Home Blog Page 348

ನಟ ದುನಿಯಾ ವಿಜಯ್ ಹಾಗೂ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತಿರ

ನಟ ದುನಿಯಾ ವಿಜಯ್ ಅವರು 2006ನೇ ಇಸ್ವಿಯಲ್ಲಿ ದುನಿಯಾ ಎನ್ನುವ ಕನ್ನಡದ ಮಾಸ್ ಸಿನಿಮಾದ ಮೂಲಕ ನಾಯಕನಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಕ್ಕೂ ಮುಂಚೆ ರಂಗ ಎಸೆಸೆಲ್ಸಿ ಹಾಗೂ ಜೋಗಿ, ಖುಷಿ ಮುಂತಾದ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದ ದುನಿಯಾ ವಿಜಯ್ ಅವರನ್ನು ಜನರು ಗುರುತಿಸುವಂತೆ ಮಾಡಿದ್ದು ಅವರ ಮೊದಲ ಸಿನಿಮಾ ದುನಿಯಾ. ಈ ಸಿನಿಮಾದ ಸಕ್ಸಸ್ ನಂತರ ಅವರ ಹೆಸರು ದುನಿಯಾ ವಿಜಯ್ ಎಂದು ಬದಲಾಯಿತು ಎಂದು ಹೇಳಬಹುದು ಅಷ್ಟರಮಟ್ಟಿಗೆ ಈ ಸಿನಿಮಾ ಅವರಿಗೆ ಕನ್ನಡ ಚಲನಚಿತ್ರ ರಂಗದಲ್ಲಿ ನೆಲೆಯೂರಲು ಅವಕಾಶ ಮಾಡಿಕೊಟ್ಟಿತ್ತು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಡೈರೆಕ್ಟರ್ ಸೂರಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ದುನಿಯಾ ಸಿನಿಮಾ ರೌಡಿಸಂ ಕುರಿತಾದ ಸಿನಿಮಾ ಆಗಿದ್ದರೂ ಕೂಡ ಜೊತೆಜೊತೆಗೆ ದುನಿಯಾ ವಿಜಯ್ ಹಾಗೂ ರಶ್ಮಿ ಅವರ ಅದ್ಭುತವಾದ ಕೆಮಿಸ್ಟ್ರಿ ಸಿನಿಮಾ ಕ್ಲಿಕ್ ಆಗಲು ಕಾರಣವಾಗಿತ್ತು ಎಂದು ಹೇಳಬಹುದು. ದುನಿಯಾ ಸಿನಿಮಾದಲ್ಲಿ ತಮ್ಮ ಅದ್ಭುತವಾದ ಅಭಿನಯದಿಂದ ಎಲ್ಲರ ಮನಗೆದ್ದಿದ್ದ ದುನಿಯಾ ವಿಜಯ್ ಅವರು ಈ ಮೊದಲು ಕನ್ನಡ ಸಿನಿಮಾಗಳಲ್ಲಿ ಸಾಹಸ ನಿರ್ದೇಶಕನಾಗಿ ಕೂಡ ಕೆಲಸ ಮಾಡಿದ್ದರು.

ನಂತರ ಅಭಿನಯದಲ್ಲಿ ಆಸಕ್ತಿ ತಿರುಗಿಸಿಕೊಂಡ ದುನಿಯಾ ವಿಜಯ್ ಅವರು ತಾವು ಕೂಡ ನಟನಾಗುವ ನಿರ್ಧಾರ ಮಾಡಿದರು. ಅವರ ಅದೃಷ್ಟ ಪರೀಕ್ಷೆಯು ಒಳ್ಳೆಯ ಪ್ರತಿಫಲವನ್ನು ತಂದುಕೊಟ್ಟಿತ್ತು. ದುನಿಯಾ ಸಿನಿಮಾದ ವಿಜಯ್ ಅವರ ಅದ್ಭುತವಾದ ಅಭಿನಯ ಹಾಗೂ ತಾಯಿಯ ಸೆಂಟಿಮೆಂಟ್ ಮತ್ತು ಸೂಪರ್ ಹಿಟ್ ಹಾಡುಗಳ ಮೂಲಕ ಜೊತೆಗೆ ರಂಗಾಯಣ ರಘು ಅವರ ಕಾಮಿಡಿ ಈ ಸಿನಿಮಾದ ಸ್ಟ್ರೆಂತ್ ಆಗಿತ್ತು ಎಂದೇ ಹೇಳಬಹುದು. ಲೂಸ್ ಮಾದ ಯೋಗಿ ದುನಿಯಾ ವಿಜಯ್ ದುನಿಯಾ ರಶ್ಮಿ ಇನ್ನು ಮುಂತಾದ ಅನೇಕರಿಗೆ ಈ ಸಿನಿಮಾವು ಮೊದಲ ಪ್ರಯತ್ನವಾಗಿತ್ತು. ತಮ್ಮ ಮೊದಲ ಸಿನಿಮಾದಲ್ಲಿ ಅದ್ಭುತ ಅಭಿನಯದ ಮೂಲಕ ಜನಮನವನ್ನು ಇವರು ಗೆದ್ದರು. ಇದಾದ ನಂತರ ದುನಿಯಾ ವಿಜಯ್ ಅವರು ಮಾಸ್ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜರಾಸಂಧ, ಭೀಮಾತೀರದಲ್ಲಿ, ಬ್ಲಾಕ್ ಕೋಬ್ರಾ, ಸ್ಲಂಬಾಲ, ಜಂಗ್ಲಿ, ರಜನಿಕಾಂತ, ಶಂಕರ್ ಐಪಿಎಸ್, ಜಾಕ್ಸನ್, ಕರಿಚಿರತೆ ಮಾಸ್ತಿಗುಡಿ ಸಲಗ ಇನ್ನು ಮುಂತಾದ ಮಾಸ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಚಂಡ ತಾಕತ್ ವೀರಬಾಹು ಕನಕ ಸಿಂಹಾದ್ರಿ ಜಾನಿ ಮೇರಾ ನಾಮ್ ದೇವ್ರು ಯುಗಾ ಅವ್ವ ಇನ್ನು ಮುಂತಾದ ಸಿನಿಮಾಗಳನ್ನು ಕೂಡ ಅಭಿನಯಿಸಿ ಕನ್ನಡಿಗರ ಮನಸಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ.

ಇದರ ಜೊತೆಗೆ ದುನಿಯಾ ವಿಜಯ್ ಅವರು ಈಗ ಕನ್ನಡ ಸಿನಿಮಾರಂಗದ ನಾಯಕ ಮಾತ್ರವಲ್ಲದೆ ನಿರ್ಮಾಪಕ ಕೂಡ ಆಗಿದ್ದಾರೆ. ಇಷ್ಟೆಲ್ಲ ಯಶಸ್ವಿಯಾಗಿರುವ ಈ ನಾಯಕನ ವೈಯುಕ್ತಿಕ ಬದುಕು ಮಾತ್ರ ಯಾವಾಗಲು ವಿವಾದದಿಂದ ಕೂಡಿರುತ್ತದೆ. ದುನಿಯಾ ವಿಜಯ್ ಅವರು ನಾಗರತ್ನ ಅವರನ್ನು ಮೊದಲು ವಿವಾಹವಾಗಿದ್ದರು. ಇವರಿಬ್ಬರಿಗೆ ಸಾಮ್ರಾಟ್ ವಿಜಯ್ ಹಾಗೂ ಮೋನಿಷ ವಿಜಯ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇದಾದನಂತರ ಇವರ ವಿವಾಹ ಜೀವನದಲ್ಲಿ ಬಿರುಕು ಏರ್ಪಟ್ಟು ಅವರಿಬ್ಬರೂ ವಿಚ್ಛೇದನ ಪಡೆಯುವ ನಿರ್ಧಾರಕ್ಕೆ ಬಂದಿದ್ದರು ಆದರೆ ಕೊನೆಯ ಹಂತದಲ್ಲಿ ಸಿನಿಮಾರಂಗದ ಹಿರಿಯರ ಮಾತುಗಳಿಗೆ ಬೆಲೆಕೊಟ್ಟು ದುನಿಯಾ ವಿಜಯ್ ಅವರು ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದರು. ಆದರೆ 2016 ನೇ ಇಸವಿಯಲ್ಲಿ ಕೀರ್ತನ ಎನ್ನುವ ನಟಿಯನ್ನು ವಿವಾಹವಾದರು. ಇದಾದ ಮೇಲೆ ಮೊದಲ ಪತ್ನಿಯಿಂದ ಹಲವಾರು ಬಾರಿ ದೂರಿಗೆ ಒಳಗಾಗಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಬೇಕಾಯಿತು. ಇಷ್ಟಕ್ಕೆ ನಿಲ್ಲದ ಇವರಿಬ್ಬರ ಗಲಾಟೆಯು ನಂತರ ಮಗಳ ವಿಚಾರದ ವರೆಗೂ ಮುಂದುವರೆದು ದುನಿಯಾ ವಿಜಯ್ ಅವರ ಮಗಳಾದ ಮೋನಿಷಾ ವಿಜಯ್ ಅವರು ಕೀರ್ತನ ಅವರ ಮನೆಗೆ ಬಂದು ಗಲಾಟೆ ಕೂಡ ಮಾಡಿ ಹೋಗಿದ್ದರು ಅಲ್ಲದೆ ಅವರ ಪತ್ನಿಯಾದ ಅವರ ಮನೆ ಕಡೆಯಿಂದ ಕೀರ್ತನ ಅವರ ಮೇಲೆ ಹಲವಾರು ಬಾರಿ ಹಲ್ಲೆಗಳು ನಡೆದಿದ್ದವು.

ಇಷ್ಟಾದರೂ ಕೂಡ ಕೀರ್ತನ ವಿಜಯ್ ಅವರು ದುನಿಯಾ ವಿಜಯ್ ಅವರ ಜೊತೆಯೇ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ ಹಾಗೂ ಈ ಜೋಡಿಗೆ ಮುದ್ದಾದ ಮಗು ಕೂಡ ಇದೆ. ಕೀರ್ತನ ವಿಜಯ್ ಅವರು ಕೂಡ ಕನ್ನಡ ಸಿನಿಮಾ ರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಕಿಚ್ಚ ಸುದೀಪ್ ಅವರ ಜಸ್ಟ್ ಮಾತ್ ಮಾತಲ್ಲಿ ಎನ್ನುವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕೂಡ ಕಾಣಿಸಿಕೊಂಡಿದ್ದರು. ಇದಲ್ಲದೆ ಹಲವಾರು ಸಿನಿಮಾಗಳಲ್ಲಿ ಮತ್ತು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹಾಗೂ ಅನೇಕ ಜಾಹೀರಾತುಗಳಲ್ಲಿ ಕೂಡ ನಟಿಸಿರುವ ಕೀರ್ತನ ವಿಜಯ್ ಅವರು ದುನಿಯಾ ವಿಜಯ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಇವರಿಬ್ಬರ ವಿವಾಹವಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಬಾರಿ ಒಂದಲ್ಲ ಒಂದು ವಿವಾದದ ಮೂಲಕ ಈ ಜೋಡಿ ಸುದ್ದಿಯಾಗುತ್ತಲೇ ಇದೆ. ಅದೇ ರೀತಿಯಾಗಿ ಈಗ ಮತ್ತೊಮ್ಮೆ ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆ ಸುದ್ದಿ ಆಗುತ್ತಿದೆ. ದುನಿಯಾ ವಿಜಯ್ ಅವರು ಕೀರ್ತನ ಅವರಿಗಿಂತ 16ವರ್ಷ ದೊಡ್ಡವರಾಗಿದ್ದಾರೆ ಸದ್ಯಕ್ಕೆ ದುನಿಯಾ ವಿಜಯ್ ಅವರಿಗೆ 48 ವರ್ಷ ವಯಸ್ಸಾಗಿದ್ದು ಕೀರ್ತನ ವಿಜಯ್ ಅವರಿಗೆ ಈಗ 32 ವರ್ಷ ವಯಸ್ಸಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ತಮ್ಮ ಯುವರಾಜ್ ಮದುವೆಯಾಗಿ 3 ವರ್ಷವಾದರೂ ಅಣ್ಣ ವಿನಯ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ವಿನಯ್ ಮಾತು ಕೇಳಿದ್ರೆ

ಬಣ್ಣದ ಲೋಕದಲ್ಲಿ ತಮ್ಮನ್ನು ತಾವು ಸಕ್ರಿಯರನ್ನಾಗಿಸಿಕೊಂಡಿರುವ ವಿನಯ್ ರಾಜ್ ಕುಮಾರ್ ಅವರು ಚಿತ್ರರಂಗದ ಹಿನ್ನೆಲೆ ಇರುವಂತಹ ಕುಟುಂಬದಿಂದ ಬಂದವರು. ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಮೊಮ್ಮಗನಾದ ವಿನಯ್ ರಾಜ್ ಕುಮಾರ್ ಅವರು ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ. ಇವರು ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿ ಬಾಲ ನಟ ಎನಿಸಿಕೊಂಡಿದ್ದಾರೆ ಇವರು ಬಾಲನಟನಾಗಿ ನಟಿಸಿರುವಂತಹ ಸಿನಿಮಾಗಳು ಎಂದರೆ ಒಡಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಈ ರೀತಿಯಾದಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಚಿಕ್ಕವರಿಂದಲು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ವಿನಯ ರಾಜ್ ಕುಮಾರ್ ಅವರು ಹೀರೋ ಆಗಿ ನಟಿಸಿದಂತಹ ಮೊದಲ ಸಿನಿಮಾ ಎಂದರೆ ಸಿದ್ದಾರ್ಥ ಈ ಸಿನಿಮಾದ ಮೂಲಕ ನಟನಾಗಿ ಗುರುತಿಸಿಕೊಂಡಿರು.

ಮೂಲತಃ ಇವರು ಚಿತ್ರರಂಗದ ಕುಟುಂಬದಿಂದ ಬಂದಿದ್ದರಿಂದ ಇವರಿಗೆ ಸಿನಿಮಾಗೆ ಎಂಟ್ರಿ ಕೊಡಲು ಸಾಕಷ್ಟು ಸಮಯ ಏನು ತೆಗೆದುಕೊಳ್ಳಲಿಲ್ಲ. ಡಾಕ್ಟರ್ ರಾಜ್ ಕುಮಾರ್ ಅವರು ಸಾಕಷ್ಟು ಸಿನಿಮಾಗಳನ್ನು ಕನ್ನಡಕ್ಕೆ ನೀಡಿ ಕನ್ನಡಿಗರ ಮನೆ ಮನದಲ್ಲಿ ಇಂದಿಗೂ ಸಹ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ ರಾಜ್ ಕುಮಾರ್ ಅವರ ಮಕ್ಕಳಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರು ಸಾಕಷ್ಟು ಸಿನಿಮಾಗಳನ್ನು ಮಾಡಿ ಹೆಸರನ್ನು ಮಾಡಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಇಬ್ಬರು ಸಹ ಹೆಣ್ಣುಮಕ್ಕಳು ಅವರ ಹಿರಿಯ ಮಗಳು ವೃತ್ತಿಯನ್ನು ಡಾಕ್ಟರ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಂಸಾರವನ್ನು ನಡೆಸುತ್ತಿದ್ದಾರೆ, ಶಿವರಾಜ್ ಕುಮಾರ್ ಅವರ ಎರಡನೇ ಪುತ್ರಿ ಪ್ರೊಡಕ್ಷನ್ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮೆಲ್ಲರನ್ನು ಹಗಲಿದ್ದಾರೆ ಅವರಿಗು ಸಹ ಇಬ್ಬರು ಹೆಣ್ಣು ಮಕ್ಕಳು ಇವರು ಸದ್ಯದಲ್ಲಿ ಓದನ್ನು ಮುಂದುವರಿಸುತ್ತಿದ್ದಾರೆ‌.

ನಂತರ ರಾಘವೇಂದ್ರ ರಾಜ್ ಕುಮಾರ್ ಅವರವರಿಗೆ ಇಬ್ಬರು ಸಹ ಗಂಡು ಮಕ್ಕಳು ಸದ್ಯದಲ್ಲಿ ಇವರೆ ತಮ್ಮ ಕುಟುಂಬದ ಸಿನಿಮಾ ಜರ್ನಿಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ತುಂಬಾ ಜನರು ಹೇಳುತ್ತಿದ್ದಾರೆ ಹೌದು ಅದರಲ್ಲಿಯೂ ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ ತಮ್ಮ ತಾತನ ಹಾಗೂ ತಮ್ಮ ಚಿಕ್ಕಪ್ಪನ ಯಶಸ್ಸಿನ ಪಯಣವನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವಂತಹ ದೊಡ್ಡ ಕನಸನ್ನು ಹೊಂದಿದ್ದಾರೆ ಅದಕ್ಕಾಗಿ ಒಂದಷ್ಟು ಕೆಲವು ಸಿನಿಮಾಗಳಲ್ಲಿ ಇವರು ಬಿಸಿಯಾಗಿದ್ದಾರೆ. ಅವರನ್ನು ನೋಡುತ್ತಿದ್ದರೆ ರಾಜ್ ಕುಮಾರ್ ಅವರನ್ನು ನೋಡಿದ ಹಾಗೆ ಆಗುತ್ತದೆ ಎಂದು ಕೆಲವರು ಹೇಳಿದರೆ, ಪುನೀತ್ ರಾಜ್ಬಕುಮಾರ್ ಅವರ ಸಾಲಿಗೆ ಸೇರುತ್ತಾರೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ಅವರು ತಮ್ಮ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಸಹ ನಿಭಾಯಿಸಿಕೊಂಡು ಹೋಗುತ್ತಿರುವುದು ಅಷ್ಟೇ ಅಲ್ಲದೆ ತಮ್ಮ ಸಿನಿಮಾ ಜರ್ನಿಯನ್ನು ಸಹ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಹೀಗೆಯೇ ಇವರು ನಟಿಸಿರುವಂತಹ ರನ್ ಆಂಟನಿ ಎನ್ನುವಂತಹ ಸಿನಿಮಾವು ಅಷ್ಟೊಂದು ದೊಡ್ಡಮಟ್ಟದ ಹಿಟ್ಟನ್ನು ಕಾಣಲಿಲ್ಲ, ನಂತರದಲ್ಲಿ ಬಂದ ಅನಂತು v/s ನುಸ್ರುತ್ ಈ ಸಿನಿಮಾ ಸ್ವಲ್ಪಮಟ್ಟಿಗೆ ಚರ್ಚೆಗೆ ಒಳಗಾಗಿ ಸೊಲ್ಪ ಮಟ್ಟದ ಯಶಸ್ಸನ್ನು ಕಂಡಿತ್ತು. ಇದೀಗ ಸದ್ಯದಲ್ಲೇ ಮೂಡಿಬರುತ್ತಿರುವ ಅಂತಹ ಸಿನಿಮಾ ಎಂದರೆ ಗ್ರಾಮಾಯಣ ಈ ಒಂದು ಸಿನಿಮಾ ಸಾಕಷ್ಟು ರೀತಿಯಾದಂತಹ ನಿರೀಕ್ಷೆಯನ್ನು ಜನರಲ್ಲಿ ಹುಟ್ಟುಹಾಕಿದೆ ಈ ಒಂದು ಸಿನಿಮಾದ ಬಗ್ಗೆ ಜನರು ಸಾಕಷ್ಟು ರೀತಿಯಾದಂತಹ ಒಂದು ಉತ್ಸಾಹವನ್ನು ಹುಟ್ಟಿಸಿಕೊಂಡಿದ್ದು ಈ ಒಂದು ಸಿನಿಮಾ ತುಂಬಾ ಉತ್ತಮವಾಗಿ ಮೂಡಿಬರಲಿದೆ ಎಂದು ಟೀಸರ್ ನೋಡಿ ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ಇವರ ಸಿನಿಮಾ ಅದೊಂದ್ ಇತ್ತು ಕಾಲ ಹಾಗೆ ಪೆಪ್ ಎನ್ನುವಂತಹ ಸಿನಿಮಾವು ಸಹ ವಿನಯ್ ರಾಜ್ ಕುಮಾರ್ ಅವರ ನಟನೆಯಲ್ಲಿ ಮೂಡಿಬರುತ್ತಿದೆ. ಒಂದು ಸಿನಿಮಾಗಳ ಬಗ್ಗೆ ವಿನಯ್ ರಾಜ್ ಕುಮಾರ್ ಅವರು ಸಾಕಷ್ಟು ರೀತಿಯಾದಂತಹ ಹೆಸರು ಮಾಡಲಿದ್ದಾರೆ ಎನ್ನುವಂತಹ ಮಾತುಕತೆ ನಡೆಯುತ್ತಿದೆ. ಇದಿಷ್ಟು ವಿನಯ ರಾಜ್ ಕುಮಾರ್ ಅವರ ಸಿನಿಮಾ ಜರ್ನಿ, ಆದರೆ ಇವರ ವೈಯಕ್ತಿಕ ಜೀವನವನ್ನು ನೋಡುವುದಾದರೆ ವಿನಯ ರಾಜ್ಬಕುಮಾರ್ ಅವರು ರಾಘವೇಂದ್ರ ರಾಜಕುಮಾರ್ ಅವರ ಹಿರಿಯ ಮಗ ಆಗಿದ್ದರೂ ಸಹ ಇನ್ನೂ ಮದುವೆಯಾಗಿಲ್ಲ ಎನ್ನುವಂತಹ ಕೆಲವೊಂದು ಮಾತುಗಳು ಕೇಳಿಬರುತ್ತಿವೆ.

ವಿನಯ್ ರಾಜ್ ಕುಮಾರ್ ಅವರ ತಮ್ಮ ಯುವರಾಜ್ ಕುಮಾರ್ ಅವರು ಮದುವೆಯಾಗಿದ್ದು ಇನ್ನು ಸಹ ವಿನಯ್ ರಾಜ್ ಕುಮಾರ್ ಅವರು ಮದುವೆಯಾಗಿಲ್ಲ ಎನ್ನುವಂತಹ ಕೆಲವೊಂದಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿನಯ್ ರಾಜ್ ಕುಮಾರ್ ಅವರಿಗೆ ಈಗ 32 ವರ್ಷ ತಮ್ಮ ಯುವ ರಾಜ್ ಕುಮಾರ್ ಅವರಿಗೆ 25 ವರ್ಷ ಆದರೂ ಬೇಗನೇ ಮದುವೆಯಾಗಿದ್ದಾರೆ. ವಿನಯ್ ರಾಜ್ ಕುಮಾರ್ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವಂತಹ ಕೆಲವೊಂದು ಮಾಹಿತಿ ಸಹ ನಮಗೆ ಕೇಳಿಬಂದಿತು, ಆದರೆ ವಿನಯಕುಮಾರ್ ಅವರು ಹೇಳಿಕೊಂಡಿದ್ದಾರೆ ನನಗೆ ಈಗ ಸಿನಿಮಾಗಳಲ್ಲಿ ಗುರುತಿಸಿಕೊಂಡು ನಾನು ಒಂದಷ್ಟು ಹೆಸರನ್ನು ಮಾಡಬೇಕು ಎನ್ನುವಂತಹ ಕನಸು ಹೊಂದಿದ್ದೇನೆ ಹಾಗೆಯೇ ನನ್ನ ಕುಟುಂಬದ ಕೆಲವೊಂದಷ್ಟು ಜವಾಬ್ದಾರಿಗಳು ನನ್ನ ಮೇಲೆ ಇರುವುದರಿಂದ ಸದ್ಯದಲ್ಲಿ ಮದುವೆಯಾಗುವ ಯೋಚನೆಯನ್ನು ಮುಂದೂಡಿದ್ದೇನೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮುಖಾಂತರ ತಿಳಿಸಿ.

ಊಟ ಇಲ್ಲದೆ ಬೇಕಾದ್ರು ಬದುಕುತ್ತಿನಿ ಸೆ-ಕ್ಸ್ ಇಲ್ಲದೆ ಬದುಕಲು ಸಧ್ಯಾವಿಲ್ಲ ಎಂಬ ಶಾ-ಕಿಂಗ್ ಹೇಳಿಕೆ ಕೊಟ್ಟ ಸಮಂತಾ

ನಟಿ ಸಮಂತ ರುತು ಪ್ರಭು ಅವರು ಸದ್ಯಕ್ಕೆ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲೂ ಕೂಡ ನಟಿಸುತ್ತಾ ಬಹಳ ಬಿಝಿ ಆಗಿರುವ ನಟಿ. ನಟಿ ಸಮಂತ ಋತು ಪ್ರಭು ಅವರು ಮೂಲತಃ ತಮಿಳುನಾಡಿನವರು. ತಮಿಳುನಾಡಿನಲ್ಲಿಯೇ ಬೆಳೆದರೂ ಸಹಾ ಇವರು ತಮಿಳು ತೆಲುಗು ಹಾಗೂ ಮಲಯಾಳಂ ಭಾಷೆಗಳು ಹಾಗೂ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡಿದ್ದರು. 1987 ರಲ್ಲಿ ಜನಿಸಿರುವ ಈ ನಟಿಯ ವಯಸ್ಸು ಈಗ 35 ವರ್ಷಗಳಾಗಿದ್ದರೂ ಸಹ 20ರ ಆಸುಪಾಸು ಯುವತಿಯಂತೆ ಕಾಣುವ ಈಕೆ ಸಹಜ ಸುಂದರಿ ಎಂದರೆ ತಪ್ಪೇನಿಲ್ಲ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಮೇಕಪ್ ಇಲ್ಲದೆಯೂ ಸಹ ಬಹಳ ಸುಂದರವಾಗಿ ಕಾಣಿಸಿಕೊಳ್ಳುವ ಸಮಂತಾ ಋತು ಪ್ರಭು ಅವರು ಕೆಲವು ವರ್ಷಗಳ ಹಿಂದೆ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಕಾರಣಕ್ಕಾಗಿ ಒಮ್ಮೆ ಸರ್ಜರಿ ಕೂಡ ಮಾಡಿಸಿಕೊಂಡಿದ್ದರು ಎನ್ನುವ ಮಾತುಗಳು ಕೂಡ ಇವೆ. ಏ ಮಾಯ ಚೇಸಾವೆ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಇವರು ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದು ಅಕ್ಕಿನೇನಿ ನಾಗ ಚೈತನ್ಯ ಅವರ ಜೊತೆಯಲ್ಲಿ ಆನಂತರ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದರು.

ಕನ್ನಡದ ಸುದೀಪ್ ಅವರು ತೆಲುಗಿನಲ್ಲಿ ನೆಗಟಿವ್ ನಲ್ಲಿ ಕಾಣಿಸಿಕೊಂಡಿದ್ದ ಈಗ ಎನ್ನುವ ಸಿನಿಮಾದಲ್ಲಿ ನಾಣಿ ಅವರು ನಾಯಕನಾಗಿದ್ದರು. ಈ ಸಿನಿಮಾದಲ್ಲಿ ಸಮಂತ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು ಇವರು ನಿರ್ವಹಿಸಿದ ಪಾತ್ರ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಸಿನಿಮಾದಲ್ಲಿನ ಬಿಂದು ಪಾತ್ರ ಅವರನ್ನು ಮತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋಯಿತು ಎಂದೇ ಹೇಳಬಹುದು. ತದನಂತರ ಒಂದರ ಹಿಂದೆ ಒಂದರಂತೆ ಹಲವು ಸಿನಿಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ನಟಿ ಸಮಂತಾ ಋತು ಪ್ರಭು ಅವರು ಹಿಂತಿರುಗಿ ನೋಡಲೇ ಇಲ್ಲ. ಚಿತ್ರರಂಗದಲ್ಲಿ ಸ್ವಲ್ಪಸ್ವಲ್ಪವಾಗಿ ಬೆಳೆಯುತ್ತಾ ಬಂದರು.

ದೂಕುಡು ಮನಂ ಅತ್ತಾರಿಂಟಿಕಿ ದಾರೇದಿ ಬೃಂದಾವನಂ ಮಜಿಲಿ ರಂಗಸ್ಥಳ ಇನ್ನು ಮುಂತಾದ ಅನೇಕ ಸುಪರ್ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತಿ ಸಮಂತ ಅವರದ್ದು. ಸಮಂತ ಅವರಿಗೆ ಅವರ ಪ್ರತಿಭೆ ಜೊತೆಯಲ್ಲಿ ಗ್ಲಾಮರಸ್ ಲುಕ್ ಇಂದಲೇ ಹೆಚ್ಚಾಗಿ ಅವಕಾಶಗಳು ಸಿಗುತ್ತಿದೆ ಎಂದರೆ ಸುಳ್ಳಾಗುವುದಿಲ್ಲ.

ಏಕೆಂದರೆ ಈಗಿನ ಕಾಲದ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಲು ಇಚ್ಚಿಸುವವರು ಈ ರೀತಿ ಸ್ವಲ್ಪ ಬೋಲ್ಡ್ ಆಗಿ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲೇಬೇಕು. ಈಗ ಈ ರೀತಿ ನಾಯಕಿಯರನ್ನು ಸಿನಿಮಾಗಳಲ್ಲಿ ತೋರಿಸುವುದು ಅನಿವಾರ್ಯ ಎನ್ನುವ ಮನಸ್ಥಿತಿಯಲ್ಲಿ ನಿರ್ದೇಶಕರುಗಳು ಇದ್ದಾರೆ. ಮೊದಮೊದಲು ಸಮಂತ ಋತು ಪ್ರಭು ಅವರು ಕೆಲವೊಂದಿಷ್ಟು ಸಿನಿಮಾಗಳಲ್ಲಿ ತುಂಬಾ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುತ್ತಿದ್ದರು.

ಹೆಚ್ಚಾಗಿ ಎಲ್ಲೂ ಎಕ್ಸ್ಪೋಸ್ ಇಲ್ಲದ ರೀತಿ ಪಾತ್ರಗಳನ್ನು ಒಪ್ಪಿಕೊಂಡು ನಿರ್ವಹಿಸುತ್ತಿದ್ದರು. ಆದರೆ ಬೆಳೆಯುತ್ತಾ ಹೋದಂತೆ ಈಗ ಕೆಲವು ವರ್ಷಗಳಿಂದ ಸಮಂತ ತಮ್ಮ ಸಿನಿಮಾಗಳ ಆಯ್ಕೆಯಲ್ಲಿ ಹಾಗೂ ಪಾತ್ರಗಳಲ್ಲಿ ತುಂಬಾ ಬದಲಾಗಿ ಹೋಗಿದ್ದಾರೆ. ಇತ್ತೀಚೆಗೆ ಸಮಂತ ಅವರು ಒಪ್ಪಿಕೊಳ್ಳುತ್ತಿರುವ ಎಲ್ಲಾ ಪಾತ್ರಗಳಲ್ಲಿ ಕೂಡ ತುಂಬಾ ಬೋಲ್ಡ್ ಆಗಿ ಹಾಗೂ ಎಕ್ಸ್ಪೋಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ಕಾರ್ಯಕ್ರಮಗಳು ಅವಾರ್ಡ್ ಫಂಕ್ಷನ್ ಗಳು ಹೀಗೆ ಎಲ್ಲಾ ಕಡೆಗೂ ಕೂಡ ತುಂಡು ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮದುವೆಗೆ ಮುಂಚೆ ಈ ರೀತಿ ಇದ್ದ ಸಮಂತ ಅವರು ನಾಗಚೈತನ್ಯ ಅವರನ್ನು ವಿವಾಹವಾದ ಬಳಿಕ ಕೂಡ ಇದನ್ನೇ ಮುಂದುವರಿಸಿದ್ದಾರೆ. ನಾಗಚೈತನ್ಯ ಹಾಗೂ ಸಮಂತ ಅವರು ಪ್ರೀತಿಸಿ ವಿವಾಹವಾಗಿದ್ದರು. ಮೊದಮೊದಲು ಅಕ್ಕಿನೇನಿ ಕುಟುಂಬದಲ್ಲಿ ಈ ಸಂಬಂಧದ ಬಗ್ಗೆ ಸ್ವಲ್ಪ ಅಸಮಾಧಾನ ಇದ್ದರೂ ಕೂಡ ನಂತರ ನಾಗಚೈತನ್ಯ ಸಂತೋಷಕ್ಕಾಗಿ ಅವರಿಬ್ಬರ ಮದುವೆಯನ್ನು ಅದ್ದೂರಿಯಾಗಿ ನಡೆಸಿಕೊಟ್ಟಿದ್ದರು. 2017ರಲ್ಲಿ ಮದುವೆಯಾಗಿದ್ದ ಈ ಜೋಡಿಯು ಹಲವು ವರ್ಷಗಳವರೆಗೆ ತುಂಬಾ ಚೆನ್ನಾಗಿ ಇದ್ದರು.

ಎಲ್ಲೇ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಾಗ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಇವರು ಪೋಸ್ಟ್ ಮಾಡುತ್ತಿದ್ದ ಫೋಟೋಗಳನ್ನು ಕಂಡಾಗ ಎಲ್ಲರೂ ಕೂಡ ಜೋಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇಬ್ಬರ ನಡುವೆ ಎಲ್ಲವೂ ಚೆನ್ನಾಗಿಯೇ ಇತ್ತು ಆದರೆ ಯಾವಾಗ ಮದುವೆಯ ನಂತರವೂ ಸಮಂತ ಅವರು ತುಂಬಾ ಬೋಲ್ಡ್ ಪಾತ್ರಗಳನ್ನು ಒಪ್ಪಿಕೊಳ್ಳಲು ಶುರುಮಾಡಿದರು ಆಗ ಅಕ್ಕಿನೇನಿ ಕುಟುಂಬದಿಂದ ಸ್ವಲ್ಪ ವಿರೋಧ ವ್ಯಕ್ತವಾಗಿತ್ತು. ನಾಗಾರ್ಜುನ ಹಾಗೂ ನಾಗಚೈತನ್ಯ ಅವರು ಕೂಡ ಸಿನಿಮಾರಂಗದಲ್ಲಿ ಇದ್ದರೂ ಕುಟುಂಬದ ವಿಚಾರದಲ್ಲಿ ಸ್ವಲ್ಪ ಸಂಪ್ರದಾಯ ಪಾಲನೆಯ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.

ಆದರೆ ಸಮಂತ ಅವರಿಗೆ ಅವರ ಕೆರಿಯರ್ ಅನ್ನು ಹಾಳು ಮಾಡಿಕೊಳ್ಳಲು ಇಷ್ಟವಿರಲಿಲ್ಲ ಹೀಗಾಗಿ ಅವರು ಕುಟುಂಬದ ವಿರೋಧದ ನಡುವೆಯೂ ಈ ರೀತಿ ಪಾತ್ರಗಳಲ್ಲಿ ಅಭಿನಯಿಸಲು ಶುರುಮಾಡಿದರು. ಅದರಲ್ಲೊಂದು ಫ್ಯಾಮಿಲಿ ಮ್ಯಾನ್ ಸೀಕ್ವೆನ್ಸ್ ಟು ಎನ್ನುವ ವೆಬ್ ಸೀರಿಸ್ ನಲ್ಲಿ ಸಮಂತಾ ಅವರು ಅಭಿನಯ ಮಾಡುವುದು ಅವರ ಕುಟುಂಬಸ್ಥರಲ್ಲಿ ಯಾರಿಗೂ ಇಷ್ಟವೇ ಇರಲಿಲ್ಲ. ಈ ಒಂದು ಕಾರಣವೇ ಇವರಿಬ್ಬರ ನಡುವಿನ ವಿ-ಚ್ಛೇ-ದ-ನಕ್ಕೆ ನೆಪವಾಗಿ ಇಬ್ಬರೂ ಕೂಡ ಈಗ ದೂರವಾಗಿದ್ದಾರೆ. ವಿ-ಚ್ಛೇ-ದ-ನ ಪಡೆದ ಬಳಿಕವೂ ಕೂಡ ನಟಿ ಸಮಂತಾ ಋತು ಪ್ರಭು ಅವರು ತುಂಬ ಬೋಲ್ಡ್ ಆಗಿ ಇರುವ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಪುಷ್ಪ ಸಿನಿಮಾದಲ್ಲಿ ಹುಂ ಅಂಟಾವಾ ಎನ್ನುವ ಐಟಂ ಹಾಡಿನಲ್ಲಿ ಕೂಡ ಈ ರೀತಿಯಾಗಿ ಕಾಣಿಸಿಕೊಂಡಿದ್ದರು. ಸಮಂತ ಅವರು ಈಗ ಸ್ವತಂತ್ರ ಹಕ್ಕಿಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಇವರ ಈ ನಡುವಳಿಕೆಯ ಕಾರಣದಿಂದ ಆಗಾಗ ತೀವ್ರವಾಗಿ ಟ್ರೋಲ್ ಗೂ ಕೂಡ ಒಳಗಾಗುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಕಾಮೆಂಟ್ ಮುಖಾಂತರ ತಿಳಿಸಿ

ಇದ್ದಕ್ಕಿದ್ದ ಹಾಗೇ ಅಪ್ಪು ಅವರ ಮನೆ ತೊರೆದ ಗನ್ ಮ್ಯಾನ್ ಚಲಪತಿ ಕಾರಣವೇನು ಗೊತ್ತಾ.?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಡೀ ಕರ್ನಾಟಕಕ್ಕೆ ಹೆಮ್ಮೆಯ ಪುತ್ರ ಅಪ್ಪು ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ವಿಪರೀತ ಪ್ರೀತಿ ಹಾಗೂ ಅಭಿಮಾನ ಅಪ್ಪು ಅವರು ಒಂದು ಆದರ್ಶ ವ್ಯಕ್ತಿಯಂತೆ ಬದುಕಿ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಜವಾದ ಶ್ರೀಮಂತ ಎಂದೇ ಹೇಳಬಹುದು. ಅಪ್ಪು ಅವರು ತುಂಬಾ ಶಿಸ್ತುಬದ್ಧ ಜೀವನ ನಡೆಸುತ್ತಿದ್ದರು ಅವರ ಊಟ ತಿಂಡಿ ಡಯಟ್ ನಿದ್ದೆ ಎಲ್ಲವೂ ಕೂಡ ಸಮಯಕ್ಕೆ ಸರಿಯಾಗಿ ಪಾಲಿಸುತ್ತಿದ್ದರು. ಆದರೂ ಕೂಡ ಇಂತಹ ಗಟ್ಟಿಮುಟ್ಟಾಗಿದ್ದ ವ್ಯಕ್ತಿ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಷ್ಟೋ ಜನರು ಮೊದಲಿಗೆ ಒಂದೆರಡು ಕ್ಷಣ ಖಂಡಿತವಾಗಿಯೂ ಅಪ್ಪು ಅವರಿಗೆ ನಿಜವಾಗಲೂ ಹೃ’ದ’ಯಾ’ಘಾ’ತವಾಗಿದೆಯೇ ಎಂದು ಅನುಮಾನ ಪಟ್ಟರು. ಇಡೀ ಸಮಾಜಕ್ಕೆ ಮಾದರಿಯಾಗಿದ್ದ ಹಾಗೂ ಕರ್ನಾಟಕದ ಜನತೆಯ ಸೇವೆಯನ್ನು ಯಾರಿಗೂ ತಿಳಿಯದಂತೆ ಮಾಡುತ್ತಿದ್ದರು ಪುನೀತ್ ರಾಜಕುಮಾರ್ ಅವರು.

ಈಗ ಅಪ್ಪು ಅವರನ್ನು ಕಳೆದುಕೊಂಡು ಅಪ್ಪು ಅವರ ಕುಟುಂಬ ಸಿನಿಮಾರಂಗ ಮಾತ್ರವಲ್ಲದೆ ಇಡೀ ಕರುನಾಡು ನೋ’ವಿನಲ್ಲಿದೆ. ಅಪ್ಪು ಮೇಲೆ ಕನ್ನಡದ ಜನತೆ ಅಷ್ಟೊಂದು ಪ್ರೀತಿ ಇಟ್ಟಿದ್ದರು ಈ ಪ್ರೀತಿಗೆ ಸಾಕ್ಷಿ ಅಪ್ಪು ಅವರು ಅಗಲಿದ ದಿನ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಅಭಿಮಾನಿಗಳ ಜನಸಂಖ್ಯೆ ಎಂದೇ ಹೇಳಬಹುದು. ಅಪ್ಪು ಎನ್ನುವ ಒಬ್ಬ ಕಲಾವಿದನ ಸಾವು ಸಾಮಾನ್ಯ ಸಾವಾಗಿರದೆ ಇಡೀ ಕರ್ನಾಟಕಕ್ಕೆ ಸೂತಕದ ಛಾಯೆ ನಿರ್ಮಿಸಿತ್ತು. ಯಾಕೆಂದರೆ ಕರುನಾಡಿನ ಮನೆ ಮನೆಗಳಲ್ಲೂ ಸಹ ಜನ ತಮ್ಮ ಕುಟುಂಬದ ಒಬ್ಬ ವ್ಯಕ್ತಿಯನ್ನೇ ಕಳೆದುಕೊಂಡ ರೀತಿ ಭಾವದಲ್ಲಿದ್ದರು. ಅಪ್ಪು ಅವರು ಬಾಲ್ಯದಿಂದಲೇ ಸಿನಿಮಾಗಳಲ್ಲಿ ನಟಿಸಿದ್ದರು. ನಮ್ಮ ತಂದೆಯ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿಯೇ ಬೆಟ್ಟದ ಹೂವು ಎನ್ನುವ ಸಿನಿಮಾದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದರು. ಬಾಲ್ಯದಿಂದ ತುಂಬಾ ಚುರುಕಾಗಿದ್ದ ಈ ಕಲಾವಿದನ ಅಭಿನಯಕ್ಕೆ ಮನಸೋಲದವರೇ ಇಲ್ಲ. ಜೊತೆಗೆ ಅಪ್ಪು ಅವರು ಹಾಡುಗಳನ್ನು ಸಹ ಹಾಡುತ್ತಿದ್ದರು.

ಜೊತೆಗೆ ಹಿರಣ್ಯಕಶ್ಯಪುವಿನ ಅಂತಹ ಪಾತ್ರಗಳ ಎದುರಿಗೆ ನಿಂತು ಭಕ್ತ ಪ್ರಹ್ಲಾದನ ಡೈಲಾಗ್ ಗಳನ್ನು ಸರಾಗವಾಗಿ ಹೇಳುತ್ತಿದ್ದ ಚತುರತೆಯನ್ನು ನೋಡಿದ ಯಾರಿಗೆ ಆದರೂ ಖಂಡಿತ ಅಪ್ಪು ಇಷ್ಟವಾಗಿ ಹೋಗುತ್ತಿದ್ದರು. ಬೆಳೆಯುತ್ತಿದ್ದಂತೆ ಪುನೀತ್ ರಾಜಕುಮಾರ್ ಅವರು ಅಭಿನಯದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಬಿಸಿನೆಸ್ ಕಡೆ ತಮ್ಮ ಆಸಕ್ತಿಯನ್ನು ಮುಂದುವರಿಸಿದ್ದರು. ಆದರೆ ಪುನೀತ್ ರಾಜಕುಮಾರ್ ಅವರ ಮೇಲೆ ಹಲವಾರು ಅಪವಾದಗಳು ಕೇಳುತ್ತ ಬರುತ್ತಿದ್ದವು ಆದರೆ ಅದು ಯಾವುದು ನಿಜ ಸುದ್ದಿ ಆಗಿರಲಿಲ್ಲ. ಇದೆಲ್ಲಾ ಅಣ್ಣಾವ್ರ ಕಿವಿಗೆ ಬರುತ್ತಿದ್ದಂತೆ ಮಗನಿಗೆ ಬಿಸಿನೆಸ್ ನಿಲ್ಲಿಸುವ ಬಗ್ಗೆ ರಾಜಕುಮಾರ್ ಅವರು ಹೇಳಿದರು. ನಂತರ ತಮ್ಮ ಕುಟುಂಬದ ಪ್ರೊಡಕ್ಷನ್ ಕೆಲಸಗಳನ್ನು ನೋಡಿಕೊಳ್ಳುವುದರಲ್ಲಿ ತಾಯಿಗೆ ಸಹಾಯ ಮಾಡಲು ನಿಂತ ಪುನೀತ್ ರಾಜಕುಮಾರ್ ಅವರು ಹಲವು ವರ್ಷಗಳವರೆಗೆ ವಜ್ರೇಶ್ವರಿ ಕಂಬೈನ್ಸ್ ಪ್ರೊಡಕ್ಷನ್ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದನು. ಮತ್ತೊಮ್ಮೆ ಒಂದು ಒಳ್ಳೆಯ ಕಥೆಯ ಜೊತೆಗೆ ಜೊತೆಗೆ ಸಿನಿಮಾರಂಗಕ್ಕೆ ಮರು ಎಂಟ್ರಿ ಕೊಡಲು ಕಾಯುತ್ತಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ 2000ನೇ ಇಸವಿಯಲ್ಲಿ ಅಪ್ಪು ಎನ್ನುವ ಸಿನಿಮಾದ ಕಥೆ ಇಷ್ಟವಾಗಿತ್ತು.

ಅಪ್ಪು ಎನ್ನುವ ಅದ್ಭುತ ಪ್ರೇಮಕಥೆಯ ಜೊತೆಗೆ ಸಿನಿಮಾ ಲೋಕಕ್ಕೆ ಮತ್ತೊಮ್ಮೆ ಕಂಬ್ಯಾಕ್ ಮಾಡಿದ ಪುನೀತ್ ರಾಜಕುಮಾರ್ ಅವರು ನಂತರದ ದಿನಗಳಲ್ಲಿ ಒಂದೊಂದಾಗಿ ವಿಭಿನ್ನ ರೀತಿಯ ಕಥೆಗಳನ್ನು ಇಟ್ಟುಕೊಂಡು ಸಿನಿಮಾಗಳನ್ನು ಮಾಡುತ್ತಾ ಮತ್ತೊಮ್ಮೆ ಕನ್ನಡಿಗರ ಮನಗೆದ್ದರು. ಬೆಳೆಯುತ್ತಿದ್ದಂತೆ ತುಂಬಾ ಪ್ರಬುದ್ಧತೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ ಅಪ್ಪು ಅವರು ತಮ್ಮ ಸಿನಿಮಾಗಳ ಕಥೆಗಳ ಆಯ್ಕೆಯ ವಿಚಾರದಲ್ಲಿ ಕೂಡ ತುಂಬ ಯೋಚನೆಮಾಡಿ ನಿರ್ಧಾರ ತೆಗೆದು ಕೊಳ್ಳುತ್ತಿದ್ದರು. ಇವರು ಮಾಡುತ್ತಿದ್ದ ಸಿನಿಮಾದ ಕಥೆಗಳು ಎಂಟರ್ಟೈನ್ಮೆಂಟ್ ಜೊತೆಗೆ ಜನರಿಗೆ ಒಂದು ಒಳ್ಳೆಯ ಸಂದೇಶವನ್ನು ಕೂಡ ನೀಡುತ್ತಿತ್ತು. ಹಾಗಾಗಿ ಪುನೀತ್ ರಾಜಕುಮಾರ್ ಅವರ ಸಿನಿಮಾಗಳನ್ನು ಕಂಡರೆ ಅಭಿಮಾನಿಗಳು ಬಹಳ ಇಷ್ಟಪಟ್ಟು ನೋಡುತ್ತಿದ್ದರು. ಅಪ್ಪು ಅವರನ್ನು ಜನ ಸಿನಿಮಾಗಳಲ್ಲಿ ಮಾತ್ರವಲ್ಲದೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕೂಡ ನೋಡಿ ಮೆಚ್ಚಿಕೊಂಡಿದ್ದರು. ಕನ್ನಡದ ಕೋಟ್ಯಾಧಿಪತಿ ಎನ್ನುವ ಕಾರ್ಯಕ್ರಮ ಹಾಗೂ ಫ್ಯಾಮಿಲಿ ಪವರ್ ಎನ್ನುವ ಎರಡು ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿದ್ದರು. ಇಡೀ ಕುಟುಂಬವೇ ಒಟ್ಟಿಗೆ ಕೂತು ನೋಡಲು ಇಷ್ಟಪಡುತ್ತಿದ್ದ ಎರಡು ಕಾರ್ಯಕ್ರಮಗಳಲ್ಲೂ ಕೂಡ ಅದ್ಭುತವಾಗಿ ನಿರೂಪಣೆ ಮಾಡುತ್ತಿದ್ದ ಪುನೀತ್ ರಾಜಕುಮಾರ್ ಅವರು ಈ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು ಹಾಗೂ ಅವರು ಯಾವಾಗಲೂ ಜನರ ಒಳಿತಿನ ಬಗ್ಗೆ ಯೋಚಿಸುತ್ತಿದ್ದರು.

ಉಳಿದ ಎಲ್ಲಾ ಸೆಲೆಬ್ರಿಟಿಗಳಿಗೆ ಎಂತಲೂ ಹೆಚ್ಚಾಗಿ ಪುನೀತ್ ರಾಜಕುಮಾರ್ ಅವರೇ ಸಮಾಜ ಸೇವೆಗೆ ಹೆಚ್ಚಿನ ಸಮಯ ಹಾಗೂ ಹಣವನ್ನು ಮುಡಿಪಾಗಿಟ್ಟಿದ್ದರು. ಆದರೆ ಈ ವಿಚಾರಗಳು ಹೆಚ್ಚಾಗಿ ಬೆಳಕಿಗೆ ಬಂದಿದ್ದು ಅವರು ನಮ್ಮನ್ನೆಲ್ಲಾ ಅಗಲಿ ಹೋದಮೇಲೆಯೇ ಎನ್ನುವುದೇ ಬೇಸರದ ವಿಷಯ. ಅವರ ಅಗಲಿಕೆಯ ನೋವಿನ ದುಃಖವನ್ನು ಅಪ್ಪು ಅವರ ಕುಟುಂಬಸ್ಥರು ಅರಗಿಸಿಕೊಂಡು ಜೊತೆಗೆ ವಾಸ್ತವವನ್ನು ಒಪ್ಪಿಕೊಂಡು ಸಹಜ ಬದುಕಿನತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ ಅಪ್ಪು ಅವರ ಗನ್ ಮ್ಯಾನ್ ಆಗಿದ್ದ ಚಲಪತಿ ಅವರು ಕೂಡ ಅಪ್ಪು ಮನೆ ತೊರೆದು ಸ್ವಂತ ಊರಿನ ಕಡೆ ಹೊರಟಿದ್ದಾರೆ. ಈ ಬಗ್ಗೆ ಮಾಧ್ಯಮದ ಜೊತೆ ಮಾಹಿತಿ ಹಂಚಿಕೊಂಡಿರುವ ಚಲಪತಿ ಅವರು ಅಪ್ಪು ಅವರು ಇಲ್ಲದೆ ಇದ್ದಾಗಲೂ ಅಶ್ವಿನಿ ಅವರಿಗೆ ಬಾಡಿ ಗಾರ್ಡ್ ಆಗಿ ಕೆಲಸ ಮಾಡಿದ್ದೆ. ಆದರೆ ಈಗ ಇಲ್ಲಿ ಹೆಚ್ಚಿನ ಕೆಲಸವಿಲ್ಲ ಪ್ರತಿದಿನ ಬಂದು ಸುಮ್ಮನೆ ಕುಳಿತು ಹೋಗಲು ತುಂಬಾ ಬೇಸರವಾಗುತ್ತಿದೆ ಹಾಗಾಗಿ ನಾನು ಬೇರೆ ಯಾವ ನಟನಿಗೂ ಮತ್ತೆ ಬಾಡಿಗಾರ್ಡ್ ಆಗಲು ಇಷ್ಟಪಡುವುದಿಲ್ಲ. ಅಪ್ಪು ಸರ್ ನನ್ನನ್ನು ಕುಟುಂಬದ ಸದಸ್ಯರ ರೀತಿ ನೋಡಿಕೊಂಡಿದ್ದರು ಇಲ್ಲಿ ಇದ್ದಷ್ಟು ನನಗೆ ಅವರ ನೆನಪು ಹೆಚ್ಚಾಗಿ ಕಾಡುತ್ತಿದೆ ಹಾಗಾಗಿ ನಾನು ಸ್ವಂತ ಊರಿನ ಕಡೆ ಹೊರಡುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಚಲಪತಿ ಅವರ ಈ ನಿರ್ಧಾರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ.

ಲಕ್ಷ್ಮಿ ಮಗಳು ಬೀದಿ ಬದಿಯಲ್ಲಿ ಸೋಪ್ ಮಾರುತ್ತಿದ್ದಾರೆ, ಅವಕಾಶವಿಲ್ಲದೆ ಬೀದಿಗೆ ಬಿದ್ದ ಐಶ್ವರ್ಯ ಭಾಸ್ಕರನ್

ಖ್ಯಾತ ನಟಿ ಲಕ್ಷ್ಮೀ ಅವರು ಯಾರಿಗೆ ಗೊತ್ತಿಲ್ಲ ತಾನೇ ಹೇಳಿ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲೆಯಾಳಂ ಹೀಗೆ ದಕ್ಷಿಣ ಭಾರತದ ಸಾಕಷ್ಟು ನಾಯಕನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಇಲ್ಲಿಯವರೆಗೂ ಕೂಡ ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಒಂದು ಕಾಲದಲ್ಲಿ ನಾಯಕ ನಟಿಯಾಗಿ ಮತ್ತೊಂದು ಕಾಲದಲ್ಲಿ ಪೋಷಕ ನಟಿಯಾಗಿ ಈಗ ಹಲವಾರು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಸೇವೆ ಸಲ್ಲಿಸುತ್ತಿದ್ದರು ಇಷ್ಟು ದೊಡ್ಡ ತಾರಾಬಳಗವನ್ನು ಹೊಂದಿದಂತಹ ಲಕ್ಷ್ಮಿ ಅವರ ಮಗಳು ಈಗ ಬೀದಿಗೆ ಬಿದ್ದಿರುವಂತಹ ಘಟನೆಯನ್ನು ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತದೆ. ಅಷ್ಟಕ್ಕೂ ಲಕ್ಷ್ಮಿ ಅವರ ಮಗಳ ಬದುಕಲ್ಲಿ ಏನಾಗಿತ್ತು ಈ ರೀತಿ ಇವರು ಬೀದಿಬದಿಯಲ್ಲಿ ಕುಳಿತುಕೊಂಡು ಸೋಪ್ ಅನ್ನು ಮಾರುವಂತಹ ಕೆಲಸಕ್ಕೆ ಯಾಕೆ ಇಳಿದರು ಎಂಬುದನ್ನು ನೋಡಿದರೆ ಎಂತವರಾದರೂ ಕೂಡ ಕಣ್ಣೀರು ಹಾಕುತ್ತಾರೆ. ಇನ್ನು ಲಕ್ಷ್ಮಿ ಅವರ ವೈಯಕ್ತಿಕ ಜೀವನವನ್ನು ನೋಡುವುದಾದರೆ ಇವರು ಮೂರು ಮದುವೆಯನ್ನು ಆಗುತ್ತಾರೆ ಇವರ ಮೂರು ಜನ ಪತಿಯಂದರಲ್ಲಿ ಮೊದಲನೇ ಪತಿಯ ಮಗಳು ಐಶ್ವರ್ಯ ಭಾಸ್ಕರನ್

ಇವರು ಕೂಡ ತಾಯಿಯ ಮಾದರಿಯಲ್ಲೇ ಒಂದು ಕಾಲದಲ್ಲಿ ಫೇಮಸ್ ನಟಿ ತೆಲುಗು ಮತ್ತು ತಮಿಳು ಹಾಗೂ ಮಲೆಯಾಳಂ ಹಾಗೂ ಕನ್ನಡದಲ್ಲಿ ಹಲವಾರು ನಾಯಕನಟರ ಜೊತೆ ನಟಿಯಾಗಿ ನಟಿಸಿದ್ದಾರೆ. ಇಲ್ಲಿಯವರೆಗೂ ಕೂಡ ಸುಮಾರು ನೂರಕ್ಕೂ ಅಧಿಕ ಚಲನಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದ ನಂತರ ಪೋಷಕ ನಟಿಯಾಗಿ ಕೂಡ ನಟಿಸಿದರು. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಇವರು ತಮ್ಮ ಕೈಯಾರೆ ತಮ್ಮ ಜೀವನವನ್ನು ಹಾಳು ಮಾಡಿಕೊಂಡರು. ಐಶ್ವರ್ಯ ಭಾಸ್ಕರನ್ ಅವರು ತನ್ವೀರ್ ಮಹಮ್ಮದ್ ಎಂಬ ಮುಸ್ಲಿಂ ಯುವಕನನ್ನು ಪ್ರೀತಿಸುತ್ತಾರೆ ಇವರನ್ನು ಮದುವೆಯಾಗಲು ಮುಂದಾಗುತ್ತಾರೆ. ಆದರೆ ಲಕ್ಷ್ಮಿಯವರಿಗೆ ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸುವುದಕ್ಕೆ ಸ್ವಲ್ಪವೂ ಕೂಡ ಇಷ್ಟ ಇರುವುದಿಲ್ಲ ಈ ಕಾರಣಕ್ಕಾಗಿ ತಮ್ಮ ಮಗಳ ಮದುವೆಗೆ ವಿರೋಧವನ್ನು ವ್ಯಕ್ತ ಪಡಿಸುತ್ತಾರೆ. ಆದರೂ ಕೂಡ ಐಶ್ವರ್ಯ ಅವರು ನಾನು ಪ್ರೀತಿಸಿದಂತಹ ಯುವಕನನ್ನೇ ನಾನು ಮದುವೆಯಾಗುತ್ತೇನೆ ಇದರಲ್ಲಿ ನೀನು ಹಸ್ತಕ್ಷೇಪ ಮಾಡಬೇಡ ಎಂದು ತಾಯಿಗೆ ಜಗಳ ಆಡಿಕೊಂಡು ತನ್ವೀರ್ ಮೊಹಮ್ಮದ್ ಅವರನ್ನು ಮದುವೆಯಾಗುತ್ತಾರೆ.

ಮದುವೆಯಾದ ಸ್ವಲ್ಪ ದಿನದ ತನಕವು ಕೂಡ ಇವರಿಬ್ಬರ ಜೀವನದಲ್ಲಿ ಯಾವುದೇ ರೀತಿಯಾದಂತಹ ಕ’ಲಹ ಉಂಟಾಗುವುದಿಲ್ಲ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಾರೆ ಸ್ವಲ್ಪ ದಿನದ ನಂತರ ಈ ದಂಪತಿಗಳಿಗೆ ಒಂದು ಹೆಣ್ಣು ಮಗು ಜನಿಸುತ್ತದೆ. ದಿನಗಳು ಕಳೆದಂತೆ ತನ್ವೀರ್ ಮೊಹಮ್ಮದ್ ಅವರು ತಮ್ಮ ನಿಜವಾದ ಮುಖವನ್ನು ತೋರಿಸುತ್ತಾರೆ ಇಷ್ಟು ದಿನಗಳ ಕಾಲ ಅವರು ಮುಖವಾಡದ ಬದುಕನ್ನು ಹಾಕಿಕೊಂಡಿರುತ್ತಾರೆ. ತನ್ವಿರ್ ಅವರು ತುಂಬಾನೇ ಡ್ರ’ಗ್ಸ್ ಗೆ ಅಡಿಕ್ಟ್ ಆಗಿರುತ್ತಾರೆ ಅಷ್ಟೇ ಅಲ್ಲದೆ ಕುಡಿತದ ಚಟವನ್ನು ಕೂಡಾ ಹೊಂದಿರುತ್ತಾರೆ. ಆದರೆ ಅಷ್ಟೊತ್ತಿಗಾಗಲೇ ಐಶ್ವರ್ಯ ಬಸ್ಕರನ್ ಅವರು ಸಂಪೂರ್ಣವಾಗಿ ಚಿತ್ರತಂಡದಿಂದ ದೂರವಾಗಿ ತಮ್ಮ ಮಗಳು ಹಾಗೂ ಸಂಸಾರದ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ. ತನ್ವೀರ್ ಅವರು ಯಾವುದೇ ಕೆಲಸ ಕಾರ್ಯಕ್ಕೆ ಹೋಗದೆ ಮನೆಯಲ್ಲೇ ಇರುತ್ತಾರೆ ಡ್ರ’ಗ್ಸ್ ಸೇವನೆ ಮಾಡುವುದಕ್ಕೆ ಇದಕ್ಕೆ ಹಣವನ್ನು ನೀಡುವಂತೆ ಐಶ್ವರ್ಯ ಅವರಿಗೆ ಹಿಂ’ಸೆ ನೀಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಐಶ್ವರ್ಯ ಅವರಿಗೆ ಯಾವುದೇ ಅವಕಾಶಗಳು ದೊರೆಯುವುದಿಲ್ಲ ಪ್ರತಿನಿತ್ಯವೂ ಕೂಡ ತನ್ನ ಪತಿ ನೀಡುತ್ತಿದ್ದ ಹಿಂ’ಸೆಯನ್ನು ಸಹಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ. ಒಂದು ಕಡೆ ಅವರು ತಮ್ಮ ತಾಯಿ ಆದಂತಹ ಲಕ್ಷ್ಮಿ ಅವರಿಂದಲೂ ಕೂಡ ದೂರ ಆಗಿರುತ್ತಾರೆ.

ಏಕೆಂದರೆ ಲಕ್ಷ್ಮಿ ಅವರಿಗೆ ಇಷ್ಟ ಇಲ್ಲದಂತಹ ಯುವಕನನ್ನು ಮದುವೆಯಾದ ಕಾರಣಕ್ಕೆ ಸಂಪೂರ್ಣವಾಗಿ ಲಕ್ಷ್ಮಿ ಅವರು ಕೂಡ ಮಗಳನ್ನು ದೂರ ಇಟ್ಟಿರುತ್ತಾರೆ. ಒಂದು ಕಡೆ ತಾಯಿಯ ಆಸರೆಯಿಲ್ಲ ಮತ್ತೊಂದು ಕಡೆ ಕೆಲಸ ಇಲ್ಲ ಈಗ ಪತಿ ನೋಡಿದರೆ ಈ ರೀತಿ ಇಂ’ಸೆ ನೀಡುತ್ತಿರುವುದು ಇವೆಲ್ಲದರ ನೋ’ವಿನಿಂದಾಗಿ ತಮ್ಮ ಪತಿಗೆ ಅವರು ವಿ’ಚ್ಛೇ’ದ’ನವನ್ನು ನೀಡುತ್ತಾರೆ. ನಂತರ ತಮ್ಮ ಮಗಳನ್ನು ಕರೆದುಕೊಂಡು ಹೋಗಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡುತ್ತಾರೆ ಇಲ್ಲಿ ಬಂದಂತಹ ಸಂಬಳದಿಂದ ತಮ್ಮ ಮಗಳ ವಿದ್ಯಾಭ್ಯಾಸ ಹಾಗೂ ಲಾಲನೆ ಪಾಲನೆ ಪೋಷಣೆ ಮಾಡಲು ಪ್ರಾರಂಭ ಮಾಡುತ್ತಾರೆ. ಸ್ವಲ್ಪ ದಿನಗಳು ಕಳೆದ ನಂತರ ಮಗಳು ಕೂಡ ಬೇರೊಬ್ಬ ಯುವಕನ ಜೊತೆ ಮದುವೆಯಾಗುತ್ತಾರೆ ಅಲ್ಲಿಗೆ ಐಶ್ವರ್ಯ ಅವರು ಸಂಪೂರ್ಣವಾಗಿ ಒಬ್ಬಂಟಿ ಆಗುತ್ತಾರೆ. ಜನ್ಮ ಕೊಟ್ಟ ಮಗಳು ದೂರಾಗುತ್ತಾರೆ ಹೆತ್ತ ತಾಯಿಯು ಕೂಡ ದೂರಾಗುತ್ತಾರೆ ಪತಿಯು ಕೂಡ ದೂರ ಆಗುತ್ತಾರೆ ಇವೆಲ್ಲದರಿಂದ ಮಾನಸಿಕವಾಗಿ ತುಂಬಾನೇ ಕುಗ್ಗಿ ಹೋಗುತ್ತಾರೆ. ಆದರೂ ಕೂಡ ಬದುಕನ್ನು ಸಾಗಿಸಬೇಕು ಎಂಬ ಕಾರಣಕ್ಕಾಗಿ ಯಾವುದಾದರೂ ಒಂದು ಕೆಲಸವನ್ನು ಮಾಡಬೇಕು ಅಂತ ಬಯಸುತ್ತಾರೆ ಆದರೆ ಇವರಿಗೆ ಯಾರೂ ಕೂಡ ಕೆಲಸವನ್ನು ನೀಡುವುದಿಲ್ಲ. ಹಾಗಾಗಿ ಬೀದಿ ಬದಿ ಕುಳಿತುಕೊಂಡು ಸೋಪ್ ಮಾರುವಂತಹ ಕಾರ್ಯವನ್ನು ಇದೀಗ ಮಾಡುತ್ತಿದ್ದಾರೆ. ಇದನ್ನು ಕಂಡಂತಹ ಕಲಾವಿದರೊಬ್ಬರು ನಿಮ್ಮ ಬದುಕಿನಲ್ಲಿ ಏನಾಯಿತು ಈಗ ಯಾಕೆ ಈ ರೀತಿ ಕೆಲಸ ಮಾಡುತ್ತಿದ್ದೀರಾ ಅಂತ ಕೇಳಿದಾಗ ತಮ್ಮ ಜೀವನದಲ್ಲಿ ನಡೆದಂತಹ ಎಲ್ಲಾ ಕಹಿ ಘಟನೆಗಳನ್ನು ಕೂಡ ಹೇಳಿಕೊಳ್ಳುತ್ತಾರೆ.

ನನಗೆ ಹೇಗಾದರೂ ಮಾಡಿ ಸಿನಿಮಾರಂಗದಲ್ಲಿ ಒಂದು ಅವಕಾಶವನ್ನು ಕೊಡಿ ನಾನು ಕೆಲಸ ಮಾಡುತ್ತೇನೆ ನನ್ನ ಬದುಕನ್ನು ಸಾಗಿಸುವುದಕ್ಕೆ ಹಣದ ಅವಶ್ಯಕತೆ ಇದೆ ಅಂತ ಸಿಕ್ಕ ಸಿಕ್ಕವರನ್ನೆಲ್ಲ ಕೇಳಿಕೊಳ್ಳುತ್ತಿದ್ದಾರೆ ಯಾರು ಕೂಡ ಇವರಿಗೆ ಅವಕಾಶವನ್ನು ನೀಡುತ್ತಿಲ್ಲ‌. ಹಾಗಾಗಿ ಐಶ್ವರ್ಯ ಅವರು ಕೊನೆಗೆ ನಿಮ್ಮ ಮನೆಯ ಟಾಯ್ಲೆಟ್ ಕ್ಲೀನ್ ಮಾಡುವ ಕೆಲಸ ಇದ್ದರೆ ಕೊಡಿ ಅದನ್ನಾದರೂ ಮಾಡುತ್ತೇನೆ ಅಂತ ಹೇಳುತ್ತಿದ್ದಾರೆ. ಐಶ್ವರ್ಯ ಭಾಸ್ಕರನ್ ಅವರು ಈ ರೀತಿ ಹೇಳುತ್ತಿರುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಇದನ್ನು ನೋಡಿದಂತಹ ನೆಟ್ಟಿಗರು ಮತ್ತು ಅಭಿಮಾನಿಗಳು ನಿಜಕ್ಕೂ ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಏಕೆಂದರೆ ಸೆಲೆಬ್ರಿಟಿಗಳು ಅಂದಾಗ ನಾವು ಅವರಿಗೆ ಯಾವುದೇ ಕಷ್ಟ ಇರುವುದಿಲ್ಲ ಜೀವನದಲ್ಲಿ ಉನ್ನತ ಮಟ್ಟದ ಐಷಾರಾಮಿ ಬದುಕನ್ನು ಸಾಗಿಸುತ್ತಾರೆ ಅಂತ ಅಂದುಕೊಳ್ಳುತ್ತೇವೆ. ಆದರೆ ಸ್ಟಾರ್ ನಟ-ನಟಿಯರೆಲ್ಲ ಕೂಡ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಇದೀಗ ಖ್ಯಾತ ನಟಿ ಲಕ್ಷ್ಮಿ ಅವರ ಮಗಳ ಬದುಕೇ ಉದಾಹರಣೆ ಅಂತ ಹೇಳಬಹುದು. ಪ್ರೀತಿ-ಪ್ರೇಮ ಅಂತ ಮೋಸ ಹೋಗುವುದರ ಬದಲಾಗಿ ತಂದೆ-ತಾಯಿ ತೋರಿಸಿದಂತಹ ಹುಡುಗನನ್ನು ಮದುವೆಯಾದರೆ ಇಂತಹ ದುರ್ಗತಿ ಬರುವುದಿಲ್ಲ ಎಂಬುದು ನಮ್ಮ ಉದ್ದೇಶವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು‌.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಇದ್ದಕ್ಕಿದ್ದ ಹಾಗೆ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ ಧ್ರುವ ಸರ್ಜಾ ಯಾಕೆ ಗೊತ್ತಾ.?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಸದ್ಯಕ್ಕೆ ಕನ್ನಡ ಚಲನಚಿತ್ರರಂಗದಲ್ಲಿ ಬಹುಬೇಡಿಕೆ ಹೊಂದಿರುವ ಸ್ಟಾರ್ ನಟ. ಮೂಲತಃ ಕಲಾವಿದರ ಕುಟುಂಬದಿಂದಲೇ ಬೆಳೆದು ಬಂದಿರುವ ಧ್ರುವ ಸರ್ಜಾ ಅವರು ಶಕ್ತಿ ಪ್ರಸಾದ್ ಅವರ ಮೊಮ್ಮಗ ಮತ್ತು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರಿಗೆ ಸೋದರಳಿಯ. ಹೀಗೆ ಶಕ್ತಿಪ್ರಸಾದ್ ಕುಟುಂಬದ ಹಲವು ಕುಡಿಗಳು ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದು ಕಲಾ ಸೇವೆ ಮಾಡುತ್ತಿದ್ದಾರೆ. ಅರ್ಜುನ್ ಸರ್ಜಾ ಅವರ ಪತ್ನಿಯೂ ಸಹ ಕಲಾವಿದೆಯಾಗಿದ್ದರು. ಮತ್ತು ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿಯಾದ ಐಶ್ವರ್ಯ ಸರ್ಜಾ ಅವರು ಕೂಡ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ತಂದೆಯ ನಿರ್ದೇಶನದ ಪ್ರೇಮಬರಹ ಎನ್ನುವ ಸಿನಿಮಾದಲ್ಲಿ ಐಶ್ವರ್ಯ ಸರ್ಜ ಅವರು ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. ಅಲ್ಲದೆ ಧ್ರುವ ಸರ್ಜಾ ಅವರ ಅಣ್ಣನಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾರಾಜ್ ಕೂಡ ಕನ್ನಡ ಸಿನಿಮಾಗಳಲ್ಲಿ ಹೆಸರಾಂತ ಜೋಡಿಯಾಗಿದ್ದರು. ಧ್ರುವ ಸರ್ಜಾ ಅವರು ಕಲಾವಿದ ಕುಟುಂಬದಿಂದಲೇ ಬಂದಿರುವುದರಿಂದ ಸಹಜವಾಗಿ ಅವರಿಗೆ ಸಿನಿಮಾ ಪ್ರಪಂಚದ ಬಗ್ಗೆ ಆಕರ್ಷಣೆ ಉಂಟಾಗಿರುತ್ತದೆ.

ಈ ರೀತಿಯಾಗಿ ತಮ್ಮ ಆಸಕ್ತಿ ಹಾಗೂ ಸ್ವಂತ ಪರಿಶ್ರಮದಿಂದ 2012ರಲ್ಲಿ ಮೊದಲ ಬಾರಿಗೆ ಧ್ರುವ ಸರ್ಜಾ ಅವರು ನಾಯಕನಟನಾಗಿ ಕಾಣಿಸಿಕೊಂಡಿದ್ದರು. ಕೆಪಿ ಅರ್ಜುನ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಅದ್ದೂರಿ ಸಿನಿಮಾಕ್ಕಾಗಿ ನಡೆಸಿದ್ದ ಆಡಿಶನ್ ಅಲ್ಲಿ ಧ್ರುವ ಸರ್ಜಾ ಅವರು ಸೆಲೆಕ್ಟ್ ಆಗಿದ್ದರು. ಅದ್ದೂರಿ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಧ್ರುವ ಸರ್ಜಾ ಅವರು ಕನ್ನಡಿಗರ ಮನಸ್ಸನ್ನು ಸೆಳೆದಿದ್ದರು. ಅದ್ದೂರಿ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಅವರು ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಈ ಮುದ್ದಾದ ಜೋಡಿ ಸ್ಯಾಂಡಲ್ ವುಡ್ ನಲ್ಲಿ ಹಿಟ್ ಜೋಡಿ ಆಗಿ ಪಾಪುಲರ್ ಜೋಡಿ ಎನಿಸಿಕೊಂಡಿತ್ತು. ಅದ್ದೂರಿ ಸಿನಿಮಾದ ಬಳಿಕ ಧ್ರುವ ಸರ್ಜಾ ಅವರು ಮತ್ತು ರಾಧಿಕಾ ಪಂಡಿತ್ ಅವರು ಮತ್ತೊಮ್ಮೆ ತೆರೆಮೇಲೆ ಒಟ್ಟಾಗಿ ಬಹುದ್ದೂರ್ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾವು 2013ರಲ್ಲಿ ಸೆಟ್ಟೇರಿತ್ತು. ಈ ಸಿನಿಮಾ ಕೂಡ ಭರ್ಜರಿ ಪ್ರದರ್ಶನ ಕಂಡು ಮತ್ತೊಮ್ಮೆ ಧ್ರುವ ಸರ್ಜಾ ಅವರಿಗೆ ಗೆಲುವು ತಂದುಕೊಟ್ಟಿತ್ತು. ಈ ಎರಡು ಸಿನಿಮಾಗಳಾದ ಬಳಿಕ ಸ್ವಲ್ಪ ಡಿಫರೆಂಟ್ ಲುಕ್ಕಿನಲ್ಲಿ ಧ್ರುವ ಸರ್ಜಾ ಅವರು ಭರ್ಜರಿ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಜೊತೆಯಲ್ಲಿ ರಚಿತಾ ರಾಮ್ ಮತ್ತು ಹರಿಪ್ರಿಯಾ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸಾಯಿಕುಮಾರ್ ತಾರಾ ಸುಚೇಂದ್ರ ಪ್ರಸಾದ್ ಇನ್ನು ಮುಂತಾದ ಹಲವಾರು ಹಿರಿಯ ಕಲಾವಿದರುಗಳು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಹಿಟ್ ಆದ ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಹ್ಯಾಟ್ರಿಕ್ 3 ಹಿಟ್ ಗಳನ್ನು ಬ್ಯಾಕ್ 2 ಬ್ಯಾಕ್ ಪಡೆದ ಹೀರೋ ಎನಿಸಿಕೊಂಡರು. ಇಲ್ಲಿಯವರೆಗೂ ಕ್ಲಾಸ್ ಲುಕ್ಕಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಧ್ರುವ ಸರ್ಜಾ ಅವರು ತಮ್ಮ ನಾಲ್ಕನೇ ಸಿನಿಮಾವಾದ ಪೊಗರು ಎನ್ನುವ ಸಿನಿಮಾದಲ್ಲಿ ಸಕ್ಕತ್ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಹಾಡುಗಳು ಹಿಟ್ ಆಗುವುದರ ಜೊತೆಗೆ ಸಿನಿಮಾ ಬಗ್ಗೆ ಕೆಲವೊಂದಿಷ್ಟು ವಿವಾದಗಳು ಉಂಟಾಗಿದ್ದವು. ಎಲ್ಲಾ ವಿವಾದಗಳನ್ನು ಬಗೆಹರಿಸಿಕೊಂಡ ಮೇಲೆ ಸಿನಿಮಾ ತುಂಬಾ ಯಶಸ್ಸನ್ನು ಗಳಿಸಿತ್ತು. ತಮ್ಮ ವೃತ್ತಿ ಬದುಕಿನಲ್ಲಿ ಇಷ್ಟೊಂದು ಯಶಸ್ಸು ಗಳಿಸಿರುವ ದ್ರುವ ಸರ್ಜಾ ಅವರ ವೈಯುಕ್ತಿಕ ಬದುಕು ಕೂಡ ಅಷ್ಟೇ ಸುಂದರವಾಗಿತ್ತು. ಧ್ರುವ ಸರ್ಜಾ ಅವರು ಅವರ ಸಹೋದರನಾದ ಚಿರಂಜೀವಿ ಸರ್ಜಾ ಅವರನ್ನು ಬಹಳ ಇಷ್ಟಪಡುತ್ತಿದ್ದರು. ಜೊತೆಗೆ ಚಿರಂಜೀವಿ ಸರ್ಜಾ ಅವರ ಪತ್ನಿಯಾದ ಮೇಘನಾರಾಜ್ ಅವರನ್ನು ಕೂಡ ಬಹಳ ಪ್ರೀತಿ ಹಾಗೂ ವಿಶ್ವಾಸದಿಂದ ಕಾಣುತ್ತಿದ್ದರು.

ಧ್ರುವ ಸರ್ಜಾ ಅವರು ಪ್ರೇರಣಾ ಎನ್ನುವ ತಮ್ಮ ಬಾಲ್ಯ ಸ್ನೇಹಿತೆಯನ್ನು ಪ್ರೀತಿಸಿ ಕುಟುಂಬದವರ ಒಪ್ಪಿಗೆ ಮೇಲೆ ಅದ್ದೂರಿಯಾಗಿ ವಿವಾಹವಾದರು. ಇವರ ವಿವಾಹವನ್ನು ಚಿರಂಜೀವಿ ಸರ್ಜಾ ಹಾಗೂ ಮೇಘನಾರಾಜ್ ಅವರೇ ಜವಾಬ್ದಾರಿ ಹೊತ್ತುಕೊಂಡು ನಡೆಸಿಕೊಟ್ಟಿದ್ದರು. ಅಣ್ಣ-ತಮ್ಮಂದಿರ ಬಾಂಧವ್ಯದ ಮೇಲೆ ಯಾರ ಕೆಟ್ಟ ದೃಷ್ಟಿ ಬಿದ್ದಿದೆ ಏನೋ ಚಿರು ಇನ್ನೆಂದು ಬಾರದಂತೆ ಎಲ್ಲರನ್ನೂ ಆಗಲಿ ಚಿರನಿದ್ರೆಗೆ ಜಾರಿದರು. ಇದಾದ ಬಳಿಕ ಪತ್ನಿ ಮೇಘನರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಕುಟುಂಬದ ಸದಸ್ಯರ ಅನುಭವಿಸಿದ ದುಃಖವನ್ನು ಹೇಳಲು ಅಸಾಧ್ಯ. ಇದರ ನಡುವೆ ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್ ಸರ್ಜಾ ಅವರು ಜನಿಸಿದ ಸ್ವಲ್ಪ ಸ್ವಲ್ಪವಾಗಿ ಎಲ್ಲರೂ ಸುಧಾರಿಸಿಕೊಳ್ಳುತ್ತಿದ್ದಾರೆ ಎನ್ನಬಹುದು. ಈ ವರ್ಷ ಚಿರಂಜೀವಿ ಸರ್ಜಾ ಅವರ ಪುಣ್ಯಸ್ಮರಣೆ ಎಂದು ಅವರ ಸ’ಮಾ’ಧಿಯನ್ನು ತಮ್ಮ ಧ್ರುವ ಸರ್ಜಾ ಅವರು ಅಮೃತಶಿಲೆಯಿಂದ ಕಟ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ಫಾರಂನಲ್ಲೇ ಅಣ್ಣನ ಸ’ಮಾ’ಧಿಯನ್ನು ಮಾಡಿಸಿಕೊಂಡಿದ್ದರು. ಈಗ ಧ್ರುವ ಸರ್ಜಾ ಅವರು ಬೆಂಗಳೂರಿನ ಮನೆಯನ್ನು ಬಿಟ್ಟು ಫಾರಂ ಹೌಸ್ ನಲ್ಲಿ ಹೋಗಿ ವಾಸಿಸಲು ನಿರ್ಧರಿಸಿದ್ದಾರೆ. ಇವರ ಈ ನಿರ್ಧಾರದ ಬಗ್ಗೆ ಇವರ ಕುಟುಂಬದ ಹತ್ತಿರದ ಸ್ನೇಹಿತರಾದ ದರ್ಶನ್ ಅವರು ಕೂಡ ಒಳ್ಳೆಯ ನಿರ್ಧಾರ ಇದು ಎಂದು ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಕಾಮೆಂಟ್ ಮುಖಾಂತರ ತಿಳಿಸಿ.

ಸಾಯಿಪಲ್ಲವಿ ಬೇರೆ ನಟಿಯರ ಹಾಗೇ ತುಂಡು ಉಡುಪು ಧರಿಸುವುದಿಲ್ಲ ಇದಕ್ಕೆ ಕಾರಣ ಏನು ಗೊತ್ತ.?

ಸಾಯಿ ಪಲ್ಲವಿ ಈ ಹೆಸರು ಈಗ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತುಂಬಾನೇ ಫೇಮಸ್ ಸಾಯಿ ಪಲ್ಲವಿ ಅವರು ತುಂಬಾ ನ್ಯಾಚುರಲ್ ಲುಕ್ ಹಾಗೂ ಅದ್ಬುತ ನಟನೆಯಿಂದ ಸೌತ್ ಇಂಡಿಯಾದವರಿಗೆ ಚಿರಪರಿಚಿತರು. ಮಲಯಾಳಂ ತಮಿಳು ತೆಲುಗು ಭಾಷೆಯ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸಾಯಿ ಪಲ್ಲವಿ ಅವರು ನಿಧಾನವಾಗಿ ಈಗ ಕನ್ನಡದ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ನೋಡಲು ಸೀದಾಸಾದಾ ಸಾಧಾರಣ ಲುಕ್ ಹೊಂದಿರುವ ಈ ನಟಿ ತಮ್ಮದೇ ಆದ ವಿಭಿನ್ನ ಮ್ಯಾನರಿಸಂ ಇಂದ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಸಾಯಿ ಪಲ್ಲವಿ ಅವರನ್ನು ಅಭಿಮಾನಿಗಳು ಅಭಿನಯದ ಜೊತೆಗೆ ಅವರ ನೃತ್ಯದಿಂದಾಗಿ ಹೆಚ್ಚು ಮೆಚ್ಚಿಕೊಂಡಿದ್ದಾರೆ. ಸಾಯಿ ಪಲ್ಲವಿ ಅವರನ್ನು ಅಭಿಮಾನಿಗಳು ಇಷ್ಟು ಇಷ್ಟ ಪಡುವುದಕ್ಕೆ ಈ ಕಾರಣಗಳ ಜೊತೆಗೆ ಅನೇಕರಿಗೆ ತಿಳಿಯದ ಇನ್ನು ಹಲವಾರು ಕಾರಣಗಳು ಇವೆ. ಅವುಗಳ ಬಗ್ಗೆ ತಿಳಿದರೆ ನೀವೇ ಆಶ್ಚರ್ಯಗೊಳ್ಳುತ್ತೀರಿ ಸಾಯಿ ಪಲ್ಲವಿ ಅವರು ಮೊದಲಿನಿಂದಲೂ ಕಲೆಯ ಕಡೆಗೆ ಅಪಾರ ಪ್ರೀತಿ ಹೊಂದಿದ್ದರು. ಈ ಆಕರ್ಷಣೆಯಿಂದಾಗಿ ಅವರು ಶಾಲಾ ದಿನಗಳಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದರು ಅದರಲ್ಲೂ ನೃತ್ಯದ ಕಡೆಗೆ ಅವರ ಒಲವು ಹೆಚ್ಚಾಗಿ ಇತ್ತು. ಇದೆ ಅವರು ತೆರೆ ಮೇಲೆ ಕಾಣಿಸಿಕೊಳ್ಳಲು ದೊಡ್ಡ ಅವಕಾಶವನ್ನು ತಂದುಕೊಟ್ಟಿತ್ತು.

2003 ಹಾಗೂ 2008ರಲ್ಲಿ ಬಾಲನಟಿ ಆಗಿ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಸಾಯಿ ಪಲ್ಲವಿ ಅವರು ನಂತರ ನಿಧಾನವಾಗಿ ರಿಯಾಲಿಟಿ ಶೋಗಳಲ್ಲಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಳ್ಳಲು ಶುರುಮಾಡಿದರು. ಕಿರುತೆರೆಯ ಖ್ಯಾತ ವಾಹಿನಿಗಳಲ್ಲಿ ಎರಡು ಮೂರು ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಸಾಯಿ ಪಲ್ಲವಿ ಅವರ ಅದೃಷ್ಟದ ಬಾಗಿಲು ಆಗ ತೆರೆದಿತ್ತು. ಒಂದರ ಹಿಂದೆ ಒಂದರಂತೆ ಹಲವಾರು ಅವಕಾಶಗಳು ಅವರನ್ನು ಅರಸಿ ಬಂದಿದ್ದವು. ಆದರೆ ವಿದ್ಯಾಭ್ಯಾಸದ ಬಗ್ಗೆಯೂ ಸಹ ಗಮನ ಹೊಂದಿದ್ದ ಅವರು ರಜಾದಿನಗಳಲ್ಲಿ ಮತ್ತು ಬಿಡುವಿನ ವೇಳೆಯಲ್ಲಿ ಮಾತ್ರ ಅಭಿನಯಿಸುತ್ತಿದ್ದರು. ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಎಂಬಿಬಿಎಸ್ ಸ್ಟಡಿ ಮಾಡುತ್ತಿರುವಾಗಲೇ ಪ್ರೇಮಂ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಹಿಟ್ ಆಗಿದ್ದೇ ತಡ ಸೌತ್ ಸಿನಿಮಾಗಳಲ್ಲಿ ಸಾಯಿಪಲ್ಲವಿ ಅವರು ಒಬ್ಬ ಭರವಸೆಯ ನಾಯಕಿಯಾದರು. ತಾವು ಆರಿಸಿಕೊಳ್ಳುತ್ತಿದ್ದ ಕಥೆಗಳ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತಿದ್ದ ಸಾಯಿ ಪಲ್ಲವಿ ಅವರು ಈದಿನ ಇಷ್ಟು ಪಾಪುಲರ್ ಆಗಿರುವುದಕ್ಕೆ ಅವರ ಸಿನಿಮಾಗಳನ್ನು ಜನರು ನಂಬಿಕೆ ಇಟ್ಟು ನೋಡುವುದಕ್ಕೆ ಅವರು ತಮ್ಮ ಕಥೆಗಳ ಹಾಗೂ ಅವರ ಪಾತ್ರಗಳ ಆಯ್ಕೆಗಳಲ್ಲಿ ತೆಗೆದು ಕೊಳ್ಳುತ್ತಿದ್ದ ಪ್ರಬುದ್ಧತೆಯ ನಿರ್ಧಾರವೇ ಕಾರಣ ಎಂದರೆ ತಪ್ಪಾಗಲಾರದು. ನಿಧಾನವಾಗಿ ಸಾಯಿ ಪಲ್ಲವಿ ಅವರ ಫೇಮ್ ಹೆಚ್ಚುತ್ತಲೇ ಹೋಯಿತು ಸಿನಿಮಾವನ್ನು ಹೊರತುಪಡಿಸಿ ಕೂಡ ಸಾಮಾಜಿಕ ಬದುಕಿನಲ್ಲಿ ಸಾಯಿಪಲ್ಲವಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಉದಾಹರಣೆಗೆ ಸಾಯಿ ಪಲ್ಲವಿ ಅವರ ನಿಧಾನವಾಗಿ ಹೆಚ್ಚಾಗುತ್ತಿದ್ದಂತೆ ಫೇರ್ ಅಂಡ್ ಲವ್ಲಿ ಕಂಪನಿಯು ಸಾಯಿಪಲ್ಲವಿ ಅವರನ್ನು ಅವರ ಜಾಹೀರಾತಿನಲ್ಲಿ ಭಾಗವಹಿಸಲು ಆಫರ್ ನೀಡಿತ್ತು ಹಾಗೂ ಇದಕ್ಕಾಗಿ ಬಹುದೊಡ್ಡ ಮೊತ್ತದ ಸಂಭಾವನೆಯನ್ನು ಕೊಡಲು ಕೂಡ ಒಪ್ಪಿತ್ತು. ಆದರೆ ಸಾಯಿ ಪಲ್ಲವಿ ಅವರು ಮಾತ್ರ ಅವರ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದರು ಮತ್ತು ನಮ್ಮ ಚರ್ಮದ ಬಣ್ಣವು ನಮ್ಮ ಕಾನ್ಫಿಡೆನ್ಸ್ ಆಗಿರಬೇಕು. ನಾನು ಯಾವುದೇ ಕಾರಣಕ್ಕೂ ಕಪ್ಪು ಬಣ್ಣ ಕೆಟ್ಟದ್ದು ಬಿಳಿ ಬಣ್ಣ ಶ್ರೇಷ್ಠ ಎಂದು ಹೇಳುವುದಿಲ್ಲ ಹಾಗೂ ನಿಮ್ಮ ಚರ್ಮದ ಬಣ್ಣ ಬದಲಾಯಿಸಿಕೊಳ್ಳಿ ಎನ್ನುವ ಬಗ್ಗೆ ಸಂದೇಶ ನೀಡುವುದಿಲ್ಲ ಎನ್ನುವ ಮಾತುಗಳನ್ನು ಹೇಳುವ ಮೂಲಕ ಹಲವಾರು ಜನರ ಪ್ರಶಂಸೆಗೆ ಗುರಿಯಾದರು. ಅಷ್ಟೇ ಅಲ್ಲದೆ ತಾವು ಕೂಡ ಸಿನಿಮಾಗಳಲ್ಲಿ ಇದೇ ರೀತಿ ಕಾಣಿಸಿಕೊಳ್ಳುವುದಾಗಿ ಮತ್ತು ಮೇಕಪ್ ಇಲ್ಲದೆ ಕೂಡ ನಟಿಸಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದರು ಹಾಗೆ ನಡೆದುಕೊಂಡರು ಕೂಡ. ಇವರ ಇಂತಹ ನಿರ್ಧಾರಗಳಿಂದಲೇ ಸಾಯಿ ಪಲ್ಲವಿ ಎಂದರೆ ಅಭಿಮಾನಿಗಳಿಗೆ ತುಂಬಾ ಅಚ್ಚುಮೆಚ್ಚು ಈಗ ಮತ್ತೊಮ್ಮೆ ಸಾಯಿ ಪಲ್ಲವಿ ಅವರು ಇಂತಹದೊಂದು ನಿರ್ಧಾರದಿಂದಾಗಿ ಭಾರತೀಯರ ಮನ ಗೆದ್ದಿದ್ದಾರೆ. ಅದು ಕೂಡ ಸಿನಿಮಾಗಳಲ್ಲಿ ಅವರು ಧರಿಸುವ ಬಟ್ಟೆಯ ವಿಚಾರವಾಗಿ ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕನಟನಿಗೆ ಮಾತ್ರ ಮಹತ್ವದ ಸ್ಥಾನವಿರುತ್ತದೆ.

ಅದನ್ನು ಹೊರತುಪಡಿಸಿ ನಾಯಕಿಯರು ಕೆಲವೊಂದು ನೃತ್ಯಗಳಲ್ಲಿ ಇದು ಹಲವಾರು ಸನ್ನಿವೇಶಗಳಲ್ಲಿ ಸಿನಿಮಾದ ಕೊನೆಯವರೆಗೂ ನಾಯಕನಟನ ಜೊತೆಗೆ ಇದ್ದರೂ ಕೂಡ ಅವರಿಗೆ ಅಷ್ಟೊಂದು ಮಾನ್ಯತೆ ಸಿಗುವುದಿಲ್ಲ. ಮತ್ತು ಇದುವರೆಗೆ ಅವರನ್ನು ಕುಣಿಯಲಿಕ್ಕಾಗಿ ಇರುವವರು ಎಂದೇ ನಿರ್ಲಕ್ಷ ಮಾಡುತ್ತಿದ್ದರು ಹಾಗೂ ಸಿನಿಮಾಗಳಲ್ಲಿ ನಟಿಮಣಿಯರಿಗೆ ಧರಿಸಲು ಅರ್ಧಂಬರ್ಧ ಇರುವ ಮೈ ಕಾಣುವ ಇಂತಹ ಉಡುಪುಗಳನ್ನೇ ಕೊಡಲಾಗುತ್ತದೆ. ಸಂಭಾವನೆ ಕೊಂಚ ಹೆಚ್ಚಾಗಿ ಸಿಗುತ್ತದೆ ಎನ್ನುವ ಕಾರಣದಿಂದಲೋ ಅಥವಾ ಮುಂದೆ ಅವಕಾಶಗಳ ಕೊರತೆ ಉಂಟಾಗಬಹುದು ಎನ್ನುವ ಭಯದಿಂದಲೂ ನಟೀಮಣಿಯರು ಇಂತಹ ಎಲ್ಲಾ ಒಪ್ಪಂದಗಳಿಗೆ ಒಪ್ಪಿಕೊಂಡುಬಿಡುತ್ತಾರೆ. ಆದರೆ ಸಾಯಿ ಪಲ್ಲವಿ ಅವರ ಮಾತ್ರ ಯಾವುದೇ ಕಾರಣಕ್ಕೂ ತಾವು ಈ ರೀತಿ ಉಡುಪು ಧರಿಸಿ ನಟಿಸುವ ಪಾತ್ರಗಳಲ್ಲಿ ಅಭಿನಯಿಸುವ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದಾರೆ. ಇವರ ಈ ನಿರ್ಧಾರಕ್ಕೆ ಹಲವು ಜನ ಬೇಷ್ ಎಂದಿದ್ದಾರೆ. ಇದುವರೆಗೂ ನಟಿಸಿರುವ ಎಲ್ಲಾ ಸಿನಿಮಾಗಳಲ್ಲೂ ಕೂಡ ತುಂಬಾ ನ್ಯಾಚುರಲ್ ಆಗಿ ಕಾಣಿಸಿಕೊಂಡಿರುವ ಸಾಯಿಪಲ್ಲವಿ ಅವರು ಮುಂದೆಯೂ ಹೀಗೆ ಸಿನಿಮಾ ಮಾತ್ರವಲ್ಲದೆ ಇಡೀ ಭಾರತದ ಎಲ್ಲಾ ಚಿತ್ರರಂಗದಲ್ಲೂ ಮಿಂಚಲಿ ಎಂದು ಆಶಿಸೋಣ. ಸಾಯಿ ಪಲ್ಲವಿ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.

ಕೆಲಸ ಇಲ್ಲದೆ ಮನೆಯಲ್ಲಿ ಕೂತಿದ್ದಿನಿ ಅಂತ ಕಣ್ಣೀರು ಹಾಕಿದ ಅನುಪಮ ಗೌಡ, ರಾಜರಾಣಿ ಶೋನಿಂದ ಯಾಕೆ ಹೋರ ಹಾಕಿದ್ರು ಗೊತ್ತ.?

ಆಂಕರ್ ಅನುಪಮ ಗೌಡ ಅವರು ನಿರೂಪಕಿ ಆಗುವ ಮೊದಲು ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿ ನಂತರ ಕೆಲವು ರಿಯಾಲಿಟಿ ಶೋಗಳನ್ನು ಕೂಡ ಭಾಗವಹಿಸಿ ಆಮೇಲೆ ನಿರೂಪಣೆಯನ್ನು ವೃತ್ತಿಯಾಗಿ ಆರಿಸಿಕೊಂಡರು. ಅನುಪಮ ಗೌಡ ಅವರು ಮೊದಲಿಗೆ ಕಸ್ತೂರಿ ವಾಹಿನಿಯಲ್ಲಿ ಚಿಕ್ಕದಾದ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದಾದ ಮೇಲೆ ಅಣ್ಣ-ತಂಗಿ ಎನ್ನುವ ಕಳೆದ ಹತ್ತು ವರ್ಷಗಳ ಹಿಂದೆ ಸುವರ್ಣ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯಲ್ಲಿ ತಂಗಿ ಗೌರಿಯ ಪಾತ್ರ ಮಾಡಿ ಕನ್ನಡಿಗರ ಮನಗೆದ್ದರು. ನಂತರ ಜನರು ಇವರನ್ನು ಹೆಚ್ಚಾಗಿ ಗುರುತಿಸಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಚಿ ಸೌ ಸಾವಿತ್ರಿ ಎನ್ನುವ ಧಾರಾವಾಹಿಯಲ್ಲಿ. ಈ ಧಾರಾವಾಹಿಯಲ್ಲಿ ಸಾವಿತ್ರಿ ತಂಗಿಯಾಗಿ ಇವರು ನಿರ್ವಹಿಸುತ್ತಿದ್ದ ವಿನುತಾ ಎನ್ನುವ ಪಾತ್ರವು ಸಹ ಹಲವು ದಿನಗಳ ವರೆಗೆ ಜನರ ಮನಸಿನಲ್ಲಿ ಉಳಿದುಕೊಂಡಿತ್ತು. ನಂತರ ಅನುಪಮ ಗೌಡ ಅವರು ಯಾವಾಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಕ ಎನ್ನುವ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮೊದಲ ಬಾರಿಗೆ ಸ್ವತಂತ್ರ ನಾಯಕಿಯಾಗಿ ಮತ್ತು ವಿಶೇಷವಾಗಿ ದ್ವಿಪಾತ್ರದಲ್ಲಿ ಒಂದು ಪಾಸಿಟಿವ್ ಹಾಗೂ ಮತ್ತೊಂದು ನೆಗೆಟಿವ್ ಶೇಡ್ ನಲ್ಲಿ ತೆರೆಮೇಲೆ ಅಬ್ಬರಿಸಿದ್ದರು.

ಅಕ್ಕ ಧಾರಾವಾಹಿಯ ಇವರ ಪಾತ್ರವನ್ನು ನೋಡಿದ ಮೇಲೆ ಹಲವಾರು ಜನರು ಇವರ ಕಲೆಯ ಬಗ್ಗೆ ಪ್ರಶಂಸೆ ಮಾಡಿದ್ದರು. ಇವುಗಳ ಜೊತೆ ಜೊತೆಗೆ ಡಾರ್ಲಿಂಗ್ ಕೃಷ್ಣ ಅವರಿಗೆ ತಂಗಿಯಾಗಿ ಮದರಂಗಿ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ನಂತರ ಜೆಕೆ ನಾಯಕನಟನಾಗಿ ಅಭಿನಯಿಸಿದ ಕರಾಳ ರಾತ್ರಿ ಎನ್ನುವ ಸಿನಿಮಾದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಅನುಪಮ ಅಭಿನಯಿಸಿದ್ದರು. ಮತ್ತು ತ್ರಯಂಬಕಮ್ ಎನ್ನುವ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರ ಮಗಳಾಗಿ ಆ ಸಿನಿಮಾದಲ್ಲಿ ಕೂಡ ದ್ವಿ ಪಾತ್ರದಲ್ಲಿ ನಟಿಸಿದ್ದ ಖ್ಯಾತಿ ಇವರದು. ಇಷ್ಟೆಲ್ಲಾ ಹೆಸರು ಗಳಿಸಿರುವ ಅವರು ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದು ರಿಯಾಲಿಟಿ ಶೋಗಳ ಮೂಲಕ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಸ್ಟಾರ್ ಎನ್ನುವ ರಿಯಾಲಿಟಿ ಶೋ ವೈಲ್ಡ್ ಕಾರ್ಡ್ ಎಂಟ್ರಿ ಎಲ್ಲರಿಗೂ ಸಕ್ಕತ್ ಟಫ್ ಕಾಂಪಿಟೇಶನ್ ಕೊಡುತ್ತಿದ್ದ ಅನುಪಮಾ ಅವರು ಕೂದಲೆಳೆ ಅಂತರದಲ್ಲಿ ವಿನ್ನರ್ ಆಗುವ ಅದೃಷ್ಟ ಕಳೆದುಕೊಂಡರು. ಆದರೆ ಅಷ್ಟರಲ್ಲೇ ಅವರಿಗೆ ಮತ್ತೊಂದು ಅದೃಷ್ಟದ ಮನೆಯ ಬಾಗಿಲು ಓಪನ್ ಆಗಿತ್ತು. ಬಿಗ್ ಬಾಸ್ ಸೀಸನ್ 5 ಅಲ್ಲಿ ಭಾಗವಹಿಸಿ ಹಲವು ದಿನಗಳವರೆಗೆ ದೊಡ್ಮನೆ ಒಳಗೆ ಇರುವ ಅದೃಷ್ಟವನ್ನು ಪಡೆದುಕೊಂಡಿದ್ದರು.

ಅವರ ವೃತ್ತಿ ಬದುಕಿನ ಮತ್ತೊಂದು ಅಧ್ಯಾಯ ಅಲ್ಲಿಂದ ಶುರುವಾಯಿತು ಎಂದೇ ಹೇಳಬಹುದು. ಅನುಪಮ ಅವರು ತುಂಬಾ ಶ್ರಮಜೀವಿ ಇಲ್ಲಿಯವರೆಗೂ ಅವರು ಅವರ ಪ್ರತಿಭೆ ಹಾಗೂ ಸ್ವಂತ ಪ್ರಯತ್ನದಿಂದ ಇಷ್ಟು ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಚಿಕ್ಕವಯಸ್ಸಿನಿಂದಲೇ ತುಂಬಾ ಕಷ್ಟ ಪಟ್ಟು ಬೆಳೆದಿರುವ ಅನುಪಮಾ ಅವರು ಈ ಮಟ್ಟದ ಸಾಧನೆ ಮಾಡುವವರೆಗೆ ಹಲವಾರು ಕಲ್ಲುಮುಳ್ಳಿನ ಹಾದಿಯಲ್ಲಿ ನಡೆದುಕೊಂಡು ಬಂದಿದ್ದಾರೆ. ಚಿಕ್ಕವಯಸ್ಸಿನಿಂದಲೇ ಕುಟುಂಬದ ಭಾರವನ್ನು ಹೊತ್ತಿದ್ದ ಇವರು ತಂದೆ ತಾಯಿಯನ್ನು ಸಾಕುವುದರ ಜೊತೆಗೆ ತಂಗಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಈಗ ಒಂದುಮಟ್ಟದ ನೆಲೆಯನ್ನು ಕಂಡಿರುವ ಇವರ ಪರಿಶ್ರಮವನ್ನು ಕಂಡು ಮತ್ತು ಇವರ ಸಾಧನೆಗೆ ಮೆಚ್ಚಿ ಕರ್ನಾಟಕದ ಹಲವಾರು ಕಿರುತೆರೆಯ ಪ್ರೇಕ್ಷಕರು ಇವರಿಗೆ ಅಭಿಮಾನಿಗಳಾಗಿದ್ದಾರೆ. ಧಾರಾವಾಹಿ ಸಿನಿಮಾ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದ ಅನುಪಮಾ ಗೌಡ ಅವರು ತಾವೊಬ್ಬರು ಅದ್ಭುತ ನಿರೂಪಕಿ ಎನ್ನುವುದನ್ನು ಕೂಡ ಈಗಾಗಲೇ ನಿರೂಪಿಸಿದ್ದಾರೆ.

ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾಭಾರತ ಎನ್ನುವ ಕಾಮಿಡಿ ಶೋ ನಡೆಸಿಕೊಡುತ್ತಿದ್ದ ಅನುಪಮ ಗೌಡ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಹಳ ಜನಪ್ರಿಯತೆ ಪಡೆದ ರಾಜ-ರಾಣಿ ಸೀಸನ್ 1 ಕೂಡ ನಡೆಸಿಕೊಟ್ಟಿದ್ದರು. ಇದರ ಜೊತೆಗೆ ಕಲರ್ಸ್ ನ ಹಲವಾರು ಇವೆಂಟ್ ಗಳಲ್ಲಿ ಇವರು ನಿರೂಪಕಿಯಾಗಿದ್ದರು. ರಾಜ-ರಾಣಿ ಶೋ ಮುಗಿದ ಬಳಿಕ ಸ್ವಲ್ಪ ಬ್ರೇಕ್ ತೆಗೆದುಕೊಂಡ ಇವರು ಇತ್ತೀಚೆಗಷ್ಟೇ ಗೆಳತಿಯರಾದ ನೇಹ ಗೌಡ ಹಾಗೂ ಇಶಿತ ಜೊತೆ ಗೋವಾಗೆ ಟ್ರಿಪ್ ಹೋಗಿ ಬಂದಿದ್ದರು. ಮತ್ತು ತಾವೊಬ್ಬರೇ ಸೋಲೋ ಆಗಿ ಥೈಲ್ಯಾಂಡ್ ಪ್ರವಾಸ ಹೋಗಿರುವ ಬಗ್ಗೆ ಸುಳಿವು ನೀಡಿದ್ದ ಅನುಪಮಾ ಅವರು ತಮ್ಮ ಪ್ರವಾಸಕ್ಕೆ ಸಂಬಂಧಪಟ್ಟ ಹಲವಾರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅನುಪಮಾ ಅವರು ಯೂಟ್ಯೂಬ್ ವ್ಲಾಗ್ ಹೊಂದಿದ್ದಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇವರ ಫಾಲವರ್ಸ್ ಆಗಲಿ ಅಥವಾ ಅಭಿಮಾನಿಗಳೇ ಆಗಲಿ ಯಾರೇ ಕಮೆಂಟ್ ಮಾಡಿದರು ಕೂಡ ಅವುಗಳನ್ನೆಲ್ಲ ಓದಿಕೊಂಡು ಸಾಧ್ಯವಾದಷ್ಟು ಎಲ್ಲರಿಗೂ ಉತ್ತರ ಕೊಟ್ಟು ಸ್ಪಂದಿಸುತ್ತಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜಾರಾಣಿ ಸೀಸನ್-2 ಆರಂಭವಾದ ಬಳಿಕ ಆ ಕಾರ್ಯಕ್ರಮವನ್ನು ಬೇರೊಬ್ಬ ನಿರೂಪಕಿ ನಡೆಸಿಕೊಡುತ್ತಿದ್ದರು ಇದನ್ನು ನೋಡಿದ ಅಭಿಮಾನಿಗಳು ಬೇಸರಗೊಂಡು ಅನುಪಮಾ ಅವರನ್ನು ಯಾಕೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಎಂದು ಹಲವಾರು ಬಾರಿ ಪ್ರಶ್ನಿಸಿದರು. ಅಭಿಮಾನಿಗಳ ಮತ್ತು ಫಾಲವರ್ಸ್ ಗಳ ಪ್ರಶ್ನೆಗಳಿಗೆ ಉತ್ತರಿಸುವುದು ತನ್ನ ಜವಾಬ್ದಾರಿ ಎಂದು ತಿಳಿದ ಅನುಪಮ ಗೌಡ ಅವರು ಫೇಸ್ಬುಕ್ ಲೈವ್ ಬಂದು ಅಭಿಮಾನಿಗಳ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ನಾನು ಬೇರೆ ಚಾನೆಲ್ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದೇನೆ ಎಂದು ಹಲವರು ತಿಳಿದುಕೊಂಡಿದ್ದಾರೆ ಅಥವಾ ನಾನು ನನ್ನ ಪರ್ಸನಲ್ ಲೈಫ್ ನಲ್ಲಿ ಬ್ಯುಸಿ ಆಗಿದ್ದೇನೆ ಎಂದುಕೊಂಡಿದ್ದಾರೆ ಆದರೆ ಇದ್ಯಾವುದು ಇಲ್ಲ ನಾನು ಮನೆಯಲ್ಲಿಯೇ ಇದ್ದೇನೆ ಹಾಗೂ ಯಾವುದೇ ಪ್ರಾಜೆಕ್ಟ್ ಗಳಲ್ಲೂ ಬ್ಯುಸಿಯಾಗಿಲ್ಲ. ನನ್ನದೇ ಆದ ಹಲವಾರು ಕಾರಣಗಳಿಂದಾಗಿ ನಾನು ಕಾರ್ಯಕ್ರಮ ನಡೆಸಿಕೊಡಲು ಆಗುತ್ತಿಲ್ಲ ಈ ಬಗ್ಗೆ ನನಗೂ ಬೇಸರವಿದೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಮತ್ತೊಮ್ಮೆ ಅನುಪಮ ಅವರನ್ನು ಆಂಕರ್ ಆಗಿ ನೋಡಬೇಕ.? ಕಾಮೆಂಟ್ ಮುಖಾಂತರ ನಮಗೆ ಉತ್ತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

 

KGF ಸಿನಿಮಾ‌ ಸಕ್ಸಸ್ ಆದನಂತರ ಯಶ್ ರಾಧಿಕಾ ಜೀವನವೇ ಬದಲಾಗಿದೆ, ರಾಧಿಕಾ ಧರಿಸುವ ಬಂದು ಜೊತೆ ಬಟ್ಟೆ ಬೆಲೆ ಕೇಳಿದ್ರೆ ನಿಜಕ್ಕೂ ತಲೆ ತಿರುತ್ತೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಾದ ಮೇಲೆ ಸೆಲೆಬ್ರಿಟಿಗಳ ಒಂದೊಂದು ನಡಿಗೆಯ ಬಗ್ಗೆಯೂ ಜನರು ಗಮನ ಹರಿಸಿ ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಅದರಲ್ಲೂ ಕ್ರಿಕೆಟರ್ ಗಳು ಸ್ಟಾರ್ ಹೀರೋಗಳು ಫೇಮಸ್ ಹೀರೋಯಿನ್ ಗಳು ರಿಯಾಲಿಟಿ ಶೋ ವಿನ್ನರ್ ಗಳು ಹೀಗೆ ಇಂತಹ ಚರ್ಚೆಗೆ ಒಳಗಾಗುವ ಮಂದಿ ಇವರೇ. ಇವರ ಸಿನಿಮಾ ಚಟುವಟಿಕೆಗಳು, ಅವರ ಮುಂದಿನ ನಡೆಗಳು ಇನ್ನಿತರ ಪ್ರಾಜೆಕ್ಟ್ ಗಳು, ಇವರು ಮಾಡುವ ಸಮಾಜಮುಖೀ ಕೆಲಸಗಳು, ಭಾಗವಹಿಸುವ ಕಾರ್ಯಕ್ರಮಗಳು, ಇವರ ಪ್ರತಿನಿತ್ಯದ ಚಟುವಟಿಕೆ, ಇವರ ಹವ್ಯಾಸ ಅಭ್ಯಾಸಗಳು, ಅವರ ಬಳಿ ಇರುವ ದುಬಾರಿ ಬೆಲೆಯ ವಾಹನಗಳು, ಹೆಚ್ಚು ಮೌಲ್ಯದ ಆಸ್ತಿಗಳು ಇವರು ವಾಸಿಸುವ ಮನೆಗಳು ಇವರ ಪ್ರತಿನಿತ್ಯದ ಆಹಾರ ಶೈಲಿ ಕೊನೆಗೆ ಇವರು ಧರಿಸುವ ಬಟ್ಟೆ ಜ್ಯುವೆಲರಿ ಚಪ್ಪಲಿ ಹೀಗೆ ಎಲ್ಲ ವಿಷಯವೂ ಕೂಡ ಜನರ ಚರ್ಚೆಗೆ ಒಂದು ವಿಷಯವಾಗುತ್ತದೆ. ಈ ರೀತಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವುದು ನಟಿ ರಾಧಿಕಾ ಪಂಡಿತ್ ಧರಿಸುವ ಬಟ್ಟೆಗಳ ಬಗ್ಗೆ. ನಟಿ ರಾಧಿಕಾ ಪಂಡಿತ್ ಅವರು ಸ್ಯಾಂಡಲ್ವುಡ್ನ ನಂಬರ್ ಒನ್ ಹೀರೋಯಿನ್ ಆಗಿ ಮಿಂಚುತ್ತಿದ್ದರು. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಇವರು ಮೊಗ್ಗಿನ ಮನಸ್ಸು ಎನ್ನುವ ಸಿನಿಮಾದ ಮೂಲಕ ಸಿನಿಮಾ ಲೋಕವನ್ನು ಪ್ರವೇಶ ಮಾಡಿ ನಂತರ ಚಂದನವನದ ಭರವಸೆಯ ನಾಯಕಿ ಎನಿಸಿಕೊಂಡರು.

ನಟಿ ರಾಧಿಕಾ ಪಂಡಿತ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಾಕಿಂಗ್ ಸ್ಟಾರ್ ಯಶ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೇರಿದಂತೆ ಹಲವಾರು ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಮಿಂಚಿದ್ದಾರೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ವುಡ್ನ ಲಕ್ಕಿ ಡಾಲ್ ರಾಧಿಕಾ ಪಂಡಿತ್ ಜೋಡಿಯಂತೂ ತೆರೆಮೇಲೆ ಮೋಡಿ ಮಾಡಿದೆ. ಮೊಗ್ಗಿನ ಮನಸ್ಸು, ಡ್ರಾಮಾ, ಸಂತು ಸ್ಟ್ರೈಟ್ ಫಾರ್ವರ್ಡ್, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ನಾಲ್ಕು ಸಿನಿಮಾಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿರುವ ಇವರು ನಿಜ ಜೀವನದಲ್ಲೂ ಸಹ ದಂಪತಿಗಳಾಗಿ ಸಂತೋಷವಾಗಿ ಜೀವನ ನಡೆಸುತ್ತಿರುತ್ತಾರೆ. ಈ ಮುದ್ದಾದ ಜೋಡಿಗೆ ಅಥರ್ವ ಮತ್ತು ಐರಾ ಎನ್ನುವ ಎರಡು ಮುದ್ದಾದ ಮಕ್ಕಳಿವೆ. ಮದುವೆಯಾದ ಬಳಿಕ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ನಟಿ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಫಾಲವರ್ಸ್ ಇದ್ದಾರೆ. ಇದರ ಜೊತೆಗೆ ಅಭಿಮಾನಿಗಳು ಸಹ ಇವರ ಪ್ರತಿಯೊಂದು ಅಪ್ಡೇಟ್ಸ್ ಗಾಗಿ ಕಾಯುತ್ತಿರುತ್ತಾರೆ. ಸದ್ಯಕ್ಕೆ ಇವರ ಪತಿ ರಾಕಿಂಗ್ ಸ್ಟಾರ್ ಯಶ್ ಅವರು ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಮಕ್ಕಳ ಲಾಲನೆ-ಪಾಲನೆ ಸಂಪೂರ್ಣ ಜವಾಬ್ದಾರಿಯನ್ನು ರಾಧಿಕಾ ಪಂಡಿತ್ ಅವರೇ ಹೊತ್ತಿದ್ದಾರೆ.

ಯಶ್ ಅವರು ಕೂಡ ಸಮಯ ಸಿಕ್ಕಾಗಲೆಲ್ಲ ಕುಟುಂಬದ ಜೊತೆ ಕಾಲ ಕಳೆಯುತ್ತಾರೆ ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಜೊತೆ ಕಾಲ ಕಳೆಯುವ ಸಮಯದ ವೀಡಿಯೋಗಳನ್ನು, ಹಾಗೂ ಇವರು ಹೋಗುವ ಟ್ರಿಪ್ ಗಳಿಗೆ ಸಂಬಂಧಪಟ್ಟ ಫೋಟೋಗಳನ್ನು, ಮತ್ತೆ ಇವರು ಅಟೆಂಡ್ ಆಗುವ ಫಂಕ್ಷನ್ ಗಳ ಫೋಟೋಗಳನ್ನು ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇವರ ಈ ಫೋಟೋಗಳನ್ನು ನೋಡಿ ಜನ ಮೆಚ್ಚುಗೆ ನೀಡಿ ಕಮೆಂಟ್ ನೀಡುವುದರ ಜೊತೆಗೆ ಇವರ ಪ್ರತಿಯೊಂದು ಅಂಶವನ್ನು ಅಭಿಮಾನಿಗಳು ಹಾಗೂ ನೆಟ್ಟಿಗರು ಗಮನಿಸುತ್ತಿರುತ್ತಾರೆ. ಹೀಗಾಗಿ ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಧರಿಸುತ್ತಿರುವ ಬಟ್ಟೆಗಳ ಬಗ್ಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಚರ್ಚೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಅವರು ಧರಿಸುತ್ತಿರುವ ಬಟ್ಟೆಗಳ ಡಿಸೈನ್ ಹಾಗೂ ಅವುಗಳ ದುಬಾರಿ ಬೆಲೆಗಳ ವಿಷದಿಂದಾಗಿ ರಾಧಿಕಾ ಪಂಡಿತ್ ಅವರು ಸುದ್ದಿಯಾಗುತ್ತಿದ್ದಾರೆ ರಾಧಿಕಾ ಪಂಡಿತ್ ಅವರು ಮೊದಲಿನಿಂದಲೂ ತಾವು ಧರಿಸಿದ ಬಟ್ಟೆಯ ಬಗ್ಗೆ ತುಂಬಾ ಫ್ಯಾಷನ್ ಹೊಂದಿದ್ದಾರೆ ಸಿನಿಮಾದಲ್ಲಿಯೂ ಸಹ ಇವರ ಧರಿಸುವ ಬಟ್ಟೆಗಳು ತುಂಬಾ ಇಂಪ್ರೆಸ್ಸಿವ್ ಆಗಿರುತ್ತವೆ ನಿಜ ಜೀವನದಲ್ಲೂ ಸಹ ತುಂಬಾ ಆಕರ್ಷಕ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮಕ್ಕೆ ಹೋಗಿ ರಾಧಿಕಾ ಪಂಡಿತ್ ಅವರು ತೆಗೆಸಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದವು. ಈ ಫೋಟೋಗಳಲ್ಲಿ ರಾಧಿಕಾ ಪಂಡಿತ್ ಅವರು ಧರಿಸಿದ್ದ ಹಸಿರು ಬಣ್ಣದ ಗೌನ್ ತುಂಬಾ ಸೀದಾ ಸಾದವಾಗಿ ಕಾಣುತ್ತಿತ್ತು. ಆದರೆ ಆ ಬಟ್ಟೆಯ ಮೌಲ್ಯವು 19999 ರೂಗಳು ಆಗಿತ್ತು ಈ ಬಟ್ಟೆಗೆ ಇಷ್ಟೊಂದು ಬೆಲೆ ಬಾಳಲು ಕಾರಣ ಆ ರೀತಿ ಡಿಸೈನ್ ಮಾಡಿಸಿದ್ದರಿಂದ ಬಾಲಿವುಡ್‌ ನಾ ಖ್ಯಾತ ಡಿಸೈನರ್ ಆದ ಮಸಾಪ ಗುಪ್ತಾ ಅವರು ಈ ಬಟ್ಟೆಯನ್ನು ಡಿಸೈನ್ ಮಾಡಿದ್ದರು ಮಾಲ್ಡೀವ್ಸ್ ಗೆ ಹೋಗಿ ಮಕ್ಕಳೊಂದಿಗೆ ರಜಾ ದಿನಗಳನ್ನು ಸಂತೋಷದಿಂದ ಕಳೆದ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಆ ಫೋಟೋಗಳನ್ನು ಕೂಡ ಅವರು ಧರಿಸಿದ್ದ ಬಟ್ಟೆ ಪ್ರೀಟ್ ಚಾರ್ಟರ್ ಲಾಂಗ್ ಬೆಲೆ 13250 ಆಗಿತ್ತು ಮತ್ತು ಇದೆಲ್ಲಕ್ಕಿಂತ ಹೆಚ್ಚಾಗಿ ಕೆಜಿಎಫ್ ಟೂ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಅವರ ಧರಿಸಿದ ಬಟ್ಟೆಯು ಎಲ್ಲರ ಗಮನ ಸೆಳೆದಿತ್ತು ಆ ಬಟ್ಟೆಯ ಮೌಲ್ಯ ಬರೋಬ್ಬರಿ 31 ಸಾವಿರ ರೂಪಾಯಿಗಳು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.

ಎಲ್ಲರೂ ಮದುವೆ ಆಗುವುದಕ್ಕೂ ಕೋಟಿ ಕೋಟಿ ಹಣ ಖರ್ಚು ಮಾಡುತ್ತಾರೆ, ಆದರೆ ಮದುವೆ ಆಗುವುದಕ್ಕೂ ಕೂಡ ಸಂಭಾವನೆ ಪಡೆದ ಮೊದಲ ಸ್ಟಾರ್ ದಂಪತಿ ನಯನತಾರಾ ಮತ್ತು ವಿಜ್ಞೇಶ್ ಶಿವನ್

ಮದುವೆ ಮಾಡಿ ನೋಡು ಮನೆ ಕಟ್ಟಿನೋಡು ಎನ್ನುವ ಗಾದೆ ಮಾತೇ ಇದೆ ಯಾಕೆಂದರೆ ಈಗಿನ ಕಾಲದಲ್ಲಿ ಬೇಕಾದರೆ ಒಂದು ಮನೆಯನ್ನು ಖರೀದಿಸಬಹುದು ಆದರೆ ಒಂದು ಮದುವೆಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ತುಂಬಾ ಜವಾಬ್ದಾರಿಯ ಕೆಲಸವಾಗಿದೆ. ನಮ್ಮ ಹಿರಿಯರು ಹಿಂದೆ ಹೇಳಿರುವ ಗಾದೆಯಂತೆ ಒಂದು ಮದುವೆಯನ್ನು ಮಾಡಲು ಹಲವಾರು ವಿಘ್ನಗಳು ಎದುರಾಗುತ್ತಲೇ ಇರುತ್ತವೆ. ಮದುವೆಯೆನ್ನುವುದು ಎರಡು ದಿನ ನಡೆದರು ಅದರ ಹಿಂದಿನ ತಯಾರಿ ತಿಂಗಳುಗಳ ಹಿಂದೆಯೇ ಶುರುವಾಗಿರುತ್ತದೆ. ಬಡವರಾಗಲಿ ಶ್ರೀಮಂತರೆ ಆಗಲೇ ಸಂಪ್ರದಾಯಬದ್ಧವಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಮಾಡಬೇಕು ಎಂದರೆ ಅದರ ಹಿಂದೆ ಸಾಕಷ್ಟು ಶ್ರಮ ಬಿದ್ದಿರುತ್ತದೆ. ಕೆಲವೊಮ್ಮೆ ಈ ಮದುವೆ ಮನೆಯ ಖರ್ಚು ಹಾಗೂ ಕೆಲಸಗಳು ಮದುವೆ ನಿಶ್ಚಯವಾದ ದಿನದಿಂದ ಹಲವು ದಿನಗಳ ಹಿಂದೆ ಶುರುವಾಗಿ ಒಮ್ಮೊಮ್ಮೆ ಮದುವೆ ಮುಗಿದರೂ ಕೂಡ ಮುಗಿದೇ ಇರುವುದಿಲ್ಲ. ಒಂದು ಮದುವೆ ಮಾಡಬೇಕು ಎಂದರೆ ಹಿಂದೆಲ್ಲ ಅದು ಸಂಪೂರ್ಣವಾಗಿ ಹೆಣ್ಣಿನ ಮನೆಯ ಜವಾಬ್ದಾರಿಯಾಗಿತ್ತು. ಆದರೆ ಕಾಲ ಬದಲಾದಂತೆ ಈಗ ಎರಡು ಕಡೆಯವರು ಜವಾಬ್ದಾರಿ ಹಾಗು ಖರ್ಚು ವೆಚ್ಚವನ್ನು ಸಮಾನವಾಗಿ ಹಂಚಿಕೊಳ್ಳುತ್ತಿದ್ದಾರೆ.

ಆದರೆ ಮದುವೆ ಮನೆ ಎಂದ ಮೇಲೆ ಅದಕ್ಕೆ ಸಾಕಷ್ಟು ಖರ್ಚು ಗಳಿರುತ್ತದೆ. ವಧು-ವರರ ವಸ್ತ್ರ ಒಡವೆ, ಮೇಕಪ್, ಮದುವೆ ಮನೆ ಮತ್ತು ಮಂಟಪದ ಅಲಂಕಾರ, ನೆಂಟರು ಹಾಗೂ ಬಂಧುಗಳು ಗಿಫ್ಟ್ ಗಳ ಬಗ್ಗೆ ಯೋಚನೆ, ಹೂವು ಹಣ್ಣು, ಮದುವೆ ಮನೆ ಊಟ, ಫೋಟೋ ಶೂಟ್, ವಿಡಿಯೋಸ್, ಡೆಕೋರೇಷನ್, ಶಾಮಿಯಾನ, ಬಸ್ಸು ಕಾರುಗಳು ಬುಕಿಂಗ್, ಮದುವೆ ಹಾಲ್ ಗಳ ರೆಂಟ್ ಹೀಗೆ ಈ ಪಟ್ಟಿ ಮುಗಿಯುವುದೇ ಇಲ್ಲ. ಒಂದು ಸಾಮಾನ್ಯ ಕುಟುಂಬದ ಮದುವೆ ಮಾಡಬೇಕು ಎಂದರೆ ಈಗಿನ ಕಾಲದಲ್ಲಿ ಕನಿಷ್ಠ ಎಂದರೆ ಹತ್ತರಿಂದ ಹದಿನೈದು ಲಕ್ಷ ರೂಗಳು ಆದರೂ ಖರ್ಚು ಇದ್ದೇ ಇರುತ್ತದೆ. ಇನ್ನು ಸೆಲೆಬ್ರೆಟಿಗಳ ವಿಚಾರಕ್ಕೆ ಬರುವುದಾದರೆ ಅವರು ಅವರ ವಿವಾಹವನ್ನು ಮತ್ತಷ್ಟು ಗ್ರಾಂಡ್ ಆಗಿ ಸೆಲಬ್ರೇಟ್ ಮಾಡುವುದರಿಂದ ಇದರ ನೂರರಷ್ಟು ಖರ್ಚು ಖಂಡಿತವಾಗಿ ಇರುತ್ತದೆ. ಇನ್ನು ಮುಂದುವರಿದು ಈಗಿನ ಹಲವಾರು ಸೆಲೆಬ್ರಿಟಿಗಳು ವಿದೇಶಕ್ಕೆ ಹೋಗಿ ವಿವಾಹವಾಗುತ್ತಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಫೇಮಸ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಜೋಡಿ ದೂರದ ದೇಶಕ್ಕೆ ವಿವಾಹವಾಗಿತ್ತು ಹಾಗೆ ಬಾಲಿವುಡ್ ಸ್ಟಾರ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕೂಡ ಇದೇ ರೀತಿ ಮಾಡಿದ್ದರು.

 

ಇನ್ನು ಕೆಲವು ಜೋಡಿಗಳು ವಿಶೇಷವಾಗಿ ಸೆಟ್ ಹಾಕಿಸಿಕೊಳ್ಳುವ ಮೂಲಕ ತಾವಿರುವಲ್ಲಿಯೇ ಒಂದು ಹೊಸ ಪ್ರಪಂಚವನ್ನು ಸೃಷ್ಟಿ ಮಾಡಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಸೆಲೆಬ್ರಿಟಿ ಪಾಲಿಗಂತೂ ಮದುವೆ ಅನ್ನುವುದು ತಮ್ಮ ಅದ್ದೂರಿ ತನದ ಪ್ರದರ್ಶನವಿರುತ್ತದೆ. ಎಲ್ಲೋ ಕೆಲವರು ಮಾತ್ರ ಸರಳವಾಗಿ ಅಥವಾ ರಹಸ್ಯವಾಗಿ ಮದುವೆಯಾಗಿ ಸುದ್ದಿಯಾಗುತ್ತಾರೆ. ಒಟ್ಟಿನಲ್ಲಿ ಹೇಗೆ ಮದುವೆಯಾದರು ಕೂಡ ಮದುವೆಯ ಖರ್ಚು ಎನ್ನುವುದು ಎಂದಿಗೂ ಕೂಡ ಒಂದು ಭಾರವಾದ ವಿಷಯವೇ ಸರಿ. ಅದರಲ್ಲೂ ಸೆಲೆಬ್ರಿಟಿ ಮದುವೆಗಳಲ್ಲಿ ಹಣದ ದುಂದುವೆಚ್ಚವೇ ಹರಿದು ಹೋಗಿರುತ್ತದೆ. ಅವರ ಒಂದು ದಿನದ ಮದುವೆ ಖರ್ಚು ಹತ್ತಾರು ಕೋಟಿಯನ್ನು ದಾಟಿ ಹೋಗಿರುತ್ತದೆ. ಆದರೆ ಇತ್ತೀಚೆಗೆ ಮದುವೆಯಾದ ಸೆಲೆಬ್ರಿಟಿ ಜೋಡಿ ಒಂದು ಮದುವೆಗೆ ಖರ್ಚು ಮಾಡುವ ಬದಲು ತಮ್ಮ ಮದುವೆಯಿಂದ ಹಣವನ್ನು ಗಳಿಸಿದ್ದಾರೆ. ಇದು ಬೇರೆ ಯಾರು ಅಲ್ಲ ಕಳೆದ ವಾರ ಜೂನ್ 9ರಂದು ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ವಿವಾಹವಾದ ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ಡೈರೆಕ್ಟರ್ ವಿಜ್ಞೇಶ್ ಶಿವನ್ ಅವರ ಜೋಡಿ.

ಡೈರೆಕ್ಟರ್ ವಿಜ್ಞೇಶ್ ಶಿವನ್ ಮತ್ತು ನಯನತಾರ ವಿವಾಹವಾಗುತ್ತಿದ್ದಾರೆ ಎಂದು ಸುದ್ದಿಯಾದ ಕೂಡಲೇ ಈ ಜೋಡಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಷಯಗಳು ಹರಿದಾಡುತ್ತಿದ್ದವು. ಪ್ರತಿದಿನವೂ ಕೂಡ ಈ ಜೋಡಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀತಿಯ ಚರ್ಚೆ ನಡೆಯುತ್ತಲೇ ಇತ್ತು. ಇವರುಗಳ ಪಾಸ್ಟ್ ಲೈಫ್ ಮತ್ತು ಇವರುಗಳ ಸಿನಿಮಾ ಜರ್ನಿ ಹಾಗೂ ಇವರಿಬ್ಬರು ಒಟ್ಟಿಗೆ ಲಿವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವುದು ಮತ್ತು ಇವರಿಬ್ಬರಿಗೂ ಆಗಿರುವ ಲವ್ ಬ್ರೇಕಪ್ ಗಳು ಇನ್ನೂ ಹತ್ತು ಹಲವಾರು ವಿಷಯಗಳ ಬಗ್ಗೆ ದಿನನಿತ್ಯವೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿದ್ದವು. ಮತ್ತು ಇವರಿಬ್ಬರು ಈಗ ವಿವಾಹವಾಗುವ ನಿರ್ಧಾರವನ್ನು ಮಾಡಿದ ಮೇಲೆ ಸ್ವತಃ ಅವರೇ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ದಿನಕ್ಕೊಂದು ವಿಷಯವನ್ನು ಅವರ ಮದುವೆಗೆ ಸಂಬಂಧಪಟ್ಟ ಹಾಗೆ ಶೇರ್ ಮಾಡುತ್ತಿದ್ದರು ಮದುವೆಯ ಬಗ್ಗೆ ಅಭಿಮಾನಿಗಳು ಕೂಡ ಸಾಕಷ್ಟು ಕುತೂಹಲ ಹೊಂದಿದ್ದರು.

ಇಬ್ಬರು ಸ್ಟಾರ್ ಜೋಡಿ ಆದ್ದರಿಂದ ಇವರಿಬ್ಬರ ಅದ್ದೂರಿಯ ಮದುವೆಗೆ ಸಾಕಷ್ಟು ಹಣ ಖರ್ಚಾಗಿರುತ್ತದೆ ಎನ್ನುವುದು ಎಲ್ಲರ ಊಹೆ ಆದರೆ ಇವರ ವಿವಾಹಕ್ಕೆ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ ಇವರ ವಿವಾಹದ ಸಂಪೂರ್ಣ ಜವಾಬ್ದಾರಿಯನ್ನು ನೆಟ್ಲಿಫಿಕ್ಸ್ ಸಂಸ್ಥೆ ಹೊತ್ತಿತ್ತು. ಕಾರಣ ಇವರಿಬ್ಬರ ವಿವಾಹದ ವೀಡಿಯೋ ಹಕ್ಕನ್ನು ಈ ಸಂಸ್ಥೆಯ ಹೊಂದಿರುವುದರಿಂದ ಇವರ ವಿವಾಹ ಸಂಭ್ರಮದ ಸುಂದರ ಕ್ಷಣಗಳು ನೆಟ್ಲಿಫಿಕ್ಸ್ ನಲ್ಲಿ ಪ್ರಸಾರವಾಗಲಿದೆ. ಈ ರೀತಿ ಮದುವೆಯಾಗುತ್ತಿರುವ ಮೊದಲನೇ ಜೋಡಿ ಇವರೇ ಆಗಿದ್ದಾರೆ ಮಹಾಬಲಿಪುರಂನ ಐಷಾರಾಮಿ ರೆಸಾರ್ಟ್ ನಲ್ಲಿ ವಿವಾಹ ಅದ್ದೂರಿಯಾಗಿ ಜರುಗಿತ್ತು. ಮದುವೆಗೆ ಬಂದಿದ್ದ ಸೆಲೆಬ್ರಿಟಿಗಳ ಊಟ ಮತ್ತು ರೂಮಿನ ವ್ಯವಸ್ಥೆ ಸೇರಿದಂತೆ ಸಂಪೂರ್ಣ ಶವನ್ನು ಈ ಸಂಸ್ಥೆಯ ಭರಿಸಿದ್ದು ಜೊತೆಗೆ ಈ ಜೋಡಿಗೆ 25 ಕೋಟಿಯನ್ನು ಕೂಡ ನೀಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿ ಇಷ್ಟ ಆದರೆ ಶೇರ್ & ಲೈಕ್ ಮಾಡಿ.