Sunday, June 4, 2023
HomeViral News50 ಕೋಟಿ ಸಂಭಾವನೆ ಕೊಡ್ತಿನಿ ಅಂದ್ರು ಪನ್ ಮಸಾಲಾ ಜಾಹೀರಾತು ನಿರಾಕರಿಸಿದ್ದ ಯಶ್ ಪೆಪ್ಸಿ ಜಾಹೀರಾತಿಗೆ...

50 ಕೋಟಿ ಸಂಭಾವನೆ ಕೊಡ್ತಿನಿ ಅಂದ್ರು ಪನ್ ಮಸಾಲಾ ಜಾಹೀರಾತು ನಿರಾಕರಿಸಿದ್ದ ಯಶ್ ಪೆಪ್ಸಿ ಜಾಹೀರಾತಿಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ.?

ಕನ್ನಡ ತಾಯಿಯ ಹೆಮ್ಮೆಯ ಪುತ್ತನೊಬ್ಬ ಇಂದು ಇಂಟರ್ನ್ಯಾಷನಲ್ ಸ್ಟಾರ್ ಆಗಿರುವುದು ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ಸಂತೋಷದ ವಿಷಯ. ಮೈಸೂರಿನಲ್ಲಿ ಹುಟ್ಟಿದ ಯಶ್ (Yash) ಎನ್ನುವ ಈ ಪ್ರತಿಭೆ ಇಂದು ದೇಶದ ಗಡಿ ದಾಟಿ ಇಂಟರ್ನ್ಯಾಷನಲ್ ಲೆವೆಲ್ ಅಲ್ಲಿ ಹೆಸರು ಮಾಡುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ಭಾರತದಾದ್ಯಂತ ಜಾದು ಮಾಡಿದ್ದ ಈತ ಕೆಜಿಎಫ್ ಟೂ ಇಂದ ಇಂಟರ್ನ್ಯಾಷನಲ್ ಸ್ಟಾರ್ ಆದರು.

ಈಗ ಇವರ ಹಿರಿಮೆಗೆ ಮತ್ತೊಂದು ಗರಿ ಏರಿದ್ದು ಮೊದಲ ಬಾರಿಗೆ ಕನ್ನಡದ ನಟ ಇಂಟರ್ನ್ಯಾಷನಲ್ ಬ್ರಾಂಡಿಗೆ ಬ್ರಾಂಡ್ ಅಂಬಾಸಿಡರ್ ( Brand Ambassador) ಆಗಿದ್ದಾರೆ ಎನ್ನುವ ದಾಖಲೆ ಬರೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಭಾರತದಾದ್ಯಂತ ರಾಕಿ ಭಾಯ್ ಆಗಿ ಗುರುತಿಸಿಕೊಂಡಿದ್ದಾರೆ. ಇವರ ಕ್ರೇಝ್ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ಪೆಪ್ಸಿ (Pepsi) ಕಂಪನಿಯು ಇವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಹ್ವಾನಿಸಿರುವುದೇ ಸಾಕ್ಷಿ.

ಎರಡು ದಿನಗಳ ಹಿಂದಷ್ಟೇ ಯಶ್ ಅವರು instagram ನಲ್ಲಿ ಸ್ಟೈಲ್ ಆಗಿ ಪೆಪ್ಸಿ ಕುಡಿಯುತ್ತಿರುವ ಫೋಟೋ ಹಾಕಿಕೊಂಡಿದ್ದರು. ಅವರ ಆ ಸ್ಟೈಲ್ ನೋಡಿ ಫ್ಯಾನ್ ಫಿದಾ ಆಗಿ ಹೋಗಿದ್ದರು. ಅಲ್ಲಿ ಮತ್ತೊಂದು ವಿಷಯವೂ ಕೂಡ ಇತ್ತು ಅದೇನೆಂದರೆ ಪೆಪ್ಸಿ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಯಶ್ ಅವರು ಸೆಲೆಕ್ಟ್ ಆಗಿರುವುದು. ಈ ಹಿಂದೆ ಟಿಎಂಟಿ ಸ್ಟೀಲ್, ರಾಮರಾಜ್ ಮತ್ತು ಫ್ರೀಡಂ ಸನ್ ಫ್ಲವರ್ ಆಯಿಲ್ ಇತ್ಯಾದಿ ಜಾತಿರಾತುಗಳಲ್ಲಿ ಕಾಣಿಸಿಕೊಂಡಿದ್ದ ಯಶ್ ಅವರು ಮೊದಲ ಬಾರಿಗೆ ಇಂಟರ್ನ್ಯಾಷನಲ್ ಆಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಯಶ್ ಅವರು ಇದಕ್ಕಾಗಿ ಪಡೆದಿರುವ ಸಂಭವನೆ ಏನಿರಬಹುದು ಎನ್ನುವ ಊಹಾಪೋಹದ ಚರ್ಚೆ ಕೂಡ ಜೋರಾಗಿ ನಡೆಯುತ್ತಿದೆ ಅದರ ನಿಖರ ಮಾಹಿತಿ ಇಲ್ಲಿದೆ ನೋಡಿ. ಯಶ್ ಅವರು ಸದ್ಯಕ್ಕೆ ಸಿನಿಮಾಗಳಿಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ, ಜೊತೆಗೆ ತಮ್ಮದೇ ಆದ ಶೇರ್ಸ್ ಕೂಡ ಹೊಂದಿದ್ದಾರೆ. ಹಾಗಾಗಿ ಇಂಟರ್ನ್ಯಾಷನಲ್ ಸ್ಟಾರ್ ಆಗಿರುವ ಇವರು ಈಗ ಒಂದು ಜಾಹಿರಾತಿನಲ್ಲಿ ಭಾಗವಹಿಸುವುದು ಎಂದರೆ ಅದು ಸುಲಭದ ವಿಷಯ ಅಲ್ಲ.

ಹಾಗಾಗಿ ಬಾರಿ ಮೊತ್ತದ ಸಂಭಾವನೆಯನ್ನು ಇವರು ಪಡೆದಿರುತ್ತಾರೆ ಎನ್ನುವ ಮಾಹಿತಿ ಇದೆ. ಆದರೆ ಯಾರು ಕೂಡ ಇನ್ಕಮ್ ಟ್ಯಾಕ್ಸ್ ವಿಚಾರವಾಗಿರುವುದರಿಂದ ತಾವು ಪಡೆದಿರುವ ಹಣವನ್ನು ಘೋಷಿಸಿಕೊಳ್ಳುವುದಿಲ್ಲ. ಆಪ್ತ ವಲಯದವರಿಂದ ತಿಳಿದು ಬಂದಿರುವ ವಿಷಯ ಏನೆಂದರೆ, ಬೇರೆ ಜಾಹೀರಾತುಗಳಿಗೆ ಎರಡು ಕೋಟಿ ಸಂಭಾವನೆ ಪಡೆಯುತ್ತಿದ್ದ ಯಶ್ ಅವರು ಪೆಪ್ಸಿ ಜಾಹೀರಾತಿಗಾಗಿ 10 ಕೋಟಿ ಅನ್ನು ಸಂಭಾವನೆ ಆಗಿ ಪಡೆದಿದ್ದಾರಂತೆ.

ಯಶ್ ಅವರ ಜಾಹೀರಾತಿನ ಬಗ್ಗೆ ಸಿಕ್ಕಿರುವ ಮತ್ತೊಂದು ಮಾಹಿತಿ ಏನೆಂದರೆ, ಅವರ ಕೆಜಿಎಫ್ ಚಾಪ್ಟರ್ 1 ಹಿಟ್ ಆಗಿದ್ದ ವೇಳೆ ಅವರಿಗೆ ಪಾನ್ ಮಸಾಲ (Pan Masala) ಜಾಹೀರಾತು ನಲ್ಲಿ ಭಾಗವಹಿಸಿ ಎಂದು ಆಹ್ವಾನ ನೀಡಲಾಗಿತ್ತಂತೆ. ಆದರೆ ಅದು ಆರೋಗ್ಯಕ್ಕೆ ಹಾನಿಕರ ಅಭಿಮಾನಿಗಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ಒಂದೇ ಮಾತಿನಲ್ಲಿ ಆಗಲ್ಲ ಎಂದು ಹೇಳಿಬಿಟ್ಟರಂತೆ.

ಅದಕ್ಕಾಗಿ ಡಬಲ್ ಡಿಜಿಟ್ ಅಷ್ಟು ಸಂಭಾವನೆ ಕೊಡುವುದಾಗಿ ಕೂಡ ಕಂಪನಿ ಆಫರ್ ಮಾಡಿದರೂ ಯಶ್ ಒಪ್ಪಿಲ್ಲ. ಯಶ್ ಅವರು ಯಾವುದೇ ವಿಚಾರ ಒಪ್ಪಿಕೊಂಡರು ಅಳೆದು ತೂಗಿ ಸಮಾಧಾನ ಆದರೆ ಮಾತ್ರ ಮಾಡುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಯಶ್ ಅವರು ಪೆಪ್ಸಿ ಜಾಹೀರಾತಿನಲ್ಲಿ ಭಾಗವಹಿಸುವ ಬದಲು ಕರ್ನಾಟಕದ ರೇಷ್ಮೆ ಅಥವಾ ಎಳನೀರು ಅಥವಾ ಕಬ್ಬಿನ ಹಾಲು ಇಂತಹ ನಮ್ಮ ದೇಸಿಯ ಪದಾರ್ಥಗಳನ್ನು ಪ್ರೋತ್ಸಾಹಿಸುವಂತಹ ಜಾಹೀರಾತಿನಲ್ಲಿ ಭಾಗವಹಿಸಬೇಕೀತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ