Home Blog Page 340

ಮತ್ತೊಮ್ಮೆ ರವಿಚಂದ್ರನ್ ಜೊತೆ ಮಲ್ಲ ಸಿನಿಮಾದ ಯಮ್ಮೋ ಯಮ್ಮೊ ನೋಡ್ದೆ ನೋಡ್ದೆ ಹಾಡಿಗೆ ಹೆಜ್ಜೆ ಹಾಕಿದ ಪ್ರಿಯಾಂಕ ಉಪೇಂದ್ರ ಹಾಟ್ ವಿಡಿಯೋ ನೋಡಿ.

ಪ್ರಿಯಾಂಕ ಉಪೇಂದ್ರ ಅವರು ಒಂದು ಕಾಲದಲ್ಲಿ ಎಲ್ಲಾ ಪಡ್ಡೆ ಹುಡುಗರ ಫೇವರೆಟ್ ಹೀರೋಯಿನ್. ಇವರ ಸಿನಿಮಾಗಳಲ್ಲಿ ಗ್ಲಾಮರ್ ಹಾಗೂ ನೃತ್ಯಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿತ್ತು ಹಾಗಾಗಿ ಎಷ್ಟೋ ಜನರು ಇವರಿಗೆ ಅಭಿಮಾನಿಗಳು. ಎಚ್ ಟು ಒ ಎನ್ನುವ ಸಿನಿಮಾದ ಮೂಲಕ ಉಪೇಂದ್ರ ಅವರ ಜೊತೆ ಕನ್ನಡದಲ್ಲಿ ಅಭಿನಯ ಶುರು ಮಾಡಿದ ಪ್ರಿಯಾಂಕ ಉಪೇಂದ್ರ ಅವರು ನಂತರ ಕೋಟಿಗೊಬ್ಬ ಮಲ್ಲ ರೌಡಿ ಅಳಿಯ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಕನ್ನಡ ಭಾಷೆ ಮಾತ್ರವಲ್ಲದೆ ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಬೆಂಗಾಲಿ ಒರಿಸ್ಸಾ ಹೀಗೆ ದೇಶದ ಹಲವಾರು ಭಾಷೆಗಳಲ್ಲಿ ನಟಿಸಿ ಈಗಲೂ ಬೇಡಿಕೆ ಇರಿಸಿಕೊಂಡಿರುವ ನಟಿ. ಪ್ರಿಯಾಂಕ ಉಪೇಂದ್ರ ಅವರು ಕನ್ನಡದಲ್ಲಿ ಐವತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಿಯಾಂಕ ಉಪೇಂದ್ರ ಅವರು ಉಪೇಂದ್ರ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಮೇಲೆ ವೈಯಕ್ತಿಕ ಜೀವನದ ಕಡೆ ಹೆಚ್ಚು ಗಮನಕೊಟ್ಟ ಇವರು ಇವರ ಮಕ್ಕಳಾದ ಐಶ್ವರ್ಯ ಉಪೇಂದ್ರ ಹಾಗೂ ಆಯುಷ್ ಉಪೇಂದ್ರ ಅವರನ್ನು ಬೆಳೆಸುವುದರಲ್ಲಿ ಕಾಲ ಕಳೆದರು. ಮತ್ತೆ ಪಂಚರಂಗಿ ಎನ್ನುವ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಹಾಡೊಂದರಲ್ಲಿ ಕಂಬ್ಯಾಕ್ ಮಾಡಿದ ಇವರು ಕನ್ನಡದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು ಎನ್ನಬಹುದು. ಮಕ್ಕಳಾದ ಮೇಲೆ ಪೋಷಕ ಪಾತ್ರಕ್ಕೆ ಇವರು ಸೀಮಿತರಾಗಿದ್ದಾರೆ ಎಂದುಕೊಂಡರೆ ಅದು ತಪ್ಪು. ಈಗಲೂ ಕೂಡ ಮಹಿಳಾ ಪ್ರಧಾನ ಚಿತ್ರಗಳು ಹಾಗೂ ನಾಯಕಿಯ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಪಾತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ನಟಿ ಪ್ರಿಯಾಂಕ ಉಪೇಂದ್ರ ಅವರು ಈಗಲೂ ಸಹ ಕೈಯಲ್ಲಿ ಹಲವಾರು ಇದೇ ರೀತಿಯ ಪ್ರಾಜೆಕ್ಟ್ಗಳನ್ನು ಇಟ್ಟುಕೊಂಡು ಬಿಜಿಯಾಗಿದ್ದಾರೆ.

ಇಷ್ಟೆಲ್ಲಾ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡಿರುವ ಪ್ರಿಯಾಂಕ ಉಪೇಂದ್ರ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ ಸೀಸನ್ ಫೋರ್ ಕಾರ್ಯಕ್ರಮದಲ್ಲಿ ಈ ವಾರ ಭಾಗಿಯಾಗಲಿದ್ದಾರೆ. ಜೊತೆ ಪ್ರೇಕ್ಷಕರ ಫೇವರೆಟ್ ಕಾರ್ಯಕ್ರಮವಾಗಿರುವ ಈ ಮಕ್ಕಳ ಕಾರ್ಯಕ್ರಮಕ್ಕೆ ರವಿಚಂದ್ರನ್ ಲಕ್ಷ್ಮಿ ಹಾಗೂ ರಚಿತಾ ರಾಮ್ ಅವರು ತೀರ್ಪುಗಾರರಾಗಿದ್ದರು. ಈ ವಾರ ಪ್ರಿಯಾಂಕ ಉಪೇಂದ್ರ ಅವರು ಕೂಡ ಈ ತಂಡ ಸೇರಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಿಯಾಂಕ ಉಪೇಂದ್ರ ಅವರನ್ನು ರವಿಚಂದ್ರನ್ ಅವರೇ ಸ್ವಾಗತ ಮಾಡಿ ಇವರು ಎಂದಿಗೂ ನಮ್ಮ ಹೀರೋಯಿನ್ ಎಂದಿದ್ದಾರೆ. ಮತ್ತು ವೇದಿಕೆ ಮೇಲೆ ಬಂದ ಇವರಿಬ್ಬರು ಮಲ್ಲ ಸಿನಿಮಾದ ಇವರಿಬ್ಬರ ಜನಪ್ರಿಯ ಹಾಡಾದ ಯಮ್ಮೋ ಯಮ್ಮೋ ನೋಡ್ದೇ ನೋಡ್ದೇ ಹಾಡಿಗೆ ವೇದಿಕೆ ಮೇಲೆ ಮತ್ತೊಮ್ಮೆ ಇವರಿಬ್ಬರು ಹೆಜ್ಜೆ ಹಾಕಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪ್ರೋಮೋಗಳು ಈಗಾಗಲೇ ವಾಹಿನಿಯಲ್ಲಿ ಹರಿದಾಡುತ್ತಿದ್ದು, ಈ ವಾರದ ಸಂಚಿಕೆ ವಿಶೇಷವಾಗಲಿದೆ.

ಹಿಂದೊಮ್ಮೆ ಮಲ್ಲ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಈ ಹಾಡು ಹೆಚ್ಚಿನ ವಿವಾದ ಸೃಷ್ಟಿ ಮಾಡಿತ್ತು ಹಾಗೂ ಈ ಹಾಡಿನಿಂದಲೇ ಉಪೇಂದ್ರ ಹಾಗೂ ಪ್ರಿಯಾಂಕ ನಡುವೆ ಬಿರುಕು ಏರ್ಪಟ್ಟಿದೆ ಎನ್ನುವ ಗಾಳಿ ಸುದ್ದಿಗಳು ಕೂಡ ಹರಿದಾಡಿದ್ದವು. ಆದರೆ ಮತ್ತೊಮ್ಮೆ ಇವರಿಬ್ಬರು ಒಟ್ಟಾಗಿ ಕ್ರೇಜಿಸ್ಟಾರ್ ಎನ್ನುವ ಸಿನಿಮಾದಲ್ಲಿ ನಟಿಸಿದ ಮೇಲೆ ಇವೆಲ್ಲವೂ ಸುಳ್ಳು ಎನ್ನುವುದನ್ನು ಸಾಬೀತು ಪಡಿಸಿದಂತಾಯಿತು. ಈಗ ವೇದಿಕೆ ಮೇಲೆ ಇವರಿಬ್ಬರು ಇದೇ ಹಾಡಿಗೆ ನೃತ್ಯ ಮಾಡಿರುವುದನ್ನು ಜೀ ಕನ್ನಡ ವಾಹಿನಿಯು ರೀಲ್ಸ್ ಮಾಡಿ ತನ್ನ instagram ಖಾತೆಯಲ್ಲೂ ಕೂಡ ಹಂಚಿಕೊಂಡಿದೆ. ಇದನ್ನು ನೋಡಿದ ಮೇಲೆ ಇವರಿಬ್ಬರ ಅಭಿಮಾನಿಗಳು ಈ ವಾರದ ಶೋ ನೋಡುವುದಕ್ಕೆ ಕಾಯುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

ಅಪ್ಪು ಹೊಸ ಲುಕ್ ಗೆ ಫೀದಾ ಆದ ಫ್ಯಾನ್ಸ್, ವೈರಲ್ ಆಗುತ್ತಿದೆ ಅಪ್ಪು ಫೋಟೋ.

ಕನ್ನಡ ಚಲನಚಿತ್ರ ರಂಗಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕರುನಾಡ ರಾಜಕುಮಾರ, ಯುವಕರ ಪಾಲಿಗೆ ಸ್ಪೂರ್ತಿ ತುಂಬುವ ಯುವರತ್ನ, ಮಕ್ಕಳಿಗೆ ಪ್ರೀತಿಯ ಅಪ್ಪು, ಹಿರಿಯರ ಜೊತೆಗೆ ವಿನಯದಿಂದ ವರ್ತಿಸುತ್ತಿದ್ದ ನಮ್ಮ ಬಸವ, ಪ್ರತಿಕ್ಷಣವನ್ನು ಕೂಡ ಬಿಂದಾಸ್ ಆಗಿ ಜೀವಿಸುತ್ತಿದ್ದ ಅರಸು, ಆಕಾಶದ ಅಷ್ಟು ವಿಶಾಲವಾದ ಮನಸ್ಸನ್ನು ಹೊಂದಿದ್ದ, ಪೃಥ್ವಿ ತೂಕದ ಘನತೆ ಹೊಂದಿದ್ದ ವಂಶಿ, ಭಾಷೆಯ ವಿಚಾರವಾಗಿ ಬಂದರೆ ವೀರ ಕನ್ನಡಿಗ. ಅಭಿನಯದ ವಿಷಯದಲ್ಲಿ ನಟಸಾರ್ವಭೌಮ, ಬೆಲೆಕಟ್ಟಲಾಗದ ಬೆಟ್ಟದ ಹೂವು, ಅಭಿಮಾನಿಗಳ ಮನದಲ್ಲಿ ಎಂದೂ ಮಿನುಗುವ ನಕ್ಷತ್ರ, ವಿಶ್ವದಾದ್ಯಂತ ಕೋಟ್ಯಂತರ ಮನೆಗಳನ್ನು ಗೆದ್ದ ಕನ್ನಡದ ಕೋಟ್ಯಾಧಿಪತಿ, ಎಂತಹ ಸ್ಟಂಟ್ಸ್ ಗಳೇ ಆದರೂ ಡ್ಯೂಪ್ ಇಲ್ಲದೆ ಮಾಡುತ್ತಿದ್ದ ಅಂಜನಿಪುತ್ರ ಹೀಗೆ ಅಪ್ಪು ಎನ್ನುವ ಮಹಾನ್ ವ್ಯಕ್ತಿತ್ವದ ಬಗ್ಗೆ ಎಷ್ಟು ಹೊಗಳಿದರೂ ಕೂಡ ಪದಗಳೇ ಸಾಲದು.

ನಾನಾ ವೇಷ ತೊಟ್ಟು ತೆರೆ ಮೇಲೆ ಅಭಿಮಾನಿಗಳನ್ನು ರಂಜಿಸಿದ ಪುನೀತ್ ಅಭಿನಯವನ್ನು ನೋಡಿ ಆಶ್ಚರ್ಯ ಪಡದವರಿಲ್ಲ ಹಾಗೂ ಮೆಚ್ಚದವರಿಲ್ಲ ಆದರೆ ಅವರ ನಿಜ ವ್ಯಕ್ತಿತ್ವ ತಿಳಿದ ಮೇಲೆ ಅವರ ಸಲುವಾಗಿ ಕಣ್ಣೀರಿಡದ ಹಾಗೂ ಅವರಿಗೆ ಕೈ ಮುಗಿಯದ ಯಾವ ಮನುಜನೂ ಇಲ್ಲ ಎನ್ನಬಹುದು. ಒಬ್ಬ ಮೇರು ನಟನ ಮಗನಾಗಿ ಹುಟ್ಟಿ ಮನುಷ್ಯ ಎಷ್ಟು ಸರಳವಾಗಿ ಹಾಗೂ ಸಂತೋಷವಾಗಿ ಅರ್ಥಪೂರ್ಣವಾಗಿ ಮತ್ತು ತಾನಿಲ್ಲದಾಗಲೂ ಕೂಡ ಇತರ ಜನರಿಗೆ ಹೇಗೆ ಸ್ಪೂರ್ತಿಯಾಗಿ ಬದುಕಬಹುದು ಎನ್ನುವುದನ್ನು ಹೇಳಿಕೊಟ್ಟು ಹೋದ ದೇವತಾ ಮನುಷ್ಯ ಪುನೀತ್ ರಾಜಕುಮಾರ್ ಅವರು. ಪುನೀತ್ ರಾಜಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಅವರ ಕಿರಿಯ ಪುತ್ರ, ಪಾರ್ವತಮ್ಮ ರಾಜಕುಮಾರ್ ಅವರ ಮುದ್ದಿನ ಮಗ, ಶಿವಣ್ಣ ಹಾಗೂ ರಾಘಣ್ಣನ ಪ್ರೀತಿಯ ಸಹೋದರ ಮತ್ತು ಮಡದಿ ಹಾಗೂ ಮಕ್ಕಳ ಪಾಲಿಗಂತೂ ಅಪ್ಪುವೇ ಎಲ್ಲಾ.

ಬದುಕಿನಲ್ಲಿ ಎಲ್ಲವೂ ಇತ್ತು. ಹಲವಾರು ಬಿಸಿನೆಸ್ ಗಳು, ಕೋಟ್ಯಂತರ ಹಣ, ಪ್ರೀತಿಯಿಂದ ವರಿಸಿದ ಮಡದಿ, ಕರ್ನಾಟಕವೇ ಹೆಮ್ಮೆಪಡುವಂಥ ಮಕ್ಕಳು, ಕೈ ತುಂಬಾ ಬಿಡುವು ಇಲ್ಲದಷ್ಟು ಕೆಲಸ, ಲೆಕ್ಕವಿಟ್ಟು ಹೇಳಲಾಗದಷ್ಟು ಅಭಿಮಾನಿಗಳ ಪ್ರೀತಿ ಒಬ್ಬ ಸಾಮಾನ್ಯ ಮನುಷ್ಯನಿಗೆ ಈ ಎಲ್ಲಾ ಸಿಕ್ಕಿ ಬಿಟ್ಟರೆ ಅವನು ಯಾವ್ಯಾವ ರೀತಿಯಲ್ಲಿ ಮೆರೆಯುತ್ತಾನೆ ಗೊತ್ತಿಲ್ಲ ಆದರೆ ಪುನೀತ್ ರಾಜಕುಮಾರ್ ಅವರದು ಮಾತ್ರ ಚಿನ್ನತಂತಹ ವ್ಯಕ್ತಿತ್ವ. ದೇವರು ತನಗೆ ಕೊಟ್ಟಿದ್ದರಲ್ಲಿ ಬಹುತೇಕ ಪಾಲನ್ನು ಬಡ ಜನರಿಗಾಗಿ ನಿರ್ಗತಿಕರಿಗಾಗಿ ಹಾಗೂ ಅಸಹಾಯಕರಾಗಿ ಗೌಪ್ಯವಾಗಿ ಹಂಚಿಹೋದ ನೊಂದವರ ಪಾಲಿನ ಕಣ್ಣೀರೊರೆಸುವ ದೇವರು. ಬಹುತೇಕ ಕನ್ನಡಿಗರ ಪಾಲಿಗೆ ಅಪ್ಪುವೇ ದೇವರು ಎಂದರೂ ಪಕೂಡ ತಪ್ಪಾಗಲಾಗದು. ಇದಕ್ಕೆ ಆ ದೇವರಿಗೂ ಕೂಡ ಹೊಟ್ಟೆಕಿಚ್ಚು ಬಂದು ಅಪ್ಪುವನ್ನು ಅವರ ಜೊತೆ ಕರೆದುಕೊಂಡು ಹೋಗಿಬಿಟ್ಟರು ಎನಿಸುತ್ತದೆ. ಅಪ್ಪುವನ್ನು ಕಳೆದುಕೊಂಡು ಇಡೀ ಕರ್ನಾಟಕವೇ ಹೇಳದಾಗದಷ್ಟು ನೋವನ್ನು ಅನುಭವಿಸುತ್ತಿದೆ.

ಆದರೆ ದಿಢೀರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಅವರ ಹೊಸ ಫೋಟೋ ಒಂದು ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಅಪ್ಪು ಅವರು ಉದ್ದ ಕೂದಲು ಹಾಗೂ ಉದ್ದ ಗಡ್ಡ ಬಿಟ್ಟು ಕಾಣಿಸಿಕೊಂಡಿದ್ದಾರೆ. ಹಿಂದೊಮ್ಮೆ ರಾಪಿಡ್ ರಶ್ಮಿ ಅವರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ಅಪ್ಪು ಅವರು ಹೇಳಿದ್ದರು, ನನಗೆ ಯಶ್ ಅವರಂತೆ ಉದ್ದ ಗಡ್ಡ ಬಿಡಲು ಇಷ್ಟ ಆದರೆ ನನಗೆ ಆ ರೀತಿ ಆಗುವುದೇ ಇಲ್ಲ ಎಂದು ಹೇಳಿದ್ದರು. ಈಗ ಅಭಿಮಾನಿ ಒಬ್ಬ ಅವರ ಕೈಚಳಕದಿಂದ ಅಪ್ಪು ಅವರಿಗೆ ಅವರಿಷ್ಟದ ಗೆಟಪ್ ಕೊಟ್ಟು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳೆಲ್ಲರೂ ಮತ್ತೊಮ್ಮೆ ಅಪ್ಪುವಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ.

ಮಗನನ್ನು ಯಾವಾಗ ಸಿನಿಮಾರಂಗಕ್ಕೆ ಕರೆ ತರುತ್ತೀರಾ ಎಂದು ಕೇಳಿದ ಪ್ರಶ್ನೆಗೆ ದರ್ಶನ್ ಕೊಟ್ಟ ಖಡಕ್ ಉತ್ತರ ಏನು ನೋಡಿ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಸಾಕು ಕರ್ನಾಟಕದ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ದಚ್ಚು ಎನ್ನುವ ಈ ಹೆಸರು ಎಷ್ಟೋ ಅಭಿಮಾನಿಗಳ ಉಸಿರಾಗಿದೆ. ನಟ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಉಳಿದ ಎಲ್ಲಾ ನಟರಿಗಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ದರ್ಶನ್ ಅವರ ಮೇಲೆ ಅವರ ಅಭಿಮಾನಿಗಳಿಗೆ ಇರುವುದು ಎಷ್ಟು ಹುಚ್ಚು ಪ್ರೇಮ ಎಂದರೆ ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರು ಆಗಾಗ ವೈಯಕ್ತಿಕ ಬದುಕಿನಲ್ಲಿ ಏನಾದರೂ ಕಿರಿಕ್ ಮಾಡಿಕೊಂಡು ಸುದ್ದಿ ಆಗುತ್ತಾರೆ. ಇಂತಹ ಸಮಯದಲ್ಲಿ ಎಂತಹ ಅಭಿಮಾನಿಗಳ ಆದರೂ ಬೇಸರಪಟ್ಟುಕೊಳ್ಳುವುದು ಸಹಜ ಆದರೆ ಎಂತಹದೇ ಕಷ್ಟ ಸ್ಥಿತಿಯಲ್ಲೂ ಕೂಡ ದರ್ಶನ್ ಕೈ ಹಿಡಿದಿದ್ದಾರೆ ಅವರ ಅಭಿಮಾನಿಗಳು ಎನ್ನಬಹುದು. ಅಭಿಮಾನಿಗಳ ಪ್ರಕಾರ ಅವರು ಹೇಳುವುದು ಅವರ ವೈಯಕ್ತಿಕ ಬದುಕು ಏನೇ ಇರಲಿ ಒಬ್ಬ ಹೀರೋ ಆಗಿ ನಾವು ಅವರ ಅಭಿಮಾನಿಗಳು ಅಷ್ಟೇ ಎನ್ನುವುದು.

ದರ್ಶನ್ ಅವರಿಗೆ ಈ ಮಟ್ಟದ ಪ್ರೀತಿ ಕೊಡುವ ಅಭಿಮಾನಿಗಳು ಇರಲು ಕಾರಣ ಅವರ ನೇರನುಡಿ ಹಾಗೂ ಸಿನಿಮಾದಾಚೆಗೆ ಅವರು ಬದುಕುತ್ತಿರುವ ಬದುಕು ಎನ್ನಬಹುದು. ಅಭಿಮಾನಿಗಳನ್ನು ದರ್ಶನ್ ಅವರು ತುಂಬಾ ಪ್ರೀತಿಯಿಂದ ಕಾಣುತ್ತಾರೆ ಹಾಗೂ ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದ ದಿನ ಅವರ ದಿನಪೂರ್ತಿಯನ್ನು ಅಭಿಮಾನಿಗಳ ಜೊತೆ ಕಳೆಯುತ್ತಾರೆ ಹಾಗೂ ಅನಾಥಾಶ್ರಮ ವೃದ್ದಾಶ್ರಮ ಮುಂತಾದ ಕಡೆ ಸಹಾಯ ಮಾಡುವ ಮೂಲಕ ತಮ್ಮ ಅಭಿಮಾನಿಗಳು ಅದೇ ರೀತಿ ನನ್ನ ಹುಟ್ಟುಹಬ್ಬವನ್ನು ಆಚರಿಸಿ ಎಂದು ಕರೆ ಕೊಡುತ್ತಾರೆ. ಅವರ ಮೇಲಿನ ಅಭಿಮಾನದಿಂದ ನೋಡಲು ಹೋದವರಿಗೆ ಎಂದು ಬೇಸರ ಮಾಡವವರಲ್ಲ ದರ್ಶನ್. ಅದೇ ಸ್ನೇಹ ಎನ್ನುವ ಹೆಸರಿಗೆ ಪ್ರಾಣ ಕೊಡುವಷ್ಟು ನಿಯತ್ತಾಗಿರುವ ದರ್ಶನ್ ಅವರ ಈ ಗುಣ ಹೆಚ್ಚಿನ ಜನರು ಅವರನ್ನು ಇಷ್ಟಪಡಲು ಕಾರಣವಾಗಿದೆ.

ದರ್ಶನ್ ಅವರು ಪ್ರಾಣಿ ಪ್ರಿಯರು, ಝೂನಲ್ಲಿ ಅನೇಕ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಗುತ್ತಿದ್ದಾರೆ. ಅಲ್ಲದೆ ಮೈಸೂರಿನ ತಮ್ಮ ಸ್ವಂತ ಫಾರಂ ಹೌಸಿನಲ್ಲೂ ಕೂಡ ಹಲವಾರು ಪ್ರಾಣಿಗಳನ್ನು ಸಾಕಿ ಸಮಯ ಸಿಕ್ಕಾಗಲೆಲ್ಲಾ ಅವುಗಳ ಜೊತೆ ಸಮಯ ಕಳೆಯುತ್ತಾರೆ. ಈಗ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಹಾಗೂ ಈ ಸಿನಿಮಾವನ್ನು ಪ್ರಚಾರ ಮಾಡುವುದಿಲ್ಲ ಎಂದು ಮಾಧ್ಯಮಗಳು ಚಾಲೆಂಜ್ ಮಾಡಿದ್ದರೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಅವುಗಳಿಗೆ ಕೇರ್ ಮಾಡದೆ ನಾವೇ ನಮ್ಮ ಬಾಸ್ ಸಿನಿಮಾವನ್ನು ಪ್ರಚಾರ ಮಾಡಿಕೊಳ್ಳುತ್ತೇವೆ ಎಂದು ಆ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣದ ಚಾನೆಲ್ ಒಂದರ ನಿರೂಪಕರು ದರ್ಶನ್ ಅವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆ ಏನೆಂದರೆ ದರ್ಶನ್ ಅವರಿಗೆ ನಿರೂಪಕರು ನಿಮ್ಮ ಮಗನನ್ನು ಯಾವಾಗ ಸಿನಿಮಾಗೆ ಕರೆತರುತ್ತೀರಾ ಎಂದು ಕೇಳಿದ್ದಾರೆ ಅದಕ್ಕೆ ದರ್ಶನ್ ಕೊಟ್ಟ ಉತ್ತರ ಹೇಗಿತ್ತು ಕೇಳಿ.

ನಾನು ಕೂಡ ಸಿನಿಮಾ ರಂಗಕ್ಕೆ ಬಂದು ಅಷ್ಟು ಸುಲಭವಾಗಿ ಈ ಮಟ್ಟಕ್ಕೆ ಬೆಳೆದಿಲ್ಲ ನನ್ನ ತಂದೆ ಸಿನಿಮಾರಂಗದಲ್ಲಿ ಇದ್ದರೂ ಕೂಡ ನಾನು ಲೈಟ್ ಬಾಯ್ ಆಗಿ, ಸಹಾಯಕ ನಿರ್ದೇಶಕನಾಗಿ ಹೀಗೆ ಒಂದೊಂದು ಹಂತವನ್ನು ದಾಟಿ ತುಂಬಾ ಕಷ್ಟವನ್ನು ನೋಡಿಕೊಂಡು ಬೆಳೆದಿದ್ದೇನೆ. ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ತಿಳಿಯಬಾರದು ಎಂದು ಬೆಳೆಸಿದರೆ ಅವರಿಗೆ ಮನುಷ್ಯರು ಹಾಗೂ ಹಣದ ಬೆಲೆ ಗೊತ್ತಾಗುವುದಿಲ್ಲ ಹೀಗಾಗಿ ಅವನು ಸಿನಿಮಾ ರಂಗದಲ್ಲಿ ಹೀರೋ ಆಗಬೇಕು ಎಂದು ಆಸೆ ಪಟ್ಟರೆ ಅದಕ್ಕಾಗಿ ಅವನು ಆರಂಭಿಕ ಹಂತದಿಂದ ಬರಬೇಕು. ನನ್ನಂತೆ ಎಲ್ಲ ಕಷ್ಟಗಳನ್ನು ನೋಡಿಕೊಂಡು ಬೆಳೆಯಲಿ ಎಂದು ಹೇಳಿದ್ದಾರೆ. ದರ್ಶನ್ ಅವರ ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಅಂದು ಆಟೋದಲ್ಲಿ ಆಶ್ವಿನಿ ಜೊತೆ ಕುಳಿತುಕೊಂಡು ಆರಾಮಾಗಿ ಸುತ್ತಾಡಿದ ಅಪ್ಪು ಅವರ ವಿಡಿಯೋ ವೈರಲ್, ಈ ಕ್ಯೂಟ್ ಮೂಮೆಂಟ್ ನೋಡಿ.

ಅಪ್ಪು ಅವರು ಹಲವಾರು ವಿಷಯಗಳಿಂದ ನಮಗೆ ಸ್ಪೂರ್ತಿಯಾಗಿದ್ದಾರೆ ಅಪ್ಪು ಅವರಿಗೆ ಇಷ್ಟೊಂದು ಅಭಿಮಾನಿಗಳು ಇರಲು ಕಾರಣ ಅವರ ಆದರ್ಶ ವ್ಯಕ್ತಿತ್ವ. ಇಂದು ಅವರಿಲ್ಲದರು ಕೂಡ ಅವರು ಬದುಕಿದ ರೀತಿ ಮನುಷ್ಯರಾಗಿ ಬದುಕುವ ಎಲ್ಲರಿಗೂ ಕೂಡ ರೋಲ್ ಮಾಡಲ್ ಎನ್ನಬಹುದು. ಅಪ್ಪು ಅವರು ಒಬ್ಬ ಕನ್ನಡದ ಮೇರು ನಟನ ಪುತ್ರನಾದರು ಕೂಡ, ಹುಟ್ಟುವಾಗದಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟುವಷ್ಟು ಶ್ರೀಮಂತ ಆಗಿದ್ದರು ಕೂಡ ಅವರು ಬೆಳೆಯುತ್ತಿದ್ದಂತೆ ತುಂಬಾ ಪ್ರಬುದ್ಧತೆಯಿಂದ ನಡೆದುಕೊಂಡರು ಹಾಗೂ ತುಂಬಾ ಸರಳ ಜೀವನವನ್ನು ಅನುಸರಿಸಿ ಪ್ರತಿ ಕ್ಷಣಕ್ಕೂ ಕೂಡ ಬೆಲೆಕೊಟ್ಟು ಯಾವಾಗಲೂ ನಗುಮುಖದಿಂದ ಕೂಡಿದ್ದು ಸುತ್ತಲಿದ್ದವರೆಲ್ಲರಿಗೂ ಬೆಟ್ಟದಷ್ಟು ಪ್ರೀತಿ ಕೊಡುತ್ತಿದ್ದರು. ಅವರು ಅವರ ಕುಟುಂಬದ ಮೇಲೆ ಇಟ್ಟಿದ್ದ ಪ್ರೀತಿ ವಿಶ್ವಾಸ ಅವರಿಗೆ ಕೊಡುತ್ತಿದ್ದ ಸಮಯ ಹಾಗೂ ಅಭಿಮಾನಿಗಳ ಜೊತೆ ಅವರು ನಡೆದುಕೊಳ್ಳುತ್ತಿದ್ದ ವರ್ತನೆ ಹಾಗೂ ಕನ್ನಡದ ಜನತೆಗೆ ಒಳಿತು ಮಾಡಲು ಅವರು ಮಾಡಿದ ಸಹಾಯಗಳು ಎಲ್ಲರಿಗೂ ಸ್ಪೂರ್ತಿವಾಗುವಂಥದ್ದು.

ಅಪ್ಪು ಅವರಿಗಿದ್ದ ಶ್ರೀಮಂತಿಕೆಗೆ ಅವರು ದಿನಕ್ಕೆ 100 ಬಟ್ಟೆ ಬೇಕಾದರೂ ಬದಲಾಯಿಸಬಹುದಾಗಿತ್ತು ಆದರೆ ನಾನು ಏನು ಮಾಡುತ್ತೇನೆ ನನ್ನ ಅಭಿಮಾನಿಗಳು ನನ್ನನ್ನು ಗಮನಿಸಿ ಅದನ್ನೇ ಮಾಡಲು ಪ್ರಯತ್ನ ಪಡುತ್ತಾರೆ ಹಾಗಾಗಿ ನಾನು ಅವರಿಗೆ ಒಳ್ಳೆಯ ರೀತಿಯಲ್ಲಿ ಸ್ಪೂರ್ತಿಯಾಗಲು ಇಷ್ಟಪಡುತ್ತೇನೆ ಒಂದು ಒಳ್ಳೆಯ ಬಟ್ಟೆ ಸಾಕು 10 ಕಾರ್ಯಕ್ರಮವಿದ್ದರೂ ಕೂಡ ದಿನಪೂರ್ತಿ ನಾನು ಅದೇ ಕಾಸ್ಟ್ಚೂಮ್ ಅಲ್ಲಿ ಓಡಾಡುತ್ತೇನೆ ಎನ್ನುತ್ತಿದ್ದರು ಅಪ್ಪು. ಹಾಗೂ ಮೂರು ಹೊತ್ತು ಫೈವ್ ಸ್ಟಾರ್ ಹೋಟೆಲ್ನಲ್ಲಿ ತಿನ್ನಬಹುದಾದ ಸವಲತ್ತು ಹೊಂದಿದ್ದ ಅಪ್ಪು ರಸ್ತೆ ಬಳಿ ಕೂತು ಇಡ್ಲಿ ತಿನ್ನುತ್ತಿದ್ದ ಹಾಗೂ ಸಣ್ಣಪುಟ್ಟ ಕ್ಯಾಂಟೀನ್ ನಲ್ಲಿ ಯಾವುದೇ ಇರಿಸು ಮುರಿಸು ಮಾಡದೆ ಹೊಟ್ಟೆ ತುಂಬಾ ಊಟ ಮಾಡಿ ಹೊಗಳುತ್ತಿದ್ದ ಅಪ್ಪುವಿನ ಗುಣಕ್ಕೆ ಅಪ್ಪುವೇ ಸಾಟಿ.

ಹಾಗೆಯೇ ಅಪ್ಪು ಓಡಾಡಬೇಕು ಎಂದರೆ ಅದಕ್ಕೆ ಒಂದು ಪ್ರೈವೇಟ್ ಜೆಟ್ ಬೇಕಾದ್ರೂ ಖರೀದಿ ಮಾಡಬಹುದಾಗಿತ್ತು ಆದರೆ ಅಪ್ಪು ಅವರು ಬದುಕನ್ನು ಬದುಕಲು ಹಾಗೂ ಅದರಲ್ಲಿರುವ ಪ್ರತಿಯೊಂದು ಅನುಭವದ ಆನಂದನವನ್ನು ಸರಳವಾಗಿ ಅನುಭವಿಸಲು ಮತ್ತು ಸಾಮಾನ್ಯ ಮನುಷ್ಯನ ರೀತಿ ಜೀವನ ನಡೆಸಲು ತುಂಬಾ ಆಸೆಪಡುತ್ತಿದ್ದರು. ಇದಕ್ಕಾಗಿ ಅವರು ಒಮ್ಮೆ ಆಟೋ ಹತ್ತಿ ಕೂಡ ಓಡಾಡಿದ್ದರು. ಅಪ್ಪು ಅಂತಹ ಪವರ್ ಸ್ಟಾರ್ ಈ ರೀತಿ ಮಾಡಿದ್ದರೆ ಇಂದು ಎಲ್ಲರಿಗೂ ಆಶ್ಚರ್ಯ ಆಗಬಹುದು ಆದರೆ ಇದಕ್ಕೆ ಸಾಕ್ಷಿಯಂತೆ ಇರುವ ವಿಡಿಯೋ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಪ್ಪು ಅವರು ಅಶ್ವಿನಿ ಅವರನ್ನು ಕೂರಿಸಿಕೊಂಡು ಆಟೋದಲ್ಲಿ ಸುತ್ತಾಡುತ್ತಿದ್ದಾರೆ ಹಾಗೂ ಅವರಿಬ್ಬರು ನಗುನಗುತ್ತಾ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇದನ್ನು ಎದುರಿಗಿದ್ದ ವ್ಯಕ್ತಿ ಒಬ್ಬರು ಸೆರೆಹಿಡಿದು ಹಾಕಿರುವ ವಿಡಿಯೋ ರೀತಿ ಇದೆ ಇದು.

ಅವರಿಗಿದ್ದ ಫೇಮ್ ಗೆ ಕರ್ನಾಟಕದಲ್ಲಿ ಎಲ್ಲೇ ಅವರು ಓಡಾಡಿದರು ಈ ರೀತಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ ಯಾಕೆಂದರೆ ಇವರನ್ನು ನೋಡಿದ ತಕ್ಷಣ ಅಭಿಮಾನಿಗಳೆಲ್ಲ ಬಂದು ಪ್ರೀತಿಯಿಂದ ಮುತ್ತಿಗೆ ಹಾಕಿಬಿಡುತ್ತಿದ್ದರು. ಆದರೆ, ಅಪ್ಪು ಅವರು ಪತ್ನಿ ಅಶ್ವಿನಿ ಜೊತೆ ಮುಂಬೈಗೆ ಹೋಗಿದ್ದ ಸಂದರ್ಭ ಒಂದರಲ್ಲಿ ಈ ರೀತಿ ಆಟೋ ಹತ್ತಿ ಮುಂಬೈ ನಗರವನ್ನು ಸುತ್ತಾಡಿ ಪತ್ನಿಯ ಜೊತೆ ಸಂತೋಷದಿಂದ ಕಾಲ ಕಳೆದಿದ್ದಾರೆ. ಅಪ್ಪು ಅವರ ವ್ಯಕ್ತಿತ್ವದಲ್ಲಿ ಅವರನ್ನು ಮೆಚ್ಚುವ ಇನ್ನೊಂದು ಅಂಶ ಎಂದರೆ ಅವರು ಅವರ ಹೆಂಡತಿ ಹಾಗೂ ಮಕ್ಕಳಿಗಾಗಿ ಕೊಡುತ್ತಿದ್ದ ಸಮಯ ಹಾಗು ಪ್ರೀತಿ. ಈ ರೀತಿಯ ಒಂದು ಸಂಸ್ಕೃತಿಯನ್ನು ರಾಜ್ ಕುಟುಂಬವನ್ನು ನೋಡಿ ಈ ಕಾಲದ ಎಲ್ಲಾ ನಟರು ಕೂಡ ಕಲಿಯಬೇಕು. ಅಪ್ಪು ಅವರ ಈ ಸರಳತೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿ. ಅಪ್ಪು ಅವರ ಈ ವಿಡಿಯೋ ಇಷ್ಟ ಆಗಿದ್ರೆ ಹೆಚ್ಚು ಶೇರ್ & ಲೈಕ್ ಮಾಡಿ.

ಸಾಯಿ ಪಲ್ಲವಿ ಅವರಿಗೆ ಕನ್ನಡದಲ್ಲಿ ಮೊದಲು ಪರಿಚಯವಾದ ನಟ ಅಪ್ಪು ಅಂತೆ.

ಅಪ್ಪು ಈ ಹೆಸರು ಕೇಳಿದರೆ ಸಾಕು ಎಲ್ಲರ ಮನಸ್ಸು ಹಾಗೂ ಸಮಯ ಸ್ತಬ್ಧವಾಗಿ ಬಿಡುತ್ತದೆ. ಅಪ್ಪು ಎನ್ನುವ ಆಕಾಶದ ಎತ್ತರದ ವ್ಯಕ್ತಿತ್ವಕ್ಕೆ ಗೌರವ ಸಂಧಿಸಲು ಕಣ್ಣಂಚಿನಿಂದ ನೀರು ಸದ್ದಿಲ್ಲದೆ ಹರಿಯುತ್ತಾ ಬರುತ್ತದೆ. ಅಪ್ಪು ಎನ್ನುವ ಇಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡ ದುಃಖ ಎಂದೆಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಕಳೆಯುವುದಿಲ್ಲ. ಅಪ್ಪು ಅವರು ಒಬ್ಬ ನಟ ಎನ್ನುವುದು ಇದಕ್ಕೆಲ್ಲ ಕಾರಣ ಅಲ್ಲ ಅದಕ್ಕೆಲ್ಲಕ್ಕಿಂತ ಮಿಗಿಲಾಗಿ ಅವರು ಮಾಡುತ್ತಿದ್ದ ಸಮಾಜ ಸೇವೆ ಮತ್ತು ಅವರ ಗುಣ ವ್ಯಕ್ತಿತ್ವಗಳು ಇಂದು ನಾವು ಅವರನ್ನು ಕಳೆದುಕೊಂಡು ದುಃಖಿಸಲು ಕಾರಣವಾಗಿವೆ. ತಾವು ಇಲ್ಲದಿದ್ದರೂ ಕೂಡ ತಮ್ಮಂತೆ ಬದುಕಲು ಲಕ್ಷಾಂತರ ಜನತೆಗೆ ಸ್ಪೂರ್ತಿ ಆಗಿ ಹೋದ ಅಪ್ಪು ಅವರ ಬದುಕು ನಿಜಕ್ಕೂ ಆದರ್ಶಮಯ. ಈಗಾಗಲೇ ಸಾವಿರಾರು ಉದಾಹರಣೆಗಳು ಕೇಳಿದ್ದೇವೆ ಅಂತದೇ ಮತ್ತೊಂದು ಸನ್ನಿವೇಶ ಇಲ್ಲಿದೆ ನೋಡಿ.

ಗಾರ್ಗಿ ಸಿನಿಮಾದ ಸಂದರ್ಶನಕ್ಕೆ ಬಂದಿದ್ದ ಸಾಯಿ ಪಲ್ಲವಿ ಅವರು ಮಾಧ್ಯಮ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಅವರೊಂದು ಪ್ರಶ್ನೆಯನ್ನು ಕೇಳಿದರು. ಸಾಯಿ ಪಲ್ಲವಿ ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ ಮೊದಲು ಪರಿಚಯವಾಗಿದ್ದು ಯಾರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಾಯಿ ಪಲ್ಲವಿ ಅವರು ಅಪ್ಪು ಅವರ ಹೆಸರನ್ನು ಹೇಳಿದ್ದಾರೆ, ಮತ್ತು ಆ ಸನ್ನಿವೇಶವನ್ನು ಕೂಡ ನೆನೆಸಿಕೊಂಡಿದ್ದಾರೆ. ನಾನು ನನ್ನ ಮೊದಲ ಸಿನಿಮಾವಾದ ಪ್ರೇಮಂ ಚಿತ್ರದ ಕಡೆಯಿಂದ ಫಿಲಂ ಫೇರ್ ಅವಾರ್ಡ್ ಫಂಕ್ಷನ್ ನಲ್ಲಿ ಭಾಗಿಯಾಗಿದ್ದೆ ನಾನು ನನ್ನ ಪ್ರಶಸ್ತಿಯನ್ನು ಸ್ವೀಕರಿಸಿ ಹೋಗುತ್ತಿದ್ದೆ ಆಗ ನನ್ನನ್ನು ನೋಡಿ ತಡೆದು ಮಾತಾಡಿಸಿದ ಅಪ್ಪು ಅವರು ಈ ಸಿನಿಮಾದಲ್ಲಿ ನಿಮ್ಮ ಅಭಿನಯ ತುಂಬಾ ಚೆನ್ನಾಗಿತ್ತು ಎಂದು ನನ್ನ ಅಭಿನಯವನ್ನು ಮೆಚ್ಚಿ ಮನಸಾರೆ ಹೊಗಳಿದರು.

 

ಆಗ ಅವರು ಒಬ್ಬ ಸೂಪರ್ ಸ್ಟಾರ್, ಕನ್ನಡದ ಸ್ಟಾರ್ ನಟ ಆದರೂ ಕೂಡ ನನ್ನ ಮೊದಲ ಪ್ರಯತ್ನವನ್ನೇ ಆ ಸಮಯದಲ್ಲಿ ನಾನು ಏನು ಕೂಡ ಆಗಿರಲಿಲ್ಲ ಅಂತಹ ನನ್ನ ಪ್ರತಿಭೆಯನ್ನೇ ಅವರು ಹೊಗಳಿದರು ಎಂದರೆ ನಿಜಕ್ಕೂ ನಾನು ಅದೃಷ್ಟವಂತೆ. ನಾನು ಮತ್ತೆ ಅವರನ್ನು ಭೇಟಿಯಾಗಿ ಅವರ ಮಾತುಗಳಿಂದ ನಾನು ಎಷ್ಟು ಸ್ಪೂರ್ತಿ ತೆಗೆದುಕೊಂಡೆ ಎನ್ನುವುದನ್ನು ಅವರಿಗೆ ವಿವರಿಸಬೇಕು ಎಂದಿದ್ದೆ. ಆದರೆ ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ. ಅವರು ಈಗ ಇಲ್ಲ ಎನ್ನುವ ದುಃಖ ನನಗೆ ತುಂಬಾ ನೋವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಹೀಗೆ ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಮೊದಲು ಮಾತನಾಡಿಸಿದ್ದು ಅಪ್ಪು ಅವರೇ ನನಗೆ ಮೊದಲ ಪರಿಚಯ ಆಗಿದ್ದು ಕೂಡ ಅವರೇ ಆದರೆ ಈಗ ಸುಮಾರು ಜನ ನನಗೆ ಕನ್ನಡದಲ್ಲಿ ಗೊತ್ತಿದ್ದಾರೆ ಎಂದು ಹೇಳಿದ್ದಾರೆ.

ಕನ್ನಡದಲ್ಲಿ ಗಾರ್ಗಿ ಸಿನಿಮಾ ಮಿಂಚಲು ತಯಾರಾಗಿದ್ದು ಈ ಸಿನಿಮಾದ ಮೂಲಕ ಸಾಯಿ ಪಲ್ಲವಿ ಅವರು ಕನ್ನಡದ ಪರದೆಗಳ ಮೇಲು ಕೂಡ ಮಿಂಚಲಿದ್ದಾರೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಅವರು ಅವರ ಪರಮಂವ ಸ್ಟುಡಿಯೋಸ್ ಇಂದ ಈ ಸಿನಿಮಾವನ್ನು ಅರ್ಪಣೆ ಮಾಡಲು ಒಪ್ಪಿಕೊಂಡಿದ್ದಾರೆ. ಹಾಗೂ ಗಾರ್ಗಿ ಅನ್ನುವುದು ಒಂದು ನೈಜ ಕತೆ ಆಧಾರಿತ ಸಿನಿಮಾ ವಾಗಿದ್ದು ಈ ಸಿನಿಮಾವನ್ನು ಅಷ್ಟೇ ನೈಜವಾಗಿ ಸಾಯಿ ಪಲ್ಲವಿ ಅವರು ಕೂಡ ಅಭಿನಯಿಸಿ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಧೈರ್ಯ ಸಾಹಸ ಹಾಗೂ ಅವರ ಕಷ್ಟ ಸುಖಗಳು ಎಲ್ಲಾ ಮಹಿಳೆಯರಿಗೆ ಸ್ಪೂರ್ತಿ ಆಗುವಂತದ್ದು ಹಾಗಾಗಿ ಈ ಸಿನಿಮಾವನ್ನು ಕನ್ನಡದ ಜನರಿಗೂ ತಲುಪಿಸಲು ನಾನು ಒಪ್ಪಿಕೊಂಡಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.

ಹೊಸ ಮನೆ ಕಟ್ಟುವ ಸಂಭ್ರಮದಲ್ಲಿದ್ದರೆ ಅನುಶ್ರೀ ಎಷ್ಟು ಕೋಟಿ ವೆಚ್ಚದಲ್ಲಿ ಈ ಮನೆ ನಿರ್ಮಾಣವಾಗಲಿದೆ ಗೊತ್ತ.?

ಆಂಕರ್ ಅನುಶ್ರೀ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಪಟ ಪಟ ಎಂದು ಹರುಳು ಉರಿದಂತೆ ಕನ್ನಡ ಮಾತನಾಡುವ ಯಾವುದೇ ಕಾರ್ಯಕ್ರಮ ಆದರೂ ಕೂಡ ತನ್ನ ವಾಕ್ಚಾತುರ್ಯದಿಂದ ಎಲ್ಲವನ್ನು ನಿಭಾಯಿಸುವ ಕಾರ್ಯಕ್ರಮದ ಪೂರ್ತಿ ನಗುಮುಖದಿಂದ ಕೂಡಿದ್ದು ಎಲ್ಲರನ್ನು ನಗಿಸುತ್ತ ಚಟುವಟಿಕೆಯಿಂದ ನಡೆಸಿಕೊಡುವ, ಆಂಕರ್ ಎಂದರೆ ಹೀಗಿರಬೇಕು ಎಂದು ಎಲ್ಲರಿಂದ ಶಭಾಷ್ ಗಿರಿ ಗಿಟ್ಟಿಸಿಕೊಳ್ಳುವ ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳ ಬೇಡಿಕೆ ಇರುವ ಆಂಕರ್ ಆಗಿದ್ದಾರೆ ಇವರು. ಬಹಳ ಕಷ್ಟ ಜೀವನವನ್ನು ಕಂಡಿರುವ ಇವರು ಬಾಲ್ಯದಿಂದಲೇ ಹಲವಾರು ಏರುಪೇರುಗಳನ್ನು ನೋಡಿಕೊಂಡು ಬೆಳೆದಿದ್ದಾರೆ. ಚಿಕ್ಕ ವಯಸ್ಸಿಗೆ ತಂದೆಯಿಂದ ಬೇರ್ಪಟ್ಟ ಅನುಶ್ರೀ ಅವರು ಒಂದು ಮಟ್ಟದಲ್ಲಿ ಆಗಿನಿಂದಲೂ ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ ಎನ್ನಬಹುದು. ತನಗೆ ಸಮಯ ಸಿಕ್ಕಾಗಲೆಲ್ಲಾ ಯಾವುದಾದರು ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡು ಅಮ್ಮನಿಗೆ ಮನೆ ನಿರ್ವಹಿಸಲು ಸಹಾಯ ಮಾಡುತ್ತಿದ್ದ ಅನುಶ್ರೀ ಅವರು ಜೀವನ ಸಾಗಿಸಲು ಹಲವಾರು ವೃತ್ತಿಗಳನ್ನು ಮಾಡಿದ್ದಾರೆ.

ಆದರೆ ತಾನೊಬ್ಬ ನಿರೂಪಕಿ ಆಗಬೇಕು ಎನ್ನುವುದು ಅವರ ಮಹಾದಾಸೆ ಆಗಿತ್ತು. ನಂತರ ಮಂಗಳೂರಿನ ಖಾಸಗಿ ಚಾನೆಲ್ ಒಂದು ಸೇರಿಕೊಂಡ ಅನುಶ್ರೀ ಅವರು ಅಂದಿನಿಂದ ನಿರೂಪಕಿಯಾಗಿ ಕೆಲಸ ಮಾಡಲು ಶುರು ಮಾಡಿದರು. ನಂತರ ನಡೆದದ್ದೆಲ್ಲ ಇತಿಹಾಸವೇ ಆಯಿತು. ಬಳಿಕ ಕಸ್ತೂರಿ ವಾಹಿನಿಯಲ್ಲಿ ಇವರು ಆಂಕರ್ ಆಗಲು ಸೆಲೆಕ್ಟ್ ಆದರೂ ಅದಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಇವರು ಈ ಟಿವಿಯ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡು ಕಾರ್ಯಕ್ರಮದ ಮೂಲಕ ಎಲ್ಲರ ಮನೆ ಮಾತಾದರು. ಅಲ್ಲದೆ ಅದೇ ಸಮಯಕ್ಕೆ ಇವರಿಗೆ ಬಿಗ್ ಬಾಸ್ ಸೀಸನ್ 1 ಅಲ್ಲಿ ಕಂಟೆಸ್ಟಂಟಾಗಿ ಭಾಗವಹಿಸುವ ಅದೃಷ್ಟ ಒಲಿಯಿತು. ಬಿಗ್ ಬಾಸ್ ಮನೆಯೊಳಗೆ ಇದ್ದಾಗಲೇ ಸಾಕಷ್ಟು ಅಭಿಮಾನಿಗಳ ಮನ ಗೆದ್ದ ಇವರು ನಂತರ ಹೊಸ ಹೊಸ ಪ್ರಾಜೆಕ್ಟ್ ಮೂಲಕ ಜನಗಳ ಮುಂದೆ ಬಂದರು. ಜನತೆ ಇವರ ಎಲ್ಲಾ ಕಾರ್ಯಕ್ರಮಗಳನ್ನು ಇವರ ನಿರೂಪಣೆಗಾಗಿ ನೋಡುತ್ತಿದ್ದರು ಎನ್ನಬಹುದು.

ನಂತರ ಜೀ ಕನ್ನಡ ವಾಹಿನಿಯ ಸರಿಗಮಪ ಎನ್ನುವ ಕಾರ್ಯಕ್ರಮವು ಇವರಿಗೆ ದೊಡ್ಡ ಖ್ಯಾತಿಯನ್ನು ತಂದುಕೊಟ್ಟಿತ್ತು. ಈವರೆಗೂ ಹಲವಾರು ಎಪಿಸೋಡಿಗಳು ಹತ್ತಿರ ಇಪ್ಪತ್ತು ಸೀಸನ್ ಗಳು ನಡೆಯುತ್ತಿದ್ದರು ಕೂಡ ಆಂಕರ್ ಅನುಶ್ರೀ ಅವರೇ ಈಗಲೂ ಅದಕ್ಕೆ ನಿರೂಪಕಿಯಾಗಿದ್ದಾರೆ. ಜೀ ಕನ್ನಡ ಬಹುತೇಕ ಎಲ್ಲಾ ಕಾರ್ಯಕ್ರಮಗಳನ್ನು ಕೂಡ ಇವರೇ ನಿರೂಪಕಿಯಾಗಿ ನಡೆಸಿಕೊಡುತ್ತಾರೆ. ಮತ್ತು ತಮ್ಮದೇ ಆದ ಯುಟ್ಯೂಬ್ ಚಾನೆಲ್ ಒಂದನ್ನು ಕೂಡ ಓಪನ್ ಮಾಡಿರುವ ಅನುಶ್ರೀ ಅವರು ಅಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ಆ ಕಾರ್ಯಕ್ರಮಗಳಿಗೆ ಸೆಲೆಬ್ರೆಟಿಗಳನ್ನು ಕರೆತಂದು ಮಾತನಾಡಿಸಿ ಆ ಮೂಲಕ ಕೂಡ ಫೇಮಸ್ ಆಗುತ್ತಿದ್ದಾರೆ. ಈಗಾಗಲೇ ಅವರ ಯೂಟ್ಯೂಬ್ ಚಾನೆಲ್ ಗೆ ಲಕ್ಷಾಂತರ ಮಂದಿ ಸಬ್ಸ್ಕ್ರೈಬ್ ಕೂಡ ಆಗಿದ್ದಾರೆ. ಈಗ ಅವರು ಅವರ ಬದುಕಿನ ಘಟ್ಟದ ಮತ್ತೊಂದು ಹೆಜ್ಜೆ ಇಡುತ್ತಿದ್ದಾರೆ.

ಬೆಂಗಳೂರಿಗೆ ಬಂದು ಇಷ್ಟು ವರ್ಷವಾದರೂ ಕೂಡ ಬಾಡಿಗೆ ಮನೆಯಲ್ಲೇ ವಾಸವಾಗಿರುವ ಇವರು ಈಗ ಸ್ವಂತ ಮನೆ ಕಟ್ಟಿಕೊಳ್ಳುವ ಮನಸ್ಸು ಮಾಡಿದ್ದಾರೆ. ಇದಕ್ಕೆ ಜೆಪಿ ನಗರ ಸಮೀಪ ಸೈಟ್ ಖರೀದಿಸಿ ಅಮ್ಮ ಹಾಗೂ ತಮ್ಮನ ಜೊತೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಮಾಹಿತಿಗಳ ಪ್ರಕಾರ ಅನುಶ್ರೀ ಅವರು ತುಂಬಾ ನೂತನ ವಿನ್ಯಾಸದಲ್ಲಿ ಮನೆಯನ್ನು ಕಟ್ಟಿಸಿಕೊಳ್ಳುವ ಆಸೆ ಹೊಂದಿದ್ದು ಇದಕ್ಕಾಗಿ 8 ಕೋಟಿ ವೆಚ್ಚದಲ್ಲಿ ಆ ಮನೆಯನ್ನು ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಾರಂತೆ. ಅನುಶ್ರೀ ಅವರ ಈ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ

ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿ ನವೀನ್ ಸಜ್ಜು, ಕನಸಿನ ಮನೆಗೆ ನವೀನ್ ಸಜ್ಜು ಇಟ್ಟಿರುವ ಹೆಸರೇನು ಗೊತ್ತಾ.?

ನವೀನ್ ಸಜ್ಜು ಅವರು ಸದ್ಯಕ್ಕೆ ಕನ್ನಡದ ಹೆಸರಾಂತ ಗಾಯಕ. ಜಾನಪದ ಹಾಡುಗಾರಿಕೆ ಮೂಲಕ ಖ್ಯಾತಿಗಳಿಸಿದ ನವೀನ್ ಸಜ್ಜು ಅವರು ಅವರ ಅದ್ಭುತವಾದ ಕಂಚಿನ ಕಂಠದಿಂದ ಕನ್ನಡದಲ್ಲಿ ಬಹು ಬೇಡಿಕೆಯ ಗಾಯಕ ಆಗಿದ್ದಾರೆ. ತುಂಬಾ ಡೀಪ್ ಬೇಸ್ ವಾಯ್ಸ್ ಹೊಂದಿರುವ ಇವರ ಕಂಠವು ಅಶ್ವತ್ ಅವರ ಕಂಠವನ್ನೇ ಹೋಲುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಈಗಾಗಲೇ ಕನ್ನಡದಲ್ಲಿ ಹಲವಾರು ಹಾಡುಗಳನ್ನು ಹಾಡಿರುವ ನವೀನ್ ಸಜ್ಜು ಅವರು ಸಿನಿಮಾಗಳಲ್ಲಿ ಹಾಡಲು ಅವಕಾಶ ಪಡೆದುಕೊಂಡ ಕಥೆಯೇ ಒಂದು ರೋಚಕ. ಪೂರ್ಣ ಅವರ ಗರಡಿಯಲ್ಲಿ ಪಳಗಿದ ಈ ಪ್ರತಿಭೆ ಮೊದಲಿಗೆ ಲೂಸಿಯ ಎನ್ನುವ ಸಿನಿಮಾದಲ್ಲಿ ಹಾಡಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದರು. ಲೂಸಿಯ ಸಿನಿಮಾದ ಸಕ್ಸಸ್ಸಿನ ನಂತರ ನಂತರ ನಡೆದದ್ದೆಲ್ಲ ಇತಿಹಾಸವೇ ಆಯಿತು ಎನ್ನಬಹುದು. ಈಗ ಕನ್ನಡ ಸೊಡಗಿನ ಹೆಮ್ಮೆಯ ಗಾಯಕ ನವೀನ್ ಸಜ್ಜು ಅವರು.

ಲೂಸಿಯಾ ಸಿನಿಮಾದ ಬಹುತೇಕ ಹಾಡುಗಳನ್ನು ನವೀನ್ ಸಜ್ಜು ಅವರೇ ಹಾಡಿದ್ದಾರೆ ಹಾಗೂ ಈ ಸಿನಿಮಾದ ಹಾಡುಗಳ ಗಾಯನಕ್ಕೆ ಹಲವಾರು ಪ್ರಶಸ್ತಿಗಳು ಕೂಡ ಇವರಿಗೆ ಸಂದಿವೆ. ಆದರೆ ಈ ಸಿನಿಮಾದಲ್ಲಿ ಇವರನ್ನು ಹಾಡಿಸಲು ಪೂರ್ಣ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನವೀನ್ ಸಜ್ಜು ಅವರು ಹಳ್ಳಿಯ ಪ್ರತಿಭೆ ಗ್ರಾಮೀಣ ಭಾಷಾ ಜ್ಞಾನ ಮಾತ್ರ ಅವರಿಗೆ ಇತ್ತು. ಸ್ಪಷ್ಟ ಕನ್ನಡ ಉಚ್ಚಾರಣೆಗೆ ತುಂಬಾ ಕಷ್ಟಪಡುತ್ತಿದ್ದರು ಆರ್ಕೆಸ್ಟ್ರಾ ಒಂದರಲ್ಲಿ ಇವರು ಹಾಡುವುದನ್ನು ಕೇಳಿ ಇವರ ಕಂಠಕ್ಕೆ ಮಾರುಹೋದ ಪೂರ್ಣ ಅವರು ಇವರನ್ನು ಕರೆತಂದು ತಮ್ಮ ಮನೆಯಲ್ಲಿ ಇಟ್ಟುಕೊಂಡು ಪ್ರತಿನಿತ್ಯ ಕೂಡ ಕನ್ನಡದ ಕಠಿಣ ಪದಗಳನ್ನು ಬರೆದು ಅದನ್ನು ಓದಲು ಹೇಳುತ್ತಿದ್ದರಂತೆ. ಹಾಗೂ ಹಲವು ದಿನಗಳ ವರೆಗೆ ಕನ್ನಡ ದಿನಪತ್ರಿಕೆಗಳನ್ನು ಓದಿಸಿ ನಂತರ ಅವರು ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಅರಿತ ಮೇಲೆ ಇವರಿಂದ ಲೂಸಿಯ ಸಿನಿಮಾದ ಹಾಡುಗಳನ್ನು ಪ್ರಾಕ್ಟೀಸ್ ಮಾಡಿಸಿ ನಂತರ ಸಿನಿಮಾಗಾಗಿ ಹಾಡಿಸಲಾಯಿತಂತೆ.

ಇಂದು ಈ ಶ್ರಮಕ್ಕೆಲ್ಲಾ ಫಲಸಂದಿದೆ ಎನ್ನಬಹುದು. ಲೂಸಿಯಾ ಸಿನಿಮಾದ ಹಾಡುಗಳು ಸಿನಿಮಾಕ್ಕೆ ಹತ್ತು ವರ್ಷಗಳೇ ಕಳೆದಿದ್ದರೂ ಕೂಡ ಈಗಲೂ ಈ ಹಾಡುಗಳು ಎವರ್ಗ್ರೀನ್ ಹಾಡುಗಳಾಗಿ ಕೇಳುಗರಿಗೆ ಮುದ ನೀಡುತ್ತವೆ . ಮತ್ತೊಂದು ಹೆಮ್ಮೆಯ ವಿಚಾರ ಎಂದರೆ ಪೂರ್ಣ ಅವರ ಆ ಕಠಿಣ ಪರಿಶ್ರಮದಿಂದ ಇಂದು ಕರ್ನಾಟಕಕ್ಕೆ ಮತ್ತೊಬ್ಬ ಅಶ್ವತ್ ಅವರು ಸಿಕ್ಕ ಸಮಾಧಾನ ಇದೆ. ಇದಾದ ಬಳಿಕ ಕನ್ನಡಿಗರು ಅವರ ಕಂಠವನ್ನು ಮಾತ್ರ ಕೇಳುತ್ತಿದ್ದರು. ಆದರೆ ನವೀನ್ ಸಜ್ಜು ಎಂದರೆ ಏನು ಅವರ ವ್ಯಕ್ತಿತ್ವ ಏನು ಎನ್ನುವುದನ್ನು ಬಿಗ್ ಬಾಸ್ ಸೀಸನ್ 6ರಲ್ಲಿ ತಿಳಿದುಕೊಂಡರು. ಬಿಗ್ ಬಾಸ್ ಸೀಸನ್ ಆರರಲ್ಲಿ ರನ್ನರ್ ಅಪ್ ಆಗಿ ನವೀನ್ ಸಜ್ಜು ಹೊರಹೊಮ್ಮಿದರು ಕೂಡ ಮನೆಯಲ್ಲಿ ಇದ್ದಷ್ಟು ದಿನ ಎಲ್ಲರಿಗೂ ತುಂಬಾ ಇಷ್ಟವಾಗಿದ್ದರು. ಇದೀಗ ಇವರು ಹೊಸ ಮನೆ ಖರೀದಿಸಿದ ಸಂತಸದಲ್ಲಿದ್ದಾರೆ.

ಮೂಲತಃ ಮೈಸೂರಿನವರೇ ಆದ ಇವರು ಮೈಸೂರಿನಲ್ಲಿ ಮನೆಯೊಂದನ್ನು ಖರೀದಿಸಿ ಅದಕ್ಕೆ ಪ್ರೀತಿಯಿಂದ ಮಾನಸು ಎಂದು ಹೆಸರಿಟ್ಟಿದ್ದಾರೆ. ಈ ಹೆಸರನ್ನು ಇವರೇ ಸೆಲೆಕ್ಟ್ ಮಾಡಿದ್ದಂತೆ ಕಾರಣ ಮಾ ಎಂದರೆ ಇವರ ತಂದೆ ಹೆಸರು ಮಾದೇಗೌಡ ನ ಎಂದರೆ ನವೀನ್ ಸು ಎಂದರೆ ಸುಮಿತ್ರಾ ಇದು ಅವರ ತಾಯಿಯ ಹೆಸರು. ಹೀಗೆ ಮೂರು ಜನರ ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ ಮಾನಸು ಎಂಬ ಹೆಸರು ಇಟ್ಟಿದ್ದಾರೆ. ಮತ್ತು ಇವರ ಮನೆಯ ಗೃಹಪ್ರವೇಶದಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ ಹಾಗೂ ಬಿಗ್ ಬಾಸ್ ಮನೆಯಲ್ಲಿ ಇವರಿಗೆ ಸ್ನೇಹಿತೆಯಾದ ಅಕ್ಷತಾ ಪಾಂಡವಪುರ ಕೂಡ ಈ ಕಾರ್ಯಕ್ರಮಕ್ಕೆ ಹೋಗಿ ಶುಭ ಹಾರೈಸಿದ್ದಾರೆ.

ಮತ್ತೆ ಅಶ್ವಿನಿ ಅವರ ಮುಖದಲ್ಲಿ ಮೂಡಿದ ಮಂದಹಾಸ, ಅಪ್ಪು ಅಗಲಿದ 8 ತಿಂಗಳ ಬಳಿಕ ನಗು ಮುಖದಲ್ಲಿ ಕಾಣಿಸಿಕೊಂಡ ಅಶ್ವಿನಿ.

ಅಕ್ಟೋಬರ್ 29, 2021 ಕರ್ನಾಟಕದ ಕಣ್ಮಣಿಯೊಂದು ಕಳೆದು ಹೋದ ದಿನ. ಕನ್ನಡ ಚಲನಚಿತ್ರರಂಗದ ಪವರ್ ಸ್ಟಾರ್, ದೊಡ್ಮನೆಯ ರಾಜಕುಮಾರ, ಅಭಿಮಾನಿಗಳ ಪಾಲಿನ ದೇವರು, ರಾಜ್ ಕುಟುಂಬದ ಕೀರ್ತಿ ಕಲಶ ಎಲ್ಲಕ್ಕಿಂತ ಹೆಚ್ಚಾಗಿ ನಗುವಿನ ಒಡೆಯ ಅಂದು ಹೃದಯ ಬಡಿತ ನಿಲ್ಲಿಸಿದ ದಿನ. ಮಕ್ಕಳ ಪ್ರೀತಿಯ ಅಪ್ಪು, ದೊಡ್ಡವರ ಪಾಲಿನ ಪುನೀತ್, ಯೂತ್‌ಗಳ ಸ್ಟೈಲ್ ಐಕಾನ್ ರಾಜರತ್ನ ಅಂದು ಮಣ್ಣಲ್ಲಿ ಮಣ್ಣಾಗಿ ಹೋದರು. ಇದುವರೆಗೂ ಕಾಣಿಸಿಕೊಳ್ಳುತ್ತಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕೂಡ ನಗುಮುಖದೊಂದಿಗೆ ಎಲ್ಲರ ಜೊತೆ ಮಾತನಾಡುತ್ತ ಕಾಲ ಕಳೆಯುತ್ತಿದ್ದ ಈ ಅರಸ ಎಲ್ಲರ ಮನಸ್ಸನ್ನು ದುಃಖದ ಕಡಲಲ್ಲಿ ಮುಳುಗಿಸಿ ದೇವರ ಕೈ ಹಿಡಿದು ಹೋದರು. ಅಂದಿನಿಂದ ಇಂದಿಗೂ ಕೂಡ ಕರ್ನಾಟಕದ ಪಾಲಿಗೆ ಬೆಳಕೊಂದು ಆರಿದ ಭಾವ. ಅಪ್ಪು ಅವರು ಇಲ್ಲದೆ ಎಂಟು ತಿಂಗಳುಗಳು ಕಳೆದರೂ ಕೂಡ ಆ ನೋವು ಇನ್ನು ಕಡಿಮೆಯಾಗಿಲ್ಲ.

ಅಭಿಮಾನಿಗಳ ದುಃಖವಂತೂ ಹೇಳತೀರದು. ಅವರ ಸಾವಿನ ಬಳಿಕ ಪ್ರತಿದಿನವೂ ಕೂಡ ಅಪ್ಪು ಅವರನ್ನು ನೆನೆಯದ ಜೀವ ಈ ಕರ್ನಾಟಕದಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಈ ಅಭಿಮಾನಕ್ಕೆ ಕಾರಣ ಅಪ್ಪು ಅವರು ಒಂದು ನಟ ಎನ್ನುವುದಕ್ಕಿಂತ ಮಿಗಿಲಾಗಿ ಅಪ್ಪು ಅವರು ಒಬ್ಬ ಸಮಾಜ ಸೇವಕ ಎನ್ನುವುದು. ಸಿನಿಮಾದಿಂದ ಜಾಹೀರಾತುಗಳ ನಟನೆಯಿಂದ ಹಾಡುಗಾರಿಕೆಯಿಂದ ರಿಯಲ್ ಎಸ್ಟೇಟ್ ಮತ್ತು ಸಿನಿಮಾ ನಿರ್ಮಾಣ ಹೋಟೆಲ್ ಮುಂತಾದ ಎಲ್ಲಾ ಬಿಸಿನೆಸ್ ಇಂದ ಅಪ್ಪು ಅವರು ಕೋಟ್ಯಾಂತರ ರೂಗಳನ್ನು ಗಳಿಸುತ್ತಿದ್ದರು. ಆದರೆ ತಾವು ಗಳಿಸಿದ ಎಲ್ಲಾ ಹಣದಿಂದ ಅವರು ಮತ್ತಷ್ಟು ಶ್ರೀಮಂತರಾಗಲು ಯೋಚನೆ ಮಾಡಲಿಲ್ಲ ಬದಲಿಗೆ ಕೆರೆ ನೀರನ್ನು ಕೆರೆಗೆ ಚೆಲ್ಲುವಂತೆ ಅಭಿಮಾನಿಗಳ ಅಭಿಮಾನದಿಂದ ಪಡೆದ ಆ ಹಣದಲ್ಲಿ ಅವರ ಸೇವೆಗಾಗಿಯೇ ಒಂದಿಷ್ಟು ಮೊತ್ತವನ್ನು ಮೀಸಲಿಟ್ಟರು.

ಅವರು ವೃದ್ಧಾಶ್ರಮ ಅನಾಥಾಶ್ರಮ ಗೋಶಾಲೆ ಮತ್ತು ಹೆಣ್ಣು ಮಕ್ಕಳಿಗಾಗಿ ಶಕ್ತಿ ಧಾಮ ಸೇರಿದಂತೆ ಹಲವಾರು ಟ್ರಸ್ಟ್ ಗಳಿಗೆ ಹಣವನ್ನು ದೇಣಿಗೆ ರೂಪದಲ್ಲಿ ನೀಡುತ್ತಿದ್ದರು. ಪುನೀತ್ ಅವರು ನೊಂದವರ ಪಾಲಿನ ಕಣ್ಣೀರುವ ಒರೆಸುವ ದೇವರವಾಗಿದ್ದರು. ಹೀಗಾಗಿ ಅವರ ಕಚೇರಿಯ ಬಳಿ ಸಾವಿರದ ಜನರು ಸಹಾಯಕ್ಕಾಗಿ ಬಂದು ನಿಲ್ಲುತ್ತಿದ್ದರು ಆದರೆ ಯಾರೊಬ್ಬರನ್ನೂ ಕೂಡ ಖಾಲಿ ಕೈಯಲ್ಲಿ ಕಳುಹಿಸದ ಈ ಸಾಹುಕಾರ ಪ್ರತಿಯೊಬ್ಬರಿಗೂ ಕೂಡ ತಮ್ಮಿಂದ ಆದಷ್ಟು ಸೇವೆಯನ್ನು ಮಾಡುತ್ತಿದ್ದರು. ಇಷ್ಟೆಲ್ಲಾ ಜನರಿಗಾಗಿ ಮಾಡುತ್ತಿದ್ದ ಇವರನ್ನು ಕಳೆದುಕೊಂಡ ಅಭಿಮಾನಿಗಳ ದುಃಖ ಎಷ್ಟಿರಬಹುದು ಎನ್ನುವುದನ್ನು ಅಂದಾಜಿಸಲು ಕೂಡ ಕಷ್ಟ. ಅವರು ಅಭಿಮಾನಿಗಳ ಪಾಲಿಗೆ ಮಾತ್ರವಲ್ಲದೆ ಕುಟುಂಬಸ್ಥರ ಜೊತೆಗೂ ಅಷ್ಟೇ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿದ್ದರು. ಶಿವಣ್ಣ ರಾಘಣ್ಣ ಮತ್ತು ಸಹೋದರಿಯರು ಅಪ್ಪು ಎಂದರೆ ಪ್ರಾಣ ಬಿಡುವಷ್ಟು ಪ್ರೀತಿಸುತ್ತಿದ್ದರು. ಇನ್ನು ಅಪ್ಪು ಪತ್ನಿ ಅಶ್ವಿನಿ ಇಬ್ಬರು ಹೆಣ್ಣು ಮಕ್ಕಳ ಪಾಲಿಗಂತೂ ಪುನೀತ್ ಅವರೇ ಸರ್ವಸ್ವ ಆಗಿದ್ದರು.

ಈಗ ಅಪ್ಪು ಅವರು ಇಲ್ಲದ ದುಃಖ ಅವರ ಕುಟುಂಬದ ಎಲ್ಲಾ ಸದಸ್ಯರ ಮುಖದಲ್ಲೂ ಕಾಣುತ್ತಿದೆ. ಅದರಲ್ಲೂ ಅಶ್ವಿನಿ ಅವರು ಅಪ್ಪು ಅವರನ್ನು ಕಳೆದುಕೊಂಡ ಬಳಿಕ ಎಲ್ಲಿಯೂ ಕೂಡ ಒಂದು ಮಾತು ಸಹ ಆಡಿಲ್ಲ. ಮೌನವಾಗಿ ಎಲ್ಲ ದುಃಖವನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡು ಪುನೀತ್ ಅವರ ಎಲ್ಲಾ ಕನಸು ಹಾಗೂ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಹಾಕಿಕೊಂಡಿರುವ ಇವರು ಪುನೀತ್ ಅವರ ಕಚೇರಿಯಲ್ಲಿ ಕುಳಿತು ಮುಂದಿನ ಕೆಲಸಗಳ ಕಡೆ ಗಮನ ಕೊಡುತ್ತಿದ್ದಾರೆ. ಆದರೆ ಇತ್ತೀಚಿಗೆ ಅಶ್ವಿನಿ ಅವರ ಮಗುವೊಂದನ್ನು ಎತ್ತಿಕೊಂಡು ಮುದ್ದಿಸುತ್ತಿರುವ ಹಾಗೂ ಅದರಲ್ಲಿ ನಗುಮುಖದಿಂದ ಕಾಣಿಸಿಕೊಂಡಿರುವ ಫೋಟೋ ಒಂದು ವೈರಲ್ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಸಮಾಧಾನ ಕೂಡ ಪಟ್ಟುಕೊಳ್ಳುತ್ತಿದ್ದಾರೆ ಇದು ಅಶ್ವಿನಿ ಅವರ ಆಫೀಸಿನ ಬಳಿ ಸಹಾಯಕ್ಕೆಂದು ಬಂದಿದ್ದ ಒಬ್ಬ ತಾಯಿಯನ್ನು ನೋಡಿ ಅಶ್ವಿನಿ ಅವರು ಆ ಮಗುವನ್ನು ಎತ್ತಿಕೊಂಡು ಮುದ್ದಾಡಿಸುತ್ತಿರುವ ಸಮಯದಲ್ಲಿ ತೆಗೆದ ಫೋಟೋ ಆಗಿದೆ.

50 ವರ್ಷ ದಾಟುತ್ತಿದ್ದರೂ ನಟಿ ಸೀತಾರ ಅವರು ಮದುವೆಯಾಗದಿರಲು ಕಾರಣ ಏನು ಗೊತ್ತಾ.?

ನಟಿ ಸಿತಾರ ಅವರು ಮುದ್ದು ಮುಖದ ಸಹಜ ಸುಂದರಿ. ಅಷ್ಟೇ ಅಲ್ಲದೆ ನಟನ ವಿಷಯದಲ್ಲೂ ಕೂಡ ಅವರದೇ ಆದ ವಿಭಿನ್ನ ಹಾವಾಭಾವದಿಂದ ಈ ನಟಿ ತುಂಬಾ ಪ್ರಖ್ಯಾತಿ ಹೊಂದಿದ್ದರು. 90ರ ದಶಕದಲ್ಲಿ ಕನ್ನಡ ಸೇರಿದಂತೆ ತಮಿಳು ತೆಲುಗು ಎಲ್ಲಾ ಚಿತ್ರರಂಗದಲ್ಲೂ ಕೂಡ ಸ್ಟಾರ್ ನಟಿಯಾಗಿ ಮಿಂಚಿದ್ದ ಸಿತಾರಾ ಅವರು ಹಾಲುಂಡ ತವರು ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸಿದ ಮೊದಲ ನಿಮ್ಮ ಹಾಲುಂಡ ತವರು ಈ ಸಿನಿಮಾ ಅದ್ಭುತವಾಗಿ ಯಶಸ್ಸು ಕಂಡಿತ್ತು. ಇದಾದ ನಂತರ ಸಾಲು ಸಾಲು ಅವಕಾಶಗಳು ಕನ್ನಡದಲ್ಲಿ ಸಿತಾರ ಅವರನ್ನು ಅರಸಿ ಬಂದವು. ನಂತರ ವಿಷ್ಣುವರ್ಧನ್ ಅವರ ಜೊತೆಯಲ್ಲಿ ದೀರ್ಘಸುಮಂಗಲಿ, ಬಂಗಾರದ ಕಳಶ ಮುಂತಾದ ಸಿನಿಮಾಗಳಲ್ಲಿ ಕೂಡ ಜೋಡಿಯಾಗಿ ಕಾಣಿಸಿ ಕೊಂಡರು ಇವರು.

ಇದಲ್ಲದೆ ಕಾವ್ಯ ಗಣೇಶನ ಗಲಾಟೆ ಜೇನುಗೂಡು ಹೆತ್ತವಳ ಕೂಗು ಶ್ರಾವಣ ಸಂಜೆ ಕರುಳಿನ ಕುಡಿ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದರು ಸಿತಾರ ಅವರು. ನಂತರ ವೈಯಕ್ತಿಕ ಬದುಕಿನಲ್ಲಿ ಘಟನೆಗಳಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ಬಹಳ ದಿನಗಳ ನಂತರ ನಾನು ನನ್ನ ಕನಸು ಅಮ್ಮ ಐ ಲವ್ ಯು ಚಕ್ರವ್ಯೂಹ ಇನ್ನು ಮುಂತಾದ ಸಿನಿಮಾಗಳಲ್ಲಿ ಅಮ್ಮನ ಪಾತ್ರದಲ್ಲಿ ಕೂಡ ನಟಿಸಿದರು. ಸಿನಿಮಾಗಳಲ್ಲಿ ಯಾವಾಗಲೂ ಕಣ್ಣೀರಿಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಸಿತಾರ ಅವರ ಬದುಕು ಕೂಡ ಈ ರೀತಿ ದುರಂತದಲ್ಲಿ ಇದೆ ಎನ್ನುವುದು ತುಂಬಾ ಬೇಸರದ ವಿಷಯ. ಮದುವೆ ವಿಚಾರದಲ್ಲಿ ಸೀತಾರ ಅವರು ಒಂದು ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದು ಆ ಒಂದು ಕಾರಣಕ್ಕಾಗಿ ಇನ್ನೂ ಕೂಡ ಮದುವೆಯಾಗದೆ ಹಾಗೆ ಉಳಿದಿದ್ದಾರೆ. ಅಷ್ಟಕ್ಕೂ ಅವರು ತೆಗೆದುಕೊಂಡಿದ್ದ ಆ ನಿರ್ಧಾರ ಹಾಗೂ ಅದರ ಹಿಂದಿನ ಕಾರಣ ಏನು ಎನ್ನುವ ಕುತೂಹಲ ನಿಮ್ಮಲ್ಲಿದ್ದರೆ ಇದನ್ನು ಪೂರ್ತಿಯಾಗಿ ನೋಡಿ.

ನಟಿ ಸಿತಾರ ಅವರು ಸಿನಿಮಾರಂಗದಲ್ಲಿ ಉತ್ತುಂಗದಲ್ಲಿ ಇದ್ದಾಗಲೇ ತಮಿಳು ನಟ ಮುರಳಿ ಅವರ ಜೊತೆ ಸ್ನೇಹ ಸಂಬಂಧ ಇಟ್ಟುಕೊಂಡಿದ್ದರು. ಆದರೆ ನಟ ಮುರಳಿ ಅವರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ಅವರ ಸಾವಿನಿಂದ ಬಹಳವಾಗಿ ಮಾನಸಿಕವಾಗಿ ಕುಗ್ಗಿ ಹೋದ ನಟಿ ಸೀತಾರ ಅವರು ಬದುಕಿನ ಮೇಲೆ ಇದ್ದ ಎಲ್ಲಾ ಹೋಪನ್ನು ಕೂಡ ಕಳೆದು ಕೊಳ್ಳುತ್ತಾರೆ. ಆ ಸಮಯದಲ್ಲಿಯೇ ಅವರು ಚಿತ್ರರಂಗದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ನಂತರ ಹಾಗೆ ಕಾಣೆಯಾಗಿ ಬಿಡುತ್ತಾರೆ. ಇತ್ತೀಚೆಗೆ ಮತ್ತೆ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಂಬ್ಯಾಕ್ ಮಾಡಿರುವ ನಟಿ ಈಗ 50ರ ಹತ್ತಿರದ ವಯಸ್ಸಿನಲ್ಲಿದ್ದಾರೆ. ಆದರೂ ಕೂಡ ಇನ್ನು ಮದುವೆಯಾಗುವ ಯಾವುದೇ ವಿಚಾರ ಕೂಡ ಅವರ ಮನಸ್ಸಿನಲ್ಲಿ ಇಲ್ಲವಂತೆ ಕೊನೆವರೆಗೂ ತಾವು ಹೀಗೆ ಏಕಾಂಗಿಯಾಗಿ ಇರಲು ಸಿತಾರ ಅವರು ನಿರ್ಧಾರ ಮಾಡಿದ್ದಾರಂತೆ.

ಆತ್ಮೀಯರ ಒಂದು ಸಾವು ಮನುಷ್ಯನ ಮನಸ್ಸನ್ನು ಎಷ್ಟು ಮಟ್ಟಕ್ಕೆ ಕುಗ್ಗಿಸಿ ಬಿಡುತ್ತದೆ ಎನ್ನುವುದಕ್ಕೆ ನಟಿ ಸಿತಾರಾ ಅವರ ಈ ಪ್ರಕರಣವೇ ಪ್ರತ್ಯಕ್ಷ ಸಾಕ್ಷಿ ಎನ್ನಬಹುದು. ವೈಯಕ್ತಿಕ ಬದುಕಿನಲ್ಲಿ ಬಹಳ ನೋವು ಕಂಡಿರುವ ಸೀತಾರ ಬದುಕು ಇನ್ನು ಮುಂದೆ ಆದರೂ ಹಸನಾಗಲಿ ಮದುವೆ ವಿಚಾರ ಅಲ್ಲದಿದ್ದರೂ ಕೂಡ ಮತ್ತೆ ಯಾವುದೋ ವಿಚಾರದಿಂದ ಅವರ ಬದುಕಿನಲ್ಲಿ ಸಂತಸ ತುಂಬಲಿ ಎಂದು ಅಭಿಮಾನಿಗಳಾಗಿ ನಾವೆಲ್ಲರೂ ಹಾರೈಸೋಣ. ಸಿನಿ ಜರ್ನಿಯಲ್ಲೂ ಕೂಡ ಇನ್ನಷ್ಟು ಕಾಲ ಅವರು ಎಲ್ಲ ಭಾಷೆಯ ಸಿನಿಮಾಗಳಲ್ಲಿ ರಾರಾಜಿಸುವಂತಾಗಲಿ ಎಂದು ಹರಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿ.

ಹೆರಿಗೆ ವಿಡಿಯೋ ಹಂಚಿಕೊಂಡು ಸಂಜನ ಗರ್ಲಾನಿ, ತಾಯಿಯ ಗರ್ಭದಿಂದ ಹೊರ ಬಂದ ಈ ಮಗುವಿನ ವಿಡಿಯೋ ನೋಡಿ.

ನಟಿ ಸಂಜನಾ ಗರ್ಲಾನಿ ಅವರು ಸಿನಿಮಾಗಿಂತ ಹೆಚ್ಚು ವಿವಾದಗಳಿಂದ ಫೇಮಸ್. ಮೂಲತಃ ಬೆಂಗಳೂರಿನವರೇ ಆದ ಇವರು ಮಾಡೆಲ್ ಆಗಿ ತಮ್ಮ ವೃತ್ತಿ ಜೀವನವನ್ನು ಶುರು ಮಾಡಿದರು. ಮತ್ತು ಕನ್ನಡದಲ್ಲಿ ಗಂಡ ಹೆಂಡತಿ ಎನ್ನುವ ಸಿನಿಮಾದ ಮೂಲಕ ನಟಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದರು. ಆರಂಭದಲ್ಲಿ ಒಳ್ಳೆ ಒಳ್ಳೆ ಪಾತ್ರಗಳು ಹಾಗೂ ಸಿನಿಮಾಗಳಿಗಿಂದ ಇವರಿಗೆ ಅವಕಾಶಗಳು ಬರುತ್ತಿತ್ತು ಈ ಸಂಜೆ, ಆಟೋಗ್ರಾಫ್ ಪ್ಲೀಸ್, ಮೈಲಾರಿ, ರಿಂಗ್ ರೋಡ್ ಶುಭಾ , ಸಾಗರ್, ರಂಗಪ್ಪ ಹೋಗ್ಬಿಟ್ನಾ, ಅಗ್ರಜ, ಟೇಕ್ ಇಟ್ ಈಸಿ, ನರಸಿಂಹ, ರಾಮಲೀಲಾ ದಂಡುಪಾಳ್ಯ 2, ಅರ್ಜುನ್, ಸಂತೆಯಲ್ಲಿ ನಿಂತ ಕಬೀರ, ಮಂಡ್ಯ ಟು ಮುಂಬೈ, ಕ್ಯಾಸೆನೋವ, ಮುಗ್ಗುಡು, ಸರ್ದಾರ್ ಗಬ್ಬರ್ ಸಿಂಗ್, ಸಮರ್ಥುಡು, ಮಹಾನದಿ, ಐ ಆಮ್ ಸಾರಿ ಮತ್ತೆ ಬನ್ನಿ ಪ್ರಿತ್ಸೋಣ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ವಿಭಿನ್ನ ಬಗೆಯ ಪಾತ್ರಗಳಲ್ಲಿ ಸಂಜನಾ ಗರ್ಲಾನಿ ಅವರು ಗುರುತಿಸಿಕೊಂಡಿದ್ದಾರೆ.

ಸಂಜನಾ ಗರ್ಲಾನಿ ಅವರು ಕನ್ನಡದ ಬಿಗ್ ಬಾಸ್ ಸೀಸನ್ ಒಂದರಲ್ಲೂ ಕೂಡ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದರು. ಆಗಿನಿಂದಲೂ ಕೂಡ ಗಲಾಟೆ ಸ್ವಭಾವದಲ್ಲಿ ಗುರುತಿಸಿಕೊಂಡು ಕಿರಿಕಿರಿ ಮಾಡಿಕೊಳ್ಳುತ್ತಿದ್ದ ಸಂಜನಾ ಅವರು ಆಚೆ ಬಂದ ಮೇಲೆ ಅದನ್ನು ವಿಪರೀತ ಮಾಡಿಕೊಂಡರು. ಮೀಟೂ ಆಂದೋಲನ ಕನ್ನಡದಲ್ಲಿ ತಾರಕಕ್ಕೇರಿದ್ದ ಸಮಯದಲ್ಲಿ ಗಂಡ ಹೆಂಡತಿ ಸಿನಿಮಾದ ನಿರ್ದೇಶಕ ರವಿ ಶ್ರೀವತ್ಸ ಅವರ ಮೇಲೆ ಸಿನಿಮಾದಲ್ಲಿ ಕೆಲವು ಸನ್ನಿವೇಶಗಳು ಹಾಗೂ ಹಾಡಿನ ಸಂದರ್ಭದಲ್ಲಿ ತಮಗಾದ ಅನುಭವಗಳ ಬಗ್ಗೆ ಆರೋಪದ ಸುರಿ ಮಳೆಗೈದಿದ್ದರು. ಅವರ ಆರೋಪಕ್ಕೆ ರವಿ ಶ್ರೀವತ್ಸ್ ಅವರು ಕೂಡ ತಕ್ಕದಾದ ತಿರುಗೇಟುಗಳನ್ನು ಕೊಟ್ಟು ಸಂಜನಾ ಅವರ ಆದಾಯದ ಬಗ್ಗೆ ಪ್ರಶ್ನಿಸಿ ಬಗ್ಗೆ ಹಲವಾರು ಆರೋಪಗಳನ್ನು ಹೊರಿಸಿದರು.ಕೆಲವು ದಿನಗಳ ಬಳಿಕ ಮತ್ತೆ ಮಾಧ್ಯಮಗಳಲ್ಲಿ ಸಂಜನಾ ಗಲ್ರಾನಿ ಅವರ ವಿಷಯವು ಡ್ರ-ಗ್ಸ್ ವಿಚಾರಗಳಲ್ಲಿ ಕೇಳಿ ಬಂದಿತ್ತು.

ಈಗಲೂ ಕೂಡ ಇವುಗಳಿಗೆ ಸಂಬಂಧಪಟ್ಟ ಹಲವು ವಿಷಯಗಳ ಮೇಲೆ ಸಂಜನ ಗರ್ಲಾನಿ ಅವರ ಮೇಲೆ ಆರೋಪಗಳಿವೆ. ಅದಕ್ಕಾಗಿ ಅವರು ಜೈ-ಲು ವಾಸದ ಶಿ-ಕ್ಷೆ ಕೂಡ ಅನುಭವಿಸುತ್ತಿದ್ದರು. ಆಚೆ ಬಂದಿರುವ ಸಂಜನ ಗರ್ಲಾನಿ ಅವರು ಎಲ್ಲಾ ವಿಷಯಗಳಿಂದ ಬ್ರೇಕ್ ತೆಗೆದುಕೊಂಡು ತಮ್ಮ ಸಂಸಾರದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಸಂಜನಾ ಗರ್ಲಾನಿ ಇದ್ದಕ್ಕಿದ್ದ ಹಾಗೆ ತಮ್ಮ ಸೀಮಂತದ ಫೋಟೋಶೂಟ್ ಮಾಡಿಸಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದ ಕರ್ನಾಟಕದ ಜನತೆಗೆ ಸಂಜನ ಗರ್ಲಾನಿ ಅವರಿಗೆ ಮದುವೆಯಾಗಿದೆ ಎನ್ನುವ ವಿಷಯ ಆಗಲೇ ತಿಳಿದದ್ದು. ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಂಜನಾ ಗರ್ಲಾನಿ ಅವರು ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಟಿ ಸಂಜನ ಗರ್ಲಾನಿ ಅವರು ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ್ದರು.

ಅವರ ಸಹೋದರಿ ನಿಕ್ಕಿ ಗರ್ಲಾನಿ ಅವರ ವಿವಾಹದ ದಿನವೇ ಸಂಜನಾ ಗರ್ಲಾನಿ ಅವರ ಬದುಕಿನಲ್ಲೂ ಹೊಸ ಸದಸ್ಯನ ಆಗಮನವಾಗಿತ್ತು. ತಮಗಾದ ಸಿಝೇರಿಯನ್ ಡೆಲಿವರಿ ವಿಡಿಯೋವನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ತಮಗೆ ಹೆರಿಗೆ ಮಾಡಿದ ವೈದ್ಯೆ ಹೇಮಮಾಲಿನಿ ಅವರಿಗೂ ಕೂಡ ಧನ್ಯವಾದ ಸಲ್ಲಿಸಿದ್ದಾರೆ. ನಟಿ ಸಂಜನ ಗರ್ಲಾನಿ ಅವರು ತಾವು ಮಾಡಿರುವ ತಪ್ಪುಗಳನ್ನು ತಿದ್ದುಕೊಂಡು ಇನ್ನು ಮುಂದೆ ಆದರೂ ಕುಟುಂಬದ ಜೊತೆ ನೆಮ್ಮದಿಯಿಂದ ಕಾಲ ಕಳೆಯುವಂತಾಗಲಿ ಎಂದು ನಾವೆಲ್ಲರೂ ಹರಸೋಣ. ಈ ವಿಡಿಯೋ ನೋಡಿದರೆ ನಿನಗೆ ಏನಾನಿಸುತ್ತದೆ ಕಾಮೆಂಟ್ ಮುಖಾಂತರ ತಿಳಿಸಿ.