Home Blog Page 346

ಅಂತು-ಇಂತು ಮಂಗಳ ಗೌರಿ ಧಾರಾವಾಹಿ ಮುಕ್ತಾಯದ ಡೇಟ್ ಅನೌನ್ಸ್ ಮಾಡಿದ ನಿರ್ದೇಶಕ.

ಕೊನೆಗೂ ಮಂಗಳ ಗೌರಿ ಸೀರಿಯಲ್ ಅತಿ ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದೆ ಇದರ ಜೊತೆಗೆ ನೀವೇನಾದರೂ ಮಂಗಳಗೌರಿ ಮದುವೆ ಸೀರಿಯಲ್ ನ ಅಭಿಮಾನಿಯಾಗಿದ್ದರೆ ನಿಮಗೂ ಕೂಡ ತಕ್ಕ ಮಟ್ಟಿಗೆ ಖುಷಿ ಕೊಡುವ ವಿಷಯ ಏನೆಂದರೆ. ಈ ಮಂಗಳ ಗೌರಿ ಮದುವೆ ಸೀರಿಯಲ್ ಪುಟ್ಟಗೌರಿ ಮದುವೆ ಸೀರಿಯಲ್ ಮುಂದುವರೆದ ಭಾಗವಾಗಿದೆ. ಇದೀಗ ಮಂಗಳ ಗೌರಿ ಮದುವೆ ಸೀರಿಯಲ್ 10 ವರ್ಷಗಳನ್ನು ಪೂರೈಸಿ ಕೊಂಡಿದ್ದು ಈ ಸೀರಿಯಲ್ ಗೆ ಹಲವಾರು ಅಭಿಮಾನಿಗಳು ಸಹ ಇದ್ದಾರೆ. ಹಾಗೆ ಈ ಸೀರಿಯಲ್ ಅನ್ನು ಯಾವಾಗ ಮುಗಿಸುತ್ತಾರೆ ಎಂಬುವವರು ಸಹ ಇದ್ದಾರೆ, ಮತ್ತು ಈ ಸೀರಿಯಲ್ ಮುಗಿದುಹೋಗಿ ಗೊತ್ತಿದೆಯಲ್ಲ ಎಂದು ಬೇಸರಗೊಳ್ಳುವ ಅವರು ಸಹ ಇದ್ದಾರೆ, ಆದರೆ ಈಗ ಮಂಗಳ ಗೌರಿ ಮದುವೆ ಸೀರಿಯಲ್ ಶೀಘ್ರದಲ್ಲಿಯೇ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿದೆ ಎಂಬ ಮಾಹಿತಿ ಹೊರ ಬಂದಿದೆ.

ಕೆಲವು ವೀಕ್ಷಕರಿಗೆ ಮಂಗಳ ಗೌರಿ ಸೀರಿಯಲ್ ಮುಗಿಯುತ್ತಿದೆ ಎಂದು ಕೇಳಿದ ತಕ್ಷಣ ಕೆಲವರಿಗೆ ಖುಷಿಯಾಗುತ್ತದೆ ಆದರೆ ಕೆಲವರಿಗೆ ಬೇಸರವಾಗುತ್ತದೆ ಆದರೆ ಅವರಿಗೂ ಸಹ ಖುಷಿಯಾಗುವoತಹ ವಿಷಯ ಏನೆಂದರೆ, ಈ ಸೀರಿಯಲ್ ನ ಕೊನೆಯ ಭಾಗ ಕ್ಲೈಮ್ಯಾಕ್ಸ್ ಬರೋಬ್ಬರಿ ಮೂರು ತಿಂಗಳು ಅಂದರೆ ಜೂನ್ ಜುಲೈ-ಆಗಸ್ಟ್ ಈ ಮೂರು ತಿಂಗಳುಗಳ ಕಾಲ ನಡೆಯಲಿದೆ ಎಂಬ ಮಾಹಿತಿ ಹೊರ ಬಂದಿದೆ ಸೆಪ್ಟೆಂಬರ್ ನಲ್ಲಿ ಈ ಸೀರಿಯಲ್ ಮುಕ್ತಾಯ ಗೊಳ್ಳಲಿದೆ. ಹಾಗೆಯೇ ಮಂಗಳಗೌರಿ ಮದುವೆ ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಸೂಪರ್‌ಹಿಟ್ ಧಾರಾವಾಹಿಯಾಗಿದ್ದು ಧಾರಾವಾಹಿಯಲ್ಲಿ ಕಾವ್ಯ ಶ್ರೀ ಮತ್ತು ಗಗನ್ ಚಿನ್ನಪ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಧಾರಾವಾಹಿಯನ್ನು ಹಿಂದೆ ಪುಟ್ಟ ಗೌರಿ ಮದುವೆ ಎಂದು ಕರೆಯಲಾಗುತ್ತಿತ್ತು, 2018 ರಲ್ಲಿ ಧಾರಾವಾಹಿ ಹೆಸರನ್ನು ಮಂಗಳಗೌರಿ ಮದುವೆ ಎಂದು ಮರುನಾಮಕರಣ ಮಾಡಲಾಯಿತು. ಈ ಧಾರಾವಾಹಿಯನ್ನು 12 ಮಾರ್ಚ್ 2012 ರಂದು ಪ್ರಥಮ ಪ್ರದರ್ಶನ ಮಾಡಲಾಯಿತು, ಇದು ಭಾರತೀಯ ದೂರದರ್ಶನ ಉದ್ಯಮದಲ್ಲಿ ದೀರ್ಘಾವಧಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಹಿಂದೆ ಧಾರಾವಾಹಿಯಲ್ಲಿ ರಕ್ಷಿತ್ ಗೌಡ ಮತ್ತು ರಂಜಿನಿ ರಾಘವನ್ ನಟಿಸಿದ್ದರು, ನಂತರ ಅವರನ್ನು ಬದಲಾಯಿಸಲಾಯಿತು. ಮಂಗಳಗೌರಿ ಮದುವೆ ಕನ್ನಡ ದೂರದರ್ಶನದಲ್ಲಿ ಹೆಚ್ಚು ಇಷ್ಟಪಡುವ ದೈನಂದಿನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕಾರ್ಯಕ್ರಮವು ಆಗಾಗ್ಗೆ ಟ್ವಿಸ್ಟ್ ಮತ್ತು ಟರ್ನ್‌ಗಳನ್ನು ಪರಿಚಯಿಸುವ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ. ವಾಸ್ತವವಾಗಿ, ವಾಹಿನಿಯು ಪ್ರಸಾರ ಮಾಡಿದ ಮೊದಲ ಐದು ಶೋಗಳಲ್ಲಿ ಮತ್ತು TRP ಚಾರ್ಟ್‌ಗಳಲ್ಲಿ ಉತ್ತಮ ಸ್ಕೋರ್ ಗಳಿಸಿದ ಏಕೈಕ ಕಾರ್ಯಕ್ರಮ ಇದಾಗಿದೆ.

ಈ ಸೀರಿಯಲ್ ಹಲವಾರು ಕಾರ್ಯಕ್ರಮಗಳಲ್ಲಿ ಅಂದರೆ ಕೆಲವೊಂದು ಊರುಗಳಿಗೆ ಹೋಗಿ ಅಲ್ಲಿ ಸೀರಿಯಲ್ ಸಂತೆ ಎಂಬ ಕಾರ್ಯಕ್ರಮಗಳನ್ನು ಮಾಡಿ ಅಲ್ಲಿ ಜನಗಳ ಮೆಚ್ಚುಗೆಯನ್ನು ಪಡೆದುಕೊಂಡಿದೆ ಮತ್ತು ವಾಹಿನಿಯಲ್ಲಿ ಪಾತ್ರ ನಿರ್ವಹಿಸುತ್ತಿರುವ ಪ್ರತಿಯೊಬ್ಬರನ್ನು ಕೂಡ ಪ್ರೇಕ್ಷಕರು ನೇರವಾಗಿ ಮಾತನಾಡಿ ಸುವಂತಹ ಅವಕಾಶವಿತ್ತು ಆದ್ದರಿಂದಲೇ ಹಲವಾರು ಪ್ರೇಕ್ಷಕರು ಸೀರಿಯಲ್ ಸಂತೆ ಗೆ ಬರುತ್ತಿದ್ದರು. ವೀಕ್ಷಕರು ಸೀರಿಯಲ್ ನಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಹೆಚ್ಚಿನ ನಟ ನಟಿಯರನ್ನು ತಮ್ಮ ಮನೆಯ ಮಕ್ಕಳು ಎಂದೆ ಭಾವಿಸುತ್ತಿದ್ದರು, ಇದರಿಂದ ಸೀರಿಯಲ್ ನ ಎಲ್ಲಾ ನಟ-ನಟಿಯರಿಗೆ ಮತ್ತು ಎಲ್ಲಾ ರಂಗದಲ್ಲಿಯೂ ಕೆಲಸ ನಿರ್ವಹಿಸುತ್ತಿರುವ ವರೆಗೂ ಒಂದು ಉತ್ತೇಜನ ಸಿಗುತ್ತಿತ್ತು ಎಂದು ಹೇಳಲು ತಪ್ಪಾಗುವುದಿಲ್ಲ. ಸದ್ಯಕ್ಕೆ ಮಂಗಳಗೌರಿ ಮುಕ್ತಾಯವಾಗುತ್ತಿರುವುದರಿಂದ ಸಾಕಷ್ಟು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಮಂಗಳ ಗೌರಿ ಧಾರಾವಾಹಿ ಮುಕ್ತಾಯ ವಾಗುತ್ತಿರುವುದು ನಿಮ್ಮಲ್ಲಿ ಬೇಸರ ತಂದಿದೆಯಾ ಅಥವಾ ಇಲ್ಲವಾ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ದುಬಾರಿ ಬೆಲೆಯ ಕ್ಲಾಸಿ ಗಿಫ್ಟ್ ನೀಡಿದ ಶಿವಣ್ಣ, ಗಿಫ್ಟ್ ನೋಡಿ ಭಾವುಕರಾದ ಅನುಶ್ರೀ ಈ ವಿಡಿಯೋ ನೋಡಿ.

ಅನುಶ್ರೀ ಅವರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಮಾತಿನಮಲ್ಲಿ ಎಂದೇ ಫೇಮಸ್ ಆಗಿರುವಂತಹ ಅನುಶ್ರೀ ಅವರು ಯಾವುದೇ ಕಾರ್ಯಕ್ರಮಗಳಾದರು ಆಂಕರಿಂಗ್ ನಡೆಸಿಕೊಡಲು ಮುಂದಾಗುತ್ತಾರೆ. ಟಿವಿ ಶೋಗಳು, ಸಿನಿಮಾ ಪ್ರಮೋಷನ್ ಗಳು, ಸ್ಟಾರ್ ನಟರು ಮಾತ್ತು ನಟಿಯರ ಇಂಟರ್ವ್ಯೂ ಇದೆಲ್ಲವನ್ನು ನಡೆಸಿಕೊಡಲು ಇವರು ಪರ್ಫೆಕ್ಟ್ ಎಂದು ಹಲವರ ಹೇಳುತ್ತಾರೆ. ಸ್ಟಾರ್ ಸುವರ್ಣ, ಕಲರ್ಸ್ ಕನ್ನಡ, ಜೀ ಕನ್ನಡ ಹೀಗೆ ಹಲವಾರು ಚಾನೆಲ್ ಗಳಲ್ಲಿ ನಿರೂಪಣೆಯನ್ನು ಮಾಡಿರುವಂತಹ ಅವರು ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಇದ್ದಲ್ಲೆಲ್ಲ ಖುಷಿ ಎನ್ನುವುದು ಸದಾ ತುಂಬಿರುತ್ತದೆ ಅವರು ಯಾವುದೇ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಸಹಾಯ ಎಲ್ಲರಿಗೂ ಮನರಂಜನೆಯನ್ನು ನೀಡುವುದು ಖಂಡಿತ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿ ಹಲವಾರು ಸ್ಪರ್ಧಿಗಳು ತಮ್ಮ ಡಾನ್ಸ್ ನ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ ಈ ಒಂದು ಕಾರ್ಯಕ್ರಮದಲ್ಲಿ ಕ್ರೇಜಿ ಕ್ವೀನ್ ರಕ್ಷಿತ, ಅರ್ಜುನ್ ಜನ್ಯ, ಹಾಗೆಯೇ ಚಿಹ್ನೆ ಮಾಸ್ಟರ್ ಜಡ್ಜ್ ಆಗಿ ನಮ್ಮೆಲ್ಲರ ಮುಂದೆ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ನಿಮ್ಮೆಲ್ಲರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸ್ಪೆಷಲ್ ಜಡ್ಜ್ ಆಗಿ ಬರುತ್ತಿದ್ದಾರೆ. ಶಿವಣ್ಣ ಅವರು ಎಲ್ಲರನ್ನೂ ಪ್ರೋತ್ಸಾಹಿಸುತ್ತಾ ತಮಗೆ ಡ್ಯಾನ್ಸ್‌ ಮೇಲೆ ಇರುವಂತಹ ಒಲವನ್ನು ಇದರ ಮೂಲಕ ತೋರಿಸುತ್ತಿದ್ದಾರೆ. ಇದೀಗ ಶಿವಣ್ಣ ಅವರು ಅನುಶ್ರೀಗೆ ಒಂದು ಮರೆಯಲಾಗದಂತಹ ಗಿಫ್ಟ್ ಅನ್ನು ನೀಡಿದ್ದಾರೆ ಈ ಒಂದು ಶೋ ನಡೆಯುವಂತಹ ಸಂದರ್ಭದಲ್ಲಿ ಶಿವಣ್ಣ ಅವರು ಧರಿಸಿದಂತಹ ಜಾಕೆಟ್ ಸುಂದರವಾಗಿತ್ತು ಈ ಬಗ್ಗೆ ಕಮೆಂಟ್ ಮಾಡಿ ತುಂಬಾ ಚೆನ್ನಾಗಿದೆ ಎಂದು ಅನುಶ್ರೀ ಹೇಳುತ್ತಾರೆ ಶಿವಣ್ಣ ಅವರು ನಿನಗೆ ಜಾಕೆಟ್ ಕೊಡುತ್ತೇನೆ ಎಂದು ಹೇಳುತ್ತಾರೆ.

ಆಗ ಅನುಶ್ರೀ ಅವರು ಸುಮ್ಮನೆ ಹಾಗೆ ಹೇಳಿರುತ್ತಾರೆ ಎಂದುಕೊಳ್ಳುತ್ತಾರೆ ಆದರೆ ಶೋ ಮುಗಿದ ನಂತರ ಶಿವರಾಜ್ ಕುಮಾರ್ ಅವರು ತಮ್ಮ ಆಟೋಗ್ರಾಫ್ ನೊಂದಿಗೆ ಜಾಕೆಟ್ ಅನ್ನು ಅನುಶ್ರೀ ಅವರಿಗೆ ತಮ್ಮ ಕೈಯಾರ ತೊಡಿಸುತ್ತಾರೆ. ಈ ಒಂದು ಖುಷಿ ವಿಚಾರವನ್ನು ಅನುಶ್ರೀ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಜೊತೆಯಲ್ಲೇ ತುಂಬಾ ಸಂತೋಷದಿಂದ ಹಂಚಿಕೊಂಡಿದ್ದಾರೆ. ಈ ರೀತಿಯಾದಂತಹ ಒಂದು ಮಾನವೀಯತೆ ಯಲ್ಲರಿಗೂ ಸಹ ಇರುವುದಿಲ್ಲ ಶಿವಣ್ಣ ಯಾವಾಗಲೂ ನಮ್ಮ ಮನಸ್ಸಿನಲ್ಲಿ ದೊಡ್ಡ ಸ್ಥಾನದಲ್ಲಿರುತ್ತಾರೆ. ಅಣ್ಣ ಅವರ ಮಕ್ಕಳಾದ ಶಿವಣ್ಣ ಅವರು ಅವರಂತೆಯೇ ಉದಾರ ಮನಸ್ಥಿತಿಯನ್ನು ಹೊಂದಿರುವವರು ಎಂದು ಹೇಳಿಕೊಂಡಿದ್ದಾರೆ.

ಶಿವಣ್ಣ ಅವರು ತಮ್ಮ ಜಾಕೆಟ್ ನಲ್ಲಿ ವಿತ್ ಲಾಟ್ಸ್ ಆಫ್ ಲವ್ ಡಿಯರ್ ಫ್ರೆಂಡ್ ಅನು ಎಂದು ಬರೆದು ಜಾಕೆಟ್ ನೀಡಿದ್ದಾರೆ. ಈ ಒಂದು ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ ವಿಡಿಯೋಗಳನ್ನು ನೋಡಿದಂತಹ ಅಭಿಮಾನಿಗಳು ಶಿವಣ್ಣ ಅವರ ಮೇಲಿನ ಗೌರವ ಇನ್ನೂ ಹೆಚ್ಚು ಮಾಡಿಕೊಂಡಿದ್ದಾರೆ. ಶಿವಣ್ಣ ಅವರು ಇದೀಗ ವೇದ ಮತ್ತು ಬೈರಾಗಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಅಷ್ಟೇ ಅಲ್ಲದೆ ಯೋಗರಾಜ್ ಭಟ್ ನಿರ್ಮಾಣದ ಚಿತ್ರಕ್ಕೆ ಸಿನಿಮಾದಲ್ಲಿ ಶಿವಣ್ಣ ಅವರು ಮೊದಲಿಗೆ ಅಭಿನಯ ಮಾಡುತ್ತಿದ್ದಾರೆ, ಈ ಒಂದು ಸಿನಿಮಾಗೆ ರಾಕ್ಲೈನ್ ವೆಂಕಟೇಶ್ ಅವರು ನಿರ್ಮಾಪಕರಾಗಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಶಿವಣ್ಣ ಅವರು ಸ್ಪೆಷಲ್ ಗೆಸ್ಟ್ ಆಗಿರುವುದು ಎಲ್ಲರಿಗೂ ಸಹ ಖುಷಿಯ ವಿಚಾರವಾಗಿದೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಕಳೆದವಾರವಷ್ಟೇ ಮದುವೆಯಾದ ನಯನತಾರ ಮತ್ತು ವಿಜ್ಞೇಶ್ ಹನಿಮೂನ್ ಗಾಗಿ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತ.? ನಿಜಕ್ಕೂ ಶಾ’ಕ್ ಆಗ್ತೀರಾ.

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರ ಅವರು ಸಾಕಷ್ಟು ಸ್ಟಾರ್ ನಟರುಗಳ ಜೊತೆ ನಟಿಸಿದ್ದಾರೆ. ಮಲಯಾಳಂ, ತಮಿಳು, ತೆಲುಗು ಹೀಗೆ ಸಾಕಷ್ಟು ಭಾಷೆಗಳಲ್ಲಿ ನಟನೆಯನ್ನು ಮಾಡಿರುವಂತಹ ನಯನತಾರಾ ಅವರ ಅಭಿನಯಕ್ಕೆ ಸಾಕಷ್ಟು ಅಭಿಮಾನಿಗಳು ಇರುವುದಂತೂ ನಿಜ. ಅಷ್ಟೇ ಅಲ್ಲದೆ ನಯನತಾರಾ ಅವರು ಸಾಕಷ್ಟು ಜನರಿಗೆ ಸ್ಫೂರ್ತಿ ಸಹ ಆಗಿದ್ದಾರೆ. ನಿರ್ದೇಶಕ ವಿಜ್ಞೇಶ್ ಶಿವಮ್ ಮತ್ತು ನಯನತಾರಾ ಅವರು ಹಲವಾರು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು ಅವರು ಹಲವು ವರ್ಷಗಳು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಕೂಡ ಇದ್ದರು ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೇ ನಟಿ ನಯನತಾರಾ ಮತ್ತು ವಿಜ್ಞೇಶ್ವರ ನವಜೀವನಕ್ಕೆ ಕಾಲಿರಿಸಿದ್ದಾರೆ. ಇದೀಗ ಜೂನ್ 9ರಂದು ನಯನತಾರ ಹಾಗೂ ವಿಘ್ನೇಶ್ ಅವರ ಮದುವೆ ಮಹಾಬಲಿಪುರಂನ ಒಂದು ದೊಡ್ಡ ಹೋಟೆಲ್ ನಲ್ಲಿ ನೆರವೇರಿದೆ ಇವರ ಮದುವೆಗೆ ಅನೇಕ ಗಣ್ಯಾತಿಗಣ್ಯ ವ್ಯಕ್ತಿಗಳು ಸಹ ಆಗಮಿಸಿದ್ದರು.

ಫಿಲಂ ಸ್ಟಾರ್ ಗಳು ಸಹ ಇವರ ಮದುವೆಗೆ ಆಗಮಿಸಿ ನವಜೋಡಿಗೆ ಶುಭವನ್ನು ಕೋರಿದ್ದಾರೆ.ಈ ಜೋಡಿಯು ಪ್ರೀತಿ ಮಾಡುತ್ತಿರುವಂತಹ ವಿಚಾರ ಎಲ್ಲರಿಗೂ ಸಹ ಗೊತ್ತಿತ್ತು ಆದರೆ ಇವರು ಮದುವೆಯಾಗುತ್ತಿರುವ ವಿಚಾರವನ್ನು ಎಲ್ಲೂ ಸಹ ಬಿಟ್ಟುಕೊಟ್ಟಿರಲಿಲ್ಲ. ನಯನತಾರಾ ಮತ್ತು ವಿಜ್ಞೇಶ್ ಅವರ ಜೋಡಿ ಹಲವೆಡೆ ಕಾಣಿಸಿಕೊಳ್ಳುತ್ತಿದ್ದು ಹಾಗೆ ಇವರ ಸಾಕಷ್ಟು ಫೋಟೋ ಕೊಡ ವೈರಲ್ ಆಗಿತ್ತು ಆದರೆ ಅಧಿಕೃತವಾಗಿ ಮದುವೆಯಾಗುವ ವಿಚಾರವನ್ನು ಈ ಜೋಡಿ ತಿಳಿಸಿರಲಿಲ್ಲ. ಮದುವೆಯ ನಂತರ ತೆಗೆದಿರುವ ಅಂತಹ ಸಾಕಷ್ಟು ಫೋಟೋಗಳನ್ನು ಈ ಜೋಡಿ ಹಂಚಿಕೊಂಡಿದ್ದಾರೆ ಇವರ ಫೋಟೋಗಳನ್ನು ನೋಡಿದಂತಹ ಅಭಿಮಾನಿಗಳು ಇವರಿಗೆ ಶುಭಾಶಯವನ್ನು ಸಹ ಕೋರಿದ್ದಾರೆ.

ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಅವರ ಮದುವೆಗೆ ಶಾರುಖಾನ್, ರಜನಿಕಾಂತ್, ಮಣಿರತ್ನಂ ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳು ಸಹ ಆಗಮಿಸಿ ಈ ಒಂದು ನವ ಜೋಡಿಗೆ ಶುಭಾಶಯಗಳು ಕೋರಿದ್ದಾರೆ. ಮದುವೆಯ ನಂತರವೂ ಸಿನಿಮಾದಲ್ಲಿ ಮುಂದುವರೆಯುವಂತೆ ನಟಿ ನಯನತಾರಾ ಅವರು ತಿಳಿಸಿದ್ದಾರೆ. ಇದೀಗ ನಯನತಾರಾ ಅವರು ಗಾಡ್‌ಫಾದರ್ ಚಿತ್ರದಲ್ಲಿ ಚಿರಂಜೀವಿ ಅವರ ತಂಗಿಯಾಗಿ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ಈ ನವ ಜೋಡಿ ತಮ್ಮ ಹನಿಮೂನ್ ಪ್ಲಾನನ್ನು ಮಾಡಿದ್ದು ಥಾಯ್ಲೆಂಡ್ ಗೆ ಹೋಗಿದ್ದಾರೆ ಹಾಗೆಯೆ ಈ ಜೋಡಿ ತಮ್ಮ ಸುಂದರವಾದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇವರು ಹನಿಮೂನ್ ಗೆ ಭಾರಿ ಖರ್ಚನ್ನು ಮಾಡುತ್ತಿರುವಂತಹ ಕೆಲವೊಂದು ಸಂಗತಿಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ನಟಿ ನಯನತಾರ ಮತ್ತು ವಿಘ್ನೇಶ್ ಅವರು ಬ್ಯಾಂಕಾಕ್ ನ ಪ್ರತಿಷ್ಠಿತ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ ಈ ಒಂದು ಹೋಟೆಲ್ ನಲ್ಲಿ ಒಂದು ದಿನ ಕಳೆಯಲು 2 ಲಕ್ಷಕ್ಕೂ ಅಧಿಕವಾದಂತಹ ಹಣವನ್ನು ಖರ್ಚು ಮಾಡಲಾಗುತ್ತದೆ. ಆದರೆ ಬ್ಯಾಂಕಾಕ್ ಸಿಯಾನ್ ಹೋಟೆಲ್ ನಲ್ಲಿ ಸೆಲೆಬ್ರಿಟಿ ಜೋಡಿಗಳಿಗೆ ಉಚಿತ ವಾದಂತಹ ಎಲ್ಲಾ ಸೌಲಭ್ಯವನ್ನು ಒದಗಿಸಿ ಕೊಡಲಾಗುತ್ತದೆ. ಈ ಹೋಟೆಲ್ ಬ್ಯಾಂಕಾಕ್ ನ ಚಾವು ಪ್ರೇಯಾ ನದಿಯ ದಡದಲ್ಲಿ ಇದ್ದು ಬಹಳ ಆಕರ್ಷಣೆ ಇರುವಂತಹ ಸ್ಥಳವಾಗಿದೆ.

ಅಷ್ಟೇ ಅಲ್ಲದೆ ಇದೀಗ ಈ ಇಬ್ಬರು ಜೋಡಿಗಳ ಆಸ್ತಿಯ ಬಗ್ಗೆಯೂ ಸಹ ಹಲವಾರು ಚರ್ಚೆಗಳು ಕೇಳಿ ಬರುತ್ತಿದೆ ಈ ಜೋಡಿಗೆ ಸುಮಾರು 215 ಕೋಟಿ ಆಸ್ತಿ ಇದ್ದು, ನಯನತಾರಾ ಅವರು ಸುಮಾರು 165 ಕೋಟಿಯ ಆಸ್ತಿಯ ಒಡತಿಯೆಂದು ಹೇಳಲಾಗುತ್ತಿದೆ. ವಿಜ್ಞೇಶ್ ಅವರು ಕೇವಲ ನಿರ್ಮಾಪಕರು ಅಷ್ಟೇ ಅಲ್ಲದೆ ನಿರ್ದೇಶಕನಾಗಿ, ನಟನಾಗಿ ಮತ್ತು ಗೀತೆರಚನೆಕಾರನಾಗಿ ಸುಮಾರು 3 ಕೋಟಿಗೂ ಅಧಿಕ ಹಣವನ್ನು ತೆಗೆದುಕೊಳ್ಳುತ್ತಾರೆ ಎನ್ನುವಂತಹ ಸಾಕಷ್ಟು ವಿಚಾರಗಳು ಕೇಳಿಬರುತ್ತಿವೆ. ವಿಜ್ಞೇಶ್ ಅವರು ಒಂದು ಹಾಡನ್ನು ರಚನೆ ಮಾಡಿದರೆ 3 ಲಕ್ಷದ ಅವರಿಗೆ ಹಣವನ್ನು ತೆಗೆದುಕೊಳ್ಳುತ್ತಾರೆ ಹಾಗೆಯೇ ನಯನತಾರಾ ಅವರು ಸಹ 20 ದಿನದ ನಟನೆಗೆ 10 ಕೋಟಿ ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ನನ್ನ ನಾಯಿಗೂ ಫ್ಲೈಟ್ ಟಿಕೆಟ್ ಬುಕ್ ಮಾಡಿ ಎಂದು ನಿರ್ದೇಶಕರಿಗೆ ಡಿಮ್ಯಾಂಡ್ ಮಾಡಿದ ರಶ್ಮಿಕಾ ಮಂದಣ್ಣ.

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ ರಶ್ಮಿಕಾ ಮಂದಣ್ಣ ಅವರು ತುಂಬಾ ಕಡಿಮೆ ಸಮಯದಲ್ಲಿಯೇ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಇವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸಿ ಹೆಸರನ್ನು ಮಾಡಿದ್ದಾರೆ. ಹಲವಾರು ಸ್ಟಾರ್ ನಟರುಗಳ ಜೊತೆ ನಟಿಸಿರುವಂತಹ ರಶ್ಮಿಕ ಮಂದಣ್ಣ ಅವರು ಯಾರಿಗೂ ಕಮ್ಮಿ ಏನು ಇಲ್ಲ ಎನ್ನುವಂತೆ ನಟನೆ ಮಾಡಿಕೊಂಡು ಸಾಕಷ್ಟು ರೀತಿಯಾದಂತಹ ಚರ್ಚೆಗಳಿಗೂ ಸಹ ಕಾರಣವಾಗಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ ನಮ್ಮ ಕನ್ನಡದ ಹುಡುಗಿ ಬೇರೆ ಭಾಷೆಗಳಲ್ಲಿ ನಟಿಸಿದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿರುವ ಎಂದರೆ ನಮಗೆಲ್ಲರಿಗೂ ಸಹ ಖುಷಿಯ ವಿಚಾರವೆ.

ಆದರೆ ರಶ್ಮಿಕಾ ಮಂದಣ್ಣ ಅವರು ತಮ್ಮ ಮಾತುಗಳ ಮೂಲಕ ಸಾಕಷ್ಟು ಚರ್ಚೆ ಆಗುತ್ತಲೇ ಇದ್ದಾರೆ. ಇವರ ಪ್ರತಿಯೊಂದು ನಡೆಯನ್ನು ಗಮನಿಸುತ್ತಿರುವಂತೆ ಪ್ರೇಕ್ಷಕರು ಇವರು ಎಲ್ಲಿಯಾದರೂ ಎಡವಿದರೆ ಅದನ್ನು ಟ್ರೋಲ್ ಮಾಡಿ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ತಮ್ಮ ನಟನೆಯ ಮೂಲಕ ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸುತ್ತಿರುವ ರಶ್ಮಿಕಾ ಮಂದಣ್ಣ ಅವರು ಕೂತರು, ನಿಂತರು ಸಹ ಅವರದೇ ಸುದ್ದಿ. ಹಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಸಾಕಷ್ಟು ಬ್ಯುಸಿಯಾಗಿರುವಂತಹ ರಶ್ಮಿಕಾ ಮಂದಣ್ಣ ಅವರು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟರುಗಳ ಜೊತೆ ನಟಿಸಿ ಫ್ಯಾನ್ಸ್ ಫಾಲೋಯಿಂಗ್ ಜಾಸ್ತಿ ಮಾಡಿಕೊಂಡಿದ್ದಾರೆ.

ಇವರ ಯಶಸ್ಸಿಗೆ ಅವರ ಮೊದಲ ಸಿನಿಮಾವೇ ಕಾರಣ ಎಂದು ಹೇಳಬಹುದು ಹೌದು ರಶ್ಮಿಕಾ ಮಂದಣ್ಣ ಅವರು ನಟಿಸಿದಂತಹ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಈ ಸಿನಿಮಾದಲ್ಲಿ ಸಾನ್ವಿ ಪಾತ್ರದ ಮೂಲಕ ನಟಿ ರಶ್ಮಿಕಾ ಅವರು ಬಹಳಷ್ಟು ಮೆಚ್ಚುಗೆಯನ್ನು ಪಡೆದುಕೊಂಡು ಆ ಪಾತ್ರಕ್ಕೆ ಇವರಿಗೆ ಉತ್ತಮವಾದಂತಹ ಒಂದು ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಇದೀಗ ರಶ್ಮಿಕ ಅವರು ಹಲವಾರು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ ಇತ್ತೀಚಿಗೆ ಹಲವಾರು ಪ್ರಾಡಕ್ಟ್ ಗಳಿಗೆ ಬ್ರಾಂಡ್ ಅಂಬಾಸಿಟರ್ ಆಗಿ ಕೂಡ ಇವರು ಕೆಲಸವನ್ನು ಮಾಡುತ್ತಿದ್ದಾರೆ. ಸದ್ಯದಲ್ಲಿ ಯಾವ ಇಂಡಸ್ಟ್ರಿಯನ್ನು ನೋಡಿದರೂ ಸಹ ರಶ್ಮಿಕಾ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ.

ಪುಷ್ಪ ಸಿನಿಮಾದ ನಂತರ ಫ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡ ಮಟ್ಟದಲ್ಲಿ ರಶ್ಮಿಕಾ ಮಂದಣ್ಣ ಅವರು ಸುದ್ದಿಯಾಗಿದ್ದಾರೆ ಹಾಗೆ ಅಭಿಮಾನಿಗಳು ಸಹ ಹೆಚ್ಚಾಗಿ ಇವರಿಗೆ ಹುಟ್ಟಿಕೊಳ್ಳುತ್ತಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾನಾ ಕಾರಣಗಳಿಗಾಗಿ ಸದಾ ಸುದ್ದಿಯಲ್ಲಿ ಇರುತ್ತಾರೆ 777 ಚಾರ್ಲಿ ಸಿನಿಮಾ ರಿಲೀಸ್ ಆದ ನಂತರ ನಾಯಿ ಕಾರಣಕ್ಕೆ ಅವರು ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಮುದ್ದಿನ ನಾಯಿಯನ್ನು ಮುದ್ದಿಸುವಂತಹ ರಶ್ಮಿಕಾ ಅವರ ಫೋಟೋ ಸಕ್ಕತ್‌ ವೈರಲ್ ಆಗಿತ್ತು ಚಾರ್ಲಿ ಸಿನಿಮಾವನ್ನು ಕದ್ದುಮುಚ್ಚಿ ನೋಡಿರುವ ರಶ್ಮಿಕ ನಾಯಿ ಜೊತೆ ಭಾವನಾತ್ಮಕವಾಗಿ ಕ್ಷಣಗಳನ್ನು ಕರೆಯುತ್ತಿದ್ದಾರೆ ಎಂದು ಟ್ರೋಲ್ ಆಗಿತ್ತು, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ರಶ್ಮಿಕಾ ಮಂದಣ್ಣ.

ರಶ್ಮಿಕಾ ಅವರು ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುವುದರಿಂದ ಸಖತ್ ಬ್ಯುಸಿಯಾಗಿದ್ದಾರೆ ಮನೆಗೆ ಹೋಗುವುದು ಅಪರೂಪ ಎನ್ನುವಂತಾಗಿದೆ ಪ್ರೀತಿಯ ನಾಯಿಯನ್ನು ಬಿಟ್ಟು ಅವರಿಂದ ಇರಲು ಸಾಧ್ಯವಾಗುತ್ತಿಲ್ಲ ಹಾಗಾಗಿ ತಮ್ಮೊಂದಿಗೆ ನಾಯಿಗೂ ಕೂಡ ಫ್ಲೈಟ್ ಟಿಕೆಟ್ ಮಾಡಿಸುವಂತೆ ನಿರ್ಮಾಪಕರಿಗೆ ಹೇಳುತ್ತಿದ್ದಾರೆ ಎಂದು ಮಾತು ಕೇಳಿಬರುತ್ತಿದೆ ಹಲವು ಮಾಧ್ಯಮಗಳು ಈ ಕುರಿತು ಸುದ್ದಿಯನ್ನು ಸಹ ಮಾಡಿದ್ದಾರೆ. ಈ ವಿಷಯದ ಕುರಿತಂತೆ ಸ್ವತ ರಶ್ಮಿಕಾ ಮಂದಣ್ಣ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಈ ವಿಷಯ ನನಗೆ ಫನ್ನಿ ಅನಿಸುತ್ತದೆ ಈ ದಿನವನ್ನು ಉಲ್ಲಾಸ ಗೊಳಿಸಿದೆ ಸುದ್ದಿ ಕೇಳಿ ನನಗೆ ನಗು ಬಂತು, ನನ್ನ ನಾಯಿ ನನ್ನೊಂದಿಗೆ ಬರಲು ಇಚ್ಛೆ ಪಡುವುದಿಲ್ಲ ಅದು ಹೈದರಾಬಾದ್ ಮನೆಯಲ್ಲೇ ಇರಲು ಇಷ್ಟಪಡುತ್ತದೆ. ಉಳಿದಂತೆ ಏನನ್ನು ಹೇಳಲಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.

ಮಾಲಾಶ್ರೀ ಪತಿ ರಾಮು ಆಗಲಿ ಒಂದು ವರ್ಷವಾದ ನಂತರ ಕುಟುಂಬ ಜೊತೆ ಪ್ಯಾರಿಸ್ ಪ್ರವಾಸ ಎಂಜಾಯ್ ಮಾಡುತ್ತಿರುವ ವಿಡಿಯೋ ನೋಡಿ.

ನಟಿ ಮಾಲಾಶ್ರೀ ಅವರು ಪ್ಯಾರಿಸ್ ಪ್ರವಾಸದಲ್ಲಿದ್ದಾರೆ ತಾಯಿ ಮಗ ಮಗಳ ಜೊತೆ ಅವರು ಇಷ್ಟವಾದ ಸ್ಥಳ ಪ್ಯಾರಿಸ್ ನಲ್ಲಿ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ ರಾಮು ಫಿಲಂಸ್ ಬ್ಯಾನರ್ ನ ನೋಡಿಕೊಳ್ಳುವ ಜವಾಬ್ದಾರಿ ಮಾಲಾಶ್ರೀ ಅವರ ಮೇಲೆ ಬಿದ್ದಿದೆ. ಇದರ ಜೊತೆಗೆ ಅವರು ಮತ್ತೆ ನಟನೆಗೆ ಕಂಬ್ಯಾಕ್ ಮಾಡಿದ್ದಾರೆ ಹೆಚ್ಚು ಹೆಚ್ಚು ಕಥೆಗಳನ್ನು ಕೇಳುತ್ತಾ ಅವರು ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೌದು ಮಕ್ಕಳು ಸದ್ಯ ಶಿಕ್ಷಣವನ್ನು ಪೂರೈಸುತ್ತಿದ್ದಾರೆ, ತಾಯಿಯ ನಟನೆ ಪ್ರೊಡಕ್ಷನ್ ಹೌಸ್ ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರ ಮಕ್ಕಳು ಅರ್ಜುನ್ ಗೌಡ ಪ್ರೀ ರಿಲೀಸ್ ಇವೆಂಟ್ ನಲ್ಲಿ ಹೇಳಿದ್ದರು.

ನೈಟ್ ಕರ್ಫ್ಯೂ ಎಂಬ ಸಿನಿಮಾವನ್ನು ಮಾಲಾಶ್ರೀ ಅವರು ಒಪ್ಪಿಕೊಂಡಿದ್ದು ಕೆಲ ದಿನಗಳ ಹಿಂದೆ ಆಯೋಜಿಸಲಾದ ಸುದ್ದಿಗೋಷ್ಠಿಯೊಂದರಲ್ಲಿ ಭಾಗಿಯಾಗಿದ್ದರು ಈ ಹಿಂದೆ ಪುಟಾಣಿ ಸಫಾರಿ ನಿರ್ದೇಶನ ಮಾಡಿದ್ದ ರವೀಂದ್ರ ವಂಶಿ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗ ಮತ್ತೆ ನಟಿಸುತ್ತಿರುವುದು ನನಗೆ ತುಂಬಾ ಗ್ಯಾಪ್ ಅನಿಸುತ್ತಿಲ್ಲ, ತುಂಬಾ ಖುಷಿಯಾಗುತ್ತಿದೆ ಈ ಕಥೆಯಲ್ಲಿ ಹೊಸತನವಿದೆ, ಹೊಸ ತಂಡ ನನಗೆ ಹೊಸ ಅನುಭವ, ಚಾಲೆಂಜಿಂಗ್ ಇರುತ್ತದೆ. ನಾನು ಡೈರೆಕ್ಟರ್ ಆಗಿ ಎರಡನೇ ಸಿನಿಮಾ ಇದು ಎಂದು ಮಾಲಾಶ್ರೀ ಹೇಳಿದರು.

ನನ್ನ ಪತಿ ಹೋದಾಗಿನಿಂದ ಎಲ್ಲಿಯೂ ಹೊರಗಡೆ ಹೋಗುತ್ತಿಲ್ಲ ಆದರೆ ಅವರು ಕೊನೆಯದಾಗಿ ನಿರ್ದೇಶಿಸಿದ ಚಿತ್ರ ಅರ್ಜುನ್ ಗೌಡ ಸಿನಿಮಾದ ಬಗ್ಗೆ ತುಂಬಾ ಕನಸನ್ನು ಹೊತ್ತಿದ್ದರು ತುಂಬಾ ವಿಭಿನ್ನವಾಗಿ ಮಾಡಿದ್ದರು ಇದು ಅವರ ಕನಸಿನ ಚಿತ್ರ ಎಂದು ಹೇಳುವುದಾದರೆ ತಪ್ಪಾಗುವುದಿಲ್ಲ. ಆದರೆ ಈಗ ಆ ಚಿತ್ರವನ್ನು ಅವರು ಇಲ್ಲದೆಯೇ ಬಿಡುಗಡೆ ಮಾಡುವಂತಹ ಪರಿಸ್ಥಿತಿ ಬಂದಿರುವುದರಿಂದ ನನಗೆ ತುಂಬಾ ದುಃಖವಾಗುತ್ತಿದೆ ಹಾಗೂ ಈ ರಾಮು ಫಿಲಂಸ್ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಬಿಟ್ಟು ಹೋಗಿದ್ದಾರೆ ಆದಕಾರಣ ನಾನು ಅದನ್ನು ಮುಂದುವರಿಸಿಕೊಂಡು ಹೋಗಲೇಬೇಕು ಅದು ಅವರ ಕನಸಾಗಿದ್ದ ಕಾರಣ ಅದನ್ನು ನಾನು ಮುನ್ನಡೆಸಿಕೊಂಡು ಹೋಗುತ್ತೇನೆ.

ಮತ್ತು ಅವರಿಗೆ ನಮ್ಮ ಕನ್ನಡ ಭಾಷೆ ಕನ್ನಡ ಸಿನಿಮಾ ಕನ್ನಡ ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬುದು ಅವರ ಕನಸಾಗಿತ್ತು ಅದರಂತೆ ನಾನು ನನ್ನ ಕೈಲಾದಮಟ್ಟಿಗೆ ನನ್ನ ಬ್ಯಾನರ್ ನಲ್ಲಿ ಹೆಚ್ಚಿನ ಚಿತ್ರಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಮಾಲಾಶ್ರೀ ಅವರು ತುಂಬಾ ಮನನೊಂದು ಹೇಳುತ್ತಾರೆ. ಮತ್ತು ನಾನು ಕೂಡ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಿನಿಮಾಗಳನ್ನು ಮಾಡುತ್ತೇನೆ ಎಂದು ಹೇಳುತ್ತಾರೆ.

ನಾನು ಈ ಮೂಲಕ ನನಗೆ ಹೆಗಲಾಗಿ ನಿಂತಂತಹ ಎಲ್ಲಾ ಚಿತ್ರರಂಗದ ನಿರ್ದೇಶಕರುಗಳಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅರ್ಜುನ್ ಗೌಡ ಪ್ರೀ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿದ ಮಾಲಾಶ್ರೀಯವರ ಮಗ ಈ ಚಿತ್ರವನ್ನು ನೋಡಿದರೆ ನನಗೆ ನನ್ನ ತಂದೆಯನ್ನು ನೋಡಿದಷ್ಟೇ ಖುಷಿಯಾಗುತ್ತದೆ ಎಂದು ಹೇಳುತ್ತಾ ಭಾವುಕರಾಗುತ್ತಾರೆ. ಕೊನೆಯದಾಗಿ ಮಾಲಾಶ್ರೀ ಯವರು ಈ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ನೋಡಿ ಹಾಗೂ ಆ ಮೆಚ್ಚುಗೆಯನ್ನು ರಾಮು ಅವರಿಗೆ ಕೊಡಬೇಕು ಎಂಬುದು ಮಾಲಾಶ್ರೀ ಅವರು ಮನವಿ ಇಂದ ಕೇಳಿಕೊಳ್ಳುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.

ನಮ್ಮ ಸಂಸಾರದಲ್ಲು ಕೋಪ, ಮೌನ ಇದೆ.! ನನ್ನ ಹೆಂಡತಿ ಸಹಜ ಸುಂದರಿ ಎಂದು ಹೇಳಿದ ಸುಚೇಂದ್ರ ಪ್ರಸಾದ.! ಈ ವಿಡಿಯೋ ನೋಡಿ.

ಒಂದು ಕಡೆ ಪವಿತ್ರ ಲೋಕೇಶ್ ಸುಚೇಂದ್ರ ಪ್ರಸಾದ್ ಅವರಿಗೆ ಮೋಸ ಮಾಡಿ ತೆಲುಗಿನ ಖ್ಯಾತ ಕಲಾ ಕಲಾವಿದ ನರೇಶ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ. ಆದರೆ ಸುಚೇಂದ್ರ ಪ್ರಸಾದ್ ಮಾತ್ರ ಇನ್ನೂ ಕೂಡ ತಮ್ಮ ಮಡದಿ ಬಗ್ಗೆ ಅಷ್ಟೇ ಪ್ರೀತಿ ಮತ್ತು ಒಲವನ್ನು ಇಟ್ಟುಕೊಂಡಿರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ.‌ ಸುಚೇಂದ್ರ ಪ್ರಸಾದ್ ಅವರು ಕನ್ನಡ ಚಿತ್ರರಂಗದ ಒಬ್ಬ ಅದ್ಬುತ ಕಲಾವಿದ ಚಿತ್ರರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿದ್ದ ಇವರು ಚಿತ್ರಗಳಲ್ಲಿ ಕಿತುತೆರೆಯಲ್ಲಿ ನಿರ್ದೇಶನ, ನೃತ್ಯ ಸಂಯೋಜನೆ ಮಾಡುವುದರ ಜೊತೆಗೆ ನಾಟಕಗಳನ್ನು ರಚಿಸುತ್ತಿದ್ದರು. 1999 ರಲ್ಲಿ ಕುವೆಂಪುರವರ ಜನಪ್ರಿಯ ಕಾದಂಬರಿ `ಕಾನೂರು ಹೆಗ್ಗಡತಿ’ ಚಿತ್ರರೂಪಕ್ಕೆ ಬಂದಾಗ ,ಅದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸುಚೇಂದ್ರರು ಜನಪ್ರಿಯರಾದರು. ಮುಂದೆ `ಬೇರು’, `ತುತ್ತೂರಿ’, `ಬೆಟ್ಟದ ಜೀವ’ದಂತಹ ಸಾಕಷ್ಟು ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ ಇವರು ಕನ್ನಡದ ಕಲಾಲೋಕದ ಅದ್ಭುತ
ಪ್ರತಿಭೆಯಾಗಿ ಬೆಳೆದರು.

ಇವರು 2007 ರಲ್ಲಿ ಕನ್ನಡದ ಖ್ಯಾತ ಕಲಾವಿದೆ `ಪವಿತ್ರಾ ಲೋಕೇಶ್’ ಅವರನ್ನು ವಿವಾಹವಾಗಿದ್ದಾರೆ. ಕಾರ್ಯಕ್ರಮವೋಂದರಲ್ಲಿ ತಮ್ಮ‌ ಪತ್ನಿಯ ಬಗ್ಗೆ ಹಾಗು ಸಂಸಾರದ ಬಗ್ಗೆ ಹೇಳಿರುವುದರ ಬಗ್ಗೆ ಇಲ್ಲಿ ತಿಳಿಯೋಣ. ತನ್ನ ಪತ್ನಿ ಅವರಾದ ಪವಿತ್ರ ಲೋಕೇಶ್ ಅವರು ಒಬ್ಬ ಸಹಜ ಹೆಣ್ಣು ಮಗಳಾಗಿದ್ದು ಸುಂದರವಾಗಿ ಇದ್ದಾರೆ ಅವರು ಯಾವಾಗಲೂ ಸಹಜವಾಗಿಯೇ ಇರುತ್ತಾರೆ. ಆದರೆ ದೊಡ್ಡ ಹೊರೆಯನ್ನು ನಾನು ಹೋತ್ತಿಕೊಂಡೆ ತಿರುಗುತ್ತೇನೆ ಆದ್ದರಿಂದ ನನಗೆ, ನನ್ನ ಮನಸ್ಸಿಗೆ, ನನ್ನ ಪ್ರಯಾಣಕ್ಕೆ ತುಂಬಾ ಹೊರೆ ಎಂದು ಅನ್ನಿಸುತ್ತದೆ. ದಾಂಪತ್ಯ ಮತ್ತು ಸಂಸಾರದಲ್ಲಿ ಹೊಂದಾಣಿಕೆ ಆಗಬೇಕೆಂದರೆ ಯಾವುದೇ ಒಂದು ವಿಚಾರವನ್ನು ನೀವು ಹೇಗೆ ದಕ್ಕಿಸಿಕೊಳ್ಳುತ್ತೀರಿ, ಹೇಗೆ ನೋಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ ಬಹಳ ಜನರು ಇನ್ನೊಬ್ಬರ ಮನೆಯ ಮೇಲಿನ ಕುತೂಹಲಕ್ಕಾಗಿ ತಮ್ಮ ದಾಂಪತ್ಯವನ್ನು ಹಾಳು ಮಾಡಿಕೊಳ್ಳುತ್ತಾ ಇರುತ್ತಾರೆ.‌

ಪ್ರತಿ ಒಬ್ಬರ ಬದುಕು ಕೂಡ ಅವರವರು ಪಡೆದು ಬಂದಿರುವ ಯೋಗ್ಯತೆ ಮತ್ತು ಅದೃಷ್ಟ ಆಗಿರುತ್ತದೆ ಎಲ್ಲರ ಕುಟುಂಬಗಳಲ್ಲೊಯೂ ಅವರವರದ್ದೆ ಆದ ಕೊರತೆಗಳು ಹೊರೆಗಳು ಇದ್ದೇ ಇರುತ್ತವೆ. ಕೆಲವೊಮ್ಮೆ ಮಾತನಾಡದೆ ಮೌನವಾಗಿರುವುದು ಇನ್ನು ಕೆಲವೊಮ್ಮೆ ಮಾತಾಡಿ ಮೌನವಾಗಿರುವುದು ಆಯಾಯ ಸಂದರ್ಭಕ್ಕೆ ಅನುಗುಣವಾಗಿ ಒಳ್ಳೆಯ ಪರಿಣಾಮ ಬೀರುತ್ತವೆ. ಆದ್ದರಿಂದ ಅವರವರ ಬದುಕು ಅವರದು ಯಾರಲ್ಲಿಯೂ ಸಮಾನತೆಯನ್ನು ಬಯಸಲು ಸಾಧ್ಯವಿಲ್ಲ. ಪವಿತ್ರಾ ಲೋಕೇಶ್ ಅವರು ಕಷ್ಟಪಟ್ಟು ತಮ್ಮ ಬಾಲ್ಯದಿಂದಲೂ ತಮ್ಮ ಬದುಕನ್ನು ತಮ್ಮ ವೃತ್ತಿಯನ್ನು ನಿರತಗೊಳಿಸಿಕೊಂಡಿದ್ದಾರೆ. ಅವರು ಒಬ್ಬ ಸಾಧಿತ, ಸ್ಥಾಪಿತ, ಹಾಗೂ ತುಂಬಾ ಪರಿಶ್ರಮದಿಂದ ಮೇಲೆ ಬಂದಿರುವ ಹೆಣ್ಣು ಮಗಳಾಗಿದ್ದಾರೆ ಇದರಲ್ಲಿ ನನ್ನ ಪಾತ್ರ, ಕೊಡುಗೆ ಯಾವುದು ಇಲ್ಲ. ನಾನು ಒಬ್ಬ ವಿಚಾರವಾದಿ, ಅದನ್ನು ವ್ಯಕ್ತ ಪಡಿಸಿ ಒಬ್ಬ ದೊಡ್ಡ ವ್ಯಕ್ತಿ ಆಗಿರಬಹುದು ಆದರೆ ಪವಿತ್ರ ಲೋಕೇಶ್ ಅವರು ಕೂಡ ವಿಚಾರವಾದಿ ಆಗಿರಬಹುದು ಅದನ್ನು ಅವರು ಎಲ್ಲಿಯು ಚರ್ಚೆ ಮಾಡದೆ ಬಹಿರಂಗ ಮಾಡದೆ ಇರುವುದರಿಂದ ಅವರು ವಿಚಾರವಾದಿ ಎಂದು ಕಾಣಿಸಬಹುದು ಅಷ್ಟೆ.

ನನಗೆ ಎಷ್ಟೋ ವಿಚಾರಗಳಲ್ಲಿ ಪವಿತ್ರ ಅವರೆ ತುಂಬಾ ಸ್ಪೂರ್ತಿ. ಅವರು ಎಷ್ಟೊ ಬಾರಿ ಹೇಳುತ್ತಾರೆ ನೀನು ವಿಚಾರವಾದಿಯಾಗಿ ನಿನ್ನ‌ ಮಾತಿನಿಂದ ಎಲ್ಲರನ್ನು ಮೋಡಿ ಮಾಡಬಹುದು ಎಂದು. ನಾನು ಮಾತನಾಡಿ ವಿಚಾರಗಳನ್ನು ಪ್ರಚಾರ ಮಾಡಿ ದೊಡ್ಡವನಾದರೆ ಅವರು ಮಾತನಾಡದೆ ವಿಚಾರಗಳನ್ನು ತಿಳಿದು ಒಬ್ಬ ಶ್ರೀಮಂತರು ಆಗಬಹುದು. ಅವರವರ ಬದುಕು ಅವರು ರೂಢಿಸಿಕೊಂಡು ಬಂದ ಹಾಗೆ ಇರುತ್ತದೆ. ಅವೆಲ್ಲವೂ ಅವರನ್ನು ಎತ್ತರಕ್ಕೆ ಕೊಂಡ್ಯೊಯ್ಯಬಹುದು. ಅವರು ಕೂಡ ಸಾಧಕರಾಗಿ ತಮ್ಮ‌ ಬದುಕಿನ ಪಯಣವನ್ನು ತುಂಬಾ ಮೇರು ಸದೃಶವಾಗಿ ಕಳೆಯುತ್ತಾ ಇರಬಹುದು. ಅವುಗಳನ್ನು ಗ್ರಹಿಸದೆ ಆ ವ್ಯಕ್ತಿಯನ್ನು ಅವಿಚಾರವಾದಿ ಎನ್ನುವುದು ಸರಿಯಲ್ಲ.‌ ಹೀಗೆ ತಮ್ಮ ಮಡದಿಯ ಬಗ್ಗೆ ಹಾಗು ಸಂಸಾರ ಬಗ್ಗೆ ಸುಚೇಂದ್ರ ಪ್ರಸಾದ್ ಅವರು ವಿವರಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.

ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದ ಕುರಿತಾಗಿ ಡಿ ಬಾಸ್ ಪತ್ನಿ ಭಾವುಕರಾಗಿ ಹೇಳಿದ್ದೇನು ಗೊತ್ತ.?

ಕನ್ನಡ ಸಿನಿಮಾ ರಂಗದ ಡಿ ಬಾಸ್ ಖ್ಯಾತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಬ ಈ ಹೆಸರಿಗೆ ಎಂತಹ ತಾಕತ್ತು ಇದೆ ಎಂಬುದು ತಮಗೆ ಗೊತ್ತೇ ಇದೆ. ಒಂದು ಕಾಲದ ಟಾಪ್ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರನಾಗಿದ್ದರೂ ಕೂಡ ಡಿ ಬಾಸ್ ದರ್ಶನ್ ಅವರ ಸಿನಿಮಾ ಕರಿಯರ್ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಹೌದು ದರ್ಶನ್ ಅವರ ಸಿನಿಮಾ ಜರ್ನಿ ಶುರುಮಾಡಿದ್ದು ಒಬ್ಬ ಲೈಟ್ ಮ್ಯಾನ್ ಆಗಿ ಎಂಬ ಮಾಹಿತಿ ಯಲ್ಲರಿಗೂ ತಿಳಿದೇ ಇದೆ. ಶಿವಣ್ಣ ಅವರ ಜನುಮದ ಜೋಡಿ ಸಿನಿಮಾದಲ್ಲಿ ದರ್ಶನ್ ಅವರು ಲೈಟ್ ಮ್ಯಾನ್ ಆಗಿ ಕೆಲಸ ಮಾಡಿದ್ದು. ಆ ನಂತರ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ, ಮೆಜೆಸ್ಟಿಕ್ ಎಂಬ ಚಿತ್ರದ ಮೂಲಕ ಹೀರೋ ಆಗಿ ಹೊರಹೊಮ್ಮಿದರು.

ಇವತ್ತಿಗೆ ಡಿ ಬಾಸ್ ದರ್ಶನ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದು ಕರ್ನಾಟಕದಲ್ಲಿ ದರ್ಶನ್ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕಳೆದ ವರ್ಷ ದರ್ಶನ್ ಅವರ ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಂಡಿದ್ದು ರಾಬರ್ಟ್ ಸಿನಿಮಾ ವನ್ನು ಉಮಾಪತಿಯವರು ನಿರ್ಮಾಣ ಮಾಡಿ ತರುಣ್ ಸುಧೀರ್ ರವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ರಾಬರ್ಟ್ ಬಿಡುಗಡೆ ಬಳಿಕ ದರ್ಶನ್ ಅವರು ಬೇರೆ ಕಾರಣಗಳಿಗೆ ಸುದ್ದಿಯಾದರು. ಹೌದು ಮೊದಲು ಯಾರೋ ದರ್ಶನ್ ಅವರಿಗೆ 25 ಕೋಟಿ ವಂಚನೆ ಮಾಡಿದ್ದಾರೆ ಎಂಬ ಸುದ್ದಿ ಬಂದು ನ್ಯೂಸ್ ವಾಹಿನಿಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

ಆನಂತರ ಇಂದ್ರಜಿತ್ ಲಂಕೇಶ್ ಅವರು ಎಂಟ್ರಿಕೊಟ್ಟು ಡಿ ಬಾಸ್ ದರ್ಶನ್ ಅವರು ಮೈಸೂರಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡುವವನ ಮೇಲೆ ಈ ರೀತಿ ಹ’ಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಹೇಳಿದರು ಬಳಿಕ ಏನಿಲ್ಲ ಆಯಿತು ಎಂಬುದು ನಿಮಗೆ ಗೊತ್ತೇ ಇರುತ್ತದೆ. ದರ್ಶನ್ ಹಾಗೂ ಲಂಕೇಶ್ ಮತ್ತು ಉಮಾಪತಿ ಶ್ರೀನಿವಾಸ್ ಅವರು ಒಂದಾದ ನಂತರ ಮತ್ತೊಂದು ಸುದ್ದಿಗೋಷ್ಠಿ ಗಳನ್ನು ಮಾಡಲು ಶುರುಮಾಡಿದ್ದು ಪರ-ವಿರೋಧ ಹೇಳಿಕೆಗಳನ್ನು ಶುರುಮಾಡಿದರು.
ಇದೆಲ್ಲದರ ನಡುವೆ ದರ್ಶನ್ ಅವರದ್ದು ಎನ್ನಲಾದ ಒಂದು ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಆ ಆಡಿಯೋದಲ್ಲಿ ದರ್ಶನ್ ಅವರು ಕನ್ನಡದ ನ್ಯೂಸ್ ಚಾನೆಲ್ ಗಳಿಗೆ ಬೈದಿದ್ದಾರೆ ಎಂದು ಕನ್ನಡದ ನ್ಯೂಸ್ ಚಾನಲ್ ಗಳು ದರ್ಶನ್ ಅವರನ್ನು ಬ್ಯಾನ್ ಮಾಡಿದ್ದು ಸುಮಾರು ಕಳೆದ 10 ತಿಂಗಳಿಂದ ದರ್ಶನ್ ಅವರ ಯಾವುದೇ ಸುದ್ದಿಯನ್ನು ಕೂಡ ಪ್ರಸಾರ ಮಾಡುತ್ತಿಲ್ಲ.

ಹೌದು ದರ್ಶನ್ ಅವರ ಕ್ರಾಂತಿ ಸಿನಿಮಾದ ಮುಹೂರ್ತಕ್ಕೆ ಕೂಡ ಯಾವುದೇ ಮೀಡಿಯಾದವರು ಬಂದಿರಲಿಲ್ಲ ಸದ್ಯ ಇದೀಗ ಇದರ ಬಗ್ಗೆ ಕೊನೆಗೂ ಮಾತನಾಡಿದ ದರ್ಶನ್ ರವರ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರು ಯಾವುದೇ ಮೀಡಿಯಾ ಇಲ್ಲದಿದ್ದಾಗ ಎಷ್ಟು ಹೆಸರು ಮಾಡಿದ್ದರು ಲಕ್ಷಾಂತರ ಜನ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅದೇ ರೀತಿ ಅವರ ಅಭಿಮಾನಿಗಳೆ ಅವರ ಶಕ್ತಿ ಅವರೇ ಸಿನಿಮಾವನ್ನು ಗೆಲ್ಲಿಸುತ್ತಾರೆ. ನಾನು ಯಾವುದೇ ಮೀಡಿಯಾದವರ ಬಗ್ಗೆ ಮಾತನಾಡಲು ಇಚ್ಛೆಪಡುವುದಿಲ್ಲ ಮೀಡಿಯಾದವರು ನಮಗೆ ಸಾಕಷ್ಟು ರೀತಿಯಲ್ಲಿ ಸಹಾಯ ಕೂಡ ಮಾಡಿದ್ದಾರೆ ಎಂದು ಹೇಳಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಭಾವುಕರಾಗಿದ್ದಾರೆ.

ದರ್ಶನ್ ಅವರ ಕ್ರಾಂತಿ ಸಿನಿಮಾಗೆ ಮೀಡಿಯಾದವರು ಯಾವುದೇ ರೀತಿಯಾದಂತಹ ಸಪೋರ್ಟ್ ಮತ್ತು ಪ್ರಚಾರ ಮಾಡುತ್ತಿಲ್ಲ. ಹಾಗಾಗಿ ಅಭಿಮಾನಿಗಳೇ ಕ್ರಾಂತಿ ಸಿನಿಮಾವನ್ನು ಗೆಲ್ಲುವುದಕ್ಕಾಗಿ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಬಳಕೆ ಮಾಡಿ ಶಕ್ತಿಯನ್ನು ತುಂಬುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು .? ನೀವು ದರ್ಶನ್ ಅವರ ಸಿನಿಮಾ ಬೆಂಬಲ ನೀಡುತ್ತಿರ ಹಾಗಾದರೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ.

ನಾವು ಕನ್ನಡತಿ ಸೀರಿಯಲ್ ನೋಡಲ್ಲ.! ವೀಕ್ಷಕರಿಗೆ ಬೇ’ಸರ ತರಿಸಿದ ಆ ಒಂದು ಟ್ವಿಸ್ಟ್.!

ಕನ್ನಡತಿ ಧಾರವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆ ನೋಡಲು ವೀಕ್ಷಕರು ಕಾದು ಕೂತಿದ್ದರು ಆದರೆ ಧಾರಾವಾಹಿಯಲ್ಲಿ ಕೆಲವು ಟ್ವಿಸ್ಟ್ ಗಳನ್ನು ನೀಡಲು ತಂಡ ಮುಂದಾಗಿತ್ತು. ಇದಕ್ಕೆ ಫ್ಯಾನ್ಸ್ ಬೇ’ಸರ ಹೊರ ಹಾಕಿದ್ದಾರೆ ನಾವು ಧಾರಾವಾಹಿಯನ್ನು ನೋಡುವುದೇ ಇಲ್ಲ ಎಂಬ ಕಾಮೆಂಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಅಷ್ಟಕ್ಕೂ ಫ್ಯಾನ್ಸ್ ಆ’ಕ್ರೋ’ಶವನ್ನು ಈ ರೀತಿ ಹೊರ ಹಾಕೋಕೆ ಕಾರಣವೇನು. ಕನ್ನಡತಿ ಧಾರಾವಾಹಿಯಲ್ಲಿ ಎಲ್ಲರೂ ಕಾದಿದ್ದ ಕ್ಷಣ ಕೊನೆಗೂ ಬಂದಿದೆ ಹರ್ಷ ಮತ್ತು ಭುವಿ ಮದುವೆಯಾಗುತ್ತಿದ್ದಾರೆ. ಆದರೆ ಈ ಮದುವೆಯಲ್ಲಿ ವರುಧಿನಿ ಹೈಡ್ರಾಮಾ ಮಾಡಿ ಕೈ ಕತ್ತರಿಸಿಕೊಂಡಿದ್ದಾಳೆ ಈ ಮೂಲಕ ಹರ್ಷ ಹಾಗೂ ಭುವಿ ಮದುವೆ ತಡೆಯಲು ಪ್ರಯತ್ನಿಸಿದ್ದಾಳೆ.

ವರುದಿನಿಯನ್ನು ಯಾರು ಬೇಕಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅವಕಾಶವಿತ್ತು ಆದರೆ ಭುವಿಯೇ ವರದಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಇದು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ ಕೆಲ ಧಾರಾವಾಹಿಗಳಿಗೆ ಸಾಕಷ್ಟು ಫ್ಯಾನ್ಸ್ ಕನೆಕ್ಟ್ ಆಗಿರುತ್ತಾರೆ ಹೀಗಾಗಿ ಧಾರಾವಾಹಿಯಲ್ಲಿ ಏನಾದರೂ ಅನಗತ್ಯ ಟ್ವಿಸ್ಟ್ ಕೊಟ್ಟರೆ ಅಥವಾ ಧಾರಾವಾಹಿ ಬೇರೆಯದೇ ಟ್ರ್ಯಾಕ್ ಪಡೆದುಕೊಂಡರೆ ಅದನ್ನ ಅವರು ಸಹಿಸಿಕೊಳ್ಳುವುದಿಲ್ಲ. ಈಗ ಕನ್ನಡತಿ ಧಾರಾವಾಹಿ ಯಲ್ಲೂ ಕೂಡ ಅದೇ ಆಗಿದೆ. ಹರ್ಷ ಹಾಗೂ ಭುವಿ ಮದುವೆಯ ಮಧ್ಯ ತರಲಾದ ಹೈಡ್ರಾಮ ನೋಡಿ ಫ್ಯಾನ್ಸ್ ಕುಪಿತ ಗೊಂಡಿದ್ದಾರೆ ಸಾಕು ನಿಲ್ಲಿಸಿ ಈ ಗೋಳು ನಮ್ಮ ತಲೆ ಸಿಡಿತಿದೆ ಇದನ್ನು ನೋಡಿ ಮದುವೆ ಅಂತ ಬಕಪಕ್ಷಿಗಳ ತರಹ ಕಾದಿದ್ದಕ್ಕೆ ಈ ತರಹ ಟಾ’ರ್ಚರ್ ಕೊಡುತ್ತಿದ್ದೀರಾ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.

ಕನ್ನಡತಿ ಸೀರಿಯಲ್ ಕುಸಿಯುತ್ತಿರುವುದಕ್ಕೆ ವರು ಆರ್ಭಟ ಕಾರಣ ಅಲ್ಲ, ಹರ್ಷ ಭುವಿನ ಸೈಡ್ ಲೈನ್ ಮಾಡಿರುವುದೇ ಕಾರಣ ಎಲ್ಲೇ ಹೋದರು ಮೊದಲಿನ ಹರ್ಷ ಮತ್ತು ಭುವಿ ಎಂದು ಅಭಿಮಾನಿ ಓರ್ವ ಕಮೆಂಟ್ ಮಾಡಿದ್ದಾನೆ. “ಕನ್ನಡತಿ ಧಾರಾವಾಹಿಯಲ್ಲಿ ಭುವಿ ಅವರು ಮಾತನಾಡುವ ಕನ್ನಡವನ್ನು ಕೇಳುವುದಕ್ಕೆ ತುಂಬಾ ಖುಷಿಯಾಗುತ್ತದೆ, ಬೇರೆ ಯಾವುದೇ ಧಾರವಾಹಿಯನ್ನು ಹೋಲಿಸಿದರೆ ಈ ಧಾರಾವಾಹಿ ತುಂಬಾ ವಿಭಿನ್ನವಾಗಿ ಹೊರಹೊಮ್ಮುತ್ತಿದೆ ಹಾಗೂ ಈ ದಾರವಾಹಿಯಲ್ಲಿ ಕನ್ನಡದ ಬಗ್ಗೆ ಇರುವ ಬೆಲೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ ಎಂದು ಹೇಳಲು ತಪ್ಪಾಗುವುದಿಲ್ಲ ಆದಕಾರಣ ಹಲವಾರು ವೀಕ್ಷಕರು ಈ ದಾರಾವಾಹಿಯನ್ನು ವೀಕ್ಷಿಸಲು ಇಚ್ಛೆಪಡುತ್ತಾರೆ ಮತ್ತು ಈ ದಾರವಾಹಿಯ ಕೊನೆಯಲ್ಲಿ ಬರುವ ಪದಬಂಧ ಅಂದರೆ ಒಂದು ಪದದ ಸಂಪೂರ್ಣ ಅರ್ಥವನ್ನು ಹೇಳುವುದರ ಮೂಲಕ ಈ ಧಾರಾವಾಹಿಯನ್ನು ಮುಕ್ತಾಯಗೊಳಿಸುತ್ತಾರೆ. ಇದರ ಮೂಲಕ ಎಷ್ಟೋ ಜನಗಳಿಗೆ ಆ ಪದದ ಸಂಪೂರ್ಣ ಅರ್ಥ ತಿಳಿದು ಕೊಂಡಂತಾಗುತ್ತದೆ ಇದರಿಂದ ತುಂಬಾ ಉಪಯೋಗವಾಗುತ್ತದೆ ಎಂದು ಹೇಳಬಹುದಾಗಿದೆ ಎಂದಿದ್ದಾರೆ.

ಹಾಗೆಯೇ ಭುವಿ ಎಂಬ ಪಾತ್ರವನ್ನು ನಿರ್ವಹಿಸುತ್ತಿರುವ ನಾಯಕಿ ಇವರು ತಾವೇ ಬರೆದ ಒಂದು ಪುಸ್ತಕವನ್ನು ಬಿಡುಗಡೆ ಮಾಡಿರುವುದು ತುಂಬಾ ಹೆಮ್ಮೆಯ ವಿಷಯ, ಪುಸ್ತಕದಲ್ಲಿ ಬರುವ ಪ್ರತಿಯೊಂದು ಕಥೆಗಳು ತುಂಬಾ ವಿಭಿನ್ನವಾಗಿದ್ದು ಓದುವವರಿಗೆ ತುಂಬ ಸಂತೋಷವಾಗುತ್ತದೆ ಎಂದು ಹೇಳಬಹುದು, ಹಾಗೂ ಇವರಿಗೆ ಕನ್ನಡದ ಮೇಲೆ ಇರುವ ಅಭಿಮಾನ ಎಲ್ಲರಿಗೂ ಇಷ್ಟ ಆಗುತ್ತದೆ. ಆದ ಕಾರಣದಿಂದಲೇ ಇವರಿಗೆ ಹೆಚ್ಚಿನ ಸಂಖ್ಯೆಯ ಫ್ಯಾನ್ಸ್ ಇದ್ದಾರೆ ಎಂದು ಹೇಳಲು ತಪ್ಪಾಗುವುದಿಲ್ಲ. ಕನ್ನಡತಿ ಧಾರವಾಹಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಸ್ಟೇಜ್ ಮೇಲೆ ಜಬರ್ದಾಸ್ತ್ ಹಾಡಿಗೆ ಡ್ಯಾನ್ಸ್ ಮಾಡಿದ ನಟಿ ರಚಿತಾ ರಾಮ್.! ಈ ಹಾ’ಟ್ ವಿಡಿಯೋ ನೋಡಿ ನಿಜಕ್ಕೂ ಬೆರಗಾಗ್ತಿರಾ.

ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ಅನೇಕ ನಟಿಯರು ಬಂದು, ಸಿನಿಮಾಗಳಲ್ಲಿ ನಟಿಸಿ ಹೋಗಿದ್ದಾರೆ ಅಲ್ಲದೆ ಅನೇಕ ಕನ್ನಡದ ನಟಿಯರು ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲು ನಟಿಸಿದ್ದಾರೆ. ಅದರಲ್ಲಿ ಕೆಲವು ನಟಿಯರು ವಿಭಿನ್ನವಾಗಿ ಇದ್ದಾರೆ. ಅದರಲ್ಲಿ ಒಬ್ಬ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಇತ್ತೀಚಿಗೆ ಕನ್ನಡ ಸಿನಿಮಾ ರಂಗಕ್ಕೆ ಬಂದಿದ್ದು ಹೆಚ್ಚು ಜನಪ್ರಿಯ ಗಳಿಸಿದ್ದಾರೆ. ಬೇರೆ ನಟಿಯರಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಕನ್ನಡದ ನಿರ್ದೇಶಕರುಗಳು ಮತ್ತು ನಿರ್ಮಾಪಕರು ತಮ್ಮ ಹೊಸ ಸಿನಿಮಾಗಳಿಗೆ ರಚಿತಾ ರಾಮ್ ಅವರನ್ನೆ ಮೊದಲು ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ರಚಿತಾ ರಾಮ್ ಅವರು ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ಈ ಮುದ್ದು ನಗುವಿನ ಗುಳಿ ಕೆನ್ನೆಯ ಚೆಲುವೆ ರಚಿತಾ ರಾಮ್ ಒಬ್ಬ ಅದ್ಭುತ ನಟಿ ಆಗಿದ್ದಾರೆ. ಇವರ ಗುಳಿ ಕೆನ್ನೆ ಹಾಗೂ ಇವರ ನಟನೆಗೆ ಎಷ್ಟೋ ಹುಡುಗರು ಮನಸೋತಿದ್ದಾರೆ. ಇದರಿಂದ ಬಹು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ರಚಿತಾ ರಾಮ್ ಅವರು. ಇವರು ಸಿನಿಮಾದಲ್ಲಿ ನೈಜವಾಗಿ ನಟಿಸಿ, ಟಾಪ್ ನಲ್ಲಿ ಮಿಂಚುತ್ತಾ ಇದ್ದಾರೆ. ರಚಿತಾ ರಾಮ್ ಅವರು ಇದೀಗ ಸ್ಟಾರ್ ನಟಿಯಾಗಿ ಜನಪ್ರಿಯರಾಗಿದ್ದರೂ ಸ್ವಲ್ಪ ಕೂಡ ಅಹಂಕಾರ ಸ್ವಭಾವ ಎಲ್ಲಿಯೂ ತೋರಿಸುವುದಿಲ್ಲ. ಎಲ್ಲರೊಂದಿಗೆ ಖುಷಿಯಿಂದ ಮಿಂಗಲ್ ಆಗುವ ಅವರ ವ್ಯಕ್ತಿತ್ವ ಹೊಂದಿದ್ದು, ಪ್ರತಿಯೊಬ್ಬರನ್ನು ಪ್ರೀತಿಯಿಂದಲೇ ಮಾತನಾಡಿಸುತ್ತಾರೆ. ಹೀಗಾಗಿಯೇ ರಚಿತಾ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ.

ಎಲ್ಲೇ ಹೋಗಲಿ ಅಭಿಮಾನಿಗಳ ಜೊತೆ ಸಹಜ ಮನುಷ್ಯನಾಗಿಯೇ ಇರುವ ಇವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ತುಂಬಾ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡು, ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ರಚಿತಾ ರಾಮ್ ಅವರು ಮೊಟ್ಟ ಮೊದಲು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಬುಲ್ ಬುಲ್ ಸಿನಿಮಾದಲ್ಲಿ. ಇದರಲ್ಲಿ ತನ್ನ ಗುಳಿ ಕೆನ್ನೆ, ಮುಗ್ಧವಾದ ಅಭಿನಯದ ಮೂಲಕ ಪ್ರೇಕ್ಷಕರೆಲ್ಲರ ಮನಗೆದ್ದಿದ್ದಾರೆ. ಇವರು ಮೊದಲಿಗೆ ಜೀ ಕನ್ನಡದಲ್ಲಿ ಹತ್ತು ವರ್ಷಗಳ ಹಿಂದೆ ಪ್ರಸಾರ ಆಗುತ್ತಿದ್ದ ಅರಸಿ ಧಾರವಾಹಿಯಲ್ಲಿ ನಟಿಸಿದ್ದರು.

ಆದಾದ ನಂತರ ಸಿನಿಮಾದಲ್ಲಿ ಅವಕಾಶ ಸಿಕ್ಕಿ ಎಲ್ಲಾ ಸ್ಟಾರ್ ನಟರ ಜೊತೆಗೆ ಅಂದರೆ ಕಿಚ್ಚ ಸುದೀಪ್, ಡಿ ಬಾಸ್ ದರ್ಶನ್, ಗಣೇಶ್, ಶ್ರೀ ಮುರಳಿ, ಶಿವರಾಜ್ ಕುಮಾರ್, ನಿನಾಸಂ ಸತೀಶ್ ಮುಂತಾದವರುಗಳ ಜೊತೆ ಸಿನಿಮಾಗಳಲ್ಲಿ ನಟಿಸಿ ಯಶಸ್ಸನ್ನು ಗಳಿಸಿದ್ದಾರೆ. ಇವರು ನಟಿಸಿರುವ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳೇ ಆಗಿವೆ. ಹೀಗಾಗಿ ರಚಿತಾ ರಾಮ್ ಒಬ್ಬ ಸಕ್ಸಸ್ ಫುಲ್ ನಟಿಯಾಗಿ ಮಿಂಚುತ್ತಿದ್ದಾರೆ. ಇನ್ನು ರಚಿತಾ ಅವರು ಕೇವಲ ಸಿನಿಮಾದಲ್ಲಿ ಮಾತ್ರ ಅಲ್ಲದೇ ಕೆಲವು ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಂಡು ವೀಕ್ಷಕರಿಗೆ ಸಂತಸ ಕೊಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಕಾಮಿಡಿ ಶೋ ನಲ್ಲಿ ಜಡ್ಜ್ ಆಗಿದ್ದರು. ಇದೀಗ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಡ್ರಾಮಾ ಜೂನಿಯರ್ಸ್ ಸೀಸನ್ 4 ಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತೀರ್ಪುಗಾರರಾಗಿ ಇದ್ದಾರೆ.

ರಚಿತಾ ರಾಮ್ ಅವರು ಒಂದು ಕಾರ್ಯಕ್ರಮದಲ್ಲಿ ಮಾಡಿದ ಡ್ಯಾನ್ಸ್ ನ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸುದ್ದಿ ಮಾಡಿದೆ. ಹೌದು, ಒಂದು ಕಾರ್ಯಕ್ರಮದಲ್ಲಿ ರಘು ದೀಕ್ಷಿತಾ ಅವರು ರಚಿತಾ ಅವರು ಅಭಿನಯಿಸಿರುವ ಸಿನಿಮಾದ ಚಾಂದಿನಿ ಅನ್ನುವ ಹಾಡು ಹಾಡುತ್ತಿದ್ದರು. ಆಗ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಚಿತಾ ರಾಮ್ ಅವರು ವೇದಿಕೆ ಮೇಲೆ ಹೋಗಿ ಆ ಹಾಡಿಗೆ ಸಕತ್ ಆಗಿ ಟಪಾಂಗುಚ್ಚಿ ಡ್ಯಾನ್ಸ್ ಮಾಡಿದ್ದಾರೆ. ಅಂದು ಬಿಳಿ ಬಣ್ಣದ ಸೀರೆ ಉಟ್ಟಿದ್ದ ರಚಿತಾ ಅವರು ಸಖತ್ ಹಾಟ್ ಆಗಿ ಕಾಣಿಸುತ್ತಿದ್ದ ಅವರ ಈ ಡ್ಯಾನ್ಸ್ ನೋಡಿ ಅಭಿಮಾನಿಗಳು ಸಂತೋಷ ಪಟ್ಟು ಕಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿದ್ದಾರೆ. ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ.

 

ಮಗಳನ್ನು ಇಟ್ಟುಕೊಂಡು ದುಡ್ಡು ಮಾಡ್ತ ಇದ್ದಿರ ಎಂದು ಹೇಳಿದ ನೆಟ್ಟಿಗರಿಗೆ ಮಾಸ್ಟರ್ ಆನಂದ್ ಲೈವ್ ಬಂದು ಹೇಳಿದ್ದೇನು ಗೊತ್ತ.? ಎಲ್ಲರೂ ಒಂದು ಕ್ಷಣ ಶಾ’ಕ್

ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಮೂಲಕ ಸಖತ್ ಫೇಮಸ್ ಆಗಿದ್ದಾಳೆ ವಂಶಿಕ ಅಂಜನಿ ಕಶ್ಯಪ ನಟ ನಿರೂಪಕ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ಅವರ ಪುತ್ರಿಯಾಗಿರುವ ವಂಶಿಕಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಬಳಿಕ ವಂಶಿಕ ಈಗ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಳೆ. ಈಚೆಗೆ ವಂಶಿಕ ನಿರ್ವಹಿಸಿದ್ದ ರತ್ನನ್ ಪ್ರಪಂಚ ಸಿನಿಮಾದ ಸ್ಕಿಟ್ ಸಾಕಷ್ಟು ಸದ್ದು ಮಾಡಿದೆ ಈ ಮಧ್ಯ ಒಂದು ಅಪಸ್ವರದ ಮಾತುಗಳು ಕೇಳಿ ಬಂದಿದೆ. ಈ ಬಗ್ಗೆ ಅಂಶಿಕ ತಂದೆ ನಟ ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ ದೊಡ್ಡವರ ಶೋನಲ್ಲಿ ವಂಶಿಕ ನಟಿಸುವುದು ಯಾಕೆ? ನಿಮಗೆ ದುಡ್ಡೇ ಮುಖ್ಯ ನ ಎಂದವರಿಗೆ ನಾವು ಅವಳಿಂದ ಯಾವುದೇ ದುಡ್ಡಿನ ನಿರೀಕ್ಷೆ ಮಾಡುತ್ತಿಲ್ಲ ಇದು ಬಯಸದೆ ಬಂದಿದ್ದು.

ಭಗವಂತ ವೀಕ್ಷಕರ ರೂಪದಲ್ಲಿ ಆಶೀರ್ವಾದ ನೀಡಿದ್ದಾನೆ ಎಂದಿದ್ದಾರೆ. ವಂಶಿಕಾಗೆ ಸಪೋರ್ಟ್ ಮಾಡುತ್ತಿರುವವರಿಗೆ ಹೃದಯಪೂರ್ವಕ ಧನ್ಯವಾದಗಳು ಕಲರ್ಸ್ ಕನ್ನಡ ವಾಹಿನಿ ತಂಡ ತುಂಬಾ ಚೆನ್ನಾಗಿ ಸ್ಕ್ರಿಪ್ಟ್ ಮಾಡಿಕೊಂಡು ಶೋ ಮಾಡುತ್ತಿದೆ. ನನಗೆ ತುಂಬಾ ಹೆಮ್ಮೆ ಇದೆ ತುಂಬಾ ಖುಷಿ ಇದೆ ಅವಳು ಇಷ್ಟೊಂದು ಚೆನ್ನಾಗಿ ಅಭಿನಯ ಮಾಡ್ತಾಳೆ ಅಂತ ನಮಗೆ ಗೊತ್ತಿರಲಿಲ್ಲ ಇದು ದೇವರ ವರ ಅಷ್ಟೇ. ನನ್ನಮ್ಮ ಸೂಪರ್ ಸ್ಟಾರ್ ತಂಡವೇ ಈಗ ಗಿಚ್ಚಿ ಗಿಲಿ ಗಿಲಿ ಶೋ ಮಾಡುತ್ತಿದೆ. ಈ ಶೋನಲ್ಲಿ ಸಾಧುಕೋಕಿಲ ಅವರು ವಂಶಿಕ ಜೊತೆಗೆ ಬೇರೆ ಯಾರೇ ಇದ್ದಿದ್ದರೂ ಕೂಡ ಈ ರೀತಿಯ ಪಾತ್ರವನ್ನು ಅವಳು ನಿರ್ವಹಿಸಲು ಆಗುತ್ತಿರಲಿಲ್ಲ ಅವಳಿಗೆ ಸಿಕ್ಕಿರುವ ಪಾರ್ಟ್ನರ್ ಶಿವು ಇವನು ತುಂಬಾ ಚೆನ್ನಾಗಿ ಇವಳಿಗೆ ಹೊಂದಿಕೊಂಡಿದ್ದಾರೆ ಆದ ಕಾರಣ ಇವಳು ಚೆನ್ನಾಗಿ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ ಎಂದು ಹೇಳುತ್ತಾರೆ.

ದನ್ನು ಕೇಳಿದ ನಂತರ ವಂಶಿಕ ತಂದೆ ಆನಂದ್ ಅವರಿಗೆ ತುಂಬಾ ಸಂತೋಷವಾಗುತ್ತದೆ, ಆದರೆ ಈ ಮಧ್ಯೆ ಸುಮಾರು ಜನ ಕಮೆಂಟ್ ಮಾಡುತ್ತಿದ್ದಾರೆ, ಯಾಕೆ ನೀವು ದೊಡ್ಡವರು ಶೋಗೆ ಮಗುವನ್ನು ಕಳುಹಿಸುತ್ತಾ ಇದ್ದೀರಾ ನಿಮಗೆ ದುಡ್ಡೇ ಮುಖ್ಯನಾ ಅಂತಾ ಕೇಳುತ್ತಿದ್ದಾರೆ. ಅವರೆಲ್ಲ ಒಂದನ್ನು ಗಮನಿಸಬೇಕು ಅಲ್ಲಿ ವಂಶಿಕ ಮಾಡುವ ಸ್ಕಿಟ್ ಗಳು ಯಾವ ರೀತಿ ಇವೇ ಅವಳ ನಟನೆ ಹೇಗೆ ಇದೆ ಎಂಬುದನ್ನು ಗಮನಿಸಬೇಕು. ನಾವು ಎಲ್ಲಾ ಕಾಮಿಡಿ ಸೀನ್ ಗಳನ್ನು ನೋಡುತ್ತೇವೆ ಸುಮ್ಮನೆ ಸುಳ್ಳು ಹೇಳಬಾರದು ಅವಳ ಮನಸ್ಸಿನ ಮೇಲೆ ಪ್ರಭಾವಬೀರುವುದು ಯಾವುದು ಇಲ್ಲ. ನಾನು ಕೂಡ ಚಿಕ್ಕವಯಸ್ಸಿನಲ್ಲಿ ದೊಡ್ಡಣ್ಣ ಅವರ ಜೊತೆಗೆ ಮಡಿಕೆ ಸೀನ್ ಆಕ್ಟ್ ಮಾಡುವಾಗ ರೇಖಾ ದಾಸ್ ಮೇಡಮ್ ಗೆ ರೇಗಿಸುವ ಪಾತ್ರಗಳನ್ನು ಮಾಡಿದಾಗ ಇವನು ಹಾಳಾಗಿ ಬಿಡುತ್ತಾನೆ.

ಅಂತ ಎಲ್ಲಾ ಹೇಳಿದ್ದರ ನಾನು ಹಾಳಾಗಿದ್ದೀನ, ಇವತ್ತಿಗೂ ಆಚೆ ಸಿಕ್ಕಿದಾಗ ಅದೇ ವಾಡಿಕೆ ಕಾಮಿಡಿ ಬಗ್ಗೆ ಮಾತನಾಡುತ್ತಾರೆ. ಗೌರಿ ಗಣೇಶ ಚಿತ್ರದ ನಂತರ ಜನ ಮಾತನಾಡುವುದೇ ಮಡಿಕೆ ಸೀನ್ ಬಗ್ಗೆ, ನಿಂದಕರು ಹೇಗೆ ಇದ್ದರೂ ಮಾತನಾಡುತ್ತಾರೆ ನಿಮ್ಮ ನೆಗೆಟಿವ್ ಕಮೆಂಟ್ ನನ್ನನ್ನ ಬಾಧಿಸುತ್ತದೆ ಅಂದುಕೊಂಡಿದ್ದರೆ ತಪ್ಪು ಎಂದಿದ್ದಾರೆ. ಇದರ ಬಗ್ಗೆ ಸಂಪೂರ್ಣ ವಿಚಾರ ತಿಳಿಯಬೇಕಾದರೆ ಮಾಸ್ಟರ್ ಆನಂದ್ ಮಾತನಾಡಿರುವ ಈ ಲಯುವ್ ವಿಡಿಯೋ ನೋಡಿ‌ ನಿಮಗೆ ಅರ್ಥ ಆಗುತ್ತೆ. ಕೊನೆಯಲ್ಲಿ ನಿಮ್ಮ ಅಭಿಪ್ರಾಯವೇನು ಅಂತ ನಮಗೆ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.