Sunday, June 4, 2023
HomeEntertainmentಪ್ರಜ್ವಲ್ ದೇವರಾಜ್ ಹೆಂಡ್ತಿ ರಾಧಿಕಾ ಮಾಡ್ತಿರೋ ವರ್ಕೌಟ್ ವಿಡಿಯೋ ನೋಡಿ ಫಿದಾ ಆದ ಪಡ್ಡೆ ಹುಡುಗರು.

ಪ್ರಜ್ವಲ್ ದೇವರಾಜ್ ಹೆಂಡ್ತಿ ರಾಧಿಕಾ ಮಾಡ್ತಿರೋ ವರ್ಕೌಟ್ ವಿಡಿಯೋ ನೋಡಿ ಫಿದಾ ಆದ ಪಡ್ಡೆ ಹುಡುಗರು.

 

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಅವರು ಕೂಡ ಪ್ರಜ್ವಲ್ ಅವರಂತೆಯೇ ಕನ್ನಡ ಚಿತ್ರರಂಗದ ಫೇಮಸ್ ಫೇಸ್. ರಾಗಿಣಿ ಚಂದ್ರನ್ ಅವರು ಖ್ಯಾತ ಯೋಗಾಪಟು, ಹಾಗೂ ಡ್ಯಾನ್ಸರ್ ಮಾಡಲಿಂಗ್ ಹಾಗೂ ನಟನೆಯನ್ನೂ ಮಾಡಿ ಕರ್ನಾಟಕದಲ್ಲಿ ಗುರುತಿಸಿಕೊಂಡಿದ್ದಾರೆ. ರಾಗಿಣಿ ಚಂದ್ರನ್ ಅವರು ಪ್ರಜ್ವಲ್ ದೇವರಾಜ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಶಾಲಾ ದಿನಗಳಿಂದಲೂ ಕೂಡ ಇವರಿಬ್ಬರಿಗೂ ಪರಿಚಯ ಇದೆ.

ರಾಗಿಣಿ ಚಂದ್ರನ್ ಅವರು ಯಾವ ಹೀರೋಯಿನ್ ಗಿಂತಲೂ ಕಡಿಮೆ ಇಲ್ಲದ ಗ್ಲಾಮರ್ ಹೊಂದಿದ್ದಾರೆ ಅಲ್ಲದೆ ಅದೇ ರೀತಿ ಬಾಡಿ ಕೂಡ ಮೈನ್ಟೈನ್ ಮಾಡಿದ್ದಾರೆ. 30ರ ಹರೆಯದವರಾಗಿದ್ದರು ಕೂಡ ರಾಗಿಣಿ ಅವರು 18ರ ಚೆಲುವೆಯಂತೆ ಬಳಕುತ್ತಿದ್ದಾರೆ. ಇದಕ್ಕೆಲ್ಲ ಅವರ ಡಯಟ್ ಹಾಗೂ ವರ್ಕೌಟ್ ಎಂದರೆ ತಪ್ಪಾಗಲಾರದು ರಾಗಿಣಿ ಅವರು ಹಲವು ವರ್ಷಗಳಿಂದ ಡ್ಯಾನ್ಸಿಂಗ್ ಅಲ್ಲಿ ತೊಡಗಿಕೊಂಡಿದ್ದಾರೆ.

ಕಥಕ್, ಜುಂಬ ನೃತ್ಯ ಶೈಲಿಯಲ್ಲಿ ಪರಿಣಿತಿ ಕೂಡ ಪಡೆದಿದ್ದಾರೆ. ಈಗ ಅವರು ಅನ್ರಿದಮಿಕ್ ಎನ್ನುವ ಡ್ರಾನ್ಸ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ. ಜೊತೆಗೆ ಯೋಗದಲ್ಲೂ ಕೂಡ ಸಾಕಷ್ಟು ಅಭ್ಯಾಸ ಮಾಡಿರುವ ಇವರು ಹಲವು ವರ್ಷಗಳಿಂದ ಈ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಇಂದಿಗೂ ಅವರು ಚಿರ ಚಲುವೆಯಂತೆ ಮಿಂಚಲು ಯೋಗಾಭ್ಯಾಸವೇ ಕಾರಣ ಇತ್ತೀಚೆಗೆ ರಾಗಿಣಿ ಅವರು ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

ಈ ವಿಡಿಯೋವನ್ನು ನೋಡಿದರೆ ತಿಳಿಯುತ್ತದೆ ತಮ್ಮ ಫಿಸಿಕ್ಸ್ ಮೆಂಟೇನ್ ಮಾಡಲು ರಾಗಿಣಿ ಅವರು ಜಿಮ್ ಅಲ್ಲಿ ಎಷ್ಟು ಬೆವರಿಸುತ್ತಾರೆ ಎಂದು. ಇವರ ಈ ತಯಾರಿ ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ಇವರು ಕನ್ನಡದ ಸ್ಟಾರ್ ನಟಿ ಆಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನಿಸುತ್ತಿದೆ. ರಾಗಿಣಿ ಅವರು ಎಂದು ಸಹ ತಾವು ನಟಿಯಾಗುತ್ತೇನೆ ಎಂದು ಅಂದುಕೊಂಡವರಲ್ಲವಂತೆ ಅಚಾನಕ್ಕಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಈಗ ನಟಿಯಾಗಿ ಮಾಡಲ್ ಆಗಿ ಫೇಮಸ್ ಆಗಿದ್ದಾರೆ.

2014 ರಲ್ಲಿ ಪ್ರಜ್ವಲ್ ದೇವರಾಜ್ ಅವರನ್ನು ವಿವಾಹವಾಗಿರುವ ರಾಗಿಣಿ ಚಂದ್ರನವರು 2017ರಲ್ಲಿ ರಿಷಭಪ್ರಿಯ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಇದಾದ ನಂತರ ಲಾ ಎನ್ನುವ ಕಂಟೆಂಟ್ ಓರಿಯಂಟ್ ಕನ್ನಡ ಸಿನಿಮಾದಲ್ಲೂ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 2020ರಲ್ಲಿ ವಿಜಯದಶಮಿ ಎನ್ನುವ ಸಿನಿಮಾವನ್ನು ಪ್ರಜ್ವಲ್ ಜೊತೆ ಮಾಡಬೇಕಿತ್ತು, ಆ ಸಿನಿಮಾ ಕೂಡ ಸೆಟ್ಟೇರಿದ್ದು ಸದ್ಯಕ್ಕೆ ಅದರ ಬಗ್ಗೆ ಸುದ್ದಿ ಇಲ್ಲ.

ಪ್ರಜ್ವಲ್ ದೇವರಾಜ್ ಅವರ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲೂ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಿಂದ ಕೂಡ ಇವರಿಗೆ ಆಫರ್ ಬಂದಿದೆ. ಆದರೆ ಅವರು ಕನ್ನಡದಲ್ಲಿ ಅಭಿನಯಿಸುವ ಆಸೆಯಿಂದ ಇವುಗಳನ್ನೆಲ್ಲ ಪಕ್ಕಕ್ಕಿಟ್ಟಿದ್ದಾರೆ. ರಾಗಿಣಿ ಅವರು ನಟಿಯಾಗುವುದಕ್ಕಿಂತ ಮುಂಚೆ ಮಾಡಲಾಗಿ ಹಲವು ಆಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ರೂ ಇನ್ಸ್ಟಂಟ್ ಕಾಫಿ, ಕೃಷ್ಣ ತುಳಸಿ ಸೋಪ್, ತಂಗಂ ಜೆವೆಲ್ಲೆರ್ಸ್ ಅಭಿರಾಮ್ ಜುವೆಲರ್ಸ್ ಈ ರೀತಿ ಹಲವು ಜಾಹಿರಾತುಗಳಿಗೆ ಫೇಸ್ ಆಗಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಸಹ ಕನ್ನಡದ ಫೇಮಸ್ ನಟ ಮಾಡಿದ್ದು ಕೆಲವೇ ಸಿನಿಮಾಗಳು ಆದರೂ ಕೂಡ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಕರ್ನಾಟಕದಲ್ಲಿ ಗಳಿಸಿದ್ದಾರೆ. ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ ಆದಷ್ಟು ಬೇಗ ಇದು ನೆರವೇರಲಿ ಎಂದು ಹಾರೈಸೋಣ.