
ಜೀವನದಲ್ಲಿ ಅವಕಾಶ ಎನ್ನುವುದು ಒಮ್ಮೆ ಮಾತ್ರ ಸಿಗುವುದು. ಸಿಕ್ಕ ಅವಕಾಶವನ್ನು ಯಾರು ಕೈ ತುಂಬಾ ಬಾಚಿಕೊಳ್ಳುತ್ತಾರೋ ಅವರೇ ಬೆಳೆದು ನಿಲ್ಲುವುದು. ಬದುಕು ಎಂದರೆ ಹಾಗೆ ಭಗವಂತ ಎಲ್ಲರಿಗೂ ಎಲ್ಲ ಸಮಯಗಳಲ್ಲೂ ಅವಕಾಶ ಕೊಡುವುದಿಲ್ಲ. ಕೆಲವರಿಗೆ ಅವಕಾಶ ಕೊಟ್ಟಂತೆ ಕೊಟ್ಟು ಇನ್ನೊಂದು ಕೈಯಿಂದ ಕಿತ್ತು ಕೊಂಡಿದ್ದೇ ಹೆಚ್ಚು. ನಮ್ಮ ಎಲ್ಲಾ ಕಷ್ಟಗಳು ತೀರಿತು ಇನ್ನು ಮುಂದೆ ಎಲ್ಲವೂ ಒಳ್ಳೇದಾಗುತ್ತದೆ ಎಂದು ಬೊಗಸೆ ಕಣ್ಣಿನಿಂದ ಕಾಯುತ್ತಿದ್ದವರು ಹೇಳ ಹೆಸರಿಲ್ಲದಂತೆ ಮರೆಯಾಗಿದ್ದು ಇದೆ.
ಇವುಗಳಿಗೆಲ್ಲಾ ಸದ್ಯಕ್ಕಿರುವ ಪ್ರತ್ಯಕ್ಷ ಉದಾಹರಣೆ ಸೃಜನ್ ಲೋಕೇಶ್ ಅವರ ಅಕ್ಕ ಪೂಜಾ ಲೋಕೇಶ್ (Pooja Lokesh) . ಕಾಲೇಜು ಹೋಗುತ್ತಿದ್ದ ವಯಸ್ಸಿನಲ್ಲಿಯೇ ಸಿನಿಮಾ ಹೀರೋಯಿನ್ ಆಗಿ ಸೆಲೆಕ್ಟ್ ಆದರು. ತಂದೆ ತಾತ ಅಮ್ಮ ಹೀಗೆ ಎಲ್ಲರೂ ಕೂಡ ಪ್ರಖ್ಯಾತ ಕಲಾವಿದರು ಗಳೇ ,ಸುಬ್ಬಯ್ಯ ನಾಯ್ಡು (Subbai naidu) ಅವರ ಮೊಮ್ಮಗಳಾದ ಲೋಕೇಶ್ ಹಾಗೂ ಗಿರಿಜಮ್ಮನ ಪ್ರೀತಿಯ ಪುತ್ರಿ ನೋಡಲು ಚೆಲುವೆ ಜೊತೆಗೆ ಅಭಿನಯ ಅನ್ನುವುದು ರಕ್ತಗತವಾಗಿಯೇ ಬಂದಿತ್ತು.
ಹೀಗಾಗಿ ಬಣ್ಣದ ಲೋಕದ ಅವಕಾಶ ಸಿಕ್ಕ ತಕ್ಷಣ ನನ್ನ ಅದೃಷ್ಟ ಇಲ್ಲೇ ಇರಬೇಕು ಎಂದು ಓಕೆ ಅಂದುಬಿಟ್ಟರು. ಪೂಜಾ ಲೋಕೇಶ್ ಮೊದಲಿಗೆ ದೇವರಾಜ್ ಅವರೊಂದಿಗೆ ಹುಲಿಯ (Huliya) ಸಿನಿಮಾದಲ್ಲಿ ನಾಯಕ ನಟಿಯಾಗಿ ಅಲ್ಲದಿದ್ದರೂ ಅದಕ್ಕೆ ಸಮಾನವಾದ ಪಾತ್ರದಲ್ಲಿ ಅಭಿನಯಿಸಿದರು. ನಂತರ ರಮೇಶ್ ಅರವಿಂದ್ ಅವರೊಂದಿಗೆ ಉಲ್ಟಾ ಪಲ್ಟಾ (ulta palta) ಸಿನಿಮಾದ ನಾಯಕಿ ಆದರು. ಇಂದಿಗೂ ಕೂಡ ಸೂಪರ್ ಹಿಟ್ ಹಾಡಾಗಿರುವ ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು ಎಂದು ರಾಮಕುಮಾರ್ ಅವರೊಂದಿಗೆ ನೃತ್ಯ ಮಾಡಿದ್ದ ಇವರು ಆ ಕಾಲದ ಸಮಕಾಲೀನ ನಟಿಯರಾದ ಸುಧಾರಾಣಿ ಶ್ರುತಿ ಪ್ರೇಮ ಇವರಂತೆ ಹೆಸರು ಮಾಡಬೇಕಿತ್ತು.
ಅದರೆ ಆರಂಭದ ಎರಡು ಮೂರು ಸಿನಿಮಾಗಳು ಹಿಟ್ ಆದರೂ ಪೂಜಾ ಗೆ ಮಾತ್ರ ಸಿನಿಮಾ ಅವಕಾಶಗಳು ಬರಲೇ ಇಲ್ಲ. ಜೊತೆಗೆ ಇಲ್ಲಸಲ್ಲದ ಗಾಸಿಪ್ಗಳು ಹರಡತೊಡಗಿದ್ದವು. ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಪೂಜಾ ಅವಕಾಶಗಳಿಗಾಗಿ ಕಾದು ನೋಡುತ್ತಲೇ ಇದ್ದರು. ಯಾವಾಗ ಕನ್ನಡದಲ್ಲಿ ಇವರ ಕಲೆಯನ್ನು ಗುರುತಿಸದೆ ನೆಗ್ಲೆಟ್ ಮಾಡಿದರು ಬೇರೆ ಚಿತ್ರರಂಗದ ಕಡೆ ಇವರು ಸಹ ವಲಸೆ ಹೋಗಬೇಕಾಯಿತು.
ನಂತರ ತಮಿಳು ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡ ಇವರ ಬದುಕಿನ ಚಿತ್ರಣವೇ ಬದಲಾಗಿ ಹೋಯಿತು. ಕುಂಕುಮಂ, ಮಹಾಭಾರತಂ, ಅಂಜಲಿ ಹೀಗೆ ತಮಿಳಿನಲ್ಲೇ ಸುಮಾರು 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಇವರು ಕಾಣಿಸಿಕೊಂಡು ಮನೆಮನೆ ಮಾತಾಗಿದ್ದಾರೆ. ಮತ್ತೊಮ್ಮೆ ಕನ್ನಡದಲ್ಲಿ ಟೈಗರ್ ಗಲ್ಲಿ ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡಿದರು ಅದೂ ಸಹಾ ಸದ್ದು ಮಾಡಲಿಲ್ಲ.
ಮಜಾ ಟಾಕೀಸ್ ಅಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಪೂಜಾ ಲೋಕೇಶ್ ಅವರು ಆ ಕಾರ್ಯಕ್ರಮಕ್ಕೆ ಸೃಜನ್ ಲೋಕೇಶ್ ಅವರಿಗೆ ಕಾಸ್ಟ್ಚೂಮ್ ಡಿಸೈನರ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಗಿರಿಜಮ್ಮ, ಸೃಜನ್ ಮತ್ತು ಸುಜನ್ ಪತ್ನಿ ಗ್ರೀಷ್ಮ ಹಾಗೂ ಅವರ ಮಗನೊಂದಿಗೆ ವಿಡಿಯೋಗಳನ್ನು ಮಾಡುತ್ತಿರುತ್ತಾರೆ.
ಇನ್ನು ಚಿರ ಯುವತಿಯಂತೆ ಕಾಣುತ್ತಿರುವ ಪೂಜಾರ ವಯಸ್ಸು 45 ವರ್ಷ ಆದರೂ ಕೂಡ ಒಬ್ಬಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ಮದುವೆ ಆಗಿಲ್ಲ ಎನ್ನುವ ಮಾತ್ರಕ್ಕೆ ಆ ವಿಚಾರದಲ್ಲಿ ಇವರ ಹೆಸರು ಯಾರ ಜೊತೆಗೂ ಕೂಡ ಥಳಕು ಹಾಕಿಕೊಂಡಿಲ್ಲ. ಏಕಾಂಗಿಯಾಗಿ ಬದುಕು ನಡೆಸುವ ನಿರ್ಧಾರ ಮಾಡಿರುವ ಪೂಜಾ ಲೋಕೇಶ್ ಅವರು ಯಾಕೆ ಮದುವೆ ಬಂಧನಕ್ಕೆ ಬೀಳಲಿಲ್ಲ ಎನ್ನುವುದು ಇನ್ನೂ ಗುಟ್ಟಾಗಿದೆ. ಅವರ ವೈಯಕ್ತಿಕ ನಿರ್ಧಾರಗಳು ಏನೇ ಇದ್ದರೂ ನಗುನಗುತ್ತಾ ಬದುಕು ಕಳೆಯಲಿ ಎನ್ನುವುದಷ್ಟೇ ನಮ್ಮ ಅಭಿಲಾಷೆ.
https://youtu.be/cW65ztLYf1k