Home Blog Page 328

ಬಿಗ್ ಬಾಸ್ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಬಳಿ ಇದೆಯಂತೆ 5 ಸಾವಿರ ಕೋಟಿ ಆಸ್ತಿ, ಚಿತ್ರರಂಗಕ್ಕೂ ಕೊಟ್ಟಿದ್ದಾರಂತೆ ಸಾಲ.

ಈಗಿನ ದಿನಗಳಲ್ಲಿ ಮನೋರಂಜನೆ ಎಂದರೆ ಜನರು ಟಿವಿಯನ್ನು ಹೆಚ್ಚಾಗಿ ಆರಿಸಿಕೊಂಡಿದ್ದಾರೆ. ಅದರಲ್ಲೂ ಜನರಿಗೆ ರಿಯಾಲಿಟಿ ಶೋಗಳು ಎಂದರೆ ಬಹಳ ಕುತೂಹಲ, ಸಂತೋಷ, ಕಣ್ಣಿಗೆ ಏನೋ ಒಂದು ಹಬ್ಬದ ಹಾಗೆ. ಈ ಪೈಕಿ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ವಾರದ ಏಳು ದಿನವೂ ಕೂಡ ಪ್ರಸಾರವಾಗುತ್ತದೆ. ಬಿಗ್ ಬಾಸ್ ಕನ್ನಡ ಒಂದು ಕನ್ನಡದ ಮನೋರಂಜನೆಯ ರಿಯಾಲಿಟಿ ಶೋ ಆಗಿದೆ. ಕಲರ್ಸ್ ಕನ್ನಡದ ಚಾನೆಲ್ ನ ಮೂಲಕ ಭಾರತಾದ್ಯಂತ ಪ್ರಸಾರವಾಗುತ್ತಿದೆ. ಕಿಚ್ಚ ಸುದೀಪ್ ರವರು ಈ ಶೋ ಅನ್ನು ನಡೆಸಿ ಕೊಡುತ್ತಿದ್ದಾರೆ.ಬಿಗ್ ಬಾಸ್ ಮನೆ ಎಂದರೆ ಪ್ರೀತಿ, ಸ್ನೇಹ, ಜಗಳ, ವಾದ ವಿವಾದ, ಸೋಲು ಗೆಲುವು, ಎಲ್ಲವೂ ಇರುತ್ತದೆ. ಅಂತೆಯೇ ಕೆಲವು ಮಾತುಗಳು ಹಾಗೂ ವಿಡಿಯೋಗಳು ಕೂಡ ವೈರಲಾಗಿ ಬಿಡುತ್ತದೆ. ಕೆಲವರ ಮಾತುಗಳು ವರ್ತನೆಗಳು, ಇನ್ನೊಬ್ಬರಿಗೆ ಇಷ್ಟವಾಗುವುದಿಲ್ಲ.

ಇದೆಲ್ಲವನ್ನು ಸಹಿಸಿಕೊಂಡು ಎಲ್ಲರ ಜೊತೆಯಾಗಿ ಯಾರನ್ನು ಬೇಸರ ಮಾಡದೆ ಎಲ್ಲರ ಮನೆಗೆದ್ದು ಕೊನೆಯವರೆಗೂ ಉಳಿಯುವರು ಗೆಲುವನ್ನು ಸಾಧಿಸುತ್ತಾರೆ. ಈ ಬಾರಿ ಬಿಗ್ ಬಾಸ್ ಕನ್ನಡದವರು ಬಿಗ್ ಬಾಸ್ ಕನ್ನಡ ಓಟಿಟಿ ಎಂಬ ಶೋವನ್ನು ಶುರು ಮಾಡಿದ್ದು ಅದಕ್ಕೆ ಬೇಕಾದ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಹೊಸದಾದ ಮೊದಲನೆ ಬಿಗ್ ಬಾಸ್ ಓಟಿಟಿ ಶೋ ಬಹಳ ಹರುಷದಿಂದ ಶುರುವಾಗಿದ್ದು, ಪ್ರತಿಯೊಬ್ಬ ಸ್ಪರ್ಧಿಯು ಬೇರೆ ಬೇರೆ ಜೀವನದ ಹಾದಿಯಲ್ಲಿ ನಡೆದು ಬಂದಿರುವವರಾಗಿರುತ್ತಾರೆ. ಈ ಸಲ ಸ್ಪರ್ಧಿಗಳನ್ನು 42 ದಿನಗಳವರೆಗೆ ಬಿಗ್ ಬಾಸ್ ಮನೆಯಲ್ಲಿ ಕೂಡಿಹಾಕಲಾಗುತ್ತದೆ. ಅದರಲ್ಲಿ ಆಯ್ಕೆ ಆದ ಪ್ರಮುಖ ಸ್ಪರ್ಧಿಗಳನ್ನು ಮುಂದೆ ನಡೆಯಲಿರುವ ಬಿಗ್ ಬಾಸ್ 9ಕ್ಕೆ ಆಯ್ಕೆ ಮಾಡಲಾಗುತ್ತದೆ.

ಇದರಲ್ಲಿ ಸೋನು ಶ್ರೀನಿವಾಸ್ ಗೌಡ, ಆರ್ಯವರ್ಧನ್ ಗುರೂಜಿ, ಸಾನಿಯಾ ಅಯ್ಯರ್, ರಾಕೇಶ್ ಅಡಿಗ ಸೇರಿದಂತೆ ಹಲವರು ಇದ್ದಾರೆ. ಬಿಗ್ ಬಾಸ್ ಮನೆ ಎಂದರೆ ಮಾತುಕತೆಯು ದಿನನಿತ್ಯ ನಡೆಯುತ್ತಾ ಇರುತ್ತದೆ ಅದರಲ್ಲಿ ಒಂದೆಡೆ ದಂತಕತೆ ಆದರೆ ಇನ್ನೊಂದೆಡೆ ಪ್ರೇಮ ಕಥೆ ನಡೆಯುತ್ತಿರುತ್ತದೆ. ಈ ಪೈಕಿ ಆರ್ಯವರ್ಧನ್ ಗುರೂಜಿ ಅವರ ಮಾತು ಬಹಳ ವೈರಲಾಗಿ ಸುದ್ದಿಯಾಗಿದೆ ಬಿಗ್ ಬಾಸ್ ಮನೆಯಲ್ಲಿ ಒಬ್ಬೊಬ್ಬರದು ವಿಭಿನ್ನವಾದ ನೋವುಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಕೆಲವರು ತಮಗಾದ ಅವಮಾನ ಬಗ್ಗೆ ಹೇಳಿದರೆ ಇನ್ನೊಬ್ಬರು ತನಗಾದ ಮಾನಸಿಕ ಶೋಷಣೆ ಹಾಗೂ ದೈಹಿಕ ಶೋಷಣೆಯ ಬಗ್ಗೆ ಹಂಚಿಕೊಂಡಿರುತ್ತಾರೆ. ಈ ಮಧ್ಯೆ ಯಾರ ಮಾತನ್ನು ಲೆಕ್ಕಿಸದೆ ಅವರ ಇಷ್ಟ ಬಂದಂತೆ ಇರುವ ಆರ್ಯವರ್ಧನ್ ಗುರೂಜಿಯವರು ಅವರ ಮಾತನ್ನು ಇನ್ನೊಂದು ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ತಂದೆ, ತಾಯಿ, ಪ್ರೀತಿ, ವಿರಹ ಎಂದು ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ ಎಲ್ಲರಿಗೂ ಕಷ್ಟ ಬಂದು ಹೋಗುತ್ತದೆ ಅದನ್ನು ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳಬಾರದೆಂದು ಹೇಳಿದ್ದಾರೆ. ಈ ಮಾತನ್ನು ಹೇಳುವಾಗ ಅವರು 5 ಸಾವಿರ ಕೋಟಿಯ ಒಡೆಯ ಎಂದು ಹೇಳಿದ್ದಾರೆ ಅವರು ಹಳ್ಳಿಯಿಂದ ಬಂದಿದ್ದು ಅವರಿಗೆ 5 ಸಾವಿರ ಕೋಟಿಗೂ ಅಧಿಕ ಬೆಲೆ ಬಾಳುವ ಆಸ್ತಿ ಇದೆ ಕಷ್ಟದಲ್ಲಿ ಹುಟ್ಟಿಲ್ಲ ಸುಖವಾಗಿ ಬೆಳೆದಿದ್ದು ಅವರಿಗೆ ಕಷ್ಟ ಏನೆಂದು ತಿಳಿದೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟಲ್ಲದೆ ಕೆಲವರಿಗೆ ಸಾಲ ಕೊಟ್ಟು ಹಣ ಸಹಾಯ ಮಾಡಿದ್ದಾರೆ, ಕನ್ನಡ ಚಿತ್ರರಂಗಕ್ಕೂ ಕೂಡ ಸಾಲ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈವರೆಗೂ ಯಾರಿಗೆ ಕೊಟ್ಟಿದ್ದಾರೆ ಎಂದು ಹೇಳಿಲ್ಲ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪು ಮನೆಗೆ ಹೋಗಿ ರಾಷ್ಟ್ರಧ್ವಜ ನೀಡಿದ ಉಪಮುಖ್ಯಮಂತ್ರಿಗಳು.

ಅಪ್ಪು ನಮ್ಮೆಲ್ಲರನ್ನು ಅಗಲಿ 9 ತಿಂಗಳು ಆಗಿದ್ದರು ಕೂಡ ಯಾವುದೇ ಕಾರ್ಯಕ್ರಮ ಇರಲಿ ಸಮಾರಂಭ ಇರಲಿ ಸನ್ನಿವೇಶ ಇರಲಿ ಸಿನಿಮಾದ ಕೆಲಸ ಕಾರ್ಯಗಳಿರಲಿ ಎಲ್ಲದಕ್ಕೂ ಕೂಡ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇವೆ. ಅಷ್ಟೇ ಅಲ್ಲದೆ ಅವರನ್ನು ಸ್ಪರಿಸಿದ ನಂತರವಷ್ಟೇ ನಾವು ಬೇರೆ ಕೆಲಸವನ್ನು ಪ್ರಾರಂಭ ಮಾಡುತ್ತೇವೆ ಇದು ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೆ ಇದೀಗ ರಾಜ್ಯ ಸರ್ಕಾರದ ಎಲ್ಲಾ ಕೆಲಸ ಕಾರ್ಯಗಳು ಕೂಡ ಇದೇ ನಿಯಮವನ್ನು ಪಾಲಿಸಿಕೊಂಡು ಹೋಗುತ್ತಿರುವುದನ್ನು ನಾವು ನೋಡಬಹುದಾಗಿದೆ. ಇದಕ್ಕೆ ಉದಾಹರಣೆಯಾಗಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಒಂದನ್ನು ಏರ್ಪಡಿಸಲಾಗುತ್ತದೆ ಈ ಬಾರಿ ವಿಶೇಷವಾಗಿ ಈ ಲಾಲ್ ಬಾಗ್ ನಲ್ಲಿ ಏರ್ಪಡಿಸಲಾಗುವಂತಹ ಹೂಗಳ ಪ್ರದರ್ಶನಾಲಯಕ್ಕೆ ಅಪ್ಪು ಎಂಬ ಹೆಸರನ್ನು ಇಟ್ಟಿದ್ದಾರೆ.

ಅಷ್ಟೇ ಅಲ್ಲದೆ ಪಾರ್ವತಮ್ಮ ಡಾಕ್ಟರ್ ರಾಜಕುಮಾರ್ ಸೇರಿದಂತೆ ಅಪ್ಪು ಅವರು ಬಾಳಿ ಬದುಕಿದಂತಹ ಗಾಜನೂರು ಮನೆಯ ಕೆಲವು ಚಿತ್ರಪಟಗಳನ್ನು ಮತ್ತು ಅಪ್ಪು ಅವರ ಪುತ್ಥಳಿಯನ್ನು ನಿರ್ಮಾಣ ಮಾಡಿದರು. ಈ ಒಂದು ಹೂವಿನ ಪ್ರದರ್ಶನ ನೋಡುವುದಕ್ಕೆ ಸುಮಾರು ಇಲ್ಲಿಯವರೆಗೂ 15 ಲಕ್ಷಕ್ಕೂ ಅಧಿಕ ಮಂದಿ ಸೇರ್ಪಡೆಯಾಗಿದ್ದರು. ತಮ್ಮ ನೆಚ್ಚಿನ ಕಲಾವಿದನನ್ನು ಹೂವಿನ ರಾಶಿಯಲ್ಲಿ ನೋಡುವಂತಹ ಭಾಗ್ಯವನ್ನು ಅಭಿಮಾನಿಗಳು ಗಿಟ್ಟಿಸಿಕೊಂಡರು. ಇದು ಅಪ್ಪು ಅವರಿಗೆ ರಾಜ್ಯ ಸರ್ಕಾರ ನೀಡಿದಂತಹ ಗೌರವವಾಗಿದೆ ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಮತ್ತೊಂದು ಕೆಲಸಕ್ಕೆ ಕೈ ಹಾಕಿದಂತಹ ರಾಜ್ಯ ಸರ್ಕಾರ ಅಪ್ಪು ಅಭಿಮಾನಿಗಳ ಪ್ರಶಂಸೆಗೆ ಒಳಗಾಗಿದ್ದಾರೆ.

ಹೌದು, ಈ ಬಾರಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರದಿಂದ ಒಂದು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಂಡು ಅಪ್ಪು ಮನೆಗೆ ಭೇಟಿ ನೀಡಿದಂತಹ ಉಪಮುಖ್ಯಮಂತ್ರಿ ಆದಂತಹ ಅಶ್ವಥ್ ನಾರಾಯಣ್ ಅವರು ಅಪ್ಪು ಅವರ ಧರ್ಮಪತ್ತಿ ಅಶ್ವಿನಿ ರಾಜ್ ಕುಮಾರ್ ಅವರಿಗೆ ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜವನ್ನು ನೀಡಿ ಈ ಬಾರಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಕ್ಕೆ ನೀವು ಆಗಮಿಸಬೇಕು ಎಂದು ಹೇಳಿ ಹೋಗಿದ್ದಾರೆ. ನಿಜಕ್ಕೂ ಇದೊಂದು ಹೆಮ್ಮೆ ಪಡುವಂತಹ ವಿಚಾರವೇ ಏಕೆಂದರೆ ನಮ್ಮ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಕಲಾವಿದರು ಮತ್ತು ಹೆಸರಾಂತ ನಟರಿದ್ದಾರೆ ಆದರೆ ಯಾರ ಮನೆಗೂ ಕೂಡ ಹೋಗಿ ರಾಷ್ಟ್ರಧ್ವಜವನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಆದರೆ ಅಪ್ಪು ಅವರ ಮನೆಗೆ ಮಾತ್ರ ಹೋಗಿ ರಾಷ್ಟ್ರಧ್ವಜವನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಇದರಿಂದಲೇ ತಿಳಿಯುತ್ತದೆ ಅಪ್ಪು ಅವರು ಎಷ್ಟು ಗೌರವ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ ಅಂತ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇನ್ನೊಂದು ವಿಚಾರವನ್ನು ಕೂಡ ನಾವು ಗಮನವಹಿಸಬಹುದು ಅದೇನೆಂದರೆ ಕೇವಲ ಅಪ್ಪು ನಟನೆ ಸಿನಿಮಾರಂಗಕ್ಕೆ ಮಾತ್ರ ಸೀಮಿತವಾಗಿ ಇರಲಿಲ್ಲ ಸಾಮಾಜಿಕ ಕಳಕಳಿಯ ಕೆಲಸವನ್ನು ಮಾಡುತ್ತಿದ್ದರು ಹಾಗೂ ಸರ್ಕಾರಕ್ಕೆ ಅದೆಷ್ಟೋ ಬಾರಿ ಸಹಾಯಧನ ನೀಡಿದ್ದಾರೆ. ಕೋವಿಡ್ ಸಮಯದಲ್ಲೂ 50 ಲಕ್ಷ ರೂಪಾಯಿ ನೀಡಿದ್ದರು ಕೇವಲ ವತಿಯಿಂದ ಯಾವುದೇ ಜಾಹೀರಾತಿನಲ್ಲಿ ನಟನೆ ಮಾಡಿದರು ಕೂಡ ಅವುಗಳಿಂದ ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆಯುತ್ತಿರಲಿಲ್ಲ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ ಇದೀಗ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಪ್ಪು ಅವರಿಗೆ ಗೌರವವನ್ನು ಸಲ್ಲಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಿದರೆ ಸದ್ಯಕ್ಕೆ ಈ ವಿಡಿಯೋದಲ್ಲಿ ಹರಿದಾಡುತ್ತಿದ್ದು ಅಪ್ಪು ಅಭಿಮಾನಿಗಳಿಗೆ ಹೆಮ್ಮೆ ತರುವಂತ ವಿಚಾರವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮಾನ್ಸೂನ್ ರಾಗ ಸಿನಿಮಾದಲ್ಲಿ ಸೆ-ಕ್ಸ್ ವರ್ಕರ್ ಪಾತ್ರದಲ್ಲಿ ಕಾಣಿಸಿಕೊಂಡ ರಚಿತಾ ರಾಮ್, ಈ ಪಾತ್ರ ಮಾಡುವುದಕ್ಕೆ ರಚಿತಾ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?

ಡಾಲಿ ಧನಂಜಯ್ ಅವರ ಬಹು ನಿರೀಕ್ಷಿತ ಸಿನಿಮಾ ಅಂದರೆ ಅದು ಮನ್ಸೂನ್ ರಾಗ ಅಂತಾನೆ ಹೇಳಬಹುದು ಈ ಸಿನಿಮದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕೂಡ ನಟನೆ ಮಾಡಿದ್ದಾರೆ. ಈಗಾಗಲೇ ಡಾಲಿ ಧನಂಜಯ್ ಅವರ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿದ್ದು ತಿಂಗಳಿಗೆ ಒಂದರಂತೆ ಒಂದೊಂದೇ ಸಿನಿಮಾ ಬಿಡುಗಡೆಯಾಗುತ್ತಿದೆ. ವಿಶೇಷ ಎಂದರೆ ಎಲ್ಲವೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಅಷ್ಟೇ ಅಲ್ಲದೆ ಯಾವ ಸಿನಿಮಾವು ಕೂಡ ಸೋತ ಇತಿಹಾಸವೇ ಇಲ್ಲ ಇದೆಲ್ಲವನ್ನು ನೋಡುತ್ತಿದ್ದರೆ ಡಾಲಿ ಧನಂಜಯ್ ಅವರ ಅದೃಷ್ಟ ಕುಲಾಯಿಸಿತು ಅಂತಾನೆ ಹೇಳಬಹುದು. ಇನ್ನು ಡಾಲಿ ಧನಂಜಯ್ ಅವರ ನಟನೆಯಲ್ಲಿ ರಾಕ್ಷಸ ಅಂತ ಹೇಳಬಹುದು ಯಾವುದೇ ಪಾತ್ರ ಇರಲಿ ಯಾವುದೇ ಸನ್ನಿವೇಶ ಇರಲೇ ಅದನ್ನು ಕರಗತ ಮಾಡಿಕೊಂಡು ತನ್ನನ್ನು ತಾನು ಪರಕಾಯ ಪ್ರವೇಶ ಮಾಡಿಕೊಂಡು ನೋಡುಗರ ಮನಸ್ಸಿಗೆ ಮನರಂಜನೆಯನ್ನು ನೀಡುತ್ತಾರೆ.

ಈ ಬಾರಿಯೂ ಕೂಡ ಮಾನ್ಸೂನ್ ರಾಗ ಎಂಬ ಸಿನಿಮಾದಲ್ಲಿ ಧನಂಜಯ್ ಅವರು ಅದ್ಭುತ ಪಾತ್ರ ಒಂದನ್ನು ನಿಭಾಯಿಸಿದ್ದಾರೆ ಈ ಸಿನಿಮಾ ಭಾಗಶಃ ಮಳೆಯಲ್ಲೇ ನಡೆಯುತ್ತದೆ. ಆ ಕಾರಣದಿಂದಾಗಿ ಈ ಸಿನಿಮಾಗೆ ಮಾನ್ಸೂನ್ ರಾಗ ಎಂಬ ಹೆಸರನ್ನು ಇಟ್ಟಿದ್ದಾರೆ ಈಗಾಗಲೇ ಮಾನ್ಸೂನ್ ರಾಗದ ಟ್ರೈಲರ್ ಮತ್ತು ಟೀಸರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ವರಮಹಾಲಕ್ಷ್ಮಿ ಹಬ್ಬ ಆದ ನಂತರದಲ್ಲಿಯೇ ಈ ಒಂದು ಟೀಸರ್ ಅನ್ನು ಬಿಡುಗಡೆ ಮಾಡಲಾಯಿತು. ಈ ಟೀಸರ್ ಬಿಡುಗಡೆ ಮಾಡುವುದಕ್ಕೆ ಹಲವಾರು ಗಣ್ಯ ವ್ಯಕ್ತಿಗಳು ಕೂಡ ಆಗಮಿಸಿದ್ದರು.

ಮನ್ಸೂನ್ ರಾಗದ ವಿಭಿನ್ನ ಕಥೆಯನ್ನು ತೆರೆಯ ಮೇಲೆ ಹೇಳಲು ಚಿತ್ರ ತಂಡ ಹೊರಟಿದ್ದು ಈ ಸಿನಿಮಾದಲ್ಲಿ ಸೆ-ಕ್ಸ್ ವರ್ಕರ್ ಪಾತ್ರದಲ್ಲಿ ಕಾಣಿಸಿಕೊಳ್ಳೋ ರಚಿತಾ ರಾಮ್ ಮೇಲೆ ಡಾಲಿಗೆ ಲವ್ ಆಗೋ ಸೂಚನೆ ಟ್ರೇಲರ್ ಮೂಲಕ ನಾವು ಗಮನಿಸಬಹುದು. ಟ್ರೈಲರ್ ನೋಡಿದ್ರೆ ಅದ್ಬುತ ಸ್ಟೋರಿ ಈ ಚಿತ್ರದಲ್ಲಿ ಇರೋದು ಪಕ್ಕಾ ಆಗಿದೆ ಬಿಡಿ. ಸಿನಿಮಾದ ಟ್ರೈಲರ್ ಹೇಳುವಂತೆ ಆಲ್ ಮೋಸ್ಟ್ ಸಿನಿಮಾ ಮಳೆಯಲ್ಲೇ ಶೂಟಿಂಗ್ ಆಗಿದೆ ಅನ್ನೋದನ್ನ ಸಾಕಷ್ಟು ಬಾರಿ ಚಿತ್ರತಂಡ ಹೇಳಿಕೊಂಡಿದೆ. ಈ ಮಾನ್ಸೂನ್‌ ರಾಗ ಸಿನಿಮಾ ಕೂಡ 70-80ರ ದಶಕದಲ್ಲಿ ನಡೆಯುವಂಥ ಕಥೆಯನ್ನು ಹೊಂದಿದ್ದು, ಸದ್ಯ ಈ ಸಿನಿಮಾ ಆಗಸ್ಟ್ 19 ರಂದು ತೆರೆಮೇಲೆ ಬರಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಈ ಸಿನಿಮಾದಲ್ಲಿ ರಚಿತಾ ರಾಮ್ ಅವರು ನಟನೆ ಮಾಡುವುದಕ್ಕೆ ಎಷ್ಟು ಸಂಭವನೆ ಪಡೆದರು ಎಂಬ ವಿಚಾರವೇ ಹೆಚ್ಚು ಸುದ್ದಿಯಲ್ಲಿ ಇದೆ.

ಏಕೆಂದರೆ ಇದು ಒಂದು ವಿಭಿನ್ನವಾದ ಚಿತ್ರಕಥೆಯಾಗಿದೆ ರಚಿತಾರಾಮ್ ಅವರು ನಟನೆ ಮಾಡಿರುವ ಎಲ್ಲಾ ಸಿನಿಮಾದಲ್ಲೂ ಕೂಡ ನಾಯಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈ ಚಿತ್ರದಲ್ಲಿ ಮಾತ್ರ ವಿಭಿನ್ನ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರೆ ಅಷ್ಟು ಸುಲಭವಾಗಿ ಈ ಪಾತ್ರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಕೂಡ ಇವರು ಈ ಪಾತ್ರವನ್ನು ಮಾಡಿದ್ದಾರೆ ಎಂದರೆ ಇದಕ್ಕೆ ತಕ್ಕ ಪ್ರತಿಫಲವನ್ನು ಖಂಡಿತವಾಗಿಯೂ ಕೂಡ ಅವರು ಪಡೆದೆ ಇರುತ್ತಾರೆ. ಕೆಲವು ಮೂಲಗಳ ಪ್ರಕಾರ ರಚಿತರಾಮ್ ಅವರು ಈ ಸಿನಿಮಾದಲ್ಲಿ ಈ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಬರೋಬ್ಬರಿ ಒಂದು ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಇಷ್ಟು ದೊಡ್ಡ ಪ್ರಮಾಣದ ಸಂಭಾವನೆಯನ್ನು ಪಡೆದ ನಾಯಕ ನಟಿಯರ ಪಟ್ಟಿಯಲ್ಲಿ ರಚಿತಾ ರಾಮ್ ಅವರೇ ಏಕೈಕ ವ್ಯಕ್ತಿ ಅಂತ ಹೇಳಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಸೆ-ಕ್ಸ್ ಪಾತ್ರದಲ್ಲಿ ಕಾಣಿಸುವ ಮೂಲಕ ರಚಿತಾರಾಮ್ ಅವರು ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ರಾತ್ರೋರಾತ್ರಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಯಾದ ಮೇಘನಾ ರಾಜ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಬಾರಿ ಓಟಿಟಿಯಲ್ಲಿ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿದೆ ಈ ಒಂದು ಕಾರ್ಯಕ್ರಮವು ಸುಮಾರು 42 ದಿನಗಳ ಕಾಲ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ 16 ಜನ ಸ್ಪರ್ಧಿಗಳು ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ಹಾಗೂ ಕಿರುತೆರೆಯಲ್ಲಿ ಹೆಸರು ಮತ್ತು ಖ್ಯಾತಿಯನ್ನು ಗಳಿಸಿದಂತಹ ಮತ್ತು ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡಿದಂತಹ ಹಾಗೂ ಸ್ಯಾಂಡಲ್ವುಡ್ ಸಂಬಂಧಪಟ್ಟಂತಹ ಕೆಲವು ವ್ಯಕ್ತಿಗಳನ್ನು ಬಿಗ್ ಬಾಸ್ ಮನೆಗೆ ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿಯ ಮಿನಿ ಬಿಗ್ ಬಾಸ್ ಎಂಬ ಹೊಸದೊಂದು ಸಾಹಸಕ್ಕೆ ಕೈ ಹಾಕಿರುವುದು ಏಕೆಂದರೆ ಈವರೆಗೂ ಕೂಡ ಕನ್ನಡವನ್ನು ಹೊರತುಪಡಿಸಿದರೆ ಬೇರೆ ಯಾವ ಭಾಷೆಯಲ್ಲಿ ಕೂಡ ಮಿನಿ ಬಿಗ್ ಬಾಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಿಲ್ಲ.

ಆದರೆ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಆದಂತಹ ಪರಮೇಶ್ ಕುಂಡಲ್ಕರ್ ಅವರು ಮಾತ್ರ ಈ ಬಾರಿ ಹೊಸದಾಗಿ ಏನಾದರೂ ಒಂದು ಮುನ್ನು ಮಾಡಬೇಕು ಜನರಿಗೆ ಮನರಂಜನೆಯನ್ನು ನೀಡಬೇಕು ಎಂಬ ಉದ್ದೇಶದಿಂದಾಗಿ ಮೆನಿ ಬಿಗ್ ಬಾಸ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಒಂದು ಮಿನಿ ಬಿಗ್ ಬಾಸ್ ಕಾರ್ಯಕ್ರಮವು ಸುಮಾರು 5 ವಾರಗಳ ಕಾಲ ನಡೆಯಲಿದೆ ಈ 5 ವಾರಗಳವರೆಗೆ ಯಾರು ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ಅರ್ಹತೆಯನ್ನು ಪಡೆಯುತ್ತಾರೋ ಅಂತವರನ್ನು ಬಿಗ್ ಬಾಸ್ ಸೀಸನ್ 9 ರಲ್ಲಿ ಮುನ್ನಡೆಸಿಕೊಂಡು ಹೋಗಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಮಿನಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವಂತಹ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಸಂಭಾವನೆಯನ್ನು ಕೂಡ ನೀಡಲಾಗುತ್ತದೆ ಅಂತ ಹೇಳಿದ್ದಾರೆ.

ಹಾಗಾಗಿ ಈ ಒಂದು ಮಿನಿ ಬಿಗ್ ಬಾಸ್ ಕಾರ್ಯಕ್ರಮವು ಬಹಳ ವಿಶೇಷತೆ ಮತ್ತು ವಿಭಿನ್ನತೆಯನ್ನು ಒಳಗೊಂಡಿದೆ ಈಗಾಗಲೇ ಬಿಗ್ ಮಿನಿ ಬಿಗ್ ಬಾಸ್ ಮನೆಗೆ 16 ಜನ ಸ್ಪರ್ಧಿಗಳು ಬಂದಿದ್ದು ಒಬ್ಬೊಬ್ಬರು ಕೂಡ ವಿಭಿನ್ನವಾದ ಜೀವನ ಕಥೆ ಮತ್ತು ಹಿನ್ನೆಲೆಯನ್ನು ಹೊಂದಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ಸೋನು ಶ್ರೀನಿವಾಸ್ ಗೌಡ ತಮ್ಮ ಖಾಸಗಿ ವಿಡಿಯೋ ಲೀಕ್ ಆಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ ಇನ್ನು ಹಿರಿಯ ಪೋಷಕ ಕಲಾವಿದೆ ಆದಂತಹ ಮಾರಿಮುತ್ತು ಅವರ ಮೊಮ್ಮಗಳು ಆದಂತಹ ಜಯಶ್ರೀ ಅವರು ಕೂಡ ಮದುವೆಯಾದ ವಿವಾಹನೊಂದಿಗೆ ನಾನು ರಿಲೇಶನ್ ಶಿಪ್ ನಲ್ಲಿ ಇದ್ದೆ ಸ್ಮೋಕ್ ಮಾಡುತ್ತಿದ್ದೇನೆ ಜೂಜು ಆಡುತ್ತಿದ್ದೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.

ಇನ್ನು ನಾಗಿಣಿ ಧಾರಾವಾಹಿಯಲ್ಲಿ ನಟನೆ ಮಾಡಿದಂತಹ ಅರ್ಜುನ್ ರಮೇಶ್ ಅವರು ಕೂಡ ನಾನು ಮೊದಲ ಹೆಂಡತಿಗೆ ತಿಳಿಯದಂತೆ ಮತ್ತೊಬ್ಬಳನ್ನು ಮದುವೆಯಾಗಿ ಆಕೆಗೆ ಮಗು ಹುಟ್ಟಿದ ನಂತರವಷ್ಟೇ ಎರಡನೇ ಹೆಂಡತಿಯ ವಿಚಾರವನ್ನು ಮೊದಲನೇ ಹೆಂಡತಿಗೆ ತಿಳಿಸಿದ್ದೆ ಎಂಬ ವಿಚಾರವನ್ನು ಹೇಳಿದರು. ಇನ್ನು ನ್ಯೂಸ್ಪಸ್ಟ್ ಆಂಕರ್ ಆದಂತಹ ಸೋಮಣ್ಣ ಮಾಚಿಮಾಡ ಅವರು ಕೂಡ ನಾನು ನನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ್ದೇನೆ ಆದರೂ ಕೂಡ ಆಕೆಯನ್ನು ಮರೆಯಲು ನನಗೆ ಸಾಧ್ಯವಾಗುತ್ತಿಲ್ಲ ಅವಕಾಶ ಸಿಕ್ಕರೆ ಯಾಕೆಯ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ ಎಂದು ಹೇಳಿದ್ದರು. ಇನ್ನು ಪುಟ್ಟಗೌರಿ ಮದುವೆಯಲ್ಲಿ ನಟನೆ ಮಾಡಿದಂತಹ ಸಾನ್ಯಾ ಅಯ್ಯರ್ ಅವರು ಕೂಡ ನನ್ನ ಎರಡನೇ ಮನೆ ತಂದೆ ನನ್ನ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿ ಅದನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವಂತೆ ಬೆದರಿಕೆ ಹಾಕುತ್ತಿದ್ದರು ಎಂಬ ವಿಚಾರವನ್ನು ತಿಳಿಸಿದ್ದಾರೆ. ಈ ರೀತಿ ಬಿಗ್ ಬಾಸ್ ಮನೆಗೆ ಈಗಾಗಲೇ ಬಂದಿರುವ ಎಲ್ಲಾ ಸ್ಪರ್ಧಿಗಳು ಕೂಡ ತಮ್ಮ ಮನಸ್ಸಿನಲ್ಲಿ ಇದ್ದಂತಹ ನೋವು ಮತ್ತು ಕಹಿ ಘಟನೆಯನ್ನು ಹೊರ ಹಾಕಿದ್ದಾರೆ. ಇದರ ಜೊತೆಗೆ ಇದೀಗ ಮೇಘಾನ ರಾಜ್ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಅವರನ್ನು ಮಿನಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಮೂಲಕ ಕಳಿಸಿಕೊಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ಮೇಘನಾ ರಾಜ್ ಅವರ ಮಗ ರಾಯನ್ ಇನ್ನೂ ಕೂಡ ಚಿಕ್ಕಮಗು ಹಾಗಾಗಿ ಆಗ ನಾನು ಬಿಟ್ಟು ಹೆಚ್ಚು ದಿನ ಮೇಘನಾ ರಾಜ್ ಅವರು ಉಳಿಯುವುದಕ್ಕೆ ಸಾಧ್ಯವಿಲ್ಲ.

ಹೀಗಾಗಿ ಒಂದು ದಿನದ ಮಟ್ಟಿಗಾದರೂ ಕೂಡ ಮೇಘನಾ ರಾಜ್ ಅವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದೆ. ಆದರೆ ಕೆಲವು ಅಭಿಮಾನಿಗಳು ಮಾತ್ರ ಮೇಘನಾ ರಾಜ್ ಬಿಗ್ ಬಾಸ್ ಮನೆಗೆ ಹೋಗುವುದು ಬೇಡ ಬಿಗ್ ಬಾಸ್ ಮನೆಗೆ ಹೋದರೆ ಹೆಸರು ಹಾಳಾಗುತ್ತದೆ. ತಮ್ಮ ವ್ಯಕ್ತಿತ್ವಕ್ಕೆ ಇರುವಂತಹ ಗೌರವ ಹಾಳಾಗುತ್ತದೆ ಅಂತ ಹೇಳುತ್ತಿದ್ದಾರೆ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನಂತರ ಮೇಘನಾ ರಾಜ್ ಅವರು ಸಾಕಷ್ಟು ಕಷ್ಟದಿಂದ ಜೀವನ ನಡೆಸುತ್ತಿದ್ದರೆ ಈಗ ಏನಾದರೂ ಅವರು ಬಿಗ್ ಬಾಸ್ ಮನೆಗೆ ಹೋದರೆ ಇನ್ನಷ್ಟು ಅಪಮಾನ ಅವಮಾನ ಮತ್ತು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಹಾಗಾಗಿ ಮೇಘನಾ ರಾಜ್ ಯಾವುದೇ ಕಾರಣಕ್ಕೂ ಕೂಡ ಬಿಗ್ ಬಾಸ್ ಮನೆಗೆ ಹೋಗಬಾರದು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಆದರೆ ಮೇಘನಾ ರಾಜ್ ಅವರು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತಾರೆ ಎಂಬುದನ್ನು ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಮೇಘನಾ ರಾಜ್ ಅವರು ಬಿಗ್ ಬಾಸ್ ಮನೆಗೆ ಹೋಗುವುದು ಒಳ್ಳೆಯದ ಅಥವಾ ಅವರು ಬಿಗ್ ಬಾಸ್ ಮನೆಗೆ ಹೋಗುವುದು ಬೇಡವ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಏಕೆಂದರೆ ಪ್ರತಿಯೊಂದು ಕಾಮೆಂಟ್ ಕೂಡ ಮೇಘನಾ ರಾಜ್ ಅವರು ಬಿಗ್ ಬಾಸ್ ಮನೆಗೆ ಹೋಗಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸುತ್ತದೆ.

ಅಪ್ಪು ಮಕ್ಕಳೊಟ್ಟಿಗೆ ಹೇಗೆ ಇರುತ್ತಿದ್ದರು ಗೊತ್ತ.? ಈ ವಿಡಿಯೋ ನೋಡಿ ಎಂಥವರ ಕಣ್ಣಂಚಲ್ಲಾದರೂ ಕೂಡ ನೀರು ಬರುತ್ತದೆ.

ಅಪ್ಪು ಎಂದರೆ ಎಲ್ಲರಿಗೂ ಕೂಡ ತುಂಬಾನೇ ಇಷ್ಟ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕೂಡ ಇಷ್ಟಪಡುತ್ತಿದ್ದರು. ಅಪ್ಪು ಅವರನ್ನು ಇಷ್ಟಪಡುವುದಕ್ಕೆ ಕೇವಲ ಒಂದು ಕಾರಣವಿಲ್ಲ ನಟನೆ ಮಾತ್ರವಲ್ಲದೆ ಸಾಮಾಜಿಕ ಕಳಕಳಿ ಬಡವರಿಗೆ ಮತ್ತು ಹೆಣ್ಣು ಮಕ್ಕಳಿಗೆ ಕಷ್ಟದಲ್ಲಿ ಇರುವಂತಹ ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಈ ಕಾರಣದಿಂದಲೇ ಅಪ್ಪು ಅವರಿಗೆ ಯಾರಿಗೂ ಇಲ್ಲದಿರುವಷ್ಟು ಅಭಿಮಾನಿಗಳು ಇರುವುದು ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅಪ್ಪು ಅವರು ಕೇವಲ ಸಾಮಾಜಿಕ ಕ್ಷೇತ್ರ ಮತ್ತು ನಟನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ ಇವರು ಒಬ್ಬ ಪಕ್ಕ ಫ್ಯಾಮಿಲಿ ಮ್ಯಾನ್ ಅಂತಾನೇ ಹೇಳಬಹುದು ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ಮತ್ತು ಸಮಯವನ್ನು ನೀಡುತ್ತಾರೆ.

ಹೌದು ಅಪ್ಪು ಅವರು ಎಷ್ಟೇ ಬ್ಯುಸಿ ಇದ್ದರೂ ಕೂಡ ವರ್ಷಕ್ಕೆ ಒಮ್ಮೆಯಾದರೂ ತಮ್ಮ ಮಕ್ಕಳಿಗೆ ಶಾಲಾ ದಿನದಲ್ಲಿ ರಜೆ ಇರುವಂತಹ ಸಂದರ್ಭದಲ್ಲಿ ಶೂಟಿಂಗ್ ಕೆಲಸವೆಲ್ಲವನ್ನು ಕೂಡ ಬದಿಗಿಟ್ಟು ಮಕ್ಕಳೊಡನೆ ಮತ್ತು ಪತ್ನಿಯೊಡನೆ ಫಾರಿನ್ ಟ್ರಿಪ್ ಹೋಗುತ್ತಿದ್ದರು. ಅಷ್ಟೇ ಅಲ್ಲದೆ ತಮ್ಮ ಸ್ವಂತ ಊರು ಆದಂತಹ ಗಾಜನೂರಿಗೆ ಹೋಗಿ ಅಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಇನ್ನು ಅಪ್ಪು ಅವರ ಮಕ್ಕಳು ಕೂಡ ಥೇಟ್ ತಂದೆಯ ಮಾದರಿಯಲ್ಲೇ ಸರಳತೆ ಸ್ವಭಾವ ಗುಣ ಎಲ್ಲವೂ ಕೂಡ ಅಪ್ಪನನ್ನು ಮೀರಿಸುವಂತಹದ್ದು. ಸೆಲೆಬ್ರಿಟಿಗಳ ಮಕ್ಕಳು ಸಾಮಾನ್ಯವಾಗಿ ಧಿಮಾಕು ಮತ್ತು ಅಹಂಕಾರವನ್ನು ತೋರಿಸುತ್ತಾರೆ. ಆದರೆ ಅಪ್ಪು ಅವರ ಮಕ್ಕಳು ಎಲ್ಲಾ ಕಡೆಯಲ್ಲೂ ಕೂಡ ಸರಳವಾಗಿ ಮತ್ತು ಸಹಜವಾಗಿ ಮತ್ತು ಸೌಮ್ಯತೆಯಿಂದ ನಡೆದುಕೊಳ್ಳುತ್ತಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ಅಪ್ಪನ ಗುಣಗಳೇ ಮಕ್ಕಳಿಗೂ ಕೂಡ ಬಳುವಳಿಯಾಗಿ ಬಂದಿದೆ ಎಂಬುದು ಅರ್ಥವಾಗುತ್ತದೆ.

ಕೇವಲ ಇದಿಷ್ಟು ಮಾತ್ರವಲ್ಲದೆ ವಿದ್ಯಾಭ್ಯಾಸದಲ್ಲಿಯೂ ಕೂಡ ಮಕ್ಕಳು ಬಹಳ ಮಂಚೂಳಿಯಲ್ಲಿ ಇದ್ದಾರೆ ಈ ವಿಚಾರ ನಿಮಗೆ ಈಗಾಗಲೇ ಗೊತ್ತೇ ಇದೆ. ಏಕೆಂದರೆ ಕಾಲರ್ ಶಿಪ್ ನ ನೆರವು ಪಡೆದು ಅಪ್ಪು ಅವರ ಹಿರಿಯ ಪುತ್ರಿ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಇನ್ನು ಎರಡನೇ ಮಗಳು ಕೂಡ ತಾವು ಓದುತ್ತಿರುವಂತಹ ಶಾಲೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸುತ್ತಿದ್ದರೆ. ಇವೆಲ್ಲವನ್ನು ನೋಡುತ್ತಿದ್ದರೆ ಅಪ್ಪು ಅವರ ಮಕ್ಕಳು ವಿದ್ಯಾಭ್ಯಾಸದಲ್ಲೂ ಕೂಡ ಸೈ ಎನಿಸಿಕೊಂಡಿದ್ದಾರೆ. ಅಪ್ಪು ಅವರು 1999 ರಲ್ಲಿ ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಆಗ ಅಪ್ಪು ಅವರು ಇನ್ನೂ ಸಿನಿಮಾ ರಂಗಕ್ಕೆ ಬಂದಿರಲಿಲ್ಲ. ಅಂದರೆ ಬಾಲ ನಟನಾಗಿ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ ಆದರೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಯಾವ ಸಿನಿಮಾದಲ್ಲೂ ಕೂಡ ಗುರುತಿಸಿಕೊಂಡಿರಲಿಲ್ಲ.

ಅಪ್ಪು ಅವರು ಮಗಳು ಹುಟ್ಟಿದ ನಂತರ ಇವರು ಮತ್ತೆ ಸಿನಿಮಾ ಗೆ ಕಂಬ್ಯಾಕ್ ಮಾಡುತ್ತಾರೆ ಹೌದು 2002ರಲ್ಲಿ ತೆರೆಕಂಡ ಅಪ್ಪು ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ನಟನೆ ಮಾಡುವುದರ ಮೂಲಕ ಇವರು ಸ್ಯಾಂಡಲ್ವುಡ್ ನಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡರು. ಈ ಸಿನಿಮಾದ ನಂತರ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದರು ಆದರೂ ಕೂಡ ತಮ್ಮ ಮಕ್ಕಳು ಹೆಚ್ಚಿನ ಸಮಯ ಕಳೆಯುವುದಕ್ಕೆ ಇಷ್ಟಪಡುತ್ತಿದ್ದರು. ಇನ್ನು ಅಪ್ಪು ಅವರು ಕೊನೆಯ ಬಾರಿ ತಮ್ಮ ಮಕ್ಕಳು ಒಟ್ಟಿಗೆ ಹೇಗೆ ಕಾಲ ಕಳೆದರೂ ಎಂಬ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಈ ವಿಡಿಯೋ ನೋಡಿದರೆ ಒಂದು ಕ್ಷಣ ನಿಮ್ಮ ಕಣ್ಣಂಚಲ್ಲಿ ನೀರು ಬರುತ್ತದೆ ಅಷ್ಟೇ ಅಲ್ಲದೆ ಅಪ್ಪು ಅವರನ್ನು ನಾವು ಈಗಲೂ ಕೂಡ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂಬ ಮನೋಭಾವ ನಮ್ಮಲ್ಲಿ ಮೂಡುತ್ತದೆ. ಈ ವಿಡಿಯೋ ನೋಡಿ ನಿಮ್ಮ ಮನಸ್ಸಿನಲ್ಲಿ ಏನನಿಸುತ್ತದೆ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

ಕೊನೆಗೆ ದರ್ಶನ್ ಅವರದ್ದು ಏನು ತಪ್ಪಿಲ್ಲ ಎಂದು ತಪ್ಪು ಒಪ್ಪಿಕೊಂಡ ಅಪ್ಪು ಅಭಿಮಾನಿಗಳು.

ಕಳೆದ ವಾರದಿಂದಲೂ ಕೂಡ ಎಲ್ಲೇ ನೋಡಿದರೂ ದರ್ಶನ್ ಅಭಿಮಾನಿಗಳು ಮತ್ತು ಅಪ್ಪು ಅಭಿಮಾನಿಗಳು ಇಬ್ಬರೂ ಕೂಡ ಫ್ಯಾನ್ ವಾರ್ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಂದರೆ ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯಕ್ಕಾಗಿ ಯುಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನ ನೀಡಿದರು. ಈ ಸಮಯದಲ್ಲಿ ಕ್ರಾಂತಿ ಸಿನಿಮಾಗೆ ಯಾವುದೇ ರೀತಿಯಾದಂತಹ ಮಾಧ್ಯಮಗಳು ಪ್ರಚಾರ ಮಾಡಿಲ್ಲ ಈ ಸಮಯದಲ್ಲಿ ನನ್ನ ಸೆಲೆಬ್ರಿಟಿಗಳೆ ನನ್ನ ಸಿನಿಮಾಗಾಗಿ ಸಾಕಷ್ಟು ಕ್ಯಾನ್ವಾಸ್ ಮಾಡಿದ್ದಾರೆ ಹಾಗೂ ಪ್ರಚಾರ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ ಇದನ್ನೆಲ್ಲ ನೋಡಿದಂತಹ ನನಗೆ ಬಹಳನೇ ಸಂತೋಷವಾಗಿದೆ. ಅಷ್ಟೇ ಅಲ್ಲದೆ ಸಾಮಾನ್ಯವಾಗಿ ಸಮಾಜದಲ್ಲಿ ಯಾವುದಾದರೂ ವ್ಯಕ್ತಿ ಇಹಲೋಕವನ್ನು ತ್ಯಜಿಸಿದ ನಂತರ ಹೆಚ್ಚಿನ ಪ್ರೀತಿ ಮತ್ತು ವಿಶ್ವಾಸವನ್ನು ತೋರಿಸುತ್ತಾರೆ ಈ ವಿಚಾರವನ್ನು ನಾವು ಅಪ್ಪು ಅವರು ಅಗಲಿದ ಸಮಯದಲ್ಲೇ ಕಂಡಿದ್ದೇವೆ.

ಆದರೆ ನನ್ನ ಅಭಿಮಾನಿಗಳು ನನ್ನ ಸೆಲೆಬ್ರಿಟಿಗಳ ನಾನು ಬದುಕಿದ್ದಾಗಲೇ ಇಷ್ಟು ಪ್ರೀತಿಯನ್ನು ನೀಡಿದ್ದಾರೆ ಎಂಬ ಮಾತನ್ನು ಹೇಳುತ್ತಾರೆ ಈ ಮಾತುಗಳನ್ನು ಕೆಲವು ಕಿಡಿಗೇಡಿಗಳು ಅರ್ಧಕ್ಕೆ ಕಟ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದಂತಹ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ದರ್ಶನ್ ಅವರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ದರ್ಶನ್ ಅವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಅವರು ಅಪ್ಪು ಅಭಿಮಾನಿಗಳಿಗೆ ಕ್ಷಮೆ ಕೇಳಬೇಕು ಹಾಗೂ ನಾನು ಹೇಳಿದ್ದು ತಪ್ಪಾಯಿತು ಅಂತ ಎಲ್ಲರ ಮುಂದೆ ತಪ್ಪು ಒಪ್ಪಿಕೊಳ್ಳಬೇಕು ಅಂತ ಆಗ್ರಹಿಸುತ್ತಾರೆ. ಅಷ್ಟೇ ಅಲ್ಲದೆ ಒಂದು ವೇಳೆ ದರ್ಶನ್ ಕ್ಷಮೆ ಕೇಳದೇ ಇದ್ದರೆ ಕ್ರಾಂತಿ ಸಿನಿಮಾ ಬಿಡುಗಡೆಯಾಗುವುದಕ್ಕೆ ನಾವು ಯಾವುದೇ ಕಾರಣಕ್ಕೂ ಕೂಡ ನಾವು ಬಿಡುವುದಿಲ್ಲ ಅಂತ ಹೋರಾಟ ನಡೆಸುತ್ತಾರೆ.

ಆದರೆ ನಿಜ ಹೇಳಬೇಕು ಅಂದರೆ ದರ್ಶನ್ ಯಾವುದೇ ರೀತಿಯಾದಂತಹ ಕೆಟ್ಟ ಉದ್ದೇಶವನ್ನು ಇಟ್ಟುಕೊಂಡು ಈ ಮಾತನ್ನು ಹೇಳುವುದಿಲ್ಲ ಬದಲಾಗಿ ಅಪ್ಪು ಅವರ ಮೇಲೆ ಇರುವಂತಹ ಪ್ರೀತಿ ಗೌರವದಿಂದ ಅವರನ್ನು ಉದಾಹರಣೆಗೆ ತೆಗೆದುಕೊಂಡು ಈ ಮಾತನ್ನು ಹೇಳಿದ್ದಾರೆ. ದರ್ಶನ್ ಅವರ ಪೂರ್ತಿ ಸಂಪೂರ್ಣ ಸಂದರ್ಶನದ ವಿಡಿಯೋ ನೋಡಿದರೆ ಎಲ್ಲರಿಗೂ ತಿಳಿಯುತ್ತದೆ ದರ್ಶನ್ ಅವರು ಅಪ್ಪು ಅವರ ಮೇಲೆ ಎಷ್ಟು ಪ್ರೀತಿ-ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ ಅಂತ. ಆದರೆ ಕೆಲವು ಕಿಡಿಗೇಡಿಗಳು ಮಾತ್ರ ದರ್ಶನವರು ಮಾತನಾಡಿದಂತಹ ಕೆಲವೇ ಕೆಲವು ಮಾತುಗಳನ್ನು ಮಾತ್ರ ಕಟ್ ಮಾಡಿ ಅದನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದರೆ ಎಂತವರಿಗಾದರೂ ಕೂಡ ದರ್ಶನ್ ಹೀಗೆ ಮಾತನಾಡಿದ್ದಾರೆ ಎಂಬ ಅನುಮಾನ ಬರುವುದು ಖಚಿತ ಯಾರಿಗೂ ತಿಳಿಯದ ಇನ್ನೊಂದು ವಿಚಾರವನ್ನು ಕೂಡ ದರ್ಶನ್ ಅವರು ಈ ಸಂದರ್ಶನದ ವೇಳೆ ತಿಳಿಸಿದ್ದಾರೆ.

ಮಾನ್ಯವಾಗಿ ಯಾರದ್ದೆ ಮನೆಯಲ್ಲಿ ಯಾರಾದರೂ ವ್ಯಕ್ತಿ ಇಹಲೋಕವನ್ನು ತ್ಯಜಿಸಿದಾಗ 11 ದಿನದವರೆಗೂ ಕೂಡ ಸೂತಕದ ವಾತಾವರಣ ಇರುತ್ತದೆ. ಹಾಗಾಗಿ ದರ್ಶನ್ ಅಪ್ಪು ಮೇಲೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದ ಕಾರಣ ಪುನೀತ್ ಅವರ 11ನೇ ದಿನದ ಕಾರ್ಯ ಮುಕ್ತಾಯವಾಗುವವರೆಗೂ ಕೂಡ ನಾವು ಯಾವುದೇ ಸಿನಿಮಾದ ಕೆಲಸವನ್ನು ಕೈಗೊಳ್ಳುವುದು ಬೇಡ ಕ್ರಾಂತಿ ಸಿನಿಮಾದ ಶೂಟಿಂಗನ್ನು ಅರ್ಧಕ್ಕೆ ನಿಲ್ಲಿಸಿ ಅಂತ ಹೇಳಿ ಆ ಕಾರ್ಯಕ್ರಮವನ್ನು ಸ್ಥಗಿತಗೊಳಿಸುತ್ತಾರೆ. ಒಂದು ವೇಳೆ ದರ್ಶನ್ ಮನಸ್ಸಿನಲ್ಲಿ ಅಪ್ಪು ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಇದ್ದಿದ್ದರೆ ಅಪ್ಪು ಅವರು ಇದ್ದಾರೆಷ್ಟು ಹೋದರೆ ಎಷ್ಟು ನಮಗೇನು ನಾವು ನಮ್ಮ ಸಿನಿಮಾವನ್ನು ಮುಂದೆವರಿಸೋಣ ಅಂತ ಹೇಳುತ್ತಿದ್ದರು ಇದರಲ್ಲೆ ನಾವು ಅರ್ಥ ಮಾಡಿಕೊಳ್ಳಬೇಕು ದರ್ಶನ್ ಅವರು ಅಪ್ಪು ಅವರಿಗೋಸ್ಕರ ಎಷ್ಟು ಗೌರವವನ್ನು ನೀಡಿದರು ಹಾಗೂ ಅವರು ಸಾ.ವಿ.ನಿಂದಾಗಿ ಎಷ್ಟು ನೋವನ್ನು ಅನುಭವಿಸಿದ್ದರು ಅಂತ. ವಿನೋದ್ ಪ್ರಭಾಕರ್ ಅವರು ಕೂಡ ದರ್ಶನ್ ಅವರು ಅಪ್ಪು ಬಗ್ಗೆ ಇಟ್ಟುಕೊಂಡಿದ್ದಂತಹ ಗೌರವ ಒಂದನ್ನು ವಿಡಿಯೋ ಮಾಡುವುದರ ಮೂಲಕ ವ್ಯಕ್ತಪಡಿಸಿದ್ದಾರೆ. ಅಪ್ಪು ಅವರು ಇಹಲೋಕ ತ್ಯಜಿಸಿದಾಗ ದರ್ಶನ್ ಅವರು ತುಂಬಾನೇ ದುಃಖ ಪಟ್ಟು ಮನೆಯಲ್ಲಿ ಕುಳಿತುಕೊಂಡು ಅಳುತ್ತಿದ್ದರಂತೆ ಆದರೆ ಅಭಿಮಾನಿಗಳಿಗೆ ಮಾತ್ರ ಇದು ಕಾಣುತ್ತಿಲ್ಲ.

ಅಪ್ಪು ಅಭಿಮಾನಿಗಳು ಇಷ್ಟು ದಿನದವರೆಗೂ ತಪ್ಪು ತಿಳಿದುಕೊಂಡಿದ್ದರು ಆದರೆ ಯಾವಾಗ ದರ್ಶನ್ ಅವರ ಪೂರ್ತಿ ಪ್ರಮಾಣದ ಸಂದರ್ಶನ ವಿಡಿಯೋ ನೋಡಿದರೋ ಅವಾಗ ತಿಳಿಯುತ್ತದೆ. ದರ್ಶನ್ ಅವರು ಅಪ್ಪು ಅವರ ಬಗ್ಗೆ ಯಾವುದೇ ರೀತಿಯಾಗಿ ಕೆಟ್ಟದಾಗಿ ಮಾತನಾಡಿಲ್ಲ ಬದಲಾಗಿ ಅವರಿಗೆ ಗೌರವವನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬರುತ್ತದೆ. ತದನಂತರ ಅಪ್ಪು ಅಭಿಮಾನಿಗಳು ನಾವು ಇಷ್ಟು ದಿನಗಳ ಕಾಲ ನಡೆದುಕೊಂಡಿದ್ದು ತಪ್ಪು ಅಂತ ದರ್ಶನ್ ಗೆ ಹಾಗೂ ದರ್ಶನ್ ಅಭಿಮಾನಿಗಳಿಗೆ ಕ್ಷಮೆಯನ್ನು ಹೇಳುವುದಾದರೆ ಈಗ ದರ್ಶನ್ ಮತ್ತು ಅಪ್ಪು ಅಭಿಮಾನಿಗಳ ನಡುವೆ ಇದ್ದಂತಹ ವೈ ಮನಸು ದೂರಾಗಿದೆ ಸ್ಟಾರ್ ವಾರ್ ನಿಂತು ಇದೀಗ ಸಹ ಬಾಳ್ವೆಯನ್ನು ಸಾಗಿಸುವುದಕ್ಕೆ ಮುಂದಾಗಿದ್ದರೆ‌. ನಿಜಕ್ಕೂ ಕೂಡ ನಿಲುಮೆಯನ್ನು ನಾವು ಗೌರವಿಸಲೇಬೇಕು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

 

ಮೋಹಕತಾರೆ ರಮ್ಯ ಅವರನ್ನು ನಿಮ್ಮ ನೆಚ್ಚಿನ ಹೀರೋ ಯಾರು ಅಂತ ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರವೇನು ಗೊತ್ತಾ.?

ಸ್ಯಾಂಡಲ್ ವುಡ್ ನಾ ಕ್ವೀನ್ ಹಾಗೂ ಈಗಲೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ ಅಂದರೆ ಅದು ರಮ್ಯ 2002ರಲ್ಲಿ ತೆರೆಕಂಡಂತಹ ಅಭಿ ಎಂಬ ಸಿನಿಮಾದ ಮೂಲಕ ಇವರು ಸ್ಯಾಂಡಲ್ವುಡ್ ಗೆ ಪಾದರಪಣೆ ಮಾಡಿದರು. ಈ ಸಿನಿಮಾದ ನಂತರ ಇವರು ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದರು ಇಲ್ಲಿಯವರೆಗೂ ಕೂಡ ಕನ್ನಡದ ಬಹುತೇಕ ಎಲ್ಲಾ ನಟರ ಜೊತೆಯೂ ಕೂಡ ತೆರೆಯನ್ನು ಹಂಚಿಕೊಂಡಿದ್ದಾರೆ. ಇನ್ನು ರಮ್ಯಾ ಮಾಡಿರುವಂತಹ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಡೂಪರ್ ಹಿಟ್ ಆಗಿವೆ ರಮ್ಯಾ ಅವರು ಮಾಡಿದಂತಹ ಸಿನಿಮಾಗಳು ಸೋತ ಇತಿಹಾಸವೇ ಇಲ್ಲ. ಸ್ಯಾಂಡಲ್ವುಡ್ ಗೆ ಇವರು ಪಾದರ್ಪಣೆ ಮಾಡಿ ಎರಡು ದಶಕಗಳೇ ಕಳೆದು ಹೋಗಿದೆ ಆದರೂ ಕೂಡ ನಟಿ ರಮ್ಯಾ ಅವರಿಗೆ ಇರುವಂತಹ ಬೇಡಿಕೆ ಇನ್ನೂ ಕೂಡ ಕಡಿಮೆಯಾಗಿಲ್ಲ.

ಆದರೆ ಕಳೆದ ನಾಲ್ಕೈದು ವರ್ಷಗಳಿಂದಲೂ ರಮ್ಯಾ ಅವರು ಯಾವುದೇ ಸಿನಿಮಾದಲ್ಲೂ ಕೂಡ ನಟನೆ ಮಾಡಿಲ್ಲ ಇದನ್ನು ನೋಡಿದಂತಹ ಅಭಿಮಾನಿಗಳಿಗೆ ಬೇಸರವಾಗಿದೆ. ಅಷ್ಟೇ ಅಲ್ಲದೆ ಇಷ್ಟು ಬೇಗ ನಟನೆಯಿಂದ ದೂರ ಉಳಿಯುವುದಕ್ಕೆ ಕಾರಣವಾದರೂ ಏನು ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. 2017ರಲ್ಲಿ ತೆರೆಕಂಡ ನಾಗರಹಾವು ಎಂಬ ಸಿನಿಮಾದಲ್ಲಿ ರಮ್ಯಾ ಅವರು ಕೊನೆಯ ಬಾರಿ ಘಟನೆ ಮಾಡಿದ್ದು. ಈ ಸಿನಿಮಾದ ನಂತರ ಅವರು ರಾಜಕೀಯ ಕ್ಷೇತ್ರದ ಕಡೆ ಒಲವನ್ನು ತೋರಿಸುತ್ತಾರೆ ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿಯುತ್ತಾರೆ. ಆದರೆ ಸದ್ಯಕ್ಕೆ ಯಾಕೋ ರಾಜಕೀಯದಿಂದಲೂ ಕೂಡ ದೂರ ಉಳಿದಿದ್ದು ಈಗ ಒಂಟಿ ಜೀವನವನ್ನು ಸಾಗಿಸುತ್ತಿದ್ದಾರೆ ಅಂತ ಹೇಳಬಹುದು. ಇನ್ನು ರಮ್ಯಾ ಅವರು ಯಾವಾಗ ಮತ್ತೆ ಸ್ಯಾಂಡಲ್ವುಡ್ ಗೆ ಕಮ್ ಬ್ಯಾಕ್ ಮಾಡುತ್ತಾರೆ ಅಂತ ಅವರ ಅಭಿಮಾನಿಗಳು ಪ್ರಶ್ನೆಯನ್ನು ಕೇಳಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಿದಂತಹ ರಮ್ಯಾ ಅವರು ಖಂಡಿತವಾಗಿಯೂ ಕೂಡ ಉತ್ತಮ ಕಥೆಯೊಂದಿಗೆ ನಿಮ್ಮ ಮುಂದೆ ಬರುತ್ತೇನೆ ಅಂತ ಹೇಳಿಕೊಂಡಿದ್ದಾರೆ. ಇವೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆ ಆಗಾಗ ತಮ್ಮ ಫ್ಯಾನ್ಸ್ ಜೊತೆ instagram ಲೈವ್ ನಲ್ಲಿ ಬಂದು ಮಾತನಾಡುವಂತಹ ರಮ್ಯಾ ಅವರು ಅಭಿಮಾನಿಗಳು ಕೇಳುವಂತಹ ಪ್ರಶ್ನೆಗೆ ಉತ್ತರಿಸುವಂತಹ ಪ್ರಯತ್ನವನ್ನು ಮಾಡುತ್ತಾರೆ. ಈ ಬಾರಿ ಅಭಿಮಾನಿಗಳು ವಿಭಿನ್ನ ಪ್ರಶ್ನೆಯನ್ನು ಕೇಳಿದ್ದಾರೆ ಹೌದು ನಿಮ್ಮ ನೆಚ್ಚಿನ ನಟ ಯಾರು ಎಂಬ ಪ್ರಶ್ನೆಯನ್ನು ಕೇಳಿದರೆ ಇದಕ್ಕೆ ಉತ್ತರ ನೀಡಿದಂತಹ ರಮ್ಯಾ ಅವರು “ನನಗೆ ಎಲ್ಲರೂ ಇಷ್ಟ ಇನ್ಸ್ಟಾಗ್ರಾಮ್ ನಲ್ಲಿ ಬಹುತೇಕ ಎಲ್ಲಾ ನಟರನ್ನು ಫಾಲೋ ಮಾಡುತ್ತಿದ್ದೇನೆ ನಾವಿದ್ದಾಗ ನಾವು ಅಷ್ಟು ಕೇರ್ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಈಗ ಪ್ರತಿಯೊಂದು ಫೋಟೊ ನೋಡುತ್ತಿದ್ದರೆ ಪ್ರತಿಯೊಬ್ವರು ಕೂಡ ಸೋ ಗುಡ್ ಅನಿಸುತ್ತದೆ. ಅದುದರಿಂದ ನನಗೆ ಎಲ್ಲರು ಇಷ್ಟ ಎಂದಿದ್ದಾರೆ”.

ಇನ್ನು ಅಪ್ಪು ಅವರು ಇಹಲೋಕವನ್ನು ತ್ಯಜಿಸುವ ಒಂದು ವಾರದ ಹಿಂದೆಯಷ್ಟೇ ಅಪ್ಪು ಅವರಿಗೆ ಕರೆ ಮಾಡಿದಂತಹ ರಮ್ಯಾ ಅವರು ಮತ್ತೆ ನಾನು ಸ್ಯಾಂಡಲ್ವುಡ್ ಕಮ್ ಬ್ಯಾಕ್ ಮಾಡುವಂತಹ ನಿರ್ಧಾರವನ್ನು ಮಾಡಿದ್ದೇನೆ. ಒಂದು ವೇಳೆ ನಾನು ಸ್ಯಾಂಡಲ್ವುಡ್ ಗೆ ಮತ್ತೆ ರೀ ಎಂಟ್ರಿ ಆಗುವುದಾದರೆ ಅದು ನಿಮ್ಮ ಸಿನಿಮಾದಲ್ಲಿ ನಟನೆ ಮಾಡುವುದಾಗ ಮೂಲಕವೇ ಅಂತ ಹೇಳಿಕೊಂಡಿದ್ದರಂತೆ. ಈ ವಿಚಾರವನ್ನು ರಮ್ಯಾ ಅವರು ಅಪ್ಪು ಅವರು ಅಗಲಿದ ನಂತರ ಮಾಧ್ಯಮ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇವೆಲ್ಲವನ್ನು ನೋಡುತ್ತಿದ್ದರೆ, ರಮ್ಯಾ ಅವರಿಗೆ ಎಲ್ಲಾ ನಟರು ಕೂಡ ಇಷ್ಟಾನೆ ಆದರೆ ಅಪ್ಪು ಅವರ ಮೇಲೆ ಸ್ವಲ್ಪ ಹೆಚ್ಚಿನ ಒಲವು ಇತ್ತು ಎಂಬುದು ತಿಳಿಯುತ್ತದೆ. ಏಕೆಂದರೆ ಅಪ್ಪು ಅವರ ಜೊತೆ ನಟನೆ ಮಾಡುವುದರ ಮೂಲಕ ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

ಹಾಗಾಗಿ ದೀರ್ಘಕಾಲ ಬ್ರೇಕ್ ತೆಗೆದುಕೊಂಡ ನಂತರ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗುವುದಾದರೆ ಅದು ಅಪ್ಪು ನಟನೆಯ ಸಿನಿಮಾದ ಮೂಲಕವೇ ಅಂತ ಹೇಳಿಕೊಂಡಿದ್ದಾರೆ. ವಿಧಿಯಾಟ ಹೇಗಿದೆ ನೋಡಿ ಇದೀಗ ಅಪ್ಪು ಅವರು ನಮ್ಮ ಜೊತೆ ಇಲ್ಲ ಹಾಗಾಗಿ ರಮ್ಯಾ ಅವರು ಯಾವ ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುತ್ತಾರೆ ಯಾವ ನಟನ ಜೊತೆ ನಟನೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ ಹಾಗೂ ರಮ್ಯಾ ಅವರು ಯಾವ ನಟನ ಜೊತೆ ನಟನೆ ಮಾಡಿದರೆ ಚೆನ್ನಾಗಿರುತ್ತದೆ ಎಂಬುದನ್ನು ಹೇಳಿ. ರಚಿತಾ ರಾಮ್ ಮಾಡಿದ್ದೇನು ಗೊತ್ತ.? ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

ಸತತ ಸೊಲುಗಳಿಂದ ಕಂಗೆಟ್ಟಿದ ನನಗೆ ಮಗಳ ಮದುವೆ ಮಾಡುವುದಕ್ಕೂ ಹಣ ಇಲ್ಲದೆ ಇದ್ದಾಗ ಹಣ ಒಡವೆ ಕೊಟ್ಟು ಸಹಾಯ ಮಾಡಿದ ವ್ಯಕ್ತಿ ಇವರೆ ಎಂದು ಭಾವುಕರಾದ ರವಿಚಂದ್ರನ್

ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾವನ್ನೇ ತನ್ನ ಜೀವನ ಅಂತ ಅಂದುಕೊಂಡಿದ್ದಾರೆ ಸಿನಿಮಾರಂಗಕ್ಕೆ ಎಂಟ್ರಿಯಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ವಿಭಿನ್ನ ಮಾದರಿಯ ಸಿನಿಮಾಗಳನ್ನು ತೆಗೆಯಬೇಕು ಎಂಬ ಉದ್ದೇಶವನ್ನು ಒಳಗೊಂಡಿದ್ದರೆ. ಈ ಕಾರಣಕ್ಕಾಗಿ ರವಿಚಂದ್ರನ್ ಅವರು ನಟನೆ ಮಾಡಿದ ಇವರಿಗಿನ ಎಲ್ಲಾ ಸಿನಿಮಾವು ಕೂಡ ತುಂಬಾ ವಿಭಿನ್ನವಾದ ಕಥೆಯನ್ನು ಒಳಗೊಂಡಿದೆ. ರವಿಚಂದ್ರನ್ ಸಿನಿಮಾ ಅಂದರೆ ಅಲ್ಲಿ ಹೆಣ್ಣು ಮತ್ತು ಹೂವಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ ಬಹಳ ರೋಮ್ಯಾಂಟಿಕ್ ಆಗಿ ಕಾಣುವಂತಹ ರವಿಚಂದ್ರನ್ ಅವರು ಈ ಸಿನಿಮಾದ ಮೂಲಕ ಜನರಿಗೆ ಮನರಂಜನೆಯನ್ನು ನೀಡಬೇಕು ಎಂಬ ಉದ್ದೇಶವನ್ನಷ್ಟೇ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಸಿನಿಮಾದ ಮೇಕಿಂಗ್ ಮತ್ತು ವಿಜುವಲ್ ಎಫೆಕ್ಟ್ ಚೆನ್ನಾಗಿ ಬರಬೇಕು ಅಂತ ಕೋಟಿ ಕೋಟಿ ಹಣವನ್ನು ಲೆಕ್ಕವಿಲ್ಲದಂತೆ ಖರ್ಚು ಮಾಡುತ್ತಾರೆ.

ಕೆಲವೊಮ್ಮೆ ಸಿನಿಮಾ ಚೆನ್ನಾಗಿ ಓಡಿದಾಗ ಇವರು ಹಾಕಿದಂತಹ ಬಂಡವಾಳ ಹಿಂತಿರುಗಿ ಬರುತ್ತದೆ ಆದರೆ ರವಿಚಂದ್ರನ್ ಅವರ ಬಹುತೇಕ ಎಲ್ಲಾ ಸಿನಿಮಾ ಅದ್ದೂರಿಯಾಗಿ ಕೂಡಿರುವುದರಿಂದ ಕೆಲವು ಸಿನಿಮಾ ಹಿಟ್ಟಾಗಿದೆ ಇನ್ನು ಕೆಲವು ಸಿನಿಮಾ ಪ್ಲಾಫ್ ಆಗಿದೆ. ಈ ಸಿನಿಮಾ ಸೋತ ಕಾರಣ ರವಿಚಂದ್ರನ್ ಅವರು ಸಾಕಷ್ಟು ಆರ್ಥಿಕ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಶಾಂತಿ ಕ್ರಾಂತಿ, ಏಕಾಂಗಿ, ಅಪರ್ಣ, ಕ್ರೇಜಿ ಲೋಕ ಹೀಗೆ ಸಾಲು ಸಾಲು ಸಿನಿಮಾಗಳು ಬಹಳ ನಷ್ಟವನ್ನು ಎದುರಿಸುತ್ತದೆ. ಈ ಹೊಡೆತವನ್ನು ರವಿಚಂದ್ರನ್ ಅವರು ತಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ತಮ್ಮಲ್ಲಿ ಇರುವಂತಹ ಆಸ್ತಿಪಾಸ್ತಿ ಎಲ್ಲವನ್ನು ಕೂಡ ಮಾರಿಕೊಳ್ಳುತ್ತಾರೆ.

ಸಾಮಾನ್ಯವಾಗಿ ನಾವೆಲ್ಲರೂ ಕೂಡ ನಟ ನಟಿಯರು ಅಂದರೆ ಉನ್ನತ ಜೀವನ ಶೈಲಿಯನ್ನು ನಡೆಸುತ್ತಾರೆ ಅವರ ಬಳಿ ಸಾಕಷ್ಟು ಹಣ ಆಸ್ತಿ ಸಂಪತ್ತು ಇರುತ್ತದೆ ಅಂತ ಅಂದುಕೊಳ್ಳುತ್ತೇವೆ. ಆದರೆ ನಟ ರವಿಚಂದ್ರನ್ ಮಾತ್ರ ಇಲ್ಲಿಯವರೆಗೂ ಸಿನಿಮಾದಿಂದ ಏನು ಸಂಪಾದನೆ ಮಾಡಿಲ್ಲ. ಬದಲಿಗೆ ತಮ್ಮ ತಂದೆ ಸಂಪಾದನೆ ಮಾಡಿದಂತಹ ಆಸ್ತಿ ಹಣವೆಲ್ಲವನ್ನು ಕೂಡ ಸಿನಿಮಾಗಾಗಿಯೇ ಕಳೆದುಕೊಂಡಿದ್ದಾರೆ ಈ ವಿಚಾರವನ್ನು ರವಿಚಂದ್ರನ್ ಅವರ ಸಾಕಷ್ಟು ಬಾರಿ ಕೆಲವು ಸಂದರ್ಶನದಲ್ಲಿ ಮಾಧ್ಯಮದಲ್ಲಿ ಮತ್ತು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅದೇ ರೀತಿ ಈ ಬಾರಿಯೂ ಕೂಡ ರವಿಚಂದ್ರನ್ ಅವರು ತಮ್ಮ ಜೀವನದಲ್ಲಿ ಉಂಟಾದಂತಹ ಆರ್ಥಿಕ ಬಿಕ್ಕಟ್ಟಿನಲ್ಲಿ ತನ್ನ ಬೆನ್ನೆಲುಬಾಗಿ ನಿಂತಂತಹ ವ್ಯಕ್ತಿಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ 2019 ರಲ್ಲಿ ರವಿಚಂದ್ರನ್ ಅವರ ಮಗಳ ಗೀತಾಂಜಲಿ ಮದುವೆ ಉದ್ಯಮಿ ಆದಂತಹ ವಿಜಯ್ ಜೊತೆ ನಡೆಯುತ್ತದೆ.

ಈ ಸಮಯದಲ್ಲಿ ಮಗಳ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಬೇಕು ಇಲ್ಲಿಯವರೆಗೂ ಕೂಡ ಯಾರು ಈ ರೀತಿ ಮದುವೆ ಮಾಡಿರಬಾರದು ಎಂಬ ಕಾರಣಕ್ಕಾಗಿ ಬೆಂಗಳೂರಿನ ಅರಮನೆಯ ಮುಂದೆ ಅದ್ದೂರಿ ಸೆಟ್ಟನ್ನು ಹಾಕಿಸಿ ಮಗಳ ಮದುವೆಯನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಆದರೆ ತನ್ನ ಮಗಳ ಮದುವೆ ಮಾಡಲು ರವಿಚಂದ್ರನ್ ಅವರು ಎಷ್ಟು ಕಷ್ಟ ಪಟ್ಟರು ಎಂಬ ವಿಚಾರ ಇಲ್ಲಿಯವರೆಗೂ ಕೂಡ ಯಾರಿಗೂ ತಿಳಿದಿಲ್ಲ. ಈ ವಿಚಾರವನ್ನು ರವಿಚಂದ್ರನ್ ಅವರು ಇದೀಗ ಬಿರಂಗ ಪಡಿಸಿದ್ದಾರೆ ಮಗಳ ಮದುವೆಯ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ಪರಿಸ್ಥಿತಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಮಗಳ ಮದುವೆ ಖರ್ಚಿಗು ಕೂಡ ಹಣ ಇರುವುದಿಲ್ಲ ಒಡವೆಗಳಿಗೂ ಕೂಡ ಹಣ ಇರುವುದಿಲ್ಲ. ಆ ಸಮಯದಲ್ಲಿ ರವಿಚಂದ್ರನ್ ಅವರ ಸ್ನೇಹಿತರು ಆದ ಸರ್ಜನ್ ವೆಂಕಟೇಶ್ ರಮೇಶ್ ಈ ಮೂರು ವ್ಯಕ್ತಿಗಳು ಕೂಡ ಬಹಳ ಸಹಾಯ ಮಾಡುತ್ತಾರೆ.

ಮಗಳ ಮದುವೆಯ ಸಮಯದಲ್ಲಿ ಮನೆಗೆ ಬಂದಂತಹ ಈ ಮೂರು ಜನ ವ್ಯಕ್ತಿಗಳು ದೊಡ್ಡ ಮೊತ್ತದ ಹಣವನ್ನು ರವಿಚಂದ್ರನ್ ಅವರಿಗೆ ನೀಡುತ್ತಾರಂತೆ. ಅಷ್ಟೇ ಅಲ್ಲದೆ ರವಿಚಂದ್ರನ್ ಅವರು ತಮ್ಮ ಮಗಳ ಮದುವೆಗೆ ಆಭರಣವನ್ನು ಖರೀದಿ ಮಾಡಬೇಕು ಅಂತ ಅವರ ಸ್ನೇಹಿತರ ಅಂಗಡಿಗೆ ಹೋಗುತ್ತಾರಂತೆ. ಆ ಸಮಯದಲ್ಲಿ ನನ್ನ ಮಗಳು ಕೇಳಿದಷ್ಟು ಒಡವೆಯನ್ನು ಕೊಡಿ ಆದರೆ ಅದೆಲ್ಲದಕ್ಕು ಕೂಡ ಬರಿಸುವಷ್ಟು ಹಣ ನನ್ನ ಬಳಿ ಇಲ್ಲ ಸ್ವಲ್ಪ ಹಣವನ್ನು ನೀಡುತ್ತೇನೆ. ಆರು ತಿಂಗಳ ಸಮಯವಕಾಶ ನನಗೆ ನೀಡಿ ಎಲ್ಲಾ ಹಣವನ್ನು ನಾನು ಸಂಪೂರ್ಣವಾಗಿ ಹಿಂತಿರುಗಿಸುತ್ತೇನೆ ಅಂತ ಮನವಿ ಮಾಡಿಕೊಳ್ಳುತ್ತಾರಂತೆ. ಆ ಸಮಯದಲ್ಲಿ ಅಂಗಡಿಯ ಮಾಲೀಕ ರವಿಚಂದ್ರನ್ ಮಗಳು ಕೇಳಿದಷ್ಟು ಒಡವೆಯನ್ನು ಕೊಡುತ್ತಾರೆ ಆದರೆ ಅವರ ಬಳಿಯಿಂದ ಒಂದು ರೂಪಾಯಿ ಹಣವನ್ನು ಪಡೆಯುವುದಿಲ್ಲವಂತೆ ನಿಮ್ಮ ಪ್ರೀತಿ ವಿಶ್ವಾಸಕ್ಕಿಂತ ಹಣ ಹೆಚ್ಚಲ್ಲ ಅಂತ ಹೇಳಿ ಅವರನ್ನು ಹಾಗೆ ಕಳುಹಿಸುತ್ತಾರಂತೆ.

ಈ ಎಲ್ಲ ವಿಚಾರವನ್ನು ರವಿಚಂದ್ರನ್ ಅವರು ತಮ್ಮ ಸಿನಿಮಾ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದಾರೆ ಸಾಮಾನ್ಯವಾಗಿ ಬಹಿರಂಗವಾಗಿ ಈ ರೀತಿ ಹೇಳಿಕೊಳ್ಳುವುದಕ್ಕೂ ಕೂಡ ಧೈರ್ಯ ಇರಬೇಕು. ಏಕೆಂದರೆ ನಟ ನಟಿಯರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಕೂಡ ಬಿಟ್ಟುಕೊಡುವುದಿಲ್ಲ ಅದರಲ್ಲಿಯೂ ಕೂಡ ತಾವು ಉನ್ನತ ಜೀವನವನ್ನು ಸಾಗಿಸುತ್ತೇವೆ ಎಂಬುದರ ಬಗ್ಗೆ ಮಾತ್ರ ಹೇಳಿಕೊಳ್ಳುತ್ತಾರೆ. ತಮ್ಮ ಕಷ್ಟದ ದಿನಗಳನ್ನು ಅಥವಾ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಹೇಳಿಕೊಳ್ಳುವುದಿಲ್ಲ ಆದರೆ ರವಿಚಂದ್ರನ್ ಅವರು ಮಾತ್ರ ಈ ಎಲ್ಲಾ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನು ಕೇಳಿದಂತಹ ಅಭಿಮಾನಿಗಳು ನಿಜಕ್ಕೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ನಟ ನಟಿಯರು ಅಂದರೆ ಅವರಿಗೆ ಯಾವುದೇ ಕಷ್ಟ ಇರುವುದಿಲ್ಲ ಅಂತ ಅಂದುಕೊಳ್ಳುತ್ತೇವೆ ಆದರೆ ನಿಜ ಹೇಳಬೇಕು ಅಂದರೆ ಅವರ ಜೀವನದಲ್ಲಿ ಕೂಡ ಸಾಕಷ್ಟು ಕಷ್ಟಗಳು ಇರುತ್ತದೆ. ನೀನು ರವಿಚಂದ್ರನ್ ಮಾತನಾಡಿದಂತಹ ಈ ವಿಡಿಯೋ ನೋಡಿದಂತಹ ಕೆಲವು ನಟಿಗರು ಇಷ್ಟೊಂದು ಆರ್ಥಿಕ ಪರಿಸ್ಥಿತಿ ಇರುವಾಗ ಮಗಳ ಮದುವೆಯನ್ನು ಅಷ್ಟು ಅದ್ದೂರಿಯಾಗಿ ಯಾಕೆ ಮಾಡಬೇಕಿತ್ತು ಸಿಂಪಲ್ ಆಗಿ ಮಾಡಿಕೊಳ್ಳಬಹುದಿತ್ತು ಎಂದು ಕಾಮೆಂಟ್ ಹಾಕಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಅದನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸ್ಯಾಂಡಲ್ ವುಡ್ ನಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ಹೀರೋ ಯಾರು ಗೊತ್ತಾ.?

ಸ್ಯಾಂಡಲ್ ವುಡ್ ನಲ್ಲಿ ಬಹುತೇಕ ನಟರು ಇರುವುದನ್ನು ನಾವು ಕಾಣಬಹುದಾಗಿದೆ ಅದರಲ್ಲಿಯೂ ಕೂಡ ಸುದೀಪ್ ದರ್ಶನ್ ಧ್ರುವ ಸರ್ಜಾ ಉಪೇಂದ್ರ ಗಣೇಶ್ ಅಜಯ್ ರಾವ್ ಹೀಗೆ ಸಾಕಷ್ಟು ನಟರು ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನವಾದ ಸಿನಿಮಾಗಳಲ್ಲಿ ನಟನೆ ಮಾಡುವುದರ ಮೂಲಕ ಮನೆ ಮಾತಾಗಿದ್ದಾರೆ. ಆದರೆ ಹೆಚ್ಚಿನ ಜನರಲ್ಲಿ ಮೊದಲು ಕೋಟಿ ಸಂಭಾವನೆ ಪಡೆದ ನಟ ಯಾರಿರಬಹುದು ಎಂಬ ಅನುಮಾನ ಇರುತ್ತದೆ. ಹಾಗಾಗಿ ಇಂದು ಸ್ಯಾಂಡಲ್ ವುಡ್ ನಲ್ಲಿ ಕೋಟಿ ಸಂಭಾವನೆ ಪಡೆದ ನಟನ ಬಗ್ಗೆ ತಿಳಿಸುತ್ತಿದ್ದೇವೆ ನೋಡಿ ನಿಮ್ಮೆಲ್ಲರಿಗೂ ಇತ್ತೀಚಿನ ದಿನದಲ್ಲಿ ಎಷ್ಟು ಸಂಭವನೆ ಪಡೆಯುತ್ತಾರೆ ಎಂಬುದ ವಿಚಾರದ ಬಗ್ಗೆ ಮಾಹಿತಿ ಇರುತ್ತದೆ. ಆದರೆ ಕಳೆದ ಹತ್ತು ವರ್ಷಗಳ ಹಿಂದೆ ಯಾವ ನಟನೆಗೆ ಎಷ್ಟು ಸಂಭಾವನೆ ಸಿಗುತ್ತಿತ್ತು ಎಂಬುದನ್ನು ಎಲ್ಲಿಯೂ ಕೂಡ ರಿವಿಲ್ ಮಾಡುತ್ತಿರಲಿಲ್ಲ.

ಹೌದು ಸಂಭಾವನೆ ವಿಚಾರ ಕೇವಲ ಇಬ್ಬರು ವ್ಯಕ್ತಿಗಳಿಗೆ ಮಾತ್ರ ತಿಳಿದಿರುತ್ತಿತ್ತು ನಟನಿಗೆ ಮತ್ತು ನಿರ್ಮಾಪಕ ನಡುವೆ ಮಾತ್ರ ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಅಥವಾ ನೀಡಬೇಕು ಎಂಬ ವಿಚಾರವನ್ನು ಚರ್ಚೆ ಮಾಡುತ್ತಿದ್ದರು. ಈ ವಿಚಾರವನ್ನು ಬಹಿರಂಗವಾಗಿ ನಟರು ಆಗಿರಬಹುದು ಅಥವಾ ನಿರ್ಮಾಪಕ ಆಗಿರಬಹುದು ಎಲ್ಲಿಯೂ ಕೂಡ ಹೇಳಿಕೊಳ್ಳುತ್ತಿರಲಿಲ್ಲ. ಹಾಗಾಗಿ ಯಾವ ನಟನೆಗೆ ಎಷ್ಟು ಸಂಭಾವನೆ ದೊರೆಯುತ್ತಿತ್ತು ಅಂತ ಅಂದಿನ ಕಾಲದಲ್ಲಿ ಯಾರು ಕೂಡ ಊಹೆ ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಇನ್ನು ಸಂಭಾವನೆ ವಿಚಾರಕ್ಕೆ ಬರುವುದಾದರೆ ಈಗ ಕೋಟಿ ಕೋಟಿ ಅಂತ ಹೇಳುತ್ತಾರೆ ಆದರೆ ಕಳೆದ ದಶಕದಲ್ಲಿ ಕೋಟಿ ಎಂಬ ಮಾತೆ ಇರಲಿಲ್ಲ ನಟರಿಗೆ ಲಕ್ಷದಲ್ಲಿ ಹಣವನ್ನು ನೀಡುತ್ತಿದ್ದರು.

ಈ ಸಮಯದಲ್ಲಿ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಲ್ಲಿ ಕೋಟಿ ಸಂಭವನ ಪಡೆದ ಏಕೈಕ ನಟ ಅಂದರೆ ಅದು ಗೋಲ್ಡನ್ ಸ್ಟಾರ್ ಗಣೇಶ್ ಅಂತಾನೆ ಹೇಳಬಹುದು. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮುಂಗಾರು ಮಳೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೀವನದಲ್ಲಿ ಒಂದು ಬಹುದೊಡ್ಡ ಯಶಸ್ಸನ್ನು ತಂದುಕೊಟ್ಟ ಸಿನಿಮಾ. ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಇವರಿಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವುದಕ್ಕೆ ಅವಕಾಶ ದೊರೆಯುತ್ತದೆ. ಅದೇ ಸಮಯದಲ್ಲಿ ಯೋಗರಾಜ್ ಭಟ್ಟವರು ಗಾಳಿಪಟ ಎಂಬ ಸಿನಿಮಾವನ್ನು ಮಾಡುವುದಕ್ಕೆ ಪ್ಲಾನ್ ಮಾಡಿಕೊಳ್ಳುತ್ತಾರೆ. 2008ರಲ್ಲಿ ಈ ಸಿನಿಮಾ ತಾರೆ ಕಾಡುತ್ತದೆ.

ಈ ಸಿನಿಮಾ ಯೋಗರಾಜ್ ಬಟ್ ಅವರ ನಿರ್ದೇಶನ ಇರುತ್ತದೆ. ಆಗಿನ ಕಾಲಕ್ಕೆ 175 ದಿನ ಪೂರೈಸಿದ ಏಕೈಕ ಸಿನಿಮಾ ಅಂದರೆ ಅದು ಗಾಳಿಪಟ ಅಂತ ಹೇಳಬಹುದು ಈ ಸಿನಿಮಾದಿಂದಾಗಿ ಗಣೇಶ ಅವರಿಗೆ ಇನ್ನಷ್ಟು ಹೆಸರು ಮತ್ತು ಕೀರ್ತಿ ದೊರೆಯುತ್ತದೆ. ಗಾಳಿಪಟ ಸಿನಿಮಾದಲ್ಲಿ ಗಣೇಶ್ ಅಭಿನಯ ಮಾಡುವುದಕ್ಕೆ ಸುಮಾರು ಒಂದು ಕೋಟಿ ಸಂಭಾವನೆಯನ್ನು ನೀಡಿದರಂತೆ ಈ ವಿಚಾರವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಸಂಭಾವನೆಯ ವಿಚಾರವನ್ನು ಗಣೇಶ ಅವರು ತಿಳಿಸಿರುವುದು. ಆ ಕಾಲದಲ್ಲಿ ಗಣೇಶ್ ಅವರಿಗೆ ತಿಳಿದಿರವಂತೆ ನನಗೆ ಇಷ್ಟು ಸಂಭಾವನೆ ಕೊಡುತ್ತಾರೆ ಅಂತ ತಿಳಿದಿರಲಿಲ್ಲವಂತೆ. ನಿರ್ವಾಪಕರು ಇಂತಹದೊಂದು ಆಫರ್ ಕೊಟ್ಟಾಗ ಗಣೇಶ ಅವರು ತುಂಬಾನೇ ಖುಷಿಯಾಗಿ ಅವರು ಕೊಟ್ಟದ್ದನ್ನು ತೆಗೆದುಕೊಂಡರಂತೆ.

ಇಲ್ಲಿಯವರೆಗೂ ಕೂಡ ಗಣೇಶ ಅವರು ಯಾವ ನಿರ್ದೇಶಕರಿಗೂ ಕೂಡ ಇಷ್ಟೇ ಸಂಭಾವನೆಯನ್ನು ನೀಡಬೇಕು ಅಂತ ಡಿಮ್ಯಾಂಡ್ ಮಾಡುವುದಿಲ್ಲವಂತೆ ಅವರು ಎಷ್ಟೇ ಕೊಟ್ಟರೂ ಕೂಡ ಸ್ವೀಕರಿಸುತ್ತಾರಂತೆ. ಈ ಎಲ್ಲ ವಿಚಾರವನ್ನು ಗಣೇಶ ಅವರು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡಿದ್ದಾರೆ ಗಣೇಶ್ ಅವರ ಗಾಳಿಪಟ ಭಾಗ ಎರಡು ಸಿನಿಮಾದ ಚಿತ್ರೀಕರಣ ಮುಗಿದಿದ್ದು ಇನ್ನೇನು ಸಿನಿಮಾ ಬಿಡುಗಡೆಯಾಗಬೇಕಾಗಿದೆ. ಹಾಗಾಗಿ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಗಣೇಶ್ ಮತ್ತು ಯೋಗರಾಜ್ ಭಟ್ಟವರು ನಿರತರಾಗಿದ್ದಾರೆ. ಇದೇ ವೇಳೆಯಲ್ಲಿ ಮಾಧ್ಯಮ ಮಿತ್ರರೊಂದಿಗೆ ಗಣೇಶ್ ಅವರು ತಮ್ಮ ಸಂಭಾವನೆ ವಿಚಾರವನ್ನು ಹೊರ ಇಟ್ಟಿದ್ದಾರೆ ಇದನ್ನು ಕೇಳಿದ ನಂತರ ತಿಳಿಯುತ್ತದೆ ಸ್ಯಾಂಡಲ್ವುಡ್ ನಲ್ಲಿ ಮೊದಲ ಬಾರಿಗೆ ಕೋಟಿ ಸಂಭಾವನೆ ಪಡೆದ ಏಕೈಕ ನಟ ಅಂದರೆ ಅದು ಗಣೇಶ ಅಂತಾನೆ ಹೇಳಬಹುದು.

ಈಗ ಬಿಡಿ, ಕೋಟೆ ಎಂಬುದು ಲೆಕ್ಕಕ್ಕೆ ಇಲ್ಲ ಸ್ಟಾರ್ ನಟರೆಲ್ಲ 10 ರಿಂದ 20 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಆದರೆ ಅಂದಿನ ಕಾಲಕ್ಕೆ ಹೆಚ್ಚು ಸಂಭಾವನೆ ಪಡೆದಂತಹ ನಟ ಅಂದರೆ ಅದು ಗೋಲ್ಡನ್ ಸ್ಟಾರ್ ಗಣೇಶ್ ಅಂತಾನೆ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ನಿಮ್ಮ ನೆಚ್ಚಿನ ನಟ ಯಾರು ಎಂಬುದನ್ನು ಕೂಡ ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.

ಸೊಂಟಕ್ಕೆ ಸೀರೆ ಸಿಕ್ಕಿಸಿ ಮಗಳಿಗಿಂತ ಸಖತ್ ಆಗಿ ಡ್ಯಾನ್ಸ್ ಮಾಡಿದ ನಿವೇದಿತಾ ತಾಯಿ, ಅಬ್ಬಬ್ಬಾ ಏನ್ ಮಸ್ತ್ ಡಾನ್ಸ್ ಮಾಡ್ತಾರಪ್ಪ ನೋಡಿದ್ರೆ ತಲೆ ತಿರುಗುತ್ತೆ ಪಕ್ಕ.

ನಿವೇದಿತಾ ಗೌಡ ತಮ್ಮ ವಿಭಿನ್ನವಾದ ಮಾತುಗಳಿಂದಲೇ ಜನರನ್ನು ಹೆಚ್ಚು ಆಕರ್ಷಣೆ ಮಾಡಿದವರು ಡಬ್ಸ್ಮ್ಯಾಶ್ ಟಿಕ್ ಟಾಕ್ ಇನ್ನಿತರ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಗಳಲ್ಲಿ ವೀಡಿಯೋಸ್ ಮಾಡುವುದರ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದಂತಹ ಹುಡುಗಿ ಅಂತಾನೆ ಹೇಳಬಹುದು. ತಮ್ಮ 17ನೇ ವಯಸ್ಸಿಗೆ ಬಿಗ್ ಬಾಸ್ ಮನೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡವರು ಈವರೆಗೂ ಇಷ್ಟು ಚಿಕ್ಕ ವಯಸ್ಸಿನವಲ್ಲಿ ಯಾರು ಕೂಡ ಬಿಗ್ ಬಾಸ್ ಮನೆಗೆ ಹೋಗಿರಲಿಲ್ಲ. ನಿವೇದಿತ ಗೌಡ ಅವರು ತಮಗೆ ಇರುವಂತಹ ಟ್ಯಾಲೆಂಟ್ ಮುಖಾಂತರವೇ ಬಿಗ್ ಬಾಸ್ ಮನೆಗೆ ಬಂದರು ಅದರಲ್ಲಿಯೂ ಕೂಡ ಇವರು ಕಂಗ್ಲಿಷ್ ನಿಂದಲೇ ಹೆಚ್ಚು ಫೇಮಸ್ ಆದವರು ನಿವೇದಿತಾ ಗೌಡ ಅವರ ಮಾತು ಅಂದರೆ ಸಾಕು ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದರು.

ಏಕೆಂದರೆ ನಿವೇದಿತಾ ಗೌಡ ಮಾತನಾಡುತ್ತಿದ್ದು ಶುದ್ಧ ಕನ್ನಡವೂ ಅಲ್ಲ ಶುದ್ಧ ಇಂಗ್ಲಿಷ್ ಕೂಡ ಅಲ್ಲ ಎರಡನ್ನು ಮಿಕ್ಸ್ ಮಾಡಿಕೊಂಡು ಮಾತನಾಡುತ್ತಿದ್ದರು. ಈ ಕಾರಣಕ್ಕಾಗಿಯೇ ಸಾಕಷ್ಟು ಬಾರಿ ಟ್ರೊಲ್ ಗೂ ಕೂಡ ಒಳಗಾಗಿದ್ದರೂ ಆದರೂ ಕೂಡ ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಜೆನ್ಯೂನ್ ಆಗಿ ಆಟ ಆಡಿದರು ಈ ಕಾರಣಕ್ಕಾಗಿ ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ನಲ್ಲಿ ಪೂರೈಸಿ ಫೈನಲ್ ಹಂತದವರೆಗೂ ಕೂಡ ತಲುಪಿದ್ದರು. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಅವರೊಟ್ಟಿಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಚಂದನ್ ಶೆಟ್ಟಿ ಅವರೇ ವಿಡಿಯೋ ಒಂದರಲ್ಲಿ ನಾವಿಬ್ಬರು ಅಣ್ಣ ತಂಗಿ ಶಿವಣ್ಣ ರಾಧಿಕಾ ಕುಮಾರಸ್ವಾಮಿ ಇದ್ದಂತೆ ಅಂತ ಹೇಳಿದರು. ಆದರೆ ಅದಾದ ಕೆಲವೇ ಕೆಲವು ತಿಂಗಳಲ್ಲಿ ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಅಂತ ಹೇಳಿ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡುವುದರ ಮೂಲಕ ನೆಟ್ಟಿಗರ ಕಣ್ಣಿಗೆ ಗುರಿಯಾದರು.

ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ನಿವೇದಿತಾ ಗೌಡ ಅವರ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವೊಂದಷ್ಟು ವಿಡಿಯೋಸ್ ಗಳನ್ನು ಮಾಡಿದ್ದರು ಅದರಲ್ಲಿ ತಮ್ಮ ತಾಯಿಯ ಬಗ್ಗೆ ಕೂಡ ಹೇಳಿಕೊಂಡಿದ್ದರು. ನಿವೇದಿತಾ ಗೌಡ ಅವರ ತಾಯಿಯನ್ನು ನೋಡಿದರೆ ನಿಜಕ್ಕೂ ಕೂಡ ಆಶ್ಚರ್ಯ ಎನಿಸುತ್ತದೆ ಏಕೆಂದರೆ ಅವರು ನೋಡುವುದಕ್ಕೆ ತಾಯಿ ಮಾದರಿ ಕಾಣುವುದಿಲ್ಲ ಬದಲಿಗೆ ನಿವೇದಿತ ಗೌಡ ಅವರಿಗೆ ಒಬ್ಬ ಅಕ್ಕ ಇದ್ದಾರೆ ಯಾವ ರೀತಿ ಕಾಣುತ್ತಾರೋ ಅದೇ ರೀತಿ ಕಾಣುತ್ತಾರೆ ಅಷ್ಟೇ ಮುಗ್ಧವಾಗಿ ಸುಂದರವಾಗಿ ಚಿಕ್ಕವಯಸಿನ ಯುವತಿಯಂತೆ ಕಾಣುತ್ತಾರೆ. ಇನ್ನು ತಮ್ಮ ಮಗಳು ಒಟ್ಟಿಗೆ ಸ್ನೇಹಿತೆಯಂತೆ ಇರುವ ನಿವೇದಿತಾ ಗೌಡ ಅವರ ತಾಯಿ ಆಗಾಗ ಡ್ಯಾನ್ಸ್ ಮಾಡುವುದರ ಮೂಲಕ ಜನರಿಗೆ ರಂಜಿಸುತ್ತಾರೆ.

ಸದ್ಯಕ್ಕೆ ನಿವೇದಿತಾ ಗೌಡ ಹಾಗೂ ಅವರ ತಾಯಿ ಸೀರೆ ಉಟ್ಟು ಮಾಡಿದಂತಹ ಈ ಡಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಇದನ್ನು ನೋಡಿದಂತಹ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ನಿವೇದಿತಾ ಗೌಡ ಗಿಂತ ಅವರ ತಾಯಿಯ ಚೆಂದವಾಗಿ ಡಾನ್ಸ್ ಮಾಡಿದ್ದಾರೆ ಎಂದು ಕಾಮೆಂಟ್ ಹಾಕಿದ್ದಾರೆ ಆದರೂ ಕೂಡ ಕೆಲವು ನೆಟ್ಟಿಗರು ನಿವೇದಿತಾ ಗೌಡ ಅವರಿಗೆ ಮಾಡುವುದಕ್ಕೆ ಕೆಲಸವಿಲ್ಲ ಅದೇ ರೀತಿ ಅವರ ತಾಯಿಯು ಕೂಡ ಮಾಡುವ ಕೆಲಸ ಬಿಟ್ಟು ಮಗಳೊಟ್ಟಿಗೆ ಬಂದು ಡಾನ್ಸ್ ಮಾಡುತ್ತಿದ್ದಾರೆ ಎಂದು ಬೈದುಕೊಳ್ಳುತ್ತಿದ್ದಾರೆ. ಆದರೆ ಕಲೆಗೆ ಯಾವುದೇ ವಯಸ್ಸಿನ ಅಂತರ ಮಿತಿ ಇಲ್ಲ ಎಂಬುದು ಅಭಿಮಾನಿಗಳ ಆಶಯವಾಗಿದೆ. ಈ ಡಾನ್ಸ್ ನೋಡಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ.