Home Blog Page 341

ದರ್ಶನ್ ಚುನಾವಣಾ ಪ್ರಚಾರಕ್ಕೆ ಹೋದಾಗ ಪಡೆಯುವ ಹಣವೆಷ್ಟು ಗೊತ್ತಾ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕದ ನಂಬರ್ ಒನ್ ಹೀರೋ ಎನ್ನಬಹುದು ಯಾಕೆಂದರೆ ಬೇರೆ ಎಲ್ಲಾ ಕಲಾವಿದರಿಗೆ ಹೋಲಿಸಿದರೆ ದರ್ಶನ್ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ದರ್ಶನ್ ಅವರ ಮೇಲೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇದೆ ಎನ್ನುವುದಕ್ಕೆ ಉತ್ತಮ ಸಾಕ್ಷಿ ಎಂದರೆ ಮಾಧ್ಯಮಗಳು ದರ್ಶನ್ ಅವರ ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡುವುದಿಲ್ಲ ಎಂದು ಹೇಳಿದಾಗ ಬಿಡುಗಡೆಗೆ ಸಿದ್ಧವಾಗಿರುವ ಕ್ರಾಂತಿ ಸಿನಿಮಾದ ಪ್ರಚಾರ ಕೆಲಸವನ್ನು ಅಭಿಮಾನಿಗಳು ತಮ್ಮ ಹಣದಲ್ಲಿ ಖರ್ಚು ಮಾಡಿ ಸಿನಿಮಾಕ್ಕೆ ಪ್ರಚಾರ ನೀಡುತ್ತಿದ್ದಾರೆ ಹಾಗೂ ಈ ಹಠಕ್ಕಾಗಿ ನಮ್ಮ ಬಾಸ್ ಸಿನಿಮಾವನ್ನು ಹಿಂದಿನ ಎಲ್ಲಾ ಸಿನಿಮಾಗಳು ಅಂತ ಹೆಚ್ಚಿನ ಮಟ್ಟದಲ್ಲಿ ಹಿಟ್ಟಾಗುವಂತೆ ಮಾಡುತ್ತೇವೆ ಎಂದು ಚಾಲೆಂಜ್ ಮಾಡಿದ್ದಾರೆ. ಇಂತಹ ಅಭಿಮಾನಿಗಳನ್ನು ಪಡೆದಿರುವ ದಾಸ ನಿಜಕ್ಕೂ ಅದೃಷ್ಟವಂತ ಎನ್ನಬಹುದು. ಅಭಿಮಾನಿಗಳು ಇವರನ್ನು ಇಷ್ಟಪಡಲು ಅಷ್ಟೇ ಕಾರಣ ಕೂಡ ಇದೆ.

ಯಾಕೆಂದರೆ ದರ್ಶನ್ ಅವರು ಎಲ್ಲಾ ಅಭಿಮಾನಿಗಳನ್ನು ಒಂದೇ ಸಮವಾಗಿ ಕಾಣುತ್ತಾರೆ. ದರ್ಶನ್ ಅವರನ್ನು ಬರುವ ಅಭಿಮಾನಿಗಳು ಹಾಗೂ ರಸ್ತೆಯಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಅವರ ಬಳಿ ಬರುವ ಅಭಿಮಾನಿಗಳು ಎಲ್ಲರನ್ನು ಕೂಡ ಅಷ್ಟೇ ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ ಅವರ ಕಷ್ಟ ಸುಖ ವಿಚಾರಿಸುತ್ತಾರೆ ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಅವರು ಈ ಮಟ್ಟಕ್ಕೆ ಬೆಳೆಯಲು ಅವರು ಹಿಂದೆಪಟ್ಟಿರುವ ಶ್ರಮವನ್ನು ಅರಿತಿರುವ ಕರ್ನಾಟಕದ ಜನತೆ ಈಗ ಅವರನ್ನು ಒಬ್ಬ ದೊಡ್ಡ ನಟನನ್ನಾಗಿ ಮೆರೆಸುತ್ತಿದ್ದಾರೆ. ಮತ್ತು ಸಿನಿಮಾ ಅಭಿನಯಕ್ಕಾಗಿ ದರ್ಶನ್ ಅವರು ಕೊಂಟ್ಯಾತರ ರುಪಾಯಿಗಳನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ. ಹಾಗೆಯೇ ರಾಜಕೀಯ ಪ್ರಚಾರಗಳನ್ನು ಕೂಡ ಭಾಗಿಯಾಗುವ ದರ್ಶನ್ ಅವರು ಅದಕ್ಕಾಗಿ ಎಷ್ಟು ಹಣ ಪಡೆಯುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ದರ್ಶನ್ ಅವರು ಯಾವುದೇ ರಾಜಕೀಯ ಪಕ್ಷಗಳ ಬಗ್ಗೆ ಪ್ರಚಾರ ಮಾಡಿದರೂ ಕೂಡ ಆ ಪಕ್ಷಗಳ ಬಾವುಟವನ್ನು ಅವರ ಕೈಯಲ್ಲಿ ಹಿಡಿಯುವುದಿಲ್ಲ ಯಾಕೆಂದರೆ ಅವರು ಯಾವುದೇ ಪಕ್ಷದ ಪರವಾಗಿ ಎಂದಿಗೂ ಪ್ರಚಾರ ಮಾಡುವುದಿಲ್ಲ ಬದಲಾಗಿ ಅವರು ವ್ಯಕ್ತಿಗಳನ್ನು ನೋಡಿ ಪ್ರಚಾರ ಮಾಡುತ್ತಾರೆ. ಹಿಂದೆ ದರ್ಶನ್ ಅವರ ಕುರುಕ್ಷೇತ್ರ ಸಿನಿಮಾದ ನಿರ್ಮಾಪಕರಾಗಿದ್ದ ಮುನಿರತ್ನ ಅವರು ಚುನಾವಣಾ ಕಣಕ್ಕೆ ಇಳಿದಿದ್ದ ಸಮಯದಲ್ಲಿ ಮುನಿರತ್ನ ಅವರ ಪರವಾಗಿ ದರ್ಶನ್ ಅವರು ಪ್ರಚಾರ ಮಾಡಿದ್ದರು ಮತ್ತು ಮಂಡ್ಯದಲ್ಲಿ ತಾರಕಕ್ಕೇರಿದ್ದ ಚುನಾವಣಾ ಸ್ಪರ್ಧೆಯಲ್ಲಿ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರ ಪರವಾಗಿ ದರ್ಶನ್ ಅವರು ಪ್ರಚಾರ ಮಾಡಿದ್ದರು. ಚುನಾವಣಾ ರ್ಯಾಲಿಯಲ್ಲಿ ಭಾಗಿಯಾದಾಗ ಅಥವಾ ಪ್ರಚಾರ ಕಾರ್ಯಕ್ರಮಗಳಿಗೆ ಭಾಗಿಯಾದಾಗ ದರ್ಶನ್ ಅವರು ಯಾವುದೇ ರೀತಿಯ ಹಣವನ್ನು ಅದರ ಪ್ರತಿಯಾಗಿ ಪಡೆಯುವುದಿಲ್ಲವಂತೆ. ಬದಲಾಗಿ ಅವರು ಈ ಕೆಲಸವನ್ನು ಮಾಡುತ್ತಾರೆ.

ಚುನಾವಣೆಯಲ್ಲಿ ಯಾವ ವ್ಯಕ್ತಿ ಪರವಾಗಿ ಪ್ರಚಾರ ಮಾಡುತ್ತಾರೆ ಅವರಿಂದ ಒಂದು ಲೆಟರ್ ಬರೆಸಿಕೊಳ್ಳುತ್ತಾರಂತೆ. ಈ ಮೂಲಕ ದರ್ಶನ್ ಅವರ ಬಳಿ ಸಹಾಯ ಕೇಳಿಸಿಕೊಂಡು ಬರುವ ಬಡ ರೋಗಿಗಳಿಗೆ ಆಸ್ಪತ್ರೆಯಲ್ಲಿ ಈ ಲೆಟರ್ ಕೊಟ್ಟರೆ 30 ರಿಂದ 40 ಸಾವಿರ ರೂಗಳು ಆಸ್ಪತ್ರೆ ವೆಚ್ಛದಲ್ಲಿ ಕಡಿಮೆ ಆಗಲಿದೆಯಂತೆ. ಮತ್ತು ಇದಕ್ಕಿಂತ ಹೆಚ್ಚಿನ ಮೊತ್ತವಾದ ಸಂದರ್ಭದಲ್ಲಿ ದರ್ಶನ್ ಅವರು ಅವರ ಕಡೆಯಿಂದ ಹಣ ಕೊಡುತ್ತಾರಂತೆ ಅದಕ್ಕಾಗಿ ಅವರ ಬಳಿ ಆ ಲೆಟರ್ ಇಟ್ಟುಕೊಳ್ಳುತ್ತಾರಂತೆ. ಸುಮಲತಾ ಅಂಬರೀಶ್ ಅವರ ವಿಚಾರದಲ್ಲಿ ಹೇಳುವುದಾದರೆ ಅಂಬರೀಶ್ ಅವರು ಇದ್ದ ದಿನದಿಂದಲೂ ಕೂಡ ದರ್ಶನ್ ಅವರನ್ನು ತಮ್ಮ ಮಗ ಎಂದು ಹೇಳಿಕೊಳ್ಳುತ್ತಿದ್ದರು. ಅಂಬರೀಶ್ ಅವರ ಮೇಲಿರುವ ಅಭಿಮಾನದ ಕಾರಣದಿಂದ ಅವರು ಸುಮಲತಾ ಅವರ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ದರ್ಶನ್ ಸಿನಿಮಾ ಪ್ರಚಾರಕ್ಕೆ ಹೋದಾಗ ಹಣ ಪಡೆಯುತ್ತಾರೆ ಆದರೆ ಆ ಹಣವನ್ನು ಬಡವರಿಗೆ & ನಿರ್ಗತಿಕರಿಗೆ ಹಂಚುತ್ತಾರೆ. ದರ್ಶನ್ ಅವರ ಈ ಗುಣದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿ

ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು ನೋಡಿ ತಬ್ಬಿಬ್ಬಾಗಿ ಹೋಗ್ತಿರಾ.!

ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಟು ಸಿನಿಮಾದ ನಂತರ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ತಮ್ಮ ಕ್ರೇಝನ್ನು ಸೃಷ್ಟಿಸಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾದ ಅದ್ಭುತ ಗೆಲುವು ರಾಕಿಂಗ್ ಸ್ಟಾರ್ ಯಶ್ ಅವರನ್ನು ಇಡೀ ಪ್ರಪಂಚಕ್ಕೆ ರಾಖಿ ಭಾಯ್ ಎಂದು ಪರಿಚಯ ಮಾಡಿ ಕೊಟ್ಟಿದೆ. ಕೆಜಿಎಫ್ ಟು ಸಿನಿಮಾ ಕೂಡ ಸಿನಿಮಾ ರಸಿಕರಿಗೆ ನಿರೀಕ್ಷೆಗಿಂತ ಹೆಚ್ಚಿನ ಮನರಂಜನೆಯನ್ನು ನೀಡಿದ್ದು ಸಿನಿಮಾ ಅಂತ್ಯದಲ್ಲಿ ಕೊಟ್ಟ ಓಪನ್ ಎಂಡಿಂಗ್ ಕೆಜಿಎಫ್ ತ್ರೀ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಕೆಜಿಎಫ್ 3 ಸಿನಿಮಾದ ಬಗ್ಗೆ ಈಗಾಗಲೇ ಎಲ್ಲರೂ ಬಹಳ ಕುತೂಹಲಭರಿತರಾಗಿದ್ದು ಸಿನಿಮಾ ಯಾವಾಗ ತೆರೆ ಮೇಲೆ ಬರುತ್ತದೆ ಮುಂದಿನ ಕಥೆ ಏನಾಗುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇದರ ನಡುವೆ ಯಶ್ ಅವರಿಂದ ಮತ್ತೊಂದು ಹೊಸ ಸುದ್ದಿ ಇದೆ.

ಅದೇನೆಂದರೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆದ ಕೆಜಿಎಫ್ ಟು ಸಿನಿಮಾ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಕೂಡ ತೆರೆ ಕಂಡು ಭರ್ಜರಿ ಯಶಸ್ಸು ಗಳಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಸಿನಿಮಾದ ಖ್ಯಾತಿಯಿಂದ ಭಾರತದ ಎಲ್ಲಾ ಇಂಡಸ್ಟ್ರಿಯಲ್ಲೂ ಕೂಡ ರಾಕಿಂಗ್ ಸ್ಟಾರ್ ಅವರಿಗೆ ಬೇಡಿಕೆ ಇದೆ ಹಾಗೂ ರಾಖಿ ಬಾಯ್ ಅವರಿಗೆ ಎಲ್ಲಾ ಭಾಷೆಗಳನ್ನು ಕೂಡ ಅಭಿಮಾನಿಗಳು ಹುಟ್ಟು ಕೊಂಡಿದ್ದಾರೆ. ಹೀಗಾಗಿ ಅವರವರ ಭಾಷೆ ಸಿನಿಮಾಗಳಲ್ಲಿ ಯಶ್ ಅವರನ್ನು ಮತ್ತೊಮ್ಮೆ ಕಾಣಲು ಎಲ್ಲಾ ಅಭಿಮಾನಿಗಳು ಕೂಡ ಇಷ್ಟಪಡುತ್ತಿದ್ದಾರೆ. ತೆಲುಗು ಅಭಿಮಾನಿಗಳ ಪಾಲಿಕೆ ಈ ಅದೃಷ್ಟ ಸಿಗಲಿದೆ. ನಮ್ಮ ರಾಖಿ ಭಾಯ್ ಅವರು ತೆಲುಗಿನ ಬಹುನಿರೀಕ್ಷಿತ ಸಿನಿಮಾ ಸಲಾರ್ ಅಲ್ಲಿ ಅಭಿನಯಿಸಲಿದ್ದಾರಂತೆ. ಪ್ರಶಾಂತ್ ನೀಲ್ ಅವರ ನಿರ್ದೇಶನದ ಪ್ರಭಾಸ್ ಅವರ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಸಲಾರ್.

ಪ್ರಶಾಂತ್ ನೀಲ್ ಅವರಿಗೂ ಸಹ ಕೆಜಿಎಫ್ ಟು ಗೆಲುವಿನ ನಂತರ ಅವರ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿರುವುದರಿಂದ ಅವರಿಗೆ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎನ್ನಬಹುದು. ಈಗ ಸಲಾರ್ ಸಿನಿಮಾದಲ್ಲಿ ಮತ್ತೊಮ್ಮೆ ಅವರ ಟ್ಯಾಲೆಂಟ್ ಅನ್ನು ಪ್ರದರ್ಶಿಸಲು ಪ್ರಶಾಂತ್ ನೀಲ್ ಅವರು ತಯಾರಾಗಿದ್ದಾರೆ. ಪ್ರಭಾಸ್ ಅವರು ಕೂಡ ತೆಲುಗಿದ ಸ್ಟಾರ್ ನಟ ಆಗಿರುವುದರಿಂದ ಇವರಿಬ್ಬರ ಕಾಂಬಿನೇಷನ್ ವರ್ಕ್ ಆಗಿ ಈ ಸಿನಿಮಾ ಕೂಡ ದಾಖಲೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳುತ್ತಿದ್ದಾರೆ ಸಿನಿ ವಿಮರ್ಶಕರು. ಸಿನಿಮಾ ಸಂಬಂಧಿತ ಮತ್ತೊಂದು ಹೊಸ ವಿಷಯ ಏನೆಂದರೆ ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಪ್ರಭಾಸ್ ಅವರೊಂದಿಗೆ ಯಶ್ ಅವರು ತೆಗೆಸಿಕೊಂಡಿರುವ ಹಲವಾರು ಫೋಟೋಗಳು ವೈರಲ್ ಆಗಿದ್ದು ಸಿನಿಮಾದಲ್ಲಿ ರಾಕಿ ಬಾಯ್ ಇರುವುದು ಖಚಿತವಾಗಿದೆ. ಮತ್ತು ಯಶ್ ಅವರು ಇರೋದ್ರಿಂದ ಇನ್ನಷ್ಟು ಸಿನಿಮಾ ಮೇಲೆ ನಿರೀಕ್ಷೆ ದುಪಟ್ಟಾಗಿದೆ ಎನ್ನಬಹುದು.

ಮತ್ತು ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಒಂದು ಸಿನಿಮಾಗೆ 25 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಹಾಗಾದರೆ ಸಲಾರ್ ಸಿನಿಮಾದ ಅತಿಥಿ ಪಾತ್ರಕ್ಕಾಗಿ ತೆಗೆದುಕೊಂಡಿರುವ ಸಂಭಾವನೆ ಎಷ್ಟು ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ. ಈ ಸಿನಿಮಾದ ಅಭಿನಯಕ್ಕಾಗಿ ಯಶ್ ಅವರು ಬರೋಬ್ಬರಿ 15 ಕೋಟಿ ರೂಗಳನ್ನು ತೆಗೆದುಕೊಂಡಿದ್ದಾರಂತೆ ಎಂದು ಕೆಲವು ಬಲ್ಲಮೂಲಗಳಿಂದ ತಿಳಿದು ಬಂದಿದೆ ಸದ್ಯಕ್ಕೆ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಇಷ್ಟು ಪ್ರಮಾಣದ ಸಂಭಾವನೆ ಪಡೆದಿರುವುದರಲ್ಲಿ ಅನುಮಾನವೇ ಇಲ್ಲ ಬಿಡಿ. ಯಶ್ ಅವರ ಸಂಭಾವನೆ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮುಖಾಂತರ ತಿಳಿಸಿ.

ಸಲ್ಮಾನ್ ಜೊತೆ ಸ್ಟೇಜ್ ಮೇಲೆ ಸ್ಟೆಪ್ಸ್ ಹಾಕಿದ ರಶ್ಮಿಕ ಮಂದಣ್ಣ, ಇನ್ಮುಂದೆ ನನ್ನ ಲೆವೆಲ್ ಬೇರೆ ಅಂತಿದ್ದಾರೆ.

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಸೌತ್ ಇಂಡಸ್ಟ್ರಿಯ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಳ್ಳುತ್ತಿರುವ ಈಕೆ ಕಿರಿಕ್ ಪಾರ್ಟಿ ಎನ್ನುವ ಕನ್ನಡದ ಸಿನಿಮಾದಿಂದ ಬಣ್ಣ ಹಚ್ಚಿ ಇಂದು ಭಾರತದ ಎಲ್ಲಾ ಚಿತ್ರರಂಗಗಳಲ್ಲೂ ಬಹು ಬೇಡಿಕೆ ಗಿಟ್ಟಿಸಿಕೊಂಡಿರುವ ನಟಿ. ಅತಿ ಕಡಿಮೆ ವಯಸ್ಸಿನಲ್ಲಿಯೇ ಕನ್ನಡ ತಮಿಳು ತೆಲುಗು ಮತ್ತು ಈಗ ಹಿಂದಿ ಸಿನಿಮಾಗಳಲ್ಲೂ ಕೂಡ ಹೆಚ್ಚಿನ ಮಟ್ಟದಲ್ಲಿ ಅವಕಾಶಗಳನ್ನು ಪಡೆಯುತ್ತಿರುವ ಹಾಗೂ ಅತಿ ಕಡಿಮೆ ವಯಸ್ಸಿಗೆ ಹೆಚ್ಚಿನ ಸಂಭಾವನೆ ಪಡೆಯುತ್ತಿರುವ ಹಾಗೂ ಅತಿ ಕಡಿಮೆ ಸಮಯದಲ್ಲಿ ಈ ಮಟ್ಟಕ್ಕೆ ಬೆಳೆದ ಮತ್ತು ಮೊದಲ ಬಾರಿಗೆ ಭಾರತದ ಇತಿಹಾಸದಲ್ಲಿ ಅತಿ ಕಡಿಮೆ ವಯಸ್ಸಿನ ನಟಿಯ ಮನೆಯ ಮೇಲೆ ಇನ್ಕಮ್ ಟ್ಯಾಕ್ಸ್ ರೈಡ್ ಆದ ಈ ರೀತಿ ಎಲ್ಲ ಕುಖ್ಯಾತಿ ಹಾಗೂ ವಿಖ್ಯಾತಿಗಳಿಗೆ ಮೊದಲಿಗರಾಗಿದ್ದರೆ ರಶ್ಮಿಕ ಮಂದಣ್ಣ ಅವರು.

ರಕ್ಷಿತ್ ಶೆಟ್ಟಿ ಅವರ ಅಭಿನಯದ ಮತ್ತು ನಿರ್ಮಾಣದ ರಿಷಬ್ ಶೆಟ್ಟಿ ಅವರ ಅದ್ಭುತ ನಿರ್ದೇಶನದ ಕನ್ನಡದ ಎವರ್ಗ್ರೀನ್ ಫೇವರೆಟ್ ಸಿನಿಮಾ ಕಿರಿಕ್ ಪಾರ್ಟಿ. ಕಿರಿಕ್ ಪಾರ್ಟಿ ಸಿನಿಮಾದ ಹೊಸ ತರದ ಕಥೆ ಹಾಗೂ ಆ ಸಿನಿಮಾದಲ್ಲಿ ಸಾನ್ವಿ ಎನ್ನುವ ಅದ್ಭುತ ಪಾತ್ರ ರಶ್ಮಿಕ ಮಂದಣ್ಣ ಅವರು ಇಂದು ಈ ಮಟ್ಟಕ್ಕೆ ಬೆಳೆಯಲು ಅಡಿಗಲ್ಲಾಯಿತು ಎನ್ನಬಹುದು. ನಟಿಸಿದ ಒಂದೇ ಒಂದು ಸಿನಿಮಾದ ನಂತರ ಮತ್ತೆ ಈಕೆ ಬಣ್ಣ ಹಚ್ಚಿದ್ದು ಕನ್ನಡದ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಎನ್ನುವುದು ಈಕೆಯ ಅದೃಷ್ಟ ಎನ್ನಬಹುದು ಅಥವಾ ಆಕೆಯ ಪ್ರತಿಭೆಗೆ ಸಿಕ್ಕ ಫಲ ಎನ್ನಬೇಕೋ ತಿಳಿಯದು. ಕಿರಿಕ್ ಪಾರ್ಟಿ ಸಿನಿಮಾ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಯಲ್ಲಿ ಚಮಕ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ಅಂಜನಿಪುತ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಯಲ್ಲಿ ಯಜಮಾನ, ಆಕ್ಷನ್ ಪ್ರಿನ್ಸ್ ಧ್ರುವ ಅವರ ಜೊತೆಯಲ್ಲಿ ಪೊಗರು ಸಿನಿಮಾದಲ್ಲಿ ಕಾಣಿಸಿಕೊಂಡರು.

ಇದರ ನಡುವೆ ಕಾಲಿವುಡ್ ಹಾಗೂ ಟಾಲಿವುಡ್ ಇಂದ ಕೂಡ ಇವರಿಗೆ ಹೆಚ್ಚಿನ ಅವಕಾಶಗಳು ಬರಲು ಶುರುವಾದವು ಅಲ್ಲಿಯೂ ಕೂಡ ಇವರು ನಟಿಸಿದ್ದು ಬಹುತೇಕ ಸ್ಟಾರ್ ಹೀರೋ ಸಿನಿಮಾಗಳಲ್ಲೇ. ಮತ್ತು ಈಕೆ ಸಿನಿಮಾದಲ್ಲಿ ಇದ್ದರೆ ಸಿನಿಮಾ ಗೆಲ್ಲುತ್ತದೆ ಎನ್ನುವ ವಿಶ್ವಾಸವನ್ನು ಎಲ್ಲ ಇಂಡಸ್ಟ್ರಿಗಳು ಕೂಡ ಇಟ್ಟುಕೊಂಡಿದ್ದಾರೆ ಹಾಗಾಗಿ ಈಕೆಗೆ ಸಿನಿಮಾಗಳಲ್ಲಿ ಅಭಿನಯಿಸಲು ದಿನೇ ದಿನೇ ಹೆಚ್ಚಿನ ಅವಕಾಶಗಳು ಸಿಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಕನ್ನಡ ತಮಿಳು ತೆಲುಗು ಇಂಡಸ್ಟ್ರಿಯನ್ನು ಆಳಿದ ರಶ್ಮಿಕ ಮಂದಣ್ಣ ಅವರು ಈಗ ಬಾಲಿವುಡ್ ಕಡೆಗೆ ಜಿಗಿಯುತ್ತಿದ್ದಾರೆ. ಈ ಕುರಿತಾದ ಮಾಹಿತಿ ಒಂದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿದ್ದು ಅವರ ನಡವಳಿಕೆ ಇದಕ್ಕೆ ಸಾಕ್ಷಿ ಎನ್ನುವಂತಿದೆ. ಸಲ್ಮಾನ್ ಖಾನ್ ಅವರ ಸಿನಿಮಾದಲ್ಲಿ ರಶ್ಮಿಕ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಎಲ್ಲಾ ಕಡೆ ಗಾಳಿ ಸುದ್ದಿ ಹಬ್ಬಿದೆ.

ಜೊತೆಗೆ ಮುಂಬೈನ ಉಮಾಂಗ್ ಅವಾರ್ಡ್ ಫಂಕ್ಷನ್ ನಲ್ಲಿ ಸಲ್ಮಾನ್ ಖಾನ್ ಅವರು ಭಾಗಿಯಾಗಿದ್ದು ನೃತ್ಯ ಮಾಡಲಿದ್ದಾರೆ, ರಶ್ಮಿಕ ಮಂದಣ್ಣ ಅವರು ಕೂಡ ಅವರ ಫೇಮಸ್ ಹಾಡು ರಾರಾ ಸ್ವಾಮಿ ಎನ್ನುವ ಹಾಡಿಗೆ ಈ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಲಿದ್ದಾರೆ ಅದಕ್ಕಾಗಿ ಈಗ ತಯಾರಿಗಳು ಶುರುವಾಗಿದ್ದು ಇದರ ಜೊತೆಗೆ ಆ ವೇದಿಕೆಯಲ್ಲಿ ಮತ್ತೊಮ್ಮೆ ಇವರಿಬ್ಬರು ಒಂದೇ ಹಾಡಿಗೆ ಒಟ್ಟಾಗಿ ಹೆಜ್ಜೆ ಹಾಕಿರುವ ಬಗ್ಗೆ ಮಾಹಿತಿಗಳು ಕೂಡ ಲಭ್ಯವಾಗುತ್ತಿದೆ. ರಶ್ಮಿಕ ಮಂದಣ್ಣ ಏನಾದರೂ ಸಲ್ಮಾನ್ ಸಿನಿಮಾದಲ್ಲಿ ಅಭಿನಯಿಸುವುದು ಪಕ್ಕ ಆಗಿದ್ದರೆ ಇನ್ನು ಮುಂದೆ ಇನ್ನೊಂದು ಲೆವೆಲ್ ನಲ್ಲಿ ಇವರ ಅದೃಷ್ಟ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಆದರೂ ಕೂಡ ಕನ್ನಡ ಭಾಷೆಯನ್ನು ಕಡೆಗಣಿಸಿ ಬೇರೆ ಭಾಷೆಯಲ್ಲಿ ಈ ರೀತಿ ಬಿಲ್ಡಪ್ ಕೊಡುವುದನ್ನು ನೋಡಿದಂತಹ ನೆಟ್ಟಿಗರು ರಶ್ಮಿಕಾ ಮದ್ದಣ್ಣ ಅವರಿಗೆ ಚೀಮಾರಿ ಹಾಕಿದ್ದಾರೆ. ರಶ್ಮಿಕಾ ಮದ್ದಣ್ಣ ಅವರ ಈ ನಡವಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ವಂಶಿಕಾಗೆ ರಿಯಾಲಿಟಿ ಶೋಗಳಿಂದ ಬರ್ತಾ ಇರೋ ದುಡ್ಡು ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಪಾದನೆ ಇಷ್ಟೊಂದಾ.?

ವಂಶಿಕಾ ಎಂಬ ಈ ಪುಟ್ಟ ಪೋರಿಯ ಹೆಸರು ಯಾರಿಗೆ ತಾನೇ ಕರ್ನಾಟಕದಲ್ಲಿ ಗೊತ್ತಿಲ್ಲ ತನ್ನ ಮುಗ್ಧ ನಟನೆಯಿಂದ, ನೃತ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಗಳ ಮೂಲಕ ಮೆಚ್ಚುಗೆಯನ್ನ ಪಡೆದಿದ್ದ ಈ ಹುಡುಗಿ ಟಿವಿ ಶೋಗಳ ಮೂಲಕ ಜನರನ್ನು ಮನರಂಜಿಸುತ್ತಿದ್ದಾಳೆ. ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ ಶೋಗಳ ಮೂಲಕ ತನ್ನ ಅಭಿನಯ ಚಾತುರ್ಯವನ್ನು ಪ್ರೇಕ್ಷಕರನ್ನು ಮನರಂಜಿಸಿ ಮೆಚ್ಚುಗೆಗಳನ್ನು ಗಿಟ್ಟಿಸಿಕೊಂಡಿದ್ದಾಳೆ.4 ವರ್ಷದ ವಂಶಿಕಾ ‘ನನ್ನಮ್ಮ ಸೂಪರ್ ಸ್ಟಾರ್’ ಮಕ್ಕಳ ಶೋನಲ್ಲಿ ಭಾಗಿಯಾಗಿ ಮೊದಲ ಎಪಿಸೋಡ್‌ನಲ್ಲಿ ವೀಕ್ಷಕರ ಮನ ಗೆದ್ದಿದ್ದಾರೆ.

ಕನ್ನಡ ಕಿರುತೆರೆಯ ಖ್ಯಾತ ಶೋ ನನ್ನಮ್ಮ ಸೂಪರ್ ಸ್ಟಾರ್ ಶೋ ಪಟ್ಟವನ್ನು ತನ್ನದಾಗಿಸಿಕೊಂಡಿರುವ ಸಿಕ್ಕಾಪಟ್ಟೆ ಫೇಮಸ್ ಆದ ಪುಟಾಣಿ ವಂಶಿಕ ಸದ್ಯ ಇದೀಗ ಗಿಚ್ಚಿ ಗಿಲಿ ಗಿಲಿ ಶೋ ನಲ್ಲಿ ಪಾಲ್ಗೊಂಡಿದ್ದು ಈ ಹಿಂದೆ ವಂಶಿಕಳನ್ನು ಮೆಚ್ಚಿಕೊಂಡಿರುವಂತಹ ಜನರು ಇದೀಗ ವಂಶಿಕ ಅವರ ಅಮ್ಮ ಯಶಸ್ವಿನಿ ಹಾಗೂ ಮಾಸ್ಟರ್ ಆನಂದ್ ಅವರನ್ನು ಟೀಕಿಸುತ್ತಿದ್ದಾರೆ. ವಂಶಿಕ ಸಂಪಾದಿಸುತ್ತಿರುವಂತ ಹಣದ ಬಗ್ಗೆಯೂ ಮಾತನಾಡಿದ್ದು ಇದೀಗ ವಂಶಿಕ ಅವರ ತಾಯಿ ಯಶಸ್ವಿನಿ ಅವರು ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ವಂಶಿಕಾಗೆ ಬರುತ್ತಿರುವಂತಹ ಸಂಭಾವನೆ ಎಷ್ಟು ಆ ಹಣದಿಂದ ಏನು ಆಗುತ್ತಿದೆ ಎಲ್ಲವನ್ನು ಸಹ ತಿಳಿಸಿದ್ದಾರೆ. ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡಿರುವ ಇಬ್ಬರು ಮಗಳ ಬಗ್ಗೆ ಮಗಳ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.

ಮೊದಲನೆಯದಾಗಿ ಮಾತನಾಡಿದ ಮಾಸ್ಟರ್ ಆನಂದ್ ಅವರು ಮಗಳ ವಿದ್ಯಾಭ್ಯಾಸ ಹಾಳು ಮಾಡುತ್ತಿದ್ದೀರಾ ಎಂದು ಹಲವಾರು ಜನ ಕಮೆಂಟ್ ಮಾಡುತ್ತಾರೆ. ಇವಳ ವಿದ್ಯಾಭ್ಯಾಸವನ್ನು ಹಾಳು ಮಾಡುವುದಕ್ಕೆ ಇವಳೇನು ಐಎಎಸ್ ಮಾಡುತ್ತಿದ್ದಾಳ ಎಂದು, ಮಕ್ಕಳಿಗೆ ಪ್ರತಿಭೆ ಇದ್ದಾಗ ಅದಕ್ಕೆ ಸರಿಯಾದ ಅವಕಾಶ ಸಿಗುವುದು ಕಡಿಮೆ ಅಂತದ್ದರಲ್ಲಿ ಇವಳಿಗೆ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಂಡು ಆಕೆಯ ಆಸಕ್ತಿ ಏನು ಇದೆ ಅದರಲ್ಲಿ ಸಂತೋಷವನ್ನು ಪಟ್ಟರೆ ಜನರ ಪ್ರೀತಿ ಪಡೆದರೆ ಏನು ತಪ್ಪು ಇದೆ ಎಂದಿದ್ದಾರೆ. ಇನ್ನು ಯಶಸ್ವಿನಿ ಅವರು ಮಾತನಾಡಿ ಸಂಭಾವನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಹಣಕ್ಕಾಗಿ ಅವಳನ್ನು ಶೋ ಗೆ ಕಳುಹಿಸುತ್ತಿದ್ದೀರಾ ಎಂದು ಹೇಳುತ್ತಾರೆ, ದೇವರು ಸದ್ಯ ನಮಗೆ ಆ ಸ್ಥಿತಿಯಲ್ಲಿ ಇಟ್ಟಿಲ್ಲ ಅವಳ ಸಂಭಾವನೆಯಿಂದ ನಾವು ಜೀವನವನ್ನು ಮಾಡುವ ಸ್ಥಿತಿ ನಮಗಿಲ್ಲ. ನಿಜವಾಗಿ ಇಲ್ಲಿರುವ ವಾಸ್ತವ ಸ್ಥಿತಿಯೇ ಬೇರೆ ಕೆಲ ಜನಗಳಿಗೆ ಇದು ಅರ್ಥವಾಗುವುದಿಲ್ಲ ಜನ ಬಾಯಿಗೆ ಬಂದಂತೆ ಕಮೆಂಟ್ ಮಾಡುತ್ತಾರೆ.

ದೇವರ ದಯೆಯಿಂದ ನಮಗೆ ಅಂತ ಬೇರೆ ಬೇರೆ ಕೆಲಸಗಳು ಇವೆ ಅದೇ ಸಾಕು ಇದು ಆಕೆಯ ಜೀವನ ಅವಳಿಗೆ ಆಸಕ್ತಿ ಇರುವ ಕಡೆ ಅವಳನ್ನು ತೊಡಗಿಸಬೇಕಾದದ್ದು ಹೆತ್ತವರ ಕರ್ತವ್ಯ ಎಂದಿದ್ದಾರೆ. ಇಷ್ಟೇ ಅಲ್ಲದೆ ಹಣಕ್ಕಾಗಿ ಅವಳನ್ನು ಶೋಗೆ ಕಳುಹಿಸುತ್ತಿದ್ದೀರಾ ಎಂದು ಹಲವಾರು ಜನ ಕೆಟ್ಟದಾಗಿ ಕಾಮೆಂಟ್ ಮಾಡಿದ್ದನ್ನು ನೋಡಿ ಭಾವುಕರಾದರು. ಇನ್ನು ಸಂಭಾವನೆಯ ವಿಚಾರಕ್ಕೆ ಬಂದರೆ ವಂಶಿಕಾಳಿಗೆ ಒಂದು ಸಂಚಿಕೆಗೆ ಅಂದರೆ ಒಂದು ವಾರಕ್ಕೆ 20,000 ನೀಡಲಾಗುತ್ತಿದೆ ಎನ್ನಲಾಗಿದೆ. ಒಂದು ವಾರದ ಸಂಚಿಕೆಯಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಚಿತ್ರೀಕರಣ ಆಗಿರುತ್ತದೆ. ಈ ರೀತಿ ವಾರಕ್ಕೆ ನಾಲ್ಕು ಅಥವಾ ಐದು ಬಾರಿ ಚಿತ್ರೀಕರಣ ಇರಲಿದ್ದು ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮುಖಾಂತರ ತಿಳಿಸಿ.

ಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ ಏನೆಂದರು ಗೊತ್ತಾ?

ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಕರ್ನಾಟಕದ ಟಾಪ್ ಹೀರೋಗಳು. ರಾಕಿಂಗ್ ಸ್ಟಾರ್ ಯಶ್ ಅವರು ಈಗ ಕರ್ನಾಟಕದ ಮಾತ್ರವಲ್ಲದೆ ಕೆಜಿಎಫ್ ಟೂ ಸಿನಿಮಾದ ಬಳಿಕ ವಿಶ್ವದಾದ್ಯಂತ ಪ್ರಖ್ಯಾತಿಯಾಗಿದ್ದಾರೆ ಅವರಿಗೆ ಭಾರತ ದೇಶದಾದ್ಯಂತ ಕೋಟ್ಯಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರ ಎಲ್ಲರಿಗೂ ತಿಳಿದೇ ಇದೆ. ಕನ್ನಡದಲ್ಲಿರುವ ಎಲ್ಲಾ ನಟರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್ ಅವರಿಗೆ ಇದ್ದಾರೆ. ಈಗ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದ್ದು ಇದು ರಿಲೀಸ್ ಆದ ಬಳಿಕ ಈ ಅಭಿಮಾನಿಗಳ ಬಳಗ ಮತ್ತಷ್ಟು ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಸದ್ಯಕ್ಕೆ ನಟಿ ಒಬ್ಬರು ಇವರಿಬ್ಬರ ಬಗ್ಗೆ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ.

ನೀಲಿತಾರೆ ಎಂದೇ ಫೇಮಸ್ ಆಗಿರುವ ಸನ್ನಿ ಲಿಯೋನ್ ಅವರು ಇಡೀ ವಿಶ್ವಕ್ಕೆ ಪರಿಚಿತರು. ಮೊದಮೊದಲ ಬರೀ ನೀಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸನ್ನಿ ಲಿಯೋನ್ ಅವರು ಈಗ ಬಾಲಿವುಡ್ ನಲ್ಲಿ ಬಹು ಬೇಡಿಕೆ ನಟಿಯಾಗಿದ್ದಾರೆ. ಐಟಂ ಹಾಡುಗಳಿಗೆ ಫೇಮಸ್ ಆಗಿರುವ ಇವರು ಬಾಲಿವುಡ್ ನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರತದಲ್ಲಿ ಇವರಿಗೆ ಇರುವ ಅಭಿಮಾನಿಗಳ ಸಂಖ್ಯೆಯನ್ನು ನೋಡಿ ಭಾರತದ ಎಲ್ಲಾ ಭಾಷೆಗಳಲ್ಲೂ ಕೂಡ ಸಿನಿಮಾ ಹಾಡುಗಳಿಗೆ ಇವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಕನ್ನಡಿಗರು ಕೂಡ ಈ ನಟಿಯ ಮೇಲೆ ಬಹಳ ಅಭಿಮಾನ ಹೊಂದಿದ್ದಾರೆ ಅದಕ್ಕೆ ಕಾರಣ ಇಷ್ಟೇ ವೈಯಕ್ತಿಕ ಬದುಕಿನಲ್ಲಿ ಈಕೆ ಏನೇ ಆಗಿದ್ದರೂ ಕೂಡ ಅವರು ತಾಯಿ ಹೃದಯವನ್ನು ಹೊಂದಿದ್ದಾರೆ ತಮ್ಮ ಕೆಲಸದಿಂದ ದುಡಿದು ಸಂಪಾದನೆಯಲ್ಲಿ ಸಾವಿರಾರು ಅನಾಥ ಮಕ್ಕಳನ್ನು ಸಾಕುವ ಕೆಲಸ ಮಾಡುತ್ತಿದ್ದಾರೆ.

ಈ ವಿಷಯದ ತಿಳಿದ ಬಳಿಕ ಕರ್ನಾಟಕದ ಜನರು ಈಕೆಯನ್ನು ಅನಾಥ ಮಕ್ಕಳ ಪಾಲಿನ ದೇವತೆ ಎಂದು ಹೊಗಳುತ್ತಿದ್ದಾರೆ. ಸಿನಿಮಾಗಳಲ್ಲಿ ಹಾಗೂ ಹಾಡುಗಳಲ್ಲಿ ಅತ್ಯಂತ ಮಾದಕವಾಗಿ ಕಾಣಿಸಿಕೊಳ್ಳುವ ಇವರಿಗೆ ಪಡ್ಡೆ ಹುಡುಗರೇ ಹೆಚ್ಚು ಅಭಿಮಾನಿಗಳು. ಕನ್ನಡದಲ್ಲಿ ಕೂಡ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಹಾಗೂ ಇಂದ್ರಜಿತ್ ಅವರ ನಿರ್ದೇಶನ ಸಿನಿಮಾದಲ್ಲಿ ಎರಡು ಹಾಡುಗಳಿಗೆ ಇವರನ್ನು ಕರೆತಂದಿದ್ದಾರೆ. ಹಾಗಾಗಿ ಕನ್ನಡಿಗರು ಹಾಗೂ ಕನ್ನಡದ ಬಗ್ಗೆ ಈ ನಟಿಗೆ ಸ್ವಲ್ಪ ಅಭಿಮಾನ ಇದೆ. ಕನ್ನಡಿಗರ ಮೇಲೆ ತೋರುವ ಪ್ರೀತಿಗೆ ಇವರು ಸದಾ ಧನ್ಯೋಸ್ಮಿ ಎಂದು ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ ಇವರ ಹುಟ್ಟು ಹಬ್ಬದ ಪ್ರಯುಕ್ತ ಮಂಡ್ಯ ಹೈಯ್ಕಳು ಇವರ ಪೋಸ್ಟರ್ ಹಾಕಿದ್ದರು ಅದನ್ನು ಸಾಮಾಜಿಕ ಜಾಲತಾಣ ನೋಡಿದ ಬಳಿಕ ಅವರು ಅದನ್ನು ಗುರುತಿಸಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ರೀತಿ ಅವಕಾಶ ಸಿಕ್ಕಾಗಲ್ಲ ಕನ್ನಡಿಗರು ಹಾಗೂ ಕನ್ನಡದ ಮೇಲಿರುವ ಅಭಿಪ್ರಾಯ ಹಾಗೂ ಅಭಿಮಾನವನ್ನು ವ್ಯಕ್ತಪಡಿಸುವವರು ಕರ್ನಾಟಕದ ಇಬ್ಬರು ಸ್ಟಾರ್ ನಟರ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಮೊದಲಿಗೆ ದರ್ಶನ್ ಅವರ ಬಗ್ಗೆ ಮಾತನಾಡಿದ ಅವರು ದರ್ಶನ್ ಅವರ ಸಿನಿಮಾಗಳು ನನಗೆ ತುಂಬಾ ಇಷ್ಟ ನಾನು ಅವರ ಸಿನಿಮಾಗಳನ್ನು ನೋಡಿ ಅವರ ಅಭಿನಯಕ್ಕೆ ಫಿದಾ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಮಾತನಾಡಿದ ಅವರು ಅವರನ್ನು ರಾಖೀ ಬಾಯ್ ಎಂದು ಕರೆದಿದ್ದಾರೆ ಹಾಗೂ ಇವರು “ನನ್ನ ಹುಡುಗ ಅಲ್ಲಾ ಎಂದಿದ್ದಾರೆ” ಇವರಾಡಿರುವ ಈ ಮಾತುಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ತಮ್ಮನ ಹಾದಿಯಲ್ಲಿ ಸಾಗಲು ರಾಘಣ್ಣನ ನಿರ್ಧಾರ, ಹಾಗಾದ್ರೆ ಅವರ ಮುಂದಿನ ಕೆಲಸಗಳೇನು ಗೊತ್ತಾ.?

ಅಪ್ಪು ಅವರು ಅಗಲಿದ ಬಳಿಕ ನಟನೆಗಿಂತ ಅವರು ಮಾಡುತ್ತಿದ್ದ ಸಮಾಜ ಸೇವೆಯಿಂದಲೇ ಎಲ್ಲರ ಮನಸ್ಸಿನಲ್ಲಿ ದೇವರ ಸ್ಥಾನ ಪಡೆದರು. ಇದುವರೆಗೆ ಯಾವ ಒಬ್ಬ ಸೆಲೆಬ್ರಿಟಿ ಕೂಡ ಮಾಡದಷ್ಟು ಸಮಾಜ ಸೇವೆಯನ್ನು ಅಪ್ಪು ಅವರು ಕರ್ನಾಟಕದ ಜನತೆಗಾಗಿ ಮಾಡಿದ್ದಾರೆ. ಗೋ ಶಾಲೆಗಳಿಗೆ ಅನಾಥಾಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಶಕ್ತಿಧಾಮಗಳಿಗೆ ಹಣವನ್ನು ಕಾಣಿಕೆಯಾಗಿ ಕೊಡುವುದು. ಮನೆಯ ಬಳಿ ಸಹಾಯಕ್ಕೆಂದು ಹುಡುಕಿಕೊಂಡು ಬಂದವರಿಗೆ ಕನಿಷ್ಠ 50 ಸಾವಿರಕ್ಕಿಂತ ಕಡಿಮೆ ಇಲ್ಲದಷ್ಟು ಹಣಕ್ಕೆ ಚೆಕ್ ಕೊಟ್ಟು ಕಳಿಸುವುದು. ಹಾಗೂ ಕರ್ನಾಟಕದ ರೈತರ ಪರವಾಗಿ ನಂದಿನ ಹಾಲಿನ ಉತ್ಪನ್ನಗಳ ಜಾಹೀರಾತುಗಳನ್ನು ಉಚಿತವಾಗಿ ಮಾಡಿಕೊಡುವುದು. ಜಾಹೀರಾತುಗಳು ಹಾಗೂ ಇತರ ಸಿನಿಮಾಗಳಿಗೆ ಹಾಡುಗಳನ್ನು ಹಾಡಿ ಪಡೆದ ಸಂಭಾವನೆಯನ್ನು ಸಂಪೂರ್ಣವಾಗಿ ಸಮಾಜ ಸೇವೆಗಾಗಿ ಉಪಯೋಗಿಸುವುದು ಮತ್ತು ಕಿರುತೆರೆಯಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಬಡ ಪ್ರತಿಭೆಗಳಿಗೆ ಹಣದ ಸಹಾಯವಾಗುವಂತೆ ನೆರವಾಗುವುದು.

ಇಂತಹ ನೂರಾರು ಹೆಸರುಗಳನ್ನು ಯಾರಿಗೂ ಹೇಳದಂತೆ ಮಾಡಿಕೊಂಡು ಬಂದಿದ್ದರು ಪುನೀತ್ ರಾಜಕುಮಾರ್ ಅವರು. ರಾಜ್ ವಂಶದ ಕುಟುಂಬಸ್ಥರೇ ಹಾಗೆ ಮೊದಲಿನಿಂದಲೂ ರಾಜಣ್ಣನ ಕುಟುಂಬ ಸಮಾಜಸೇವೆಗಾಗಿ ತುಡಿಯುತ್ತಲೇ ಇದೆ. ಅಣ್ಣಾವ್ರು ಕೂಡ ಅವರಿಂದ ಆದಷ್ಟು ಹಸಿದವರಿಗೆ ಅನ್ನ ಹಾಕುವ ಕೆಲಸವನ್ನು ಮಾಡಿದ್ದಾರೆ ಮತ್ತು ಪಾರ್ವತಮ್ಮ ರಾಜಕುಮಾರ್ ಅವರು ಕೂಡ ವಜ್ರೇಶ್ವರಿ ಹಾಗೂ ಪೂರ್ಣಿಮಾ ಎಂಟರ್ಪ್ರೈಸಸ್ ನಿರ್ಮಿಸುವ ಮೂಲಕ ಸಾವಿರಾರು ಕನ್ನಡದ ಕಲಾವಿದರಿಗೆ ಅನ್ನಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಪಾಯದ ಮೇಲೆ ಈಗ ಮನೆಯ ಇತರ ಕುಟುಂಬಸ್ಥರು ಕೂಡ ನಡೆಯುತ್ತಿದ್ದಾರೆ ಎನ್ನಬಹುದು. ಅಪ್ಪು ಅವರ ಅಗಲಿಕೆಯ ಬಳಿಕ ಕುಟುಂಬಸ್ಥರು ಇದೀಗ ತಮ್ಮ ತಮ್ಮ ಜವಾಬ್ದಾರಿಗಳಲ್ಲಿ ತೊಡಗಿ ಕೊಳ್ಳುತ್ತಿದ್ದಾರೆ. ವಿಶೇಷವಾಗಿ ರಾಘಣ್ಣ ಅವರು ಈ ಸಮಯದಲ್ಲಿ ಹೊಸದೊಂದು ಕೆಲಸಕ್ಕೆ ಕೈ ಹಾಕಿದ್ದಾರೆ.

ರಾಜ್ ಕುಮಾರ್ ಅವರಂತೆ ಅವರ ಮೂರು ಜನ ಮಕ್ಕಳು ಕೂಡ ಕನ್ನಡ ಚಲನಚಿತ್ರ ರಂಗದಲ್ಲಿ ನಟನೆ ಮತ್ತು ನಿರ್ಮಾಣ ಕೆಲಸಗಳಲ್ಲಿ ಭಾಗಿಯಾಗಿದ್ದರು. ಶಿವರಾಜ್ ಕುಮಾರ್ ಅವರು ಇದೀಗ ಸಿನಿಮಾಗಳಲ್ಲಿ ಮತ್ತೆ ನಟಿಸಲು ತೊಡಗಿಕೊಂಡಿದ್ದಾರೆ ಅವರ ಮಗಳು ನಿವೇದಿತಾ ವೆಬ್ ಸೀರೀಸ್ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ನಿರ್ಮಿಸಿದ್ದ ಪಿ ಆರ್ ಕೆ ಪ್ರೊಡಕ್ಷನ್ ಕೆಲಸಗಳನ್ನು ಅಪ್ಪು ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ನೋಡಿಕೊಳ್ಳುತ್ತಿದ್ದು ಅಪ್ಪು ಅವರ ಆಸೆಯಂತೆ ಹೊಸ ಪ್ರತಿಭೆಗಳಿಗೆ ಕನ್ನಡದ ಸೀರಿಯಲ್ ಗಳಲ್ಲಿ ಅವಕಾಶ ಮಾಡಿಕೊಡುತ್ತಿದ್ದಾರೆ. ಇದೀಗ ರಾಘಣ್ಣ ಕೂಡ ಅದೇ ಹಾದಿಯಲ್ಲಿ ಮುಂದುವರೆಯಲು ನಿರ್ಧಾರ ಮಾಡಿದ್ದು ಕನ್ನಡದಲ್ಲಿ ಹೊಸದೊಂದು ಧಾರಾವಾಹಿಯನ್ನು ಮಂಗಳ ರಾಘವೇಂದ್ರ ರಾಜ್ ಕುಮಾರ್ ಅವರ ಹೆಸರಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ತಮ್ಮನಂತೆ ರಾಘಣ್ಣ ಕೂಡ ಕನ್ನಡದಲ್ಲಿ ಹೊಸ ಪ್ರತಿಭೆಗಳಿಗೆ ಕಿರುತೆರೆಯ ಧಾರಾವಾಹಿಗಳಲ್ಲಿ ಅವಕಾಶ ಮಾಡಿಕೊಡುವ ಆಸೆ ಇಟ್ಟುಕೊಂಡಿದ್ದಾರೆ.

ಅವರ ಮೊದಲ ಪ್ರಯತ್ನವನ್ನು ಸಿರಿ ಕನ್ನಡ ಚಾನೆಲ್ ನಲ್ಲಿ ವಿಜಯದಶಮಿ ಎನ್ನುವ ಧಾರಾವಾಹಿ ಮೂಲಕ ಮಾಡುತ್ತಿದ್ದಾರೆ. ರಾಧಾಕಲ್ಯಾಣ ಧಾರವಾಹಿಯ ಕೃತಿಕ ಅವರು ಕೂಡ ಈ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡುತ್ತಿದ್ದು ಇವರು ಮತ್ತು ಕೆಲವೊಂದಿಷ್ಟು ಹಿರಿಯ ಕಲಾವಿದರನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾತ್ರಗಳಿಗೂ ಕೂಡ ಹೊಸಬರಿಗೆ ಅವಕಾಶ ನೀಡಿದ್ದಾರಂತೆ. ಈಗಾಗಲೇ ಟ್ರೈಲರ್ ಲಾಂಚ್ ಆಗಿದ್ದು ರಿಷಬ್ ಶೆಟ್ಟಿ ಪ್ರಿಯಾಂಕಾ ಉಪೇಂದ್ರ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಅಭಿಷೇಕ್ ಅಂಬರೀಶ್ ಅವರು ಈ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದರು. ರಿಷಬ್ ಶೆಟ್ಟಿ ಅವರು ಮಾತನಾಡಿ ಟ್ರೈಲರ್ ಒಂದು ಕಮರ್ಷಿಯಲ್ ಸಿನಿಮಾದಷ್ಟು ರಿಚ್ ಆಗಿದೆ ನನಗೆ ಕಥೆ ಬಗ್ಗೆ ತುಂಬಾ ಆಸಕ್ತಿ ಆಗುತ್ತಿದೆ ಎಂದು ಮಾತನಾಡಿ ಇವರ ಹೊಸ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ರಾಘಣ್ಣ ಅವರ ಈ ಕಾರ್ಯ ಇಷ್ಟ ಆದರೆ ತಪ್ಪದೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

ಹೊಸಪೇಟೆ ಬಳಿಕ ಮತ್ತೊಂದು ಜಿಲ್ಲೆಯಲ್ಲಿ ಪುನೀತ್ ಪುತ್ಥಳಿ ನಿರ್ಮಾಣ, ವಿಶ್ವದಾಖಲೆ ಮಾಡುತ್ತಿದೆ ಅಪ್ಪು ಅಭಿಮಾನಿಗಳ ಕೆಲಸ.

ಅಪ್ಪು ಅವರು ಕನ್ನಡ ಚಲನ ಚಿತ್ರರಂಗಕ್ಕೆ ಪವರ್ ಸ್ಟಾರ್ ಆಗಿದ್ದರು. ರಾಜ್ ಕುಟುಂಬಕ್ಕೆ ಕೀರ್ತಿ ಕಳಸದಂತಿದ್ದರು ಆದರೆ ಕರ್ನಾಟಕದ ಪ್ರತಿ ಮನೆಗೂ ಕೂಡ ಮನೆ ಮಗ ಎಂದು ಅನಿಸಿಕೊಂಡಿದ್ದು ತುಂಬಾ ವಿಶೇಷ. ನಟನೆ ವಿಷಯದಿಂದ ಪುನೀತ್ ರಾಜಕುಮಾರ್ ಅವರಿಗೆ ಬಾಲ್ಯದಿಂದಲೂ ಅಪಾರ ಸಂಖ್ಯೆ ಅಭಿಮಾನಿಗಳು ಕರ್ನಾಟಕದಲ್ಲಿ ಇದ್ದಾರೆ. ಆದರೆ ಬೆಳೆಯುತ್ತಾ ಪುನೀತ್ ರಾಜಕುಮಾರ್ ಅವರು ಅಳವಡಿಸಿಕೊಂಡ ವ್ಯಕ್ತಿತ್ವಕ್ಕೆ ಇಡೀ ಕರ್ನಾಟಕ ಮಾತ್ರವಲ್ಲದೆ ಭಾರತ ಹಾಗೂ ವಿಶ್ವದಾದ್ಯಂತ ಪುನೀತ್ ಅವರಿಗೆ ಅಭಿಮಾನಿಗಳು ಇದ್ದಾರೆ. ಅಪ್ಪು ಇಲ್ಲದೆ ಅನಾಥರಾಗಿರುವ ಅಪ್ಪು ಅಭಿಮಾನಿಗಳು ಅವರಿಲ್ಲದೆ ಎಂಟು ತಿಂಗಳುಗಳನ್ನು ಕಣ್ಣೀರಿನಿಂದಲೇ ಕಳೆದಿದ್ದಾರೆ. ಅವರು ಇನ್ನು ಎಂದಿಗೂ ನಮ್ಮ ಮುಂದೆ ಬರುವುದಿಲ್ಲ ಎನ್ನುವ ಸತ್ಯವನ್ನೇ ನಮ್ಮವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ಎಂದಿಗೂ ಆರದ ಗಾಯವಾಗಿ ಎಲ್ಲರ ಹೃದಯವನ್ನು ಸುಡುತ್ತಿರುತ್ತದೆ.

ಅಪ್ಪು ಅವರು ಇಲ್ಲದಿದ್ದರೂ ಸಹ ಅಪ್ಪು ಮೇಲಿನ ಅಭಿಮಾನ ಕನ್ನಡಿಗರಿಗೆ ಕಡಿಮೆಯಾಗಿಲ್ಲ. ಅವರ ಅಂತಿಮ ದರ್ಶನಕ್ಕೆ ಇದುವರೆಗೆ ಭಾರತದ ಯಾವೊಬ್ಬ ಸೆಲೆಬ್ರಿಟಿಗೂ ಕೂಡ ಸೇರದಷ್ಟು ಜನ ಬಂದು ಅಂತಿಮ ದರ್ಶನ ಪಡೆದು ದಾಖಲೆ ಮಾಡಿದ್ದರು. ಈಗಲೂ ಸಹ ಮಳೆ ಬಿಸಿಲಿಗೂ ಲೆಕ್ಕಿಸದೆ ಸಾವಿರಾರು ಕಿಲೋಮೀಟರ್ ದೂರಗಳಿಂದ ಬಂದು ಅಪ್ಪು ಅವರ ಸ-ಮಾ-ಧಿ-ಯನ್ನು ದರ್ಶನ ಮಾಡಿ ಅಭಿಮಾನಿಗಳು ಹೋಗುತ್ತಿದ್ದಾರೆ. ಅಪ್ಪು ಅವರು ಹೋದ ದಿನದಿಂದಲೂ ಕೂಡ ಕರ್ನಾಟಕದ ಒಂದಲ್ಲ ಒಂದು ಗ್ರಾಮದಲ್ಲಿ ಅಪ್ಪು ಹೆಸರಿನಲ್ಲಿ ಏನಾದರೂ ವಿಶೇಷ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಅವರ ಪರಮಾತ್ಮ ಸಿನಿಮಾದಲ್ಲಿ ಅವರೇ ಹೇಳಿರುವ ಒಂದು ಸಾಲಿನಂತೆ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಮಾತು ಈಗ ಅವರ ವಿಷಯಕ್ಕೆ ಅನ್ವಯಿಸುತ್ತಿದೆ ಎನ್ನಬಹುದು. ಅಪ್ಪು ಇಲ್ಲದಿದ್ದರೂ ಕೂಡ ಅವರ ಮೇಲಿನ ಅಭಿಮಾನವನ್ನು ಅಭಿಮಾನಿಗಳು ಮೆರೆಯುತ್ತಿದ್ದಾರೆ.

ಅಪ್ಪು ಅವರ ಹೆಸರಿನಲ್ಲಿ ಈಗಾಗಲೇ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪ್ರಯುಕ್ತ ಅನ್ನದಾನ ರಕ್ತದಾನ ನೇತ್ರದಾನ ಹಾಗೂ ಅಂಗಾಂಗ ದಾನ ಈ ರೀತಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿದ್ದಾರೆ. ಅದರಲ್ಲೂ ನೇತ್ರದಾನದ ವಿಷಯದಲ್ಲಿ ಅಪ್ಪು ಅವರು ನೇತ್ರದಾನ ಮಾಡಿದ್ದರಿಂದ ಅಭಿಮಾನಿಗಳು ಕೂಡ ಈ ಹಿಂದೆ ಎಂದಿಗೂ ದಾಖಲಾಗದಷ್ಟು ಸಂಖ್ಯೆಯಲ್ಲಿ ನೇತ್ರದಾನಕ್ಕೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಅದು ಕೂಡ ಅಪ್ಪು ಅವರ ಮಾರ್ಗದರ್ಶನದಿಂದ ಎನ್ನಬಹುದು. ಅದಲ್ಲದೆ ಅಪ್ಪು ಅವರ ಹೆಸರಿನಲ್ಲಿ ಅವರಂತೆ ಹಲವರು ಸಮಾಜ ಸೇವೆ ಮಾಡಲು ಬಡವರಿಗೆ ದಾನ ಧರ್ಮ ಮಾಡಲು ಮತ್ತು ನೊಂದವರ ಕಣ್ಣೀರು ಒರೆಸುವ ಕಾರ್ಯಗಳನ್ನು ತಮ್ಮ ಕೈಯಿಂದ ಆದಷ್ಟು ಮಾಡುತ್ತಿದ್ದಾರೆ. ಹೀಗೆ ಅತಿ ಕಡಿಮೆ ವಯಸ್ಸಿಗೆ ನಮ್ಮನ್ನೆಲ್ಲ ಅಪ್ಪು ಅಗಲಿ ಹೋದರು ಎಲ್ಲರಿಗೂ ಬದುಕುವ ರೀತಿಯನ್ನು ಶೈಲಿಯನ್ನು ತಿದ್ದಿ ಹೇಳಿಕೊಟ್ಟು ಹೋದರು. ಈಗ ಅಭಿಮಾನಿಗಳು ಅದೇ ಹಾದಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.

ಇಲ್ಲಿಗೆ ಮುಗಿಯದ ಅಪ್ಪು ಅಭಿಮಾನ ಈಗ ಅಪ್ಪು ಅವರ ಸ್ಮಾರಕ ನಿರ್ಮಾಣದ ತನಕ ಮುಂದುವರಿದಿದೆ. ಬೆಂಗಳೂರಿನ ವಿಜಯನಗರ ಸಮೀಪದ ಹೊಸಪೇಟೆ ಗ್ರಾಮ ಅಪ್ಪು ಅವರ ಫೇವರೆಟ್ ಪ್ಲೇಸ್ ಆಗಿತ್ತು, ಹೊಸಪೇಟೆಯಲ್ಲಿ ಅಪ್ಪು ಅವರ 70.4 ಅಡಿ ಎತ್ತರದ ಸ್ಮಾರಕವನ್ನು ಅಭಿಮಾನಿಗಳು ನಿರ್ಮಿಸಿದ್ದರು ಈಗ ಅದೇ ರೀತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಳಗೆರೆ ಗ್ರಾಮದಲ್ಲೂ ಕೂಡ ಅಪ್ಪು ಅವರ ಸ್ಮಾರಕವನ್ನು ನಿರ್ಮಾಣ ಮಾಡಿ ಸುತ್ತಲು ಕಾರಂಜಿ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಇದೇ ರೀತಿ ಇನ್ನೂ ಹಲವಾರು ಊರುಗಳಲ್ಲಿ ರಸ್ತೆಗಳಿಗೆ ಮತ್ತು ಸರ್ಕಲ್ಗಳಿಗೆ ಅಪ್ಪು ಅವರ ಹೆಸರನ್ನು ಇಟ್ಟು ಗೌರವಿಸಲಾಗುತ್ತಿದೆ. ಅಭಿಮಾನಿಗಳ ಈ ರೀತಿ ಕೆಲಸಗಳಿಂದ ಅಪ್ಪು ಅವರ ಹೆಸರು ವಿಶ್ವಮಟ್ಟದಲ್ಲಿ ದಾಖಲೆ ಮಾಡುತ್ತಿದೆ. ಅಪ್ಪು ಅವರ ಪ್ರತಿಮೆ ಪ್ರತಿ ಜಿಲ್ಲೆಯಲ್ಲು ನಿರ್ಮಾಣ ಆಗಬೇಕು ಎಂಬುದು ನಮ್ಮ ಆಶಾಯ ಇದಕ್ಕೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ.

ನಟ ವಿಕ್ರಮ್ ಗೆ ಹೃ-ದ-ಯಾ-ಘಾ-ತ, ಚೆನೈ ಆಸ್ಪತ್ರೆಗೆ ದಾಖಲು ಆರೋಗ್ಯ ಸ್ಥಿತಿ ಗಂ-ಭೀ-ರ ಏನಾಗಿದೆ ನೋಡಿ.

ಇತ್ತೀಚಿನ ದಿನಗಳಲ್ಲಿ ಹೃ-ದ-ಯಾಘಾ-ತ-ದ ಪ್ರಕರಣಗಳು ಹೆಚ್ಚಾಗುತ್ತಿವೆ ಜನಸಾಮಾನ್ಯರನ್ನು ಸೇರಿಸಿ ಅತಿ ಚಿಕ್ಕ ವಯಸ್ಸಿಗೆ ಈ ಕಾರಣದಿಂದ ಪ್ರಾ-ಣ ಕಳೆದುಕೊಳ್ಳುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಹಾಗೂ ಇದಕ್ಕೆ ಸೆಲೆಬ್ರಿಟಿಗಳು ಏನು ಹೊರತಲ್ಲ. ಅತಿ ಕಡಿಮೆ ವಯಸ್ಸಿನ ಉತ್ತಮ ಜೀವನಶೈಲಿ ಹೊಂದಿದ್ದ ನಟರುಗಳು ಕೂಡ ಈ ರೀತಿ ಹೃ-ದ-ಯ-ಘಾ-ತ-ಕ್ಕೆ ಒಳಗಾಗುತ್ತಿದ್ದಾರೆ. ಈಗಾಗಲೇ ಈ ಕಾರಣದಿಂದ ನಾವು ಸಾಕಷ್ಟು ಪ್ರತಿಭೆಗಳನ್ನು ಕಳೆದುಕೊಂಡಿದ್ದೇವೆ. ಕಳೆದ ವರ್ಷ ಇದೇ ಕಾರಣಕ್ಕೆ ನಾವು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದು ಕೊಂಡೆವು. ಆ ನೋ-ವೇ ಇನ್ನೂ ಮಾಸಿಲ್ಲ. ಮೊನ್ನೇ ಅಷ್ಟೇ ಖ್ಯಾತ ಬಾಲಿವುಡ್ ಗಾಯಕರು ಕಾರ್ಯಕ್ರಮದ ಮಧ್ಯೆ ಈ ರೀತಿ ಕುಸಿದು ಬಿದ್ದು ಹೃ-ದ-ಯ-ಘಾ-ತ-ಕ್ಕೆ ಒಳಗಾಗಿ ವೇದಿಕೆ ಮೇಲೆ ಸಾ-ವ-ನ-ಪ್ಪಿ-ದ್ದ-ರು. ಈಗ ಅದೇ ಸಾಲಿನಲ್ಲಿ ನಟ ವಿಕ್ರಮ್ ಅವರಿಗೂ ಕೂಡ ತೀವ್ರ ಹೃ-ದ-ಯ-!ಘಾ-ತ-ವಾಗಿ ಅವರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ.

ನಟ ವಿಕ್ರಮ್ ಅವರು ತಮಿಳಿನ ಕಲಾವಿದರಾದ ವಿನೋದ್ ರಾಜ್ ಎನ್ನುವವರ ಪುತ್ರ. ಸಾಮಾನ್ಯ ಕಲಾವಿದನೊಬ್ಬನ ಮಗ ಈ ರೀತಿ ದೇಶದಾದ್ಯಂತ ಗುರುತಿಸಿಕೊಳ್ಳುವಷ್ಟು ಮಟ್ಟಕ್ಕೆ ಬೆಳೆದು ಬಂದ ಕಥೆಯೇ ಒಂದು ರೋಚಕ. ಅನಿಯನ್ ಎನ್ನುವ ಒಂದು ಸಿನಿಮಾ ವಿಕ್ರಮ್ ಅವರಿಗೆ ಇಡೀ ದೇಶದಾದ್ಯಂತ ಗುರುತಿಸಿಕೊಳ್ಳುವಷ್ಟು ಖ್ಯಾತಿ ತಂದು ಕೊಟ್ಟಿತ್ತು ಹಾಗೂ ಆ ಸಿನಿಮಾದ ಅದ್ಭುತ ಅಭಿನಯದಿಂದ ತಮಿಳು ಚಿತ್ರರಂಗದಲ್ಲಿ ಭರವಸೆಯ ನಾಯಕನಾಗಿ ಹಾಗೂ ಭಾರತದ ಎಲ್ಲಾ ಚಿತ್ರರಂಗದಲ್ಲೂ ಕೂಡ ಬೇಡಿಕೆ ಇರುವ ನಟನಾಗಿ ವಿಕ್ರಂ ಅವರು ಬೆಳೆದು ನಿಂತರು. ವಿಕ್ರಮ್ ಅವರು ಮಿಸ್ಟರ್ ಕಂದಸ್ವಾಮಿ ಐ ಸ್ಕೆಚ್ ಟೆಂಪರ್ ಸೇತು ಇರುಮುಗನ್ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಗೂ ಇವರ ಅಭಿನಯಿಸಿರುವ ಪ್ರತಿ ಸಿನಿಮಾದಲ್ಲೂ ಕೂಡ ಸಿನಿಮಾದಿಂದ ಸಿನಿಮಾ ಗೆ ವಿಭಿನ್ನ ಬಗೆಯ ಪಾತ್ರಗಳನ್ನು ಮಾಡಿದ್ದಾರೆ.

ಹಾಗೂ ಅವುಗಳಲ್ಲಿ ಪ್ರಯೋಗ ಮಾಡುವ ಮೂಲಕ ಜನಮನ್ನಣೆಯನ್ನು ಗಿಟ್ಟಿಸಿಕೊಂಡಿರುವ ವಿಕ್ರಮ್ ಅವರಿಗೆ ಇಡೀ ದೇಶದಾದ್ಯಂತ ಕೋಟ್ಯಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಎಲ್ಲಾ ಭಾಷೆಯಲ್ಲಿ ಕೂಡ ಇದ್ದಾರೆ. ಇಂತಹ ಪ್ರತಿಭಾನ್ವಿತ ನಟನ ವಯಸ್ಸು ಕೇವಲ 56 ಅಷ್ಟೇ, ಈಗಲೂ ಕೂಡ ಹೊಸದೇನಾದರೂ ಸಿನಿಮಾದಲ್ಲಿ ಸಾಧಿಸುವ ಪ್ರಯತ್ನದಿಂದ ಯಾವಾಗಲೂ ಚಟುವಟಿಕೆಯಿಂದ ಕೂಡಿರುವ ಈ ವ್ಯಕ್ತಿ ನೆನ್ನೆ ಇದ್ದಕ್ಕಿದ್ದ ಹಾಗೆ ಹೃ-ದ-ಯ-ಘಾ-ತ-ದಿಂದ ಕುಸಿತಿದ್ದಾರೆ. ಇಷ್ಟು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡಿದ್ದು ಉತ್ತಮವಾದ ಆರೋಗ್ಯ ಕಾಪಾಡಿಕೊಂಡಿದ್ದ ಹಾಗೂ ನೆನ್ನೆಯವರಿಗೂ ಆರಾಮಾಗಿ ಇದ್ದ ಇವರಿಗೆ ಇದ್ದಕ್ಕಿದ್ದಂತೆ ಹೀಗಾಗಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಚೆನ್ನೈ ಸಮೀಪದಲ್ಲಿ ಕಾರ್ಯಕ್ರಮ ಒಂದಕ್ಕೆ ಹೋಗಿದ್ದ ವಿಕ್ರಮ್ ಅವರು ಅಲ್ಲೇ ಅ-ಸ್ವ-ಸ್ಥ-ರಾ-ಗಿದ್ದಾರೆ. ಕೂಡಲೇ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರಿಗೆ ಹೃದಯಘಾತವಾಗಿದೆ ಎನ್ನುವುದು ಖಚಿತವಾಗಿದೆ.

ವೈದ್ಯರು ಈಗಾಗಲೇ ಅವರ ಚಿಕಿತ್ಸೆಯ ಬಗ್ಗೆ ಗಮನ ಕೊಡುತ್ತಿದ್ದಾರೆ ಆದರೆ ಅವರ ಪರಿಸ್ಥಿತಿ ಏನಾಗಿದೆ ಎನ್ನುವುದರ ಬಗ್ಗೆ ಆಸ್ಪತ್ರೆಯ ಕಡೆಯಿಂದ ಹೆಲ್ತ್ ಬುಲೆಟಿನ್ ಪ್ರಕಟವಾಗಿಲ್ಲ. ಈ ಸುದ್ದಿ ಹಬ್ಬುತ್ತಿದ್ದ ಹಾಗೆ ತೆಲುಗು ಕನ್ನಡ ತಮಿಳು ಚಿತ್ರರಂಗ ಸೇರಿದಂತೆ ಎಲ್ಲಾ ಅಭಿಮಾನಿಗಳು ಹಾಗೂ ಕಲಾವಿದರು ಕೂಡ ಬೇಸರಗೊಂಡಿದ್ದಾರೆ. ಹಾಗೂ ಆದಷ್ಟು ಬೇಗ ವಿಕ್ರಮ್ ಅವರು ಆರೋಗ್ಯವಾಗಿ ವಾಪಸ್ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಹಿಂದೆ ನಾವು ನಮ್ಮ ಫೇವರಿಟ್ ನಟರನ್ನು ಕಳೆದುಕೊಂಡಂತೆ ಈ ಬಾರಿ ಆಗದಿರಲಿ ಆದಷ್ಟು ಬೇಗ ವಿಕ್ರಮ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು ಅವರು ಆಸ್ಪತ್ರೆಯಿಂದ ಹಿಂತಿರುಗುವಂತಾಗಲಿ ಎಂದು ನಾವು ಕೂಡ ಪ್ರಾರ್ಥಿಸೋಣ. ಈ ಮಾಹಿತಿಯನ್ನು ಶೇರ್ ಮಾಡಿ & ಈ ಪ್ರಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಿಳಿಸಿ

ಜೀ ಕನ್ನಡ ವಾಹಿನಿಯ “ಪಾರು” ಸೀರಿಯಲ್ ಬಿಟ್ಟು ಹೋಗುತ್ತಿರುವ ನಟಿ ಮೋಕ್ಷಿತಾ ಪೈ, ಯಾಕೆ ಗೊತ್ತ.?

ಮೋಕ್ಷಿತ ಈ ಹೆಸರು ಕೇಳಿದರೆ ಬಹುತೇಕ ಜನರಿಗೆ ತಿಳಿಯುವುದೇ ಇಲ್ಲ ಆದರೆ ಪಾರು ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅಖಿಲಾಂಡೇಶ್ವರಿಯ ಆಸ್ಥಾನದಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಈ ಪಾರ್ವತಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಎನ್ನುವ ಹೆಸರಾಂತ ಧಾರಾವಾಹಿಯಲ್ಲಿ ಪಾರ್ವತಿ ಎನ್ನುವ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿರುವ ಈ ನಟಿಯ ಹೆಸರೇ ಮೋಕ್ಷಿತಾ ಪೈ. ಅಖಿಲಾಂಡೇಶ್ವರಿ ಮನೆಯಲ್ಲಿ ಅಡುಗೆ ಮನೆಗೆ ಮನೆ ಕೆಲಸದವಳಾಗಿ ಸೇರಿಕೊಂಡ ಈ ಪಾರ್ವತಿ ನಂತರ ಆ ಮನೆಯ ಮೊದಲ ಮಗ ಆದಿ ಅವರ ಕೈ ಹಿಡಿದು ಕುಟುಂಬದ ಹಿರಿ ಸೊಸೆಯಾಗುತ್ತಾರೆ. ಕನ್ನಡದಲ್ಲಿ ಈ ಕಥೆ ಇಲ್ಲಿಯವರೆಗೂ ನಾನಾ ತಿರುಗುಗಳನ್ನು ಪಡೆದುಕೊಂಡು ಆದಿ ಮತ್ತು ಪಾರು ಮದುವೆಯಾಗಿ ಅಖಿಲಾಂಡೇಶ್ವರಿಯ ಕ್ಷಮೆ ಕೇಳುವ ಹಾಗೂ ಅವರ ಮನವನ್ನು ಗೆಲ್ಲುವ ಪ್ರಯತ್ನ ಪಡುತ್ತಿರುವಷ್ಟು ಹಂತಕ್ಕೆ ಬಂದು ತಲುಪಿದೆ.

ಈ ಧಾರಾವಾಹಿಯಲ್ಲಿ ಪಾರು ಎನ್ನುವ ಹಳ್ಳಿ ಹುಡುಗಿಯ ಪಾತ್ರ ಮಾಡಿರುವ ಮೋಕ್ಷಿತ ಪೈ ಅವರ ಅಭಿನಯಕ್ಕೆ ಮನ ಸೋಲದೆ ಇರುವವರೇ ಇಲ್ಲ. ಹೆಚ್ಚಾಗಿ ಅಕ್ಷರ ಕಲಿಯದೇ ಇದ್ದರೂ ಯಜಮಾನಿ ಮನೆ ಮೇಲೆ ಅತ್ಯಂತ ಅಭಿಮಾನ ಹೊಂದಿರುವ ಪಾರು ಅಖಿಲಾಂಡೇಶ್ವರಿ ಕುಟುಂಬದ ಎಲ್ಲಾ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡುವ ಸಾಹಸಕ್ಕೆ ಕೈ ಹಾಕುತ್ತಾಳೆ. ಅಖಿಲಾಂಡೇಶ್ವರಿಯು ಸಹ ಇದುವರೆಗೆ ಪಾರು ಮೇಲೆ ಬಹಳ ಪ್ರೀತಿ ಹಾಗೂ ವಿಶ್ವಾಸವನ್ನು ಇಟ್ಟುಕೊಂಡಿದ್ದರು. ಆದರೆ ಆದಿ ಮತ್ತು ಪಾರು ವಿವಾಹವಾಗಿರುವ ವಿಷಯ ತಿಳಿದ ಮೇಲೆ ಪಾರ್ವತಿಯ ಮೇಲೆ ಅಖಿಲಾಂಡೇಶ್ವರಿ ಕೋಪ ತಾರಕಕ್ಕೇರಿದೆ. ದಿನಕ್ಕೊಂದು ಟಾಸ್ಕ್ ಕೊಡುವ ಮೂಲಕ ಪಾರ್ವತಿಗೆ ಆ ಮನೆಯ ಜವಾಬ್ದಾರಿ ಹೊರುವ ಅರ್ಹತೆ ಇದೆಯೇ ಎಂದು ಪರೀಕ್ಷೆ ಮಾಡುತ್ತಿದ್ದಾರೆ ಮನೆ ಒಡತಿ ಅಖಿಲಾಂಡೇಶ್ವರಿ ಅವರು.

ಈ ಕಥೆಯೂ ಕಳೆದ ಎರಡು ವರ್ಷಗಳಿಂದ ಕನ್ನಡ ಕಿರುತೆರೆಯ ಪ್ರೇಕ್ಷಕರ ಮನ ಗೆದ್ದಿದ್ದು ಮೋಕ್ಷಿತಾ ಪೈ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿದೆ. ಮಾಡಲ್ ಆಗಿ ಕೂಡ ಇರುವ ಮೋಕ್ಷಿತ ಅವರು ಧಾರಾವಾಹಿಯ ನಟನೆ ಜೊತೆಗೆ ಹಲವಾರು ಜಾಹೀರಾತುಗಳನ್ನು ಕೂಡ ಕಾಣಿಸಿಕೊಂಡಿದ್ದಾರೆ. ಮತ್ತು ಇತ್ತೀಚೆಗೆ ಅವರಿಗೆ ಬೇರೆ ಭಾಷೆಯಿಂದ ಕೂಡ ಆಫರ್ಗಳು ಹೆಚ್ಚಾಗಿ ಬರುತ್ತಿದೆಯಂತೆ. ಸದ್ಯಕ್ಕೆ ಮೋಕ್ಷಿತ ಪೈ ಅವರು ತಮಿಳಿನ ಧಾರಾವಾಹಿ ಒಂದರಲ್ಲಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರಂತೆ. ಆ ಧಾರವಾಹಿ ಬೇರೆ ಯಾವುದೂ ಅಲ್ಲ ಕನ್ನಡದಲ್ಲಿ ಪುಟ್ಟಕ್ಕನ ಮಕ್ಕಳು ಎನ್ನುವ ಹೆಸರಿನಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಹಿರಿಯ ಕಲಾವಿದೆ ಉಮಾಶ್ರೀ ಅವರು ಮುಖ್ಯ ಭೂಮಿಕೆಯಲ್ಲಿ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಈ ಧಾರಾವಾಹಿಯು ತಮಿಳಿನಲ್ಲೂ ಕೂಡ ರಿಮೇಕ್ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಪುಟ್ಟಕ್ಕನಿಗೆ ಇರುವ ಮೂರು ಮಕ್ಕಳಲ್ಲಿ ಎರಡನೇ ಮಗಳಾದ ಸ್ನೇಹ ಪಾತ್ರವು ಬಹಳ ಖಡಕ್ ಆಗಿದೆ.

ಈಗ ಮೋಕ್ಷಿತ ಪೈ ಅವರು ಪುಟ್ಟಕ್ಕ ಮಕ್ಕಳು ಧಾರವಾಹಿಯ ಸ್ನೇಹ ಪಾತ್ರವನ್ನು ತಮಿಳುನಲ್ಲಿ ಮಾಡಲು ಒಪ್ಪಿಕೊಂಡಿದ್ದಾರಂತೆ. ಈ ಧಾರಾವಾಹಿಗೆ ಸಂಬಂಧಪಟ್ಟ ಪೋಸ್ಟರ್ಗಳು ಎಲ್ಲಾ ಕಡೆ ಹರಿದಾಡುತ್ತಿದ್ದು ಮೋಕ್ಷಿತಾ ಅವರು ಅದರಲ್ಲಿ ಅಭಿನಯಿಸುವುದು ಖಚಿತವಾಗಿದೆ. ಹಾಗಾದರೆ ಪಾರು ಧಾರಾವಾಹಿಯಲ್ಲಿ ಅವರು ಇನ್ನು ಮುಂದೆ ಕಾಣಿಸಿಕೊಳ್ಳುವುದಿಲ್ಲವಾ ಎನ್ನುವ ಪ್ರಶ್ನೆಗೆ ನೇರವಾಗಿ ಅವರೇ ಉತ್ತರ ಕೊಟ್ಟಿರುವ ಮೋಕ್ಷಿತಾ ಅವರು ಯಾವುದೇ ಕಾರಣಕ್ಕೂ ನಾನು ಕನ್ನಡದಲ್ಲಿ ಪಾರು ಧಾರಾವಾಹಿ ಅಭಿನಯ ನಿಲ್ಲಿಸುವುದಿಲ್ಲ. ಎರಡು ಧಾರಾವಾಹಿಗಳಿಗೂ ಕೂಡ ಸಮಯ ಹೊಂದಿಸಿಕೊಂಡು ಭಾಗಿಯಾಗಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದೇ ರೀತಿ ನಮ್ಮ ಕನ್ನಡದ ಕಲಾವಿದರಿಗೆ ಬೇರೆ ಭಾಷೆಗಳಲ್ಲಿ ಕೂಡ ಇನ್ನಷ್ಟು ಹೆಚ್ಚಿನ ಅವಕಾಶಗಳು ಸಿಗುವಂತಾಗಲಿ ಎಂದು ಹಾರೈಸೋಣ. ಪಾರು ಸೀರಿಯಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಕಾಮೆಂಟ್ ಮುಖಾಂತರ ತಿಳಿಸಿ

ಮಗುವಿಗಿಂತ ನನಗೆ ಇದೇ ಮುಖ್ಯ ಹೇಳುವ ಮೂಲಕ ಮತ್ತೆ ಟ್ರೋಲ್ ಆದ ನಿವೇದಿತಾ ಗೌಡ.

ನಿವೇದಿತ ಗೌಡ ಈಗ ಕರ್ನಾಟಕದಾದ್ಯಂತ ಫೇಮಸ್ ಸೆಲೆಬ್ರಿಟಿ. ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಸೂಪರ್ ಎಂಟರ್ಟೈನ್ಮೆಂಟ್ ಕೊಡುವ ನಿವೇದಿತಾ ಗೌಡ ಅವರು ತಮ್ಮ ಪ್ರಬುದ್ಧತೆಯ ಮಾತುಗಳು ಹಾಗೂ ವಿಶೇಷವಾದ ಕನ್ನಡ ಭಾಷಾ ಬಳಕೆ ಮತ್ತು ಪೆದ್ದಾಟಗಳಿಂದ ಎಲ್ಲಾ ವಯೋಮಾನದವರಿಗೂ ಕೂಡ ಫೇವರೆಟ್. ಅವರ ಈ ನಡವಳಿಕೆಯಿಂದಲೇ ಸಾಕಷ್ಟು ಬಾರಿ ಟ್ರೋಲಿಗೆ ಒಳಗಾಗಿದ್ದಾರೆ ನಿವೇದಿತ ಗೌಡ ಅವರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಇವರು ಕಿರುತೆರೆಯಲ್ಲೂ ಕೂಡ ಅಷ್ಟೇ ಬಿಸಿಯಾಗಿದ್ದಾರೆ ಮತ್ತು ಇತ್ತೀಚೆಗೆ ಮಿಸಸ್ ಇಂಡಿಯಾ ಆಗುವ ಆಸೆ ಹೊತ್ತು ಅದರ ಸಲುವಾಗಿ ಕಷ್ಟಪಡುತ್ತಿದ್ದಾರೆ. ಇಷ್ಟೆಲ್ಲ ಬ್ಯುಸಿ ಶೆಡ್ಯೂಲ್ ನ ನಡುವೆ ಸುವರ್ಣ ನ್ಯೂಸ್ ವರದಿಗಾರರು ಕೇಳಿದ ಹಲವು ಪ್ರಶ್ನೆಗಳಿಗೆ ಸಿಹಿಯಾದ ಮಾತುಗಳಲ್ಲಿ ಉತ್ತರವನ್ನು ಕೂಡ ಕೊಟ್ಟಿದ್ದಾರೆ. ಅಷ್ಟಕ್ಕೂ ಅವರಿಗೆ ಕೇಳಲಾದ ಪ್ರಶ್ನೆಗಳೇನು ಮತ್ತು ಅದಕ್ಕೆ ನಿವಿ ಕೊಟ್ಟ ಉತ್ತರವೇನು ಗೊತ್ತಾ?

ಮೊದಲಿಗೆ ವರದಿಗಾರರು ನಿವೇದಿತಾ ಗೌಡ ನಿಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ ಆ ಪ್ರಶ್ನೆಗಳನ್ನು ನಾನು ನಿಮಗೆ ಇಲ್ಲಿ ಕೇಳುತ್ತೇನೆ ಎಂದು ಸಂದರ್ಶನ ಶುರು ಮಾಡಿ ಮೊದಲಿಗೆ ನಿವೇದಿತ ಗೌಡ ಅವರನ್ನು ಅವರೇ ಟ್ರೋಲ್ ಮಾಡಿಕೊಳ್ಳುತ್ತಿದ್ದಾರೆ ಯಾಕೆ ಎಂದು ಕೇಳಿದರು. ಅದಕ್ಕೆ ಉತ್ತರ ಕೊಟ್ಟ ನಿವೇದಿತ ಗೌಡ ಅವರು ಹೇಗಿದ್ದರೂ ಎಲ್ಲರೂ ಕೂಡ ನನ್ನನ್ನು ಟ್ರೋಲ್ ಮಾಡುತ್ತಾರೆ ಹೀಗಾಗಿ ನಾನು ಕೂಡ ನನ್ನನ್ನು ಟ್ರೋಲ್ ಮಾಡಿಕೊಂಡು ಬಿಟ್ಟರೆ ಬೇರೆಯವರು ಮಾಡದೇ ಇರಬಹುದು ಎಂದು ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಜೊತೆಗೆ ಟ್ರೋಲ್ ಮಾಡುವವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ನಿವೇದಿತಾ ಗೌಡ ಕೊಟ್ಟ ಉತ್ತರ ತುಂಬಾ ಪ್ರಬುದ್ಧತೆಯಿಂದ ಕೂಡಿತ್ತು ಹಾಗೂ ಎಲ್ಲರೂ ಅವರ ಮಾತುಗಳನ್ನು ಮೆಚ್ಚುವಂತಿತ್ತು.

ಟ್ರೋಲ್ ಮಾಡುವುದು ಅವರವರ ಬುದ್ಧಿವಂತಿಕೆಗೆ ಬಿಟ್ಟಿದ್ದು. ಕೆಲವೊಮ್ಮೆ ನನಗೆ ಗೊತ್ತಿಲ್ಲದೆ ನನ್ನಿಂದ ಅಚಾತುರ್ರ್ಯಗಳು ನಡೆಯುತ್ತವೆ ಆಗ ಅವರು ಅದನ್ನು ಬಳಸಿಕೊಂಡು ಟ್ರೋಲ್ ಮಾಡಬಹುದು ಆದರೆ ಇದರಿಂದ ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವೇ ಇಲ್ಲ, ನನ್ನ ತಪ್ಪುಗಳು ಇದ್ದಾಗ ಖಂಡಿತವಾಗಿಯೂ ನಾನು ಅದನ್ನು ತಿದ್ದುಕೊಂಡು ಮುಂದೆ ಮರು ಕಳುಹಿಸಿದಂತೆ ಇರಲು ಪ್ರಯತ್ನಿಸುತ್ತೇನೆ. ಆದರೆ ನನ್ನ ತಪ್ಪಿಲ್ಲದೆ ನನ್ನನ್ನು ಟ್ರೋಲ್ ಮಾಡಿದಾಗ ಅದರ ಬಗ್ಗೆ ಬೇಸರ ಪಟ್ಟುಕೊಂಡು ಕುಗ್ಗಿ ಹೋಗೋವಷ್ಟು ವೀಕ್ ಮೈನ್ಡೆಡ್ ನಾನಲ್ಲ ಹಾಗೂ ಹೆಚ್ಚಿನ ಬಾರಿ ನಾನು ಇವುಗಳ ಕಡೆ ಗಮನವೇ ಕೊಡುವುದಿಲ್ಲ ನನ್ನ ಕೆಲಸಗಳನ್ನು ಮಾಡಿಕೊಂಡು ಮುಂದುವರಿಯುತ್ತಿರುತ್ತೇನೆ ಎಂದಿದ್ದಾರೆ. ಜೂನಿಯರ್ ಚಂದನ್ ಬಗ್ಗೆ ಎಲ್ಲರೂ ನಿಮ್ಮನ್ನು ಪ್ರಶ್ನೆ ಕೇಳುತ್ತಿರುತ್ತಾರೆ ಅದರಿಂದ ನಿಮಗೆ ಕಿರಿಕಿರಿ ಕೂಡ ಆಗಬಹುದು ಆದರೂ ಅವರುಗಳಿಗೆ ಏನು ಉತ್ತರ ಕೊಡುತ್ತೀರಾ ಎಂದು ಕೇಳಿದಾಗ ನಿವಿ ಹೀಗೆಂದರು.

ಜೀವನದಲ್ಲಿ ಸಾಧನೆ ಮಾಡೋದಕ್ಕೆ ಇನ್ನೂ ತುಂಬಾ ಇದೆ ನಂತರ ಆ ವಿಚಾರವನ್ನು ಯೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಹಾಗೆಯೇ ಚಂದನ್ ಅವರು ನಿಮ್ಮ ಕೆಲಸಗಳಿಗೆ ಸಪೋರ್ಟ್ ಮಾಡುತ್ತಾರಾ ಎಂದು ಕೇಳಿದಾಗ ಆ ವಿಷಯದಲ್ಲಿ ನಾನು ತುಂಬಾ ಪುಣ್ಯ ಮಾಡಿದ್ದೇನೆ ಎಲ್ಲರೂ ನನ್ನ ಮತ್ತು ಚಂದನ್ ಕಾಂಬಿನೇಷನ್ ಬಗ್ಗೆ ಏನೇನೋ ಮಾತನಾಡುತ್ತಾರೆ ಆದರೆ ಚಂದನ್ ಅಂತ ಲೈಫ್ ಪಾರ್ಟ್ನರ್ ಸಿಕ್ಕಿರುವುದು ನನಗೆ ಅದೃಷ್ಟ. ನನಗಿಂತ ಹೆಚ್ಚಾಗಿ ನನ್ನ ವಿಷಯದಲ್ಲಿ ಅವರೇ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಯಾವಾಗಲೂ ಏನಾದರೂ ಮಾಡುತ್ತಿರು ಎಂದು ನನ್ನನ್ನು ಮೋಟಿವೇಟ್ ಮಾಡುತ್ತಿರುತ್ತಾರೆ. ಇದರಿಂದಲೇ ನಾನು ಇಷ್ಟೆಲ್ಲ ಸಾಧಿಸುವುದಕ್ಕೆ ಸಾಧ್ಯವಾಗುತ್ತಿರುವುದು ಎಂದು ಇನ್ನೂ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ ನಿವೇದಿತ ಗೌಡ. ನಿವೇದಿತಾ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.