Home Entertainment ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.

ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.

0
ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.

 

ಪ್ರಿಯಾಂಕ ಉಪೇಂದ್ರ ಎಂದರೆ ತಕ್ಷಣ ನೆನಪಾಗುವುದು ಅವರ ಪ್ರತಿಮ ಸೌಂದರ್ಯ, ಕಠಿಣ ಪರಿಶ್ರಮ ಮತ್ತು ಅದ್ಭುತವಾದ ಅಭಿನಯ. ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಹಿಂದಿ ಮಲಯಾಳಂ ಬೆಂಗಾಲಿ ಮರಾಠಿ ಹೀಗೆ ಭಾರತದ ಬಹುತೇಕ ಎಲ್ಲಾ ಭಾಷೆ ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದಾರೆ. ಪರಭಾಷಾ ನಟಿ ಆಗಿ ಕನ್ನಡಕ್ಕೆ ಕಾಲಿಟ್ಟ ಇವರು ಸದ್ದಿಲ್ವದೇ 50 ಸಿನಿಮಾಗಳನ್ನು ಮುಗಿಸಿದ್ದಾರೆ.

ಅದರಲ್ಲಿ ಬಹುತೇಕ ಸಿನಿಮಾಗಳು ಮಹಿಳಾ ಪ್ರಧಾನ ಸಿನಿಮಾಗಳೇ ಎನ್ನುವುದು ಇನ್ನೂ ವಿಶೇಷ. ಪ್ರಿಯಾಂಕ ಉಪೇಂದ್ರ ಅವರು ಕನ್ನಡತಿ ಅಲ್ಲದಿದ್ದರೂ ಸಿನಿಮಾಗಾಗಿ ಕನ್ನಡವನ್ನು ಕಲಿತು ನಂತರ ಕನ್ನಡಿಗನ ಕೈ ಹಿಡಿದು ಈಗ ಪರಮನೆಂಟ್ ಆಗಿ ಕನ್ನಡದ ಸೊಸೆ ಆಗಿಬಿಟ್ಟಿದ್ದಾರೆ. ಹಲವು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಅವರ ಇಂದಿನ ಕನ್ನಡ ಕೇಳಿದರೆ ಯಾರು ಕೂಡ ಅವರು ಬೆಂಗಾಲಿ ಅವರು ಎಂದು ಗುರುತಿಸುವುದಿಲ್ಲ ಆದರೆ ಆರಂಭದ ದಿನಗಳು ಈ ನಟಿಗೆ ಅಷ್ಟೊಂದು ಸುಲಭ ಆಗಿರಲಿಲ್ಲ ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದ ಪ್ರಿಯಾಂಕ ಉಪೇಂದ್ರ ಅವರು ತಮ್ಮ ಸಿನಿಮಾ ಕೆರಿಯರ್ ಅಲ್ಲಿನ ಮೊದಲ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ಎಚ್2ಓ ಎನ್ನುವ ಸಿನಿಮಾ ಇವರಿಗೆ ಮೊದಲ ಸಿನಿಮಾ ಆಗಿತ್ತು. ಆ ಸಿನಿಮಾ ಕಾವೇರಿ ಎನ್ನುವ ಅದ್ಭುತ ಪಾತ್ರದಿಂದ ಕನ್ನಡಿಗರ ಜೊತೆಗೆ ಇವರು ಭಾವನಾತ್ಮಕವಾಗಿ ಬೆಸೆದುಕೊಂಡರು.

ಆ ಸಿನಿಮಾ ಸಮಯದಲ್ಲಿಯೇ ಪ್ರಿಯಾಂಕ ಉಪೇಂದ್ರ ಅವರಿಗೆ ಉಪೇಂದ್ರ ಅವರ ಜೊತೆ ಸ್ನೇಹವಾಗಿ ನಂತರ ಇಬ್ಬರ ಸ್ನೇಹ ಪ್ರೀತಿಯಾಗಿ ಚಿಗುರೊಡಿಯಲು ಕಾರಣ ಆಯಿತು. ಹೆಚ್2ಓ ಸಿನಿಮಾ ಪ್ರಿಯಾಂಕ ಉಪೇಂದ್ರ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು ಎಂದರೆ ತಪ್ಪಲ್ಲ. ಸಿನಿಮಾ ವಿಚಾರದಲ್ಲಿ ಸಹ ಹೆಚ್ ಟು ಓ ಸಿನಿಮಾದ ಮೂಲಕ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸುವ ಅದೃಷ್ಟ ಇವರ ಪಾಲಿಗೆ ಬಂತು.

ಈ ಸಿನಿಮಾದ ಸಕ್ಸಸ್ ನಂತರ ನಟಿ ಒಪ್ಪಿಕೊಂಡಿದ್ದು ಮಲ್ಲ ಸಿನಿಮಾ. ಆ ಸಿನಿಮಾದ ಸಂದರ್ಭದಲ್ಲಿ ನಟಿ ತಮಗಾದ ಅನುಭವಗಳ ಬಗ್ಗೆ ಹೇಳಿಕೊಂಡಿದ್ದಾರೆ. ರವಿಚಂದ್ರನ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಲು ಎಲ್ಲ ನಟಿಮಣಿಯರು ಕೂಡ ಇಷ್ಟಪಡುತ್ತಾರೆ ಕಾರಣ ಅವರ ಕ್ರಿಯೇಟಿವಿಟಿ. ಹೆಣ್ಣು ಮಕ್ಕಳನ್ನು ಬಹಳ ಸುಂದರವಾಗಿ ಕಾಣಿಸುವ ರೀತಿ ಮಾಡುವುದು ಈ ನಿರ್ದೇಶಕರು ಒಬ್ಬರೇ.

ಹಾಗಾಗಿ ನನಗೂ ಕೂಡ ಅವರ ಜೊತೆ ಸಿನಿಮಾ ಮಾಡಬೇಕು ಎನ್ನುವ ಆಸೆ ಇತ್ತು ಆದರೆ ಹೈಟ್ ಕಡಿಮೆ ಇದ್ದ ಕಾರಣ ಸೆಲೆಕ್ಟ್ ಆಗುತ್ತಿನೋ ಇಲ್ಲವೋ ಎಂದು ಭಯ ಇತ್ತು. ರವಿಚಂದ್ರನ್ ಸರ್ ನನ್ನನ್ನು ಮೊದಲ ಬಾರಿ ನೋಡಿದಾಗಲೇ ಸೆಲೆಕ್ಟ್ ಮಾಡಿ ಬಿಟ್ಟರು. ಆದರೆ ನಂತರ ಅಷ್ಟು ಈಝಿ ಇರಲಿಲ್ಲ. ಆ ಸಮಯದಲ್ಲಿ ನನಗೆ ಕನ್ನಡ ಅಷ್ಟೊಂದು ಬರುತ್ತಿರಲಿಲ್ಲ.

ರವಿಚಂದ್ರನ್ ಅವರು ನನಗೆ ಉದ್ದುದ್ದ ಡೈಲಾಗ್ ಕೊಡುತ್ತಿದ್ದರು, ಸ್ಕ್ರಿಪ್ಟ್ ನೋಡಿಕೊಂಡು ಅಭಿನಯಿಸುವುದು ಬಹಳ ಕಷ್ಟ ಆಗುತ್ತಿತ್ತು. ಅದರ ಜೊತೆಗೆ ಎರಡು ಶೇಡ್ ಗಳಲ್ಲಿ ನಾನು ಕಾಣಿಸಿಕೊಂಡಿದ್ದೆ ಇಂದಿಗೂ ಕೂಡ ಮಲ್ಲ ಸಿನಿಮಾದ ಹಾಡುಗಳನ್ನು ಅಭಿಮಾನಿಗಳು ನೆನೆಸಿಕೊಳ್ಳುತ್ತಾರೆ. ಅಂತಹ ಒಂದು ಅದ್ಭುತ ನಟಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ರವಿ ಸರ್ ಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದು ಪ್ರಿಯಾಂಕ ಉಪೇಂದ್ರ ಅವರು ಹೇಳಿಕೊಂಡಿದ್ದಾರೆ.

ಇದರ ಜೊತೆಗೆ ಮಲ್ಲ ಸಿನಿಮಾದಲ್ಲಿ ತುಂಬಾನೇ ಗ್ಲಾಮರಾಗಿ ಕಾಣಿಸಿಕೊಳ್ಳಬೇಕಿತ್ತು ಇದು ಸ್ವಲ್ಪ ನನಗೆ ಮುಜುಗರ ಅನಿಸುತ್ತಿತ್ತು ಆದರೆ ಪಾತ್ರಕ್ಕಾಗಿ ಈ ಕೆಲಸವನ್ನು ನಾನು ಮಾಡಲೇಬೇಕಿತ್ತು, ಬೇರೆ ದಾರಿ ಇಲ್ಲದ ಕಾರಣ ಎಲ್ಲಾವನ್ನು ನಾನು ಒಪ್ಪಿಕೊಂಡು ಎಂದು ಇತ್ತೀಚಿಗಷ್ಟೇ ನಡೆದ ಸಂದರ್ಶನದಲ್ಲಿ ಪ್ರಿಯಾಂಕ ಅವರು ಹೇಳಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

https://youtu.be/Ebz53ugkEto

LEAVE A REPLY

Please enter your comment!
Please enter your name here