Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನರೇಶ್ ಜೊತೆ 4ನೇ ಮದುವೆಗೆ ಒಪ್ಪಿರುವ ನಟಿ ಪವಿತ್ರ ಲೋಕೇಶ್ ನರೇಶ್ ಗೆ ಹಾಕಿರುವ ಕಂಡಿಷನ್ ಏನು ಗೊತ್ತ.? ಇವರ ಒಳ ಒಪ್ಪಂದದ ವಿಚಾರ ಕೇಳಿದ್ರೆ ನಿಜಕ್ಕೂ ನಿಂತಲೇ ತಲೆ ತಿರುಗುತ್ತೆ.

Posted on January 4, 2023 By Kannada Trend News No Comments on ನರೇಶ್ ಜೊತೆ 4ನೇ ಮದುವೆಗೆ ಒಪ್ಪಿರುವ ನಟಿ ಪವಿತ್ರ ಲೋಕೇಶ್ ನರೇಶ್ ಗೆ ಹಾಕಿರುವ ಕಂಡಿಷನ್ ಏನು ಗೊತ್ತ.? ಇವರ ಒಳ ಒಪ್ಪಂದದ ವಿಚಾರ ಕೇಳಿದ್ರೆ ನಿಜಕ್ಕೂ ನಿಂತಲೇ ತಲೆ ತಿರುಗುತ್ತೆ.

 

ಮದುವೆ ಎನ್ನುವುದು ಎರಡು ಜೀವಗಳ ನಡುವೆ ಬೆಸೆಯುವ ಒಂದು ಶ್ರೇಷ್ಠವಾದ ಸಂಬಂಧ. ಬದುಕು ಪೂರ್ತಿ ಜೊತೆಗಿರುವ ಈ ಒಪ್ಪಂದದ ಬಗ್ಗೆ ಬರೀ ಮಾತಿನಲ್ಲಿ ವಿವರಿಸುವುದು ಕಷ್ಟ. ಆದರೆ ಇಂದು ಮದುವೆ ಸಹ ಬಿಸಿನೆಸ್ ಗೆ ಇಳಿದಿರುವುದು ನಮ್ಮ ದೇಶದ ಸಂಸ್ಕೃತಿಗೆ ಮಾ.ರ.ಕ.ವಾ.ದ ವಿಷಯ. ಈಗಾಗಲೇ ಅನೇಕ ಪ್ರಕರಣಗಳನ್ನು ಅದರಲ್ಲೂ ಸೆಲೆಬ್ರೆಟಿಗಳ ಮದುವೆ ವಿಚಾರದಿಂದ ಜನರು ಮದುವೆ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ.

ಅಂತಹದೇ ಮತ್ತೊಂದು ಮದುವೆ ಈಗ ಜರಗುತ್ತಿದ್ದು ಒಪ್ಪಂದದೊಂದಿಗೆ ಪವಿತ್ರ ಲೋಕೇಶ್ ಅವರು ನರೇಶ್ ಅವರನ್ನು ಮದುವೆ ಆಗುತ್ತಿದ್ದಾರಂತೆ. ಕಳೆದ ಒಂದು ವರ್ಷದಿಂದ ಕನ್ನಡ ಹಾಗು ತೆಲುಗು ಮಾಧ್ಯಮಗಳಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರ ಸಂಬಂಧದ ಕುರಿತು ಹಲವು ಸುದ್ದಿಗಳು ಪ್ರಸಾರ ಆಗಿದೆ. ನರೇಶ್ ಅವರ ಪತ್ನಿ ರಮ್ಯಾ ಅವರೇ ಮೈಸೂರಿನ ಹೋಟೆಲ್ ರೂಮ್ ಮೇಲೆ ದಾಳಿ ನಡೆಸಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರು ಸಿಕ್ಕಿ ಬೀಳುವಂತೆ ಮಾಡಿದ್ದರು.

ಇದಾದ ನಂತರ ವಿಷಯ ಪವಿತ್ರ ಲೋಕೇಶ್ ಅವರನ್ನು ಸಿನಿಮಾಗಳಿಂದ ಬ್ಯಾನ್ ಮಾಡುವ ತನಕ ತಲುಪಿತ್ತು. ಆದರೆ ಈಗ ಇವರಿಬ್ಬರು ಹೊಸ ವರ್ಷದಲ್ಲಿ ವಿಶೇಷವಾದ ವಿಡಿಯೋ ಮಾಡಿ ಹಂಚಿಕೊಂಡು ನಾವಿಬ್ಬರು ಮದುವೆ ಆಗುತ್ತಿದ್ದೇವೆ ಎನ್ನುವುದರ ಸೂಚನೆ ನೀಡಿದ್ದಾರೆ. ಹೊಸ ವರ್ಷಕ್ಕೆ ಕೇಕ್ ಕಟ್ ಮಾಡುವುದರೊಂದಿಗೆ ಶುರುವಾಗುವ ಈ ವಿಡಿಯೋ ಪರಸ್ಪರ ಇಬ್ಬರು ಲಿಪ್ ಕಿಸ್ ಮಾಡಿಕೊಳ್ಳುವ ಮೂಲಕ ಅಂತ್ಯವಾಗುತ್ತಿದೆ.

ಜೊತೆಗೆ ಇದಕ್ಕೆ ಅವರೇ ಹೊಸ ವರ್ಷದಲ್ಲಿ ಹೊಸ ಜೀವನವನ್ನು ಆರಂಭಿಸುವ ರೀತಿ ಬರೆದುಕೊಂಡು ಹಂಚಿಕೊಂಡಿದ್ದಾರೆ. ಎಲ್ಲರೂ ಇವರಿಬ್ಬರು ಮದುವೆ ಆಗುತ್ತಿದ್ದಾರೆ ಎನ್ನುವ ವಿಷಯದ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಪವಿತ್ರ ಲೋಕೇಶ್ ಅವರು ಸ್ಪಷ್ಟನೆ ನೀಡಿದ್ದು ಇಬ್ಬರು ಸಹ ಈ ವರ್ಷ ಮದುವೆ ಆಗುತ್ತಿದ್ದೇವೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಪವಿತ್ರ ಲೋಕೇಶ್ ಅವರು ಮದುವೆ ಆಗುವ ಸತ್ಯ ಅಷ್ಟೇ ಹೇಳಿದ್ದಾರೆ.

ಬಲವಾದ ಮೂಲಗಳ ಪ್ರಕಾರ ಈ ಮದುವೆ ನಡೆಯುವುದಕ್ಕೂ ಮುನ್ನ ಒಪ್ಪಂದ ಒಂದು ಇಬ್ಬರ ನಡುವೆ ಆಗುತ್ತಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಎರಡು ಮದುವೆಗಳನ್ನು ಮುರಿದುಕೊಂಡಿರುವ ನರೇಶ್ ಅವರು ಪವಿತ್ರ ಲೋಕೇಶ್ ಅವರ ಜೊತೆಗಿನ ಮದುವೆಯನ್ನು ಮುರಿದುಕೊಂಡರೆ ಎಷ್ಟು ಮೊತ್ತದ ಹಣವನ್ನು ಪರಿಹಾರವಾಗಿ ನೀಡಬೇಕು ಎನ್ನುವ ಒಪ್ಪಂದದ ನಂತರ ಈ ಮದುವೆ ನಡೆಯಲಿದೆಯಂತೆ.

ಇದಕ್ಕೆ ಸಂಬಂಧ ಪಟ್ಟ ಹಾಗೆ ಪವಿತ್ರ ಲೋಕೇಶ್ ಅವರ ಜೊತೆ ಆಗುತ್ತಿರುವ ಈ ಮದುವೆಯನ್ನು ನರೇಶ್ ಅವರು ಮುರಿದುಕೊಂಡರೆ 100 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕು. ಜೊತೆಗೆ ಪವಿತ್ರ ಲೋಕೇಶ್ ಅವರು ಇರುವವರೆಗೂ ಪ್ರತಿ ತಿಂಗಳು 5 ಲಕ್ಷವನ್ನು ಸಹ ಅವರಿಗೆ ಕೊಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರಂತೆ. ನರೇಶ್ ಅವರು ಇದಕ್ಕೆ ಒಪ್ಪಿಕೊಂಡ ನಂತರ ಇವರಿಬ್ಬರ ಮದುವೆ ನಡೆಯುವುದಂಯಂತೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಈ ವಿಷಯ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇವರ ಸಂಬಂಧ ಹಾಗೂ ಮದುವೆ ವಿಷಯ ಕುರಿತಾಗಿ ಚರ್ಚೆಗಳು ಜೋರಾಗಿತ್ತು ಎಲ್ಲರೂ ಪವಿತ್ರ ಲೋಕೇಶ್ ಅವರನ್ನು ಹಣದ ಆಸೆಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ದೂಷಿಸುತ್ತಿದ್ದಾರೆ. ಅದೇನೇ ಇದ್ದರೂ ಇವರಿಬ್ಬರ ನಡುವಿನ ಸಂಬಂಧ ಎಷ್ಟು ದಿನ ಉಳಿಯುತ್ತದೆ ಎಂದು ಕಾದು ನೋಡೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ಉತ್ತರಿಸಿ

Entertainment Tags:Naresh, Pavithra lokesh
WhatsApp Group Join Now
Telegram Group Join Now

Post navigation

Previous Post: ಕಷ್ಟದಲ್ಲಿ ಇರುವ ರವಿಚಂದ್ರನ್ ಗೆ ಸಹಾಸ ಮಾಡಲು K.D ಸಿನಿಮಾದಲ್ಲಿ ಅವಕಾಶ ನೀಡಿದ ಡೈರೆಕ್ಟರ್ ಪ್ರೇಮ್, ಆದ್ರೆ ರವಿ ಸರ್ ಡಿಮ್ಯಾಂಡ್ ಸಂಭಾವನೆ ಎಷ್ಟು ಗೊತ್ತ.?
Next Post: ಪ್ರಜ್ವಲ್ ದೇವರಾಜ್ ಹೆಂಡ್ತಿ ರಾಧಿಕಾ ಮಾಡ್ತಿರೋ ವರ್ಕೌಟ್ ವಿಡಿಯೋ ನೋಡಿ ಫಿದಾ ಆದ ಪಡ್ಡೆ ಹುಡುಗರು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore