Home Blog Page 276

ಸಿಹಿ ಸುದ್ದಿ ಕೊಟ್ಟ ರಾಧಿಕಾ ಕುಮಾರಸ್ವಾಮಿ.

 

ರಾಧಿಕಾ ಕುಮಾರಸ್ವಾಮಿ ಅವರು ಒಂದು ಕಾಲದಲ್ಲಿ ಕನ್ನಡದ ಸ್ಟಾರ್ ನಟಿಯರ ಸಾಲಿನಲ್ಲಿ ಮೊದಲಾಗಿದ್ದವರು. 2002ರಲ್ಲಿ ತೆರೆಕಂಡ ನಿನಗಾಗಿ ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ ಇವರು ಆ ಬಳಿಕ ಪ್ರೇಮ ಕೈದಿ, ರೋಮಿಯೋ ಜೂಲಿಯಟ್, ಮಣಿ ಮುಂತಾದ ಪ್ರೇಮ ಕಥೆಗಳು ಹಾಗೂ ಅಣ್ಣ ತಂಗಿಯ ಸಂಬಂಧ ಸಾರುವಂತಹ.

ತವರಿಗೆ ಬಾ ತಂಗಿ, ಅಣ್ಣ ತಂಗಿ ಇಂತಹ ಬಾಂಧವ್ಯದ ಕಥೆಗಳು ಮತ್ತು ಮನೆಮಗಳು, ತಾಯಿ ಇಲ್ಲದ ತಬ್ಬಲಿ ಇಂತಹ ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸಿ ಎಂತಹ ಪಾತ್ರ ಕೊಟ್ಟರು ಕೂಡ ಸಮರ್ಥವಾಗಿ ನಿಭಾಯಿಸಬಲ್ಲ ಅಭಿನೇತ್ರಿ ಎಂದು ಹೆಸರು ಪಡೆದವರು. ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಇವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಎರಡನೇ ವಿವಾಹವಾಗಿ ಶಮಿಕ ಎನ್ನುವ ಮುದ್ದು ಮಗಳಿಗೆ ಜನ್ಮಕೂಡ ನೀಡಿದ್ದರು.

ರಹಸ್ಯವಾಗಿ ಉಳಿದಿದ್ದ ಇವರ ಮದುವೆ ಸುದ್ದಿ ಮಗಳ ಜನನದ ನಂತರ ಅಫಿಷಿಯಲ್ ಆಗಿ ಅನೌನ್ಸ್ ಆಯಿತು. ಈ ಹಿಂದೆ ರತನ್ ಕುಮಾರ್ ಎನ್ನುವವರ ಜೊತೆ ಹದಿನಾಲ್ಕು ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಾಧಿಕಾ ಕುಮಾರಸ್ವಾಮಿ ಅವರು ಮದುವೆ ಆದ ಎರಡೇ ವರ್ಷಕ್ಕೆ ಪತಿಯನ್ನು ಕಳೆದು ಕೊಂಡಿದ್ದರು.

ಇದಾದ ನಂತರ ಚಿಕ್ಕ ವಯಸ್ಸಿಂದಲೂ ಕೂಡ ಓದಿನ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದ ಇವರು ಸಿನಿಮಾಗಳಲ್ಲಿ ಅಭಿನಯಿಸುವ ನಿರ್ಧಾರ ಮಾಡಿ ಗಾಂಧಿನಗರ ದತ್ತ ಪಾದ ಬೆಳೆಸಿದರು. ನಮ್ಮ ಶ್ರಮಕ್ಕೆ ಹಾಗೂ ಟ್ಯಾಲೆಂಟಿಗೆ ತಕ್ಕ ಹೆಸರು ಕೂಡ ಪಡೆದ ರಾಧಿಕಾ ಕುಮಾರಸ್ವಾಮಿ ಅವರು ಮದುವೆಯಾದ ಬಳಿಕ ಹಲವು ವರ್ಷಗಳವರೆಗೆ ಸಿನಿಮಾಗಳಲ್ಲಿ ನಟಿಸಲೇ ಇಲ್ಲ.

2012 ರಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಮ್ಯಾ ಅವರ ಅಭಿನಯದ ಲಕ್ಕಿ ಎನ್ನುವ ಸಿನಿಮಾ ಗೆ ನಿರ್ಮಾಪಕಿ ಆಗಿ ಕಂಬ್ಯಾಕ್ ಮಾಡಿದರು. ಅನಂತರ ಸ್ವೀಟಿ, ರುದ್ರ ತಾಂಡವ, ಧಮಯಂತಿ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಕನ್ನಡ ಮಾತ್ರ ಅಲ್ಲದೆ ತಮಿಳು ತೆಲುಗು ಸಿನಿಮಾಗಳಲ್ಲೂ ಬೇಡಿಕೆ ನಟಿ ಆಗಿದ್ದ ಇವರು ಇತ್ತೀಚಿಗೆ ನಟಿಸಿರುವ ಯಾವ ಸಿನಿಮಾ ಕೂಡ ಅಷ್ಟೊಂದು ಹೆಸರು ಮಾಡುತ್ತಿಲ್ಲ.

ಈಗಷ್ಟೇ 36 ವಸಂತಕ್ಕೆ ಕಾಲಿಟ್ಟಿರುವ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಹುಟ್ಟು ಹಬ್ಬದ ವಿಶೇಷವಾಗಿ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಹಲವು ವರ್ಷಗಳಿಂದ ಮತ್ತೊಂದು ಸಿನಿಮಾ ಕಥೆಗಾಗಿ ಕಾಯುತ್ತಿರುವ ರಾಧಿಕಾ ಕುಮಾರಸ್ವಾಮಿ ಅವರು ಈ ಬಾರಿ ಸ್ಟಾರ್ ಹೀರೋ ಒಬ್ಬರಿಗೆ ಜೊತೆಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದರಂತೆ.

ಆದರೆ ಹೀರೋ ಯಾರು ಎನ್ನುವ ವಿಷಯವನ್ನು ಮತ್ತು ಚಿತ್ರದ ಪಾತ್ರದ ವಿಷಯವನ್ನು ಬಿಟ್ಟು ಕೊಟ್ಟಿಲ್ಲ. 36ರ ಹರೆಯದ ರಾಧಿಕಾ ಕುಮಾರಸ್ವಾಮಿ ಅವರ ಇನ್ನೂ ಕೂಡ 18ರ ಚೆಲುವೆಯಂತೆ ಕಾಣುತ್ತಿದ್ದಾರೆ. ಈಗಿನ ಕಾಲದ ಯಾವ ನಟಿಗೂ ಕಡಿಮೆ ಇರದಂತಹ ಸೌಂದರ್ಯ ಹೊಂದಿರುವ ಮಂಗಳೂರಿನ ಈ ಬೆಡಗಿಗೆ ಎರಡನೇ ಇನ್ನಿಂಗ್ ಅಲ್ಲಿ ಬೇಗನೆ ಬ್ರೇಕ್ ಸಿಗಲಿ ಎಂದು ಹರಸೋಣ.

ಈ ವರ್ಷ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಇವರಿಗೆ ತಮ್ಮ ಪತಿಯ ಕಡೆಯಿಂದ ವಿಶೇಷ ಉಡುಗೊರೆ ಒಂದು ಬಂದಿದೆ ಎನ್ನುವ ಸುದ್ದಿಗಳು ಕೂಡ ಹಬ್ಬಿವೆ. ರಾಧಿಕಾ ಕುಮಾರಸ್ವಾಮಿ ಅವರಿಗೆ ಕುಮಾರಸ್ವಾಮಿ ಅವರ ಕಡೆಯಿಂದ ಹುಟ್ಟು ಹಬ್ಬದ ಉಡುಗೊರೆ ಆಗಿ ಒಂದು ಬ್ರಾಂಡೆಡ್ ಕಾರು ಹಾಗೂ ಕೇಕ್ ಬಂದಿದೆ ಎಂದು ಕೆಲ ಮೂಲಗಳು ತಿಳಿಸಿವೆ.

ಪತಿಯ ಹಾದಿಯಲ್ಲಿ ಸಾಗುತ್ತಿರುವ ಪತ್ನಿ, ಅಭಿಮಾನಿಗಳಿಗಾಗಿ ಮತ್ತು ಶಾಲಾ ಮಕ್ಕಳಿಗಾಗಿ ವಿಶೇಷ ಉಡುಗೊರೆ ಕೊಟ್ಟ ಅಶ್ವಿನಿ ಏನದು ಗೊತ್ತ.! ದೊಡ್ಮನೆ ಸೊಸೆ ದೊಡ್ಡ ಗುಣ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರತಿ ಮನೆ ಮನೆಗಳಲ್ಲಿ ಹಾಗೂ ಮನಮನಗಳಲ್ಲಿ ಪೂಜ್ಯನೀಯ ಸ್ಥಾನ ಪಡೆದಿರುವ ವ್ಯಕ್ತಿ. ತನ್ನ ದುಡಿಮೆಯ ಹೆಚ್ಚು ಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟ ಕಾರಣದಿಂದ ಅಪ್ಪುವನ್ನು ಇಂದು ಜನ ದೇವರ ರೂಪದಲ್ಲಿ ಕಾಣುತ್ತಿದ್ದಾರೆ.

ಕರ್ನಾಟಕದ ಜನತೆಗೆ ಅಪಾರ ಪ್ರಮಾಣದಲ್ಲಿ ಯಾರಿಗೂ ಅರಿಯದ ರೀತಿ ಸಹಾಯ ಮಾಡಿ ಹೋಗಿರುವ ಅಪ್ಪುವಿನ ಈ ಅಪರೂಪದ ವ್ಯಕ್ತಿತ್ವವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಇಂದು ಅಪ್ಪು ಅವರು ನಮ್ಮ ಜೊತೆಗೆ ಇರದೆ ಇರಬಹುದು ಆದರೆ ಅವರು ಮಾಡಿದ ದಾನ ಧರ್ಮದಿಂದ ಮತ್ತು ಅವರ ನಟನೆಯಿಂದ ಜೊತೆಗಿರದಿದ್ದರೂ ನೆನಪುಗಳಲ್ಲಿ ಸದಾ ಅವರು ಜೀವಂತವಾಗಿರುತ್ತಾರೆ.

ಈಗ ಅಪ್ಪುವಿನ ಹಾದಿಯಲ್ಲಿಯೇ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಡೆಯುತ್ತಿದ್ದು ಅಪ್ಪು ಅವರು ಈಗ ಇದ್ದಿದ್ದರೆ ಏನೇನು ಕೆಲಸಗಳನ್ನು ಮಾಡುತ್ತಿದ್ದರು ಅವುಗಳನ್ನೆಲ್ಲ ಮಾಡುತ್ತಾ ಅಪ್ಪು ಹೆಸರಿಗೆ ಚ್ಯುತಿ ಬಾರದಂತೆ ಮತ್ತು ದೊಡ್ಮನೆ ಖ್ಯಾತಿ ಬೆಳಗುವಂತೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.

ವರ್ಷದಿಂದ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳಿಗೂ ಹಾಜರು ಆಗಿರುವ ಅಶ್ವಿನಿ ಅವರು ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಕಡೆಯೆಲ್ಲೆಲ್ಲಾ ಕೂಡ ಹೋಗಿದ್ದಾರೆ. ಇತ್ತೀಚೆಗೆ ಅಪ್ಪು ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಕೂಡ ನಡೆದಿತ್ತು ಆ ಕಾರ್ಯಕ್ರಮಕ್ಕೂ ಕೂಡ ರಾಘಣ್ಣ ನ ಜೊತೆ ಹೋಗಿ ನಡೆಸಿಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪುವಿನಂತೆ ಹೋದಲ್ಲೆಲ್ಲ ತಮ್ಮ ಕೈಲಾದಷ್ಟು ಸಹಾಯ ಮಾಡಿ ಬರುತ್ತಾರೆ.

ಈ ಕಾರ್ಯಕ್ರಮದಲ್ಲಿ ಕೂಡ ಕಾರ್ಯಕ್ರಮ ಮುಗಿದ ಬಳಿಕ ಅಪ್ಪು ಅಭಿಮಾನಿಗಳಿಗೆ ಬೇಸರವಾಗದಂತೆ ಎಲ್ಲರಿಗೂ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಶಾಲಾ ಮಕ್ಕಳನ್ನು ಕರೆದು ಅವರಿಗೂ ಸ್ಕಾಲರ್ಶಿಪ್ ಕೊಡುವ ಕೆಲಸವನ್ನು ಕೂಡ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರು ಇರುವಾಗಲು ಕೂಡ ಯಾವಾಗಲೂ ಸಂದರ್ಶನಗಳಲ್ಲಿ ಹೇಳುತ್ತಿದ್ದರು.

ಹೆಣ್ಣು ಮಕ್ಕಳು ಚೆನ್ನಾಗಿ ಓದಬೇಕು ಸ್ವಂತ ದುಡಿಮೆ  ಮೇಲೆ ಬದುಕಬೇಕು.  ನನಗೂ ಕೂಡ ಎರಡು ಹೆಣ್ಣು ಮಕ್ಕಳಿದ್ದಾರೆ. ನಮ್ಮ ತಾಯಿಯನ್ನು ನೋಡಿದಾಗ ನನಗೆ ಇನ್ಸ್ಪಿರೇಷನ್ ಆಗುತ್ತಿತ್ತು. ನನ್ನ ಮಕ್ಕಳಿಗೂ ನಾನು ನಮ್ಮ ತಾಯಿಯಂತೆ ನೀವೆಲ್ಲ ಆಗಬೇಕು ಎಂದು ಹೇಳುತ್ತೇನೆ. ಹಾಗಾಗಿ ಹೆಣ್ಣು ಮಕ್ಕಳ ಸ್ಟ್ರಾಂಗ್ ಆಗಿ ಇರಬೇಕು ಎನ್ನುತ್ತಿದ್ದರು. ಮತ್ತು ಮೈಸೂರಿನಲ್ಲಿ ಶಕ್ತಿಧಾಮ ಎನ್ನುವ ಆಶ್ರಮ ನಡೆಸಿ ಹೆಣ್ಣು ಮಕ್ಕಳಿಗೆ ವಿದ್ಯೆ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.

ಅದೇ ಹಾದಿಯಲ್ಲಿ ಸಾಗುತ್ತಿರುವ ಅಶ್ವಿನಿ ಪುನೀತ್ ಅವರು ಶಕ್ತಿಧಾಮದ ಹೆಣ್ಣು ಮಕ್ಕಳಿಗೆ ಇನ್ನೂ ಸಹಾಯ ಮುಂದುವರಿಸಿಕೊಂಡು ಹೋಗುತ್ತಿರುವುದರ ಜೊತೆಗೆ ತಾವು ಹೋದ ಕಡೆಯಲ್ಲೆಲ್ಲಾ ತಮ್ಮ ಕೈಲಾದಷ್ಟು ಮತ್ತಷ್ಟು ಸಹಾಯ ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿದ್ದ ಗಂಧದಗುಡಿಯನ್ನು ಕೂಡ ತೆರೆ ಮೇಲೆ ತರುವಲ್ಲಿ ಅಶ್ವಿನಿ ಅವರ ಪಾತ್ರ ಮಹತ್ವದ್ದು.

ಪುನೀತ್ ರಾಜಕುಮಾರ್ ಅವರು ಯುವ ಪ್ರತಿಭೆಗಳನ್ನು ಬೆಳೆಸುವ ಕೆಲಸವಾಗಿ ಕಟ್ಟಿದ್ದ ಪಿಆರ್ ಕೆ ಪ್ರೊಡಕ್ಷನ್ ನ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಇವರು ತನ್ನ ಎರಡು ಮುದ್ದಾದ ಮಕ್ಕಳನ್ನು ಕರ್ನಾಟಕಕ್ಕೆ ಮಾದರಿ ಪ್ರಜೆಗಳನ್ನಾಗಿ ಕೊಡುಗೆ ನೀಡುವ ಹೊಣೆ ಕೂಡ ಹೊತ್ತಿದ್ದಾರೆ. ಜೊತೆಗೆ ಇಡೀ ಕರ್ನಾಟಕವನ್ನೇ ತಮ್ಮ ಕುಟುಂಬದ ಎಂಬಂತೆ ಅಪ್ಪು ಪತ್ನಿ ಭಾವೆಸುತ್ತಿದ್ದಾರೆ. ದೊಡ್ಮನೆ ಕುಟುಂಬಕ್ಕೆ ಈ ರೀತಿ ಜನರಿಗೆ ಸಹಾಯ ಮಾಡುವ ಶಕ್ತಿ ಮತ್ತಷ್ಟು ದೊರೆಯಲಿ ಎಂದು ಹಾರೈಸೋಣ.

ಮದ್ವೆ ಆಗಲ್ಲ, ನನ್ಗೆ ಮದ್ವೆ ಮುಖ್ಯ ಅಲ್ಲ, ಮದ್ವೆ ಆದವ್ರು ಯಾರು ತಾನೇ ಖುಷಿಯಾಗಿದ್ದಾರೆ.? ಎಂದು ಶಾ-ಕಿಂ-ಗ್ ಹೇಳಿಕೆ ಕೊಟ್ಟ ನಟಿ ರಮ್ಯಾ.

 

ಮೋಹಕ ತಾರೆ ರಮ್ಯ ಅವರು ಇದೀಗ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಬಾರಿ ನಿರ್ಮಾಪಕಿ ಆಗಿ ಆಪಲ್ ಬಾಕ್ಸ್ ಎನ್ನುವ ಸಂಸ್ಥೆಯಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಮತ್ತು ಉತ್ತರಕಾಂಡ ಎನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಿ ಧನಂಜಯ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಮೂಲಕ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಚಿತ್ರರಂಗ ತೊರೆದು 10 ವರ್ಷಗಳಾಗಿದ್ದರು ಕೂಡ ಸ್ಯಾಂಡಲ್ವುಡ್ ಪದ್ಮಾವತಿಗೆ ಬೇಡಿಕೆಯೇನು ಕಡಿಮೆ ಆಗಿರಲಿಲ್ಲ.

ಈ ಹತ್ತು ವರ್ಷದಲ್ಲಿ ಸಾಕಷ್ಟು ಸಿನಿಮಾ ಆಫರ್ ಗಳು ಅವರನ್ನು ಹರಸಿ ಹೋಗಿದ್ದವು, ಆದರೆ ರಾಜಕೀಯದಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದ ರಮ್ಯಾ ಅವರು ಸಮಯ ಸಿಗದ ಕಾರಣ ಚಿತ್ರರಂಗದಿಂದ ಕೊಂಚ ದೂರವಾಗಿದ್ದರು. ಮತ್ತೆ ಅವರು ನಟಿಸಲು ಒಪ್ಪಿಕೊಂಡಿರುವುದು ಇಡೀ ಚಿತ್ರರಂಗ ಸೇರಿದಂತೆ ಕರ್ನಾಟಕದ ಅಪಾರ ಪ್ರಮಾಣದ ಅಭಿಮಾನಿಗಳಿಗೂ ಸಂತಸ ನೀಡಿದೆ.

ಅವರು ಚಿತ್ರರಂಗದಿಂದ ದೂರ ಇದ್ದರು ಸಿನಿಮಾ ಗೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೆ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಅತಿಥಿಯಾಗಿ ಹೋಗುತ್ತಿದ್ದರು. ಈಗಲೂ ಬೆಂಗಳೂರಿನ ಕಾಲೇಜು ಕಾರ್ಯಕ್ರಮ ಒಂದಕ್ಕೆ ಅತಿಥಿ ಆಗಿ ಹೋಗಿದ್ದ ರಮ್ಯಾ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಾರೆ. ಈ ಮಧ್ಯೆ ವಿದ್ಯಾರ್ಥಿಗಳು ರಮ್ಯಾ ಅವರನ್ನು ಕುರಿತು ಅವರ ಸಿನಿಮಾ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟ ಹಾಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಆ ವಿದ್ಯಾರ್ಥಿ ಗುಂಪಿನಲ್ಲಿದ್ದ ವಿದ್ಯಾರ್ಥಿ ಒಬ್ಬ ರಮ್ಯ ಮೇಡಂ ನೀವು ಮದುವೆ ಯಾವಾಗ ಆಗುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ ಆಗ ತಮ್ಮ ಕ್ಯೂಟ್ ರಿಯಾಕ್ಷನ್ ಇಂದ ಮೊದಲಿಗೆ ರಿಪ್ಲೈ ಕೊಟ್ಟ ರಮ್ಯ ಅವರು ನನಗೆ ಮದುವೆ ಯಾಕೆ ಆಗಬೇಕು ಎನ್ನುವುದನ್ನು ಮೊದಲು ಹೇಳಿ ಎಂದು ಕೇಳುತ್ತಾರೆ. ನಂತರ ಮದುವೆಯಾಗುವುದು ಹಾಗೂ ಹ್ಯಾಪಿ ಆಗಿರಿ ಇರುವುದು ಇವೆರಡರಲ್ಲಿ ಒಂದನ್ನು ಆಯ್ದು ಕೊಳ್ಳಬೇಕು, ನಾನು ಸದ್ಯಕ್ಕೆ ಹ್ಯಾಪಿ ಆಗಿದ್ದೇನೆ ಹಾಗೆ ಇರುವ ನಿರ್ಧಾರ ಮಾಡಿದ್ದೇನೆ ಎಂದು ಉತ್ತರ ಕೊಟ್ಟಿದ್ದಾರೆ.

ಅದಕ್ಕೆ ಆ ವಿದ್ಯಾರ್ಥಿ ಕೂಡ ಹೌದು ಮೇಡಂ ನಮಗೂ ಕೂಡ ಅದೇ ಬೇಕಾಗಿರೋದು ನೀವು ಮದುವೆ ಆಗಬೇಡಿ ಎಂದು ಪ್ರತ್ಯುತ್ತರ ನೀಡಿದ್ದಾರೆ. ಹೀಗೆ ವಿದ್ಯಾರ್ಥಿಗಳೊಂದಿಗೆ ಸಾಕಷ್ಟು ತರ್ಲೆ ತಮಾಷೆ ಮಾಡಿ ಸಮಯ ಕಳೆದ ರಮ್ಯಾ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಮದುವೆ ಬಗ್ಗೆ ರಮ್ಯಾ ಅಡಿದ ಮಾತುಗಳು ವೈರಲ್ ಆಗಿವೆ. ರಮ್ಯಾ ಅವರಿಗೆ ವಿದ್ಯಾರ್ಥಿಯೊಬ್ಬರು ಒಳ್ಳೆ ಸೋಲ್ಮೆಟ್ ಸಿಕ್ಕರೆ ಮದುವೆ ಆಗಿ ಮೇಡಂ ಎಂದು ಕೂಡ ಸಲಹೆ ನೀಡಿದ್ದಾರೆ.

ಆದರೆ ರಮ್ಯಾ ಅವರೇ ನನಗೆ ಯಾರು ಕೂಡ ಆ ರೀತಿಯ ವ್ಯಕ್ತಿತ್ವದವರು ಸಿಕ್ಕಿಲ್ಲ ಹಾಗಾಗಿ ಸಿಂಗಲ್ ಆಗಿ ಇರುವ ನಿರ್ಧಾರ ಮಾಡಿದ್ದೇನೆ ಎಂದು ಕೂಡ ಹೇಳಿದ್ದಾರೆ. ನಟಿ ರಮ್ಯಾ ಅವರು ಸೌಂದರ್ಯದ ಜೊತೆಗೆ ಪ್ರತಿಭೆಯನ್ನು ಕೂಡ ಹೊಂದಿರುವ ನಟಿ. ಜೊತೆಗೆ ರಾಜಕೀಯದಲ್ಲಿ ಸಕ್ರಿಯವಾಗಿ ಸಮಾಜ ಸೇವೆಯತ್ತ ಮುಖ ಮಾಡಿದ್ದವರು. ರಮ್ಯಾ ಅವರ ಈ ಗುಣಗಳಿಂದ ಅವರಿಗೆ ಅಪಾರ ಪ್ರಮಾಣದ ಅಭಿಮಾನಿಗಳು ಇರುವುದು ಆದಷ್ಟು ಬೇಗ ರಮ್ಯಾ ಅವರಿಗೆ ಕಂಕಣ ಭಾಗ್ಯ ಕೂಡಿ ಬರಲಿ, ಜೊತೆಗೆ ಸಿನಿಮಾ ರಂಗ ಮತ್ತು ರಾಜಕೀಯ ರಂಗದಲ್ಲೂ ಕೂಡ ಇನ್ನಷ್ಟು ಒಳಿತಾಗಲಿ ಎಂದು ಹರಸೋಣ.

ದರ್ಶನ್ ನೋಡಲು ಬಂದ ಅಭಿಮಾನಿಯನ್ನು ಸ್ಟೇಜ್ ಮೇಲಿಂದ ಎಳೆದು ಹಾಕಿದ ಬಾಡಿಗಾರ್ಡ್ ಎಲ್ಲವನ್ನೂ ನೋಡುತ್ತ ಸುಮ್ಮನೆ ನಿಂತಿದ್ದ ಡಿ ಬಾಸ್,ಎಲ್ರೂ ಅಪ್ಪು ಆಗೋಕೆ ಆಗಲ್ಲ ಎಂದ ನೆಟ್ಟಿಗರು.

ಸ್ಟಾರ್ ಹೀರೋಗಳಿಗೆ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ. ಅಭಿಮಾನಿಗಳನ್ನು ಸಂಪಾದಿಸುವುದರ ಜೊತೆಗೆ ಅವರನ್ನು ನಿಭಾಯಿಸುವುದು ಕೂಡ ಒಂದು ಕಲೆ. ವರನಟ ಡಾಕ್ಟರ್ ರಾಜಕುಮಾರ್ ಅವರು ಅಭಿಮಾನಿಗಳನ್ನೇ ದೇವರು ಎಂದು ಕರೆದಿದ್ದರು. ಹಾಗೆಯೇ ಈಗ ಕರ್ನಾಟಕದಾದ್ಯಂತ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಹೀರೋ ಎನ್ನುವ ಖ್ಯಾತಿಗೆ ಒಳಗಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಅಭಿಮಾನಿಗಳನ್ನು ವಿಶೇಷ ಹೆಸರಿನಿಂದ ಕರೆಯುತ್ತಾರೆ.

ಅಭಿಮಾನಿಗಳನ್ನೇ ಇವರು ಸೆಲೆಬ್ರಿಟಿ ಎಂದು ಕರೆಯುತ್ತಾರೆ. ಹೀಗೆ ಕರೆಯುವುದು ಮಾತ್ರವಲ್ಲದೆ ತಮ್ಮನ್ನು ನೋಡಲು ಇಚ್ಚಿಸುವ ಹಾಗೂ ಭೇಟಿಯಾಗಲು ಬರುವ ಅಭಿಮಾನಿಗಳನ್ನು ಅಷ್ಟೇ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ. ಆದರೆ ದರ್ಶನ್ ಅವರ ಎದುರಿಗೆ ಅವರ ಅಭಿಮಾನಿ ಒಬ್ಬರಿಗೆ ಅವಮಾನ ಆಗಿದೆ ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ದರ್ಶನ್ ಅವರು ಅಭಿಮಾನಿಗಳಿಗೆ ಮಾತ್ರ ಅಲ್ಲ ತಮ್ಮನ್ನು ಹುಡುಕಿಕೊಂಡು ಸಹಾಯ ಅರಸಿ ಬರುವವರಿಗೂ ಕೂಡ ಯಾವುದೇ ಪ್ರಚಾರ ಪಡೆಯದೆ ಕೈಲಾದಷ್ಟು ಸಹಾಯ ಮಾಡಿ ಅನೇಕರ ಪಾಲಿಗೆ ದೇವರಾಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವಂತಹ ವ್ಯಕ್ತಿತ್ವ ಹೊಂದಿರುವ ದರ್ಶನ್ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವಿದೆ. ಹೀಗಾಗಿಯೇ ದರ್ಶನ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಅಲ್ಲಿ ಲಕ್ಷಾಂತರ ಅಭಿಮಾನಿಗಳು ಸೇರಿರುತ್ತಾರೆ.

ಅಭಿಮಾನಿಗಳಿಗೆ ಡಿ ಬಾಸ್ ಎಂದರೆ ಏನು ಒಂದು ರೀತಿ ಕ್ರೇಜ್ ಅವರ ನೇರ ನುಡಿ ಮತ್ತು ನಿಷ್ಕಲ್ಮಶ ಹೃದಯ ನೋಡಿದ ತಕ್ಷಣವೇ ಇಷ್ಟವಾಗುವಂತಹ ಗುಣವಾಗಿದೆ. ಅದೇನೋ ಗೊತ್ತಿಲ್ಲ ದರ್ಶನ್ ಅವರನ್ನು ಅವರ ಅಭಿಮಾನಿಗಳು ಇಷ್ಟಪಡುವ ಆ ಮಟ್ಟದ ಪ್ರೀತಿಗೆ ಮತ್ತೊಂದು ಹೋಲಿಕೆಯನ್ನು ಮಾಡಲಾಗದು.

ಹೀಗೆ ಇತ್ತೀಚೆಗೆ ಕಾರ್ಯಕ್ರಮ ಒಂದಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದ ದರ್ಶನ್ ಅವರನ್ನು ನೋಡಲು ಎಂದಿನಂತೆ ದೊಡ್ಡ ಮಟ್ಟದ ಜನಸಾಗರವೇ ಅಲ್ಲಿ ಸೇರಿತ್ತು. ಕಾರ್ಯಕ್ರಮದ ವಿಶೇಷ ಆಕರ್ಷಣೆ ದರ್ಶನ್ ಅವರಾಗಿದ್ದ ಕಾರಣ ಅವರ ಮಾತುಗಳನ್ನು ಕೇಳಲು ಅವರನ್ನು ನೋಡಲು ದಾಖಲೆ ಮಟ್ಟದ ಸಂಖ್ಯೆಯಲ್ಲಿ ಅಲ್ಲಿ ಅಭಿಮಾನಿಗಳು ಸೇರಿದ್ದರು.

ಇಂತಹ ಕಾರ್ಯಕ್ರಮದಲ್ಲಿ ದರ್ಶನ್ ಅವರನ್ನು ನೋಡಿದ ತಕ್ಷಣ ಭಾವುಕವಾದ ಅಭಿಮಾನಿ ಒಬ್ಬ ಅವರನ್ನು ಓಡಿ ಹೋಗಿ ತಬ್ಬಿಕೊಳ್ಳಲು ಪ್ರಯತ್ನಪಟ್ಟಿದ್ದಾನೆ. ವೇದಿಕೆ ಮೇಲೆ ದರ್ಶನ್ ಅವರು ಅವರ ಪಾಡಿಗೆ ಮಾತನಾಡುತ್ತಿದ್ದರು ಅಲ್ಲಿಗೆ ಓಡಿ ಬಂದ ಅವರ ಅಭಿಮಾನಿ ದರ್ಶನ್ ಅವರನ್ನು ಅಪ್ಪಿ ಕೊಳ್ಳುವ ಮೊದಲೇ ಅಲ್ಲಿಗೆ ಧಾವಿಸಿದ ದರ್ಶನ್ ಅವರ ಬಾಡಿಗಾರ್ಡ್ ಆತನನ್ನು ಹಿಡಿದು ವೇದಿಕೆಯಿಂದ ಹೊರ ಕಳುಸಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು ಬಾಡಿಗಾರ್ಡ್ ವರ್ತನೆ ಬಗ್ಗೆ ಜನ ಬೇಸರಿಸಿಕೊಂಡು ರಿಪ್ಲೈ ಮಾಡುತ್ತಿದ್ದಾರೆ ಮತ್ತು ದರ್ಶನ್ ಅವರು ಅವವ ಎದುರಿಗೆ ಹೀಗಾಗುತ್ತಿದ್ದರೂ ತಡೆಯದೆ ಸುಮ್ಮನಿದ್ದರಾ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲಿ ನಂತರ ಏನಾಯ್ತು ಎಂದು ಸರಿಯಾದ ಮಾಹಿತಿ ಇಲ್ಲ ಆದರೆ ದರ್ಶನ್ ಅವರು ಖಂಡಿತವಾಗಿ ಆ ವ್ಯಕ್ತಿಯನ್ನು ಅಪ್ಪಿಕೊಂಡು ಮಾತನಾಡಿಸಿ ಕಳುಹಿಸಿದ್ದಾರೆ ಎನ್ನುವ ನಂಬಿಕೆ ಅವರ ಅಭಿಮಾನಿಗಳಲ್ಲಿ ಇದೆ.

ಸೆಲೆಬ್ರೆಟಿಗಳು ಈ ರೀತಿ ಹೊರ ಹೋದಾಗ ಅವರ ಮೇಲೆ ಜನ ಅಭಿಮಾನದಿಂದ ಮುಗಿ ಬೀಳುವುದು ಸಹಜ ಆದರೆ ಅವರನ್ನು ರಕ್ಷಿಸುವ ಹೊಣೆ ಕೂಡ ಅವರ ಬಾಡಿಗಾರ್ಡ್ ಗಳಿಗೆ ಇರುತ್ತದೆ. ಈ ಬಗ್ಗೆ ದರ್ಶನ್ ಅವರಿಗೆ ಮಾತ್ರವಲ್ಲದೇ ಬೇರೆ ಹೀರೋಗಳ ಬಾಡಿಗಾರ್ಡ್ ಗಳು ಮತ್ತು ಅಭಿಮಾನಿಗಳ ನಡುವೆ ಕೂಡ ಸಾಕಷ್ಟು ಸಲ ಸಂಘರ್ಷಗಳಾಗಿವೆ. ಇದು ಅಂತಹದೊಂದು ಸಾಧಾರಣ ಘಟನೆ ಎನ್ನುತ್ತಿದ್ದಾರೆ ಕೆಲವರು.

ರಾತ್ರೋರಾತ್ರಿ ಯಾರಿಗೂ ತಿಳಿಯದ ಹಾಗೇ ಗುಟ್ಟಾಗಿ ಮದುವೆಯಾದ ರಶ್ಮಿಕಾ & ವಿಜಯ್ ದೇವರಕೊಂಡ ಮದುವೆ ಫೋಟೋ ವೈರಲ್.

 

ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುವುದು ಸೆಲೆಬ್ರಿಟಿಗಳ ಬಗ್ಗೆ. ಸೆಲೆಬ್ರಿಟಿಗಳ ಮದುವೆ ಸುದ್ದಿ, ಎಂಗೇಜ್ಮೆಂಟ್ ಸುದ್ದಿ, ಲವ್, ಬ್ರೇಕ್ ಅಪ್, ಸಿನಿಮಾಗಳ ಫ್ಲಾಫ್, ಸಕ್ಸಸ್ ಹೀಗೆ ಪ್ರತಿಯೊಂದು ವಿಷಯವು ಕೂಡ ನೆಟ್ಟಿಗರಿಗೆ ಮಾತನಾಡಲು ಒಂದು ವಿಷಯ. ಸೋಶಿಯಲ್ ಮೀಡಿಯಾ ಅಂದಮೇಲೆ ಹೆಚ್ಚಾಗಿ ಅಲ್ಲಿ ಸೆಲೆಬ್ರಿಟಿಗಳಲ್ಲಿ ಸುದ್ದಿ ಇರುತ್ತದೆ ಅದರಲ್ಲಿ ಸತ್ಯವೆಷ್ಟು ಸುಳ್ಳೆಷ್ಟು ಇರುತ್ತದೆ ಗೊತ್ತಿಲ್ಲ.

ಆದರೆ ಆಗಾಗ ಇದಕ್ಕೆ ಸಾಕ್ಷಿ ಎನ್ನುವ ಹಾಗೆ ಕೆಲವು ಫೋಟೋಗಳ ಜೊತೆ ಸುದ್ದಿ ಅಪ್ಲೋಡ್ ಆಗಿ ಬಿಡುತ್ತದೆ. ಹೀಗೆ ಖ್ಯಾತ ಸ್ಟಾರ್ ಜೋಡಿಯೊಂದು ಮದುವೆ ಆಗಿದೆ ಎನ್ನುವ ಸುದ್ದಿ ಒಂದು ಫೋಟೋ ಜೊತೆ ಶೇರ್ ಆಗಿದೆ. ಕರ್ನಾಟಕದಲ್ಲಿ ಟ್ರೋಲಿಂಗ್ ಹೀರೋಯಿನ್ ಆಗಿರುವ ರಶ್ಮಿಕ ಮಂದಣ್ಣ ಅವರು ದೇಶದಾದ್ಯಂತ ನ್ಯಾಷನಲ್ ಕ್ರಷ್ ಎಂದು ಕರೆಸಿಕೊಳ್ಳುತ್ತಿದ್ದಾರೆ.

ರಶ್ಮಿಕ ಮಂದಣ್ಣ ಅವರಿಗೆ ಕಿರಿಕ್ ಪಾರ್ಟಿ ಸಿನಿಮಾ ಅದೃಷ್ಟ ಭಾಗ್ಯ ತೆಗೆದರೆ ತೆಲುಗಿನಲ್ಲಿ ರಿಲೀಸ್ ಆದ ಗೀತ ಗೋವಿಂದ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಟ್ಟಿತು. ಆ ಸಿನಿಮಾದಲ್ಲಿ ವಿಜಯ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಅವರ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ವರ್ಕ್ ಆಗಿದ್ದು ರಶ್ಮಿಕ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿಡಲು ಇದೇ ಕಾರಣ ಕೂಡ ಆಗಿತ್ತು ಎನ್ನುವ ಸುದ್ದಿಯು ಹರಿದಾಡಿತ್ತು.

ತನ್ನ ಮೊದಲ ಸಿನಿಮಾದ ಹೀರೋ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ರಶ್ಮಿಕ ಮಂದಣ್ಣ ಅವರು ಪರಭಾಷೆಗಳಿಂದ ಶುರುವಾದ ಮೇಲೆ ಬಣ್ಣ ಬದಲಾಯಿಸಿದರು. ಮಾಡಿಕೊಂಡಿದ್ದ ನಿಶ್ಚಿತಾರ್ಥ ಮುರಿದುಕೊಂಡ ರಶ್ಮಿಕ ಮಂದಣ್ಣ ಅವರು ತಮಿಳು ತೆಲುಗು ಮತ್ತು ಹಿಂದಿ ಸಿನಿಮಾಗಳತ್ತ ಮುಖ ಮಾಡಿ ಬಿಝಿ ಆದರು. ತೆಲುಗಿನಲ್ಲಿ ಕೆಲವು ಸಮಯದವರೆಗೆ ಒಳ್ಳೊಳ್ಳೆ ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ಕಾಣಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಅವರಿಗೆ ವಿಜಯ ದೇವರಕೊಂಡ ಅವರ ಜೊತೆ ನಟಿಸಿದ ಸಿನಿಮಾಗಳು ವಿಶೇಷ.

ಯಾಕೆಂದರೆ ಎಲ್ಲಾ ಸಿನಿಮಾಗಳಿಗಿಂತಲೂ ವಿಜಯ ದೇವರಕೊಂಡ ಅವರ ಜೊತೆಗಿನ ಸಿನಿಮಾ ಹೆಚ್ಚು ಹಿಟ್ ಆಗುತ್ತಿತ್ತು. ಗೀತ ಗೋವಿಂದಂ, ಡಿಯರ್ ಕಾಮ್ರೆಡ್ ಹೀಗೆ ಎಲ್ಲಾ ಸಿನಿಮಾಗಳಲ್ಲೂ ಇವರಿಬ್ಬರ ಜೋಡಿ ಮೋಡಿ ಮಾಡಿದ್ದು ಇಷ್ಟಕ್ಕೆ ನಿಲ್ಲದ ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಸುದ್ದಿ ಸಿನಿಮಾ ಮಾತ್ರ ಅಲ್ಲದೆ ಇವರು ಆಚೆ ಈಚೆ ಕೂಡ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ವದಂತಿ ಸೃಷ್ಟಿಸಿತ್ತು.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಕೂಡ ವಿದೇಶಕ್ಕೆ ಟ್ರಿಪ್ ಹೋಗಿ ಫೋಟೋ ತೆಗೆಸಿಕೊಂಡಿರುವ ಫೋಟೋಗಳು ಕೂಡ ವೈರಲ್ ಆಗಿದ್ದವು. ಇವರಿಬ್ಬರು ಏನು ಇಲ್ಲ ಎಂದು ಹೇಳಿಕೊಂಡರೂ ಸಹಾ ಇವರಿಬ್ಬರ ಮಧ್ಯೆ ಸಂಬಂಧ ಇದೆ ಎನ್ನುವ ರೀತಿಯೇ ಜನರಿಗೆ ತೋರುತ್ತದೆ. ಸದ್ಯಕ್ಕೆ ಇವರಿಬ್ಬರು ಮದುವೆಯಾಗಿಯೇ ಬಿಟ್ಟಿದ್ದಾರೆ ಎನ್ನುವಂತಹ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಆದರೆ ಇದು ನೋಡಲು ಎಡಿಟೆಡ್ ಆಗಿರುವ ಫೋಟೋ ರೀತಿ ಇದ್ದು ಮಧು ಮಕ್ಕಳ ಗೆಟಪ್ ಅಲ್ಲಿ ವಿಜಯ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಕಂಗೊಳಿಸುತ್ತಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗುತ್ತಿದ್ದಂತೆ ನೆಟ್ಟಿಗರು ಮಾತ್ರ ಕಾಮೆಂಟ್ಗಳಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ.

ಸದ್ಯಕ್ಕೆ ಸಿನಿಮಾ ಕೆಲಸಗಳಲ್ಲಿ ಬಹಳ ಬ್ಯುಸಿ ಆಗಿ ಹೆಸರು ಮಾಡ್ತಿರುವ ರಶ್ಮಿಕ ಮಂದಣ್ಣ ಅವರು ಮದುವೆ ಬಗ್ಗೆ ಮಾತೇ ಎತ್ತಿಲ್ಲ. ವಿಜಯ ದೇವರಕೊಂಡ ಅವರು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಮಾಡುವತ್ತ ಗಮನಹರಿಸುತ್ತಿದ್ದು ಅವರು ಸಹ ಎಲ್ಲಿಯೂ ಮದುವೆಯಾಗುವ ಬಗ್ಗೆ ಮಾತನಾಡಿಲ್ಲ. ಆದರೆ ಇದ್ದಕ್ಕಿದ್ದಂತೆ ಎಡಿಟೆಡ್ ಆಗಿ ಶೇರ್ ಆಗಿರುವ ಈ ಫೋಟೋ ಹೊಸ ಅನುಮಾನಗಳನ್ನು ಹುಟ್ಟು ಹಾಕುತ್ತಿರುವುದಂತೂ ನಿಜ.

ಎಲ್ಲಾ ಹೀರೋಗಳು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ ನೀವ್ಯಾಕೆ ಮಾಡುತ್ತಿಲ್ಲ ಎಂದು ಗಣೇಶ್ ಗೆ ಪ್ರಶ್ನೆ ಕೇಳಿದಾಗ ಅವರು ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ಮೆಚ್ಚುವಂತಿದೆ.

 

ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗುತ್ತಿದೆ ಹೌದು 2017 ರಲ್ಲಿ ತೆರೆಕಂಡ ಕೆಜಿಫ್ ಸಿನಿಮಾದ ನಂತರ ಬಂದಂತಹ ಕನ್ನಡದ ಬಹುತೇಕ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರ ಹೊಮ್ಮಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ತೆರೆಕಂಡ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿತ್ತು ಕನ್ನಡ ಮತ್ತು ತೆಲುಗುನಲ್ಲಿ ಇದು ಬಿಡುಗಡೆಯಾಯಿತು.

ತದನಂತರ ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಧೃವ ಸರ್ಜಾ ಅಭಿನಯದ ಪೊಗರು ಸಿನಿಮಾ ಕೂಡ ಕನ್ನಡ ಮತ್ತು ತೆಲಗಿನಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯಾ ಸಿನಿಮಾವಾಯಿತು. ಇದಾದ ನಂತರ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜಾ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಸುಮಾರು ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಇದನ್ನು ಹೊರತು ಪಡಿಸಿದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಸುಮಾರು ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇವೆಲ್ಲವನ್ನು ನೋಡುತ್ತಿದ್ದರೆ ಇತ್ತೀಚಿನ ದಿನದಲ್ಲಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಪ್ರತಿಯೊಂದು ಸಿನಿಮಾ ಕೂಡ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಗೋಲ್ಡನ್ ಸ್ಟಾರ್ ಗಣೇಶ ಅವರು ಮಾತ್ರ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಘಟನೆ ಮಾಡಿಲ್ಲ.

ಈ ಬಗ್ಗೆ ಸಂದರ್ಶನಗಾರರು ಗಣೇಶ ಅವರಿಗೆ ನೇರವಾಗಿ ಪ್ರಶ್ನೆಯನ್ನು ಕೇಳಿದ್ದಾರೆ ಇಂದು ನೀವು ಯಾಕೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟನೆ ಮಾಡಿಲ್ಲ, ಇದಕ್ಕೆ ನಿಜವಾದ ಕಾರಣವೇನು ಅಂತ ಪ್ರಶ್ನೆ ಕೇಳಿದ್ದಾರೆ. ಮಾಧ್ಯಮದವರು ಕೇಳಿದಂತಹ ಪ್ರಶ್ನೆಗೆ ಗಣೇಶ್ ಕೊಟ್ಟ ಉತ್ತರ ಇದೀಗ ಎಲ್ಲೆಡೆ ವೈರಲ್ ಆಗಿದೆ ಅಷ್ಟೇ ಅಲ್ಲದೆ ಸಾಕಷ್ಟು ಅಭಿಮಾನಿಗಳ ಮೆಚ್ಚಗೆಯನ್ನು ಕೂಡ ಪಡೆದುಕೊಂಡಿದೆ.

ಹೌದು ಅಷ್ಟಕ್ಕೂ ಗಣೇಶ ಹೇಳಿದ್ದಾದರೂ ಏನು ಎಂಬುದನ್ನು ನೋಡಿದರೆ ” ನಂಗೆ ಯಾವ ರೀತಿ ಎಂದರೆ ನಮ್ಮ ಸಿನಿಮಾವನ್ನು ಎಲ್ಲರೂ ನಮ್ಮ ಭಾಷೆಯಲ್ಲೇ ನೋಡಬೇಕು ಅಂತ ಆಸೆ. ಅದಾದ ಮೇಲೆ ಪ್ಯಾನ್ ಇಂಡಿಯಾಗೆ ಹೋಗಬೇಕು ಅಂತ. ಒಂದೆರಡು ಚಿತ್ರಗಳ ಮಾತುಕತೆ ನಡೀತಿದೆ. ಈ ವರ್ಷ ಮಾಡಿಕೊಂಡು ಹೋಗ್ತೇನೆ” ಎಂದು ಗಣೇಶ್ ಉತ್ತರಿಸಿದರು.

ಈಗಾಗಲೇ ಕಾಂತಾರ ಸಿನಿಮಾ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಬಿಡುಗಡೆಯಾಗಿದ್ದು ಈ ಸಿನಿಮಾವನ್ನು ಎಲ್ಲರೂ ನೋಡಿ ಮೆಚ್ಚಿಕೊಂಡು ತದನಂತರ ಪರಭಾಷೆಯಲ್ಲಿ ಡಬ್ ಮಾಡಿ ಕೊಡುವಂತೆ ಕೇಳಿದರು. ಕನ್ನಡದಲ್ಲಿ ಬಿಡುಗಡೆಯಾದ ನಂತರ ಮೊಟ್ಟಮೊದಲ ಬಾರಿಗೆ ಬೇರೆ ಭಾಷೆಗೆ ಡಬ್ಬಿಂಗ್ ಆಗಿದ ಸಿನಿಮಾ ಅಂದರೆ ಅದು ಕಾಂತಾರ ಹಾಗಾಗಿ ಇದೊಂದು ಪ್ಯಾನ್ ಇಂಡಿಯಾ ಸಿನೆಮಾ ಅಂತ ಹೇಳಬಹುದು.

ಗಣೇಶ ಅವರು ಕೂಡ ಇಂತಹದ್ದೇ ಒಂದು ಆಲೋಚನೆಯನ್ನು ಮಾಡಿದ್ದಾರೆ ಸಾಮಾನ್ಯವಾಗಿ ತಮಿಳು ತೆಲುಗು ಸಿನಿಮಾದಲ್ಲಿ ಬಿಡುಗಡೆಯಾದಂತಹ ಚಿತ್ರವನ್ನು ಕರ್ನಾಟಕದಲ್ಲಿಯೂ ಕೂಡ ಬಿಡುಗಡೆ ಮಾಡಲಾಗುತ್ತದೆ. ಅದನ್ನು ನಾವು ನೋಡುತ್ತೇವೆ ಮೂಲ ಭಾಷೆಯಲ್ಲಿ ಇದ್ದರೂ ಕೂಡ ಆ ಚಿತ್ರವನ್ನು ಮೆಚ್ಚಿಕೊಳ್ಳುತ್ತೇವೆ ಹಾಗಾಗಿ ಗಣೇಶ್ ಅವರು ಕೂಡ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದಂತಹ ಸಿನಿಮಾವನ್ನು ಕನ್ನಡದ ಭಾಷೆಯಲ್ಲಿ ಬೇರೆ ರಾಜ್ಯದವರು ಕೂಡ ನೋಡಬೇಕು ಆವಾಗಲೇ ನನಗೆ ಸಂತೋಷ.

ಈ ರೀತಿ ಯಾವಾಗ ಆಗುತ್ತದೆ ಆನಂತರ ಅಷ್ಟೇ ನಾನು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟನೆ ಮಾಡುತ್ತೇನೆ ಎಂದು ಉತ್ತರ ಕೊಟ್ಟಿದ್ದಾರೆ. ಸದ್ಯಕ್ಕೆ ಗಣೇಶ್ ಹೇಳಿರುವಂತಹ ಮಾತನ್ನು ಎಲ್ಲರೂ ಕೂಡ ಮೆಚ್ಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇದು ನ್ಯಾಯಯುತವಾದ ಹೇಳಿಕೆ ಎಂದು ಕೂಡ ಮೆಚ್ಚಿಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ.

ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಮಾಡುತ್ತಿರುವ ಸುಮಲತಾ, ಹುಡುಗಿ ಯಾರು ಗೊತ್ತ.?

ಈ ವರ್ಷ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಮಣಿಯರು ವಿವಾಹವಾಗಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದಾರೆ. ಮತ್ತೆ ಕೆಲವರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಆದಷ್ಟು ಬೇಗ ಹಸೆ ಮಣೆ ಏರುವ ನಿರ್ಧಾರ ಮಾಡಿದ್ದಾರೆ. ಇನ್ನು ಕೆಲವು ಕಲಾವಿದರು ಈ ವರ್ಷ ತಾಯಿ ತಂದೆಯಾದ ಸಂಭ್ರಮದಲ್ಲಿದ್ದಾರೆ. ಈ ವರ್ಷ ಸ್ಯಾಂಡಲ್ವುಡ್ ಗೆ ಸಿನಿಮಾಗಳ ಸಕ್ಸಸ್ ಮತ್ತು ಅಲ್ಲದೆ ವೈಯಕ್ತಿಕ ಜೀವನದಲ್ಲೂ ಕೂಡ ಸೆಲೆಬ್ರಿಟಿಗಳಿಗೆ ಸಂತೋಷವನ್ನು ಕೊಟ್ಟ ವರ್ಷ ಆಗಿದೆ.

ಸದ್ಯಕ್ಕೆ ಕರ್ನಾಟಕದ ಚಂದನವನದ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರೂ ಸಹಾ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಸುಮಲತ ಅಂಬರೀಶ್ ಅವರೇ ಆಗಲಿ ಅಭಿಷೇಕ್ ಅವರೇ ಆಗಲಿ ಯಾವ ಮಾಹಿತಿ ಬಹಿರಂಗಪಡಿಸದೆ ಇದ್ದರೂ ಡಿಸೆಂಬರ್ 11ರಂದು ಜೂನಿಯರ್ ರೆಬೆಲ್ ಸ್ಟಾರ್ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದ ಅಂಗಳದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎನ್ನುವ ಸುದ್ದಿ ಬಗ್ಗೆ ಗಾಂಧಿನಗರದಲ್ಲಿ ಗುಸು-ಗುಸು ಎದ್ದಿದೆ.

ಬಲವಾದ ಮಾಹಿತಿಗಳ ಪ್ರಕಾರ ಅಭಿಷೇಕ್ ಅಂಬರೀಶ್ ಅವರು ಅರೆಂಜ್ ಮ್ಯಾರೇಜ್ ಆಗುತ್ತಿದ್ದು, ತಮ್ಮ ತಾಯಿ ಸುಮಲತಾ ಅಂಬರೀಶ್ ತೋರಿಸಿದ ಹುಡುಗಿಯ ಕೈ ಹಿಡಿಯುತ್ತಿದ್ದಾರಂತೆ. ಸುಮಲತಾ ಅಂಬರೀಶ್ ಹಾಗೂ ಅಂಬರೀಶ್ ಅವರ ಏಕೈಕ ಪುತ್ರನಾದ ಅಭಿಷೇಕ ಅಂಬರೀಶ್ ಅವರಿಗೆ ಅವರ ತಾಯಿಯು ಸರಿಹೊಂದುವ ಜೋಡಿಯನ್ನು ಹುಡುಕಿದ್ದು ಅವರು ಕೂಡ ಫೇಮಸ್ ಮಾಡೆಲ್ ಎನ್ನುವ ಮಾಹಿತಿಗಳು ಇದೆ.

ಅಂಬರೀಶ್ ಅವರು ಕನ್ನಡ ಚಿತ್ರರಂಗದ ಹೆಸರಾಂತ ನಟ ಮತ್ತು ಇಡೀ ಚಿತ್ರರಂಗಕ್ಕೆ ಯಜಮಾನನಂತೆ ಇದ್ದ ಇವರ ಅಧ್ಯಕ್ಷತೆಯಲ್ಲಿಯೇ ಎಲ್ಲಾ ಕಾರ್ಯಗಳು ಜರುಗುತ್ತಿದ್ದವು ಮತ್ತು ಇವರ ಸಮ್ಮುಖದಲ್ಲಿ ಎಲ್ಲ ವಿವಾದಗಳು ಬಗೆಹರಿಯುತ್ತಿದ್ದವು. ಸಿನಿಮಾ ರಂಗ ಮಾತ್ರವಲ್ಲದೆ ರಾಜಕೀಯದಲ್ಲಿ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅಂಬರೀಶ್ ಅವರು ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಬಹಳ ಶ್ರಮ ಪಟ್ಟವರು.

ಸಚಿವನಾಗಿ ಕೂಡ ಗುರುತಿಸಿಕೊಂಡಿದ್ದ ಇವರು ಕರ್ನಾಟಕದ ಕರ್ಣ ಎಂದು ಹೆಸರು ಹೊಂದಿದವರು. ಈಗ ಪುತ್ರ ಅಭಿಷೇಕ್ ಅಂಬರೀಶ್ ಅವರು ಕೂಡ ತಂದೆ-ತಾಯಿಯಂತೆ ಕಲೆಯನ್ನೇ ವೃತ್ತಿಯಾಗಿ ತೆಗೆದುಕೊಂಡು ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಅಮರ್ ಎನ್ನುವ ಚಿತ್ರದ ಮೂಲಕ ಲಾಂಚ್ ಆಗಿರುವ ಅಂಬರೀಶ್ ಅವರು ಮೊದಲ ಸಿನಿಮಾದಲ್ಲೇ ಭರವಸೆ ನಾಯಕ ಎನ್ನುವ ನಂಬಿಕೆ ಗಿಟ್ಟಿಸಿಕೊಂಡಿದ್ದಾರೆ.

ಈಗ ಸಾಲು ಸಾಲು ಸಿನಿಮಾ ಆಫರ್ ಗಳು ಅಭಿಷೇಕ್ ಅಂಬರೀಶ್ ಅವರನ್ನು ಹರಸಿ ಬರುತ್ತಿದ್ದರು ಜವಾಬ್ದಾರಿತವಾಗಿ ಕಥೆ ತಿಳಿದುಕೊಂಡು ಸಿನಿಮಾ ಸೆಲೆಕ್ಟ್ ಮಾಡಿಕೊಳ್ಳುತ್ತಿರುವ ಇವರು ಡೈರೆಕ್ಟರ್ ಸೂರಿ ಅವರ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಎನ್ನುವ ಸಿನಿಮಾದಲ್ಲಿ ಸದ್ಯಕ್ಕೆ ಬಿಸಿ ಆಗಿದ್ದಾರೆ ಮತ್ತು ಇವರ ಮುಂದಿನ ಚಿತ್ರವು ಕೃಷ್ಣ ಅವರ ನಿರ್ದೇಶನದಲ್ಲಿರಲಿದೆ ಕಾಳಿ ಎಂದು ಚಿತ್ರಕ್ಕೆ ಈಗಾಗಲೇ ಹೆಸರನ್ನು ನಿಗದಿಪಡಿಸಲಾಗಿದ್ದು ಕಾಂತರಾ ಸಿನಿಮಾ ನಟಿ ಸಪ್ತಮಿ ಗೌಡ ಅವರು ಇದಕ್ಕೆ ನಾಯಕಿ ಅಗಲಿದ್ದಾರೆ ಎನ್ನುವ ಮಾಹಿತಿಗಳು ಇವೆ.

ಜೊತೆಗೆ ತನ್ನ ತಾಯಿಗೆ ಜೊತೆಯಾಗಿ ರಾಜಕೀಯದಲ್ಲಿ ಕೂಡ ಗುರುತಿಸಿಕೊಂಡಿರುವ ಅಭಿಷೇಕ್ ಅಂಬರೀಶ್ ಅವರು ವಿವಾಹ ವಾಗುವ ಮೂಲಕ ಮತ್ತೊಂದು ಮೈಲಿಗಲನ್ನು ಇಡುತ್ತಿದ್ದಾರೆ. ಆದರೆ ನಿಶ್ಚಿತಾರ್ಥದ ದಿನದವರೆಗೂ ಹುಡುಗಿ ಯಾರು ಎನ್ನುವುದನ್ನು ಗುಟ್ಟಾಗಿ ಇಡಬೇಕು ಎಂದು ಸುಮಲತಾ ಅಂಬರೀಶ್ ಅವರು ಡಿಸೈಡ್ ಮಾಡಿದ್ದಾರಂತೆ. ಈ ವರ್ಷ ಎಂಗೇಜ್ಮೆಂಟ್ ಆಗುತ್ತಿರುವ ಈ ಜೋಡಿಯು ಇಷ್ಟೇ ಅದ್ದೂರಿಯಾಗಿ ಮುಂದಿನ ವರ್ಷದಲ್ಲಿ ಹಸೆಮಣೆ ಏರುವ ಸಾಧ್ಯತೆಗಳಿವೆ.

ಡಾಲಿನಾ ಮದ್ವೆ ಆಗ್ತೀರಾ ಅಂತ ಕೇಳಿದ್ಕೆ ನಟಿ ಅಮೃತ ಮಿಡಿಯಾ ಮುಂದೆ ಕೈ ಮುಗಿದು ಹೇಳಿದ್ದೇನು ಗೊತ್ತ.?

 

ನಟಿ ಅಮೃತ ಅಯ್ಯಂಗಾರ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಬೇಡಿಕೆಯ ನಟಿಯಾಗಿದ್ದಾರೆ. ಅಮೃತ ರವರು ಕೃಷ್ಣ ಹಾಗೂ ಮಿಲನಾರಾ ನಾಗರಾಜ್ ಅವರು ಜೊತೆಯಾಗಿ ನಟಿಸಿರುವ ಚಿತ್ರದ ಮೂಲಕ ಹೆಚ್ಚು ವೀಕ್ಷಕರನ್ನು ಸೆಳೆದಿದ್ದರು. ನಂತರ ಕನ್ನಡದ ನಾಯಕನಟ ಹಾಗೂ ಖಳ ನಟ ಎರಡಕ್ಕೂ ಸೈ ಎನಿಸಿಕೊಂಡ ಡಾಲಿ ಧನಂಜಯ ಅವರ ಜೊತೆ ಪಾಪ್ ಕಾರ್ನ್ ಮಂಕಿ ಟೈಗರ್ ಎಂಬ ಚಿತ್ರದಲ್ಲಿ ಮತ್ತೆ ಜನರನ್ನು ಮನರಂಜಿಸಿದ್ದರು.

ಈ ಮೂಲಕ ಜನರಿಗೆ ಹೆಚ್ಚು ಹತ್ತಿರವಾದರೂ ಈ ಚಿತ್ರವು ಅಮೃತಾ ರವರಿಗೆ ಅವರ ವೃತ್ತಿ ಜೀವನದಲ್ಲಿ ತಿರುವು ತಂದಿತು ಎಂದರೆ ತತಪ್ಪಾಗಲಾರದು. ಇನ್ನು ಅನು ಭಂಡಾರಿ ಅವರ ವಿಂಡೋಸಿತದಲ್ಲೂ ಕೂಡ ಇವರು ಅಭಿನಯಿಸಿದ್ದಾರೆ ಇದಾದ ಕೆಲವು ವರ್ಷಗಳ ನಂತರ ಮತ್ತೆ ಡಾಲಿ ಧನಂಜಯ್ ರವರ ಜೊತೆಯಾಗಿ ನಾಯಕನಟಿ ಪಾತ್ರದಲ್ಲಿ ಬಡವ ರಾಸ್ಕಲ್ ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು, ಈ ಸಿನಿಮಾ ಸೂಪರ್ ಹಿಟ್ಟಾಗಿ ಚಿತ್ರಮಂದರಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿತು. ಈ ಚಿತ್ರವು ಕೂಡ ಅಮೃತ ಅಯ್ಯಂಗಾರ್ ಅವರಿಗೆ ಒಳ್ಳೆ ಸಕ್ಸಸ್ ಅನ್ನು ತಂದು ಕೊಟ್ಟಿತ್ತು.

ಸದ್ಯ ನಟಿ ಅಮೃತ ಅಯ್ಯಂಗಾರ್ ಅವರು ಮಿಲನ ರಾಂಕ್ ರಾಜು ರವರ ಜೊತೆ ‘ಓ’ ಎಂಬ ಚಿತ್ರದ ಮೂಲಕ ಕನ್ನಡಿಗರನ್ನು ಮನೋರಂಜಿಸಲು ಮಾತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಡಾರ್ಲಿಂಗ್ ಕೃಷ್ಣ, ನಿಷ್ಚಿಕ, ಮೇಘನಾ ಶೆಟ್ಟಿ ರವರು ನಟಿಸಿರುವ ದಿಲ್ ಪಸಂದ್ ಚಿತ್ರದ ಬಿಡುಗಡೆಯ ದಿನದಂದೇ ಬಿಡುಗಡೆಯಾಗುತ್ತಿರುವುದು ವಿಶೇಷ ಇದರಿಂದ ಈ ಎರಡು ಚಿತ್ರಕ್ಕೂ ಕೊಂಚ ಜಟಾಪಟಿ ನಡೆಯುತ್ತಿದೆ.

ಹಾಗಾಗಿ ಅಮೃತ ಅಯ್ಯಂಗಾರ್ ಹಾಗೂ ಮಿಲನ ನಾಗರಾಜ್ ರವರು ಇಬ್ಬರು ಸಿನಿಮಾ ಪ್ರೋಮೋಶನ್ಗಾಗಿ ಹೆಚ್ಚು ಓಡಾಟ ನಡೆಸಿದ್ದಾರೆ ಎಂದರೆ ಸುಳ್ಳಲ್ಲ. ಹೌದು ಈ ಚಿತ್ರದ ಪ್ರಮೋಶನ್ ವೇಳೆ ಸಂದರ್ಶನ ಒಂದರಲ್ಲಿ ಮಾತಾಡಿದ ಅಮೃತರವರು ಇವರಿಗೆ ಆಟೋ ಹಾಗೂ ಬೈಕ್ ಎಂದರೆ ಇಷ್ಟ, ಕಾರ್ ಎಂದರೆ ಇಷ್ಟ ಇಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಕಾರಣ ಅಮೃತ ರವರು ಚಿಕ್ಕ ವಯ್ಸಿನಿಂದ ಆಟೋದಲ್ಲಿ ಹೆಚ್ಚಾಗಿ ಓಡಾಡುತ್ತಿದ್ದಾರಂತೆ, ಇನ್ನು ಕಾರಲ್ಲಿ ಕಿಟಕಿ ಗಳನ್ನೂ ಸದಾ ಮುಚ್ಚುವ ಕಾರಣದಿಂದಾಗಿ ಕಾರನ್ನು ಇವರು ಇಷ್ಟ ಪಡುವುದಿಲ್ಲ ಎಂದು ತಿಳಿಸಿದ್ದಾರೆ.

ಇದಾದ ನಂತರ ತಮ್ಮ ಚಿತ್ರಗಳ ಬಗ್ಗೆ ಮಾತಾಡಿದ ಅಮೃತ ಅಯ್ಯಂಗಾರ್ ಅವರು ಇವರಿಗೆ ಲವ್ ಮಾಕ್ಟೈಲ್ ಚಿತ್ರವೆಂದರೆ ತುಂಬಾ ಇಷ್ಟ ಅಂತೆ, ಹಾಗೂ ಬಡವ ರಾಷ್ಕಲ್ ಚಿತ್ರವು ಇವರ ಕೆರೆಯರ್ ಡೆವಲಪ್ಮೆಂಟ್ ಮಾಡಿರುವುದರಿಂದ ಈ ಎರಡು ಚಿತ್ರವು ಅವರ ಕಣ್ಣುಗಳಂತೆ. ಇನ್ನೂ ಇವರ ನೆಚ್ಚಿನ ನಟಿಯರ ಬಗ್ಗೆ ಮಾತನಾಡಿದ ಅಮೃತ ರವರು ರಮ್ಯ ಹಾಗೂ ರಕ್ಷಿತವೆಂದರೆ ಇಷ್ಟ ಎಂದು ಹೇಳಿಕೊಂಡಿದ್ದಾರೆ ಇನ್ನು ರಮ್ಯಾ ರವರ ಕ್ಲಾಸಿಕ್ ಲುಕ್ ಹಾಗೂ ರಕ್ಷಿತಾ ರವರ ಮಾಸ್ ಲುಕ್ ಇವರಿಗೆ ಇಷ್ಟ ಎಂದು ಹೇಳಿದ್ದಾರೆ.

ಇನ್ನು ಇವರ ಮದುವೆಯ ಬಗ್ಗೆ ಕೇಳಿದಾಗ ಅಮೃತಾ ಅವರು ಹೀಗೆ ಉತ್ತರಿಸಿದ್ದಾರೆ, ನಾನು ನನ್ನ ಲೈಫಿನಲ್ಲಿ ತುಂಬಾ ಚೆನ್ನಾಗಿದ್ದೇನೆ. ನಾನು ಸಿಂಗಲ್ ಆಗಿರುವುದಕ್ಕೆ ಹೆಚ್ಚು ಇಷ್ಟ ಪಡುತ್ತೇನೆ ನನ್ನನ್ನು ನಾನು ನೋಡಿಕೊಳ್ಳುವುದೇ ಕಷ್ಟವಾಗಿದೆ ಅವನನ್ನು ಎಲ್ಲಿ ನೋಡಿಕೊಳ್ಳಲಿ ನಾನು ಬೇರೆಯವರ ಜೀವನದಲ್ಲಿ ಹೋಗಿ ಅವನ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ ಹಾಗಾಗಿ ನಾನು ಸಿಂಗಲ್ ಆಗಿ ಇರಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಇವಾ ಹೆಬ್ಬುಲಿ ಅಂತೆ, ನಿಜವಾದ ಹುಲಿ ಬಂದ್ರೆ ಓಡಿ ಹೋದನ್, ನಟ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟ ವಿನಯ್ ಗುರೂಜಿ ವಿಡಿಯೋ ವೈರಲ್.

 

 

ಗೌರಿ ಗದ್ದೆಯ ಗುರೂಜಿ, ಅವಧೂತ ಹೀಗೆಲ್ಲ ಭಕ್ತಾಧಿಗಳಿಂದ ಬಿರುದು ಪಡೆದಿರುವ ವಿನಯ್ ಗುರೂಜಿ ಅವರು ನೋಡುವುದಕ್ಕೆ ಬಹಳ ಸರಳವಾಗಿ ಕಾಣುತ್ತಾರೆ. ಇನ್ನು ಎಳೆ ವಯಸ್ಸಿನ ಚಿಕ್ಕ ಹುಡುಗನಂತೆ ಇರುವ ಇವರ ಬಾಯಿಯಿಂದ ಬರುವ ಪ್ರವಚನದ ನುಡಿಗಳು ಮಾತ್ರ ಯಾವ ಮೇಧಾವಿಗಿಂತಲೂ ಕಡಿಮೆ ಇಲ್ಲ. ಈ ಕಾರಣದಿಂದಲೇ ಇವರನ್ನು ದೇವರ ಅಂಶ ಎಂದು ಜನ ನಂಬಿ ಇವರ ಆಶ್ರಮಕ್ಕೆ ಮುಗಿ ಬಿದ್ದು ಹೋಗುತ್ತಾರೆ.

ಈಗಾಗಲೇ ಕರ್ನಾಟಕದಾದ್ಯಂತ ವಿನಯ್ ಗುರೂಜಿ ಅವರ ಹೆಸರು ಸಾಕಷ್ಟು ಜನರಿಗೆ ತಿಳಿದಿದೆ. ಅದರಲ್ಲೂ ರಾಜಕಾರಣಿಗಳಿಗಂತು ವಿನಯ್ ಗುರೂಜಿ ಅವರೇ ಫೇವರಿಟ್ ಗುರೂಜಿ ಪಕ್ಷಗಳ ಬೇಧವಿಲ್ಲದೆ ಎಲ್ಲಾ ರಾಜಕೀಯ ವ್ಯಕ್ತಿಗಳು ಕೂಡ ವಿನಯ್ ಗುರೂಜಿ ಅವರನ್ನು ಮನೆಗೆ ಹಾಗೂ ಆಫೀಸಿಗೆ ಕರೆಸಿ ಪೂಜೆ ಮಾಡಿಸುತ್ತಾರೆ ಮತ್ತು ಇವರೇ ಆಶ್ರಮಕ್ಕೆ ತೆರಳಿ ಅವರ ಆಶೀರ್ವಾದ ಪಡೆದು ಬರುತ್ತಾರೆ.

ಇಷ್ಟೆಲ್ಲಾ ಫೇಮಸ್ ಆಗಿರುವ ವಿನಯ್ ಗುರೂಜಿಗೆ ರಾಜಕೀಯ ವ್ಯಕ್ತಿಗಳನ್ನು ಹೊರತುಪಡಿಸಿ ಸಾಮಾನ್ಯರು ಕೂಡ ಅನುಯಾಯಿಗಳಾಗಿದ್ದಾರೆ. ಇದಕ್ಕೆಲ್ಲ ಕಾರಣ ಅವರು ಮಾತನಾಡುವ ಆಧ್ಯಾತ್ಮಿಕ ವಿಷಯ. ಇನ್ನು ಸಿನಿಮಾರಂಗದವರ ವಿಚಾರವಾಗಿ ಹೇಳುವುದಾದರೆ ವಿನಯ್ ಗುರೂಜಿ ಅವರನ್ನು ಬಹಳ ನಂಬುವ ಜನರು ಸಿನಿಮಾ ರಂಗದಲ್ಲಿ ಇದ್ದಾರೆ.

ಈಗ ಕಾಂತರಾ ಸಿನಿಮಾ ಸಕ್ಸಸ್ ಅಲ್ಲಿ ತೇಲುತ್ತಿರುವ ರಿಷಭ್ ಶೆಟ್ಟಿ ಅವರು ಕೂಡ ವಿನಯ್ ಗುರೂಜಿ ಅವರ ಭಕ್ತರೇ. ಇವರ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎನ್ನುವ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಅದು ಅವಾರ್ಡ್ ತಂದು ಕೊಡುತ್ತದೆ ಎಂದು ವಿನಯ್ ಗುರೂಜಿ ಭವಿಷ್ಯವನ್ನು ಕೂಡ ನುಡಿದಿದ್ದರು ಆ ವಿಷಯ ನಿಜವಾದ ಬಳಿಕ ಇವರ ಮೇಲಿದ್ದ ಭಕ್ತಿ ಇನ್ನೂ ಹೆಚ್ಚಾಗಿದೆ.

ದುನಿಯಾ ವಿಜಯ್, ಫೈಟ್ ಮಾಸ್ಟರ್ ರವಿವರ್ಮ, ಜೀ ಕನ್ನಡ ಫೇಮಸ್ ಆಂಕರ್ ಆನಂದ್ ಮತ್ತು ಆನಂದ್ ಅವರ ತಮ್ಮ ಮೀಡಿಯಾದಲ್ಲಿ ಪ್ರಚಲಿತವಾಗಿರುವ ವ್ಯಕ್ತಿ ಅರುಣ್ ಹೀಗೆ ಸಾಲು ಸಾಲು ಮಂದಿ ಸೆಲಬ್ರಿಟಿಗಳು ಅವಧೂತರ ಶಿಷ್ಯರಾಗಿದ್ದಾರೆ. ಸಿನಿಮಾ ಮಂದಿ ಜೊತೆ ಇಷ್ಟು ನಂಟು ಹೊಂದಿರುವ ವಿನಯ್ ಗುರೂಜಿ ಅವರು ಕನ್ನಡದ ಸೂಪರ್ ಸ್ಟಾರ್ ಒಬ್ಬರಿಗೆ ಬಾಯಿಗೆ ಬಂದ ಹಾಗೆ ಮಾತನಾಡಿ ವಿವಾದ ಮಾಡಿಕೊಂಡಿದ್ದಾರೆ.

ಒಂದು ರೀತಿಯಲ್ಲಿ ಇವರನ್ನು ವಿವಾದದ ಗುರೂಜಿಯಂತಲೇ ಕರೆಯಬಹುದು. ಯಾಕೆಂದರೆ ಪದೇಪದೇ ಒಂದಲ್ಲ ಒಂದು ವಿಚಾರಕ್ಕೆ ಇವರು ಕಾಂಟ್ರವರ್ಸಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಕರ್ನಾಟಕದಲ್ಲಿ ಕಿಚ್ಚ ಹೆಬ್ಬುಲಿ ಎಂದು ಕರೆಸಿಕೊಳ್ಳುತ್ತಿರುವ ಸುದೀಪ್ ಅವರನ್ನು ಅವಮಾನ ಮಾಡುವ ರೀತಿ ಮಾತನಾಡಿರುವ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ವಿನಯ್ ಗುರೂಜಿ ಅವರು ಮಾತನಾಡಿರುವುದು ಸೆರೆ ಆಗಿದೆ ಆದರೆ ಇವರ ಅಕ್ಕಪಕ್ಕದಲ್ಲಿ ಯಾರಿದ್ದರು ಎನ್ನುವುದು ಮಾತ್ರ ತಿಳಿದಿಲ್ಲ. ರಾಜ ರೋಷವಾಗಿ ವಿನಯ್ ಗುರೂಜಿಯವರು ಸುದೀಪ್ ಅವರ ಹೆಸರನ್ನು ತೆಗೆದುಕೊಂಡೆ ಮಾತನಾಡಿದ್ದಾರೆ. ಹುಡುಗರೆಲ್ಲ ಇವನ ಸಿನಿಮಾವನ್ನು ನೋಡಿದರೆ ರೋಮಾಂಚನವಾಗುತ್ತದೆ ಎಂದು ಹೇಳುತ್ತಾರೆ ಮಾಣಿಕ್ಯ ಎಂದು ಹೇಳುತ್ತಾರೆ, ಹೆಬ್ಬುಲಿ ಎಂದು ಕರೆಯುತ್ತಾರೆ.

ಇವನು ಯಾವ ಸೀಮೆ ಹೆಬ್ಬುಲಿ ಒಂದು ನಿಜವಾದ ಹುಲಿ ಅಥವಾ ಸಿಂಹ ಬಂದರೆ ಓಡಿ ಹೋಗಿ ಬಿಡುತ್ತಾನೆ ಎಂದು ವಿನಯ್ ಗುರೂಜಿ ಅವರು ಮಾತನಾಡಿರುವುದು ಸುದೀಪ್ ಅಭಿಮಾನಿಗಳು ಗರಂ ಆಗುವಂತೆ ಮಾಡಿದೆ. ಇದೆಲ್ಲ ಆಗಿ ಬಹಳ ಸಮಯ ಕಳೆದಿದ್ದರೂ ಈಗ ರೇಣುಕಾಚಾರ್ಯರ ಅಣ್ಣನ ಮಗನ ವಿಷಯದಲ್ಲಿ ಅವಧೂತರ ಹೆಸರು ತಳಕು ಹಾಕಿಕೊಂಡಿರುವುದರಿಂದ ಇವರ ಹಳೆಯ ವಿಡಿಯೋಗಳು ಮತ್ತೆ ವೈರಲ್ ಆಗುತ್ತಿವೆ.

ಡಾ.ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಸಮಯದಲ್ಲಿ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರಿಗೆ ಚಪ್ಪಲಿ ಎಸೆದವರು ಯಾರು & ಯಾಕೆ ಗೊತ್ತ.?

 

ಕರ್ನಾಟಕದ ಯಾವುದೇ ವ್ಯಕ್ತಿ ತಮ್ಮ ಜೀವಮಾನ ಸಾಧನೆಗೆ ಪಡೆಯುವಂತಹ ಪ್ರಶಸ್ತಿ ಎಂದರೆ ಅದು ಕರ್ನಾಟಕ ರತ್ನ ಪ್ರಶಸ್ತಿ, ಯಾವುದಾದರೂ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮಾಡಿದಾಗ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇನ್ನು ಈ ಪ್ರಶಸ್ತಿಯನ್ನು 1992 ಇಸ್ವಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರು ಕರ್ನಾಟಕ ಸರ್ಕಾರದ ವತಿಯಿಂದ ಇದನ್ನು ಶುರು ಮಾಡುತ್ತಾರೆ.

ಸದ್ಯ ಈವರೆಗೂ 10 ಜನರಿಗೆ ಕರ್ನಾಟಕ ಪ್ರಶಸ್ತಿಯನ್ನು ನೀಡಲಾಗಿದೆ. ಕನ್ನಡ ಚಿತ್ರರಂಗದ ಹಿರಿಯ ಹಾಗೂ ಮಹಾ ನಟ, ನಾನಾ ಪಾತ್ರಗಳಿಗೆ ಜೀವ ತುಂಬಿ ಜೀವಮಾನ ಸಂಪೂರ್ಣವಾಗಿ ತಮ್ಮ ಕಲೆಗೆ ಬೆಲೆ ಕೊಟ್ಟು, ಕರ್ನಾಟಕ ಜನರ ಉಸಿರಲ್ಲಿ ಬೆರೆತು ಹೋಗಿರುವಂತಹ, ಕರ್ನಾಟಕದ ಮುತ್ತುರತ್ನವಾದ ಡಾಕ್ಟರ್ ರಾಜಕುಮಾರ್ ಅವರಿಗೆ ಈ ಪ್ರಶಸ್ತಿಯು ಸಂದಿದೆ. ಅದೇ ರೀತಿ ಡಾಕ್ಟರ್ ರಾಜಕುಮಾರ್ ಅವರ ಪತ್ರನಾದ ಪುನೀತ್ ರಾಜಕುಮಾರರವರಿಗೂ ಕರ್ನಾಟಕ ರತ್ನ ಪ್ರಶಸ್ತಿ ದೊರೆತಿರುವುದು ವಿಶೇಷ‌

ಆದರೆ ಪುನೀತ್ ರವರಿಗೆ ಸಮಾಜ ಸೇವೆಯ ಕಾರಣದಿಂದಾಗಿ ಈ ಪ್ರಶಸ್ತಿ ದೊರಕಿದೆ ಎಂದರೆ ಸುಳ್ಳಲ್ಲ ಇನ್ನು ಯಾವುದಾದರೂ ಪ್ರಶಸ್ತಿಯನ್ನು ಮೊದಲು ಶುರು ಮಾಡುವಾಗ ಕರ್ನಾಟಕ ಮುಖ್ಯ ಸದಸ್ಯರ ಅನುಮತಿ ಇರಬೇಕು ಹಾಗೆ ಮೊದಲು ಕರ್ನಾಟಕ ರತ್ನ ಪ್ರಶಸ್ತಿಯು ಕೊಡಬೇಕು ಎಂದು ಶುರು ಮಾಡಿದಾಗ ಮೊದಲು ಕೇಳಿ ಬಂದ ಹೆಸರೇ ಡಾಕ್ಟರ್ ರಾಜಕುಮಾರ್ ಅವರದು ಆದರೆ ಡಾಕ್ಟರ್ ರಾಜಕುಮಾರ್ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು.

ರಾಜ್ ಕುಮಾರ್ ಅವರು ಕರ್ನಾಟಕ ವೃತ್ತ ಪ್ರಶಸ್ತಿಯನ್ನು ತಿರಸ್ಕರಿಸಲು ಕಾರಣವೇನೆಂದರೆ ಕರ್ನಾಟಕದ ಸಾಹಿತ್ಯದಲ್ಲಿ ಸಾಧನೆಯನ್ನು ಸಾಧಿಸಿದ ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದ ರಾಷ್ಟ್ರಕವಿ ಕುವೆಂಪು ಅವರಿಗೆ ನೀಡಿ ಗೌರವಿಸಬೇಕು ಎಂಬುವುದು ಡಾಕ್ಟರ್ ರಾಜಕುಮಾರ್ ಅವರ ಇಚ್ಛೆಯಾಗಿತ್ತು. ರಾಜಕುಮಾರ ಎಲ್ಲರಿಗೂ ತಿಳಿದಂತೆ ಮೊದಲನೆಯದು ಸರಳ ಹಾಗೂ ಮುಕ್ತ ಮನಸ್ಸಿನವರು ಅವರಿಗೆ ಸಾಹಿತ್ಯದಲ್ಲಿ ಪಾಂಡಿತ್ಯವನ್ನು ಪಡೆದ ವರನ್ನು ಬಹಳ ಗೌರವದಿಂದ ನೋಡುತ್ತಿದ್ದರು ಹಾಗಾಗಿ ಈ ಗೌರವೂ ತನಗಿಂತಲೂ ಮೊದಲು ಅವರಿಗೆ ಸಲ್ಲಬೇಕು ಎಂಬುವುದು ಡಾಕ್ಟರ್ ರಾಜಕುಮಾರ್ ಅವರ ಉದ್ದೇಶವಾಗಿತ್ತು.

ಕುವೆಂಪು ಅವರಿಗೆ ನೀಡಿದ ನಂತರ ಡಾಕ್ಟರ್ ರಾಜಕುಮಾರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸುವುದಾಗಿ ತಿಳಿಸಿದ್ದರು. ಡಾಕ್ಟರ್ ರಾಜಕುಮಾರ್ ಅವರ ಆಸೆಯಂತೆ ಮೊದಲು ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಷ್ಟ್ರಕವಿ ಕುವೆಂಪುರವರಿಗೆ ನೀಡಲಾಗಿತ್ತು ನಂತರ ಡಾಕ್ಟರ್ ರಾಜಕುಮಾರ್ ಅವರಿಗೆ ಈ ಪ್ರಶಸ್ತಿಯನ್ನು ನೀಡುತ್ತಾರೆ. ಪ್ರಶಸ್ತಿಯನ್ನು ನೀಡಿದ ನಂತರ ಡಾಕ್ಟರ್ ರಾಜಕುಮಾರ್ ಅವರು ವೇದಿಕೆ ಮೇಲೆ ಮಾತನಾಡುವ ಬೇಕೆಂದು ಕೋರಿಕೊಳ್ಳುವುದರಿಂದ ರಾಜಕುಮಾರ ಮಾತನಾಡುತ್ತಾರೆ.

ರಾಜಕುಮಾರ ಅವರ ಮಾತಿನ ನಂತರ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರು ಮಾತನಾಡಬೇಕಾಗುತ್ತದೆ. ವೇದಿಕೆಯ ಮೇಲೆ ಬಂಗಾರಪ್ಪನವರು ತಮ್ಮ ಭಾಷಣವನ್ನು ಶುರು ಮಾಡಿದಾಗ ಕೆಲವು ಕಿಡಿಗೇಡಿಗಳು ತಮ್ಮ ದುಷ್ಟತನದಿಂದ ಚಪ್ಪಲಿಯನ್ನು ಬಂಗಾರಪ್ಪನವರ ಮೇಲೆ ಎಸೆಯುತ್ತಾರೆ. ಇದರಿಂದ ಕಾರ್ಯಕ್ರಮಕ್ಕೆ ಅಡಚಣೆ ಉಂಟಾಗಿ ಈ ಸಂಗತಿಯು ಒಂದು ಕಪ್ಪು ಚುಕ್ಕಿಯಾಗಿ ಉಳಿಯುತ್ತದೆ. ಕಿಡಿಗೇಡಿಗಳು ಬಂಗಾರಪ್ಪನವರ ಮೇಲೆ ಚಪ್ಪಲಿಯನ್ನು ಎಸೆಯಲು ಕಾರಣವೇನೆಂದರೆ.

ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಲು ಕೆಲವರಿಗೇ ತಮ್ಮ ಪಕ್ಷದವರಿಗೆ ಇಷ್ಟವಿರುವುದಿಲ್ಲ. ಅಲ್ಲದೆ ರಾಜಕುಮಾರರು ಬಂಗಾರಪ್ಪನವರ ಸಂಬಂಧಿಕರು ಆಗಿದ್ದರು ಬಂಗಾರಪ್ಪನವರ ಆಪ್ತರಾಗಿರುವ ಕಾರಣ ರಾಜಕುಮಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುತ್ತಿದ್ದಾರೆ ಎಂದು ತಮಷ್ಟಕ್ಕೆ ತಾವೇ ಭಾವಿಸಿ ವೇದಿಕೆ ಮೇಲೆ ಚಪ್ಪಲಿಯನ್ನು ಬಂಗಾರಪ್ಪನವರ ಮೇಲೆ ಎಸೆಯುತ್ತಾರೆ ನಿಜಕ್ಕೂ ಕೂಡ ಇದು ಒಂದು ಅಹಿತಕರ ಘಟನೆ ಅಂತಾನೇ ಹೇಳಬಹುದು