Sunday, June 4, 2023
HomeEntertainmentಬ್ಲಾಕ್ ಮೇಲ್ ಮಾಡಿ ಉಪ್ಪಿ ನನ್ನ ಮದುವೆಯಾದ್ರು, ಕೊನೆಗೂ ಸತ್ಯ ಬಾಯ್ಬಿಟ್ಟ ಪ್ರಿಯಾಂಕ ಉಪೇಂದ್ರ.

ಬ್ಲಾಕ್ ಮೇಲ್ ಮಾಡಿ ಉಪ್ಪಿ ನನ್ನ ಮದುವೆಯಾದ್ರು, ಕೊನೆಗೂ ಸತ್ಯ ಬಾಯ್ಬಿಟ್ಟ ಪ್ರಿಯಾಂಕ ಉಪೇಂದ್ರ.

ಪ್ರಿಯಾಂಕ ಉಪೇಂದ್ರ(Priyanka Upendra) ಬಹುಭಾಷ ನಟಿ ನೋಡುವುದಕ್ಕೆ ಸ್ಪುರಧ್ರೂಪಿ ಚೆಲುವೆ, ಅಷ್ಟೇ ಅಭಿನಯ ಚತುರೆ. ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಬೆಂಗಾಲಿ ಹೀಗೆ ನಾನಾ ಭಾಷೆಗಳಲ್ಲಿ ನಟಿಸಿರುವ ಇವರು ಈಗಲೂ ಸಹ ಬೇಡಿಕೆ ಅಲ್ಲಿ ಇರುವ ನಟಿ. ನಟಿ ಪ್ರಿಯಾಂಕ ಉಪೇಂದ್ರ ಅವರು ಕನ್ನಡದಲ್ಲಿ ಮೊದಲ ಬಾರಿಗೆ h20 ಎನ್ನುವ ಉಪೇಂದ್ರ ಅವರ ನಿರ್ದೇಶನ ಮತ್ತು ನಟನೆಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಾರೆ.

ಇದಾದ ಬಳಿಕ ವಿಷ್ಣುವರ್ಧನ್ ರವಿಚಂದ್ರನ್ ಶಿವರಾಜಕುಮಾರ್ ಹೀಗೆ ಆ ಸಮಯದ ಎಲ್ಲ ಸ್ಟಾರ್ ನಟರೊಂದಿಗೆ ನಾಯಕಿ ಆಗಿ ಅಭಿನಯಿಸಿದ್ದಾರೆ. 2003 ರಲ್ಲಿ ಅವರನ್ನು ಮದುವೆ ಆದ ಮೇಲೆ ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುತ್ತಾರೆ. ಇವರ ಸುಖಿ ದಾಂಪತ್ಯಕ್ಕೆ 20 ವರ್ಷ ಸಮೀಪಿಸುತ್ತಿದ್ದು ಇಲ್ಲಿಯವರೆಗೂ ಸಂತೋಷದಿಂದ ಜೀವನ ನಡೆಸಿದ್ದಾರೆ. ಐಶ್ವರ್ಯ ಹಾಗೂ ಆಯುಷ್ಯ ಎನ್ನುವ ಇಬ್ಬರು ಮಕ್ಕಳು ಇವರಿಗಿದ್ದಾರೆ.

ಈಗ ಕೆರಿಯರ್ ಅಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಪ್ರಿಯಾಂಕ ಉಪೇಂದ್ರ ಅವರು ಈಗಲೂ ಸಹ ಬಹಳ ಬೇಡಿಕೆಯಲ್ಲಿರುವ ನಟಿ. ಈಗಲೂ ಸಹ ಇವರು ಲೀಡ್ ರೋಲ್ಗಳಲ್ಲಿ ಮತ್ತು ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಅವರ ಸಿನಿ ಜರ್ನಿಯಲ್ಲಿ 50 ಚಿತ್ರಗಳು ಕಂಪ್ಲೀಟ್ ಆಗಿದ್ದು 51ನೇ ಚಿತ್ರವಾಗಿ ಮಿಸ್ ನಂದಿನಿ ಸೆಟ್ ಏರಿದೆ.

ಈ ಸಿನಿಮಾದ ಕುರಿತ ಸಂದರ್ಶನ ಒಂದದಲ್ಲಿ ನಟಿ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಪ್ರಿಯಾಂಕ ಉಪೇಂದ್ರ ಅವರಿಗೆ ಇದುವರೆಗೆ ಯಾರ ಜೊತೆ ನಟಿಸಿಲ್ಲ ಆ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ನಟಿಸುವ ಆಸೆ ಇದೆಯಂತೆ ಮತ್ತು ಉಪ್ಪಿ ಅವರ ನಿರ್ದೇಶನದಲ್ಲಿ ಒಂದೊಳ್ಳೆ ಸಿನಿಮಾ ಮಾಡುವ ಆಸೆ ಇದೆಯಂತೆ. ಆದರೆ ಉಪೇಂದ್ರ ಅವರು ಆ ಬಗ್ಗೆ ಗಮನ ಕೊಡುತ್ತಾ ಇಲ್ಲ ಎಂದು ಕೂಡ ಆರೋಪ ಮಾಡಿದ್ದಾರೆ.

ಉಪೇಂದ್ರ ಅವರು ಈಗ ಯುಐ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಆದ ಬಳಿಕ 8 ವರ್ಷಗಳವರೆಗೆ ಅವರು ಮತ್ತೆ ನಿರ್ದೇಶನ ಮಾಡುವುದಿಲ್ಲ ಎನ್ನುವುದು ಅವರ ನಿರ್ಧಾರವಾಗಿದೆ. ಇದು ಪ್ರಿಯಾಂಕ ಅವರಿಗೂ ಸಹ ತಿಳಿದಿರುವ ವಿಷಯ, ಹೀಗಾಗಿ ನನಗೂ ಸಹ ಆ ಸಿನಿಮಾದಲ್ಲಿ ಒಂದು ಒಳ್ಳೆ ರೋಲ್ ಕೊಡಿ ಅಥವಾ ಪುಟ್ಟ ಪಾತ್ರವನ್ನು ಆದರೂ ಕೊಡಿ ಎಂದು ಪ್ರಿಯಾಂಕ ಅವರು ಕೇಳುತ್ತಿದ್ದರು ಸಹ ಉಪೇಂದ್ರ ಅವರು ಅವರ ಸಿನಿಮಾದಲ್ಲಿ ಪ್ರಿಯಾಂಕ ಅವರಿಗೆ ಅವಕಾಶ ಕೊಡುತ್ತಾ ಇಲ್ಲವಂತೆ.

ಈ ಬಗ್ಗೆ ತಮಾಷೆಯಾಗಿ ಉಪೇಂದ್ರ ಅವರ ಕಾಲೆಳೆಯುತ್ತಿರುವ ನಟಿ ಪ್ರಿಯಾಂಕ ಅವರು ಬಹುದಿನಗಳ ಬಳಿಕ ಮದುವೆ ಸುದ್ದಿಯ ಬಗ್ಗೆ ಕೂಡ ಮಾತನಾಡಿದ್ದಾರೆ. ಅದೇನೆಂದರೆ ಸಂದರ್ಶಕರು ನೀವು ಇದುವರೆಗೆ ಕೇಳಿದ ನಿಮ್ಮ ಕುರಿತ ಗಾಸಿಪ್ ಗಳಲ್ಲಿ ಬಹಳ ಆಶ್ಚರ್ಯ ಎನಿಸಿದ್ದು ಯಾವುದು ಎಂದು ಕೇಳಿದ್ದಾರೆ. ಅದಕ್ಕೆ ಪ್ರಿಯಾಂಕ ಉಪೇಂದ್ರ ಅವರು ಒಮ್ಮೆ ನಾನು ಉಪೇಂದ್ರ ಅವರನ್ನು ಬ್ಲಾಕ್ ಮೇಲ್ ಮಾಡಿ ಮದುವೆ ಆಗಿದ್ದೇನೆ ಎಂದು ಗಾಳಿ ಸುದ್ದಿ ಆಗಿತ್ತು, ಅದು ನನಗೆ ಬಹಳ ಆಶ್ಚರ್ಯ ಎನಿಸಿತು.

ಯಾಕೆಂದರೆ ನಾನು ನೋಡುವುದಕ್ಕೆ ಇಷ್ಟು ಸುಂದರವಾಗಿದ್ದೇನೆ ನಾನು ಒಂದು ಸ್ಮೈಲ್ ಕೊಟ್ಟರೆ ಸಾಕು ಉಪ್ಪಿ ಬಿದ್ದು ಹೋಗುತ್ತಾರೆ. ಹೀಗಿರುವಾಗ ನಾನು ಯಾಕೆ ಅವರನ್ನು ಬ್ಲಾಕ್ ಮೇಲ್ ಮಾಡಿ ಮದುವೆ ಆಗಬೇಕು. ಎಲ್ಲರೂ ಯಾಕೆ ಆ ರೀತಿ ಗಾಸಿಪ್ ಮಾಡಿದರು ಎನ್ನುವುದೇ ನನಗೆ ಅರ್ಥ ಆಗಿಲ್ಲ ಹಾಗಾಗಿ ಬಹಳ ತಮಾಷೆ ಎನಿಸಿತು ಎಂದು ಹೇಳಿಕೊಂಡಿದ್ದಾರೆ. ಇನ್ನು ಉಪೇಂದ್ರ ಅವರು ಈಗ ಅವರ ಮತ್ತು ಸುದೀಪ್ ಕಾಂಬಿನೇಷನ್ ಬಹು ನಿರೀಕ್ಷಿತ ಚಿತ್ರವಾದ ಕಬ್ಜಾ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳಲ್ಲಿ ಬಹಳ ಬಿಸಿ ಆಗಿದ್ದಾರೆ.

ಇದಾದ ನಂತರ ಅವರು ಕಟ್ಟಿರುವ ಪ್ರಜಾಕೀಯ ಪಕ್ಷವನ್ನು ಬೆಳೆಸುವ ಜವಾಬ್ದಾರಿಯು ಅವರಿಗಿದೆ. ಚುನಾವಣೆ ಕೂಡ ಹತ್ತಿರವಾಗುತ್ತಿದೆ, ಈಗಾಗಲೇ ಪ್ರಜಾಕೀಯ ಪಕ್ಷಕ್ಕೆ ಲಕ್ಷಾಂತರ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಈಗ ಉಪೇಂದ್ರ ಅವರು ಎತ್ತ ಗಮನ ಕೊಡುತ್ತಾರೆ ಎನ್ನುವುದೇ ಎಲ್ಲರ ಕುತೂಹಲ. ನಟಿ ಪ್ರಿಯಾಂಕ ಉಪೇಂದ್ರ ಅವರು ಮದುವೆಯಾದ ದಿನದಿಂದಲೂ ಸಹ ಉಪೇಂದ್ರ ಅವರ ಎಲ್ಲಾ ಕನಸುಗಳಿಗೂ ಸಹಕಾರ ಕೊಡುತ್ತಾ ಬಂದಿದ್ದಾರೆ. ಇನ್ನು ಮುಂದೆಯೂ ಸಹ ಅವರ ಜೊತೆಗಿದ್ದು ಜೊತೆಗೆ ತಾವು ಸಹ ಒಳ್ಳೆ ಸಿನಿಮಾಗಳಲ್ಲಿ ಅಭಿನಯಿಸಿ ಇನ್ನಷ್ಟು ಹೆಸರು ಮಾಡಲಿ ಎಂದು ಅಭಿಮಾನಿಗಳಾಗಿರುವ ನಾವೆಲ್ಲ ಅವರ ಕುಟುಂಬದವರಿಗೆ ಹರಸೋಣ.