Home Blog Page 88

ದೇವರಿಗೆ ಹೂ ಅರ್ಪಿಸುವ ಮುನ್ನ ಈ ವಿಷಯಗಳನ್ನು ತಪ್ಪದೆ ತಿಳಿದುಕೊಂಡಿರಿ.!

 

* ಮನೆ ಒಳಗಡೆ ಇರುವ ಫೋಟೋಗಳಿಗೆ ಹಾಗೂ ವಿಗ್ರಹಗಳಿಗೆ ಚೆಂಡು ಹೂವನ್ನು ಬಳಸಬೇಡಿ. ಇದರಿಂದ ಮನೆಯಲ್ಲಿ ವಿನಾಕಾರಣ ಕ’ಲ’ಹ, ಜ’ಗ’ಳ’ಗಳು ಹೆಚ್ಚಾಗುತ್ತವೆ. ಮನೆ ನೆಮ್ಮದಿ ಹಾಳಾಗುತ್ತದೆ . ಆದರೆ ಮನೆಯ ಹೊಸಲಿಗೆ ಚೆಂಡು ಹೂವಿನ ಹಾರ ಹಾಕುವುದರಿಂದ ನೆಗೆಟಿವ್ ಎನರ್ಜಿ ಮನೆ ಒಳಗೆ ಪ್ರವೇಶಿಸದಂತೆ ತಡೆಯುತ್ತದೆ. ಅಲಂಕಾರಕ್ಕೆ ನೀವು ಚೆಂಡು ಹೂವು ಬೆಳೆಸಬಹುದು ಆದರೆ ಮನೆ ಒಳಗೆ ಮಾಡುವ ಪೂಜೆಗಳಿಗೆ ಬಳಸಬೇಡಿ.

ಹೂವುಗಳು ಜೀವನಕ್ಕೆ ಬಹಳ ಮುಖ್ಯವಾದ ಪಾಠವನ್ನು ತಿಳಿಸುತ್ತವೆ. ಒಂದೇ ದಿನ ಬದುಕಿದ್ದರು ಅರಳಿರುವ ಅಷ್ಟು ಹೊತ್ತು ಸುಗಂಧವನ್ನು ಸೂಸಿ ಎಲ್ಲರನ್ನು ಸೆಳೆಯುತ್ತಾ ನಗುನಗುತ ತಮ್ಮ ಬದುಕು ಮುಗಿಸುತ್ತವೆ. ಅರಳುವ ಯಾವ ಹೂವಿಗೂ ಕೂಡ ತನ್ನ ಸ್ಥಾನ ಯಾವುದು ಎಂದು ಗೊತ್ತಿರುವುದಿಲ್ಲ. ತಾನು ಯಾರ ಮುಡಿ ಸೇರಿದ್ದರೂ, ಅಲಂಕಾರಕ್ಕೆ ಬಳಕೆ ಆದರೂ ಅಥವಾ ಸಮಾಧಿ ಮೇಲೆ ಇದ್ದರೂ ಪುಣ್ಯಫಲದಿಂದ ಭಗವಂತನ ಪಾದ ಸೇರಿದರೂ ನಗುತ್ತಾ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುತ್ತದೆ.

ಆದರೆ ಇದರಲ್ಲಿ ಭಗವಂತನಿಗೆ ನಾವು ಹೂವು ಅರ್ಪಿಸುವ ವಿಚಾರದಲ್ಲಿ ಮಾತ್ರ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು ಯಾಕೆಂದರೆ ಕೆಲವು ದೇವರುಗಳಿಗೆ ಕೆಲವು ರೀತಿಯ ಹೂವುಗಳು ನಿಷಿದ್ಧ ಮತ್ತು ದೇವರಿಗೆ ಅರ್ಪಿಸುವ ಹೂಗಳು ಹೀಗೆ ಇರಬೇಕು ಎನ್ನುವ ನಿಯಮ ಇದೆ ಆ ರೀತಿ ಇದ್ದಾಗ ಮಾತ್ರ ನಮಗೆ ಆ ಪೂಜೆಯ ಫಲ ಸಿಗುವುದು ಅಂತಹ ಕೆಲ ಮುಖ್ಯ ವಿಷಯವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

* ಗಣಪತಿಗೆ ಹಾಗೂ ಶಿವಲಿಂಗಕ್ಕೆ ಯಾವುದೇ ಕಾರಣಕ್ಕೂ ತುಳಸಿ ಅರ್ಪಿಸಬಾರದು.
* ಬಾಡಿಹೋದ ಹೂವುಗಳನ್ನು ದೇವರ ಪೂಜೆಗೆ ಬಳಸಬಾರದು
* ಸ್ನಾನ ಮಾಡದೆ ಹೂವಿನ ಗಿಡಗಳಲ್ಲಿ ಹೂವು ಕಿತ್ತುಕೊಂಡು ಬರಬಾರದು.
* ಹೊರಗಿನಿಂದ ಹೂವು ಖರೀದಿಸಿ ತಂದಾಗ ಅದಕ್ಕೆ ಮನೆಯಲ್ಲಿರುವ ಶುದ್ಧ ನೀರನ್ನು ಪ್ರೋಕ್ಷಣೆ ಮಾಡಿ ನಂತರ ದೇವರ ಪೂಜೆಗೆ ಬಳಸಬೇಕು

* ಕೆಟ್ಟ ವಾಸನೆಗಳು ಇರುವ ಹೂವುಗಳನ್ನು ಪೂಜೆಗೆ ಬಳಸಬಾರದು
* ಹೆಣ್ಣು ಮಕ್ಕಳು ತಿಂಗಳಾದಾಗ ಯಾವುದೇ ಹೂವುಗಳನ್ನು ಮುಟ್ಟಬಾರದು, ಅವರು ಕಟ್ಟಿರುವ ಹೂಗಳನ್ನು ದೇವರಿಗೆ ಮೂಡಿಸಬಾರದು
* ದೇವರಿಗೆ ಮೂಡಿಸಿದ ಹೂಗಳನ್ನು ತೆಗೆದ ಮೇಲೆ ಎಲ್ಲಿಂದರಲ್ಲಿ ಬಿಸಾಕಬಾರದು ಅದನ್ನು ನೀರಿನಲ್ಲಿ ಅದ್ದಿ ಗಿಡಗಳ ಬುಡಕ್ಕೆ ಹಾಕಬೇಕು ಯಾರು ಅದನ್ನು ತುಳಿಯಬಾರದು.

* ಕೆಲವು ಹೂಗಳು ಪೂಜೆಗೆ ನಿಷಿದ್ಧ ಎಂದು ಹೇಳಲಾಗಿದೆ ಅಂತಹವುಗಳನ್ನು ಪೂಜೆಗೆ ಬಳಸಬಾರದು. ಇದು ಹಿರಿಯರಿಗೆ ಚೆನ್ನಾಗಿ ತಿಳಿದಿರುತ್ತದೆ ಅವರು ಹೇಳಿದರು ನೋಡುವುದಕ್ಕೆ ಚೆನ್ನಾಗಿದೆ ಎಂದು ಅಂತಹ ಹೂಗಳನ್ನು ಪೂಜೆಗೆ ಬಳಸಬೇಡಿ ಇದರಿಂದ ನಿಮಗೆ ದೋಷ ಉಂಟಾಗುತ್ತದೆ.

* ಹೆಣ್ಣು ಮಕ್ಕಳು ದೇವರಿಗೆ ಪೂಜೆ ಮಾಡುವಾಗ ಕೂದಲನ್ನು ಕೆದರಿಕೊಂಡಿರಬಾರದು. ಕೆದರಿಕೊಂಡ ಕೂದಲಿನಿಂದ ನೀರು ಹೂವಿನ ಮೇಲೆ ಬಿದ್ದರೆ ಅಥವಾ ಕೂದಲುಗಳು ಹೂವಿನ ಮೇಲೆ ಬಿದ್ದರೆ ಅಂತಹ ಹೂವುಗಳನ್ನು ಮತ್ತೆ ದೇವರಿಗೆ ಮುಡಿಸಬಾರದು.

* ದೇವರ ಫೋಟೋ ಅಥವಾ ವಿಗ್ರಹಗಳಿಗೆ ಹಾಕಿದ್ದ ಹೂವನ್ನು ನಂತರ ಪ್ರಸಾದವೆಂದು ಮುಡಿದುಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ನೀವು ಮುಡಿದು ನೋಡಿರುವ, ತಲೆಗೆ ಸೋಕಿಸಿರುವ ಹೂವುಗಳನ್ನು ನಂತರ ದೇವರಿಗೆ ಹಾಕಬೇಡಿ ಅದಕ್ಕಿಂತ ಪಾಪ ಮತ್ತೊಂದಿಲ್ಲ

* ಸಾಧ್ಯವಷ್ಟು ದೇವರಿಗೆ ಪೂಜೆ ಮಾಡುವುದಕ್ಕೆ ಬೇಕಾದಷ್ಟು ಹೂವುಗಳನ್ನು ನೀವೇ ನಿಮ್ಮ ಕೈ ತೋಟದಲ್ಲಿ ಮನೆಯ ಪುಟ್ಟ ಪಾಠಗಳಲ್ಲಿ ಬೆಳೆದರೆ ಬಹಳ ಪುಣ್ಯ ಫಲ ಸಿಗುತ್ತದೆ.
* ಹೂವು ಖರೀದಿಸಲು ಹೋದಾಗ ವ್ಯಾಪಾರ ಮಾಡಿ ನಂತರ ಬೇಡ ಎಂದು ಎಂದಿಗೂ ಬರಬೇಡಿ

* ನಿಮ್ಮ ಮನೆಯ ಮುಂದೆ ಹೂವು ಮಾರುವವರು ಬಂದು ಹೂ ಬೇಕಾ ಎಂದು ಕೇಳಿದಾಗ ಬೇಡ ಎಂದು ಹೇಳಬೇಡಿ ಬೇಕಿದ್ದರೆ ಖರೀದಿಸಿ, ಇಲ್ಲವಾದರೆ ನಾಳೆ ಖರೀದಿಸುತ್ತೇನೆ ಎಂದು ಹೇಳಿ ಕಳುಹಿಸಿ ಹೂವನ್ನು ಬೇಡ ಎಂದು ಹೇಳಬಾರದು.

ಕಲಿಯುಗದ ನಂತರ ಬರುವ ಯುಗ ಹೇಗಿರುತ್ತೆ ಗೊತ್ತಾ.? ಸತ್ಯಯುಗ ಆರಂಭವಾಗಿದೆಯಾ.? ನಾವು ನೀವು ಸತ್ಯಯುಗ ನೋಡಬಹುದಾ.?.

 

ಈ ಬ್ರಹ್ಮಾಂಡ ಎಂಬುದು ಎಷ್ಟೊಂದು ಕುತೂಹಲ ಉಳಿಸಿಕೊಂಡಿದೆ ಎಂದರೆ ಮನುಷ್ಯ ತನ್ನ ಬುದ್ಧಿಶಕ್ತಿಯಿಂದ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅದರಲ್ಲಿ ಇನ್ನೂ ಸಹ ಮಾನವನ ದೃಷ್ಟಿಗೆ ಗೋಚರವಾಗದ, ಬುದ್ಧಿಶಕ್ತಿಗೆ ತಿಳಿಯದ ಎಷ್ಟೋ ಸತ್ಯಗಳು ಬ್ರಹ್ಮಾಂಡದಲ್ಲಿ ಅಡಗಿದೆ. ಆದರೆ ಇದನ್ನೆಲ್ಲಾ ಭೇದಿಸುವ ಸುಳಿವು ಪುರಾಣಗಳಲ್ಲಿ ಇದೆ ಅಂದರೆ ತಪ್ಪಾಗಲಾರದು.

ಇತ್ತೀಚೆಗೆ ಯಾವುದೇ ಸಂಶೋಧನೆ ಮಾಡಿದರು ಅದರ ಬುನಾದಿ ಆಗಿನ ಕಾಲದಲ್ಲಿ ಮಹರ್ಷಿಗಳು ಋಷಿಮುನಿಗಳು ಬರೆದಿಟ್ಟು ಹೋಗಿರುವ ಗ್ರಂಥಗಳ ಸುಳಿವೇ ಆಗಿದೆ. ಈ ರೀತಿ ಮಹಾಗ್ರಂಥಗಳಲ್ಲಿ ಕಾಲದ ಬಗ್ಗೆಯೂ ಉಲ್ಲೇಖಿಸಲಾಗಿದೆ. ಇದರ ಕುರಿತ ಕುತೂಹಲಕಾರಿ ವಿಷಯಗಳಲ್ಲಿ ಒಂದಾದ ಕಲ್ಕಿ ಅವತಾರ ಹಾಗೂ ಸತ್ಯ ಯುಗದ ಬಗ್ಗೆ ಈ ಅಂಕಣದಲ್ಲಿ ನಮ್ಮ ಜ್ಞಾನಕ್ಕೆ ತಿಳಿದಿರುವ ಸ್ವಲ್ಪ ಮಾಹಿತಿಯನ್ನು ತಿಳಿಸುತ್ತಿದ್ದೇವೆ

ಈ ಬ್ರಹ್ಮಾಂಡದಲ್ಲಿ ಪ್ರತಿಯೊಂದು ಕೂಡ ಚಲನೆಯಲ್ಲಿ ಇರುತ್ತದೆ. ಭೂಮಿ ಸೂರ್ಯನ ಸುತ್ತ ಸುತ್ತಿದರೆ, ಸೂರ್ಯ ಗೆಲಕ್ಸಿಯ ಸುತ್ತ ಆ ಗ್ಯಾಲಕ್ಸಿಯು ಬ್ರಹ್ಮಾಂಡದ ಇನ್ಯಾವುದೋ ಕಾಯದ ಸುತ್ತಾ ಸುತ್ತುತ್ತಿರುತ್ತದೆ. ನಮ್ಮ ದೇಹದಲ್ಲೂ ಕೂಡ ರಕ್ತ ಚಲನೆಯಲ್ಲೇ ಇರುತ್ತದೆ, ಉಸಿರಿರುವತನಕ್ಕೂ ಉಚ್ವಾಸ, ನಿಶ್ವಾಸ ನಿರಂತರವಾಗಿ ನಡೆಯುತ್ತಿರಬೇಕು.

ಅಣುವಿನ ಒಳಗಿನ ನ್ಯುಟ್ರಾನ್, ಪ್ರೋಟಾನ್, ಎಲೆಕ್ಟ್ರಾನ್ಗಳು ಕೂಡ ಸತತ ಚಲನೆಯಲ್ಲಿ ಇರುತ್ತವೆ. ಹೀಗೆ ಕಾಲಚಕ್ರ ಕೂಡ ಚಲನೆಯಲ್ಲಿರುತ್ತದೆ ಸಮಯ ಉರುಳುತ್ತಲೇ ಇರುತ್ತದೆ. ಹೇಗೆ ಸೆಕೆಂಡ್, ನಿಮಿಷ ‌, ಗಂಟೆ, ದಿನ, ಪಕ್ಷ, ತಿಂಗಳು, ವರ್ಷ ಸಂವತ್ಸರ, ಮನ್ವಂತರ ಹೀಗೆ ಹಲವು ಮನ್ವಂತರಗಳು ಕಳೆದ ನಂತರ ಹೊಸ ಯುಗ.

ಆ ಪ್ರಕಾರವಾಗಿ ಈಗ ನಾವು ಸತ್ಯಯುಗ, ತೇತ್ರಾಯುಗ, ದ್ವಾಪರ ಯುಗ ಕಳೆದು ಕಲಿಯುಗದಲ್ಲಿ ಇದ್ದೇವೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಮರಣ ಹೊಂದಿದ ನಂತರ ಕಲಿಯುಗ ಶುರುವಾಯಿತು. ಕಲಿಯುಗದಲ್ಲಿ ಏನೆಲ್ಲ ಆಗುತ್ತದೆ ಮನುಷ್ಯ ಯಾವ ರೀತಿ ಇರುತ್ತಾನೆ? ಯಾವ ರೀತಿ ಜೀವಿಸುತ್ತಾನೆ? ಎನ್ನುವುದನ್ನು ಶ್ರೀ ಕೃಷ್ಣ ಪರಮಾತ್ಮ ಆಗಲೇ ಅರ್ಜುನನಿಗೆ ತಿಳಿಸಿದ್ದರು.

ಕಲಿಯುಗದಲ್ಲಿ ಧರ್ಮ ಒಂದು ಕಾಲಿದಲ್ಲಿ ನಿಂತಿರುತ್ತದೆ, ಎಲ್ಲಿಡೆ ಅ’ನ್ಯಾ’ಯ, ಅಕ್ರಮ, ಅನಾಚಾರಗಳು ತಾಂಡವವಾಡುತ್ತವೆ. ಇದು ಮಿತಿಮೀರಿದಾಗ ಮತ್ತೆ ಧರ್ಮ ಸ್ಥಾಪನೆಗಾಗಿ ನಾನು ಕಲ್ಕಿ ಅವತಾರದಲ್ಲಿ ಬರುತ್ತೇನೆ ಎಂದು ಕೂಡ ಹೇಳಿದ್ದರು. ಆ ಪ್ರಕಾರವಾಗಿ ನಾವು ಪ್ರಪಂಚದಲ್ಲಿ ಇದುವರೆಗೂ ನೋಡಿರುವ ಅನಾಚಾರಗಳಲ್ಲ ಕಂಡರೆ ಕಲಿಯುಗ ಅಂತ್ಯಕ್ಕೆ ಬರುತ್ತಿದೆಯಾ ಎನಿಸುತ್ತದೆ.

21 ಡಿಸೆಂಬರ್, 2023 ಕ್ಕೆ ಪ್ರಳಯವಾಗಿ ಪ್ರಪಂಚ ನಾ’ಶವಾಗುತ್ತವೆ ಎನ್ನುವುದನ್ನು ಪ್ರಪಂಚದ 100ರಲ್ಲಿ 90% ಜನ ಬಲವಾಗಿ ನಂಬಿದ್ದರು. ಆ ರೀತಿ ಆಗದೆ ಇದ್ದರೂ ಈಗ ಆಗುತ್ತಿರುವ ಜಲಪ್ರಳಯ, ಭೂಕಂಪ ಯುದ್ಧಗಳನ್ನು ನೋಡುತ್ತಿದ್ದರೆ ಕಲಿಯುಗ ಅಂತ್ಯವಾಗುತ್ತಿದೆಯಾ ಎನಿಸುತ್ತದೆ. ಹಾಗಾದರೆ ಈ ಕಲಿಯುಗದ ಮುಗಿದ ಮೇಲೆ ಏನಾಗುತ್ತದೆ ಎನ್ನುವ ಕುತೂಹಲ ಇದರೊಂದಿಗೆ ಹುಟ್ಟುತ್ತದೆ. ಕಲಿಯುಗ ಅಂತ್ಯವಾದ ಮೇಲೆ ಮತ್ತೆ ಸತ್ಯಯುಗ ಆರಂಭವಾಗುತ್ತದೆ.

ಸತ್ಯಯುಗದಲ್ಲಿ ಧರ್ಮ ನಾಲ್ಕು ಕಾಲಿನಲ್ಲಿ ನಿಂತಿರುತ್ತದೆ, ಈ ಯುಗದಲ್ಲಿ ಮನುಷ್ಯನ ಜೀವಿತಾವಧಿ ಹೆಚ್ಚಿಗೆ ಇರುತ್ತದೆ ಹಾಗೂ ಆತನ ಎತ್ತರವು ಹೆಚ್ಚಿಗೆ ಇರುತ್ತದೆ. ಯಾವುದೇ ರೋಗ ರುಜಿನಗಳು ಇರುವುದಿಲ್ಲ, ಬಂದರೂ ದೇಹದ ರೋಗ ನಿರೋಧಕ ಶಕ್ತಿಯು ಅವರನ್ನು ರಕ್ಷಿಸುತ್ತದೆ, ಯಾವುದೇ ಕಾಯಿಲೆ ಕಸಾಯಿ ಇಲ್ಲದೆ ಜ’ಗ’ಳವಿಲ್ಲದೆ ಜನ ಪ್ರೀತಿಯಿಂದ ಅನ್ಯೋನ್ಯವಾಗಿ ಸಂತೋಷವಾಗಿ ಬದುಕುತ್ತಾರೆ.

ಜನ ಎಲ್ಲರೊಡನೆ ಬೆರೆತು ಪ್ರೀತಿಯಿಂದ ಬದುಕುತ್ತಾರೆ. ಪ್ರಾಣಿ ಪಕ್ಷಿ ಮರ ಗಿಡ ಎಲ್ಲವನ್ನು ಪ್ರೀತಿಸುತ್ತಾರೆ, ರಕ್ಷಿಸುತ್ತಾರೆ. ಗುರು ಹಿರಿಯರನ್ನು ಗೌರವಿಸುತ್ತಾರೆ, ಯಾರು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ, ಕೆಟ್ಟ ಶಬ್ದಗಳನ್ನು ಬಳಸುವುದಿಲ್ಲ. ಅನ್ನ ಆಹಾರಕ್ಕೆ ಕ’ಷ್ಟ ಇರುವುದಿಲ್ಲ. ಮನುಷ್ಯ ಕೃಷಿ ಮಾಡದಿದ್ದರೂ ಪ್ರಕೃತಿಯೇ ಹಣ್ಣು ಹಂಪಲನ್ನು ಬೆಳೆದು ಮನುಷ್ಯನಿಗೆ ಸಮೃದ್ಧಿ ಆಗುವಷ್ಟು ಕೊಡುತ್ತದೆ. ಕೇಳುತ್ತಿದ್ದರೆ ಇದೇ ಮೈ ರೋಮಾಂಚನಗೊಳಿಸುತ್ತದೆ, ಇದಕ್ಕಿಂತಲೂ ನೂರು ಪಟ್ಟು ಚೆನ್ನಾಗಿರುತ್ತದೆ ಆ ಸತ್ಯಯುಗ.

ಹಾಗಾದರೆ ನಾವೆಲ್ಲ ಆ ಸತ್ಯಯುಗ ನೋಡಬಹುದು ಎಂದರೆ ಯಾರು ಕಲಿಯುಗದಲ್ಲಿ ತಮಗೆಷ್ಟೇ ಕ’ಷ್ಟ ಬಂದರೂ ಧರ್ಮ ರಕ್ಷಣೆಗೆ ನಿಲ್ಲುತ್ತಾರೆ. ಹೊರಗೆ ಪ್ರಪಂಚ ಹೇಗಿದ್ದರೂ ತಾವು ಭಗವಂತನನ್ನು ಧ್ಯಾನಿಸುತ್ತಾ ನ್ಯಾಯಮಾರ್ಗದಲ್ಲಿ ಜೀವಿಸುತ್ತಾರೆ, ಯಾರು ಕಲಿಯುಗದಲ್ಲಿ ಸತ್ಯಯುಗದ ಮನುಷ್ಯರಂತೆ ಒಳ್ಳೆಯತನದಿಂದ ಬದುಕುತ್ತಾರೆ, ಎಲ್ಲರ ಮೇಲೆ ದಯೆ ಹೊಂದಿದ್ದಾರೆ, ಅಂತಹ ಜನರು ಸತ್ಯಯುಗ ಕಾಣಬಹುದಾಗಿದೆ.

ಇದೇ ರೀತಿ ಕಲಿಯುಗ ಅಂತ್ಯವಾಗುವ ಸತ್ಯಯುಗ ಆರಂಭವಾಗುವ ಮುನ್ನ ಮಧ್ಯೆ ಸ್ವಲ್ಪ ವರ್ಷ ಸುವರ್ಣ ಸಮಯ ಬರುತ್ತದೆ ಎಂದು ಕೂಡ ಶ್ರೀ ಕೃಷ್ಣ ತಿಳಿಸಿದ್ದರು. ಆ ಸಮಯದಲ್ಲಿ ದೇವರ ಮೇಲೆ ಭಕ್ತಿ ಹೆಚ್ಚಾಗುತ್ತದೆ, ಎಲ್ಲರೂ ದೇವತಾ ಕಾರ್ಯಗಳಲ್ಲಿ ತೊಡಗುತ್ತಾರೆ, ದೇವಸ್ಥಾನಗಳಿಗೆ ಹೆಚ್ಚು ಹೋಗುತ್ತಾರೆ ಅವರು ಅಂದುಕೊಂಡದ್ದನ್ನು ಪಡೆಯಬಹುದು ಮೂರು ಯುಗದಲ್ಲೂ ಪಡೆಯಲಾಗದ ಸೌಕರ್ಯಗಳನ್ನು ಆ ಕಾಲದವರು ಪಡುತ್ತಾರೆ ಎಂದು ತಿಳಿಸಿದ್ದಾರೆ.

ಸದ್ಯಕ್ಕೆ ನಾವು ಈಗ ಅಂತಹದೇ ಸುವರ್ಣ ಸಮಯದಲ್ಲಿ ಬದುಕುತ್ತೇವೆ ಎಂದು ಎನ್ನುವ ಭಾವನೆಯು ಒಮ್ಮೊಮ್ಮೆ ಬರುತ್ತದೆ. ಯಾಕೆಂದರೆ ಈಗ ನಾವು ವಿದೇಶದಲ್ಲಿ ಇದ್ದವರನ್ನು ಕೂಡ ವಿಡಿಯೋ ಕಾಲ್ ಮಾಡಿ ಮುಖ ನೋಡಿ ಮಾತನಾಡಬಹುದು, ಹೊಟ್ಟೆ ಹಸಿದಿದ್ದಾಗ ಆರ್ಡರ್ ಮಾಡಿ ಅರ್ಧ ಗಂಟೆಯಲ್ಲಿ ಮನೆ ಬಾಗಿಲಿಗೆ ಊಟ ತರಿಸಿಕೊಳ್ಳಬಹುದು, ಅಂಗೈಯಲ್ಲಿ ಮೊಬೈಲ್ ಹಿಡಿದು ಪ್ರಪಂಚದ ಯಾವುದೇ ಮೂಲೆಯ ಮಾಹಿತಿ ತಿಳಿದುಕೊಳ್ಳಬಹುದು,

ಆಕಾಶದ ಎತ್ತರಕ್ಕೆ ವಿಮಾನದಲ್ಲಿ ಹಾರಬಹುದು ಭೂಮಿ ಆಳಕ್ಕೂ ಇಳಿದು ನಮ್ಮ ಕುತೂಹಲ ತಣಿಸಿಕೊಳ್ಳಬಹುದು ಇಂತಹ ಸಮಯದಲ್ಲಿ ಬದುಕುತ್ತಿರುವ ನಾವು ಕೂಡ ಧನ್ಯರು. ಆದರೆ ಎಲ್ಲ ಕಾಲದಲ್ಲೂ ಧರ್ಮಪ್ರಜ್ಞೆ ಇರಬೇಕು. ನಮಗೆ ಯಾವುದೇ ಸವಲತ್ತು ಸಿಕ್ಕಿದರೂ ಅದನ್ನು ನಾವು ನ್ಯಾಯವಾಗಿ ಪಡೆಯಬೇಕು ಮತ್ತು ಅದನ್ನು ಒಳ್ಳೆಯ ಕಾರ್ಯಕ್ಕಾಗಿ ಬಳಸಬೇಕು.

ಅಕ್ಕಿ ಡಬ್ಬದಲ್ಲಿ ಈ ವಸ್ತುಗಳನ್ನು ಇಟ್ಟರೆ ಎಂದಿಗೂ ಕೂಡ ದಾರಿದ್ರ್ಯ ಬರುವುದಿಲ್ಲ, ಬಡತನ ನಿವಾರಣೆಗಾಗಿ ಈ ಉಪಾಯಗಳನ್ನು ಮಾಡಿ.!

 

ಹಣಕಾಸಿನ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಕೂಡ ಕುಂದು ಕೊರತೆ ಇದ್ದೇ ಇರುತ್ತದೆ. ಒಬ್ಬ ಬಡವನಿಗೆ ಆತನ ದಿನದ ಕೂಲಿ ಬಗ್ಗೆ ಚಿಂತೆ ಇದ್ದರೆ, ಶ್ರೀಮಂತನಿಗೂ ಕೂಡ ತನ್ನ ವ್ಯಾಪಾರ ವ್ಯವಹಾರ ಅಭಿವೃದ್ಧಿ ಪಡಿಸುವ ಬಗ್ಗೆ ಇನ್ನು ಹೆಚ್ಚಿನ ಶ್ರೀಮಂತನಾಗುವ ಬಗ್ಗೆ ಕನಸು ಇದ್ದೇ ಇರುತ್ತದೆ.

ಈ ರೀತಿ ಹಣಕಾಸಿನ ಬಗ್ಗೆ ಆಲೋಚನೆ ಮಾಡುವುದು ಮತ್ತು ಹೆಚ್ಚು ಹಣ ಪಡೆವ ಬಗ್ಗೆ ಗುರಿ ಇಟ್ಟುಕೊಳ್ಳುವುದು ತಪ್ಪೇ ಅಲ್ಲ. ಯಾಕೆಂದರೆ ಈ ಕಾಲದಲ್ಲಿ ಹಣದಿಂದಲೇ ಎಲ್ಲವೂ ನಡೆಯುತ್ತಿರುವುದು. ಆದರೆ ಈ ಹಣಕಾಸಿನ ಕೊರತೆ ಇದ್ದರೂ ಎಂದಿಗೂ ಮನೆಯಲ್ಲಿ ಆಹಾರಕ್ಕೆ ಕೊರತೆ ಇರಬಾರದು.

ನಮ್ಮ ಮನೆಯಲ್ಲಿ ಎಲ್ಲರೂ ಹೊಟ್ಟೆ ತುಂಬಾ ತಿನ್ನುವಷ್ಟು ಹಾಗೆ ನಮ್ಮ ಮನೆಗೆ ಬರುವ ಅತಿಥಿಗಳಿಗೂ ಮತ್ತು ಆಹಾರ ಅರಸಿ ಬರುವ ಅಸಹಾಯಕರಿಗೆ ಸಂತೃಪ್ತಿಯಾಗುವಷ್ಟು ಆಹಾರ ಕೊಡುವ ಸಂಪತ್ತು ಪ್ರತಿಯೊಬ್ಬರಿಗೂ ಇರಬೇಕು.

ಈ ರೀತಿ ಮನೆಯಲ್ಲಿ ಎಂದು ಆಹಾರ ಧಾನ್ಯಗಳ ಕೊರತೆ ಉಂಟಾಗಬಾರದು ಅನ್ನಕ್ಕೆ ಸಮಸ್ಯೆ ಬರಬಾರದು ಎಂದರೆ ತಾಯಿ ಅನ್ನಪೂರ್ಣೇಶ್ವರಿಯ ಕೃಪಾಕಟಾಕ್ಷ ಆ ಕುಟುಂಬದ ಮೇಲೆ ಇರಬೇಕು. ಹೀಗೆ ಅಮ್ಮನವರ ಆಶೀರ್ವಾದ ಸಿಗಬೇಕು ಎಂದರೆ ನಾವು ದಿನನಿತ್ಯದ ಜೀವನದಲ್ಲಿ ಕೆಲವು ಕ್ರಮಗಳನ್ನು ಅನುಸರಿಸಬೇಕು, ಎಂದು ಕೂಡ ಅವುಗಳಿಗೆ ತಪ್ಪಬಾರದು ಆಗ ಆ ಮನೆಯಲ್ಲಿ ಅನ್ನಕ್ಕೆ ಮತ್ತು ಹಣಕ್ಕೆ ಕೊರತೆ ಬರುವುದಿಲ್ಲ.

ಮುಖ್ಯವಾಗಿ ಅಡುಗೆಮನೆ ಯಾವಾಗಲೂ ಶುದ್ಧವಾಗಿರಬೇಕು, ಅಡುಗೆಮನೆಯಲ್ಲಿ ದವಸ ಧಾನ್ಯಗಳು ಪೂರ್ತಿಯಾಗಿ ಎಂದಿಗೂ ಖಾಲಿ ಆಗಬಾರದು. ಅದು ಸ್ವಲ್ಪ ಇರುವಾಗಲೇ ತಂದು ಇಟ್ಟುಕೊಳ್ಳಬೇಕು ಮುಖ್ಯವಾಗಿ ಅಕ್ಕಿ ಖಾಲಿ ಆಯಿತು ಎಂದು ಮನೆಯಲ್ಲಿ ಯಾರು ಹೇಳಲೇಬಾರದು ಮತ್ತು ಅಕ್ಕಿ ಡಬ್ಬವನ್ನು ಅಕ್ಕಿಯನ್ನು, ಅಡುಗೆ ಮಾಡುವಾಗ ಅಳತೆ ಮಾಡಲು ಬಳಸುವ ಲೋಟವನ್ನು ಕಾಲಿ ಇಡಬಾರದು ಮತ್ತು ಉಲ್ಟಾ ಇಡಬಾರದು.

ಆಹಾರವನ್ನು ವ್ಯರ್ಥ ಮಾಡಬಾರದು, ಊಟ ಮಾಡುವ ಮುನ್ನ ಅನ್ನಪೂರ್ಣೇಶ್ವರಿ ಗೆ ನಮಿಸಿ ಸೇವಿಸಬೇಕು, ಆಹಾರಕ್ಕೆ ಅವಮಾನ ಮಾಡಬಾರದು, ಎಂದಿಗೂ ಕೋಪದಲ್ಲಿ ಊಟ ಮಾಡಬಾರದು, ಊಟ ಮಾಡುವಾಗ ಜಗಳವಾಡಿಕೊಳ್ಳಬಾರದು, ಊಟ ಅರ್ಧ ಇರುವಾಗಲೇ ಎದ್ದು ಹೋಗಬಾರದು, ಈ ರೀತಿಯ ಭಯ ಭಕ್ತಿಯ ಕ್ರಮಗಳನ್ನು ಪಾಲಿಸುವುದರ ಜೊತೆಗೆ ಈಗ ನಾವು ಹೇಳುವ ಈ ಒಂದು ಉಪಾಯ ಮಾಡಿ ನಿಮ್ಮ ಮನೆಯಲ್ಲಿ ಐಶ್ವರ್ಯಕ್ಕೆ ಕೊರತೆ ಬರುವುದಿಲ್ಲ.

ಈ ಉಪಾಯವನ್ನು ಮಂಗಳವಾರ ಅಥವಾ ಶುಕ್ರವಾರ ಮಾಡಿದರೆ ಒಳ್ಳೆಯದು ಮತ್ತು ಬ್ರಾಹ್ಮಿ ಮುಹೂರ್ತದಲ್ಲಿ ಉಪಾಯವನ್ನು ಮಾಡಬೇಕು. ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಆ ವಸ್ತಕ್ಕೆ 5 ಗೋಮತಿ ಚಕ್ರ, 5 ಹಳದಿ ಬಣ್ಣದ ಕವಡೆ, 5 1 ರೂಪಾಯಿ ಅಥವಾ 2 ರೂಪಾಯಿ ಅಥವಾ 5 ರೂಪಾಯಿ ನಾಣ್ಯಗಳು.

5 ಲವಂಗ ಮತ್ತು 5 ಏಲಕ್ಕಿಯನ್ನು ಹಾಕಿ ಗಂಟು ಕಟ್ಟಿ ದೇವರ ಕೋಣೆಯಲ್ಲಿ ಇಟ್ಟು ಅರಿಶಿಣ ಕುಂಕುಮ ಹಾಕಿ ಪೂಜೆ ಮಾಡಿ ತಾಯಿ ಮಹಾಲಕ್ಷ್ಮಿ ಹಾಗೂ ಅನ್ನಪೂರ್ಣೇಶ್ವರಿ ಯನ್ನು ಪ್ರಾರ್ಥಿಸಿ ನಂತರ ಅದನ್ನು ನಿಮ್ಮ ಮನೆಯ ಅಕ್ಕಿ ಡಬ್ಬಕ್ಕೆ ಹಾಕಿ ಬಚ್ಚಿಡಬೇಕು ಈ ರೀತಿ ಮಾಡುವುದರಿಂದ. ಇದು ಹೆಚ್ಚು ಹಣಕಾಸನ್ನು ಆಕರ್ಷಿಸುತ್ತದೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಂದಿಗೂ ನೆಲೆಸಿರುತ್ತದೆ. ಮನೆ ಅಭಿವೃದ್ಧಿ ಹೊಂದುತ್ತದೆ.

ಒಂದು ವಾರ ಆದ ಬಳಿಕ ಈ ಗಂಟನ್ನು ತೆಗೆದು ಏಲಕ್ಕಿ ಹಾಗೂ ಲವಂಗವನ್ನು ಪುಡಿಮಿಡಿ ದೇವರಿಗೆ ಹಾಕುವ ಧೂಪದ ಜೊತೆ ಮಿಕ್ಸ್ ಮಾಡಬಹುದ. ನಾಣ್ಯ ಗೋಮತಿ ಚಕ್ರ ಹಾಗೂ ಕವಡೆಯನ್ನು ತೊಳೆದು ಮತ್ತೆ ಬೇರೆ ಕೆಂಪು ಬಣ್ಣದ ವಸ್ತ್ರ ತೆಗೆದುಕೊಂಡು ಗಂಟು ಕಟ್ಟಿ ಇದೇ ರೀತಿ ಮತ್ತೆ ಮಾಡಬೇಕು. ಹಳೆಯ ಕೆಂಪು ವಸ್ತ್ರವನ್ನು ತೊಳೆದು ಮತ್ತೆ ಉಪಯೋಗಿಸಬಹುದು ಅಥವಾ ಹರಿವ ನೀರಿಗೆ ಬಿಟ್ಟು ಹೊಸ ವಸ್ತ್ರ ಉಪಯೋಗಿಸಬಹುದು. ಬಹಳ ಭಯ ಭಕ್ತಿಯಿಂದ ನಂಬಿಕೆಯಿಂದ ಈ ಆಚರಣೆ ಮಾಡಿದರೆ ಶುಭ ಫಲಗಳನ್ನು ಕಾಣುತ್ತೀರಿ.

ಕುಂಭ ರಾಶಿಯವರಿಗೆ ಜನ್ಮ ಶನಿ ಪ್ರಭಾವ ಸಾಡೇ ಸಾತಿ ನಡೆಯುತ್ತಿದೆ, ಇನ್ನು ಎಷ್ಟು ವರ್ಷಗಳು ಇರುತ್ತದೆ ಮತ್ತು ಯಾವ ರೀತಿ ಪರಿಹಾರ ಮಾಡಿಕೊಳ್ಳಬೇಕು ತಿಳಿದುಕೊಳ್ಳಿ.!

0

 

ಕುಂಭ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿದೆ ಎನ್ನುವುದು ಪ್ರತಿಯೊಬ್ಬ ಕುಂಭ ರಾಶಿಯವರಿಗೂ ಕೂಡ ಗೊತ್ತಿದೆ. ಈಗ ಸಾಡೇಸಾತಿಯಲ್ಲಿ ಜನ್ಮ ಶನಿ ನಡೆಯುತ್ತಿದೆ. ಸಾಡೆಸಾತಿಯಲ್ಲೂ ಪ್ರಾರಂಭ ಶನಿ, ಜನ್ಮ ಶನಿ ಮತ್ತು ಅಂತ್ಯ ಶನಿ ಎನ್ನುವ ಮೂರು ವಿಭಾಗ ಇರುತ್ತದೆ.

ಪ್ರಾರಂಭ ಶನಿ ಎರಡೂವರೆ ವರ್ಷ ಜನ್ಮ ಶನಿ ಎರಡೂವರೆ ವರ್ಷ ಮತ್ತು ಅಂತ್ಯ ಶನಿ ಎರಡು ವರ್ಷಗಳಿರುತ್ತದೆ ಕೆಲವೊಮ್ಮೆ ಶನಿ ವಕ್ರ ವಾಗುವುದು ತಟಸ್ಥ ವಾಗುವುದು ಇಂತಹ ಪರಿಣಾಮಗಳು ಉಂಟಾಗುತ್ತದೆ. ಆಗ ಒಂದು ಮನೆಯಲ್ಲಿ 2 1/4 ವರ್ಷ ಅಥವಾ 3 ವರ್ಷಗಳು ಕೂಡ ಉಳಿದುಬಿಡುತ್ತಾರೆ.

ಈಗ ಕುಂಭ ರಾಶಿಯವರಿಗೆ ನಡೆಯುತ್ತಿರುವ ಜನ್ಮ ಶನಿಯು 28 ಮಾರ್ಚ್ 2025ಕ್ಕೆ ಮುಗಿಯುತ್ತದೆ ಈ ಜನ್ಮಶನಿಯ ಪ್ರಭಾವ ಹಾಗೂ ಪರಿಹಾರ ಏನು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇದರಲ್ಲಿ ಆರಂಭ ಶನಿ ಅದು ಟೆಸ್ಟಿಂಗ್ ಟೈಮ್ ಎನ್ನಬಹುದು. ಆದರೆ ಜನ್ಮ ಶನಿಯೇ ಹೆಚ್ಚು ಕ’ಷ್ಟ ಕಾಟಗಳನ್ನು ನೀಡುವುದು.

ಜನ್ಮ ಶನಿಯಲ್ಲಿ ನಾವು ಹಿಂದಿನ ಜನ್ಮದ ಪಾಪ ಕರ್ಮಗಳು ಅಥವಾ ಈ ಜನ್ಮದಲ್ಲಿ ಮಾಡಿದ ಎಲ್ಲ ಪಾಪಗಳನ್ನು ಪರಿಣಾಮ ಅನುಭವಿಸಲೇಬೇಕು. ಕೆಲವೊಮ್ಮೆ ಏನು ತಪ್ಪು ಮಾಡಿಲ್ಲ ಎಂದರೂ ಕೂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತದೆ ಆದರೆ ವಿಧಿ ಇಲ್ಲ.

ಈ ಜನ್ಮ ಶನಿಯ ಎರಡೂವರೆ ವರ್ಷ ಮುಗಿದ ಮೇಲೆ ಬರುವ ಅಂತ್ಯ ಶನಿಯು ಬಹಳ ಉತ್ತಮವಾದ ಪರಿಣಾಮಗಳನ್ನು ಕೊಡುತ್ತದೆ. ಈ ಅಂತ್ಯ ಶನಿ ನೀಡುವ ಉತ್ತಮವಾದ ಪರಿಣಾಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ ಆದರೆ ಜನ್ಮ ಶನಿಯ ಎರಡೂವರೆ ವರ್ಷಗಳು ಬಹಳ ಎಚ್ಚರಿಕೆಯಿಂದ ಇರಲೇಬೇಕು.

ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಹಾಗೆ, ಹಣಕಾಸಿಗೆ ಸಂಬಂಧಪಟ್ಟ ಹಾಗೆ, ವ್ಯಾಪಾರ ವ್ಯವಹಾರ, ಉದ್ಯೋಗ ಸ್ಥಿತಿ, ಮದುವೆ ವಿಚಾರ, ಮಕ್ಕಳ ವಿಚಾರ, ಭೂಮಿ ವಿಚಾರ, ರಾಜಕೀಯ, ಸ್ನೇಹ- ಸಂಬಂಧಗಳು, ಪ್ರಯಾಣ ಎಲ್ಲದರಲ್ಲೂ ಕೂಡ ಬಹಳ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕು. ಯಾಕೆಂದರೆ ಪ್ರತಿಯೊಂದು ವಿಷಯದಲ್ಲೂ ಕೂಡ ಜನ್ಮ ಶನಿ ಪ್ರಭಾವದಿಂದ ಸಮಸ್ಯೆಗಳ ಹೆಚ್ಚಾಗಿರುತ್ತವೆ.

ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬಹಳ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ, ಒಂದು ವೇಳೆ ನಿರ್ಧಾರ ಮಾಡಿದ್ದೇ ಆದರೆ ಭಗವಂತನ ಮೇಲೆ ಭಾರ ಹಾಕಿ ಬದುಕಿ. 28 ಮಾರ್ಚ್ 2025 ರವರೆಗೆ ನೀವು ಈ ಫಲವನ್ನು ಫಲಗಳನ್ನು ಅನುಭವಿಸದೆ ಕುಂಭ ರಾಶಿಯವರಿಗೆ ಬೇರೆ ದಾರಿ ಇಲ್ಲ.

ಜನ್ಮ ಶನಿ ಮುಗಿದ ಮೇಲೆ 28 ಮಾರ್ಚ್ 2025 ರಿಂದ 3 ಜೂನ್ 2027ರವರೆಗೆ ಅಂತ್ಯ ಶನಿ ಇರುತ್ತದೆ. ಈ ಸಮಯದಲ್ಲೂ ಯಾವುದೇ ರೀತಿಯ ಭಯಪಡುವ ಅಗತ್ಯ ಇಲ್ಲ. ಶನಿಯು ಯಾವಾಗಲೂ ಪೂರ್ತಿ ಕೆ’ಟ್ಟದ್ದನ್ನೇ ಮಾಡುವುದಿಲ್ಲ. ನಿಮ್ಮ ಪಾಪ ಪುಣ್ಯಕ್ಕೆ ಅನುಸಾರವಾಗಿ ಅದು ಜರುಗುತ್ತಿರುತ್ತದೆ ಮತ್ತು ಅದಕ್ಕೆ ಕಾರಣವೂ ಕೂಡ ಇರುತ್ತದೆ.

ಶನಿ ನಿಮ್ಮ ಜಾತಕದಲ್ಲಿ ಇರುವಷ್ಟು ದಿನ ಪ್ರಾಣ ಭ’ಯವಿಲ್ಲ. ಸ್ವಲ್ಪ ಕಾಲ ಕಷ್ಟ ಇದ್ದರೂ ನಂತರ ಸಿಗುವ ಫಲಿತಾಂಶ ಮಹತ್ವದ್ದಾಗಿರುತ್ತದೆ. ನೀವು ಬಹಳ ಬೇಗ ಜೀವನದ ಸಾರವನ್ನು ಅರಿತುಕೊಳ್ಳುತ್ತೀರಿ ನಂತರದ ಜೀವನವನ್ನು ಬಹಳ ಪುಣ್ಯ ಕಾರ್ಯಗಳಿಂದ ಅರ್ಥಪೂರ್ಣವಾಗಿ ಕಡಿಯುತ್ತೀರಿ ಹಾಗಾಗಿ ಜನ್ಮ ಶನಿ ಪ್ರಭಾವಕ್ಕಾಗಿ ಹೆಚ್ಚು ಹೆದರುವ ಅಗತ್ಯವಿಲ್ಲ. ಪ್ರತಿದಿನ ಈ ಸಮಯ ಮುಗಿಯುವವರೆಗೂ ನಿಮ್ಮ ಕುಲದೇವರು , ಇಷ್ಟ ದೇವರು ಮತ್ತು ಶನಿದೇವರ ಪ್ರಾರ್ಥನೆ ಮಾಡಿ ಭಗವಂತ ತೋರಿಸಿದ ದಾರಿಯಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಬದುಕಿ.

ಹೊಸವರ್ಷಕ್ಕೆ ಕ್ಯಾಲೆಂಡರ್ ತಂದಿದ್ದೀರಾ.? ಅಪ್ಪಿ ತಪ್ಪಿಯು ಕ್ಯಾಲೆಂಡರ್ ಅನ್ನು ಈ ದಿಕ್ಕಿನ ಗೋಡೆಗೆ ಹಾಕಬೇಡಿ.!

 

ಹೊಸ ವರ್ಷ ಬಂದಾಗ ಮನೆಯಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ, ಕೆಲವನ್ನು ನಮ್ಮ ಜೀವನದಲ್ಲೂ ಕೂಡ ನಾವು ಬದಲಾವಣೆ ಮಾಡಿಕೊಳ್ಳಲು ಬಯಸುತ್ತೇವೆ. ಈ ರೀತಿ ಪ್ರತಿ ವರ್ಷ ಬದಲಾಗುವ ವಿಷಯಗಳಲ್ಲಿ ಕ್ಯಾಲೆಂಡರ್ ಕೂಡ ಒಂದು ಆದರೆ ಇದು ಸರಳ ವಿಚಾರ ಅಲ್ಲ ಹೊಸ ವರ್ಷದಲ್ಲಿ ಏನು ಬದಲಾಗದೆ ಇದ್ದರೂ ಖಂಡಿತ ಹೊಸ ಕ್ಯಾಲೆಂಡರ್ ತಂದೆ ತರುತ್ತೇವೆ.

ನೀವು ಕೂಡ ಈಗ 2024 ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್ ತಂದಿದ್ದರೆ ಈ ಅಂಶಗಳನ್ನು ತಿಳಿದುಕೊಳ್ಳಿ. ವಾಸ್ತು ಶಾಸ್ತ್ರದ ಪ್ರಕಾರ ಕ್ಯಾಲೆಂಡರ್ ಅನ್ನು ಸರಿಯಾದ ದಿಕ್ಕಿನಲ್ಲಿ ಹಾಕಿದರೆ ಮಾತ್ರ ಒಳ್ಳೆಯ ಫಲಗಳನ್ನು ಕಾಣಲು ಸಾಧ್ಯ ಹಾಗೆ ತಪ್ಪಾದ ಸ್ಥಳದಲ್ಲಿ ಹಾಕಿದರೆ ಅನವಶ್ಯಕವಾಗಿ ಎಷ್ಟೋ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಕ್ಯಾಲೆಂಡರ್ ನ ವಾಸ್ತು ನಿಯಮದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡಿರಲೇಬೇಕು. ಅದರ ಕುರಿತು ಕೆಲ ಪ್ರಮುಖ ಮಾಹಿತಿ ಹೀಗಿದೆ ನೋಡಿ

* ಕ್ಯಾಲೆಂಡರ್ ನ್ನು ದಕ್ಷಿಣ ದಿಕ್ಕಿನ ಕಡೆಗೆ ಅಥವಾ ದಕ್ಷಿಣ ದಿಕ್ಕಿನ ಗೋಡೆಗೆ ಹಾಕುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ, ಅದರಲ್ಲೂ ಹಿರಿಯರ ಆರೋಗ್ಯಗಳು ಗಂಭೀರವಾಗುವ ಸಾಧ್ಯತೆಗಳು ಇರುತ್ತವೆ.

* ಮನೆಯಲ್ಲಿ ಸಕಾರಾತ್ಮಕ ವಾತಾವರಣವಿದ್ದರೆ ಎಲ್ಲರ ಮನಸಿನಲ್ಲಿ ಹರುಷ ಸಂತೋಷ ಹಾಗೂ ಮನೆಯ ವಾತಾವರಣ ನೆಮ್ಮದಿಯಾಗಿ ಇರುತ್ತದೆ. ಈ ರೀತಿಯಾದ ವಾತಾವರಣ ಸೃಷ್ಟಿ ಆಗಬೇಕು ಎಂದರೆ ಕ್ಯಾಲೆಂಡರ್ ನ್ನು ಯಾವಾಗಲು ಪೂರ್ವ ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಮಾತ್ರ ಹಾಕಬೇಕು

* ಹೊಸ ವರ್ಷಕ್ಕೆ ಖಂಡಿತವಾಗಿ ಹೊಸ ಕ್ಯಾಲೆಂಡರ್ ತರುತ್ತೇವೆ ಮತ್ತು ಹೊಸ ಕ್ಯಾಲೆಂಡರ್ ನ್ನು ನಮ್ಮ ಮನೆಯ ಗೋಡೆಗಳಿಗೆ ಹಾಕುತ್ತೇವೆ. ಆಗ ತಪ್ಪದೆ ಹಳೆಯ ಕ್ಯಾಲೆಂಡರ್ ನ್ನು ತೆಗೆಯಬೇಕು. ಕೆಲವರು ಹಳೆಯ ಕ್ಯಾಲೆಂಡರ್ ಮೇಲೆ ಹೊಸ ಕ್ಯಾಲೆಂಡರ್ ಹಾಕಿ ಎರಡು ಮೂರು ವರ್ಷದ ಹಳೆ ಕ್ಯಾಲೆಂಡರ್ ಗಳನ್ನು ಕೂಡ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.

ಈ ರೀತಿ ಮಾಡುವುದು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯನ್ನುಂಟು
ಮಾಡುತ್ತವೆ. ನೀವು ಮುಂದುವರೆಯಲು ಸಾಧ್ಯವಾಗುವುದಿಲ್ಲ ನಿಮಗೆ ಎಲ್ಲಾ ಕೆಲಸದಲ್ಲೂ ಕೂಡ ವಿಳಂಬವಾಗುತ್ತದೆ. ಇದನ್ನು ತಪ್ಪಿಸಲು ಹೊಸ ಕ್ಯಾಲೆಂಡರ್ ಹಾಕಿದ ತಕ್ಷಣ ಹಳೆ ಕ್ಯಾಲೆಂಡರ್ ತೆಗೆಯಿರಿ, ನಿಮಗೆ ಆ ಕ್ಯಾಲೆಂಡರ್ ಅವಶ್ಯಕತೆ ಇದ್ದರೆ ಅದನ್ನು ಸುತ್ತಿ ಬೇರೆ ಎಲ್ಲಾದರೂ ಯಾರಿಗೂ ಕಾಣದಂತೆ ಇಟ್ಟುಕೊಳ್ಳಿ

* ವಾಸ್ತು ಶಾಸ್ತ್ರವು ಹೇಳುವ ಪ್ರಕಾರ ಯಾವುದೇ ಕೆಲಸ ಕ್ಯಾಲೆಂಡರ್ ಗಳನ್ನು ಮನೆಯ ಮುಖ್ಯದ್ವಾರದ ಮುಂದೆ ಅಥವಾ ಹಿಂದೆ ಹಾಕಬಾರದು
* ಪೂರ್ವ ದಿಕ್ಕು ಅಂದರೆ ಸೂರ್ಯನ ದಿಕ್ಕು ಎಂದು ಹೇಳುತ್ತಾರೆ ಕೆಂಪು ಬಣ್ಣದ ಕ್ಯಾಲೆಂಡರ್ ನ್ನು ಈ ದಿಕ್ಕಿಗೆ ಹಾಕಿ ಪ್ರತಿದಿನ ನೋಡುವುದರಿಂದ ನಮ್ಮ ವೃತ್ತಿ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತೇವೆ ಮತ್ತು ಮಕ್ಕಳು ಕೂಡ ವಿದ್ಯಾಭ್ಯಾಸದಲ್ಲಿ ಹೆಸರು ಪಡೆಯುತ್ತಾರೆ

* ಉತ್ತರ ದಿಕ್ಕಿಗೆ ಕ್ಯಾಲೆಂಡರ್ ಹಾಕುವಾಗ ಕ್ಯಾಲೆಂಡರ್ ನಲ್ಲಿ ಅಥವಾ ಕ್ಯಾಲೆಂಡರ್ ಜೊತೆಗೆ ನದಿ ಹರಿಯುವುದು ಜಲಪಾತ ಈ ರೀತಿಯ ಪ್ರಕೃತಿಗೆ ಸಂಬಂಧಪಟ್ಟ ಸೀನರಿ ಕೂಡ ಹಾಕಿದರೆ ಉತ್ತಮ ಫಲಗಳನ್ನು ಕಾಣಬಹುದು
* ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಆಗಬೇಕು ಜೀವನದಲ್ಲಿ ಸಮೃದ್ಧಿ ಹೊಂದಿರಬೇಕು ಎಂದು ಬಯಸಿದರೆ ಅಂತವರು ಬಂಗಾರದ ಬಣ್ಣದಲ್ಲಿ ಕ್ಯಾಲೆಂಡರ್ ಹಾಕಬೇಕು

* ಕ್ಯಾಲೆಂಡರ್ ಹರಿದು ಹೋದರೆ ತಕ್ಷಣ ಅದನ್ನು ಬದಲಾಯಿಸಿ ಹೊಸ ಕ್ಯಾಲೆಂಡರ್ ಹಾಕಿ
* ಕ್ಯಾಲೆಂಡರ್ ಹಾಕಿದ ಮೇಲೆ ಪ್ರತಿ ತಿಂಗಳು 1ನೇ ತಾರೀಕು ತಪ್ಪದೇ ಕ್ಯಾಲೆಂಡರ್ ಬದಲಾಯಿಸಬೇಕು. ಕೆಲವರು 2, 3, 5ನೇ ತಾರೀಕಾದರೂ ಕ್ಯಾಲೆಂಡರ್ ತಿರುವಿ ಹಾಕಿರುವುದಿಲ್ಲ. ಇದು ಕೂಡ ನಿಮ್ಮ ಏಳಿಗೆಗೆ ಅಡ್ಡಿ ಪಡಿಸುತ್ತದೆ.

2024ರ ಹೊಸ ವರ್ಷದ ಮೊದಲ ದಿನದಂದು ಏನು ಮಾಡಬೇಕು.? ಏನು ಮಾಡಬಾರದು ತಪ್ಪದೆ ತಿಳಿದುಕೊಳ್ಳಿ.!

0

 

ಹೊಸ ವರ್ಷ ಎನ್ನುವುದು ಒಂದು ಪಾಸಿಟಿವ್ ಎನರ್ಜಿ. ಹೊಸ ವರ್ಷದಿಂದ ಹೊಸ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಪ್ಲಾನ್ ಮಾಡಿ ತಯಾರಾಗುತ್ತಾರೆ, ಕೆಟ್ಟ ಚಟಗಳನ್ನು ಹೊಸ ವರ್ಷದಿಂದ ಬಿಡುತ್ತೇನೆ ಎಂದು ನಿರ್ಧಾರ ಮಾಡುತ್ತಾರೆ, ಮುಂದಿನ ಹೊಸ ವರ್ಷದಲ್ಲಿ ನಾನು ಆ ಕೆಲಸ ಮಾಡ್ತೀನಿ ಈ ಕೆಲಸ ಮಾಡುತ್ತೇನೆ ಎಂದು ಆಸೆಪಟ್ಟು ಕೆಲಸ ಕಾರ್ಯಗಳನ್ನು ಚುರುಕುಗೊಳಿಸುತ್ತಾರೆ.

ಹೀಗೆ ಎಲ್ಲರಿಗೂ ಕೂಡ ನೂತನ ವರ್ಷ ಎನ್ನುವುದು ಒಂದು ಹೊಸ ಭರವಸೆ, ಹೊಸತನವನ್ನು ತರುವ ಮನೆ ಮತ್ತು ಮನಸ್ಸಿಗೆ ಸಕಾರಾತ್ಮಕ ವಾತಾವರಣವನ್ನು ತುಂಬುವ ಇಂತಹ ಹೊಸ ವರ್ಷದ ಆರಂಭ ಹೇಗಿರಬೇಕು ಮತ್ತು ನಾವು ಅಂದುಕೊಂಡ ಗುರಿಯನ್ನು ಸಾಧಿಸಬೇಕು ಎಂದರೆ ಹೊಸ ವರ್ಷದ ಮೊದಲ ದಿನದಂದು ಯಾವ ಕಾರ್ಯಗಳನ್ನು ಮಾಡಬೇಕು ಯಾವುದನ್ನು ಮಾಡಬಾರದು ಎನ್ನುವ ಕೆಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

* ಮೊದಲನೆಯದಾಗಿ ಹೊಸ ವರ್ಷ ತಪ್ಪದೇ ಪ್ರತಿಯೊಬ್ಬರು ಬೆಳಗ್ಗೆ ಎದ್ದ ಕೂಡಲೇ ಸ್ನಾನ ಮಾಡಿ ತಮ್ಮ ಮನೆ ದೇವರಿಗೆ, ಇಷ್ಟ ದೇವರಿಗೆ ಪೂಜೆ ಮಾಡಬೇಕು.
* ಹೊಸ ವರ್ಷದಂದು ಈ ವರ್ಷದಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಹಾಗೆ ಅಭಿವೃದ್ಧಿ ಹೊಂದಬೇಕು ಎಂದು ಆಸೆ ಪಟ್ಟವರು ತಪ್ಪದೆ ಶ್ರೀ ವಿಷ್ಣು ಹಾಗೂ ಮಹಾಲಕ್ಷ್ಮಿಗೆ ಪೂಜೆ ಮಾಡಬೇಕು ಅವರನ್ನು ತಮ್ಮ ಕಾರ್ಯ ಕೈಗೊಳ್ಳುವಂತೆ ಆಶೀರ್ವದಿಸಿ ಎಂದು ಪ್ರಾರ್ಥಿಸಿ ಕೊಳ್ಳಬೇಕು.

* ಹೊಸ ವರ್ಷದಂದು ಕೆಲಸ ಇದ್ದರೆ ಅದಕ್ಕೆ ರಜೆ ಹಾಕಿ ಮಜಾ ಮಾಡುವ ಮನಸ್ಥಿತಿ ಇದ್ದರೆ ಅದನ್ನು ಮೊದಲು ಬಿಡಿ. ಮೊದಲು ಕೆಲಸ ಆ ಕೆಲಸದ ಮೂಲಕ ಹಣ ಬಂದರೆ ಮಾತ್ರ ಹಣದಿಂದ ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯ ಹಾಗೂ ನಿಮ್ಮ ಹೊಸ ಕನಸುಗಳಿಗೆ ಜೀವ ತುಂಬಲು ಸಾಧ್ಯ. ಹಾಗಾಗಿ ಯಾವುದೇ ಕಾರಣಕ್ಕೂ ಹೊಸ ವರ್ಷದಂದು ಕೆಲಸ ಇದ್ದರೂ ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳಬೇಡಿ. ಕೆಲಸಕ್ಕೆ ಹೋಗಿ ಉಳಿದ ಸಮಯದಲ್ಲಿ ಹೊಸ ವರ್ಷದ ಆಚರಣೆಗೆ ಸಮಯ ಕೊಡಿ

* ಈ ವರ್ಷದಲ್ಲಿ ನೀವು ಫಿಟ್ನೆಸ್, ಆರೋಗ್ಯ ಇವುಗಳ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ನಿರ್ಧಾರ ಮಾಡಿದ್ದರೆ ಸರಿಯಾದ ಆಹಾರ ಪದ್ಧತಿ ಮತ್ತು ಜೀವನಶೈಲಿ ಅಳವಡಿಸಿಕೊಳ್ಳುವುದಕ್ಕೆ ಈ ದಿನ‌ದಿಂದಲೇ ಶುರು ಮಾಡಿ. ಧೂಮಪಾನ ಮದ್ಯಪಾನ ಅಭ್ಯಾಸಗಳನ್ನು ಹೊಸ ವರ್ಷದ ಮೊದಲ ದಿನದಿಂದಲೇ ಬಿಟ್ಟು ವ್ಯಾಯಾಮ ಯೋಗ ಧ್ಯಾನಕ್ಕೆ ಸಮಯ ಡಯಟ್ ಮಾಡುತ್ತೇನೆ ಎಂದು ಡಿಸೈಡ್ ಮಾಡಿದ್ದನ್ನು ಇಂದಿನಿಂದಲೇ ಕಾರ್ಯರೂಪಕ್ಕೆ ತನ್ನಿ

* ವೃತ್ತಿ ಯಾವುದೇ ಇದ್ದರೂ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಪ್ರವೃತ್ತಿ ಅವಶ್ಯಕತೆ ಇರುತ್ತದೆ. ಇದರಿಂದ ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಬಹುದು ಮತ್ತು ಸಂತೋಷ ಕಾಣಬಹುದು. ಹಾಗಾಗಿ ನೀವು ಈ ವರ್ಷ ಬಿಡುವಿನ ಸಮಯದಲ್ಲಿ ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಳ್ಳುವುದಕ್ಕೆ ನಿರ್ಧಾರ ಮಾಡಿದ್ದರೆ ಅದನ್ನು ಇಂದಿನಿಂದಲೇ ಆರಂಭಿಸಿ. ಸಂಗೀತ ಕಲಿಯಲು ಬಯಸಿದರೆ ಇದರಿಂದಲೇ ತರಗತಿಗೆ ಹೋಗಿ, ಪುಸ್ತಕ ಓದಲು ನಿರ್ಧರಿಸಿದ್ದರೆ ಇಂದೇ ಪುಸ್ತಕ ಖರೀದಿಸಿ ನಾಲ್ಕಾರು ಪುಟ ತಿರುಗಿಸಿ

* ನಾವು ಎಷ್ಟೇ ಬ್ಯುಸಿ ಇದ್ದರೂ, ಶ್ರೀಮಂತರಾಗಿದ್ದರು, ಮಕ್ಕಳಾಗಿದ್ದರು, ವೃದ್ಧರಾಗಿದ್ದರು ಪ್ರತಿಯೊಬ್ಬರಿಗೂ ಸ್ನೇಹ ಬಳಗ ಮುಖ್ಯ ಹಾಗಾಗಿ ಹೊಸ ವರ್ಷದ ಈ ಸಮಯದಲ್ಲಿ ನಿಮ್ಮ ಸ್ನೇಹಿತರ ಜೊತೆಗೆ ಸ್ವಲ್ಪ ಸಮಯ ಕಳೆಯಿರಿ

* ತಪ್ಪದೆ ಇಂದು ಹಿರಿಯರ ಆಶೀರ್ವಾದ ಪಡೆದುಕೊಳ್ಳಿ ಸಾಧ್ಯವಾದರೆ ಯಾವುದಾದರೂ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ನಿಮ್ಮ ಸ್ನೇಹಿತರು ಹಾಗು ಕುಟುಂಬದ ಎಲ್ಲರಿಗೂ ಕೂಡ ಹೊಸ ವರ್ಷದ ಶುಭಾಶಯಗಳು ಕರೆ ಮೂಲಕ ಅಥವಾ ಸಂದೇಶದ ಮೂಲಕ ಅಥವಾ ಸಾಧ್ಯವಾದರೆ ಭೇಟಿಯಾಗುವ ಮೂಲಕವೇ ತಿಳಿಸಿ ಸಂಬಂಧ ಕಾಯ್ದುಕೊಳ್ಳಿ.

* ಯಾವುದೇ ಕಾರಣಕ್ಕೂ ಹೊಸ ವರ್ಷದ ದಿನದಂದು ಯಾರ ಜೊತೆಗೂ ಜಗಳ ಮಾಡಿಕೊಳ್ಳಬೇಡಿ, ಯಾರ ಮನಸ್ಸಿಗೂ ನೋ’ವುಂಟು ಮಾಡಬೇಡಿ.

ಈ ಸಂಖ್ಯೆಯನ್ನು 28 ಬಾರಿ ಬರೆದು ನೋಡಿ, ನಿಮ್ಮ ಪ್ರಯತ್ನಕ್ಕೆ ತಿಂಗಳಲ್ಲೇ ರಿಸಲ್ಟ್ ಸಿಗುತ್ತದೆ. ಈ ಹೊಸ ವರ್ಷದಂದು ಪ್ರತಿಯೊಬ್ಬರು ಈ ಪ್ರಯೋಗ ಮಾಡಿ.!

0

 

2024ರ ಹೊಸ ವರ್ಷದ ಹೊಸ್ತಿಲಲ್ಲಿ ನಿಂತಿದ್ದೇವೆ ಸಂಖ್ಯಾಶಾಸ್ತ್ರ ಪ್ರಕಾರ 2024 ಎನ್ನುವುದು ಸಂಖ್ಯೆ 8 ಅಂದರೆ ಶನಿ ಗ್ರಹದ ಪ್ರಭಾವ ಹೊಂದಿರುವ ವರ್ಷವಾಗಿದೆ. ಸಾಮಾನ್ಯವಾಗಿ ಇಂತಹ ಸಂಖ್ಯೆಯು ಎಲ್ಲರಿಗೂ ಕೂಡ ಒಂದೇ ರೀತಿಯ ಪರಿಣಾಮವನ್ನು ತರುತ್ತದೆ.

8 ಎನ್ನುವ ಶನಿ ಗ್ರಹದ ಸಂಖ್ಯೆಯು ತಮ್ಮ ಕರ್ಮಗಳಿಗೆ ಅನುಸಾರವಾಗಿ ಫಲ ಕೊಡುವಂತಹ ಸಂಖ್ಯೆಯಾಗಿದೆ ಒಳ್ಳೆಯ ಕಾರ್ಯಗಳನ್ನು ಮಾಡಿದವರಿಗೆ ಒಳ್ಳೆಯ ಫಲಗಳು, ಕೆಟ್ಟ ಕಾರ್ಯ ಮಾಡಿದವರಿಗೆ ಕೆಟ್ಟ ಫಲಗಳನ್ನು ಅನುಭವಿಸುವಂತಹ ಸಮಯ ಇದಾಗಿದೆ. ಈ ವರ್ಷದಲ್ಲಿ ಕೆಟ್ಟ ಫಲಗಳನ್ನು ಅನುಭವಿಸಿದರು ಕೂಡ ಮುಂದೆ ಅದರಿಂದ ಪಾಠ ಕಲಿತು ಪಾವನರಾಗಿ ಬಹಳ ಶ್ರೇಷ್ಠರಾಗುತ್ತಾರೆ.

ಸಂಖ್ಯೆ 8 ಎನ್ನುವುದನ್ನು ಬರೆದು ನೋಡಿ ಅದು ಬಹಳ ವಿಶೇಷ ಎನಿಸುತ್ತದೆ. ಯಾಕೆಂದರೆ ಎಲ್ಲಿಂದ ಆರಂಭವಾಗುತ್ತದೆ ಅಲ್ಲಿಗೆ ಅಂತ್ಯವಾಗುತ್ತದೆ. ಹೇಗೆ ನಮ್ಮ ಉಸಿರಾಟವು ಜೀವ ಇರೋ ತನಕ ಉಚ್ಛಾಸ, ನಿಶ್ವಾಸ ಕ್ರಿಯೆಗಳು ನಡೆಯುತ್ತಲೇ ಇರುತ್ತದೆಯೋ ಅದೇ ರೀತಿ 8ರ ನಿರಂತರವಾಗಿ ನಡೆಯುವ ಅನಂತ ಎನ್ನುವುದನ್ನು ಸೂಚಿಸುವ ಸಂಖ್ಯೆಯಾಗಿದೆ.

ಈ 8 ನ್ನು ಅಡ್ಡವಾಗಿ ಬರೆದರೆ ಅದು ಕೂಡ ಇನ್ಫಿನಿಟಿ ಎನ್ನುವುದನ್ನು ಸೂಚಿಸುತ್ತದೆ, ಈ ಅನಂತದೊಳಗೆ ಎಲ್ಲವೂ ಇದೆ. 8ರ ಪ್ರಭಾವವು ಶಿಸ್ತು, ಪ್ರಾಮಾಣಿಕತೆ ಮತ್ತು ಧರ್ಮದ ಮಾರ್ಗದಲ್ಲಿ ನಡೆಸುವ ಸಂಖ್ಯೆಯಾಗಿದೆ. ಈ ವರ್ಷ ಪ್ರತಿಯೊಂದು ವಿಚಾರದಲ್ಲೂ ಕೂಡ ಇದೇ ರೀತಿಯಾಗಿ ರಿಸಲ್ಟ್ ಇರುತ್ತದೆ.

ಉದಾಹರಣೆಗೆ ಉದ್ಯೋಗ ಮಾಡುತ್ತಿರುವವರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಕೆಲಸದ ಸಮಯದಲ್ಲಿ ಬೇರೆ ಯಾವುದೇ ವಿಚಾರಗಳಿಗೆ ಗಮನ ಕೊಡದೆ ಶ್ರದ್ಧೆಯಿಂದ ಕೆಲಸ ಮಾಡಿಕೊಳ್ಳಬೇಕು ಎಂದು ಭಾವನೆ ಬರುವ ರೀತಿ ಬರುತ್ತದೆ. ವಿದ್ಯಾರ್ಥಿಗಳಾಗಿದ್ದರೆ 8 ರ ಪ್ರಭಾವದಿಂದ ಅವರು ಓದಿನಲ್ಲಿ ಏಕಾಗ್ರತೆ ಹೊಂದಿ ವಿದ್ಯಾಭ್ಯಾಸಕ್ಕಾಗಿ ಮನಸ್ಸನ್ನು ಕೇಂದ್ರೀಕರಿಸುತ್ತಾರೆ.

ಹಣಕಾಸಿನ ವಿಚಾರವಾಗಿದ್ದರೆ ಇದುವರೆಗೂ ಇದ್ದ ಹಣಕಾಸಿನ ಅಶಿಸ್ತು ಎಂದರೆ ಹಣದ ಬಗ್ಗೆ ನಿರ್ಲಕ್ಷತೆ, ಬೇಕಾಬಿಟ್ಟಿ ಖರ್ಚು ಮಾಡುವುದು, ಕೇಳಿದವರಿಗೆಲ್ಲ ಹಣ ಕೊಡುವುದು ಈ ರೀತಿ ಮನಸ್ಸು ಬದಲಾಗಿ ಹಣಕಾಸನ್ನು ಸರಿಯಾಗಿ ಖರ್ಚು ಮಾಡುವಂತಹ ಜ್ಞಾನ ಬರುತ್ತದೆ. ಈ ರೀತಿಯ ಶುಭಫಲಗಳು ನಮ್ಮ ಜೊತೆ ಕನೆಕ್ಟ್ ಆಗಬೇಕು ಎಂದರೆ ಒಂದು ಪ್ರಯೋಗವನ್ನು ಮಾಡಬೇಕು.

ಹೊಸ ವರ್ಷದ ಆರಂಭದಿಂದಲೇ ಈ ಉಪಾಯ ಮಾಡುವುದರಿಂದ ಈ ಮೇಲೆ ತಿಳಿಸಿದಂತೆ ಉತ್ತಮ ರೀತಿಯ ಪ್ರಭಾವಗಳು ನಿಮ್ಮ ಜೀವನದಲ್ಲಿ ಉಂಟಾಗಿ ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತೀರಿ. ಇದನ್ನು ದಿನದ ಯಾವ ಸಮಯದಲ್ಲಿ ಎಲ್ಲಿ ಬೇಕಾದರೂ ಮಾಡಬಹುದು ಮಾಡುವಾಗ ಮನಸ್ಸಿನಲ್ಲಿ ಶ್ರದ್ಧಾ ಭಕ್ತಿ ಇರಬೇಕು.

ನಿಮ್ಮ ಕುಲದೇವರು ಇಷ್ಟ ದೇವರನ್ನು ನೆನೆದು ಮತ್ತು ಶನಿ ದೇವರನ್ನು ಕೂಡ ಮನಸ್ಸಿನಲ್ಲಿ ನೆನೆದು ಇದನ್ನು ಮಾಡಬೇಕು. ಇದನ್ನು ಮಾಡುವುದು ಸಹ ಬಹಳ ಸುಲಭ. ಒಂದು ನೀಲಿ ಬಣ್ಣದ ಪೆನ್ನು ತೆಗೆದುಕೊಂಡು ಎಡಗೈ ಅಂಗೈಮೇಲೆ ಅಥವಾ ತೋಳಿನ ಮೇಲೆ ಚಿಕ್ಕದಾಗಿ 8 8 8 8 ಎನ್ನುವುದನ್ನು ಬರೆದು ಕೊಳ್ಳಬೇಕು, ಈ ರೀತಿ ಬರೆದುಕೊಳ್ಳುವುದನ್ನು ಯಾರು ನೋಡಬಾರದು.

ಬೇಕಾದರೆ ಯಾವುದಾದರೂ ಪುಸ್ತಕದ ಮೇಲೆ 28 ಬಾರಿ ಅಥವಾ 108 ಬಾರಿ ನಿಮ್ಮ ಶಕ್ತಿಯನುಸಾರ 8 ಎನ್ನುವ ಸಂಖ್ಯೆಯನ್ನು ಹೇಳಿಕೊಳ್ಳುತ್ತಾ ಬರೆಯಿರಿ. ಈ ರೀತಿ ಮಾಡುವುದರಿಂದ ನಿಮ್ಮ ಮನಸ್ಸು ಬಹಳ ಶುದ್ಧವಾಗುತ್ತದೆ. ಇದುವರೆಗೂ ನೀವು ಹಾಕಿಕೊಂಡಿದ್ದ ಯೋಜನೆಗಳು ಅಪೂರ್ಣವಾಗಿದ್ದರೆ ಈ ವರ್ಷದಲ್ಲಿ ಆ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ.

ನೀವು ಯಾವುದೇ ಪ್ಲಾನ್ ಮಾಡದೆ ಇದ್ದರೂ ಈ ಪ್ರಯೋಗ ಮಾಡುವುದರಿಂದ ನಿಮಗೆ ಈ ರೀತಿ ಒಳ್ಳೆ ಆಲೋಚನೆಗಳನ್ನು ಮಾಡುವ ಹೊಸ ಹೊಸ ಯೋಜನೆಗಳಿಗೆ ಪ್ಲಾನ್ ಮಾಡುವ ಮನಸ್ಸು ಬರುತ್ತದೆ. ಜೀವನದಲ್ಲಿ ಎಲ್ಲವೂ ಒಳ್ಳೆಯ ರೀತಿ ನಡೆಯುತ್ತದೆ ಹಾಗಾಗಿ ತಪ್ಪದೆ ಹೊಸ ವರ್ಷದ ದಿನದಿಂದಲೇ ಇದನ್ನು ಆರಂಭಿಸಿ.

2024 ಮುಗಿಯುವುದರೊಳಗೆ ಸ್ವಂತ ಮನೆ ಹೊಂದುವ ಭಾಗ್ಯ ಈ ರಾಶಿಯವರಿಗೆದೆ.!

 

ಹೊಸ ವರ್ಷ ಶುರು ಆಗುತ್ತಿತ್ತಂತೆ, ಹೊಸ ಲೆಕ್ಕಾಚಾರಗಳು ಶುರುವಾಗುತ್ತದೆ. ಹೊಸ ವರ್ಷದಲ್ಲಿ ಈ ಒಳ್ಳೆಯ ಅಭ್ಯಾಸ ರೂಡಿಸಿಕೊಳ್ಳುತ್ತೇನೆ ಅಥವಾ ಇಂತಹ ದು’ಶ್ಚ’ಟ ಬಿಡುತ್ತೇನೆ ಹೊಸ ವರ್ಷ ಮುಗಿಯೋದರ ಒಳಗೆ ಈ ಸ್ಥಳಕ್ಕೆ ಟ್ರಿಪ್ ಹೋಗಬೇಕು, ಮುಂದಿನ ವರ್ಷವಾದರೂ ಟೈಮ್ ಚೆನ್ನಾಗಿದ್ದರೆ ಮನೆ ಕಟ್ಟಿಸಬೇಕು ಈ ರೀತಿ ನಿರೀಕ್ಷೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇದರಲ್ಲಿ ಮಹತ್ವದ ಕನಸು ಎಂದರೆ ಮನೆ ಕಟ್ಟುವುದು ಯಾಕೆಂದರೆ ಮನೆ ಕಟ್ಟುವುದು ಹೇಳಿಕೊಂಡಷ್ಟು ಸುಲಭವಲ್ಲ. ಮನೆ ಕಟ್ಟಬೇಕು ಎನ್ನುವುದು ಜೀವನದ ಬಹಳ ದೊಡ್ಡ ಕನಸಾಗಿರುತ್ತದೆ. ನಾವು ಅಂದುಕೊಂಡಂತೆ ನಮ್ಮ ಶಕ್ತಿಯನ್ನುಸಾರ ನಮ್ಮ ಇಚ್ಛೆಯ ಎಲ್ಲಾ ಅನುಕೂಲತೆ ಇರುವ ಮನೆ ಕಟ್ಟಿ ಆ ಮನೆಯಲ್ಲಿ ಹತ್ತಾರು ವರ್ಷ ಕುಟುಂಬದೊಂದಿಗೆ ಸಂತೋಷ ಇರಬೇಕು ಎಂದು ಆಸೆ ಪಡುತ್ತೇವೆ ಅದಕ್ಕಾಗಿ ಹಣವನ್ನು ಕೂಡಿರುತ್ತೇವೆ.

ಆದರೆ ಜಾತಕ ಫಲದಲ್ಲಿ ಮನೆ ಕಟ್ಟುವ ಯೋಗ ಬರುವವರೆಗೂ ಕೂಡ ನಾವು ಎಷ್ಟೇ ಪ್ರಯತ್ನ ಪಟ್ಟರು ಆ ಕಾರ್ಯ ಕೈಗೂಡುವುದಿಲ್ಲ. ಆದರೆ ನಿಮ್ಮ ಯೋಗದಲ್ಲಿ ಮನೆ ಕಟ್ಟುವ ಭಾಗ್ಯ ಬರೆದಿದ್ದರೆ ಕೈಯಲ್ಲಿ ಸ್ವಲ್ಪ ಹಣ ಇಟ್ಟುಕೊಂಡು ಶುರು ಮಾಡಿದರು ಯಾವುದಾದರೂ ಮೂಲಗಳಿಂದ ಹಣದ ವ್ಯವಸ್ಥೆ ಆಗಿ ಬಹಳ ಅಚ್ಚುಕಟ್ಟಾಗಿ ಆ ಕಾರ್ಯ ಸರಾಗವಾಗಿ ಸಾಗುತ್ತದೆ ಮತ್ತು ಯಾವುದೇ ರೀತಿ ಅಡೆತಡೆಗಳು ಕೂಡ ಅದಕ್ಕೆ ಬರದೆ ಹೂ ಎತ್ತಿದ ರೀತಿ ಮನೆ ಕಟ್ಟುವ ಕೆಲಸ ನಡೆಯುತ್ತದೆ.

ಬಹಳ ವರ್ಷಗಳಿಂದ ಮನೆ ಕಟ್ಟಬೇಕು ಎಂದು ಆಸೆ ಪಡುತ್ತಿರುವವರು ಅಥವಾ ಮುಂದಿನ ವರ್ಷ ಮನೆ ಕಟ್ಟಿಕೊಳ್ಳಬೇಕು ಎಂದು ಕೊಂಡಿರುವವರಲ್ಲಿ ಯಾವ ರಾಶಿಯವರಿಗೆ ಈ ವರ್ಷ ಮನೆ ಕಟ್ಟುವ ಯೋಗ ಇದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ವೃಷಭ ರಾಶಿ:- ವೃಷಭ ರಾಶಿಯವರಿಗೆ 2024 ಬಹಳ ಅದೃಷ್ಟ ತರುವ ವರ್ಷವಾಗಿದೆ, ಈ ವರ್ಷ ವಿಪರೀತವಾದ ರಾಜಯೋಗವನ್ನು ಪಡೆಯುತ್ತಾರೆ. ಈ ವರ್ಷ ಪೂರ್ತಿ ಅವರು ಅಂದುಕೊಂಡಿದ್ದ ಎಲ್ಲಾ ಕಾರ್ಯಗಳು ಕೂಡ ಕೈಗೂಡುತ್ತವೆ. ಬಹಳ ವರ್ಷಗಳಿಂದ ಪ್ರಯತ್ನ ಪಡುತ್ತಿದ್ದು ಅದು ಸಾಧ್ಯವಾಗದೇ ಇದ್ದ ಘಟನೆಗಳು ಕೂಡ ಈ ವರ್ಷ ಘಟಿಸುತ್ತವೆ, ಅದರಲ್ಲಿ ಮನೆ ಕಟ್ಟುವುದು ಕೂಡ ಒಂದು. ಈಗಾಗಲೇ ವೃಷಭ ರಾಶಿಯವರು ಮನೆ ಕಟ್ಟಬೇಕು ಎಂದು ಹಲವು ವರ್ಷದಿಂದ ಪ್ಲಾನ್ ಮಾಡುತ್ತಿರುತ್ತಾರೆ ಈ ವರ್ಷ ನೂರಕ್ಕೆ ನೂರರಷ್ಟು ನಿಮ್ಮ ಪ್ರಯತ್ನ ಫಲ ಕೊಡುತ್ತದೆ

* ಕರ್ಕಾಟಕ ರಾಶಿ:- ಕುಟುಂಬವನ್ನು ಬಹಳಷ್ಟು ಕಾಳಜಿ ಮಾಡುವ ಪ್ರೀತಿಸುವ ರಾಶಿಯಾಗಿರುವ ಕರ್ಕಾಟಕ ರಾಶಿಯವರು ಬಹಳ ಬೇಗ ಮನೆ ಕಟ್ಟಿ ಆ ಮನೆಯಲ್ಲಿ ಸಕಲ ಸೌಕರ್ಯಗಳನ್ನು ಮಾಡಿಕೊಟ್ಟು ಕುಟುಂಬದವರು ಸಂತೋಷವಾಗಿರುವುದನ್ನು ನೋಡಬೇಕು ಎಂದು ಆಸೆ ಪಡುವುದರಿಂದ ಈ ವರ್ಷ ಬಹಳ ಪ್ರಯತ್ನಪಟ್ಟು ಅವರು ಕೂಡ ತಮ್ಮ ಮನೆ ಕಟ್ಟುವ ಕನಸನ್ನು ನನಸು ಮಾಡಿಕೊಳ್ಳುವಂತಹ ಯೋಗ ಇದೆ

* ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯವರಿಗೆ 2024ರಲ್ಲಿ ಯಾವುದೇ ರೀತಿ ಹಣಕಾಸಿನ ಸಮಸ್ಯೆಗಳು ಕಾಣುವುದಿಲ್ಲ. ಈ ಕಾರಣದಿಂದಾಗಿ ಅವರೇನಾದರೂ ಮನೆ ಕಟ್ಟುವ ಯೋಜನೆಯನ್ನು ಕೈಗೆತ್ತಿಕೊಂಡರೆ ಅವರ ರಾಶಿ ಯೋಗದಲ್ಲೂ ಕೂಡ ಮನೆ ಕಟ್ಟುವ ಭಾಗ್ಯ ಈ ವರ್ಷ ಇರುವುದರಿಂದ ಈ ಕಾರ್ಯ ಯಾವುದೇ ತೊಂದರೆ ಇಲ್ಲದೆ ನೆರವೇರುತ್ತದೆ.

* ಮಕರ ರಾಶಿ:- ಮಕರ ರಾಶಿಯವರಿಗೆ ಕೂಡ 2024 ಬಹಳ ವಿಶೇಷ ಫಲಗಳನ್ನು ನೀಡುತ್ತಿದೆ ಮತ್ತು ಈ ರಾಶಿಯವರು ಹಠಮಾರಿಗಳಾಗಿದ್ದು ಅಂದುಕೊಂಡಿದ್ದರೆ ಸಾಧಿಸುವ ತನಕ ನಿದ್ರೆ ಮಾಡುವುದಿಲ್ಲ ಹಾಗಾಗಿ ಮನೆ ಕಟ್ಟಬೇಕು ಎಂದು ಈ ವರ್ಷ ಅಂದುಕೊಂಡರೆ ನಿಮ್ಮ ರಾಶಿಯೋಗದಲ್ಲಿ ಫಲ ಇದೆ ಹಣಕಾಸಿನ ತೊಂದರೆ ಎದುರಾದರೂ ಎದುರಿಸಿ ನೀವು ಮನೆ ಕಟ್ಟುವ ಕನಸನ್ನು ನನಸಾಗಿಸಿಕೊಳ್ಳಬಹುದು.

* ಕುಂಭ ರಾಶಿ:- ಕುಂಭ ರಾಶಿಯವರು ಯಾವುದೇ ವಿಷಯವನ್ನು ಆಗುವ ಮುನ್ನ ಹೇಳಿಕೊಳ್ಳುವ ಜಾಯಮಾನದವರಲ್ಲ. ನೀವು ಈಗಾಗಲೇ ಮನೆ ಕಟ್ಟುವ ಬಗ್ಗೆ ಪ್ಲಾನಿಂಗ್ ಮನಸ್ಸಿನಲ್ಲಿ ಮಾಡಿರುತ್ತೀರಿ ಮತ್ತು ಅದಕ್ಕಾಗಿ ಒಳ್ಳೆ ಸಮಯಕ್ಕಾಗಿ ಕಾಯುತ್ತಿರುತ್ತೀರಿ. 2024ರಲ್ಲಿ ನಿಮ್ಮ ರಾಶಿಗೆ ಮನೆ ಕಟ್ಟುವ ಅದೃಷ್ಟ ಫಲ ಇದೆ ಹಾಗಾಗಿ ಕುಂಭ ರಾಶಿಯವರು ಕೂಡ ಈಗ ಅಂದುಕೊಳ್ಳದೆ ಇದ್ದರೂ ನಂತರ ಮನಸು ಬದಲಾಯಿಸಿ ಹೊಸ ಮನೆ ಖರೀದಿಸುವ ಅಥವಾ ಮನೆ ಕಟ್ಟಿಸುವ ಕಾರ್ಯವನ್ನು 2024ರಲ್ಲಿ ಶುರು ಮಾಡುವ ಮನಸು ಮಾಡುತ್ತೀರಿ ಮತ್ತು ಅದನ್ನು ಪೂರ್ತಿಗೊಳಿಸುತ್ತೀರಿ.

ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂದರೆ ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಿ.!

 

ತಾಯಿ ಮಹಾಲಕ್ಷ್ಮಿ ಮನೆಗೆ ಬಂದರೆ ನಮ್ಮ ಆ ಜನ್ಮದ ಎಲ್ಲಾ ಸಂಕಷ್ಟಗಳು ಮುಗಿದಂತೆ ಯಾವ ಮನೆಯಲ್ಲಿ ತಾಯಿ ಮಹಾಲಕ್ಷ್ಮಿ ಇರುತ್ತಾರೆ, ಎಲ್ಲಾ ದೇವತೆಗಳು ಕೂಡ ಅಲ್ಲಿಗೆ ಬರುತ್ತಾರೆ. ಆ ಬಳಿಕ ಕುಟುಂಬದ ಆರ್ಥಿಕ ಸಮಸ್ಯೆಯಾಗಲಿ, ಆರೋಗ್ಯ ಸಮಸ್ಯೆಗಳೇ ಆಗಲಿ, ಕೌಟುಂಬಿಕ ಸಮಸ್ಯೆ ಆಗಲಿ ಪರಿಹಾರ ಆಗುತ್ತದೆ.

ಆದರೆ ತಾಯಿಯ ಅನುಗ್ರಹ ಆಗುವುದು ಅಷ್ಟು ಸುಲಭವಲ್ಲ, ತಾಯಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಭಕ್ತಿಯಿಂದ ಪೂಜೆ ಮಾಡಬೇಕು, ಇದರ ಜೊತೆಗೆ ಕೆಲವೊಂದು ನೀತಿ ನಿಯಮಗಳು ಇವೆ. ಈ ರೀತಿ ನಡೆದುಕೊಳ್ಳುವ ಮನೆಗೆ ತಾಯಿ ಮಹಾಲಕ್ಷ್ಮಿ ಬಂದೇ ಬರುತ್ತಾರೆ. ಹಾಗಾದರೆ ತಾಯಿ ಮಹಾಲಕ್ಷ್ಮಿ ಕೃಪ ಕಟಾಕ್ಷ ಸಿಗಬೇಕು ಎಂದರೆ ಮನೆ ಹೇಗಿರಬೇಕು ಎನ್ನುವ ಕೆಲವು ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

* ಯಾವ ಮನೆ ಮುಂದೆ ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆ ಅಂಗಳವನ್ನು ಸಾಧಿಸಿ ರಂಗೋಲಿ ಇಡುತ್ತಾರೆ, ಹೊಸಿಲಿಗೆ ರಂಗೋಲಿ ಇಟ್ಟು ಅರಿಶಿನ ಕುಂಕುಮ ಹಚ್ಚಿ ಹೂ ಇಟ್ಟು ಪೂಜೆ ಮಾಡಿರುತ್ತಾರೆ ಆ ಮನೆಗೆ ತಾಯಿ ಲಕ್ಷ್ಮಿ ದೇವಿ ಬರುತ್ತಾರೆ

* ಲಕ್ಷ್ಮಿ ದೇವಿಯು ನಮ್ಮ ಮನೆಯಲ್ಲಿ ಶಾಶ್ವತವಾಗಿರಬೇಕು ಎಂದರೆ ಮನೆ ತುಂಬಾ ಶುದ್ಧವಾಗಿರಬೇಕು. ಮಡಿಯಿಂದ ಇರುವ ಮನೆ ಮಾತ್ರ ಮಹಾಲಕ್ಷ್ಮಿಗೆ ಇಷ್ಟವಾಗುತ್ತದ.ೆ ಹಾಗಾಗಿ ಮನೆಯಲ್ಲಿ ಎಲ್ಲಂದರೆ ವಸ್ತುಗಳು ಬಿಸಾಕಿರುವುದು, ಜೇಡರ ಬಲೆ ಕಟ್ಟಿರುವುದು, ಈ ರೀತಿಯೆಲ್ಲಾ ಇದ್ದರೆ ಲಕ್ಷ್ಮಿ ದೇವಿಯು ಕೋ’ಪಗೊಳ್ಳುವುದರಿಂದ ಕ’ಷ್ಟಗಳು ಹೆಚ್ಚಾಗುತ್ತದೆ.

* ಹಬ್ಬ ಹುಣ್ಣಿಮೆ ಬಂದಾಗ ಮನೆ ಕ್ಲೀನ್ ಮಾಡುವುದರ ಬದಲು ಪ್ರತಿದಿನವೂ ಏಳುತ್ತಿದ್ದಂತೆ ಹಾಸಿಗೆಯನ್ನು ವ್ಯವಸ್ಥಿತವಾಗಿ ಜೋಡಿಸಿ ಇಡುವುದು, ಮನೆಯಲ್ಲಿ ಕಸ ಇರದಂತೆ ನೋಡಿಕೊಳ್ಳುವುದು, ಯಾವ ವಸ್ತು ಎಲ್ಲಿರಬೇಕು ಅಲ್ಲೇ ಇಡುವುದು, ಚಪ್ಪಲಿಗಳನ್ನು ಒಂದರ ಪಕ್ಕ ಒಂದು ಜೋಡಿಸುವುದು ಈ ರೀತಿ ಪ್ರತಿಯೊಂದರಲ್ಲೂ ಅಚ್ಚುಕಟ್ಟಾಗಿ ಇದ್ದಷ್ಟು ನಿಮಗೆ ಶುಭಫಲಗಳು ಸಿಗುತ್ತವೆ

* ಯಾರ ಮನೆಯಲ್ಲಿ ಆಹಾರಕ್ಕೆ ಬೆಲೆ ಕೊಡುತ್ತಾರೆ ಅನ್ನವನ್ನು ವೇಸ್ಟ್ ಮಾಡುವುದಿಲ್ಲ ಅಂತಹ ಮನೆಗಳಿಗೆ ತಾಯಿ ಆಶೀರ್ವಾದ ಮಾಡುತ್ತಾರೆ. ಅವರಿಗೆ ದೇವಿ ಅನ್ನಪೂರ್ಣೇಶ್ವರಿ ಆಶಿರ್ವಾದ ಜೊತೆ ಮಹಾಲಕ್ಷ್ಮಿ ಆಶೀರ್ವಾದ ಸಿಗುತ್ತದೆ ಮತ್ತು ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವುದು ಮತ್ತು ಬಿಕ್ಷುಕರಿಗೆ ಕೈಲಾದಷ್ಟು ಸಹಾಯ ಮಾಡಿ ಅವರ ಹಸಿವು ನೀಗಿಸುವುದು ಇಂತಹ ಗುಣಗಳಿರುವವರಿಗೆ ಮುಕ್ಕೋಟಿ ದೇವರುಗಳ ಆಶೀರ್ವಾದ ಇದ್ದೇ ಇರುತ್ತದೆ.

* ಮನೆಯಲ್ಲಿ ಮಹಾಲಕ್ಷ್ಮಿ ಶಾಶ್ವತವಾಗಿ ನೆಲೆಸಬೇಕು ಎಂದರೆ ಆ ಮನೆಯಲ್ಲಿ ತಂದೆ ಮಕ್ಕಳು ಅಥವಾ ಗಂಡ ಹೆಂಡತಿ ಯಾವಾಗಲೂ ಜ’ಗ’ಳವಾಡುತ್ತಾ ಇರಬಾರದು. ಮನೆಯಲ್ಲಿ ಕೆಟ್ಟ ಭಾಷೆಯನ್ನು ಬಳಸುವುದು, ದೊಡ್ಡವರನ್ನು ನಿಂದಿಸುವುದು, ಹೆಣ್ಣು ಮಕ್ಕಳಿಗೆ ಗೌರವ ಕೊಡದೆ ಕ’ಣ್ಣೀ’ರು ಹಾಕಿಸುವುದು ಮಾಡಿದರೆ ಲಕ್ಷ್ಮಿ ಅಲ್ಲಿರುವುದಿಲ್ಲ. ಹಿರಿಯರಿಗೆ ಗೌರವ ಹಾಗೂ ಕಿರಿಯರ ಮೇಲೆ ಪ್ರೀತಿ ಇರುವ ಕಡೆ ಎಲ್ಲಾ ದೇವರು ಇರುತ್ತಾರೆ.

* ದೇವರ ಕೋಣೆ ಅಚ್ಚುಕಟ್ಟಾಗಿರಬೇಕು. ಆದಷ್ಟು ಕಡಿಮೆ ಫೋಟೋ ಹಾಗೂ ವಿಗ್ರಹಗಳು ಇರಬೇಕು ಮತ್ತು ಪ್ರತಿನಿತ್ಯವೂ ಗೃಹಿಣಿಯು ಆ ದೇವರ ಫೋಟೋಗಳಿಗೆ ಹೂ ಇಟ್ಟು ಪೂಜೆ ಮಾಡಬೇಕು. ಸಾಧ್ಯವಾದಷ್ಟು ದೇವರಮನೆಯಲ್ಲಿ ಚಿಕ್ಕದಾದರೂ ದೀಪ ಉರಿಯುತ್ತಾ ಇರಬೇಕು ಹಾಗೂ ಪ್ರತಿನಿತ್ಯ ಮನೆ ಮುಂದೆ ತುಳಸಿ ಕಟ್ಟೆಗೆ ಪೂಜೆ ಮಾಡಿ ದೀಪ ಹಚ್ಚಿ ಪ್ರದಕ್ಷಿಣೆ ಹಾಕುವುದರಿಂದ ಅಂತಹ ಮಹಿಳೆಯರಿಗೆ ಹಾಗೂ ಆ ಕುಟುಂಬಕ್ಕೆ ತಾಯಿಯ ಆಶೀರ್ವಾದ ಸಿಗುತ್ತದೆ

* ಜೀವನದಲ್ಲಿ ಯಾವಾಗಲೂ ಒಳ್ಳೆಯದನ್ನು ಯೋಚನೆ ಮಾಡುವ, ಬೇರೆಯವರಿಗೆ ಕೆಟ್ಟದನ್ನು ಬಯಸಿದೆ ಕೈಲಾದಷ್ಟು ನೆರವಾಗುತ್ತಾ ಬದುಕುವ ಎಲ್ಲರಿಗೂ ತಾಯಿ ಮಹಾಲಕ್ಷ್ಮಿ ಸೇರಿದಂತೆ ಎಲ್ಲ ದೇವರುಗಳ ಆಶೀರ್ವಾದ ಇದ್ದೇ ಇರುತ್ತದೆ ಕಷ್ಟ ಬಂದರೂ ದೇವರ ರಕ್ಷೆಯಿಂದ ಪಾರಾಗಬಹುದು.

ಸೋಂಪಿನಿಂದ ಹೀಗೆ ಮಾಡಿದ್ರೆ ಯಾರೇ ಆಗಲಿ ನಿಮ್ಮ ಮಾತನ್ನು ಕೇಳಲೇಬೇಕು, ನೀವು ಇಷ್ಟ ಪಟ್ಟವರು ನಿಮ್ಮ ವಶವಾಗಲು ಹೀಗೆ ಮಾಡಿ.!

ಮನೆಯಲ್ಲಿರುವ ಸೋಂಪು ಕಾಳಿನ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಗೊತ್ತೇ ಇರುತ್ತದೆ. ಇದರ ಸುವಾಸನೆಯು ಎಲ್ಲರ ಗಮನವನ್ನು ಸೆಳೆದುಬಿಡುತ್ತದೆ. ಈ ಸೋಂಪು ಕಾಳು ಅಡಿಗೆಯಲ್ಲಿದ್ದರೆ ಆಹಾರ ಪದಾರ್ಥದ ರುಚಿ ಹೆಚ್ಚುತ್ತದೆ, ಹಾಗೆ ಇದು ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.

ಆಯುರ್ವೇದದಲ್ಲಿ ಕೂಡ ಇದಕ್ಕೆ ಬಹಳ ಮಹತ್ವದ ಸ್ಥಾನ ಇದೆ ಇದನ್ನು ಅಡುಗೆಗೆ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಆರೋಗ್ಯ ವರ್ಧಕವಾಗಿ ಬಳಕೆಯಾಗುವುದು ಮಾತ್ರವಲ್ಲದೆ ನಮ್ಮ ಜೀವನದ ಕೆಲವೊಂದು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವ ತಂತ್ರಗಳಿಗೂ ಕೂಡ ಬಳಕೆಯಾಗುತ್ತದೆ.

ಇಂದು ಈ ಅಂಕಣದಲ್ಲಿ ಸೋಂಪಿನಿಂದ ಮಾಡಬಹುದಾದ ಒಂದು ತಂತ್ರದ ಬಗ್ಗೆ ಹೇಳಿಕೊಡುತ್ತಿದ್ದೇವೆ, ಈ ತಂತ್ರವನ್ನು ನೀವು ಇಷ್ಟಪಟ್ಟವರನ್ನು ವಶಮಾಡಿಕೊಳ್ಳಲು ಮಾಡಬಹುದು. ಇದರಲ್ಲಿ ಬಹಳ ಮುಖ್ಯವಾದ ಅಂಶ ಏನೆಂದರೆ ಈ ತಂತ್ರವನ್ನು ಮಾಡುವುದರಿಂದ ನೀವು ಯಾರ ಹೆಸರಿನಲ್ಲಿ ಈ ತಂತ್ರ ಮಾಡುತ್ತಿದ್ದೀರಾ.

ನೀವು ಯಾರನ್ನು ನಿಮ್ಮ ವಶ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಿದ್ದಾರೋ ಅವರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಮತ್ತು ನಿಮಗೆ ಈ ತಂತ್ರವು ಪೂರ್ತಿ ಫಲ ಕೊಡಬೇಕು ಎಂದರೆ ನೀವು ಕೇವಲ ಅವರು ನಿಮ್ಮ ಮೇಲೆ ಅಟೆನ್ಷನ್ ಕೊಡಬೇಕು ಅವರೊಡನೆ ನಿಮ್ಮ ಸಂಬಂಧ ಉತ್ತಮ ಆಗಬೇಕು ಎನ್ನುವ ಉದ್ದೇಶವನ್ನಷ್ಟೇ ಸಂಕಲ್ಪ ಮಾಡಿಕೊಂಡು ಈ ಪ್ರಯೋಗವನ್ನು ಮಾಡಬೇಕು.

ನಿಮ್ಮ ಮನಸ್ಸಿನಲ್ಲಿ ದುರುದ್ದೇಶ ಇದ್ದರೆ ಇದು ಫಲ ಕೊಡುವುದಿಲ್ಲ ಬಹಳ ನಂಬಿಕೆಯಿಂದ ಮನಸ್ಸಾರೆ ಈ ಪ್ರಯೋಗವನ್ನು ಮಾಡಬೇಕು, ಇದನ್ನು ಮಾಡುವುದು ಬಹಳ ಸುಲಭ. ಇದನ್ನು ಮಾಡುವ ಮುಂಚೆ ನೀವು ಸ್ನಾನ ಮಾಡಿ ಮಡಿ ಉಟ್ಟಿರಬೇಕು ಮತ್ತು ನಿಮ್ಮ ಮನೆಯನ್ನು ಕೂಡ ಶುದ್ಧ ಮಾಡಿರಬೇಕು.

ಒಂದು ದಿನ ಬೆಳಗ್ಗೆ ಎದ್ದು ಸ್ನಾನ ಇತ್ಯಾದಿ ಮುಗಿದ ಮೇಲೆ ಮನೆ ದೇವರಿಗೆ ದೀಪ ಹಚ್ಚಿ ಪೂಜೆ ಮಾಡಿ ಮನಸ್ಸಿನಲ್ಲಿ ನಿಮ್ಮ ಮನೆದೇವರು ಹಾಗೂ ಇಷ್ಟ ದೇವರನ್ನು ಮನಸಾರೆಯಾಗಿ ಪ್ರಾರ್ಥನೆ ಮಾಡಿಕೊಳ್ಳಿ. ಈಗ ಒಂದು ಬಿಳಿ ಕಾಗದ ತೆಗೆದುಕೊಳ್ಳಿ ಜೊತೆಗೆ ಒಂದು ಬಟ್ಟಲು ಸೋಂಪಿನಲ್ಲಿ ನಿಮ್ಮ ಕೈಲಿ ಎಷ್ಟು ಸಾಧ್ಯ ಅಷ್ಟು ಸೋಂಪು ಕಾಳು ತೆಗೆದುಕೊಳ್ಳಿ.

ನೀವು ಒಂದು ಚಮಚದಷ್ಟು ತೆಗೆದುಕೊಳ್ಳಬಹುದು ಆಥವಾ ಅರ್ಧ ಚಮಚದಷ್ಟು ತೆಗೆದುಕೊಳ್ಳಬಹುದು ಅಥವಾ ಎರಡು ಮೂರು ಚಮಚದಷ್ಟು ತೆಗೆದುಕೊಳ್ಳಬಹುದು. ನೀವು ಕೈ ಹಾಕಿದಾಗ ಎಷ್ಟು ಸಿಗುತ್ತದೆ ಅಷ್ಟು ತೆಗೆದುಕೊಂಡು ಮುಷ್ಠಿಯಲ್ಲಿ ಹಿಡಿದುಕೊಳ್ಳಿ ಮತ್ತು ಈಗ ನೀವು ನಿಮ್ಮ ಮನೆಯಲ್ಲಿ ಯಾರು ನಿಮ್ಮ ಜೊತೆ ಮುನಿಸಿಕೊಂಡಿದ್ದಾರೆ.

ಅಥವಾ ನೀವು ಅವರಿಗೆ ಎಷ್ಟೇ ಪ್ರೀತಿ ಕಾಳಜಿ ತೋರಿದರು ಅವರಿಗೆ ಅದು ಅರ್ಥ ಆಗುತ್ತಿಲ್ಲ ಎಂದರೆ ಅವರಿಗೆ ನಿಮ್ಮ ಕಾಳಜಿ ಅರ್ಥ ಆಗಬೇಕು ಎಂದಿದ್ದರೆ ಅವರ ಹೆಸರು ಅಥವಾ ನಿಮ್ಮ ಮಕ್ಕಳು ನಿಮ್ಮಿಂದ ದೂರವಾಗಿದ್ದರೆ ಅವರು ಮರಳಿ ಬರಬೇಕು ಎಂದು ಅವರ ಹೆಸರು ಹೇಳಿ, ಅವರು ನಿಮ್ಮ ಜೊತೆ ಮೊದಲಿನಂತೆ ಮಾತನಾಡಬೇಕು ನಿಮ್ಮ ಮತ್ತು ಅವರ ಬಾಂಧವ್ಯ ಗಟ್ಟಿಯಾಗಬೇಕು ಎಂದು ಅವರ ಹೆಸರನ್ನು 9 ಬಾರಿ ಹೇಳಿ.

ಕೆಲವೊಮ್ಮೆ ಅಕ್ಕ-ತಂಗಿಯರ ಮಧ್ಯೆ, ತಂದೆ-ಮಕ್ಕಳ ಮಧ್ಯೆ, ಗಂಡ-ಹೆಂಡತಿ ಮಧ್ಯೆ ಈ ರೀತಿ ಸಂಬಂಧಗಳ ನಡುವೆ ಮನಸ್ತಾಪಗಳಾಗಿರುತ್ತದೆ ಅದನ್ನು ಪರಿಹಾರ ಮಾಡಿಕೊಳ್ಳಲು ಈ ತಂತ್ರ ಚೆನ್ನಾಗಿ ಕೆಲಸ ಮಾಡುತ್ತದೆ. ಹೀಗೆ 9 ಬಾರಿ ಅವರ ಹೆಸರನ್ನು ಸೋಂಪು ಕಾಳು ಹಿಡಿದುಕೊಂಡು ಹೇಳಿದ ಮೇಲೆ ಅದನ್ನು ಪೇಪರ್ ಗೆ ಹಾಕಿ ಕಟ್ಟಿ.

ಇದನ್ನು ಮನೆಯಲ್ಲಿ ಯಾರ ಕಣ್ಣಿಗೂ ಬೀಳದ ಹಾಗೆ ಯಾರು ಇದನ್ನು ಮುಟ್ಟದ ಹಾಗೆ ನೋಡಿಕೊಳ್ಳಿ. ಯಾರ ಕಣ್ಣಿಗೂ ಬೀಳಬಾರದು ಎಂದರೆ ಅದನ್ನು ನೀವು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡರೆ ಒಳ್ಳೆಯದು, ಹದಿನಾರು ದಿನ ಆದಮೇಲೆ ಈಗ ಅದನ್ನು ತೆಗೆದು 17ನೇ ದಿನ ಅದರಿಂದ ಕಷಾಯ ಮಾಡಿ ಅಥವಾ ಜ್ಯೂಸ್ ಮಾಡಿ, ಜ್ಯೂಸ್ ಗೆ ಹಾಕಿ ಈ ಸೋಂಪನ್ನು ಪುಡಿ ಮಾಡಿ ಹಾಕಿ ಅವರು ಕುಡಿಯಬೇಕು ಆ ರೀತಿ ಮಾಡಿ ಮತ್ತೆ ನಿಮ್ಮ ಸಂಬಂಧ ಮೊದಲಿನಂತೆ ಸುಧಾರಿಸುತ್ತದೆ ಮತ್ತು ಇದರಿಂದ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ.