ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಹೆಮ್ಮೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಬ್ಬ ನಟನಾಗಿ ಮತ್ತು ಒಬ್ಬ ಜವಾಬ್ದಾರಿಯುತ ಸೆಲೆಬ್ರಿಟಿ ಆಗಿ ವಿಶ್ವದಾದ್ಯಂತ ಎಲ್ಲರೂ ಅನುಸರಿಸುವ ರೀತಿ ಆದರ್ಶ ಬದುಕನ್ನು ಬದುಕಿ ಹೋಗಿದ್ದಾರೆ. ಅವರ ಸಮಾಜ ಸೇವೆ, ಊಹೆಗೂ ನಿಲುಕದ್ದು ಮತ್ತು ಅವರ ವೈಯುಕ್ತಿಕ ಜೀವನ ಕೂಡ ಅಷ್ಟೇ ಶ್ರೇಷ್ಠವಾಗಿತ್ತು. ಸಿನಿಮಾಗಳ ಆಯ್ಕೆ ವಿಚಾರದಲ್ಲೂ ಕೂಡ ಚ್ಯೂಸಿ ಆಗಿದ್ದ ಇವರು ಸಮಾಜ ಮುಖಿಯಾಗಿದ್ದರು.
ಆದರೆ ಇವರ ಹೃದಯವಂತಿಕೆ ಅವರ ಅಂತ್ಯದ ನಂತರ ಜನರಿಗೆ ಅರಿವಾಯಿತು ಎನ್ನುವುದೇ ಬೇಸರದ ವಿಷಯ. ಆದರೆ ಆ ಬಳಿಕವೂ ಕೂಡ ಅಭಿಮಾನಿಗಳು ಅವರಿಗೆ ಸಾಕಷ್ಟು ಗೌರವ ಪ್ರೀತಿ ಕೊಟ್ಟಿದ್ದಾರೆ. ಇಂದಿಗೂ ಕೂಡ ಪುನೀತ್ ರಾಜಕುಮಾರ್ ಎಂದರೆ ಕಣ್ಣಂಚಿನಲ್ಲಿ ನೀರು ಹಾಗೂ ಕಂಠದಲ್ಲಿ ಮೌನ ತುಂಬಿಕೊಳ್ಳುತ್ತದೆ.
ಪುನೀತ್ ಅವರ ಮೇಲಿರುವ ಪ್ರೀತಿಯನ್ನು ತೋರಿಸಲು ಹೋಗಿ ನೆಟ್ಟಿಗರ ಆ.ಕ್ರೋ.ಶ.ಕ್ಕೆ ಕೆಲವರು ಗುರಿಯಾಗಿದ್ದಾರೆ. ಅದೇನೆಂದರೆ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 1ನೇ ತಾರಿಕಿನಿಂದ 17ರವರೆಗೆ ಪುನೀತ್ ರಾಜಕುಮಾರ್ ಮಾಲೆ ಹಾಕಲು ಅವರ ಕೆಲ ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ.
ಆ ಕುರಿತ ವಿಧಿ ವಿಧಾನಗಳನ್ನು ಹೊಂದಿರುವ ಒಂದು ಪಾಂಪ್ಲೆಟ್ ಪ್ರತಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಸುದ್ದಿ ಆಗುತ್ತಿದ್ದಂತೆ ಹೆಚ್ಚಿನ ಮಂದಿ ಇದರ ಬಗ್ಗೆ ತಮ್ಮ ಬೇಸರವನ್ನು ಹೊರ ಹಾಕುತ್ತಿದ್ದಾರೆ. ದಕ್ಷಿಣ ಭಾರತ ಭಾಗದ ಜನರ ಒಂದು ಧಾರ್ಮಿಕ ಭಾವನೆಯ ಭಾಗ ಅಯ್ಯಪ್ಪ ಸ್ವಾಮಿ ಮಾಲೆ. ಅದನ್ನು ಆ ಉದ್ದೇಶ ಬಿಟ್ಟು ಬೇರೆ ಎಲ್ಲೂ ಹೆಸರು ಹೇಳುವುದಿಲ್ಲ ಆದರೆ ಅದೇ ರೀತಿ ನಿಯಮಾವಳಿಗಳನ್ನು ಹಾಕಿಕೊಂಡು ಈಗ ಪುನೀತ್ ರಾಜಕುಮಾರ್ ಮಾಲೆ ಹಾಕುತ್ತಿರುವುದು ಒಂದು ರೀತಿಯಲ್ಲಿ ವಿಪರೀತ ಎನಿಸುತ್ತದೆ.
ಇದು ಅಂಧ ಅಭಿಮಾನ ಎಂದು ಕರೆಸಿಕೊಳ್ಳುತ್ತದೆ, ಇದಕ್ಕೆ ಯಾವುದೇ ಅರ್ಥ ಇಲ್ಲ ಪುನೀತ್ ರಾಜಕುಮಾರ್ ಅವರು ದೇವರಂತೆ ಕಂಡಿದ್ದಾರೆ ಹೊರತು ಅವರೇ ದೇವರಲ್ಲ. ಅವರ ಮೇಲೆ ಅಷ್ಟು ಪ್ರೀತಿ ಅಭಿಮಾನ ಇದ್ದರೆ ಅವರ ಆದರ್ಶನಗಳನ್ನು ಇಟ್ಟುಕೊಂಡು ಅವರ ರೀತಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಜನರಿಗೆ ಒಳ್ಳೇದಾಗುವ ಕೆಲಸ ಮಾಡಿ ಅಷ್ಟೇ ಸಾಕು. ಅಭಿಮಾನ ಎನ್ನುವ ಅತಿರೇಕದಿಂದ ಇಷ್ಟು ವರ್ಷಗಳಿಂದ ಇದ್ದ ಒಂದು ಆಚರಣೆಯನ್ನು ಅನುಸರಿಸಿ ಮಾಲೆ ಮತ್ತು ಇಡುಮುರಿಗೆ ಇರುವ ಗೌರವ ಕಡಿಮೆ ಆಗುವ ರೀತಿ ನಡೆದುಕೊಳ್ಳಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
ಡಾಕ್ಟರ್ ರಾಜಕುಮಾರ್ ಅವರ ಕಾಲದಿಂದಲೂ ಅವರ ಕುಟುಂಬದವರು ಮಾಲೆ ಹಾಕುತ್ತಿದ್ದರು. ಪುನೀತ್ ರಾಜಕುಮಾರ್, ಶಿವಣ್ಣ ಇವರೆಲ್ಲರೂ ಸಹ ಭಕ್ತಿಯಿಂದ ಪ್ರತಿ ವರ್ಷ ಮಾಲೆ ಧರಿಸುತ್ತಿದ್ದರು. ಎಲ್ಲರಂತೆ ಇವರಿಗೂ ಅದರ ಮಹತ್ವ ಗೊತ್ತಿದೆ. ಈಗ ಅಪ್ಪು ಅಭಿಮಾನಿಗಳ ಈ ನಿರ್ಧಾರದ ಬಗ್ಗೆ ಯಾವ ರೀತಿ ಪತ್ರಿಕೆಯೇ ಕೊಡುತ್ತಾರೆ ಇವರನ್ನು ತಡೆಯುವ ಪ್ರಯತ್ನ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.