Home Blog Page 311

ಲವ್ ನಲ್ಲಿ ಯಾವುದೇ ಸುಖವಿಲ್ಲ 24 ವರ್ಷದ ಹ್ಯಾಂಡ್ಸಮ್ ಹುಡುಗನನ್ನು ಕಳಿಸಿಕೊಡು ದೇವರೇ ಎಂದು ಬೇಡಿಕೆ ಇಟ್ಟ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ.

0

ಬಿಗ್ ಬಾಸ್ ನಲ್ಲಿ ಹೆಚ್ಚು ಸದ್ದು ಮಾಡಿರುವಂತಹ ಜೋಡಿ ಅಂದರೆ ಅದು ಸೋನು ಗೌಡ ಮತ್ತು ರಾಕೇಶ್ ಅಡಿಗ ಅಂತಾನೆ ಹೇಳಬಹುದು ರಾಕೇಶ್ ಅಡಿಗ ಅವರಿಗಿಂತ ಸೋನು ಗೌಡ ಅವರೇ ಮನೆಯಲ್ಲಿ ಹೆಚ್ಚು ಕಾಂಟ್ರವರ್ಸಿಗೆ ಒಳಗಾಗಿರುವುದು ಅಷ್ಟೇ ಅಲ್ಲದೆ ಪ್ರತಿನಿತ್ಯವೂ ಕೂಡ ಯಾವುದಾದರೂ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಾರೆ. ಸದ್ಯಕ್ಕೆ ಸೋನು ಗೌಡ ಅವರು ಮತ್ತೊಂದು ವಿಚಾರಕ್ಕೆ ಟ್ರೋಲ್ ಆಗಿದ್ದಾರೆ ಹೌದು ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಗೆ ವಿಶೇಷವಾದ ಮನವಿ ಒಂದನ್ನು ಮಾಡಿದ್ದಾರೆ. ಅದೇನೆಂದರೆ ದೇವರೇ ನನಗೆ 24 ವರ್ಷದ ಹ್ಯಾಂಡ್ಸಮ್ ಹುಡುಗನನ್ನು ಕಳಿಸಿಕೊಡು ಎಂಬ ವಿಶೇಷವಾದ ಮನವಿಯನ್ನು ಇಟ್ಟಿದ್ದಾರೆ.

ಈ ವಿಚಾರವನ್ನು ಬಹಿರಂಗವಾಗಿ ಹೇಳಿರುವುದರಿಂದ ಇದೀಗ ಸಾಕಷ್ಟು ಕಾಂಟ್ರವರ್ಸಿಗೆ ಗುರಿಯಾಗಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಸೋನು ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಅಷ್ಟೇ ಅಲ್ಲದೆ ಕಳೆದ ವರ್ಷ ಅವರ ಖಾಸಗಿ ವಿಡಿಯೋ ಲೀಕ್ ಆಗಿದ್ದು ಈ ವಿಡಿಯೋ ಮೂಲಕ ಇವರು ಕರ್ನಾಟಕದಾದ್ಯಂತ ಮನೆ ಮಾತಾಗಿದ್ದರು. ಸೋನು ಗೌಡ ಅಂದರೆ ಸಾಕು ಆ ಖಾಸಗಿ ವಿಡಿಯೋ ವೈರಲ್ ಆದ ವಿಚಾರವೇ ಎದುರಾಗುತ್ತಿತ್ತು ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದ ಕಾರಣ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಅವಕಾಶ ಗಿಟ್ಟಿಸಿಕೊಂಡರು.

ಬಿಗ್ ಬಾಸ್ ಮನೆಗೆ ಬಂದ ನಂತರ ತಮ್ಮ ಪ್ರೇಮಿ ತಮಗೆ ಮೋಸ ಮಾಡಿ ಅವರ ಖಾಸಗಿ ವಿಡಿಯೋವನ್ನು ವೈರಲ್ ಮಾಡಿದ್ದರ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದರು. ಈ ಸಮಯದಲ್ಲಿ ರಾಕೇಶ್ ಅವರು ಸೋನು ಅವರನ್ನು ಸಂತೈಸಿದರು ಅಷ್ಟೇ ಅಲ್ಲದೆ ಈ ಪ್ರಕರಣ ನಡೆದ ನಂತರ ಇಬ್ಬರೂ ಕೂಡ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಕೆಲವು ಮಂದಿ ಇವರಿಬ್ಬರ ಒಡನಾಟವನ್ನು ನೋಡಿ ರಾಕೇಶ್ ಮತ್ತು ಸೋನು ಗೌಡ ಇಬ್ಬರು ಪರಸ್ಪರ ಪ್ರೀತಿಸುತ್ತಿರಬಹುದು ಅಂತ ಮಾತನಾಡಿಕೊಳ್ಳುವುದಕ್ಕೆ ಶುರು ಮಾಡಿದರು.

ಇವರಿಬ್ಬರ ಸಂಬಂಧ ಇನ್ನೇನು ಮುಂದುವರಿಯಬೇಕು ಅನ್ನುವಷ್ಟೆ ಒಳಗೆ ಇದೀಗ ರಾಕೇಶ್ ಅಡಿಗ ಅವರು ಸ್ವಲ್ಪ ಸೋನು ಗೌಡ ಅವರ ವಿಚಾರದಲ್ಲಿ ಬದಲಾಗಿದ್ದಾರೆ ಅಂತ ಹೇಳಬಹುದು. ಏಕೆಂದರೆ ಮೊದಲೆಲ್ಲ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ರಾಕೇಶ್ ಅವರು ಇದೀಗ ಸೋನು ಗೌಡ ಅವರಿಂದ ದೂರಾಗಿದ್ದಾರೆ. ಅಷ್ಟೇ ಅಲ್ಲದೆ ರಾಕೇಶ್ ಗೌಡ ಅವರು ಸೋನುಗೆ ಬಹುಚನದಿಂದ ಮರ್ಯಾದೆ ಕೊಟ್ಟು ಮಾತನಾಡಿಸುತ್ತಿದ್ದಾರೆ. ಇವೆಲ್ಲವನ್ನೂ ನೋಡಿದಂತಹ ಸೋನು ಗೌಡ ಅವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಪರವಾಗಿಲ್ಲಾ ನನಗೆ ಟೈಮ್ ಪಾಸ್ ಪ್ರೀತಿ ಮಾಡುವುದಕ್ಕೆ ಬರುವುದಿಲ್ಲ ಹಾಗೆಯೇ ಟೈಂಪಾಸ್ ಗಾಗಿ ಪ್ರೀತಿ ಮಾಡುವಂತಹ ವ್ಯಕ್ತಿಯು ಕೂಡ ನನಗೆ ಬೇಕಾಗಿಲ್ಲ ಎಂದು ಹೇಳಿದ್ದಾರೆ ತದನಂತರ

ಅಪ್ಪ ದೇವರೇ ನೀನು ಇರುವುದೇ ನಿಜವಾದರೆ ನನಗೆ ಈಗ 22 ವರ್ಷ, ಸಖತ್ ಆಗಿ ಇರುವ 24 ವರ್ಷದ ಹುಡುಗನನ್ನು ಕಳಿಸಿಕೊಡು ದೇವರೇ ಎಂದು ಸೋನು ಗೌಡ ಅವರು ಬೇಡಿಕೊಂಡರು. ಎದುರಲ್ಲೇ ಇದ್ದಾನಲ್ಲ ಎಂದು ಜಶ್ವಂತ್ ಕಡೆಗೆ ರಾಕೇಶ್ ಕೈ ತೋರಿಸಿದರು. ಅವನು ಬೇಡ, ಅವನು ಯಂಗೇಜ್ ಆಗಿದ್ದಾನೆ ಅಂತ ಸೋನು ಹೇಳಿದರು. ನಾನು ಯಂಗೇಜ್ಡ್ ಅಲ್ಲ, ಕಮಿಟೆಡ್ ಎಂದರು ಜಶ್ವಂತ್ ಉತ್ತರಿಸಿದ್ದಾರೆ ನನಗೆ ಲವ್ ಅಂದರೆ ಅಸಹ್ಯ. ಆದರೆ ಪಾರ್ಟ್ನರ್ ಬೇಕು. ಇಬ್ಬರೂ ಪರಸ್ಪರ ಕೇರ್ ಮಾಡುತ್ತೇವೆ. ಲವ್ವಲ್ಲಿ ಏನೂ ಸಿಗಲ್ಲ ಎಂದು ಸೋನು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ಕಾರನ್ನು ಅಲಿಯೇ ಬಿಟ್ಟು 3km ಓಡಿ ಹೋಗಿ ಆಪರೇಷನ್ ಮಾಡಿ ರೋಗಿಯ ಪ್ರಾಣ ಉಳಿಸಿದ ವೈದ್ಯ ಈ ವಿಡಿಯೋ ನೋಡಿ ನಿಜಕ್ಕೂ ಗ್ರೇಟ್ ಅನಿಸುತ್ತೆ.

0

ಬೆಂಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಪ್ರತಿಯೊಬ್ಬ ವೈದ್ಯರು ಇಂತಹ ಭಾವನೆಯನ್ನು ಹೊಂದಿ ತಮ್ಮ ವೃತ್ತಿ ಧರ್ಮಕ್ಕೆ ಗೌರವ ನೀಡಲಿ ಎನ್ನುತ್ತಿದ್ದಾರೆ ನೆಟ್ಟಿಗರು. ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಇಂದಾಗಿ ಅನೇಕ ಅವಂತರಗಳು ಸೃಷ್ಟಿಯಾಗಿದ್ದು ಮಳೆ ಬಂದರೆ ಸಾಕು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುವುದು ಅನಿವಾರ್ಯ ಆಗಿದೆ. ಮಳೆಯಿಂದಾಗಿ ಮಾರತ್ ಹಳ್ಳಿ ರಸ್ತೆಯಲ್ಲಿ ಕೂಡ ಟ್ರಾಫಿಕ್ ಇದ್ದು ಸರ್ಜಾಪುರದ ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ.

ಡಾಕ್ಟರ್ ಗೋವಿಂದ ನಂದಕುಮಾರ್ ಎನ್ನುವವರು ಕನ್ನಿಂಗ್ ಹ್ಯಾಮ್ ನಿಂದ ಬೆಳಗ್ಗೆ 10 ಗಂಟೆಗೆ ರೋಗಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆ ನಿಗಧಿ ಆಗಿದ್ದರಿಂದ ಸರ್ಜಾಪುರ ಮಣಿಪಾಲ್ ಆಸ್ಪತ್ರೆಗೆ ಕಾರಿನಲ್ಲಿ ಬರುವ ಸಂದರ್ಭದಲ್ಲಿ ಟ್ರಾಫಿಕ್ ನಲ್ಲಿ ಸಿಲುಕುತ್ತಾರೆ. ಆದರೆ ಮಾರ್ಗ ಮಧ್ಯದಲ್ಲಿ ಅಂದರೆ ಆಸ್ಪತ್ರೆಗೆ 3 km ಇರುವಾಗಲೇ ಟ್ರಾಫಿಕ್ ಜಾಮ್ ಆಗಿ ಕಾರ್ ಟ್ರಾಫಿಕ್ ನಲ್ಲಿ ಸಿಲುಕಿಕೊಳ್ಳುತ್ತದೆ ಸಮಯ ಮೀರುತ್ತಿದ್ದ ಕಾರಣ ಚಾಲಕನಿಗೆ ಕಾರ್ ಅನ್ನು ತೆಗೆದುಕೊಂಡು ಬರಲು ಹೇಳಿ ಡಾಕ್ಟರ್ ಗೋವಿಂದ ನಂದಕುಮಾರ್ ಅವರು ಓಡಿಕೊಂಡು 3 km ದೂರವನ್ನು ಕ್ರಮಿಸಿ ಆಸ್ಪತ್ರೆಗೆ ತಲುಪುತ್ತಾರೆ.

ಸಧ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು ಇವರ ಕರ್ತವ್ಯ ಪ್ರಜ್ಞೆಗೆ ಸಲಾಂ ಹೇಳುತ್ತಿದ್ದಾರೆ. ಆಗಸ್ಟ್ 30 ರಂದು ರೋಗಿಯೊಬ್ಬರಿಗೆ ಲ್ಯಾಪ್ರೋ ಸ್ಕೋಪಿಕ್ ಪಿತ್ತಕೋಶದ ಚಿಕಿತ್ಸೆಗೆ ಸರ್ಜರಿ ಮಾಡಬೇಕಾಗಿದ್ದುದರಿಂದ ಬೆಳಗ್ಗೆ 10 ಕ್ಕೆ ನಿಗಧಿಯಾಗಿದ್ದ ಶಸ್ತ್ರ ಚಿಕಿತ್ಸೆಗೆ ಸಮಯ ಮೀರುತ್ತಿದ್ದ ಕಾರಣ ಡಾಕ್ಟರ್ ಗೋವಿಂದ ನಂದಕುಮಾರ್ ಅವರು ಇಂತಹ ಜನ ಮೆಚ್ಚುವಂತಹ ಕಾರ್ಯವನ್ನು ಮಾಡಿ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ. ಒಂದು ವೇಳೆ ಇವರು ಕೇವಲ 3 km ಅಷ್ಟೇ ಎಂದು ನೆಗ್ಲೆಕ್ಟ್ ಮಾಡಿದ್ದರೆ ಅವರು ಆಸ್ಪತ್ರೆಗೆ ತಲುಪುವ ವೇಳೆ ಮದ್ಯಾಹ್ನ ಒಂದು ಘಂಟೆ ಆಗುತ್ತಿತ್ತೆಂದೂ ಅವರೇ ಹೇಳಿಕೊಂಡಿದ್ದಾರೆ.

ಸದ್ಯ ಅವರು ಮಾಡಿದ ಶಸ್ತ್ರ ಚಿಕಿತ್ಸೆ ಸಫಲವಾಗಿದ್ದು ರೋಗಿಯು ಈಗ ಆರಾಮಾಗಿ ಇದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ದೃಶ್ಯದ ಬಗ್ಗೆ ಸ್ವತಃ ಡಾಕ್ಟರ್ ಗೋವಿಂದ ನಂದಕುಮಾರ್ ಅವರೇ ಒಂದು ಲೈವ್ ವಿಡಿಯೋ ಮಾಡಿದ್ದು. ನಾನು ಕರುಳಿನ ಶಸ್ತ್ರ ಚಿಕಿತ್ಸೆ ಮಾಡುವ ಸರ್ಜನ್ ಆಗಿದ್ದು ಆಗಸ್ಟ್ 30 ಮಂಗಳವಾರ ಕನ್ನಿಂಗ್ ಹ್ಯಾಮ್ ರೋಡ್ ನಿಂದ ಸರ್ಜಾಪುರ ಮಣಿಪಾಲ್ ಆಸ್ಪತ್ರೆಗೆ ಬರುವ ವೇಳೆಯಲ್ಲಿ ಮಳೆ ಹೆಚ್ಚಾಗಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದ ಕಾರಣ ನನ್ನ ಕಾರ್ ಅನ್ನು ಡ್ರೈವರ್ ಗೆ ಹೇಳಿ ಅಲ್ಲಿಯೇ ಬಿಟ್ಟು ಓಡಿಕೊಂಡು ಆಸ್ಪತ್ರೆ ತಲುಪಿದೆ ಎಂದು ಹೇಳಿದ್ದಾರೆ.

ಅಲ್ಲದೇ 10 ನಿಮಿಷದಲ್ಲಿ ತಲುಪಬಹುದಾದ ಸಮಯ ಟ್ರಾಫಿಕ್ ನಿಂದಾಗಿ ಕನಿಷ್ಠ 45 ನಿಮಿಷ ಆದರೂ ಆಗುತ್ತಿತ್ತು ನನ್ನ ಡ್ರೈವರ್ ಆಸ್ಪತ್ರೆಗೆ ಸುಮಾರು ನಾನು ಬಂದ 2 ಗಂಟೆಯ ನಂತರ ಬಂದರು ಎಂದು ಹೇಳಿಕೊಂಡಿದ್ದಾರೆ. ಏನೇ ಆಗಲಿ ಇಂತಹ ಸಮಯ ಪ್ರಜ್ಞೆ ಇರುವ ಕರ್ತವ್ಯ ನಿರತ ವೈದ್ಯರಂತೆ ಪ್ರತಿಯೊಂದು ಆಸ್ಪತ್ರೆಯಲ್ಲಿಯೂ ಸಹ ಇದೇ ರೀತಿಯಲ್ಲಿ ವೈದ್ಯರು ಇದ್ದರೆ ಇಂದು ಎಷ್ಟೋ ಬಡ ಜೀವಗಳು ಬಲಿಯಾಗುವುದಿಲ್ಲ. ಎಷ್ಟೋ ವೈದ್ಯರ ನಿರ್ಲಕ್ಷ್ಯತನದಿಂದಲೇ ರೋಗಿಗಳ ಪ್ರಾಣಪಕ್ಷಿ ಹಾರಿ ಹೋಗುತ್ತಿದ್ದು ಇಂತಹ ಸಮಯಪ್ರಜ್ಞೆ ಎಲ್ಲಾ ವೈದ್ಯರಿಗೂ ಬಂದರೆ ಒಳಿತಾಗುತ್ತದೆ.

ವಿನೋದ್ ರಾಜಕುಮಾರ್ ತಂದೆ ಡಾಕ್ಟರ್ ರಾಜಕುಮಾರ್ ಅಲ್ಲಾ ಅನ್ನುವವರು ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ಸುಮಾರು ಐದಾರು ದಶಕಗಳಿಂದಲೂ ಕೂಡ ಲೀಲಾವತಿ ಅವರ ಪತಿ ಯಾರು? ಹಾಗೂ ವಿನೋದ್ ರಾಜಕುಮಾರ್ ಅವರ ತಂದೆ ಯಾರು ಎಂಬ ವದಂತಿಗಳು ಹರಿದಾಡುತ್ತಲೇ ಇದೆ. ಈ ವಿಚಾರಕ್ಕೆ ಲೀಲಾವತಿ ಆಗಲಿ ಅಥವಾ ವಿನೋದ್ ಆಗಲಿ ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೆ ನೀಡಿಲ್ಲ ಆದರೂ ಕೂಡ ಕೆಲವು ಮಾಧ್ಯಮಗಳಿಂದ ಹಾಗೂ ಕೆಲವು ವಾರ್ತಾ ಪತ್ರಿಕೆಗಳಿಂದ ವಿನೋದ್ ರಾಜಕುಮಾರ್ ಅವರ ತಂದೆ ಡಾಕ್ಟರ್ ರಾಜಕುಮಾರ್ ಅವರು ಅಂತ ಹೇಳುತ್ತಿದ್ದಾರೆ ಇನ್ನು ಕೆಲವರ ಪ್ರಕಾರ ಮಹಾಲಿಂಗ ಭಾಗವತರು ಅಂತ ಹೇಳುತ್ತಿದ್ದಾರೆ.

ಆದರೆ ಇಬ್ಬರಲ್ಲಿ ನಿಜಕ್ಕೂ ವಿನೋದ್ ರಾಜ್ ಅವರ ತಂದೆ ಯಾರು ಎಂಬುದನ್ನು ಯಾರಿಂದಲೂ ಕೂಡ ಕಂಡುಹಿಡಿಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಸತ್ಯ ಲೀಲಾವತಿ ಮತ್ತು ವಿನೋದ್ ರಾಜಕುಮಾರ್ ಅವರಿಗೆ ತಿಳಿದಿದ್ದರೂ ಕೂಡ ಎಲ್ಲಿಯೂ ಕೂಡ ಹೇಳಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣವೇನು ಅಂತ ಯಾರಿಗೂ ಕೂಡ ತಿಳಿದಿಲ್ಲ ಇನ್ನು ಕೆಲವು ಮಾಧ್ಯಮಗಳಲ್ಲಿ ವಿನೋದ್ ರಾಜಕುಮಾರ್ ಅವರ ತಂದೆ ಮಹಾಲಿಂಗ ಭಾಗವತರು ಇವರು ನಾಟಕ ಕಂಪನಿ ನಡೆಸುತ್ತಿದ್ದರು ಲೀಲಾವತಿ ಅವರನ್ನು ಮೂರನೇ ಮದುವೆಯಾದ ನಂತರ ವಿನೋದ್ ರಾಜ್ ಹುಟ್ಟಿದರು ಎಂಬ ಮಾಹಿತಿಗಳು ಕೆಲವು ಮೂಲಗಳಿಂದ ತಿಳಿದು ಬಂದಿದೆ.

ಆದರೆ ಹಿರಿಯ ಪತ್ರಕರ್ತ ಹಾಗೂ ವಾಗ್ಮಿ ಆದಂತಹ ರವಿ ಬೆಳಗೆರೆ ಅವರು ಬರೆದಂತಹ ರಾಜ್ ಲೀಲಾ ವಿನೋದ್ ಎಂಬ ಪುಸ್ತಕದಲ್ಲಿ ಮಾತ್ರ ಡಾಕ್ಟರ್ ರಾಜಕುಮಾರ್ ಅವರೇ ವಿನೋದ್ ರಾಜಕುಮಾರ್ ಅವರ ತಂದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳಂತೂ ಈ ಎಲ್ಲ ವದಂತಿಗಳು ಸುಳ್ಳು ವಿನೋದ್ ರಾಜಕುಮಾರ್ ಕುಟುಂಬಕ್ಕೂ ಯಾವುದೇ ರೀತಿಯಾದಂತಹ ಸಂಬಂಧವಿಲ್ಲ ಅಂತ ಹೇಳಿಕೊಂಡು ಬರುತ್ತಿದ್ದರು. ಆದರೆ ಮೊನ್ನೆ ಅಷ್ಟೇ ಹಿರಿಯ ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡು ಬಂದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.

ತದನಂತರ ಇದೀಗ ಡಿಸ್ಚಾರ್ಜ್ ಮಾಡಿ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುವುದಕ್ಕೆ ಸಲಹೆ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಚಿತ್ರರಂಗದ ಕೆಲವು ಹಿರಿಯ ನಟರು ಮತ್ತು ಗಣ್ಯರು ಹಾಗೂ ಕೆಲವು ನಿರ್ಮಾಪಕರು ನಿರ್ದೇಶಕರು ಎಲ್ಲರೂ ಕೂಡ ಲೀಲಾವತಿ ಅವರನ್ನು ಭೇಟಿ ಮಾಡುವುದಕ್ಕಾಗಿ ಬೆಂಗಳೂರಿನ ನೆಲಮಂಗಲದ ಸಮೀಪದಲ್ಲಿ ಇರುವಂತಹ ಹುಲಸೇ ಗುಡ್ಡನ ಹಳ್ಳಿಗೆ ಭೇಟಿ ನೀಡಿದರು. ಈ ಗ್ರಾಮದಲ್ಲಿ ಲೀಲಾವತಿಯವರು ವಾಸವಾಗಿದ್ದಾರೆ ತಮ್ಮ ಜಮೀನಿನಲ್ಲಿ ವಿನೋದ್ ರಾಜಕುಮಾರ್ ಅವರು ಸ್ವಂತ ಕೃಷಿ ಮಾಡುವುದರ ಮೂಲಕ ಜೀವನ ಸಾಗಿಸುತ್ತಿದ್ದಾರೆ.

ಲೀಲಾವತಿ ಮನೆಗೆ ಭೇಟಿ ನೀಡಿದಂತಹ ವ್ಯಕ್ತಿಯೊಬ್ಬರು ಅವರ ಮನೆಯ ಸಂಪೂರ್ಣ ಚಿತ್ರಣವನ್ನು ಗಮನಿಸಿದ್ದಾರೆ ಈ ಒಂದು ಚಿತ್ರಣದಲ್ಲಿ ಎಲ್ಲಿ ನೋಡಿದರೂ ಕೂಡ ರಾಜಕುಮಾರ್ ಅವರ ಫೋಟೋಗಳೇ ಕಾಣುತ್ತಿದೆ. ಅದರಲ್ಲಿಯೂ ವಿನೋದ್ ರಾಜಕುಮಾರ್ ಅವರನ್ನು ಎತ್ತಿಕೊಂಡಂತಹ ಒಂದು ಫೋಟೋ ಹಾಗೂ ಡಾಕ್ಟರ್ ರಾಜಕುಮಾರ್ ಮತ್ತು ಲೀಲಾವತಿ ಹಾಗೂ ವಿನೋದ್ ರಾಜಕುಮಾರ್ ಮೂರು ಜನ ಇರುವಂತಹ ಮತ್ತೊಂದು ಫೋಟೋಗೆ ದೊಡ್ಡದಾದ ಪ್ರೇಮ್ ಹಾಕಿಸಿ ಅದನ್ನು ಮನೆಯ ಮುಂಭಾಗದಲ್ಲಿ ಇಟ್ಟಿದ್ದಾರೆ. ಇವೆರಡೂ ಫೋಟೋಗಳ ಪಕ್ಕದಲ್ಲಿ ಅಪ್ಪು ಅವರ ಫೋಟೋವನ್ನು ಇಟ್ಟಿದ್ದಾರೆ.

ಇದನ್ನು ನೋಡಿದಂತಹ ಕೆಲವು ನೆಟ್ಟಿಗರು ಮತ್ತು ಕೆಲವು ಸಿನಿ ರಸಿಕರು ಇದಕ್ಕಿಂತಲೂ ದೊಡ್ಡ ಸಾಕ್ಷಿ ಬೇಕೆ ಎಂದು ಹೇಳುತ್ತಿದ್ದಾರೆ. ಏಕೆಂದರೆ ಲೀಲಾವತಿ ಅವರ ಮನೆಯನ್ನು ಸಂಪೂರ್ಣವಾಗಿ ನೋಡಿಕೊಂಡು ಬಂದರೆ ಎಲ್ಲಿಯೂ ಕೂಡ ಮಹಾಲಿಂಗ ಭಾಗವತ ಅವರ ಫೋಟೋ ಕಾಣುತ್ತಿಲ್ಲ. ಬದಲಾಗಿ ಡಾಕ್ಟರ್ ರಾಜಕುಮಾರ್ ಅವರ ಫೋಟೋಗಳೇ ಕಾಣಿಸುತ್ತಿದೆ ಇದನ್ನು ನೋಡಿದಂತಹ ಕೆಲವು ಅಭಿಮಾನಿಗಳು ವಿನೋದ್ ಅವರ ತಂದೆ ರಾಜಕುಮಾರ ಅವರೇ ಅಂತ ಹೇಳುತ್ತಿದ್ದಾರೆ. ಒಂದು ವೇಳೆ ಮಹಾಲಿಂಗ ಭಾಗವತರು ವಿನೋದ್ ರಾಜಕುಮಾರ್ ಅವರ ತಂದೆಯಾಗಿದ್ದಾರೆ ಇಡೀ ಮನೆಯಲ್ಲಿ ಒಂದಾದರೂ ಫೋಟೋ ಅವರದ್ದು ಇರಬೇಕಿತ್ತು.

ಆದರೆ ಎಲ್ಲಿಯೂ ಕೂಡ ಇಲ್ಲ ದಾರಿ ತಪ್ಪಿಸುವುದಕ್ಕಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ ಆದರೆ ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಮಾತ್ರ ತಿಳಿಯುತ್ತಿಲ್ಲ. ಈ ಒಂದು ಪ್ರಶ್ನೆಗೆ ಉತ್ತರವನ್ನು ಸ್ವತಃ ಲೀಲಾವತಿ ಅಥವಾ ವಿನೋದ್ ರಾಜಕುಮಾರ್ ಅವರೇ ನೀಡಬೇಕಿದೆ. ಅಲ್ಲಿಯವರೆಗೂ ಕೂಡ ಈ ಒಂದು ಪ್ರಕರಣಕ್ಕೆ ಇತ್ಯರ್ಥ ಎಂಬುದೇ ದೊರೆಯುವುದಿಲ್ಲ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮಹಾಲಕ್ಷ್ಮಿಗೆ ನನ್ನ ಗಂಡನ ಜೊತೆಯೂ ಕೂಡ ಅಫೇರ್ ಇದೆ, ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಮತ್ತೋರ್ವ ನಟಿ.

0

ಕಳೆದ ಕೆಲವು ದಿನಗಳಿಂದ ಎಲ್ಲೇ ನೋಡಿದರೂ ಕೂಡ ಮಹಾಲಕ್ಷ್ಮಿಗೆ ಸಂಬಂಧಪಟ್ಟಂತಹ ವಿಚಾರಗಳು ಹರಿದಾಡುತ್ತಿದೆ ಇದಕ್ಕೆ ಮುಖ್ಯ ಕಾರಣ ಏನೆಂದರೆ ಮಹಾಲಕ್ಷ್ಮಿಯವರು ಮದುವೆಯಾದಂತಹ ಜೋಡಿ. ಹೌದು ತದ್ವಿರುದ್ಧವಾಗಿ ಇರುವಂತಹ ವ್ಯಕ್ತಿಯನ್ನು ಮದುವೆಯಾಗುವುದರ ಮೂಲಕ ಮಹಾಲಕ್ಷ್ಮಿಯವರು ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರೂ. ಕೆಲವು ನೆಟ್ಟಿದರು ಮಹಾಲಕ್ಷ್ಮಿಯವರು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗಿದ್ದನ್ನು ನೋಡಿ ಇವರು ಪ್ರೀತಿಸಿ ಮದುವೆಯಾಗಿದ್ದಾರೆ ಪ್ರೀತಿಗೆ ಕಣ್ಣಿಲ್ಲ ಎಂಬುವುದು ಇದಕ್ಕೆ ಈ ಕಾರಣಕ್ಕಾಗಿಯೇ ರವೀಂದ್ರನ್ ಅವರನ್ನು ಮಹಾಲಕ್ಷ್ಮಿ ಅವರು ಮದುವೆಯಾಗಿದ್ದಾರೆ ಎಂದು ಹೇಳುತ್ತಿದ್ದರು.

ಇನ್ನು ಕೆಲವರು ಈತ ಕೋಟ್ಯಾಧಿಪತಿ ಈ ಕಾರಣಕ್ಕಾಗಿ ಮದುವೆಯಾಗಿದ್ದಾನೆ ಅದಲ್ಲದೆ ಈತ ನಿರ್ಮಾಪಕ ಹೊಸ ಸಿನಿಮಾಗಳಿಗೆ ನಾಯಕ ನಟಿಯಾಗಿ ಅಭಿನಯ ಮಾಡಬಹುದು ಎಂಬ ದುರುದ್ದೇಶದಿಂದ ಮದುವೆಯಾಗಿದ್ದಾಳೆ ಎಂದು ಸಾಕಷ್ಟು ಟಿಕೆ ಪ್ರಹಾರಗಳನ್ನು ಮಾಡಿದ್ದರು. ಆದರೆ ಇದ್ಯಾವುದಕ್ಕೂ ಕೂಡ ಮಹಾಲಕ್ಷ್ಮಿಯವರು ತಲೆ ಕೆಡಿಸಿಕೊಳ್ಳಲಿಲ್ಲ ಎಲ್ಲರೂ ಕೂಡ ರವೀಂದ್ರನ್ ಅವರ ಜೊತೆ ಮದುವೆಯಾಗಿರುವಂತಹ ಮಹಾಲಕ್ಷ್ಮಿಗೆ ಇದು ಮೊದಲನೇ ಮದುವೆ ಅಂತ ಅಂದುಕೊಂಡಿದ್ದರು.

ಆದರೆ ಮಹಾಲಕ್ಷ್ಮಿಗೆ ಇದಾಗಲೇ ಮದುವೆಯಾಗಿದ್ದು 9 ವರ್ಷದ ಒಬ್ಬ ಗಂಡು ಮಗನು ಕೂಡ ಇದ್ದಾನೆ ಮಹಾಲಕ್ಷ್ಮಿ ಮೊದಲನೇ ಪತಿ ಅನಿಲ್ ಅವರಿಂದ ವಿ.ಚ್ಛೇ.ದ.ನ ಪಡೆದು ಒಂದೆರಡು ವರ್ಷ ಒಂಟಿ ಜೀವನವನ್ನು ಸಾಗಿಸುತ್ತಾರೆ. ತದನಂತರ ರವೀಂದ್ರನ್ ಅವರ ಪರಿಚಯವಾಗಿ ಇವರಿಬ್ಬರ ನಡುವೆ ಪ್ರೀತಿ ಬೆಳೆದು ಇದೀಗ ಸಪ್ತಪದಿ ತುಳಿದಿದ್ದಾರೆ ನೂತನ ಜೀವನಕ್ಕೆ ಕಾಲಿಟ್ಟು ಇಬ್ಬರೂ ಕೂಡ ಸುಖ ಸಂಸಾರವನ್ನು ನಡೆಸಬೇಕಾದ ಹೊತ್ತಿಗೆ ಮತ್ತೊಂದು ಸಂ.ಕ.ಷ್ಟ.ಕ್ಕೆ ಇದೀಗ ಮಹಾಲಕ್ಷ್ಮಿಯವರು ಸಿಲುಕಿದ್ದಾರೆ ಹೌದು ಮಹಾಲಕ್ಷ್ಮಿ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿ ಬರುತ್ತಿದೆ.

ಅದೇನಂದರೆ ಮಹಾಲಕ್ಷ್ಮಿ ಅವರ ಜೊತೆ ನಟನೆ ಮಾಡುತ್ತಿದ್ದಂತಹ ಸಹಕಲಾವಿದ ಆದ ಈಶ್ವರ್ ಅವರ ಧರ್ಮಪತ್ನಿ ಇದೀಗ ಮಹಾಲಕ್ಷ್ಮಿಯ ಮೇಲೆ ವಾಗ್ದಾಳಿಯನ್ನು ನಡೆಸಿದರೆ. ಹೌದು ಬಹಿರಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಮಹಾಲಕ್ಷ್ಮಿಗೆ ನನ್ನ ಗಂಡನ ಜೊತೆ ಅಫೇರ್ ಇದೆ ಅವರಿಬ್ಬರು ಒಟ್ಟಾಗಿ ಇರುವುದನ್ನು ನಾನು ನೋಡಿದ್ದೇನೆ ಅಷ್ಟೇ ಅಲ್ಲದೆ ನನ್ನ ಗಂಡನ ಮೊಬೈಲ್ ನಲ್ಲಿ ವಿಡಿಯೋ ಕಾಲ್ ಮಾಡಿರುವ ಲಿಸ್ಟ್ ಇದೆ ಇವರಿಬ್ಬರ ಫೋಟೋಗಳು ಕೂಡ ನನ್ನ ಬಳಿ ಇದೆ ಅದನ್ನು ನಾನು ಬಹಿರಂಗಪಡಿಸುವೆ ಎಂದು ಸವಾಲು ಹಾಕಿದ್ದಾರೆ.

ಹೌದು ಮಹಾಲಕ್ಷ್ಮಿ ತಮ್ಮೊಡನೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜೊತೆ ಪ್ರೇಮಾಯಣ ನಡೆಸುತ್ತಿದ್ದರು ಎನ್ನುವ ವಿಚಾರವನ್ನು ಈಗ ಸ್ವತಃ ನಟ ಈಶ್ವರ್ ಅವರ ಪತ್ನಿ  ನಟಿ ಜಯಶ್ರೀ ಅವರೇ ಬಹಿರಂಗ ಮಾಡಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಮಹಾಲಕ್ಷ್ಮಿಯವರು ಮತ್ತಷ್ಟು ಟ್ರೋಲ್ ಗೆ ಗುರಿಯಾಗಿದ್ದರೆ ಏಕೆಂದರೆ ಈಗಾಗಲೇ ಒಂದು ಮದುವೆಯಾಗಿದ್ದು ಮಗನು ಇದ್ದರೂ ಕೂಡ ಮತ್ತೊಂದು ಮದುವೆ ಆಗಿದ್ದಾಳೆ. ಬೇರೆ ಮದುವೆ ಆಗಿ ಇನ್ನೂ ಒಂದು ವಾರವೇ ಕಳೆದಿಲ್ಲ ಅಷ್ಟು ಬೇಗ ಮತ್ತೊಬ್ಬ ಪುರುಷನ ಜೊತೆ ಲವ್ವಿ ಡಬ್ಬಿ ಪ್ರೇಮ ಪ್ರಣಯ ನಡೆಸಿದಂತಹ ಪ್ರಕರಣ ಬೆಳಕಿಗೆ ಬಂದಿದೆ.

ಇವೆಲ್ಲವನ್ನು ನೋಡುತ್ತಿದ್ದರೆ ಮಹಾಲಕ್ಷ್ಮಿ ಅವರ ವ್ಯಕ್ತಿತ್ವ ಎಂತಹದು ಅಂತ ತಿಳಿಯುತ್ತದೆ ದುಡ್ಡಿಗಾಗಿ ಇಷ್ಟೆಲ್ಲ ಮಾಡುತ್ತಿದ್ದರ ಅಥವಾ ಇವರ ಹುಟ್ಟು ಗುಣವೇ ಇದೋ ಎಂಬುದು ಯಾರಿಗೂ ಕೂಡ ಅರ್ಥವಾಗುತ್ತಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಪ್ರತಿನಿತ್ಯವೂ ಕೂಡ ಇಂತಹದ್ದೇ ಒಂದಲ್ಲ ಒಂದು ಸುದ್ದಿಗೆ ಗುರಿಯಾಗುತ್ತಿದ್ದಾರೆ ಮುಂದಿನ ದಿನದಲ್ಲಿ ಮಹಾಲಕ್ಷ್ಮಿಯವರು ರವೀಂದ್ರನ್ ಅವರ ಜೊತೆ ಇರುತ್ತಾರೋ ಅಥವಾ ಇವರನ್ನು ಬಿಟ್ಟು ಹೋಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ ರವೀಂದ್ರ ಚಂದ್ರಶೇಖರ್ ಜೊತೆ ಹನಿಮೂನ್ ನಲ್ಲಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

55 ವರ್ಷದ ರಮ್ಯಕೃಷ್ಣಗೆ ಈಗಲೂ ಈ ನಟನ ಮೇಲೆ ಕ್ರಶ್ ಇದಿಯಂತೆ, ನಾಚಿಕೆ ಬಿಟ್ಟು ವೇದಿಕೆ ಬಹಿರಂಗ ಪಡಿಸಿದ ರಮ್ಯಕೃಷ್ಣ. ಆ ಲಕ್ಕಿಮ್ಯಾನ್ ಯಾರು ಗೊತ್ತ.?

0

ಎವರ್ ಗ್ರೀನ್ ಚೆಲುವೆ ರಮ್ಯಕೃಷ್ಣ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಅವರ ಸ್ನೇಹ ಮಾಂಗಲ್ಯಂ ತಂತುನಾನೇನ, ಗಡಿಬಿಡಿ ಗಂಡ, ಮಾಣಿಕ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ರವಿಚಂದ್ರನ್ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹೀಗೆ ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ಅಭಿನಯಿಸಿದ ಖ್ಯಾತಿ ರಮ್ಯಕೃಷ್ಣ ಅವರದ್ದು.

ಇದರಲ್ಲೂ ಕನ್ನಡದಲ್ಲಿ ಅವರ ರಕ್ತ ಕಣ್ಣೀರು ಸಿನಿಮಾದ ಕಾಂತ ಪಾತ್ರವನಂತು ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ. ತಾವು ಅಭಿನಯಿಸಿದ ಎಲ್ಲಾ ಸಿನಿಮಾಗಳನ್ನು ತಮ್ಮ ಪಾತ್ರಕ್ಕೆ ಮಹತ್ವ ಇರುವಂತಹ ಘನತೆಯುಳ್ಳ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ಮೋಡಿ ಮಾಡಿದವರು ರಮ್ಯಕೃಷ್ಣ ಅವರು ಕನ್ನಡ ತಮಿಳು ತೆಲುಗು ಹಿಂದಿ ಮತ್ತು ಮಲಯಾಳಂ ಹೀಗೆ ಪಂಚಭಾಷೆಗಳಲ್ಲಿ ಅಭಿನಯಿಸಿಕೊಂಡಿರುವ ರಮ್ಯಕೃಷ್ಣ ಅವರು 55 ರ ಆಸು ಪಾಸಿನಲ್ಲಿ ಇದ್ದರು ಈಗಲೂ ಯಾವ ನಟಿಗಿಂತ ಕಡಿಮೆ ಏನಿಲ್ಲ.

ಅಲ್ಲದೆ ಭಾರತ ಸಿನಿಮಾ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡದ ಸಾಹಸಸಿಂಹ ಡಾ ವಿಷ್ಣುವರ್ಧನ್ ಇವರ ಎದುರು ವಿಲನ್ ನಲ್ಲಿ ಕಾಣಿಸಿಕೊಂಡು ಗರ್ಜಿಸಿದ ಲೇಡಿ ವಿಲನ್ ಈ ಗಟ್ಟಿಗಿತ್ತಿ. ಇವರ ಅಭಿನಯಕ್ಕೆ ಮತ್ತೊಂದು ಮಟ್ಟದ ಗರಿಮೆ ಏರಿಸಿದ್ದು ರಾಜ ಮೌಳಿ ಅವರ ನಿರ್ದೇಶನದ ಬಾಹುಬಲಿ ಸಿನಿಮಾ. ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ ವೃತ್ತಿ ಬದುಕಿನಲ್ಲಿ ಸದಾ ನೆನಪಿನಲ್ಲಿ ಇರುವ ಅದ್ಭುತ ಪಾತ್ರ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಮ್ಯಾ ಕೃಷ್ಣ ಅವರು ಸುದೀಪ್, ಪುನೀತ್ ಸೇರಿದಂತೆ ಹಲವು ಸ್ಟಾರ್ ನಟರಿಗೆ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.

ಕಳೆದ ವಾರ ಬಿಡುಗಡೆ ಆದ ಲೈಗರ್ ಸಿನಿಮಾದಲ್ಲೂ ಕೂಡ ವಿಜಯ್ ದೇವರಕೊಂಡ ಅವರಿಗೆ ತಾಯಿಯಾಗಿ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ ರಮ್ಯಕೃಷ್ಣ ಅವರು. 90ರ ದಶಕದಲ್ಲಿ ಹಲವರಿಗೆ ಫೇವರೆಟ್ ಹೀರೋಯಿನ್ ಆಗಿದ್ದ ರಮ್ಯಕೃಷ್ಣ ಅವರು ತೆಲುಗಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ತಮ್ಮ ಕ್ರಶ್ ಯಾರು ಎಂಬುದನ್ನು ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಇವರಿಗೆ ಜೋಡಿಯಾಗಿ ಅಕ್ಕಿನೇನಿ ನಾಗಾರ್ಜುನ್ ಅವರ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಾಗಾರ್ಜುನ್ ಅವರಿಗೆ ನಿಮ್ಮ ಫೇವರೆಟ್ ಹೀರೋಯಿನ್ ಯಾರು ಎಂದು ಪ್ರಶ್ನೆ ಕೇಳಲಾಗಿತ್ತು.

ನಿರೂಪಕರು ಕೇಳಿದ ಈ ಪ್ರಶ್ನೆಗೆ ನಾಗಾರ್ಜುನ ಅವರು ಉತ್ತರಿಸುವ ಮೊದಲೇ ರಮ್ಯಕೃಷ್ಣ ಅವರು ಮಧ್ಯ ಮಾತನಾಡಿ ನಾಗಾರ್ಜುನ ಅವರಿಗೆ ಫೇವರೆಟ್ ಹೀರೋಯಿನ್ ಯಾರಾದರೂ ಆಗಿರಬಹುದು ಆದರೆ ನನಗೆ ಫೇವರೆಟ್ ಹೀರೋ ಹಾಗೂ ನನ್ನ ಕ್ರಷ್ ಯಾವಾಗಲೂ ನಾಗರ್ಜುನ್ ಅವರೇ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಅವರು ಚಿರ ಯುವಕನಂತೆ ಈಗಲೂ ಕಾಣುತ್ತಿರುವುದು ಎಂದು ಹೇಳಿದ್ದಾರೆ ಈ ಮಾತನ್ನು ಕೇಳಿ ನಾಗರ್ಜುನ್ ಅವರು ಮುಗುಳ್ನಗೆ ಬೀರಿದರು ರಮ್ಯಕೃಷ್ಣ ಹಾಗೂ ನಾಗಾರ್ಜುನ್ ಅವರು ಬಂಗಾರಾಜು ಎನ್ನುವ ಸಿನಿಮಾದಲ್ಲಿ ಈ ವರ್ಷ ಒಟ್ಟಿಗೆ ಅಭಿನಯಿಸಿದ್ದಾರೆ.

ಇದಲ್ಲದೆ ತೆಲುಗಿನಲ್ಲಿ ಸಂಕೀರ್ತನ ಸೊರ್ ಅಲ್ಲಾರಿ ಅಲ್ಲುದು ಹಲೋ ಬ್ರದರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಮ್ಯಕೃಷ್ಣ ಅವರು ನಾಗಾರ್ಜುನ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೋಡಿಯ ಹಲವು ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳು ಆಗಿದೆ ಅಲ್ಲದೆ ಬೇರೆ ಭಾಷೆಗಳಿಗೆ ರಿಮೇಕ್ ಕೂಡ ಆಗಿದೆ. ಇಂದಿಗೂ ಇವರಿಬ್ಬರ ಕಾಂಬಿನೇಷನ್ ಹಲವು ಜನರಿಗೆ ಫೇವರೆಟ್. ಒಟ್ಟಾರೆಯಾಗಿ ಹೇಳುವುದಾದರೆ ರಮ್ಯ ಕೃಷ್ಣ ಅವರ ಕ್ರಶ್ ತೆಲುಗಿನ ನಾಗಾರ್ಜುನ್ ಅಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ದರ್ಶನ್ ಹಾಗೂ ಪವಿತ್ರಗೆ ಇರುವ ಸಂಭಂದವೇನು ಗೊತ್ತ.? ಯಾರಿಗೂ ತಿಳಿಯದ ರಹಸ್ಯ ಇಲ್ಲಿದೆ ನೋಡಿ.

0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿಗೆ ತಕ್ಕಹಾಗೆ ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ಪ್ರತಿದಿನವನ್ನು ಕೂಡ ಚಾಲೆಂಜ್ ಆಗಿ ತೆಗೆದುಕೊಂಡು ಹಂತ ಹಂತವಾಗಿ ತಮ್ಮ ಕನಸನ್ನು ನನಸು ಮಾಡಿಕೊಂಡ ನಟ. ಹೊಟ್ಟೆಪಾಡಿಗಾಗಿ ಲೈಟ್ ಬಾಯ್ ಆಗಿ ಮೊದಲು ಸಿನಿಮಾಗಳಲ್ಲಿ ಸಹಾಯಕ್ಕೆ ಸೇರಿಕೊಂಡ ದರ್ಶನ್ ತಮ್ಮ ಹೀರೋ ಆಗುವ ಕನಸನ್ನು ನನಸು ಮಾಡಿಕೊಳ್ಳುತ್ತಾರೆ ಎಂದು ಯಾರು ಸಹ ಆ ದಿನ ಊಹಿಸಿರಲಿಲ್ಲ ಆದರೆ ಅವರ ಸತತ ಪ್ರಯತ್ನ ಮತ್ತು ಅದ್ಭುತವಾದ ಟ್ಯಾಲೆಂಟ್ ಇಂದ ಇಂದು ಇಡೀ ಕರ್ನಾಟಕದಲ್ಲಿ ಯಾವೊಬ್ಬ ಹೀರೋಗೂ ಇರದಷ್ಟು ಅಪಾರ ಅಭಿಮಾನಿಗಳು ದರ್ಶನ್ ಅವರಿಗೆ ಇದ್ದಾರೆ.

ದರ್ಶನ್ ಕರ್ನಾಟಕದಲ್ಲಿ ಇಂದು ಒಬ್ಬ ಸ್ಟಾರ್ ಹೀರೋ ಆಗಿ ಮೆರೆಯುತ್ತಿದ್ದಾರೆ. ಅವರ ಸಿನಿಮಾಗಳನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿ, ಸಂಭ್ರಮಿಸಿ, ಸೂಪರ್ ಹಿಟ್ ಮಾಡುತ್ತಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಫೇಮಸ್ ಆಗುವುದರ ಜೊತೆಗೆ ಅವರು ಒಂದು ಸಣ್ಣ ಘಟನೆಯಲ್ಲಿ ಭಾಗಿಯಾಗಿದ್ದರೂ ಅದು ವಿವಾದವಾಗಿ ಮಾಧ್ಯಮಗಳಲ್ಲಿ ದಿನಪೂರ್ತಿ ಪ್ರಸಾರ ಆಗುವುದು ಮಾಮೂಲು. ಆದರೆ ದರ್ಶನ್ ಅವರು ಮಾತ್ರ ಸ್ವತಃ ಅವರೇ ಅನೇಕ ಎಡವಟ್ಟುಗಳನ್ನು ಮಾಡಿಕೊಳ್ಳುವ ಮೂಲಕ ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮೊದಲ ಬಾರಿ ದರ್ಶನ್ ಅವರು ಅವರ ಪತ್ನಿ ಮೇಲೆ ಹ.ಲ್ಲೆ ಮಾಡಿದಾಗ ಅವರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು ಆ ಸಮಯದಲ್ಲಿ ದರ್ಶನ್ ಅವರು ಅರೆಸ್ಟ್ ಕೂಡ ಆಗಿದ್ದರು. ನಂತರ ನಟಿ ನಿಖಿತಾ ಅವರ ಜೊತೆಗೆ ದರ್ಶನ್ ಹೆಸರು ತಳುಕು ಹಾಕಿಕೊಂಡಿತ್ತು ಮತ್ತು ಕನ್ನಡದ ಸಿನಿಮಾಗಳಿಂದ ಕೆಲವು ವರ್ಷಗಳವರೆಗೆ ನಿಖಿತಾ ಅವರನ್ನು ಬ್ಯಾನ್ ಕೂಡ ಮಾಡಲಾಗಿತ್ತು. ಬಳಿಕ ಸಾಲು ಸಾಲು ವಿವಾದಗಳಲ್ಲಿ ದರ್ಶನ್ ಅವರ ಹೆಸರು ಮಾಧ್ಯಮಗಳಲ್ಲಿ ಪ್ರಸಾರವಾಗಿ ದೊಡ್ಡ ಸುದ್ದಿ ಆಗುತ್ತಿತ್ತು.

ದರ್ಶನ್ ಮತ್ತು ಸುದೀಪ್ ಅವರ ಸ್ನೇಹ ಒಡೆದು ಇಬ್ಬರು ಒಬ್ಬರಿಗೊಬ್ಬರು ಹೇಳಿಕೆ ಕೊಡುವ ಮೂಲಕ ಸುದ್ದಿಯಲ್ಲಿದ್ದರು ಮತ್ತು ಕಳೆದ ವರ್ಷ ಸಂದೇಶ್ ನಾಗರಾಜ್ ಅವರಿಗೆ ಸೇರಿದ ಮೈಸೂರಿನ ಹೋಟೆಲ್ ಒಂದರಲ್ಲಿ ಆದ ವಿವಾದ ನಿರ್ಮಾಪಕ ಉಮಾಪತಿ, ಅರುಣ ಕುಮಾರಿ, ದರ್ಶನ್ , ದರ್ಶನ್ ಸ್ನೇಹಿತರು, ದೊಡ್ಮನೆ, ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ಹೀಗೆ ಹಲವರ ಹೆಸರನ್ನು ಇದು ಸೇರಿಸಿಕೊಂಡಿದ್ದು. ಕೊನೆಗೆ ಇಂದ್ರಜಿತ್ ಲಂಕೇಶ್ ಅವರು ಲಿಸ್ಟ್ ಅಲ್ಲಿ ಮತ್ತೊಂದು ಹೆಸರನ್ನು ಸೇರಿಸಿ ಅವರು ಕೂಡ ಆ ದಿನ ಗಲಾಟೆ ಆದ ಜಾಗದಲ್ಲಿ ಇದ್ದರು ಎಂದು ಆರೋಪಿಸಿದರು.

ಅದು ಬೇರೆ ಯಾರ ಹೆಸರು ಅಲ್ಲ ದರ್ಶನ್ ಜೊತೆ ಆಗಾಗ ಕೇಳಿ ಬರುವ ಪವಿತ್ರ ಗೌಡ ಅವರ ಹೆಸರು. ಪವಿತ್ರ ಗೌಡ ಅವರು ದರ್ಶನ್ ಅವರ ಸ್ನೇಹಿತರು. ಈ ಹಿಂದೆ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ದರ್ಶನ್ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿ ಇದ್ದರು. ಅದಾದ ಬಳಿಕ ಅದು ವಿವಾದವಾಗುತ್ತಿದ್ದಂತೆ ದರ್ಶನ್ ಅವರ ತಾಯಿ ಹಾಗೂ ಅವರ ಅಕ್ಕನ ಜೊತೆ ಇರುವ ಫೋಟೋಗಳನ್ನು ದರ್ಶನ್ ಅವರ ಕುಟುಂಬದ ಸಮಾರಂಭಗಳಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದರು.

ದರ್ಶನ್ ಅವರು ವಾರ್ನ್ ಮಾಡಿದ ಬಳಿಕ ಕೆಲವೇ ದಿನಗಳಲ್ಲಿ ಅದು ಅವರ ಖಾತೆಯಿಂದ ಡಿಲೀಟ್ ಆಗಿತ್ತು. ಇವರಿಬ್ಬರ ನಡುವೆ ಇರುವುದು ಸ್ನೇಹವಷ್ಟೇ ಅಲ್ಲಾ ಎನ್ನುವ ಆರೋಪಗಳು ಕೂಡ ಇವೆ. ಈಗಾಗಲೇ ಪವಿತ್ರ ಗೌಡ ಅವರಿಗೆ ಒಂದು ಮದುವೆಯಾಗಿದ್ದು ವಿ.ಚ್ಛೇ.ದ.ನ ಪಡೆದು ಮಗನ ಜೊತೆ ಬದುಕುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ದರ್ಶನ್ ಮತ್ತು ಪವಿತ್ರ ಗೌಡ ಇಬ್ಬರು ಕೂಡ ಆತ್ಮೀಯ ಸ್ನೇಹಿತರು ಅಷ್ಟೇ ಅದನ್ನು ಒರೆತುಪಡಿಸಿ ಬೇರೆ ಯಾವ ಸಂಬಂಧವೂ ಕೂಡ ಇಲ್ಲ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಟೀಮ್ ಜೊತೆ ಅನುಶ್ರೀ ಮಾಡಿದ ಈ ಟಪಾಂಗುಚಿ ಡಾನ್ಸ್ ನೋಡಿದ್ರೆ ನಿಂತಲ್ಲೇ ಹೆಜ್ಜೆ ಹಾಕ್ತೀರಾ.

0

ಆಂಕರ್ ಅನುಶ್ರೀ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕರ್ನಾಟಕದ ಮನೆ ಮಾತಾಗಿದ್ದಾರೆ ಅನುಶ್ರೀ ಅವರ ನಿರೂಪಣೆ ಅಂದರೆ ಸಾಕು ಎಲ್ಲರೂ ಕೂಡ ಮುಗಿ ಬೀಳುತ್ತಾರೆ. ಏಕೆಂದರೆ ಇವರ ಸ್ಪಷ್ಟ ಕನ್ನಡ ಮಾತನಾಡುವ ಶೈಲಿ ರಂಜಿಸುವಂತಹ ಕಲೆ ಇವೆಲ್ಲವೂ ಕೂಡ ಕರ್ನಾಟಕದ ಜನತೆಗೆ ಬಹಳ ಇಷ್ಟವಾಗಿದೆ. ಈ ಕಾರಣಕ್ಕಾಗಿಯೇ ಆಂಕರ್ ಅನುಶ್ರೀ ಅವರ ಕಾರ್ಯಕ್ರಮ ಅಂದರೆ ಎಲ್ಲಾ ಪ್ರೇಕ್ಷಕರು ಕೂಡ ತಪ್ಪದೇ ವೀಕ್ಷಣೆ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಟಿವಿ ಪ್ರಮೋಷನ್ ಕಾರ್ಯಗಳು ಇರಬಹುದು ಸಿನಿಮಾ ಕಾರ್ಯಗಳು ಇರಬಹುದು ಅಥವಾ ಡ್ಯಾನ್ಸಿಂಗ್ ಕಾರ್ಯಕ್ರಮ ಇರಬಹುದು ಎಲ್ಲದರಲ್ಲೂ ಕೂಡ ಅನುಶ್ರೀ ಅವರೇ ಇರಬೇಕು ಎಂಬ ಬೇಡಿಕೆಯನ್ನು ಕರ್ನಾಟಕದ ಜನತೆ ಇಟ್ಟಿದ್ದಾರೆ.

ಸದ್ಯಕ್ಕೆ ಹೇಳಬೇಕಾದರೆ ಈಗ ಇರುವಂತಹ ಎಲ್ಲಾ ನಿರೂಪಕರ ಪೈಕಿ ಅನುಶ್ರೀ ಅವರೇ ನಂಬರ್ ಒನ್ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಆಂಕರ್ ಅನುಶ್ರೀ ಅವರು ಸದಾ ಕಾಲ ಯಾವುದಾದರೂ ಒಂದು ಆಕ್ಟಿವಿಟಿಯಲ್ಲಿ ಸಕ್ರಿಯರಾಗಿರುತ್ತಾರೆ ಇವರು ಕೇವಲ ನಿರೂಪಣೆ ಮಾಡುವುದರಲ್ಲಿ ಮಾತ್ರ ಹೆಸರುವಾಸಿಯಾಗಿಲ್ಲ ಬದಲಾಗಿ ಡ್ಯಾನ್ಸ್ ಮಾಡುವುದರಲ್ಲೂ ಕೂಡ ಪ್ರಾವೀಣ್ಯತೆಯನ್ನು ಹೊಂದಿದ್ದರೆ. ಈ ಕಾರಣಕ್ಕಾಗಿ ಕಸ್ತೂರಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಡ್ಯಾನ್ಸಿಂಗ್ ಕಾರ್ಯಕ್ರಮ ಒಂದರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಅದರಲ್ಲಿ ವಿಜೇತರು ಕೂಡ ಆಗಿದ್ದರು.

ಡ್ಯಾನ್ಸ್ ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ ಮತ್ತು ಪ್ರವೀಣ್ಯತೆ ಹೊಂದಿದ್ದರು ಕೂಡ ಸದ್ಯಕ್ಕೆ ಅನುಶ್ರೀ ಅವರು ನಿರೂಪಕಿಯಾಗಿಯೇ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಅನುಶ್ರೀ ಅವರು ಡಾನ್ಸ್ ಮೇಲೆ ಇರುವಂತಹ ಹೊಲವನ್ನು ಆಗಾಗ ವ್ಯಕ್ತಪಡಿಸುತ್ತಾರೆ. ಸಮಯ ಸಿಕ್ಕಾಗೆಲ್ಲ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ ಅಷ್ಟೇ ಅಲ್ಲದೆ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಭಾಗವಹಿಸುವಂತಹ ಸ್ಪರ್ಧಿಗಳು ಆಗಿರಬಹುದು ಅಥವಾ ಮೆಂಟರ್ ಗಳು ಆಗಿರಬಹುದು ಡ್ಯಾನ್ಸ್ ಮಾಸ್ಟರ್ ಆಗಿರಬಹುದು ಯಾರೇ ಆಗಿದ್ದರೂ ಕೂಡ ಅವರ ಜೊತೆಗೆ ಹೆಜ್ಜೆ ಹಾಕುವುದರ ಮೂಲಕ ಸಮಯವನ್ನು ಕಳೆಯುತ್ತಾರೆ.

ಈಗಲೂ ಕೂಡ ಅನುಶ್ರೀ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕೋರಿಯೋಗ್ರಾಫರ್ ಆದಂತಹ ರುದ್ರ ಮಾಸ್ಟರ್ ಮಂಜು ಮಾಸ್ಟರ್ ರವಿ ಮಾಸ್ಟರ್ ಅರುಣ್ ಮಾಸ್ಟರ್ ಸೇರಿದಂತೆ ಸಾಕಷ್ಟು ಕಲಾವಿದರ ಒಟ್ಟಿಗೆ ಹೆಜ್ಜೆಯನ್ನು ಹಾಕಿದರೆ ಈ ಡಾನ್ಸ್ ನೋಡಿದರೆ ಎಂತವರಾದರೂ ಕೂಡ ಎದ್ದು ಕುಣಿಯುತ್ತಾರೆ. ಹೌದು ಅಲ್ಲಿ ನೋಡು ಗಣೇಶ, ಇಲ್ಲಿ ನೋಡು ಗಣೇಶ, ಮೇಲೆ ನೋಡು ಗಣೇಶ, ಕೆಳಗೆ ನೋಡು ಗಣೇಶ ಎಂಬ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಅನುಶ್ರೀ ಅವರು ಎಂಜಾಯ್ ಮಾಡುತ್ತಿದ್ದಾರೆ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಅವರು ಮಾಡಿದಂತಹ ಈ ಡಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸನ್ನು ಗೆದ್ದಿದೆ.

ಅಷ್ಟೇ ಅಲ್ಲದೆ ಅನುಶ್ರೀ ಅವರ ಈ ಟಪಂಗುಚಿ ಡ್ಯಾನ್ಸನ್ನು ನೋಡಿದಂತಹ ಕೆಲವು ಅಭಿಮಾನಿಗಳು ಕೂಡ ಹೆಜ್ಜೆ ಹಾಕಿದ್ದಾರೆ. ಅನುಶ್ರೀ ಅವರು ಬಹು ಬೇಡಿಕೆಯ ನಿರೂಪಕಿ ಈ ಕಾರಣಕ್ಕಾಗಿ ಅನುಶ್ರೀ ಅವರಿಗೆ ಎಂಜಾಯ್ ಮಾಡುವುದಕ್ಕೆ ಸಮಯ ಸಿಗುವುದಿಲ್ಲ ಆದರೂ ಕೂಡ ಬಿಡುವಿನ ಸಮಯದಲ್ಲಿ ತಮ್ಮ ಟೀಮ್ ಒಟ್ಟಿಗೆ ಹೆಚ್ಚಿನ ಸಮಯ ಕಳೆಯುವುದಕ್ಕೆ ಇಷ್ಟಪಡುತ್ತಾರೆ. ಡ್ಯಾನ್ಸ್ ಮಾಡುವುದಕ್ಕೆ ಅವಕಾಶ ಸಿಕ್ಕರೆ ಸಾಕು ಎಂದು ಕಾಯುವ ಅನುಶ್ರೀ ಅವರು ಕೆಲವೊಮ್ಮೆ ವೇದಿಕೆಯ ಮೇಲೆ ಇನ್ನು ಕೆಲವೊಮ್ಮೆ ಶೂಟಿಂಗ್ ನಡೆಯುವಂತಹ ಜಾಗದಲ್ಲಿ ಮತ್ತು ಕೆಲವೊಮ್ಮೆ ಕ್ಯಾರವನ್ ನಲ್ಲಿ ಹೆಜ್ಜೆ ಹಾಕುತ್ತಾರೆ. ಅನುಶ್ರೀ ಅವರು ಮಾಡಿದ ಈ ಡಾನ್ಸ್ ನೋಡಿ, ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಸಿಹಿಸುದ್ದಿ ನೀಡಿದ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ, ಅಭಿಮಾನಿಗಳಿಂದ ಹರಿದು ಬಂದಿದೆ ಶುಭಾಶಯದ ಮಹಾಪುರ.

ಕಾದಂಬರಿ ಆಧಾರಿತ ಚಿತ್ರಕ್ಕೆ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ರಾಗಿಣಿ ಪ್ರಜ್ವಲ್ ಡೈನಾಮಿಕ್ ಹೀರೋ ದೇವರಾಜ್ ಅವರ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರನ್ನು ರಂಜಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಇವರ ಇನ್ಸ್ಪೆಕ್ಟರ್ ವಿಕ್ರಂ ಚಿತ್ರವು ಉತ್ತಮ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿತ್ತು ಹಾಗೆಯೇ ಡ್ರಗ್ಸ್ ವಿರುದ್ದ ಹೋರಾಡುವ ಇವರ ಜೆಂಟಲ್ ಮ್ಯಾನ್ ಚಿತ್ರ ಮತ್ತು ಅರ್ಜುನ್ ಗೌಡ ಚಿತ್ರ ಕೂಡ ಉತ್ತಮ ಪ್ರದರ್ಶನ ಕಂಡಿದೆ.

ಇದೀಗ ಇವರ ಪತ್ನಿ ರಾಗಿಣಿ ಪ್ರಜ್ವಲ್ ಅವರೂ ಸಹ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು ಸಿನಿಮಾ ಒಂದರಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಒಂದು ಕಾದಂಬರಿಯ ಆಧಾರಿತ ಚಿತ್ರವಾಗಿದ್ದು ಈ ಚಿತ್ರವನ್ನು ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ಆಕ್ಷನ್ ಕಟ್ ಹೇಳಲಿದ್ದು ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರ ರಾಗಿಣಿ ಅವರ ಎರಡನೇ ಚಿತ್ರ ಆಗಿದ್ದು ಮೊದಲನೇ ಚಿತ್ರ ಲಾ 2020 ರಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ ತೆರೆ ಕಂಡಿತ್ತು.

ರಾಗಿಣಿ ಅವರು ಕೇವಲ ಸಿನಿಮಾ ಕ್ಷೇತ್ರ ಒಂದನ್ನೇ ಆಯ್ದುಕೊಳ್ಳದೆ ಫಿಟ್ನೆಸ್ ತರಬೇತಿ ಸೆಂಟರ್ ಕೂಡ ನಡೆಸುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ತನ್ನ ಪತಿ ಜೊತೆಗೆ ವರ್ಕ್ ಔಟ್ ವಿಡಿಯೋಗಳನ್ನು ಹಂಚಿಕೊಂಡು ಆಕ್ಟಿವ್ ಆಗಿದ್ದಾರೆ. ಹೋಟೆಲ್ ಉದ್ಯಮವನ್ನೂ ಸಹ ನಡೆಸುತ್ತಿರುವ ರಾಗಿಣಿ ಅವರು ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿಯೂ ಸಹ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.

ಸದ್ಯಕ್ಕೆ ಇವರು ನಟಿಸಲು ಒಪ್ಪಿಗೆ ಸೂಚಿಸಿರುವ ಎರಡನೇ ಚಿತ್ರ ಭಾಗ್ಯ ಕೃಷ್ಣ ಮೂರ್ತಿ ಅವರ ಕಾದಂಬರಿಯ ಆಧರಿಸಿ ಶಾನುಭೋಗರ ಮಗಳು ಎಂಬ ಸಿನಿಮಾವನ್ನ ಕೂಡ್ಲು ರಾಮಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದು ಈ ಚಿತ್ರಕ್ಕೆ ಶಾನುಭೋಗರ ಮಗಳಾಗಿ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಅವರನ್ನು ಅರಿಸಿಕೊಂಡಿದ್ದಾರೆ. ರಾಗಿಣಿ ಅವರು ಪ್ರಜ್ವಲ್ ದೇವರಾಜ್ ಅವರ ಬಾಲ್ಯದ ಗೆಳತಿ ಆಗಿದ್ದು ಗೆಳೆತನ ಪ್ರೇಮವಾಗಿ 2014 ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಪತಿ ಪತ್ನಿಯರಿಬ್ಬರೂ ಸೇರಿ ಡ್ಯಾನ್ಸ್, ವರ್ಕ್ ಔಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿ ಇವರ ಜೋಡಿಯ ಹೆಸರಿನಲ್ಲಿ ಅನೇಕ ಫ್ಯಾನ್ಸ್ ಪೇಜ್ ಹುಟ್ಟಿಕೊಳ್ಳಲು ಕಾರಣರಾಗಿದ್ದಾರೆ. ರಾಗಿಣಿ ಅವರು ಮಾಡೆಲಿಂಗ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ಅತ್ಯುತ್ತಮ ನೃತ್ಯಗಾರ್ತಿ ಕೂಡ ಆಗಿದ್ದಾರೆ ಇದಿಷ್ಟೇ ಅಲ್ಲದೇ ತಂಗಂ ಜ್ಯುವೆಲರ್ಸ್, ಕೃಷ್ಣ ತುಳಸಿ ಸೋಪ್, ಬ್ರು ಇಂಸ್ಟಂಟ್ ಕಾಫೀ ಮುಂತಾದ ಅನೇಕ ಜಾಹಿರಾತುಗಳಲ್ಲಿಯೂ ಸಹ ಕಾಣಿಸಿಕೊಂಡು ಅನೇಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

2020 ರಲ್ಲಿ ತೆರೆಕಂಡ ಇವರ ಲಾ ಚಿತ್ರ ಕಾನೂನಾತ್ಮಕ ಹೋರಾಟದ ಚಿತ್ರವಾಗಿದೆ ಇವರ ಮೊದಲನೇ ಕಿರುಚಿತ್ರ ಎಂದರೆ ರಿಷಭಪ್ರಿಯಾ ಇದರಲ್ಲಿ ಪ್ರಿಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಗಿಣಿ ಅವರ ತಂದೆ ಚಂದ್ರನ್ ಅವರೂ ಸಹ ಉರಿತ್ಮಿಕ್ ಡ್ಯಾನ್ಸ್ ಸ್ಟುಡಿಯೋ ದ ಸಹ ಸಂಸ್ಥಾಪಕರಾಗಿದ್ದಾರೆ. ಹೀಗೆ ರಾಗಿಣಿ ಪ್ರಜ್ವಲ್ ಅವರು ಕೇವಲ ಪ್ರಜ್ವಲ್ ಅವರ ಹೆಂಡತಿಯಾಗಿ ಮಾತ್ರವಲ್ಲದೆ ತಮ್ಮ ಜೀವನವನ್ನು ಸಾಕಷ್ಟು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಯುವ ಪೀಳಿಗೆಗೆ ಮಾದರಿ ಆಗಿದ್ದಾರೆ.

ನೋಡೋಕೆ ನಾನು ಇಷ್ಟು ಸುಂದರವಾಗಿ ಇದ್ದರೂ ಕೂಡ ಯಾವ ಹುಡುಗರು ನನ್ನ ಬಳಿ ಬಂದು ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ.

0

ದಿನ ಕಳೆಯುತ್ತಿದ್ದಂತೆ ಬಿಗ್ ಬಾಸ್ ಮನೆ ಬಿಕೋ ಎನಿಸುತ್ತಿದೆ ಇನ್ನು ಒಂದು ವಾರ ಅಷ್ಟೇ ಮನೆ ಒಳಗಿನ ಎಲ್ಲಾ ಸದಸ್ಯರು ಕೂಡ ಹೊರಗಿರುತ್ತಾರೆ. ಈ ಬಗ್ಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಇದು ಕೊನೆಯ ವಾರ ಎನ್ನುವುದನ್ನು ಹೇಳಿದ್ದಾರೆ. ಹೀಗಿದ್ದಾಗ ಮನೆಯಲ್ಲಿ ಸದಸ್ಯರು ಕಡಿಮೆಯಾಗುತ್ತಿದ್ದಂತೆ ಅಥವಾ ಆಟ ಮುಗಿಯುತ್ತಿದ್ದಂತೆ ಒಬ್ಬರಿಗೊಬ್ಬರ ನಡುವೆ ಹೊಂದಾಣಿಕೆ ಬಾಂಧವ್ಯ ಹೆಚ್ಚಾಗುತ್ತಿತ್ತು ಅದ್ಯಾಕೋ ಈ ಬಾರಿ ಪಂದ್ಯ ಮುಗಿಯುವ ವೇಳೆ ಆದರೂ ಕೂಡ ಮನೆ ಮಂದಿಯಲ್ಲಿ ಆ ಆಪ್ತತೆ ಇನ್ನು ಮೂಡಿಲ್ಲ.

ಮನೆಗೆ ಬಂದ ಮೊದಲ ದಿನ ಹೇಗಿದ್ದರೂ ಇನ್ನೂ ಸಹ ಹಾಗೆ ವರ್ತಿಸುತ್ತಿದ್ದಾರೆ ಈ ಬಗ್ಗೆ ಆಗಾಗ ಬಿಗ್ ಬಾಸ್ ಮನೆಯೊಳಗೆ ಕೆಲವರು ಕಣ್ಣೀರಿಟ್ಟು ಗೋಳಾಡಿರುವುದು ಇದೆ. ನೆನ್ನೆ ಸೋಮಣ್ಣ ಇಂದು ಜಯಶ್ರೀ ಆ ಸಾಲಿನಲ್ಲಿದ್ದಾರೆ. ಜಯಶ್ರೀ ಆರಾಧ್ಯ ಅವರು ಯಾವಾಗಲೂ ಜೋರು ಧ್ವನಿಯಲ್ಲಿ ಮಾತನಾಡುತ್ತಾ ಎಲ್ಲದಕ್ಕೂ ಕೊಂಕುಮಾಡುತ್ತಾ ಸಹಸ್ಪರ್ಧಿಗಳ ಜೊತೆ ಜಗಳ ಆಡುತ್ತಾ ದಿನಪೂರ್ತಿ ಆಕ್ಟಿವ್ ಆಗಿ ಇರುತ್ತಿದ್ದರು. ಚೈತ್ರ ಹಳ್ಳಿಕೇರಿ ಅವರೊಂದಿಗೆ ಜಯಶ್ರೀ ಅವರಿಗೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು ಇಬ್ಬರು ಸಹ ಅಕ್ಕ-ತಂಗಿಯರ ರೀತಿ ಜೊತೆಗೂಡಿ ಒಳ್ಳೆ ಆಟ ಆಡುತ್ತಿದ್ದರು.

ಆದರೆ ಕಳೆದ ವಾರ ಚೈತ್ರಹಳ್ಳಿ ಕೇರಿ ಅವರು ಎಲಿಮಿನೇಟ್ ಆದ ದಿನದಿಂದ ಜಯಶ್ರೀ ಕುಸಿದು ಹೋಗಿದ್ದಾರೆ ಎಂದು ಹೇಳಬಹುದು. ಅವರು ಮನೆಯಿಂದ ಹೊರ ಹೋಗುತ್ತಿದ್ದಂತೆ ಇದನ್ನು ಹೇಳಿಕೊಂಡು ಬಾತ್ರೂಮ್ ನಲ್ಲಿ ಜೋರಾಗಿ ಅಳುತ್ತಿದ್ದ ಜಯಶ್ರೀ ಅವರು ಚೈತ್ರ ಅವರ ಇಲ್ಲದೆ ನನಗೆ ಇರಲು ಆಗುತ್ತಿಲ್ಲ ನನಗೆ ತುಂಬಾ ಒಂಟಿತನ ಕಾಡುತ್ತದೆ ನನ್ನನ್ನು ಹೊರಗೆ ಕಳುಹಿಸಿ ಬಿಡಿ ಎಂದು ಕಣ್ಣೀರು ಇಟ್ಟಿದ್ದರು. ಆ ಸಮಯದಲ್ಲಿ ಮನೆ ಮಂದಿಯೆಲ್ಲಾ ಸಾಂತ್ವನ ನೀಡಿದ್ದರು. ಸೋನು ಗೌಡ ಕೂಡ ಸಮಾಧಾನ ಮಾಡಿ ನನಗೆ ಇಷ್ಟ ಆದವರು ಕೂಡ ಆಚೆ ಹೋಗಿದ್ದಾರೆ.

ಅವರು ಹೋದಾಗ ನನಗೂ ಹಾಗೆ ಅನಿಸಿತು ಈಗ ನಿನಗೆ ಬೇಕಾದವರು ಕೂಡ ಇಲ್ಲ ಇಬ್ಬರ ಒಂಟಿಯಾಗಿದ್ದೇವೆ ನಾನು ನಿನ್ನ ಜೊತೆ ಇರುತ್ತೇನೆ ಎಂದು ಸಮಾಧಾನ ಮಾಡಿದ್ದರು. ಗುರೂಜಿ ಕೂಡ ಜಯಶ್ರೀ ಅವರೊಂದಿಗೆ ಮಾತನಾಡಿ ಧೈರ್ಯ ಹೇಳಿದ್ದರು ಈಗ ಮತ್ತೊಮ್ಮೆ ನಿನ್ನೇ ಜಯಶ್ರೀ ಅವರು ಅದೇ ಮಾತುಗಳನ್ನು ಆಡಿದ್ದಾರೆ. ಸೋನು ಗೌಡ ಹಾಗೂ ಗುರೂಜಿ ಒಟ್ಟಿಗೆ ಕುಳಿತು ತಿಂಡಿ ತಿನ್ನುತ್ತಿದ್ದರು, ಅಲ್ಲಿಗೆ ಬಂದ ಜಯಶ್ರೀ ಗುರುಜಿ ಅವರ ಜೊತೆಯಲ್ಲಿ ನಾನು ಎಷ್ಟು ಚೆನ್ನಾಗಿದ್ದರೂ ಕೂಡ ಈ ಮನೆಯಲ್ಲಿ ಹುಡುಗರು ನನ್ನನ್ನು ನೋಡೋದೆ ಇಲ್ಲವಲ್ಲ ಗುರೂಜಿ ಎಂದಿದ್ದಾರೆ.

ಅದಕ್ಕೆ ಗುರೂಜಿ ಕಾಲು ಎಳೆದು ಆಯ್ತು ಬಿಡು ಹೊರಗಡೆ ಹೋದ ಮೇಲೆ ನಮ್ಮ ಆಫೀಸ್ ಹುಡುಗರನ್ನು ಕಳುಹಿಸಿಕೊಡುತ್ತೇನೆ ಎಂದಿದ್ದಾರೆ. ಆಗಲ್ಲ ಗುರೂಜಿ ಇಲ್ಲಿ ಬಿಗ್ ಬಾಸ್ ಮನೆ ಒಳಗಡೆ ಕೇಳಿದ್ದು ಹೊರಗಡೆ ನನಗೆ ಬೇಡ ಎಂದಾಗ ಸೋನು ಏನು ಎಂದು ಕೇಳುತ್ತಾರೆ. ಸೋನುಗೆ ಎಲ್ಲವನ್ನು ಗುರೂಜಿ ವಿವರಿಸಿದ ನಂತರ ಸೋನು ಕೂಡ ಜಯಶ್ರೀಗೆ ಬುದ್ಧಿ ಹೇಳುತ್ತಾರೆ. ಗುರುಜಿಗಿಂತ ಬೇಕಾ ನಿನಗೆ ಬೆಸ್ಟ್ ಫ್ರೆಂಡ್ ಆಗಿದ್ದಾರಲ್ಲ ಎನ್ನುತ್ತಾರೆ ಸೋನು. ಅದಕ್ಕೆ ಜಯಶ್ರೀ ಅವರು ಗುರೂಜಿ ದೊಡ್ಡವರು ನಾನು ಯುವಕರನ್ನು ಕೇಳಿದ್ದು ಎನ್ನುತ್ತಾರೆ.

ಆಗ ಸೋನು ಅವರೂನು ಯಾರಿಗಿಂತ ಕಮ್ಮಿ ಇಲ್ಲ ಎಲ್ಲಾ ರೀತಿಯು ಚೆನ್ನಾಗಿ ಮಾತನಾಡುತ್ತಾರೆ ಕಾಮಿಡಿ ಮಾಡುತ್ತಾರೆ ಎಂದು ಹೇಳುತ್ತಾಳೆ ಹೀಗೆ ಮಾತು ಮುಂದುವರಿಯುತ್ತಾ ಹೋಗುತ್ತದೆ. ಆದರೂ ಕೂಡ ಜಯಶ್ರೀ ಅವರಿಗೆ ಸಮಾಧಾನ ಆಗುವುದಿಲ್ಲ. ಜಯಶ್ರೀ ಮನಸಿನಲ್ಲಿ ಒಂಟಿತನ ಇರುವುದು ಹಾಗೂ ಈ ಮನೆ ಹುಡುಗರು ನನ್ನೊಂದಿಗೆ ಸರಿಯಾಗಿ ಮಾತನಾಡುವುದಿಲ್ಲ ಎನ್ನುವ ಬೇಸರ ಇರುವುದು ಸತ್ಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಬಾರಿ ಬಿಗ್ ಬಾಸ್ ನಲ್ಲಿ ಯಾವ ಸ್ಪರ್ಧಿ ಗೆಲ್ಲಬೇಕು ಎಂಬುದು ನಿಮ್ಮ ಇಚ್ಛೆ.?

ಸೈಮಾ ಅವಾರ್ಡ್ಸ್ ಗೆ ಆಯ್ಕೆಯಾದ ಡಿ ಬಾಸ್ ರಾಬರ್ಟ್ ಸಿನಿಮಾ, ನಾಮಿನೇಟ್ ಆದ 5 ಸಿನಿಮಾದ ಪೈಕಿ ದರ್ಶನ್ ಸಿನಿಮಾ ಮೊದಲ ಸ್ಥಾನ ಪಡೆದಿದೆ.

0

ದಕ್ಷಿಣ ಭಾರತದ ಚಿತ್ರರಂಗದ ಅವಾರ್ಡ್ಸ್ ಕಾರ್ಯಕ್ರಮ ಆದ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ ಅವಾರ್ಡ್ಸ್ ಪ್ರಖ್ಯಾತ ಬೆಂಗಳೂರು ನಗರಿಯಲ್ಲಿ ಇಂದಿನಿಂದ ಪ್ರಾರಂಭ ಆಗಿದ್ದು ಈ ಕಾರ್ಯಕ್ರಮ ನಾಳೆಯೂ ಕೂಡ ಮುಂದುವರೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್, ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ವಿಜಯ್ ದೇವರಕೊಂಡ, ತಮಿಳಿನ ಕಮಲ್ ಹಾಸನ್ ಮತ್ತು ಹಿಂದಿಯ ರಣವೀರ್ ಸಿಂಗ್ ಪೀಠವನ್ನು ಅಲಂಕರಿಸಲಿದ್ದಾರೆ. ಈ ಬಾರಿಯ ಸೈಮಾ ಅವಾರ್ಡ್ ನಲ್ಲಿ ಕನ್ನಡದ ಅನೇಕ ಚಿತ್ರಗಳು ಆಯ್ಕೆಯಾಗಿದ್ದು ಅನೇಕ ವಿಭಾಗಗಳಲ್ಲಿ ನಾಮಿನೇಟ್ ಆಗಿ ಪ್ರಶಸ್ತಿ ಸ್ವೀಕಾರಕ್ಕೆ ನಾ ಮುಂದು ತಾ ಮುಂದು ಕಾದು ಕುಳಿತಿವೆ.

ಕನ್ನಡದ ಚಿತ್ರಗಳಷ್ಟೇ ಅಲ್ಲದೇ ದಕ್ಷಿಣ ಭಾರತದ ತೆಲುಗು, ತಮಿಳು ಚಿತ್ರಗಳು ಸಹ ಆಯ್ಕೆಯಾಗಿದ್ದು ಅಲ್ಲಿನ ಎಲ್ಲಾ ಪ್ರಶಸ್ತಿ ಪಡೆಯುವವರು ನಮ್ಮ ಬೆಂಗಳೂರಿಗೆ ಬರಲಿದ್ದಾರೆ. ಈ ಸೈಮಾ ಅವಾರ್ಡ್ಸ್ ನಲ್ಲಿ ಈ ಬಾರಿ ನಮ್ಮ ಡಿ ಬಾಸ್ ಅಭಿನಯದ ರಾಬರ್ಟ್ ಚಿತ್ರ 10 ವಿಭಾಗಗಳಲ್ಲಿ ಆಯ್ಕೆಯಾಗಿದ್ದು ಅತಿ ಹೆಚ್ಚು ವಿಭಾಗಗಳಲ್ಲಿ ಆಯ್ಕೆಯಾದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೊಂದೇ ಅಲ್ಲದೇ ನಮ್ಮ ಅಪ್ಪು ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ 7 ವಿಭಾಗಗಳಲ್ಲಿ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ ಚಿತ್ರ 8 ವಿಭಾಗಗಳಲ್ಲಿ ಆಯ್ಕೆಯಾಗಿದ್ದು ಪ್ರಶಸ್ತಿ ಪಡೆಯಲು ಹಾತೊರೆಯುತ್ತಿದ್ದಾರೆ.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಸೈಮಾ ಈ ಬಾರಿ ತನ್ನ 10 ನೇ ವರ್ಷದ ಸಂಭ್ರಮಾಚಾರಣೆಯಲ್ಲಿದೆ. 2012 ರಲ್ಲಿ ಆರಂಭವಾದ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಸುಮಾರು 19 ವಿಭಾಗಗಳನ್ನು ಆಯ್ದುಕೊಂಡು ಪ್ರಶಸ್ತಿಗಳನ್ನ ವಿತರಣೆ ಮಾಡುತ್ತ ಬಂದಿದ್ದು ಕನ್ನಡ, ತೆಲುಗು, ಮಲೆಯಾಳಮ್, ತಮಿಳು ಭಾಷಾ ಚಿತ್ರಗಳು ಸೈಮಾ ಅಡಿಯಲ್ಲಿ ಬರುತ್ತವೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ-ನಟಿ ಸೇರಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ಭಾಷೆಯಲ್ಲಿ ಸುಮಾರು 19 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

ಈಗಾಗಲೇ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ವಿನ್ನರ್ ಯಾರು ಎಂಬುದು ಇಂದು ಮತ್ತು ನಾಳೆ ಘೋಷಣೆ ಆಗಬೇಕಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಅಪ್ಪು ಅವರನ್ನು ಸ್ಮರಿಸಲಾಯಿತು ನಂತರ ನಾಮಿನೇಷನ್ ಪ್ರಕ್ರಿಯೆ ಜೊತೆಗೆ ಕಾರ್ಯಕ್ರಮ ಆರಂಭಿಸಲಾಯಿತು. 2021ರಲ್ಲಿ ತರುಣ್ ಸುಧಿರ್ ನಿರ್ದೇಶನದ ‘ರಾಬರ್ಟ್​’ ಸಿನಿಮಾ ತೆರೆಗೆ ಬಂದಿತ್ತು ಸುಧಾಕರ್ ರಾಜ್ ಅವರು ಈ ಚಿತ್ರದ ಸಿನಿಮಾಟೋಗ್ರಫಿಗೆ ‘ಬೆಸ್ಟ್ ಸಿನಿಮಾಟೋಗ್ರಫಿ’ (ಕನ್ನಡ) ಪ್ರಶಸ್ತಿ ಪಡೆದುಕೊಂಡಿದ್ದಾರೆ.

‘ನಿನ್ನ ಸನಿಹಕೆ’ ಸಿನಿಮಾದ ‘ನೀ ಪರಿಚಯ..’ ಹಾಡಿಗೆ ವಾಸುಕಿ ವೈಭವ್ ‘ಅತ್ಯುತ್ತಮ ಗೀತ ರಚನಕಾರ’ (ಕನ್ನಡ) ಪ್ರಶಸ್ತಿ ಬಾಚಿಕೊಂಡಿದ್ದಾರೆ. ತರುಣ್ ಸುಧೀರ್ ಅವರೂ ಸಹ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರೆ ಶಿವಣ್ಣ ಅವರು ಸಹ ಭಜರಂಗಿ 2 ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಿನೇಟ್ ಆಗಿ ಪ್ರಶಸ್ತಿ ಸ್ವೀಕಾರಕ್ಕೆ ಕ್ಷಣ ಗಣನೆಗೆ ಕಾದಿದ್ದಾರೆ. ಇನ್ನು ದರ್ಶನ್ ಅವರ ರಾಬರ್ಟ್ ಚಿತ್ರ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆಯುವುದರ ಮೂಲಕ ತನ್ನ ಮೊದಲನೇ ಪ್ರಶಸ್ತಿ ಖಾತೆಯನ್ನು ತೆರೆದು ಉಳಿದ ಪ್ರಶಸ್ತಿಗಳಿಗೆ ಕಾಯುತ್ತಿದ್ದಾರೆ.