
ಜಗತ್ತು ಜಾಗತೀಕರಣಕ್ಕೆ ತೆಗೆದುಕೊಳ್ಳುತ್ತಿದ್ದಂತೆ, ಕಳ್ಳರು ಕೂಡ ಅಪ್ಡೇಟ್ ಆಗಿ ಹೋಗಿದ್ದಾರೆ ಎಂದು ಹೇಳಬಹುದು. ಯಾಕೆಂದರೆ ಮೊದಲೆಲ್ಲಾ ಸಂತೆಯಲ್ಲಿ ಮಾರ್ಕೆಟ್ ಗಳಲ್ಲಿ ಹೊಂಚು ಹಾಕಿ ಹಣ ಉಳ್ಳವರ ಜೇಬಿಗೆ ಕತ್ತರಿ ಹಾಕುತ್ತಿದ್ದ ಪಿಕ್ ಪಾಕೆಟ್ ಕಾಲ ಹೋಗಿ ಈಗ ನೇರವಾಗಿ ಅಕೌಂಟಿಗೆ ಕೈ ಹಾಕಿ ಲಕ್ಷ ಲಕ್ಷ ದರೋಡೆ ಮಾಡುವ ಹಂತಕ್ಕೆ ಬೆಳೆದು ಬಿಟ್ಟಿದ್ದಾರೆ.
ಈಗಿನ ದಿನಮಾನದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಆರ್ಥಿಕ ಚಟುವಟಿಕೆಗಳಿಗಾಗಿ ಬ್ಯಾಂಕ್ ಅಕೌಂಟ್ ಹೊಂದಲೇ ಬೇಕಾದ ಕಾರಣ ಬಡವ ಬಲ್ಲಿದ, ರೈತ, ಸೇವಕ, ವ್ಯಾಪಾರಿ, ಶ್ರೀಮಂತ ಎನ್ನುವ ಭೇದ ಇಲ್ಲದೆ ಯಾರ ಅಕೌಂಟಲ್ಲಿ ಹಣ ಕಾಣುತ್ತಿದೆಯೋ ಅವರಿಗೆ ಬಲೇ ಬೀಸಲು ಶುರು ಮಾಡಿದರೆ ಈ ಸೈಬರ್ ಕಳ್ಳರು. ಹಳ್ಳಿಯ ಆವಿದ್ಯಾವಂತರ ಪಾಲಿಗಂತೂ ಈ ಸೈಬರ್ ಕಳ್ಳರು ದೊಡ್ಡ ಕಂಠಕವೇ ಆಗಿದ್ದಾರೆ ಎಂದು ಹೇಳಬಹುದು.
ಆದರೆ ಇಲ್ಲೊಬ್ಬ ಕಳ್ಳರನ್ನು ಹಿಡಿಯಬೇಕಾದ ಪೊಲೀಸ್ ಪೇದೆಗೆ ಈ ರೀತಿ ಮೋಸಕ್ಕೆ ಒಳಗಾಗಿರುವುದು ಎಲ್ಲರನ್ನ ಒಮ್ಮೆ ಬೆಚ್ಚಿ ಬೀಳಿಸಿದೆ. ಇಂತಹದೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು ಇದರ ವಿವರ ಇಲ್ಲಿದೆ ನೋಡಿ. ಬೆಂಗಳೂರಿನಲ್ಲಿ ಸಿಎಆರ್ ಪೇದೆ ಭದ್ರಯ್ಯ ಎನ್ನುವವರ ಅಕೌಂಟ್ ಮೇಲೆ ವಂಚಕರು ಈ ರೀತಿ ಕಣ್ಣು ಹಾಕಿ ಬರೋಬ್ಬರಿ 73000 ರೂಗಳನ್ನು ಹೊಡೆದಿದ್ದಾರೆ. ಪೊಲೀಸರಿಗೆ ಈ ರೀತಿ ಆಗಿದೆ ಎಂದರೆ ಜನಸಾಮಾನ್ಯರು ನಮ್ಮ ಗತಿಯೇನು ಎಂದು ಕೇಳುವಂತೆ ಆಗಿದೆ.
ಭದ್ರಯ್ಯ ಎಂಬ ಪೋಲಿಸ್ ಅಧಿಕಾರಿಗೆ ಕರೆ ಮಾಡಿದ ನಕಲಿ ಕಸ್ಟಮರ್ ಕೇರ್ ಸಿಬ್ಬಂದಿ ನಿಮ್ಮ SBI ಅಕೌಂಟ್ ಬ್ಲಾಕ್ ಆಗಿದೆ ಅದನ್ನು ಆಕ್ಟಿವೇಟ್ ಮಾಡಬೇಕು ಎಂದರೆ ಪಾನ್ ಕಾರ್ಡ್ ಅಪ್ಡೇಟ್ ಮಾಡಬೇಕು. ನಾವು ಲಿಂಕ್ ಒಂದನ್ನು ಕಳಿಸುತ್ತೇವೆ, ಅದಕ್ಕೆ ಕ್ಲಿಕ್ ಮಾಡುವ ಮೂಲಕ ನೀವೇ ಅಪ್ಡೇಟ್ ಮಾಡಬಹುದು ಎಂದು ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಈ ವಂಚನೆ ಬಗ್ಗೆ ಅರಿವೇ ಇರದ ಪೇದೆ ಭದ್ರಯ್ಯ ತಕ್ಷಣವೇ ಅವರು ಕಳುಹಿಸಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿ ಬಿಟ್ಟಿದ್ದಾರೆ.
ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಇವರ ಎರಡು ಉಳಿತಾಯ ಖಾತೆಗಳ ಪೂರ್ತಿ ಹಣ ಗುಳಂ ಆಗಿ ಹೋಗಿ, ಇವರು ಗಾಬರಿಗೊಂಡಿದ್ದಾರೆ. ಯಾಕೆಂದರೆ ಎರಡು ಅಕೌಂಟ್ ನಂಬರ್ ಗೂ ಒಂದೇ ಮೊಬೈಲ್ ಸಂಖ್ಯೆ ಕೊಟ್ಟಿದ್ದರಿಂದ ಒಂದೇ ಬಾರಿಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದು ಬಿಟ್ಟಿದ್ದಾರೆ ಚೋರರು. ಸದ್ಯಕ್ಕೆ ಪೇದೆ ಆಗ್ನೇಯ ವಿಭಾಗದ ಸೈಬರ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಎಫ್ಐಆರ್ ಕೂಡ ದಾಖಲಾಗಿದೆ ಜೊತೆಗೆ ಪೊಲೀಸರು ಎಚ್ಚರಿಕೆಯಿಂದ ಇರುವಂತೆ ಎಲ್ಲರಿಗೂ ಸಲಹೆ ಸಹ ನೀಡಿದ್ದಾರೆ
ಇದೇ ಮೊದಲೇನಲ್ಲಾ ಯಾವಾಗ ಆನ್ಲೈನ್ ಆರ್ಥಿಕ ಚಟುವಟಿಕೆಗಳು ಶುರು ಆಯ್ತು ಮತ್ತು ಬ್ಯಾಂಕ್ ಉಳಿತಾಯ ಖಾತೆಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮೊಬೈಲ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಆಯ್ತು ಆಗಿನಿಂದಲೂ ಪದೇಪದೇ ಇಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಈಗಾಗಲೇ ಸಾಕಷ್ಟು ವಂಚನೆ ಗೆ ಒಳಗಾದ ನಾಗರಿಕರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು ಎಷ್ಟು ಜನರಿಗೆ ಇದರಿಂದ ಪರಿಹಾರ ಸಿಕ್ತು ಎನ್ನುವ ಉದಾಹರಣೆಗಳಿಲ್ಲ.
ಆದ್ದರಿಂದ ಪೊಲೀಸ್ ಇಲಾಖೆಯು ಸದಾ ಈ ಸೈಬರ್ ಕಳ್ಳರ ಬಗ್ಗೆ ಜನರಿಗೆ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹಿರಾತು ನೀಡುವ ಮೂಲಕ ಎಚ್ಚರಿಸುತ್ತಲೇ ಇದೆ. ಇನ್ನಾದರೂ ಜನರು ಎಚ್ಚೆತ್ತಿಕೊಂಡು ಈ ರೀತಿ ಮೋಸದ ಜಾಲಕ್ಕೆ ಒಳಗಾಗುವುದು ಕಡಿಮೆ ಆಗಲಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ ಹಾಗೂ ಇನ್ನು ಮುಂದೆ ನಿಮಗೆ ಯಾರಾದರೂ ಈ ರೀತಿ ಸುಳ್ಳು ಕರೆ ಮಾಡಿದರೆ ಎಚ್ಚರಿಕೆ ಇಂದ ಇರಿ.