Sunday, June 4, 2023
HomeEntertainmentಈ 6 ಅಡಿ ಕಟೌಟ್ ನಾ ಮುಗಿಸಲು 5 ಅಡಿ ಕಟೌಟ್ ಗಳು ಏನೆಲ್ಲಾ ಒಳಸಂಚು...

ಈ 6 ಅಡಿ ಕಟೌಟ್ ನಾ ಮುಗಿಸಲು 5 ಅಡಿ ಕಟೌಟ್ ಗಳು ಏನೆಲ್ಲಾ ಒಳಸಂಚು ಮಾಡ್ತಿದ್ದಾರೆ ಗೊತ್ತ.? ಮೊದಲ ಬಾರಿಗೆ ಮಿಡಿಯಾ ಮುಂದೆ ಎಲ್ಲಾ ರಹಸ್ಯ ಬಯಲು ಮಾಡಿದ ಡಿ ಬಾಸ್

 

ಕ್ರಾಂತಿ ಸಿನಿಮಾ ಸಂದರ್ಶನ

ಸದ್ಯಕ್ಕೆ ಇಂಡಸ್ಟ್ರಿಯಲ್ಲಿ ಈಗ ಕ್ರಾಂತಿ ಸಿನಿಮಾದ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ದರ್ಶನ್ ಅವರ ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾವು ಜನವರಿ ತಿಂಗಳಲ್ಲಿ ಬಿಡುಗಡೆಗೆ ರೆಡಿ ಆಗಿದ್ದು, ಈಗಾಗಲೇ ಚಿತ್ರತಂಡದಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಈ ಸಲುವಾಗಿ ನಾಯಕನಟ ದರ್ಶನ್ ಸೇರಿದಂತೆ ಎಲ್ಲರೂ ಸಹ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.

ಸ್ವತಃ ದರ್ಶನ್ ಅವರೇ ಯುಟ್ಯೂಬ್ ಚಾನೆಲ್ ಗಳಿಗೆ ಇಂಟರ್ವ್ಯೂ ಕೊಡುವ ಮೂಲಕ ಕ್ರಾಂತಿ ಚಿತ್ರದ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಕ್ರಾಂತಿ ಸಿನಿಮಾವು ಶಿಕ್ಷಣದ ಕ್ರಾಂತಿ ಮಾಡಲು ಬರುತ್ತಿರುವ ಸಾಮಾಜಿಕ ಸಂದೇಶ ಹೊಂದಿದ ಸಿನಿಮಾ ಆಗಿದ್ದು ಈ ಸಿನಿಮಾದ ಮುಖ್ಯ ವಿಷಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸ ತಿಳಿಸುತ್ತಿರುವುದು ಹಾಗೂ ಹಣದ ಹೆಸರಿನಲ್ಲಿ ಖಾಸಗಿ ಶಾಲೆಗಳು ಮಾಡುತ್ತಿರುವ ಅನ್ಯಾಯಗಳನ್ನು ತಿಳಿಸುವುದು ಸರ್ಕಾರವನ್ನು ಎಚ್ಚರಿಸುವುದು ಇನ್ನೂ ಅನೇಕ ಸಂಗತಿಗಳು ಇದರಲ್ಲಿ ಸೇರಿದೆ.

ಇದಕ್ಕೆ ಸಂಬಂಧಪಟ್ಟ ಹಾಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರು ಕೊಡುತ್ತಿರುವ ಸಂದರ್ಶನಗಳು ಹೆಚ್ಚು ಚರ್ಚೆ ಆಗುತ್ತಿದ್ದು ಈ ಸಂದರ್ಶನದಲ್ಲಿ ದರ್ಶನ್ ಅವರ ಬಳಿ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ದರ್ಶನ್ ಅವರೂ ಸಹ ಸಿನಿಮಾ ವಿಚಾರವಾಗಿ ಮತ್ತು ಸಿನಿಮೇತರ ವಿಚಾರವಾಗಿ ಕೂಡ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅವರ ಪ್ರಶ್ನೆಗಳಿಗೆ ಅನುಗುಣವಾಗಿ ಉದಾಹರಣೆ ಕೊಡಲು ತಮ್ಮ ಜೀವನದ ಘಟನೆಗಳನ್ನು, ನೆನೆಸಿಕೊಂಡು ಬಾಲ್ಯವನ್ನು ನೆನೆಸಿಕೊಂಡು, ತಾವು ಪಟ್ಟದ ಕಷ್ಟದ ದಿನಗಳನ್ನು ನೆನೆಸಿಕೊಂಡು, ಆ ಅನುಭವಗಳನ್ನು ಹಂಚಿಕೊಂಡು ಮಾತನಾಡುತ್ತಿರುವ ದರ್ಶನ್ ಅವರಿಗೆ ಸಿನಿಬಸ್ ಎನ್ನುವ ಚಾನೆಲ್ ಸಂದರ್ಶಕರು ಪರಭಾಷೆಯಲ್ಲಿ ನಟಿಸುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ದಚ್ಚು ಕೊಟ್ಟ ನೇರ ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ದರ್ಶನ್ ಅವರು ಹೇಳುತ್ತಿದ್ದಾರೆ ಕರ್ನಾಟಕದ ಜನರು ನಾನು ಎಲ್ಲೋ ಫುಡ್ಬಾತ್ ಅಲ್ಲಿ ಇರಬೇಕಾದವನನ್ನು ಹೊತ್ತು ಮೆರೆಸಿ ಈ ಸ್ಥಾನದಲ್ಲಿ ಇಟ್ಟಿದ್ದಾರೆ. ಇಲ್ಲಿ ನನ್ನನ್ನು ರಾಜನಂತೆ ನೋಡಿಕೊಳ್ಳುತ್ತಿದ್ದಾರೆ ಇಷ್ಟು ಪ್ರೀತಿ ಇಲ್ಲೇ ಸಿಗಬೇಕಾದರೆ ನಾನೇಕೆ ಪರಭಾಷೆಗಳಲ್ಲಿ ಹೋಗಿ ನಟಿಸಬೇಕು. ಇದಕ್ಕಿಂತ ನನಗೆ ದುಪ್ಪಟ್ಟು ಸಂಭಾವನೆ ಅಲ್ಲಿ ಕೊಡಬಹುದು ಆದರೆ ಇಲ್ಲಿ ನಾಯಕ ನಟನಾಗಿರುವ ನಾನು ಅಲ್ಲಿ ಸೈಟ್ ರೋಲ್ ಹೋಗಿ ಮಾಡಿದರೆ ಏನು ಮರ್ಯಾದೆ ಇರುತ್ತದೆ.

ಹಾಗೂ ಒಂದು ವೇಳೆ ನಾನು ಅಲ್ಲಿ ಖಳ ನಾಯಕನಾಗಿ ಹೋದರೆ ಇಲ್ಲಿ ಆರು ಅಡಿ 3 ಇಂಚು ಹೀರೋ ಆಗಿ ಮೆರೆದಿರುವ ನನ್ನನ್ನು ಹೊಡೆಯಲು 5 ಅಡಿಯ ಎಷ್ಟು ಹೀರೋಗಳು ಕಾಯುತ್ತಿರಬಹುದು ಹಾಗಾಗಿ ಅಂತಹ ಆಸೆ ನನಗಿಲ್ಲ ಕನ್ನಡಿಗರು ಕೊಟ್ಟಿರುವ ಪ್ರೀತಿಯೇ ನನಗೆ ಬೇಕಾದಷ್ಟು ಇದೆ ಅಷ್ಟೇ ಸಾಕು ಎಂದಿದ್ದಾರೆ. ಮತ್ತು ಬೇರೆ ಭಾಷೆಗಳಲ್ಲೂ ನಿಮಗೆ ಅಭಿಮಾನಿಗಳು ಇದ್ದಾರೆ ಅವರ ಸಲುವಾಗಿ ಸಿನಿಮಾ ಮಾಡಬಹುದಲ್ಲ ಎಂದು ಕೇಳಿದಾಗ ನಾವು ನಮ್ಮ ಸಿನಿಮಾಗಳನ್ನು ಡಬ್ ಮಾಡುತ್ತಿದ್ದೇವೆ ಅಷ್ಟೇ ಸಾಕು ಎಂದು ಹೇಳಿದ್ದಾರೆ.

ಈ ಹಿಂದೆ ಡಬ್ಬಿಂಗ್ ಸಿನಿಮಾಗಳನ್ನು ವಿರೋಧ ಮಾಡಿ ದರ್ಶನ್ ಅವರು ಕೊಟ್ಟಿದ್ದ ಹೇಳಿಕೆಯನ್ನು ನೆನೆಸಿಕೊಂಡು ಈಗ ತೆಲುಗು ಇಂಡಸ್ಟ್ರಿಯಲ್ಲಿ ಕೂಡ ಹಬ್ಬದ ಸಮಯದಲ್ಲಿ ಮಾತ್ರ ಬೇರೆ ಭಾಷೆ ಸಿನಿಮಾಗಳನ್ನು ರಿಲೀಸ್ ಮಾಡಬೇಕು ಎಂದು ಮಾತನಾಡುತ್ತಿದ್ದಾರೆ. ಆದರೆ ನಮಗೆ ಈ ಹಿಂದೆಯೇ ಅನುಭವ ಆಗಿ ನಾವು ಡಬ್ಬಿಂಗ್ ವಿರೋಧ ಹೋಗಿದ್ದು ಅವರಿಗೆ ಈಗ ತಳ ಸುಟ್ಟಿದೆ ಹಾಗಾಗಿ ಈಗ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹೀಗೆ ಪರಭಾಷೆಯಲ್ಲಿ ನಟಿಸಲು ಹೋಗುವವರಿಗೂ ಹಾಗೂ ನಟಿಸಿರುವವರಿಗೂ ದರ್ಶನ್ ಮಾತಿನ ಏಟು ಕೊಟ್ಟಿದ್ದಾರೆ.