Home Blog Page 331

ಸಿನಿಮಾ ಬಿಡುಗಡೆ ಕಾರ್ಯಕ್ರಮಕ್ಕೆ ರಶ್ಮಿಕಾ ಬಂದ ರೀತಿ ನೋಡಿ ದಂಗಾದ ನೆಟ್ಟಿಗರು, ಈ ವಿಡಿಯೋ ನೋಡಿ

ಅಂದು ರಶ್ಮಿಕಾ ಮಂದಣ್ಣ ಎಂದರೆ ಕರ್ನಾಟಕ ಕ್ರಶ್ ಎನ್ನುತ್ತಿದ್ದ ಅಭಿಮಾನಿಗಳು ಇಂದು ನ್ಯಾಷನಲ್ ಕ್ರಶ್ ಎಂದೂ ಕರೆಯುತ್ತಿದ್ದಾರೆ. ಹೌದು ಗೂಗಲ್ ಕೂಡ ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಶ್ 2020 ಎಂದು ಕರೆದಿದೆ. ಇಷ್ಟರ ಮಟ್ಟಿಗೆ ರಶ್ಮಿಕಾ ಮಂದಣ್ಣ ವೇಗವಾಗಿ ತಮ್ಮ ಅಭಿನಯ ಕಲೆಯಿಂದ ಭಾರತಕ್ಕೆ ಪರಿಚಿತರಾಗಿದ್ದು ಸುಮಾರು 16 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೊಡಗಿನ ಬೆಡಗಿ ಆಗಿರುವ ರಶ್ಮಿಕಾ ಮಂದಣ್ಣ 2014 ರಲ್ಲಿ ಮಾಡೆಲಿಂಗ್ ಶುರು ಮಾಡಿ ಕೆಲವು ಅವಾರ್ಡ್ ಗಳನ್ನು ಗಳಿಸಿಕೊಂಡಿದ್ದಾರಲ್ಲದೇ ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡು ಕ್ಲೀನ್ ಅಂಡ್ ಕ್ಲಿಯರ್ ನ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದರು. ನಂತರ ಅವರು ಲಾಮೋಡ್ ಬೆಂಗಳೂರಿನ ಅತ್ಯತ್ತಮ ರೂಪದರ್ಶಿ ಹುಡುಕಾಟ ೨೦೧೫ ರಲ್ಲಿ ಟಿ.ವಿ.ಸಿ ಯ ಪ್ರಶಸ್ತಿಯನ್ನು ಪಡೆದರು.

ಇದಾದ ನಂತರ 2016 ರಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿ ಈ ಚಿತ್ರದಲ್ಲಿ ಕರ್ಣ ಎಂಬ ಕಾಲೇಜು ಹುಡುಗನ ಪ್ರೇಯಸಿಯಾಗಿ ಸಾನ್ವಿ ಜೋಸೆಫ್ ಎಂಬ ಹೆಸರಿನಲ್ಲಿ ಅಭಿನಯಿಸಿ ತಮ್ಮ ನಟನ ಕೌಶಲ್ಯಕ್ಕೆ ಕನ್ನಡಿಗರಿಂದ ಭೇಷ್ ಎನಿಸಿಕೊಂಡು ಕರ್ನಾಟಕ ಕ್ರಶ್ ಎಂದು ಕರೆಸಿಕೊಂಡು ಮೆರೆದರು. ಇದೇ ಚಿತ್ರಕ್ಕೆ 2016 ರ SIIMA ಅವಾರ್ಡ್ ನಲ್ಲಿ ಚೊಚ್ಚಲ ಚಿತ್ರದ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಈ ಚಿತ್ರದ ನಂತರ ಅಪ್ಪು ಅವರ ಅಂಜನೀಪುತ್ರ ಚಿತ್ರದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಚಮಕ್ ಚಿತ್ರದಲ್ಲಿ, ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಹಾಗೂ ದ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದು ಬಿಟ್ಟರೆ ಇನ್ನ್ಯಾವ ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಂಡಿಲ್ಲ.

ಕನ್ನಡ ಚಿತ್ರರಂಗದಲ್ಲಿ ತಮ್ಮ ಕೀರ್ತಿ ಪತಾಕೆ ಹಾರುತ್ತಿದ್ದಂತೆ ರಶ್ಮಿಕಾ ಕೂಡ ಬೇರೆ ಚಿತ್ರರಂಗದತ್ತ ಹಾರಿದರು. ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಅವರು ಟಾಲಿವುಡ್ ನ ಎಲ್ಲಾ ಮೇರು ನಟರೊಂದಿಗೂ ನಟಿಸಿ ತಮ್ಮ ಯಶಸ್ಸಿನ ಶಿಖರದತ್ತ ಮುಖ ಮಾಡಿದ್ದಾರೆ. ಅವರು ನಟಿಸಿರುವ ಎಲ್ಲಾ 14 ಚಿತ್ರಗಳೂ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದಲ್ಲದೆ ಇಲ್ಲಿಯವರೆಗೂ ಸೋತಿದೆ ಎನ್ನುವ ಸುದ್ದಿ ಇರಲಿಲ್ಲ. ಆದರೆ ಇತ್ತೀಚೆಗೆ ತೆರೆಕಂಡ ಆಡವಲ್ಲು ಮೀಕು ಜೋಹರಲ್ಲೋ ಸಿನಿಮಾ ಕೇವಲ 3.60 ಕೋಟಿ ಕಲೆಕ್ಷನ್ ಮಾಡಿ ರಶ್ಮಿಕಾ ಕೇರಿಯರ್ ನಲ್ಲಿಯೇ ಸೋಲು ಕಂಡ ಚಿತ್ರವಾಗಿದೆ.

ಸಾಮಾನ್ಯವಾಗಿ ತೆಲುಗಿನ ಯಾವುದೇ ಚಿತ್ರ ಬಿಡುಗಡೆಯಾದರೂ ದಿನಕ್ಕೆ 10 ಕೋಟಿ ಆದರೂ ಗಳಿಕೆ ಕಾಣುತ್ತವೆ ಆದರೆ ಈ ಚಿತ್ರ ಅತ್ಯಂತ ಕಡಿಮೆ ಗಳಿಕೆ ಕಂಡು ರಶ್ಮಿಕಾ ಅದೃಷ್ಟ ಕೈ ಕೊಟ್ಟ ಹಾಗಿದೆ. ತೆಲುಗಿನ ಎಲ್ಲಾ ಜನಪ್ರಿಯ ನಟರೊಂದಿಗೆ ನಟಿಸಿ ರಶ್ಮಿಕಾ ಮಂದಣ್ಣ ಲಕ್ಕಿ ಚಾರ್ಮ್ ಎನಿಸಿಕೊಂಡು ನ್ಯಾಷನಲ್ ಕ್ರಶ್ ಎಂತಲೂ ಎನಿಸಿಕೊಂಡವರು ಆದರೆ ಇವರ ಈ ಯಶಸ್ಸಿಗೆ ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿ ಎಂದರೆ ತಪ್ಪಲ್ಲ. ಕಾರಣಾಂತರಗಳಿಂದ ರಕ್ಷಿತ್ ಶೆಟ್ಟಿ ಜೊತೆಗಿನ ಸಂಬಂಧ ಮುರಿದುಕೊಂಡು ಕನ್ನಡಿಗರ ಕೋಪ ಟೀಕೆಗಳಿಗೆ ಗುರಿಯಾಗಿರುವ ರಶ್ಮಿಕಾ ಇಂದು ತಮ್ಮ ಮೊದಲ ಸೋಲಿನ ರುಚಿಯನ್ನು ಕಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

56ನೇ ವಯಸ್ಸಿಗೆ ಸಂತಸದ ಸುದ್ದಿ ಹಂಚಿಕೊಂಡ ನಟಿ ಭವ್ಯ ಏನದು ನೋಡಿ, ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ.?

ತನ್ನ ಅಭಿನಯ ಚಾತುರ್ಯದಿಂದ 1980 ರ ಸಮಯದಲ್ಲಿ ಸಿನಿಪ್ರಿಯರನ್ನು ರಂಜಿಸಿದ್ದ ಕನ್ನಡದ ನಟಿ ಭವ್ಯ ಅವರು ಅಂದು ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದರು. ಅತ್ಯಂತ ಕಡಿಮೆ ಅವಧಿಯಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿರುವ ಇವರು ನಮ್ಮ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಎನ್ನುವುದು ವಿಶೇಷ. ಅಲ್ಲದೆ ಈ ಜೋಡಿ ಅನೇಕ ಹಿಟ್ ಚಿತ್ರಗಳನ್ನು ನೀಡಿರುವುದಲ್ಲದೆ ಕನ್ನಡಿಗರ ಮನ ಗೆದ್ದಿದೆ ಕೂಡ. ಅಂದಿನ ಕಾಲದಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರ ಪೈಕಿ ಇವರು ಒಬ್ಬರಾಗಿದ್ದು ಹೆಚ್ಚಾಗಿ ಭಾವನಾತ್ಮಕ ಪಾತ್ರಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆಲ್ಲುತ್ತಿದ್ದರು.

ಭವ್ಯ ಅವರು ಕನ್ನಡದ ಎಲ್ಲಾ ಮೇರು ನಟರೊಂದಿಗೂ ನಟಿಸಿದ್ದು ಇವರ ಕಾಲ್ ಶೀಟ್ ಗಾಗಿ ತಿಂಗಳುಗಟ್ಟಲೆ ಕಾಯುತ್ತಿದ್ದರು ಎನ್ನುವುದು ವಿಶೇಷ. ಜನವರಿ 12 1966 ರಂದು ಜನಿಸಿದ ಭವ್ಯ ಅವರು ತಮ್ಮ 17 ನೆ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಇವರು ಮೊದಲು ನಟಿಸಿದ ಚಿತ್ರ ಸಿದ್ದಲಿಂಗಯ್ಯನವರ ನಿರ್ದೇಶನದ ಪ್ರೇಮ ಪರ್ವ ಚಿತ್ರವಾಗಿದ್ದು ಈ ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯನ್ನು ತೋರಿಸಿದ್ದಾರೆ. ಕಲ್ಲು ವೀಣೆ ನುಡಿಯಿತು, ಬಡ್ಡಿ ಬಂಗಾರಮ್ಮ,ಪ್ರೇಮ ಜ್ಯೋತಿ, ಸ್ವರ್ಗದಲ್ಲಿ ಮದುವೆ ಚಿತ್ರಗಳಲ್ಲಿ ಅಭಿನಯಿಸಿದ ಭವ್ಯ ಅವರು ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರ ‘ಪ್ರಳಯಾಂತಕ’ ಚಿತ್ರದಲ್ಲೂ ನಟಿಸಿದ್ದು, ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಚಿತ್ರವೆಂದರೆ ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ ‘ನೀ ಬರೆದ ಕಾದಂಬರಿ’ ಚಿತ್ರ. ಡಾ.ವಿಷ್ಣುವರ್ಧನ್ ಜೊತೆಗೆ ಕರುಣಾಮಯಿ, ಹೃದಯ ಗೀತೆ, ಮತ್ತೆ ಹಾಡಿತು ಕೋಗಿಲೆ ಮುಂತಾದ ಚಿತ್ರಗಳಲ್ಲಿ ಭವ್ಯ ಅಭಿನಯಿಸಿದ್ದಾರೆ.

ಅನಂತ್ ನಾಗ್, ಅಂಬರೀಶ್, ಶಂಕರ್ ನಾಗ್ ಜೊತೆಗೂ ಭವ್ಯ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಭವ್ಯ ಅವರು ನಾಯಕಿಯಾಗಿ ಮಾತ್ರವೆ ಅಭಿನಯಿಸಿದ್ದಲ್ಲದೆ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದು ನನ್ನ ಪ್ರೀತಿಯ ಹುಡುಗಿ, ಮೊನಾಲಿಸಾ, ಆಟೋ ಶಂಕರ್, ಅಮೃತಧಾರೆ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರ ನಿಭಾಯಿಸಿದ್ದಾರೆ. ಇಷ್ಟೆಲ್ಲಾ ಹಿಟ್ ಚಿತ್ರಗಳೊಂದಿಗೆ ಕನ್ನಡಿಗರ ಮನೆ ಮಾತಾಗಿದ್ದ ನಟಿ ಭವ್ಯ ಅವರು ಸುಮಾರು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದು ಕಣ್ಮರೆ ಆಗಿದ್ದರು. ಹೌದು ಭವ್ಯ ಅವರ ಗಂಡ ಮುಖೇಶ್ ಪಾಟೀಲ್ ಅವರು ಮುಂಬೈನಲ್ಲಿ ಹೋಟೆಲ್ ಉದ್ಯಮಿ ಆಗಿದ್ದು ಕುಟುಂಬದೊಂದಿಗೆ ಭವ್ಯ ಅವರೂ ಸಹ ಮುಂಬೈನಲ್ಲಿಯೇ ವಾಸವಾಗಿದ್ದಾರೆ. ವಯಸ್ಸಾದ ಕಾರಣ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ನಟಿ ಭವ್ಯ ಕಿರುತೆರೆಯ ಧಾರವಾಹಿಗಳಲ್ಲಿ ಅಲ್ಲೊಂದು ಇಲ್ಲೊಂದು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಅಲ್ಲದೇ ಮತ್ತೆ ಧಾರವಾಹಿ ಒಂದರಲ್ಲಿ ನಟಿಸುವುದಾಗಿ ಅಭಿಮಾನಿಗಳಿಗೆ ಹಾಗೂ ಧಾರವಾಹಿ ಪ್ರಿಯರಿಗೆ ಸುದ್ದಿ ಒಂದನ್ನು ನೀಡಿದ್ದಾರೆ ಅಂದಹಾಗೆ ಹಿಂದೆ ಕೂಡ ಇಷ್ಟ ದೇವತೆ ಎನ್ನುವ ಧಾರವಾಹಿಯಲ್ಲಿ ನಟಿಸಿದ್ದರು. ಅದೇ ರೀತಿ ಈಗಲೂ ಸಹ ರವಿ ಬೆಳಗೆರೆ ಅವರ ಪ್ರೇಮ ಕಾದಂಬರಿ ಆದ ಹೇಳಿ ಹೋಗು ಕಾರಣ ಎಂಬ ಕಾವ್ಯ ಕೃತಿಯನ್ನು ಅನಿಲ್ ಕೋರಮಂಗಲ ನಿರ್ದೇಶನದಲ್ಲಿ ದೃಶ್ಯ ರೂಪಕ್ಕೆ ಹೊರ ತರುತ್ತಿದ್ದು ರಕ್ಷಾಗೌಡ ಹಾಗೂ ಸೂರಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹೇಳಿ ಹೋಗು ಕಾರಣ ಎನ್ನುವ ಧಾರವಾಹಿಯಲ್ಲಿ ನಟಿ ಭವ್ಯ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಮತ್ತೆ ಧಾರವಾಹಿಯ ಕಿರುತೆರೆಯ ಪರದೆಯಲ್ಲಿ ಮತ್ತೆ ತಮ್ಮ ಅಭಿನಯ ಛಾಪು ಮೂಡಿಸಲು ಮುಂದಾಗಿದ್ದಾರೆ. ಈ ವಿಚಾರ ಕೇಳಿದ ಭವ್ಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ನಿಮ್ಮ ಪ್ರಕಾರ ನಟಿ ಭವ್ಯ ಅವರು ಕಿರುತೆರೆ ಬರುವುದು ಸರಿನಾ ಅಥವಾ ಅವರು ಬೆಳ್ಳಿ ತೆರೆಯಲ್ಲೇ ಇರಬೇಕಾ ಎಂಬುದನ್ನು ಕಾಮೆಂಟ್ ಮುಖಾಂತರ ತಿಳಿಸಿ.

 

ಮೊದಲ ಬಾರಿಗೆ ತಾವು ಪ್ರೀತಿಸುತ್ತಿರುವ ಹುಡುಗ ಬಗ್ಗೆ ಮಾತನಾಡಿದ ಪ್ರೇಮ ಇವರ ಲವರ್ ಯಾರಂತೆ ಗೊತ್ತಾ.?

ಪ್ರೇಮ ತೊಂಬತ್ತರ ದಶಕದಿಂದ 2010 ರವರೆಗೆ ಕರುನಾಡಿನ ಸಿನಿಮಾ ರಂಗವನ್ನು ಆಳಿದ ಸ್ಟಾರ್ ನಟಿ. ಶಿವರಾಜ್ ಕುಮಾರ್ ಅವರ ಜೊತೆ ಅಭಿನಯಿಸಿ ಓಂ ಸಿನಿಮಾದಲ್ಲಿ ಅದ್ಭುತ ಬ್ರೇಕ್ ಪಡೆದುಕೊಂಡ ಪ್ರೇಮ ಅವರು ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಸತತವಾಗಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ಕೊಟ್ಟ ಇವರು ಶಿವರಾಜ್ ಕುಮಾರ್ ,ರವಿಚಂದ್ರನ್ ಮತ್ತು ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್ ಅವರಿಗೆ ಸೂಪರ್ ಜೋಡಿ ಆಗಿ ತೆರೆ ಮೇಲೆ ಕಾಣಿಸುತ್ತಿದ್ದರು. ಇದರಲ್ಲೂ ಶಿವರಾಜಕುಮಾರ್ ಹಾಗೂ ರಮೇಶ್ ಅರವಿಂದ್ ಜೊತೆ ಪ್ರೇಮ ಅವರು ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ತಪ್ಪದೆ ಹಿಟ್ ಆಗುತ್ತಿತ್ತು. ಚಂದ್ರೋದಯ ನಮ್ಮೂರ ಮಂದಾರ ಹೂವೆ ಈ ಸಿನಿಮಾಗಳಲ್ಲಿ ಆ ಕೆಮಿಸ್ಟ್ರಿ ವರ್ಕ್ ಆಗಿತ್ತು.

ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ಅವರ ಜೊತೆಗೂ ಅನೇಕ ಸಿನಿಮಾಗಳಲ್ಲಿ ಜೋಡಿ ಕಾಣಿಸಿಕೊಂಡ ಇವರು ಅವರ ಜೊತೆಗೂ ಕೂಡ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದ್ದರು. ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾರಂಗದಿಂದ ದೂರವಾಗಿದ್ದರು. ಈಗ ಅವರ ವೈವಾಹಿಕ ಜೀವನದಲ್ಲಿ ಬಿರುಕು ಎದ್ದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ನಟಿ ಒಂಟಿ ಆಗಿ ಇರುವುದು ಎಲ್ಲರಿಗೂ ತಿಳಿದೇ ಇದೆ. ಆ ಬಳಿಕ ಮತ್ತೆ ತಮ್ಮ ಕೆರಿಯರ್ ಬಗ್ಗೆ ಗಮನ ಹರಿಸಿರುವ ಇವರು ಉಪೇಂದ್ರ ಮತ್ತೆ ಬಾ ಎನ್ನುವ ಸಿನಿಮಾದಲ್ಲಿ ಮತ್ತೆ ಬಣ್ಣ ಹಚ್ಚಿದ್ದರು. ನಟಿ ಪ್ರೇಮ ಅವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡ ಗುರುತಿಸಿಕೊಂಡಿದ್ದರು. ಹಾಗಾಗಿ ಈಗಲೂ ಕೂಡ ನಟಿ ಪ್ರೇಮ ಅವರಿಗೆ ಹಲವು ಸಿನಿಮ ಇಂಡಸ್ಟಿಗಳಿಂದ ಬೇಡಿಕೆ ಇದೆ.

ಆದರೆ ಇತ್ತೀಚೆಗೆ ಪಾತ್ರಗಳ ಆಯ್ಕೆಯಲ್ಲಿ ಬಹಳ ಚೂಸಿ ಆಗಿರುವ ಅವರು ಮತ್ತೊಮ್ಮೆ ಕನ್ನಡದಲ್ಲಿ ವೆಡ್ಡಿಂಗ್ ಕಾರ್ಡ್ ಎನ್ನುವ ಸಿನಿಮಾದಲ್ಲಿ ವಿಭಿನ್ನ ಗೆಟಪ್ ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಈ ಬಗ್ಗೆ ಮಾತುಕತೆಗೆ ಸಿಕ್ಕಾಗ ವರದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರ ಕೊಟ್ಟಿದ್ದಾರೆ. ನನ್ನನ್ನು ಯಾಕೆ ಸಿನಿಮಾದಿಂದ ಗ್ಯಾಪ್ ತೆಗೆದುಕೊಂಡಿದ್ದೀರಾ ಎಂದು ಕೇಳುತ್ತೀರಾ ನಾನು ಎಲ್ಲೂ ರಿಟೈರ್ಡ್ ಆಗಿಲ್ಲವಲ್ಲ. ನನಗೆ ನನ್ನ ಪಾತ್ರ ಸ್ಯಾಟಿಸ್ಫೆಕ್ಷನ್ ಆಗಬೇಕು ಮೊದಲಿನಿಂದಲೂ ನಾನು ಇದೇ ರೀತಿ ಬಯಸುತ್ತಿದ್ದೆ. ನನ್ನ ಅಭಿಮಾನಿಗಳು ಕೂಡ ನಾನು ಮಾಡಿರುವ ಪಾತ್ರದ ಬಗ್ಗೆ ಮೆಚ್ಚಿ ಮಾತನಾಡುವುದು ನನಗೆ ಕೇಳಬೇಕು. ಅವಕಾಶವಿಲ್ಲದೆ ಯಾವುದೋ ಪಾತ್ರ ಒಪ್ಪಿಕೊಂಡಿದ್ದೇನೆ ಎಂದು ಯಾರು ಅಂದುಕೊಳ್ಳಬಾರದು. ಹೀಗಾಗಿ ನಾನು ಒಳ್ಳೆಯ ಕಥೆಗಾಗಿ ಕಾಯುತ್ತೇನೆ ಅಷ್ಟೇ.

ನಾನು ನನ್ನ ಆತ್ಮ ತೃಪ್ತಿಗಾಗಿ ಕೆಲಸ ಮಾಡುತ್ತೇನೆ ಕೆಲಸ ಇಲ್ಲ ಎಂದು ಅಭಿನಯ ಮಾಡುತ್ತಿಲ್ಲ ಹೀಗಾಗಿ ಪಾತ್ರದ ಆಯ್ಕೆಯ ಬಗ್ಗೆ ನಿರ್ಧಾರ ಮಾಡುವ ಹಕ್ಕು ನನಗಿರುತ್ತದೆ. ನಾನು ಯಾವುದೇ ಕೆಲಸ ಮಾಡಿದರೂ ಅದರ ಬಗ್ಗೆ ಒಂದು ದಿನ ಪೂರ್ತಿ ಯೋಚನೆ ಮಾಡಿ ಮಾಡುತ್ತೇನೆ ಎಂದಿದ್ದಾರೆ. ಜೊತೆಗೆ ಈ ಬಾರಿಯ ಪಾತ್ರದ ತಯಾರಿ ಬಗ್ಗೆ ಕೇಳಿದಾಗ ನನಗೆ ಕ್ಯಾಮರಾ ಬಹಳ ಇಷ್ಟ ಯಾರಾದರೂ ನಿನ್ನ ಲವರ್ ಯಾರು ಎಂದು ಕೇಳಿದರೆ ಕ್ಯಾಮೆರಾ ಎನ್ನುತ್ತೇನೆ ಕ್ಯಾಮರಾ ಮುಂದೆ ನಿಂತಾಗ ಸಹಜವಾಗಿಯೇ ಆಕ್ಟಿಂಗ್ ಬರುತ್ತದೆ. ಆದರೆ ಈ ಬಾರಿ ಡೈಲಾಗ್ ಗಳು ವಿಭಿನ್ನವಾಗಿದೆ, ಹಾಗಾಗಿ ಅದರ ಬಗ್ಗೆ ಹೆಚ್ಚಿನ ಗಮನ ಕೊಟ್ಟಿದ್ದೇನೆ ಎಂದಿದ್ದಾರೆ.

ಜೋಶ್ ನಲ್ಲಿ ಡ್ಯಾನ್ಸ್ ಮಾಡಲು ಹೋಗಿ ಜಾರಿ ಬಿದ್ದು ಕಾಲು ಮುರಿದುಕೊಂಡ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ.

ನಟಿ ರಾಧಿಕಾ ಕುಮಾರಸ್ವಾಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ ತಮ್ಮ ದಿನದ ಬಹುತೇಕ ಸಮಯವನ್ನು ಈ ಸೋಶಿಯಲ್ ಮೀಡಿಯಾದಲ್ಲಿ ಕಳೆಯುತ್ತಾರೆ. ಅದರಲ್ಲೂ ಕೂಡ ಡ್ಯಾನ್ಸ್ ನಲ್ಲಿ ಹೆಚ್ಚು ಆಸಕ್ತಿ ವಹಿಸಿರುವ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ನೆಚ್ಚಿನ ಹಾಡಿಗೆ ಹೆಜ್ಜೆಯನ್ನು ಹಾಕುವುದರ ಮೂಲಕ ಕಾಲ ಕಳೆಯುತ್ತಾರೆ. ಈ ವೀಡಿಯೋಸ್ಗಳನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾರೆ. ಈ ವಿಡಿಯೋಸ್ ಗಳು ಈಗಾಗಲೇ ಸಾಕಷ್ಟು ಲೈಕ್ಸ್ ಮತ್ತು ವೀವ್ಸ್ ಅನ್ನು ಪಡೆದುಕೊಂಡಿದೆ ನೆಟ್ಟಿಗರಂತೂ ರಾಧಿಕಾ ಕುಮಾರಸ್ವಾಮಿ ಅವರ ಈ ವೀಡಿಯೋಸ್ಗಳನ್ನು ನೋಡಿ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಇಷ್ಟು ಯಂಗ್ ಆಗಿ ಕಾಣುತ್ತಿರುವ ರಾಧಿಕಾ ಕುಮಾರಸ್ವಾಮಿ ಅವರ ಗ್ಲಾಮರ್ ನೋಡಿ ಪಡ್ಡೆ ಹುಡುಗರು ನಿದ್ದೆ ಕೆಡಿಸಿಕೊಂಡಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದಲೂ ಕೂಡ ನಟನೆ ಮಾಡುತ್ತಾ ಬಂದಿದ್ದಾರೆ ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೂ ಕೂಡ ಚಿತ್ರರಂಗದೊಟ್ಟಿಗೆ ಅವಿನಾಭವನ ಸಂಬಂಧವನ್ನು ವಹಿಸಿಕೊಂಡಿದ್ದಾರೆ. ಮೊದಲು ನಟಿಯಾಗಿ ಮತ್ತು ಸಹಕಲವಿದೆಯಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ಸಿನಿಮಾದ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದಾರೆ. ಹೌದು ರಾಧಿಕಾ ಕುಮಾರಸ್ವಾಮಿ ಅವರು ನಿರ್ಮಾಪಕೀಯಾಗಿ ಗುರುತಿಸಿಕೊಂಡಿದ್ದಾರೆ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಲಕ್ಕಿ ಸಿನಿಮಾ ವನ್ನು ನಿರ್ಮಾಣ ಮಾಡಿದ್ದು ಇವರೇ ಇದರ ಜೊತೆಗೆ ಸ್ವೀಟಿ ಸಿನಿಮಾಗೂ ಕೂಡ ಬಂಡವಾಳವನ್ನು ಹೂಡಿಕೆ ಮಾಡಿದ್ದರು.

ಇವೆರಡು ಸಿನಿಮಾದ ನಂತರ ಧಮಯಂತಿ ಎಂಬ ಸಿನಿಮಾದಲ್ಲಿ ನಟನೆ ಮಾಡಿದರು ಈ ಸಿನಿಮಾಗೆ ಇವರೇ ಬಂಡವಾಳವನ್ನು ಹಾಕಿದ್ದು ಸ್ವತಃ ಇವರೇ ಈ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತು. ಆದರೆ ಈ ಸಿನಿಮಾ ತೆರೆ ಕಂಡ ನಂತರ ರಾಧಿಕಾ ಕುಮಾರಸ್ವಾಮಿ ಅವರು ಎಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ. ಆದರೂ ಕೂಡ ಸುವರ್ಣ ಚಾನೆಲ್ ನಲ್ಲಿ ಬರುತ್ತಿದ್ದಂತಹ ಡಾನ್ಸ್ ಕಾರ್ಯಕ್ರಮ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡರು. ಈ ಶೋನಲ್ಲಿ ಸಿಕ್ಕಾಪಟ್ಟೆ ಹೆಸರು ಮತ್ತು ಖ್ಯಾತಿಯನ್ನು ಪಡೆದುಕೊಂಡರು ಮೊದಲಿನಿಂದಲೂ ಡಾನ್ಸ್ ನಲ್ಲಿ ಹೆಚ್ಚು ಆಸಕ್ತಿ ವಹಿಸಿಕೊಂಡಿದ್ದಂತಹ ರಾಧಿಕಾ ಕುಮಾರಸ್ವಾಮಿ ಅವರಿಗೆ ಈ ವೇದಿಕೆ ಒಂದು ವರದಾನವಾಯಿತು.

ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮಗಳು ಆದಂತಹ ಶಮಿಕಾ ಅವರೊಟ್ಟಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ, ಶಮಿಕಾ ಅವರ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ನೀಡುತ್ತಿರುವ ಕಾರಣ ಸ್ಯಾಂಡಲ್ವುಡ್ ಇಂದ ಸ್ವಲ್ಪ ದೂರ ಉಳಿದಿದ್ದರೆ ಆದರೂ ಕೂಡ ಆಗಾಗ ಡ್ಯಾನ್ಸ್ ಮಾಡುವುದರ ಮೂಲಕ ಮತ್ತೆ ಸುದ್ದಿಯಾಗುತ್ತಾರೆ. ಆದರೆ ಇದೀಗ ಮತ್ತೊಮ್ಮೆ ಡಾನ್ಸ್ ಮಾಡುವ ಮೂಲಕವೇ ಟ್ರೋಲ್ ಗೆ ಒಳಗಾಗಿದ್ದಾರೆ ಹೌದು. ರಾಧಿಕಾ ಕುಮಾರಸ್ವಾಮಿ ಅವರು ಡಾನ್ಸ್ ಕ್ಲಾಸ್ ನಲ್ಲಿ ತಮ್ಮ ಮಾಸ್ಟರ್ ನೊಂದಿಗೆ ಡಾನ್ಸ್ ಮಾಡುವಂತಹ ಸಮಯದಲ್ಲಿ ಆಯತಪ್ಪಿ ಕೆಳಗೆ ಜಾರಿ ಬಿದ್ದಿದ್ದಾರೆ. ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರ ಕಾಲಿಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿಯೇ ಬೆಡ್ ರೆಸ್ಟ್ ನಲ್ಲಿ ಇದ್ದಾರಂತೆ. ಈ ವಿಡಿಯೋವನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ತಮ್ಮ instagram ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಏನೋ ಮಾಡಲು ಹೋಗಿ ಮತ್ತೊಂದ್ ಏನೋ ಆಯಿತು ಎಂಬ ಮಾದರಿಯಲ್ಲಿ ಜೋಶ್ ನಲ್ಲಿ ಡ್ಯಾನ್ಸ್ ಮಾಡಲು ಹೋಗಿ ಈ ರೀತಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.

ಜರ್ಮನಿಯಲ್ಲಿ ಓದುತ್ತಿರುವ ಅಪ್ಪು ಮಗಳು ಧೃತಿ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದೆ, ಸಾಧನೆ ಅಂದರೆ ಇದು ನೋಡಿ ಎಷ್ಟನೇ ರಾಂಕ್ ಪಡೆದಿದ್ದಾರೆ ಅಂತ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕರ್ನಾಟಕದ ಬಹುತೇಕ ಹೆಣ್ಣು ಮಕ್ಕಳಿಗೆ ಶಕ್ತಿಯಾಗುವ ಸಲುವಾಗಿ ಶಕ್ತಿಧಾಮ ನಿರ್ಮಿಸಿದವರು. ರಾಜ್ಯದ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಆರೋಗ್ಯ ವಿಷಯಗಳಿಗೂ ಸಹಾಯ ಮಾಡುತ್ತಾ ಬಂದವರು. ಇಂತಹ ದೊಡ್ಮನೆ ದೊಡ್ಡ ಮನಸ್ಸಿನ ವ್ಯಕ್ತಿಯ ಇಬ್ಬರು ಹೆಣ್ಣು ಮಕ್ಕಳು ಕೂಡ ಬಹಳ ಚೆನ್ನಾಗಿ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿದ್ದಾರೆ. ಈ ಬಗ್ಗೆ ಅಪ್ಪು ಅವರು ಯಾವಾಗಲೂ ಹೆಮ್ಮೆ ಪಡುತ್ತಿದ್ದರು. ತಮ್ಮ ಮಕ್ಕಳನ್ನು ಸ್ನೇಹಿತೆಯರ ರೀತಿ ನೋಡುತ್ತಿದ್ದ ಅಪ್ಪು ಅವರು ಅವರನ್ನು ಅವರ ತಾಯಿಯ ಹಾಗೆ ಸ್ಟ್ರಾಂಗ್ ವುಮೆನ್ ಗಳಾಗಿ ನೋಡಲು ಆಸೆ ಪಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದರು. ಈ ವರ್ಷ ದ್ವಿತೀಯ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಅಪ್ಪು ಅವರ ಕಿರಿಯ ಮಗಳು ವಂದಿತ ಅವರ ಫಲಿತಾಂಶ ಹೊರ ಬಿದ್ದಿತ್ತು ಅತ್ಯುತ್ತಮವಾದ ಅಂಕಗಳನ್ನು ಗಳಿಸಿ ವಂದಿತಾ ಭೇಷ್ ಎನಿಸಿಕೊಂಡಿದ್ದರು.

ಅವರ ಮೊದಲ ಮಗಳು ಧೃತಿ ಬಗ್ಗೆ ಹೇಳುವುದಾದರೆ ಇಡೀ ಕುಟುಂಬವೇ ಹೆಮ್ಮೆಪಡುವಂತೆ ಆಕೆ ವಿದೇಶದಲ್ಲಿ ಸ್ಕಾಲರ್ಶಿಪ್ ಪಡೆದು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ದೇಶದಲ್ಲಿ ಸ್ಕಾಲರ್ಶಿಪ್ ಪಡೆಯುವುದು ಎನ್ನುವುದು ತುಂಬಾ ದೊಡ್ಡ ವಿಷಯ ಯಾಕೆಂದರೆ ಅಲ್ಲಿ ಅವರು ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳ ಜೊತೆ ಅದು 85ರಿಂದ 90 ಪರ್ಸೆಂಟ್ ಇದ್ದರೂ ಕೂಡ ಮತ್ತೊಂದು ಪರೀಕ್ಷೆ ನಡೆಸಿ ಅದರಲ್ಲಿ 95% ಗಿಂತ ಅಧಿಕ ಇದ್ದರೆ ಮಾತ್ರ ಸ್ಕಾಲರ್ಶಿಪ್ ನೀಡುತ್ತಾರೆ. ಹೀಗೆ ಲಕ್ಷಾಂತರ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗಾಗಿ ಪರಿಕ್ಷೆ ಬರೆದರು ಅದರಲ್ಲಿ 500 ವಿದ್ಯಾರ್ಥಿಗಳಿಗೆ ಮಾತ್ರ ಸ್ಕಾಲರ್ಶಿಪ್ ಪಡೆದುಕೊಳ್ಳುವ ಯೋಗ ಇರುತ್ತದೆ. ಕರ್ನಾಟಕಕ್ಕೆ ದೊಡ್ಮನೆ ಎಂದು ಕರೆಸಿಕೊಂಡಿರುವ ಕನ್ನಡ ಸಿನಿಮಾ ರಂಗದ ಬಹುತೇಕ ಪಾಲು ಜನರಿಗೆ ಅನ್ನದಾತರಾಗಿದ್ದ ರಾಜಕುಮಾರ್ ಕುಟುಂಬದ ಮಗಳು ತಾವು ಪಡೆದ ವಿದ್ಯಾಭ್ಯಾಸದ ಅಂಕಗಳ ಮೂಲಕ ತಮ್ಮ ಜ್ಞಾನದ ಮೂಲಕ ಸ್ಕಾಲರ್ಶಿಪ್ ಪಡೆದು ಓದುತ್ತಿದ್ದಾರೆ ಎನ್ನುವುದು ತುಂಬಾ ಹೆಮ್ಮೆಯ ವಿಷಯವೇ ಸರಿ.

ಸದ್ಯಕ್ಕೆ ಜರ್ಮನಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಧೃತಿ ಅವರು ಅಪ್ಪ ಅಗಲಿದ ಸಮಯದಲ್ಲಿ ಬಂದು 15 ದಿನ ಇದ್ದು ಹೋಗಿದ್ದರು ನಂತರ ಅವರ ಹುಟ್ಟುಹಬ್ಬಕ್ಕೆ ಬಂದಿದ್ದ ಇವರು ಎರಡು ತಿಂಗಳ ಕಾಲ ಅವರ ಅಮ್ಮನ ಜೊತೆ ಇದ್ದರು. ನಂತರ ಇತ್ತೀಚಿಗಷ್ಟೇ ವೇದ ಸಿನಿಮಾದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಧೃತಿ ಅವರ ವಾರ್ಷಿಕ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ಈ ಬಾರಿ ಅವರು ದೇಶಕ್ಕೆ ಮೂರನೇ ರಾಂಕ್ ಪಡೆಯುವ ಮೂಲಕ ಮತ್ತೊಮ್ಮೆ ಸಾಧನೆ ಗೈದಿದ್ದಾರೆ. ಈ ವಿಷಯ ತಿಳಿದ ಕೂಡಲೇ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಗಳಿಗೆ ವಿಡಿಯೋ ಕಾಲ್ ಮಾಡಿ ವಿಶ್ ಮಾಡಿದ್ದಾರೆ ಮತ್ತು ಸಂತಸದ ಕಂಬನಿ ಮಿಡಿದಿದ್ದಾರೆ.

ಅಪ್ಪು ಅವರು ಇದ್ದಿದ್ದರೆ ಈಗ ಅವರ ಮಕ್ಕಳ ಬಗ್ಗೆ ಇನ್ನಷ್ಟು ಹೆಮ್ಮೆಪಡುತ್ತಿದ್ದರು. ಮಕ್ಕಳು ಅಷ್ಟೇ ನನ್ನ ಅಪ್ಪ ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಬಂದು ಭಾಗಿ ಆಗುತ್ತಿದ್ದರೂ ಶಾಲಾ ಕಾಲೇಜಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನಾವು ಅವರೊಂದಿಗೆ ಹಂಚಿಕೊಳ್ಳುತ್ತಿದ್ದೆವು. ಆದರೆ ಈಗ ನಾವು ನಮ್ಮ ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ. ಅಪ್ಪು ಅವರ ಆಸೆಯಂತೆ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮುಗಿಸಿ ಭಾರತ ದೇಶದ ಕೀರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸುವ ರೀತಿ ಸಾಧನೆ ಮಾಡಲಿ ಎಂದು ನಾವು ಕೂಡ ಹರಸೋಣ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ಈ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ.

ಶಿವಣ್ಣ ಒಮ್ಮೆ ಗುರಿ ಇಟ್ರೆ ಮುಗಿತು, ಹಿಂಬದಿಯಿಂದ ಹಾಕಿದ ಬಾಲ್ ಹೇಗೆ ಬಾಸ್ಕೆಟ್ ಒಳಗೆ ಹೋಗುತ್ತೆ ನೋಡಿ, ಶಿವಣ್ಣನ ಸ್ಪೋರ್ಟ್ಸ್ ಸ್ಪಿರಿಟ್ ನೋಡಿ ವಾವ್ ಎಂದ ನೆಟಿಜನ್ಸ್.

ಕನ್ನಡದ ಹಾರ್ಟಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಎವರ್ಗ್ರೀನ್ ಹೀರೋ ಎಂದರೆ ತಪ್ಪಾಗಲಾರದು 60 ಆಗಿದ್ದರು ಕೂಡ ಇನ್ನೂ 20ರ ಯುವಕನಂತೆ ಅಷ್ಟು ಆಕ್ಟಿವ್ ಆಗಿರುವ ಶಿವಣ್ಣ ಅವರು ವಯಸ್ಸೇ ಆಗದವರಂತೆ ಕಾಣಿಸುತ್ತಾರೆ. ಇದರೊಂದಿಗೆ ಅವರ ಎನರ್ಜಿ ಕೂಡ ಹಾಗೆ ಇರುವುದರಿಂದ ಅವರಿಗೆ 60 ಆಗಿದೆ ಅಂದರೆ ಯಾರು ಸಹ ನಂಬುವುದಿಲ್ಲ. ಈಗಲೂ ಸಹ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಇವರು ಎಂತಹ ಫೈಟ್, ಸ್ಟಂಟ್, ಡ್ಯಾನ್ಸ್ ಇದ್ದರೂ ಯುವ ನಟರೇ ನಾಚುವಂತೆ ಕುಣಿದು ಕುಪ್ಪಳಿಸುತ್ತಾರೆ. ಹೀಗಾಗಿಯೇ ಕನ್ನಡದ ಕೋಟ್ಯಾಂತರ ಮನಗಳಿಗೆ ಶಿವಣ್ಣ ಎಂದರೆ ಒಂದು ಸ್ಪೂರ್ತಿ. ಸದಾ ಚಟುವಟಿಕೆಯಿಂದ ಚುರುಕಿನಿಂದ ಇರಬೇಕು ಎಂದು ಬಯಸುವವರು ಶಿವಣ್ಣನನ್ನು ನೋಡಿ ಕಲಿಯಬೇಕು. ಇತ್ತೀಚೆಗೆ ಶಿವಣ್ಣ ಅವರು ಪಾರ್ಕ್ ಒಂದರಲ್ಲಿ ಮಕ್ಕಳೊಂದಿಗೆ ಬ್ಯಾಸ್ಕೆಟ್ ಬಾಲ್ ಆಟ ಆಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.

ಈ ವಿಡಿಯೋ ನೋಡಿದ ಮೇಲೆ ಶಿವಣ್ಣ ಅವರ ಆಕ್ಟಿಂಗ್ ಮೆಚ್ಚಿಕೊಂಡಿದ್ದವರು ಮತ್ತು ಅವರ ಸೆಂಟಿಮೆಂಟ್ ಸಿನಿಮಾಗಳಿಗೆ ಮಾರು ಹೋಗಿದ್ದವರು ಜೊತೆಗೆ ಶಿವಣ್ಣನ ಡಾನ್ಸ್ ನೋಡಿ ಫಿದಾ ಆಗಿದ್ದವರು ಮತ್ತು ಶಿವಣ್ಣನ ಎನರ್ಜಿ ಬಗ್ಗೆ ಹಾಡಿ ಹೊಗಳುತ್ತಿದ್ದವರು ಈಗ ಅವರ ಸ್ಪೋರ್ಟ್ಸ್ ಬಗ್ಗೆ ಗುಣಗಾನ ಮಾಡದೇ ಇರಲಾರದು. ಅಂತಹ ಒಂದು ಅದ್ಭುತವಾದ ಪರ್ಫಾರ್ಮೆನ್ಸ್ ಅನ್ನು ಮಕ್ಕಳೊಂದಿಗೆ ಆಟ ಆಡುತ್ತ ಶಿವಣ್ಣ ಅವರು ನೀಡಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ಶಿವಣ್ಣ ಅವರು ಎಷ್ಟು ಚೆನ್ನಾಗಿ ಮಕ್ಕಳಲ್ಲಿ ಮಕ್ಕಳಾಗಿ ಬೆರೆಯುತ್ತಾರೆ ಎನಿಸುತ್ತದೆ. ಜೊತೆಗೆ ಅವರ ಆಟ ನೋಡಿದ ಬಳಿಕ ಶಿವಣ್ಣ ತೆರೆ ಮೇಲೆ ಮಾತ್ರ ಹೀರೋ ಅಲ್ಲ ತೆರೆಯಿಂದ ಆಚೆಗೂ ಕೂಡ ಆಟಗಳಲ್ಲಿ ಹಿರೋಯಿಸಂ ತೋರಿಸುತ್ತಾರೆ ಎನ್ನುವುದು ಪ್ರೂವ್ ಆದಂತೆ ಅನಿಸುತ್ತದೆ.

ಈ ವಿಡಿಯೋ ನೋಡಿದರೆ ಇದು ಶಿವಣ್ಣ ಅವರು ಬೆಳಗ್ಗಿನ ಜಾವ ವಾಕಿಂಗ್ ಹೊರಡುವ ಸಮಯದಲ್ಲಿ ಮಾಡಿರುವ ವಿಡಿಯೋ ಎನಿಸುತ್ತದೆ. ಪಾರ್ಕ್ ಒಂದರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ ಈ ವಿಡಿಯೋದಲ್ಲಿ ಮಕ್ಕಳ ಗುಂಪೊಂದು ಬಾಸ್ಕೆಟ್ ಬಾಲ್ ಆಟವನ್ನು ಆಡುತ್ತಾ ಇರುತ್ತದೆ ಅಲ್ಲಿಗೆ ಶಿವಣ್ಣ ಬರುತ್ತಾರೆ ಮಕ್ಕಳು ಶಿವಣ್ಣ ಅವರನ್ನು ಆಡುವಂತೆ ಕೇಳಿಕೊಳ್ಳುತ್ತಾರೆ ಆಗ ಶಿವಣ್ಣ ಅವರು ಬಾಲ್ ತೆಗೆದುಕೊಂಡು ವಿರುದ್ಧ ದಿಕ್ಕಿನಲ್ಲಿ ತಿರುಗಿಕೊಂಡು ಅಲ್ಲಿಂದಲೇ ಗುರಿ ಮಾಡಿ ಬಾಸ್ಕೆಟ್ ಒಳಗೆ ಬಾಲ್ ಹಾಕುತ್ತಾರೆ. ಗುರಿ ಎಷ್ಟು ನಿಖರವಾಗಿತ್ತು ಎಂದರೆ ಒಂದೇ ಒಂದು ಟೇಕಿನಲ್ಲಿ ಅದು ಕರೆಕ್ಟ್ ಆಗಿ ಬಂದು ಬಾಸ್ಕೆಟ್ ಒಳಗೆ ಬಿದ್ದಿತ್ತು. ಇದನ್ನು ಕಂಡು ಎಲ್ಲಾ ಆಶ್ಚರ್ಯ ಪಟ್ಟು ಜೋರಾಗಿ ಚಪ್ಪಾಳೆ ಕೂಡ ತಟ್ಟಿದ್ದಾರೆ ಮಕ್ಕಳೆಲ್ಲ ಬಹಳ ಖುಷಿಪಟ್ಟು ಕುಣಿದಾಡಿದ್ದಾರೆ.

ಶಿವಣ್ಣನವರ ಗುರಿ ಹಾಗೂ ಫೋಕಸ್ ಎಷ್ಟು ಕರೆಕ್ಟ್ ಆಗಿ ಇರುತ್ತದೆ ಎನ್ನುವುದು ಇದಕ್ಕೆ ಸಾಕ್ಷಿ ಆಗಿದೆ. ಶಿವಣ್ಣನವರ ಕಿರಿಯ ತಮ್ಮ, ನಮ್ಮೆಲ್ಲರ ಪ್ರೀತಿಯ ಅಪ್ಪು ಅವರು ಕೂಡ ಇದೇ ರೀತಿ ಸ್ಪೋರ್ಟ್ಸ್ ಗಳ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು ಹಾಗೂ ಎಲ್ಲರೂ ಆಶ್ಚರ್ಯ ಪಡುವ ರೀತಿ ಬಹಳ ಚೆನ್ನಾಗಿ ಡ್ಯಾನ್ಸ್ ಮತ್ತು ಸ್ಟಂಟ್ಸ್ ಕೂಡ ಮಾಡುತ್ತಿದ್ದರು ಆದರೆ ಅಂತಹ ವ್ಯಕ್ತಿ ಇಂದು ನಮ್ಮೆಲ್ಲರಿಂದ ದೂರವಾಗಿರುವುದು ಬಹಳ ನೋವಿನ ವಿಚಾರ. ಶಿವಣ್ಣ ಅವರು ಎಷ್ಟೇ ದಿನನಿತ್ಯದ ಚಟುವಟಿಕೆಗಳಲ್ಲಿ ಭಾಗಿಯಾಗಿ ಲವಲವಿಕೆ ಇರುವಂತೆ ಕಾಣಿಸಿಕೊಂಡರು ಕೂಡ ಅವರ ಮನದಾಳದಲ್ಲಿ ಇರುವ ನೋವು ಕಣ್ಣುಗಳಲ್ಲಿ ಗೋಚರಿಸುತ್ತಿದೆ.

 

ದೇವಸ್ಥಾನದ ಹುಂಡಿಯಲ್ಲಿ ಅಪ್ಪು ಹೆಸರನ್ನು ಬರೆದು ಚೀಟಿ ಹಾಕಿದ ಅಭಿಮಾನಿ, ಅಷ್ಟಕ್ಕೂ ಭಕ್ತ ಬೇಡಿಕೊಂಡಿರುವುದೇನು ಗೊತ್ತಾ.?

ಪುನೀತ್ ರಾಜಕುಮಾರ್ ಕರ್ನಾಟಕ ಕಂಡ ಶ್ರೇಷ್ಠ ವ್ಯಕ್ತಿ ಅಲ್ಲದೆ ಇಡೀ ಪ್ರಪಂಚಕ್ಕೆ ಜೀವನ ನಡೆಸಲು ಮಾದರಿ ಜೀವನ ಮಾಡಿ ತೋರಿಸಿಕೊಟ್ಟು ಹೋದ ಸಾಧಕ. ಇಂತಹ ಸಹೃದಯದ ವ್ಯಕ್ತಿಯ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆ ಎನ್ನಬಹುದು ಈತನ ಸ್ಟಾರ್ ಗಿರಿ ನೋಡಿ ಅಭಿಮಾನಿ ಆದವರಿಗಿಂತ ಹೆಲ್ಪಿಂಗ್ ನೇಚರ್ ನೋಡಿ ದಾಸರಾದವರೇ ಹೆಚ್ಚು ಎಂದು ಹೇಳಬಹುದು. ಆದರೆ ಅಪ್ಪು ಅವರ ಮೇಲೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇತ್ತು ಎನ್ನುವುದನ್ನು ಕಣ್ತುಂಬಿಕೊಳ್ಳಲು ಅವರೇ ಇಲ್ಲ ಎನ್ನುವುದೇ ತುಂಬಾ ನೋ.ವಿ.ನ ವಿಚಾರ. ಅಪ್ಪು ಅವರು ನಮ್ಮನ್ನು ಅ.ಗ.ಲಿ ಈಗಾಗಲೇ 9 ತಿಂಗಳು ಕಳೆದಿವೆ. ಆದರೂ ಕೂಡ ಅಪ್ಪು ನಮ್ಮೊಂದಿಗೆ ಇಲ್ಲ ಎನ್ನುವ ನೋವನ್ನು ಅಭಿಮಾನಿಗಳು ಮಾತ್ರ ಸಹಿಸಿಕೊಳ್ಳಲು ಆಗುತ್ತಿಲ್ಲ ಅದಕ್ಕೆ ಸಾಕ್ಷಿಯಾಗಿ ಈಗ ಊರಿನ ಯಾವುದೇ ರಸ್ತೆಯ ತಿರುವಿಗು ಹೋದರು ಅಲ್ಲಿ ಅಪ್ಪು ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿರುವ ಪೋಸ್ಟರ್ ಇನ್ನೂ ಕೂಡ ಕೆಳಗೆ ಇಳಿಸದೆ ಹಾಗೆ ಬಿಟ್ಟಿರುತ್ತಾರೆ.

ಅಲ್ಲದೇ ಯಾವುದೇ ಸಭೆ ಸಮಾರಂಭಗಳಿಗೆ ಹೋದಾಗ ಅಥವಾ ಕುಟುಂಬ ಕಾರ್ಯಕ್ರಮಗಳೆಲ್ಲ ಭಾಗಿಯಾದಾಗಲು ಕೂಡ ಯಾರಿಗಾದರೂ ಉಡುಗೊರೆ ಕೊಡಬೇಕು ಎಂದು ಎನಿಸಿದರೆ ಮೊದಲು ನೆನಪಾಗುವುದೇ ಪುನೀತ್ ಅವರ ಫೋಟೋ ಫ್ರೇಮ್ ಕೊಡೋಣ ಎಂದು ಮತ್ತು ಸಿನಿಮಾ ಇಂಡಸ್ಟ್ರಿಗೆ ಸಂಬಂಧ ಪಟ್ಟ ಯಾವುದೇ ಕಾರ್ಯಕ್ರಮ ಇದ್ದರೂ ಕೂಡ ಮೊದಲು ಪುನೀತ್ ಅವರಿಗೆ ಗೌರವ ಸಲ್ಲಿಸಿ ನಂತರ ಕಾರ್ಯಕ್ರಮ ಶುರು ಮಾಡುವುದು ಕಳೆದ 9 ತಿಂಗಳಿನಿಂದ ಕರ್ನಾಟಕದಲ್ಲಿ ವಾಡಿಕೆ ಆಗಿದೆ. ಯಾವುದೇ ಸಿನಿಮಾ ತೆರೆ ಮೇಲೆ ಮೂಡುವ ಮೊದಲು ಅಲ್ಲಿ ಅಪ್ಪು ಫೋಟೋ ಕಾಣಿಸಿಕೊಳ್ಳುತ್ತದೆ ಮತ್ತು ಯಾವುದೇ ಊರಿನ ಜಾತ್ರೆಗೆ ಹೋದರು ಕೂಡ ಅಲ್ಲಿ ದೇವರ ರಥೋತ್ಸವದ ಮೆರವಣಿಗೆ ಜೊತೆ ಹಿಂದೆ ಅಪ್ಪು ದೇವರ ಫೋಟೋ ಕೂಡ ಅಭಿಮಾನಿಗಳು ಹೊತ್ತು ತಿರುಗುತ್ತಿರುತ್ತಾರೆ.

ಹೀಗೆ ದಾಖಲೆ ಮಟ್ಟದಲ್ಲಿ ಅಂತ್ಯ ಸಂಸ್ಕಾರಕ್ಕೆ ಬಂದು ಹೊಸದೊಂದು ದಾಖಲೆ ಬರೆದ ಅಭಿಮಾನಿಗಳು ಅಪ್ಪು ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ನೇತ್ರದಾನ ಅನ್ನದಾನ ಇನ್ನು ಮುಂತಾದ ಅನೇಕ ಕಾರ್ಯಕ್ರಮಗಳು ಹಮ್ಮಿಕೊಂಡು ಆ ದಿನವನ್ನು ಕರುನಾಡಲ್ಲಿ ಹಬ್ಬವನ್ನಾಗಿ ಆಚರಿಸಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ನಾವು ವಾಸ್ತವಿಕತೆಯನ್ನು ಒಪ್ಪಿಕೊಂಡು ಬದುಕಿನ ಬಂಡಿಯನ್ನು ಸಾಗಿಸುತ್ತಿದ್ದರು ಕೂಡ ದಿನನಿತ್ಯದ ಚಟುವಟಿಕೆ ನಡುವೆ ಇನ್ನೂ ಮನದಲ್ಲಿ ಅಪ್ಪು ಇಲ್ಲ ಎನ್ನುವ ನೋವಿನ ನೆನಪು ಗಟ್ಟಿಯಾಗಿ ಹೆಪ್ಪುಗಟ್ಟಿದೆ. ಈಗಾಗಲೇ ಅಪ್ಪು ಅವರನ್ನು ಅಕಾಲಿಕ ಮೃ.ತ್ಯು.ಗೆ ಈಡು ಮಾಡಿದ ವಿಧಿಗೆ ಕೋಟ್ಯಾಂತರ ಜನರು ಶಾಪ ಹಾಕಿದ್ದಾರೆ. ಆದರೆ ವಿಶೇಷವಾಗಿ ಇಲ್ಲೊಬ್ಬ ಭಕ್ತ ದೇವರ ಬಳ್ಳಿ ಅಪ್ಪು ಅವರ ವಿಷಯವಾಗಿ ಹೊಸ ಮನವಿ ಒಂದನ್ನು ಮಾಡಿದ್ದಾನೆ. ಈ ಘಟನೆ ಅಫ್ಜಲ್ ಪುರದಲ್ಲಿ ನಡೆದಿದೆ ಅಲ್ಲಿಯ ದೇವಸ್ಥಾನದ ಹುಂಡಿಯ ಹಣದ ಎಣಿಕೆ ಕಾರ್ಯ ನಡೆಯುತ್ತಿತ್ತು.

ಅಲ್ಲಿ ಒಂದು ಚೀಟಿಯು ಎಣಿಕೆ ಮಾಡುವ ಸಿಬ್ಬಂದಿಗೆ ಸಿಕ್ಕಿದೆ ಕುತೂಹಲದಿಂದ ಚೀಟಿಯನ್ನು ತೆರೆದು ಓದಿದಾಗ ಅಲ್ಲಿ ದೇವರ ಭಕ್ತರೊಬ್ಬರು ಪುನೀತ್ ರಾಜಕುಮಾರ್ ಅವರ ಅಭಿಮಾನಿ ಆಗಿದ್ದು, ಮತ್ತೆ ಪುನೀತ್ ಅಣ್ಣನನ್ನು ಭೂಮಿ ಮೇಲೆ ಕಳಿಸಿ ಕೊಡು ದೇವರೇ ಎಂದು ಬರೆದು ತಮ್ಮ ಸಹಿಯನ್ನು ಕೂಡ ಮಾಡಿದ್ದಾರೆ. ನಿಜವಾಗಿಯೂ ಇಂತಹ ಅಭಿಮಾನಿಗಳನ್ನು ಪಡೆದ ಅಭಿಮಾನಿಗಳ ದೇವರಾದ ಪುನೀತ್ ರಾಜಕುಮಾರ್ ಅವರೇ ಧನ್ಯರು ಎಂದು ಹೇಳಬಹುದು. ಈ ಪ್ರಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ತಪ್ಪದೆ ಕಾಮೆಂಟ್ ಮಾಡಿ

ತೆಲುಗು ಚಿತ್ರರಂಗಕ್ಕೆ ನಟಿಯಾಗಿ ಎಂಟ್ರಿ ಕೊಡುತ್ತಿರುವ ನಿವೇದಿತ ಗೌಡ, ಯಾವ ಹೀರೋ ಜೊತೆ ಆಕ್ಟ್ ಮಾಡುತ್ತಿದ್ದಾರೆ ನೋಡಿ.

ಸದ್ಯಕ್ಕೆ ಇವರು ತಮ್ಮ ಮೂಲ ಹೆಸರಿಗಿಂತ ಗೊಂಬೆ ಎಂದೆ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ಇವರನ್ನು ಚಂದನ್ ಅವರ ಗೊಂಬೆ ಎನ್ನಬೇಕೋ ಅಥವಾ ಚಂದನವನದ ಗೊಂಬೆ ಎನ್ನಬೇಕು ಗೊತ್ತಿಲ್ಲ. ನಿವೇದಿತ ಗೌಡ ಎನ್ನುವುದು ಇವರ ನಿಜವಾದ ಹೆಸರಾದರೂ ಕೂಡ ಜನ ಇವರನ್ನು ಗುರುತಿಸುವುದು ಗೊಂಬೆ ಎನ್ನುವ ಹೆಸರಿನಿಂದ. ಇಷ್ಟರ ಮಟ್ಟಿಗೆ ಕನ್ನಡಿಗರ ಎಲ್ಲರ ಗಮನ ಸೆಳೆದಿರುವ ಇವರು ಮೊದಲ ಸಾಮಾಜಿಕ ಜಾಲತಾಣದಲ್ಲಿ ಡಬ್ಸ್ಮ್ಯಾಶ್ ಮಾಡುವ ಮೂಲಕ ಫೇಮಸ್ ಆಗಿದ್ದರು. ಆದರೆ ಯಾವಾಗ ಕನ್ನಡದ ಬಿಗ್ ಬಾಸ್ ಅಲ್ಲಿ ಕಾಣಿಸಿಕೊಂಡಿರುವ ಅಂದಿನಿಂದ ಇವರ ಅದೃಷ್ಟವೇ ಬದಲಾಯಿತು ಎನ್ನಬಹುದು. ಮುದ್ದು ಮುದ್ದಾಗಿ ಮಾತನಾಡುವ ಇವರ ಸ್ಟೈಲಿಶ್ ಕನ್ನಡ ಹಾಗೂ ಬೇಬಿ ಡಾಲ್ ರೀತಿ ಕಾಣುವ ಇವರ ಲುಕ್ ಹಾಗೂ ಈ ಲುಕ್ಕಿಗೆ ತಕ್ಕಂತೆ ಇರುವ ಹೇರ್ ಮತ್ತು ಹೇರ್ ಸ್ಟೈಲ್ ಇಂದ ಗೊಂಬೆ ಎನ್ನುವ ಹೆಸರು ಪಡೆದುಕೊಂಡಿದ್ದಾರೆ.

ಅದೇ ಬಾರಿಯ ಬಿಗ್ ಬಾಸ್ ಶೋ ಅಲ್ಲಿ ಇದ್ದ ರ್ಯಾಪರ್ ಚಂದನ್ ಶೆಟ್ಟಿ ಅವರನ್ನು ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಇವರು ವಿವಾಹ ಜೀವನದಲ್ಲಿ ಸಂತೋಷವಾಗಿ ಕಾಲ ಕಳೆಯುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ತುಂಬಾ ಆಕ್ಟಿವ್ ಆಗಿದ್ದಾರೆ. ಅಲ್ಲದೆ ಕನ್ನಡದ ಕಿರುತೆರೆಯ ಹಲವು ಕಾರ್ಯಕ್ರಮಗಳಲ್ಲಿ ಕಂಟೆಸ್ಟೆಂಟ್ ಆಗಿ ಮತ್ತು ಜಡ್ಜ್ ಆಗಿ ಕೂಡ ಭಾಗಿಯಾಗುತ್ತಿದ್ದಾರೆ. ಸದಾ ತಮ್ಮ ಜೀವನದ ಒಂದಲ್ಲ ಒಂದು ಹೊಸ ಅಪ್ಡೇಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳ ಜೊತೆ ಖುಷಿಪಡುವ ಇವರು ತಮ್ಮದೇ ಆದ ಖಾಸಗಿ ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಇದೆಲ್ಲದರ ಜೊತೆಗೆ ಕಿರುತೆರೆಯ ರಾಜ ರಾಣಿ ಎನ್ನುವ ರಿಯಾಲಿಟಿ ಶೋ ಅಲ್ಲಿ ಕೂಡ ಭಾಗಿಯಾಗಿದ್ದರು ಈ ಶೋ ಮುಗಿದ ಬಳಿಕ ಶುರುವಾದ ಮತ್ತೊಂದು ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದಲ್ಲೂ ಕೂಡ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರತಿ ವಾರ ಕೂಡ ಹೊಸದೊಂದು ಗೆಟಪ್ ಅಲ್ಲಿ ಬಂದು ಪ್ರೇಕ್ಷಕರನ್ನೂ ನಕ್ಕು ನಲಿಸುವ ಇವರು ತುಂಬಾ ಸಿಂಪಲ್ ಆಗಿ ಕಂಡರೂ ಈಗ ಕರ್ನಾಟಕದ ಹೆಸರನ್ನು ದೇಶ ಮಟ್ಟಕ್ಕೆ ಗುರುತಿಸುವ ಸಾಧನೆ ಕೂಡ ಮಾಡಿದ್ದಾರೆ. ಈ ವರ್ಷ ಮಿಸ್ಸೆಸ್ ಇಂಡಿಯಾ ಕಾಂಪಿಟೇಶನ್ ಅಲ್ಲಿ ಭಾಗಿಯಾಗಿದ್ದ ಇವರು ಇಂಕ್ನಾ ಅವಾರ್ಡ್ ಪೀಪಲ್ ಚಾಯ್ಸ್ 2022 ಅನ್ನು ಮೂಡಿಗೇರಿಸಿಕೊಂಡು ಕರ್ನಾಟಕಕ್ಕೆ ಮೆರೆಗು ತಂದಿದ್ದಾರೆ. ಇಷ್ಟೆಲ್ಲ ಬ್ಯುಸಿ ಆಗಿರುವ ಇವರು ಯಾವಾಗಲೂ ಹೊಸತನಕ್ಕೆ ತುಡಿಯುತ್ತಿರುತ್ತಾರೆ ಮತ್ತು ಇವರ ಕುಟುಂಬದ ಎಲ್ಲಾ ಸದಸ್ಯರು ಕೂಡ ಇವರು ಏನೇ ಒಂದು ಹೊಸತನ್ನು ಮಾಡಲು ಪ್ರಯತ್ನಪಟ್ಟರು ಅದಕ್ಕೆ ಸಪೋರ್ಟಿವ್ ಆಗಿ ಇರುತ್ತಾರಂತೆ. ಹಾಗಾಗಿ ನಾನಿನ್ನು ದೊಡ್ಡ ಸಾಧನೆ ಮಾಡಬೇಕು ಎಂದು ಆಸೆ ಪಡುತ್ತಿರುವ ಇವರನ್ನು ಜನ ಯಾವಾಗಲೂ ಕೇಳುತ್ತಿದ್ದಿದ್ದು ಒಂದೇ ಪ್ರಶ್ನೆ ನೀವು ಇಷ್ಟೊಂದು ಫೇಮ್ ಇಟ್ಟುಕೊಂಡಿದ್ದೀರಾ ಆದರೆ ಯಾಕೆ ಸಿನಿಮಾಗಳಲ್ಲಿ ಭಾಗವಹಿಸುತ್ತಿಲ್ಲ ಎಂದು.

ಹೌದು ಕನ್ನಡ ಕಿರುತೆರೆಯಲ್ಲಿ ನಿವೇದಿತ ಗೌಡ ಅವರು ನಂಬರ್ ವನ್ ಸ್ಟಾರ್ ಎಂದರೆ ತಪ್ಪಾಗಲಾರದು ಆದರೆ ಹಿರಿತೆರೆಯಲ್ಲಿ ಯಾಕೋ ಇವರು ಈವರಿಗೆ ಕಾಣಿಸಿಕೊಂಡಿಲ್ಲ. ಈ ರೀತಿ ಇವರ ಅಭಿಮಾನಿಗಳಿಗೆ ಬೇಸರ ಇದ್ದರೆ ಸದ್ಯದಲ್ಲಿ ಅವರಿಗೆ ಖುಷಿಯಾಗಲಿದೆ ಯಾಕೆಂದರೆ ಇದಕ್ಕೆ ಸಂಬಂಧ ಪಟ್ಟ ಅಪ್ಡೇಟ್ ಒಂದನ್ನು ನಿವೇದಿತ ಗೌಡ ಅವರೇ ಕೊಟ್ಟಿದ್ದಾರೆ. ಇಂಡಿಯಾ ಕಾಂಪಿಟೇಶನ್ ಆದ ಬಳಿಕ ಇವರಿಗೆ ನಾಯಕಿಯಾಗಿ ಅಭಿನಯಿಸಲು ಹಲವಾರು ಭಾಷೆಗಳಿಂದ ಆಫರ್ ಬರುತ್ತಿದೆಯಂತೆ ಸದ್ಯಕ್ಕೆ ತೆಲುಗು ಸಿನಿಮಾ ಒಂದನ್ನು ನಿವೇದಿತಾ ಗೌಡ ಅವರು ಒಪ್ಪಿಕೊಂಡಿದ್ದಾರಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ನಲ್ಲಿ ತಿಳಿಸಿ.

ಮೇಘಾನ ರಾಜ್ ಗೆ ಅಮೇರಿಕಾದ ಪ್ರತಿಷ್ಠಿತ “ಫಾಗ್ ಹೀರೋಯಿನ್” ಪ್ರಶಸ್ತಿ ಸಿಕ್ಕಿದೆ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ.

ನಟಿ ಮೇಘನಾ ರಾಜ್ ಪಕ್ಕ ಕನ್ನಡದ ಹುಡುಗಿ ಗ್ಲಾಮರಸ್ ರೋಲ್ ಆದರೂ ಸರಿ, ಹಳ್ಳಿ ಹುಡುಗಿಯ ಪಾತ್ರಕ್ಕಾದರು ಸರಿ ಕನ್ನಡದ ಸೊಗಡಿಗೆ ತಕ್ಕಂತೆ ಇರುವ ಈಕೆ ಕನ್ನಡ ಭಾಷೆ ಮಾತ್ರ ಅಲ್ಲದೆ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಶಾಯ್ ಅವರ ಮುದ್ದಿನ ಮಗಳಾಗಿರುವ ಇವರಿಗೆ ತಂದೆ-ತಾಯಿ ಇಬ್ಬರೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾವಿದರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರಿಂದ ಇವರಿಗೂ ಅಭಿನಯದ ನಂಟು ಅಲ್ಲಿಂದಲೇ ಶುರುವಾಗಿದೆ. ಬಾಲ್ಯದಿಂದಲೂ ಸಿನಿಮಾ ಗೆ ಸಂಬಂಧಪಟ್ಟ ವಿಷಯದಲ್ಲಿ ಬಹಳ ಕುತೂಹಲದಿಂದ ಇದ್ದ ಇವರು ಆಗಿನಿಂದಲೇ ಅಭಿನಯದ ಬಗ್ಗೆ ಪ್ರಾಕ್ಟೀಸ್ ಕೂಡ ಮಾಡುತ್ತಿದ್ದರು. ಬಳಿಕ ಪುಂಡ ಎನ್ನುವ ಸಿನಿಮಾದಲ್ಲಿ ಇವರು ಮೊದಲ ಬಾರಿಗೆ ಕನ್ನಡದಲ್ಲಿ ನಾಯಕಿ ಆಗಿ ಕಾಣಿಸಿಕೊಂಡರು ಕೂಡ ಇವರನ್ನು ಜನ ಹೆಚ್ಚಾಗಿ ಗುರುತಿಸಿಕೊಂಡಿದ್ದು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ರಾಜಾಹುಲಿ ಎನ್ನುವ ಸಿನಿಮಾದಲ್ಲಿ ನಾಯಕಿಯಾದ ಮೇಲೆ.

ಇದಾದ ಬಳಿಕ ಮೇಘನಾ ರಾಜ್ ಅವರು ತಿರುಗಿ ನೋಡಿದ್ದೇ ಇಲ್ಲಾ. ಬಹುಪರಾಕ್ ಆಟಗಾರ ವಂಶೋದ್ಧಾರಕ ಇರುವುದೆಲ್ಲವ ಬಿಟ್ಟು ಎಂಎಂಸಿಎಚ್ ಇನ್ನೂ ಮುಂತಾದ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಮೇಘನಾ ರಾಜ್ ಅವರು 2018 ರಲ್ಲಿ ಸ್ಯಾಂಡಲ್ವುಡ್ ನ ಯುವ ಸಾಮ್ರಾಟ್ ಆದ ಚಿರಂಜೀವಿ ಸರ್ಜಾ ಅವರನ್ನು ಮದುವೆಯಾಗಿ ವಿವಾಹ ಜೀವನಕ್ಕೆ ಕಾಲಿಟ್ಟರು. ಸತತ 10 ವರ್ಷದ ಪ್ರೀತಿಯ ಬಳಿಕ ಎರಡು ಕುಟುಂಬದವರ ಮನವೊಲಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಕನ್ನಡ ಕ್ಯೂಟ್ ಕಪಲ್ಸ್ ಎನ್ನುವ ಬಿರುದು ಪಡೆದುಕೊಂಡಿದ್ದರು. ಈ ಮುದ್ದಾದ ಜೋಡಿಯ ಮೇಲೆ ಯಾರ ಕೆಟ್ಟ ದೃಷ್ಟಿ ಬಿದ್ದಿತ್ತೋ ಗೊತ್ತಿಲ್ಲ ವಿಧಿಯಾಟಕ್ಕೆ ಸಿಕ್ಕ ಈ ಜೋಡಿ ಮದುವೆಯಾದ ಎರಡೇ ವರ್ಷದಲ್ಲಿ ಬೇರೆಯಾಗ ಬೇಕಾಯಿತು ಅರ್ಥಾತ್ ಮೇಘನಾ ರಾಜ್ ಅವರು ಐದು ತಿಂಗಳ ಗರ್ಭಿಣಿ ಆಗಿರುವಾಗ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣಕ್ಕೆ ತುತ್ತಾದರು.

ಅವರ ಆ ದಿನದ ಪರಿಸ್ಥಿತಿ ನೋಡಿ ಇಡಿ ಕರುನಾಡೇ ಕಂಬನಿ ಮಿಡಿದಿತ್ತು. ಇದಾದ ಬಳಿಕ ಸಿನಿಮಾರಂಗದಿಂದ ಬಹಳ ದಿನದವರೆಗೆ ದೂರವಿದ್ದ ಮೇಘನಾ ರಾಜ್ ಅವರು ತಮ್ಮ ಮಗನ ಲಾಲನೆ ಪಾಲನೆಯಲ್ಲಿ ಸಮಯ ಕಳೆಯುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿದ್ದ ಇವರು ಮಗನ ಕುರಿತಾದ ವಿಶೇಷ ವಿಡಿಯೋಗಳನ್ನು ಹಂಚಿಕೊಂಡು ತಮ್ಮ ನೋವನ್ನು ಮರೆಯುತ್ತಿದ್ದರು. ಜೀವನದಲ್ಲಿ ಆದ ದುರ್ಘಟನೆಯಿಂದ ಒಳಗೆ ಬಹಳ ನೋವಿದ್ದರೂ ಕೂಡ ಮೇಲೆ ಗಟ್ಟಿಗಿತ್ತಿಯಂತೆ ತೋರುವ ಈಕೆ ಮತ್ತೆ ಕ್ಯಾಮರಾ ಫೇಸ್ ಮಾಡಲು ಶುರು ಮಾಡಿದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಚಾಂಪಿಯನ್ ಎನ್ನುವ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಭಾಗವಹಿಸಿದ್ದ ಇವರಿಗೆ ಮತ್ತೆ ಸಿನಿಮಾಗಳಿಂದ ಕೂಡ ಆಫರ್ಗಳು ಬರುತ್ತಿದೆಯಂತೆ. ಇದೆಲ್ಲರ ನಡುವೆ ಮತ್ತೊಂದು ಅವಾರ್ಡ್ ಮೇಘನಾ ಪಾಲಿಗೆ ಹುಡುಕಿ ಬಂದಿದೆ.

ಫೆಸ್ಟಿವಲ್ ಆಫ್ ಗ್ಲೋಬ್ ಅಂಡ್ ಫೆಡರೇಶನ್ ಆಫ್ ಅಮೆರಿಕನ್ಸ್ ಸಂಸ್ಥೆ ವತಿಯಿಂದ ಮೇಘನಾರಾಜ್ ಅವರಿಗೆ ಹೀರೋ ಪ್ರಶಸ್ತಿ ದೊರೆಯುತ್ತಿದೆ. 10 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ ಅವರು ಗುರುತಿಸಿಕೊಂಡಿರುವುದು ಹಾಗೂ ಅವರ ವೈಯಕ್ತಿಕ ಜೀವನದಲ್ಲಿ ಆಗಿರುವ ಏಳುಬೀಳುಗಳನ್ನು ಗಮನಿಸಿ ಅವಾರ್ಡ್ ನೀಡಲಾಗುತ್ತಿದೆಯಂತೆ, ಈ ಕಾರ್ಯಕ್ರಮ ಮೂರು ದಿನಗಳವರೆಗೆ ಅಮೆರಿಕದಲ್ಲಿ ನಡೆಯಲಿದ್ದು ಮೇಘನ ಅವರು ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಬಾಲಿವುಡ್ ಧರ್ಮೇಂದ್ರ ಮತ್ತು ಅಮಿತಾಬ್ ಅವರಿಗೂ ಈ ಪ್ರಶಸ್ತಿ ಬಂದಿತ್ತು. ಮೊದಲ ಬಾರಿಗೆ ಸೌತ್ ಇಂದ ಮೇಘನ ಅವರು ಈ ಅವಾರ್ಡ್ ಪಡೆಯುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

ಕ್ರಾಂತಿ ಸಿನಿಮಾಗೆ ಮಾಧ್ಯಮಗಳ ಪ್ರಚಾರ ಇಲ್ಲದೆ ಇರುವುದೇ ಪ್ಲಸ್ ಪಾಯಿಂಟ್ ಆಗ್ತಾ ಇದಿಯಾ.?

ಯಾವುದೇ ಸಿನಿಮಾದ ಪ್ರಚಾರದ ವಿಷಯದಲ್ಲಿ ಮಾಧ್ಯಮಗಳು ಬಹಳ ಮುಖ್ಯವಾದ ಸ್ಥಾನ ವಹಿಸುತ್ತವೆ ಸಿನಿಮಾ ತಂಡ ಹಾಗೂ ಸಿನಿಮಾ ಅಭಿಮಾನಿಗಳ ನಡುವೆ ಒಂದು ಸೇತುವೆಯಾಗಿ ಮಾಧ್ಯಮಗಳು ಕೆಲಸ ಮಾಡುತ್ತವೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಸಿನಿಮಾಗಳಿಗೆ ಸಂಬಂಧಪಟ್ಟ ಪ್ರತಿಯೊಂದು ಅಪ್ಡೇಟ್ಸ್ ಗಳನ್ನು ಸಿನಿಮಾದಲ್ಲಿರುವ ನಾಯಕಿ ಕಲಾವಿದರುಗಳು ಟ್ರೈಲರ್ ಟೀಸರ್ ಮತ್ತು ಸಿನಿಮಾ ರಿಲೀಸ್ ಅನೌನ್ಸ್ ಆಗುವ ಡೇಟ್ ತನಕ ಮತ್ತು ಅದಾದ ಬಳಿಕ ಅದರ ಸಕ್ಸಸ್ಸಿನ ಅಪ್ಡೇಟ್ಸ್ ಎಲ್ಲವೂ ಕೂಡ ಸಿನಿಮಾದಿಂದ ಜನರಿಗೆ ತಲುಪುವ ತನಕ ಮಾಧ್ಯಮಗಳು ಅಲ್ಲಿ ಮಧ್ಯವರ್ತಿಗಳ ರೀತಿ ಇರುತ್ತವೆ. ಹಾಗಾಗಿ ಪ್ರಚಾರ ಎಂದ ತಕ್ಷಣ ಮಾಧ್ಯಮಗಳೇ ಬೇಕು ಎನ್ನುವ ಒಂದು ಮಾತು ಕೂಡ ಇದೆ. ಆದರೆ ದರ್ಶನ್ ಅವರ ಕ್ರಾಂತಿ ಸಿನಿಮಾಗೆ ಮಾಧ್ಯಮಗಳು ಪ್ರಚಾರ ಮಾಡುವುದಿಲ್ಲ ಜೊತೆಗೆ ದರ್ಶನ್ ಅವರಿಗೆ ಸಂಬಂಧಪಟ್ಟ ಯಾವ ವಿಚಾರವನ್ನು ಕೂಡ ನಾವು ಮಾಧ್ಯಮಗಳಲ್ಲಿ ಹೇಳುವುದಿಲ್ಲ ಎನ್ನುವ ನಿರ್ಧಾರಕ್ಕೆ, ಮಾಧ್ಯಮಗಳು ಬಂದಿವೆ.

ಹಾಗಾದರೆ ಇದರಿಂದ ದರ್ಶನ ಅವರ ಕ್ರಾಂತಿ ಸಿನಿಮಾಗೆ ತೊಂದರೆ ಆಗಲಿದೆಯಾ ಇದಕ್ಕೆ ಉತ್ತರ ಇಲ್ಲಿದೆ ನೋಡಿ ವರ್ಷದ ಹಿಂದೆ ದರ್ಶನ್ ಅವರು ತಮ್ಮ ವೈಯುಕ್ತಿಕ ವಿವಾದದ ಸಮಯದಲ್ಲಿ ರಿಲೀಸ್ ಆದ ದರ್ಶನ್ ಅವರೇ ಮಾತನಾಡಿರುವ ಆಡಿಯೋ ಎಂದು ಹೇಳಲಾದ ಆ ಒಂದು ಆಡಿಯೋದಲ್ಲಿ ದರ್ಶನ್ ಅವರು ಮಾಧ್ಯಮಗಳ ಬಗ್ಗೆ ತುಂಬಾ ಕೆ.ಟ್ಟದಾಗಿ ಅ.ವ್ಯಾ.ಚ ಶಬ್ದಗಳನ್ನು ಬಳಸಿ ಮಾತನಾಡಿದರು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಮಾಧ್ಯಮಗಳಲ್ಲಿ ದರ್ಶನ್ ಅವರ ಹೆಸರನ್ನು ಕೂಡ ಹೇಳದ ಹಾಗೆ ಅಥವಾ ಯಾವುದಾದರೂ ಬೇರೆಯವರ ಸಂದರ್ಶನ ಸಮಯದಲ್ಲಿ ಅವರೇನಾದರು ದರ್ಶನ್ ಅವರ ಹೆಸರು ಹೇಳಿದರೆ ಅದನ್ನು ಬೀಪ್ ಮಾಡುವ ಮೂಲಕ ಅಥವಾ ದರ್ಶನ್ ಅವರು ಇರುವ ಸಭೆ ಸಮಾರಂಭ ಕಾರ್ಯಕ್ರಮಗಳಿಗೆ ನಾವು ಬರುವುದಿಲ್ಲ ಎಂದು ಹೇಳುವ ಮೂಲಕ ದರ್ಶನ್ ಅವರನ್ನು ಮಾಧ್ಯಮಗಳು ಬಾಯ್ಕಾಟ್ ಮಾಡಿದ್ದವು.

ಆದರೆ ಅಭಿಮಾನಿಗಳಿಗೆ ಇದು ಬಹಳ ದೊಡ್ಡ ಮಟ್ಟದ ಬೇಸರ ಹಾಗೂ ನೋವುಂಟು ಮಾಡಿತ್ತು ಪ್ಯಾನ್ ಇಂಡಿಯಾ ಸಿನಿಮಾ ಆಗಿ ತಯಾರಾಗುತ್ತಿರುವ ಕ್ರಾಂತಿ ಸಿನಿಮಾದ ಸಮಯದಲ್ಲಿ ಮಾಧ್ಯಮಗಳು ಈ ರೀತಿ ವರ್ತಿಸುವುದರಿಂದ ನಮ್ಮ ಬಾಸ್ ಸಿನಿಮಾ ಪ್ರಚಾರವಿಲ್ಲದೆ ಸೋಲುತ್ತದೆ ಎನ್ನುವ ಭಯ ಅಭಿಮಾನಿಗಳಲ್ಲಿ ಕಾಡತೊಡಗಿತ್ತು. ಇದರಿಂದ ಸ್ವಯಂ ಪ್ರೇರಿತರಾಗಿ ತಾವೇ ಅಭಿಮಾನಿಗಳೆಲ್ಲಾ ಒಟ್ಟಾಗಿ ಸೇರಿ ಮಾಧ್ಯಮಗಳು ಪ್ರಚಾರ ಕೊಡದೆ ಹೋದರೆ ಏನಾಯ್ತು ನಾವೇ ನಮ್ಮ ಬಾಸ್ ಸಿನಿಮಾವನ್ನು ಪ್ರಚಾರ ಮಾಡಿಕೊಳ್ಳುತ್ತೇವೆ ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ. ಮಾಧ್ಯಮಗಳು ಇಲ್ಲದಿದ್ದರೆ ಸಾಮಾಜಿಕ ಮಾಧ್ಯಮಗಳ ಮೂಲಕ ನಾವು ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡುತ್ತೇವೆ ಎಂದು ಎಲ್ಲಾ ಅಭಿಮಾನಿಗಳು ಸೇರಿ ತಾವು ಬಳಸುವ ಸೋಶಿಯಲ್ ಮೀಡಿಯಾವನ್ನು ಬಳಸಿಕೊಂಡು ಎಲ್ಲಾ ಜನರಿಗೂ ಕ್ರಾಂತಿ ಸಿನಿಮಾದ ಅಪ್ಡೇಟ್ಗಳು ಸಿಗುವಂತೆ ಮಾಡುತ್ತಿದ್ದಾರೆ.

ಈವರೆಗೆ ಮಾಧ್ಯಮಗಳಲ್ಲಿ ಕ್ರಾಂತಿ ಸಿನಿಮಾದ ಬಗ್ಗೆ ಮಾಹಿತಿ ಬರೆದೆ ಹೋದರು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಕೊಟ್ಟಿರುವ ಮಾಹಿತಿಯ ಪ್ರಕಾರ ಸಿನಿಮಾದಲ್ಲಿ ರಚಿತಾ ರಾಮ್ ಅವರು ನಾಯಕಿಯಾಗಿದ್ದಾರೆ, ಹರಿಕೃಷ್ಣ ಅವರ ನಿರ್ದೇಶನ ಇದಕ್ಕಿದೆ. ಬಿ. ಸುರೇಶ್ ಹಾಗೂ ಶೈಲಜಾ ನಾಗೇಶ್ ಅವರು ಸೇರಿದಂತೆ ಯಜಮಾನ ಸಿನಿಮಾ ತಂಡದ ಬಹುತೇಕ ಕಲಾವಿದರು ಇದರಲ್ಲಿ ಇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಮತ್ತು ಮುಖ್ಯ ಭೂಮಿಕೆಯಲ್ಲಿ ಸುಮಲತ ಅಂಬರೀಶ್ ಮತ್ತು ರವಿಚಂದ್ರನ್ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕೂಡ ಗೊತ್ತಾಗಿದೆ. ನಿಮಗೂ ಅಕ್ಷರ ಕ್ರಾಂತಿಗೆ ಸಂಬಂಧಿಸಿದ ಸಬ್ಜೆಕ್ಟ್ ಹೊಂದಿದೆ ಎಂದು ಕೂಡ ಹೇಳಲಾಗುತ್ತಿದೆ. ನಿಜಕ್ಕೂ ಇಂತಹ ಶ್ರೇಷ್ಠ ಮಟ್ಟದ ಅಭಿಮಾನಿಗಳನ್ನು ಪಡೆದಿರುವ ದರ್ಶನ್ ಅವರೇ ಅದೃಷ್ಟವಂತರು ಎಂದು ಹೇಳಬಹುದು ದರ್ಶನ್ ಅವರನ್ನು ಅಭಿಮಾನಿಗಳು ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ನಿಮ್ಮ ಪ್ರಕಾರ ಕ್ರಾಂತಿ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡ ಕ್ರಾಂತಿಯಲ್ಲಿ ಸೃಷ್ಟಿ ಮಾಡುತ್ತ.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.