
PPF ಎಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಎಂದರ್ಥ. PPF ಸ್ಕೀಮ್ ಗವರ್ಮೆಂಟ್ ಬ್ಯಾಂಕ್ ಸೇವೆಡ್ ಸ್ಕೀಮ್ ಆಗಿದೆ. ಆದ ಕಾರಣ ನೀವು ಈ ಸ್ಕೀಮ್ ಅಲ್ಲಿ ಹೂಡಿಕೆ ಮಾಡಿದ ಹಣಕ್ಕೆ ನೂರಕ್ಕೆ ನೂರರಷ್ಟು ಭದ್ರತೆ ಸರ್ಕಾರವೇ ಕೊಡುತ್ತದೆ. ಇದೊಂದು ಧೀರ್ಘಾವಧಿಯ ಯೋಜನೆ ಆಗಿದೆ. ವಾರ್ಷಿಕವಾಗಿ ಇದಕ್ಕೆ ಹೂಡುವ ಹಣದ ಮೇಲೆ 7.1% ಇಂಟರೆಸ್ಟ್ ಸಿಗಲಿದೆ.
PPF ಯೋಜನೆಯಲ್ಲಿ ಹೂಡಿದ ಮಾಡಿದ ಹಣದ ಮೇಲಾಗಲಿ, ಇಂಟರೆಸ್ಟ್ ಮೇಲಾಗಲಿ ಯಾವುದೇ ರೀತಿಯ ಬಡ್ಡಿ ಬೀಳುವುದಿಲ್ಲ. ಯೋಜನೆ ಮಾಡಿಸುವುದಕ್ಕೆ ಯಾವುದೇ ರೀತಿಯ ಏಜ್ ಲಿಮಿಟ್ ಇರುವುದಿಲ್ಲ. ಯಾವ ವಯಸ್ಸಿನಲ್ಲಿ ಬೇಕಾದರೂ ಇದನ್ನು ಓಪನ್ ಮಾಡಬಹುದು.
ಒಬ್ಬರು ಒಂದೇ PPF ಅಕೌಂಟ್ ಹೊಂದಲು ಸಾಧ್ಯ, ಚಿಕ್ಕ ಮಕ್ಕಳಿಂದ ವಯಸ್ಸಾದವರವರೆಗೆ ಯಾರಾದರೂ ಈ ಯೋಜನೆ ಖರೀದಿಸಬಹುದು. ಈ ಸ್ಕೀಮ್ ಅಲ್ಲಿ ನೀವು ಕನಿಷ್ಠ 500 ರಿಂದ ಗರಿಷ್ಠ ಒಂದೂವರೆ ಲಕ್ಷದವರೆಗೆ ಡೆಪೋಸಿಟ್ ಮಾಡಬಹುದು. ಇದನ್ನು ವಾರ್ಷಿಕವಾಗಿ ಅಥವಾ ಕಂತುಗಳ ಲೆಕ್ಕದಲ್ಲೂ ಕೂಡ ಮಾಡಬಹುದು. ಈ PPF ಅಕೌಂಟಿನ ಎಕ್ಸ್ಪರಿ ಡೇಟ್ 15 ವರ್ಷಗಳು ಆಗಿದೆ.
ನೀವು ಅದನ್ನು ಮುಂದುವರಿಸುವ ಇಚ್ಛೆ ಹೊಂದಿದ್ದಲ್ಲಿ ಐದು ವರ್ಷಗಳು ಹೆಚ್ಚಿಗೆ ಮಾಡಬಹುದು. ದೀರ್ಘಾವಧಿಯ ಕಾರಣಗಳಿಗಾಗಿ ಹಣ ಉಳಿತಾಯ ಮಾಡುತ್ತಾ ಇರುವವರಿಗೆ ಇದೊಂದು ಬೆಸ್ಟ್ ಯೋಜನೆ ಎಂದೇ ಹೇಳಬಹುದು. ಮಕ್ಕಳ ಉನ್ನತ ವಿದ್ಯಾಭ್ಯಾಸದ ಅಥವಾ ಮದುವೆ ಬಗ್ಗೆ ಅಥವಾ ಮುಂದೆ ಒಂದು ದಿನ ಸ್ವಂತ ಮನೆ ಕನಸು ಹೊಂದುವ ಆಸೆಯಿಂದ ಅಥವಾ ಇನ್ಯಾವುದೇ ಮುಂದಾಲೋಚನೆಯ ಕಾರಣದಿಂದ ಹಣ ಉಳಿತಾಯ ಮಾಡುತ್ತಾ ಇರುವವರಿಗೆ PPF ಹೇಳಿ ಮಾಡಿಸಿದ ಯೋಜನೆ ಆಗಿದೆ.
PPF ಅಕೌಂಟ್ ಇಂದ ಸಾಲ ಸೌಲಭ್ಯ ಯೋಜನೆ ಕೂಡ ಇದೆ. ನೀವು ಅಕೌಂಟ್ ಓಪನ್ ಮಾಡಿದ ಮೂರು ವರ್ಷಗಳ ನಂತರ ನೀವು ಉಳಿತಾಯ ಮಾಡಿದ 25% ಅಷ್ಟು ಹಣವನ್ನು ಸಾಲವಾಗಿ ಪಡೆಯಬಹುದು. ಮಧ್ಯಂತರದಲ್ಲಿ ಅವಶ್ಯಕತೆ ಇದ್ದರೆ 5 ವರ್ಷಗಳು ಆದ ನಂತರ 50% ಅಷ್ಟು ಹಣವನ್ನು ವಿಥ್ ಡ್ರಾ ಬೇಕಾದರೂ ಮಾಡಬಹುದು. 2020ನೇ ಇಸವಿಗೆ ಮೊದಲು 7 ವರ್ಷಗಳು ಆದ ನಂತರ ಕೇವಲ 25% ಮಾತ್ರ ವಿಥ್ ಡ್ರಾ ಮಾಡಲು ಅವಕಾಶ ಇತ್ತು.
ಆದರೆ ಈಗ PPF ಅಕೌಂಟ್ ಅಲ್ಲಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮತ್ತು ಡ್ರಾ ಮಾಡುವ ವಿಷಯದಲ್ಲಿ ದೊಡ್ಡ ವಿನಾಯತಿಯನ್ನು ನೀಡಲಾಗಿದೆ. PPF ಯೋಜನೆಯ ಮೆಚುರಿಟಿ ಅವಧಿ 15 ವರ್ಷಗಳು. ಆದರೆ 15 ವರ್ಷ ತುಂಬುವ ಮೊದಲೇ ಯಾವುದೇ ಮೆಡಿಕಲ್ ಎಮರ್ಜೆನ್ಸಿ ಇಂದ ಅಥವಾ ನಿಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸದ ಕಾರಣದಿಂದಾಗಿ ಈ ಯೋಜನೆಯನ್ನು ಕ್ಲೋಸರ್ ಮಾಡುವ ಸಂದರ್ಭ ಬಂದರೆ ಕ್ಲೋಸ್ ಮಾಡಬಹುದು.
ಒಂದು ವೇಳೆ ನೀವು ಆ ರೀತಿ ಮಧ್ಯಂತರದಲ್ಲಿ ಇದನ್ನು ಕ್ಲೋಸ್ ಮಾಡಿದರೆ ನಿಮಗೆ 1% ಇಂಟರೆಸ್ಟ್ ಕಡಿಮೆ ಸಿಗುತ್ತದೆ. 6.1% ಬಡ್ಡಿದರ ನೀವು ಅದುವರೆಗೆ ಇನ್ವೆಸ್ಟ್ ಮಾಡಿದ ಹಣಕ್ಕೆ ಸಿಗುತ್ತದೆ. PPF ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮತ್ತು ಇದನ್ನು ಯಾವ ರೀತಿ ಖರೀದಿಸಬೇಕು ಎನ್ನುವ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.