ಸ್ಯಾಂಡಲ್ ವುಡ್ ನಲ್ಲಿ ಬಹುತೇಕ ನಟರು ಇರುವುದನ್ನು ನಾವು ಕಾಣಬಹುದಾಗಿದೆ ಅದರಲ್ಲಿಯೂ ಕೂಡ ಸುದೀಪ್ ದರ್ಶನ್ ಧ್ರುವ ಸರ್ಜಾ ಉಪೇಂದ್ರ ಗಣೇಶ್ ಅಜಯ್ ರಾವ್ ಹೀಗೆ ಸಾಕಷ್ಟು ನಟರು ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನವಾದ ಸಿನಿಮಾಗಳಲ್ಲಿ ನಟನೆ ಮಾಡುವುದರ ಮೂಲಕ ಮನೆ ಮಾತಾಗಿದ್ದಾರೆ. ಆದರೆ ಹೆಚ್ಚಿನ ಜನರಲ್ಲಿ ಮೊದಲು ಕೋಟಿ ಸಂಭಾವನೆ ಪಡೆದ ನಟ ಯಾರಿರಬಹುದು ಎಂಬ ಅನುಮಾನ ಇರುತ್ತದೆ. ಹಾಗಾಗಿ ಇಂದು ಸ್ಯಾಂಡಲ್ ವುಡ್ ನಲ್ಲಿ ಕೋಟಿ ಸಂಭಾವನೆ ಪಡೆದ ನಟನ ಬಗ್ಗೆ ತಿಳಿಸುತ್ತಿದ್ದೇವೆ ನೋಡಿ ನಿಮ್ಮೆಲ್ಲರಿಗೂ ಇತ್ತೀಚಿನ ದಿನದಲ್ಲಿ ಎಷ್ಟು ಸಂಭವನೆ ಪಡೆಯುತ್ತಾರೆ ಎಂಬುದ ವಿಚಾರದ ಬಗ್ಗೆ ಮಾಹಿತಿ ಇರುತ್ತದೆ. ಆದರೆ ಕಳೆದ ಹತ್ತು ವರ್ಷಗಳ ಹಿಂದೆ ಯಾವ ನಟನೆಗೆ ಎಷ್ಟು ಸಂಭಾವನೆ ಸಿಗುತ್ತಿತ್ತು ಎಂಬುದನ್ನು ಎಲ್ಲಿಯೂ ಕೂಡ ರಿವಿಲ್ ಮಾಡುತ್ತಿರಲಿಲ್ಲ.
ಹೌದು ಸಂಭಾವನೆ ವಿಚಾರ ಕೇವಲ ಇಬ್ಬರು ವ್ಯಕ್ತಿಗಳಿಗೆ ಮಾತ್ರ ತಿಳಿದಿರುತ್ತಿತ್ತು ನಟನಿಗೆ ಮತ್ತು ನಿರ್ಮಾಪಕ ನಡುವೆ ಮಾತ್ರ ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಅಥವಾ ನೀಡಬೇಕು ಎಂಬ ವಿಚಾರವನ್ನು ಚರ್ಚೆ ಮಾಡುತ್ತಿದ್ದರು. ಈ ವಿಚಾರವನ್ನು ಬಹಿರಂಗವಾಗಿ ನಟರು ಆಗಿರಬಹುದು ಅಥವಾ ನಿರ್ಮಾಪಕ ಆಗಿರಬಹುದು ಎಲ್ಲಿಯೂ ಕೂಡ ಹೇಳಿಕೊಳ್ಳುತ್ತಿರಲಿಲ್ಲ. ಹಾಗಾಗಿ ಯಾವ ನಟನೆಗೆ ಎಷ್ಟು ಸಂಭಾವನೆ ದೊರೆಯುತ್ತಿತ್ತು ಅಂತ ಅಂದಿನ ಕಾಲದಲ್ಲಿ ಯಾರು ಕೂಡ ಊಹೆ ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಇನ್ನು ಸಂಭಾವನೆ ವಿಚಾರಕ್ಕೆ ಬರುವುದಾದರೆ ಈಗ ಕೋಟಿ ಕೋಟಿ ಅಂತ ಹೇಳುತ್ತಾರೆ ಆದರೆ ಕಳೆದ ದಶಕದಲ್ಲಿ ಕೋಟಿ ಎಂಬ ಮಾತೆ ಇರಲಿಲ್ಲ ನಟರಿಗೆ ಲಕ್ಷದಲ್ಲಿ ಹಣವನ್ನು ನೀಡುತ್ತಿದ್ದರು.
ಈ ಸಮಯದಲ್ಲಿ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಲ್ಲಿ ಕೋಟಿ ಸಂಭವನ ಪಡೆದ ಏಕೈಕ ನಟ ಅಂದರೆ ಅದು ಗೋಲ್ಡನ್ ಸ್ಟಾರ್ ಗಣೇಶ್ ಅಂತಾನೆ ಹೇಳಬಹುದು. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮುಂಗಾರು ಮಳೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೀವನದಲ್ಲಿ ಒಂದು ಬಹುದೊಡ್ಡ ಯಶಸ್ಸನ್ನು ತಂದುಕೊಟ್ಟ ಸಿನಿಮಾ. ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಇವರಿಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವುದಕ್ಕೆ ಅವಕಾಶ ದೊರೆಯುತ್ತದೆ. ಅದೇ ಸಮಯದಲ್ಲಿ ಯೋಗರಾಜ್ ಭಟ್ಟವರು ಗಾಳಿಪಟ ಎಂಬ ಸಿನಿಮಾವನ್ನು ಮಾಡುವುದಕ್ಕೆ ಪ್ಲಾನ್ ಮಾಡಿಕೊಳ್ಳುತ್ತಾರೆ. 2008ರಲ್ಲಿ ಈ ಸಿನಿಮಾ ತಾರೆ ಕಾಡುತ್ತದೆ.
ಈ ಸಿನಿಮಾ ಯೋಗರಾಜ್ ಬಟ್ ಅವರ ನಿರ್ದೇಶನ ಇರುತ್ತದೆ. ಆಗಿನ ಕಾಲಕ್ಕೆ 175 ದಿನ ಪೂರೈಸಿದ ಏಕೈಕ ಸಿನಿಮಾ ಅಂದರೆ ಅದು ಗಾಳಿಪಟ ಅಂತ ಹೇಳಬಹುದು ಈ ಸಿನಿಮಾದಿಂದಾಗಿ ಗಣೇಶ ಅವರಿಗೆ ಇನ್ನಷ್ಟು ಹೆಸರು ಮತ್ತು ಕೀರ್ತಿ ದೊರೆಯುತ್ತದೆ. ಗಾಳಿಪಟ ಸಿನಿಮಾದಲ್ಲಿ ಗಣೇಶ್ ಅಭಿನಯ ಮಾಡುವುದಕ್ಕೆ ಸುಮಾರು ಒಂದು ಕೋಟಿ ಸಂಭಾವನೆಯನ್ನು ನೀಡಿದರಂತೆ ಈ ವಿಚಾರವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಸಂಭಾವನೆಯ ವಿಚಾರವನ್ನು ಗಣೇಶ ಅವರು ತಿಳಿಸಿರುವುದು. ಆ ಕಾಲದಲ್ಲಿ ಗಣೇಶ್ ಅವರಿಗೆ ತಿಳಿದಿರವಂತೆ ನನಗೆ ಇಷ್ಟು ಸಂಭಾವನೆ ಕೊಡುತ್ತಾರೆ ಅಂತ ತಿಳಿದಿರಲಿಲ್ಲವಂತೆ. ನಿರ್ವಾಪಕರು ಇಂತಹದೊಂದು ಆಫರ್ ಕೊಟ್ಟಾಗ ಗಣೇಶ ಅವರು ತುಂಬಾನೇ ಖುಷಿಯಾಗಿ ಅವರು ಕೊಟ್ಟದ್ದನ್ನು ತೆಗೆದುಕೊಂಡರಂತೆ.
ಇಲ್ಲಿಯವರೆಗೂ ಕೂಡ ಗಣೇಶ ಅವರು ಯಾವ ನಿರ್ದೇಶಕರಿಗೂ ಕೂಡ ಇಷ್ಟೇ ಸಂಭಾವನೆಯನ್ನು ನೀಡಬೇಕು ಅಂತ ಡಿಮ್ಯಾಂಡ್ ಮಾಡುವುದಿಲ್ಲವಂತೆ ಅವರು ಎಷ್ಟೇ ಕೊಟ್ಟರೂ ಕೂಡ ಸ್ವೀಕರಿಸುತ್ತಾರಂತೆ. ಈ ಎಲ್ಲ ವಿಚಾರವನ್ನು ಗಣೇಶ ಅವರು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡಿದ್ದಾರೆ ಗಣೇಶ್ ಅವರ ಗಾಳಿಪಟ ಭಾಗ ಎರಡು ಸಿನಿಮಾದ ಚಿತ್ರೀಕರಣ ಮುಗಿದಿದ್ದು ಇನ್ನೇನು ಸಿನಿಮಾ ಬಿಡುಗಡೆಯಾಗಬೇಕಾಗಿದೆ. ಹಾಗಾಗಿ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಗಣೇಶ್ ಮತ್ತು ಯೋಗರಾಜ್ ಭಟ್ಟವರು ನಿರತರಾಗಿದ್ದಾರೆ. ಇದೇ ವೇಳೆಯಲ್ಲಿ ಮಾಧ್ಯಮ ಮಿತ್ರರೊಂದಿಗೆ ಗಣೇಶ್ ಅವರು ತಮ್ಮ ಸಂಭಾವನೆ ವಿಚಾರವನ್ನು ಹೊರ ಇಟ್ಟಿದ್ದಾರೆ ಇದನ್ನು ಕೇಳಿದ ನಂತರ ತಿಳಿಯುತ್ತದೆ ಸ್ಯಾಂಡಲ್ವುಡ್ ನಲ್ಲಿ ಮೊದಲ ಬಾರಿಗೆ ಕೋಟಿ ಸಂಭಾವನೆ ಪಡೆದ ಏಕೈಕ ನಟ ಅಂದರೆ ಅದು ಗಣೇಶ ಅಂತಾನೆ ಹೇಳಬಹುದು.
ಈಗ ಬಿಡಿ, ಕೋಟೆ ಎಂಬುದು ಲೆಕ್ಕಕ್ಕೆ ಇಲ್ಲ ಸ್ಟಾರ್ ನಟರೆಲ್ಲ 10 ರಿಂದ 20 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಆದರೆ ಅಂದಿನ ಕಾಲಕ್ಕೆ ಹೆಚ್ಚು ಸಂಭಾವನೆ ಪಡೆದಂತಹ ನಟ ಅಂದರೆ ಅದು ಗೋಲ್ಡನ್ ಸ್ಟಾರ್ ಗಣೇಶ್ ಅಂತಾನೆ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ನಿಮ್ಮ ನೆಚ್ಚಿನ ನಟ ಯಾರು ಎಂಬುದನ್ನು ಕೂಡ ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.