ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ ನಟಿ ಪ್ರಿಯಾಂಕಾ ಉಪೇಂದ್ರ, ವಯಸ್ಸು 45 ಆಗಿದ್ರು ಎಷ್ಟು ಮಸ್ತ್ ಆಗಿ ಡ್ಯಾನ್ಸ್ ಮಾಡ್ತರಪ್ಪ, ಈ ವಿಡಿಯೋ ನೋಡಿ.

 

ಬೆಂಗಾಲಿ ಹೀರೋ ಜೊತೆ ಪುಷ್ಪವತಿ ರೂಲ್ಸ್ ಮಾಡಿದ ಪ್ರಿಯಾಂಕ ಉಪೇಂದ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ಪುಷ್ಪವತಿ ಹಾಡು ಸೋಶಿಯಲ್ ಮೀಡಿಯಾದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿ ಬಿಟ್ಟಿದೆ. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯರವರೆಗೆ ರೀಲ್ಸ್ ಮಾಡುವ ಎಲ್ಲರ ಫೇವರೆಟ್ ಸಾಂಗ್ ಆಗಿರುವ ಪುಷ್ಪವತಿ ಹಾಡಿಗೆ ಚಿಕ್ಕ ಮಕ್ಕಳಿಂದ ಶಾಲಾ ಮಕ್ಕಳ ತನಕ ಹಾಗೂ ಕಾಲೇಜು ಯುವಕ ಯುವತಿಯರಿಂದ ಆಫೀಸಿನಲ್ಲಿ ಕೆಲಸ ಮಾಡುವವರ ತನಕ ಎಲ್ಲರೂ ಸಹ ಹಾಡು ಕೇಳಿದ ತಕ್ಷಣವೇ ತಾವಿದ್ದಲ್ಲಿಯೇ ಎರಡು ಸ್ಟೆಪ್ ಹಾಕಿ ಬಿಡುತ್ತಾರೆ.

ಅಷ್ಟೊಂದು ಕ್ಯಾಚಿ ಲಿರಿಕ್ಸ್ ಹಾಗೂ ಮ್ಯೂಸಿಕ್ ಹೊಂದಿರುವ ಪುಷ್ಪವತಿ ಹಾಡನ್ನು ಹರಿಕೃಷ್ಣ ಅವರು ಸಂಗೀತ ನಿರ್ದೇಶಿಸಿ ಐಶ್ವರ್ಯ ರಂಗ ರಾಜನ್ ಜೊತೆ ಸ್ವತಃ ಅವರೇ ಹಾಡಿದ್ದಾರೆ. ಹಾಡಿನ ಜೊತೆಗೆ ಎಲ್ಲರ ಮನಸಿಗೆ ಬಹಳ ಹತ್ತಿರ ಆಗಿರುವುದು ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಕಿರುವ ಸ್ಟೆಪ್ಪುಗಳು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೃತ್ಯದ ಗುಂಪಿನೊಂದಿಗೆ ನಾಯಕಿ ನಿಮಿಕಾ ರತ್ನಾಕರ್ ಅವರ ಜೊತೆಗೂಡಿ ಈ ಹಾಡಿಗೆ ಕುಣಿದಿದ್ದಾರೆ.

ಅದರಲ್ಲೂ ವಿಶೇಷವಾಗಿ ಶೇಕ್ ಇಟ್ ಪುಷ್ಪವತಿ ಎನ್ನುವ ಬೀಟ್ ಗೆ ಹಾಕಿರುವ ಸ್ಟೆಪ್ಗಳು ಎಲ್ಲರ ಹಾರ್ಟಿಗೂ ತಾಗಿ ಈಗ ಎಲ್ಲರೂ ಅದೇ ಸ್ಟೆಪ್ಗಳನ್ನು ಫಾಲೋ ಮಾಡುತ್ತಾ ಅವರು ಸಹ ದರ್ಶನ್ ಅವರಂತೆ ಶೇಕ್ ಇಟ್ ಪುಷ್ಪವತಿ ಎನ್ನುತ್ತಿದ್ದಾರೆ. ಈ ಹಾಡನ್ನು ದರ್ಶನ್ ಅವರ ಕ್ರಾಂತಿ ತಂಡವು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಿತ್ತು, ಹಾಡು ಬಿಡುಗಡೆ ಆದ ಅಂದಿನಿಂದಲೇ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ಈ ಮಧ್ಯೆ ಹಾಡಿನ ಅರ್ಥದ ಬಗ್ಗೆ ಕೆಲವು ಜನ ನೆಗೆಟಿವ್ ಕಾಮೆಂಟ್ ಮಾಡಿ ಇದರ ಕ್ರೇಜಿಗೆ ಅಡ್ಡ ಒಡ್ಡುವ ಗಟ್ಟಿತನ ತೋರಿದರು ಇಂದು ಪಡ್ಡೆ ಹೈಕಳಗೆ ಫೇವರೆಟ್ ಹಾಡಾಗಿ ಎಲ್ಲರ ಬಾಯಿಗಳಲ್ಲೂ ಹಾಡು ಗುನುಗುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಇಂದಿಗೂ ಸಹ ಹಾಡು ರಿಲೀಸ್ ಆಗಿ ಹತ್ತಿರ ತಿಂಗಳಾಗುತ್ತಿದ್ದರು ಎಲ್ಲರ ಬಾಯಿಯಲ್ಲಿಯೂ ಇದೆ ಹಾಡಿನ ಗುಣಗಾನ ಮುಂದುವರೆಯುತ್ತದೆ. ಎಲ್ಲಿ ಹೋದರು ಸಹ ಶೇಕ್ ಇಟ್ ಪುಷ್ಪವತಿ ಎನ್ನುವ ಕೂಗು ಕೇಳಿ ಬರುತ್ತಾ ಇದೆ.

ಇಷ್ಟು ಚೆನ್ನಾಗಿರುವ ಈ ಹಾಡಿಗೆ ಈಗಾಗಲೇ ಸಾಕಷ್ಟು ಮಂದಿ ರೀಲ್ಸ್ ಮಾಡಿ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯರೇ ಸೆಲಬ್ರೇಟ್ ಮಾಡುತ್ತಿರುವ ಈ ಹಾಡನ್ನು ಸೆಲೆಬ್ರಿಟಿಗಳು ಸಹ ಫಾಲೋ ಮಾಡುತ್ತಿದ್ದಾರೆ. ಈಗಾಗಲೇ ಕಿರುತರೆ ಹಾಗೂ ಬೆಳ್ಳಿತೆರೆಯ ಸಾಕಷ್ಟು ಕಲಾವಿದರುಗಳು ಈ ಹಾಡಿಗೆ ದರ್ಶನ್ ಹಾಕಿರುವ ಸ್ಟೆಪ್ಗಳನ್ನು ಅನುಕರಿಸಿ ಸ್ಟೆಪ್ ಹಾಕಿ ರೀಲ್ಸ್ ಮಾಡಿದ್ದಾರೆ ಮೊದಲಿಗೆ ಈ ಸಿನಿಮಾದ ನಾಯಕ ನಟಿಯಾದ ರಚಿತರಾಮ್ ಅವರು ಇದರ ರೀಲ್ಸ್ ಮಾಡಿ ಹಂಚಿಕೊಂಡಿದ್ದರು.

ನಂತರ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಅವರು ಸಹ ಈ ಹಾಡಿನ ಪೂರ್ತಿ ನೃತ್ಯ ಮಾಡಿ ಆ ವಿಡಿಯೋವನ್ನು ಹಂಚಿಕೊಂಡಿದ್ದರು. ಕಿರುತೆರೆ ಕಲಾವಿದರಾದ ಜೊತೆ ಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಮತ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹ ಮತ್ತು ಜೀ ಕನ್ನಡ ವಾಹಿನಿಯ ನಿರೂಪಕರಾದ ಆನಂದ್ ಅವರು ಪುತ್ರಿ ವಂಶಿಕ ಹಾಗೂ ಪತ್ನಿ ಜೊತೆ ಈ ಹಾಡಿನ ರೀಲ್ಸ್ ಮಾಡಿದ್ದರು.

ಇದೀಗ ಸ್ಟಾರ್ ನಟಿಯರು ಕೂಡ ಹಾಡಿನ ರೀಲ್ಸ್ ಮಾಡಿದ ಶುರು ಮಾಡುತ್ತಿದ್ದು ಈಗಷ್ಟೇ ಪ್ರಿಯಾಂಕ ಉಪೇಂದ್ರ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಂಗಾಲಿ ನಟನ ಜೊತೆ ಅವರು ಹೆಜ್ಜೆ ಹಾಕಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಪುಷ್ಪವತಿ ಹಾಡಿಗೆ ಪ್ರಿಯಾಂಕಾ ಉಪೇಂದ್ರ ಅವರು ಕಪ್ಪು ಉಡುಗೆ ತೊಟ್ಟು ಸಿಗ್ನೇಚರ್ ಸ್ಟೆಪ್ ಹಾಕಿ ಕುಣಿದಿದ್ದಾರೆ. ಇವರಿಗೆ ಬೆಂಗಾಲಿ ಹೀರೋ ವಿನಾಯಕ್ ತ್ರಿವೇದಿ ಅವರು ಸಾಥ್ ನೀಡಿದ್ದಾರೆ.

Leave a Comment