ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕಾಶ್ ರೈ
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರಕಾಶ್ ರೈ ಮತ್ತೊಮ್ಮೆ ಕನ್ನಡಿಗರ ಮತ್ತು ಹಿಂದುಗಳ ಕೆಂಗಣ್ಣಿಗೆ ಗುರಿಯದ ನಟ ಬಾಲಿವುಡ್ ಸಿನಿಮಾ ಗೆಲ್ಲಿಸುವುದಕ್ಕೆ ಹೋಗಿ ಹಿಂದೂ ಧರ್ಮವನ್ನು ಮರೆಯುತ್ತಿದ್ದಾರ ಪ್ರಕಾಶ್ ರೈ.?
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೊಣೆ ಅಭಿನಯದ ಪಠಣ್ ಸಿನಿಮಾದ ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿ ಸಿನಿಮಾದಲ್ಲಿ “ಬೇಷ್ ರಮ್ ರಂಗ್” ಎಂಬ ಹಾಡನ್ನು ಕೂಡ ಇದೀಗ ಚಿತ್ರೀಕರಣ ಮಾಡಲಾಗಿದ್ದು. ಈ ಹಾಡಿನ ಕೆಲವೊಂದಷ್ಟು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಇದನ್ನು ನೋಡಿದಂತಹ ಹಿಂದೂ ಪರವಾದಿಗಳು ಹಾಗೂ ಕೆಲವು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಏಕೆಂದರೆ ಈ ಹಾಡಿನಲ್ಲಿ ದೀಪಿಕಾ ಪಡುಕೋಣೆಯವರು ಸಿಕ್ಕಾಪಟ್ಟೆ ಗ್ಲಾಮರಾಗಿ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಕೇಸರಿ ಬಣ್ಣದ ಬಿಕಿನಿಯನ್ನು ಹಾಕಿಕೊಂಡಿದ್ದರೆ. ಇದು ಹಿಂದೂ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಿದೆ ಎಂದು ಕೆಲವು ಅಭಿಮಾನಿಗಳು ಮತ್ತು ಹಿಂದೂ ಪರ ಹೋರಾಟಗಾರರು ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಕ್ರಾಂತಿಯನ್ನು ಎಬ್ಬಿಸುತ್ತಿದ್ದಾರೆ.
ಇದರ ನಡುವೆ ಮಧ್ಯಪ್ರದೇಶದ ಸಚಿವರೊಬ್ಬರು ಕೂಡ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುವುದಿಲ್ಲ ಬಾಯ್ಕಟ್ ಮಾಡಬೇಕು ಎಂದು ಹೇಳಿದ್ದಾರೆ. ಒಂದರ ಹಿಂದೆ ಮತ್ತೊಂದರಂತೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನ ವಿರುದ್ಧ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಇದರ ನಡುವೆಯೇ ಪ್ರಕಾಶ್ ರಾಜ್ ಅವರು ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಅವರ ಬೆಂಬಲವಾಗಿ ನಿಂತಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.
ಹೌದು ಪ್ರಕಾಶ್ ರಾಜ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಸಿನಿಮಾದ ಹಾಡಿನ ಬಗ್ಗೆ ದೀರ್ಘ ಬರಹಗಳನ್ನು ಬರೆದುಕೊಂಡಿದ್ದಾರೆ ಅಷ್ಟಕ್ಕೂ ಪ್ರಕಾಶ್ ರಾಜ್ ಬರೆದುಕೊಂಡಿದ್ದಾದರೂ ಏನು ಎಂಬುದನ್ನು ನೋಡುವುದಾದರೆ. “ಈ ಚಿತ್ರವನ್ನು ಮಧ್ಯಪ್ರದೇಶದ ಗೃಹ ಸಚಿವ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು ಅವರ ನಿರ್ಧಾರ ಅಸಹ್ಯಕರ ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ”.
ಈ ಹಾಡಿನ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವವರಿಗೆ ಮತ್ತು ಶಾರೂಖ್ ಖಾನ್ ಅವರ ಪ್ರತಿಕೃತಿಯನ್ನು ದಹಿಸವವರನ್ನು ನಾಚಿಕೆ ಇಲ್ಲದ ಮತಾಂಧರು ಎಂದಿರುವ ಪ್ರಕಾಶ್ ರೈ “ಕೇಸರಿ ಬಣ್ಣದವರು ರೇ-ಪಿ-ಸ್ಟ್‌ಗಳಿಗೆ ಮಾಲೆ ಹಾಕುತ್ತಾರೆ. ದ್ವೇಷದ ಮಾತುಗಳನ್ನಾಡುತ್ತಾರೆ ಕೇಸರಿ ಬಣ್ಣ ತೊಟ್ಟವರು ಮೈನರ್‌ಗಳನ್ನು ರೇ-ಪ್ ಮಾಡುತ್ತಾರೆ . ಆದರೆ ಚಿತ್ರದಲ್ಲಿ ಕೇಸರಿ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಮೊದಲಿನಲ್ಲ ಪ್ರಕಾಶ್ ರೈ ಅವರು ಈ ರೀತಿಯ ವಿಚಾರಗಳಿಗೆ ತಲೆ ಹಾಕಿರುವುದು ಇದಕ್ಕಿಂತ ಹಿಂದೆ ಸಾಕಷ್ಟು ಬಾರಿ ಹಿಂದುಗಳ ಭಾವನೆಗೆ ಧಕ್ಕೆ ತರುವಂತ ಕೆಲಸವನ್ನೇ ಮಾಡಿದ್ದಾರೆ. ಈ ಬಾರಿಯೂ ಕೂಡ ಬಾಲಿವುಡ್ ಸಿನಿಮಾ ಗೆ ಸಪೋರ್ಟ್ ಮಾಡಲು ಹೋಗಿ ನಮ್ಮ ಧರ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಅಂತ ಕಾಣಿಸುತ್ತದೆ.
ಅದೇನೇ ಆಗಲಿ ಸದ್ಯಕ್ಕೆ ಪಠಣ್ ಸಿನಿಮಾದ ವಿರುದ್ಧ ಆ.ಕ್ರೋ.ಶ ವ್ಯಕ್ತ ಪಡಿಸುತ್ತಿದ್ದಂತಹ ಅಭಿಮಾನಿಗಳು ಇದೀಗ ಪ್ರಕಾಶ್ ರೈ ಅವರ ವಿರುದ್ಧವೂ ಕೂಡ ಆ.ಕ್ರೋ.ಶ.ವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ ಹಾಗೂ ಈ ಸಿನಿಮಾದ ಹಾಡು ಮತ್ತು ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂಬುದು ನಿಮ್ಮ ಉದ್ದೇಶವಾಗಿದ್ದರೆ ತಪ್ಪದೆ ಬಾಯ್ಕಟ್ ಪಠಾಣ್ ಎಂದು ಕಮೆಂಟ್ ಮಾಡಿ.
#Besharam BIGOTS.. So it’s okay when Saffron clad men garland rapists..give hate speech, broker MLAs, a Saffron clad swamiji rapes Minors, But not a DRESS in a film ?? #justasking
….Protesters Burn Effigies Of SRK In Indore. Their Demand: Ban 'Pathaan' https://t.co/00Wa982IU4— Prakash Raj (@prakashraaj) December 15, 2022