Home Blog Page 344

ಮಗಳನ್ನು ಬಿಗ್ ಬಾಸ್ ಗೆ ಕಳಿಸುವ ಯೋಚನೆ ಮಾಡಿರುವ ಮಾಸ್ಟರ್ ಆನಂದ್, ಈ ಬಾರಿಯ 9ನೇ ಸೀಸನ್ ಕಂಟೆಸ್ಟೆಂಟ್ ಆಗುತ್ತಾರೆ ವಂಶಿಕಾ.

ವಂಶಿಕಾ ಹೆಸರು ಈಗ ಕರ್ನಾಟಕದಾದ್ಯಂತ ಫುಲ್ ಫೇಮಸ್. ಐದು ವರ್ಷ ವಯಸ್ಸಿನ ಈ ಚಿಕ್ಕ ವಂಶಿಕಾ ಸದ್ಯಕ್ಕೆ ಕನ್ನಡ ಕಿರುತೆಯನ್ನು ಆಳುತ್ತಿದ್ದಾಳೆ ಎಂದರೆ ಸುಳ್ಳಾಗಲಾರದು. ಕನ್ನಡ ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿಗೆ ಪ್ರಸಾರವಾಗಿದ್ದ ನಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋನಲ್ಲಿ ವನ್ಷಿಕಾ ಮತ್ತು ಆಕೆಯ ತಾಯಿ ತೇಜಸ್ವಿನಿ ಕಂಟೆಸ್ಟೆಂಟ್ಗಳಾಗಿ ಭಾಗವಹಿಸಿದ್ದರು. ಅಮ್ಮ ಮಗಳು ಕಾರ್ಯಕ್ರಮದಲ್ಲಿ ವಿನ್ನರ್ ಕೂಡ ಆದರು. ಈ ರಿಯಾಲಿಟಿ ಶೋ ಪ್ರತಿದಿನವೂ ಕೂಡ ಒಂದಲ್ಲೊಂದು ವಿಶೇಷತೆಯಿಂದ ಜನಮನ್ನಣೆ ಪಡೆದು ಅದ್ಭುತವಾದ ಟಿ ಆರ್ ಪಿ ಗಳಿಸಿ ಕೊಂಡಿತ್ತು. ಕಾರ್ಯಕ್ರಮವನ್ನು ನೋಡುತ್ತಿದ್ದ ವೀಕ್ಷಕರಿಗೆ ವನ್ಷಿಕ ಅಂತು ಬಹಳ ಮನರಂಜನೆ ಕೊಟ್ಟು ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿದ್ದಳು. ಈ ಕಾರಣದಿಂದಲೇ ಕಾರ್ಯಕ್ರಮ ಮುಗಿದ ಬಳಿಕವೂ ವನ್ಷಿಕಾಗೆ ಇದ್ದ ಕ್ರೇಜ್ ಕಡಿಮೆ ಆಗಲೇ ಇಲ್ಲ.

ಸಾಮಾಜಿಕ ಜಾಲತಾಣದಲ್ಲಿ ಕೂಡ ವಂಶಿಕಾ ಮಾಡುವ ತುಂಟ ತರಲೆಗಳ ವಿಡಿಯೋಗಳು ಹಾಗೂ ಅವಳು ಮಾಡುವ ರೀಲ್ಸ್ ಗಳು ತುಂಬಾ ವೈರಲ್ ಆಗುತ್ತಿವೆ. ಕನ್ನಡ ಚಲನಚಿತ್ರರಂಗದ ಬಾಲನಟನಾಗಿ ಎಲ್ಲರ ಮೆಚ್ಚುಗೆ ಗಳಿಸಿದ ಮಾಸ್ಟರ್ ಆನಂದ್ ಅವರ ಪುತ್ರಿಯಾಗಿರುವ ವಂಶಿಕಾ ಅಪ್ಪನನ್ನೇ ಮೀರಿಸುವಷ್ಟು ತುಂಟಿ ಹಾಗು ಅಷ್ಟೇ ಟ್ಯಾಲೆಂಟ್ ಕೂಡ ಹೊಂದಿದ್ದಾಳೆ. ವಂಶಿಕಾಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಫಾಲೋವರ್ಸ್ ಇದ್ದಾರೆ. ಇವಳ ಪ್ರತಿಯೊಂದು ವಿಡಿಯೋಗಳಿಗೂ ಕೂಡ ಲಕ್ಷಾಂತರ ಮಂದಿ ಲೈಕ್ಸ್ ಕೊಟ್ಟು ಕಮೆಂಟ್ ಮಾಡುತ್ತಾರೆ. ಸದ್ಯಕ್ಕೆ ವಂಶಿಕಾ ಕರ್ನಾಟಕದಲ್ಲಿ ಫುಲ್ ಫೇಮಸ್ ಸೆಲೆಬ್ರಿಟಿ ಆಗಿ ಹೋಗಿದ್ದಾಳೆ ಮತ್ತು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚ ಗಿಲ್ಲಿ ಗಿಲ್ಲಿ ಎನ್ನುವ ರಿಯಾಲಿಟಿ ಶೋ ಅಲ್ಲಿ ಕೂಡ ವನ್ಷಿಕಾ ಭಾಗವಹಿಸುತ್ತಿದ್ದಾಳೆ. ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ವಂಶಿಕಾಳೇ ಆ ಶೋನ ಫಸ್ಟ್ ಅಟ್ರಾಕ್ಷನ್ ಎನ್ನಬಹುದು.

ಪ್ರತಿ ವಾರವು ಕೂಡ ಅವಳು ಮಾಡುವ ಸ್ಕಿಟ್ ಗಳು ಪ್ರೇಕ್ಷಕರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತವೆ. ಜೊತೆಗೆ ಅವಳು ಮಾಡುವ ಕ್ಯೂಟ್ ಅಭಿನಯ, ಅವಳು ಕೊಡುವ ಅದ್ಭುತ ಎಕ್ಸ್ಪ್ರೆಶನ್ಗಳು, ತನಗೆ ತಾನೆ ಬಿಲ್ಡಪ್ ಕೊಟ್ಟಿಕೊಂಡು ಎಲ್ಲರನ್ನೂ ನಗಿಸುವ ಪರಿ, ಇಂತಹ ಕಠಿಣ ಡೈಲಾಗ್ ಗಳನ್ನು ಕೂಡ ಪಟಪಟ ಹೇಳುವ ಅವಳ ಬುದ್ಧಿವಂತಿಕೆ ಎಲ್ಲರಿಗೂ ಇಷ್ಟವಾಗಿ ಹೋಗಿದೆ. ಇವಳ ಸ್ಕಿಟ್ ನೋಡುವ ಸಲುವಾಗಿಯೇ ವಾರಾಂತ್ಯ ಬರುವ ವರೆಗೂ ಕಾಯುವ ಅಭಿಮಾನಿಗಳು ಇದ್ದಾರೆ. ಈಗ ಮತ್ತೊಂದು ವಿಷಯ ಮಾಸ್ಟರ್ ಆನಂದ್ ಅವರ ತಲೆಗೆ ಹೊಳೆದಿದೆ. ಈ ಬಾರಿ ಬಿಗ್ ಬಾಸ್ ಶೋಗೆ ಮಗಳನ್ನು ಕಳಿಸಿದರೆ ಹೇಗೆ ಎನ್ನುವ ಮಾತುಗಳನ್ನಾಡಿದ್ದಾರೆ ಮಾಸ್ಟರ್ ಆನಂದ್ ಅವರು. ಅವರು ಈ ರೀತಿ ಹೇಳಲು ಕಾರಣ ಕೂಡ ಇದೆ.

ಬೆಳಿಗ್ಗೆ 9:30 ಆದರೂ ಕೂಡ ವಂಶಿಕ ಹಾಗೂ ಅವರ ತಾಯಿ, ನಿದ್ದೆಯಿಂದ ಎದ್ದಿರಲಿಲ್ಲ ಹಾಗಾಗಿ ಮಾಸ್ಟರ್ ಆನಂದ್ ಅವರು ಅವರಿಬ್ಬರು ಮಲಗಿರುವ ವಿಡಿಯೋ ಮಾಡಿ ಬೆಳಿಗ್ಗೆ 9:30 ಆದರೂ 11 ಅಥವಾ 12 ಆದರೂ ಇವರಿಬ್ಬರು ಏಳುವುದೇ ಇಲ್ಲ. ಹಾಗಾಗಿ ಇವರಿಬ್ಬರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ನಿದ್ದೆ ಇಲ್ಲದೆ ಹೇಗೆ ಪರದಾಡುತ್ತಾರೆ ಎಂದು ನೋಡುವ ಕುತೂಹಲ ನನಗೆ ಇದೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಈ ಮಾತು ನಿಜವಾದರೆ ವಂಶಿಕಾ ಅತಿ ಚಿಕ್ಕ ವಯಸ್ಸಿನಲ್ಲಿಯೇ ಬಿಗ್ ಬಾಸ್ ಮನೆಗೆ ಹೋದ ಮೊದಲ ಬಾಲಕಿ ಆಗುತ್ತಾರೆ. ಆನಂದ್ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು. ? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಪುನೀತ್ ಫೋಟೋ ಕಂಡ ಕೂಡಲೇ ಗಳಗಳನೆ ಕಣ್ಣೀರು ಹಾಕಿದ ಕಿಚ್ಚ ಸುದೀಪ್.

ನಟ ಕಿಚ್ಚ ಸುದೀಪ್ ಪುನೀತ್ ಅವರ ಜೊತೆ ಒಳ್ಳೆ ಬಾಂಧವ್ಯವನ್ನು ಹೊಂದಿದ್ದರು ಕಿಚ್ಚ ಸುದೀಪ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾನೇ ಹೆಸರು ಮಾಡಿದ್ದಾರೆ ಅವರು ಮಾಡಿದ ಸಾಧನೆ ಹಾಗೂ ಅವರು ನಮ್ಮ ಕನ್ನಡ ಸಿನಿಮಾಗೆ ತಂದಿರುವ ಕೀರ್ತಿ ತುಂಬಾನೇ ಅಪಾರ ಇನ್ನು ನಮ್ಮ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿ ತುಂಬಾನೇ ದಿನಗಳು ಕಳೆದವು ಆದರೆ ಅವರು ನೆನಪುಗಳು ಮಾತ್ರ ನಮ್ಮನ್ನು ಬಿಟ್ಟು ಹೋಗಿಲ್ಲ ಅವರು ನನ್ನ ನೆನೆಸಿಕೊಂಡು ತುಂಬಾನೇ ಜನ ಈಗಲೂ ಅಳುತ್ತಾರೆ. ವಿಕ್ರಾಂತ್‌ ರೋಣ ಪ್ರಮೋಷನ್‌ನಲ್ಲಿ ನಟ ಕಿಚ್ಚ ಸುದೀಪ್‌ ಸದ್ಯ ಸಖತ್‌ ಬ್ಯುಸಿಯಾಗಿದ್ದಾರೆ.

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ವೇದಿಕೆಯ ಮೇಲೆ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಅಲ್ಲದೇ ನಟ ಶಿವರಾಜ್‌ ಕುಮಾರ್‌ ಜೊತೆ ಹೆಜ್ಜೆ ಹಾಕಿದ್ದಾರೆ ಜುಲೈ 28 ರಂದು ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ರಿಲೀಸ್ ಆಗುತ್ತಿದೆ. ಬಿಡುಗಡೆ ದಿನಾಂಕ ಸನಿಹವಾಗುತ್ತಿದ್ದಂತೆ ಪ್ರಮೋಷನ್‌ ಕಾರ್ಯ ಚುರುಕುಗೊಳಿಸಿದ್ದಾರೆ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ, ಕೊಚ್ಚಿ ಸೇರಿದಂತೆ ಹಲವು ಕಡೆ ಸುದೀಪ್ ಹಾಗೂ ಚಿತ್ರತಂಡ ಸಿನಿಮಾ ಪ್ರಚಾರ ಮಾಡಿ ಬಂದಿದ್ದಾರೆ.

ಶಿವರಾಜ್​ಕುಮಾರ್ ಅವರು ಈ ಬಾರಿ ‘ಡಿಕೆಡಿ 6’ಗೆ ಜಡ್ಜ್​ ಆಗಿರುವುದು ವಿಶೇಷ. ರಕ್ಷಿತಾ ಕೂಡ ಜಡ್ಜ್​ ಸ್ಥಾನದಲ್ಲಿ ಇದ್ದಾರೆ. ಈಗ ಇವರ ಜತೆ ಸುದೀಪ್ ಕೂಡ ಸೇರಿಕೊಂಡಿದ್ದಾರೆ.‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ಅನೇಕ ಟ್ಯಾಲೆಂಟ್​ಗಳಿಗೆ ವೇದಿಕೆ ಆಗಿದೆ. ಸಾಕಷ್ಟು ಡ್ಯಾನ್ಸರ್​ಗಳು ಇಲ್ಲಿಗೆ ಆಗಮಿಸಿ ತಮ್ಮ ಕಲೆಯನ್ನು ತೋರಿಸಿದ್ದಾರೆ ಹಲವು ಸಿನಿಮಾಗಳಲ್ಲಿ ಬ್ಯುಸಿ ಇರುವ ಶಿವರಾಜ್​ಕುಮಾರ್ ಅವರು ಈ ಬಾರಿ ‘ಡಿಕೆಡಿ-6’ ಗೆ ಜಡ್ಜ್​ ಆಗಿರುವುದು ವಿಶೇಷ. ರಕ್ಷಿತಾ ಕೂಡ ಜಡ್ಜ್​ ಸ್ಥಾನದಲ್ಲಿ ಇದ್ದಾರೆ. ಈಗ ಇವರ ಜತೆ ಸುದೀಪ್ ಕೂಡ ಸೇರಿಕೊಂಡಿದ್ದಾರೆ. ಬಾಲ್ಯದಿಂದಲೂ ಪುನೀತ್​ ಜೊತೆ ಗೆಳೆತನ ಹೊಂದಿದ್ದ ಕಿಚ್ಚ ಸುದೀಪ್​ ಅವರನ್ನು ನೆನಪಿಸಿಕೊಳ್ಳುತ್ತಾನೆ ಇರುತ್ತಾರೆ. ಸುಮಾರು ಕಾರ್ಯಕ್ರಮಗಳಲ್ಲಿ ಅವರಿಗೆ ಗೌರವವನ್ನು ಸಲ್ಲಿಸುತ್ತಾರೆ ಹಾಗೂ ಸುಮಾರು ವೇದಿಕೆಯಲ್ಲಿ ಕೂಡ ಕೊಡುತ್ತಾರೆ. ಈಗ ಜೀ ಕನ್ನಡದಲ್ಲಿ ನಡೆಯುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಅಪ್ಪು ಅವರಿಗೆ ಗೌರವ ಸಲ್ಲಿಸಿದ್ದಾರೆ ಅದು ಸುದೀಪಿನ ನೇತೃತ್ವದಲ್ಲಿ.

ಅವರ ಫೋಟೋ ಹಾಕಿದ ಕೂಡಲೇ ಸುದೀಪ್ ಅವರ ಕಣ್ಣೀರು ಬರಲು ಶುರುವಾಯಿತು.ನಂತರ ಅವರಿಗೆ ಇಷ್ಟವಾದಂತ ಹಾಡು ಕೂಡ ಹಾಡಿದರು. ಸುದೀಪ್ ಹಾಗೂ ಶಿವರಾಜ್​ಕುಮಾರ್ ಅವರು ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಕಾರಣಕ್ಕೂ ಇವರ ನಡುವೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಇನ್ನು ವಿಕ್ರಾಂತರೋಣದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ರಾ ರಕ್ಕಮ್ಮತುಂಬಾನೆ ಫೇಮಸ್ ಆಗಿದೆ ಎಲ್ಲರ ಮನೆ ಮಾತು ಕೂಡ ಆಗಿದೆ. ‘ವಿಕ್ರಾಂತ್ ರೋಣ’ ಚಿತ್ರವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್​ನ ಜಾಕ್ವೆಲಿನ್ ಫರ್ನಾಂಡಿಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರು ‘ವಿಕ್ರಾಂತ್​ ರೋಣ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಬಗ್ಗೆ ಅವರಿಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇದೆ. ಅವರು ಈ ಚಿತ್ರದ ಬಗ್ಗೆ ಹೆಚ್ಚು ಕಾಳಜಿ ತೋರುತ್ತಿದ್ದಾರೆ. ಈಗಾಗಲೇ ಪರ ಭಾಷೆಯಲ್ಲಿ ಒಂದು ಹಂತದ ಪ್ರಚಾರ ಕಾರ್ಯ ಪೂರ್ಣಗೊಂಡಿದೆ. ಈ ಚಿತ್ರದ ಮೇಲೆ ನಮ್ಮ ಕನ್ನಡ ಜನತೆಯವರು ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಕೆಜಿಎಫ್ ತರಾನೇ ಇದು ಒಂದು ದೊಡ್ಡ ಯಶಸ್ಸು ಸಿಗಬೇಕಂತ ಎಲ್ಲರ ಬಯಕೆ ಅದೇ ರೀತಿ ಇದು ಹೆಸರು ಮಾಡುವ ಚಿಹ್ನೆಗಳು ಕೂಡ ಸಿಗುತ್ತಿದೆ. ಇನ್ನ ಕಿಚ್ಚ ಸುದೀಪ್ ಅಂತು ಇಡೀ ದೇಶಕ್ಕೆ ಗೊತ್ತು ಈ ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸೋಣ. ಕಿಚ್ಚ & ಅಪ್ಪು ಅವರ ಸ್ನೇಹದ ಭಾಂದವ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮಾಡಿ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.

ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಅಶ್ವಿನಿ, ಅಪ್ಪು ಕಂಡ ಕನಸುಗಳಿಗೆ ರೆಕ್ಕೆಯಾದ ಅಶ್ವಿನಿ.

ಅಭಿಮಾನಿಗಳೇ ನಮ್ಮ ಮನೆ ದೇವರೆಂದ ದೇವರು ನಮ್ಮನ್ನು ಅ’ಗ’ಲಿ 8 ಮಾಸಗಳು ಉರುಳಿವೆ ಹೌದು ಅಭಿಮಾನಿ ದೇವರುಗಳಿಗೆ ದೇವರಾಗಿದ್ದರು ನಮ್ಮ ಅಪ್ಪು. ಇಂದು ಅವರ ಅಗಲಿಕೆಯ ನೆನಪು ಪ್ರತಿಯೊಬ್ಬ ಕನ್ನಡಿಗನ ಹೃದಯ ಮಿಡಿಯುವಿಕೆಗೆ ಸಾಕ್ಷಿಯಾಗಿದೆ. ನವೀನ್ ಸಜ್ಜು ರವರ ಗಾಯನದಂತೆ ಅಂದು ಅಭಿಮಾನಿ ದೇವರೆಂದ ಪುಣ್ಯಾತ್ಮ ಇಂದು ಮನೆ ದೇವರಾಗಿ ಕುಳಿತು ಮೌನತಪಸ್ವಿಯಾಗಿದ್ದಾರೆ ನಮ್ಮ ಅಪ್ಪು. ಅಪ್ಪು ರವರು ಅಭಿಮಾನಿಗಳಿಗಷ್ಟೇ ಸೀಮಿತವಾಗಿರದೆ ಕರ್ನಾಟಕದ ಪ್ರತಿಯೊಂದು ಮನೆ-ಮನಗಳನ್ನು ತಲುಪಿದ್ದರು. ಇವರ ಅಗಲಿಕೆಯ ನಂತರ “ಜೊತೆಗಿರದ ಜೀವ ಎಂದಿಗಿಂತ ಜೀವಂತ” ಎಂಬ ನಾಣ್ಣುಡಿ ಬೆಳಕಿಗೆ ಬಂದಿದೆ. ಅಪ್ಪು ಅವರು ಅವರ ಸಮಾಜ ಸೇವೆ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಜನಮಾನಸಗಳಲ್ಲಿ ಇಂದಿಗೂ ಜೀವಂತವಾಗಿ ಉಳಿದುಕೊಂಡಿದ್ದಾರೆ. ಆದರೆ ಅವರು ತಮ್ಮ ಕನಸುಗಳ ಜೊತೆಗೆ ನಮ್ಮನ್ನು ಅಗಲಿದ್ದಾರೆ.

ಹೌದು ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆ ಸ್ಥಾಪಿಸಿದ್ದ ಅಪ್ಪು ರವರು ಇದರ ಮೂಲಕ ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಹಾಗೂ ಇನ್ನಷ್ಟು ಉತ್ತಮ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವ ಕನಸುಗಳು ಕನಸುಗಳಾಗಿಯೆ ಉಳಿದಿರುವುದು ಕನ್ನಡಿಗರಿಗೆ ಹಾಗೂ ಅಪ್ಪು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಇದಲ್ಲದೆ ಅಪ್ಪು ರವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತಲ್ಲೀನರಾಗಿದ್ದರು. ಅನೇಕ ಅನಾಥಾಶ್ರಮಗಳು ಹಾಗೂ ಶಾಲೆಗಳನ್ನು ನಡೆಸುತ್ತಿದ್ದರು. ಆದರೆ ಇಷ್ಟೆಲ್ಲಾ ಕನಸುಗಳನ್ನು ಹೊಂದಿದ್ದ ಅಪ್ಪು ರವರು ಇಂದು ವಿಧಿಯಾಟಕ್ಕೆ ಶರಣಾಗಿದ್ದಾರೆ. ಆದರೂ ಸಹ ಅಪ್ಪು ಅವರ ಕನಸುಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಅಶ್ವಿನಿ ಪುನೀತ್ ರವರ ಕಾರ್ಯವೈಖರಿಯಿಂದ ಅಪ್ಪು ಅಭಿಮಾನಿಗಳಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಅಪ್ಪುವಿನ ಅಗಲಿಕೆಯನ್ನು ಮರೆಸಲು ಅಶ್ವಿನಿ ಪುನೀತ್ ರವರು ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಸನ್ನದ್ಧರಾಗಿದ್ದಾರೆ.

ಅಶ್ವಿನಿ ಪುನೀತ್ ರವರು ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯನ್ನು ಮುನ್ನಡೆಸಲು ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಡಾಕ್ಟರ್ ರಾಜ್ ಕುಟುಂಬದ ಕಿರಿಯ ಸೊಸೆಯಾಗಿ ಹಾಗೂ ಅಪ್ಪು ರವರ ಮಡದಿಯಾಗಿ ಕರ್ತವ್ಯಗಳನ್ನು ನಿಭಾಯಿಸಿಕೊಂಡು ಬಂದಿದ್ದರು. ಇದೀಗ ಅಪ್ಪು ರವರ ಕನಸುಗಳಲ್ಲಿ ಒಂದಾದ ಪಿ ಆರ್ ಕೆ ಪ್ರೊಡಕ್ಷನ್ ಅನ್ನು ಮುನ್ನಡೆಸುವ ಹೊಣೆಯನ್ನು ಹೊತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಡಾಕ್ಟರ್ ಪಾರ್ವತಮ್ಮ ರಾಜಕುಮಾರ್ ಅವರೂ ಸಹ ಪತಿಗೆ ಬೆನ್ನೆಲುಬಾಗಿ ಪೂರ್ಣಿಮಾ ಎಂಟರ್ಪ್ರೈಸಸ್ ಸಂಸ್ಥೆ ಮೂಲಕ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.ಇತ್ತೀಚಿಗೆ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರವರ ಫೋಟೋ ಮುಂದೆ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರು ಕ್ಲಿಕ್ಕಿಸಿಕೊಂಡ ಫೋಟೋ ಒಂದು ವೈರಲ್ ಆಗಿತ್ತು. ಇದೇ ರೀತಿ ಅಶ್ವಿನಿ ಅವರು ಸಹ ಅತ್ತೆಯ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.

ಬೆಂಗಳೂರಿನ ಗಾಂಧಿನಗರದಲ್ಲಿರುವ ಆಫೀಸಿಗೆ ಪ್ರತಿದಿನವೂ ಹಾಜರಾಗಿ ಸಿನಿಮಾ ಸಂಬಂಧಿ ಚಟುವಟಿಕೆಗಳಲ್ಲಿ ಅಶ್ವಿನಿ ಅವರು ಭಾಗಿಯಾಗುತ್ತಾರೆ. ಹಾಗೆಯೇ ಅನೇಕ ನಿರ್ದೇಶಕರು ಗಳನ್ನು ಭೇಟಿಯಾಗಿ ಚರ್ಚಿಸಿ ಅಪ್ಪು ಅವರ ಕನಸುಗಳ ಸಾಕಾರಕ್ಕೆ ಮೆಟ್ಟಿಲುಗಳನ್ನು ನಿರ್ಮಿಸುತ್ತಿದ್ದಾರೆ. ಆಫೀಸಿನಲ್ಲಿರುವ ಪಾರ್ವತಮ್ಮ ರಾಜಕುಮಾರ್ ಅವರ ಫೋಟೋವನ್ನು ತಮ್ಮ ಪಕ್ಕದಲ್ಲೇ ಇರಿಸಿಕೊಂಡಿದ್ದು ಇದನ್ನು ಡಾಕ್ಟರ್ ರಾಜ್ ಕುಟುಂಬದ ಅಭಿಮಾನಿಗಳು ಸೊಸೆ ಆಫ್ ಪಾರ್ವತಮ್ಮ ಎಂಬ ಟ್ಯಾಗ್ ಲೈನ್ನಲ್ಲಿ ವೈರಲ್ ಮಾಡಿದ್ದಾರೆ. ಹೀಗೆ ನಮ್ಮ ಅಪ್ಪು ಅವರ ಕನಸುಗಳಿಗೆ ಅಶ್ವಿನಿ ಅವರು ಬೆಂಗಾವಲಾಗಿ ನಿಂತು ಪುನೀತ್ ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪಣತೊಟ್ಟು ಸಾಗುತ್ತಿದ್ದಾರೆ. ಅಶ್ವಿನಿ ಅವರ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ. ಲೈಕ್ & ಶೇರ್ ಮಾಡುವುದನ್ನು ಮರೆಯಬೇಡಿ.

ಮತ್ತೆ ಹುಟ್ಟಿ ಬಂದ ಸಮನ್ವಿ, ಸಂತಸದ ಸುದ್ದಿ ಹಂಚಿಕೊಂಡ ಅಮೃತ ನಾಯ್ಡು.

ಅಮೃತ ನಾಯ್ಡು ಅವರು ಕನ್ನಡ ಕಿರುತೆರೆಯ ಫೇಮಸ್ ಫೇಸ್, ಕಳೆದೆರಡು ದಶಕಗಳಿಂದ ಕನ್ನಡದ ಹಲವಾರು ಸೀರಿಯಲ್ ಗಳಲ್ಲಿ ಮುಖ್ಯಪಾತ್ರಗಳಲ್ಲಿ ಹಾಗೂ ಪೋಷಕ ಪಾತ್ರಗಳಲ್ಲಿ ಸಕ್ರಿಯವಾಗಿದ್ದಾರೆ ಇವರು. ಗಂಗೋತ್ರಿ, ಕುಸುಮಾಂಜಲಿ, ಪುಣ್ಯಕೋಟಿ ಮತ್ತು ಇತ್ತೀಚೆಗೆ ಸತ್ಯ ಇನ್ನು ಮುಂತಾದ ಹಲವಾರು ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ ಅಮೃತ ನಾಯ್ಡು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಅಲ್ಲಿ ಕೂಡ ಅಮೃತ ನಾಯ್ಡು ಮತ್ತು ಅವರ ಆರು ವರ್ಷದ ಮಗಳು ಸಮನ್ವಿ ಭಾಗವಹಿಸಿದ್ದರು. ಈ ಶೋ ಅಲ್ಲಿ ಭಾಗವಹಿಸಿದ ದಿನದಿಂದಲೂ ಸಮನ್ವಿ ಅವರಿಗೆ ಒಂದು ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿತ್ತು. ಇನ್ಸ್ಟಾಗ್ರಾಮ್ ಫೇಸ್ಬುಕ್ ಸೇರಿದಂತೆ ಎಲ್ಲಾ ಕಡೆಯೂ ಕೂಡ ಸಮನ್ವಿ ಹಾಗೂ ಅಮೃತ ನಾಯ್ಡು ಅವರು ಸಾಕಷ್ಟು ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಅಲ್ಲಿ ಪ್ರತಿ ಎಪಿಸೋಡಿನಲ್ಲಿ ಕೂಡ ತುಂಬಾ ಅದ್ಭುತವಾಗಿ ಪರ್ಫಾರ್ಮ್ ಮಾಡುತ್ತಿದ್ದ ಅಮೃತ ನಾಯ್ಡು ಮತ್ತು ಸಮನ್ವಿ ಈ ಅಮ್ಮ ಮಗಳ ಜೋಡಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಉಳಿದ ಕಂಟೆಸ್ಟೆಂಟ್ ಗಳಿಗೆ ಟಫ್ ಕಾಂಪಿಟೇಷನ್ ಕೊಡುತ್ತಿದ್ದ ಈ ಜೋಡಿ, ಸಿಗುತ್ತಿದ್ದ ಬ್ರೇಕ್ ಸಮಯದಲ್ಲಿ ಸೆಟ್ಟಿನಲ್ಲಿದ್ದ ಎಲ್ಲರ ಜೊತೆ ರೀಲ್ಸ್ ಮಾಡುತ್ತಾ ಖುಷಿ ಖುಷಿಯಾಗಿದ್ದರು. ಅವುಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮಿಸುತಿದ್ದರು. ಅಷ್ಟು ಚಿಕ್ಕ ವಯಸ್ಸಿನ ಸಮನ್ವಿ ಪರ್ಫಾರ್ಮೆನ್ಸ್ ನೋಡಿ ಎಲ್ಲರೂ ವಾವ್ ಎನ್ನುತ್ತಿದ್ದರು. ಈಗ ತಾನೆ ಬೆಳೆಯುತ್ತಿದ್ದ ಆ ಬಾಲ ಪ್ರತಿಭೆಯ ಮೇಲೆ ಯಾರ ಕಣ್ಣು ಬಿದ್ದಿತ್ತೋ ಏನೋ ಶಾಪಿಂಗ್ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಅಮೃತ ನಾಯ್ಡು ಮತ್ತು ಸಮನ್ವಿ ಇಬ್ಬರು ಕೂಡ ಅಚಾನಕ್ಕಾಗಿ ಅ’ಪ’ಘಾ’ತಕ್ಕೆ ಈಡಾಗಿದ್ದರು.

ಈ ಅ:ಪ’ಘಾ’ತ ಸಂಭವಿಸಿದ ಸಮಯದಲ್ಲಿ ಅಮೃತ ನಾಯ್ಡು ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಇವರಿಗೂ ಸಹ ತೀ’ವ್ರತರದ ಪೆಟ್ಟಾಗಿತ್ತು, ಆದರೆ ಆರು ವರ್ಷದ ಸಮನ್ವಿ ಅ’ಪ’ಘಾ’ತ’ದ ತೀ’ವ್ರ’ತೆಗೆ ಗಂಭೀರವಾಗಿ ಗಾಯಗೊಂಡು ಅಲ್ಲೇ ಮೃ’ತ ಪಟ್ಟಿದ್ದರು. ಆ ನೋ’ವಿನ ದುಃ’ಖ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೆ ಬಾಧಿಸಿತ್ತು ಎನ್ನಬಹುದು. ಕರ್ನಾಟಕದ ಎಲ್ಲಾ ಕಿರುತೆರೆ ಪ್ರೇಕ್ಷಕರು ಕೂಡ ಸಮನ್ವಿಯ ಸಾ’ವಿ’ನ ಸುದ್ದಿ ಕೇಳಿ ಕ’ಣ್ಣೀ’ರಿಟ್ಟಿದ್ದರು. ಇನ್ನು ಆಕೆಯ ತಾಯಿ ಅಮೃತ ನಾಯ್ಡು ಮತ್ತು ತಂದೆ ರೂಪೇಶ್ ನಾಯ್ಡು ಅವರ ದುಃ’ಖದ ಆಳವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಬಹಳ ವರ್ಷದ ಬಳಿಕ ತಾಯಿಯಾಗಿದ್ದ ಅಮೃತ ನಾಯ್ಡು ಅವರು ಸಮನ್ವಿ ಅವರು ಹುಟ್ಟಿದ ಬಳಿಕ ಬಹಳ ಸಂತೋಷವಾಗಿದ್ದರು. ಸಮನ್ವಿ ಹುಟ್ಟುವ ಮೊದಲೇ ಅವರು 9 ತಿಂಗಳಿನಲ್ಲಿ ತಮ್ಮ ಮೊದಲ ಮಗುವನ್ನು ಕಳೆದುಕೊಂಡಿದ್ದರು.

ಅಪಘಾತ ಆದ ಬಳಿಕ ಬಹಳ ದಿನಗಳವರೆಗೆ ಇದೇ ದುಃ”%ಖದಲ್ಲಿ ಇದ್ದರು ಹೆತ್ತವರು. ಈಗ ಮತ್ತೊಮ್ಮೆ ಅವರ ಕುಟುಂಬದಲ್ಲಿ ಸಂತಸದ ವಾತಾವರಣ ಉಂಟಾಗಿದೆ. ಇದಕ್ಕೆ ಕಾರಣವನ್ನು ಅಮೃತ ನಾಯ್ಡು ಅವರೇ ತಮ್ಮ ಸೋಶಿಯಲ್ ಮಾಡಿದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಮೃತ ನಾಯ್ಡು ಅವರು ಮತ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಸಮನ್ವಿಯೇ ಮತ್ತೊಮ್ಮೆ ನನ್ನ ಮಗನಾಗಿ ಜನಿಸಿದ್ದಾಳೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನು ನೋಡಿ ಕರ್ನಾಟಕದ ಜನತೆ ಕೂಡ ಖುಷಿಪಟ್ಟಿದ್ದಾರೆ. ಇನ್ನಾದರೂ ಅಮೃತ ನಾಯ್ಡು ಅವರು ಈಗಾಗಲೇ ತಮ್ಮ ಜೀವನದಲ್ಲಿ ಹಲವಾರು ಕಹಿ ದಿನಗಳನ್ನು ಕಳೆದಿದ್ದಾರೆ. ಇನ್ನಾದರೂ ಅದೆಲ್ಲ ಮುಗಿದು ಇವರು ಸಂತಸವಾಗಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಸಮನ್ವಿ ಈ ಮಗುವಿನ ರೂಪದಲ್ಲಿ ಹುಟ್ಟಿ ಬಂದಿದ್ದಾಳೆ ಹಾಗಾಗಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ

ಅಪ್ಪು ಕುಟುಂಬದವರೊಟ್ಟಿಗೆ ಕುಳಿತು ಹಾಡಿದ ಕೊನೆ ಹಾಡು ಯಾವುದು ಗೊತ್ತಾ.? ನಿಜಕ್ಕೂ ಕಣ್ಣೀ’ರು ಬರುತ್ತೆ ಅಪ್ಪು ಅವರ ಈ ಹಾಡು ಕೇಳಿದ್ರೆ.

ಕನ್ನಡದ ಪವರ್ ಸ್ಟಾರ್ ಅಭಿಮಾನಿಗಳ ದೇವರು ಕರ್ನಾಟಕದ ಕಣ್ಮಣಿ ಬಡವರ ನೋವಿಗೆ ಮಿಡಿಯುತ್ತಿದ್ದ ಧೀನಬಂದು ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಇಡೀ ಕರ್ನಾಟಕದಾದ್ಯಂತ ಒಬ್ಬ ಸ್ಟಾರ್ ಹೀರೋ ಆಗಿ ದೊಡ್ಮನೆ ಹುಡುಗನಾಗಿ ಮಾತ್ರವಲ್ಲದೇ ಪ್ರತಿಯೊಂದು ಮನೆಯ ಜನರಿಗೂ ಅವರ ಕುಟುಂಬದ ಒಬ್ಬ ಸದಸ್ಯನಂತೆ ಆತ್ಮೀಯ ಅನುಬಂಧ ಹೊಂದಿದ್ದರು. ಪುನೀತ್ ರಾಜಕುಮಾರ್ ಅವರನ್ನು ಬಾಲ್ಯದಿಂದಲೇ ನಮ್ಮ ಜನ ಮೆಚ್ಚಿಕೊಂಡಿದ್ದಾರೆ. ಅವರ ಮುಗ್ಧ ನಗು, ಅಷ್ಟು ಚಿಕ್ಕ ವಯಸ್ಸಿಗೆ ಅವರು ಹೊಂದಿದ್ದ ಆ ಅದ್ಭುತ ಪ್ರತಿಭೆ, ಜೊತೆಗೆ ಅಪೂರ್ವ ಕಂಠಸಿರಿ ಎಲ್ಲರನ್ನು ಇವರತ್ತ ಸೆಳೆಯುವಂತೆ ಮಾಡಿತ್ತು. ಬಾಲ್ಯದಿಂದಲೇ ಅಪ್ಪನೊಂದಿಗೆ ಅಭಿನಯಿಸಲು ಶುರು ಮಾಡಿದ ಪುನೀತ್ ರಾಜಕುಮಾರ್ ಅವರು ಆಡುವ ವಯಸ್ಸಿಗೆ ರಾಷ್ಟ್ರಪತಿ ಅವರಿಂದ ರಾಷ್ಟ್ರಪ್ರಶಸ್ತಿ ಗಳಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿದ್ದರು. ಅಪ್ಪು ಎನ್ನುವ ಹೆಸರಿನಿಂದ ಖ್ಯಾತಿಯಾದ ಈ ಬಾಲ ಪ್ರತಿಭೆ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ.

ಬಾಲ್ಯದಿಂದಲೇ ಅಪ್ಪು ಅವರು ಅಭಿನಯದೊಂದಿಗೆ ಹಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ತೀರ ಆಶ್ಚರ್ಯ ಎನಿಸುವಂತೆ ಮಾಡುವ ಸಂಗತಿ ಯಾವುದೆಂದರೆ ಭಕ್ತ ಪ್ರಹ್ಲಾದ ಸಿನಿಮಾದಂತಹ ಅಷ್ಟು ಕಠಿಣ ಶ್ಲೋಕಗಳನ್ನು ಕೂಡ ನಿರರ್ಗಳವಾಗಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ಪು ಅವರು ತಮ್ಮ ಬಾಯಿಂದ ಅದ್ಭುತವಾಗಿ ಅರ್ಥಗರ್ಭಿತವಾಗಿ ಯಾವುದೇ ಲೋಪವು ಇಲ್ಲದಂತೆ ರಾಗಬದ್ಧವಾಗಿ ಹಾಡಿದ್ದು. ಈ ಕಲೆ ಅವರಿಗೆ ಅವರ ರಕ್ತದಿಂದಲೇ ಬಂದಿದೆ ಎಂದರೆ ತಪ್ಪಾಗಲಾರದು. ಅಣ್ಣಾವ್ರು ಸಹ ಓದಿದ್ದು ತುಂಬಾ ಕಡಿಮೆ ಆಗಿದ್ದರೂ ಕೂಡ ಅವರ ಕಂಠಸಿರಿ ಅಮೋಘವಾಗಿತ್ತು. ಯಾವುದೇ ಸಂಗೀತ ತರಗತಿಗಳನ್ನು ಪಡೆಯದಿದ್ದರೂ ಕೂಡ ತುಂಬಾ ರಾಗಬದ್ಧವಾಗಿ ಒಬ್ಬ ಗಾಯಕನಿಗೆ ಸಮವಾಗಿ ಅಣ್ಣಾವ್ರು ಆಡುತ್ತಿದ್ದರು. ಕನ್ನಡದಲ್ಲಿ ದಾಖಲೆ ಮಟ್ಟದಲ್ಲಿ ದೇವರ ಸ್ತುತಿಗಳನ್ನು ಹಾಡಿರುವ ಖ್ಯಾತಿ ಡಾ. ರಾಜಕುಮಾರ್ ಅವರಿಗೆ ಸಲ್ಲುತ್ತದೆ.

ಅದರಲ್ಲೂ ಮಲೈ ಮಹದೇಶ್ವರ ಅವರ ಜಾನಪದ ಗೀತೆಗಳನ್ನು ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಸೇರಿದಂತೆ ಹಲವಾರು ದೇವರುಗಳ ಭಕ್ತಿ ಸ್ತುತಿಗಳನ್ನು ಅಣ್ಣಾವ್ರು ತಮ್ಮ ಸಿರಿಕಂಠದಲ್ಲಿ ಹಾಡಿದ್ದಾರೆ. ಮತ್ತು ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಮಾಣಿಕ್ಯ ವೀಣಾ ಉಪನಾಲಯಂತಿ ಅಂತಹ ಸಂಸ್ಕೃತ ಶ್ಲೋಕವನ್ನು ಕೂಡ ರಾಗಬದ್ಧವಾಗಿ ಯಾವುದೇ ಕಿಂಚಿತ್ತು ಚ್ಯುತಿ ಇಲ್ಲದಂತೆ ಅಣ್ಣಾವ್ರು ಹಾಡಿದ್ದಾರೆ. ಈ ಹಾಡನ್ನು ಇಂದಿಗೂ ಕೇಳಿದರೂ ಸಹ ಎಲ್ಲರ ಮೈ ರೋಮಾಂಚನಗೊಳ್ಳುತ್ತದೆ. ಅದೇ ಸಾಲಿಗೆ ಅಣ್ಣವರ ಕಿರಿಯ ಪುತ್ರ ಪುನೀತ್ ರಾಜಕುಮಾರ್ ಅವರು ಸೇರಿದರು. ಬಾಲ್ಯದಲ್ಲಿ ಇವರು ಹಾಡಿರುವ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಕಾಣದಂತೆ ಮಾಯವಾದನು, ಅಮ್ಮ ಸೀತಮ್ಮ ತಂದೆ ಶ್ರೀರಾಮ, ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಇನ್ನು ಮುಂತಾದ ಹಾಡುಗಳು ಎಂದಿಗೂ ಅಜರಾಮರ.

ಇತ್ತೀಚಿಗೆ ಕೂಡ ಅಪ್ಪು ಅವರು ಸಿನಿಮಗಳಿಗಾಗಿ ಹಾಡುತ್ತಿದ್ದರು. ಆಕಾಶ್, ಬಿಂದಾಸ್, ವೀರ ಕನ್ನಡಿಗ, ಟೋನಿ, ದೊಡ್ಮನೆ ಹುಡುಗ ಇನ್ನು ಮುಂತಾದ ಅನೇಕ ಸಿನಿಮಾ ಹಾಡುಗಳಿಗೆ ಅಪ್ಪು ಅವರು ಧ್ವನಿಯಾಗಿದ್ದರು. ಜೊತೆಗೆ ಅವರ ತಂದೆಯ ಸವಿನೆಪಿಗಾಗಿ ಅವರದೇ ಆದ ಅಶ್ವಿನಿ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿ ವರ್ಷವೂ ಒಂದೊಂದು ಹಾಡನ್ನು ಹಾಡುತ್ತಿದ್ದರು. ಇತ್ತೀಚಿಗೆ ಮಂತ್ರಾಲಯದಲ್ಲೂ ಕೂಡ ರಾಘವೇಂದ್ರ ಸ್ವಾಮಿ ಅವರ ವರ್ಷಾರಾಧನೆಯಲ್ಲಿ ಹಾಡಿದ್ದರು. ಮತ್ತು ಸೋಶಿಯಲ್ ಮೀಡಿಯಾದಲ್ಲಿ ಈಗ ಅಪ್ಪು ಅವರು ಕೊನೆಯದಾಗಿ ತಮ್ಮ ಕುಟುಂಬದವರ ಜೊತೆ ಹಾಡಿದ ಹಾಡೊಂದು ವೈರಲ್ ಆಗಿದೆ. ಕುಟುಂಬದವರೆದೊಂದಿಗೆ ಅಪ್ಪು ಅವರು ಕೊನೆಯದಾಗಿ ಅಣ್ಣಾವ್ರ ಸಿನಿಮಾದ ಹಾಡೊಂದನ್ನು ಹಾಡಿದ್ದಾರೆ. ಈ ಹಾಡನ್ನು ಅವರು ಆಡುವಾಗ ಅವರ ಸುತ್ತಲೂ ಅವರ ಕುಟುಂಬದ ಎಲ್ಲಾ ಹೆಣ್ಣು ಮಕ್ಕಳು ಕುಳಿತಿದ್ದಾರೆ. ಈ ವಿಡಿಯೋವನ್ನು ನೋಡಿದರೆ ಎಂಥವರ ಕರುಳು ಕೂಡ ಚುರುಕ್ ಎನ್ನುವಂತಿದೆ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸಿನಿಮಾ, ಬಿಸಿನೆಸ್ ಎಲ್ಲಾ ಬಿಟ್ಟು ಸನ್ಯಾಸಿ ಆಗಲು ಹೊರಟಿರುವ ರಶ್ಮಿಕಾ ಮಂದಣ್ಣ ಈ ಹೊಸ ಅವತಾರ ನೋಡಿ.

ಕೊಡಗಿನ ಕುವರಿ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಳ್ಳುವ ರಶ್ಮಿಕ ಮಂದಣ್ಣ ಅವರು ಕನ್ನಡದ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದ ಮೂಲಕ ಅಭಿನಯ ಆರಂಭಿಸಿದರು ಕೂಡ ಇಂದು ಅತೀ ಕಡಿಮೆ ವಯಸ್ಸಿಗೆ ಇಡೀ ದೇಶದ ಪ್ರಮುಖ ಎಲ್ಲಾ ಭಾಷೆಗಳಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿರುವ ನಟಿಯಾಗಿದ್ದಾರೆ. ಕಿರಿಕ್ ಪಾರ್ಟಿ ಎನ್ನುವ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ತುಂಬಾ ಸಿಂಪಲ್ ಹುಡುಗಿಯಂತೆ ಮುಗ್ಧವಾಗಿ ಕನ್ನಡಿಗರ ಎದುರು ಕಾಣಿಸಿಕೊಂಡು ಮಾಧ್ಯಮಗಳಲ್ಲಿ ಕನ್ನಡದಲ್ಲಿ ಮುದ್ದಾಗಿ ಮಾತನಾಡುತ್ತಿದ್ದ ರಶ್ಮಿಕ ಮಂದಣ್ಣ ಅವರು ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗದ ಬಳಿಕ ಕನ್ನಡ ಭಾಷೆಯನ್ನು ಕಷ್ಟ ಎಂದು ಅವಮಾನಿಸತೊಡಗಿದರು. ಮತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಜೊತೆಗಿನ ಪ್ರೀತಿ ಹಾಗೂ ಅವರೊಂದಿಗೆ ಮಾಡಿಕೊಂಡಿದ್ದ ನಿಶ್ಚಿತಾರ್ಥವನ್ನು ಮುರಿದುಕೊಂಡ ಬಳಿಕ ಮತ್ತಷ್ಟು ಜನರ ಕೆಂಗಣ್ಣಿಗೆ ಗುರಿಯಾದರು.

ಇದಾದ ಬಳಿಕ ಕನ್ನಡಿಗರು ಇವರನ್ನು ಟ್ರೋಲ್ ಮಾಡಲು ಶುರು ಮಾಡಿದರು. ಜೊತೆಗೆ ಇತ್ತೀಚೆಗೆ ರಶ್ಮಿಕ ಮಂದಣ್ಣ ಅವರ ವರ್ತನೆಯ ಕೂಡ ಟ್ರೋಲ್ ಮಾಡುವವರ ಬಾಯಿಗೆ ಆಹಾರವಾಗುವಂತಿತ್ತು. ಹಾಗಾಗಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ವಿವಾದ ಮಾಡಿಕೊಂಡು ಎಡವಟ್ಟಾಗಿ ನಡೆದುಕೊಂಡು ಅಥವಾ ಯೋಚನೆ ಮಾಡದೆ ಮಾತನಾಡಿ ನಟಿ ರಶ್ಮಿಕ ಮಂದಣ್ಣ ಅವರು ಟ್ರೋಲಿಗೆ ಒಳಗಾಗುತ್ತಿದ್ದರು. ಉದ್ದೇಶಪೂರ್ವಕವಾಗಿ ಇವರ ಪ್ರತಿಯೊಂದು ಪೋಸ್ಟ್ಗಳನ್ನು ಕೂಡ ಗೇಲಿ ಮಾಡಿ ಟ್ರೊಲ್ ಮಾಡುವ ಜನರು ಕೂಡ ಕರ್ನಾಟಕದಲ್ಲಿದ್ದಾರೆ. ಇವರ ಎಲ್ಲಾ ಕೋಪಕ್ಕೆ ಕೂಡ ನೇರ ಹೊಣೆ ರಶ್ಮಿಕ ಮಂದಣ್ಣ ಅವರು ಎಂದರೆ ಅದು ಕೂಡ ತಪ್ಪಾಗಲಾರದು. ತಾಯಿನಾಡು ಹಾಗೂ ತಾಯಿ ಭಾಷೆ ಮೇಲೆ ಅಭಿಮಾನವನ್ನು ಮರೆತ ಕಾರಣ ಇವರು ಇಷ್ಟು ಟ್ರೋಲ್ ದಾಳಿಗೆ ಒಳಗಾಗುತ್ತಿದ್ದಾರೆ ಎಂದೂ ಕೂಡ ಊಹಿಸಬಹುದು.

ಕೆಲವೊಮ್ಮೆ ಯಾವುದಕ್ಕೂ ಕೇರ್ ಮಾಡದ ನಟಿ ಕೆಲವೊಮ್ಮೆ ಲೈವ್ ಗೆ ಬಂದು ಟ್ರೋಲ್ ಮಾಡುವವರ ವಿರುದ್ಧ ಮಾತುಗಳನ್ನು ಸಹ ಆಡುತ್ತಾರೆ. ಏನೇ ಆದರೂ ಕೂಡ ರಶ್ಮಿಕ ಮಂದಣ್ಣ ಅವರ ನಡವಳಿಕೆಗಳಲ್ಲಿ ಉಳುಕು ಹುಡುಕಿ ಹೀಯಾಳಿಸುವುದನ್ನು ಕನ್ನಡದ ಟ್ರೋಲಿಗರು ಬಿಡುವುದಿಲ್ಲ. ಈಗ ವೈರಲ್ ಆಗುತ್ತಿರುವ ಅವರ ಮತ್ತೊಂದು ವಿಡಿಯೋ ಇಂದ ಮತ್ತೊಮ್ಮೆ ಕರ್ನಾಟಕದಾದ್ಯಂತ ರಶ್ಮಿಕ ಮಂದಣ್ಣ ಸನ್ಯಾಸಿ ಆಗುತ್ತಿದ್ದಾರೆ ಎನ್ನುವ ಹೆಸರಿನಲ್ಲಿ ಫೇಮಸ್ ಆಗುತ್ತಿದ್ದಾರೆ. ಇವರು ಈ ರೀತಿ ಅನಿಸಿಕೊಳ್ಳುವುದಕ್ಕೆ ಕಾರಣ ಏನೆಂದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ ರಶ್ಮಿಕ ಮಂದಣ್ಣ ಅವರು ಕಾವಿ ಬಣ್ಣದ ಉಡುಗೆ ತೊಟ್ಟು ಕಾಣಿಸಿಕೊಂಡಿದ್ದರು. ಕಾವಿ ಬಣ್ಣದ ಟಾಪ್ ಹಾಗೂ ಟ್ರೌಸರ್ ಧರಿಸಿದ ರಶ್ಮಿಕ ಮಂದಣ್ಣ ಅವರು ಕಾರಿನಿಂದ ಇಳಿದು ಫ್ಲಾಟ್ ಒಂದರ ಒಳಗೆ ಹೋಗುತ್ತಿದ್ದರು.

ಆಗ ಅಲ್ಲಿದ್ದ ಮಾಧ್ಯಮದವರು ಹಿಂದಿಯಲ್ಲಿ ಮಾತನಾಡಿ ಅವರಿಗೆ ಫೋಸ್ ಕೊಡಲು ಹೇಳಿದರು ಮಾಧ್ಯಮವದವರ ನಿರೀಕ್ಷೆಯಂತೆ ಕಾರಿನಿಂದ ಇಳಿದು ಎರಡು ನಿಮಿಷ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ರಶ್ಮಿಕ ಮಂದಣ್ಣ ಅವರು ಅಷ್ಟೇ ಬೇಗ ಫ್ಲಾಟ್ ಒಳಗೆ ಹೋದರು. ಈ ವಿಡಿಯೋವನ್ನು ನೋಡುತ್ತಿದ್ದರೆ ಅದು ಅವರ ಹಿಂದಿ ಪ್ರಾಜೆಕ್ಟ್ ಗಳಿಗೆ ಸಂಬಂಧಿಸಿದ ಸಮಯದಲ್ಲಿ ಮಾಡಿರುವ ವಿಡಿಯೋ ಇರಬಹುದು ಎನಿಸುತ್ತದೆ. ಆದರೆ ರಶ್ಮಿಕ ಆ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿರುವುದರಿಂದ ಕನ್ನಡಿಗರು ಮಾತ್ರ ರಶ್ಮಿಕಾ ಮಂದಣ್ಣ ಅವರು ಎಲ್ಲವನ್ನು ತ್ಯಜಿಸಿ ಸನ್ಯಾಸಿ ಆಗಲು ಹೊರಟಿದ್ದಾರೆ ಎನ್ನುವ ಪಟ್ಟಿ ಕಟ್ಟಿ ನಟಿಯ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ. ಈ ವಿಚಾರದ ನಿಮ್ಮ ಅಭಿಪ್ರಾಯವೇನು.? ರಶ್ಮಿಕಾ ಸನ್ಯಾಸಿ ಆಗೋದೆ ಸರಿ ಅಂತಿರಾ.? ತಪ್ಪದೆ ನಿಮ್ಮ ಉತ್ತರವನ್ನು ಕಾಮೆಂಟ್ ನಲ್ಲಿ ತಿಳಿಸಿ. ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.

ರಾಧಾ ರಮಣ ಸೀರಿಯಲ್ ಖ್ಯಾತಿಯ ಶ್ವೇತಾ ಪ್ರಸಾದ್ ಮದುವೆಯಾಗಿ 10 ವರ್ಷವಾದರೂ ಮಕ್ಕಳಾಗಿಲ್ಲ ಯಾಕೆ ಗೊತ್ತಾ.? ಮಕ್ಕಳ ವಿಚಾರ ಕೇಳಿದ್ದಕ್ಕೆ ಗರಂ ಆದ ಶ್ವೇತ ನೀಡಿದ ಉತ್ತರವೇನು ನೋಡಿ.

ನಟಿ ಶ್ವೇತ ಪ್ರಸಾದ್ ಅವರು ಬಣ್ಣ ಹಚ್ಚುವ ಮುಂಚೆ ಆರ್ ಜೆ ಪ್ರದೀಪ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮೊದಲಿನಿಂದಲೂ ತುಂಬಾ ಆಕ್ಟಿವ್ ಆಗಿರುವ ನಟಿ ಶ್ವೇತ ಪ್ರಸಾದ್ ಅವರಿಗೆ ಅಭಿನಯಿಸಲು ಅವಕಾಶ ಸಿಕ್ಕಿದ್ದೇ ಸಾಮಾಜಿಕ ಜಾಲತಾಣದಿಂದ ಎನ್ನಬಹುದು. ಫೇಸ್ಬುಕ್ ನಲ್ಲಿ ಯಾವಾಗಲೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ಶ್ವೇತಾ ಪ್ರಸಾದ್ ಅವರ ಫೋಟೋವನ್ನು ಒಮ್ಮೆ ಕಿರುತೆರೆ ಧಾರಾವಾಹಿ ನಿರ್ದೇಶಕಿ ಶೃತಿ ನಾಯ್ಡು ಅವರು ನೋಡಿದರು. ಆ ದಿನವೇ ತಮ್ಮ ಮುಂದಿನ ಧಾರಾವಾಹಿಗೆ ಈಕೆಯನ್ನೇ ನಾಯಕಿಯನ್ನಾಗಿ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡರು. ಮೊದಮೊದಲು ಅಭಿನಯದಲ್ಲಿ ಏನು ತಿಳಿದಿಲ್ಲ ಎನ್ನುವ ಕಾರಣಕ್ಕೆ ನಟಿಸಲು ಹಿಂದೇಟು ಹಾಕಿದ ಶ್ವೇತ ಅವರಿಗೆ ಅವರ ಪತಿಯೇ ನಟಿಸಲು ತುಂಬಾ ಪ್ರೋತ್ಸಾಹ ನೀಡಿ ಅವರು ಕಿರುತೆರೆಯಲ್ಲಿ ಇಷ್ಟೊಂದು ಫೇಮಸ್ ಆಗಲು ಕಾರಣರಾದರು.

ಶೃತಿ ನಾಯ್ಡು ಅವರ ನಿರ್ದೇಶನದ ಹಾಗೂ ನಿರ್ಮಾಣದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆರು ಅತ್ತೆಯರ ಮುದ್ದಿನ ಸೊಸೆಯ ಕಥೆಯಾದ ಶ್ರೀರಸ್ತು ಶುಭಮಸ್ತು ಎನ್ನುವ ಧಾರಾವಾಹಿಯಲ್ಲಿ ಜಾಹ್ನವಿ ಎನ್ನುವ ಪಾತ್ರವನ್ನು ತುಂಬಾ ಮುಗ್ಧವಾಗಿ ಅಭಿನಯಿಸಿದ್ದರು ಶ್ವೇತ ಅವರು. ಇದಾದ ಬಳಿಕ ಅವರು ಕಿರುತೆರೆ ಜನರಿಗೆ ರಾಧಾ ಟೀಚರ್ ಆಗಿ ಚಿರಪರಿತರು. ರಾಧಾ ರಮಣ ಎನ್ನುವ ಹೆಸರಿನಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿಯಲ್ಲಿ ರಾಧಾ ಎನ್ನುವ ಟೀಚರ್ ಪಾತ್ರದಲ್ಲಿ ಶ್ವೇತ ಅವರು ಕಾಣಿಸಿಕೊಂಡಿದ್ದರು. ಇದರ ಜೊತೆ ಹಲವಾರು ಬಾರಿ ಕನ್ನಡದ ಕಿರುತರೆ ಕಾರ್ಯಕ್ರಮಗಳಲ್ಲಿ ಮತ್ತು ರಿಯಾಲಿಟಿ ಶೋ ಗಳಲ್ಲಿ ಕೂಡ ಶ್ವೇತ ಪ್ರಸಾದ್ ಅವರು ಭಾಗವಹಿಸಿದ್ದಾರೆ. ಮತ್ತು 2017ರ ಬೆಂಗಳೂರು ಟೈಮ್ಸ್ ನ ಮೋಸ್ಟ್ ಡಿಸೈಬಲ್ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಷ್ಟೆಲ್ಲಾ ಬಿಝಿ ನಡುವೆಯೂ ಈಗಲೂ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ.

ಮೊನ್ನೆ ಅಷ್ಟೇ ಕಡಲ ತೀರದಲ್ಲಿ ಕುಳಿತು ತೆಗೆಸಿಕೊಂಡಿದ್ದ ಹಾಟ್ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಚ್ಚಿಕೊಂಡು ನೆಟ್ಟಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದರು ಶ್ವೇತಾ ಅವರು. ಯಾವಾಗಲೂ ಇವರು ಮಾಡುವ ಪೋಸ್ಟ್ಗಳಿಗೆ ಅಭಿಮಾನಿಗಳು ಮಾಡುವ ಕಾಮೆಂಟ್ ಗಳ ಜೊತೆ ಒಂದು ಪ್ರಶ್ನೆಯು ಕೂಡ ಇರುತ್ತದೆ. ಶ್ವೇತಾ ಅವರಿಗೆ ಅಭಿಮಾನಿಗಳು ಮಗು ಯಾವಾಗ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನೆಸುತ್ತಲೇ ಇರುತ್ತಾರೆ. ಆದರೂ ಕೂಡ ಇದುವರೆಗೆ ಶ್ವೇತಪ್ರಸಾದ್ ಅವರು ಯಾರಿಗೂ ಕೂಡ ಈ ವಿಷಯವಾಗಿ ಉತ್ತರ ನೀಡಲಿಲ್ಲ. ಆದರೆ ಪದೇ ಪದೇ ಇದೇ ವಿಷಯದ ಬಗ್ಗೆ ಪ್ರಶ್ನೆಗಳು ಹೆಚ್ಚಾಗಿರುವುದರಿಂದ ಈ ಬಾರಿ ಈ ಪ್ರಶ್ನೆಗಳ ಬಗ್ಗೆ ಬೇಸರಿಸಿಕೊಂಡಿರುವ ಶ್ವೇತ ಅವರು ಪ್ರಶ್ನೆ ಕೇಳಿದವರಿಗೆ ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟಿದ್ದಾರೆ. ಹಾಗೂ ಈ ಬಾರಿ ಅವರು ಕೊಟ್ಟಿರುವ ತಿರುಗೇಟು ನಿಜವಾಗಿಯೂ ಅರ್ಥಪೂರ್ಣವಾಗಿದೆ ಎಂದು ಕೂಡ ಅನಿಸುತ್ತದೆ.

ಮಗು ಬಗ್ಗೆ ಪ್ರಶ್ನೆ ಕೇಳುತ್ತಿದ್ದ ಕಾಮೆಂಟ್ ಗಳಿಗೆ ಶ್ವೇತ ಅವರು ಕೊಟ್ಟ ಉತ್ತರವೂ ಹೀಗಿತ್ತು. ಮಗು ಮಾಡಿಕೊಳ್ಳುವುದು ಸಂಪೂರ್ಣವಾಗಿ ಮಹಿಳೆ ಹಾಗೂ ಆ ದಂಪತಿಗಳ ನಿರ್ಧಾರ. ಅದು ಯಾವಾಗ ಎಲ್ಲಿ ಹೇಗೆ ಆಗಬೇಕು ಎನ್ನುವುದು ಅವರೇ ನಿರ್ಧರಿಸಿಕೊಳ್ಳುತ್ತಾರೆ. ಮೂರನೇ ಅವರಿಗೆ ಯಾರಿಗೆ ಆದರೂ ಈ ವಿಷಯದಲ್ಲಿ ಮಾತನಾಡುವ ಹಕ್ಕು ಇರುವುದಿಲ್ಲ. ಇನ್ನು ಈಗಿನ ಕಾಲದಲ್ಲಿ ಜನ ಕೇಳುತ್ತಾರೆ, ಅಮ್ಮ ಅತ್ತೆ ಹೇಳಿದ್ದಾರೆ, ಸ್ನೇಹಿತರು ಮಾತನಾಡಿಕೊಳ್ಳುತ್ತಾರೆ ಈ ಬಗ್ಗೆ ತಲೆಕೆಡಿಸಿಕೊಂಡು ಹೆಚ್ಚು ಜನ ಮಗು ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ ಆದರೆ ನನ್ನ ವಿಷಯದಲ್ಲಿ ಇದು ಸಂಪೂರ್ಣ ನನ್ನದೇ ನಿರ್ಧಾರವಾಗಿರುತ್ತದೆ ಎಂದು ಹೇಳಿದ್ದಾರೆ. ಶ್ವೇತಾ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.

ಎರಡನೇ ಮದುವೆಗೆ ಸಿದ್ಧವಾದ ನಟಿ ಪ್ರೇಮ, ಹುಡುಗ ಯಾರು ಗೊತ್ತ.?

ಓಂ ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರಕ್ಕೆ ಪರಿಚಿತರಾದ ಪ್ರೇಮ ಅವರು ಓಂ ಸಿನಿಮಾಗೂ ಮುನ್ನವೇ ಶಿವರಾಜ್ ಕುಮಾರ್ ಅವರ ಜೊತೆ ಸವ್ಯಸಾಚಿ ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದರು. ಅದರ ಕೂಡ ಇವರಿಗೆ ಉಪೇಂದ್ರ ನಿರ್ದೇಶನದ ಓಂ ಸಿನಿಮಾವು ಕನ್ನಡ ಚಲನಚಿತ್ರಕ್ಕೆ ಒಬ್ಬ ಭರವಸೆಯ ನಾಯಕಿ ಸಿಕ್ಕರು ಎನ್ನುವ ಪಟ್ಟ ಗಿಟ್ಟಿಸಿಕೊಟ್ಟಿತ್ತು. ಇದಾದ ನಂತರ ನಟಿ ಪ್ರೇಮ ಅವರು ನಟಿಸಿದ ಒಂದೊಂದು ಸಿನಿಮಾವು ಕೂಡ ತುಂಬಾ ಹೆಸರು ಗಳಿಸಿತು. 1994 ರಿಂದ 2004 ರವರೆಗೆ ಕನ್ನಡ ಸಿನಿಮಾ ರಂಗವನ್ನು ಆಳಿದ ನಟಿಯ ಹೆಸರಿನಲ್ಲಿ ಪ್ರೇಮ ಅವರ ಹೆಸರು ಕೂಡ ಕೇಳಿ ಬರುತ್ತದೆ. ಆ ದಿನಗಳಲ್ಲಿ ಬಹಳ ಬೇಡಿಕೆ ನಟಿ ಆಗಿದ್ದ ಪ್ರೇಮ ಅವರು ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾಗಳಲ್ಲೂ ಕೂಡ ಗುರುತಿಸಿಕೊಂಡಿದ್ದರು.

ನಮ್ಮೂರ ಮಂದಾರ ಹೂವೆ, ಚಂದ್ರೋದಯ, ಕೌರವ, ಚಂದ್ರಮುಖಿ ಪ್ರಾಣಸಖಿ, ಯಜಮಾನ, ಜಮೀನ್ದಾರರು, ಕನಸುಗಾರ, ನಾನು ನನ್ನ ಹೆಂಡ್ತೀರು, ಆಪ್ತಮಿತ್ರ, ಏಕದಂತ, ಅಂಜಲಿ ಗೀತಾಂಜಲಿ, ನನ್ನವಳು ನನ್ನವಳು, ಉಪೇಂದ್ರ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿರುವ ನಟಿ ಪ್ರೇಮ ಅವರ ವೈಯುಕ್ತಿಕ ಬದುಕು ಮಾತ್ರ ಅಷ್ಟೊಂದು ಹಿತಕರವಾಗಿಲ್ಲ ಎನ್ನುವುದೇ ಬೇಸರದ ವಿಷಯ. ತಮ್ಮ ವೃತ್ತಿರಂಗದ ಉತ್ತುಂಗದಲ್ಲಿ ಇದ್ದಾಗಲೇ ಇನ್ನು ಮೇಲೆ ಸಿನಿಮಾದಲ್ಲಿ ಅಭಿನಯಿಸುವುದಿಲ್ಲ ಎನ್ನುವ ಹೇಳಿಕೆ ಕೊಟ್ಟು ತಂದೆ ತಾಯಿಯ ಒತ್ತಾಯದ ಮೇರೆಗೆ 2004ರಲ್ಲಿ ಜೀವನ್ ಎನ್ನುವವರ ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟ ನಟಿ ಪ್ರೇಮ ಅವರ ವಿವಾಹ ಜೀವನವು ಬಹಳ ದಿನಗಳ ಕಾಲ ಸಂತೋಷವಾಗಿ ಉಳಿಯಲಿಲ್ಲ. ಈ ಬಗ್ಗೆ ಅವರೇ ಹೇಳಿಕೆ ನೀಡಿರುವ ಪ್ರೇಮ ಅವರು ಕಳೆದ ಹತ್ತು ವರ್ಷಗಳಿಂದ ಪತಿಯಿಂದ ಬೇರೆಯಾಗಿ ತಂದೆ ತಾಯಿಯ ಜೊತೆ ವಾಸಿಸುತ್ತಿದ್ದಾರಂತೆ.

ಇಬ್ಬರು ಬೇರೆಬೇರೆ ವ್ಯಕ್ತಿತ್ವದ ಗುಣವನ್ನು ಹೊಂದಿರುವುದರಿಂದ ಇಬ್ಬರಲ್ಲೂ ಹೊಂದಾಣಿಕೆ ಮೂಡದೆ ಇವರಿಬ್ಬರು ಬೇರೆಯಾಗಿದ್ದಾರೆ. ಆದರೆ ಇದಾದ ಬಳಿಕ ನಟಿ ಪ್ರೇಮ ಅವರಿಗೆ ಕ್ಯಾನ್ಸರ್ ಆಗಿದೆ ಅವರು ಟ್ರೀಟ್ಮೆಂಟ್ ಗಾಗಿ ಯಾವುದೋ ದೇಶಕ್ಕೆ ಹೋಗಿದ್ದಾರೆ ಎಂದು ಹಾಗೂ ಮತ್ತೊಂದು ಸಲ ನಟಿ ಪ್ರೇಮ ಅವರು ವಿವಾಹ ಜೀವನದ ಬೇಸರದಿಂದ ಕುಟುಂಬವನ್ನು ತ್ಯಜಿಸಿ ಆಶ್ರಮ ಸೇರಿದ್ದಾರೆ ಎನ್ನುವ ರೀತಿಯ ಗಾಳಿ ಸುದ್ದಿಗಳು ಕೂಡ ಹಬ್ಬಿದವು. ಇದರಿಂದ ತೀರ ಬೇಸರಗೊಂಡಿದ್ದ ಪ್ರೇಮ ಅವರು ಒಮ್ಮೆ ಈ ಸುಳ್ಳು ವದಂತಿಗಳ ಬಗ್ಗೆ ಮಾಧ್ಯಮಗಳ ಜೊತೆ ಹೇಳಿಕೊಂಡು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು. ಈಗ ಬಹಳ ವರ್ಷಗಳಿಗ ಬಳಿಕ ಉಪೇಂದ್ರ ಮತ್ತೆ ಬಾ ಎನ್ನುವ ಸಿನಿಮಾದ ಮೂಲಕ ಮತ್ತೆ ಪ್ರೇಮ ಅವರು ಬಣ್ಣ ಹಚ್ಚಲು ಶುರು ಮಾಡಿದ್ದಾರೆ.

ಈಗೀಗ ಮತ್ತೆ ಮೊದಲಿನಂತೆ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿರುವ ನಟಿ ಪ್ರೇಮ ಅವರನ್ನು ಮಾಧ್ಯಮದ ವರದಿಗಾರರೊಬ್ಬರು ಇನ್ನೊಂದು ಮದುವೆ ಆಗುವ ಬಗ್ಗೆ ಪ್ರಶ್ನೆ ಮಾಡಿದಾಗ ಇಲ್ಲಿಯವರೆಗೂ ನನಗೆ ಆ ರೀತಿ ಯೋಚನೆ ಮೂಡಿಲ್ಲ ಆದರೆ ಆದರೂ ಆಗಬಹುದು. ಏನಾದರೂ ನಾನು ಮತ್ತೆ ಮದುವೆ ಆಗುವುದಾದರೆ ನನ್ನ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವ ಒಳ್ಳೆಯ ಮನಸ್ಸು ಇರುವ ವ್ಯಕ್ತಿ ಜೊತೆಗಾರರಾಗಿ ಸಿಕ್ಕರೆ ಅಷ್ಟೇ ಸಾಕು ಎಂದು ಹೇಳಿಕೊಂಡಿದ್ದಾರೆ. ಅವರ ಈ ಮಾತನ್ನು ಕೇಳಿ ಅಭಿಮಾನಿಗಳು ಪ್ರೇಮಾ ಅವರಿಗೆ ಅವರ ನಿರೀಕ್ಷೆಯ ಹುಡುಗ ಸಿಕ್ಕಿ ಬೇಗ ಮದುವೆ ಆದರೆ ಸಾಕು ಎಂದುಕೊಳ್ಳುತ್ತಿದ್ದಾರೆ. ಪ್ರೇಮ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು

ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದ್ರೆ.

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಅಭಿಮಾನಿಗಳ ಪ್ರೀತಿಯ ಅಭಿಮಾನಿ ದೇವರು ಅಪ್ಪು, ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್, ದೊಡ್ಮನೆ ಕೀರ್ತಿ ಕಳಶ ರಾಜ್ ಕುಟುಂಬದ ರಾಜಕುಮಾರ ನಮ್ಮನ್ನೆಲ್ಲ ಆ’ಗಲಿ ನೋಡು ನೋಡುತ್ತಲೇ ಎಂಟು ತಿಂಗಳು ಕಳೆದು ಹೋಗಿದೆ. ಪುನೀತ್ ರಾಜಕುಮಾರ್ ಅವರು ಕನ್ನಡ ಫಿಲಂ ಇಂಡಸ್ಟ್ರಿಗೆ ಒಂದು ಎನರ್ಜಿ ಅಂತಿದ್ದರು. ಅವರಿಲ್ಲದೆ ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರೇ ಕಳೆದು ಹೋದಂತಿದೆ. ಕರುನಾಡಿನ ಜನತೆ ಮನದಲ್ಲಿ ಕೂಡ ದುಃ’ಖದ ಕರಿ ನೆರಳು ಆವರಿಸಿದೆ. ಪುನೀತ್ ಅವರ ಅ’ಕಾಲಿಕ ಮ’ರ’ಣ ಯಾರು ಕೂಡ ಊಹಿಸಿಯೂ ಇರಲಿಲ್ಲ. ಅವರು ಅಷ್ಟು ಆರೋಗ್ಯವಾದ ಜೀವನ ಶೈಲಿ ಹೊಂದಿದ್ದು ಅದ್ಭುತ ಡಯಟ್ ಫಾಲೋ ಮಾಡುತ್ತಿದ್ದರಿಂದ ಈ ವಿಷಯ ಕೇಳಿದರೆ ಯಾರಿಗೆ ಆದರೂ ಕೂಡ ಅದನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಿಲ್ಲ.

ಆ ಒಂದು ಸಾವು ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತವನ್ನೇ ದುಃ’ಖದ ಮಡಿಲಿಗೆ ದೂಕಿತ್ತು. ವಿಶ್ವದಾದ್ಯಂತ ಎಲ್ಲಾ ಸುದ್ದಿ ಮಾಧ್ಯಮಗಳು ಕೂಡ ಅಪ್ಪು ಅವರ ಸಾ’ವಿ’ನ ಸುದ್ದಿಯನ್ನು ವರದಿ ಮಾಡುವುದರ ಜೊತೆಗೆ ಸಂ’ತಾ’ಪ ಕೂಡ ಸೂಚಿಸಿದ್ದವು. ಇಂದಿಗೂ ಕೂಡ ಎಲ್ಲಿ ಹೋದರು ಅಪ್ಪು ಅವರ ಬಗ್ಗೆ ಒಂದು ಸಣ್ಣ ಮಾತುಕತೆ ನಡೆದೇ ನಡೆಯುತ್ತದೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವ ರೀತಿಯಲ್ಲಿ ಅಪ್ಪು ಅವರು ನಮ್ಮ ಜೊತೆಯಲ್ಲಿ ದೈಹಿಕವಾಗಿ ಕಾಣಸಿಗದೆ ಇರಬಹುದು ಆದರೆ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲೂ ಕೂಡ ಈ ಅಭಿಮಾನಿ ದೇವರಿಗೆ ಜಾಗ ಇದ್ದೇ ಇದೆ. ಇದಕ್ಕೆಲ್ಲ ಕಾರಣ ಅಪ್ಪು ಅವರು ಬದುಕಿ ತೋರಿಸಿದ ಅವರ ಆದರ್ಶ ಪೂರಕ ಬದುಕು ಎನ್ನುವುದು ಅಕ್ಷರಶಃ ಸತ್ಯ.

ಅಭಿಮಾನಿಗಳಿಗೆ ಅಪ್ಪು ಇಲ್ಲ ಎನ್ನುವ ಈ ವಿಷಯವನ್ನು ಅರಗಿಸಿಕೊಳ್ಳಲು ಇಷ್ಟು ಕ’ಷ್ಟವಾಗುತ್ತಿದೆ ಎಂದರೆ ಇನ್ನು ಅವರ ಕುಟುಂಬದ ಪರಿಸ್ಥಿತಿ ಹೇಗಾಗಿರಬಹುದು ಎನ್ನುವುದನ್ನು ಊಹಿಸಿಕೊಳ್ಳಲು ತುಂಬಾ ಕ’ಷ್ಟ ಆಗುತ್ತದೆ. ಅಪ್ಪು ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಎಲ್ಲಾ ಕನಸುಗಳನ್ನು ಈಡೇರಿಸುವತ್ತ ಗಮನ ಕೊಡುತ್ತಿದ್ದಾರೆ ಹಾಗೂ ತುಂಬಾ ಜವಾಬ್ದಾರಿಯುತವಾಗಿ ಪ್ರಬುದ್ಧವಾಗಿ ನಡೆದುಕೊಳ್ಳುತ್ತಾ ತಮ್ಮ ಮನದೊಳಗೆ ಇರುವ ಎಲ್ಲ ದುಃಖವನ್ನು ಕೂಡ ಮರೆಮಾಚಿಕೊಂಡು ದೊಡ್ಮನೆಯ ಮುಂದುವರಿದ ಕಾರ್ಯಗಳನ್ನು ನೆರವೇರಿಸುವತ್ತ ಗಮನಹರಿಸುತ್ತಿದ್ದಾರೆ. ಜೊತೆಗೆ ಪ್ರತಿ ತಿಂಗಳು ಕೂಡ ಅಪ್ಪು ಅವರ ಸ’ಮಾ’ಧಿ ಬಳಿ ತೆರಳಿ ಮಕ್ಕಳೊಂದಿಗೆ ಪೂಜೆ ಸಲ್ಲಿಸಿ, ಕ’ಣ್ಣೀ’ರಿಟ್ಟು ಬರುತ್ತಿದ್ದಾರೆ. ಇನ್ನು ಅಪ್ಪು ಅವರನ್ನು ಮಗನಂತೆ ಭಾವಿಸಿದ್ದ ಶಿವಣ್ಣ ಅವರ ದುಃ’ಖವನ್ನು ವಿವರಿಸಲು ಸಾಧ್ಯವಿಲ್ಲ. ಶಿವಣ್ಣ ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕೂಡ ಅಪ್ಪು ಅವರ ಹೆಸರನ್ನು ಎತ್ತದೆ ಮಾತನ್ನು ಮುಗಿಸುತ್ತಿರಲಿಲ್ಲ.

ಅಷ್ಟು ಮುದ್ದಿನ ತಮ್ಮನನ್ನು ಕಳೆದುಕೊಂಡಿರುವ ದುಃ’ಖ ಶಿವಣ್ಣ ಅವರ ಮುಖದಲ್ಲಿ ಎದ್ದು ಕಾಣುತ್ತಿದೆ. ಮತ್ತು ಅಣ್ಣನ ಎಲ್ಲಾ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗಿಯಾಗುತ್ತಿದ್ದ ಅಪ್ಪು ಅವರ ಅನುಪಸ್ಥಿತಿಯಲ್ಲಿ ಶಿವಣ್ಣನ ಮೊದಲನೇ ಚಿತ್ರ ಭೈರಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾಗೆ ಸಂಬಂಧಿತ ಎಲ್ಲಾ ಕಾರ್ಯಗಳು ಮುಗಿದಿದ್ದು ಪ್ರೀ ರಿಲೀಸ್ ಕಾರ್ಯಕ್ರಮವು ಕೂಡ ಅದ್ದೂರಿಯಾಗಿ ನಡೆದಿತ್ತು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅಪ್ಪು ಮಕ್ಕಳಾದ ಧೃತಿ ಮತ್ತು ವಂದನ ಸೇರಿದಂತೆ ರಾಜ್ ಕುಟುಂಬದ ಎಲ್ಲಾ ಸದಸ್ಯರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಎಲ್ಲ ಸಂತೋಷಗಳ ನಡುವೆಯೂ ಕೂಡ ಕುಟುಂಬದವರ ಮನಸಿನಲ್ಲಿ ಅಷ್ಟೇ ಅಲ್ಲದೆ ಅಭಿಮಾನಿಗಳ ಮನಸ್ಸಿನಲ್ಲಿ ಕೂಡ ಅಪ್ಪು ಅವರನ್ನು ಮಿಸ್ ಮಾಡಿಕೊಂಡಿರುವ ಭಾವನೆ ಕಾಡುತ್ತಿದೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದರೆ.

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಅಭಿಮಾನಿಗಳ ಪ್ರೀತಿಯ ಅಭಿಮಾನಿ ದೇವರು ಅಪ್ಪು, ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್, ದೊಡ್ಮನೆ ಕೀರ್ತಿ ಕಳಶ ರಾಜ್ ಕುಟುಂಬದ ರಾಜಕುಮಾರ ನಮ್ಮನ್ನೆಲ್ಲ ಆ’ಗಲಿ ನೋಡು ನೋಡುತ್ತಲೇ ಎಂಟು ತಿಂಗಳು ಕಳೆದು ಹೋಗಿದೆ. ಪುನೀತ್ ರಾಜಕುಮಾರ್ ಅವರು ಕನ್ನಡ ಫಿಲಂ ಇಂಡಸ್ಟ್ರಿಗೆ ಒಂದು ಎನರ್ಜಿ ಅಂತಿದ್ದರು. ಅವರಿಲ್ಲದೆ ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರೇ ಕಳೆದು ಹೋದಂತಿದೆ. ಕರುನಾಡಿನ ಜನತೆ ಮನದಲ್ಲಿ ಕೂಡ ದುಃ’ಖದ ಕರಿ ನೆರಳು ಆವರಿಸಿದೆ. ಪುನೀತ್ ಅವರ ಅ’ಕಾಲಿಕ ಮ’ರ’ಣ ಯಾರು ಕೂಡ ಊಹಿಸಿಯೂ ಇರಲಿಲ್ಲ. ಅವರು ಅಷ್ಟು ಆರೋಗ್ಯವಾದ ಜೀವನ ಶೈಲಿ ಹೊಂದಿದ್ದು ಅದ್ಭುತ ಡಯಟ್ ಫಾಲೋ ಮಾಡುತ್ತಿದ್ದರಿಂದ ಈ ವಿಷಯ ಕೇಳಿದರೆ ಯಾರಿಗೆ ಆದರೂ ಕೂಡ ಅದನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಿಲ್ಲ.

ಆ ಒಂದು ಸಾವು ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತವನ್ನೇ ದುಃ’ಖದ ಮಡಿಲಿಗೆ ದೂಕಿತ್ತು. ವಿಶ್ವದಾದ್ಯಂತ ಎಲ್ಲಾ ಸುದ್ದಿ ಮಾಧ್ಯಮಗಳು ಕೂಡ ಅಪ್ಪು ಅವರ ಸಾ’ವಿ’ನ ಸುದ್ದಿಯನ್ನು ವರದಿ ಮಾಡುವುದರ ಜೊತೆಗೆ ಸಂ’ತಾ’ಪ ಕೂಡ ಸೂಚಿಸಿದ್ದವು. ಇಂದಿಗೂ ಕೂಡ ಎಲ್ಲಿ ಹೋದರು ಅಪ್ಪು ಅವರ ಬಗ್ಗೆ ಒಂದು ಸಣ್ಣ ಮಾತುಕತೆ ನಡೆದೇ ನಡೆಯುತ್ತದೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವ ರೀತಿಯಲ್ಲಿ ಅಪ್ಪು ಅವರು ನಮ್ಮ ಜೊತೆಯಲ್ಲಿ ದೈಹಿಕವಾಗಿ ಕಾಣಸಿಗದೆ ಇರಬಹುದು ಆದರೆ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲೂ ಕೂಡ ಈ ಅಭಿಮಾನಿ ದೇವರಿಗೆ ಜಾಗ ಇದ್ದೇ ಇದೆ. ಇದಕ್ಕೆಲ್ಲ ಕಾರಣ ಅಪ್ಪು ಅವರು ಬದುಕಿ ತೋರಿಸಿದ ಅವರ ಆದರ್ಶ ಪೂರಕ ಬದುಕು ಎನ್ನುವುದು ಅಕ್ಷರಶಃ ಸತ್ಯ.

ಅಭಿಮಾನಿಗಳಿಗೆ ಅಪ್ಪು ಇಲ್ಲ ಎನ್ನುವ ಈ ವಿಷಯವನ್ನು ಅರಗಿಸಿಕೊಳ್ಳಲು ಇಷ್ಟು ಕ’ಷ್ಟವಾಗುತ್ತಿದೆ ಎಂದರೆ ಇನ್ನು ಅವರ ಕುಟುಂಬದ ಪರಿಸ್ಥಿತಿ ಹೇಗಾಗಿರಬಹುದು ಎನ್ನುವುದನ್ನು ಊಹಿಸಿಕೊಳ್ಳಲು ತುಂಬಾ ಕ’ಷ್ಟ ಆಗುತ್ತದೆ. ಅಪ್ಪು ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಎಲ್ಲಾ ಕನಸುಗಳನ್ನು ಈಡೇರಿಸುವತ್ತ ಗಮನ ಕೊಡುತ್ತಿದ್ದಾರೆ ಹಾಗೂ ತುಂಬಾ ಜವಾಬ್ದಾರಿಯುತವಾಗಿ ಪ್ರಬುದ್ಧವಾಗಿ ನಡೆದುಕೊಳ್ಳುತ್ತಾ ತಮ್ಮ ಮನದೊಳಗೆ ಇರುವ ಎಲ್ಲ ದುಃಖವನ್ನು ಕೂಡ ಮರೆಮಾಚಿಕೊಂಡು ದೊಡ್ಮನೆಯ ಮುಂದುವರಿದ ಕಾರ್ಯಗಳನ್ನು ನೆರವೇರಿಸುವತ್ತ ಗಮನಹರಿಸುತ್ತಿದ್ದಾರೆ. ಜೊತೆಗೆ ಪ್ರತಿ ತಿಂಗಳು ಕೂಡ ಅಪ್ಪು ಅವರ ಸ’ಮಾ’ಧಿ ಬಳಿ ತೆರಳಿ ಮಕ್ಕಳೊಂದಿಗೆ ಪೂಜೆ ಸಲ್ಲಿಸಿ, ಕ’ಣ್ಣೀ’ರಿಟ್ಟು ಬರುತ್ತಿದ್ದಾರೆ. ಇನ್ನು ಅಪ್ಪು ಅವರನ್ನು ಮಗನಂತೆ ಭಾವಿಸಿದ್ದ ಶಿವಣ್ಣ ಅವರ ದುಃ’ಖವನ್ನು ವಿವರಿಸಲು ಸಾಧ್ಯವಿಲ್ಲ. ಶಿವಣ್ಣ ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕೂಡ ಅಪ್ಪು ಅವರ ಹೆಸರನ್ನು ಎತ್ತದೆ ಮಾತನ್ನು ಮುಗಿಸುತ್ತಿರಲಿಲ್ಲ.

ಅಷ್ಟು ಮುದ್ದಿನ ತಮ್ಮನನ್ನು ಕಳೆದುಕೊಂಡಿರುವ ದುಃ’ಖ ಶಿವಣ್ಣ ಅವರ ಮುಖದಲ್ಲಿ ಎದ್ದು ಕಾಣುತ್ತಿದೆ. ಮತ್ತು ಅಣ್ಣನ ಎಲ್ಲಾ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗಿಯಾಗುತ್ತಿದ್ದ ಅಪ್ಪು ಅವರ ಅನುಪಸ್ಥಿತಿಯಲ್ಲಿ ಶಿವಣ್ಣನ ಮೊದಲನೇ ಚಿತ್ರ ಭೈರಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾಗೆ ಸಂಬಂಧಿತ ಎಲ್ಲಾ ಕಾರ್ಯಗಳು ಮುಗಿದಿದ್ದು ಪ್ರೀ ರಿಲೀಸ್ ಕಾರ್ಯಕ್ರಮವು ಕೂಡ ಅದ್ದೂರಿಯಾಗಿ ನಡೆದಿತ್ತು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅಪ್ಪು ಮಕ್ಕಳಾದ ಧೃತಿ ಮತ್ತು ವಂದನ ಸೇರಿದಂತೆ ರಾಜ್ ಕುಟುಂಬದ ಎಲ್ಲಾ ಸದಸ್ಯರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಎಲ್ಲ ಸಂತೋಷಗಳ ನಡುವೆಯೂ ಕೂಡ ಕುಟುಂಬದವರ ಮನಸಿನಲ್ಲಿ ಅಷ್ಟೇ ಅಲ್ಲದೆ ಅಭಿಮಾನಿಗಳ ಮನಸ್ಸಿನಲ್ಲಿ ಕೂಡ ಅಪ್ಪು ಅವರನ್ನು ಮಿಸ್ ಮಾಡಿಕೊಂಡಿರುವ ಭಾವನೆ ಕಾಡುತ್ತಿದೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.