Home Blog Page 93

ಕೋಟಿ ಕೊಟ್ಟರು ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಈ ಮೂರು ವಸ್ತುಗಳನ್ನು ಮನೆಯಿಂದ ಹೊರಗೆ ಕೊಡಬೇಡಿ. ಒಂದು ವೇಳೆ ಕೊಟ್ಟರೆ 8 ವರ್ಷಗಳ ಕಾಲ ನಿಮಗೆ ಕಾಟ ತಪ್ಪಲ್ಲ.!

 

ನಮ್ಮ ಶಾಸ್ತ್ರದಲ್ಲಿ ಕೆಲವೊಂದು ನಿಯಮಗಳನ್ನು ಹಿರಿಯರು ಮಾಡಿದ್ದಾರೆ ನಾವು ಅದಕ್ಕೆ ಎಷ್ಟು ನಿಷ್ಠೆಯಿಂದ ನಡೆದುಕೊಳ್ಳುತ್ತೇವೆ ಅಷ್ಟು ನಮ್ಮ ಕುಟುಂಬಕ್ಕೆ ಒಳ್ಳೆಯದು ಒಂದು ವೇಳೆ ನಾವು ಇವುಗಳನ್ನು ಮೀರಿದಾಗ ನಾವು ಮಾತಾಡಬೇಡ ನಮ್ಮ ಕುಟುಂಬದ ಸದಸ್ಯರು ಕೂಡ ಕಷ್ಟಗಳಿಗೆ ಸಿಲ್ಕುತ್ತಾರೆ.

ಹಾಗಾಗಿ ಹಿರಿಯರು ಕಟ್ಟುನಿಟ್ಟಾಗಿ ಹೇಳಿರುವ ಕೆಲ ಮಾತುಗಳನ್ನು ಪಾಲಿಸುವುದು ಬಹಳ ಒಳ್ಳೆಯದು ಅದೇ ರೀತಿ ಶಾಸ್ತ್ರದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಕ್ಕೆ ಬಹಳ ಪ್ರಶಸ್ತವಿದೆ ಈ ದಿನಗಳು ಭಗವಂತನ ಆರಾಧನೆಗೆ ಮೀಸಲಾಗಿವೆ. ಅದರಲ್ಲೂ ತಾಯಿ ಮಹಾಲಕ್ಷ್ಮಿಯನ್ನು ಉಳಿಸಿಕೊಳ್ಳಲು ಮತ್ತು ಹಣಕಾಸಿನ ಒಳಿತಿಗಾಗಿ ಪ್ರಾರ್ಥಿಸಲು ಈ ದಿನಗಳು ಶುಭ ದಿನಗಳವಾಗಿವೆ.

ಇಂತಹ ದಿನಗಳಲ್ಲಿ ನಾವು ತಿಳಿದ ತಿಳಿಯದ ಮಾಡುವ ಕೆಲವು ತಪ್ಪುಗಳಿಂದ ಎಂಟು ವರ್ಷಗಳ ಕಾಲ ಕಷ್ಟಪಡಬೇಕಾಗುತ್ತದೆ. ಈ ದಿನಗಳಂದು ಯಾವುದೇ ಕಾರಣಕ್ಕೂ ಮನೆಯಿಂದ ಕೆಲ ವಸ್ತುಗಳನ್ನು ಹೊರಗೆ ಕೊಡಬಾರದು. ಹೇಗೆ ಮಂಗಳವಾರ ಹಾಗೂ ಶುಕ್ರವಾರದಂದು ಕೆಲವು ವಸ್ತುಗಳನ್ನು ಕೊಡುವುದಿಲ್ಲವೋ ಅದಕ್ಕಿಂತಲೂ ಹೆಚ್ಚು ಎಚ್ಚರವಾಗಿ ಅಮಾವಾಸ್ಯೆ ಹಾಗೂ ನಿಮ್ಮ ದಿನಗಳಂದು ಇರಬೇಕು.

ಯಾಕೆಂದರೆ ಈ ದಿನಗಳಂದು ಕೆಲವರು ಬೇಕೆಂದೆ ನಿಮ್ಮ ಬಳಿ ಇವುಗಳನ್ನು ಪಡೆಯಲು ಬರುತ್ತಾರೆ, ಇನ್ನು ಕೆಲವರು ಅವರಿಗೂ ಸಹ ಗೊತ್ತಿಲ್ಲದೇ ಅವರುಮ ಬಳಿ ಇಲ್ಲದ ಕಾರಣಕ್ಕಾಗಿ ಅವರ ಅವಸರಕ್ಕಾಗಿ ನಿಮ್ಮನ್ನು ಕೇಳುತ್ತಾರೆ. ನೀವು ಕೂಡ ತಿಳುವಳಿಕೆ ಇಲ್ಲದೆ ಇಂತಹ ವಸ್ತುಗಳನ್ನು ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನಗಳನ್ನು ಕೊಟ್ಟರೆ ನಿಮಗೆ ಎಂಟು ವರ್ಷಗಳ ಕಾಲ ಪಡಬಾರದ ಕ’ಷ್ಟವನ್ನು ಪಡುವ ಸಂದರ್ಭ ಬರುತ್ತದೆ, ಹಾಗಾಗಿ ಇವುಗಳನ್ನು ತಿಳಿದುಕೊಂಡು ಎಚ್ಚರಿಕೆಯಿಂದ ಇರಿ.

* ಮೊದಲನೇದಾಗಿ ಯಾವುದೇ ಕಾರಣಕ್ಕೂ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ಯಾರಿಗೂ ಹಣವನ್ನು ಸಾಲ ಕೊಡಬಾರದು. ಕೆಲವರು ಮಂಗಳವಾರ ಹಾಗೂ ಶುಕ್ರವಾರದಂದು ಕೂಡ ಸಾಲ ಕೊಡುವುದಿಲ್ಲ ಇದು ಕೂಡ ಒಳ್ಳೆಯ ಅಭ್ಯಾಸ ಮತ್ತು ಇದಕ್ಕಿಂತ ಹೆಚ್ಚಾಗಿ ಅವರು ಕೋಟಿ ವಾಪಸ್ ಕೊಡುತ್ತೇನೆ ಎಂದರು ಕೂಡ.

ಮಂಗಳವಾರ ಹಾಗೂ ಶುಕ್ರವಾರ ಜೊತೆಗೆ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ನಿಮ್ಮ ಮನೆಯಿಂದ ಒಂದು ರೂಪಾಯಿ ನಾಣ್ಯವನ್ನು ಕೂಡ ನೀವು ಸಾಲವಾಗಿ ಆಚೆ ಕೊಡಬೇಡಿ. ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಬಹಳ ಹೀ’ನಾ’ಯ ಸ್ಥಿತಿಗೆ ಬರುತ್ತದೆ. ನೀವು ನಿಮ್ಮ ಅವಶ್ಯಕತೆಗಳಿಗೆ ಅಂದು ಖರ್ಚು ಮಾಡಬಹುದು ಆದರೆ ಸಾಲ ಎಂದು ಮಾತ್ರ ಯಾರಿಗೂ ಕೊಡಬಾರದು.

* ಮನೆಯಲ್ಲಿರುವ ಒಡವೆಗಳು ಕೂಡ ತಾಯಿ ಮಹಾಲಕ್ಷ್ಮಿಯ ಆಶೀರ್ವಾದ. ಎಲ್ಲರಿಗೂ ಕೂಡ ಒಡವೆ ಹಾಕಿಕೊಳ್ಳುವ ಯೋಗ ಇರುವುದಿಲ್ಲ. ಹೆಣ್ಣು, ಹೊನ್ನು, ಮಣ್ಣು ಋಣ ಇದ್ದರೆ ಮಾತ್ರ ಎನ್ನುವ ಗಾದೆಯನ್ನು ಕೂಡ ನೀವು ಕೇಳಿರಬಹುದು. ಹಾಗಾಗಿ ನಿಮ್ಮ ಪಾಲಿನ ಒಡವೆಯನ್ನು ಮತ್ತೊಬ್ಬರು ಕೇಳಿದರು ಎಂದು ಕೊಡುವುದು ತಪ್ಪು.

ಅದರಲ್ಲೂ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ನಿಮ್ಮ ಬೆಲೆಬಾಳುವ ಒಡವೆಗಳನ್ನು ಬೇರೆಯವರಿಗೆ ನೀವು ಕೊಟ್ಟರೆ ನಿಮ್ಮ ಬದುಕಿನಲ್ಲಿ ನೀವು ಮತ್ತೆ ಆ ವಸ್ತುಗಳನ್ನು ಪಡೆಯಲಾಗದ ಅಥವಾ ಮತ್ತೆ ಅದಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸಲಾಗದ ಸ್ಥಿತಿಗೆ ತಲುಪಬಹುದು. ಆದ ಕಾರಣಕ್ಕಾಗಿ ತಾಯಿ ಮಹಾಲಕ್ಷ್ಮಿ ಅನುಗ್ರಹವಾಗಿರುವ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಅಮವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಮನೆಯಿಂದ ಹೊರಗೆ ಕಳುಹಿಸಬೇಡಿ.

* ಅದೇ ರೀತಿಯಾಗಿ ಹಾಲು, ಅರಿಶಿಣ, ಉಪ್ಪು ಇವುಗಳು ಕೂಡ ತಾಯಿಯ ಮಹಾಲಕ್ಷ್ಮಿಯ ರೂಪವೆಂದು ಹೇಳಲಾಗುತ್ತದೆ. ಈ ವಸ್ತುಗಳನ್ನು ಕೂಡ ನೀವು ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಯಾರಿಗೂ ಕೊಡಬಾರದು. ಮನೆಗೆ ಮುತ್ತೈದೆಯರು ಬಂದರೆ ಅರಿಶಿನ ಕುಂಕುಮ ಕೊಡುವುದು ಬೇರೆ ಆದರೆ ಅವರ ಮನೆಯಲ್ಲಿ ಖಾಲಿ ಆಗಿದೆ ಎಂದು ಅಕ್ಕ ಪಕ್ಕದ ಮನೆಯವರಿಗೆ ನಿಮ್ಮ ಮನೆಯಲ್ಲಿ ಇರುವುದನ್ನು ಅವರು ಬಳಸುವುದಕ್ಕೆಂದು ಕೇಳಿದರೆ ಕೊಡಲೇ ಬಾರದು, ಇವುಗಳನ್ನು ತಿಳಿದುಕೊಂಡು ಇನ್ನು ಮುಂದೆ ಪಾಲಿಸಿ.

ರಾತ್ರಿ ಉಳಿದ ಅನ್ನದಿಂದ ಈ ರೀತಿ ಮಾಡಿ ವಾರದಲ್ಲೇ ನಿಮ್ಮ ಬದುಕು ಬದಲಾಗುತ್ತದೆ.!

 

ಈ ಪ್ರಪಂಚದಲ್ಲಿ ಎಲ್ಲದಕ್ಕಿಂತ ಶ್ರೇಷ್ಠವಾದದ್ದು ಅನ್ನ. ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ಕೂಡ ಕರೆಯುತ್ತಾರೆ. ಯಾಕೆಂದರೆ, ನಮಗೆ ಹೆಚ್ಚು ಹಸಿವಿದ್ದಾಗ ಅನ್ನ ತಿಂದಾಗ ಸಿಗುವ ನೆಮ್ಮದಿ ಬೇರೆ ಏನನ್ನು ತಿಂದಾಗಲೂ ಸಿಗಲಾರದು. ಹಾಗಾಗಿ ಇಂತಹ ಅನ್ನವನ್ನು ಪ್ರತಿಯೊಬ್ಬರ ಗೌರವಿಸಬೇಕು ಮತ್ತು ಇದನ್ನು ತಾತ್ಸಾರ ಮಾಡುವುದಾಗಲಿ, ಅನ್ನಕ್ಕೆ ಅಗೌರವ ತೋರುವುದಾಗಲಿ ಮಾಡಬಾರದು.

ಎಷ್ಟು ಪವಿತ್ರ ಆಹಾರವಾದ ಅನ್ನದಿಂದ ಒಂದು ಸುಲಭ ಉಪಾಯ ಮಾಡಿ ನಿಮ್ಮ ಜೀವನದ ಎಲ್ಲಾ ರೀತಿಯ ಕ’ಷ್ಟಗಳನ್ನು ಪರಿಹರಿಸಿಕೊಳ್ಳಬಹುದು. ಅನ್ನಕ್ಕೆ ಆ ಶಕ್ತಿ ಇದೆ ಅದರಲ್ಲೂ ರಾತ್ರಿ ಉಳಿದ ಅನ್ನಕ್ಕೆ ಈ ಶಕ್ತಿ ಇದೆ ಎಂದರೆ ನೀವು ಆಶ್ಚರ್ಯಗೊಳ್ಳುತ್ತೀರಿ. ಇದರ ಬಗ್ಗೆ ತಿಳಿದುಕೊಳ್ಳಲು ಹಾಗೂ ಇದನ್ನು ಪಾಲಿಸಲು ಅಂಕಣವನ್ನು ಕೊನೆಯವರೆಗೂ ಓದಿ ಮಾಹಿತಿ ತಿಳಿದುಕೊಳ್ಳಿ.

ಸಾಮಾನ್ಯವಾಗಿ ನಾವು ಎಷ್ಟು ಬೇಕೋ ಅಷ್ಟೇ ಅಡುಗೆ ಮಾಡುತ್ತೇವೆ. ಊಟ ಮಾಡಿ ಪಾತ್ರೆಗಳನ್ನು ತೊಳೆದಿಟ್ಟು ಮಲಗುತ್ತೇವೆ. ಆದರೆ ಯಾವುದೇ ಕಾರಣಕ್ಕೂ ರಾತ್ರಿ ಸಮಯ ಎಲ್ಲಾ ಅಡಿಗೆ ಖಾಲಿ ಮಾಡಿ, ಒಂದು ತುತ್ತು ಅನ್ನ ಇಲ್ಲದಂತೆ ಮಾಡಿ ಮಲಗಬೇಡಿ ಇದೇ ನಿಮ್ಮ ಜೀವನದ ನೂರೆಂಟು ಸಮಸ್ಯೆಗಳಿಗೆ ಕಾರಣ ಆಗಿರುತ್ತದೆ.

ಬದಲಾಗಿ ರಾತ್ರಿ ಹೊತ್ತು ಅಡುಗೆ ಆದ ತಕ್ಷಣವೇ ಒಂದು ಸ್ಟೀಲ್ ಬೌಲ್ ನಲ್ಲಿ ಒಂದು ಹಿಡಿ ಅಥವಾ ಎರಡು ಸ್ಪೂನ್ ಅನ್ನ ಎತ್ತಿಟ್ಟು ಅದಕ್ಕೆ ಪ್ಲೇಟ್ ಮುಚ್ಚಿ ನಿಮಗೆ ಗ್ಯಾಸ್ ಸ್ಟವ್ ಬಳಿ ಇಡಿ. ಯಾವುದೇ ಕಾರಣಕ್ಕೂ ರಾತ್ರಿ ಹೊತ್ತು ಎಂಜಲು ಪಾತ್ರೆಗಳನ್ನು ಹಾಗೆ ಇಟ್ಟು ಮಲಗಬೇಡಿ, ಅಡುಗೆ ಮಾಡಿದ ಪಾತ್ರೆಗಳನ್ನು ಹಾಗೂ ನಿಮ್ಮ ಊಟ ಮಾಡಿದ ಪಾತ್ರೆಗಳನ್ನು ತೊಳೆದು ಗ್ಯಾಸ್ ಮೇಲೆ ನೀಟಾಗಿ ಕ್ಲೀನ್ ಮಾಡಿ ನೀವು ಬೌಲ್ ನಲ್ಲಿ ಎತ್ತಿಟ್ಟಿದ್ದ ಅನ್ನವನ್ನು ಗ್ಯಾಸ್ ಪಕ್ಕ ಇಟ್ಟು ಮಲಗಿ.

ಯಾಕೆಂದರೆ ನಮ್ಮ ನಂಬಿಕೆಗಳ ಪ್ರಕಾರ ರಾತ್ರಿ ಹೊತ್ತು ನಾವು ಮಲಗಿದ ಮೇಲೆ ಹಿರಿಯರು ಬಂದು ಅಡುಗೆ ಮನೆಗೆ ನೋಡುತ್ತಾರೆ. ಆ ಸಮಯದಲ್ಲಿ ನಾವು ಒಂದು ತುತ್ತು ಕೂಡ ನನ್ನ ಉಳಿಸಿಲ್ಲ ಎಂದರೆ ಅವರು ನಮ್ಮ ಮಕ್ಕಳಿಗೆ ಸಮಸ್ಯೆಯಾಗಿದೆ, ಅವರಿಗೆ ಊಟಕ್ಕೂ ಕೂಡ ಕ’ಷ್ಟವಾಗುತ್ತಿದೆ ಎಂದುಕೊಂಡು ಹೋಗುತ್ತಾರೆ.

ಈ ರೀತಿ ಹಿರಿಯರಿಗೆ ನೋವುಂಟು ಮಾಡಬಾರದು ಹಾಗಾಗಿ ನೀವು ಸ್ವಲ್ಪ ಅನ್ನ ಎತ್ತಿಟ್ಟಿದ್ದರೆ ಸಮೃದ್ಧಿಯಾಗಿದ್ದಾರೆ ಎಂದು ಹರಸಿ ನೆಮ್ಮದಿಯಾಗಿ ಹೋಗುತ್ತಾರೆ. ನಿಮಗಿದ್ದ ಪಿತೃ ದೋಷಗಳು ಈ ರೀತಿ ಹಿರಿಯರ ಸಂತೋಷಗೊಳ್ಳುವುದರಿಂದ ನಿವಾರಣೆಯಾಗುತ್ತವೆ. ಅದಕ್ಕೆ ನಿಂತಿದ್ದ ನಿಮ್ಮ ಎಲ್ಲಾ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಮನೆಯಲ್ಲಿ ನೆಮ್ಮದಿ ಇರುತ್ತದೆ.

ತಾಯಿ ಮಹಾಲಕ್ಷ್ಮಿಯು ಕೂಡ ರಾತ್ರಿ ಹೊತ್ತು ಸಂಚಾರ ಮಾಡುತ್ತಾರೆ. ಈ ಸಮಯದಲ್ಲಿ ಎಲ್ಲರ ಅಡುಗೆಮನೆಗೂ ಬಂದು ನೋಡುತ್ತಾರೆ. ನೀವು ಅಡುಗೆ ಮನೆಯಲ್ಲಿ ಗಲೀಜಾಗಿ ಇಟ್ಟುಕೊಂಡಿದ್ದರೆ ಮತ್ತು ಒಂದು ತುತ್ತು ಅನ್ನ ಬಿಡದೆ ಖಾಲಿ ಮಾಡಿದ್ದರೆ ಅವರು ಕೋಪಗೊಳ್ಳುತ್ತಾರೆ. ನಾನು ಎಷ್ಟೇ ಕೊಟ್ಟಿದ್ದರೂ ಕೂಡ ಇವರು ದರಿದ್ರ ಮಾಡುತ್ತಾರೆ ಎಂದು ಬೇಸರ ಮಾಡಿಕೊಡುತ್ತಾರೆ.

ಆದ ಕಾರಣದಿಂದಾಗಿ ಅನ್ನ ಎತ್ತಿಡಿ. ಆಗ ಇದೇ ರೀತಿ ಅನ್ನ ಅಕ್ಷಯವಾಗಲಿ ಎಂದು ಹಾರೈಸುತ್ತಾರೆ ಮತ್ತು ನಿಮಗೆ ತಾಯಿ ಅನ್ನಪೂರ್ಣೇಶ್ವರಿ ಆಶೀರ್ವಾದವು ಕೂಡ ಸಿಗುತ್ತದೆ. ಆದ ಕಾರಣಕ್ಕಾಗಿ ಇವತ್ತಿನಿಂದಲೇ ಈ ಅಭ್ಯಾಸ ಮಾಡಿ ಮರುದಿನ ಎದ್ದು ಯಾವುದೇ ಕಾರಣಕ್ಕೂ ಕಸದ ಬುಟ್ಟಿಗೆ ಆ ಅನ್ನವನ್ನು ಹಾಕಬೇಡಿ. ನಿಮ್ಮ ಮನೆಯ ಸುತ್ತ ಬರುವ ಪಕ್ಷಿಗಳಿಗೆ ಹಾಕಿ ಅಥವಾ ಮೂಕ ಪ್ರಾಣಿಗಳಿಗೆ ಹಾಕಿ.

ಹೀಗೆ ಮಾಡುವುದರಿಂದ ಅವುಗಳ ಹಸಿವು ನೀಗುತ್ತದೆ ಅವುಗಳು ಕೂಡ ನಿಮಗೆ ಒಳ್ಳೆಯದಾಗಲಿ ಎಂದು ಹರಸುತ್ತವೆ. ಕೇವಲ ಒಂದು ವಾರ ಈ ರೀತಿ ಅಭ್ಯಾಸ ಮಾಡಿ ನೋಡಿ ಫಲಿತಾಂಶ ನಿಮಗೆ ತಿಳಿಯುತ್ತದೆ. ನಂತರ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

2023ನೇ ವರ್ಷ ಮುಗಿಯುತ್ತಿದ್ದಂತೆ 2024ರ ಸಂಪೂರ್ಣ ವರ್ಷ ಈ 7 ರಾಶಿಯವರಿಗೆ ಹಣದ ಸುರಿಮಳೆ, ಬಿಕ್ಷುಕ ಕೂಡ ಕುಬೇರನಾಗುವ ಯೋಗ.!

0

 

ಹೊಸ ವರ್ಷಕ್ಕೆ ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿವೆ. ಹೊಸ ವರ್ಷ ಎನ್ನುವುದು ಯಾವಾಗಲೂ ಒಂದು ಹೊಸ ಹುರುಪು ಹುಟ್ಟಿಸುತ್ತದೆ ಹಾಗೂ ನಂಬಿಕೆಯನ್ನು ಹುಟ್ಟಿಸುತ್ತದೆ. ಈ ರೀತಿ ಅದೇ ರೀತಿ ಹೊಸ ವರ್ಷದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುವ ಎಲ್ಲರಿಗೂ ಈ ಅಂಕಣದಲ್ಲಿ ಕೆಲ ಮುಖ್ಯ ಮಾಹಿತಿ ತಿಳಿಸುತ್ತಿದ್ದೇವೆ.

ಅದರಲ್ಲೂ ಏಳು ರಾಶಿಯವರಿಗಂತೂ 2024ರ ಹೊಸ ವರ್ಷವೂ ಬಹಳ ಅದ್ಭುತವಾಗಿರಲಿದೆ ಯಾವ ರಾಶಿಯವರು ಈ ವರ್ಷ ಈ ರೀತಿ ತಮ್ಮ ಅದೃಷ್ಟದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಮತ್ತು ಯಾವ ಯಾವ ಕಾರ್ಯಗಳನ್ನು ಅವರು ಕೈಗೊಳ್ಳುವುದರಿಂದ ಅದರಲ್ಲಿ ವಿಜಯ ಸಾಧಿಸುತ್ತಾರೆ ಮತ್ತು ಯಾವ ರಾಶಿಯವರು ಈ ವರ್ಷ ಕಾದು ನೋಡಬೇಕು ಎನ್ನುವ ಎಲ್ಲ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಪೂರ್ತಿ ಮಾಹಿತಿಗಾಗಿ ಕೊನೆವರೆಗೂ ಓದಿ.

ಮೇಷ, ವೃಷಭ, ಕರ್ಕಾಟಕ, ಕನ್ಯಾ, ಮಕರ, ತುಲಾ ಮತ್ತು ಮೀನ ರಾಶಿಯವರು ಈ ವರ್ಷ ಅಂತಹ ಉತ್ತಮವಾದ ಫಲಗಳನ್ನು ಪಡೆಯಲಿದ್ದಾರೆ. ಈ ವರ್ಷ ಆ ಎಲ್ಲಾ ಏಳು ರಾಶಿಯವರು ಕೂಡ ಅತ್ಯಂತ ಲಾಭದಾಯಕ ಫಲಗಳನ್ನು ಪಡೆಯುತ್ತಾರೆ.

ಈ ವರ್ಷ ಅವರು ಯಾವುದೇ ಹೊಸ ಕಾರ್ಯ ಆರಂಭಿಸಿದರೆ ಅದು ಮನೆ ಕಟ್ಟುವ ಕಾರ್ಯ ಆಗಿರಲಿ ಅಥವಾ ಆಸ್ತಿ ಖರೀದಿಸುವ ಕಾರ್ಯ ಆಗಿರಲಿ ಅಥವಾ ಸಣ್ಣಪುಟ್ಟ ವ್ಯವಹಾರವೇ ಆಗಿರಲಿ ಇಲ್ಲವಾದಲ್ಲಿ ಯಾವುದಾದರೂ ಉಳಿತಾಯ ಯೋಜನೆಯನ್ನು ಆರಂಭಿಸಿದ್ದೇ ಆದಲ್ಲಿ ಎಲ್ಲದರಲ್ಲೂ ಕೂಡ ಅಧಿಕ ಲಾಭವನ್ನು ಪಡೆಯುತ್ತಾರೆ.

ಈ ವರ್ಷದಲ್ಲಿ ಕೆಲ ಕಾರ್ಯಗಳು ಪೂರ್ತಿ ಗೊಳ್ಳುವ ಅಥವಾ ಈ ವರ್ಷ ಆರಂಭಿಸಿದರೂ ದೀರ್ಘಕಾಲದಲ್ಲಿ ಲಾಭ ಕೊಡುವಂತಹ ವಿಷಯಗಳು ಕೂಡ ಅವರ ಪಾಲಿಗೆ ಅನುಕೂಲವನ್ನೇ ಮಾಡಿಕೊಡುತ್ತದೆ. ಅನೇಕ ವರ್ಷದಿಂದ ಕಂಕಣ ಭಾಗ್ಯ ಇಲ್ಲದೆ ಈ ವಿಚಾರವಾಗಿ ಬೇಸರದಲ್ಲಿ ಇದ್ದವರಿಗೆ ಈ ವರ್ಷ ವಿವಾಹ ಯೋಗ ಕೂಡಿ ಬರಲಿದೆ ಮತ್ತು ಬಹಳ ಕಾಲದಿಂದ ಪ್ರೇಮ ವಿವಾಹ ಆಗಲು ಕಾಯುತ್ತಿದ್ದವರಿಗೆ ಕುಟುಂಬದ ಸಮ್ಮತಿ ಸಿಗುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ಮದುವೆ ವಿಚಾರವಾಗಿ ಕಳೆದ ಎರಡು ಮೂರು ವರ್ಷಗಳಿಂದ ಚಿಂತೆ ಮಾಡುತ್ತಿದ್ದವರಿಗೆ ಈ ವರ್ಷ ನಿಮ್ಮ ನಿರೀಕ್ಷೆಯ ಫಲಗಳು ಸಿಗುವುದು ಗ್ಯಾರಂಟಿ. ಹಾಗೆ ವಿದ್ಯಾಭ್ಯಾಸದ ವಿಚಾರದಲ್ಲಿ ಕೂಡ ಶುಭವಾಗುತ್ತದೆ. ಸ್ವಲ್ಪ ಪ್ರಯತ್ನ ಪಟ್ಟರೆ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮುಗಿಸುವ ಅಥವಾ ಅತ್ಯುತ್ತಮ ಅಂಕಗಳಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ, ತಮ್ಮ ಗ್ರಾಮಕ್ಕೆ, ಕುಟುಂಬಕ್ಕೆ ಹೆಸರು ತರಬಹುದು.

ಆದರೆ ಮಧ್ಯದಲ್ಲಿ ಈ ವಿಚಾರದಲ್ಲಿ ನೀವು ವಿಚಲಿತರಾಗುತ್ತಿರಿ ಅಂತಹ ತಪ್ಪುಗಳನ್ನು ಮಾಡಬೇಡಿ ಏಕಾಗ್ರತೆಯಿಂದ ವಿದ್ಯಾಭ್ಯಾಸವನ್ನು ಪೂರೈಸಿ. ಆರೋಗ್ಯದ ವಿಚಾರದಲ್ಲಿ ಕೂಡ ಈ ರಾಶಿಗಳವರಿಗೆ ಮಿಶ್ರಫಲಗಳಿರುತ್ತವೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಅಥವಾ ಬಹಳ ದಿನಗಳ ಕಾಲದಿಂದ ಕಾಡುತ್ತಿರುವ ಕಾಯಿಲೆ ಇದ್ದರೂ ಕೂಡ ಗಂಭೀರವಾದ ಪರಿಣಾಮವನ್ನು ಮಾಡುವುದಿಲ್ಲ.

ಈ ವಿಚಾರವಾಗಿ ನೀವು ಧೈರ್ಯದಿಂದ ಇರಬಹುದು ಆದರೆ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬೇಡಿ. ಈ ವರ್ಷ ನೀವು ಬಹಳ ಸಂತೋಷದಿಂದ ವರ್ಷವನ್ನು ಕಳೆಯುತ್ತೀರಿ. ಈ ವರ್ಷವನ್ನು ನಿಮ್ಮ ಅತ್ಯುತ್ತಮ ವರ್ಷವನ್ನಾಗಿ ಮಾಡಿಕೊಳ್ಳಲು ಎಲ್ಲ ಯೋಜನೆಗಳನ್ನು ಕೈಗೊಳ್ಳಿ ಮತ್ತು ಅದರಲ್ಲಿ ವಿಜಯಶಾಲಿಯಾಗಿ , ಖಂಡಿತವಾಗಿ ಈ ವರ್ಷ ನಿಮ್ಮನ್ನು ಯಾವುದೇ ವಿಚಾರದಲ್ಲಿ ನಿರಾಸೆಗೊಳಿಸುವುದಿಲ್ಲ.

 

ವೈಕುಂಠ ಏಕಾದಶಿ ಮುಗಿಯಿತು ಇಂದು ಹನುಮ ಜಯಂತಿ.! ನಾಳೆಯಿಂದ 4 ವರ್ಷ ಈಗ 5 ರಾಶಿಯವರಿಗೆ ಮಹಾರಾಜ ಯೋಗ.!

0

 

ಹನುಮ ಜಯಂತಿ ಎನ್ನುವುದು ಒಂದು ಬಹಳ ಪವಿತ್ರವಾದ ದಿನ. ಈ ವರ್ಷ ಡಿಸೆಂಬರ್ 23 ವೈಕುಂಠ ಏಕಾದಶಿ ಇದ್ದು ಇದು ಕೂಡ ಬಹಳ ಶ್ರೇಷ್ಠವಾದ ದಿನವಾಗಿದೆ. ಇದಾದ ಮರುದಿನವೇ ಹನುಮ ಜಯಂತಿ ಕೂಡ ಬಂದಿರುವುದು ಆಸ್ತಿಕರ ಪಾಲಿಗೆ ಅಪಾರ ಸಂತೋಷವನ್ನುಂಟು ಮಾಡಿದೆ.

ಸದಾ ತಮ್ಮದೇ ಆದ ಜೀವನ ಜಂಜಾಟಗಳಲ್ಲಿ ಮುಳುಗಿ ಹೋಗಿರುವ ಜನತೆಗೆ ಈ ರೀತಿ ಹಬ್ಬ ಹರಿದಿನಗಳ ಆಚರಣೆಗಳು ತಮ್ಮ ಒತ್ತಡಗಳನ್ನೆಲ್ಲ ಕಡಿಮೆ ಮಾಡಿ ಭಗವಂತನ ಸ್ಮರಣೆಗೆ ಸ್ವಲ್ಪ ಕಾಲ ಮೀಸಲಿಡಿದ ಸಮಯವಾಗಿದೆ ಆದ್ದರಿಂದ ಪ್ರತಿಯೊಬ್ಬರು ಸಾಧ್ಯವಾದಷ್ಟು ಇವುಗಳಿಗೆ ತಪ್ಪದೆ ನಡೆದುಕೊಂಡು ಭಗವಂತನ ಕೃಪ ಕಟಾಕ್ಷಕ್ಕೆ ಪಾತ್ರರಾಗಿ ಜೀವನದಲ್ಲಿ ಏಳಿಗೆ ಪಡೆಯುತ್ತಾರೆ.

ಅದೇ ರೀತಿಯಾಗಿ ಹನುಮ ಜಯಂತಿಯನ್ನು ಆಚರಣೆ ಕೆಲ ರಾಶಿಯವರ ಭವಿಷ್ಯವನ್ನು ಬದಲಾಯಿಸಲಿದೆ ಈ ವರ್ಷದ ಹನುಮ ಜಯಂತಿ ನಂತರ ಯಾವ ರಾಶಿಯವರ ಅದೃಷ್ಟ ಬದಲಾಗಿದೆ ಮಾಹಿತಿ ಇಲ್ಲಿದೆ ನೋಡಿ. ಹನುಮ ಜಯಂತಿ ದಿನ ತಪ್ಪದೇ ಆಂಜನೇಯನ ಸನ್ನಿಧಾನಕ್ಕೆ ಹೋಗಿ ಸ್ವಾಮಿಯ ದರ್ಶನವನ್ನು ಮಾಡಬೇಕು ಮತ್ತು ಈ ದಿನ ಹನುಮಾನ್ ಚಾಲೀಸಾ, ಸುಂದರಕಾಂಡ, ರಾಮಾಯಣ ರಾಮ ರಕ್ಷಾ ಸ್ತೋತ್ರ ಇತ್ಯಾದಿಗಳ ಪಠಣೆ ಮಾಡಬೇಕು.

ಇವುಗಳನ್ನು ಹನುಮಾನ್ ಜಯಂತಿಯಂದು ಓದುವುದರಿಂದ ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಕೇಸರಿ ತಿಲಕವನ್ನು ತಪ್ಪದೆ ಹಣೆಗೆ ಹಚ್ಚಿ ಸಾಧ್ಯವಾದರೆ ಮನೆ ಮೇಲೆ ಕೇಸರಿ ಧ್ವಜವನ್ನು ಕೂಡ ಆರಿಸಬಹುದು. ಆಂಜನೇಯ ಎಂದರೆ ಶಕ್ತಿವಂತ, ಧೈರ್ಯವಂತ, ಸಾಹಸವಂತ ಹಾಗೆ ಅಷ್ಟೇ ತೀಕ್ಷ್ಣ ಬುದ್ಧಿ ಉಳ್ಳವರು ಕೂಡ ಹೌದು ಮತ್ತು ಕಲಿಯುಗದಲ್ಲಿ ಬಹಳ ಬೇಗ ಒಲಿಯುವ ಭಗವಂತ ಎಂದರೆ ಅದು ಆಂಜನೇಯ.

ಆಂಜನೇಯನಿಗೆ ಮೀಸಲಾದ ಮಂಗಳವಾರ, ಶನಿವಾರ, ಹನುಮ ಜಯಂತೋತ್ಸವ ಹಾಗೂ ಹನುಮ ಜಯಂತಿಗಳಲ್ಲಿ ಬಡಜನರ ಮತ್ತು ರೋಗಿಗಳ ಸೇವೆ ಮಾಡಬೇಕು. ಇದರಿಂದ ಆಂಜನೇಯ ಸ್ವಾಮಿಯು ನಿಮ್ಮನ್ನು ಕಾಯುತ್ತಾರೆ ಮತ್ತು ನಿಮ್ಮ ಪಾಲಿಗೆ ಅದೃಷ್ಟ ಹಾಗೂ ಆರೋಗ್ಯ ಎರಡನ್ನು ಕೂಡ ನೀಡುತ್ತಾರೆ.

ಇದರ ಜೊತೆಗೆ ಹನುಮ ಜಯಂತಿ ನಂತರ ಅದರ ಬೆನ್ನೆಲ್ಲೇ ಈ ಬಾರಿ ಹೊಸ ವರ್ಷ ಕೂಡ ಇದೆ ಹೊಸ ವರ್ಷವು ಕೆಲ ರಾಶಿಯವರಿಗೆ ಅವರ ಬದುಕು ಬದಲಾಗುವ ಘಟ್ಟವಾಗಿರುತ್ತದೆ. ಇದರ ಬಗ್ಗೆ ನಿರೀಕ್ಷೆ ಎಲ್ಲರಿಗೂ ಸಹಜವಾಗಿ ಇರುತ್ತದೆ ಆದರೆ ಈ 50 ರಾಶಿಯವರಿಗೆ ಮಾತ್ರ ಬಹಳ ವಿಶೇಷ ಲಾಭಗಳು ಸಿಗುತ್ತಿದೆ ಮತ್ತಿದು ಮುಂದಿನ ನಾಲ್ಕು ವರ್ಷಗಳಿಗೂ ಕೂಡ ವಿಸ್ತರಿಸಿ ಅವರ ಪಾಲಿಗೆ ಅತ್ಯುತ್ತಮ ಸಮಯವಾಗುತ್ತಿದೆ.

ಈ ಐದು ರಾಶಿಯವರು ಈ ವರ್ಷ ಆರೋಗ್ಯ, ವಿದ್ಯಾಭ್ಯಾಸ, ವ್ಯಾಪಾರ, ವಹಿವಾಟು, ವಿವಾಹ, ಸಂತಾನ, ವಿದೇಶ ಪ್ರಯಾಣ ಇವುಗಳಿಗೆ ಸಂಬಂಧಪಟ್ಟ ಹಾಗೆ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಇದುವರೆಗೂ ಈ ವಿಚಾರಗಳಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಹಾಗೂ ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳಿದ್ದರೂ ಕೂಡ ಮನಸ್ತಾಪಗಳಿದ್ದರೂ ಕೂಡ ಅದಕ್ಕೆ ಪರಿಹಾರವನ್ನು ಪಡೆಯಲಿದ್ದಾರೆ.

ಅದರಲ್ಲೂ ಹಣದ ವಿಚಾರದಲ್ಲಂತೂ ಈ ಐದು ರಾಶಿಗಳ ಅದೃಷ್ಟ ಬಹಳ ಚೆನ್ನಾಗಿ ಬದಲಾಗುತ್ತಿತ್ತು ಇವರು ಕೋಟ್ಯಾಧಿಪತಿಗಳಾಗುವ ಯೋಗವು ಕೂಡ ಈ ವರ್ಷಗಳಲ್ಲಿ ಇವೆ. ಇಷ್ಟೆಲ್ಲಾ ಅದೃಷ್ಟ ಹೊಂದಿರುವ ರಾಶಿಗಳು ಯಾವುವೆಂದರೆ ವೃಷಭ ರಾಶಿ, ಕರ್ಕಾಟಕ ರಾಶಿ, ಕನ್ಯಾ ರಾಶಿ, ತುಲಾ ರಾಶಿ ಹಾಗೂ ಸಿಂಹ ರಾಶಿಯವರಿಗೆ ಇಂತಹ ರಾಜಯೋಗ ಲಭಿಸುತ್ತಿದೆ. ಇದನ್ನು ತಪ್ಪದೆ ಸದುಪಯೋಗ ಪಡಿಸಿಕೊಳ್ಳಿ.

 

ಮಿಥುನ ರಾಶಿಯವರಿಗೆ 2024 ರ ವರ್ಷ ಭವಿಷ್ಯ.!

0

 

ರಾಶಿ ಚಕ್ರದಲ್ಲಿ ಮೂರನೇ ರಾಶಿಯಾಗಿರುವ ಮಿಥುನ ರಾಶಿಯು ಬಹಳ ವಿಶೇಷವಾದ ರಾಶಿಯಾಗಿದೆ. ಮಿಥುನ ರಾಶಿಯವರು ಸ್ವಾವಲಂಬಿಗಳು, ಯಾವಾಗಲೂ ಪರಿಶ್ರಮಪಡುವವರು ಮತ್ತು ತಮ್ಮ ಕಾಲ ಮೇಲೆ ತಾವು ನಿಂತು ಬದುಕನ್ನು ನಡೆಸಲು ಇಚ್ಚಿಸುವವರು ಮತ್ತು ತಮ್ಮಿಂದ ಸಮಾಜಕ್ಕೂ ಒಳ್ಳೆಯದು ಮಾಡಲು ಬಯಸುವವರು.

ವೃತ್ತಿ ಬದುಕಿನ ಜೊತೆಗೆ ವೈಯುಕ್ತಿಕ ಬದುಕನ್ನು ಕೂಡ ಸರಿದೂಗಿಸಿ ಎರಡಕ್ಕೂ ಸಮಾನ ಸಮಯ ಕೊಟ್ಟು ಸರಿದೂಗಿಸಿಕೊಂಡು ಬದುಕು ನಡೆಸುವ ಇವರಿಗೆ 2024ನೇ ಇಸವಿ ಸಾಕಷ್ಟು ಮಿಶ್ರ ರೀತಿಯ ಫಲಿತಾಂಶಗಳನ್ನು ಕೊಡಲಿದೆ. ಮಿಥುನ ರಾಶಿಯವರಿಗೆ ವಿದ್ಯಾಭ್ಯಾಸದ ಮೇಲೆ ಹೆಚ್ಚು ಆಸಕ್ತಿ ಇದಕ್ಕೆ ಸಂಬಂಧಿಸಿದ ಹಾಗೆ ಹಾಗೂ ಸ್ವಂತ ಉದ್ಯಮ ಮಾಡಲು ಹಾತೊರೆಯುವ ಇವರ ಕನಸಿನ ಕುರಿತಾಗಿ ಮತ್ತು ವೈಯಕ್ತಿಕ ಬದುಕಿನ ಕುರಿತಾಗಿ ಏನೆಲ್ಲ ಮಹತ್ವದ ಬದಲಾವಣೆಗಳು ಉಂಟಾಗಲಿದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಮಿಥುನ ರಾಶಿಯವರಿಗೆ ಈ ಮೇಲೆ ತಿಳಿಸಿದಂತೆ ಓದಿನಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಅವರ ಓದು ಮುಕ್ತಾಯವಾಗಿದ್ದರು ಅಡ್ವಾನ್ಸ್ ಕೋರ್ಸ್ ಗಳನ್ನು ಮಾಡಲು ಮತ್ತು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಬಯಸುತ್ತಾರೆ. ಹೆಚ್ಚು ಹೆಚ್ಚು ಜ್ಞಾನವನ್ನು ಹೊಂದಬೇಕೆನ್ನುವ ಇವರ ಹಂಬಲಕ್ಕೆ ಈ ವರ್ಷ ಸ್ವಲ್ಪ ಅಡೆತಡೆಯಾಗುತ್ತದೆ.

ಯಾಕೆಂದರೆ ಬುಧ ಗ್ರಹದ ಅಧಿಪತ್ಯ ಇರುವ ಕನ್ಯಾ ರಾಶಿಯು ಇವರಿಗೆ ನಾಲ್ಕನೇ ಮನೆಯಾಗಿದೆ ಮತ್ತು ಕನ್ಯಾ ರಾಶಿಯಲ್ಲಿ 2024ರ ವರ್ಷ ಪೂರ್ತಿ ಕೇತು ಇರುತ್ತಾನೆ. ಈ ಕೇತು ಮಿಥುನ ರಾಶಿಯವರಿಗೆ ವಿದ್ಯಾಭ್ಯಾಸದ ಕುರಿತಾಗಿ ಸಮಸ್ಯೆ ಉಂಟು ಮಾಡುತ್ತಾನೆ ಹಾಗಾಗಿ ನೀವಂದು ಕೊಂಡಂತೆ ಈ ವರ್ಷ ವಿದ್ಯಾಭ್ಯಾಸ ಮುಂದುವರಿಸಲು ಅಥವಾ ನೀವಂದುಕೊಂಡ ಸ್ಥಳದಲ್ಲಿ ಅಥವಾ ನಿಮ್ಮ ಇಚ್ಛೆಯ ಕೋರ್ಸ್ ಗಳನ್ನು ಓದಲು ಸಾಧ್ಯವಾಗದೇ ಇರಬಹುದು.

ಇದೇ ಕೇತುವಿನ ಕೆಟ್ಟ ಪ್ರಭಾವದಿಂದ ನೀವು ವೃತ್ತಿ ಜೀವನದಲ್ಲೂ ಕೆಲವು ಸಮಸ್ಯೆಗಳನ್ನು ಅನುಭವಿಸುತ್ತೀರಿ. ಒಂದು ವೇಳೆ ನೀವೇನಾದರೂ ಹೊಸ ವ್ಯವಹಾರ ಆರಂಭಿಸಬೇಕು ಎಂದರೆ ಆ ಸ್ಥಳದ ಬಗ್ಗೆ ಬಹಳ ಗೊಂದಲಗಳಾಗುತ್ತದೆ ಅಥವಾ ವೃತ್ತಿ ಬದುಕಾಗಿದ್ದರೆ ನಿಮಗೆ ಸಿಕ್ಕ ಉತ್ತಮವಾದ ಆಪ್ಷನ್ ಗಳಲ್ಲಿ ಗೊಂದಲ ಉಂಟಾಗಿ ಯಾವುದೋ ಒಂದನ್ನು ಸೆಲೆಕ್ಟ್ ಮಾಡುತ್ತೀರಿ ಆದರೆ ಆ ಆಪ್ಷನ್ ನಂತರ ನಿಮಗೆ ತಪ್ಪಾಗಿತ್ತು ಎನ್ನುವುದು ಅರ್ಥವಾಗುತ್ತದೆ.

ಇದೆಲ್ಲವೂ ಕೇತು ಪ್ರಭಾವದಿಂದ ಉಂಟಾಗುತ್ತದೆ ಹಾಗಾಗಿ ಸಾಕಷ್ಟು ತಾಳ್ಮೆಯಿಂದ ಇದ್ದು ಮುಂದೆ ಪಶ್ಚಾತಾಪ ಪಡಬಾರದು ಎನ್ನುವ ರೀತಿ ಎಲ್ಲವನ್ನು ವಿಚಾರಿಸಿ ತೀರ್ಮಾನ ತೆಗೆದುಕೊಳ್ಳಿ. ನಿಮ್ಮ ದುಡುಕಿನ ನಿರ್ಧಾರಗಳು ಮಾತ್ರ ನಿಮಗೆ ಈ ರೀತಿ ದುಃ’ಖವನ್ನುಂಟು ಮಾಡುತ್ತವೆ. ಆದರೆ ಶನೇಶ್ವರನ ಕೃಪಾಕಟಾಕ್ಷವು ಈ ವರ್ಷ ಪೂರ್ತಿ ನಿಮ್ಮ ಮೇಲೆ ಇರುತ್ತದೆ.

ಹಾಗಾಗಿ ನೀವು ನಿಮ್ಮ ಮುಂಗೋಪ ಹಾಗೂ ತ ದುಡುಕುತನವನ್ನು ಬಿಟ್ಟರೆ ನಿಮ್ಮ ವ್ಯಾಪಾರದಲ್ಲಾಗಲಿ ಅಥವಾ ವೃತ್ತಿಯಲ್ಲಾಗಲಿ ಬಹಳ ಉತ್ತಮ ಸ್ಥಾನಕ್ಕೆ ತಲುಪುವ ಅದೃಷ್ಟವನ್ನು ಶನಿ ಪ್ರಭಾವದಿಂದ ಪಡೆಯುತ್ತೀರಿ. ಮೇ ತಿಂಗಳ ನಂತರ ನಿಮಗೆ ಗುರುಬಲ ಕಡಿಮೆ ಆಗುತ್ತದೆ ಈ ಕಾರಣದಿಂದಾಗಿ ನಿಮ್ಮ ವಿವಾಹ ವಿಚಾರದಲ್ಲಿ ಅಡೆತಡೆಗಳಾಗಬಹುದು.

ನೀವು ನಿಶ್ಚಯಿಸಿಕೊಂಡಿದ್ದ ವಿವಾಹವು ಮುರಿದು ಬೀಳಬಹುದು ಅಥವಾ ನೀವು ಹಠ ಮಾಡಿ ಒಪ್ಪಿಕೊಂಡ ವಿವಾಹದಿಂದಲೇ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗಿಯೂ ಬರಬಹುದು, ಹಾಗಾಗಿ ಈ ವಿಷಯದಲ್ಲೂ ನೀವು ವಿಚಾರ ಮಾಡಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಿ ಮತ್ತು ತಪ್ಪದೆ ಮಿಥುನ ರಾಶಿಯವರು ಪಚ್ಚೆ ಹರಳನ್ನು ಬಂಗಾರದಲ್ಲಿ ಉಂಗುರ ಮಾಡಿಸಿ ಕಿರುಬೆರಳಿಗೆ ಧರಿಸಿ. ಇದರಿಂದ ಕೇತುವಿನ ಪ್ರಭಾವವು ಕಡಿಮೆಯಾಗಿ ಶುಭ ಪರಿಣಾಮಗಳು ಉಂಟಾಗುತ್ತವೆ.

ಮನೆಯಲ್ಲಿ ನಾಯಿ ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ, ಯಾವೆಲ್ಲ ಅಪಾಯಗಳಿಂದ ಮುಕ್ತಿ ಸಿಗುತ್ತದೆ ಗೊತ್ತಾ…!

 

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ನಾಯಿ ಸಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪಟ್ಟಣ ಪ್ರದೇಶಗಳಲ್ಲಿ ಬೇರೆ ಬೇರೆ ಬ್ರೀಡ್ ನಾಯಿಗಳನ್ನು ತಂದು ಸಾಗುವುದು ಒಂದು ಪ್ರತಿಷ್ಠೆ, ಅದರಲ್ಲಿ ಹೆಣ್ಣು ಮಕ್ಕಳಿಗೆ ನಾಯಿ ಕಂಡರೆ ಪ್ರೀತಿ. ಆದರೆ ಹಳ್ಳಿಗಳ ಕಡೆ ಯಾವುದಾದರೂ ರಸ್ತೆಯಲ್ಲಿ ಸಿಕ್ಕ ನಾಯಿಯನ್ನು ಕೂಡ ಬಲು ಅಕ್ಕರೆಯಿಂದ ತಂದು ಸಾಕುತ್ತಾರೆ.

ಈ ರೀತಿ ಮನೆಯಲ್ಲಿ ನಾಯಿಗಳನ್ನು ಸಾಕುವುದಕ್ಕೆ ಕೂಡ ಋಣ ಇರಬೇಕು ಎನ್ನುವ ಮಾತಿದೆ ಮತ್ತು ಅದು ಯಾವ ನಾಯಿಯೇ ಆಗಿರಲಿ ಆ ಮನೆಗೆ ಹಾಗೂ ಮನೆಯ ಸದಸ್ಯರಿಗೆ ಹೊಂದಿಕೊಂಡು ಬಿಟ್ಟರೆ ಆ ಮನೆಯ ಸದಸ್ಯನಷ್ಟೇ ಅದು ಸ್ಥಾನ ಗಿಟ್ಟಿಸಿಕೊಂಡು ಎಲ್ಲರ ಮನಸ್ಸನ್ನು ಬಹಳ ಬೇಗ ಹೊಕ್ಕಿ ಬಿಡುತ್ತದೆ ಈ ರೀತಿ ನಾಯಿ ಸಾಕುವುದರಿಂದ ಆ ಮನೆಯವರಿಗೆ ಸಾಕಷ್ಟು ಅನುಕೂಲತೆ ಆಗುತ್ತದೆ.

ನಾಯಿಗಳಿಗೆ ಭಗವಂತ ಅತೀಂದ್ರೀಯ ಶಕ್ತಿಯನ್ನು ಕರುಣಿಸಿದ್ದಾನೆ ಮನುಷ್ಯರಿಗಿಂತ ನಾಯಿಗಳು ಬೇಗ ಪರಿಸರದ ಸಕಾರಾತ್ಮಕ ಹಾಗೂ ನಕಾರಾತ್ಮಕ ವಾತಾವರಣವನ್ನು ಗುರುತಿಸುತ್ತದೆ ಮತ್ತು ಎಷ್ಟೋ ಸಮಯಗಳಲ್ಲಿ ನಾಯಿ ಮುನ್ಸೂಚನೆ ಕೊಟ್ಟು ಆಗುವ ಅನಾಹುತಗಳನ್ನು ತಡೆದಿರುವ ಉದಾಹರಣೆಗಳ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ, ನೋಡಿದ್ದೇವೆ.

ಅದೇ ರೀತಿ ನಾಯಿ ತನ್ನ ಪ್ರಾಣವನ್ನು ಕೊಟ್ಟು ತನ್ನ ಮಾಲೀಕನನ್ನು ರಕ್ಷಣೆ ಮಾಡಿದ ಉದಾಹರಣೆಗಳಿಗೂ ಕಡಿಮೆ ಇಲ್ಲ. ಆದಷ್ಟೇ ದಿನವಾದರೂ ಅದೆಷ್ಟು ವರ್ಷವಾದರೂ ತನ್ನ ಮಾಲೀಕನನ್ನು ಗುರುತಿಸುವ ನಾಯಿಯ ನಿಯತ್ತಿನ ಮುಂದೆ ಮನುಷ್ಯನ ನಗಣ್ಯ ಎನಿಸಿಬಿಡುತ್ತಾನೆ ಮತ್ತು ಒಬ್ಬ ವ್ಯಕ್ತಿಗೆ ಅನ್ ಕಂಡಿಶನ್ ಲವ್ ಎನ್ನುವುದನ್ನು ಪರಿಚಯ ಪಡಿಸುವುದೇ ಈ ರೀತಿಯ ಸಾಕು ಪ್ರಾಣಿಗಳು, ಅದರಲ್ಲೂ ನಾಯಿಯು ಹೆಚ್ಚು.

ಈ ನಾಯಿಯನ್ನು ದೇವರ ರೂಪವಾಗಿ ಕೂಡ ಕಾಣುತ್ತಾರೆ ಕಾಲಭೈರವನ ವಾಹನವಾಗಿ ಮತ್ತು ನಾರಾಯಣನ ಅವತಾರವಾಗಿ ನಾಯಿಯನ್ನು ಕಾಣುವವರು ಇದ್ದಾರೆ ಮತ್ತು ಪೊಲೀಸ್ ಇಲಾಖೆಯಲ್ಲೂ ಕೂಡ ನಾಯಿ ಬಳಕೆ ಆಗುವುದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾಯಿಗಳು ನೋಡುವುದಕ್ಕೆ ಉಗ್ರವಾಗಿ ಕಂಡರೂ ಬಹಳ ಮೃದು ಹೃದಯ ಹೊಂದಿರುವ ಪ್ರಾಣಿಗಳಾಗಿವೆ ಮತ್ತು ಬಹಳ ಸೂಕ್ಷ್ಮ ಪ್ರಾಣಿಗಳಾಗಿವೆ.

ಆದರೆ ಇವುಗಳ ಬುದ್ಧಿ ಮಾತ್ರ ಬಲು ಚತುರತೆಯಿಂದ ಕೂಡಿದೆ ಈ ನಾಯಿಗಳನ್ನು ಸಾಕುವುದರಿಂದ ನಮಗೆ ಇನ್ನೆಷ್ಟು ಉಪಯೋಗವಾಗುತ್ತದೆ ಎನ್ನುವುದರ ಪಟ್ಟಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇದನ್ನು ನೋಡಿದ ಮೇಲೆ ಖಂಡಿತವಾಗಿಯೂ ನೀವು ಇಂದೇ ನಾಯಿಯನ್ನು ತಂದು ಸಾಕಲು ಆರಂಭಿಸುತ್ತೀರಿ.

ನಾಯಿಯನ್ನು ಸಾಕುವುದರಿಂದ ಕಳ್ಳ ಕಾಕರ ಭ’ಯ ಸ್ವಲ್ಪ ಕಡಿಮೆ ಆಗುತ್ತದೆ, ಯಾಕೆಂದರೆ ಮನೆಯ ಮುಂದೆ ನಾಯಿಗಳನ್ನು ಕಟ್ಟುವುದರಿಂದ ಅದು ಅಪರಿಚಿತ ವ್ಯಕ್ತಿಗಳು ಬಂದಾಗ ಅಥವಾ ಅನುಮಾನಸ್ಪದ ವ್ಯಕ್ತಿಗಳು ಬಂದಾಗ ಕೂಗಿ ಕಿರುಚಿ ಮನೆ ಮಾಲೀಕನ ಎಚ್ಚರಗೊಳಿಸುತ್ತವೆ, ಕೆಲವೊಮ್ಮೆ ಬಹಳ ಅಪಾಯಕಾರಿಯಾಗಿದ್ದಾಗ ತಾವೇ ಹೋಗಿ ತನ್ನ ಮಾಲೀಕನಿಗೆ ತೊಂದರೆ ಕೊಡಲು ಬಂದವರಿಗೆ ಕಚ್ಚಿ ಶಿಕ್ಷೆಯನ್ನು ಕೊಡುತ್ತವೆ.

ಹೀಗಾಗಿ ಮನೆಯಲ್ಲಿ ನಾಯಿ ಇದ್ದರೆ ಸಿಸಿಟಿವಿ ಹಾಗೂ ಹೆಚ್ಚಿನ ಸೆಕ್ಯೂರಿಟಿ ಇದ್ದಂತೆ ನಾಯಿಗಳು ಮನೆ ಸುತ್ತ ಆಗುವ ದುಷ್ಟ ಶಕ್ತಿಗಳ ಸಂಚಾರವನ್ನು ತಡೆಯುತ್ತವೆ. ನಾವು ತಿನ್ನುವ ಆಹಾರ ಪದಾರ್ಥಗಳನ್ನು ನಾಯಿಗಳಿಗೆ ಕೊಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಒಂದು ವೇಳೆ ನಾವು ತಿನ್ನುವ ಆಹಾರವು ಫುಡ್ ಪಾಯಿಸನ್ ಹಾಗಿದ್ದರೆ ಅಥವಾ ಆಹಾರದಲ್ಲಿ ಯಾರಾದರೂ ಏನಾದರೂ ಆಗಿದ್ದರೆ ನಾಯಿಗಳು ಬಹಳ ಬೇಗ ಅದನ್ನು ಗುರುತಿಸುತ್ತವೆ‌.

ನಾಯಿಗಳು ಅವುಗಳನ್ನು ತಿನ್ನುವುದಿಲ್ಲ ಹಾಗೂ ನಮಗೂ ಕೂಡ ತಿನ್ನಲು ಬಿಡುವುದಿಲ್ಲ. ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಮನೆಗಳಲ್ಲಿ ನಾಯಿಯನ್ನು ಪ್ರೀತಿಯಿಂದ ಸಾಕುವುದರಿಂದ ಮತ್ತು ಬೀದಿ ನಾಯಿಗಳಿಗೆ ಕೂಡ ಆಹಾರದ ಅನುಕೂಲತೆ ಮಾಡಿಕೊಡುವುದರಿಂದ ಸಾಲಭಾದೆ ಇರುವವರಿಗೆ ಬಹಳ ಬೇಗ ಪರಿಹಾರ ಸಿಗುತ್ತದೆ. ಇವರ ಮೇಲೆ ಬೇಗ ಭಗವಂತನ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೂ ಮೀರಿ ಇನ್ನು ಹೆಚ್ಚಿನ ಉಪಯೋಗಗಳು ನಾಯಿಗಳಿಂದ ಇವೆ.

ಹಿರಿಯರು ಹೇಳಿರುವ ಈ ಶಾಸ್ತ್ರ-ಸಂಪ್ರದಾಯಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಿ ಹಾಗೂ ಪಾಲಿಸಿ.!

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಅನೇಕ ಶಾಸ್ತ್ರಗಳಿದೆ. ಕೆಲವರು ಇದನ್ನು ಮೀರಿ ನಡೆಯುತ್ತಾರೆ ಈಗಿನ ಕಾಲದವರಿಗೆ ಇದರ ಮಾಹಿತಿ ಗೊತ್ತಿಲ್ಲದೆ ತಪ್ಪುತ್ತಾರೆ. ಹಾಗಾಗಿ ಇಂತಹ ಪ್ರಮುಖ ಶಾಸ್ತ್ರಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ಇವುಗಳನ್ನು ಪಾಲಿಸಿ ಮತ್ತು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.

* ಜೇಷ್ಠ ಮಾಸದಲ್ಲಿ ಜೇಷ್ಠ ಪುತ್ರಿ ಹಾಗೂ ಜೇಷ್ಠ ಪುತ್ರ ಮತ್ತು ಜೇಷ್ಠ ನಕ್ಷತ್ರದಲ್ಲಿ ಹುಟ್ಟಿದವರ ಮದುವೆಗಳನ್ನು ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ.
* ಒಂದೇ ಪಂಚಾಂಗದಲ್ಲಿ ಎರಡು ಚಪ್ಪರ ಹಾಕಬಾರದು ಅಂದರೆ ಇಬ್ಬರು ಮಕ್ಕಳ ಮದುವೆ ಒಂದೇ ವರ್ಷದಲ್ಲಿ ಮಾಡಬಾರದು ಎಂದು ನಿಯಮ ಇದೆ. ಆದರೆ ಕೆಲವರು ಇಬ್ಬರು ಮಕ್ಕಳ ಮದುವೆಯನ್ನು ಒಟ್ಟಿಗೆ ಮಾಡುತ್ತಾರೆ ಈ ರೀತಿ ಕೂಡ ಮಾಡುವುದು ತಪ್ಪು. ಸಂಪ್ರದಾಯದ ಪ್ರಕಾರ ಈ ರೀತಿ ಮಾಡುವುದರಿಂದ ಒಬ್ಬರಿಗೆ ಪೂರ್ತಿ ಒಳ್ಳೆಯದು ಹಾಗೂ ಒಬ್ಬರಿಗೆ ವಿರುದ್ಧವಾದ ಫಲಿತಾಂಶಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ

* ವಿವಾಹ ಉಪನಯನ ಯಜ್ಞ ಮಾಡುವ ಮೊದಲು ನಾಂದಿ ಇಟ್ಟರೆ ಸೂತಕ ಮೈಲಿಗೆ ಬರುವುದಿಲ್ಲ
* ನಾಂದಿ ಶಾಸ್ತ್ರವನ್ನು ಮಂಗಳವಾರ ಹಾಗೂ ಶನಿವಾರ ಬಿಟ್ಟು ವಾರದ ಬೇರೆ ದಿನಗಳಲ್ಲಿ ಮಾಡಬೇಕು
* ಪ್ರದೋಷಗಳ ದಿನಗಳಲ್ಲಿ ತಪ್ಪದೇ ಶಿವಪೂಜೆ ಮಾಡಬೇಕು
* ಒಂದೇ ವರ್ಷದಲ್ಲಿ ಮೂರು ಶುಭ ಕಾರ್ಯಗಳನ್ನು ಮಾಡಬಾರದು

* ಮದುವೆ ಮಾಡಿದ ಸ್ವಲ್ಪ ದಿನಗಳೊಂದಿಗೆ ಮುಂಜಿ, ಚೌಳ, ಗೃಹಪ್ರವೇಶ ಮಾಡಬಾರದು
* ಮದುವೆ ಮಾಡುವಾಗ ಹೆಣ್ಣಿಗೆ ಗುರುಬಲ ಹಾಗೂ ಗಂಡಿಗೆ ರವಿ ಬಲವನ್ನು ಮುಖ್ಯವಾಗಿ ನೋಡಬೇಕು ಮತ್ತು ಈ ಇಬ್ಬರಿಗೂ ಚಂದ್ರ ಬಲವನ್ನು ನೋಡಬೇಕು
* ಮನೆಯಲ್ಲಿ ಗರ್ಭಿಣಿ ಸ್ತ್ರೀಯರು ಇದ್ದಾಗ ಮನೆ ಕಟ್ಟುವುದು, ಬಾವಿ ತೋಡಿಸುವುದು, ಚೌಳ ಮಾಡಿಸುವುದು ಇವುಗಳನ್ನು ಮಾಡಬಾರದು

* ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಕ್ಕತಂಗಿಯರನ್ನು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣ ತಮ್ಮಂದಿರಿಗೆ ಮದುವೆ ಮಾಡಿಕೊಡಬಾರದು
* ಗುರು ಶುಕ್ರ ಹಸ್ತ ರಾಗಿದ್ದಾಗ ಯಾವುದೇ ಶುಭ ಕಾರ್ಯ ಮಾಡಬಾರದು
* ಚೌಳವನ್ನು ಮೂರು ಅಥವಾ ಐದನೇ ವರ್ಷದಲ್ಲಿ ಉತ್ತರಾಣದಲ್ಲಿ ಮಾಡಿಸಬೇಕು

* ಮನೆಯಲ್ಲಿ ಕುಲದೇವರ ಮೂರ್ತಿ ಇಟ್ಟು ಪೂಜಿಸುವುದು ಉತ್ತಮ
* ಸಗೋತ್ರದಲ್ಲಿ ವಿವಾಹ ಮಾಡಬಾರದು
* ಮಂಗಳವಾರ ಮಗಳನ್ನು ಗಂಡನ ಮನೆಗೆ ಹಾಗೂ ಶುಕ್ರವಾರ ಸೊಸೆಯನ್ನು ತವರು ಮನೆಗೆ ಕಳುಹಿಸಬಾರದು
* ಮಂಗಳವಾರ ಶನಿವಾರ ಸಾಲ ತರಬಾರದು, ಶುಕ್ರವಾರ ಸಾಲ ಕೊಡಬಾರದು
* ಮಗುವಿಗೆ ಹಾಲುಣಿಸುವಾಗ ಅಡ್ಡಿ ಪಡಿಸಬಾರದು

* ಗಿಣ್ಣಿನ ಹಾಲು ಕೊಟ್ಟವರಿಗೆ ಮರಳಿ ಖಾಲಿ ಪಾತ್ರೆ ಕೊಡಬಾರದು
* ಸಂತಾನ ದೋಷಕ್ಕೆ ನಾಗಪೂಜೆ ಹಾಗೂ ಬನ್ನಿ ಪೂಜೆ ಮಾಡಬೇಕು
* ಮನೆಯಲ್ಲಿ ಸೂತಕ ಇರುವಾಗ ಯಾವುದೇ ಪೂಜಾ ಕಾರ್ಯವನ್ನು ಅಥವಾ ಶುಭ ಕಾರ್ಯವನ್ನಾಗಲಿ ಮಾಡಬಾರದು
* ಸ್ಮಶಾನದಿಂದ ಬರುವಾಗ ಮತ್ತೆ ಹಿಂದಕ್ಕೆ ತಿರುಗಿ ನೋಡಬಾರದು

* ಅಮಾವಾಸ್ಯೆ, ಸಂಕ್ರಾಂತಿ ಹಾಗೂ ಗ್ರಹಣ ಸಮಯದಲ್ಲಿ ಯಾವುದೇ ಮುಖ್ಯ ಕೆಲಸಕ್ಕೆ ಪ್ರಯಾಣ ಮಾಡಬಾರದು
* ಗ್ರಹಣದ ದಿನ ಹಾಗೂ ಅದರ ಮರುದಿನ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು
* ರಾತ್ರಿ ಸಮಯದಲ್ಲಿ ಹೊಸ ಮನೆಯ ಗೃಹಪ್ರವೇಶ ಮಾಡಬಾರದು
* ಕರ್ಕ, ಕನ್ಯಾ ಹಾಗೂ ಕುಂಭ ಸಂಕ್ರಾಂತಿಯಲ್ಲಿ ಗೃಹಪ್ರವೇಶ ಮಾಡಬಾರದು

* ಅಧಿಕ ಮಾಸದಲ್ಲಿ ಶುಭ ಕಾರ್ಯವನ್ನು ಮಾಡಬಾರದು
* ವಿಜಯದಶಮಿಯು ಗೃಹಪ್ರವೇಶಕ್ಕೆ ಯೋಗ್ಯವಲ್ಲ
* ರಾತ್ರಿ ಸಮಯ ಉಪ್ಪು ಹಾಗೂ ಮೊಸರು ಮತ್ತು ನಿಂಬೆ ಇಂತಹ ಹುಳಿ ಪದಾರ್ಥಗಳನ್ನು ಯಾರಿಗೂ ಕೊಡಬಾರದು
* ಸೂರ್ಯಸ್ತವಾದ ನಂತರ ಹೂ ಹಾಗೂ ಹಣ್ಣುಗಳನ್ನು ಕೀಳಬಾರದು

* ತಂದೆ ಸ.ತ್ತರೆ ಒಂದು ವರ್ಷ, ತಾಯಿ ಸ.ತ್ತರೆ ಆರು ತಿಂಗಳು, ಸಹೋದರ ಸತ್ತ.ರೆ ಒಂದು ತಿಂಗಳು ವಿವಾಹ ಆಗಬಾರದು
* ತಂದೆ ಮಕ್ಕಳು ಒಂದೇ ದಿನಕ್ಕೆ ಚೌರ ಮಾಡಿಸಬಾರದು
* ಸಂಜೆ ಸಮಯ ದೀಪ ಹಚ್ಚಿದ ತಕ್ಷಣ ಬಾಗಿಲು ಹಾಕಬಾರದು
* ಉಗುರು ಕತ್ತರಿಸಲು ಬುಧವಾರ ಸೂಕ್ತ, ಆದರೆ ಬುಧವಾರ ಜನಿಸಿದವರು ಆ ದಿನ ಕತ್ತರಿಸಬಾರದು.

ಈ ಸಂಖ್ಯೆಗಳಲ್ಲಿ ಒಂದನ್ನು ಆಯ್ಕೆ ಮಾಡಿ. ನಿಮ್ಮ ಜೀವನದಲ್ಲಿ 2024ರಲ್ಲಿ ಯಾವ ಮಹತ್ವದ ಬದಲಾವಣೆ ಆಗಲಿದೆ ಎನ್ನುವುದರ ಭವಿಷ್ಯ ತಿಳಿದುಕೊಳ್ಳಿ.!

 

ಹೊಸ ವರ್ಷ ಎನ್ನುವುದು ಖಂಡಿತವಾಗಿ ಹೊಸತನದ ನಿರೀಕ್ಷೆ ತರುತ್ತದೆ. ಹೊಸ ವರ್ಷದಲ್ಲಿ ಆದರೂ ನಮ್ಮ ಬದುಕು ಸ್ವಲ್ಪ ಬದಲಾಗುತ್ತದೆ ಎನ್ನುವ ನಂಬಿಕೆ ಇರುತ್ತದೆ. ಅದೇ ರೀತಿ ಕೆಲವರು ವರ್ಷಪೂರ್ತಿ ಸಮಸ್ಯೆಯಲ್ಲಿದ್ದರೆ ಕಾದು ಮುಂದಿನ ವರ್ಷದಲ್ಲಾದರೂ ಹೊಸ ಕೆಲಸವನ್ನು ಮಾಡೋಣ ಎಂದು ಯೋಚಿಸುತ್ತಿರುತ್ತಾರೆ.

ಕಡರಣ ಏನೇ ಇರಲಿ ಹೊಸ ವರ್ಷ ಹೇಗಿದೆ ಎನ್ನುವ ಕುತೂಹಲ ನಿಮಗಿದ್ದರೆ ಈಗ ನಾವು ಹೇಳುವ ಈ ವಿಧಾನವನ್ನು ಪಾಲಿಸಿ ನಿಮ್ಮ ಹೊಸ ವರ್ಷದ ಭವಿಷ್ಯ ತಿಳಿದುಕೊಳ್ಳಿ. ಈಗ ನಿಮ್ಮ ಕಣ್ಣ ಮುಂದೆ ನಾಲ್ಕು ಬಾಕ್ಸ್ ಇದೆ ಎಂದುಕೊಳ್ಳಿ.

ಮೊದಲ ಬಾಕ್ಸ್ ಕೇಸರಿ ಬಣ್ಣದ್ದು, 2 ಎಂದು ಬರೆದಿರುವ ಬಾಕ್ಸ್ ಬಿಳಿ ಬಣ್ಣದ್ದು, ಹಳದಿ ಬಣ್ಣದ ಬಾಕ್ಸ್ 3 ಹಾಗೂ ನೀಲಿ ಬಣ್ಣದ 4ನೇ ಬಾಕ್ಸ್ ಇದೆ ಎಂದುಕೊಳ್ಳಿ. ಇದರಲ್ಲಿ ನಿಮ್ಮ ಇಷ್ಟದ ಬಣ್ಣ ಅಥವಾ ಇಷ್ಟದ ಸಂಖ್ಯೆಯ ಒಂದು ಬಾಕ್ಸ್ ಅನ್ನು ಈಗ ನೀವು ಆರಿಸಿ ನೀವು ಆರಿಸಿದ ಸಂಖ್ಯೆ ಅನುಸಾರವಾಗಿ ನಿಮ್ಮ ನೂತನ ವರ್ಷವಾದ 2024 ಹೀಗಿರುತ್ತದೆ.

1. ನೀವು ಸಂಖ್ಯೆ 1 ಕೇಸರಿ ಬಣ್ಣದಲ್ಲಿರುವ ಬಾಕ್ಸ್ ಆರಿಸಿದ್ದರೆ ಈ ಹೊಸ ವರ್ಷದ ನೀವು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ನೀವು ಯಾರನ್ನಾದರೂ ತಪ್ಪಾಗಿ ಅರ್ಥ ಮಾಡಿಕೊಂಡು ಅವರ ಸಂಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ವಿಷಯ ಯಾವುದೇ ಇದ್ದರೂ ತಾಳ್ಮೆಯಿಂದ ಇನ್ನೊಮ್ಮೆ ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ನೀವು ದುಡಿಕಿದರು ವರ್ಷದ ಅಂತ್ಯದ ಒಳಗೆ ನಿಮ್ಮ ತಪ್ಪಿನ ಅರಿವು ನಿಮಗಾಗುತ್ತದೆ.

ಈಗಾಗುವುದರ ಬದಲು ಯಾವುದೇ ವಿಷಯವಾದಲ್ಲಿ ಕೂಡ ಯಾರು ಹೇಳಿದ್ದನ್ನು ನಂಬಬೇಡಿ. ಆರೋಗ್ಯದ ವಿಚಾರದಲ್ಲಿ ಯಾವುದೇ ತೊಂದರೆ ಇಲ. ಲ ಹಣಕಾಸಿನ ಪರಿಸ್ಥಿತಿಯು ಕೂಡ ಸುಮಾರಾಗಿರುತ್ತದೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಮನ್ನಣೆ ಸಿಗುತ್ತದೆ, ಕೆಲಸ ಕಾರ್ಯದಲ್ಲಿ ಅಡ್ಡಿ ಇಲ್ಲ ಒಳ್ಳೆಯ ಸ್ಥಾನಗಳನ್ನು ತಲುಪಲಿದ್ದೀರಿ ಮತ್ತು ನಿಮ್ಮ ಪ್ರಯತ್ನದಿಂದ ಉತ್ತಮ ಸ್ಥಾನಗಳನ್ನು ತಲುಪುತ್ತೀರಿ.

2. ನೀವೇನಾದರೂ ಬಿಳಿ ಬಣ್ಣದಲ್ಲಿರುವ ಸಂಖ್ಯೆ 2 ಬಾಕ್ಸ್ ಆರಿಸಿದ್ದರೆ ಈ ವರ್ಷ ನಿಮಗೆ ನಿಮ್ಮ ತಾಯಿ ಅಥವಾ ಸಹೋದರಿ ಅಥವಾ ಮಗಳ ಮೇಲೆ ಪ್ರೀತಿ ಇಮ್ಮಡಿಯಾಗುತ್ತದೆ. ನೀವು ಅವರನ್ನು ಬಹಳ ಜೋಪಾನ ಮಾಡುತ್ತೀರಿ ಹಾಗೂ ಅವರನ್ನು ಬಹಳ ಅಕ್ಕರೆಯಿಂದ ನೋಡಿಕೊಳ್ಳುತ್ತೀರಿ ಮತ್ತು ಈ ವರ್ಷ ನಿಮಗೆ ಯಾವುದೇ ಕ’ಷ್ಟ ಬಂದರೂ ಕೂಡ ನಿಮ್ಮ ತಾಯಿಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಅಥವಾ ನಿಮ್ಮ ಸಹೋದರಿ ಬಂದು ನಿಮ್ಮನ್ನು ಕ’ಷ್ಟದಿಂದ ಪಾರು ಮಾಡುತ್ತಾರೆ ಮತ್ತು ನೀವು ಅಂದುಕೊಂಡಂತೆ ಯಾವ ದೊಡ್ಡ ಕ’ಷ್ಟವೂ ಬರುವುದಿಲ್ಲ ಸಣ್ಣ ಪುಟ್ಟ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ. ಈ ವರ್ಷ ನಿಮಗೆ ಆರಾಮಾಗಿರುತ್ತದೆ.

3. ನೀವೇನಾದರೂ ಹಳದಿ ಬಣ್ಣದಲ್ಲಿರುವ ಬಾಕ್ಸ್ ನ 3ನೇ ಸಂಖ್ಯೆಯನ್ನು ಆರಿಸಿದರೆ ಈ ವರ್ಷ ನಿಮಗೆ ಅದೃಷ್ಟಶಾಲಿಯಾಗಿರುತ್ತದೆ. ನೀವು ಯಾವುದೇ ಹೊಸ ಕೆಲಸ ಕಾರ್ಯ ಮಾಡಬೇಕು ಎಂದುಕೊಂಡಿದ್ದರು ಕೂಡ ಅದರಲ್ಲಿ ಮುಂದುವರೆಯಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಿ ಅಪಚಿತರಿಗೆ ಸಾಲ ಮಾಡುವುದು, ಭದ್ರತೆ ಇಲ್ಲದೆ ಹೂಡಿಕೆ ಮಾಡುವುದು ಇಂತಹ ಸಮಸ್ಯೆಗಳಲ್ಲಿ ಸಿಲುಕಿ ಕೊಳ್ಳಬೇಡಿ.

4. ನೀವೇನಾದರೂ ನೀಲಿ ಬಣ್ಣದಲ್ಲಿರುವ 4ನೇ ಬಾಕ್ಸ್ ಆರಿಸಿದ್ದರೆ ಈ ವರ್ಷ ನೀವು ಯಾವುದೇ ಹೊಸ ಕಾರ್ಯಗಳನ್ನು ಮಾಡದೆ ಇರುವುದೇ ಒಳ್ಳೆಯದು. ಈ ವರ್ಷ ನಿಮ್ಮ ಪಾಲಿಗೆ ಅಷ್ಟಕಷ್ಟೇ. ಈ ವರ್ಷ ನಿಮ್ಮ ಯಾವುದೇ ಹೊಸ ವರ್ಷದ ಯೋಜನೆ ಇದ್ದರು ಅದರ ಬಗ್ಗೆ ಹೆಚ್ಚು ಕೆಲಸ ಮಾಡಿ ಪ್ಲಾನ್ ತಯಾರಿಸಿ ಆದರೆ ಅದನ್ನು ಮುಂದಿನ ವರ್ಷ ಕಾರ್ಯಗತಗೊಳಿಸಿ.

ಇಂದು ವೈಕುಂಠ ಏಕಾದಶಿ ತಪ್ಪದೇ ಈ ದಿನ ಈ ಕೆಲಸಗಳನ್ನು ಮಾಡಿ.!

 

ಪ್ರತಿ ತಿಂಗಳಿನಲ್ಲೂ ಕೂಡ ಎರಡು ಏಕಾದಶಿ ಬರುತ್ತದೆ. ಕೃಷ್ಣ ಪಕ್ಷದಲ್ಲಿ ಒಂದು ಏಕಾದಶಿ ಹಾಗೂ ಶುಕ್ಲ ಪಕ್ಷದಲ್ಲಿ ಒಂದು ಏಕಾದಶಿ ಬರುತ್ತದೆ. ದಕ್ಷಿಣಾಯಣ ಮುಗಿದು ಉತ್ತರಾಯಣ ಆರಂಭವಾಗುವಾಗ ಬರುವ ಈ ವೈಕುಂಠ ಏಕಾದಶಿಯು ಉಳಿದ ಏಕಾದಶಿ ಗಳಿಗಿಂತ ಬಹಳ ಶ್ರೇಷ್ಠ ಎನಿಸುತ್ತದೆ.

ಯಾಕೆಂದರೆ ಉಳಿದ 23 ಏಕಾದಶಿಗಳನ್ನು ಮಾಡಿದ ಪುಣ್ಯವು ಈ ವೈಕುಂಠ ಏಕಾದಶಿ ಆಚರಿಸುವುದರಿಂದ ಸಿಗುತ್ತದೆ. ಯಾಕೆಂದರೆ ವೈಕುಂಠ ಏಕಾದಶಿ ದಿನದಂದು ವಿಷ್ಣು ಯೋಗ ನಿದ್ರೆಯಿಂದ ಏಳುತ್ತಾನೆ ಎಂದು ಹೇಳಲಾಗುತ್ತದೆ ಮತ್ತು ವೈಕುಂಠ ಏಕಾದಶಿ ದಿನ ವೈಕುಂಠದ ಬಾಗಿಲು ಅಂದರೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎನ್ನುವುದು ನಂಬಿಕೆ ಈ ವರ್ಷ ಡಿಸೆಂಬರ್ 23ರಂದು ವೈಕುಂಠ ಏಕಾದಶಿ ಬಂದಿದೆ.

ಇಂದು ಏಕಾದಶಿ ಆಚರಿಸುವವರು ಕೆಲವು ನಿಯಮಗಳನ್ನು ಪಾಲಿಸಿದರೆ ಇನ್ನು ಹೆಚ್ಚಿನ ಫಲಗಳು ದೊರೆಯುತ್ತದೆ ವೈಕುಂಠ ಏಕಾದಶಿಯ ದಿನ ಎದ್ದು ಸ್ನಾನ ಮಾಡಿ ಮಡಿಯುಟ್ಟು ಉಪವಾಸ ಆಚರಿಸಬೇಕು. ಯಾವುದೇ ಕಾರಣಕ್ಕೂ ಈ ದಿನ ಅನ್ನದಿಂದ ಮಾಡಿದ ಯಾವುದೇ ಆಹಾರ ಪದಾರ್ಥಗಳು ಸೇವಿಸಬಾರದು.

ಯಾಕೆಂದರೆ ಮುರಾ ಎನ್ನುವ ರಾಕ್ಷಸನು ವಿಷ್ಣುವಿನಿಂದ ತಪ್ಪಿಸಿಕೊಳ್ಳಲು ಅಕ್ಕಿಯಲ್ಲಿ ಅಡಗಿಕೊಂಡಿರುತ್ತಾನೆ ಹಾಗಾಗಿ ಇಂತಹ ದಿನ ಅಕ್ಕಿ ತಿಂದರೆ ಹುಳಗಳನ್ನು ತಿಂದದ್ದಕ್ಕೆ ಸಮ ಎಂದು ಹೇಳಲಾಗುತ್ತದೆ, ಮತ್ತು ಅವರಲ್ಲಿ ರಾಕ್ಷಸತ್ವದ ಗುಣಗಳು ನ’ಕಾ’ರಾ’ತ್ಮ’ಕ ಗುಣಗಳು ಹೆಚ್ಚಾಗುತ್ತವೆ. ಹಾಗಾಗಿ ಅಕ್ಕಿಯನ್ನಾಗಲಿ ಅಥವಾ ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥಗಳನ್ನಾದರೂ ಈ ದಿನ ಸೇವಿಸಬೇಡಿ.

ಈ ದಿನ ಪೂರ್ತಿ ಉಪವಾಸ ಇದ್ದು ದ್ವಾದಶಿ ದಿನ ಉಪವಾಸ ಬಿಡಬೇಕು. ಈ ದಿನ ಹಳದಿ ಬಟ್ಟೆ ಧರಿಸಿದರೆ ಬಹಳ ಒಳ್ಳೆಯದು ಯಾಕೆಂದರೆ ವಿಷ್ಣುವಿಗೆ ಕೂಡ ಹಳದಿ ಬಣ್ಣ ಪ್ರಿಯವಾದ ಬಣ್ಣ ಆಗಿರುವುದರಿಂದ ಹಳದಿ ಬಣ್ಣವನ್ನು ಧರಿಸಿ ವಿಷ್ಣು ಅಥವಾ ವೆಂಕಟೇಶ್ವರನ ದೇವಸ್ಥಾನಕ್ಕೆ ಹೋಗಿ ತಪ್ಪದೆ ವಿಷ್ಣುವಿನ ದರ್ಶನವನ್ನು ಪಡೆಯಿರಿ.

ಎಲ್ಲಾ ದೇವಸ್ಥಾನದಲ್ಲೂ ಕೂಡ ಈ ದಿನ ಉತ್ತರದ ದಿಕ್ಕಿಗೆ ಇರುವ ದ್ವಾರವನ್ನು ತೆಗೆದಿರುತ್ತಾರೆ. ಎಲ್ಲ ದೇವಸ್ಥಾನದಲ್ಲೂ ಕೂಡ ವೈಕುಂಠ ದ್ವಾರವನ್ನು ನಿರ್ಮಿಸಿರುತ್ತಾರೆ. ಈ ಉತ್ತರದ ದ್ವಾರದ ಕೆಳಗೆ ನಡೆದು ಹೋದರೆ ನಮ್ಮ ಪಾಪಗಳು ಕಳೆದು ಮುಕ್ತಿಗೆ ದಾರಿ ಸಿಗುತ್ತದೆ ನಮಗೆ ಸ್ವರ್ಗ ಪಾಪ್ತಿಯಾಗುತ್ತದೆ ಎನ್ನುವ ನಂಬಿಕೆ.

ಈ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕೂಡ ಕರೆಯುತ್ತಾರೆ. ಇದರ ಅರ್ಥ ಮುನ್ನೂರು ಕೋಟಿ ಏಕಾದಶಿ ಮಾಡಿದ ಪುಣ್ಯ ಬರುತ್ತದೆ ಎನ್ನುವುದು ಹಾಗೂ ಈ ದಿನ ವಿಷ್ಣು ತನ್ನ ಜೊತೆ ಮುನ್ನೂರೂ ಕೋಟಿ ದೇವತೆಗಳ ಸಮೇತವಾಗಿ ಭೂಲೋಕಕ್ಕೆ ಒಂದು ತನ್ನ ದರ್ಶನ ಮಾಡಿದವರನ್ನು ಹರಸುತ್ತಾರೆ ಎನ್ನುವ ಮಾತು ಸಹ ಇದೆ. ಇದೇ ದಿನದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ ಎಂದು ಸಹ ಹೇಳಲಾಗುತ್ತದೆ.

ಈ ದಿನ ಪೂರ್ತಿ ವಿಷ್ಣುವಿನ ದ್ಯಾನದಲ್ಲಿದ್ದು ವಿಷ್ಣುವಿನ ಸ್ತೋತ್ರಗಳನ್ನು ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡಬೇಕು, ಸಾಧ್ಯವಾದಷ್ಟು ವಿಷ್ಣುವಿನ ಅವತಾರಗಳ ಬಗ್ಗೆ ಇರುವ ಕಥೆಗಳನ್ನು ತಿಳಿದುಕೊಳ್ಳುವುದು. ಒಟ್ಟಿನಲ್ಲಿ ವಿಷ್ಣುವೀನ ಧ್ಯಾನ ಮಾಡಬೇಕು. ಈ ದಿನ ಹಳದಿ ಧಾನ್ಯಗಳನ್ನು, ಹಳದಿ ಬಣ್ಣದ ವಸ್ತುಗಳನ್ನು ಹಾಗೂ ಹಳದಿ ಹೂವುಗಳನ್ನು ಅರ್ಹರಿಗೆ ದಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ.

ಈ ರೀತಿ ವಿಷ್ಣುವಿನ ಮೇಲೆ ಬಹಳ ನಂಬಿಕೆ ಇಟ್ಟು ನೀವು ಏಕಾದಶಿ ಆಚರಿಸಿದರೆ ಅದರಲ್ಲೂ ವೈಕುಂಠ ಏಕಾದಶಿ ಆಚರಿಸಿದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ನಿಮ್ಮ ಕುಟುಂಬಕ್ಕೆ ಸುಖ ಶಾಂತಿ ನೆಮ್ಮದಿ ಆಯಸ್ಸು ಐಶ್ವರ್ಯ ಎಲ್ಲವೂ ಕೂಡ ಪ್ರಾಪ್ತಿಯಾಗುತ್ತದೆ. ಭಗವಂತನ ಆಶೀರ್ವಾದದಿಂದ ನಿಮಗೆ ಮುಕ್ತಿಯು ದೊರೆಯುತ್ತದೆ. ಆದರೆ ಯಾವುದೇ ಕಾರಣಕ್ಕೂ 5 ವರ್ಷದ ಒಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟವರು ಮತ್ತು ಗರ್ಭಿಣಿಯರ ಹಾಗೂ ಬಾಣಂತಿಯರು ವೈಕುಂಠ ಏಕಾದಶಿ ಆಚರಿಸಬಾರದು.

ಕನ್ಯಾ ರಾಶಿಯವರು ಸಖತ್ ಜಾಣರು, ಕನ್ಯಾ ರಾಶಿಯವರ ಟಾಪ್ 10 ಸಿಕ್ರೇಟ್ ಗಳು ಇವು.!

0

 

ರಾಶಿ ಚಕ್ರದಲ್ಲಿ ಆರನೇ ರಾಶಿಯಾಗಿರುವ ಕನ್ಯಾರಾಶಿಯ ರಾಶಿಯಾಧಿಪತಿ ಬುಧ ಗ್ರಹ. ಭೂಮಿ ತತ್ವವಿರುವ ರಾಶಿ ಈ ರಾಶಿಯ ಬಣ್ಣ ಬೂದು ಹಾಗೂ ತಿಳಿ ಹಳದಿ. ಕನ್ಯಾ ರಾಶಿಯವರಿಗೆ ಬುಧವಾರವು ಬಹಳ ಅದೃಷ್ಟದ ವಾರವಾಗಿರುತ್ತದೆ. 14, 15, 23, 24, 32 ಇವರ ಅದೃಷ್ಟ ಸಂಖ್ಯೆಗಳಾಗಿರುತ್ತವೆ.

ಮೀನಾ ರಾಶಿ ಮತ್ತು ಕರ್ಕಾಟಕ ರಾಶಿಗಳು ಕನ್ಯಾರಾಶಿಯ ಜೊತೆ ಬಹಳ ಚೆನ್ನಾಗಿ ಹೊಂದಾಣಿಕೆ ಆಗುತ್ತವೆ. ಕನ್ಯಾ ರಾಶಿಯ ಗುಣಲಕ್ಷಣಗಳ ಬಗ್ಗೆ ಹೇಳುವುದಾದರೆ ಇವರು ಬಹಳ ಬುದ್ಧಿವಂತರಾಗಿರುತ್ತಾರೆ ಮತ್ತು ಸುಂದರವಾಗಿರುತ್ತಾರೆ ಹಾಗೂ ಯಾವಾಗಲೂ ಸ್ವಚ್ಛವಾಗಿರಲು ಇಷ್ಟ ಪಡುತ್ತಾರೆ.

ಆಹಾರ ಹಾಗೂ ತಮ್ಮ ಸುತ್ತಲಿನ ವಾತಾವರಣದ ಶುದ್ಧತೆ ಬಗ್ಗೆ ಕಟ್ಟುನಿಟ್ಟಾಗಿರುತ್ತಾರೆ ಇವರು ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತಾರೆ ಇವರ ಮುಖದಲ್ಲಿ ಮುಗ್ಧತೆ ಎದ್ದು ಕಾಣುತ್ತದೆ. ಬಹಳ ಸೂಕ್ಷ್ಮ ಸ್ವಭಾವದ ಇವರು ಸಣ್ಣ ಸಣ್ಣ ವಿಚಾರಗಳನ್ನು ಕೂಡ ಗಮನಿಸುತ್ತಾರೆ ಮತ್ತು ಯಾವುದೇ ಕೆಲಸ ಕೊಟ್ಟರು ಅದನ್ನು ಪರ್ಫೆಕ್ಟ್ ಆಗಿ ಮುಗಿಸುತ್ತಾರೆ.

ಸದಾ ಕಾಲ ಆಕ್ಟಿವ್ ಆಗಿ ಇರಲು ಬಯಸುವ ಇವರು ಇದೇ ಗುಣದಿಂದ ಜನರನ್ನು ಆಕರ್ಷಿಸುತ್ತಾರೆ ಹಾಗೂ ಅಷ್ಟೇ ಪ್ರಾಮಾಣಿಕರಾಗಿರುತ್ತಾರೆ. ತಮ್ಮ ಬಗ್ಗೆ ಯಾರು ಏನೇ ಮಾತಾಡಿದರೂ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಇವರು ತಮ್ಮ ಬುದ್ಧಿವಂತಿಕೆಯಿಂದ ಜೀವನದಲ್ಲಿ ಬಹಳ ಹಣ ಸಂಪಾದನೆ ಮಾಡುತ್ತಾರೆ ಕನ್ಯಾ ರಾಶಿಯವರಿಗೆ ಮಾತನಾಡುವ ಕಲೆ ಚೆನ್ನಾಗಿ ಗೊತ್ತಿರುತ್ತದೆ.

ಆದರೆ ಅದನ್ನು ಅವರು ವಿನೋದಕ್ಕಾಗಿ ಬಳಸುವುದಿಲ್ಲ ಬದಲಾಗಿ ಎಲ್ಲದರ ಮೇಲೆ ಕಮ್ಯಾಂಡ್ ಮಾಡಿ ನಿಯಂತ್ರಣದಲ್ಲಿಟ್ಟುಕೊಂಡು ಕಾಪಾಡುವುದರಲ್ಲಿ ನಾಯಕತ್ವ ವಹಿಸುವಂತಹ ಸ್ವಭಾವದವರಾಗಿರುತ್ತಾರೆ. ಕನ್ಯಾ ರಾಶಿಯವರು ಎಲ್ಲರ ಜೊತೆ ಬೆರೆಯುತ್ತಾರೆ. ಇತರರ ಜೊತೆ ಮುಕ್ತವಾಗಿ ವಿಷಯಗಳನ್ನು ಹಂಚಿಕೊಳ್ಳುತ್ತಾರೆ ಹಾಗೂ ಬೇರೆಯವರ ಕಷ್ಟಕ್ಕೂ ಆಗುತ್ತಾರೆ ಆದರೆ ಎಲ್ಲರ ಜೊತೆಗಿದ್ದು ತಮ್ಮ ಗುರಿಯನ್ನು ಮಾತ್ರ ಮರೆಯುವುದಿಲ್ಲ.

ಸದಾಕಾಲ ದುಡ್ಡು ಮಾಡುವುದಕ್ಕಾಗಿ ಚಿಂತೆ ಮಾಡುವ ಗುಣ ಹೊಂದಿರುವ ಇವರು ಅಂದುಕೊಂಡಿದ್ದು ಆಗುವವರೆಗೂ ಕೂಡ ಸುಮ್ಮನೇ ಇರುವವರಲ್ಲ. ಜೊತೆಗೆ ಇವರು ಬರಿ ಮಾತನಾತಿನಲ್ಲಿ ಹೇಳಿಕೊಂಡು ತಿರುಗುವ ಸ್ವಭಾವದವರಲ್ಲ. ಮೊದಲು ಕೆಲಸ ಮಾಡಿ ಅದರ ಪರಿಶ್ರಮದ ಸದ್ದು ಎಲ್ಲರಿಗೂ ಕೇಳುವಂತೆ ಮಾಡುವವರಾಗಿರುತ್ತಾರೆ.

ಬೇರೆಯವರ ಹೊಗಳಿಕೆ ಮತ್ತು ತೆಗಳಿಕೆ ಎರಡು ಕೂಡ ಇವರಿಗೆ ಮುಖ್ಯವಾಗುವುದಿಲ್ಲ. ತಮ್ಮ ಸಂತೋಷಕ್ಕಾಗಿ ತಾವು ಬದುಕುವಂತಹ ವ್ಯಕ್ತಿಗಳು ಕನ್ಯಾ ರಾಶಿಯವರು. ಕನ್ಯಾ ರಾಶಿಯವರು ಯಾವುದೋ ಒಂದು ಕೆಲಸ ಮಾಡುತ್ತ ಅದರ ಯಶಸ್ಸಿಗೆ ಕಾಯುವವರಲ್ಲ ತಮ್ಮ ಪ್ಲಾನ್ ಎ ಫೇಲ್ ಆದರೆ ಅದಾಗಲೇ ಬಿ ಮತ್ತು ಸಿ ಹಾಗು ಡಿ ವರೆಗೆ ರೆಡಿಯಾಗಿರುವ ಚಾಣಾಕ್ಷ ಬುದ್ಧಿಯವರಾಗಿರುತ್ತಾರೆ.

ಇವರು ತುಂಬಾ ಪ್ರಾಕ್ಟಿಕಲ್ ಆಗಿ ಬದುಕುತ್ತಾರೆ. ಇವರನ್ನು ಇನ್ಫ್ಲುಯೆನ್ಸ್ ಮಾಡುವುದು ಬಹಳ ಕ’ಷ್ಟ ಹಾಗೂ ಮೋ’ಸ ಮಾಡುವುದಂತೂ ಅಸಾಧ್ಯ. ಇವರ ಕಣ್ಣಿಗೆ ಬೇರೆಯವರ ತಪ್ಪುಗಳು ಸು’ಳ್ಳುಗಳು ಹಾಗೂ ಮೋ’ಸ ಬಹಳ ಬೇಗ ಬೀಳುತ್ತದೆ. ತುಂಬಾ ಸೂಕ್ಷ್ಮವಾಗಿ ಅವುಗಳನ್ನು ಕಂಡುಹಿಡಿಯುತ್ತಾರೆ ಹಾಗೂ ಇವರ ಕೈಗೆ ಮೋ’ಸ ಮಾಡಿ ಸಿಕ್ಕಿ ಬಿದ್ದರೆ ಇವರು ಬಿಡುವ ಮಾತೇ ಇಲ್ಲ.

ಸುಲಭವಾಗಿ ಯಾರನ್ನು ನಂಬುವುದಿಲ್ಲ ಆದರೆ ಒಮ್ಮೆ ಸ್ನೇಹಿತರು ಎಂದು ನಂಬಿದರೆ ಕಡೆತನಕ ಅವರನ್ನು ಕೈಬಿಡುವುದಿಲ್ಲ. ಜೊತೆಗೆ ಕುಟುಂಬದವರ ಮೇಲು ಕೂಡ ಅಷ್ಟೇ ಪ್ರೀತಿ ವಾತ್ಸಲ್ಯವನ್ನು ಹೊಂದಿರುತ್ತಾರೆ, ಸಂಬಂಧಿಕರನ್ನು ಕೂಡ ಗೌರವಿಸುತ್ತಾರೆ. ಒಟ್ಟಾರೆಯಾಗಿ ಜೀವನದಲ್ಲಿ ಬಹಳ ಕೀರ್ತಿವಂತರಾಗುತ್ತಾರೆ ಹಾಗೂ ಹಣಕಾಸಿನ ವಿಚಾರದಲ್ಲೂ ಕೂಡ ಸಮೃದ್ಧಿಯಾಗಿರುತ್ತಾರೆ. ಹೀಗಾಗಿ ಕನ್ಯಾ ರಾಶಿಯಲ್ಲಿ ಹುಟ್ಟುವುದಕ್ಕೆ ಪುಣ್ಯ ಮಾಡಿರಬೇಕು ಎಂದರು ತಪ್ಪಾಗಲಾರದು.