Friday, June 9, 2023
HomeEntertainmentಗಂಡ ಸ-ತ್ತು 6 ತಿಂಗಳು ಕೂಡ ತುಂಬಿಲ್ಲ, ಆಗಲೇ ಮತ್ತೊಂದು ಮದುವೆಗೆ ಸಿದ್ದರಾದ ನಟಿ ಮೀನಾ.

ಗಂಡ ಸ-ತ್ತು 6 ತಿಂಗಳು ಕೂಡ ತುಂಬಿಲ್ಲ, ಆಗಲೇ ಮತ್ತೊಂದು ಮದುವೆಗೆ ಸಿದ್ದರಾದ ನಟಿ ಮೀನಾ.

ಎರಡನೇ ಮದುವೆಗೆ ಓಕೆ ಎಂದು ಹೇಳಿದ್ದಾರಾ ನಟಿ ಮೀನಾ.

ಕೆಲವರ ಜೀವನದಲ್ಲಿ ಎಲ್ಲವೂ ತುಂಬಿರುತ್ತದೆ. ಹಣ, ವಿದ್ಯೆ, ಉದ್ಯೋಗ, ಸೌಂದರ್ಯ ಇಷ್ಟೆಲ್ಲ ಇದ್ದು ಇವರೇ ಸುಖಿಗಳು ಎಂದುಕೊಳ್ಳುವಷ್ಟರಲ್ಲಿ ಇನ್ಯಾವುದೋ ಒಂದು ಸಂಕಷ್ಟ ಎದುರಾಗಿ ಬದುಕು ಬಿರುಗಾಳಿಗೆ ಸಿಕ್ಕಂತಾಗಿ ಬಿಡುತ್ತದೆ. ಆ ವಿಧಿ ಎನ್ನುವುದು ಯಾರನ್ನು ಕೂಡ ಬಿಡುವುದಿಲ್ಲ ಎನ್ನುವುದು ಈ ನಟಿ ಬದುಕು ನೋಡಿದ ಮೇಲೆ ಅಕ್ಷರಶಃ ಸತ್ಯ ಎನಿಸುತ್ತದೆ.

ಯಾಕೆಂದರೆ ನಟಿ ಮೀನಾ ಅವರ ಬದುಕು ಕೂಡ ಇದೇ ರೀತಿ ಆಗಿದೆ. ಬಾಲ್ಯದಲ್ಲಿಯೇ ಅಪ್ರತಿಮ ಸುಂದರಿ ಹಾಗೂ ಬುದ್ಧಿವಂತೆ ಆದ ಕಾರಣದಿಂದ ಸಲೀಸಾಗಿ ಚಿತ್ರರಂಗಕ್ಕೆ ಬರುವ ಅವಕಾಶಗಳನ್ನು ಪಡೆದುಕೊಂಡರು. ಬಾಲ ನಟಿಯಾಗಿ ಬಂದ ಇವರು ನೋಡ ನೋಡುತ್ತಿದ್ದಂತೆ ಸ್ಟಾರ್ ನಟಿ ಪಟ್ಟ ಕೂಡ ಸೇರಿಕೊಂಡರು. ಕನ್ನಡ ತಮಿಳು ತೆಲುಗು ಹೀಗೆ ಎಲ್ಲಾ ಭಾಷೆಯಲ್ಲಿ ಕೂಡ ಆಗಿನ ಸಮಯದ ಸೂಪರ್ ಸ್ಟಾರ್ ಗಳ ಜೊತೆಗೆ ನಟಿಸಿ ತಾವು ಕೂಡ ಲೇಡಿ ಸೂಪರ್ ಸ್ಟಾರ್ ಆದವರು.

ನೋಡುವುದಕ್ಕೆ ಅದ್ಭುತ ಚೆಲುವೆಯಂತಿದ್ದ ಇಂತಹ ಅಪ್ಸರೆಯನ್ನು ಕನಸಿನಲ್ಲಿ ಅದೆಷ್ಟೋ ಯುವಕರು ಮದುವೆ ಆಗಿದ್ದರು. 2009ರಲ್ಲಿ ವಿದ್ಯಾಸಾಗರ್ ಎನ್ನುವ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಅಗರ್ಭ ಶ್ರೀಮಂತನನ್ನು ಮದುವೆಯಾಗಿ ಮೀನಾ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು ಈಗ ಇವರಿಗೆ ಆರು ವರ್ಷದ ಪುಟ್ಟ ಮಗಳು ಕೂಡ ಇದ್ದಾರೆ.

46 ವರ್ಷದ ವಯಸ್ಸಿನ ಮೀನಾ ಅವರಿಗೆ ಈಗಲೂ ಕೂಡ ಸಿನಿಮಾಗಳಲ್ಲಿ ಲೀಡ್ ರೋಲಲ್ಲಿ ಮಾಡಲು ಆಫರ್ ಗಳು ಹೋಗುತ್ತಿವೆ. ಇಷ್ಟೆಲ್ಲಾ ಕೊಟ್ಟಿದ್ದ ಭಗವಂತನು ಸಂತೋಷವನ್ನು ಕೊಡಲು ಮರೆತ ಎನಿಸುತ್ತದೆ ಈ ವರ್ಷ ಜೂನ್ 26ರಂದು ಮೀನಾ ಅವರ ಪ್ರೀತಿಯ ಪತಿ ಕೊರೊನಾಗೆ ತುತ್ತಾಗಿ ಹಸು ನೀಗಿದ್ದಾರೆ.

ಈ ವರ್ಷದ ಆರಂಭದಲ್ಲಿಯೇ ನಟಿ ಮೀನಾವರ ಕುಟುಂಬದ ಎಲ್ಲಾ ಸದಸ್ಯರು ಕೂಡ ಕರೋನ ಸೋಂಕಿಗೆ ತುತ್ತಾಗಿದ್ದರು, ಬಹಳ ದಿನಗಳವರೆಗೆ ಹೋರಾಟ ಮಾಡಿದ ವಿದ್ಯಾಸಾಗರ್ ಅವರು ಚಿಕಿತ್ಸೆ ಫಲಕಾರಿ ಆಗದೆ ಇಹಲೋಕ ತ್ಯಜಿಸಿದ್ದಾರೆ. ಇತ್ತ ಅವರ ಅ‌.ಗ.ಲಿ.ಕೆ ನೋವಿನಲ್ಲಿ ಮೀನ ಕಂಗೆಟ್ಟು ಹೋಗಿದ್ದಾರೆ ಈ ಕಾರಣದಿಂದಾಗಿ ಅವರು ಇತ್ತೀಚಿಗೆ ಶೂಟಿಂಗ್ ಗಳಲ್ಲೂ ಕೂಡ ಭಾಗಿಯಾಗದೆ ಒಬ್ಬರೇ ಸಮಯ ಕಳೆಯುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಇವೆ.

ಪತಿ ಅ.ಗ.ಲಿ.ಕೆಯಾದಗಲಿಂದ ಮೀನಾ ಕುರಿತ ಯಾವ ಸುದ್ದಿಯು ಕೂಡ ಇಲ್ಲ ಹೆಚ್ಚಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಲೂ ಇಲ್ಲ. ಹಾಗಾಗಿ ನಟಿ ಮೀನ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದೇ ಎಲ್ಲರೂ ಅರ್ಥೈಸಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದ ಅವರ ಕುಟುಂಬಸ್ಥರು ಮೀನ ಅವರಿಗೆ ಎರಡನೇ ಮದುವೆ ಮಾಡುವ ನಿರ್ಧಾರ ಮಾಡಿದ್ದಾರಂತೆ.

ಹಣದ ಬೆಂಬಲ ಬೇಡದೆ ಇದ್ದರೂ ಕೂಡ ಭಾವನಾತ್ಮಕ ಆಸರೆ ಕಾರಣದಿಂದ ಆದರೂ ಮೀನಾ ಮತ್ತೆ ಮದುವೆ ಆಗಲೇಬೇಕು ಎಂದು ಕುಟುಂಬಸ್ಥರು ಹಠ ಹಿಡಿದಿದ್ದಾರಂತೆ. ತಮ್ಮ ಕುಟುಂಬದ ಪರಿಚಿತರೊಬ್ಬರೊಂದಿಗೆ ಮದುವೆ ಆಗಲು ಮೀನಾ ಅವರು ಕೂಡ ಸಮ್ಮತಿ ಸೂಚಿಸಿದ್ದಾರೆ ಎನ್ನುವ ಗಾಳಿ ಸುದ್ದಿ ಕೂಡ ಇದೆ.

ಆದರೆ ಅಧಿಕೃತವಾಗಿ ಎಲ್ಲಿಯೂ ಕೂಡ ಇದರ ಕುರಿತು ಕುಟುಂಬಸ್ಥರೇ ಆಗಲಿ ಮೀನಾ ಅವರೇ ಆಗಲಿ ಹೇಳಿಕೊಂಡಿಲ್ಲ. ಆಗಿದ್ದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ವಾಸ್ತವವನ್ನು ಒಪ್ಪಿಕೊಂಡು ನಟಿ ಏನೇ ತೀರ್ಮಾನ ತೆಗೆದುಕೊಂಡರು ಅವರ ಬದುಕಿನಲ್ಲಿ ಮತ್ತೆ ಹಿಂದಿನ ಸುಖ ಶಾಂತಿ ಸಿಗುವಂತಿರಲಿ ಎಂದು ಅಭಿಮಾನಿಗಳಾಗಿ ನಾವು ಹರಸೋಣ.