Sunday, May 28, 2023
HomeEntertainment500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಲೋಹಿತಾಶ್ವ ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತ.?

500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಲೋಹಿತಾಶ್ವ ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತ.?

ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಹಾಗೂ ಹಿರಿಯ ನಟರಾದ ಲೋಹಿತಾಶ್ವರವರು ನವೆಂಬರ್ 8 ರಂದು ನಿ.ಧ.ನ.ರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ ಮಂಗಳವಾರ ವಿ.ಧಿ.ವ.ಶ.ರಾಗಿದ್ದಾರೆ. ಇವರಿಗೆ ಸುಮಾರು 80 ವರ್ಷಗಳು ಆಗಿತ್ತು, ಕನ್ನಡ ಚಿತ್ರರಂಗದ ಹಿರಿಯ ನಟರಾಗಿದ್ದ ಇವರು ಕುಮಾರಸ್ವಾಮಿ ಲೇಔಟ್‌ದಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಸಂಜೆ 7: 30ಗೆ ಕೊನೆಯುಸಿರೆಳೆದಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಇವರ ಅಂತಿಮ ದರ್ಶನವನ್ನು ಕುಮಾರಸ್ವಾಮಿ ಲೇಔಟ್ ನಲ್ಲಿ ಇರುವಂತಹ ಇವರ ನಿವಾಸದಲ್ಲಿ ರಾತ್ರಿ 11:30 ವರೆಗೂ ಅಂತಿಮ ದರ್ಶನವನ್ನು ಮಾಡಲು ಅವಕಾಶ ನೀಡಿದ್ದರು. ಆಗಸ್ಟ್‌ 5, 1942ರಲ್ಲಿ ತುಮಕೂರಿನ ತೊಂಡಗೆರೆ ಗ್ರಾಮದಲ್ಲಿ ಜನಿಸಿದರು. ನಾಟಕಕಾರಾಗಿದ್ದ ನಟ ಲೋಹಿತಾಶ್ವ ಅವರು ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದರು.

ಬಳಿಕ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕರ್ತವ್ಯ ಆರಂಭಿಸಿದರು. ಸುಮಾರು 40 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ನಟನೆಯಲ್ಲೂ ಅಭಿರುಚಿ ಹೊಂದಿದ್ದ ಲೋಹಿತಾಶ್ವ ಅವರು ನಾಟಕಕಾರನಾಗಿ ಚಿರಪರಿಚಿತರಾಗಿದ್ದರು.
ಲೋಹಿತಾಶ್ವ ಅವರು 1971ರಲ್ಲಿ ವತ್ಸಲಾ ಎನ್ನುವವರನ್ನು ವಿವಾಹವಾದರು.

ಮೂವರು ಮಕ್ಕಳ ಮುದ್ದಿನ ತಂದೆಯಾಗಿರುವ ಲೋಹಿತಾಶ್ವ ಅವರ ಪುತ್ರ ಶರತ್ ಲೋಹಿತಾಶ್ವ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ತಮ್ಮ ಧ್ವನಿ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ ಲೋಹಿತಾಶ್ವ ಅವರು ಈವರೆಗೂ ಒಟ್ಟು ಐದು ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ಧಾರಾವಾಹಿಗಳಲ್ಲಿ ಇತಿಹಾಸ ಸೃಷ್ಟಿಸಿದ್ದ ನಟ ಶಂಕರ್‌ ನಾಗ್‌ ಅಭಿನಯದ ಮಾಲ್ಗುಡಿ ಡೇಸ್‌ ಧಾರಾವಾಹಿಯಲ್ಲಿ ಲೋಹಿತಾಶ್ವ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಗಿರೀಶ್‌ ಕಾಸರವಳ್ಳಿಯವರ ಗೃಹಭಂಗ, ಜಿ.ವಿ ಅಯ್ಯರ್‌ ನಿರ್ದೇಶನದ ನಾಟ್ಯರಾಣಿ ಶಕುಂತಲಾ, ಕೆ.ಎಂ ಚೈತನ್ಯಾ ನಿರ್ದೇಶನದ ಓಂ ನಮೋ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಲೋಹಿತಾಶ್ವ ಅವರು ಕರ್ನಾಟಕದ ಮನೆ ಮಾತಾಗಿದ್ದರು. 1981ರ ಮುನಿಯನ ಮಾದರಿ, ಸಾಂಗ್ಲಿಯಾನ, ಅಭಿಮನ್ಯು, ದಾದಾ, ಎ.ಕೆ 47 ಇನ್ನು ಅನೇಕ ಚಿತ್ರಗಳಲ್ಲಿ ನಟಿಸಿ ಕನ್ನಡ ಮೇರು ನಟರ ಜೊತೆ ತೆರೆ ಹಂಚಿಕೊಂಡಿದ್ದರು.

ಇನ್ನು ಕಿಚ್ಚ ಸುದೀಪ್‌ ಅಭಿನಯದ ಚಂದು ಸಿನಿಮಾ ಹಾಗೂ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅಭಿನಯದ ಸಾರಥಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲೋಹಿತಾಶ್ವ ಅವರು ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಸುಮಾರು ವರ್ಷಗಳ ಕಾಲ ಸಿನಿಮಾ ರಂಗದಲ್ಲಿದ್ದ ಇವರು ಒಟ್ಟು ಮಾಡಿರುವ ಆಸ್ತಿ ಎಷ್ಟು ಎಂಬುವುದು ನೆಟ್ಟಿಗರಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.

ಲೋಹಿತಾಶ್ವ ಅವರು ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಅಭಿನಯಿಸಿದೆ ತಮ್ಮ ಸ್ವಂತ ಊರಿನಲ್ಲಿ ಕೃಷಿಯನ್ನು ಮಾಡುವ ಮೂಲಕ ಸಮಯವನ್ನು ಕಳೆಯುತ್ತಿದ್ದರು ಎಂಬುವುದು ಈ ವರೆಗೆ ತಿಳಿದು ಬಂದಿರುವ ವಿಷಯ. ಕೃಷಿಯ ಬಗ್ಗೆ ಲೋಹಿತಾಶ್ವರವರಿಗೆ ಬಹಳ ಒಲವು. ಇನ್ನು ಕೃಷಿ ಹಾಗೂ ಟೈಲರಿಂಗ್ ಇವರ ಎರಡು ನೆಚ್ಚಿನ ಹವ್ಯಾಸಗಳು. ಇವರ ಒಟ್ಟು ಆಸ್ತಿಯ ಮೊತ್ತವು ಸುಮಾರು ನಾಲ್ಕು ಕೋಟಿಯಷ್ಟು ಇದ್ದು, ಮೂರು ಐಷಾರಾಮಿ ಕಾರುಗಳು ಹಾಗೂ ಹುಟ್ಟೂರಿನಲ್ಲಿ ಒಂದು ಸ್ವಂತ ಮನೆಯಿದೆ, ಈ ಎಲ್ಲಾ ಆಸ್ತಿಯೂ ಇವರ ಮೂರು ಗಂಡು ಮಕ್ಕಳಿಗೆ ಸಮನಾಗಿ ಪಾಲಾಗಲಿದೆ ಎಂದು ತಿಳಿದು ಬಂದಿದೆ.