷ್ಟೇ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಧಿತಿ ಮತ್ತು ಪಾರು ಧಾರವಾಹಿಯ ಪ್ರೀತಮ್ ಅವರು ಎಂಗೇಜ್ಮೆಂಟ್ ಮಾಡಿಕೊಂಡ ಸುದ್ದಿ ಎಲ್ಲೆಡೆ ವರದಿ ಆಗಿತ್ತು. ಈಗ ಅದೇ ಗಟ್ಟಿಮೇಳ ಧಾರಾವಾಹಿಯ ಮತ್ತೊಬ್ಬ ಕಲಾವಿದೆಯ ಮದುವೆ ಇಂದು ಅದ್ದೂರಿಯಾಗಿ ಜರುಗಿದೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಅಭಿನಯಿಸುತ್ತಿರುವ ಸುಹಾಸಿನಿ ಪಾತ್ರಧಾರಿ ಸ್ವಾತಿ ಎಚ್ ವಿ ಅವರು ಮೈಸೂರು ಮೂಲದ ನಾಗಾರ್ಜುನ ರವಿ ಎನ್ನುವವರ ಕೈ ಹಿಡಿದಿದ್ದಾರೆ.

ಇವರಿಬ್ಬರ ವಿವಾಹ ಮಹೋತ್ಸವ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆದಿದೆ, ನಂದಿನಿ ಅಭಿಷೇಕ್ ಶಿಲ್ಪಾ ಶೆಟ್ಟಿ ಅನಿಕಾ ಸಿಂದ್ಯಾ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿ ಹರಸಿದ್ದಾರೆ. ಸ್ವಾತಿ ಹೆಚ್ ವಿ ಅವರು ಗಟ್ಟಿಮೇಳ ಧಾರಾವಾಹಿ ಮುಂಚೆ ಇನ್ನೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮೊದಮೊದಲು ಇವರನ್ನು ಸರ್ವ ಮಂಗಳ ಮಾಂಗಲ್ಯೇ ಎನ್ನುವ ಧಾರವಾಹಿಯಲ್ಲಿ ಕನ್ನಡಿಗರು ನೋಡಿದ್ದರು.

ಶುಭ ವಿವಾಹ, ರಂಗನಾಯಕಿ, ಗಂಗಾ, ಪುಟ್ಟ ಗೌರಿ ಮದುವೆ, ನಾಗಕನ್ನಿಕೆ, ಬೆಟ್ಟದ ಹೂವು, ಕನ್ಯಾಕುಮಾರಿ ಈ ಧಾರಾವಾಹಿಗಳಲ್ಲಿ ಕೂಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಇವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ವಿಲನ್ ರೋಲ್ಗಳಲ್ಲೇ. ಇಷ್ಟು ಯಂಗ್ ಆಗಿರುವ ಲೇಡಿ ವಿಲನ್ ನಟನೆಗೆ ಕಿರುತೆರೆಯ ಪ್ರೇಕ್ಷಕರು ಮಾರು ಹೋಗಿದ್ದರು. ಇವರು ನಟಿಸಿರುವ ಪಾತ್ರಗಳಲ್ಲಿ ಇವರನ್ನು ನೆನಪಿಟ್ಟುಕೊಂಡಿರುವ ಜನತೆ ರನ್ನು ಅದೇ ಹೆಸರಿನಿಂದ ಗುರುತಿಸುವುದು ಹೆಚ್ಚು.

ಇನ್ನು ಇವರು ಕೈ ಹಿಡಿದಿರುವ ನಾಗಾರ್ಜುನ ರವಿ ಎನ್ನುವವರು ಸಹ ಕಲಾವಿದರಾಗಿದ್ದಾರೆ. ತನ್ನದೇ ಪ್ರಫೆಷನ್ ಪಾರ್ಟ್ನರ್ ಹುಡುಕಿಕೊಂಡಿರುವ ಸ್ವಾತಿ ಎಚ್‌ಪಿ ಅವರ ಸದ್ದಿಲ್ಲದೆ ಸುಳಿವೇ ಕೊಡದೆ ಮದುವೆಯಾಗಿ ಬಿಟ್ಟಿದ್ದಾರೆ. ಇನ್ನು ಸ್ವಾತಿ ಹೆಚ್ ವಿ ಅವರ ಬಗ್ಗೆ ಹೇಳುವುದಾದರೆ ಇವರು 2009ರಲ್ಲಿ ಮಿಸ್ ಕರ್ನಾಟಕ ಅವಾರ್ಡ್ ಅನ್ನು ಕೂಡ ಮುಡಿಗೇರಿಸಿಕೊಂಡಿದ್ದರು.

ಇದಾದ ಬಳಿಕ ಹಲವು ಸಿನಿಮಾ ಆಫರ್ಗಳು ಕೂಡ ಇವರನ್ನು ಹರಿಸಿ ಬಂದಿದ್ದವು. ಇದುವರೆಗೆ 11 ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿರುವ ಇವರು ಆ ನಂತರವಷ್ಟೇ ಕಿರುತೆರೆ ಕಡೆ ಮುಖ ಮಾಡಿದರು. ಸ್ವಾತಿ ಹೆಚ್ ವಿ ಅವರು ದಂಡುಪಾಳ್ಯ, ಬಿಡಲಾರೆ ನಿನ್ನ, ವಾರಸ್ದಾರ, ಉಡ, ಹುಂಜ, ವಿಘ್ನೇಶ್ವರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಮುಂದಿನ ಚಿತ್ರಮಂದಿರ ಮರ್ಲಿನ್ ಇನ್ನೇನು ಬಿಡುಗಡೆಗೆ ತಯಾರಾಗಿದೆ.

ಜುವೆಲರಿ ಆರ್ಟ್ ಅಲ್ಲಿ ಫ್ಯಾಶನ್ ಡಿಸೈನಿಂಗ್ ಡಿಪ್ಲೋಮೋ ಮಾಡಿದ್ದ ಇವರು ಒಂದು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಉದ್ಯೋಗಿ ಆಗಿದ್ದರು. ನೋಡಲು ಸುಂದರಿ ಹಾಗೂ ಕಲೆ ಬಗ್ಗೆ ಆಸಕ್ತಿ ಕೂಡ ಇದ್ದ ಕಾರಣ ಬಣ್ಣ ಹಚ್ಚಲು ನಿರ್ಧಾರ ಮಾಡಿದ್ದ ಇವರು ಮಾಡೆಲ್ ವೃತ್ತಿಯನ್ನು ಆಯ್ದುಕೊಂಡರು. ಇದಾದ ನಂತರ ಒಂದರ ಹಿಂದೆ ಒಂದರಂತೆ ಸಿನಿಮಾ ಹಾಗೂ ಧಾರವಾಹಿ ಆಫರ್ ಗಳು ಇವರನ್ನು ಹುಡುಕಿ ಬಂದವು.

ಸಿಕ್ಕ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡ ಈ ನಟಿ ಇಂದು ಕರ್ನಾಟಕದಲ್ಲಿ ಫೇಮಸ್ ಆದ ಕಿರುತೆರೆಯ ಕಲಾವಿದೆಯರಲ್ಲಿ ಒಬ್ಬರಾಗಿದ್ದಾರೆ. ಇನ್ನೂ ಕೂಡ ಯಂಗ್ ಆಗಿರವ ಇವರು ನಿರ್ವಹಿಸುವ ಪಾತ್ರಗಳು ಮಾತ್ರ ವಯಸ್ಸಿಗಿಂತ ಹೆಚ್ಚಿನ ಪ್ರಬುದ್ಧತೆ ಹೊಂದಿರುವ ಪಾತ್ರಗಳಾಗಿದ್ದು ಒಪ್ಪಿಕೊಂಡ ಪಾತ್ರಕ್ಕೆ ಅಷ್ಟೇ ತಕ್ಕ ಮಟ್ಟದ ನ್ಯಾಯ ಕೂಡ ಒದಗಿಸುವಲ್ಲಿ ಗೆದ್ದಿದ್ದಾರೆ. ಅವರ ಬದುಕಿನ ಹೊಸ ಅಧ್ಯಾಯಕ್ಕೆ ಶುಭವಾಗಲಿ ಎಂದು ಹರಸೋಣ.

ಬಿಗ್ ಬ್ರೇಕಿಂಗ್ ನ್ಯೂಸ್ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ನಟಿ ರಶ್ಮಿಕಾ ಮಂದಣ್ಣ ಬ್ಯಾನ್, ಕಾರಣವೇನು ಗೊತ್ತ.?

 

ಕನ್ನಡ ಚಿತ್ರರಂಗದಿಂದ ಬ್ಯಾನ್ ಆದ ಕಿರಿಕ್ ಪಾರ್ಟಿ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಿಂತ ವಿವಾದದ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ನಡೆದುಕೊಂಡ ರೀತಿ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ರಶ್ಮಿಕಾ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದು ‘ಕಿರಿಕ್ ಪಾರ್ಟಿ’ ಸಿನಿಮಾ. ಅವರ ಹೇಳಿಕೆ, ಇಂಟರ್ವ್ಯೂಗಳನ್ನು ಶೇರ್ ಮಾಡಿದ ಜನ ನಟಿ ರಶ್ಮಿಕಾರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ವದಂತಿಗಳ ಪ್ರಕಾರ ನಟಿಗೆ ಬೆಸ್ಟ್ ಪಾತ್ರವನ್ನು ನೀಡಿದ ನಟ ನಿರ್ಮಾಪಕ ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಕಂಪನಿಗೆ ಕೃತಜ್ಞತೆಯಿಲ್ಲದೆ ಕಾಮೆಂಟ್ ಮಾಡಿದ ಕಾರಣಕ್ಕಾಗಿ ರಶ್ಮಿಕಾ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ನಿಷೇಧ ಎದುರಿಸಬಹುದು ಎನ್ನಲಾಗುತ್ತಿದೆ. ಕರ್ಲಿ ಟೇಲ್ಸ್ ಎಂಬ ಶೋನಲ್ಲಿ ಭಾಗವಹಿಸಿದ ರಶ್ಮಿಕಾ ಅಲ್ಲಿ ಕೊಟ್ಟ ಹೇಳಿಕೆಯಿಂದ ನಿಜಕ್ಕೂ ಟೀಕೆಗೆ ಒಳಗಾಗಿದ್ದಾರೆ.

ತಾವು ನಟಿಯಾದ ಬಗ್ಗೆ ರಶ್ಮಿಕಾ ಈ ಶೋನಲ್ಲಿ ವಿವರವಾಗಿ ಮಾತನಾಡಿದ್ದರು. ತಾನು ಎಂದಿಗೂ ನಟಿಯಾಗಲು ಬಯಸಲಿಲ್ಲ. ತನ್ನ ಮೊದಲ ಪಾತ್ರವನ್ನು ಹೇಗೆ ಪಡೆದುಕೊಂಡೆ ಎಂದು ಚರ್ಚಿಸುವಾಗ ಹೀಗೆ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತಾ, ತಮ್ಮ ಜರ್ನಿ ಬಗ್ಗೆ ವಿವರಿಸಿದ್ದರು.

ಮಾಡೆಲ್ ಆಗಿ ಬಣ್ಣದ ಬದುಕು ಆರಂಭಿಸಿದೆ, ಪೇಪರ್ನಲ್ಲಿ ಫೋಟೋ ಬಂತು ಎಂಬಿತ್ಯಾದಿ ವಿಚಾರಗಳನ್ನು ಅವರು ಹೇಳಿಕೊಂಡಿದ್ದರು, ರಕ್ಷಿತ್ ಶೆಟ್ಟಿ ಅವರ ಪ್ರೊಡಕ್ಷನ್ ಹೌಸ್ ಪರಂವಾಹ್ ಸ್ಟುಡಿಯೋಸ್ ಹೆಸರನ್ನು ಉಲ್ಲೇಖಿಸುವುದನ್ನು ಅವಾಯ್ಡ್ ಮಾಡಿದ್ದಾರೆ ನಟಿ ರಶ್ಮಿಕ ಮಂದಣ್ಣ. ನಟಿಯಾಗಿ ಕಿರಿಕ್ ಪಾರ್ಟಿ ಸಿನಿಮಾದಿಂದ ಹೇಗೆ ತನ್ನ ದೊಡ್ಡ ಬ್ರೇಕ್ ಅನ್ನು ಹೇಗೆ ಪಡೆದರು.

ತ್ವರಿತ ಯಶಸ್ಸನ್ನು ಪಡೆದರು. ಹೀಗಿದ್ದರೂ ಪ್ರೊಡಕ್ಷನ್ ಹೌಸ್ ಹೆಸರಿಗೆ ವ್ಯಂಗ್ಯ ಮಾಡಿದ್ದು ನೆಟ್ಟಿಗರನ್ನು ಕೆರಳಿಸಿದೆ. ವಿಶೇಷವಾಗಿ ಕನ್ನಡಿಗರು ಇದನ್ನು ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. ರಶ್ಮಿಕಾ ಮತ್ತು ರಕ್ಷಿತ್ ಡೇಟಿಂಗ್ ಮಾಡುತ್ತಿದ್ದರು. ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಸಹ ನಂತರ ಅದನ್ನು ಕ್ಯಾನ್ಸಲ್ ಮಾಡಿ ಬೇರೆಯಾದರು.

ಆದರೆ ರಶ್ಮಿಕಾಗೆ ಅವರಿಗೆ ಮೊದಲ ಅವಕಾಶ ಸಿಕ್ಕಿದ್ದು ರಕ್ಷಿತ್ ಅವರ ಸಿನಿಮಾದಲ್ಲಿ. ಇದೀಗ ಕರ್ಲಿ ಟೇಲ್ಸ್ ಸಂದರ್ಶನದ ನಂತರ ರಶ್ಮಿಕಾ ಮಂದಣ್ಣ ಅವರ ವರ್ತನೆಯಿಂದ ಕನ್ನಡ ಥಿಯೇಟರ್ ಮಾಲೀಕರು, ಸಂಘಟನೆಗಳು ಮತ್ತು ಚಿತ್ರರಂಗ ಅಸಮಾಧಾನಗೊಂಡಿದೆ ಎನ್ನಲಾಗಿದೆ.

ನಟಿಯ ಮುಂದಿನ ಚಿತ್ರಗಳಾದ ಪುಷ್ಪ 2 ಮತ್ತು ವಾರಿಸುವನ್ನು ಕರ್ನಾಟಕದ ಥಿಯೇಟರ್‌ಗಳಿಂದ ತೆಗೆದುಹಾಕುವ ಮೂಲಕ ನಟಿಯ ವಿರುದ್ಧ ಕ್ರಮ ಕೈಗೊಳ್ಳಲು ಯೋಚಿಸಲಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ. ರಶ್ಮಿಕಾ ಪ್ರಸ್ತುತ ಅಲ್ಲು ಅರ್ಜುನ್ ಜೊತೆ ಪುಷ್ಪ: ದಿ ರೂಲ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಫಹದ್ ಫಾಸಿಲ್ ಕೂಡ ನಟಿಸಿದ್ದಾರೆ.

ರಶ್ಮಿಕಾ ಅವರ ಆ್ಯಟಿಟ್ಯೂಡ್ ಅನೇಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಅವರನ್ನು ಕನ್ನಡ ಚಿತ್ರರಂಗದಿಂದ ಹೊರಗಿಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈ ಮಧ್ಯೆ ತೆಲುಗು ಮಾಧ್ಯಮಗಳಲ್ಲಿ ರಶ್ಮಿಕಾ ಬಗ್ಗೆ ಕೆಲ ಸುದ್ದಿ ಪ್ರಕಟವಾಗಿದೆ. ‘ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲು ಕನ್ನಡ ಚಿತ್ರರಂಗ ಮುಂದಾಗಿದೆ’ ಎಂದು ಬಾಲಿವುಡ್ ಹಂಗಾಮ ಟ್ವೀಟ್ ಒಂದನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇದು ಸತ್ಯಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಇತ್ತ ಕರ್ನಾಟಕದಲ್ಲಿ ನಟಿಯ ವಿರುದ್ಧ ಟೀಕೆ ಹೆಚ್ಚಾಗುತ್ತಿದೆ ಇದರ ಜೊತೆಗೆ ರಷ್ಮಿಕ ಅವರ ವೃತ್ತಿ ಜೀವನಕ್ಕೆ ಎಷ್ಟು ದುಷ್ಪರಿಣಾಮ ಬೀರುವುದು ಎಂದು ನೋಡಬೇಕಾಗಿದೆ.

ಗಂಡನ ದುಡ್ಡಲ್ಲಿ ದಿನಕ್ಕೊಂದು ದೇಶ ಸುತ್ತುತ ಮಜ ಮಾಡ್ತ ಇದಿಯಾ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ ಸಿಡಿದೆದ್ದು ಕಣ್ಣೀರು ಹಾಕುತ್ತ ನಿವೇದಿತಾ ಗೌಡ ಹೇಳಿದ್ದೇನು ಗೊತ್ತ.?

 

ನಿವೇದಿತಾ ಗೌಡ ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳ ಬೇಡಿಕೆ ಇರುವ ನಟಿ. ಕನ್ನಡದ ಬಿಗ್ ಶೋ ಬಿಗ್ ಬಾಸ್ ಶೋ ಸೀಸನ್ ಐದರಲ್ಲಿ ಸಾಮಾನ್ಯರಾಗಿ ಎಂಟ್ರಿ ಕೊಟ್ಟ ಇವರು ಆ ನಂತರ ಕಲರ್ಸ್ ಕನ್ನಡ ವಾಹಿನಿಗೆ ಖಾಯಂ ಸದಸ್ಯೆ ಆಗಿಬಿಟ್ಟಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಅವರು ಭಾಗವಹಿಸಿದ್ದ ಅದೇ ಸೀಸನ್ ವಿನ್ನರ್ ಆದ ಕನ್ನಡದ ಫೇಮಸ್ ರಾಪರ್ ಕೂಡ ಆಗಿರುವ ಚಂದನ್ ಶೆಟ್ಟಿ ಅವರನ್ನು ಪ್ರೇಮ ವಿವಾಹ ಆದ ನಿವೇದಿತ ಗೌಡ ಅವರು ಮದುವೆ ಆದ ಬಳಿಕವೂ ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ರಾಜ ರಾಣಿ, ಗಿಚ್ಚ ಗಿಲಿ ಗಿಲಿ ಅಂತಹ ಪ್ರಖ್ಯಾತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಇತರ ವಾಹಿನಿಯ ಕೆಲವು ಕಾರ್ಯಕ್ರಮಗಳಲ್ಲೂ ಕೂಡ ಭಾಗಿಯಾಗಿದ್ದಾರೆ. ನಿವೇದಿತ ಗೌಡ ಅವರಿಗೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಾರಿ ಡಿಮ್ಯಾಂಡ್ ಇದ್ದು, ಬೇಬಿ ಡಾಲ್ ಲುಕ್ ಮತ್ತು ಮುದ್ದಾದ ಮಾತಿನಿಂದ ಮೋಡಿ ಮಾಡಿರುವ ಇವರಿಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಇತ್ತೀಚೆಗಷ್ಟೇ ಮಿಸ್ಸಸ್ ಇಂಡಿಯಾ 2022 ಅಲ್ಲಿ ಪೀಪಲ್ ಚಾಯ್ಸ್ ಇಂಕ್ನಾ ಅವಾರ್ಡ್ ಕೂಡ ಮೂಡಿಗೇರಿಸಿಕೊಂಡು ದೇಶದಾದ್ಯಂತ ಫೇಮಸ್ ಆಗಿರುವ ನಿವೇದಿತ ಗೌಡ ಅವರು ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸುವ ಆಫರ್ ಕೂಡ ಪಡೆಯುತ್ತಿದ್ದಾರೆ. ಕಿರುತೆರೆ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು, ತನ್ನದೇ ಆದ ಯೂಟ್ಯೂಬ್ ಚಾನೆಲ್, ಕುಟುಂಬ ಹೀಗೆ ವರ್ಷಪೂರ್ತಿ ಬಹಳ ಬಿಜಿ ಆಗಿರುವ ನಿವೇದಿತ ಗೌಡ ಅವರು ತನ್ನ ಬ್ಯುಸಿ ಶೆಡ್ಯೂಲ್ ನಡುವೆ ಬ್ರೇಕ್ ತೆಗೆದುಕೊಂಡು ಬಾಲಿ ದ್ವೀಪಕ್ಕೆ ಸೋಲೋ ಟ್ರಿಪ್ ಹೋಗಿದ್ದಾರೆ.

ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿರುವ ಇವರು ತಮ್ಮ ಜೀವನದ ಯಾವುದೇ ವಿಷಯ ಆದರೂ ಕೂಡ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗಲೂ ಸಹ ಬಾಲಿಯಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿರುವ ನಿವೇದಿತಾ ಗೌಡ ಅವರು ಹೊಸ ಹೊಸ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಆ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನು ನೋಡಿದ ಕೆಲವರು ಫೋಟೋಶೂಟ್ ಮತ್ತು ಟ್ರಿಪ್ ಬಗ್ಗೆ ಪ್ರಶ್ನೆ ಕೇಳಿ ನಿವೇದಿತ ಅವರ ಗ್ಲಾಮರ್ ಅನ್ನು ಹೊಗಳುತ್ತಿದ್ದರೆ ಕೆಲ ಕಿಡಿಗೇಡಿಗಳು ಅಲ್ಲೂ ಕೂಡ ಕಿರಿಕ್ ಮಾಡಿ ಬೇಬಿ ಡಾಲ್ ಕಾಲು ಎಳೆಯುವ ಕೆಲಸ ಮಾಡುತ್ತಿದ್ದಾರೆ. ಗಂಡನ ದುಡ್ಡನ್ನು ಚೆನ್ನಾಗಿ ಮಜಾ ಉಡಾಯಿಸುತ್ತಿದ್ದೀಯ, ಗಂಡನನ್ನೆ ಬಿಟ್ಟು ಸೋಲೋ ಟ್ರಿಪ್ ಹೋಗಿದ್ದೀಯಲ್ಲಾ ಎಂದು ಕೆಟ್ಟದಾಗಿ ಕಮೆಂಟ್ ಮಾಡಿದವರ ವಿರುದ್ಧ ಈ ಬಾರಿ ನಿವೇದಿತಾ ಗೌಡ ಅವರ ಸಿಡಿದೆದ್ದಿದ್ದಾರೆ.

ಇಂತಹ ಕಾಮೆಂಟ್ ಗಳಿಗೆ ತಾವು ಕೂಡ ರಿಪ್ಲೈ ಮಾಡುವ ಮೂಲಕ ಅಂದವರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ. ನಾನೇನು ನನ್ನ ಪತಿಯ ದುಡ್ಡಿನ ಮೇಲೆ ಅವಲಂಬಿತವಾಗಿಲ್ಲ, ನಾನು ಕೂಡ ದುಡಿಯುವ ಶಕ್ತಿ ಹೊಂದಿದ್ದೇನೆ ನನ್ನ ಹಣವನ್ನು ನಾನೇ ಸಂಪಾದಿಸಿಕೊಳ್ಳುತ್ತೇನೆ. ಹುಡುಗರು ಸೋಲೊ ಟ್ರಿಪ್ ಹೋದರೆ ಯಾರಿಗೂ ಸಮಸ್ಯೆ ಇಲ್ಲ, ಹುಡುಗಿಯರು ಸೋಲೊ ಟ್ರಿಪ್ ಹೋಗುವುದು ನಿಮಗೆ ಮಾತನಾಡಲು ಟಾಪಿಕ್ ಆಗಿದೆ.

ಅಷ್ಟಕ್ಕೂ ನಾನು ನನ್ನ ಗಂಡನ ದುಡ್ಡಿನಲ್ಲಿ ಟ್ರಿಪ್ ಹೋದರೆ ಅದರಲ್ಲೇನು ತಪ್ಪಿದೆ ಇದರಿಂದ ನಿಮಗೇನು ಕಷ್ಟ ಎಂದು ಪ್ರಶ್ನಿಸುತ್ತಿದ್ದಾರೆ. ನಿವೇದಿತ ಗೌಡ ಅವರು ಹೇಳುತ್ತಿರುವ ಈ ಮಾತುಗಳಲ್ಲೂ ಕೂಡ ಸತ್ಯವಿದ್ದು ಸುಖಾ ಸುಮ್ಮನೆ ಮಾತನಾಡುವವರಿಗೆ ಈ ಸಾರಿ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ ನಿವಿ ಎಂದು ಅನಿಸುತ್ತದೆ.

ಹಳದಿ ಶಾಸ್ತ್ರದ ಅರಿಶಿಣದಲ್ಲಿ ಮಿಂದೆದ್ದ ನಟಿ ಅದಿತಿ ಪ್ರಭುದೇವ ಈ ಕ್ಯೂಟ್ ವಿಡಿಯೋ ನೋಡಿ, ದೇವತೆಯೇ ಧರೆಗಿಳಿದ ಹಾಗೇ ಕಂಗೊಳಿಸುತ್ತಿದ್ದಾರೆ.

 

ನಟಿ ಅತಿಥಿ ಪ್ರಭುದೇವ ಅವರು ಈಗ ಕನ್ನಡ ಚಿತ್ರರಂಗದಲ್ಲಿ ಬೆಳೆಯುತ್ತಿರುವ ಪ್ರತಿಭೆ. ವರ್ಷಪೂರ್ತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅಧಿತಿ ಪ್ರಭುದೇವ್ ಅವರು ಸಿನಿಮಾ ಜರ್ನಿಯ ಜೊತೆ ಬದುಕಿನ ಹೊಸ ಪ್ರಯಾಣವನ್ನು ಶುರು ಮಾಡಲು ನಿರ್ಧರಿಸಿದ್ದು ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಅದರಂತೆ ಕುಟುಂಬಸ್ಥರ ನೋಡಿ ಒಪ್ಪಿದ ಹುಡುಗನೊಂದಿಗೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಇದಾದ ನಂತರವೂ ವರ್ಷದಿಂದ ಸಿನಿಮಾಗಳ ಕಡೆ ಮುಖ ಮಾಡಿ ಕಂಟಿನ್ಯೂ ಶೂಟಿಂಗ್ ಅಲ್ಲಿ ಬ್ಯುಸಿ ಆಗಿದ್ದ ಇವರು ಈಗ ಬ್ರೇಕ್ ಪಡೆದುಕೊಂಡು ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇವರ ವಿವಾಹ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಇವರ ಮದುವೆಯ ಶಾಸ್ತ್ರಗಳ ವಿಡಿಯೋಗಳು ಹಾಗೂ ಫೋಟೋಗಳು ಹರಿದಾಡುತ್ತಿವೆ.

ಉತ್ತಮ ಗ್ಲಾಮರ್ ಬ್ಯೂಟಿಗೆ ತಕ್ಕಹಾಗೆ ಟ್ಯಾಲೆಂಟ್ ಎಲ್ಲವನ್ನು ಹೊಂದಿರುವ ಅಧಿತಿ ಪ್ರಭುದೇವ್ ಅವರು ಬಣ್ಣದ ಲೋಕ ಸೇರಲು ಕನಸು ಕಾಣುತ್ತಿದ್ದರು. ಅಂದುಕೊಂಡಂತೆ ಅವರಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ನಾಗಕನ್ನಿಕೆ ಎನ್ನುವ ಧಾರಾವಾಹಿಯ ಮುಖ್ಯಪಾತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಅವಕಾಶ ದೊರೆಯಿತು.

ಈ ಧಾರಾವಾಹಿ ಖ್ಯಾತಿ ಬೆಳಗುತ್ತಿದ್ದಂತೆ ಒಂದರ ಹಿಂದೆ ಇದರಂತೆ ಸಾಲು ಸಾಲು ಸಿನಿಮಾ ಅವಕಾಶಗಳು ಇವರನ್ನು ಅರಸಿ ಬಂದವು. ಅಜಯ್ ರಾವ್ ಅವರೊಂದಿಗೆ ಶಿವ ತೇಜಸ್ ಅವರ ನಿರ್ದೇಶನದ ಸಿನಿಮಾದಲ್ಲಿ ಮೊದಲ ಬಾರಿಗೆ ಹಿರಿತೆರೆ ಪ್ರವೇಶಿಸಿದ ಇವರು ಆ ನಂತರ ಅನೇಕ ಕನ್ನಡ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು. ರಂಗನಾಯಕಿ, ಬಜಾರ್, ಸಿಂಗ, ಧೈರ್ಯಂ, ಓಲ್ಡ್ ಮಾಂಕ್, ಗಜಾನನ ಗ್ಯಾಂಗ್, ಬ್ರಹ್ಮಚಾರಿ, ತೋತಾಪುರಿ ಮುಂತಾದ ಸಿನಿಮಾಗಳಲ್ಲಿ ನಾಯಕ ನಟಿ ಆಗಿ ಅಭಿನಯಿಸಿರುವ ಅಧಿತಿ ಪ್ರಭುದೇವ ಅವರು ವರ್ಷಪೂರ್ತಿ ಸಿನಿಮಾದಲ್ಲಿ ಬಿಸಿ ಆಗಿರುವ ನಟಿ.

ಇದೇ ವರ್ಷ ಇವರು ಡಾಲಿ ಧನಂಜಯ್ ಅವರೊಂದಿಗೆ ಅಭಿನಯಿಸಿರುವ ಜಮಾಲಿಗುಡ್ಡ ಸಿನಿಮಾ ಕೂಡ ರಿಲೀಸ್ ಆಗಲಿದೆ ಮತ್ತು ಈಗಷ್ಟೇ ಬಿಡುಗಡೆ ಆಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮೂರು ನಾಯಕಿಯರು ಇರುವ ತ್ರಿಬ್ಬಲ್ ರೈಡಿಂಗ್ ಸಿನಿಮಾದಲ್ಲಿ ರಚನಾ ಮತ್ತು ಮೇಘ ಶೆಟ್ಟಿ ಅವರೊಂದಿಗೆ ಅಧಿತಿ ಪ್ರಭುದೇವ ಅವರು ಸಹ ಒಬ್ಬ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.

ವೃತ್ತಿ ಜೀವನದಲ್ಲಿ ಅಂದುಕೊಂಡಂತೆ ಪುಟ್ಟ ಪುಟ್ಟ ಮೆಟ್ಟಿಲೇರುತ್ತಾ ಸಾಧನದ ಶಿಖರ ಏರಲು ಕನಸು ಕಂಡಿರುವ ಇವರು ಕೆರಿಯರ್ ಜೊತೆ ವೈಯಕ್ತಿಕ ಜೀವನದ ಕಡೆ ಕೂಡ ಬಹಳ ಗಮನ ಕೊಡುತ್ತಾರೆ. ಉತ್ತರ ಕರ್ನಾಟಕದ ಹಳ್ಳಿ ಹೆಣ್ಣುಮಗಳಾದ ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು ಕೂಡ ತನ್ನ ಊರಿಗೆ ಹೋದಾಗ ಸಾಮಾನ್ಯ ಹಳ್ಳಿ ಹುಡುಗಿಯಂತೆಯೇ ಕಾಣಿಸಿಕೊಳ್ಳುತ್ತಾರೆ ಮತ್ತು ಮನೆಯ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.

ಇವರು ಸೇರುತ್ತಿರುವ ಮನೆಯು ಕೂಡ ಕೃಷಿ ಕುಟುಂಬ ಆಗಿದ್ದು ಇವರು ಕೈಹಿಡಿಯುತ್ತಿರುವ ಯಶಸ್ ಅವರು ಕಾಫಿ ತೋಟದ ಒಡೆಯರಾಗಿದ್ದಾರೆ. ಕಳೆದ ವರ್ಷ ಎಂಗೇಜ್ಮೆಂಟ್ ಆಗಿದ್ದ ಜೋಡಿ ಈಗ ಕುಟುಂಬಸ್ಥರು ಸ್ನೇಹಿತರು ಮತ್ತು ಸ್ಯಾಂಡಲ್ವುಡ್ ನ ಸಹೋದ್ಯೋಗಿಗಳ ನಡುವೆ ಶಾಸ್ತ್ರೋತ್ತವಾಗಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಟಿ ಪ್ರಭುದೇವ ಅವರಿಗೆ ಅರಿಶಿನ ಶಾಸ್ತ್ರ ನಡೆದಿರುವ ಫೋಟೋಗಳು ವಿಡಿಯೋಗಳು ವೈರಲ್ ಆಗುತ್ತಿದ್ದು ದೇವಲೋಕದ ಅಪ್ಸರೆಯಂತೆ ಬಿಳಿ ಬಣ್ಣದ ಉಡುಗೆಯಲ್ಲಿ ಅಧಿತಿ ಮಿಂಚುತ್ತಿದ್ದಾರೆ.

ಹಳದಿ ಶಾಸ್ತ್ರವಾದ ಕಾರಣ ಬಿಳಿ ಬಣ್ಣದಲ್ಲಿ ಇದ್ದ ಇವರ ವಸ್ತ್ರವು ಹಳದಿ ಬಣ್ಣಕ್ಕೆ ಆಗುವಷ್ಟು ಬಣ್ಣದ ನೀರು ಇವರಿಗೆ ಹಾಕಲಾಗಿದ್ದು ವಿಭಿನ್ನ ರೀತಿಯಲ್ಲಿ ಫೋಟೋಶೂಟ್ ಹಾಗೂ ವಿಡಿಯೋ ಮಾಡಿಸಲಾಗಿದೆ. ಯಾವ ಸಿನಿಮಾ ಶೂಟಿಂಗು ಕಡಿಮೆ ಇರದಂತೆ ಸಖತ್ ಸೆಟ್ ನಡುವೆ ಅಧಿತಿ ಯಶಸ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ.

Puneeth Rajkumar: ಅಪ್ಪು ನಟಿಸಿಬೇಕಿದ್ದ ದ್ವಿತ್ವ ಚಿತ್ತಕ್ಕೆ ಬೇರೆ ನಟ ಆಯ್ಕೆಯಾಗಿದ್ದಾರೆ ಯಾರದು ಗೊತ್ತ.?

 

ಪುನೀತ್ ರವರು ಈಗಾಗಲೇ ಕನ್ನಡ ಚಿತ್ರರಂಗವನ್ನು ಅ.ಗ.ಲಿ ಒಂದು ವರ್ಷ ಕಳೆದಿದೆ ಆದರೂ ಈ ಮುಂಚೆ ಅವರು ಇದ್ದಾಗ ಸಹಿ ಮಾಡಿದ ಚಿತ್ರಗಳು ಇನ್ನೂ ಚಿತ್ರೀಕರಣವನ್ನು ಮುಗಿಸಲಿಲ್ಲ ಎನ್ನಬಹುದು. ಪುನೀತ್ ರವರು ತಮ್ಮ ಕರ್ನಾಟಕ ಜನತೆಯ ಹಾಗೂ ಚಿತ್ರರಂಗವನ್ನು ತೊರೆದು ಎಲ್ಲರಿಂದ ದೂರ ಹೋಗಿರುವುದು ಕನ್ನಡಿಗರಲ್ಲಿ ದುಃಖವನ್ನು ಉಂಟು ಮಾಡಿದೆ ಎಂದರೆ ಸುಳ್ಳಾಗುವುದಿಲ್ಲ ಇಂತಹ ಪಟ್ಟಿಯಲ್ಲಿ ಪವನ್ ರವರ ದ್ವಿತ್ವ ಚಿತ್ರವು ಒಂದು.

ಹೌದು ಪವನ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸಲು ಒಪ್ಪಿದ್ದರಂತೆ ಹಾಗೆ ಪುನೀತ್ ರವರ ಜೋಡಿಯಾಗಿ ದಕ್ಷಿಣ ಭಾರತ ಚಿತ್ರರಂಗದ ನಟಿಯಾದ ತ್ರಿಷರವರು ಆಯ್ಕೆಯಾಗಿದ್ದರು. ಇನ್ನು ಈ ಚಿತ್ರದ ಜಾಹೀರಾತುಗಳಲ್ಲಿ ಪುನೀತ್ ರಾಜಕುಮಾರ್ ರವರ ಮುಖವು ಒಡೆದು ಚೂರು ಚೂರಾಗಿರುವ ರೀತಿಯಲ್ಲಿ ಪೋಸ್ಟರ್ಗಳನ್ನು ಬಿಟ್ಟಿದ್ದು, ಇದು ಎಲ್ಲೆಡೆ ವೈರಲ್ಲಾಗಿತ್ತು.

ಆದರೆ ತತ್ವ ಚಿತ್ರದ ಚಿತ್ರೀಕರಣ ಕೋಮುನ್ನವೇ ಪುನೀತ್ ರವರ ಸಾವು ಎಲ್ಲರನ್ನೂ ದುಃಖಕ್ಕೆ ಇಡು ಮಾಡಿತು ಪ್ರಶ್ನೆ ಎಂದರೆ ಪುನೀತ್ ಅವರ ಬದಲಾಗಿ ಈ ಚಿತ್ರದಲ್ಲಿ ಯಾವ ನಟರು ನಟಿಸುತ್ತಿದ್ದಾರೆ ಎಂಬುವುದು. ಸದ್ಯ ಪುನೀತ್ ಅವರ ಅಗಲಿಕೆಯಿಂದ ದ್ವಿತ್ವ ತಂಡವು ಮುಂದೆ ಏನು ಮಾಡಲಿದೇ ಎಂಬುವುದು ಎಲ್ಲರ ಚಿಂತೆಯಾಗಿದೆ.

ತ್ರಿಶಾ ಅವರು ಈ ಮುಂಚೆಯೇ ಪುನೀತ್ ಅವರ ಜೊತೆ ನಾಯಕನಟಿಯಾಗಿ ಅಭಿನಯಿಸಿದ್ದಾರೆ ಇತ್ತೀಚಿಗೆ ತ್ರಿಷಾರವರು ಕೂಡ ವೇದಿಕೆ ಮೇಲೆ ಪುನೀತ್ ಅವರ ಅಗಲಿಕೆಯ ಮಾತನಾಡಿದ್ದಾರೆ. ಅವರು ತತ್ವ ಚಿತ್ರದಲ್ಲಿ ಪುನೀತ್ ರವರ ಜೊತೆ ಅಭಿನಯಿಸಲು ಅವಕಾಶ ದೊರೆತ್ತಿದ್ದು, ಅವರ ಜೊತೆ ನಟನೆ ಮಾಡಲು ಇವರಿಗೆ ಬಹಳ ಖುಷಿಯನ್ನು ತಂದಿತ್ತಂತೆ.

ಪುನೀತ್ ಹಾಗೂ ತ್ರಿಷಾ ರವರು ಬೇರೆ ಬೇರೆ ಚಿತ್ರಗಳಲ್ಲಿ ಬಿಸಿಯಾಗಿದ್ದ ಕಾರಣದಿಂದ ದ್ವಿತ್ವ ಚಿತ್ರವನ್ನು ಪ್ರಾರಂಭಿಸಲು ಸ್ವಲ್ಪ ತಡವಾಗಿತ್ತು ಎಂದು ಹೇಳಿದ್ದಾರೆ. ಸದ್ಯ ಪುನೀತ್ ರವರ ಸಾವಿನ ಸುದ್ದಿಯು ತ್ರಿಶಾರವರನ್ನು ದುಃಖಿಸುವಂತೆ ಮಾಡಿದೆ ಎಂದು ವೇದಿಕೆಯೊಂದರಲ್ಲಿ ಹೇಳಿದ್ದಾರೆ. ಇದರ ಜೊತೆಗೆ ಐ ಮಿಸ್ ಯು ಪುನೀತ್ ಸರ್ ಎಂದು ಭಾವುಕರಾಗಿದ್ದಾರೆ.

ಇತ್ತೀಚಿಗೆ ದಕ್ಷಿಣ ಭಾರತದ ಉತ್ತಮ ನಟನಾದ ಫಹದ್ ಫಝಿಲ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಅವರ ಹುಟ್ಟುಹಬ್ಬವನ್ನು ಕೆಜಿಎಫ್ ಸಿನಿಮಾವನ್ನೂ ಅದ್ಧೂರಿಯಾಗಿ ನಿರ್ಮಾಣ ಮಾಡಿದ ಪ್ರೊಡಕ್ಷನ್ ಹೌಸ್ ಅವರು ಫಹದ ಫಸಿಲ್ ಅವರ ಹುಟ್ಟು ಹಬ್ಬದಂದು ಶುಭಾಶಯವನ್ನು ತಿಳಿಸಿದೆ. ಇದರಿಂದ ಹೊಸ ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ ಹೌದು ಫಹದ್ ಅವರು ದ್ವಿತ್ವ ಚಿತ್ರದಲ್ಲಿ ನಟಿಸಲಿದ್ದಾರೆಯೇ ಎಂದು ಚಿತ್ರ ರಂಗದವರಿಗೆ ಸಂದೇಹವನ್ನು ಉಂಟು ಮಾಡಿದೆ.

ಫಜಲ್ ರವರು ಚಿತ್ರದಲ್ಲಿ ನಟಿಸುತ್ತಿದ್ದಾರೆಯೆ ? ಎಂದು ದ್ವಿತ್ವ ಚಿತ್ರದ ನಿರ್ದೇಶಕನಾದ ಯು ಟರ್ನ್ ಸಿನಿಮಾ ಖ್ಯಾತಿಯ ಪವನ್ ಕುಮಾರ್ ಅವರು ಹಾಗೂ ದ್ವಿತ್ವ ಚಿತ್ರದ ಪ್ರೊಡಕ್ಷನ್ ಹೌಸ್ ರವರು ಸ್ಪಷ್ಟನೆಯನ್ನು ನೀಡಬೇಕಾಗಿದೆ. ಇತ್ತೀಚಿಗೆ ಫಜಲ್ ರವರು ಚಿತ್ರದ ಚಿತ್ರೀಕರಣದ ಕಡೆ ಎಲ್ಲವೂ ಸುಳಿಯುತ್ತಿದ್ದಾರೆ ಎಂಬುವುದು ಸುದ್ದಿಯಾಗಿದೆ.

ಸದ್ಯ ಪುನೀತ್ ರವರ ಸಾ.ವಿ.ನ ನಂತರವೂ ವಿದ್ವಾ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಇಲ್ಲ ಎಂಬುದು ಚಿತ್ರತಂಡವು ಸ್ಪಷ್ಟನೆ ನೀಡಬೇಕಾಗಿದೆ ಹಾಗೂ ಫಹದ್ ಫಜಿಲ್ ಅವರು ಹೊಸ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಈ ಮೂಲಕ ಅವರ ಅಭಿಮಾನಿಗಳಿಗೆ ಸಂತೋಷವನ್ನು ತಂದಿದ್ದಾರೆ ಇದರ ಜೊತೆಗೆ ಪವನ್ ಕುಮಾರ್ ಅವರ ಹೊಸ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆಯನ್ನು ಜನರು ಇಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ ರವಿಚಂದ್ರನ್ ಹಾಗೂ ಅವರ ಪತ್ನಿ ನಡುವೆ ಇರುವ ವಯಸ್ಸಿನ ಅಂತರ. ನಿಮ್ಮಿಂದ ಊಹೆ ಮಾಡಲು ಸಾಧ್ಯಾನಾ.?

ಕನಸುಗಾರ ರವಿಚಂದ್ರನ್ ಅವರು ನಮ್ಮ ಸ್ಯಾಂಡಲ್ ಕಂಡ ಒಬ್ಬ ಕ್ರೇಜಿ ನಟ ಸಿನಿಮಾ ಬಗ್ಗೆ ಇವರಿಗೆ ಇರುವ ಆಸಕ್ತಿ ಇಂಟರೆಸ್ಟ್ ಇವುಗಳಿಂದಲೇ ಕ್ರೇಜಿಸ್ಟಾರ್ ಎಂದು ಕರೆಸಿಕೊಂಡವರು. ನಿರ್ಮಾಪಕ ವಿ ವೀರಸ್ವಾಮಿ ಮಗನಾಗಿದ್ದ ರವಿಚಂದ್ರನ್ ಅವರು ಚಿಕ್ಕ ವಯಸ್ಸಿನಿಂದಲೂ ಕೂಡ ತಾನೊಬ್ಬ ಸ್ಟಾರ್ ನಟನಾಗಬೇಕು ಎಂದು ಆಸೆ ಪಟ್ಟವರು.

ಅಂದುಕೊಂಡ ಹಾಗೆ ಸಿನಿಮಾರಂಗವನ್ನು ಪ್ರವೇಶಿಸಿ ಪ್ರೇಮಲೋಕ, ರಣಧೀರ, ಅಂಜದಗಂಡು, ಶಾಂತಿ ಕ್ರಾಂತಿ, ಚಿನ್ನ, ಪುಟ್ನಂಜ, ಕಲಾವಿದ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಕನ್ನಡಿಗರಿಂದ ರವಿಮಾಮ ಎಂದು ಕರೆಸಿಕೊಂಡವರು. ರವಿ ಚಂದ್ರನ್ ಅವರ ಸಿನಿಮಾಗಳನ್ನು ನೋಡಲು ಒಂದು ಕಾಲದಲ್ಲಿ ಜನ ಥಿಯೇಟರ್ ಕಡೆ ಮುಗಿ ಬೀಳುತ್ತಿದ್ದರು.

ಇವರ ಹಳ್ಳಿ ಮೇಷ್ಟ್ರು, ಕಿಂದರಜೋಗಿ, ಪ್ರೀತ್ಸೋದ್ ತಪ್ಪಾ, ಮಾಂಗಲ್ಯಂ ತಂತು ನಾನೇನಾ, ಚೆಲುವ, ಯಾರೇ ನೀನು ಚೆಲುವೆ ಇಂತಹ ಸಿನಿಮಾಗಳಿಗೆ ಈಗಲೂ ಅಭಿಮಾನಿಗಳು ಇದ್ದಾರೆ. ಹೆಣ್ಣು ಮಕ್ಕಳ ಫೇವರೆಟ್ ಹೀರೋ ಆಗಿರುವ ರವಿ ಚಂದ್ರನ್ ಅವರನ್ನು ನೋಡಿ ಪತಿ ಎಂದರೆ ಇವರ ಇರಬೇಕು, ಇನಿಯನಾದರೆ ರವಿಚಂದ್ರನ್ ಅವರ ರೀತಿ ಪ್ರೀತಿ ಮಾಡಬೇಕು ಎಂದು ಹೆಣ್ಣು ಮಕ್ಕಳು ಆಸೆ ಪಡುವಂತೆ ಮಾಡಿದವರು.

ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳನ್ನು ಹೊಂದಿರುವ ರವಿಚಂದ್ರನ್ ಅವರ ಮೇಲೆ ಎಲ್ಲರಿಗೂ ವಿಶೇಷ ಪ್ರೀತಿ. ಪ್ರೇಮಲೋಕ ಎನ್ನುವ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಹೊಸದೊಂದು ರೀತಿಯಲ್ಲಿ ಮೈಲಿಗಲ್ಲು ಹಾಕಿ ಆ ಮೂಲಕ ಪ್ರೀತಿ ಪ್ರೇಮ ಕುರಿತ ಸಿನಿಮಾಗಳನ್ನು ಜನ ಮುಜುಗರವಿಲ್ಲದೆ ನೋಡುವ ರೀತಿ ಮಾಡಿದವರು.

ರವಿಚಂದ್ರನ್ ಅವರು ಪ್ರೀತಿ ಕೂಡ ಬದುಕಿನ ಭಾಗ ಎಂದು ಹೇಳಿದವರು, ಇವರ ಸಿನಿಮಾಗಳಲ್ಲಿ ಪ್ರೀತಿ ಪ್ರೇಮದ ಕುರಿತ ಕಥೆಗಳೇ ಹೆಚ್ಚಾಗಿ ಇರುತ್ತಿತ್ತು. ರವಿಚಂದ್ರನ್ ಅವರು ಸಿನಿಮಾ ವನ್ನು ಎಷ್ಟು ಇಷ್ಟಪಡುತ್ತಿದ್ದರು ಎಂದರೆ ಪ್ರತಿ ಸಿನಿಮಾವನ್ನು ಕೂಡ ಹಿಂದಿನ ಸಿನಿಮಗಿಂತ ಹೆಚ್ಚು ಗ್ರಾಂಡ್ ಆಗಿ ಮಾಡಬೇಕು ಎಂದು ಕ್ರಿಯೇಟಿವ್ ರೀತಿಯಲ್ಲಿ ಯೋಚಿಸಿ ಬಜೆಟ್ ಬಗ್ಗೆ ಎಂದು ತಲೆ ಕೆಡಿಸಿಕೊಳ್ಳದೆ ಸಿನಿಮಾವನ್ನು ಒಂದು ಅದ್ಭುತವಾಗಿದೆ ತೆರೆ ಮೇಲೆ ತರುತ್ತಿದ್ದವರು.

ಈ ವ್ಯಕ್ತಿ ಸಿನಿಮಾದಷ್ಟೇ ತನ್ನ ಕುಟುಂಬವನ್ನು ಕೂಡ ಇಷ್ಟ ಪಡುತ್ತಿದ್ದರು. ಈಗಲೂ ಕೂಡ ಸದಾ ತನ್ನ ತಂದೆ ತಾಯಿಯ ಬಗ್ಗೆ ಮಾತನಾಡುವ ಹೆಂಡತಿ ಮಕ್ಕಳ ಜೊತೆ ಇರುವ ಅನುಬಂಧದ ಬಗ್ಗೆ ಮಾತನಾಡುವ ರವಿಚಂದ್ರನ್ ಅವರು ತಂದೆ ಮತ್ತು ತಾಯಿಯ ಬಗ್ಗೆ ವಿಪರೀತ ಗೌರವ ಹಾಗೂ ಪ್ರೀತಿ ಹೊಂದಿದ್ದರು.

ರವಿಚಂದ್ರನ್ ಅವರು ಅವರ ತಂದೆಯ ಮಾತಿನಂತೆ ಅವರು ನೋಡಿದ ಹುಡುಗಿಯನ್ನೇ 14 ಫೆಬ್ರುವರಿ, 1986 ರಲ್ಲಿ ಮದುವೆಯಾದರು. ತಾವು ಹಿಂದೆ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದರು ಕೂಡ ಅವರ ತಂದೆ ಒಪ್ಪದ ಕಾರಣ ತಂದೆ ನೋಡಿದ ಹುಡುಗಿಯನ್ನೇ ಅರೆಂಜ್ ಮ್ಯಾರೇಜ್ ಆದ ರವಿ ಚಂದ್ರನ್ ಹಾಗೂ ಅವರ ಪತ್ನಿಯ ನಡುವಿನ ವಯಸ್ಸಿನ ಅಂತರ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿದೆ.

ರವಿ ಚಂದ್ರನ್ ಅವರ ಪತ್ನಿ ಸುಮತಿ ಅವರು ರವಿಚಂದ್ರನ್ ಅವರಿಗಿಂತ ಕೇವಲ ಮೂರು ವರ್ಷ ಚಿಕ್ಕವರಾಗಿದ್ದು ಇವರ ನಡುವೆ ವಯಸ್ಸಿನ ಅಂತರ ಕಡಿಮೆ ಇರುವುದರಿಂದ ಇಬ್ಬರ ನಡುವೆ ಹೊಂದಾಣಿಕೆ ಚೆನ್ನಾಗಿದೆ. ಇದೇ ಕಾರಣದಿಂದ ಚಂದನವನದ ಆದರ್ಶ ಜೋಡಿಗಳು ಎಂದು ಕರೆಸಿಕೊಂಡಿರುವ ಇವರು ವಿವಾದ ಇಲ್ಲದಂತೆ 36 ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದ್ದಾರೆ.